Tag: Rajgarh

  • ಮಹಿಳೆಯ ಖಾಸಗಿ ಭಾಗಕ್ಕೆ ಸುಡುವ ರಾಡ್‌ನಿಂದ ಹಲ್ಲೆ – ಮೆಣಸಿನ ಪುಡಿ ಹಾಕಿ ವಿಕೃತಿ

    ಮಹಿಳೆಯ ಖಾಸಗಿ ಭಾಗಕ್ಕೆ ಸುಡುವ ರಾಡ್‌ನಿಂದ ಹಲ್ಲೆ – ಮೆಣಸಿನ ಪುಡಿ ಹಾಕಿ ವಿಕೃತಿ

    – ಸುಮಾರು 2 ಗಂಟೆ ಚಿತ್ರಹಿಂಸೆ

    ಭೋಪಾಲ್: ತನ್ನ ಖಾಸಗಿ ಭಾಗಕ್ಕೆ ಸುಡುವ ಕಬ್ಬಿಣದ ರಾಡ್ ಇಡಲಾಗಿದ್ದು, ಬಳಿಕ ಮೆಣಸಿನ ಪುಡಿ ಹಾಕಿ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ತನ್ನ ಪತಿ ಮತ್ತು ಆತನ ಕುಟುಂಬಸ್ಥರ ವಿರುದ್ಧ ದೂರು ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಈ ಘಟನೆ ಮಧ್ಯಪ್ರದೇಶ (Madhyapradesh) ರಾಜ್‌ಗಢ್‌ನಲ್ಲಿ ನಡೆದಿದೆ. ರೋಹಿತ್ ರುಹೇಲಾ ಎಂಬ ವ್ಯಕ್ತಿ ಸಂತ್ರಸ್ಥ ಮಹಿಳೆಯ ಮನೆಗೆ ಬಂದು ಸ್ಟೀಮ್ ಯಂತ್ರವನ್ನು ಕೇಳಿದ್ದಾನೆ. ಮಹಿಳೆ ಗೇಟ್ ಬಳಿ ಕಾಯಲು ಹೇಳಿದಾಗ, ಅವನು ಬಾಗಿಲು ಮುಚ್ಚಿ, ಅವಳ ಕೋಣೆಗೆ ಪ್ರವೇಶಿಸಿ ಕಿರುಕುಳ ನೀಡಲು ಪ್ರಯತ್ನಿಸಿದನು. ಇದನ್ನು ನೋಡಿ ಮಹಿಳೆ ಮೇಲೆ ಅನುಮಾನ ಪಟ್ಟ ಪತಿಯ ಕುಟುಂಬಸ್ಥರು ಎರಡು ಗಂಟೆಗಳ ಕಾಲ ದೈಹಿಕ ದೌರ್ಜನ್ಯ ಮಾಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.ಇದನ್ನೂ ಓದಿ: ಹತ್ಯೆ ಮಾಡಲೆಂದು ಕಬ್ಬಿನ ಗದ್ದೆಗೆ ಕರ್ಕೊಂಡು ಬಂದಿದ್ರು: ರಾತ್ರಿ ಏನೇನಾಯ್ತು ವಿವರಿಸಿದ ಸಿಟಿ ರವಿ

    ದೂರಿನ ಪ್ರಕಾರ, ಪತಿ, ಅತ್ತಿಗೆ, ಅತ್ತೆ ಮತ್ತು ಮಾವ ಸಂತ್ರಸ್ತೆಗೆ ಸುಮಾರು ಎರಡು ಗಂಟೆಗಳ ಕಾಲ ಚಿತ್ರಹಿಂಸೆ ನೀಡಿದ್ದಾರೆ. ಒದೆಯುವುದು, ಗುದ್ದುವುದು ಸೇರಿದಂತೆ ವಿವಸ್ತ್ರಗೊಳಿಸಿ ದೈಹಿಕ ಹಿಂಸೆ ನೀಡಿದ್ದಾರೆ. ತನ್ನ ಖಾಸಗಿ ಭಾಗಗಳು, ತೊಡೆ ಮತ್ತು ದೇಹದ ಇತರ ಭಾಗಗಳಿಗೆ ಅತ್ತೆ ಕಾದ ಕಬ್ಬಿಣದ ರಾಡ್‌ನಿಂದ ಸುಟ್ಟಿದ್ದಾರೆ. ಮಾವ ಆಕೆಯ ಖಾಸಗಿ ಭಾಗಗಳಿಗೆ ಮೆಣಸಿನ ಪುಡಿಯನ್ನು ಹಚ್ಚಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.

    ಮಹಿಳೆಯ ದೂರಿನ ಅನ್ವಯ, ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಸೆಕ್ಷನ್ 115 (2) ಸ್ವಯಂಪ್ರೇರಣೆಯಿಂದ ಗಾಯಗೊಳಿಸುವುದಕ್ಕಾಗಿ ಸೆಕ್ಷನ್ 74 ಮಹಿಳೆಯ ಮೇಲೆ ಹಲ್ಲೆಗಾಗಿ, ಸೆಕ್ಷನ್ 64 ಅತ್ಯಾಚಾರಕ್ಕಾಗಿ ಮತ್ತು ಸೆಕ್ಷನ್ 3(5) ಸಾಮಾನ್ಯ ಉದ್ದೇಶಗಳ ಅಡಿಯಲ್ಲಿ ದೂರು ದಾಖಲಾಗಿದೆ.ಇದನ್ನೂ ಓದಿ: ನೆಲಮಂಗಲದಲ್ಲಿ ಭೀಕರ ಅಪಘಾತ – ಪ್ರವಾಸಕ್ಕೆ ಹೊರಟಿದ್ದ ಒಂದೇ ಕುಟುಂಬದ 6 ಮಂದಿ ದುರ್ಮರಣ

  • 20 ಜನರ ಮೇಲೆ ದಾಳಿ ಮಾಡಿದ್ದ ಮೋಸ್ಟ್ ವಾಂಟೆಡ್ ಕೋತಿ ಕೊನೆಗೂ ಸೆರೆ

    20 ಜನರ ಮೇಲೆ ದಾಳಿ ಮಾಡಿದ್ದ ಮೋಸ್ಟ್ ವಾಂಟೆಡ್ ಕೋತಿ ಕೊನೆಗೂ ಸೆರೆ

    – ಕೋತಿ ಹಿಡಿಯಲು ಘೋಷಿಸಲಾಗಿತ್ತು 21 ಸಾವಿರ ರೂ. ಬಹುಮಾನ

    ಭೋಪಾಲ್: 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿದ್ದ ಮೋಸ್ಟ್ ವಾಂಟೆಡ್ ಕೋತಿಯನ್ನು (Monkey) ಕೊನೆಗೂ ಸೆರೆಹಿಡಿಯಲಾಗಿದೆ. ಕೋತಿಯನ್ನು ಹಿಡಿದವರಿಗೆ 21 ಸಾವಿರ ರೂ. ಬಹುಮಾನವನ್ನೂ ಘೋಷಿಸಲಾಗಿತ್ತು.

    ಮಧ್ಯಪ್ರದೇಶದ (Madhya Pradesh) ಭೋಪಾಲ್‌ನ (Bhopal) ರಾಜಗಢದಲ್ಲಿ (Rajgarh) 20ಕ್ಕೂ ಹೆಚ್ಚು ಜನರ ಮೇಲೆ ದಾಳಿ ಮಾಡಿ ಕೋತಿಯೊಂದು ಸ್ಥಳೀಯರ ನಿದ್ದೆಗೆಡಿಸಿತ್ತು. ಕೋತಿಯ ಉಪಟಳ ತಾಳಲಾರದೆ ಅದನ್ನು ಸರೆಹಿಡಿಯಲು ಹರಸಾಹಸ ಪಡಲಾಗಿತ್ತು. ಮೋಸ್ಟ್ ವಾಂಟೆಡ್ ಎನಿಸಿಕೊಂಡಿದ್ದ ಕೋತಿಯನ್ನು ಸೆರೆಹಿಡಿದವರಿಗೆ ಬರೋಬ್ಬರಿ 21 ಸಾವಿರ ರೂ. ಬಹುಮಾನವನ್ನೂ ನೀಡುವುದಾಗಿ ಘೋಷಿಸಲಾಗಿತ್ತು. ಇದನ್ನೂ ಓದಿ: ತಮ್ಮ ಸಾಲ ಮಾಡಿದ್ದಕ್ಕೆ ಅಣ್ಣ ಕಿಡ್ನ್ಯಾಪ್‌; ಸಿನಿಮಾ ಸ್ಟೈಲಲ್ಲಿ ತಮಿಳು ರ‍್ಯಾಪರ್ ದೇವ್ ಆನಂದ್ ಅಪಹರಣ

    ಎಲ್ಲಾ ಪ್ರಯತ್ನಗಳು ವಿಫಲವಾದ ಬಳಿಕ ಉಜ್ಜಯಿನಿಯಿಂದ ತಂಡವನ್ನು ಕರೆಸಿ, ಡ್ರೋನ್ ಮೂಲಕ ಕೋತಿಯನ್ನು ಪತ್ತೆ ಹಚ್ಚಿ, ಅದಕ್ಕೆ ಅರಿವಳಿಕೆ ನೀಡಿ ಕೊನೆಗೂ ಅದನ್ನು ಸೆರೆಹಿಡಿಯಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕೋತಿಯನ್ನು ವಾಹನಕ್ಕೆ ಕೊಂಡೊಯ್ಯುತ್ತಿದ್ದಂತೆ ಅಲ್ಲಿದ್ದ ಗುಂಪು ‘ಜೈ ಶ್ರೀರಾಮ್, ಜೈ ಬಜರಂಗಬಲಿ’ ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: 30 ವರ್ಷಗಳ ಹಿಂದೆ ಸಾಮಾನ್ಯ ನಾಗರಿಕ.. ಈಗ ಭಾರತದ ಪ್ರಧಾನಿಯಾಗಿ ಶ್ವೇತಭವನಕ್ಕೆ ಮೋದಿ ಭೇಟಿ

    ಭಾರೀ ದಾಂಧಲೆ ನಡೆಸಿದ್ದ ಕೋತಿ ಕಳೆದ 15 ದಿನಗಳಲ್ಲಿ 8 ಮಕ್ಕಳು ಸೇರಿ 20ಕ್ಕೂ ಹೆಚ್ಚು ಜನರ ಮೇಲೆ ಗಂಭೀರ ದಾಳಿ ನಡೆಸಿತ್ತು.

  • ಕಳೆದ 400 ವರ್ಷಗಳಿಂದ ಗ್ರಾಮದಲ್ಲಿ ಹೆರಿಗೆಯೇ ಆಗಿಲ್ಲ!

    ಕಳೆದ 400 ವರ್ಷಗಳಿಂದ ಗ್ರಾಮದಲ್ಲಿ ಹೆರಿಗೆಯೇ ಆಗಿಲ್ಲ!

    ಭೂಪಾಲ್: ಮಧ್ಯಪ್ರದೇಶದ ಗ್ರಾಮವೊಂದರಲ್ಲಿ 400 ವರ್ಷಗಳಿಂದ ಹೆರಿಗೆಯೇ ಆಗಿಲ್ಲ. ಹೆರಿಗೆ ಆಗದೇ ಇರಲು ದೇವಿಯ ಶಾಪ ಕಾರಣವಂತೆ!

    ಮಧ್ಯಪ್ರದೇಶದ ರಾಜ್ಗಡ್ ಜಿಲ್ಲೆಯಲ್ಲಿರುವ ಶಂಕ ಸ್ಯಾಮ್ ಜಿ ಗ್ರಾಮದಲ್ಲಿ ಹೆರಿಗೆ ಆಗುತ್ತಿಲ್ಲ. ಗ್ರಾಮಕ್ಕೆ ದೇವಿಯ ಶಾಪವಿದ್ದು, ಹೆರಿಗೆಯಾದರೆ ತಾಯಿ ಇಲ್ಲವೇ ಮಗು ಸಾವನ್ನಪ್ಪುತ್ತಾರೆ ಅಥವಾ ಮಗು ಕುರುಪಿಯಾಗಿ ಜನಿಸುತ್ತದೆ ಎನ್ನುವ ಮೂಢನಂಬಿಕೆ ಇವರಲ್ಲಿ ಇರುವ ಕಾರಣ ಹೆರಿಗೆ ಆಗುತ್ತಿಲ್ಲ.

    ಮೂಢನಂಬಿಕೆಗೆ ಹೆದರಿ ತಮ್ಮ ಹೆರಿಗೆ ಸರಳವಾಗಿ ಆಗಲಿ ಎಂದು ಇಲ್ಲಿನ ಬಾಣಂತಿಯರು ಡೆಲಿವರಿ ಸಮಯ ಬಂದಾಗ ಬೇರೊಂದು ಪ್ರದೇಶಕ್ಕೆ ಹೋಗುತ್ತಾರೆ.

    “90% ರಷ್ಟು ಹೆರಿಗೆಯು ಆಸ್ಪತ್ರೆಯಲ್ಲಿ ಆಗುತ್ತವೆ. ಇನ್ನು ಉಳಿದಂತೆ ಕೆಲವು ಹೆರಿಗೆಗಳು ಗ್ರಾಮದ ಹೊರವಲಯದಲ್ಲಿ ಆಗುತ್ತವೆ’” ಎಂದು ಗ್ರಾಮದ ಮುಖ್ಯಸ್ಥ ನರೇಂದ್ರ ಗುರ್ಜಾಲ್ ಹೇಳುತ್ತಾರೆ.

    ಯಾಕೆ ಈ ನಂಬಿಕೆ ಬಂದಿದೆ ಎಂದು ಕೇಳಿದ್ದಕ್ಕೆ, ಸುಮಾರು 16ನೇ ಶತಮಾನದಲ್ಲಿ ಇಲ್ಲಿ ದೇವಸ್ಥಾನವೊಂದು ನಿರ್ಮಾವಾಗುತ್ತಿತ್ತು. ಈ ವೇಳೆ ಮಹಿಳೆಯೊಬ್ಬಳು ನಿರ್ಮಾಣ ಕಾರ್ಯಕ್ಕೆ ಅಡ್ಡಿ ಪಡಿಸಿದಳು. ಹೀಗಾಗಿ, ದೇವಸ್ಥಾನ ನಿರ್ಮಾಣ ಕಾರ್ಯ ನಿಂತುಹೋಯಿತು. ಇದರಿಂದ ಕೋಪಗೊಂಡ ದೇವತೆಯರು ಈ ಗ್ರಾಮದಲ್ಲಿ ಮಹಿಳೆಯರು ಜನ್ಮ ನೀಡದಂತಾಗಲಿ ಎಂದು ಶಾಪ ಹಾಕಿದರಂತೆ. ಇದು ನಮ್ಮ ಪೂರ್ವಿಕರ ಕಾಲದಿಂದಲೂ ನಡೆದುಕೊಂಡು ಬಂದಿದೆ ಎಂದು ಅವರು ಕಥೆ ಹೇಳಿದ್ದಾರೆ.

    ಇಂದಿಗೂ ಇಲ್ಲಿನ ಜನರು ಇದೇ ನಂಬಿಕೆಯಲ್ಲಿ ಬದುಕುತ್ತಿದ್ದಾರೆ. ಹೀಗಾಗಿ, 400 ವರ್ಷಗಳಿಂದಲೂ ಯಾವುದೇ ಮಹಿಳೆಯೂ ಇಲ್ಲಿ ಮಗುವಿಗೆ ಜನ್ಮ ನೀಡಿಲ್ಲ. ಒಂದು ವೇಳೆ ಮಗುವಿಗೆ ಜನ್ಮ ನೀಡಿದರೆ ಮಗು ಕುರುಪಿಯಾಗುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ.

    ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಗ್ರಾಮದ ಹೊರಗೆ ಒಂದು ಕೊಠಡಿಯನ್ನು ನಿರ್ಮಾಣ ಮಾಡಲಾಗಿದೆ. ಕೆಲವೊಮ್ಮೆ ಅಲ್ಲಿಯೇ ಹೆರಿಗೆ ಮಾಡಲಾಗುತ್ತದೆ.