Tag: rajinikanth

  • ಅಮಾಯಕರ ಜೀವಹಾನಿ ಹೃದಯವನ್ನು ಕಲಕಿದೆ: ಕಾಲ್ತುಳಿತ ದುರಂತಕ್ಕೆ ರಜನಿಕಾಂತ್‌ ಕಂಬನಿ

    ಅಮಾಯಕರ ಜೀವಹಾನಿ ಹೃದಯವನ್ನು ಕಲಕಿದೆ: ಕಾಲ್ತುಳಿತ ದುರಂತಕ್ಕೆ ರಜನಿಕಾಂತ್‌ ಕಂಬನಿ

    – ದಳಪತಿ ವಿಜಯ್‌ ರ‍್ಯಾಲಿ ವೇಳೆ ಕಾಲ್ತುಳಿತಕ್ಕೆ 36 ಮಂದಿ ಬಲಿ

    ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ (Karur Stampede) ನಟ, ರಾಜಕಾರಣಿ ವಿಜಯ್‌ (Vijay) ಅವರ ರ‍್ಯಾಲಿ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ 34 ಮಂದಿ ಸಾವನ್ನಪ್ಪಿದ್ದು, ನಟ ರಜನಿಕಾಂತ್‌ (Rajinikanth) ಸಂತಾಪ ಸೂಚಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ರಜನಿಕಾಂತ್‌, ಕರೂರಿನಲ್ಲಿ ನಡೆದ ಘಟನೆಯಲ್ಲಿ ಅಮಾಯಕರ ಜೀವಹಾನಿಯ ಸುದ್ದಿ ಹೃದಯವನ್ನು ಕಲಕಿದೆ. ಅಪಾರ ದುಃಖವನ್ನುಂಟು ಮಾಡಿದೆ. ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು. ಗಾಯಗೊಂಡವರು ಬೇಗನೆ ಗುಣಮುಖರಾಗಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ: ತಮಿಳು ನಟ ವಿಜಯ್‌ ರ‍್ಯಾಲಿಯಲ್ಲಿ ಭೀಕರ ಕಾಲ್ತುಳಿತ – ಮಕ್ಕಳು ಸೇರಿ 33 ಮಂದಿ ಸಾವು

    ಶನಿವಾರ ಸಂಜೆ ಕರೂರಿನಲ್ಲಿ ಟಿವಿಕೆ ನಾಯಕ ವಿಜಯ್ ರ‍್ಯಾಲಿ ವೇಳೆ ಈ ದುರಂತ ಸಂಭವಿಸಿದೆ. ಮೃತರಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ. ಘಟನೆಯ ನಂತರ 50 ಕ್ಕೂ ಹೆಚ್ಚು ಜನರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ.

    ದುರಂತದ ಬಗ್ಗೆ ಪ್ರತಿಕ್ರಿಯಿಸಿದ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ಕಾಲ್ತುಳಿತ ಅವಘಡ ಕಳವಳಕಾರಿ ಎಂದಿದ್ದಾರೆ. ಸಂತ್ರಸ್ತರಿಗೆ ತಕ್ಷಣ ವೈದ್ಯಕೀಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಇದನ್ನೂ ಓದಿ: ವಿಜಯ್‌ಗಾಗಿ ಸತತ 7 ಗಂಟೆ ಕಾದಿದ್ದ ಜನ; ಬರೋಬ್ಬರಿ 1 ಲಕ್ಷ ಮಂದಿ ಜಮಾವಣೆ – ಭೀಕರ ಕಾಲ್ತುಳಿತ ಹೇಗಾಯ್ತು?

  • `ಭಾಷಾ’ಗಿಂತ `ಓಂ’ ಸಿನಿಮಾ ಹತ್ತು ಪಟ್ಟು ಬೆಟರ್- ಉಪ್ಪಿ ಹೊಗಳಿದ ರಜನಿಕಾಂತ್

    `ಭಾಷಾ’ಗಿಂತ `ಓಂ’ ಸಿನಿಮಾ ಹತ್ತು ಪಟ್ಟು ಬೆಟರ್- ಉಪ್ಪಿ ಹೊಗಳಿದ ರಜನಿಕಾಂತ್

    ಭಾರತದ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಕನ್ನಡದ ಸೂಪರ್ ಸ್ಟಾರ್ ಉಪೇಂದ್ರರನ್ನ (Upendra) ಹಾಡಿ ಹೊಗಳಿದ್ದಾರೆ. ಮುಕ್ತ ವೇದಿಕೆಯಲ್ಲಿ ತಲೈವಾ ಕನ್ನಡದ ಬುದ್ಧಿವಂಥನ್ನ ಕೊಂಡಾಡಿದ್ದಾರೆ. ಈ ಘಟನೆ ನಡೆದಿದ್ದು ಕೂಲಿ (Coolie Movie) ಸಿನಿಮಾ ಪ್ರಿರಿಲೀಸ್ ಇವೆಂಟ್‌ನಲ್ಲಿ. ಚೆನೈನಲ್ಲಿ ನಡೆದ ಇವೆಂಟ್‌ನಲ್ಲಿ ಅದೇ ನೆಲದಲ್ಲೇ ಕನ್ನಡದ ಓಂ ಸಿನಿಮಾ ಕುರಿತಾಗಿ ಒಳ್ಳೆಯ ಮಾತನಾಡಿದ್ದಾರೆ. ಕಾರಣ ಕೂಲಿ ಚಿತ್ರದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಪ್ರಮುಖ ಪಾತ್ರವೊಂದರಲ್ಲಿ ಅಭಿನಯಿಸುತ್ತಿದ್ದಾರೆ. ಪ್ರಿರಿಲೀಸ್ ಇವೆಂಟ್‌ನಲ್ಲಿ ಪಾಲ್ಗೊಂಡ ಉಪೇಂದ್ರ ಕುರಿತು ತಲೈವಾ ಹೊಗಳಿಕೆಯ ಮಾತನ್ನಾಡಿದ್ದಾರೆ.

    ನಟನೆ ನಿರ್ದೇಶನದಲ್ಲಿ ಸೈ ಅನ್ನಿಸಿಕೊಂಡ ಉಪೇಂದ್ರ ವಿಶ್ವಾದ್ಯಂತ ಛಾಪು ಮೂಡಿಸಿರುವ ಕನ್ನಡದ ಪ್ರತಿಭೆ. ವಿವಿಧ ಭಾಷೆಯಲ್ಲಿ ಉಪೇಂದ್ರ ನಟಿಸುತ್ತಾ ಬಂದಿದ್ದಾರೆ. ಇದೀಗ ಉಪೇಂದ್ರ ಜೊತೆ ಕೂಲಿ ಚಿತ್ರದಲ್ಲಿ ತೆರೆಹಂಚಿಕೊಂಡಿರುವ ರಜನಿಕಾಂತ್ ಉಪ್ಪಿ ಗುಣಗಾನ ಮಾಡಿರುವ ಮಾತುಗಳು ಕನ್ನಡಿಗರ ಮೆಚ್ಚುಗೆಗೆ ಪಾತ್ರವಾಗಿದೆ. ತಾವು ನಟಿಸಿದ್ದ `ಭಾಷಾ ಸಿನಿಮಾಗಿಂತ ಉಪೇಂದ್ರ ನಿರ್ದೇಶಿಸಿದ್ದ ಸಿನಿಮಾ ಹತ್ತು ಪಟ್ಟು ಉತ್ತಮ ಸಿನಿಮಾ’ ಎಂದಿರುವ ರಜನಿಕಾಂತ್ ಮಾತು ಗಮನಾರ್ಹ. ಇದನ್ನೂ ಓದಿ: ರಾಯರ ಮಧ್ಯಾರಾಧನೆಯಲ್ಲಿ ನಟ ಜಗ್ಗೇಶ್ ಭಾಗಿ

    ಉಪೇಂದ್ರ ಕುರಿತು ರಜನಿಕಾಂತ್ ಮಾತುಗಳೇನು?
    ಭಾರತದಲ್ಲಿರುವ ಮೋಸ್ಟ್ ಇಂಟಲೆಕ್ಚುವಲ್ ಡೈರೆಕ್ಟರ್‌ಗಳಿಗೆ ಇನ್ಸಿರೇಷನ್ ಅಂದ್ರೆ ಅದು ಉಪೇಂದ್ರ, ಕನ್ನಡ ಚಿತ್ರರಂಗ ಅಷ್ಟೇ ಅಲ್ಲ ಹಿಂದಿ, ತೆಲುಗು ಮಲಯಾಳಂ, ತಮಿಳು ಎಲ್ಲರೂ ಉಪೇಂದ್ರರಿಂದ ಸಾಕಷ್ಟು ಕಲಿತಿದ್ದಾರೆ. ಉಪೇಂದ್ರ ನಟರಾಗಿ ಅಲ್ಲ ನಿರ್ದೇಶಕರಾಗಿ ಚಿತ್ರರಂಗಕ್ಕೆ ಬಂದವರು, ಕನ್ನಡದಲ್ಲಿ ಶಿವರಾಜ್‌ಕುಮಾರ್ ಆಕ್ಟ್ ಮಾಡಿದ್ದ ಓಂ ಸಿನಿಮಾವನ್ನ ಅವರೇ ನಿರ್ದೇಶನ ಮಾಡಿದ್ರು , ಈ ಸಿನಿಮಾ ಭಾಷಾ ಚಿತ್ರಕ್ಕಿಂತ ಹತ್ತುಪಟ್ಟು ಬೆಟರ್ ಸಿನಿಮಾ, ನನಗೆ ಆಕ್ಟರ್ ಉಪೇಂದ್ರಗಿಂತ ಡೈರೆಕ್ಟರ್ ಉಪೇಂದ್ರ ಇಷ್ಟ. ಈಗ ಲೋಕೇಶ್ ಕನಕರಾಜ್ ನಾನ್‌ಲೀನಿಯರ್ ಸಿನಿಮಾ ಮಾಡ್ತಿದ್ದಾರೆ, ನಾನ್‌ಲೀನಿಯರ್ ಸಿನಿಮಾಗಳನ್ನ ಆಗಲೇ ಮಾಡುತ್ತಿದ್ದವರು ಡೈರೆಕ್ಟರ್ ಉಪೆಂದ್ರ.

  • ಶ್ರೀದೇವಿಗೆ ಪ್ರಪೋಸ್ ಮಾಡಬೇಕಿದ್ದ ರಜನಿಕಾಂತ್ – ತಡೆದಿದ್ದು ಯಾವ ಪವರ್?

    ಶ್ರೀದೇವಿಗೆ ಪ್ರಪೋಸ್ ಮಾಡಬೇಕಿದ್ದ ರಜನಿಕಾಂತ್ – ತಡೆದಿದ್ದು ಯಾವ ಪವರ್?

    ಭಾರತೀಯ ಚಿತ್ರರಂಗ ಕಂಡ ಸ್ಟಾರ್ ನಟಿ ಶ್ರೀದೇವಿ. ಅವರ ಸೌಂದರ್ಯ, ಅಭಿನಯ ಚಾತುರ್ಯ ಅದೆಷ್ಟೇ ವರ್ಷಗಳು ಉರುಳಿದರೂ ಮಾಸದ ಸಾಧನೆ. ಶ್ರೀದೇವಿ (Sridevi) ಮರೆಯಾಗಿ ಅನೇಕ ವರ್ಷಗಳೇ ಉರುಳಿಹೋಗಿದೆ. ಹಿಂದಿ ಚಿತ್ರ ನಿರ್ಮಾಪಕ ಬೋನಿ ಕಪೂರ್‌ರನ್ನ (Boney Kapoor) ವಿವಾಹವಾಗಿ ಇಬ್ಬರು ಹೆಣ್ಣುಮಕ್ಕಳ ತಾಯಿಯಾಗಿದ್ದ ಶ್ರೀದೇವಿ ಮಕ್ಕಳನ್ನು ಸಿನಿಮಾರಂಗದಲ್ಲಿ ನೋಡುವ ಮುನ್ನವೇ ಕಣ್ಮುಚ್ಚಿದವರು. ಶ್ರೀದೇವಿ ಇದೀಗ ನೆನಪಷ್ಟೇ. ಆದರೆ ಅವರ ಅಂದ ಚೆಂದ ಸಾಧನೆಗೆ ಕ್ಲೀನ್‌ಬೌಲ್ಡ್‌ ಆಗಿದ್ದವರು ಒಬ್ಬರಿಬ್ಬರಲ್ಲ.

    ಅಪಾರ ಅಭಿಮಾನಿಗಳ ಕನಸಿನ ರಾಣಿಯಾಗಿದ್ದ ಶ್ರೀದೇವಿ ಸೂಪರ್‌ಸ್ಟಾರ್‌ಗಳ ಕನಸಿನ ರಾಣಿಯೂ ಆಗಿದ್ದರು. ಈ ವಿಚಾರವಾಗಿ ಶ್ರೀದೇವಿ ನಿಧನದ ಬಳಿಕ ಹಲವರು ವಿಷಯ ಹೇಳಿಕೊಂಡಿದ್ದುಂಟು. ಇದೀಗ ಇಂಥಹ ಶ್ರೀದೇವಿಗೆ ಖ್ಯಾತ ನಟ ರಜನಿಕಾಂತ್ (Rajinikanth) ಫಿದಾ ಆಗಿದ್ದರು, ಪ್ರಪೋಸ್ ಮಾಡಲು ಇಚ್ಚಿಸಿದ್ದರು ಎಂಬ ಸುದ್ದಿ ವರದಿಯಾಗಿದೆ.

    `ಮುಂಡ್ರು ಮುಡಿಚ್ಚು’ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದ ಶ್ರೀದೇವಿಯ ಸದ್ಗುಣ ಅಂದ ಚೆಂದ ನಟನೆಗೆ ಮೆಚ್ಚಿ ರಜನಿಕಾಂತ್ ಮನಸ್ಸಿನಲ್ಲೇ ಪ್ರೀತಿ ಬೆಳೆಸಿಕೊಂಡಿದ್ದರಂತೆ. ಪ್ರಪೋಸ್ ಮಾಡಲು ಒಂದೊಳ್ಳೆ ಸಮಯಕ್ಕಾಗಿ ಕಾದಿದ್ದರಂತೆ. ಹೀಗಿದ್ದಾಗ ಶ್ರೀದೇವಿ ಮನೆ ಗೃಹಪ್ರವೇಶದ ಕಾರ್ಯಕ್ರಮಕ್ಕೆ ರಜನಿಕಾಂತ್‌ರನ್ನ ಆಹ್ವಾನಿಸಿದ್ದರು.

    ಆ ದಿನವೇ ಪ್ರಪೋಸ್ ಮಾಡಿದರೆ ಒಳ್ಳೆಯದು ಎಂದು ರಜನಿಕಾಂತ್ ಸಂಕಲ್ಪ ಮಾಡಿಕೊಂಡು ಹೋಗಿದ್ದರು. ಆದರೆ ರಜನಿಕಾಂತ್ ಮನೆಗೆ ಎಂಟ್ರಿ ಆಗುತ್ತಿದ್ದಂತೆ ವಿದ್ಯುತ್ ಕಟ್ ಆಗಿ ಮನೆಯಲ್ಲಾ ಕತ್ತಲು ಆವರಿಸಿಬಿಟ್ಟಿಡುತ್ತೆ ಆಗ ರಜನಿಕಾಂತ್ ಇದು ಶುಭ ಸೂಚಕವಲ್ಲ ಎಂದುಕೊಂಡು ತಮ್ಮ ಭಾವನೆಯನ್ನ ಅಲ್ಲಿಗೇ ನಿಲ್ಲಿಸಿ ಪ್ರಪೋಸ್ ಮಾಡದೆ ತಮ್ಮ ಮನೆಗೆ ಮರಳಿದ್ದರು. ಇದನ್ನೂ ಓದಿ: ತಮಿಳಿನ ಜನಪ್ರಿಯ ಹಾಸ್ಯನಟ ಮಧನ್ ಬಾಬ್ ನಿಧನ

    ಈ ಘಟನೆಯ ಬಳಿಕ ರಜನಿಕಾಂತ್ ತಮ್ಮ ಸಹನಟಿ ಶ್ರೀದೇವಿ ಕುರಿತು ಯಾವುದೇ ಭಾವನೆಯನ್ನೂ ಮುಂದುವರೆಸದೆ ಪರಿಶುದ್ಧ ಸ್ನೇಹವನ್ನ ಮಾತ್ರ ಇಟ್ಟುಕೊಂಡು ಬಂದಿದ್ದರು. ಹೀಗೆಂದು ಕೆ. ಬಾಲಚಂದರ್ ಸಂದರ್ಶನವೊಂದರಲ್ಲಿ ಹೇಳಿದ್ದರು ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ಶ್ರೀದೇವಿ ವಿಚಾರವಾಗಿ ರಜನಿಕಾಂತ್ ಈ ವಿಚಾರವನ್ನ ಎಲ್ಲಿಯೂ ಪ್ರಸ್ತಾಪಿಸಿರಲಿಲ್ಲ. ಅಂದಹಾಗೆ ದಿವಂಗತ ಕೆ ಬಾಲಚಂದರ್ ರಜನಿಕಾಂತ್‌ಗೆ ಸಿನಿಮಾ ಗುರುವಾಗಿದ್ದವರು. ಇದೀಗ ಶ್ರೀದೇವಿ ಕೂಡ ಇಲ್ಲ, ಕೆ ಬಾಲಚಂದರ್ ಕೂಡ ಇಲ್ಲ. ಕಾಲ ಎಲ್ಲವನ್ನೂ ಮರೆಸಿದೆ.

  • 22 ಕೋಟಿ ರೂಪಾಯಿಗೆ ರಜನಿಯ ಕೂಲಿ ಸಿನಿಮಾ ಬಿಕರಿ

    22 ಕೋಟಿ ರೂಪಾಯಿಗೆ ರಜನಿಯ ಕೂಲಿ ಸಿನಿಮಾ ಬಿಕರಿ

    ರಜನಿಕಾಂತ್ (Rajanikanth) ನಟನೆಯ ಕೂಲಿ (Coolie) ಸಿನಿಮಾ ಆಗಸ್ಟ್‌ನಲ್ಲಿ ಬಿಡುಗಡೆ ಆಗಲಿದೆ. ಬಿಡುಗಡೆ ಮುನ್ನವೇ ಭಾರೀ ಬೇಡಿಕೆಯನ್ನು ಈ ಸಿನಿಮಾ ಉಳಿಸಿಕೊಂಡಿದೆ. ಕನ್ನಡದ ನಟ ಉಪೇಂದ್ರ, ಬಾಲಿವುಡ್ ನಟ ಆಮೀರ್‌ ಖಾನ್ (Aamir Khan) ಸೇರಿದಂತೆ ಹೆಸರಾಂತ ತಾರಾಬಳಗವೇ ಸಿನಿಮಾದಲ್ಲಿದೆ. ಈ ಸಿನಿಮಾವನ್ನು ವಿತರಿಸಲು ನಾಮುಂದು ತಾಮುಂದು ಎನ್ನುವಂತಾಗಿದೆ.

    ಸಾಮಾನ್ಯವಾಗಿ ರಜನಿಕಾಂತ್ ಸಿನಿಮಾಗಳು ಕನ್ನಡದಲ್ಲಿ ಸೂಪರ್ ಹಿಟ್ ಆಗುತ್ತವೆ. ಸಿನಿಮಾ ಎವರೇಜ್ ಅಂದರೂ, ಮೊದಲ ಒಂದು ವಾರ ಗಲ್ಲಾಪೆಟ್ಟಿಗೆಯನ್ನು ತುಂಬಿಸುತ್ತವೆ. ಹಾಗಾಗಿ ರಜನಿ ಸಿನಿಮಾಗಳನ್ನು ವಿತರಿಸಲು ಕರ್ನಾಟಕದಲ್ಲಿ ಪೈಪೋಟಿ ನಡೆಯುತ್ತದೆ. ಕೂಲಿ ಸಿನಿಮಾಗಾಗಿಯೂ ಅಂಥದ್ದೊಂದು ಪೈಪೋಟಿ ವ್ಯಕ್ತವಾಗಿತ್ತಂತೆ.

    ಕನ್ನಡಪರ ಹೋರಾಟಗಾರ ಹಾಗೂ ನಿರ್ಮಾಪಕ ಸಾ.ರಾ ಗೋವಿಂದ್ ಹಿಂಟ್ ಕೊಟ್ಟಂತೆ ಕೂಲಿ ಸಿನಿಮಾವನ್ನು ಕರ್ನಾಟಕದಲ್ಲಿ ಬರೋಬ್ಬರಿ 22 ಕೋಟಿ ರೂಪಾಯಿ ಕೊಟ್ಟು ವಿತರಣೆ ಹಕ್ಕನ್ನು ಪಡೆದಿದ್ದಾರಂತೆ. ಹಕ್ಕು ಪಡೆದವರಿಗೆ ಈಗ ಸ್ವಲ್ಪ ಟೆನ್ಷನ್ ಶುರುವಾಗಿದೆಯಂತೆ. ಏಕರೂಪ ಟಿಕೆಟ್ ದರ ನಿಗದಿ ಆಗಿದ್ದರಿಂದ, ಅದು ಜಾರಿಗೆ ಬಂದರೆ, ಕಲೆಕ್ಷನ್ ಕಡಿಮೆ ಆಗುವ ಭಯ ಶುರುವಾಗಿದೆಯಂತೆ.

  • ಸಿನಿಮಾದ ಸುವರ್ಣ ಯುಗವೊಂದು ಅಂತ್ಯವಾಗಿದೆ – ಸರೋಜಾದೇವಿ ನಿಧನಕ್ಕೆ ಕಂಬನಿ ಮಿಡಿದ ರಜನಿಕಾಂತ್‌, ಖುಷ್ಬು

    ಸಿನಿಮಾದ ಸುವರ್ಣ ಯುಗವೊಂದು ಅಂತ್ಯವಾಗಿದೆ – ಸರೋಜಾದೇವಿ ನಿಧನಕ್ಕೆ ಕಂಬನಿ ಮಿಡಿದ ರಜನಿಕಾಂತ್‌, ಖುಷ್ಬು

    ಚೆನ್ನೈ: ಅಭಿನಯ ಸರಸ್ವತಿ ಎಂದೇ ಖ್ಯಾತಿ ಪಡೆದಿದ್ದ ಸ್ಯಾಂಡಲ್‌ವುಡ್‌ನ ಹಿರಿಯ ನಟಿ ಬಿ.ಸರೋಜಾ ದೇವಿ (B Saroja Devi) ಅವರು ಇಂದು ವಿಧಿವಶವಾಗಿದ್ದಾರೆ. ಸರೋಜಾದೇವಿ ಎಂದಾಕ್ಷಣ ಕಿತ್ತೂರು ಚೆನ್ನಮ್ಮ, ಬಬ್ರುವಾಹನ, ಭಾಗ್ಯವಂತರು, ಅಣ್ಣತಂಗಿ ಮುಂತಾದ ಚಿತ್ರಗಳಲ್ಲಿನ ಅವರ ಮನೋಜ್ಞ ಅಭಿನಯ ಕಣ್ಣಮುಂದೆ ಬರುತ್ತದೆ. ಕನ್ನಡ ಚಿತ್ರರಂಗದ ಕಿತ್ತೂರು ರಾಣಿ ಚೆನ್ನಮ್ಮ ಅಂತಲೇ ಎಲ್ಲರ ಮನದಲ್ಲಿ ಮನೆ ಮಾಡಿದ್ದ ಸರೋಜಾದೇವಿ ಅವರು ತಮ್ಮ ನಿವಾಸದಲ್ಲಿ ಉಸಿರು ಚೆಲ್ಲಿದ್ದಾರೆ. ಹಿರಿಯ ನಟಿಯ ನಿಧನಕ್ಕೆ ಸಿನಿ ಗಣ್ಯರು, ರಾಜಕೀಯ ನಾಯಕರು ಕಂಬನಿ ಮಿಡಿದಿದ್ದಾರೆ.

    ಕಂಬನಿ ಮಿಡಿದ ತಲೈವಾ
    ಅದರಂತೆ ತಮಿಳಿನ ಖ್ಯಾತ ನಟ ತಲೈವಾ ರಜನಿಕಾಂತ್‌ (Rajinikanth) ಸಹ ಸಂತಾಪ ಸೂಚಿಸಿ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ʻಲಕ್ಷಾಂತರ ಅಭಿಮಾನಿಗಳ ಹೃದಯ ಗೆದ್ದ ಮಹಾನ್ ನಟಿ ಸರೋಜಾ ದೇವಿ ಈಗ ನಮ್ಮೊಂದಿಗಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಒಂದು ಸುವರ್ಣ ಸಿನಿಮಾ ಯುಗ ಅಂತ್ಯಗೊಂಡಿದೆʼ ಅಂತ ಭಾವುಕ ಸಂದೇಶವೊಂದನ್ನ ಫೋಟೋ ಜೊತೆಗೆ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ನಾಳೆ ಚನ್ನಪಟ್ಟಣದ ದಶಾವರದಲ್ಲಿ ಬಿ.ಸರೋಜಾದೇವಿ ಅಂತ್ಯಕ್ರಿಯೆ

    ಸರೋಜಾದೇವಿ ಅಮ್ಮ ಎಲ್ಲಾ ಕಾಲಕ್ಕೂ ಶ್ರೇಷ್ಠ
    ಬಹುಭಾಷಾ ನಟಿ ಖುಷ್ಬು ಸುಂದರ್‌ (Khushbu Sundar) ಕೂಡ ಸರೋಜಾ ದೇವಿ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ʻಸರೋಜಾದೇವಿ ಅಮ್ಮ ಎಲ್ಲಾ ಕಾಲದಲ್ಲೂ ಶ್ರೇಷ್ಠರು. ಇದನ್ನೂ ಓದಿ: ಬಿ.ಸರೋಜಾದೇವಿಯವರ ಸಾವಿನಿಂದ ಕಲಾಜಗತ್ತು ಬಡವಾಗಿದೆ – ಸಿಎಂ ಸಂತಾಪ

    ದಕ್ಷಿಣದಲ್ಲಿ ಅವರಷ್ಟು ಹೆಸರು, ಖ್ಯಾತಿ ಪಡೆದ ಮಹಿಳಾ ನಟಿ ಇನ್ನೊಬ್ಬರಿಲ್ಲ. ಅವರು ನನ್ನ ಪ್ರೀತಿಯ ಮತ್ತು ಆರಾಧ್ಯ ದೈವವೂ ಕೂಡ ಹೌದು. ಅವರನ್ನು ಭೇಟಿಯಾಗದೇ ನನ್ನ ಬೆಂಗಳೂರಿಗೆ ಪ್ರವಾಸ ಅಪೂರ್ಣವಾಗಿತ್ತು. ಚೆನ್ನೈಗೆ ಬಂದಾಗೆಲ್ಲ ಅವರು ನನಗೆ ಕರೆ ಮಾಡಿ ಮಾತನಾಡುತ್ತಿದ್ದರು. ಈಗ ಅವರನ್ನ ತುಂಬಾ ಮಿಸ್‌ ಮಾಡಿಕೊಳ್ತೀನಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಾವುಕ ಸಂದೇಶ ಹಂಚಿಕೊಂಡಿದ್ದಾರೆ.

  • ತಲೈವಾ ಭೇಟಿಯಾದ ಧನ್ಯಾ ರಾಮ್‌ಕುಮಾರ್.. ಯಾಕೆ ಗೊತ್ತೇನು ?

    ತಲೈವಾ ಭೇಟಿಯಾದ ಧನ್ಯಾ ರಾಮ್‌ಕುಮಾರ್.. ಯಾಕೆ ಗೊತ್ತೇನು ?

    ಡಾ.ರಾಜ್‌ಕುಮಾರ್ ಹಾಗೂ ತಲೈವಾ ರಜನಿಕಾಂತ್ (Rajinikanth) ಅವರ ನಡುವೆ ಗಾಢವಾದ ಗೆಳೆತನವಿತ್ತು. ರಜನಿಕಾಂತ್ ಅವರಿಗೆ ಈಗಲೂ ರಾಜ್‌ಕುಮಾರ್ ಕುಟುಂಬದ ಜೊತೆಗಿನ ನಂಟು, ಕುಟುಂಬದ ಮೇಲಿನ ಪ್ರೀತಿ, ಗೌರವ ಚೆನ್ನಾಗಿಯೇ ಇದೆ. ಇದೀಗ ರಾಜ್‌ಕುಮಾರ್ ಮೊಮ್ಮಗಳು ಧನ್ಯಾ ರಾಮ್‌ಕುಮಾರ್ (Dhanya Ramkumar) ತಾಯಿ ಪೂರ್ಣಿಮಾ ಅವರೊಂದಿಗೆ ರಜನಿಕಾಂತ್‌ರನ್ನ ಭೇಟಿಯಾಗಿದ್ದಾರೆ. ಈ ಫೋಟೋಗಳನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಧನ್ಯಾ ಶೇರ್ ಮಾಡಿದ್ದಾರೆ.

    ಡಾ.ರಾಜ್‌ಕುಮಾರ್ ಪುತ್ರಿ ಪೂರ್ಣಿಮಾ ಕುರಿತು ರಜನಿಕಾಂತ್ ಅವರಿಗೆ ಪರಿಚಯ ಹಿಂದಿನಿಂದಲೂ ಇರುತ್ತೆ. ಆದರೆ ಧನ್ಯ ಈಗಿನ ಜನರೇಶನ್ ಆಗಿರೋದ್ರಿಂದ ಕಾಂಟ್ಯಾಕ್ಟ್ ಕಡಿಮೆ ಇರಬಹುದು. ಆದರೀಗ ದಿಢೀರ್ ಎಂದು ರಜನಿಕಾಂತ್ ಜೊತೆ ಧನ್ಯಾ ಪೋಸ್ಟ್ ಮಾಡಿರುವ ಫೋಟೋವನ್ನ ಥಟ್ ಅಂತ ನೋಡಿದ್ರೆ ಜೊತೆಯಲ್ಲಿ ಸಿನಿಮಾ ಮಾಡ್ತಿದ್ದಾರೆ ಅನ್ನೋ ಅನುಮಾನ ಬರುತ್ತೆ. ಆದ್ರೆ ಇದು ಚಿತ್ರಕ್ಕಾಗಿ ಆಗಿರುವ ಭೇಟಿಯಲ್ಲ. ಜಸ್ಟ್ ಕ್ಯಾಶುವಲ್ ಭೇಟಿ. ಇದನ್ನೂ ಓದಿ: ಐತಿಹಾಸಿಕ ಕ್ಷಣಕ್ಕೆ ಭಾರತ ಸಾಕ್ಷಿ – ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಸೇರಿದ ಮೊದಲ ಭಾರತೀಯ ಶುಕ್ಲಾ

    ಅಮ್ಮನ ಜೊತೆ ಧನ್ಯಾ ಮೈಸೂರಿಗೆ ಹೋಗಿದ್ದಾರೆ ಅಲ್ಲಿ ರಜನಿಕಾಂತ್ ಅವರ `ಜೈಲರ್-2′ ಚಿತ್ರೀಕರಣ ನಡೆಯುತ್ತಿರುವುದು ಇವರಿಗೆ ತಿಳಿದಿತ್ತು. ಬಳಿಕ ಭೇಟಿಯಾಗಿ ಒಬ್ಬರಿಗೊಬ್ಬರು ಕುಶಲೋಪರಿ ವಿಚಾರಿಸಿಕೊಂಡಿದ್ದಾರೆ. ಇದನ್ನೂ ಓದಿ: Ahmedabad Plane Crash | ಬ್ಲ್ಯಾಕ್‌ ಬಾಕ್ಸ್ ಡೌನ್‌ಲೋಡ್ ಪ್ರಕ್ರಿಯೆ ಪೂರ್ಣ, ವಿಶ್ಲೇಷಣೆ ಶುರು – ವಿಮಾನಯಾನ ಸಚಿವಾಲಯ

    ಮೈಸೂರಲ್ಲಿ ಜೈಲರ್-2 ಚಿತ್ರೀಕರಣ ನಡೆಯುತ್ತಿತ್ತು. ಐದಾರು ದಿನ ಚಿತ್ರೀಕರಣವಾಗಿದೆ. ಈ ವೇಳೆ ರಜನಿಕಾಂತ್ ಮೈಸೂರಿನ ಹೋಟೇಲ್‌ನಲ್ಲೇ ತಂಗಿದ್ದಾರೆ. ಈ ವೇಳೆ ಶೂಟಿಂಗ್ ಸ್ಪಾಟ್‌ಗೆ ತೆರಳಿದ್ದ ಧನ್ಯ ಹಾಗೂ ಪೂರ್ಣಿಮಾ ರಾಮ್‌ಕುಮಾರ್ ರಜನಿಕಾಂತ್‌ರನ್ನ ಭೇಟಿಯಾಗಿದ್ದಾರೆ. ಆ ಫೋಟೋಗಳು ಈಗ ವೈರಲ್ ಆಗಿದೆ. ಇದನ್ನೂ ಓದಿ: NASA Axiom-4 Mission | ಸ್ಪೇಸ್‌ ಎಕ್ಸ್‌ ಡ್ರ್ಯಾಗನ್‌ ನೌಕೆ ಡಾಕಿಂಗ್‌ ಯಶಸ್ವಿ

  • ರಜನಿಕಾಂತ್‌ ʻಕೂಲಿʼ ಚಿತ್ರದ ಫಸ್ಟ್‌ ಸಾಂಗ್‌ಗೆ ಮುಹೂರ್ತ ಫಿಕ್ಸ್

    ರಜನಿಕಾಂತ್‌ ʻಕೂಲಿʼ ಚಿತ್ರದ ಫಸ್ಟ್‌ ಸಾಂಗ್‌ಗೆ ಮುಹೂರ್ತ ಫಿಕ್ಸ್

    ಕಾಲಿವುಡ್ ಸೂಪರ್‌ಸ್ಟಾರ್, ತಲೈವಾ ರಜನಿಕಾಂತ್ (Rajinikanth) ಅಭಿನಯದ ಮೋಸ್ಟ್ ಅವೈಟೆಡ್ ಸಿನಿಮಾ ʻಕೂಲಿʼ (Coolie) ಫಸ್ಟ್ ಲುಕ್‌ನಿಂದಲೇ ಗಮನ ಸೆಳೆದಿದೆ. ಲೋಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಕೂಲಿ ಸಿನಿಮಾದಲ್ಲಿ ಅತೀದೊಡ್ಡ ತಾರಾಗಣವಿದೆ. ರಿಯಲ್ ಸ್ಟಾರ್ ಉಪೇಂದ್ರ, ನಾಗಾರ್ಜುನ, ಸತ್ಯರಾಜ್, ಶೃತಿ ಹಾಸನ್ ಸೇರಿದಂತೆ ಬಹುತಾರಾಗಣ ಈ ಸಿನಿಮಾದಲ್ಲಿದೆ.

    ಕೂಲಿ ಸಿನಿಮಾದ ಫಸ್ಟ್ ಸಿಂಗಲ್ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದ್ದು, ಇದೇ ಜೂನ್ 25ರಂದು ಸಾಂಗ್ ರಿಲೀಸ್ ಆಗುತ್ತಿದೆ ಅನ್ನೋದು ರಿವೀಲ್ ಆಗಿದೆ. ರಜನಿಕಾಂತ್ ಪಿಆರ್ ಮ್ಯಾನೇಜರ್ ರಿಯಾಜ್ ಅಹ್ಮದ್ ಜಾಲತಾಣದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

    ಮುಂದಿನ ಆಗಸ್ಟ್‌ 25ರಂದು ಕೂಲಿ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಫಸ್ಟ್ ಲುಕ್‌ನಿಂದ, ಡಿಫರೆಂಟ್ ಮೇಕಿಂಗ್‌ನಿಂದಲೇ ಭಾರತೀಯ ಚಿತ್ರರಂಗದಲ್ಲೇ ಹವಾ ಕ್ರಿಯೇಟ್ ಮಾಡಿದೆ. ಇನ್ನು ಕನ್ನಡದ ರಿಯಲ್‌ಸ್ಟಾರ್ ಸೌತ್‌ನ ಸೂಪರ್‌ಸ್ಟಾರ್ ಜೊತೆ ನಟಿಸುತ್ತಿರೋದು ಮತ್ತೊಂದು ವಿಶೇಷ.

    ಇತ್ತೀಚೆಗೆ ರಜನಿಕಾಂತ್ ಜೈಲರ್-2 ಸಿನಿಮಾದ ಶೂಟಿಂಗ್‌ಗಾಗಿ ಮೈಸೂರಿಗೆ ಆಗಮಿಸಿದ್ದರು. ಮೈಸೂರಿಗೆ ಶೂಟಿಂಗ್‌ಗೆ ಬಂದ ತಲೈವ ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು. ಸದ್ಯ ರಜನಿ ಫ್ಯಾನ್ಸ್ ತಂಡದಿಂದ ಗುಡ್‌ನ್ಯೂಸ್ ಸಿಕ್ಕಿದೆ.

  • Mysuru | ಅಣ್ಣಾವ್ರ `ಕಾಮನಬಿಲ್ಲು’ ಶೂಟ್ ಆದ ಜಾಗದಲ್ಲೇ ರಜನಿ ಸಿನಿಮಾ

    Mysuru | ಅಣ್ಣಾವ್ರ `ಕಾಮನಬಿಲ್ಲು’ ಶೂಟ್ ಆದ ಜಾಗದಲ್ಲೇ ರಜನಿ ಸಿನಿಮಾ

    ರಜನಿಕಾಂತ್ (Rajinikanth), ಮೋಹನ್ ಲಾಲ್, ಶಿವರಾಜ್ ಕುಮಾರ್ ಮತ್ತು ಜಾಕಿ ಶ್ರಾಫ್ ಹೀಗೆ ಬಹುತಾರೆಯರನ್ನೊಳಗೊಂಡ ಜೈಲರ್‌ 2 ಸಿನಿಮಾದ (Jailer 2 Cinema) ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. ನಟ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಒಂದು ಮಹತ್ವದ ಸ್ಥಳದಲ್ಲಿ ನಡೆಯುತ್ತಿರುವುದು ವಿಶೇಷ.

    ಹೌದು, ಜೈಲರ್ -2 ಸಿನಿಮಾದ ಶೂಟಿಂಗ್ ಮೈಸೂರಿನ (Mysuru) ಹುಲ್ಲೆನಹಳ್ಳಿ ಬಳಿ ನಡೆಯುತ್ತಿದ್ದು, ಹುಲ್ಲೆನಹಳ್ಳಿಯ ಸೇತುವೆ ಮೇಲೆ ಸಾಹಸ ದೃಶ್ಯ ಸೆರೆ ಹಿಡಿಯಲಾಗುತ್ತಿದೆ. ಇಂದಿನಿಂದ ಮೂರು ದಿನಗಳ ಕಾಲ ಹುಲ್ಲೆನಹಳ್ಳಿಯ ಸೇತುವೆ ಮೇಲೆಯೇ ಶೂಟಿಂಗ್ ನಡೆಯಲಿದೆ. ನಟ ರಜನಿಕಾಂತ್ ನೋಡಲು ಸಾವಿರಾರು ಜನರು ಆಗಮಿಸಿದ್ದಾರೆ.

    ವಿಶೇಷವೆಂದ್ರೆ 43 ವರ್ಷಗಳ ಹಿಂದೆ ವರನಟ ಡಾ. ರಾಜ್‌ಕುಮಾರ್‌ ಅವರ ʻಕಾಮನಬಿಲ್ಲುʼ ಚಿತ್ರದ ಹಾಡೊಂದಕ್ಕೆ ಇದೇ ಸ್ಥಳದಲ್ಲಿ ಚಿತ್ರೀಕರಣ ನಡೆದಿತ್ತು. ಇದೀಗ ರಜನಿ ಕಾಂತ್‌ ಅವರ ಬಹುನಿರೀಕ್ಷಿತ ಚಿತ್ರದ ಶೂಟಿಂಗ್‌ ನಡೆಯುತ್ತಿದೆ. ಇದನ್ನೂ ಓದಿ: ಸುದೀಪ್‌ ಹೆಸರು ಹೇಳಿ ಯುವ ನಟನಿಗೆ ನಂದಕಿಶೋರ್‌ 22 ಲಕ್ಷ ವಂಚನೆ!

    ಇನ್ನೂ ಬಹು ತಾರೆಗಳ ದಂಡೇ ಇರುವ ಈ ಚಿತ್ರದಲ್ಲಿ ಬಾಲಿವುಡ್‌ ಬಾದ್‌ ಷಾ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ವದಂತಿ ಹಬ್ಬಿದೆ. ಇದನ್ನೂ ಓದಿ: ಯುವ ಗಾಯಕಿ ಅಖಿಲಾ ಪಜಿಮಣ್ಣು ಬಾಳಲ್ಲಿ ಬಿರುಗಾಳಿ – ವಿವಾಹ ವಿಚ್ಛೇದನಕ್ಕೆ ಅರ್ಜಿ

    ‘ಜೈಲರ್ 2’ 2023ರ ಸೂಪರ್‌ಹಿಟ್ ಚಿತ್ರ ‘ಜೈಲರ್’ ನ ಮುಂದುವರಿದ ಭಾಗವಾಗಿದೆ. ಈ ಚಿತ್ರದಲ್ಲಿ ತೆಲುಗು ನಟ ನಂದಮೂರಿ ಬಾಲಕೃಷ್ಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಗಾರ್ಜುನ ಅಕ್ಕಿನೇನಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ರಜನಿಕಾಂತ್‌ ನಟನೆಯ ‘ಜೈಲರ್ 2’ನಲ್ಲಿಯೂ ನಟಿಸಲಿದ್ದಾರೆ ಶಿವಣ್ಣ

  • ರಜನಿಕಾಂತ್ ನಟನೆಯ ‘ಜೈಲರ್ 2’ ಚಿತ್ರದಲ್ಲಿ ಶಾರುಖ್ ಖಾನ್?

    ರಜನಿಕಾಂತ್ ನಟನೆಯ ‘ಜೈಲರ್ 2’ ಚಿತ್ರದಲ್ಲಿ ಶಾರುಖ್ ಖಾನ್?

    ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದ ರಜನಿಕಾಂತ್ (Rajinikanth) ನಟನೆಯೆ ‘ಜೈಲರ್ 2’ (Jailer 2) ಚಿತ್ರದಲ್ಲಿ ಬಾಲಿವುಡ್‌ ನಟ ಶಾರುಖ್ ಖಾನ್ (Shah Rukh Khan) ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

    ‘ಜೈಲರ್ 2’ನಲ್ಲಿ ಮೋಹನ್ ಲಾಲ್, ಶಿವರಾಜ್ ಕುಮಾರ್ ಮತ್ತು ಜಾಕಿ ಶ್ರಾಫ್ ನಟಿಸಲಿದ್ದಾರೆ. ಅಲ್ಲದೇ ಬಾಲಿವುಡ್‌ನ ಪ್ರಮುಖ ನಟರೊಬ್ಬರು ಕಾಣಿಸಿಕೊಳ್ಳಲಿದ್ದಾರೆ. ಈ ವದಂತಿ ಬೆನ್ನಲ್ಲೇ ಚಿತ್ರದಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆಯೇ? ಎಂಬ ಚರ್ಚೆ ಆರಂಭವಾಗಿದೆ. ಇನ್ನೂ, ಶಾರುಖ್ ಖಾನ್ ಈ ಚಿತ್ರದಲ್ಲಿಲ್ಲ. ಅವರು ಅತಿಥಿ ಪಾತ್ರದಲ್ಲಿ ನಟಿಸುವ ಸಾಧ್ಯತೆಯಿಲ್ಲ ಎಂದು ಸಹ ಹೇಳಲಾಗುತ್ತಿದೆ. ಇದನ್ನೂ ಓದಿ: ರಜನಿಕಾಂತ್‌ ನಟನೆಯ ‘ಜೈಲರ್ 2’ನಲ್ಲಿಯೂ ನಟಿಸಲಿದ್ದಾರೆ ಶಿವಣ್ಣ

    ‘ಜೈಲರ್ 2’ 2023ರ ಸೂಪರ್‌ಹಿಟ್ ಚಿತ್ರ ‘ಜೈಲರ್’ ನ ಮುಂದುವರಿದ ಭಾಗವಾಗಿದೆ. ಈ ಚಿತ್ರದಲ್ಲಿ ತೆಲುಗು ನಟ ನಂದಮೂರಿ ಬಾಲಕೃಷ್ಣ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಾಗಾರ್ಜುನ ಅಕ್ಕಿನೇನಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

    ಈ ಚಿತ್ರದಲ್ಲಿ ಹ್ಯಾಟ್ರಿಕ್‌ ಹೀರೋ ಶಿವರಾಜ್‌ ಕುಮಾರ್‌ ನಟಿಸುತ್ತಿರುವುದಾಗಿ ಇತ್ತೀಚೆಗೆ ಹೈದರಾಬಾದ್‌ನಲ್ಲಿ ಹೇಳಿಕೊಂಡಿದ್ದರು. ಈ ಬಗ್ಗೆ ನಿರ್ದೇಶಕ ನೆಲ್ಸನ್ ತಮ್ಮ ಬಳಿ ಚರ್ಚಿಸಿದ್ದಾರೆ. ಚಿತ್ರದಲ್ಲಿ ನನ್ನ ಪಾತ್ರದ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ ಎಂದಿದ್ದರು. ಇದನ್ನೂ ಓದಿ: ‘666 ಆಪರೇಷನ್ ಡ್ರೀಮ್ ಥಿಯೇಟರ್’ನಲ್ಲಿ ಡಾಲಿ, ಶಿವಣ್ಣ

  • 59ರಲ್ಲೂ 20ರ ಲುಕ್‌ – ʻಕಿಂಗ್‌ʼ ಫಿಟ್ನೆಸ್ ಗುಟ್ಟೇನು?

    59ರಲ್ಲೂ 20ರ ಲುಕ್‌ – ʻಕಿಂಗ್‌ʼ ಫಿಟ್ನೆಸ್ ಗುಟ್ಟೇನು?

    ಭಿಮಾನಿಗಳಿಂದ್‌ ಕಿಂಗ್ ಖಾನ್ (Shahrukh Khan) ಎಂದು ಕರೆಸಿಕೊಂಡಿರುವ ಶಾರುಖ್ ಖಾನ್, 59 ವರ್ಷ ವಯಸ್ಸಿನಲ್ಲೂ 20ರ ಹರೆಯದ ಯುವಕನಂತೆ ಸಕ್ರಿಯರಾಗಿದ್ದಾರೆ. ಈ ವಯಸ್ಸಿನಲ್ಲಿಯೂ ಅವರು ಹೇಗೆ ಇಷ್ಟೊಂದು ದಣಿವರಿಯದೆ ಕೆಲಸ ಮಾಡ್ತಾರೆ ಅಂತ ಅಭಿಮಾನಿಗಳಲ್ಲಿ ಒಂದು ಪ್ರಶ್ನೆಯಂತೂ ಮನೆ ಮಾಡಿರುತ್ತೆ.

    ಹಿಂದೆ ಸಂದರ್ಶನವೊಂದರಲ್ಲಿ ಶಾರುಖ್ ಖಾನ್ ತಮ್ಮ ಊಟದ ಶೈಲಿಯ ಬಗ್ಗೆ ಹೇಳಿಕೊಂಡಿದ್ದರು. ನಾನು ದಿನಕ್ಕೆ ಎರಡು ಬಾರಿ ಮಾತ್ರ ಊಟ ಮಾಡುತ್ತೇನೆ. ಬೆಳಿಗ್ಗೆ ತಿಂಡಿ ಮಾಡುವುದಿಲ್ಲ. ಮಧ್ಯಾಹ್ನ ಮತ್ತು ರಾತ್ರಿ ಮಾತ್ರ ಊಟ ಮಾಡುತ್ತೇನೆ. ಹೆಚ್ಚಿನ ಪ್ರಮಾಣದ ಆಹಾರ ತಿನ್ನುವುದಿಲ್ಲ. ನನಗೆ ಸರಳ ಆಹಾರ ಇಷ್ಟ ಎಂದು ಹೇಳಿಕೊಂಡಿದ್ದರು. ಇದನ್ನೂ ಓದಿ: ದೀಕ್ಷಿತ್ ಶೆಟ್ಟಿ ನಿರ್ಮಾಣದ ‘ವಿಡಿಯೋ’ ಚಿತ್ರದ ಟೀಸರ್ ರಿಲೀಸ್

    ಮೊಳಕೆ ಕಾಳುಗಳು, ಬೇಯಿಸಿದ ಕೋಳಿ ಮಾಂಸ ಮತ್ತು ಬ್ರೊಕೊಲಿಯನ್ನು ತಿನ್ನುತ್ತೇನೆ. ನಾನು ಕೆಲವು ವರ್ಷಗಳಿಂದ ಪ್ರತಿದಿನ ಒಂದೇ ರೀತಿಯ ಆಹಾರವನ್ನು ಸೇವಿಸುತ್ತೇನೆ. ತಿನ್ನುವ ಆಹಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ ನಾನು ಅತಿಯಾಗಿ ತಿನ್ನುವವನಲ್ಲ ಎಂದಿದ್ದರು.

    ವಿಮಾನದಲ್ಲಿ ಪ್ರಯಾಣಿಸುವಾಗ ಅಥವಾ ಪಾರ್ಟಿಗೆ ಯಾರಾದ್ದಾದರೂ ಮನೆಗೆ ಹೋದಾಗ, ಅವರು ನನಗೆ ಬಡಿಸುವ ಯಾವುದೇ ಆಹಾರವನ್ನು ನಾನು ತಿನ್ನುತ್ತೇನೆ. ಅದು ಬಿರಿಯಾನಿಯಾಗಿರಲಿ, ಚಪಾತಿಯಾಗಿರಲಿ, ಪರೋಟಾ ಆಗಿರಲಿ, ತುಪ್ಪವಾಗಲಿ, ಲಸ್ಸಿಯಾಗಿರಲಿ, ಏನೇ ಕೊಟ್ಟರೂ ನಾನು ಬೇಡ ಎನ್ನದೇ ತಿನ್ನುತ್ತೇನೆ ಎಂದಿದ್ದರು.

    ಶಾರುಖ್ ಖಾನ್ ಮಾತ್ರವಲ್ಲ, ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಕೂಡ ತಮ್ಮ ಆಹಾರದ ಬಗ್ಗೆ ಬಹಳ ಜಾಗ್ರತೆ ವಹಿಸುತ್ತಾರೆ. ಸರಳವಾದ ಆಹಾರವನ್ನು ಮಾತ್ರ ತಿನ್ನುತ್ತಾರೆ. ರಜನಿಕಾಂತ್ ಹೆಚ್ಚು ಎಣ್ಣೆ ಅಥವಾ ಉಪ್ಪು ಇರುವ ಆಹಾರಗಳಿಂದ ದೂರ ಇರ್ತಾರೆ. ಬಹುಶಃ ಇದಕ್ಕೆ ಇರ್ಬೇಕು ರಜನಿಕಾಂತ್ 74 ನೇ ವಯಸ್ಸಿನಲ್ಲೂ ರೆಸ್ಟ್‌ ಇಲ್ದೆ ಸಿನಿಮಾ ಮಾಡೋದು! ರಜನಿಕಾಂತ್‌ ಅವರ ಜೊತೆ ನಡೆಯೋಕಾಗಲ್ಲ.. ಅವರು ನಡಿತಾ ಇದ್ರೆ ನಾವು ಓಡ್ತಾ ಇರ್ಬೇಕು ಅಂತ, ಕೀರ್ತಿ ಸುರೇಶ್ ಸೇರಿದಂತೆ, ಅನೇಕ ಯುವ ಕಲಾವಿದರು ಹೇಳಿಕೊಂಡಿದ್ದಾರೆ. ಇಷ್ಟಕ್ಕೆಲ್ಲ ಊಟವೇ ಕಾರಣ.. ಅಷ್ಟಿಲ್ದೇ ಹಿರಿಯರು ಹೇಳ್ತಾರಾ, ಊಟ ಬಲ್ಲವನಿಗೆ ರೋಗ ಇಲ್ಲ ಅಂತ!

    ಶಾರುಖ್ ಖಾನ್, ತಮ್ಮ ಪುತ್ರಿ ಸುಹಾನಾ ಜೊತೆ ಕಿಂಗ್‌ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮತ್ತು ರಾಣಿ ಮುಖರ್ಜಿ ನಟಿಸುತ್ತಿದ್ದಾರೆ. ಅಭಿಷೇಕ್ ಬಚ್ಚನ್ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ಕಾನ್ 2025: ನನಗೆ ಫಹಾದ್ ಫಾಸಿಲ್ ಆ್ಯಕ್ಟಿಂಗ್ ಇಷ್ಟ – ಆಲಿಯಾ ಭಟ್ ಗುಣಗಾನ