Tag: Rajesh Bhushan

  • 5 ರಾಜ್ಯಗಳಲ್ಲಿ ಕೋವಿಡ್ ಹೆಚ್ಚಳ- ಭಾರತಕ್ಕೆ 4ನೇ ಅಲೆಯ ಮುನ್ಸೂಚನೆ

    ನವದೆಹಲಿ: ಈಗಾಗಲೇ ಚೀನಾ ದೇಶದ ಶಾಂಘೈನಗರದಲ್ಲಿ ಕೋವಿಡ್ ಹೆಚ್ಚಳವಾಗಿದ್ದು ಹಿರಿಯ ನಾಗರಿಕರ ಸರಣಿ ಸಾವುಗಳು ಸಂಭವಿಸುತ್ತಿದೆ. ಕೊರೊನಾ ನಿಯಂತ್ರಿಸಲು ಚೀನಾ ಸರ್ಕಾರವೂ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದೆ. ಇದೀಗ ಭಾರತದಲ್ಲೇ 5 ರಾಜ್ಯಗಳಲ್ಲಿ ಕೋವಿಡ್ ಪ್ರಕರಣಗಳು ಏರಿಕೆಯಾಗಿರುವುದು ನಾಲ್ಕನೇ ಅಲೆಯ ಮುನ್ಸೂಚನೆ ನೀಡಿದಂತಾಗಿದೆ. ‌

    CORONA CHINA

    ಚೀನಾ, ಅಮೆರಿಕ ಮತ್ತು ಯೂರೋಪ್‌ನ ಹಲವು ರಾಷ್ಟ್ರಗಳಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಕೊರೊನಾ ವೈರಸ್‌ನ ರೂಪಾಂತರ ತಳಿಯಾದ ಓಮೈಕ್ರಾನ್‌ನ ಉಪ ತಳಿಯಾದ XE ತಳಿಯೂ ಸಹ ಭಾರತದಲ್ಲಿ 2 ಪ್ರಕರಣಗಳು ವರದಿಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಭಾರತದ ಕೇಂದ್ರ ಸರ್ಕಾರವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ಇದನ್ನೂ ಓದಿ: XE ರೂಪಾಂತರಿ ಮಾರಣಾಂತಿಕವಲ್ಲ: ಮಹಾರಾಷ್ಟ್ರ ಸಚಿವ

    ದೇಶದ ಕೇರಳ, ಹರಿಯಾಣ, ಮಹಾರಾಷ್ಟ್ರ ದೆಹಲಿ ಹಾಗೂ ಮಿಜೋರಾಂಗಳಲ್ಲಿ ಕೋವಿಡ್ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುತ್ತಿದ್ದು, ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸಲು ತ್ವರಿತ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಸರ್ಕಾರವು ಆಯಾ ರಾಜ್ಯ ಸರ್ಕಾರಗಳಿಗೆ ಸೂಚಿಸಿ ಪತ್ರ ಬರೆದಿದೆ. ಕೋವಿಡ್ ಹೆಚ್ಚಳದ ಬಗ್ಗೆ ನಿಗಾ ವಹಿಸಿ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವ ಪ್ರದೇಶಗಳಲ್ಲಿ ನಿಯಂತ್ರಣಾ ಕ್ರಮ ಕೈಗೊಳ್ಳಬೇಕು ಎಂದೂ ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ:  26 ಮಿಲಿಯನ್ ಜನರ ಕೋವಿಡ್ ಪರೀಕ್ಷೆಗೆ ಸಾವಿರಾರು ಮಿಲಿಟರಿ, ವೈದ್ಯರನ್ನು ಶಾಂಘೈಗೆ ಕಳುಹಿಸಿದ ಚೀನಾ

    covid

    ಭಾರತದಲ್ಲಿ ವರದಿಯಾದ ಒಟ್ಟು ಹೊಸ ಪ್ರಕರಣಗಳಲ್ಲಿ ಶೇ 31.8ರಷ್ಟು. ಕೋವಿಡ್ ಪಾಸಿಟಿವಿಟಿ ದರ ಅಲ್ಲಿ ಶೇ.13.45 ರಿಂದ 15.53ಕ್ಕೆ ಹೆಚ್ಚಾಗಿದೆ. ಅಲ್ಲದೆ ಕಳೆದ ವಾರ ಕೇರಳದಲ್ಲಿ 2321 ಹೊಸ ಪ್ರಕರಣಗಳು ವರದಿಯಾಗಿವೆ. ಏ.1ಕ್ಕೆ ಅಂತ್ಯಗೊAಡ ಒಂದು ವಾರ ದೆಹಲಿಯಲ್ಲಿ 724ಪ್ರಕರಣಗಳು ವರದಿಯಾಗಿದ್ದವು. ಆದರೆ ಏಪ್ರಿಲ್ 8ರ ಹೊತ್ತಿಗೆ 826 ಹೊಸ ಪ್ರಕರಣಗಳು ವರದಿಯಾಗಿವೆ. ಪಾಸಿಟಿವಿಟಿ ದರದಲ್ಲಿ ಶೇ 0.51 ರಿಂದ 1.25ರಷ್ಟು ಹೆಚ್ಚಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

    ಭಾನುವಾರವೂ ಸಹ ಭಾರತದಾದ್ಯಂತ 1,054 ಕೊರೊನಾ ಸೋಂಕು ಪ್ರಕರಣಗಳು ದೃಢಪಟ್ಟಿದ್ದು, 29 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

  • ದೇಶದಲ್ಲಿ ಹೆಚ್ಚಾಯ್ತು ಕೊರೊನಾ ರಿಕವರಿ ರೇಟ್

    ದೇಶದಲ್ಲಿ ಹೆಚ್ಚಾಯ್ತು ಕೊರೊನಾ ರಿಕವರಿ ರೇಟ್

    ನವದೆಹಲಿ: ಕೊರೊನಾ ಸೋಂಕಿನಿಂದ ಚೇತರಿಸಿಕೊಳ್ಳಗುಣಮುಖರಾಗುತ್ತಿರುವ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲದ ವಿಶೇಷ ಅಧಿಕಾರಿ ರಾಜೇಶ್ ಭೂಷಣ್ ತಿಳಿಸಿದ್ದಾರೆ.

    ದೇಶದ 10 ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಗುಣಮುಖರಾಗುತ್ತಿರುವ ರೋಗಿಗಳ ಪ್ರಮಾಣ ಶೇ.86 ರಷ್ಟಿದೆ. ಮಹಾರಾಷ್ಟ್ರ, ತಮಿಳುನಾಡಿನಲ್ಲಿ ಇದರ ಶೇ.50 ರಷ್ಟಿದ್ದರೆ ಉಳಿದ 8 ರಾಜ್ಯಗಳಲ್ಲಿ 36ರಷ್ಟಿದೆ ಎಂದು ಸುದ್ದಿಗೋಷ್ಠಿಯಲ್ಲಿ ಭೂಷಣ್ ಅವರು ಮಾಹಿತಿ ನೀಡಿದ್ದಾರೆ.

    20 ರಾಜ್ಯದಲ್ಲಿ ಚೇತರಿಸಿಕೊಳ್ಳುತ್ತಿವವರ ಸರಾಸರಿ ದೇಶದ ಸರಾಸರಿಗಿಂತ ಹೆಚ್ಚಾಗಿದೆ. ಗುಜರಾತ್‍ನಲ್ಲಿ ಶೇ.70, ಒಡಿಶಾದಲ್ಲಿ ಶೇ.67, ಅಸ್ಸಾಂನಲ್ಲಿ ಶೇ.65, ಉತ್ತರ ಪ್ರದೇಶದಲ್ಲಿ ಶೇ.64 ರಷ್ಟಿದೆ.

    ದೇಶದಲ್ಲಿ ಕೊರೊನಾ ಪ್ರಭಾವ ಮಾರ್ಚ್ ನಿಂದ ಆರಂಭವಾಗಿದ್ದು, ಮೇ ಪ್ರಾರಂಭದಲ್ಲಿ ಶೇ.26 ರಷ್ಟು ಮಂದಿ ರೋಗಿಗಳು ಮಾತ್ರ ಚೇತರಿಸಿಕೊಂಡಿದ್ದರು. ಆದರೆ ಮೇ ಅಂತ್ಯದ ವೇಳೆಗೆ ಈ ಪ್ರಮಾಣ ಶೇ.48ಕ್ಕೇರಿತ್ತು. ಜುಲೈ 12ರ ವೇಳೆಗೆ ಶೇ.63ರನ್ನು ತಲುಪಿತ್ತು. ಮೇ 2 ರಿಂದ 30ರ ವರೆಗೂ ದೇಶದಲ್ಲಿ ಚೇತರಿಕೆಯ ಪ್ರಮಾಣಕ್ಕಿಂತ ಹೊಸ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗಿತ್ತು. ಆ ಬಳಿಕ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ ಹೆಚ್ಚಾಗಿದೆ. ಸದ್ಯ ಆ್ಯಕ್ಟಿವ್ ಸೋಂಕಿತ ಪ್ರಕರಣಗಳಿಂದ ಚೇತರಿಕೆ ಪ್ರಮಾಣ ಶೇ.1.8 ರಷ್ಟು ಅಧಿಕವಾಗಿದೆ ಎಂದು ಭೂಷಣ್ ವಿವರಿಸಿದ್ದಾರೆ.