Tag: rajeev gandhi

  • ಮುಚ್ಚಿಹೋಗಿದ್ದ ರಾಮಮಂದಿರದ ಗರ್ಭಗುಡಿ ತೆರೆಸಿದ್ದು ರಾಜೀವ್ ಗಾಂಧಿ: ಡಾ.ಎಂ.ಸಿ ಸುಧಾಕರ್

    ಮುಚ್ಚಿಹೋಗಿದ್ದ ರಾಮಮಂದಿರದ ಗರ್ಭಗುಡಿ ತೆರೆಸಿದ್ದು ರಾಜೀವ್ ಗಾಂಧಿ: ಡಾ.ಎಂ.ಸಿ ಸುಧಾಕರ್

    ಚಿಕ್ಕಬಳ್ಳಾಪುರ: ಮುಚ್ಚಿಹೋಗಿದ್ದ ರಾಮಮಂದಿರದ ಗರ್ಭಗುಡಿ ತೆರೆಸಿದ್ದು ರಾಜೀವ್ ಗಾಂಧಿ (Rajiv Gandhi) ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ (Dr. M. C Sudhakar) ಹೇಳಿದ್ದಾರೆ.

    ಇದೇ ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗುತ್ತಿರುವ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್ (BJP- Congress) ಪಕ್ಷಗಳು ಪರ-ವಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಪ್ರತಿಕ್ರಿಯಿಸಿರುವ ಸಚಿವರು, ನಾವೆಲ್ಲರೂ ಹಿಂದುಗಳು ಇದು ಜ್ಯಾತ್ಯಾತೀತ ರಾಷ್ಟ್ರ ಅಯೋಧ್ಯೆ ರಾಮಮಂದಿರ ವಿಚಾರದಲ್ಲಿ ನಮಗೆಲ್ಲರಿಗೂ ಸಹಮತ ಇದೆ ಎಂದಿದ್ದಾರೆ.

    ನಾವೆಲ್ಲ ನಮ್ಮ ಜಾತಿ ನಮ್ಮ ಧರ್ಮದ ಮೇಲೆ ಹೆಚ್ಚು ನಂಬಿಕೆ ಇಟ್ಟುಕೊಂಡಿರೋರು. ನನ್ನ ಕೊರಳಲ್ಲಿ ವೆಂಕಟರವಣಸ್ವಾಮಿ ಲಾಕೆಟ್ ಇದೆ, ಅಯೋಧ್ಯೆಯಲ್ಲಿ ಮುಚ್ಚಿಹೋಗಿದ್ದ ರಾಮಮಂದಿರದ ಗರ್ಭಗುಡಿ ತೆರೆಸಿದ್ದು ರಾಜೀವ್ ಗಾಂಧಿ, ಇದನ್ನ ಬಿಜೆಪಿಯವರು ಮರೆಮಾಚಿದ್ದಾರೆ. ಈ ಸತ್ಯವನ್ನ ಜನರಿಗೆ ತಿಳಿಸಬೇಕು. ರಾಮಮಂದಿರ ಉದ್ಘಾಟನೆ ವಿಚಾರ ಎಲ್ಲರಿಗೂ ಸಂತೋಷ ಇದೆ ಎಂದು ಹೇಳಿದರು. ಇದನ್ನೂ ಓದಿ: ರಾಮಮಂದಿರ ನಿರ್ಮಾಣಕ್ಕೆ ನಾನೂ ದೇಣಿಗೆ ಕೊಟ್ಟಿದ್ದೇನೆ: ಪರಮೇಶ್ವರ್‌

    ಅನ್ನಭಾಗ್ಯ ಅಕ್ಕಿ ರಾಮಮಂದಿರ ಮಂತ್ರಾಕ್ಷತೆಗೆ ಬಳಕೆ ಡಿಕೆಶಿ ಹೇಳಿಕೆ ವಿಚಾರವನ್ನ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಸಮರ್ಥಿಸಿಕೊಂಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಮಾತನಾಡಿದ ಅವರು ರಾಮಮಂದಿರ ವಿಚಾರವನ್ನ ಬಿಜೆಪಿಯವರು ರಾಜಕೀಯವಾಗುವ ಬಂಡವಾಳ ಮಾಡಿಕೊಳ್ತಿದ್ದಾರೆ. ಯಾಕೆ ಅವರು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ, ಅದಕ್ಕಾಗಿಯೇ ಡಿಕೆಶಿಯವರು ಹಾಗೆ ಹೇಳಿದ್ದಾರೆ ಎಂದರು. ಅವರವರ ಧರ್ಮ ಧರ್ಮದ ಮೇಲೆ ಅವರಿಗೆ ನಂಬಿಕೆ‌ ಇದೆ. ರಾಜಕೀಯ ವಾಗಿ ಅನುಕೂಲ ಪಡೆಯಲು ಹೀಗೆ ಮಾಡ್ತಿದ್ದಾರೆ. ಇದು ಕೀಳು ಮಟ್ಟದ ರಾಜಕಾರಣ ಎಂದು ಬಿಜೆಪಿಗೆ ವಿರುದ್ದ ಹರಿಹಾಯ್ದರು.

  • ಕೊರಿಯಾಗೆ ಕಳುಹಿಸಿದ ಸ್ವಾರಸ್ಯಕರ ಕಥೆ ಹೇಳಿದ್ರು ಡಿ.ಕೆ ಶಿವಕುಮಾರ್

    ಕೊರಿಯಾಗೆ ಕಳುಹಿಸಿದ ಸ್ವಾರಸ್ಯಕರ ಕಥೆ ಹೇಳಿದ್ರು ಡಿ.ಕೆ ಶಿವಕುಮಾರ್

    – ರಾಜೀವ್ ಗಾಂಧಿ ದೇಶಕ್ಕೆ ಉತ್ತಮ ಅಡಿಪಾಯ ಹಾಕಿದ್ರು

    ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ತಮ್ಮನ್ನು ರಾಜೀವ್ ಗಾಂಧಿಯವರು ಕೊರಿಯಾಗೆ ಕಳುಹಿಸಿದ ಸ್ವಾರಸ್ಯಕರ ಕಥೆಯೊಂದನ್ನು ಇಂದು ಬಿಚ್ಚಿಟ್ಟರು.

    ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಕೊರಿಯಾಗೆ ಹೋಗಲು ನನ್ನನ್ನು ರಾಜೀವ್ ಗಾಂಧಿ ಸೆಲೆಕ್ಟ್ ಮಾಡಿದ್ದರು. ಆಗ ನಮ್ಮ ರಾಜ್ಯದ 5 ಮಂದಿ ಸಂಸದರು ನನ್ನ ವಿರುದ್ಧ ಇವನು ಗೂಂಡಾ ಅವರನ್ನು ಕಳಿಸಬೇಡಿ ಅಂತ ರಾಜೀವ್ ಗಾಂಧಿಗೆ ದೂರು ಹೇಳಿದ್ರು. ಆಗ ರಾಜೀವ್ ಗಾಂಧಿಯವರು ನನ್ನ ಬಗ್ಗೆ ಮಾಹಿತಿ ತರಿಸಿಕೊಂಡು ವಿವಾದಿತ ವ್ಯಕ್ತಿಗಳೇ ಮುಂದೆ ಬೆಳೆಯೋದು ಅಂತ ದೂರು ಕೊಟ್ಟವರಿಗೆ ಹೇಳಿ ನನ್ನನ್ನ ಕೊರಿಯಾಗೆ ಕಳಿಸಿದ್ರು ಎಂದು ಸ್ವಾರಸ್ಯಕರವಾದ ಕಥೆಯನ್ನು ಹೇಳಿದರು.

    ವಿರೇಂದ್ರ ಪಾಟೀಲ್ ಅವರನ್ನು ಸಿಎಂ ಸ್ಥಾನದಿಂದ ಕೆಳಗೆ ಇಳಿಸಬೇಕು ಅಂತ ರಾಜೀವ್ ಗಾಂಧಿಗೆ ಇರಲಿಲ್ಲ. ವೀರೇಂದ್ರ ಪಾಟೀಲ್ ಅವ್ರ ಆರೋಗ್ಯ ಸರಿ ಇಲ್ಲದ ಕಾರಣ ಆ ನಿರ್ಧಾರ ತೆಗೆದುಕೊಂಡ್ರು. ನಂತರ ಬಂಗಾರಪ್ಪ ಅವರನ್ನ ಸಿಎಂ ಮಾಡಿದರು. ಬಂಗಾರಪ್ಪ ಅವ್ರಿಗೆ ನಿಮ್ಮ ಕ್ಯಾಬಿನೆಟ್ ನಲ್ಲಿ ಪ್ರತಿ ಜಾತಿ, ವರ್ಗದಿಂದ ಒಬ್ಬೊಬ್ಬರಿಗೆ ಯುವಕರಿಗೆ ಅವಕಾಶ ಕೊಡಬೇಕು ಅಂತ ಹೇಳಿದ್ರು. ಆಗ ನಾನು ಕೂಡ ಮಂತ್ರಿ ಆದೆ ಎಂದರು. ಇದನ್ನೂ ಓದಿ: ವಧು, ವರರಿಗೆ ಪೆಟ್ರೋಲ್ ಗಿಫ್ಟ್ ಕೊಟ್ಟ ಹಾಸ್ಯ ನಟ

    ರಾಜೀವ್ ಗಾಂಧಿ ಪ್ರಧಾನಿ ಆದ ಮೇಲೆ 63 ಜನಕ್ಕೆ ಮೊದಲ ಬಾರಿಗೆ ಯುವಕರಿಗೆ ಟಿಕೆಟ್ ಕೊಟ್ಟರು. ಯುವಕರಿಗೆ ಶಕ್ತಿ ತಂದು ಕೊಟ್ಟವರೇ ರಾಜೀವ್ ಗಾಂಧಿ. ಯುವಕರಿಗೆ 18 ವರ್ಷಕ್ಕೆ ಮತದಾನದ ಹಕ್ಕನ್ನು ಕೊಟ್ಟಾಗ ಭಾರೀ ವಿರೋಧ ಮಾಡಿದರು. ಆದರೂ ಮತದಾನದ ಹಕ್ಕನ್ನು ಯುವಕರಿಗೆ ಕೊಟ್ಟರು. ರಾಜೀವ್ ಗಾಂಧಿಯವರು ಪಂಚಾಯ್ತಿಯಲ್ಲಿ ಮೀಸಲಾತಿ ಕೊಟ್ಟವರು. ದೂರಸಂಪರ್ಕದಲ್ಲಿ ಕ್ರಾಂತಿ ಮಾಡಿದವರು. ಕಂಪ್ಯೂಟರ್ ಕ್ರಾಂತಿ ಮಾಡಿದರು. ಹೊಸ ಶಿಕ್ಷಣ ನೀತಿ ತಂದರು. ಒಟ್ಟಿನಲ್ಲಿ ಈ ದೇಶಕ್ಕೆ ಉತ್ತಮ ಅಡಿಪಾಯವನ್ನು ರಾಜೀವ್ ಗಾಂಧಿ ಹಾಕಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ:  48 ವರ್ಷಗಳಾದ್ರೂ ಲಕ ಲಕ ಹೊಳೆಯುತ್ತಿದೆ ದೇವರಾಜ ಅರಸು ಬಳಸಿದ ಬೆಂಜ್ ಕಾರು

    ಇತ್ತೀಚೆಗೆ ಒಂದು ಸಮೀಕ್ಷೆ ಬಂದಿದೆ. ಮೋದಿ ಅವ್ರ ಜನಪ್ರಿಯತೆ ಇಂದು ಕಡಿಮೆ ಆಗಿದೆ. ಈಗ ನಿಮ್ಮ ಮನೆ ಬಾಗಿಲಿಗೆ ಅವಕಾಶ ಬಂದಿದೆ. ಅದನ್ನ ನಾವೆಲ್ಲ ಬಳಸಿಕೊಳ್ಳಬೇಕು. ಹೊಸ ಯುಗ ಬಂದಿದೆ. ನಾವೆಲ್ಲ ಒಟ್ಟಾಗಿ ಕೆಲಸ ಮಾಡೋಣ. ನಾವೆಲ್ಲ ಕಾರ್ಯಕರ್ತರಾಗಿ ದುಡಿಯೋಣ. ಯಾರೂ ಇಲ್ಲಿ ನಾಯಕರಲ್ಲ. ಮೊದಲು ನಾವು ಕಾರ್ಯಕರ್ತರು. ಕಾರ್ಯಕರ್ತರಾಗಿ ಕೆಲಸ ಮಾಡೋಣ. ಪಕ್ಷವನ್ನ ಅಧಿಕಾರಕ್ಕೆ ತರಲು ಕೆಲಸ ಮಾಡೋಣ. ಮುಂದೆ ಸ್ವಾತಂತ್ರ್ಯ ಹೋರಾಟಗಾರರು, ಕೋವಿಡ್ ನಿಂದ ಸತ್ತವರ ಮನೆಗೆ ಹೋಗೋಣ. ಮುಂದಿನ ಅಧಿವೇಶನ ದಲ್ಲಿ ಕೋವಿಡ್ ನಿಂದ ಸತ್ತವರ ಪರ ಹೋರಾಡ ಕೆಲಸ ಮಾಡೋಣ. ಬಿಜೆಪಿ ಸರ್ಕಾರ ಒಂದೇ ಒಂದು ಜನ ಪರ ಕೆಲಸ ಮಾಡಿಲ್ಲ. ಜನರಿಗೆ ಲಸಿಕೆ, ಬೆಡ್, ಔಷಧಿ ಕೊಡಲು ಆಗದ ಈ ಸರ್ಕಾರ ಕಿತ್ತು ಹಾಕಬೇಕು. ಈ ನಿಟ್ಟಿನಲ್ಲಿ ನಾವೆಲ್ಲರು ಕೆಲಸ ಮಾಡಬೇಕು. ಬ್ಲ್ಯಾಕ್ ಮಟ್ಟದಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ಇದೇ ವೇಳೆ ಡಿಕೆಶಿ ಕರೆ ನೀಡಿದರು.

    ಇದೇ ವೇಳೆ ಪೊಲೀಸರಿಗೆ ಎಚ್ಚರಿಕೆ ಕೊಟ್ಟ ಡಿಕೆಶಿ, ಪೊಲೀಸರು ನಮಗೆ ಕಾರ್ಯಕ್ರಮ ಮಾಡಲು ಅವಕಾಶ ಕೊಡಲ್ಲ ಅಂದ್ರು. ಬಿಜೆಪಿಯವರು ಜನಾಶೀರ್ವಾದ ಯಾತ್ರೆ ಮಾಡ್ತಿದ್ದಾರೆ. ಅವ್ರಿಗೊಂದು ನಿಯಮ ನಮಗೊಂದು ನಿಯಮನಾ?, ಜನಾಶೀರ್ವಾದ ಯಾತ್ರೆಯಲ್ಲಿ ಎಸ್ಪಿ ಇದ್ದರು ಗುಂಡು ಹಾರಿಸಿದ್ರು. 3 ಜನ ಪೇದೆಗಳನ್ನ ಸಸ್ಪೆಂಡ್ ಮಾಡಿದ್ರು. ಸಿಎಂ ಅವ್ರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಂತಹ ದೊಡ್ಡ ಸಾಧನೆ ಮಾಡಿದ್ದಾರೆ. ಪೊಲೀಸರು ಹೀಗೆ ಮಾಡಿದ್ರೆ ನಾವು ಪೊಲೀಸರ ವಿರುದ್ಧವೇ ಹೋರಾಟ ಮಾಡಬೇಕಾಗುತ್ತೆ. ಒಬ್ಬೆ ಒಬ್ಬ ನಾಯಕರನ್ನು ಪೊಲೀಸರು ಬಂಧನ ಮಾಡಿಲ್ಲ. ಇದ್ಯಾವ ನ್ಯಾಯ. ಹೀಗೆ ಮಾಡಿದ್ರೆ ಪೊಲೀಸರ ವಿರುದ್ಧ ಪ್ರತಿಭಟನೆ ಮಾಡಬೇಕಾಗುತ್ತೆ ಎಂದರು.

  • ಒಂದೇ ದಿನ ಬೆಂಗ್ಳೂರಿನ ನಾಲ್ಕು ಮಂದಿಗೆ ಕೊರೊನಾ ಸೋಂಕು ಶಂಕೆ – ಆಸ್ಪತ್ರೆಗೆ ದಾಖಲು

    ಒಂದೇ ದಿನ ಬೆಂಗ್ಳೂರಿನ ನಾಲ್ಕು ಮಂದಿಗೆ ಕೊರೊನಾ ಸೋಂಕು ಶಂಕೆ – ಆಸ್ಪತ್ರೆಗೆ ದಾಖಲು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ನಾಲ್ಕು ಮಂದಿಯಲ್ಲಿ ಕೊರೊನಾ ಸೋಂಕಿನ ಶಂಕೆ ವ್ಯಕ್ತವಾಗುತ್ತಿದೆ. ಮಂಗಳವಾರ ಒಂದೇ ದಿನ 97 ಜನರು ಪರೀಕ್ಷೆ ಮಾಡಿಸಿದ್ದು, ಅದರಲ್ಲಿ 4 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ರಾಜೀವ್ ಗಾಂಧಿ ಎದೆರೋಗ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಟೆಸ್ಟ್ ನಡೆಯುತ್ತಿದೆ. ಮಂಗಳವಾರ ಒಂದೇ ದಿನ 97 ಜನರು ಪರೀಕ್ಷೆ ಮಾಡಿಸಿದ್ದು, ಅದರಲ್ಲಿ 4 ಮಂದಿಯನ್ನು ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗಿದೆ. ನಾಲ್ಕು ಜನರಲ್ಲಿ ಒಬ್ಬರು ಸೌದಿಯಿಂದ ಆಗಮಿಸಿದ್ದರೆ ಇನ್ನೊಬ್ಬರು ಜಪಾನ್ ದೇಶದಿಂದ ಬಂದಿದ್ದಾರೆ. ಇನ್ನು ಇಬ್ಬರ ಮಾಹಿತಿ ಲಭ್ಯವಾಗಿಲ್ಲ.

    ಒಟ್ಟು ರಾಜೀವ್ ಗಾಂಧಿ ಕೊರೊನಾ ಪ್ರತ್ಯೇಕ ವಾರ್ಡ್‍ನಲ್ಲಿ 5 ಜನ ಸೊಂಕು ಶಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಾಲ್ಕು ಮಂದಿ ರಕ್ತ ಪರೀಕ್ಷೆ ಮಾಡಲಾಗಿದ್ದು, ವೈದ್ಯರು ವರದಿಗಾಗಿ ಕಾಯುತ್ತಿದ್ದಾರೆ. ಸದ್ಯ ಕಳೆದ 10 ದಿನಗಳಿಂದ ಇರಾನ್‍ನಿಂದ ಬಂದ ವ್ಯಕ್ತಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.

    ಸೌದಿ ಅರೇಬಿಯಾದಿಂದ ಬಂದ ವ್ಯಕ್ತಿಗೆ ಜ್ವರ, ನೆಗಡಿ ಆಗಿ ಕೊರೊನಾದಂತ ಲಕ್ಷಣಗಳು ಕಂಡು ಬಂದಿದೆ. ತಕ್ಷಣ ವ್ಯಕ್ತಿ ಮಂಗಳವಾರ ರಾತ್ರಿ ಕೊರೊನಾ ವೈರಸ್ ಪರೀಕ್ಷೆ ಮಾಡಿಸಲು ಹೋಗಿದ್ದು, ಈ ವೇಳೆ ರಾಜೀವ್ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

  • ರಾಹುಲ್ ಗಾಂಧಿಯನ್ನು ತುಕಡಿ ತುಕಡಿ ಮಾಡಿ ಕೊಂದ್ರು: ಖರ್ಗೆ ಎಡವಟ್ಟು

    ರಾಹುಲ್ ಗಾಂಧಿಯನ್ನು ತುಕಡಿ ತುಕಡಿ ಮಾಡಿ ಕೊಂದ್ರು: ಖರ್ಗೆ ಎಡವಟ್ಟು

    ಕಲಬುರಗಿ: ‘ರಾಜೀವ್ ಗಾಂಧಿ’ ಅವರನ್ನು ತುಕಡಿ ತುಕಡಿ ಮಾಡಿ ಕೊಂದು ಎಂದು ಹೇಳುವುದಕ್ಕೆ ಹೋಗಿ ‘ರಾಹುಲ್ ಗಾಂಧಿ’ ಅವರನ್ನು ತುಕಡಿ ತುಕಡಿ ಮಾಡಿ ಕೊಂದ್ರು ಎಂದು ಕಲಬುರಗಿಯಲ್ಲಿ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಚಾರದ ವೇಳೆ ಬಾಯಿತಪ್ಪಿ ಎಡವಟ್ಟು ಮಾಡಿಕೊಂಡಿದ್ದಾರೆ.

    ದೇಶಕ್ಕಾಗಿ ಕಾಂಗ್ರೆಸ್‍ನ ಹಲವು ಜನರು ಪ್ರಾಣ ಕೊಟ್ಟಿದ್ದಾರೆ. ಇಂದಿರಾ ಗಾಂಧಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು ಎಂದು ಹೇಳಿದ ಖರ್ಗೆ, ಅದಾದ ಬಳಿಕ ರಾಜೀವ್ ಗಾಂಧಿ ಹತ್ಯೆ ಎನ್ನುವ ಬದಲು ರಾಹುಲ್ ಗಾಂಧಿ ತುಂಡು ತುಂಡಾಗಿ ಹತ್ಯೆ ಮಾಡಲಾಯಿತು ಎಂದು ಹೇಳಿದ್ದಾರೆ.

    ಖರ್ಗೆ ಅವರ ಈ ಎಡವಟ್ಟಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗುತ್ತಿದೆ.

  • ಕಮ್ಯೂನಿಷ್ಟರು ರಾಷ್ಟ್ರಪ್ರೇಮದಲ್ಲೂ ಕಮ್ಮಿನಿಷ್ಠರು- ಸಂಸದ ಪ್ರತಾಪ್ ಸಿಂಹ

    ಕಮ್ಯೂನಿಷ್ಟರು ರಾಷ್ಟ್ರಪ್ರೇಮದಲ್ಲೂ ಕಮ್ಮಿನಿಷ್ಠರು- ಸಂಸದ ಪ್ರತಾಪ್ ಸಿಂಹ

    ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರ ಹತ್ಯೆಗೆ ಮಾವೋವಾದಿ ನಕ್ಸಲರಿಂದ ಸಂಚು ರೂಪಿಸಲಾಗಿದೆ. ಈ ಮೂಲಕ ಕಮ್ಯೂನಿಷ್ಟರು ರಾಷ್ಟ್ರಪ್ರೇಮದಲ್ಲೂ ಕಮ್ಮಿನಿಷ್ಠರು ಆಗಿದ್ದಾರೆ ಅಂತ ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

    ನಗರದ ಖಾಸಗಿ ಹೋಟೆಲ್ ನಲ್ಲಿ ನಡೆಯುತ್ತಿರುವ ರಾಜ್ಯ ಬಿಜೆಪಿ ಯುವ ಮೋರ್ಚಾ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಸಂಚು ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ಜೊತೆಯೂ ಸ್ವಾತಂತ್ರ್ಯಾನಂತರ ಚೀನಾ ಜೊತೆಯೂ ಕಮ್ಯೂನಿಷ್ಟರು ಕೈಜೋಡಿಸಿದ್ದವರು. ಇಂಥ ಕಮ್ಮಿನಿಷ್ಟರಿಂದ ಪ್ರಧಾನಿ ಹತ್ಯೆಗೆ ಸಂಚು ರೂಪಿಸುವುದು ಬಿಟ್ಟು ಮತ್ತಿನ್ನೆಂತಹ ರಾಷ್ಟ್ರಪ್ರೇಮ ನಿರೀಕ್ಷೆ ಮಾಡಲು ಸಾಧ್ಯ ಅಂತ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಮೋದಿ ಹತ್ಯೆಗೆ ನಕ್ಸಲರ ಸಂಚು!

    ಮೋದಿ ಹತ್ಯೆ ಸಂಚು ಬೆಳಕಿಗೆ:
    ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲುವ ಸಂಚನ್ನು ನಕ್ಸಲರು ರೂಪಿಸಿದ್ದರು ಎಂಬ ಆತಂಕಕಾರಿ ಮಾಹಿತಿ ಬೆಳಕಿಗೆ ಬಂದಿತ್ತು. ಡಿಸೆಂಬರ್ ನಲ್ಲಿ ನಡೆದ ಭೀಮ-ಕೋರೆಗಾನ್ ಹಿಂಸಾಚಾರ ಹಾಗೂ ನಕ್ಸಲರ ಜೊತೆ ಸಂಬಂಧ ಹೊಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಒಟ್ಟು ಐದು ಮಂದಿ ಶಂಕಿತ ಆರೋಪಿಗಳನ್ನು ಬಂಧಿಸಿದ್ದರು. ಇದರಲ್ಲಿ ದಲಿತ ಮುಖಂಡನಾದ ಸುಧೀರ್ ಧಾವಲೆ, ವಕೀಲ ಸುರೇಂದ್ರ ಗಾದ್ಲಿಂಗ್, ಮಹೇಶ್ ಶಾವತ್, ಸೋಮಸೇನ ಮತ್ತು ರೋನ ವಿಲ್ಸನ್ ಇವರನ್ನು ಮುಂಬೈ, ನಾಗ್ಪುರ ದೆಹಲಿಯ ನಿವಾಸದಲ್ಲಿ ಬಂಧಿಸಿದ್ದರು. ದೆಹಲಿಯಲ್ಲಿ ಬಂಧನಕ್ಕೆ ಒಳಗಾದ ರೋನ್ ವಿಲ್ಸನ್ ನ ಮನೆಯನ್ನು ಪರಿಶೀಲಿಸಿದಾಗ ನಕ್ಸಲರಿಗೆ ಸೇರಿದ ಪತ್ರವೊಂದು ಸಿಕ್ಕಿತ್ತು. ಈ ಪತ್ರದಲ್ಲಿ ರಾಜೀವ್ ಗಾಂಧಿ ಹತ್ಯೆಯ ಮಾದರಿಯಲ್ಲಿ ಪ್ರಧಾನಿ ಮೋದಿಯವರನ್ನು ಹತ್ಯೆ ಮಾಡುವ ಕುರಿತು ಬರೆಯಲಾಗಿದೆ ಎಂದು ಪೊಲೀಸರು ಹೇಳಿಕೆ ನೀಡಿದ್ದರು. ಇದನ್ನೂ ಓದಿ: ಮೋದಿ ಕೊಂದು ಭಾರತದ ವಿಭಜನೆ: ಉಗ್ರರಿಗೆ ಹಫೀಜ್ ಸಯೀದ್ ಕರೆ