Tag: Rajesh Tope

  • XE ರೂಪಾಂತರಿ ಮಾರಣಾಂತಿಕವಲ್ಲ: ಮಹಾರಾಷ್ಟ್ರ ಸಚಿವ

    XE ರೂಪಾಂತರಿ ಮಾರಣಾಂತಿಕವಲ್ಲ: ಮಹಾರಾಷ್ಟ್ರ ಸಚಿವ

    ಮುಂಬೈ: ಕೊರೊನಾ ಸೋಂಕಿನ ಹೊಸ ರೂಪಾಂತರಿಯಾಗಿರುವ XE ತಳಿ ವಯಸ್ಸಾದ ವ್ಯಕ್ತಿಯಲ್ಲಿ ಕಾಣಿಸಿಕೊಂಡಿದ್ದು, ಈ ಸೋಂಕು ಮಾರಣಾಂತಿಕವಲ್ಲ  ಹಾಗೂ ಲಕ್ಷಣರಹಿತವಾಗಿದೆ ಎಂದು ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್‍ನಲ್ಲಿರುವ 67 ವರ್ಷದ ಮುಂಬೈ ನಿವಾಸಿಗೆ XE ಸೋಂಕು ತಗುಲಿತ್ತು. ಆ ವ್ಯಕ್ತಿ ಮಾ.6ರಂದು ಲಂಡನ್‍ನಿಂದ ಆಗಮಿಸಿದ್ದರು. ಜೊತೆಗೆ ಅವರು ಇಬ್ಬರು ಬ್ರಿಟಿಷ್ ವ್ಯಕ್ತಿಗಳ ಸಂಪರ್ಕದಲ್ಲಿದ್ದರು. ಮಾ.11ರಂದು ಅವರಿಗೆ ಸಣ್ಣದಾಗಿ ಜ್ವರ ಕಾಣಿಸಿಕೊಂಡಿತು. ಮಾ.12ರಂದು ವಡೋದರಾದಲ್ಲಿ ಅವರನ್ನು ಪರೀಕ್ಷಿಸಲಾಯಿತು. ಜೊತೆಗೆ ಮಾದರಿಯನ್ನು ಜೀನೋಮ್‍ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಅವರು ಮರುದಿನ ಗುಜರಾತ್‍ನಿಂದ ಮುಂಬೈಗೆ ಬಂದಿದ್ದರು.

    ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದ ಇತರೆ ಮೂವರು ವ್ಯಕ್ತಿಯನ್ನು ಪರೀಕ್ಷಿಸಲಾಗಿತ್ತು. ಆದರೆ ಅವರಿಗೆಲ್ಲರಿಗೂ ನೆಗೆಟಿವ್ ಬಂದಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಸೇಡು ತೀರಿಸಿಕೊಳ್ಳಲ್ಲ, ಕಾನೂನು ತನ್ನ ಮಾರ್ಗವನ್ನು ತೆಗೆದುಕೊಳ್ಳುತ್ತೆ: ಶೆಹಬಾಜ್ ಷರೀಫ್

    ಆ ವ್ಯಕ್ತಿ ಮಾರ್ಚ್ 20ರಿಂದ ಮುಂಬೈನಲ್ಲಿರುವ ತನ್ನ ಮನೆಯಲ್ಲಿ ಕ್ವಾರಂಟೈನ್‍ನಲ್ಲಿದ್ದಾನೆ. ಅವರು ರೋಗ ಲಕ್ಷಣರಹಿತರಾಗಿದ್ದಾರೆ. ಅವರು ಎರಡು ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದರು. ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಹೊಸ ರೂಪಾಂತರದ ಬಗ್ಗೆ ಯಾವುದೇ ಆತಂಕವಿಲ್ಲ. ಇದು ಮಾರಣಾಂತಿಕವಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಚಂದ್ರು ಕೊಲೆ ಪ್ರಕರಣ- ಜಮೀರ್ ಹೇಳಿಕೆ ಬೆನ್ನಲ್ಲೇ ಸೈಮನ್ ರಾಜ್ ಕಣ್ಮರೆ

  • ಪ್ರಧಾನಿ ಮೋದಿ ತವರಿಗೇ ಲಗ್ಗೆಯಿಟ್ಟ XE ಕೊರೊನಾ ರೂಪಾಂತರಿ

    ಪ್ರಧಾನಿ ಮೋದಿ ತವರಿಗೇ ಲಗ್ಗೆಯಿಟ್ಟ XE ಕೊರೊನಾ ರೂಪಾಂತರಿ

    ಗಾಂಧಿನಗರ (ಗುಜರಾತ್): ಕೊರೊನಾ ರೂಪಾಂತರಿ ಓಮಿಕ್ರಾನ್‌ಗಿಂತಲೂ ವೇಗವಾಗಿ ಹರಡುವ XE ರೂಪಾಂತರವು ಪ್ರಧಾನಿ ನರೇಂದ್ರಮೋದಿ ತವರಾದ ಗುಜರಾತ್‌ಗೆ ಲಗ್ಗೆಯಿಟ್ಟಿದೆ.

    ಮುಂಬೈನಲ್ಲಿ ಈ ಹೊಸ ತಳಿ ಪತ್ತೆಯಾದ ಕೆಲವೇ ದಿನಗಳಲ್ಲಿ ಗುಜರಾತ್‌ಗೂ ಕಾಲಿಟ್ಟಿದೆ ಎಂದು ಮೂಲಗಳು ತಿಳಿಸಿವೆ. XE ತಳಿ ಪತ್ತೆಯಾದ ವ್ಯಕ್ತಿಯಿಂದ ಸಂಗ್ರಹಿಸಿದ ಮಾದರಿಯನ್ನು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಲಾಗಿದ್ದು, ವ್ಯಕ್ತಿಯ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿ ಯರ‍್ಯಾರು ಇದ್ದಾರೆ ಎಂಬುದನ್ನು ಪತ್ತೆಹಚ್ಚಲಾಗುತ್ತಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ಇದನ್ನೂ ಓದಿ: ದಂಪತಿ ಒಟ್ಟಿಗೆ ಮಲಗುವಂತಿಲ್ಲ, ಹಗ್‌-ಕಿಸ್‌ ಮಾಡುವಂತಿಲ್ಲ; ಕೊರೊನಾ ಟಫ್‌ ರೂಲ್ಸ್‌

    Coronavirus

    ಬೃಹತ್‌ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಈಚೆಗಷ್ಟೇ 53 ವರ್ಷದ ಮಹಿಳೆಯೊಬ್ಬರಲ್ಲಿ XE ತಳಿ ಇರುವುದಾಗಿ ವರದಿ ಮಾಡಿತ್ತು. ಆದರೆ, ಮಹಾರಾಷ್ಟ್ರದ ಆರೋಗ್ಯ ಸಚಿವ ರಾಜೇಶ್ ಟೋಪೆ ಅವರು ಒಂದು ದಿನದ ನಂತರ ಆರೋಗ್ಯ ಇಲಾಖೆ ಈ ಬಗ್ಗೆ ದೃಢಪಡಿಸಿಲ್ಲ. ವರದಿ ಬಂದ ನಂತರ ಈ ಬಗ್ಗೆ ಮಾತನಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದರು. ಇದಾದ ಎರಡೇ ದಿನಗಳಲ್ಲಿ ಗುಜರಾತ್‌ನಲ್ಲಿ ಪತ್ತೆಯಾಗಿರುವುದಾಗಿ ಆರೋಗ್ಯ ಇಲಾಖೆಯ ಮೂಲಗಳು ತಿಳಿವೆ ಎನ್ನಲಾಗಿದೆ.

  • ಕಾಂಗ್ರೆಸ್‍ಗೆ ಮುಸ್ಲಿಮರ ಮತಗಳು ಬೇಕಿದೆ – ನಾವು ಮೈತ್ರಿಗೆ ಸಿದ್ಧ ಎಂದ ಜಲೀಲ್

    ಕಾಂಗ್ರೆಸ್‍ಗೆ ಮುಸ್ಲಿಮರ ಮತಗಳು ಬೇಕಿದೆ – ನಾವು ಮೈತ್ರಿಗೆ ಸಿದ್ಧ ಎಂದ ಜಲೀಲ್

    ಔರಂಗಬಾದ್: ರಾಷ್ಟ್ರೀಯ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಎಐಎಂಐಎಂ ಸಿದ್ಧವಾಗಿದೆ. ಆದರೆ ಅವರು ನಮ್ಮೊಂದಿಗೆ ಕೈಜೋಡಿಸುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ ಎಂದು ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್) ಪಕ್ಷದ ಸಂಸದ ಇಮ್ತಿಯಾಜ್ ಜಲೀಲ್ ಹೇಳಿದ್ದಾರೆ.

    ರಾಜ್ಯ ಸಚಿವ ಮತ್ತು ಎನ್‍ಸಿಪಿ ನಾಯಕ ರಾಜೇಶ್ ಟೋಪೆ ಅವರ ನಿವಾಸಕ್ಕೆ ಭೇಟಿ ನೀಡಿದ ಜಲೀಲ್ ಎಐಎಂಐಎಂ ಸಂಘಟನೆಯ ಬಗ್ಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್‍ಸಿಪಿಯೊಂದಿಗೆ ಎಐಎಂಐಎಂ ಮೈತ್ರಿ ಮಾಡಿಕೊಳ್ಳಲು ಸಿದ್ಧವಾಗಿದೆ ಎಂದಿದ್ದಾರೆ.

    ಕಾಂಗ್ರೆಸ್ ಪಕ್ಷಗಳಿಗೆ ಮುಸ್ಲಿಮರ ಮತಗಳು ಬೇಕಿದೆ. ಕಾಂಗ್ರೆಸ್ ಸಹ ತಾನು ಜಾತ್ಯಾತೀತರು ಎನ್ನುತ್ತದೆ. ಹಾಗಾಗಿ ನಾವೂ ಅವರೊಂದಿಗೆ ಕೈಜೋಡಿಸಲು ಸಿದ್ಧರಿದ್ದೇವೆ. ಈಗಾಗಲೇ ಉತ್ತರ ಪ್ರದೇಶದ ಚುನಾವಣೆಯಲ್ಲಿ ಬಿಜೆಪಿಯು ಕಾಂಗ್ರೆಸ್‍ಗೆ ಗರಿಷ್ಠ ಹಾನಿಯನ್ನುಂಟು ಮಾಡಿದೆ. ಕಾಂಗ್ರೆಸ್ ಒಂದೇ ಒಂದು ಮತವನ್ನು ಗಳಿಸುವ ಮೂಲಕ ತೀವ್ರ ಮುಖಭಂಗ ಎದುರಿಸುವಂತಾಗಿದೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ನಾವು ಬಿಜೆಪಿ ಸೋಲಿಸಲು ಸಿದ್ಧರಿದ್ದೇವೆ ಎಂದು ಜಲೀಲ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಹಿಂದೂ-ಮುಸ್ಲಿಂ ಒಟ್ಟಿಗೆ ಇರಲು ಸಾಧ್ಯವಿಲ್ಲ ಅಂತ ಅಂಬೇಡ್ಕರ್ ಹೇಳಿದ್ದರು: ಪ್ರತಾಪ್ ಸಿಂಹ

    ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷದೊಂದಿಗೆ (ಚುನಾವಣೆ) ಎಐಎಂಐಎಂ ಮಾತನಾಡಿದೆ, ಆದರೆ ಅವರಿಗೆ ಮುಸ್ಲಿಮರ ಮತಗಳು ಬೇಕೇ ಹೊರತು ನಮ್ಮ ಪಕ್ಷದ ಮುಖ್ಯಸ್ಥರು ಬೇಕಿಲ್ಲ ಎಂದಿದ್ದಾರೆ.

    2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಎಐಎಂಐಎಂ ಎರಡು ಸ್ಥಾನಗಳನ್ನು ಗೆದ್ದುಕೊಂಡಿತ್ತು. ಈಗ ಮೈತ್ರಿ ಮಾಡಿಕೊಂಡರೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿಯನ್ನು ಮಣಿಸಬಹುದು. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‍ಗೆ ಮುಸ್ಲಿಮರ ಮತಗಳು ಅವಶ್ಯವಿದ್ದು, ನಾವು ಒಟ್ಟಾಗಿ ಚುನಾವಣೆ ಎದುರಿಸೋಣ ಎಂದು ಪ್ರಸ್ತಾಪಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಂಜಾಬ್‌ನಲ್ಲಿ ಆಪ್ ಸರ್ಕಾರ ಸಂಪುಟ ರಚನೆ – 10 ಮಂದಿ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

    ಇಲ್ಲಿ ಯಾವುದೇ ಧರ್ಮವೂ ಕೆಟ್ಟದ್ದಲ್ಲ. ಅದನ್ನು ಅನುರಸರಿಸುವ ಜನರು ಒಳ್ಳೆಯವರು ಅಥವಾ ಕೆಟ್ಟವರು ಆಗಿರಬಹುದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಜಲೀಲ್ ಸಲಹೆ ನೀಡಿದ್ದಾರೆ.