Tag: Rajesh Murthy

  • ಮಾತಾಡೋ ಗೊಂಬೆಯ ‘ಡಿಂಕು’ ಸಿನಿಮಾ

    ಮಾತಾಡೋ ಗೊಂಬೆಯ ‘ಡಿಂಕು’ ಸಿನಿಮಾ

    ಡ್ಯಂತ್ರ, ರೆಡ್ ಹೀಗೆ ವಿಭಿನ್ನ  ಜಾನರ್  ಚಿತ್ರಗಳನ್ನು ನಿರ್ದೇಶಿಸಿದ ರಾಜೇಶ್ ಮೂರ್ತಿ (Rajesh Murthy) ಅವರು ಈಸಲ ಸಸ್ಪೆನ್ಸ್, ಫ್ಯಾಂಟಸಿ ಜಾನರ್ ಚಲನ ಚಿತ್ರವನ್ನು  ತೆರೆಗೆ ತರುತ್ತಿದ್ದಾರೆ. ಆ ಚಿತ್ರದ ಹೆಸರು ಡಿಂಕು (Dinku). ಇದು ಅವರ ನಿರ್ದೇಶನದ ಹತ್ತನೇ ಚಿತ್ರ. ಈ ಚಿತ್ರದಲ್ಲಿ ರಾಜೇಶ್ ಮೂರ್ತಿ ಅವರ ಪುತ್ರ ಯಶಸ್ವಾ ನಾಯಕನಾಗಿ ನಟಿಸಿದ್ದಾರೆ‌. ಜೊತೆಗೆ  ಈ ಚಿತ್ರದ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಕೂಡಾ ಬರೆದಿದ್ದಾರೆ.

    ಪಪ್ಪೆಟ್ ಷೋ ನಡೆಸುವ ಯುವತಿ ಹಾಗೂ ಆಕೆಯ ಪ್ರೀತಿಯ ಗೊಂಬೆಯಾದ ಡಿಂಕು  ಸುತ್ತ ನಡೆಯುವ ಇಂಟರೆಸ್ಟಿಂಗ್ ಘಟನೆಗಳೇ ಈ ಚಿತ್ರದ ಪ್ರಮುಖ ಕಥಾವಸ್ತು, ಈ ಚಿತ್ರದಲ್ಲಿ ಯುವಪ್ರತಿಭೆ  ಯಶಸ್ವಾ ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಯಶಸ್ವಾ ಈಗಾಗಲೇ ಒಂದು ಚಿತ್ರದಲ್ಲಿ ನಟಿಸುವ ಮೂಲಕ‌‌‌‌‌‌‌ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ. ಅಲ್ಲದೆ ಯುವನಟಿ ಸನ್ನಿಧಿ ಚಿತ್ರದ  ನಾಯಕಿಯಾಗಿ ನಟಿಸಿದ್ದಾರೆ.

    ಚಿತ್ರದಲ್ಲಿ ಗೊಂಬೆಯ ಹೆಸರೇ ಡಿಂಕು. ಅದು ಮಾತಾಡುತ್ತದೆ.  ಹಾಗಂತ ಇದೊಂದು ಹಾರರ್ ಚಿತ್ರವಲ್ಲ. ಸಸ್ಪೆನ್ಸ್  ಜೊತೆಗೆ ಕಾಮಿಡಿಯೂ ಚಿತ್ರದಲ್ಲಿದೆ. ಡಿಂಕು ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದ್ದು,  ಚಿತ್ರದ ಎಡಿಟಿಂಗ್ ಕಾರ್ಯ ಮುಗಿದು ಡಬ್ಬಿಂಗ್  ಕೊನೆಯ ಹಂತದಲ್ಲಿದೆ. ಕನ್ನಡದ ಹಿರಿಯ ನಿರ್ಮಾಪಕ ಹಾಗೂ  ಛಾಯಾಗ್ರಾಹಕರೂ ಆಗಿದ್ದ ಹೆಚ್.ಎಂ.ಕೆ. ಮೂರ್ತಿ ಅವರ ಮೊಮ್ಮಗನೂ ಆದ ಯಶಸ್ವಾ ಅವರು ಈಗಾಗಲೇ ಅಗ್ನಿಲೋಕ ಎಂಬ ಚಿತ್ರದಲ್ಲಿ ನಟಿಸೋ  ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.  ಡಿಂಕು  ಅವರ ಅಭಿನಯದ ಎರಡನೇ ಚಿತ್ರ.

     

    ನೆಲ ಮಹೇಶ್ ಹಾಗೂ ನೇವಿ ಮಂಜು ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ 4 ಫೈಟ್ಸ್ ಇದ್ದು ಗಿರೀಶ್ ಎ.ಪಿ. ಅವರು  ಕಂಪೋಜ್ ಮಾಡುತ್ತಿದ್ದಾರೆ. ಚಿತ್ರದ ಎರಡು ಹಾಡುಗಳಿಗೆ ನಿತೀಶ್ ಕುಮಾರ್ ಅವರು ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ‌.  ಬರುವ ಸೆಪ್ಟೆಂಬರ್ ವೇಳೆಗೆ ಡಿಂಕು  ಚಿತ್ರವನ್ನು ರಿಲೀಸ್ ಮಾಡೋ ಯೋಚನೆಯಿದೆ ಎಂದು ನಿರ್ದೇಶಕರಾದ ರಾಜೇಶ್ ಮೂರ್ತಿ ಅವರು ತಿಳಿಸಿದ್ದಾರೆ.

  • ‘ಅಗ್ನಿಲೋಕ’ ಚಿತ್ರಕ್ಕೆ ಯಶಸ್ವ ಹೀರೋ: ಇವರು ಮೂರ್ತಿ ಮೊಮ್ಮಗ

    ‘ಅಗ್ನಿಲೋಕ’ ಚಿತ್ರಕ್ಕೆ ಯಶಸ್ವ ಹೀರೋ: ಇವರು ಮೂರ್ತಿ ಮೊಮ್ಮಗ

    ಸ್ಯಾಂಡಲ್ ವುಡ್ ದಂತಕಥೆ ಸಿನಿಮಾಟೋಗ್ರಾಫರ್, ನಿರ್ಮಾಪಕ, ನಿರ್ದೇಶಕ ಹಾಗೂ ಚಲನಚಿತ್ರ ನಿರ್ಮಾಪಕರ ಸಂಘದ  ಪ್ರಥಮ ಅಧ್ಯಕ್ಷರೂ ಆಗಿದ್ದ  ಹೆಚ್.ಎಂ.ಕೆ. ಮೂರ್ತಿ (H.M.K. Murthy) ಅವರ ಮೊಮ್ಮಗ ಯಶಸ್ವ ಈಗ ನಾಯಕನಾಗಿ  ಚಿತ್ರರಂಗಕ್ಕೆ ಎಂಟ್ರಿ ಕೊಡಲು ಅಣಿಯಾಗಿದ್ದಾರೆ. ಎಮೋಷನಲ್ ಹಾಗೂ  ಆಕ್ಷನ್ ಥ್ರಿಲ್ಕರ್  ಕಥಾಹಂದರ ಹೊಂದಿದ ಅಗ್ನಿಲೋಕ (Agniloka) ಎಂಬ ಚಿತ್ರದಲ್ಲಿ ಹೆಚ್.ಎಂ.ಕೆ.ಮೂರ್ತಿ ಅವರ ಮೊಮ್ಮಗ ಹಾಗೂ ನಿರ್ದೇಶಕ, ನಿರ್ಮಾಪಕ ರಾಜೇಶ್ ಮೂರ್ತಿ ಅವರ ಪುತ್ರ  ‘ಯಶಸ್ವ’ (Yashaswa)ಆಕ್ಷನ್ ಹೀರೋ ಆಗಿ  ಕಾಣಿಸಿಕೊಂಡಿದ್ದಾರೆ. ಆ ಚಿತ್ರವೀಗ ಬಿಡುಗಡೆಯ ಹಂತದಲ್ಲಿದೆ.

    ತನ್ನ ತಾತ, ತಂದೆಯಂತೆಯೇ ಚಿತ್ರರಂಗದಲ್ಲಿ ಕಲಾವಿದ, ತಂತ್ರಜ್ಞನಾಗಿ ಮುಂದುವರಿಯಬೇಕೆಂಬ ಮಹದಾಸೆ ಹೊತ್ತಿರುವ ಯಶಸ್ವ, ಈಗಾಗಲೇ ಮಾಸ್ ಕಮ್ಯುನಿಕೇಶನ್ ನಲ್ಲಿ  ಡಿಗ್ರಿ ಮುಗಿಸಿಕೊಂಡು ವೆಲ್ ಪ್ರಿಪೇರ್ ಆಗಿ ಚಿತ್ರರಂಗಕ್ಕೆ ಧುಮುಕಿದ್ದಾರೆ. ತನ್ನ  ತಾತನ ಹಾಗೆ ಚಿತ್ರರಂಗದಲ್ಲಿ ಆಕ್ಟಿಂಗ್ ಜೊತೆಗೆ ರೈಟಿಂಗ್ , ಪ್ರೊಡಕ್ಷನ್ ವಿಭಾಗದಲ್ಲೂ ತೊಡಗಿಕೊಳ್ಳಲು ಸಿದ್ದತೆ ಮಾಡಿಕೊಂಡಿದ್ದಾರೆ.

    ಮಗನ ಚಿತ್ರಕ್ಕೆ ರಾಜೇಶ್ ಮೂರ್ತಿ ಅವರೇ ಕಥೆ, ಚಿತ್ರಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಜೊತೆಗೆ ಸಂಕಲನವನ್ನೂ ಸಹ ನಿರ್ವಹಿಸಿದ್ದಾರೆ. ಬೆಂಗಳೂರು, ಕೆಜಿಎಫ್, ಮಂಡ್ಯ, ಚಿಕ್ಕಮಗಳೂರು ಸುತ್ತಮುತ್ತ ಸುಮಾರು 30 ದಿನಗಳ ಕಾಲ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಈಗಾಗಲೇ ತನ್ನ  ಶೂಟಿಂಗ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನೆಲ್ಲ ಮುಗಿಸಿಕೊಂಡಿರುವ ಅಗ್ನಿಲೋಕ ಚಿತ್ರವೀಗ ಸೆನ್ಸಾರ್ ಹಂತದಲ್ಲಿದೆ.

    ವಿಷ್ಣು ಪುಷ್ಪ ಫಿಲಂಸ್ ಮೂಲಕ ಶ್ರೀಮತು ಪುಷ್ಪ ಮಂಜುನಾಥ್ ಅವರು ಈ ಚಿತ್ರವನ್ನು ಅದ್ದೂರಿ ವೆಚ್ಚದಲ್ಲಿ  ನಿರ್ಮಾಣ ಮಾಡುತ್ತಿದ್ದಾರೆ.  ಮಂಜುಶ್ರೀ ಅವರು ಈ ಚಿತ್ರದಲ್ಲಿ ಯಶಸ್ವ ಜೊತೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಬಹಳ ವರ್ಷಗಳ ನಂತರ ನೆಲ ನರೇಂದ್ರಬಾಬು ಅವರ ಸಹೋದರ ನೆಲ ಮಹೇಶ್ ಅವರು ನಾಯಕನ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಎಸ್.  ಮಂಜುನಾಥ್,  ಅಜಿತ್ ಕುಮಾರ್, ಪ್ರಮೋದ್ ಹಿರೇಮಠ್  ಉಳಿದ ತಾರಾಗಣದಲ್ಲಿದ್ದಾರೆ. ವಿನೋದ್ ಅವರ ಛಾಯಾಗ್ರಹಣ, ನಿತೀಶ್ ಕುಮಾರ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

     

    ಮುಂದಿನ ತಿಂಗಳು ಚಿತ್ರದ ಟ್ರೈಲರನ್ನು ರಿಲೀಸ್ ಮಾಡುವ ಯೋಜನೆಯಿದ್ದು, ಫೆಬ್ರವರಿ ಕೊನೆಗೆ ಅಥವಾ ಮಾರ್ಚ್ ಮೊದಲವಾರ ಅಗ್ನಿಲೋಕ ಚಿತ್ರವನ್ನು ತೆರೆಗೆ ತರುವ ಯೋಜನೆಯಿದೆ ಎಂದು ನಿರ್ದೇಶಕ ರಾಜೇಶ್ ಮೂರ್ತಿ ಅವರು ತಿಳಿಸಿದ್ದಾರೆ.

  • ಡೇಟಿಂಗ್ ಆಪ್ ಜಾಲದ ಸುತ್ತ ಲಿಪ್‌ಸ್ಟಿಕ್ ಸಿನಿಮಾ

    ಡೇಟಿಂಗ್ ಆಪ್ ಜಾಲದ ಸುತ್ತ ಲಿಪ್‌ಸ್ಟಿಕ್ ಸಿನಿಮಾ

    ಈ ಹಿಂದೆ ಸೈಕಲಾಜಿಕಲ್  ಥ್ರಿಲ್ಲರ್ ಕಥೆಯಿರುವ  ಬ್ಲೂ ಐಸ್, ಎರೋಟಿಕ್ ಥ್ರಿಲ್ಲರ್ ಸ್ಟೋರಿ ಇದ್ದ ರೆಡ್ ನಂಥ ಚಿತ್ರಗಳನ್ನು ನಿರ್ದೇಶಿಸಿದ ರಾಜೇಶ್ ಮೂರ್ತಿ ಅವರು ಬಹಳ ದಿನಗಳ ನಂತರ ಮತ್ತೊಂದು ಚಿತ್ರದ ಮೂಲಕ ಹಾಜರಾಗಿದ್ದಾರೆ. ಈಸಲ ಅವರು ಇನ್ವೆಸ್ಟಿಗೇಶನ್ ಕ್ರೈಮ್ ಥ್ರಿಲ್ಲರ್ ಕಥಾಹಂದರ ಹೊಂದಿದ ‘ಲಿಪ್ ಸ್ಟಿಕ್ ಮರ್ಡರ್’ ಎಂಬ ಚಿತ್ರವನ್ನು ನಿರ್ದೇಶಿಸಿ ತೆರೆಗೆ ತರುತ್ತಿದ್ದಾರೆ. ಇದನ್ನೂ ಓದಿ:ಬಳ್ಳಾರಿಗೆ ಬರಲಿದ್ದಾರೆ ವಿಜಯ್ ಮತ್ತು ರಶ್ಮಿಕಾ ಮಂದಣ್ಣ

    ಸಿನಿವ್ಯಾಲಿ ಕ್ರಿಯೇಶನ್ಸ್ ಮೂಲಕ ಬಿ.ಎಸ್. ಮಂಜುನಾಥ್ ಹಾಗೂ ರಾಜೇಶ್ ಮೂರ್ತಿ ಸೇರಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಆನ್ ಲೈನ್ ಡೇಟಿಂಗ್ ಆಪ್ ಮೂಲಕ ಯುವಕರು ಯಾವರೀತಿ ಮೋಸ ಹೋಗುತ್ತಾರೆ ಎಂದು ಈ ಚಿತ್ರದ ಮೂಲಕ ಹೇಳಿದ್ದಾರೆ.  ಹಿಂದೆ ಪತ್ರಿಕೆಗಳಲ್ಲಿ ಯುವಕ, ಯುವತಿಯರನ್ನು ಪ್ರಚೋದಿಸುವಂಥ ಈ ರೀತಿಯ ವರ್ಗೀಕೃತ ಜಾಹೀರಾತುಗಳು ಪ್ರಕಟವಾಗುತ್ತಿದ್ದವು, ಅದನ್ನು ನಂಬಿ ಸಾಕಷ್ಟು ಜನ ಯೂಥ್ಸ್ ಮೋಸ ಹೋಗುತ್ತಿದ್ದರು. ಈಗ ಸೋಷಿಯಲ್ ಮೀಡಿಯಾ ತುಂಬಾ ಪ್ರಬಲವಾಗಿದ್ದು, ಅದೇ ಕೆಲಸವನ್ನು ಡೇಟಿಂಗ್ ಆಪ್ ಗಳು ಮಾಡುತ್ತಿವೆ. ಈ ಚಿತ್ರದ ಕಥೆಯಲ್ಲಿ ಡೇಟಿಂಗ್ ಆಪ್ ನಂಬಿ ಮಹಿಳೆಯರು ಕರೆದಲ್ಲಿಗೆ ಹೋಗುವ ಯುವಕರು ಮರ್ಡರ್ ಆಗುವ ಕಥೆಯಿದೆ. ಈ ರೀತಿ ಆಡ್ ಹಾಕುವ ಯುವಕರನ್ನು ಟಾರ್ಗೆಟ್ ಮಾಡುವ ಹೆಂಗಸೊಬ್ಬಳು ಅವರನ್ನು ಒಂದು ಗುಪ್ತಜಾಗಕ್ಕೆ ಕರೆಸಿಕೊಂಡು ಅನಾಯಾಸವಾಗಿ ಮರ್ಡರ್ ಮಾಡುತ್ತಿರುತ್ತಾಳೆ. ಈ ಸರಣಿ ಕೊಲೆಗಳ ಹಿಂದಿರುವ ರಹಸ್ಯವನ್ನು ಬಯಲಿಗೆಳೆಯಲು ಒಬ್ಬ ಇನ್ವೆಸ್ಟಿಗೇಶನ್ ಆಫೀಸರ್ ಕಥೆಯಲ್ಲಿ ಎಂಟ್ರಿ ಕೊಡುತ್ತಾನೆ. ಆ ಕೊಲೆಗಾರ್ತಿ ಯಾರು, ಕೊಲೆಯಾದವರಿಗೂ ಆಕೆಗೂ ಏನಾದರೂ ಸಂಬಂಧವಿತ್ತೇ, ಆಕೆಯೇನು  ಕಿಲ್ಲರಾ, ಒಬ್ಬ ಸೈಕೋನಾ?, ಹೀಗೆ ಏಳುವ ಹಲವಾರು ಪ್ರಶ್ನೆಗಳಿಗೆ ಉತ್ತರ ಆ ಇನ್ಸ್ ಪೆಕ್ಟರ್ ನಡೆಸುವ ತನಿಖೆಯಿಂದ ಸಿಗುತ್ತದೆ.

    ಇದುವರೆಗೆ ಕನ್ನಡದಲ್ಲಿ ಈ ಥರದ ಕಂಟೆಂಟ್ ಯಾರೂ ಟ್ರೈ ಮಾಡಿಲ್ಲವೆಂದೇ ಹೇಳಬಹುದು. ಈ ಹಿಂದೆ ಹರಹರ ಮಹಾದೇವ, ಉಘೇ ಉಘೇ ಮಾದೇಶ್ವರ ಧಾರಾವಾಹಿಗಳಲ್ಲಿ ನಟಿಸಿದ್ದ ಆರ್ಯನ್ ರಾಜ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಹೈದರಾಬಾದ್ ಮೂಲದ ಅಲೆಕಾ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಾಜೇಶ್ ಮಿಶ್ರಾ ಈ ಚಿತ್ರದಲ್ಲಿದ್ದಾರೆ. ನಿತೀಶ್ ಕುಮಾರ್ ಅವರ ಸಂಗೀತ ಸಂಯೋಜನೆ, ಆರ್.ವಿನೋದ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]