Tag: Rajesh Nataranga

  • ‘ಅಮೃತಧಾರೆ’ಯಾಗಿ ಕಿರುತೆರೆಗೆ ಮರಳಿದ ಛಾಯಾ ಸಿಂಗ್

    ‘ಅಮೃತಧಾರೆ’ಯಾಗಿ ಕಿರುತೆರೆಗೆ ಮರಳಿದ ಛಾಯಾ ಸಿಂಗ್

    ಖ ಸಖಿ, ಆಕಾಶಗಂಗೆ, ರೌಡಿ ಅಳಿಯ, ಸೇರಿದಂತೆ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಛಾಯಾ ಸಿಂಗ್ (Chaya Singh) ಇದೀಗ ‘ಅಮೃತಧಾರೆ’ಯಾಗಿ ಟಿವಿ ಪರದೆಗೆ ಮರಳಿದ್ದಾರೆ. ಹಿರಿತೆರೆಯ ಬಳಿಕ ಕಿರುತೆರೆಯಲ್ಲಿ (Tv) ಮಿಂಚಲು ರೆಡಿಯಾಗಿದ್ದಾರೆ.

     

    View this post on Instagram

     

    A post shared by Chaya Singh (@chayasingh_16)

    ಕನ್ನಡತಿ ಛಾಯಾ ಸಿಂಗ್ ತಮಿಳು, ಮಲಯಾಳಂ, ಕನ್ನಡ ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಾಕಷ್ಟು ರಿಯಾಲಿಟಿ ಶೋ ಜಡ್ಜ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಹೀಗಿರುವಾಗ ತಮ್ಮ ಅಭಿಮಾನಿಗಳಿಗೆ ನಟಿ ಛಾಯಾ ಗುಡ್ ನ್ಯೂಸ್ ಕೊಟ್ಟಿದ್ದಾರೆ. ‘ಅಮೃತಧಾರೆ’ (Amruthadaare) ಸೀರಿಯಲ್ ಮೂಲಕ ಹೊಸ ಲವ್ ಸ್ಟೋರಿ ಹೇಳಲು ಹೊರಟಿದ್ದಾರೆ. ಇದನ್ನೂ ಓದಿ:ಕೋರ್ಟ್ ಮೆಟ್ಟಿಲು ಏರಿದ್ದ ಅಮಿತಾಭ್ ಮೊಮ್ಮಗಳಿಗೆ ಗೆಲುವು

     

    View this post on Instagram

     

    A post shared by Chaya Singh (@chayasingh_16)

    ಹುಡುಗ-ಹುಡುಗಿ ಹೊಂದ್ಕೊಂಡಿದ್ರೆ ಅದೊಂದು ಚೆಂದದ ಕಥೆ, ಅವರಿಬ್ರೂ ಕಿತ್ತಾಡ್ಕೊಂಡಿದ್ರೆ ಅದು ಬೇರೇನೇ ಕಥೆ ಎನ್ನುವುದು ಅಮೃತಧಾರೆ ಕಥೆಯಾಗಿದೆ. ರಾಜೇಶ್ ನಟರಂಗ (Rajesh Nataranga) ಅವರು ಅಮೃತಧಾರೆ ಸೀರಿಯಲ್‌ನ ನಾಯಕನಾಗಿದ್ದು, ಛಾಯಾಗೆ ಜೋಡಿಯಾಗಿ ಕಾಣಿಸಿಕೊಳ್ತಿದ್ದಾರೆ.

    ಈಗಾಗಲೇ ‘ಅಮೃತಾಧಾರೆ ಪ್ರೋಮೋ ರಿಲೀಸ್ ಆಗಿದ್ದು, ಪ್ರೇಕ್ಷಕರಿಗೆ ಇಷ್ಟವಾಗಿದೆ. ಪ್ರೋಮೋ ಝಲಕ್ ನೋಡಿ ಫಿದಾ ಆಗಿರುವ ಪ್ರೇಕ್ಷಕರು ಅಮೃತಾಧಾರೆ ಧಾರಾವಾಹಿಯ ರಾಜೇಶ್- ಛಾಯಾ ಜೋಡಿ ನೋಡಲು ಎದುರು ನೋಡ್ತಿದ್ದಾರೆ.

  • ‘ನೆಟ್ ವರ್ಕ್’ ಬೆನ್ನು ಹತ್ತಿ ಹೊರಟ ನಿರ್ದೇಶಕ ಹೇಮಂತ್ ಹೆಗಡೆ

    ‘ನೆಟ್ ವರ್ಕ್’ ಬೆನ್ನು ಹತ್ತಿ ಹೊರಟ ನಿರ್ದೇಶಕ ಹೇಮಂತ್ ಹೆಗಡೆ

    ಹೇಮಂತ್ ಹೆಗಡೆ (Hemant Hegde) ನಿರ್ದೇಶನದಲ್ಲಿ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದು, ಈ ಚಿತ್ರಕ್ಕೆ ನೆಟ್ ವರ್ಕ್ (Network) ಎಂದು ಹೆಸರಿಡಲಾಗಿದೆ. ಈ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳುವುದಕ್ಕಾಗಿಯೇ ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿ ಏರ್ಪಡಿಸಿದ್ದರು. ಸಿನಿಮಾದ ಬಗ್ಗೆ ಹಲವು ವಿಚಾರಗಳನ್ನು ಅವರು ಹಂಚಿಕೊಂಡರು. ಅಲ್ಲದೇ ಕಲಾವಿದರ ಪರಿಚಯವನ್ನೂ ಮಾಡಲಾಯಿತು.

    ನೆಟ್ ವರ್ಕ್ ಒಂದು ಕುಟುಂಬದ ಕಥೆಯಲ್ಲ. ಸಾಕಷ್ಟು ಜನರು ಎದುರಿಸುತ್ತಿರುವ ಸಮಸ್ಯೆ. ಮೊಬೈಲ್ ನಿಂದ ಉಪಯೋಗ ಇರುವ ಹಾಗೆ, ದುಷ್ಪರಿಣಾಮಗಳು ಹೆಚ್ಚಿದೆ. ಮೊಬೈಲ್ ಬಂದ ಮೇಲೆ ಮಕ್ಕಳು ಆಟವಾಡುವುದನ್ನು ಮರೆತಿದ್ದಾರೆ. ಮನೆಯಲ್ಲೂ ಅಷ್ಟೇ. ಮೂರು ಜನ ಇದ್ದರೆ, ಮೂರು ಕಡೆ ಮೊಬೈಲ್ ನೋಡುವುದರಲ್ಲಿ ತಲ್ಲೀನರಾಗಿರುತ್ತಾರೆ. ಹೀಗೆ ಈ ಸಮಸ್ಯೆಗಳ ಸುತ್ತ ‘ನೆಟ್ ವರ್ಕ್ ಚಿತ್ರದ ಕಥೆ ಸಾಗುತ್ತದೆ. ಮೂವತ್ತು ವರ್ಷಗಳ ಹಿಂದೆ ನಾವು ಗೆಳೆಯರು ಸೇರಿ ದೃಷ್ಟಿ ಎಂಬ ಸಂಸ್ಥೆ ಕಟ್ಟಿದ್ದೆವು. ಆ ತಂಡದಲ್ಲಿದ್ದ ಬಹುತೇಕರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ನಟ ಹಾಗೂ ನಿರ್ದೇಶಕ ಹೇಮಂತ್ ಹೆಗಡೆ ಹೇಳಿದರು. ಇದನ್ನೂ ಓದಿ:`ಬಿಗ್ ಬಾಸ್’ ಅಕ್ಷತಾ ಕುಕಿ ವೆಡ್ಡಿಂಗ್ ಫೋಟೋಸ್

    ಸಾಫ್ಟ್ ವೇರ್ ಕಂಪನಿ ಮಾಲೀಕರಾಗಿರುವ ಪ್ರಭಂಜನ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮೇ 15 ರಿಂದ ಬೆಂಗಳೂರಿನಲ್ಲೇ ಚಿತ್ರೀಕರಣ ಆರಂಭವಾಗಲಿದೆ. ಹೇಮಂತ್ ಹೆಗಡೆ ಅವರು ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆ ಎಂದರು ನಿರ್ಮಾಪಕ ಪ್ರಭಂಜನ. ಚಿತ್ರದಲ್ಲಿ ನಟಿಸುತ್ತಿರುವ ರಾಜೇಶ್ ನಟರಂಗ (Rajesh Nataranga), ಸುಚೇಂದ್ರ ಪ್ರಸಾದ್, ಕೆ.ಎಂ.ಚೈತನ್ಯ, ಸಾಕ್ಷಿ ಮೇಘನ (Sakshi), ರಕ್ಷಿಕಾ ಮುಂತಾದವರು ತಮ್ಮ ಪಾತ್ರದ ಕುರಿತು ಮಾತನಾಡಿದರು.

  • ಕದ್ದುಮುಚ್ಚಿ: ಸ್ಟೀಲ್ ಉದ್ಯಮಿ ಮಂಜುನಾಥ್ ಮನಸಲ್ಲಿದ್ದದ್ದು ಉಕ್ಕಿನಂಥಾ ಸಿನಿಮಾಸಕ್ತಿ!

    ಕದ್ದುಮುಚ್ಚಿ: ಸ್ಟೀಲ್ ಉದ್ಯಮಿ ಮಂಜುನಾಥ್ ಮನಸಲ್ಲಿದ್ದದ್ದು ಉಕ್ಕಿನಂಥಾ ಸಿನಿಮಾಸಕ್ತಿ!

    ಬೆಂಗಳೂರು: ನಾದಬ್ರಹ್ಮ ಹಂಸಲೇಖ ಸಂಗೀತ ನಿರ್ದೇಶನದ ಸ್ಪರ್ಶದೊಂದಿಗೇ ಕದ್ದುಮುಚ್ಚಿ ಎಂಬ ಹೊಸಬರ ಚಿತ್ರವೊಂದು ಸುದ್ದಿಯಲ್ಲಿದೆ. ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ವಿಜಯ್ ಸೂರ್ಯ ಮತ್ತು ಬಿಗ್ ಬಾಸ್ ಫೇಮಿನ ಮೇಘಶ್ರೀ ಅಭಿನಯದ ಈ ಸಿನಿಮಾವೀಗ ಹಾಡುಗಳ ಮೂಲಕವೇ ಪ್ರೇಕ್ಷಕರನ್ನು ಮೆಲುವಾಗಿ ತಾಕಿದೆ. ಬದುಕಿಗೆ ಹತ್ತಿರವಾದ, ಮನೋರಂಜನಾತ್ಮಕ ಅಂಶಗಳನ್ನೂ ಹೊಂದಿರುವ ಈ ಚಿತ್ರವನ್ನು ಅಕ್ಕರಾಸ್ಥೆಯಿಂದಲೇ ನಿರ್ಮಾಣ ಮಾಡಿರುವವರು ವಿ.ಜಿ ಮಂಜುನಾಥ್.

    ಸಿನಿಮಾ ಎಂಬುದರ ಸೆಳೆತವೇ ಮಾಯೆಯಂಥಾದ್ದು. ಅದು ಎತ್ತೆತ್ತಲ್ಲಿಂದಲೋ ಮನಸುಗಳನ್ನ ಸೆಳೆದು ಬಿಡುತ್ತದೆ. ಗೊತ್ತೇ ಆಗದಂತೆ ತನ್ನ ಭಾಗವಾಗಿಸಿಕೊಂಡು ಬಿಡುತ್ತದೆ. ಈ ಮಾತಿಗೆ ಹತ್ತಾರು ಉದಾಹರಣೆಗಳಿವೆಯಾದರೂ ಕದ್ದುಮುಚ್ಚಿ ಚಿತ್ರದ ನಿರ್ಮಾಪಕರಾದ ಮಂಜುನಾಥ್ ಅದಕ್ಕೆ ತಾಜಾ ಉದಾಹರಣೆಯಂಥವರು.

    ಆದಿಚುಂಚನಗಿರಿ ಸಮೀಪದ ವಡ್ಡರಹಳ್ಳಿಯವರಾದ ಮಂಜುನಾಥ್ ಅಪ್ಪಟ ರೈತಾಪಿ ವರ್ಗದಿಂದಲೇ ಬಂದವರು. ಈವತ್ತಿಗೂ ಅವರ ಬೇರುಗಳಿರೋದು ಅಲ್ಲಿಯೇ. ಆರಂಭ ಕಾಲದಲ್ಲಿ ಮಂಜುನಾಥ್ ಅವರ ಆಸಕ್ತಿಯಿದ್ದದ್ದು ಶಿಕ್ಷಣ ಕ್ಷೇತ್ರದತ್ತ. ಟಿಸಿಎಚ್ ಸೇರಿದಂತೆ ಅದಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದ ಅವರು ಅಚಾನಕ್ಕಾಗಿ ಇಂಡಸ್ಟ್ರಿಯಲ್ ವಲಯಕ್ಕೆ ಪಾದಾರ್ಪಣೆ ಮಾಡಿದ್ದ 2000ನೇ ಇಸವಿಯಲ್ಲಿ. ಆದಿತ್ಯ ಬಿರ್ಲಾ ಕಂಪೆನಿಯ ಸ್ಟೀಲ್ ಸರಬರಾಜು ಉದ್ಯಮ ಆರಂಭಿಸಿ ಅದರಲ್ಲಿಯೇ ಪರಿಶ್ರಮ ಪಟ್ಟು ಗೆದ್ದ ಮಂಜುನಾಥ್ ಅವರ ಪ್ರಧಾನ ಕನಸಾಗಿದ್ದದ್ದು ಸಿನಿಮಾ.

    ಆರಂಭ ಕಾಲದಿಂದಲೂ ಮಂಜುನಾಥ್ ಅವರಿಗೆ ಸಿನಿಮಾ ಎಂದರೆ ಎಲ್ಲಿಲ್ಲದ ಪ್ರೀತಿ. ಅವರ ಮನೋರಂಜನೆಯ ಮೂಲವಾಗಿದ್ದದ್ದೂ ಕೂಡಾ ಸಿನಿಮಾಗಳೇ. ಅವರೊಬ್ಬ ಉದ್ಯಮಿಯಾಗಿ ಬೆಳೆದ ನಂತರ ಒಂದೊಳ್ಳೆ ಸಿನಿಮಾ ಮಾಡ ಬೇಕೆಂಬ ಹಂಬಲ ತೀವ್ರವಾಗಿತ್ತು. ಮನೋರಂಜನೆಯ ಅಂಶಗಳ ಜೊತೆಗೆ ಈ ಸಮಾಜಕ್ಕೆ ಸಂದೇಶ ಸಾರುವಂಥಾ ಕಥೆಯೊಂದು ಸಿಕ್ಕರೆ ಸಿನಿಮಾ ಮಾಡೋ ನಿರ್ಧಾರದೊಂದಿಗೆ ಮಂಜುನಾಥ್ ಮುಂದುವರೆಯುತ್ತಿದ್ದರು. ಅದೇ ಕಾಲಕ್ಕೆ ಸರಿಯಾಗಿ ನಿರ್ದೇಶಕ ವಸಂತ್ ಮಂಜುನಾಥ್ ಅವರನ್ನು ಸಂಪರ್ಕಿಸಿದ್ದರು.

    ವಸಂತ್ ಹೇಳಿದ ಕಥೆ ಇಷ್ಟವಾಗಿ 2016ರಲ್ಲಿ ಅದು ಟೇಕಾಫ್ ಕೂಡಾ ಆಗಿತ್ತು. ಆದರೆ ಎಲ್ಲವೂ ಅಚ್ಚುಕಟ್ಟಾಗಿ ಮೂಡಿ ಬರಬೇಕೆಂಬ ಮನಸ್ಥಿತಿಯ ಮಂಜುನಾಥ್ ಎಲ್ಲದರಲ್ಲಿಯೂ ಅಕ್ಕರಾಸಕ್ತಿಯಿಂದಲೇ ಗಮನ ಹರಿಸಿದ್ದರು. ಆದ್ದರಿಂದಲೇ ಕೊಂಚ ತಡವಾದರೂ ಇಡೀ ಚಿತ್ರ ಚೆಂದಗೆ ಮೂಡಿ ಬಂದಿದೆ ಎಂಬ ಆತ್ಮತೃಪ್ತಿ ಮಂಜುನಾಥ್ ಅವರಲ್ಲಿದೆ.

    ನಗರ ಜೀವನದ ಜಂಜಾಟಗಳಿಂದ ರೋಸತ್ತು ಮತ್ಯಾವುದೋ ಮಾಯೆಯ ಬೆಂಬಿದ್ದು ಹೊರಡೋ ಯುವಕನ ಸುತ್ತಾ ಈ ಚಿತ್ರದ ಕಥೆ ಬಿಚ್ಚಿಕೊಳ್ಳುತ್ತದೆಯಂತೆ. ಆ ಹುಡುಕಾಟದಲ್ಲಿಯೇ ಭರ್ಜರಿ ಮನೋರಂಜನೆಯೊಂದಿಗೆ ಬದುಕಿಗೆ ಹತ್ತಿರವಾದ ಅಂಶಗಳೂ ಅನಾವರಣಗೊಳ್ಳುತ್ತಾ ಸಾಗುತ್ತವೆ. ಕಡೆಗೊಂದು ಪರಿಣಾಮಕಾರಿಯಾದ ಸಂದೇಶವನ್ನೂ ನೀಡಲಾಗಿದೆ. ಒಟ್ಟಾರೆಯಾಗಿ ಇದು ಹೊಸಾ ಸಾಧ್ಯತೆಗಳನ್ನು ಕಾಣಿಸುವಂಥಾ ಪಕ್ಕಾ ಕಮರ್ಶಿಯಲ್ ಚಿತ್ರ.

    ಅದೇನೇ ಅಡೆತಡೆಗಳು ಎದುರಾದರೂ ಮಂಜುನಾಥ್ ಯಾವುದಕ್ಕೂ ಕೊರತೆ ಮಾಡದಂತೆ ಕದ್ದುಮುಚ್ಚಿ ಚಿತ್ರವನ್ನ ರೂಪಿಸಿದ್ದಾರೆ. ಇದರಲ್ಲಿ ಕಲಾವಿದರದ್ದೊಂದು ದೊಡ್ಡ ದಂಡೇ ಇದೆ. ಕಾಮಿಡಿಯೂ ಈ ಚಿತ್ರದ ಪ್ರಧಾನ ಅಂಶ. ಚಿಕ್ಕಣ್ಣ, ಹೊನ್ನವಳ್ಳಿ ಕೃಷ್ಣ, ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಅನೇಕರ ಕಾಮಿಡಿ ಕಮಾಲ್ ಈ ಚಿತ್ರದಲ್ಲಿದೆ. ಇನ್ನುಳಿದಂತೆ ಬಿ.ವಿ ರಾಧಾ, ಸುಚೇಂದ್ರ ಪ್ರಸಾದ್ ಮುಂತಾದವರ ಅದ್ಧೂರಿ ತಾರಾಗಣವನ್ನ ಕದ್ದುಮುಚ್ಚಿ ಚಿತ್ರ ಹೊಂದಿದೆ.

    ಈ ಮೂಲಕ ಹೊಸಾ ಅಲೆಯ ಚೆಂದದ್ದೊಂದು ಚಿತ್ರವನ್ನ ನಿರ್ಮಾಣ ಮಾಡಿದ ಖುಷಿ ಮಂಜುನಾಥ್ ಅವರಿಗಿದೆ. ಈಗ ಎಲ್ಲ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡಿರೋದರಿಂದ ಇದೇ ತಿಂಗಳ ಇಪ್ಪತ್ತೆರಡನೇ ತಾರೀಕಿನಂದು ಈ ಚಿತ್ರವನ್ನ ತೆರೆಗಾಣಿಸುವ ಯೋಜನೆಯನ್ನೂ ಅವರು ಹಾಕಿಕೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv