Tag: Rajdhani

  • ರಾಷ್ಟ್ರ ರಾಜಧಾನಿಯಲ್ಲಿಲ್ಲ ಮಹಿಳೆಯರಿಗೆ ರಕ್ಷಣೆ – ನಿತ್ಯ 6 ರೇಪ್, 7 ಕಿರುಕುಳ ಪ್ರಕರಣಗಳು ವರದಿ

    ರಾಷ್ಟ್ರ ರಾಜಧಾನಿಯಲ್ಲಿಲ್ಲ ಮಹಿಳೆಯರಿಗೆ ರಕ್ಷಣೆ – ನಿತ್ಯ 6 ರೇಪ್, 7 ಕಿರುಕುಳ ಪ್ರಕರಣಗಳು ವರದಿ

    ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ನಿತ್ಯ ಆರು ಅತ್ಯಾಚಾರ, ಏಳು ಕಿರುಕುಳ ಪ್ರಕರಣಗಳು ದಾಖಲಾಗುತ್ತಿವೆ. ಪ್ರಸುತ್ತ ವರ್ಷದಲ್ಲಿ ಶೇಕಡಾ 6 ರಷ್ಟು ಅತ್ಯಾಚಾರ ಪ್ರಕರಣಗಳು ಹೆಚ್ಚಿವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

    ಈ ವರ್ಷದ ಮೊದಲ ಆರು ತಿಂಗಳಲ್ಲಿ 1,100ಕ್ಕೂ ಅಧಿಕ ಅತ್ಯಾಚಾರ ಪ್ರಕರಣಗಳು ವರದಿಯಾಗಿದೆ. ಸಕ್ರಿಯ ನೋಂದಣಿ, ಮಹಿಳಾ ಸ್ನೇಹಿ ಸಹಾಯವಾಣಿಗಳು ಮತ್ತು ಸ್ಥಳೀಯ ಪೊಲೀಸ್ ಬೂತ್‍ಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ ಎಂದು ಪೊಲೀಸರು ವರದಿ ನೀಡಿದ್ದಾರೆ. ಇದನ್ನೂ ಓದಿ: 80 ವರ್ಷಗಳ ನಂತರ ಬುಡಕಟ್ಟು ಕುಗ್ರಾಮದಲ್ಲಿ ಬೆಳಗಿತು ಸೌರಶಕ್ತಿ ಬೆಳಕು 

    ಅಂಕಿ ಅಂಶಗಳ ಪ್ರಕಾರ, ಈ ವರ್ಷ ಅತ್ಯಾಚಾರ ಪ್ರಕರಣಗಳಲ್ಲಿ ಶೇಕಡಾ 6 ರಷ್ಟು ಹೆಚ್ಚಳವಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಗಳಲ್ಲಿ ಶೇಕಡಾ 17 ರಷ್ಟು ಏರಿಕೆಯಾಗಿದೆ. ಜನವರಿಯಿಂದ ಜುಲೈ 15 ರವರೆಗೆ 1,480 ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 1,244 ಪ್ರಕರಣಗಳು ದಾಖಲಾಗಿದ್ದವು.

    ಈ ವರ್ಷ ಮಹಿಳೆಯರ ಅಪಹರಣ ಪ್ರಕರಣಗಳಲ್ಲೂ ಗಣನೀಯ ಏರಿಕೆಯಾಗಿದೆ. ಜನವರಿ ಮತ್ತು ಜುಲೈ 15ರ ನಡುವೆ 2,197 ಅಪಹರಣ ಪ್ರಕರಣಗಳು ದಾಖಲಾಗಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ 20 ಶೇಕಡಾ ಹೆಚ್ಚಳವಾಗಿದೆ. ಹೆಚ್ಚಿನ ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತೆಗೆ ಪರಿಚಿತರಾಗಿದ್ದು, ಅಪರಾಧವು ಆಕೆಯ ನಿವಾಸದಲ್ಲಿ ಅಥವಾ ಸಮೀಪದ ಪ್ರದೇಶಗಳಲ್ಲಿ ನಡೆಯುತ್ತದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

    ಕೊರೊನಾ ಸಾಂಕ್ರಾಮಿಕ ರೋಗದ ನಂತರ, ಕೌಟುಂಬಿಕ ಹಿಂಸಾಚಾರದ ಪ್ರಕರಣಗಳು ಮೇಲ್ಮುಖವಾಗಿದೆ. ಕಳೆದ ವರ್ಷ 2,096 ಪ್ರಕರಣಗಳಿಗೆ ಹೋಲಿಸಿದರೆ ಈ ವರ್ಷ 2,704ಕ್ಕೂ ಹೆಚ್ಚು ಅಪರಾಧಗಳು ವರದಿಯಾಗಿವೆ. ಹಿಂದಿನ ಅಂಕಿ ಅಂಶಗಳ ಪ್ರಕಾರ ಸುಮಾರು 1.22 ಪ್ರತಿಶತ ಅತ್ಯಾಚಾರ ಪ್ರಕರಣಗಳಲ್ಲಿ ಆರೋಪಿಗಳು ಸಂತ್ರಸ್ತೆಗೆ ತಿಳಿದಿರುವುದಿಲ್ಲ. ಇದನ್ನೂ ಓದಿ: ವಿಜಯಪುರದಲ್ಲಿ ವಿಸ್ಮಯಕಾರಿಯಾಗಿ ಹೆಚ್ಚುತ್ತಿದೆ ಕೃಷ್ಣ ಮೃಗಗಳ ಸಂತತಿ 

    ಅಲ್ಲದೆ, ಘಟನೆ ನಡೆದ 7-8 ದಿನಗಳಲ್ಲಿ ಶೇ.60ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ. ಕಳೆದ ವರ್ಷದಿಂದ ಶೇಕಡಾ 95 ರಷ್ಟು ಅತ್ಯಾಚಾರ ಪ್ರಕರಣಗಳು ಚಾರ್ಜ್‍ಶೀಟ್ ಆಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರೈಲ್ವೇ ಪ್ರಯಾಣಿಕರಲ್ಲಿ ‘ಆರೋಗ್ಯ ಸೇತು’ ಇರಲೇಬೇಕು

    ರೈಲ್ವೇ ಪ್ರಯಾಣಿಕರಲ್ಲಿ ‘ಆರೋಗ್ಯ ಸೇತು’ ಇರಲೇಬೇಕು

    ನವದೆಹಲಿ: ಕೋವಿಡ್ 19 ಸಮಯದಲ್ಲಿ ವಿಶೇಷ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಆರೋಗ್ಯ ಸೇತು ಅಪ್ಲಿಕೇಶನ್ ಬಳಕೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

    ಪ್ರಯಾಣಿಕರು ಆರೋಗ್ಯ ಸೇತು ಅಪ್ಲಿಕೇಶನ್ ಕಡ್ಡಾಯವಾಗಿ ಬಳಸಬೇಕೆಂದು ಕೇಂದ್ರ ರೈಲ್ವೇ ಸಚಿವಾಲಯ ಟ್ವೀಟ್ ಮಾಡಿದೆ. ಈಗಾಗಲೇ ಒಟ್ಟು 54 ಸಾವಿರ ಪ್ರಯಾಣಿಕರು ಟಿಕೆಟ್ ಬುಕ್ ಮಾಡಿದ್ದಾರೆ.

    ಆರೋಗ್ಯ ಸೇತು ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಓಎಸ್ ಸ್ಟೋರ್ ನಲ್ಲಿ ಲಭ್ಯವಿದೆ. ಬ್ಲೂ ಟೂತ್ ಮತ್ತು ಜಿಪಿಎಸ್ ಬಳಸಿಕೊಂಡು ಈ ಆ್ಯಪ್ ಕೋವಿಡ್ ವಲಯವಾರು ಪ್ರದೇಶಗಳ ಮಾಹಿತಿಯನ್ನು ಜನರ ಕೈಗೆ ನೀಡುತ್ತದೆ.

    ಪ್ರಯಾಣಿಕರ ರೈಲುಗಳನ್ನು ಇಂದಿನಿಂದ ಹಂತ ಹಂತವಾಗಿ ಪ್ರಾರಂಭಿಸಲು ಭಾರತೀಯ ರೈಲ್ವೆ ಮುಂದಾಗಿದೆ. ಆರಂಭದಲ್ಲಿ 15 ಜೋಡಿ ರೈಲುಗಳು ಓಡಾಡಲಿವೆ. ಈ ವಿಶೇಷ ರೈಲುಗಳು ನವದೆಹಲಿ ನಿಲ್ದಾಣದಿಂದ ಬೆಂಗಳೂರು, ದಿಬ್ರುಗರ್, ಅಗರ್ತಲಾ, ಹೌರಾ, ಪಾಟ್ನಾ, ಬಿಲಾಸ್ಪುರ್, ರಾಂಚಿ, ಭುವನೇಶ್ವರ, ಸಿಕಂದರಾಬಾದ್, ಚೆನ್ನೈ, ತಿರುವನಂತಪುರಂ, ಮಡ್ಗಾಂವ್, ಮುಂಬೈ ಸೆಂಟ್ರಲ್, ಅಹಮದಾಬಾದ್ ಗೆ ಸಂಪರ್ಕ ಕಲ್ಪಿಸಲಿವೆ.

    ವಿಶೇಷ ರೈಲುಗಳ ಟಿಕೆಟ್ ಬುಕಿಂಗ್ ಮೇ 11ರಂದು ಸಂಜೆ 4 ಗಂಟೆಗೆ ಪ್ರಾರಂಭವಾಗಿದೆ. ಐಆರ್‌ಸಿಟಿಸಿ ವೆಬ್‍ಸೈಟ್‍ನಲ್ಲಿ ಮಾತ್ರ ಟಿಕೆಟ್ ಲಭ್ಯವಿರುತ್ತದೆ. ರೈಲ್ವೆ ನಿಲ್ದಾಣಗಳ ಕೌಂಟರ್ ಗಳಲ್ಲಿ ಟಿಕೆಟ್ ಸಿಗುವುದಿಲ್ಲ ಎಂದು ರೈಲ್ವೆ ಸಚಿವಾಲಯ ಸ್ಪಷ್ಟಪಡಿಸಿದೆ.

    ಪ್ರಯಾಣಿಕರು ಮಾಸ್ಕ್ ಹಾಕಿಕೊಳ್ಳುವುದು, ಥರ್ಮಲ್ ಸ್ಕ್ರೀನಿಂಗ್‍ಗೆ ಒಳಪಡುವುದು ಕಡ್ಡಾಯವಾಗಿದೆ. ಕೊರೊನಾ ಸೋಂಕಿನ ಲಕ್ಷಣವಿಲ್ಲದ ಪ್ರಯಾಣಿಕರಿಗೆ ಮಾತ್ರ ರೈಲು ಹತ್ತಲು ಅವಕಾಶವಿರುತ್ತದೆ. ರೈಲು ವೇಳಾಪಟ್ಟಿ ಸೇರಿದಂತೆ ಹೆಚ್ಚಿನ ವಿವರಗಳನ್ನು ಸರಿಯಾದ ಸಮಯದಲ್ಲಿ ನೀಡಲಾಗುತ್ತದೆ ಎಂದು ತಿಳಿಸಿದೆ.

    ವಿದೇಶದಿಂದ ರಾಜ್ಯಗಳಿಗೆ ಬರುತ್ತಿರುವ ವ್ಯಕ್ತಿಗಳಿಗೂ ಆರೋಗ್ಯ ಸೇತು ಅಪ್ಲಿಕೇಶನ್ ಕಡ್ಡಾಯಗೊಳಿಸಲಾಗಿದೆ. ಭಾರತದ ಸಿಮ್ ಇಲ್ಲದೇ ಇದ್ದಲ್ಲಿ ಅವರಿಗೆ ಬಿಎಸ್‍ಎನ್‍ಎಲ್ ಸಿಮ್ ನೀಡಿ  ಅಪ್ಲಿಕೇಶನ್ ಇನ್ ಸ್ಟಾಲ್ ಮಾಡುವಂತೆ ಸೂಚಿಸಲಾಗುತ್ತದೆ.

  • ರೈಲು ಪ್ರಯಾಣಿಕರೇ ಗಮನಿಸಿ: ಟೀ-ಕಾಫಿಗೆ 7 ರೂ. ಮಾತ್ರ ನೀಡಿ, ಜಾಸ್ತಿ ಹಣ ಕೇಳಿದ್ರೆ ದೂರು ಕೊಡಿ

    ರೈಲು ಪ್ರಯಾಣಿಕರೇ ಗಮನಿಸಿ: ಟೀ-ಕಾಫಿಗೆ 7 ರೂ. ಮಾತ್ರ ನೀಡಿ, ಜಾಸ್ತಿ ಹಣ ಕೇಳಿದ್ರೆ ದೂರು ಕೊಡಿ

    ಎಕ್ಸ್ ಪ್ರೆಸ್ ರೈಲಿನಲ್ಲಿ ವೇಯ್ಟಿಂಗ್ ಟಿಕೆಟ್ ಇದ್ದರೆ ರಾಜಧಾನಿ, ಶತಾಬ್ದಿಯಲ್ಲಿ ಪ್ರಯಾಣಿಸಬಹುದು

    ನವದೆಹಲಿ: ರೈಲಿನಲ್ಲಿ ಪ್ರಯಾಣಿಸುವಾಗ ಕಾಫಿ, ತಿಂಡಿ ಹಾಗೂ ನೀರಿನ ಬಾಟಲಿಗೆ ನಿಗದಿತ ಬೆಲೆಗಿಂತ ಹೆಚ್ಚು ಹಣ ಕೇಳಿದ್ರೆ ದೂರು ನೀಡಿ ಎಂದು ರೈಲ್ವೆ ಇಲಾಖೆ ಹೇಳಿದೆ.

    ರೈಲಿನಲ್ಲಿ ಊಟ ಹಾಗೂ ನೀರಿನ ಬಾಟಲಿಗೆ ನಿಗದಿತ ಬೆಲೆಗಿಂತ ಹೆಚ್ಚಿನ ಹಣ ಪಡೆಯುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಈ ಮಾಹಿತಿ ನೀಡಿದೆ. ಕಾಫಿ, ಟೀ, ತಿಂಡಿ, ಊಟ ಹಾಗೂ ನೀರಿನ ಬಾಟಲಿಯ ಬೆಲೆ ಎಷ್ಟು ಎಂಬ ಪಟ್ಟಿಯನ್ನು ರೈಲ್ವೆ ಇಲಾಖೆ ಟ್ವಿಟ್ಟರ್‍ನಲ್ಲಿ ಹಾಕಿದ್ದು, ಕ್ಯಾಟರಿಂಗ್ ಸೇವೆ ಪಡೆದಾಗ ಬಿಲ್ ಕೇಳಿ ಎಂದು ಸೂಚಿಸಿದೆ.

    ಒಂದು ವೇಳೆ ನಿಗದಿತ ಬೆಲೆಗಿಂತ ಹೆಚ್ಚಿನ ಹಣ ಕೇಳಿದ್ರೆ ರೈಲ್ವೆ ಇಲಾಖೆಯ ಟ್ವಿಟ್ಟರ್ ಖಾತೆಗೆ ದೂರು ನೀಡಬಹುದು. ನಾವು ನಿಮಗಾಗಿ 24*7 ಕಾರ್ಯ ನಿರ್ವಹಿಸುತ್ತೇವೆ ಎಂದು ಹೇಳಿದೆ.

    ಇದರ ಜೊತೆಗೆ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಪ್ರಯಾಣಿಕರು ಬೇರೆ ಯಾವುದೇ ಎಕ್ಸ್ ಪ್ರೆಸ್ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಿದ್ದರೂ ರಾಜಧಾನಿ ಹಾಗೂ ಶತಾಬ್ದಿ ಪ್ರಯಾಣಿಸುವ ಅವಕಾಶ ಸಿಗಲಿದೆ. ಈ ಹೊಸ ಯೋಜನೆಯನ್ನು ಏಪ್ರಿಲ್‍ನಿಂದ ರೈಲ್ವೆ ಇಲಾಖೆ ಜಾರಿಗೆ ತರಲಿದ್ದು, ವೇಯ್ಟಿಂಗ್ ಲಿಸ್ಟ್ ನಲ್ಲಿರುವ ಪ್ರಯಾಣಿಕರು ಅದೇ ಹಾದಿಯಲ್ಲಿ ಹೋಗುವ ಮುಂದಿನ ಬದಲಿ ರೈಲಿನಲ್ಲಿ ಕನ್ಫರ್ಮ್ ಟಿಕೆಟ್ ಪಡೆಯಬಹುದಾಗಿದೆ. ಇದಕ್ಕಾಗಿ ಟಿಕೆಟ್ ಬುಕ್ಕಿಂಗ್ ಮಾಡುವಾಗಲೇ ಪ್ರಯಾಣಿಕರು ಈ ಆಯ್ಕೆಯನ್ನು ಮಾಡಿಕೊಂಡಿರಬೇಕಾಗುತ್ತದೆ.

    ಈ ಯೋಜನೆಗೆ ವಿಕಲ್ಪ್ ಎಂದು ಹೆಸರಿಡಲಾಗಿದ್ದು, ರಾಜಧಾನಿ, ಶತಾಬ್ದಿ, ದುರಂತೊ ಹಾಗೂ ಇನ್ನಿತರೆ ರೈಲುಗಳಲ್ಲಿ ಖಾಲಿ ಬರ್ತ್‍ಗಳನ್ನು ಬಳಸಿಕೊಳ್ಳುವ ಉದ್ದೇಶದಿಂದ ಈ ಯೋಜನೆಯನ್ನು ಪರಿಚಯಿಸಲಾಗುತ್ತಿದೆ.

    ಈ ಸೌಲಭ್ಯ ಪಡೆಯೋದು ಹೇಗೆ?: ಪ್ರಯಾಣಿಕರು ಟಿಕೆಟ್ ಬುಕಿಂಗ್ ಮಾಡುವಾಗ ವಿಕಲ್ಪ್ ಸ್ಕೀಮ್ ಆಯ್ಕೆ ಮಾಡಿಕೊಂಡರೆ, ಮುಂದಿನ ಬದಲಿ ರೈಲಿನಲ್ಲಿ ಕನ್ಫರ್ಮ್ ಟಿಕೆಟ್ ಪಡೆಯುವ ಬಗ್ಗೆ ಅವರ ಮೊಬೈಲ್‍ಗೆ ಒಂದು ಸಂದೇಶ ಬರುತ್ತದೆ. ಬದಲಿ ರೈಲಿನಲ್ಲಿ ಸೀಟ್ ಸಿಕ್ಕರೆ ಅವರ ಹೆಸರು ಟಿಕೆಟ್ ಬುಕ್ ಮಾಡಿದ ರೈಲಿನ ವೇಯ್ಟಿಂಗ್ ಲಿಸ್ಟ್ ಪಟ್ಟಿಯಲ್ಲಿ ತೋರಿಸುವುದಿಲ್ಲ. ಬದಲಿ ರೈಲಿಗೆ ವರ್ಗಾಯಿಸಲಾದ ಪ್ರಯಾಣಿಕರ ಹೆಸರುಗಳ ಪಟ್ಟಿಯನ್ನು ಕನ್ಫರ್ಮ್ ಲಿಸ್ಟ್ ಹಾಗೂ ವೇಯ್ಟಿಂಗ್ ಲಿಸ್ಟ್ ಪಟ್ಟಿಯ ಜೊತೆ ಅಂಟಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಈ ಸ್ಕೀಮ್‍ನಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಹಣ ಪಡೆಯುವುದಿಲ್ಲ. ಹಾಗೂ ಟಿಕೆಟ್ ದರದಲ್ಲಿ ವ್ಯತ್ಯಾಸವಿದ್ದರೆ ಅದನ್ನು ಹಿಂದಿರುಗಿಸುವುದಿಲ್ಲ. ಈ ಸೌಲಭ್ಯ ಸದ್ಯಕ್ಕೆ ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ ಮಾಡುವವರಿಗೆ ಮಾತ್ರ ಲಭ್ಯವಿದ್ದು, ಸಾಫ್ಟ್ ವೇರ್ ಸಿದ್ಧವಾದ ನಂತರ ಕೌಂಟರ್‍ನಲ್ಲಿ ಟಿಕೆಟ್ ಪಡೆಯುವವರೂ ಈ ಸೌಲಭ್ಯ ಪಡೆಯಬಹುದಾಗಿದೆ.

    ಅನೇಕ ಕಾರಣಗಳಿಗಾಗಿ ಪ್ರಯಾಣಿಕರು ಟಿಕೆಟ್ ರದ್ದು ಮಾಡಿದಾಗ ಹಣ ಹಿಂದಿರುಗಿಸಲು ರೈಲ್ವೆ ಇಲಾಖೆ ವರ್ಷಕ್ಕೆ ಸುಮಾರು 75 ಸಾವಿರ ರೂ. ವ್ಯಯಿಸುತ್ತಿದೆ ಎಂದು ವರದಿಯಾಗಿದೆ.