Tag: Rajesh dhruva

  • ಕುತೂಹಲ ಕೆರಳಿಸುವ ಪೀಟರ್ ಸಿನಿಮಾ : ರಾಜೇಶ್ ಧ್ರುವ ಹೀರೋ

    ಕುತೂಹಲ ಕೆರಳಿಸುವ ಪೀಟರ್ ಸಿನಿಮಾ : ರಾಜೇಶ್ ಧ್ರುವ ಹೀರೋ

    ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಛಾಪು ಮೂಡಿಸಿರುವ ನಟ ರಾಜೇಶ್ ಧ್ರುವ (Rajesh Dhruva) ಹೀರೋ ಆಗಿರುವ ಅಭಿನಯಿಸಿರುವ ಹೊಸ ಸಿನಿಮಾ ಪೀಟರ್. ಈಗಾಗಲೇ ಪೋಸ್ಟರ್ ಹಾಗೂ ಹಾಡಿನ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಕುತೂಹಲಕಾರಿ ಟೀಸರ್ ಬಿಡುಗಡೆಯಾಗಿದೆ.

    ಥಿಂಕ್ ಮ್ಯೂಸಿಕ್ ಕನ್ನಡ ಯೂಟ್ಯೂಬ್‌ನಲ್ಲಿ ಪೀಟರ್ ಸಿನಿಮಾದ ಆಕರ್ಷಕ ಟೀಸರ್ ಅನಾವರಣ ಮಾಡಲಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಡ್ರಾಮಾ ಹಾಗೂ ಪ್ರೀತಿ-ಫ್ಯಾಮಿಲಿ ಕಂಟೆಂಟ್ ಜೊತೆಗೆ ಚೆಂಡೆ ಮೇಳವನ್ನು ಇಟ್ಕೊಂಡು ಟೀಸರ್ ಕಟ್ ಮಾಡಿದ್ದಾರೆ. ರಾಜೇಶ್ ಧ್ರುವ, ಪ್ರತಿಮಾ ನಾಯಕ್, ಜಾನ್ವಿ ರಾಯಲ, ರಘು ಪಾಂಡೇಶ್ವರ ಇಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.ಇದನ್ನೂ ಓದಿ: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ವಿರುದ್ಧ ದೂರು

    ‘ದೂರದರ್ಶನ’ ಚಿತ್ರ ಖ್ಯಾತಿಯ ನಿರ್ದೇಶಕ ಸುಕೇಶ್ ಶೆಟ್ಟಿ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಬಾರಿ ಸುಕೇಶ್ ಸೆನ್ಸಿಟಿವ್ ಸಸ್ಪೆನ್ಸ್ ಡ್ರಾಮಾ ಕಥಾಹಂದವರನ್ನು ಪ್ರೇಕ್ಷಕರಿಗೆ ಉಣ ಬಡಿಸಲಿದ್ದಾರೆ. ಟೀಸರ್ ಮೂಲಕ ಮತ್ತಷ್ಟು ಚಿತ್ರದ ಮೇಲೆ ಭರವಸೆ ಹೆಚ್ಚಾಗಿದೆ. ಸಿನಿಮಾದಲ್ಲಿ ಜಾನ್ವಿ ರಾಯಲ, ರವೀಕ್ಷಾ ಶೆಟ್ಟಿ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ, ವರುಣ್ ಪಟೇಲ್ ತಾರಾಬಳಗದಲ್ಲಿದ್ದಾರೆ.

    ಕನ್ನಡ ಚಿತ್ರರಂಗದ ಖ್ಯಾತ ಸೌಂಡ್ ಇಂಜಿನಿಯರ್ ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ವೃದ್ಧಿ ಸ್ಟುಡಿಯೊಸ್ ಬ್ಯಾನರ್ ನಡಿ ಪೀಟರ್ ಸಿನಿಮಾ ನಿರ್ಮಿಸಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ನವೀನ್ ಶೆಟ್ಟಿ ಸಂಕಲನ, ದೇವರಾಜ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಬಹು ಭಾಷೆಯಲ್ಲಿ ಪೀಟರ್ ಸಿನಿಮಾ ತೆರೆಗೆ ಬರಲಿದೆ.ಇದನ್ನೂ ಓದಿ: ಬೆನ್ನು ನೋವಿದ್ರೂ ನನ್ನನ್ನ ಎತ್ತಿಕೊಳ್ಳುವ ದೃಶ್ಯ ಮಾಡಲು ಒಪ್ಪಿಕೊಂಡಿದ್ರು – ರಚನಾ ರೈ

  • ಹೀರೋ ಆದ ‘ಶ್ರೀಗೌರಿ’ ಸೀರಿಯಲ್ ವಿಲನ್- ‘ಪೀಟರ್’ ಚಿತ್ರಕ್ಕೆ ಡಾಲಿ, ವಿಜಯ್ ಸೇತುಪತಿ ಸಾಥ್

    ಹೀರೋ ಆದ ‘ಶ್ರೀಗೌರಿ’ ಸೀರಿಯಲ್ ವಿಲನ್- ‘ಪೀಟರ್’ ಚಿತ್ರಕ್ಕೆ ಡಾಲಿ, ವಿಜಯ್ ಸೇತುಪತಿ ಸಾಥ್

    ‘ದೂರದರ್ಶನ’ ಸಿನಿಮಾ ಮೂಲಕ ಗಟ್ಟಿ ಕಥೆ ಹೇಳಿದ್ದ ನಿರ್ದೇಶಕ ಸುಕೇಶ್ ಶೆಟ್ಟಿ (Sukesh Shetty) ಎರಡನೇ ಪ್ರಯತ್ನಗೆ ಸಜ್ಜಾಗಿದ್ದಾರೆ. ಈ ಬಾರಿ ಮತ್ತೊಂದು ಫ್ರೆಶ್ ಕಥಾಹಂದರವನ್ನು ಪ್ರೇಕ್ಷಕರಿಗೆ ಹರವಿಡಲು ಹೊರಟಿದ್ದಾರೆ. ಅದರ ಮೊದಲ ಭಾಗವೆಂಬಂತೆ ಚಿತ್ರದ ಟೈಟಲ್ ರಿವೀಲ್ ಮಾಡಲಾಗಿದೆ. ಸುಕೇಶ್ ನಿರ್ದೇಶನದಲ್ಲಿ ‘ಶ್ರೀಗೌರಿ’ ಸೀರಿಯಲ್ ವಿಲನ್ ರಾಜೇಶ್ ಧ್ರುವ (Rajesh Dhruva) ನಟನಾಗಿ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾಗೆ ಭಾರತೀಯ ಚಿತ್ರರಂಗದ ದಿಗ್ಗಜ ನಟರಿಬ್ಬರು ಹೊಸ ಪ್ರಯತ್ನಕ್ಕೆ ಸಾಥ್ ಕೊಟ್ಟಿದ್ದಾರೆ.

    ಸುಕೇಶ್ ಶೆಟ್ಟಿ ‘ಪೀಟರ್’ ಎಂಬ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ‘ಪೀಟರ್’ ಟೈಟಲ್ ಅನ್ನು ಕನ್ನಡ ಚಿತ್ರರಂಗದ ನಟರಾಕ್ಷಸ ಡಾಲಿ ಧನಂಜಯ (Daali Dhananjay) ಹಾಗೂ ತಮಿಳಿನ ಸೂಪರ್ ಸ್ಟಾರ್ ವಿಜಯ್ ಸೇತುಪತಿ (Vijay Sethupathi) ರಿಲೀಸ್ ಮಾಡಿ ಇಡೀ ತಂಡಕ್ಕೆ ಶುಭ ಹಾರೈಸಿದ್ದಾರೆ. ‘ಪೀಟರ್’ ಟೈಟಲ್ ಪೋಸ್ಟರ್ ಬಹಳ ಆಕರ್ಷಕವಾಗಿದೆ. ರಾಯಲ್ ಚಂಡೆ ಹುಡುಗರು, ಜೆಸ್ಸಿ ವಾಪಸ್ ಬಂದಿದ್ದಾಳೆ ಎಂಬ ಬರಹಗಳ ಜೊತೆಯಲ್ಲಿ ಯಮಹ ಬೈಕ್, ಹಳೆಯ ಕಬ್ಬಿಣದ ಚೇರ್ ಪೋಸ್ಟರ್‌ನಲ್ಲಿ ಹೈಲೆಟ್ಸ್ ಮಾಡಲಾಗಿದೆ.

    ‘ಪೀಟರ್’ ಸಿನಿಮಾ ಸೆನ್ಸಿಟಿವ್ ಕ್ರೈಮ್ ಡ್ರಾಮಾ ಕಂಟೆಂಟ್ ಹೊಂದಿದ್ದು, ಅದರಲ್ಲಿಯೂ ಮುಖ್ಯವಾಗಿ ಚೆಂಡೆ ಮೇಳದ ಕಥಾವಸ್ತುವನ್ನು ಚಿತ್ರ ಒಳಗೊಂಡಿದೆ. ಕೇರಳದಲ್ಲಿ 300 ವರ್ಷಗಳಿಗೂ ಅಧಿಕ ಕಾಲದ ಇತಿಹಾಸ ಹೊಂದಿರುವ ಚೆಂಡೆ ಮೇಳವನ್ನು ‘ಪೀಟರ್’ (Peter Movie) ಸಿನಿಮಾದಲ್ಲಿ ಕಟ್ಟಿಕೊಡಲಾಗುತ್ತಿದೆ. ಯಕ್ಷಗಾನ, ಭೂತಕೋಲ, ದೇವರ ನರ್ತನದಲ್ಲಿ ಬಳಸುವ ಜಾನಪದೀಯ ವಾದ್ಯವಾಗಿರುವ ಚೆಂಡೆ ಮೇಳನ್ನು ಥಿಯೇಟರ್‌ನಲ್ಲಿ ಎಕ್ಸ್ ಪಿರಿಯನ್ಸ್ ಮಾಡುವುದೇ ಚೆಂದ. ಅದನ್ನು ‘ಪೀಟರ್’ ಸಿನಿಮಾದಲ್ಲಿ ನಿರ್ದೇಶಕ ಸುಕೇಶ್ ಹೇಗೆ ಅಳವಡಿಸಲಿದ್ದಾರೆ ಎಂಬ ಕುತೂಹಲವಿದೆ.

    ಈ ಚಿತ್ರದಲ್ಲಿ ರಾಜೇಶ್ ಧ್ರುವ ಹೀರೋ ಆಗಿ ಎಂಟ್ರಿ ಕೊಡುತ್ತಿದ್ದಾರೆ. ವಿಭಿನ್ನವಾಗಿರುವ ಕಥೆಯಲ್ಲಿ ಅವರು ‘ಪೀಟರ್’ ಆಗಿ ಕಾಣಿಸಿಕೊಳ್ತಿದ್ದಾರೆ. ಇನ್ನೂ ಇವರ ಜೊತೆ ರವೀಕ್ಷಾ ಶೆಟ್ಟಿ, ಜಾಹ್ನವಿ ರಾಯಲ, ಪ್ರತಿಮಾ ನಾಯಕ್, ರಘು ಪಾಂಡೇಶ್ವರ್, ರಾಮ ನಾಡಗೌಡ ತಾರಾಬಳಗದಲ್ಲಿದ್ದಾರೆ. ಸದ್ದಿಲ್ಲದೇ ಚಿತ್ರತಂಡ ಈಗಾಗಲೇ 29 ದಿನಗಳ ಶೂಟಿಂಗ್ ಮುಗಿಸಿದೆ. ಮಡಿಕೇರಿಯ ಭಾಗಮಂಡಲದ ಸುಂದರ ಜಾಗಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಅದ್ಧೂರಿ ಸೆಟ್ ಹಾಕಿ ಮಳೆಗಾಲದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಮುಂದಿನ ಉಳಿದ ಚಿತ್ರೀಕರಣಕ್ಕೆ ನಾಯಕ ಮತ್ತು ಇನ್ನೆರಡು ಪಾತ್ರಧಾರಿಗಳು ದೇಹದ ತೂಕ ಕಡಿಮೆ ಮಾಡಿಕೊಳ್ಳುವ ತಯಾರಿಯಲ್ಲಿದ್ದಾರೆ.

    ಕನ್ನಡ ಚಿತ್ರರಂಗದ ಖ್ಯಾತ ಸೌಂಡ್ ಇಂಜಿನಿಯರ್ ರವಿ ಹೀರೆಮಠ್ ಹಾಗೂ ರಾಕೇಶ್ ಹೆಗಡೆ ವೃದ್ಧಿ ಸ್ಟುಡಿಯೊಸ್ ಬ್ಯಾನರ್ ನಡಿ ‘ಪೀಟರ್’ ಸಿನಿಮಾ ನಿರ್ಮಿಸಿದ್ದಾರೆ. ಗುರುಪ್ರಸಾದ್ ನರ್ನಾಡ್ ಛಾಯಾಗ್ರಹಣ, ನವೀನ್ ಶೆಟ್ಟಿ ಸಂಕಲನ, ದೇವರಾಜ್ ಕಲಾ ನಿರ್ದೇಶನ ಚಿತ್ರಕ್ಕಿದೆ. ಲವ್, ಆಕ್ಷನ್, ಎಮೋಷನ್, ಸೆಂಟಿಮೆಂಟ್ ಎಲ್ಲರದ ಮಿಶ್ರಣ ಪೀಟರ್ ಸಿನಿಮಾದ ಮಗದಷ್ಟು ಅಪ್‌ಡೇಟ್ ಅನ್ನು ಚಿತ್ರತಂಡ ಶೀಘ್ರದಲ್ಲೇ ನೀಡಲಿದೆ.

  • Bigg Boss Kannada: ದೊಡ್ಮನೆ ಆಟಕ್ಕೆ ಕಾಲಿಡುತ್ತಾರಾ ರಾಜೇಶ್‌ ಧ್ರುವ- ನಟ ಪ್ರತಿಕ್ರಿಯೆ

    Bigg Boss Kannada: ದೊಡ್ಮನೆ ಆಟಕ್ಕೆ ಕಾಲಿಡುತ್ತಾರಾ ರಾಜೇಶ್‌ ಧ್ರುವ- ನಟ ಪ್ರತಿಕ್ರಿಯೆ

    ನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Kannada 10) ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಯಾರೆಲ್ಲಾ ಸೆಲೆಬ್ರಿಟಿಗಳು ಈ ಬಾರಿ ದೊಡ್ಮನೆಗೆ ಬರುತ್ತಾರೆ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಕೌತುಕ ಮನೆ ಮಾಡಿದೆ. ಹೀಗಿರುವಾಗ ‘ಅಗ್ನಿಸಾಕ್ಷಿ’ (Agnisakshi) ಖ್ಯಾತಿಯ ರಾಜೇಶ್ ಧ್ರುವ (Rajesh Dhruva), ದೊಡ್ಮನೆಗೆ ಕಾಲಿಡುವ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಈ ಬಗ್ಗೆ ಸ್ವತಃ ರಾಜೇಶ್, ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ನಾನು ಹೋಗುತ್ತಿಲ್ಲ: ನಟಿ ರಂಜನಿ ರಾಘವನ್ ಸ್ಪಷ್ಟನೆ

    ಬಿಗ್ ಬಾಸ್‌ಗೆ ಬರಲಿರುವ ಅಂದಾಜಿಸಲ್ಪಟ್ಟ ಸ್ಪರ್ಧಿಗಳ ಪಟ್ಟಿಯಲ್ಲಿ ನನ್ನ ಹೆಸರು ಚಾಲ್ತಿಯಲ್ಲಿದೆ ಅಂತಾ ತುಂಬಾ ಜನ ವಿಶ್ ತಿಳಿಸುತ್ತಾ ಇದ್ದೀರಿ, ಆದರೆ ನಾನು ಬಿಗ್ ಬಾಸ್‌ ಶೋಗೆ ಹೋಗುತ್ತಿಲ್ಲ. ಅದಕ್ಕೆ ಕಾರಣ ಕಿರುತೆರೆಯಲ್ಲಿ ಒಂದೊಳ್ಳೆ ಪಾತ್ರದ ಮೂಲಕ ಮತ್ತೆ ಸಕ್ರಿಯ ಆಗಿದ್ದೀನಿ, ಉಳಿದೆಲ್ಲ ಮಾಹಿತಿ ಶೀಘ್ರದಲ್ಲಿ ತಿಳಿಸುವೆ. ನಿಮ್ಮ ಹಾರೈಕೆ- ಪ್ರೀತಿ ಸದಾ ನನ್ನ ಜೊತೆಯಿರಲಿ, ಧನ್ಯೋಸ್ಮಿ ಎಂದು ರಾಜೇಶ್ ಧ್ರುವ ಬರೆದುಕೊಂಡಿದ್ದಾರೆ. ಈ ಮೂಲಕ ಬಿಗ್ ಬಾಸ್‌ಗೆ ಹೋಗುವ ಸುದ್ದಿಗೆ ನಟ ಬ್ರೇಕ್ ಹಾಕಿದ್ದಾರೆ.

    ಜನಪ್ರಿಯ ‘ಅಗ್ನಿಸಾಕ್ಷಿ’ ಸೀರಿಯಲ್‌ನಲ್ಲಿ ರಾಜೇಶ್ ಪಾತ್ರಕ್ಕೆ ಪ್ರಾಮುಖ್ಯತೆ ಇತ್ತು. ಅವರ ಪಾತ್ರ ಪ್ರೇಕ್ಷರ ಗಮನ ಸೆಳೆದಿತ್ತು. ನಾಯಕ ನಟ ಸಿದ್ಧಾರ್ಥ್ ಪಾತ್ರದಷ್ಟೇ ಇವರ ಪಾತ್ರ ಕೂಡ ಹೈಲೆಟ್ ಆಗಿತ್ತು.

    ಸರಯೂ, ಅರಮನೆ ಗಿಳಿ, ಸೇರಿದಂತೆ ಹಲವು ಸೀರಿಯಲ್ ಮತ್ತು ರಿಯಾಲಿಟಿ ಶೋನಲ್ಲಿ ರಾಜೇಶ್ ಕಾಣಿಸಿಕೊಂಡಿದ್ದಾರೆ. ‘ಶ್ರೀ ಬಾಲಾಜಿ ಸ್ಟುಡಿಯೋ’ ಚಿತ್ರದ ಮೂಲಕ ನಟ ಗಮನ ಸೆಳೆದಿದ್ದರು. ಈ ಚಿತ್ರ ಮಲಯಾಳಂ ಭಾಷೆಯಲ್ಲೂ ಡಬ್ ಆಗಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸ್ಟುಡಿಯೋ ಹುಡುಗರಿಗೆ ಸಾಥ್ ನೀಡಿದ ಗಂಧದ ಗುಡಿ ಡೈರೆಕ್ಟರ್

    ಸ್ಟುಡಿಯೋ ಹುಡುಗರಿಗೆ ಸಾಥ್ ನೀಡಿದ ಗಂಧದ ಗುಡಿ ಡೈರೆಕ್ಟರ್

    ಕೆಲವು ಸಿನಿಮಾಗಳೇ ಹಾಗೆ. ಶೀರ್ಷಿಕೆ ಮೂಲಕವೇ ನಿರೀಕ್ಷೆ ಹೆಚ್ಚಿಸಿಬಿಡುತ್ತವೆ. ಅಂತಹ‌ ನಿರೀಕ್ಷೆ ಸಿನಿಮಾಗಳ ಸಾಲಿಗೆ ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಸಿನಿಮಾ ಕೂಡ ಸೇರಿದೆ. ಈಗ ಈ ಸಿನಿಮಾನೂ ಸೊಗಸಾಗಿ ಮೂಡಿ ಬಂದಿದೆ ಎಂಬ ಖುಷಿ ಚಿತ್ರತಂಡದ್ದು. ಈ ಸಿನಿಮಾದ ಪೋಸ್ಟರ್ ಮತ್ತು ಹಾಡು ಈಗಾಗಲೇ ಮಜವೆನಿಸಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಹಾಗು ಹಾಡೊಂದು ಬಿಡುಗಡೆಯಾಗಿದೆ.

    ‘ಗಂಧದಗುಡಿ’ ನಿರ್ದೇಶಕ ಅಮೋಘ ವರ್ಷ ಈ ಸಂದರ್ಭದಲ್ಲಿ ಸಿನಿಮಾ ತಂಡಕ್ಕೆ ಶುಭ ಕೋರಿ, ಇದೊಂದು ಅದ್ಭುತ ಕಲ್ಪನೆಯ ಕಥೆಯ ಸಿನಿಮಾ. ಸಿನಿಮಾ ಶೀರ್ಷಿಕೆಯೇ ಖುಷಿಕೊಟ್ಟಿದೆ. ಸಿನಿಮಾ ಕೂಡ ನೋಡುಗರಿಗೆ ಇಷ್ಟವಾಗುತ್ತೆ ಎಂಬುದಕ್ಕೆ ಚಿತ್ರದ ಟ್ರೇಲರ್ ಸಾಕ್ಷಿ. ಟ್ರೇಲರ್ ನೋಡಿದರೆ, ಇಲ್ಲಿ ಒಬ್ಬ ಫೋಟೋಗ್ರಾಫರ್ ನ ಭಾವನೆ, ತೊಳಲಾಟ, ಪೇಚಾಟ, ಬದುಕು ಎಲ್ಲವೂ ಇಲ್ಲಿ ಅನಾವರಣಗೊಂಡಿದೆ  ಅನಿಸುತ್ತದೆ. ಕನ್ನಡದಲ್ಲಿ ಈ ರೀತಿಯ ವಿಭಿನ್ನ ಕಥಾಹಂದರದ ಸಿನಿಮಾಗಳು ಹೆಚ್ಚೆಚ್ಚು ಬರಲಿ. ಸಿನಿಮಾ ಎಲ್ಲರಿಗೂ ಯಶಸ್ಸು ತಂದುಕೊಡಲಿ ಅಂದರು.

    ನಟ ಶಿಶಿರ್ ಕೂಡ ಸಿನಿಮಾ ತಂಡದ ಶ್ರಮದ ಕುರಿತು‌ ಮಾತನಾಡಿದರು. ಒಳ್ಳೆಯ ಸಿನಿಮಾ ಆಗಲು ಮೊದಲು ಒಳ್ಳೆಯ ಮನಸ್ಸುಗಳು ಸೇರಬೇಕು. ಅವೆಲ್ಲದರಿಂದ ಒಳ್ಳೆಯ ಬಸಿನಿಮಾ ಮೂಡಿಬಂದಿದೆ. ಇದೊಂದು ಎಲ್ಲರ ಮನಸ್ಸಲ್ಲಿ ಉಳಿಯೋ ಚಿತ್ರವಾಗಲಿ ಅಂದರು ಅವರು. ಇದೇ ವೇಳೆ ಚಿತ್ರತಂಡ ಸಿನಿಮಾರಂಗದ ಹಿರಿಯ ಛಾಯಾಗ್ರಾಹಕ ಕೆ.ಎನ್.ನಾಗೇಶ್ ಕುಮಾರ್ ಅವರನ್ನು ಪ್ರೀತಿಯಿಂದ ಸನ್ಮಾನಿಸಿತು. ಈ ಚಿತ್ರವೇ ಕ್ಯಾಮರಾ ಮತ್ತು ಒಬ್ಬ  ಫೋಟೋಗ್ರಾಫರ್ ಕುರಿತ ಕಥೆ. ಹಾಗಾಗಿ ನಾಗೇಶ್ ಕುಮಾರ್ ಅವರನ್ನೇ ಆಹ್ವಾನಿಸಿ, ಅದಕ್ಕೊಂದು ಅರ್ಥ ಕಲ್ಪಿಸಿದ್ದು ವಿಶೇಷವಾಗಿತ್ತು. ಇದನ್ನೂ ಓದಿ: ರಾಕಿಭಾಯ್ ಜೊತೆ ಕಾಣಿಸಿಕೊಂಡ ಪಾಂಡ್ಯ ಬ್ರದರ್ಸ್ – KGF 3 ಟ್ರೆಂಡಿಂಗ್

    ಈಗಾಗಲೇ ಸಿನಿಮಾ  ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದು,  ಈಗಾಗಲೇ ಸಿನಿಮಾದ ಹಾಡುಗಳು ಮೆಚ್ಚುಗೆ ಪಡೆದಿವೆ. ಇದು  ಒಬ್ಬ ಫೋಟೋಗ್ರಾಫರ್ ಜೀವನದ ಕಥೆ. ಈವರೆಗೆ ಆ ಕುರಿತು ಬರದಂತಹ  ಕಥೆ ಇಲ್ಲಿದೆ. ಒಂದೊಂದು ಫ್ರೇಮ್ ಕೂಡ ಅದ್ಭುತವಾಗಿ ಮೂಡಿ ಬಂದಿದೆ, ಚಿತ್ರಕ್ಕೆ ಎಲ್ಲರ ಹಾರೈಕೆ ಇರಲಿ ಎಂಬುದು ಚಿತ್ರತಂಡದ ಮಾತು.  ಈಗಂತೂ ಜನರು ಹೊಸ ಬಗೆಯ ಕಥೆ ಆಯ್ಕೆ ಮಾಡುತ್ತಾರೆ. ಅಂತಹವರಿಗೆ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ರುಚಿಸಲಿದೆ ಎಂಬುದು ನಿರ್ಮಾಪಕ ವೆಂಕಟೇಶ್ವರ ರಾವ್ ಬಳ್ಳಾರಿ ಅವರ ಮಾತು. ಇದು ಅವರ ಸೃಜನ ಪ್ರೊಡಕ್ಷನ್ ಅಡಿ  ನಿರ್ಮಿಸಿದ ಮೊದಲ ಚಿತ್ರ.

    ಅವರು, ಸಿನಿಮಾ ಮಾಡ್ತೀನಿ ಅಂದಾಗ,ಹಲವಾರು ಜನ ಸಿನಿಮಾ  ಬೇಡ ಎಂದು ತಲೆಕೆಡಿಸಲು ಪ್ರಯತ್ನ ಪಟ್ಟಿದ್ದರಂತೆ. ಆದರೆ ಈ ಸಿನೆಮಾ ಎಲ್ಲರ ಮನಸ್ಸನ್ನು ಗೆಲ್ಲುತ್ತದೆ ಎಂಬ ವಿಶ್ವಾಸ ಅವರದು. ಇನ್ನು‌ ನಿರ್ದೇಶಕ ರಾಜೇಶ್ ಧ್ರುವ ಅವರು, 23 ದಿನ ಮಳೆಯಲ್ಲೇ  ಚಿತ್ರೀಕರಿಸಿದ್ದಾರಂತೆ.  ಅವರ  ಊರಿನಲ್ಲಿ ಅನುಭವಕ್ಕೆ ಬಂದ ಹಲವು ಅನುಭವನ್ನು, ಭಾಷೆಯನ್ನು ಈ ಸಿನೆಮಾದಲ್ಲಿ ಬಳಸಿಕೊಂಡು ಎಲ್ಲ ಕಲಾವಿದರಿಗೆ 30 ದಿನಗಳ ಕಾಲ ಅಲ್ಲಿಯ ಭಾಷೆಯ ಅರಿವು ಮಾಡಿಸಿ ಪಾತ್ರಕ್ಕೆ ತಕ್ಕಂತೆ ತಯಾರು ಮಾಡಿಸಿ ಶೂಟಿಂಗ್ ‌ಮಾಡಿದ್ದಾರಂತೆ.ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರು  ಈ ವೇಳೆ  ಅನುಭವನ್ನು ಹಂಚಿಕೊಂಡರು.ಚಿತ್ರದಲ್ಲಿ  ರಾಜೇಶ್ ಧ್ರುವ, ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಸಂಪತ್ ಜೆ ರಾಮ್, ಕಾಮಿಡಿ ಕಿಲಾಡಿಗಳು 4 ಖ್ಯಾತಿಯ ಶುಭಲಕ್ಷ್ಮಿ, ಕನ್ಯಾಕುಮಾರಿ ಧಾರವಾಹಿ ಖ್ಯಾತಿಯ ನಕುಲ್ ಶರ್ಮ, ರಕ್ಷಿತ್, ಬಿಗ್ ಬಾಸ್ 4 ಖ್ಯಾತಿಯ ರವಿ ಮೂರೂರು ಹಾಗೂ ವಿಶೇಷ ಪಾತ್ರದಲ್ಲಿ ಕಿರುತೆರೆ ನಟ ಶಿಶಿರ್ ಕಾಣಿಸಿಕೊಂಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಚಿತ್ರದ ಟ್ರೇಲರ್ ಡಿಸೆಂಬರ್ ನಲ್ಲಿ ರಿಲೀಸ್

    ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಚಿತ್ರದ ಟ್ರೇಲರ್ ಡಿಸೆಂಬರ್ ನಲ್ಲಿ ರಿಲೀಸ್

    ಕಿರುತೆರೆಯಿಂದ ಬೆಳ್ಳಿತೆರೆಗೆ ನಾಯಕ ಹಾಗೂ ನಿರ್ದೇಶಕರಾಗಿ ಬಡ್ತಿ ಪಡೆದಿರುವ ರಾಜೇಶ್ ಧ್ರುವ, ಹೊಸ ರೀತಿಯ ಸಿನಿಮಾ ಮಾಡಿದ್ದಾರೆ. ಈ ಚಿತ್ರಕ್ಕೆ ಅವರು ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಎಂದು ಹೊಸ ರೀತಿಯ ಹೆಸರು ಇಟ್ಟಿದ್ದಾರೆ. ಟೈಟಲ್ ಕಾರಣದಿಂದಾಗಿಯೇ ಈ ಸಿನಿಮಾ ಕುತೂಹಲ ಕೂಡ ಮೂಡಿಸಿದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಪ್ರಯೋಗಾತ್ಮಕ ಚಿತ್ರಗಳತ್ತ ಮುಖ ಮಾಡಿದೆ. ಅದರಲ್ಲೂ ಹಳ್ಳಿ ಸೊಗಡಿನ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಸಿನಿಮಾ ಕೂಡ ಉತ್ತರ ಕನ್ನಡ ಜಿಲ್ಲೆಯ ಸೊಗಡನ್ನು ಪರಿಚಯಿಸಲಿದೆ.

    ಈ ಇಡೀ ಚಿತ್ರವನ್ನು ಶಿರಸಿ, ಯಲ್ಲಾಪುರ, ಹೊನ್ನಾವರದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಅಲ್ಲಿಯ ಸ್ಥಳೀಯ  ಪ್ರತಿಭೆಗಳನ್ನು ಬಳಸಿಕೊಳ್ಳಲಾಗಿದೆ. ಈ ಚಿತ್ರದ ಮತ್ತೊಂದು ವಿಶೇಷ ಅಂದರೆ ಚಿತ್ರಕ್ಕೆ ಬಳಸಿರುವುದು ಉತ್ತರ ಕನ್ನಡ ಭಾಷೆ ಹಾಗೂ ರಮಣೀಯ ಸ್ಥಳಗಳು ಎನ್ನುವುದು ನೆನಪಿಡಬೇಕಾದ ಸಂಗತಿ. ಇಡೀ ಸಿನಿಮಾ ನೋಡುಗನ ಕಣ್ಣು ತಂಪು ಮಾಡಿದರೆ, ಚಿತ್ರಕಥೆಯ ಹೊಸತನವು ಭಾರತ ಚಿತ್ರರಂಗದಲ್ಲಿ ಇಲ್ಲಿಯವರೆಗೂ ಬಂದಿಲ್ಲ ಎನ್ನುತ್ತಾರೆ ಸಿನಿಮಾದ ನಿರ್ದೇಶಕರು.

    ಒಬ್ಬ ಫೋಟೋಗ್ರಾಫರ್ ಹಾಗೂ ಫೋಟೋ ಸ್ಟುಡಿಯೋ ನಡುವಿನ ಭಾವನೆಯ ಹೋರಾಟವೇ ಈ ಚಿತ್ರದ ಹೈಲೈಟ್. ಇದರ ಜೊತೆಗೆ ಮುದ್ದಾದ ಪ್ರೇಮಿಗಳ ಕಥೆಯೂ ಇದೆ.  ಒಬ್ಬ ಇನ್ಶೂರೆನ್ಸ್ ಮಾಡಿಸುವವ ಹಾಗೂ ಅವನ ವೈಯಕ್ತಿಕ ಜೀವನದ ಬಗ್ಗೆ ಹಾಗೂ ಒಬ್ಬ ಜಮೀನ್ದಾರ ಮತ್ತು ಫೋಟೋಗ್ರಾಫರ್ ನಡುವಿನ ಸಂಘರ್ಷ ನೋಡುಗರಿಗೆ ಹೊಸ ಅನುಭವ ತರಿಸಲಿದೆ ಎಂದಿದೆ ಸಿನೆಮಾ ಟೀಮ್. ಇದನ್ನೂ ಓದಿ:ನನ್ನ ಮಗನ ಕಾರು ಅಪಘಾತಕ್ಕೆ ‘ಬುಧ ಭಕ್ತಿ’ ಕಾರಣ ಎಂದ ಜಗ್ಗೇಶ್

    ಈ ಸಿನಿಮಾದ ನಿರ್ಮಾಪರು ವೆಂಕಟೇಶ್ವರ ರಾವ್. ಬಳ್ಳಾರಿ ಮೂಲದವರಾದ ಇವರು ಮೊದಲ ಬಾರಿಗೆ ಸೃಜನ್ ಪ್ರೊಡಕ್ಷನ್ ಅಡಿಯಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕರಾಗಿ ಹಾಗೂ ಮುಖ್ಯ ಪಾತ್ರದಲ್ಲಿ ಕಿರುತೆರೆಯಲ್ಲಿ 6 ವರ್ಷಗಳ ಕಾಲ ಕೆಲಸ ಮಾಡಿ ಫೇಮಸ್ ಆಗಿರುವ, ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ನಟ ರಾಜೇಶ್ ಧ್ರುವ ಕಾಣಿಸಿಕೊಂಡಿದ್ದಾರೆ. ರವಿ ಸಾಲಿಯಾನ್, ರಾಧಿಕಾ ಅಚ್ಯುತ್ ರಾವ್, ಸಂಪತ್ ಜೆ ರಾಮ್, ಶುಭಲಕ್ಷ್ಮಿ ಸೇರಿದಂತೆ ಅನೇಕ ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪತಿ ಮೇಲೆ ಯಾವುದೇ ಕೋಪವಿಲ್ಲ, ನನ್ನನ್ನು ಕರೆದುಕೊಂಡು ಹೋಗ್ಲಿ : ರಾಜೇಶ್ ಪತ್ನಿ

    ಪತಿ ಮೇಲೆ ಯಾವುದೇ ಕೋಪವಿಲ್ಲ, ನನ್ನನ್ನು ಕರೆದುಕೊಂಡು ಹೋಗ್ಲಿ : ರಾಜೇಶ್ ಪತ್ನಿ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ `ಅಗ್ನಿಸಾಕ್ಷಿ’ಯ ಅಖಿಲ್ ಪಾತ್ರಧಾರಿಯ ರಾಜೇಶ್ ಧ್ರುವ ವಿರುದ್ಧ ಕಿರುಕುಳ ಆರೋಪ ಪ್ರಕರಣ ದಾಖಲಾಗಿದ್ದು, ಇಂದು ರಾಜೇಶ್ ಅವರ ಪತ್ನಿ ಶೃತಿ ವಿಚಾರಣೆಗೆ ಹಾಜರಾಗಿದ್ದಾರೆ.

    ನನ್ನ ಪತಿ ಮೇಲೆ ಯಾವುದೇ ಕೋಪವಿಲ್ಲ. ಅವರಿಗೆ ಶಿಕ್ಷೆ ನೀಡಬೇಕು ಎಂದು ನಾನು ಅಂದುಕೊಂಡಿಲ್ಲ. ಅವರು ನನ್ನನ್ನು ಕರೆದುಕೊಂಡು ಹೋಗಲಿ ಎಂದು ನಾನು ಈ ರೀತಿ ಮಾಡುತ್ತಿದ್ದೇನೆ. ನಾನು ಮದ್ಯ ಕುಡಿಯುವಾಗ ಅವರೇ ವಿಡಿಯೋ ಮಾಡಿದ್ದಾರೆ. ಅಲ್ಲದೇ ತಮಾಷೆಗೆ ಮಾಡಿದ್ದು ಎಂದು ಅವರೇ ಒಪ್ಪಿಗೊಂಡಿದ್ದಾರೆ ಎಂದು ಶೃತಿ ಹೇಳಿದ್ದಾರೆ.  ಇದನ್ನೂ ಓದಿ: ಅಗ್ನಿಸಾಕ್ಷಿ ಅಖಿಲ್ ವಿರುದ್ಧ ದೂರು ದಾಖಲು

    ನಾನು ಬೇರೆಯವರ ಮುಂದೆ ಕುಡಿಯಲಿಲ್ಲ. ರಾಜೇಶ್ ಅವರು ತಮ್ಮ ತಾಯಿಯನ್ನು ನೋಡಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಆದರೆ ಅವರ ತಾಯಿ ಈಗ ಧಾರವಾಡದಲ್ಲಿ ಇದ್ದಾರೆ. ನನ್ನನ್ನು ಅವರು ಈಗ ಕರೆದುಕೊಂಡು ಹೋಗಲಿ. ಸದ್ಯ ವಿಚಾರಣೆಯಲ್ಲಿ ಏನು ಕೇಳುತ್ತಾರೋ ಅದನ್ನು ಹೇಳುತ್ತೇನೆ. ಇಂದು ಕರೆದಿದ್ದರು ಹಾಗಾಗಿ ಬಂದಿದ್ದೇನೆ ಎಂದು ವಿಚಾರಣೆಗೆ ಹಾಜರಾದ ಶೃತಿ ಹೇಳಿದ್ದಾರೆ. ಇದನ್ನೂ ಓದಿ: ಹೊರಗಡೆ ಮಾಂಸ ತಿಂದು ಮನೆಯಲ್ಲಿ ತಾಯಿಗೆ ಕಿರುಕುಳ: ಶ್ರುತಿ ಆರೋಪಕ್ಕೆ ರಾಜೇಶ್ ಧ್ರುವ ತಿರುಗೇಟು

    ಏನಿದು ಪ್ರಕರಣ?
    ರಾಜೇಶ್ ಧ್ರುವ 2017ರಲ್ಲಿ ನನ್ನನ್ನು ಮದುವೆಯಾಗಿ ಬಳಿಕ ಅವರಿಗೆ ವರದಕ್ಷಿಣೆ ತರುವಂತೆ ಟಾರ್ಚರ್ ನೀಡಿದ್ದಾರೆ. ಅಲ್ಲದೆ ಮಾನಸಿಕ ಹಿಂಸೆ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಪತ್ನಿ ಶೃತಿ ತಮ್ಮ ಪತಿ ರಾಜೇಶ್ ಮೇಲೆ ಆರೋಪ ಮಾಡಿದ್ದಾರೆ. ಮದುವೆ ಆದ ಬಳಿಕ ಮುಖ್ಯಮಂತ್ರಿ ಚಂದ್ರು ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಮದುವೆ ಆದರೂ ನನಗೆ ಮದುವೆಯಾಗಿಲ್ಲ ಎಂದು ಧ್ರುವ ಹೇಳಿಕೊಂಡು ತಿರುಗಾಡುತ್ತಿದ್ದರು. ಇದನ್ನೂ ಓದಿ: ನಿಮ್ಮ ಹೆಣ್ಣಿನ ಹುಚ್ಚಿಗೆ ನನ್ನ ಮೇಲೆ ಆರೋಪ ಬೇಡ – ರಾಜೇಶ್ ಧ್ರುವ ಪತ್ನಿ ಕಣ್ಣೀರು

    ಮದುವೆಯಾದ ಬಳಿಕ ಧ್ರುವ ಬೇರೆ ಯುವತಿಯರ ಜೊತೆ ಅಫೈರ್ ಇಟ್ಟುಕೊಂಡಿದ್ದರು. ಯುವತಿ `ತಕಧಿಮಿತ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಆಗಿ ಭಾಗವಹಿಸುತ್ತಿದ್ದಾರೆ ಎಂದು ಆರೋಪಿಸಿದ್ದ ಶೃತಿ ಕುಮಾರಸ್ವಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದನ್ನೂ ಓದಿ: ಪತ್ನಿ `ಎಣ್ಣೆ’ ಹೊಡೆಯೋ ವಿಡಿಯೋ ಬಿಡುಗಡೆ ಮಾಡಿದ ನಟ ಅಖಿಲ್!

    https://www.youtube.com/watch?v=z83AFF9LPEY

    https://www.youtube.com/watch?v=fczBXKZKrN4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಣ್ಣೆ ವಿಡಿಯೋ ಬಗ್ಗೆ ರಾಜೇಶ್ ಪತ್ನಿ ಶ್ರುತಿ ಪ್ರತಿಕ್ರಿಯೆ

    ಎಣ್ಣೆ ವಿಡಿಯೋ ಬಗ್ಗೆ ರಾಜೇಶ್ ಪತ್ನಿ ಶ್ರುತಿ ಪ್ರತಿಕ್ರಿಯೆ

    ಬೆಂಗಳೂರು: ಅಗ್ನಿಸಾಕ್ಷಿ ನಟ ರಾಜೇಶ್ ಧ್ರುವ ಅವರು ತಮ್ಮ ಪತ್ನಿ ಶ್ರುತಿ ಮದ್ಯಪಾನ ಮಾಡುತ್ತಿರುವ ವಿಡಿಯೋ ಬಿಡುಗಡೆ ಮಾಡಿದ್ದು, ಈ ವಿಡಿಯೋ ಬಗ್ಗೆ ಶ್ರುತಿ ಪ್ರತಿಕ್ರಿಯಿಸಿದ್ದಾರೆ.

    ರಾಜೇಶ್ ತಮ್ಮ ಪತ್ನಿ ಶ್ರುತಿ ಮದ್ಯಪಾನದ ಮತ್ತಿನಲ್ಲಿರುವ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ. ಈ ವಿಡಿಯೋದಲ್ಲಿ ಶ್ರುತಿ ಕೈಯಲ್ಲಿ ಬಿಯರ್ ಬಾಟಲಿ ಹಿಡಿದುಕೊಂಡಿದ್ದಾರೆ. ರಾಜೇಶ್ ಹಾಗೂ ಶ್ರುತಿ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದಾಗ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ.  ಇದನ್ನೂ ಓದಿ: ಅಗ್ನಿಸಾಕ್ಷಿ ಅಖಿಲ್ ವಿರುದ್ಧ ದೂರು ದಾಖಲು

    ಈ ಬಗ್ಗೆ ಶ್ರುತಿ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, “ಈ ವಿಡಿಯೋ ಮಾಡುವಾಗ ರಾಜೇಶ್ ಅವರು ಇದ್ದರು. ಹೊಸ ವರ್ಷದಂದು ಈ ವಿಡಿಯೋವನ್ನು ಮಾಡಲಾಗಿದ್ದು, ರಾಜೇಶ್ ಅವರ ಸ್ನೇಹಿತ ಈ ವಿಡಿಯೋವನ್ನು ಮಾಡಿದ್ದರು. ರಾಜೇಶ್ ಅವರು ಈ ವಿಡಿಯೋವನ್ನು ಮೊದಲೇ ಮಾಡಬಹುದಿತ್ತು. ಆದರೆ ನಾನು ಸಾಕ್ಷಿ ನೀಡಿದ ಬಳಿಕ ಅವರು ಈ ಮದ್ಯಪಾನದ ವಿಡಿಯೋವನ್ನು ಬಿಡುಗಡೆ ಮಾಡಿದ್ದಾರೆ” ಎಂದರು. ಇದನ್ನೂ ಓದಿ: ಹೊರಗಡೆ ಮಾಂಸ ತಿಂದು ಮನೆಯಲ್ಲಿ ತಾಯಿಗೆ ಕಿರುಕುಳ: ಶ್ರುತಿ ಆರೋಪಕ್ಕೆ ರಾಜೇಶ್ ಧ್ರುವ ತಿರುಗೇಟು

    ಈ ವಿಡಿಯೋ ಅವರು ಬಿಡುಗಡೆ ಮಾಡಿ ನಾನು ದಿನ ಕುಡಿಯುತ್ತೇನೆ ಎಂದು ತೋರಿಸುತ್ತಿದ್ದಾರೆ. ಈ ವಿಡಿಯೋವನ್ನು 2015ರಲ್ಲಿ ಚಿತ್ರೀಕರಣ ಮಾಡಲಾಗಿತ್ತು. ಆಗ ನಾವು ರಿಜಿಸ್ಟರ್ ಮದುವೆ ಆಗಿದ್ದೇವು. ಆ ದಿನ ಹೊಸ ವರ್ಷ ಎಂದು ಎಲ್ಲರು ಮದ್ಯಪಾನ ಮಾಡೋಣ ಎಂದು ಹೇಳಿದ್ದರು. ಆಗ ಅಖಿಲ್ ಅವರೇ ಈ ಎಣ್ಣೆಯ ಬಾಟಲ್ ತೆಗೆದುಕೊಂಡು ಬಂದು ನನಗೆ ನೀಡಿದ್ದರು. ನನಗೆ ಈ ಬಗ್ಗೆ ಯಾವುದೇ ವಿಷಯ ಗೊತ್ತಿಲ್ಲ. ಈ ವಿಡಿಯೋವನ್ನು ರಾಜೇಶ್ ಸ್ನೇಹಿತ ಚಿತ್ರೀಕರಿಸಿದ್ದು, ನನ್ನ ಹೆಸರು ಹಾಳು ಮಾಡಲು ಈಗ ಬಿಡುಗಡೆ ಮಾಡಿದ್ದಾರೆ ಎಂದು ಶ್ರುತಿ ಹೇಳಿದ್ದಾರೆ. ಇದನ್ನೂ ಓದಿ: ನಿಮ್ಮ ಹೆಣ್ಣಿನ ಹುಚ್ಚಿಗೆ ನನ್ನ ಮೇಲೆ ಆರೋಪ ಬೇಡ – ರಾಜೇಶ್ ಧ್ರುವ ಪತ್ನಿ ಕಣ್ಣೀರು

    ಆದರೆ ರಾಜೇಶ್ ಅವರು, ಈ ಹೊಸ ವರ್ಷದಲ್ಲಿ ತೆಗೆದ ವಿಡಿಯೋ ಅಲ್ಲ. ಶ್ರುತಿ ಮದ್ಯಪಾನ ಮಾಡಿ ಗಲಾಟೆ ಮಾಡುತ್ತಿದ್ದರು. ಹಾಗಾಗಿ ನಾನು ವಿಡಿಯೋ ಮಾಡಿದ್ದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಪತ್ನಿ `ಎಣ್ಣೆ’ ಹೊಡೆಯೋ ವಿಡಿಯೋ ಬಿಡುಗಡೆ ಮಾಡಿದ ನಟ ಅಖಿಲ್!

    ವಿಡಿಯೋದಲ್ಲಿ ಏನಿದೆ?
    ಈ ವಿಡಿಯೋದಲ್ಲಿ ರಾಜೇಶ್ ಅವರು ಶ್ರುತಿಗೆ ನಾ ಯಾರು ಎಂದು ಪ್ರಶ್ನಿಸಿದ್ದಾರೆ. ಕುಡಿದ ಮತ್ತಿನಲ್ಲಿದ್ದ ಶ್ರುತಿ ಹೇ ಸುಮ್ನೆ ಹಚ್ಚೋ ನೀನು ಎಂತೆಲ್ಲಾ ಮಾಡ್ತಿಯಾ? ಎಂದು ಅವಾಜ್ ಹಾಕಿದ್ದಾರೆ. ಬಳಿಕ ರಾಜೇಶ್ ನಾ ಯಾರು? ನಾ ಯಾರು? ಎಂದು ಮತ್ತೆ ಪ್ರಶ್ನಿಸಿದ್ದಾರೆ. ಅದಲ್ಲದೇ ಉಪ್ಪಿನಕಾಯಿ ಬೇಕಾ? ಎಂದು ಕೇಳಿದ್ದಾರೆ. ಆಗ ಶ್ರುತಿ ಬೇಕು ಎಂದು ಹೇಳಿದ್ದಾರೆ. ಮತ್ತೆ ರಾಜೇಶ್ ಅವರು ಶ್ರುತಿ ಕುಡಿಯುತ್ತಿರುವುದನ್ನು ನೋಡಿ, ಸರಿಯಾಗ್ ಕುಡಿತಿಯಲ್ಲೇ?. ಎಂದು ಕೇಳಿದ್ದಾರೆ. ಆದರೆ ಇದಕ್ಕೆ ಶ್ರುತಿ ಪ್ರತಿಕ್ರಿಯಿಸದೇ ಫಸ್ಟ್ ಹಚ್ಚಲೇ ಎಂದು ರಾಜೇಶ್‍ಗೆ ಬೈದಿದ್ದಾರೆ. ಆಗ ನನಗ್ಯಾಕ್ ಬೈತಿ? ನಾನೇನು ನಿನ್ನ ಗಂಡನಾ? ಎಂದು ಕೇಳಿದ್ದಾಗ ನನಗೆ ಅಳು ಬರ್ತಾಯಿದೆ. ಅಂವ ಅಲ್ಲಿ ನಿಂತು ಏನು ಮಾಡಕ್ಕತ್ಯಾನ?. ಹಚ್ಚಲ್ಲಿ. ಬ್ಯಾಕ್ ಬಾ ಎಂದು ಶ್ರುತಿ ಎಣ್ಣೆ ಮತ್ತಿನಲ್ಲಿ ಎಲ್ಲರಿಗೂ ಅವಾಜ್ ಹಾಕಿದ್ದಾರೆ.

    https://www.youtube.com/watch?v=8gF1jnbCQMY

    https://www.youtube.com/watch?v=yoxkgVdHfw4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ನಿಮ್ಮ ಹೆಣ್ಣಿನ ಹುಚ್ಚಿಗೆ ನನ್ನ ಮೇಲೆ ಆರೋಪ ಬೇಡ – ರಾಜೇಶ್ ಧ್ರುವ ಪತ್ನಿ ಕಣ್ಣೀರು

    ನಿಮ್ಮ ಹೆಣ್ಣಿನ ಹುಚ್ಚಿಗೆ ನನ್ನ ಮೇಲೆ ಆರೋಪ ಬೇಡ – ರಾಜೇಶ್ ಧ್ರುವ ಪತ್ನಿ ಕಣ್ಣೀರು

    – ರೀಲ್ ಹುಡುಗನ ರಿಯಲ್ ಕಹಾನಿ

    ಬೆಂಗಳೂರು: ಖಾಸಾಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಗ್ನಿಸಾಕ್ಷಿ ಧಾರವಾಹಿಯ ಸಹನಟ ರಾಜೇಶ್ ಧ್ರುವ ವಿರುದ್ಧ ಪತ್ನಿ ದೂರು ದಾಖಲಿಸಿದ್ದು, ಇದೀಗ ಪತ್ನಿ ಶೃತಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ.

    ತನ್ನ ಮನದ ಮಾತನ್ನು ಬಿಟ್ಟಿಟ್ಟ ರಾಜೇಶ್ ಪತ್ನಿ, ನಾನು ಡಿವೋರ್ಸ್ ಕೊಡಲ್ಲ. ನನ್ನ ಮೇಲೆ ಮಾಡಿದ ಆರೋಪಗಳಿಗೆ ನನಗೆ ಸಾಕ್ಷಿ ಬೇಕು. ಅವರ ಮೇಲೆ ನಾನು ಮಾಡಿದ ಆರೋಪಗಳಿಗೆ ನನ್ನ ಬಳಿ ಸಾಕ್ಷಿ ಇದೆ ಎಂದು ಹೇಳುತ್ತಾ ಕಣ್ಣೀರು ಹಾಕಿದ್ದಾರೆ.

    ಪತ್ನಿ ಹೇಳಿದ್ದೇನು..?
    ಅವರು ನನ್ನ ಬಗ್ಗೆ ಏನೇನು ಆರೋಪ ಮಾಡಿದ್ದಾರೆ ಗೊತ್ತಿಲ್ಲ. ಅರ್ಥಮಾಡಿಕೊಳ್ಳಲ್ಲ. ಮನೆಯಲ್ಲಿ ಅಮ್ಮನಿಗೆ ಬೈದಿದ್ದೇನೆ ಎಂದೆಲ್ಲ ಹೇಳಿದ್ದಾರೆ. ಇದಕ್ಕೆ ನನಗೆ ಪ್ರೂಫ್ ಬೇಕು. ಅವರಿಗೆ ಅಫೇರ್ ಇದೆ ಎಂದು ನಾನು ಹೇಳಿದ್ದಕ್ಕೆ ಅವರು ನನಗೂ ಅಫೇರ್ ಇದೆ ಎಂದು ಹೇಳಿದ್ದಾರೆ. ಇದೆಲ್ಲದಕ್ಕೂ ನನಗೆ ಸಾಕ್ಷಿ ಬೇಕು. ಅವರ ಬಗ್ಗೆ ನಾನು ಸಾಕ್ಷಿ ಕೊಡುತ್ತೇನೆ ಅಂದಿದ್ದಾರೆ.

    ಒಂದು ಹುಡುಗಿ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಬಾರದು. ಇದ್ದರೆ ಅದನ್ನು ಪ್ರೂವ್ ಮಾಡಲಿ. 2013ರಲ್ಲಿ ಮದುವೆ ರಿಜಿಸ್ಟರ್ ಆಗಿದೆ. ಇಬ್ಬರೂ ಲವ್ ಮಾಡಿದ್ದು, ಅವರೇ ನಮ್ಮ ಅಪ್ಪನ ಬಳಿ ಬಂದು ಮದುವೆ ಮಾತುಕತೆ ನಡೆಸಿದ್ದಾರೆ. ಆಗ ನನ್ನ ಅಪ್ಪ ಈವಾಗ ಬೇಡ ಓದಿ, ಒಳ್ಳೆಯ ಕೆಲಸ ಸಿಕ್ಕ ಬಳಿಕ ನೋಡೋಣ ಎಂದು ಹೇಳಿದ್ದರು. ನಂತರ ಅವರ ಅಮ್ಮ ಒಪ್ಪಿಕೊಂಡು ಬಳಿಕ ಜಾತಿ ಬೇರೆ ಬೇರೆಯಾಗಿದೆ. ಹೀಗಾಗಿ ಬೇಡ ಎಂದಿದ್ದರು. ಈ ವೇಳೆಯೂ ರಾಜೇಶ್, ಇಲ್ಲ ಅವಳು ಇಲ್ಲದೆ ನಾನು ಇರಲ್ಲ. ಸತ್ತು ಹೋಗ್ತೀನಿ ಎಂದು ಹೇಳಿದ್ದರು. ಇಷ್ಟೆಲ್ಲ ಆದ ಬಳಿಕ ನಾವು ರಿಜಿಸ್ಟರ್ ಮ್ಯಾರೇಜ್ ಆಗಿದ್ದೇವೆ ಎಂದು ವಿವರಿಸಿದ್ರು.

    ಇಷ್ಟವಿಲ್ಲದಿದ್ದರೂ ನೈಟ್ ಶಿಫ್ಟ್:
    ಮದುವೆ ಆದ ಕೂಡಲೇ ನಾವು ಬೆಂಗಳೂರಿಗೆ ಬಂದೆವು. ನನಗೆ ಇಲ್ಲಿಗೆ ಬರುವ ನೆಸೆಸಿಟಿ ಇರಲಿಲ್ಲ. ಇವರು ಸಿರಿಯಲ್ ಬೇಕು ಅಂದ್ರು. ಹೀಗಾಗಿ ಅವರನ್ನು ನಂಬಿಕೊಂಡು ನಾನು ಕೂಡ ಇಲ್ಲಿಗೆ ಬಂದೆ. ಸ್ವಲ್ಪ ದಿನ ಕೆಲಸ ಮಾಡಿದೆ. ಇಷ್ಟ ಇಲ್ಲದಿದ್ದರೂ ನೈಟ್ ಶಿಫ್ಟ್ ಮಾಡಿದೆ. ಅವರು ಕೂಡ 3, 4 ತಿಂಗಳು ಕೆಲಸ ಮಾಡಿದ್ರು. ನಂತರ ನೈಟ್ ಶಿಫ್ಟ್ ಆಗಲ್ಲ ಎಂದು ಹೇಳಿ ಕೆಲಸ ಬಿಟ್ಟರು. ಆ ಸಂದರ್ಭದಲ್ಲಿ ನಾವು ಬಾಡಿಗೆ ಮನೆಯಲ್ಲಿ ಇದ್ದೆವು. ಹೀಗಾಗಿ ಮನೆ ನಡೆಸಬೇಕು ಎಂದು ಕಷ್ಟಪಟ್ಟು ನೈಟ್ ಶಿಫ್ಟ್ ಮಾಡಿದೆ ಅಂದ್ರು.

    ಕೆಲ ದಿನಗಳ ನಂತರ ವಾಪಸ್ ಊರಿಗೆ ಹೋಗೋಣ ಎಂಬ ಮಾತು ಬಂತು. ಆ ವೇಳೆ ಅವರಿಗೆ ಸೀರಿಯಲ್ ನಲ್ಲಿ ಚಾನ್ಸ್ ಸಿಕ್ಕಿರಲಿಲ್ಲ. ಹೀಗಾಗಿ ವಾಪಸ್ ಊರಿಗೆ ತೆರಳಿ ಯಾವುದೋ ಒಂದು ಫಿಲಂನಲ್ಲಿ ನಟಿಸಿದ್ರು. ಕೆಲಸದಿಂದ ನನ್ನನ್ನು ಬಿಡಿಸಿದ್ರು. ಹೀಗೆ ಊರಲ್ಲಿ ಒಂದು ವರ್ಷ ಇದ್ದೆವು. ಮತ್ತೆ ಬೆಂಗಳೂರಿಗೆ ಬಂದೆವು. ಆಗ ಅವರಿಗೆ ಪರಿಚಯಸ್ಥರೊಬ್ಬರು ಸೀರಿಯಲ್ ನಲ್ಲಿ ಅವಕಾಶ ಕೊಡಿಸೋದಾಗಿ ಹೇಳಿದ್ರು. ಹೀಗೆ ಒಂದು ವರ್ಷ ಅವಕಾಶದ ನೆಪದಲ್ಲಿ ಎಲ್ಲಾ ಕಡೆ ಹೋದ್ರು.

    ಮದ್ವೆಯಾದ ಬಳಿಕವೇ ಅವಕಾಶ:
    ನಾನು ಅವರ ಫೇಮ್ ನೋಡಿ ಮದುವೆಯಾಗಿಲ್ಲ. ನಮ್ಮ ಮದುವೆ ಆದ ಬಳಿಕವೇ ಅವರಿಗೆ ನಟನೆಯಲ್ಲಿ ಅವಕಾಶ ಸಿಕ್ಕಿರೋದು. ಯಾವಾಗ ಚಿತ್ರರಂಗಕ್ಕೆ ಕಾಲಿಟ್ಟರೋ ಆವಾಗಿಂದಲೇ ತುಂಬಾ ಹುಡುಗಿಯರ ಜೊತೆ ಮೆಸೇಜ್ ಮಾಡುತ್ತಿದ್ದರು. ರಾತ್ರಿಯೆಲ್ಲ ಕದ್ದುಮುಚ್ಚಿ ಮಾತಾಡುತ್ತಿದ್ದರು. ನಾನು ಕೇಳಿದ್ರೆ ಏನೂ ಹೇಳ್ತಾ ಇರಲಿಲ್ಲ. ಅಲ್ಲದೇ ನನ್ನ ವೃತ್ತಿಯ ಬಗ್ಗೆ ನೀನು ತಲೆ ಹಾಕಬೇಡ ಎಂದು ಹೇಳುತ್ತಿದ್ದರು. ಹುಡುಗಿಯರ ಜೊತೆ ಇರುವಾಗ್ಲೇ ನನಗೆ ಸಿಕ್ಕಿ ಹಾಕಿಕೊಂಡಿದ್ದರು. ಕೇಳಿದ್ರೆ ಒಪ್ಪಿಕೊಳ್ಳುತ್ತಿರಲಿಲ್ಲ. ಸಾಕ್ಷಿ ಮುಂದಿಟ್ಟರೆ ನನಗೆ ಟೆನ್ಶನ್ ಇತ್ತು. ಹೀಗಾಗಿ ಈ ರೀತಿ ದಾರಿ ತಪ್ಪಿದ್ದೀನಿ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದರು ಎಂದು ಹೇಳಿದ್ರು.

    ಒಂದು ವರ್ಷದಿಂದ ಹುಡುಗಿಯೊಬ್ಬಳ ಜೊತೆ ಅಫೇರ್ ಇಟ್ಕೊಂಡಿದ್ದಾರೆ. ಅವಳ ಮನೆಗೆ ಕೂಡ ಹೋಗಿದ್ದಾರೆ. ಇದು ಅವಳ ಮನೆ ಮಾಲೀಕರಿಗೂ ಗೊತ್ತು. ಆದ್ರೆ ಅವಳು ನನಗೆ ತಂಗಿ ಎಂದು ಹೇಳಿ ಅವಳ ಮನೆಗೆ ಹೋಗುತ್ತಿದ್ದರು ಎಂದು ತನ್ನ ಪತಿಯ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದಾರೆ.

    ಎಲ್ಲವನ್ನು ಸಹಿಸಿಕೊಂಡಿದ್ದೆ:
    ಸೀರಿಯಲ್ ಮುಗಿಸಿಕೊಂಡು ಮನೆಗೆ ಬಂದಾಗ ನಾನೇನಾದ್ರೂ ಕೇಳಿದ್ರೆ, ನನ್ನನ್ನು ಕೇಳುವ ಅಧಿಕಾರ ನಿನಗಿಲ್ಲ. ನಾನು ಗಂಡಸು ಎಲ್ಲಾದ್ರೂ ಹೋಗ್ತೀನಿ ಎಂದು ಗದರುತ್ತಿದ್ದರು. ಹುಡುಗಿಯರ ಜೊತೆ ಮೆಸೇಜ್ ಮಾಡೋ ಬಗ್ಗೆ ಕೇಳಿದ್ರೆ, ಅವರು ನನ್ನ ಫ್ಯಾನ್ಸ್. ಹೀಗಾಗಿ ಲವ್ ಎಂದು ಹೇಳುತ್ತಾರೆ ಅನ್ನುತ್ತಿದ್ದರು. ಮೆಸೇಜ್ ಮಾಡಲಿ. ಆದ್ರೆ ತೀರಾ ಹೋಗೋದು ತಪ್ಪು. ಯಾಕಂದ್ರೆ ಅವರಿಗೂ ಒಂದು ಫೀಲಿಂಗ್ಸ್ ಇರುತ್ತದೆ. ಇನ್ನು ಫೇಸ್ ಬುಕ್ ನಲ್ಲೂ 4,5 ಅಕೌಂಟ್ ಗಳು ಇತ್ತು. ಈವಾಗ ಗೊತ್ತಿಲ್ಲ ಯಾಕಂದ್ರೆ ನನ್ನನ್ನು ಈಗ ಬ್ಲಾಕ್ ಮಾಡಿದ್ದಾರೆ ಎಂದು ಹೇಳಿದ್ರು.

    ಇದನ್ನೆಲ್ಲಾ ಗಮನಿಸಿದ ಬಳಿಕ ನಾನು ಯಾವಗ್ಲೋ ಅವರನ್ನು ಬಿಟ್ಟು ಹೋಗಬಹುದಿತ್ತು. ಆದ್ರೆ ಇವತ್ತಲ್ಲ ನಾಳೆ ಸರಿಹೋಗಬಹುದೆಂದು ಎಲ್ಲವನ್ನು ಸಹಿಸಿಕೊಂಡು ಇಷ್ಟು ದಿನ ಜೊತೆ ಇದ್ದೆ. ಯಾವಾಗ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಮನೆಯಿಂದ ಹೊರಗೆ ಹಾಕಿದ್ದಾರೆ. ನಾನು ಈಗ ಎಲ್ಲಿ ಹೋಗಬೇಕು ಎಂದು ಗದ್ಗದಿತರಾದ್ರು.

    ಅತ್ತೆಯ ಬಗ್ಗೆ:
    ರಾಜೇಶ್ ತಂದೆ ತೀರಿಕೊಂಡ ಬಳಿಕ ಅವರ ಅಮ್ಮ ಇತ್ತೀಚೆಗೆ ನಮ್ಮ ಜೊತೆ ಬಂದ್ರು. ಅವರ ಅಮ್ಮನ ಜೊತೆ ನಾನು ಇರಬೇಕಾದ ಪರಿಸ್ಥಿತಿ ಬಂತು. ಹೀಗಾಗಿ ದೊಡ್ಡ ಮನೆ ಮಾಡಬೇಕು. ಸ್ವಲ್ಪ ಹಣ ಅಜೆಸ್ಟ್ ಮಾಡು ಎಂದು ಹೇಳಲು ಆರಂಭಿಸಿದ್ರು. ಹೀಗಾಗಿ ಹಣನೂ ಕೊಟ್ಟೆ. ಆದ್ರೆ ಅದೆಲ್ಲವನ್ನು ಈಗ ಕೇಳಿದ್ರೆ ನನಗೆ ಸಾಕ್ಷಿ ಬೇಕು ಎಂದು ಹೇಳುತ್ತಿದ್ದಾರೆ. ಗಂಡನಿಗೆ ಹಣ ಕೊಡುವಾಗ ರೆಕಾರ್ಡ್ ಮಾಡಬೇಕಿತ್ತಾ. ಅವರು ಹೀಗೆ ಮಾಡುತ್ತಾರೆ ಎಂದು ನನಗೆ ಗೊತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ರು.

    ನಾನು ಮಾಂಸಹಾರ ತಿನ್ನುತ್ತೇನೆ. ನನ್ನ ಯಜಮಾನ್ರು ಕೂಡ ನಾನ್ ವೆಜ್ ತಿನ್ನುತ್ತಾರೆ. ಆದ್ರೆ ಅವರು ಮನೆಯಲ್ಲಿ ತಿನ್ನಲ್ಲ. ಓರ್ವ ಬ್ರಾಹ್ಮಣನಾಗಿ ಅವರು ತಿನ್ನಬಹುದು, ನಾನು ಮಾತ್ರ ಯಾಕೆ ತಿನ್ನಬಾರದು ಅಂತಾರೆ. ಸರಿ ಮನೆಯಲ್ಲಿ ತಿನ್ನಬಾರದು ಎಂದು ಒಂದು ದಿನಾನೂ ನಾನು ಮನೆಯಲ್ಲಿ ತಿಂದಿಲ್ಲ. ಅವರು ಹೇಳ್ತಾರೆ ನಾನ್ ವೆಜ್ ತಿಂದು ಮನೆಯಲ್ಲಿ ಗಲೀಜು ಮಾಡ್ತಾಳೆ ಎಂದು ಆದ್ರೆ ಯಾವ ರೀತಿ ಗಲೀಜು ಮಾಡುತ್ತೇನೆ ಎಂದು ನನಗೆ ಸಾಕ್ಷಿ ಬೇಕು ಒತ್ತಾಯಿಸಿದ್ರು.


    ಆಫೇರ್ ಆರೋಪದ ಬಗ್ಗೆ:
    ಸಂದರ್ಶನಕ್ಕೆ ಒಬ್ಬರ ಜೊತೆ ಗಾಡಿಯಲ್ಲಿ ಹೋಗಿರುವುದು ಹೌದು. ಬೇಕಿದ್ರೆ ಅವರನ್ನು ನಾನು ಕರೆಸ್ತೀನಿ. ನಾನು ಕದ್ದು ಮುಚ್ಚಿ ಅವರ ಜೊತೆ ಹೋಗಿಲ್ಲ. ನಾನು ಹೋಗುತ್ತಿರೋದು ಅತ್ತೆಗೂ ಗೊತ್ತು. ನನಗೆ ಅಫೇರ್ ಇದ್ರೆ ಮನೆ ಮುಂದೆ ಯಾಕೆ ಅವರನ್ನು ಕರೆಸುತ್ತೇನೆ. ಕೆಲಸ ಬಿಟ್ಟ ಸಮಯದಲ್ಲಿ ನನ್ನ ಬಳಿ ಹಣ ಇರಲಿಲ್ಲ. ಹೀಗಾಗಿ ಅವರಿಗೂ ಕೆಲಸ ಬೇಕಿತ್ತು. ಹೀಗಾಗಿ ಇಬ್ಬರೂ ಒಟ್ಟಿಗೆ ಬೈಕ್ ನಲ್ಲಿ ಹೋಗಿ, ಸಂದರ್ಶನ ಮುಗಿಸಿ ನನ್ನ ಮನೆ ಬಳಿಯೇ ಬಿಟ್ಟು ಹೋಗಿದ್ದರು.

    ಲೇಟ್ ನೈಟ್ ಮೇಸೇಜ್:
    ರಾಜೇಶ್ ಅವರ ಅಮ್ಮನ ಜೊತೆ ಮಲಗುತ್ತಿದ್ದರು. ನಾನು ಒಬ್ಬಳೇ ರೂಮಿನಲ್ಲಿ ಮಲಗುತ್ತಿದ್ದೆ. ಹೀಗಾಗಿ ಅವರಿಗೆ ನಾನು ರಾತ್ರಿಯಿಡೀ ಚಾಟ್ ಮಾಡುತ್ತಿರುತ್ತೇನೆ ಎಂದು ಹೇಗೆ ಗೊತ್ತು ಎಂದು ಪ್ರಶ್ನಿಸಿದ್ರು.

    ಯಾಕೆ ಗಂಡನ ಬಳಿ ಡ್ರಾಪ್ ಕೇಳಿಲ್ಲ..?
    ರಾಜೇಶ್ ನನ್ನ ಬಳಿ ಮಾತಾಡುತ್ತಿರಲಿಲ್ಲ. ಒಂದು ದಿನ ನನ್ನ ಕೈಯಲ್ಲಿ ಹಣ ಇಲ್ಲವೆಂದು 20 ರೂ. ಕೇಳಿದ್ದೆ. ಇಲ್ಲ ಎಂದು ಹೇಳಿದ್ದರು. ನಾನು ಅವರ ಬ್ಯಾಗ್ ಚೆಕ್ ಮಾಡಿದೆ. ಆಗ ಅವರು ನನಗೆ ಕೆಟ್ಟ ಪದಗಳಿಂದ ಬೈದ್ರು. ಇನ್ನು ಊರಿಗೆ ಡ್ರಾಪ್ ಮಾಡಿ ಅಂದ್ರೆ ಮಾಡಲ್ಲ. ನಿಮ್ಮ ಗಂಡನ ಬೇರೆ ಹುಡುಗಿಯರ ಜೊತೆ ನೋಡಿದ್ದೀನಿ ಎಂದು ನನ್ನ ಫ್ರೆಂಡ್ಸೇ ಎಷ್ಟೋ ಬಾರಿ ಹೇಳಿದ್ದಾರೆ. ಈ ವಿಚಾರವನ್ನು ಅವರ ಅಮ್ಮನ ಬಳಿ ಹೇಳಿದ್ರೆ, ಹುಡುಗಿಯರನ್ನು ಡ್ರಾಪ್ ಮಾಡ್ತಾರೆ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ನಾನು ಡ್ರಾಪ್ ತಗೊಂಡ್ರೆ ಅದು ಅಫೇರ್. ಅವರು ಡ್ರಾಪ್ ಕೊಟ್ರೆ ಅದು ಮಾನವೀಯತೆಯೇ ಎಂದು ಪ್ರಶ್ನಿಸಿದ್ರು.

    ಡಿವೋರ್ಸ್ ಕೊಡಲ್ಲ:
    ನಾನು ಡಿವೋರ್ಸ್ ಕೊಡಲು ರೆಡಿ ಇಲ್ಲ. ಯಾಕಂದ್ರೆ ನನ್ನ ಜೀವನ ಹಾಳಾಗಿದೆ. ಹೀಗಾಗಿ ನಾನು ಸುಮ್ಮನೆ ಇರಲ್ಲ. ನನಗೆ ಎಲ್ಲದಕ್ಕೂ ಕಾರಣ ಬೇಕು ಅಷ್ಟೇ. ಅರ್ಥ ಮಾಡಿಕೊಳ್ಳಲ್ಲ. ಮನೆಯಲ್ಲಿ ಹೊಂದಾಣಿಕೆಯಿಲ್ಲ ಎಲ್ಲ ಕಾರಣ ಬೇಡ ಎಂದು ಅವರು ಹೇಳಿದ್ರು.

    2ನೇ ಮದ್ವೆಗೆ ಪ್ಲಾನ್:
    ಮಗನಿಗೆ ಎರಡನೆ ಮದುವೆಯ ಯೋಗ ಇದೆ. ಹೀಗಾಗಿ ಅವನಿಗೆ ನಾವು 2ನೇ ಮದುವೆ ಮಾಡುತ್ತೇವೆ. ಹೀಗಾಗಿ ನೀನು ಅವನನ್ನು ಬಿಟ್ಟು ಹೋಗು. ನನ್ನ ಕುಟುಂಬಕ್ಕೆ ನೀನು ಹೊಂದಾಣಿಕೆಯಾಗಲ್ಲ ಎಂದು ಹೇಳುತ್ತಿದ್ದಾರೆ. ಮನೆಯಲ್ಲಿ ನನ್ನ ಡೈನಿಂಗ್ ಟೇಬಲ್ ನಲ್ಲಿ ಕೂರಕ್ಕೆ ಬಿಡಲ್ಲ. ಕಿಚನ್ ಗೆ ಎಂಟ್ರಿ ಇಲ್ಲ. ಅವರ ಪಾತ್ರೆಗಳನ್ನು ಮುಟ್ಟಬಾರದು. ಫ್ರಿಡ್ಜ್ ಗೆ ಲಾಕ್ ಮಾಡ್ತಾರೆ ಎಂದು ಕಣ್ಣೀರು ಹಾಕಿದ್ದಾರೆ.

    ಅಬಾರ್ಷನ್ ಮಾಡಿಸಿದ್ರು:
    3, 4 ವರ್ಷಗಳ ಹಿಂದೆ ಅವರು ನನಗೆ ಬಲವಂತವಾಗಿ ಅಬಾರ್ಷನ್ ಮಾಡಿಸಿದ್ರು. ಆಗ ನನಗೆ ಮೂರೂವರೆ ತಿಂಗಳು ಆಗಿತ್ತು. ಅಬಾರ್ಷನ್ ಮಾಡೋದು ನನಗೆ ಒಂದು ಚೂರು ಇಷ್ಟ ಇರಲಿಲ್ಲ. ಆದ್ರೆ ಅವರೇ ಬಲವಂತವಾಗಿ ಮಾಡಿಸಿದ್ರು ಅಂದ್ರು.

    ಚಿತ್ರರಂಗದ ಬಳಿ ವಿನಂತಿ;
    ನನ್ನ ವೈಯಕ್ತಿಕ ವಿಚಾರವನ್ನು ನೀವು ಪರಿಹರಿಸಬೇಡಿ. ಆದ್ರೆ ಮದುವೆ ಆಗಿದ್ರೂನೂ ಆಗಿಲ್ಲ ಎಂದು ಹೇಳಿ ತುಂಬಾ ಹುಡುಗಿಯರಿಗೆ ಬೇರೆ ಬೇರೆ ಅಕೌಂಟ್ ನಿಂದ ಫ್ಲರ್ಟ್ ಮಾಡಿದ್ದಾರೆ. ಹೀಗಾಗಿ ಚಿತ್ರರಂಗದವರು ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

    ಕೂಲಿ ಕೆಲಸ ಮಾಡಿದ್ರೂ ಪತಿ ಬೇಕು:
    ನನಗೆ ಪತಿ ಬೇಕು. ಯಾಕಂದ್ರೆ ನಾನು ಹುಡುಗಿಯಾಗಿದ್ದು, ನನಗೆ ಮುಂದೆ ಏನು ಮಾಡಲು ಸಾಧ್ಯ. ಅವರು ಸೀರಿಯಲ್ ನಲ್ಲಿ ಇದ್ರೂ, ತೆಗೆದ್ರೂ, ಕೂಲಿ ಕೆಲಸ ಮಾಡಿದ್ರೂ ನಾನು ಅವರನ್ನು ಒಪ್ಪಿಕೊಳ್ಳಲೇ ಬೇಕು. ಯಾಕಂದ್ರೆ ನಾವು ಪ್ರೀತಿಸಿ ಬಂದವರು. ಅವರಿಗೆ ಫೀಲಿಂಗ್ ಇದೆಯೋ ಇಲ್ಲವೋ ಗೊತ್ತಿಲ್ಲ. ಆದ್ರೆ ನನಗೆ ಅವರು ಬೇಕು ಎಂದು ಹೇಳಿದ್ರು.

    ರಾಜೇಶ್ ಅಫೇರ್ ಬಗ್ಗೆ:
    ಒಬ್ಬಳ ಜೊತೆ ಚಾಟ್ ಮಾಡ್ತಿದ್ದರು. ಅಲ್ಲದೇ ಅವಳ ರೂಮಲ್ಲೇ ಇರುವ ಗೆಳತಿಯ ಜೊತೆನೂ ಮೆಸೇಜ್ ಮಾಡುತ್ತಿದ್ದರು. ಇದು ಆ ಹುಡುಗಿಯರಿಬ್ಬರಿಗೂ ಗೊತ್ತಿತ್ತು. ಆದ್ರೆ ಇವರಿಗೆ ಗೊತ್ತಿರಲಿಲ್ಲ. ಇವರು ಅವರ ಜೊತೆ ಕೆಟ್ಟದಾಗಿ ಮೆಸೇಜ್ ಮಾಡುತ್ತಿದ್ದರು. ಈ ಬಗ್ಗೆ ಅವರೇ ನನ್ನ ಬಳಿ ಹೇಳಿಕೊಂಡಿದ್ದಾರೆ. ಅಲ್ಲದೇ ಈ ಬಗ್ಗೆ ಹುಡುಗಿಯರು ಇವರ ವಿರುದ್ಧ ಕೇಸ್ ದಾಖಲಿಸಿದ್ದರು. ಆ ಸಂದರ್ಭದಲ್ಲಿ ರಾಜೇಶ್ ನನ್ನ ಬಳಿ ಬಂದು ನಾನು ತಪ್ಪು ಮಾಡಿದ್ದೇನೆ. ಮತ್ತೆ ಈ ರೀತಿ ಮಾಡಲ್ಲ ಎಂದು ಹೇಳಿದ್ದರು. ಬಳಿಕ ನಾನೇ ಆ ಹುಡುಗಿಯರನ್ನು ಒಪ್ಪಿಸಿ ದೂರು ಹಿಂಪಡಿದಿದ್ದೇನೆ ಎಂದು ತಿಳಿಸಿದರು.

    https://www.youtube.com/watch?v=gdBQ-VU9wfI

    https://www.youtube.com/watch?v=z83AFF9LPEY

    https://www.youtube.com/watch?v=sIIPhN9lvjM

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕಿರುತೆರೆ ನಟ ರಾಜೇಶ್ ಧ್ರುವ ಪ್ರಕರಣ- ಇಂದು ವಿಚಾರಣೆ

    ಕಿರುತೆರೆ ನಟ ರಾಜೇಶ್ ಧ್ರುವ ಪ್ರಕರಣ- ಇಂದು ವಿಚಾರಣೆ

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಗ್ನಿಸಾಕ್ಷಿ’ಯ ಅಖಿಲ್ ಪಾತ್ರಧಾರಿಯ ರಾಜೇಶ್ ಧ್ರುವ ವಿರುದ್ಧ ಕಿರುಕುಳ ಆರೋಪ ಪ್ರಕರಣ ದಾಖಲಾಗಿದ್ದು, ಇಂದು 10.30ರ ಸುಮಾರಿಗೆ ರಾಜೇಶ್ ವಿಚಾರಣೆಗೆ ಹಾಜರಾಗಲಿದ್ದಾರೆ.

    ರಾಜೇಶ್ ಇಂದು ಬಸವನಗುಡಿ ಮಹಿಳಾ ಠಾಣೆ ಅಧಿಕಾರಿ ಸತ್ಯವತಿ ಮುಂದೆ ಹಾಜರಾಗಿ ದೂರಿನ ಬಗ್ಗೆ ಉತ್ತರ ನೀಡಲಿದ್ದಾರೆ. ಇದನ್ನೂ ಓದಿ: ಅಗ್ನಿಸಾಕ್ಷಿ ಅಖಿಲ್ ವಿರುದ್ಧ ದೂರು ದಾಖಲು

    ಏನಿದು ಪ್ರಕರಣ?
    ರಾಜೇಶ್ ಧ್ರುವ 2017ರಲ್ಲಿ ಶೃತಿ ಅವರನ್ನು ಮದುವೆಯಾಗಿ ಬಳಿಕ ಅವರಿಗೆ ವರದಕ್ಷಿಣೆ ತರುವಂತೆ ಟಾರ್ಚರ್ ನೀಡಿದ್ದಾರೆ. ಅಲ್ಲದೆ ಮಾನಸಿಕ ಹಿಂಸೆ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಪತ್ನಿ ಶೃತಿ ತಮ್ಮ ಪತಿ ರಾಜೇಶ್ ಮೇಲೆ ಆರೋಪ ಮಾಡಿದ್ದಾರೆ. ಶೃತಿ ಜೊತೆ ಲಿವಿಂಗ್ ಟುಗೆದರ್ ರಿಲೇಶನ್‍ಶಿಪ್‍ನಲ್ಲಿದ್ದ ಧ್ರುವ ಅವರು 2017ರಲ್ಲಿ ಶೃತಿ ಜೊತೆ ಮದುವೆಯಾಗಿದ್ದರು. ಮದುವೆ ಆದ ಬಳಿಕ ಮುಖ್ಯಮಂತ್ರಿ ಚಂದ್ರು ಅವರ ಮನೆಯಲ್ಲಿ ಬಾಡಿಗೆಗೆ ಇದ್ದರು. ಮದುವೆ ಆದರೂ ನನಗೆ ಮದುವೆಯಾಗಿಲ್ಲ ಎಂದು ಧ್ರುವ ಹೇಳಿಕೊಂಡು ತಿರುಗಾಡುತ್ತಿದ್ದರು.  ಇದನ್ನೂ ಓದಿ: ಹೊರಗಡೆ ಮಾಂಸ ತಿಂದು ಮನೆಯಲ್ಲಿ ತಾಯಿಗೆ ಕಿರುಕುಳ: ಶ್ರುತಿ ಆರೋಪಕ್ಕೆ ರಾಜೇಶ್ ಧ್ರುವ ತಿರುಗೇಟು

    ಮದುವೆಯಾದ ಬಳಿಕ ಧ್ರುವ ಬೇರೆ ಯುವತಿಯರ ಜೊತೆ ಅಫೈರ್ ಇಟ್ಟುಕೊಂಡಿದ್ದರು. ಯುವತಿ `ತಕಧಿಮಿತ’ ರಿಯಾಲಿಟಿ ಶೋನಲ್ಲಿ ಸ್ಪರ್ಧಿ ಆಗಿ ಭಾಗವಹಿಸುತ್ತಿದ್ದಾರೆ. ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಕೆ.ಎಸ್ ಪೊಲೀಸ್ ಠಾಣೆಯಲ್ಲಿ ಶೃತಿ ಪ್ರಕರಣ ದಾಖಲಿಸಿದ್ದರು.

    https://www.youtube.com/watch?v=z83AFF9LPEY

    https://www.youtube.com/watch?v=fczBXKZKrN4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಹೊರಗಡೆ ಮಾಂಸ ತಿಂದು ಮನೆಯಲ್ಲಿ ತಾಯಿಗೆ ಕಿರುಕುಳ: ಶ್ರುತಿ ಆರೋಪಕ್ಕೆ ರಾಜೇಶ್ ಧ್ರುವ ತಿರುಗೇಟು

    ಹೊರಗಡೆ ಮಾಂಸ ತಿಂದು ಮನೆಯಲ್ಲಿ ತಾಯಿಗೆ ಕಿರುಕುಳ: ಶ್ರುತಿ ಆರೋಪಕ್ಕೆ ರಾಜೇಶ್ ಧ್ರುವ ತಿರುಗೇಟು

    ಬೆಂಗಳೂರು: ನಮ್ಮದು ಸಂಪ್ರದಾಯ ಕುಟುಂಬವಾಗಿದ್ದು, ಶ್ರುತಿ ಹೊರಗಡೆ ಮಾಂಸ ತಿಂದು ಮಾನಸಿಕವಾಗಿ ನನ್ನ ತಾಯಿಗೆ ಹಿಂಸೆ ನೀಡುತ್ತಿದ್ದರು. ನಾನು ಯಾವುದೇ ಕಿರುಕುಳ ನೀಡಿಲ್ಲ. ನಾನು ಕಿರುಕುಳ ನೀಡಿದ್ದಕ್ಕೆ ಸಾಕ್ಷಿ ನೀಡಲಿ ಎಂದು ‘ಅಗ್ನಿಸಾಕ್ಷಿ’ ಧಾರಾವಾಹಿಯ ಅಖಿಲ್ ಪಾತ್ರಧಾರಿಯಾಗಿರುವ ನಟ ರಾಜೇಶ್ ಧ್ರುವ ಅವರು ಶ್ರುತಿ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

    ತನ್ನ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಈ ವಿಷಯದ ಕುರಿತು ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಗೆ ಕೊಟ್ಟಿರುವ ದೂರನ್ನು ನಾನು ನಿಮಗೆ ಕಳುಹಿಸುತ್ತೇನೆ. ಅದರಲ್ಲಿ ಯಾರು ಯಾರಿಗೆ ಕಿರುಕುಳ ನೀಡುತ್ತಿದ್ದರು ಅಂತ ಉಲ್ಲೇಖವಾಗಿದೆ. ನಮ್ಮ ತಾಯಿಗೆ ಯಾರಿಂದ ಕಿರುಕುಳ ಆಗುತ್ತಿದೆ ಅಂತ ದೂರಿನಲ್ಲಿದೆ. ಒಟ್ಟು ಮೂರು ದೂರು ದಾಖಲಾಗಿದೆ. ಕಳೆದ ಜುಲೈನಲ್ಲಿ ವಿಚ್ಛೇದನ ಕೋರಿ ಶ್ರುತಿ ಅರ್ಜಿ ಹಾಕಿದ್ದಾರೆ. ಆಗ ಯಾಕೆ ಶ್ರುತಿ ವರದಕ್ಷಿಣೆ ಕೇಸ್ ಹಾಕಿಲ್ಲ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಅಗ್ನಿಸಾಕ್ಷಿ ಅಖಿಲ್ ವಿರುದ್ಧ ದೂರು ದಾಖಲು

    ವರದಕ್ಷಿಣೆ ಆರೋಪ ಮಾಡುತ್ತಿರೋದು ಅವರು. ಅದಕ್ಕೆ ಸಾಕ್ಷಿ ನೀಡಲು ಹೇಳಿ. ನಿರೀಕ್ಷಣಾ ಜಾಮೀನಿಗಾಗಿ ನಾನು ಓಡಾಡುತ್ತಿದ್ದೆ. ಈಗ ನಿರೀಕ್ಷಣಾ ಜಾಮೀನು ಸಿಕ್ಕಿದೆ. 28ಕ್ಕೆ ಪೊಲೀಸ್ ಠಾಣೆಗೆ ಹೋಗಿ ಸಹಿ ಹಾಕಿ ಬರಬೇಕು. ಆಗ ನಾನು ಠಾಣೆಗೆ ಹೋಗ್ತೀನಿ ಎಂದು ಸ್ಪಷ್ಟಪಡಿಸಿದ್ದಾರೆ.

    ನಾನು ನಟನಾಗಿರುವುದೇ ಅವರಿಗೆ ಸಮಸ್ಯೆಯಾಗಿದೆ. ಏನೇ ಮಾಡಿದರೂ ನ್ಯೂಸ್ ಚಾನೆಲ್‍ಗೆ ಕೊಡ್ತೀನಿ ಅಂತ ಹೆದರಿಸುತ್ತಿದ್ದರು. ಆದರೆ ಈಗ ಮಾಧ್ಯಮಗಳಿಗೆ ಸುಳ್ಳು ಸುದ್ದಿ ನೀಡಿದ್ದಾರೆ. ನನ್ನ ಪತ್ನಿ ಶ್ರುತಿ ಮಾನಸಿಕವಾಗಿ ತನ್ನ ತಾಯಿಗೆ ಹಿಂಸೆ ನೀಡುತ್ತಿದ್ದರು. ನನ್ನ ತಾಯಿಗೆ ಅವಾಚ್ಯ ಶಬ್ದಗಳನ್ನು ಬಳಸಿ ಬೈಯ್ಯುತ್ತಿದ್ದರು. ಅಲ್ಲದೆ ಅವರ ನಡತೆ ಬಗ್ಗೆ ಮಾತನಾಡುತ್ತಿದ್ದರು. ಅಲ್ಲದೇ ನನ್ನ ಮೇಲೆಯೇ ಶ್ರುತಿ ಅನುಮಾನ ಪಡುತ್ತಿದ್ದರು. ಶೃತಿ ಅವರು ಹೊರಗಡೆ ಮಾಂಸ ತಿಂದು ಬಂದು ಮನೆಯನ್ನೆಲ್ಲಾ ಗಬ್ಬು ವಾಸನೆ ಎಬ್ಬಿಸುತ್ತಿದ್ದರು. ನಮ್ಮ ತಾಯಿ ಮಡಿವಂತಿಕೆಯನ್ನು ನಂಬಿದವರು. ಹೀಗೆಲ್ಲಾ ಮಾಡಿ ಮಾನಸಿಕವಾಗಿ ತಾಯಿಗೆ ಶೃತಿ ಹಿಂಸೆ ನೀಡುತ್ತಿದ್ದರು. ಹೊರಗೆ ತಿಂದು ಸುಮ್ಮನ್ನಿರುತ್ತಿರಲಿಲ್ಲ. ಮನೆಯಲ್ಲಿದ್ದ ಪಾತ್ರೆಗಳನ್ನು ಮುಟ್ಟಿ ಅಶುದ್ಧ ಮಾಡುತ್ತಿದ್ದರು ಎಂದು ರಾಜೇಶ್ ಧ್ರುವ ಆರೋಪಿಸಿದ್ದಾರೆ.

    ರಾಜೇಶ್ ಧ್ರುವ ವಿರುದ್ಧ ಪತ್ನಿಯೇ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ರಾಜೇಶ್ ಧ್ರುವ 2017ರಲ್ಲಿ ನನ್ನನ್ನು ಮದುವೆಯಾದ ಬಳಿಕ ವರದಕ್ಷಿಣೆ ತರುವಂತೆ ಟಾರ್ಚರ್ ನೀಡಿದ್ದಾರೆ. ಅಲ್ಲದೇ ಮಾನಸಿಕ ಹಿಂಸೆ ನೀಡಿ ಮನೆಯಿಂದ ಹೊರ ಹಾಕಿದ್ದಾರೆ ಎಂದು ಶ್ರುತಿ ಆರೋಪಿಸಿದ್ದಾರೆ.

    https://www.youtube.com/watch?v=z83AFF9LPEY

    https://www.youtube.com/watch?v=fczBXKZKrN4

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv