Tag: Rajini Kanth

  • ಪ್ರಕಾಶ್ ರೈಗೆ ಕಾಸು ಮುಖ್ಯವಾದ್ರೆ ನಮ್ಗೆ ಕಾವೇರಿ ಮುಖ್ಯ- ಸಂಸದ ಪ್ರತಾಪ್ ಸಿಂಹ ತಿರುಗೇಟು

    ಪ್ರಕಾಶ್ ರೈಗೆ ಕಾಸು ಮುಖ್ಯವಾದ್ರೆ ನಮ್ಗೆ ಕಾವೇರಿ ಮುಖ್ಯ- ಸಂಸದ ಪ್ರತಾಪ್ ಸಿಂಹ ತಿರುಗೇಟು

    ಮೈಸೂರು: ತಮಿಳು ಚಿತ್ರ ಕಾಳ ಬಿಡುಗಡೆ ವಿಚಾರದಲ್ಲಿ ನಟ ಪ್ರಕಾಶ್ ರೈ ಟ್ವೀಟ್ ಮಾಡಿರುವುದಕ್ಕೆ ಸಂಸದ ಪ್ರತಾಪ್ ಸಿಂಹ ತಿರುಗೇಟು ನೀಡಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕಾಶ್ ರೈಗೆ ಕಾವೇರಿಗಿಂತ ಕಾಸು ಮುಖ್ಯ. ನಮಗೆಲ್ಲ ಕಾಸಿಗಿಂತ ಕಾವೇರಿ ಮುಖ್ಯ ಅಂತ ಅಂತ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

    ಪ್ರಕಾಶ್ ರೈ ಕರ್ನಾಟಕದ ಪಾಲಿಗೆ ನಿಜವಾಗಿಯೂ ಖಳನಾಯಕನಾಗಿದ್ದಾರೆ. ಈ ಹಿಂದೆ ಸಿನಿಮಾ ಕಾರ್ಯಕ್ರಮದಲ್ಲಿ ಕಾವೇರಿ ವಿಚಾರ ಚರ್ಚೆ ಮಾಡೋಲ್ಲ ಎಂದಿದ್ದರು. ಈಗ ಸಿನಿಮಾಗು ಕಾವೇರಿಗೂ ಏನು ಸಂಬಂಧ ಎನ್ನುತ್ತಿದ್ದಾರೆ. ಆ ಮೂಲಕ ಕರ್ನಾಟಕ ಹಾಗೂ ಕಾವೇರಿಯನ್ನ ಪದೇ ಪದೇ ಕೆಣಕುತ್ತಿದ್ದಾರೆ. ರೈಗೆ ಕಾಸೇ ಮುಖ್ಯವಾಗಿದೆ. ಅದಕ್ಕಾಗಿ ರಜಿನಿಕಾಂತ್ ಚಿತ್ರದ ಪರ ಟ್ವೀಟ್ ಮಾಡಿದ್ದಾರೆ. ಕಾವೇರಿ ವಿಚಾರದಲ್ಲಿ ರಜಿನಿಕಾಂತ್ ಅಷ್ಟೇ ಅಲ್ಲ ಯಾರೇ ಲಘುವಾಗಿ ಮಾತನಾಡಿದ್ರೂ, ಅದನ್ನ ಖಂಡಿಸುತ್ತೇವೆ ಅಂದ್ರು. ಇದನ್ನೂ ಓದಿ: ಕಾಳನಿಗೂ, ಕಾವೇರಿಗೂ ಎಲ್ಲಿಯ ಎತ್ತಣದ ಸಂಬಂಧ? ಪ್ರಕಾಶ್ ರೈ ಜಸ್ಟ್ ಆಸ್ಕಿಂಗ್!

    ಕನ್ನಡಪರ ಹೋರಾಟಗಾರರು ಸ್ವಾಭಾವಿಕವಾಗಿ ರಜಿನಿಕಾಂತ್ ಹೇಳಿಕೆಯನ್ನ ವಿರೋಧಿಸಿದ್ದಾರೆ. ಅದಕ್ಕೆ ರಜಿನಿಕಾಂತ್ ಸಲಹೆ ನೀಡಿ ಆಗಿರುವ ಸಮಸ್ಯೆಗೆ ಪರಿಹಾರ ಹುಡಕಬೇಕಿತ್ತು. ಆದ್ರೆ ಪ್ರಕಾಶ್ ಮತ್ತೆ ವಿವಾದಾತ್ಮಕವಾಗಿ ಟ್ವಿಟ್ ಮಾಡಿದ್ದಾರೆ. ಆ ಮೂಲಕ ಮತ್ತೆ ನಿಜಜೀವನದಲ್ಲಿ ಅವರು ಖಳನಾಯಕನಾಗಿದ್ದಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪ್ರಕಾಶ್ ರೈ ಗೆ ಕಾವೇರಿ ಜೊತೆ ಭಾವನಾತ್ಮಕ ಸಂಬಂಧ ಇಲ್ಲದಿರಬಹುದು. ಆದ್ರೆ ನಮಗೆ ಕಾವೇರಿ ಜೊತೆ ಭಾವನಾತ್ಮಕ ಸಂಬಂಧ ಇದೆ. ಹೀಗಾಗಿ ಪ್ರಕಾಶ್ ರೈ ಟ್ವೀಟನ್ನು ಖಂಡಿಸುವುದಾಗಿ ಅವರು ತಿಳಿಸಿದ್ರು.

  • ರಜನಿಕಾಂತ್ `ಕಾಳಾ ಕರಿಕಾಳನ್’ ಪಾತ್ರದ ಬಗ್ಗೆ ಎಕ್ಸ್ ಕ್ಲೂಸಿವ್ ನ್ಯೂಸ್!

    ರಜನಿಕಾಂತ್ `ಕಾಳಾ ಕರಿಕಾಳನ್’ ಪಾತ್ರದ ಬಗ್ಗೆ ಎಕ್ಸ್ ಕ್ಲೂಸಿವ್ ನ್ಯೂಸ್!

    ಚೆನ್ನೈ: ಸಿನಿಮಾರಂಗದ ತಲೈವಾ ರಜನಿಕಾಂತ್ `ಕಾಳಾ ಕರಿಕಾಳನ್’ ಸಿನಿಮಾದಲ್ಲಿ ನಟಿಸುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದರೆ ರಜನಿ ಅಥವಾ ಚಿತ್ರತಂಡ ಸಿನಿಮಾದ ಕಥೆ ಬಗ್ಗೆ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಆದರೆ ಈಗ ರಜಿನಿ ಸಿನಿಮಾದಲ್ಲಿ ಯಾವ ರೀತಿ ಕಾಣಲಿದ್ದಾರೆ ಎಂಬುದನ್ನು ನಟ ಪಂಕಜ್ ತ್ರಿಪಾಠಿ ರಿವೀಲ್ ಮಾಡಿದ್ದಾರೆ.

    ಕಬಾಲಿ ಸಿನಿಮಾದ ಬಳಿಕ ರಜನಿ ಅವರ ಯಾವುದೇ ಸಿನಿಮಾಗಳು ತೆರೆಕಂಡಿಲ್ಲ. ರೋಬೋಟ್ ಚಿತ್ರದ ಮುಂದುವರೆದ ಭಾಗವಾಗಿರುವ 2.0 ಸಿನಿಮಾ ತೆರೆಕಾಣಬೇಕಿದೆ. ಆದರೆ ಈ ಸಿನಿಮಾದಲ್ಲಿ ರಜನಿ ಹೇಗೆ ಮತ್ತು ಯಾವ ಪಾತ್ರಗಳಲ್ಲಿ ಅಭಿಮಾನಿಗಳು ಒಂದು ಕಲ್ಪನೆಯನ್ನು ಹೊಂದಿದ್ದಾರೆ. ಆದರೆ ಕಾಳಾ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾದ ನಂತರ ಚಿತ್ರದ ಬಗ್ಗೆ ಯಾವುದೇ ಮಾಹಿತಿ ಹೊರಬಂದಿಲ್ಲ. ಕಾಳಾ ಸಿನಿಮಾದಲ್ಲಿ ರಜಿನಿ ಜೊತೆಯಲ್ಲಿ ನಾನಾ ಪಾಟೇಕರ್, ಪಂಕಜ್ ತ್ರಿಪಾಠಿ, ಹುಮಾ ಖುರೇಷಿ ಸೇರಿದಂತೆ ಹಲವು ಹಿರಿಯ ನಟರು ನಟಿಸಿದ್ದಾರೆ.

    ಇತ್ತೀಚಿಗೆ ಸಂದರ್ಶನವೊಂದರಲ್ಲಿ ಪಂಕಜ್ ತ್ರಿಪಾಠಿ `ಕಾಳಾ’ ಸಿನಿಮಾದ ಬಗ್ಗೆ ಎಕ್ಸ್ ಕ್ಲೂಸಿವ್ ಮಾಹಿತಿಯನ್ನು ಬಹಿರಂಗಗೊಳಿಸಿದ್ದಾರೆ. ನನಗೆ ರಜಿನಿ ಅವರನ್ನು ನೋಡಬೇಕು, ಅವರ ಜೊತೆ ಮಾತನಾಡಬೇಕು, ಪಕ್ಕದಲ್ಲಿ ಕುಳಿತುಕೊಳ್ಳಬೇಕು ಎಂಬುದು ದೊಡ್ಡ ಆಸೆ ನನ್ನದಾಗಿತ್ತು. ಕಾರಣ ದೇಶದ ತುಂಬೆಲ್ಲಾ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇಂದು ನಾನು ಅವರ ಜೊತೆ ಸಿನಿಮಾ ಮಾಡುತ್ತಿದ್ದು, ಪ್ರತಿ ದಿನ ಅವರನ್ನು ಭೇಟಿಯಾಗಿ ಮಾತನಾಡುತ್ತಿದ್ದೇನೆ. ಸಿನಿಮಾ ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇನೆ. ಅವರೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದು ಸಂತೋಷವನ್ನು ತಂದಿದೆ.

    ಸಿನಿಮಾದಲ್ಲಿ ನಾನು ಪೊಲೀಸ್ ಪಾತ್ರದಲ್ಲಿ ನಟಿಸುತ್ತಿದ್ದೇನೆ. ರಜನಿಕಾಂತ್ ಇದೂವರೆಗೂ ಕಾಣಿಸಿಕೊಳ್ಳದ ಕೊಂಚ ವಿಭಿನ್ನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹೆಚ್ಚಾಗಿ ನೆಗಟಿವ್ ಶೇಡ್‍ನಲ್ಲಿ ರಜಿನಿ ಅವರ ಪಾತ್ರವಿದೆ. ಹೀಗಾಗಿ ಸಿನಿಮಾದಲ್ಲಿ ನಮ್ಮಿಬ್ಬರ ಹಲವು ಸನ್ನಿವೇಶಗಳು ಬರುತ್ತದೆ ಎಂದು ತಿಳಿಸಿದ್ದಾರೆ.

    ಫಸ್ಟ್ ಲುಕ್‍ನಲ್ಲಿ ರಜಿನಿ ಪಕ್ಕಾ ರಗಡ್ ಮತ್ತು ಮಾಸ್ ಲುಕ್‍ನಲ್ಲಿ ಕಾಣಿಸಿಕೊಂಡಿದ್ದಾರೆ. ಈಗ ರಜಿನಿ ಅವರು ನಟಿಸುತ್ತಿರುವ ಪಾತ್ರಗ ಬಗ್ಗೆ ಮಾಹಿತಿ ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಮತ್ತಷ್ಟು ಕುತೂಹಲವನ್ನು ಹುಟ್ಟು ಹಾಕಿದೆ.