Tag: Rajath

  • ‘ಗುಗ್ಗು ನನ್ನ ಮಗ’ ಎಂದ ರಜತ್- Bigg Boss ಡೋರ್ ಓಪನ್ ಮಾಡಿ ಎಂದು ಪಟ್ಟು ಹಿಡಿದ ಸುರೇಶ್

    ‘ಗುಗ್ಗು ನನ್ನ ಮಗ’ ಎಂದ ರಜತ್- Bigg Boss ಡೋರ್ ಓಪನ್ ಮಾಡಿ ಎಂದು ಪಟ್ಟು ಹಿಡಿದ ಸುರೇಶ್

    ಬಿಗ್ ಬಾಸ್‌ಗೆ (Bigg Boss Kannada 11)  ಶೋಭಾ (Shobha Shetty) ಮತ್ತು ರಜತ್ (Rajath) ವೈಲ್ಡ್ ಕಾರ್ಡ್ ಎಂಟ್ರಿ ಬೆನ್ನಲ್ಲೇ ಸ್ಪರ್ಧಿಗಳ ನಡುವಿನ ಫೈಟ್ ಇನ್ನೊಂದು ಹಂತಕ್ಕೆ ತಲುಪಿದೆ. ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಟಾಸ್ಕ್ ಆಡುವಾಗ ಗೋಲ್ಡ್ ಸುರೇಶ್‌ಗೆ ಅವಮಾನಿಸಿದ್ದಾರೆ. ಅದಕ್ಕೆ ತಾವು ಆಟ ಆಡಲ್ಲ. ಬಾಗಿಲು ತೆಗಿಯಿರಿ ಎಂದು ಬಿಗ್ ಬಾಸ್ ಬಳಿ ಸುರೇಶ್ ಮನವಿ ಮಾಡಿಕೊಂಡಿದ್ದಾರೆ.

    ಇಂದಿನ ಸಂಚಿಕೆಯಲ್ಲಿ ‘ಬಿಗ್ ಬಾಸ್’ ಟಾಸ್ಕ್ ಒಂದನ್ನು ನೀಡಿದ್ದಾರೆ. ಕೊಳವೆ ಮೂಲಕ ಬರುವ ಚೆಂಡನ್ನು ಎತ್ತಿಕೊಂಡು ತಮ್ಮ ತಂಡಕ್ಕೆ ಇರುವ ಮೀಸಲಿರುವ ಚೌಕಟ್ಟಿನಲ್ಲಿ ಇಡಬೇಕು ಎಂದು ‘ಬಿಗ್ ಬಾಸ್’ ಆಟದ ನಿಯಮದಲ್ಲಿತ್ತು. ಈ ಟಾಸ್ಕ್‌ನಲ್ಲಿ ರಜತ್ ಮತ್ತು ಗೋಲ್ಡ್ ಸುರೇಶ್ (Gold Suresh) ನಡುವೆ ಬಿಗ್ ಫೈಟ್ ನಡೆದಿದೆ. ಇದನ್ನೂ ಓದಿ:ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು: ಡಿವೋರ್ಸ್ ಬಗ್ಗೆ ಎ.ಆರ್. ರೆಹಮಾನ್ ರಿಯಾಕ್ಷನ್

    ಅಂತೆಯೇ ಆಟ ಆರಂಭವಾಗಿದೆ. ಈ ವೇಳೆ, ಗೋಲ್ಡ್ ಸುರೇಶ್ ಜೊತೆ ಉಗ್ರಂ ಮಂಜು (Ugramm Manju) ಮಾತುಕತೆ ನಡೆಸುತ್ತಿರುತ್ತಾರೆ. ಇಬ್ಬರ ನಡುವಿನ ವಾಗ್ವಾದಕ್ಕೆ ರಜತ್ ಎಂಟ್ರಿಯಾಗಿ ಕೆಲವು ಪದಗಳನ್ನು ಗೋಲ್ಡ್ ಸುರೇಶ್‌ಗೆ ಬಳಸಿದ್ದಾರೆ. ಗುಗ್ಗು ನನ್ನ ಮಗ, ವೇಸ್ಟ್ ನನ್ನ ಮಗ ಎಂಬ ಪದಗಳನ್ನು ರಜತ್ ಬಳಸಿ ಸುರೇಶ್‌ಗೆ ಕೌಂಟರ್ ಕೊಟ್ಟಿದ್ದಾರೆ. ತಮ್ಮ ಮೇಲೆ ಬಳಕೆ ಆಗಿರುವ ಪದಗಳು ನಿಂದಿಸಿರುವ ರೀತಿ ನನಗೆ ಬೇಸರ ಆಗಿದೆ. ಬಿಗ್ ಬಾಸ್ ಅವರು ನನಗೆ ಮಗನೆ, ಗಿಗನೆ ಎಂದೆಲ್ಲ ಹೇಳ್ತಾರೆ. ಇವನು ನನ್ನ ಅಪ್ಪ ಅಲ್ಲ. ಬಿಗ್ ಬಾಸ್ ನಾನು ಆಟ ಆಡಲ್ಲ. ಬಿಗ್ ಬಾಸ್ ಬಾಗಿಲು ಓಪನ್ ಮಾಡಿ ಎಂದು ಡೋರ್ ತಟ್ಟಿದ್ದಾರೆ. ಸುರೇಶ್‌ಗೆ ಶಿಶಿರ್‌, ಮೋಕ್ಷಿತಾ ಅದೆಷ್ಟೇ ಸಮಾಧಾನ ಮಾಡಿದರು ಕೇಳೋ ಪರಿಸ್ಥತಿಯಲ್ಲಿ ಅವರಿಲ್ಲ.

    ಈ ಪ್ರೋಮೋ ನೋಡಿ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಎಪಿಸೋಡ್‌ಗಾಗಿ ಅಭಿಮಾನಿಗಳು ಎದುರು ನೋಡಿದ್ದಾರೆ. ದೊಡ್ಮನೆಗೆ ಬರುತ್ತಿದ್ದಂತೆಯೇ ವೈಲ್ಡ್ ಕಾರ್ಡ್ ಸ್ಪರ್ಧಿಗಳು ವೈಲ್ಡ್ ಆಗಿ ಆಟ ಆಡುತ್ತಿದ್ದಾರೆ.

  • BBK 11: ಫೈರ್‌ ಲೇಡಿ ಶೋಭಾ ಶೆಟ್ಟಿ ಅಬ್ಬರಕ್ಕೆ ದಂಗಾದ ಉಗ್ರಂ ಮಂಜು

    BBK 11: ಫೈರ್‌ ಲೇಡಿ ಶೋಭಾ ಶೆಟ್ಟಿ ಅಬ್ಬರಕ್ಕೆ ದಂಗಾದ ಉಗ್ರಂ ಮಂಜು

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ಇದೀಗ 50 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಈ ಸಂದರ್ಭದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಶೋಭಾ ಶೆಟ್ಟಿ (Shobha Shetty) ಮತ್ತು ರಜತ್ (Rajath) ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿ ಈಗ ಅಸಲಿ ಆಟ ಶುರುವಾಗಿದೆ. ಇದರ ನಡುವೆ ಕ್ಯಾಪ್ಟನ್ಸಿ ರೇಸ್‌ನಲ್ಲಿ ನಿಲ್ಲಲು ಶೋಭಾ ಅನರ್ಹ ಎಂಬ ವಿಚಾರಕ್ಕೆ ನಟಿ ಮತ್ತು ಮಂಜು ನಡುವೆ ವಾಕ್ಸಮರ ನಡೆದಿದೆ. ಈ ವೇಳೆ, ಶೋಭಾ ಅರ್ಭಟಕ್ಕೆ ಉಗ್ರಂ ಮಂಜು ಸೈಲೆಂಟ್ ಆಗಿದ್ದಾರೆ.

    ವೈಲ್ಡ್ ಕಾರ್ಡ್ ಎಂಟ್ರಿಯಾದ ರಜತ್ ಹಾಗೂ ಶೋಭಾ ಅವರ ಪೈಕಿ ಈ ಮನೆಯ ಕ್ಯಾಪ್ಟನ್ ಆಗಲು ಯಾರು ಅನರ್ಹರು ಎಂದು ಹೇಳುವ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದರು. ಇಂದು ಬಿಗ್ ಬಾಸ್ ಮನೆಯ ಸದಸ್ಯರು ಶೋಭಾ ಹಾಗೂ ರಜತ್ ಅವರ ಪೈಕಿ ತಂಡದ ನಾಯಕರಾಗಲು ಯಾರು ಅನರ್ಹರು ಎಂದು ಸ್ಪರ್ಧಿಗಳು ಆಯ್ಕೆ ಮಾಡಬೇಕಿತ್ತು. ಇದನ್ನೂ ಓದಿ:ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡ ಹರಿಪ್ರಿಯಾ

    ಆಗ ರೂಲ್ಸ್ ಅಂಡ್ ರೆಗ್ಯೂಲೇಷನ್ ಏನು ಇರುತ್ತೋ ಅದನ್ನ ಎಲ್ಲೋ ಅಲ್ಲಾಡ್ಸಿದ್ದು ಶೋಭಾ ಅವರು ಎಂದು ಉಗ್ರಂ ಮಂಜು ರಾಂಗ್ ಆಗಿದ್ದಾರೆ. ಮಂಜು ಆಡಿದ ಮಾತಿಗೆ ಶೋಭಾ ಕೆರಳಿ ಕೆಂಡವಾಗಿದ್ದಾರೆ. ಅಲ್ಲಾಡ್ಸೋದು ಗಿಲ್ಲಾಡ್ಸೋದು ಅಂದ್ರೆ ಏನು? ಇವರಿಗೆ ಕ್ಲ್ಯಾರಿಟಿಯೇ ಇಲ್ಲ ಎಂದು ಶೋಭಾ ಗುಡುಗಿದ್ದಾರೆ. ಸೂಕ್ತ ಕಾರಣ ಕೊಡುತ್ತಾ ಇಲ್ಲ. ಆಡುವ ಮಾತಿನಲ್ಲಿ ಕ್ಲ್ಯಾರಿಟಿ ಇಲ್ಲ ಎಂದಿದ್ದಾರೆ ಶೋಭಾ.

    ಕ್ಲ್ಯಾರಿಟಿಯಿಂದಲೇ ಹೇಳುತ್ತಾ ಇದ್ದೀನಿ ಕಿರುಚಬೇಡಿ ಎಂದು ಮಂಜು ತಿರುಗೇಟು ನೀಡಿದ್ದಾರೆ. ನನ್ನ ಮಾತು ಕೇಳಿಸಿಕೊಳ್ಳಿ, ಮರ್ಯಾದೆ ಕಳೆದುಕೊಳ್ಳಬೇಡಿ ಎಂದು ಮಂಜು ಮೇಲೆ ಶೋಭಾ ಗುಡುಗಿದ್ದಾರೆ. ಶೋಭಾ ಅವರ ಕೂಗಾಟಕ್ಕೆ ಉಗ್ರಂ ಮಂಜು ಕೂಡ ಒಂದು ಕ್ಷಣ ಸೈಲೆಂಟ್ ಆಗಿದ್ದಾರೆ. ಇವರ ವಾಕ್ಸಮರ ನೋಡಿ ಮನೆ ಮಂದಿ ಸೈಲೆಂಟ್‌ ಆಗಿದ್ದಾರೆ. ದೊಡ್ಮನೆಯಲ್ಲಿ ಸದ್ಯ ವೈಲ್ಡ್‌ ಕಾರ್ಡ್‌ ಸ್ಪರ್ಧಿ ಶೋಭಾ ಹವಾ ಜೋರಾಗಿದೆ. ಇನ್ಮೇಲೆ ಅವರ ಆಟ ಹೇಗಿರುತ್ತದೆ ಎಂದು ಕಾದುನೋಡಬೇಕಿದೆ.

  • BBK 11: ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಶೋಭಾ ಶೆಟ್ಟಿ, ರಜತ್ ಬುಜ್ಜಿ

    BBK 11: ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಶೋಭಾ ಶೆಟ್ಟಿ, ರಜತ್ ಬುಜ್ಜಿ

    ‘ಬಿಗ್ ಬಾಸ್ ಕನ್ನಡ 11’ರ ಆಟಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ (Wildcard Contestant )ಹನುಮಂತ ಎಂಟ್ರಿ ಕೊಟ್ಟ ಬಳಿಕ ಇದೀಗ ಇನ್ನಿಬ್ಬರೂ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಆಗಮನವಾಗಿದೆ. ‘ಅಗ್ನಿಸಾಕ್ಷಿ’ ನಟಿ ಶೋಭಾ ಶೆಟ್ಟಿ (Shobha Shetty) ಮತ್ತು ರಜತ್ ಬುಜ್ಜಿ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಇಬ್ಬರೂ ವೈಲ್ಡ್ ಕಾರ್ಡ್ ಸ್ಪರ್ಧಿಗಳು ವೇದಿಕೆಗೆ ಎಂಟ್ರಿ ಕೂಡಲೇ ಸುದೀಪ್​, ಯಾರು ನಿಮಗೆ ಟಫ್​ ಅನಿಸುವ ಸ್ಪರ್ಧಿಗಳು ಅಂತ ಹೇಳಿದ್ದಾರೆ. ಅದಕ್ಕೆ ಶೋಭಾ ಶೆಟ್ಟಿ, ಅವರು ಯಾರು ಇಲ್ಲ ಅಂತ ಉತ್ತರ ಕೊಟ್ಟಿದ್ದಾರೆ. ಮತ್ತೆ ರಜತ್​ ಬುಜ್ಜಿ ಅವರು ಬಿಗ್​ ಬಾಸ್​ ಮನೆಯಲ್ಲಿರೋ ಸ್ಪರ್ಧಿಗಳು ಅರ್ಧ ಪುಕ್ಲು, ಇನ್ನೂ ಅರ್ಧ ತಿಕ್ಲೂ, ಅವರಿಗೆ ಇವರು ಕಂಡ್ರೆ ಆಗೋದಿಲ್ಲ, ಇವರಿಗೆ ಅವರು ಕಂಡ್ರೆ ಆಗೋದಿಲ್ಲ, ಇವರು ಯಾರು ಉದ್ಧಾರ ಆಗೋದಿಲ್ಲ ಸರ್​ ಅಂತ ಸುದೀಪ್​ ಮುಂದೇಯೇ ಹೇಳಿದ್ದಾರೆ. ಆಗ ಸುದೀಪ್ ಇವರು ನಿಜವಾದ ಬಿಗ್​ ಬಾಸ್​ ಕಂಟೆಸ್ಟೆಂಟ್​ ಅಂತ ಹೇಳಿದ್ದಾರೆ. ಇದೇ ಮಾತನ್ನು ಕೇಳಿಸಿಕೊಂಡ ಬಿಗ್ ಬಾಸ್ ಮನೆಯೊಳಗಿನ ಸ್ಪರ್ಧಿಗಳು ಫುಲ್ ಶಾಕ್ ಆಗಿದ್ದಾರೆ.

    ಕನ್ನಡತಿ ಶೋಭಾ ಶೆಟ್ಟಿ ಅವರು ಕಳೆದ ತೆಲುಗಿನ ಬಿಗ್ ಬಾಸ್ 7ಕ್ಕೆ ಸ್ಪರ್ಧಿಯಾಗಿ ಆಟ ಆಡಿ ಪ್ರೇಕ್ಷಕರ ಗಮನ ಸೆಳದಿದ್ದರು.‌ ಅಗ್ನಿಸಾಕ್ಷಿ, ನಮ್ಮ ರುಕ್ಕು ಸೇರಿದಂತೆ ಹಲವು ಸೀರಿಯಲ್ ಗಳಲ್ಲಿ ನಟಿಸಿದ್ದಾರೆ.

    ಇನ್ನೂ 2013ರಲ್ಲಿ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಮೂಲಕ ಜನರಿಗೆ ಪರಿಚಯವಾದ ರಜತ್ ಬುಜ್ಜಿ ಅವರು ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ. ನಟ ರಜತ್ ಬುಜ್ಜಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದಾರೆ.