Tag: Rajesh

  • ಮಹಿಳಾ ಪ್ರಧಾನ ಚಿತ್ರಕ್ಕೆ ಕಾಶಿಮಾ ನಾಯಕಿ

    ಮಹಿಳಾ ಪ್ರಧಾನ ಚಿತ್ರಕ್ಕೆ ಕಾಶಿಮಾ ನಾಯಕಿ

    ಸೌತ್ ಇಂಡಿಯಾ ಸಿನಿಮಾದ ಮೂಲಕ ಕನ್ನಡ ಚಿತ್ರೋದ್ಯಮದಲ್ಲಿ ಮಿಂಚಿದ್ದ ನಟಿ ಕಾಶಿಮಾ ರಫಿ (Kashima Rafi) ಇದೀಗ ಮತ್ತೊಂದು ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ರಾಜೇಶ್ ಎನ್ನುವವರು ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಸದ್ದಿಲ್ಲದೇ ಶೂಟಿಂಗ್ ಕೂಡ ಶುರುವಾಗಿದೆ.

    ಕಾಶಿಮಾ ರಫಿ ಅವರಿಗೆ ಮಹಿಳಾ ಪ್ರಧಾನ ಸಿನಿಮಾದಲ್ಲಿ ನಟಿಸಬೇಕು ಎನ್ನುವುದು ಬಹುದಿನಗಳ ಆಸೆಯಂತೆ. ಈ ಸಿನಿಮಾದ ಮೂಲಕ ಅದು ಈಡೇರಿದೆ. ಇಷ್ಟು ಬೇಗ ಇಂಥದ್ದೊಂದು ಅವಕಾಶ ನನಗೆ ಬರುತ್ತದೆ ಎಂದು ನಂಬಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.

    ಈ ಚಿತ್ರಕ್ಕೆ ಇನ್ನೂ ಟೈಟಲ್ ಇಟ್ಟಿಲ್ಲ. ಟೈಟಲ್ ಇಡದೇ ಸಿನಿಮಾದ ಚಿತ್ರೀಕರಣವನ್ನು ಶುರು ಮಾಡಿದ್ದಾರೆ ನಿರ್ದೇಶಕರು. ಈ ಚಿತ್ರದಲ್ಲಿ ಕಾಶಿಮಾ ಎರಡು ಶೇಡ್ ಇರುವಂತಹ ಪಾತ್ರವನ್ನು ಮಾಡುತ್ತಿದ್ದಾರಂತೆ. ಒಂದು ಮಹಾರಾಣಿ ಲುಕ್ ಆಗಿದ್ದರೆ, ಮತ್ತೊಂದು ಪುರಾತತ್ವಶಾಸ್ತ್ರಜ್ಞೆಯ ಪಾತ್ರವಂತೆ.

    ಈ ಸಿನಿಮಾದಲ್ಲಿ ಸಾಹಸ ಪ್ರಧಾನ ದೃಶ್ಯಗಳಿದ್ದು, ಅದಕ್ಕಾಗಿ ಅವರು ಫೈಟ್ ಕೂಡ ಕಲಿಯುತ್ತಿದ್ದಾರಂತೆ. ಜೊತೆಗೆ ಮತ್ತೊಂದು ಸಿನಿಮಾಗೂ ಅವರು ಸಹಿ ಮಾಡಿದ್ದು, ಆ ವಿಷಯವನ್ನು ಮತ್ತೆ ಹೇಳುವುದಾಗಿ ಹೇಳಿಕೊಂಡಿದ್ದಾರೆ. ಜೊತೆಗೆ ವೆಬ್ ಸರಣಿಯಲ್ಲಿ ನಟಿಸಲೂ ಇವರಿಗೆ ಆಫರ್ ಬಂದಿದೆಯಂತೆ.

    ಸೌಂದರ್ಯ ಮತ್ತು ನಟನೆಯ ಮೂಲಕ ಎಲ್ಲರ ಗಮನ ಸೆಳೆದಿರುವ  ಕಾಶಿಮಾ, ಈ ಹಿಂದೆ ಟೆಂಪರ್ ಮತ್ತು ಸೌಂತ್ ಇಂಡಿಯನ್ ಹೀರೋ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ. ಎರಡೇ ಸಿನಿಮಾದ ಮೂಲಕ ಭರವಸೆಯ ನಟಿಯೂ ಆಗಿದ್ದಾರೆ.

  • ಪೊಲೀಸ್ ಠಾಣೆಯಲ್ಲಿ ಗ್ರಂಥಾಲಯ : ಸಿಂಗಂ ಖ್ಯಾತಿಯ ಅಧಿಕಾರಿ ರಾಜೇಶ್ ಕೆಲಸಕ್ಕೆ ಮೆಚ್ಚುಗೆ

    ಪೊಲೀಸ್ ಠಾಣೆಯಲ್ಲಿ ಗ್ರಂಥಾಲಯ : ಸಿಂಗಂ ಖ್ಯಾತಿಯ ಅಧಿಕಾರಿ ರಾಜೇಶ್ ಕೆಲಸಕ್ಕೆ ಮೆಚ್ಚುಗೆ

    ಸಾಮಾನ್ಯವಾಗಿ ಪೊಲೀಸ್ ಠಾಣೆಯಲ್ಲಿ ಬಿಗುವಿನ ವಾತಾವರಣವಿರುತ್ತದೆ, ವಿನಾಕಾರಣ ಕೂರಿಸ್ತಾರೆ. ಅಲ್ಲಿ ಬೈಗಳಗಳ ಹೊರತಾಗಿ ಮತ್ತೇನೂ ಕೇಳುವುದಿಲ್ಲ ಎನ್ನುವುದು ರೂಢಿಗತ ಮಾತು. ಆದರೆ, ಬೆಂಗಳೂರಿನ ಠಾಣೆಯೊಂದರಲ್ಲಿ ದೂರು ಕೊಡಲು ಬಂದವರಿಗಾಗಿಯೇ ಸುಸಜ್ಜಿತ ಗ್ರಂಥಾಲಯವನ್ನು ಶುರು ಮಾಡಿದ್ದಾರೆ, ಅಲ್ಲಿನ ಠಾಣಾಧಿಕಾರಿ ಎಲ್.ವೈ ರಾಜೇಶ್. ನಿನ್ನೆಯಷ್ಟೇ ಆ ಲೈಬ್ರರಿ ಉದ್ಘಾಟನೆಯಾಗಿದ್ದು, ರಾಜೇಶ್ ಅವರ ಕೆಲಸಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ದೂರು ಕೊಡಲು ಠಾಣೆಗೆ ಬಂದಾಗ, ಅಲ್ಲಷ್ಟು ಹೊತ್ತು ಕಳೆಯಬೇಕಾದ ಸಂದರ್ಭ ಬರುವುದು ಸಹಜ. ಅಧಿಕಾರಿಗಳ ಮೀಟಿಂಗ್, ಕೆಲಸದ ಒತ್ತಡದ ಕಾರಣಕ್ಕಾಗಿಯೇ ದೂರುದಾರರು ಕಾಯಬೇಕಾದ ಅನಿವಾರ್ಯತೆ ಇದ್ದೇ ಇರುತ್ತದೆ. ಅವರ ಸಮಯವನ್ನು ಹಾಳು ಮಾಡಬಾರದು ಎನ್ನುವ ಕಾರಣಕ್ಕಾಗಿ ರಾಜೇಶ್ ಅವರು ತಮ್ಮ ಠಾಣೆಯಲ್ಲಿ ಗ್ರಂಥಾಲಯ ಶುರು ಮಾಡಿದ್ದಾರೆ. ಕನ್ನಡದ ಹೆಸರಾಂತ ಲೇಖಕರ ಪುಸ್ತಕಗಳ ಜೊತೆ ಉದಯೋನ್ಮುಖ ಲೇಖಕರ ಪುಸ್ತಕಗಳನ್ನು ಲೈಬ್ರರಿಯಲ್ಲಿಟ್ಟು ಓದುವ ಅಭಿರುಚಿಯನ್ನು ಹೆಚ್ಚಿಸುತ್ತಿದ್ದಾರೆ. ದೂರು ಕೊಡಲು ಬಂದವರು ಗಂಟೆಗಟ್ಟಲೆ ಕಾಯಬೇಕಾದ ಸಂದರ್ಭದಲ್ಲಿ  ಪುಸ್ತಕಗಳನ್ನು ಓದಲಿ ಎಂಬುದು ಇದರ ಹಿಂದಿರುವ ಉದ್ದೇಶವಾದರೂ, ಕ್ರೈಮ್ ಸ್ಪಾಟ್ ಅನ್ನು ನಾಲೆಡ್ಜ್ ಹಬ್ ಆಗಿಸಿದ  ಪ್ರಯತ್ನಕ್ಕೆ ರಾಜೇಶ್ ಅವರಿಗೆ ಪ್ರಶಂಸೆಯ ಸುರಿಮಳೆಯೇ ಆಗುತ್ತಿದೆ. ಇದನ್ನೂ ಓದಿ: ಪುನೀತ್ ಬಯೋಗ್ರಫಿ ‘ನೀನೇ ರಾಜಕುಮಾರ’ 4ನೇ ಆವೃತ್ತಿ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ ಕುಮಾರ

    ಬೆಂಗಳೂರಿನ ಆಗ್ನೇಯ ವಲಯ ವ್ಯಾಪ್ತಿಯ ಬಂಡೇಪಾಳ್ಯ ಪೊಲೀಸ್ ಠಾಣೆಯ ಎಲ್.ವೈ. ರಾಜೇಶ್ ಈ ರೀತಿಯ ಕೆಲಸಗಳನ್ನು ಮಾಡುತ್ತಿರುವುದು ಹೊಸದೇನೂ ಅಲ್ಲ. ತಮ್ಮ ಠಾಣೆಯನ್ನು ಜನಸ್ನೇಹಿ ಠಾಣೆಯನ್ನಾಗಿಸಿದ್ದಾರೆ. ಕಷ್ಟ ಅಂತ ಪೊಲೀಸ್ ಸ್ಟೇಶನ್ ಗೆ ಬಂದವರಿಂದ ಫೀಡ್ ಬ್ಯಾಕ್ ಕೂಡ ಪಡೆಯುವ ವ್ಯವಸ್ಥೆ ಮಾಡಿದ್ದಾರೆ. ತಮಗೆ ಯಾರಿಂದ ತೊಂದರೆ ಆಯಿತು ಎಂದು ಮುಕ್ತವಾಗಿ ಹೇಳಿಕೊಳ್ಳುವಂತಹ ವಾತಾವರಣವನ್ನೂ ಸೃಷ್ಟಿ ಮಾಡಿದ್ದಾರೆ. ಜೊತೆಗೆ ತಮ್ಮ ಗೆಳೆಯರ ತಂಡದೊಂದಿಗೆ ನಿರ್ಗತಿಕರಿಗೆ, ಬೀದಿಯಲ್ಲಿ ಮಲಗಿದವರನ್ನು ಗುರುತಿಸಿ, ಚಳಿಗಾಲದಲ್ಲಿ ರಗ್ಗು, ಸ್ವೇಟರ್ ಕೊಡುವ ಕಾರ್ಯಕ್ಕೂ ಚಾಲನೆ ನೀಡಿದ್ದಾರೆ.

    ನಿನ್ನೆಯಷ್ಟೇ ಬಂಡೇಪಾಳ್ಯ ಠಾಣೆಯಲ್ಲಿ ಅವರ ಕನಸಿನ ಗ್ರಂಥಾಯಲ ಶುರುವಾಗಿದೆ. ಡಿಸಿಪಿ ಸಿ.ಕೆ ಬಾಬಾ, ಎಸಿಪಿ ಲಕ್ಷ್ಮಿನಾರಾಯಣ್, ವಿಜಯ ಕರ್ನಾಟಕ ಪತ್ರಿಕೆ ಸಂಪಾದಕ ಸುದರ್ಶನ ಚನ್ನಂಗಿಹಳ್ಳಿ, ಚಿತ್ರಸಾಹಿತಿ ನಾಗೇಂದ್ರ ಪ್ರಸಾದ್  ಮತ್ತು ಯುವ ಉದ್ಯಮಿ ವೀರಕಪುತ್ರ ಶ್ರೀನಿವಾಸ್ ಈ ಸಂದರ್ಭದಲ್ಲಿ ಹಾಜರಿದ್ದು ಶುಭ ಹಾರೈಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • Bigg Boss 9- ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ದಿಢೀರ್ ಅಂತ ರಾಜೇಶ್ ಸಾವು: ಬಿಗ್ ಬಾಸ್ ಮನೆಗೆ ಬರ್ತಾರಾ ನಟ ಸುನೀಲ್?

    Bigg Boss 9- ‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ದಿಢೀರ್ ಅಂತ ರಾಜೇಶ್ ಸಾವು: ಬಿಗ್ ಬಾಸ್ ಮನೆಗೆ ಬರ್ತಾರಾ ನಟ ಸುನೀಲ್?

    ನ್ನಡದ ಫೇಮಸ್ ಧಾರಾವಾಹಿಯ (Serial) ಬಹುಮುಖ್ಯ ಪಾತ್ರವನ್ನು ದಿಢೀರ್ ಅಂತ ಸಾಯಿಸಲಾಗಿದೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕೆಂಡಸಂಪಿಗೆ (Kendasampige) ಧಾರಾವಾಹಿ ನೋಡಿದವರಿಗೆ ರಾಜೇಶ್ ಪಾತ್ರವನ್ನು ಮರೆಯುವುದಕ್ಕೆ ಸಾಧ್ಯವೇ ಇಲ್ಲ. ಕಥಾ ನಾಯಕಿಯ ತಮ್ಮನಾಗಿ ರಾಜೇಶ್ (Rajesh) ಫೇಮಸ್. ಈ ಪಾತ್ರದ ಮೂಲಕ ಸಾಕಷ್ಟು ಕುತೂಹಲ ಮೂಡಿಸಿದ್ದ ಧಾರಾವಾಹಿ ದಿಢೀರ್ ಅಂತ ರಾಜೇಶ್ ನನ್ನು ಬೀಳ್ಕೊಟ್ಟಿದೆ.

    ಕೆಂಡಸಂಪಿಗೆ ಕಥಾ ನಾಯಕಿಯ ಜೊತೆ ಸದಾ ಇರುತ್ತಿದ್ದ ರಾಜೇಶ್ ಪಾತ್ರವನ್ನು ಅಚ್ಚರಿ ಎನ್ನುವಂತೆ ಸಾಯಿಸಲಾಗಿದ್ದು, ಇದಕ್ಕೆ ಕಾರಣ ಆ ಹುಡುಗನನ್ನು ಬಿಗ್ ಬಾಸ್ (Bigg Boss Season 9) ಮನೆಗೆ ಕಳುಹಿಸುವ ಪ್ಲ್ಯಾನ್ ಮಾಡಲಾಗಿದೆಯಂತೆ. ಹಾಗಾಗಿ ಬೇಗನೆ ಪಾತ್ರವನ್ನು ಸಾಯಿಸಿ, ತರಾತುರಿಯಲ್ಲಿ ಈ ಪಾತ್ರವನ್ನು ಮಾಡುತ್ತಿದ್ದ ಸುನೀಲ್ (Sunil) ನನ್ನು ಬಿಗ್ ಬಾಸ್ ಸೀಸನ್ 9 ಕ್ಕೆ ಕಳುಹಿಸಿ ಕೊಡಲಾಗಿದೆ ಎನ್ನುವ ಮಾಹಿತಿ ಇದೆ. ಅದು ನಾಳೆ ಅಧಿಕೃತಗೊಳ್ಳಲಿದೆ. ಇದನ್ನೂ ಓದಿ:‘ಬಿಗ್ ಬಾಸ್’ ಮನೆಗೆ ಬ್ರಹ್ಮಾಂಡ ಗುರೂಜಿ ಹೋದರೆ ಮಜವಾಗಿರತ್ತೆ ಅಂತಿದ್ದಾರೆ ನೆಟ್ಟಿಗರು

    ಶನಿ (Shani) ಧಾರಾವಾಹಿಯ ಮೂಲಕ ಫೇಮಸ್ ಆದವರು ಸುನೀಲ್. ಈ ಧಾರಾವಾಹಿಯ ಮೂಲಕ ಸಾಕಷ್ಟು ಅಭಿಮಾನಿ ಬಳಗ ಹೊಂದಿರುವ ಸುನೀಲ್, ಈ ಬಾರಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನುವ ಸುದ್ದಿ ಹಲವು ದಿನಗಳಿಂದ ಚಾಲ್ತಿಯಲ್ಲಿತ್ತು. ಇದೀಗ ಅವರು ನಿರ್ವಹಿಸುತ್ತಿದ್ದ ರಾಜೇಶ್ ಪಾತ್ರವನ್ನು ಸಾಯಿಸಿದ್ದಕ್ಕಾಗಿ ಸುದ್ದಿ ಮಹತ್ವ ಪಡೆದುಕೊಂಡಿದೆ. ನಾಳೆಯಿಂದ ಬಿಗ್ ಬಾಸ್ ಸೀಸನ್ 9 ಶುರುವಾಗಲಿದ್ದು, ಆ ಮನೆಯಲ್ಲಿ ಸುನೀಲ್ ಇರುತ್ತಾರಾ ಕಾದು ನೋಡಬೇಕು.

    ಬಿಗ್ ಬಾಸ್ ಸೀಸನ್ 9 ನಾಳೆಯಿಂದ ಶುರುವಾಗುತ್ತಿದ್ದು, ಈಗಾಗಲೇ ಹಲವು ಅಚ್ಚರಿಯ ಹೆಸರುಗಳು ಕೇಳಿ ಬಂದಿವೆ. ನಟಿ ಪ್ರೇಮಾ (Prema), ನವೀನ್ ಕೃಷ್ಣ ಸೇರಿದಂತೆ ಹಲವಾರು ನಟ ನಟಿಯರ ಹೆಸರು ಈ ಪಟ್ಟಿಯಲ್ಲಿವೆ. ಅಲ್ಲದೇ, ಬಿಗ್ ಬಾಸ್ ಓಟಿಟಿಯ ನಾಲ್ಕು ಸ್ಪರ್ಧಿಗಳು ಕೂಡ ಹೊಸ ಬಿಗ್ ಬಾಸ್ ಮನೆಯನ್ನು ಸೇರಿಕೊಳ್ಳುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಅಭಿಮಾನಿಯ ಅಭಿಮಾನದ ನೆಲದಲ್ಲಿ ರಾಜೇಶ್ ಅಂತ್ಯಕ್ರಿಯೆ

    ಅಭಿಮಾನಿಯ ಅಭಿಮಾನದ ನೆಲದಲ್ಲಿ ರಾಜೇಶ್ ಅಂತ್ಯಕ್ರಿಯೆ

    ನ್ನಡ ಸಿನಿಮಾ ರಂಗದ ಹಿರಿಯ ನಟ ರಾಜೇಶ್ ಅವರ ಅಂತ್ಯಕ್ರಿಯೆ ತುಮಕೂರು ರಸ್ತೆಯ, ಬೆಂಗಳೂರು ಉತ್ತರ ತಾಲೂಕಿನ ಗೋವಿಂದಪುರದಲ್ಲಿ ನಡೆಯಿತು. ಇದಕ್ಕೂ ಮುನ್ನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸರಕಾರ ಅವರಿಗೆ ಪೊಲೀಸ್ ಗೌರವ ಸಲ್ಲಿಸಿತು. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ನಟಿ ತಾರಾ, ಸುಮಲತಾ ಅಂಬರೀಶ್, ಗಿರಿಜಾ ಲೋಕೇಶ್, ನಟರಾದ ಶಿವರಾಜ್ ಕುಮಾರ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಸಾಕಷ್ಟು ತಾರೆಯರು ಅಂತಿಮ ದರ್ಶನದಲ್ಲಿ ಭಾಗಿಯಾಗಿದ್ದರು. ಇಡೀ ಸಿನಿಮಾ ರಂಗವೇ ಹಿರಿಯ ನಟನ ಅಂತಿಮ ದರ್ಶನಕ್ಕೆ ಆಗಮಿಸಿತ್ತು.  ಇದನ್ನೂ ಓದಿ : ಶತಕದ ಸಂಭ್ರಮದಲ್ಲಿ ನೆನಪಿರಲಿ ಪ್ರೇಮ್


    ರವೀಂದ್ರ ಕಲಾಕ್ಷೇತ್ರದಿಂದ ಗೋವಿಂದಪುರಕ್ಕೆ ಪಾರ್ಥೀವ ಶರೀರವನ್ನು ಅಂಬ್ಯುಲೆನ್ಸ್ ನಲ್ಲಿ ಕೊಂಡೊಯ್ಯಲಾಯಿತು. ರಾಜೇಶ್ ಅವರ ಅಪ್ಪಟ ಅಭಿಮಾನಿ ಸಿದ್ಧಲಿಂಗಯ್ಯ ನೀಡಿದ ಹತ್ತು ಗುಂಟೆಯ ತೋಟದಲ್ಲಿ ಕಲಾತಪಸ್ವಿ ಮಣ್ಣಲ್ಲಿ ಮಣ್ಣಾದರು. ಅಪಾರ ಅಭಿಮಾನಿಗಳು, ಸಿನಿಮಾ ರಂಗದ ಗಣ್ಯರು, ರಾಜಕೀಯ ಮುಖಂಡರು ಹಾಗೂ ರಾಜೇಶ್ ಕುಟುಂಬ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿತ್ತು. ಇದನ್ನೂ ಓದಿ : ನಟ ರಾಜೇಶ್ ನಿಧನಕ್ಕೆ ವಿವಿಧ ಕ್ಷೇತ್ರಗಳ ಗಣ್ಯರ ಸಂತಾಪ


    ಅಂತಿಮ ಪೂಜಾ ವಿಧಾನವನ್ನು ರಾಜೇಶ್ ಅವರ ಹಿರಿಯ ಪುತ್ರ ಡಾ.ಸಂದಾನಂದ್ ನೆರವೇರಿಸಿದರು. ಮತ್ತೋರ್ವ ಪುತ್ರ ಧನಂಜಯ್, ರಾಜೇಶ್ ಅವರ ಅಳಿಯ ಅರ್ಜುನ್ ಸರ್ಜಾ ಕೂಡ ಅಂತಿಮ ಸಂಸ್ಕಾರದಲ್ಲಿ ಭಾಗಿಯಾಗಿದ್ದರು.

  • ಹಿರಿಯ ನಟ ರಾಜೇಶ್ ಅವರ ಅಪರೂಪದ ಫೋಟೋಗಳು

    ಹಿರಿಯ ನಟ ರಾಜೇಶ್ ಅವರ ಅಪರೂಪದ ಫೋಟೋಗಳು

    1964ರಲ್ಲಿ ತೆರೆಕಂಡ ವೀರ ಸಂಕಲ್ಪ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ರಾಜೇಶ್ ಅವರು ಆನಂತರ ನೂರಾರು ಚಿತ್ರಗಳಿಗೆ ಬಣ್ಣ ಹಚ್ಚಿದರು. ರಾಜೇಶ್ ಅವರ ಅಪರೂಪದ ಫೋಟೋಗಳನ್ನು ಸೆರೆ ಹಿಡಿದಿದ್ದಾರೆ ಹಿರಿಯ ಛಾಯಾಗ್ರಾಹಕರಾದ ಭವಾನಿ ಲಕ್ಷ್ಮೀ ನಾರಾಯಣ ಮತ್ತು ಪ್ರಗತಿ ಅಶ್ವತ್ಥ್ ನಾರಾಯಣ್. ಆ ಚಿತ್ರಗಳು ಇಲ್ಲಿವೆ.  ಇದನ್ನೂ ಓದಿ : ರಾಜೇಶ್ ನಟನೆಯ ಸೂಪರ್ ಹಿಟ್ ಹಾಡುಗಳಿವು

    ಯಲ್ಲಪ್ಪ ಮತ್ತು ಮುನಿಯಮ್ಮ ದಂಪತಿಯ ಪುತ್ರ. ಜನ್ಮನಾಮ ಶ್ರೀರಾಮ್. ರಾಮನವಮಿಯಂದು ರಾಜೇಶ್ ಹುಟ್ಟಿದ್ದ ಕಾರಣಕ್ಕಾಗಿ ರಾಜೇಶ್ ಅವರನ್ನು ತಂದೆ ತಾಯಿ ಶ್ರೀರಾಮ್ ಎಂದೇ ಕರೆಯುತ್ತಿದ್ದರು. ರಂಗಭೂಮಿ ಮತ್ತು ಸಿನಿಮಾ ರಂಗಕ್ಕೆ ಬರುವ ಮುನ್ನ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಹಂಗಾಮಿ ಬೆರಳಚ್ಚುಗಾರನಾಗಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನ ಆಹಾರ ಇಲಾಖೆಯಲ್ಲೂ ಕೆಲ ತಿಂಗಳು ಕಾಲ ಕೆಲಸ ಮಾಡಿದ್ದಾರೆ.  ಇದನ್ನೂ ಓದಿ : ಮುನಿ ಚೌಡಪ್ಪ (ವಿದ್ಯಾಸಾಗರ್) ಹೆಸರು ರಾಜೇಶ್ ಆಗಿದ್ದು ಹೇಗೆ?

    ರಾಜೇಶ್ ನಟರು ಮಾತ್ರವಲ್ಲ, ಬರಹಗಾರ ಕೂಡ ಆಗಿದ್ದರು. ನಿರುದ್ಯೋಗಿ ಬಾಳು, ಸ್ವಪ್ನಜೀವಿ, ರಕ್ತರಾತ್ರಿ, ದೇವಮಾನ ಸೇರಿದಂತೆ ಸಾಕಷ್ಟು ನಾಟಕಗಳನ್ನು ಅವರು ವಿದ್ಯಾಸಾಗರ್ ಹೆಸರಿನಲ್ಲಿ ಬರೆದಿದ್ದಾರೆ. ಕನ್ನಡ ಸಿನಿಮಾ ರಂಗದ ಅತ್ಯಂತ ಶಿಸ್ತಿನ ನಟ, ಜಂಟಲ್ ಮ್ಯಾನ್ ಕಲಾವಿದ ಮತ್ತು ಶುಭ್ರ ಶ್ವೇತವಸ್ತ್ರಧಾರಿ ನಟನೆಂದೇ ರಾಜೇಶ್ ಫೇಮಸ್. ಸಾರ್ವಜನಿಕವಾಗಿ ಎಂದಿಗೂ ಅವರು ಅಶಿಸ್ತಿನಿಂದ ಕಾಣಿಸಿಕೊಂಡವರಲ್ಲ. ಇದನ್ನೂ ಓದಿ : ರಾಜೇಶ್ ಅವರ ಕೊನೆಯ ಸಿನಿಮಾದ ಎಕ್ಸ್‌ಕ್ಲೂಸಿವ್‌ ಫೋಟೋಸ್, ಮಾಹಿತಿ


    1964ರಲ್ಲಿ ತೆರೆಕಂಡ ವೀರ ಸಂಕಲ್ಪ ಇವರ ಮೊದಲ ಸಿನಿಮಾ. ಅಂದಿನ ಪ್ರಸಿದ್ಧ ನಿರ್ದೇಶಕರಾದ ಹುಣಸೂರು ಕೃಷ್ಣಮೂರ್ತಿಯವರು ವಿದ್ಯಾಸಾಗರ್ ಎಂಬ ಹೆಸರಿದ್ದ ರಾಜೇಶ್ ಅವರನ್ನು ‘ವೀರ ಸಂಕಲ್ಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದರು.
    ನಮ್ಮ ಊರು , ಗಂಗೆ ಗೌರಿ , ಸತೀ ಸುಕನ್ಯ , ಬೆಳುವಲದ ಮಡಿಲಲ್ಲಿ , ಕಪ್ಪು ಬಿಳುಪು , ಬೃಂದಾವನ , ಬೋರೆ ಗೌಡ ಬೆಂಗಳೂರಿಗೆ ಬಂದ , ಮರೆಯದ ದೀಪಾವಳ , ಪ್ರತಿಧ್ವನಿ , ಕಾವೇರಿ , ದೇವರ ಗುಡಿ , ಬದುಕು ಬಂಗಾರವಾಯ್ತು , ಸೊಸೆ ತಂದ ಸೌಭಾಗ್ಯ ಸೇರಿದಂತೆ 175ಕ್ಕೂ ಹೆಚ್ಚು ಚಿತ್ರಗಳಲ್ಲಿ ನಾಯಕರಾಗಿ, ಪೋಷಕ ಪಾತ್ರಧಾರಿಯಾಗಿ ಬಣ್ಣ ಹಚ್ಚಿದ್ದಾರೆ.
    ‘ಇವನೇ ನನ್ನ ನಲ್ಲ’, ‘ಎಂದೆಂದೂ ಹೀಗೆ ನಗಬೇಕು’, ‘ನೋಟಕೆ ನೋಟ ಮಸೆಯೋನೆ’, ‘ನಂಬಿ ಯಾರನೋ ಮೈಗೆ ಮೈ ಸೋಕಿದಾಗ’, ‘ಎಲ್ಲರ ಕಾಯೋ ದೇವರೆ ನೀನು’, ‘ನಾನೇ ಎಂಬ ಭಾವ ನಾಶವಾಯಿತೋ’, ‘ಈ ದೇಶ ಚೆನ್ನ ಈ ಮಣ್ಣು ಚಿನ್ನ’, ‘ಕಂಗಳು ವಂದನೆ ಹೇಳಿವೆ’ ಮುಂತಾದ ಜನಪ್ರಿಯ ಹಾಡುಗಳನ್ನು ನೆನೆದಾಗ ತಟ್ಟನೆ ರಾಜೇಶ್ ಕಣ್ಮುಂದೆ ಬಂದು ನಿಲ್ಲುತ್ತಾರೆ.

    ಫೋಟೋ ಕೃಪೆ : ಭವಾನಿ ಲಕ್ಷ್ಮೀ ನಾರಾಯಣ ಮತ್ತು ಪ್ರಗತಿ ಅಶ್ವತ್ಥ್ ನಾರಾಯಣ್.

  • ರಾಜೇಶ್ ನಟನೆಯ ಸೂಪರ್ ಹಿಟ್ ಹಾಡುಗಳಿವು

    ರಾಜೇಶ್ ನಟನೆಯ ಸೂಪರ್ ಹಿಟ್ ಹಾಡುಗಳಿವು

    ಕಲಾತಪಸ್ವಿ ರಾಜೇಶ್ ಅವರ ಸಿನಿಮಾಗಳಷ್ಟೇ ಅವರ ನಟನೆಯ ಹಾಡುಗಳು ಕೂಡ ಸೂಪರ್ ಹಿಟ್. ಕೆಲ ಚಿತ್ರಗಳಂತೂ ಆ ಹಾಡುಗಳಿಂದಾಗಿಯೇ ಇವತ್ತಿಗೂ ಜನರ ಮನಸ್ಸಲ್ಲಿ ಉಳಿದುಕೊಂಡಿವೆ. ಇದನ್ನೂ ಓದಿ : ಮುನಿ ಚೌಡಪ್ಪ (ವಿದ್ಯಾಸಾಗರ್) ಹೆಸರು ರಾಜೇಶ್ ಆಗಿದ್ದು ಹೇಗೆ?


    ಸೊಸೆ ತಂದ ಸೌಭಾಗ್ಯ ಚಿತ್ರದ ‘ರವಿವರ್ಮನ ಕುಂಚದ ಕಲೆ, ಬಲೆ.’, ಮುಗಿಯದ ಕಥೆ ಸಿನಿಮಾದ ‘ಕಂಗಳು ವಂದನೆ ಹೇಳಿವೆ’, ದೇವರು ಗುಡಿ ಚಿತ್ರದ ‘ನಾ ಬಯಸಿದ ಭಾಗ್ಯ’, ಪಿತಾಮಹ ಸಿನಿಮಾದ ‘ಮರೆಯದಿರು ಆ ಶಕ್ತಿಯ, ಮರೆಯದಿರು ಮಾನವ’, ಇದನ್ನೂ ಓದಿ : ರಾಜೇಶ್ ಅವರ ಕೊನೆಯ ಸಿನಿಮಾದ ಎಕ್ಸ್‌ಕ್ಲೂಸಿವ್‌ ಫೋಟೋಸ್, ಮಾಹಿತಿ

    ಬೆಳುವಲದ ಮಡಿಲಿಲ್ಲ ಚಿತ್ರದ ‘ಬೆಳುವಲದ ಮಡಿಲಲ್ಲಿ ಬೆವರ ಹನಿ ಬಿದ್ದಾಗ’ ಟೈಟಲ್ ಟ್ರ್ಯಾಕ್, ಕಲಿಯುವ ಸಿನಿಮಾದ ‘ಮಾದೇಶ್ವರ’ ಹೀಗೆ ಸಾಕಷ್ಟು ಸೂಪರ್ ಹಿಟ್ ಹಾಡುಗಳಲ್ಲಿ ರಾಜೇಶ್ ಅವರು ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ : ರವೀಂದ್ರ ಕಲಾಕ್ಷೇತ್ರದಲ್ಲಿ ನಟ ರಾಜೇಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ


    ‘ಇವನೇ ನನ್ನ ನಲ್ಲ’, ‘ಎಂದೆಂದೂ ಹೀಗೆ ನಗಬೇಕು’, ‘ನೋಟಕೆ ನೋಟ ಮಸೆಯೋನೆ’, ‘ನಂಬಿ ಯಾರನೋ ಮೈಗೆ ಮೈ ಸೋಕಿದಾಗ’, ‘ಎಲ್ಲರ ಕಾಯೋ ದೇವರೆ ನೀನು’, ‘ನಾನೇ ಎಂಬ ಭಾವ ನಾಶವಾಯಿತೋ’, ‘ಈ ದೇಶ ಚೆನ್ನ ಈ ಮಣ್ಣು ಚಿನ್ನ’, ‘ಕಂಗಳು ವಂದನೆ ಹೇಳಿವೆ’ ಮುಂತಾದ ಜನಪ್ರಿಯ ಹಾಡುಗಳನ್ನು ನೆನೆದಾಗ ತಟ್ಟನೆ ರಾಜೇಶ್ ಕಣ್ಮುಂದೆ ಬಂದು ನಿಲ್ಲುತ್ತಾರೆ.

  • ರಾಜೇಶ್ ಅವರ ಕೊನೆಯ ಸಿನಿಮಾದ ಎಕ್ಸ್‌ಕ್ಲೂಸಿವ್‌ ಫೋಟೋಸ್, ಮಾಹಿತಿ

    ರಾಜೇಶ್ ಅವರ ಕೊನೆಯ ಸಿನಿಮಾದ ಎಕ್ಸ್‌ಕ್ಲೂಸಿವ್‌ ಫೋಟೋಸ್, ಮಾಹಿತಿ

    ನ್ನಡದ ಹಿರಿಯ ಚೇತನ, ಕಲಾತಪಸ್ವಿ ರಾಜೇಶ್ ಅವರ ನಿಧನ ಕನ್ನಡ ಸಿನಿಮಾ ರಂಗಕ್ಕೆ ತುಂಬಲಾರದ ನಷ್ಟ. 88ರ ವಯಸ್ಸಿನಲ್ಲೂ ಅವರ ನಟನಾ ಉತ್ಸಾಹ ತಗ್ಗಿರಲಿಲ್ಲ. ಕಳೆದ ವರ್ಷವಷ್ಟೇ ಅವರು ಶ್ರೀನಿ ನಿರ್ದೇಶನ ಮಾಡಿ ನಟಿಸಿರುವ ಓಲ್ಡ್ ಮಾಂಕ್ ಚಿತ್ರದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಈ ಕುರಿತು ನಿರ್ದೇಶಕ ಶ್ರೀನಿ ಪಬ್ಲಿಕ್ ಟಿವಿ ಡಿಜಿಟಲ್ ಜತೆ ಮಾತನಾಡಿ, ಅವರೊಂದಿಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ರವೀಂದ್ರ ಕಲಾಕ್ಷೇತ್ರದಲ್ಲಿ ನಟ ರಾಜೇಶ್ ಅಂತಿಮ ದರ್ಶನಕ್ಕೆ ವ್ಯವಸ್ಥೆ

    ನೆಗಟಿವ್ ಪಾತ್ರ ಮಾಡಲ್ಲ
    ನಿರ್ದೇಶಕ ಶ್ರೀನಿ ಅವರು ರಾಜೇಶ್ ಅವರನ್ನು ಭೇಟಿ ಮಾಡಲು ಮನೆಗೆ ಹೋದಾಗ, ಮೊದಲು ರಾಜೇಶ್ ಕೇಳಿದ್ದು ತಮ್ಮದು ಯಾವ ರೀತಿಯ ಪಾತ್ರ? ಎಂದು. ಕಥೆ ಹೇಳಿದ ಮೇಲೆ, ನಾನು ಯಾವುದೇ ಕಾರಣಕ್ಕೂ ನೆಗೆಟಿವ್ ರೀತಿಯ ಪಾತ್ರ ಮಾಡಲಾರೆ ಎಂದು ಬಿಟ್ಟಿದ್ದರಂತೆ. ಈ ಸಮಾಜಕ್ಕೆ ಕೆಟ್ಟ ಸಂದೇಶ ಹೋಗುವಂತಹ ಕ್ಯಾರೆಕ್ಟರ್ ನಲ್ಲಿ ನಾನು ನಟಿಸಲಾರೆ ಎಂದಿದ್ದರು ರಾಜೇಶ್. ಅಷ್ಟರ ಮಟ್ಟಿಗೆ ಅವರು ಪಾತ್ರದ ಬಗ್ಗೆ ಎಚ್ಚರಿಕೆ ತಗೆದುಕೊಂಡಿದ್ದರು.  ಇದನ್ನೂ ಓದಿ : ಕಲಾ ತಪಸ್ವಿ ರಾಜೇಶ್‌ ವಿಧಿವಶ

    ನೆನಪಿನ ಶಕ್ತಿ ಅದ್ಭುತ
    ಈ ಇಳಿ ವಯಸ್ಸಿನಲ್ಲೂ ರಾಜೇಶ್ ಅವರು ಅದ್ಭುತ ನೆನಪಿನ ಶಕ್ತಿಯನ್ನು ಹೊಂದಿದ್ದರು ಎಂದು ಶ್ರೀನಿ ನೆನಪಿಸಿಕೊಳ್ಳುತ್ತಾರೆ. “ರಾಜೇಶ್ ಅವರ ಪಾತ್ರ ಅತಿಥಿಯಾಗಿದ್ದರೂ, ದೊಡ್ಡ ದೊಡ್ಡ ಡೈಲಾಗ್ ಗಳನ್ನು ಬರೆದಿದ್ದೆ. ಅವರದ್ದು ಅದ್ಭುತ ಮೆಮರಿ ಪವರ್. ಉದ್ದನೆಯ ಡೈಲಾಗ್ ಹೇಳಿದ ತಕ್ಷಣವೇ ಪಟ ಪಟ ಅಂತ ಹೇಳಿ ಬಿಡುತ್ತಿದ್ದರು. ಅದೆಷ್ಟೇ ದೊಡ್ಡ ಸಂಭಾಷಣೆ ಇದ್ದರೂ ಕ್ಷಣ ಮಾತ್ರದಲ್ಲೇ ತಯಾರಿ ಆಗುತ್ತಿದ್ದರು” ಎಂದರು ಶ್ರೀನಿ. ಇದನ್ನೂ ಓದಿ: ಬೈ ಟು ಲವ್ ಹೀರೋ ಧನ್ವೀರ್ ಮೇಲೆ ದೂರು ದಾಖಲಿಸಿದ ಅಭಿಮಾನಿ

    ಹೀಗಿಯೇ ಗೆಟಪ್ ಇರಬೇಕು ಅಂತ ತಾಕೀತು
    ರಾಜೇಶ್ ಅವರಿಗೆ ನಿರ್ದೇಶಕ ಶ್ರೀನಿ ಓಲ್ಡ್ ಮಾಂಕ್ ಸಿನಿಮಾದ ಕಥೆ ಹೇಳಿದ ಮೇಲೆ, ತಕ್ಷಣವೇ ಪಾತ್ರದಲ್ಲಿ ತಲ್ಲೀಣರಾದರಂತೆ ಹಿರಿಯ ಜೀವ. ಪಾತ್ರಕ್ಕೆ ಇಂಥದ್ದೇ ಗೆಟಪ್ ಇರಬೇಕು, ಲುಕ್ಸ್ ಕೂಡ ಹೀಗಿಯೇ ಆಗಿರಬೇಕು. ಅದಕ್ಕೆ ಕಾಸ್ಟ್ಯೂಮ್ ಈ ರೀತಿಯಲ್ಲಿ ಹೊಂದಾಣಿಕೆ ಆಗಬೇಕು ಎಂದು ತಮ್ಮ ಪಾತ್ರದ ಬಗ್ಗೆ ತಾವೇ ಚಹರಿ ಹೇಳುವ ಮೂಲಕ ಸ್ವತಃ ನಿರ್ದೇಶಕರನ್ನೇ ಅಚ್ಚರಿಗೆ ದೂಡಿದ್ದರಂತೆ ರಾಜೇಶ್.

  • ಕಲಾ ತಪಸ್ವಿ ರಾಜೇಶ್‌ ವಿಧಿವಶ

    ಕಲಾ ತಪಸ್ವಿ ರಾಜೇಶ್‌ ವಿಧಿವಶ

    ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿರಿಯ ನಟ, ಕಲಾತಪಸ್ವಿ ರಾಜೇಶ್(89) ವಿಧಿವಶರಾಗಿದ್ದಾರೆ.

    ಕಿಡ್ನಿ ವೈಫಲ್ಯ, ತೀವ್ರ ಉಸಿರಾಟ ಸಮಸ್ಯೆಯಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ರಾಜೇಶ್‌ ಇಂದು ಮುಂಜಾನೆ ಮೃತಪಟ್ಟಿದ್ದಾರೆ.

    ಕೆಲ ದಿನಗಳಿಂದ ರಾಜೇಶ್‌ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. 150ಕ್ಕೂ ಹೆಚ್ಚು ಚಿತ್ರಗಳಲ್ಲಿ ರಾಜೇಶ್ ಅಭಿನಯಿಸಿದ್ದಾರೆ. ವಿದ್ಯಾರಣ್ಯಪುರದಲ್ಲಿರುವ ನಿವಾಸದಲ್ಲಿ ಇಂದು ಸಂಜೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಬೈ ಟು ಲವ್ ಹೀರೋ ಧನ್ವೀರ್ ಮೇಲೆ ದೂರು ದಾಖಲಿಸಿದ ಅಭಿಮಾನಿ

    ʼಕಲಾತಪಸ್ವಿ ರಾಜೇಶ್’ ಎಂಬುದು ಅವರ ಆತ್ಮಚರಿತ್ರೆಯ ಹೆಸರು. ತಮಿಳು ಚಿತ್ರರಂಗದಿಂದ ಅಂದಿನ ದಿನಗಳಲ್ಲಿ ಅವಕಾಶ ಬಂದಿದ್ದರೂ ಕನ್ನಡದ ನೆಲದಲ್ಲೇ ಏನನ್ನಾದರೂ ಸಾಧಿಸಬೇಕೆಂಬ ಪ್ರಬಲ ಕನಸು ಹೊಂದಿದ್ದ ರಾಜೇಶ್ ಅಂತಹ ಕರೆಗಳನ್ನು ನಯವಾಗಿ ನಿರಾಕರಿಸಿದ್ದರು.

    ಸೊಸೆ ತಂದ ಸೌಭಾಗ್ಯ, ನಮ್ಮ ಊರು, ಗಂಗೆ ಗೌರಿ, ಬೆಳುವಲದ ಮಡಿಲಲ್ಲಿ, ಕಪ್ಪು ಬಿಳುಪು, ಬೃಂದಾವನ, ಬೋರೆ ಗೌಡ ಬೆಂಗಳೂರಿಗೆ ಬಂದ, ಮರೆಯದ ದೀಪಾವಳಿ, ಪ್ರತಿಧ್ವನಿ, ಕಾವೇರಿ, ದೇವರ ಗುಡಿ, ಬದುಕು ಬಂಗಾರವಾಯ್ತು, ಸೊಸೆ ತಂದ ಸೌಭಾಗ್ಯ, ಮುಗಿಯದ ಕಥೆ, ಬಿಡುಗಡೆ, ದೇವರದುಡ್ಡು, ಕಲಿಯುಗ, ಪಿತಾಮಹ ಮುಂತಾದ ಚಿತ್ರಗಳಲ್ಲಿ ರಾಜೇಶ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದರು.

    ಶಕ್ತಿ ನಾಟಕ ಮಂಡಳಿಯನ್ನು ಸ್ಥಾಪಿಸಿದ್ದ ರಾಜೇಶ್ ನಾಡಿನೆಲ್ಲೆಡೆ ಸಂಚರಿಸಿದ್ದರು. ಧಾರವಾಡ ವಿಶ್ವವಿದ್ಯಾಲಯ ರಾಜೇಶ್ ಅವರಿಗೆ ಡಾಕ್ಟರೇಟ್ ಗೌರವವನ್ನು ಸಲ್ಲಿಸಿತ್ತು. ಕೆಲ ದಿನಗಳ ಹಿಂದೆ ಪತ್ನಿಯನ್ನು ಕಳೆದುಕೊಂಡಿದ್ದ ರಾಜೇಶ್ ಅವರಿಗೆ 5 ಜನ ಮಕ್ಕಳಿದ್ದಾರೆ.

  • ಹಿರಿಯ ನಟ ರಾಜೇಶ್ ಆರೋಗ್ಯದಲ್ಲಿ ಚೇತರಿಕೆ

    ಹಿರಿಯ ನಟ ರಾಜೇಶ್ ಆರೋಗ್ಯದಲ್ಲಿ ಚೇತರಿಕೆ

    ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿರುವ ಹಿರಿನ ನಟ ರಾಜೇಶ್ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ.

    ಉಸಿರಾಟದ ತೊಂದರೆಯಿಂದ ಬಳಲ್ತಿದ್ದ ರಾಜೇಶ್ ಅವರ ಆರೋಗ್ಯ ಸ್ಥಿತಿ ಎರಡು ದಿನಗಳ ಹಿಂದೆ ಗಂಭೀರವಾಗಿತ್ತು. ಸದ್ಯ ವೈದ್ಯರು ಇಂದಿನ ಆರೊಗ್ಯ ಸ್ಥಿತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಇಂದು ರಾಜೇಶ್ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ. ಅವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಹೇಳಿದ್ದಾರೆ.  ಇದನ್ನೂ ಓದಿ: ಹೆಣ್ಣುಮಕ್ಕಳ ಶಿಕ್ಷಣ, ರಕ್ಷಣೆ ಸರ್ಕಾರದ ಕರ್ತವ್ಯ: ಡಿಕೆ ಸುರೇಶ್

    82 ವರ್ಷ ವಯಸ್ಸಿನ ರಾಜೇಶ್, ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಕಸ್ತೂರಿ ಬಾ ನಗರದ ನ್ಯೂ ಜನಪ್ರಿಯ ಆಸ್ಪತ್ರೆಯಲ್ಲಿ ದಾಖಲಾಗಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತಿಚೆಗೆ ಪತ್ನಿಯನ್ನ ಕಳೆದುಕೊಂಡಿರುವ ರಾಜೇಶ್ ಅವರಿಗೆ 5 ಜನ ಮಕ್ಕಳಿದ್ದಾರೆ.

  • ಹಿರಿಯ ನಟ ರಾಜೇಶ್ ಸ್ಥಿತಿ ಗಂಭೀರ

    ಹಿರಿಯ ನಟ ರಾಜೇಶ್ ಸ್ಥಿತಿ ಗಂಭೀರ

    ಬೆಂಗಳೂರು: ಹಿರಿಯ ನಟ ರಾಜೇಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. 82 ವರ್ಷ ವಯಸ್ಸಿನ ರಾಜೇಶ್, ಕಿಡ್ನಿ ವೈಫಲ್ಯ ಹಾಗೂ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದಾರೆ. ಹೀಗಾಗಿ ಕಸ್ತೂರಿ ಬಾ ನಗರದ ನ್ಯೂ ಜನಪ್ರಿಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಸದ್ಯ ವೆಂಟಿಲೇಟರ್ ನಲ್ಲಿ ಉಸಿರಾಡುತ್ತಿದ್ದಾರೆ. ಇತ್ತಿಚೆಗೆ ಪತ್ನಿಯನ್ನ ಕಳೆದುಕೊಂಡಿರುವ ರಾಜೇಶ್ ಅವರಿಗೆ 5 ಜನ ಮಕ್ಕಳಿದ್ದಾರೆ.

    ರಾಜೇಶ್ ಆರೋಗ್ಯದ ಬಗ್ಗೆ ಆಸ್ಪತ್ರೆ ನಿರ್ದೇಶಕ ಡಾಕ್ಟರ್ ಗಂಗಾಧರ್ ಮಾತನಾಡಿ, ಫೆಬ್ರವರಿ 9 ಕ್ಕೆ ರಾಜೇಶ್ ಅವರು ದಾಖಲಾಗಿದ್ದಾರೆ. ಉಸಿರಾಟದ ಸಮಸ್ಯೆ ಅಂತ ಆಸ್ಪತ್ರೆಗೆ ಬಂದಿದ್ರು. ಚಿಕಿತ್ಸೆಗೆ ರಾಜೇಶ್ ಅವರು ಸ್ಪಂದಿಸ್ತಿದ್ದಾರೆ. ಸ್ವಲ್ಪ ಕಾಲಾವಕಾಶ ಬೇಕಾಗುತ್ತೆ. ಸಂಬಂಧಪಟ್ಟ ವೈದ್ಯರು ಕೂಡ ಬಂದು ಚಿಕಿತ್ಸೆ ಕೊಡ್ತಿದ್ದಾರೆ ಎಂದರು. ಇದನ್ನೂ ಓದಿ: ಹಿಜಬ್ ಧರಿಸಿ ನರ್ಸಿಂಗ್ ಪರೀಕ್ಷೆ ಬರೆದ ವಿದ್ಯಾರ್ಥಿನಿಯರು – ಬ್ರೀಮ್ಸ್ ಮೆಡಿಕಲ್ ಕಾಲೇಜು ಅನುಮತಿ

    ಅಡ್ಮಿಟ್ ಆಗಿ ನಾಲ್ಕೈದು ದಿನಗಳಾಗಿದೆ. ಇನ್ನೂ ಎರಡ್ಮೂರು ದಿನ ಚಿಕಿತ್ಸೆ ಕೊಡಬೇಕಾಗುತ್ತೆ. ಅವರ ಮಗಳು ಮತ್ತು ಮೊಮ್ಮಗ ರಾಜೇಶ್ ಅವರನ್ನ ನೋಡಿಕೊಳ್ತಿದ್ದಾರೆ. ಉಳಿದ ಕುಟುಂಬಸ್ಥರಿಗೆ ಫೋನ್ ಮೂಲಕ ಮಾಹಿತಿ ಕೊಡಲಾಗ್ತಿದೆ. ಚೇತರಿಸಿಕೊಳ್ಳುವ ಎಲ್ಲಾ ಲಕ್ಷಣಗಳು ಕಾಣ್ತಿದೆ ಎಂದು ಭರತ್ ವಿವರಿಸಿದ್ದಾರೆ.