Tag: Rajath

  • BBK 11: ರಜತ್ ರಂಪಾಟಕ್ಕೆ ಚೈತ್ರಾ ಕುಂದಾಪುರ ಗಪ್‌ಚುಪ್‌

    BBK 11: ರಜತ್ ರಂಪಾಟಕ್ಕೆ ಚೈತ್ರಾ ಕುಂದಾಪುರ ಗಪ್‌ಚುಪ್‌

    ನ್ನಡದ ಬಿಗ್ ಬಾಸ್ ಮನೆಯ (Bigg Boss Kannada 11) ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ದೊಡ್ಮನೆಯ ಆಟ 90ನೇ ದಿನದತ್ತ ಮುನ್ನುಗ್ಗುತ್ತಿದೆ. ಇದರ ನಡುವೆ ಬಿಗ್ ಬಾಸ್‌ನಲ್ಲಿ ರಜತ್ (Rajath) ರಂಪಾಟ ಜೋರಾಗಿದೆ. ಸಿಕ್ಕಿದ್ದೇ ಚಾನ್ಸ್ ಅಂತ ಮಂಜು ಮತ್ತು ಚೈತ್ರಾಗೆ ಸಖತ್ ಆಗಿ ಆಟ ಆಡಿಸಿದ್ದಾರೆ. ಇದನ್ನೂ ಓದಿ:ಕಾಲ್ತುಳಿತ ಪ್ರಕರಣ: ಮೃತ ಮಹಿಳೆ ಕುಟುಂಬಕ್ಕೆ 2 ಕೋಟಿ ಪರಿಹಾರ ಘೋಷಿಸಿದ ಅಲ್ಲು ಅರ್ಜುನ್ ತಂದೆ

    ದೊಡ್ಮನೆಯಲ್ಲಿ ಈ ವಾರ ಎರಡು ತಂಡವಾಗಿ ವಿಂಗಡಣೆಯಾಗಿದೆ. ಒಂದು ತಂಡದಲ್ಲಿ ಚೈತ್ರಾ ಕುಂದಾಪುರ, ಐಶ್ವರ್ಯಾ, ಮಂಜು, ಗೌತಮಿ, ಹನುಮಂತ ಒಂದು ಟೀಮ್‌ನಲ್ಲಿದ್ದಾರೆ. ಮತ್ತೊಂದು ಟೀಮ್‌ನಲ್ಲಿ ತ್ರಿವಿಕ್ರಮ್, ಭವ್ಯಾ, ಧನರಾಜ್, ರಜತ್ ಹಾಗೂ ಮೋಕ್ಷಿತಾ ಇದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ತ್ರಿವಿಕ್ರಮ್ ತಂಡದವರು ಬಿಗ್ ಬಾಸ್ ರೆಸಾರ್ಟ್‌ನಲ್ಲಿ ಕೆಲಸ ಮಾಡುವವರಾಗಿದ್ದರು. ಉಗ್ರಂ ಮಂಜು ಟೀಮ್ ರೆಸಾರ್ಟ್‌ಗೆ ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದರು. ಈಗ ಅದು ಉಲ್ಟಾ ಆಗಿದೆ.

    ನಿನ್ನೆ ಮಂಜು ತಂಡ ಬೇಕಾ ಬಿಟ್ಟಿಯಾಗಿ ರೆಸಾರ್ಟ್ ಕೆಲಸಗಾರರ ಮೇಲೆ ದರ್ಪ ತೋರಿಸಿದ್ದರು. ಚೈತ್ರಾ ಕುಂದಾಪುರ (Chaithra Kundapura) ಅಂತೂ ಸಿಕ್ಕಿದ್ದೇ ಚಾನ್ಸ್ ಅಂತ ರಜತ್‌ಗೆ ಕೆಲಸ ಕೊಟ್ಟಿದ್ದರು. ಈಗ ಆಟದಲ್ಲಿ ‘ಬಿಗ್ ಬಾಸ್’ ಟ್ವಿಸ್ಟ್ ಕೊಟ್ಟಿದ್ದಾರೆ. ನಿನ್ನೆ ಕೆಲಸಗಾರರಾಗಿದ್ದ ತ್ರಿವಿಕ್ರಮ್ ಟೀಮ್ ಈಗ ಅತಿಥಿಗಳಾಗಿದ್ದಾರೆ. ಮಂಜು ಟೀಮ್ ಬಿಗ್ ಬಾಸ್ ರೆಸಾರ್ಟ್‌ನಲ್ಲಿ ಕೆಲಸ ಮಾಡುವವರಾಗಿದ್ದಾರೆ.

    ಈಗ ಬಿಗ್ ಬಾಸ್ ಮನೆಯಲ್ಲಿ ಅಸಲಿ ಆಟ ಶುರುವಾಗಿದೆ. ತ್ರಿವಿಕ್ರಮ್ ತಂಡ ತಮ್ಮ ಆಟವನ್ನು ಸ್ಟಾರ್ಟ್ ಮಾಡಿದ್ದಾರೆ. ಬೇಕು ಬೇಕು ಅಂತಾನೇ ಬಿಗ್ ಬಾಸ್ ರೆಸಾರ್ಟ್‌ನಲ್ಲಿ ಕೆಲಸ ಮಾಡುವವರಿಗೆ ಹೆಚ್ಚಾಗಿ ವರ್ಕ್ ಕೊಟ್ಟಿದ್ದಾರೆ. ರಜತ್ ಅಂತೂ ಸಿಕ್ಕಿದ್ದೇ ಚಾನ್ಸ್ ಚೈತ್ರಾ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ಎದುರಾಳಿ ತಂಡಕ್ಕೆ ಸಖತ್ ಆಗಿ ಕ್ವಾಟ್ಲೆ ಕೊಟ್ಟಿದ್ದಾರೆ. ಆಗ ಮೋಕ್ಷಿತಾ ತೊಡೆ ಮೇಲೆ ಕುಳಿತುಕೊಂಡಿದ್ದಾರೆ. ಆಗ ರಜತ್ ಮೇಲೆ ಮೋಕ್ಷಿತಾ ರೇಗಾಡಿದ್ದಾರೆ. ಇದು ವಾಹಿನಿ ಹಂಚಿಕೊಂಡ ಪ್ರೋಮೋದಲ್ಲಿ ಹೈಲೆಟ್ ಆಗಿದೆ.

  • ಈ ಡೌವ್‌ಗಳನ್ನು ಬಿಟ್ಟು ಮನೆ ಕಡೆ ಹೋಗೋದು ಒಳ್ಳೆಯದು: ಚೈತ್ರಾಗೆ ರಜತ್ ಟಾಂಗ್

    ಈ ಡೌವ್‌ಗಳನ್ನು ಬಿಟ್ಟು ಮನೆ ಕಡೆ ಹೋಗೋದು ಒಳ್ಳೆಯದು: ಚೈತ್ರಾಗೆ ರಜತ್ ಟಾಂಗ್

    ಬಿಗ್ ಬಾಸ್ ಸೀಸನ್ 11ರ (Bigg Boss Kannada 11)  ಸೂಪರ್ ಸಂಡೇ ಕಾರ್ಯಕ್ರಮಕ್ಕೆ ಸುದೀಪ್ ಎಂದಿನಂತೆ ಸ್ಟೈಲೀಶ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಆದರೆ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಿಗೆ ಇವತ್ತು ಟ್ವಿಸ್ಟ್ ಮೇಲೆ ಟ್ವಿಸ್ಟ್‌ಗಳು ಎದುರಾಗುತ್ತಿವೆ. ಈಗಾಗಲೇ 80 ದಿನಗಳನ್ನು ಪೂರೈಸಿರುವ ಬಿಗ್ ಬಾಸ್ ಸೀಸನ್ 11 ಈಗ ಕೆಲವೇ ಕೆಲವು ವಾರಗಳಷ್ಟೇ ಬಾಕಿ ಉಳಿದಿದೆ.

    ಬಿಗ್ ಬಾಸ್ ಮನೆಯಲ್ಲಿ ಈ ವಾರದ ಎಲಿಮಿನೇಷನ್ ಕೂಡ ರೋಚಕವಾಗಿದೆ. ಈ ವಾರ ಮನೆಯಿಂದ ಯಾರು ಹೊರಗೆ ಬರುತ್ತಾರೆ ಅನ್ನೋದು ಸಸ್ಪೆನ್ಸ್ ಆಗಿ ಉಳಿದಿದೆ. ಇದೀಗ ಸುದೀಪ್ ಮನೆಯ ಸದಸ್ಯರಿಗೆ ಸ್ಪೆಷಲ್ ಟಾಸ್ಕ್‌ವೊಂದು ನೀಡಿದ್ದಾರೆ. ನಿಮ್ಮ ಪ್ರಕಾರ, ಬಿಗ್ ಬಾಸ್ ಮನೆಯಲ್ಲಿ ಇವರ ಇಂಪಾರ್ಟೆನ್ಸ್ ಇಲ್ಲ ಎನ್ನುವವರು ಅವರ ಫೋಟೋವನ್ನು ಮೂಟೆಗೆ ಅಂಟಿಸಿ ಕಸದ ಬುಟ್ಟಿಗೆ ಹಾಕಬೇಕು ಎಂದರು. ಆಗ ಈ ಟಾಸ್ಕ್‌ನಲ್ಲಿ ಬಹುತೇಕ ಸ್ಪರ್ಧಿಗಳು ಎಲ್ಲರೂ ಚೈತ್ರಾ (Chaithra Kundapura) ಮೇಲೆ ತಿರುಗಿ ಬಿದ್ದಿದ್ದಾರೆ.

    ಭವ್ಯಾ, ಮೋಕ್ಷಿತಾ, ರಜತ್, ಐಶ್ವರ್ಯಾ, ಗೌತಮಿ, ಹನುಮಂತ ಎಲ್ಲರೂ ಚೈತ್ರಾರನ್ನೇ ಕಸದ ಬುಟ್ಟಿಗೆ ಹಾಕಿದ್ದಾರೆ. ಇದಕ್ಕೆ ಪ್ರತಿಯೊಬ್ಬರು ಸೂಕ್ತವಾದ ಕಾರಣಗಳನ್ನ ನೀಡಿದ್ದು, ಚೈತ್ರಾರವರು ಗರಂ ಆಗಿದ್ದಾರೆ. ಇದನ್ನೂ ಓದಿ:ನನ್ನ ವ್ಯಕ್ತಿತ್ವಕ್ಕೆ ಧಕ್ಕೆ ತರುವ ಕೆಲಸ ನಡೆಯುತ್ತಿದೆ: ತೆಲಂಗಾಣ ಸಿಎಂ ಆರೋಪಕ್ಕೆ ಅಲ್ಲು ಅರ್ಜುನ್‌ ಬೇಸರ

    ಐಶ್ವರ್ಯಾ ಅವರು ಚೈತ್ರಾ ಅವರಿಗೆ ನೀವು ಮುಖವಾಡ ಕಳಚುತ್ತೇನೆ ಎಂದಿದ್ದೀರಿ. ಆದರೆ ಅವರೇ ಒಂದು ವೇಷ ತೊಟ್ಟುಕೊಂಡು ಆಟ ಆಡುತ್ತಿದ್ದಾರೆ ಎಂದಿದ್ದಾರೆ. ಹನುಮಂತ ಕೂಡ ಮಾತು ಮನೆ ಕೆಡಿಸಿತು ತೂತು ಒಲೆ ಕೆಡಿಸಿತು ಅನ್ನೋ ಹಂಗೆ ಚೈತ್ರಕ್ಕ ಈ ಮನೆಯನ್ನೇ ಕೆಡಿಸಿ ಬಿಟ್ಟಿದ್ದಾಳೆ ಎಂದು ಖಡಕ್ ಡೈಲಾಗ್ ಹೇಳಿದ್ದಾನೆ.

    ಕಳಪೆ ಬಂತು ಅಂದರೆ ಚೈತ್ರಾ ಫುಲ್ ಹುಷಾರು ತಪ್ಪುತ್ತಾರೆ. ವೀಕೆಂಡ್‌ನಲ್ಲಿ ಫುಲ್ ಡಲ್ ಆಗಿರುತ್ತಾರೆ. ಮತ್ತೆ ರಾತ್ರಿ ಇಮಿಡಿಯೇಟ್ ಆಗಿ ಚಾರ್ಜ್ ಆಗ್ತಾರೆ. ಫೈರ್ ಬ್ರಾಂಡ್ ಈಸ್ ಬ್ಯಾಕ್ ಅಂತಾರೆ ಇದು ಹೇಗೆ ಅನ್ನೋದು ಗೊತ್ತಿಲ್ಲ ಎಂದು ಮೋಕ್ಷಿತಾ ರಾಂಗ್‌ ಆಗಿದ್ದಾರೆ. ಬಳಿಕ ಈ ಡೌವ್‌ಗಳನ್ನ ಬಿಟ್ಟು ಮನೆ ಕಡೆ ಹೋಗೋದು ಒಳ್ಳೆಯದು ಎಂದು ಚೈತ್ರಾಗೆ ರಜತ್ (Rajath) ಟಾಂಗ್ ಕೊಟ್ಟಿದ್ದಾರೆ.

  • BBK 11: ತ್ರಿವಿಕ್ರಮ್‌ ಮೇಲೆ ಡಿಪೆಂಡ್‌ ಆಗ್ತೀರಾ ಎಂದ ಮೋಕ್ಷಿತಾ ಮೇಲೆ ಭವ್ಯಾ ಕೆಂಡ

    BBK 11: ತ್ರಿವಿಕ್ರಮ್‌ ಮೇಲೆ ಡಿಪೆಂಡ್‌ ಆಗ್ತೀರಾ ಎಂದ ಮೋಕ್ಷಿತಾ ಮೇಲೆ ಭವ್ಯಾ ಕೆಂಡ

    ದೊಡ್ಮನೆಯ (Bigg Boss Kannada 11)  ಆಟ ದಿನದಿಂದ ದಿನಕ್ಕೆ ಸಾಕಷ್ಟು ತಿರುವುಗಳನ್ನು ಪಡೆದು ಮುನ್ನುಗ್ಗುತ್ತಿದೆ. ಮನೆಯ ಪಕ್ಷಪಾತಿ, ಅಶಕ್ತ ಎಂಬ ವಿಚಾರಕ್ಕೆ ಸ್ಪರ್ಧಿಗಳ ನಡುವೆ ಕಿತ್ತಾಟ ಶುರುವಾಗಿದೆ. ಈ ವೇಳೆ, ಉಗ್ರಂ ಮಂಜುಗೆ (Ugramm Manju) ರಜತ್ (Rajath) ಚೀಪ್ ಎಂದು ಕುಟುಕಿದ್ದಾರೆ. ಇತ್ತ ಮೋಕ್ಷಿತಾ (Mokshitha) ಕೂಡ ಭವ್ಯಾ ಮೇಲೆ ಎಗರಾಡಿದ್ದಾರೆ. ಇದನ್ನೂ ಓದಿ:ಸಿನಿಮಾ ಚಾನ್ಸ್‌ಗಾಗಿ ಸೆಕ್ಸ್ ಮಾಡಿದ್ದೀರಾ? ಎಂದವನಿಗೆ ಚೈತ್ರಾ ಆಚಾರ್ ತಿರುಗೇಟು

    ಸದ್ಯ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ನನ್ನಿಂದಲೇ ಈ ಟಾಸ್ಕ್ ಗೆಲ್ತು. ನನ್ನಿಂದಲೇ ಈ ಆಟ ಗೆದ್ದರು ಅಂದುಕೊಳ್ಳುವ ಚೀಪ್ ಮೆಂಟಾಲಿಟಿ ಮಂಜಣ್ಣನದ್ದು ಎಂದು ರಜತ್ ಹೇಳಿದ್ದಾರೆ. ರಜತ್ ಮಾತು ಕೇಳಿ, ಮಂಜು ಗರಂ ಆಗಿದ್ದಾರೆ. ನಾನು ಮಾಡಿರೋ ಕೆಲಸನಾ ನಾನೇ ಹೇಳಿಕೊಳ್ಳೋದ್ರಲ್ಲಿ ತಪ್ಪೇನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ಬಳಿಕ ಬಿಗ್ ಬಾಸ್‌ನ ಟಾಸ್ಕ್ ರೂಲ್ಸ್‌ನಂತೆಯೇ ಸ್ಪರ್ಧಿ ಮಂಜುರನ್ನು ರಜತ್ ನೀರಿಗೆ ತಳ್ಳಿದ್ದಾರೆ.

    ಭವ್ಯಾ ಎಲ್ಲರ ಜೊತೆ ಮಿಂಗಲ್ ಆಗೋದಿಲ್ಲ. ನೀವು ತ್ರಿವಿಕ್ರಮ್ ಜೊತೆ ಡಿಪೆಂಡ್ ಆಗ್ತೀರಾ. ತುಂಬಾ ನಿಷ್ಠುರವಾಗಿ ಮಾತಾಡ್ತೀರಾ ಎಂದು ಮೋಕ್ಷಿತಾ ಹೇಳಿದರು. ಮೋಕ್ಷಿತಾರ ಪ್ರತಿ ಮಾತಿಗೂ ಭವ್ಯಾ ತಿರುಗೇಟು ನೀಡಿದ್ದಾರೆ. ನಾನು ಎಲ್ಲರ ಬಳಿ ಹೋಗಿ ಕಷ್ಟ ಸುಖ ಹೇಳಬೇಕಾಗಿಲ್ಲ. ತ್ರಿವಿಕ್ರಮ್ ನನ್ನ ಆಟವನ್ನ ಆಡುತ್ತಿಲ್ಲ. ನಾನು ಈ ಮನೆಗೆ ಸಂಬಂಧಗಳನ್ನು ಬೆಳೆಸಲು ಬಂದಿಲ್ಲ. ಯಾರ ಬಳಿ ಕೂಡ ಸರ್ಟಿಫಿಕೇಟ್ ಬೇಕಿಲ್ಲ ಎಂದು ಭವ್ಯಾ ಕೆಂಡಕಾರಿದ್ದಾರೆ. ಆ ನಂತರ ಭವ್ಯಾರನ್ನು (Bhavya Gowda) ಮೋಕ್ಷಿತಾ ನೀರಿಗೆ ತಳ್ಳಿದ್ದಾರೆ.

    ಇನ್ನೂ ಶಿಶಿರ್ ಎಲಿಮಿನೇಷನ್ ಮತ್ತು ಗೋಲ್ಡ್ ಸುರೇಶ್ ನಿರ್ಗಮನದ ನಂತರ ಈ ವಾರಾಂತ್ಯ ಯಾರು ಮನೆಯಿಂದ ಹೊರಬರುತ್ತಾರೆ ಎಂಬುದರ ಬಗ್ಗೆ ಫ್ಯಾನ್ಸ್‌ಗೆ ಕುತೂಹಲವಿದೆ. ಈ ವಾರ ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆಯಿದೆ.

  • BBK 11: ಹದ್ದು ಮೀರಿದ ವರ್ತನೆ- ಉಗ್ರಂ ಮಂಜು, ರಜತ್ ನಡುವೆ ಕಿರಿಕ್

    BBK 11: ಹದ್ದು ಮೀರಿದ ವರ್ತನೆ- ಉಗ್ರಂ ಮಂಜು, ರಜತ್ ನಡುವೆ ಕಿರಿಕ್

    ದೊಡ್ಮನೆಯಲ್ಲಿ ವೈಲ್ಡ್ ಕಾರ್ಡ್ ಎಂಟ್ರಿ ರಜತ್ (Rajath) ಆರ್ಭಟ ಜೋರಾಗಿದೆ. ಸ್ಪರ್ಧಿ ರಜತ್ ಅವರ ಮಾತಿಗೆ ಮನೆಮಂದಿಯೇ ರೊಚ್ಚಿಗೆದ್ದಿದ್ದಾರೆ. ಹದ್ದು ಮೀರಿದೆ ವರ್ತನೆ ಕಂಡು ಸ್ಪರ್ಧಿಗಳು ದಂಗಾಗಿದ್ದಾರೆ. ಉಗ್ರಂ ಮಂಜು (Ugramm Manju) ಹಾಗೂ ರಜತ್ ನಡುವೆ ಜೋರು ಗಲಾಟೆ ನಡೆದಿದೆ. ಇದನ್ನೂ ಓದಿ:ಆಕೆ ಮುಗ್ಧೆ, ತಪ್ಪು ಮಾಡಿಲ್ಲ: ಪವಿತ್ರಾಗೆ ಬೇಲ್ ಸಿಕ್ಕಿದ್ದಕ್ಕೆ ಮಾಜಿ ಪತಿ ಸಂತಸ

    ‘ಚೆಂಡು ಸಾಗಲಿ ಮುಂದೆ ಹೋಗಲಿ’ ಎನ್ನುವ ಟಾಸ್ಕ್‌ನಲ್ಲಿ ಬಿಗ್ ಬಾಸ್ ಚೈತ್ರಾ ಅವರು ಆಟದ ಉಸ್ತುವಾರಿ ವಹಿಸಿಕೊಂಡಿದ್ದರು. ಈ ವೇಳೆ, ಚೈತ್ರಾ ಹಾಗೂ ರಜತ್ ನಡುವೆ ಮಾತಿನ ಚಕಮಕಿ ನಡೆದಿದೆ. ಟಿವಿಯಲ್ಲಿ ಗೇಮ್ ನೋಡಿಕೊಂಡು ಬಂದವರ ಕಥೆ ಇದೆ ಎಂದು ರಜತ್ ಬಗ್ಗೆ ಮಂಜು ಕೆಂಡಕಾರಿದ್ದಾರೆ. ಆಗ ಯೋಗ್ಯತೆಯ ಮಾತುಗಳು ಬಂದಿವೆ. ಮಂಜು ಅವರು ರಜತ್ ಅವರ ಮೈ ಮೇಲೆ ಹೋಗಿದ್ದಾರೆ.

    ಕಳೆದ ವಾರಾಂತ್ಯ ಧನರಾಜ್ ಜೊತೆಗಿನ ರಜತ್ ಜಗಳದ ವಿಚಾರವಾಗಿ ಸುದೀಪ್ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಜೊತೆಗೆ ಶಿಕ್ಷೆ ನೀಡಿದ್ದರು. ಆದರೂ ಇದೀಗ ಮತ್ತೆ ಮಂಜು ಹಾಗೂ ರಜತ್ ಅವರ ನಡುವೆ ಮಾರಾಮಾರಿಯಾಗಿದೆ. ಹಾಗಾದ್ರೆ ಈ ವಾರಾಂತ್ಯವು ಕೂಡ ರಜತ್‌ಗೆ ಸುದೀಪ್ ಬೆಂಡೆತ್ತುತ್ತಾರಾ? ಕಾದುನೋಡಬೇಕಿದೆ.

    ಇನ್ನೂ ಬಿಗ್ ಬಾಸ್‌ನಿಂದ ಕಳೆದ ವಾರ ಶಿಶಿರ್ ಎಲಿಮಿನೇಟ್ ಆಗಿದ್ದಾರೆ. ನಿನ್ನೆಯ ಸಂಚಿಕೆಯಲ್ಲಿ ಕುಟುಂಬದಲ್ಲಿನ ತುರ್ತು ಪರಿಸ್ಥಿತಿ ಹಿನ್ನೆಲೆ ಗೋಲ್ಡ್ ಸುರೇಶ್ ಕೂಡ ಮನೆಯಿಂದ ನಿರ್ಗಮಿಸಿದ್ದಾರೆ. ಅಸಲಿಗೆ ಏನಾಗಿದೆ ಎಂಬುದು ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ.

  • BBK 11: ರಜತ್, ತ್ರಿವಿಕ್ರಮ್ ನಡುವೆ ಫೈಟ್- ಮತ್ತೆ ರದ್ದಾಗುತ್ತಾ ಟಾಸ್ಕ್?

    BBK 11: ರಜತ್, ತ್ರಿವಿಕ್ರಮ್ ನಡುವೆ ಫೈಟ್- ಮತ್ತೆ ರದ್ದಾಗುತ್ತಾ ಟಾಸ್ಕ್?

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ದೊಡ್ಮನೆ ಆಟ ಶುರುವಾದ ದಿನದಿಂದ ಒಂದಲ್ಲಾ ಒಂದು ಕಿರಿಕ್‌ನಿಂದಲೇ ಹೈಲೆಟ್ ಆಗುತ್ತಲೇ ಇದೆ. ಈಗ ಟಾಸ್ಕ್‌ವೊಂದರಲ್ಲಿ ರಜತ್ (Rajath) ಮತ್ತು ತ್ರಿವಿಕ್ರಮ್ (Trivikram) ನಡುವೆ ಕಿರಿಕ್ ಆಗಿದೆ. ಇದರಿಂದ ಆಟವೇ ರದ್ದಾಗುವ ಹಂತಕ್ಕೆ ಬಂದಿದೆ.

    ಇತ್ತೀಚೆಗೆ ಬಿಗ್ ಬಾಸ್ ಕೊಟ್ಟ ಟಾಸ್ಕ್‌ಗಳು ಸಾಕಷ್ಟು ಅರ್ಧಕ್ಕೆ ನಿಂತು ಹೋಗಿದ್ದು ಇದೆ. ಇದೀಗ ಟಾಸ್ಕ್ ಆಡುತ್ತಿದ್ದಾಗ ಉಸ್ತುವಾರಿಗಳು ಒಬ್ಬರಿಗೊಬ್ಬರು ಗಲಾಟೆ ಮಾಡಿಕೊಂಡಿದ್ದಾರೆ. ಇಬ್ಬರ ನಡೆಗೆ ಮನೆ ಮಂದಿ ಗರಂ ಆಗಿದ್ದಾರೆ. ಇದನ್ನೂ ಓದಿ:ಯಾರನ್ನೂ ದ್ವೇಷಿಸಲಿಲ್ಲ – ಎಸ್.ಎಂ ಕೃಷ್ಣ ಅಗಲಿಕೆಯ‌ ಕುರಿತು ನೋವು ಹಂಚಿಕೊಂಡ ನಟಿ ರಮ್ಯಾ

    ಒಂದು ತಂಡಕ್ಕೆ ರಜತ್ ಉಸ್ತುವಾರಿಯಾದರೇ, ಮತ್ತೊಂದು ತಂಡದಲ್ಲಿ ತ್ರಿವಿಕ್ರಮ್ ಉಸ್ತುವಾರಿಯಾಗಿದ್ದಾರೆ. ಡ್ರಮ್ ಅನ್ನು ಉರುಳಿಸುತ್ತಾ ಚೀಲಗಳನ್ನು ಸಂಗ್ರಹಿಸಿ, ಬಾರದ ವಸ್ತುವನ್ನು ಮೇಲೆ ಏರಿಸುವ ತಂಡ ಗೆಲ್ಲುತ್ತದೆ. ಇದೇ ಟಾಸ್ಕ್ ಆಡುತ್ತಿದ್ದಾಗ ತ್ರಿವಿಕ್ರಮ್ ತಂಡದವರು ಡ್ರಮ್‌ನಿಂದ ಆಚೆ ಬರುತ್ತಾರೆ. ಆಗ ಉಸ್ತುವಾರಿ ರಜತ್ ಟಾಸ್ಕ್ ಆಡುತ್ತಿದ್ದವರನ್ನು ತಡೆಯುತ್ತಾರೆ. ಹೀಗಾಗಿ ಇದೇ ವಿಚಾರಕ್ಕೆ ಇಬ್ಬರು ಉಸ್ತುವಾರಿಗಳ ಮಧ್ಯೆ ಗಲಾಟೆ ನಡೆದಿದೆ. ಆದರೆ ಈ ಬಾರಿಯೂ ಕೂಡ ಬಿಗ್ ಬಾಸ್ ಕೊಟ್ಟ ಟಾಸ್ಕ್ ರದ್ದಾಗುತ್ತಾ? ಎಂಬ ಕುತೂಹಲದಲ್ಲಿದ್ದಾರೆ ವೀಕ್ಷಕರು.

    ಅಂದಹಾಗೆ, ಈ ಬಾರಿ ಮನೆಯಿಂದ ಹೊರ ಹೋಗಲು 8 ಮಂದಿ ನಾಮಿನೇಟ್ ಆಗಿದ್ದಾರೆ. ಮೋಕ್ಷಿತಾ, ಭವ್ಯಾ, ಧನರಾಜ್, ಚೈತ್ರಾ, ತ್ರಿವಿಕ್ರಮ್, ಶಿಶಿರ್, ರಜತ್, ಹನುಮಂತ ನಾಮಿನೇಟ್ ಹಾಟ್ ಸೀಟ್‌ನಲ್ಲಿದ್ದಾರೆ. ಕಳೆದ ಎಲಿಮಿನೇಷನ್ ನಡೆಯದ ಹಿನ್ನೆಲೆ ಈ ಬಾರಿ ಡಬಲ್ ಎಲಿಮಿನೇಷನ್ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಎಲ್ಲದ್ದಕ್ಕೂ ವಾರಾಂತ್ಯ ಉತ್ತರ ಸಿಗಲಿದೆ.

  • BBK 11: ಅತಿಥಿಗಳ ಮುಂದೆ ಕೈ ಕೈ ಮಿಲಾಯಿಸಿದ ಸ್ಪರ್ಧಿಗಳು- ಅಷ್ಟಕ್ಕೂ ಆಗಿದ್ದೇನು?

    BBK 11: ಅತಿಥಿಗಳ ಮುಂದೆ ಕೈ ಕೈ ಮಿಲಾಯಿಸಿದ ಸ್ಪರ್ಧಿಗಳು- ಅಷ್ಟಕ್ಕೂ ಆಗಿದ್ದೇನು?

    ‘ಬಿಗ್ ಬಾಸ್ ಕನ್ನಡ 11’ರ ಕಾರ್ಯಕ್ರಮಕ್ಕೆ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್ (Karthik Mahesh) ಮತ್ತು ನಮ್ರತಾ ಗೌಡ (Namratha Gowda) ಎಂಟ್ರಿ ಕೊಟ್ಟಿದ್ದಾರೆ. ಈ ವೇಳೆ, ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ಧನರಾಜ್ ಅವರು ರಜತ್‌ರನ್ನು ನಾಮಿನೇಟ್ ಮಾಡಿದ್ದಕ್ಕೆ ಸಿಟ್ಟಾಗಿದ್ದಾರೆ. ಇಬ್ಬರೂ ಮಾತಿನ ಚಕಮಕಿ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ.

    ನಿನ್ನೆಯ ಸಂಚಿಕೆಯಲ್ಲಿ ಡ್ರೋನ್ ಪ್ರತಾಪ್ ಮನೆಗೆ ಆಗಮಿಸಿ ನಾಮಿನೇಷನ್ ಪಾಸ್ ಟಾಸ್ಕ್ ಮಾಡಿಸಿದರು. ಇದೀಗ ಇಂದಿನ ಸಂಚಿಕೆಯಲ್ಲಿ ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಆಗಮಿಸಿದ್ದಾರೆ. ಈ ವೇಳೆ ನಾಮಿನೇಷನ್ ಪ್ರಕ್ರಿಯೆ ಜರುಗಿದ್ದು, ಧನರಾಜ್ ಈ ಹಿಂದಿನ ಟಾಸ್ಕ್‌ ಕಾರಣ ಕೊಟ್ಟು ನಾಮಿನೇಟ್ ಮಾಡಿರೋದು ಕೋಪ ತರಿಸಿದೆ. ಇದನ್ನೂ ಓದಿ:ಅಣ್ಣಾವ್ರ ಅಪಹರಣದ ಸಂದರ್ಭ ಹೇಗಿತ್ತು?: ಎಸ್‌ಎಂ ಕೃಷ್ಣ ಸಹಾಯ ನೆನೆದ ಶಿವಣ್ಣ

    ನನ್ನ ಹತ್ರ ಹೀಗೆಲ್ಲಾ ಆಟ ಆಡಬೇಡ. ನಿನಗೆ ಮಗು ಅಂತ ಹೇಳೋದು ಇದೇ ಕಾರಣಕ್ಕೆ ಎಂದು ಧನರಾಜ್‌ಗೆ ರಜತ್ ಟೀಕಿಸಿದ್ದಾರೆ. ಏ ಪಾಪು ಎನ್ನುತ್ತಾರೆ. ಅದಕ್ಕೆ ಅಂಕಲ್ ಅಂಕಲ್ ಎನ್ನುತ್ತಾ ಧನರಾಜ್ ತಿರುಗೇಟು ನೀಡಿದ್ದಾರೆ. ಮೈ ಮುಟ್ಟಿ ರಜತ್‌ನ್ನು ಮಾತನಾಡಿಸುತ್ತಾರೆ. ಈ ವೇಳೆ, ಇಬ್ಬರ ವಾಕ್ಸಮರ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಇಬ್ಬರ ಜಗಳ ತಪ್ಪಿಸಲು ಉಗ್ರಂ ಮಂಜು ಮಧ್ಯೆಕ್ಕೆ ಹೋಗಿದ್ದಾರೆ. ಆ ನಂತರ ಎನ್ ಎಂಬುದಕ್ಕೆ ಇಂದಿನ ಸಂಚಿಕೆಯಲ್ಲಿ ಉತ್ತರ ಸಿಗಲಿದೆ.

    ಮನೆಗೆ ಗೆಸ್ಟ್ ಆಗಿ ಬಂದಿರುವ ಕಾರ್ತಿಕ್ ಮಹೇಶ್ ಮತ್ತು ನಮ್ರತಾ ಯಾವ ಟಾಸ್ಕ್ ಮಾಡಿಸುತ್ತಾರೆ. ಎನೆಲ್ಲಾ ತಿರುವು ಸಿಗಲಿದೆ ಎಂಬುದು ಕಾದುನೋಡಬೇಕಿದೆ.

  • BBK 11: ಹನುಮಂತ ಪ್ರೊಫೆಷನಲ್ ಕಿಲಾಡಿ: ತಿವಿದ ರಜತ್

    BBK 11: ಹನುಮಂತ ಪ್ರೊಫೆಷನಲ್ ಕಿಲಾಡಿ: ತಿವಿದ ರಜತ್

    ‘ಬಿಗ್ ಬಾಸ್ ಕನ್ನಡ 11ರ’ (Bigg Boss Kannada 11) ಆಟದಲ್ಲಿ ಒಬ್ಬೊಬ್ಬರೇ ಮನೆ ಖಾಲಿ ಮಾಡುತ್ತಿದ್ದಾರೆ. ಕಳೆದ ವಾರ ಶೋಭಾ ಶೆಟ್ಟಿ ಹೋಗಿದ್ದರು. ಇವರ ಬೆನ್ನಲ್ಲೇ ಈ ವಾರ ಹೊರಗಡೆ ಹೋಗುವುದು ಯಾರು ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಇದೆಲ್ಲದರ ನಡುವೆ ಮನೆಯ ಟಿಆರ್‌ಪಿ ಸ್ಪರ್ಧಿ ಯಾರು? ಎಂಬ ಪ್ರಶ್ನೆಯನ್ನು ಮನೆ ಮಂದಿಗೆ ಸುದೀಪ್ (Sudeep) ಭಾನುವಾರ ಎಪಿಸೋಡ್‌ನಲ್ಲಿ ಕೇಳಿದ್ದಾರೆ. ಇದರ ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದೆ. ಈ ವೇಳೆ, ಹನುಮಂತ, ಸುರೇಶ್ ವಿರುದ್ಧ ರಜತ್ ತಿರುಗಿಬಿದ್ದಿದ್ದಾರೆ. ಇದನ್ನೂ ಓದಿ:ಶ್ರೀಲೀಲಾಗೆ ಮದುವೆ ಮಾಡುವ ಜವಾಬ್ದಾರಿ ನನ್ನದು: ಬಾಲಯ್ಯ

    ಸುದೀಪ್ ಅವರ ಸೂಪರ್ ಸಂಡೇಯ ವಿಡಿಯೋ ರಿಲೀಸ್ ಮಾಡಲಾಗಿದ್ದು, ಗೋಲ್ಡ್ ಸುರೇಶ್ ಹಾಗೂ ರಜತ್ ನಡುವೆ ಮಾತಿನ ಸಮರ ನಡೆದಿದೆ. ಸುದೀಪ್ ಮುಂದೆ ಇಬ್ಬರು ಒಬ್ಬರ ಮೇಲೆ ಒಬ್ಬರು ದೂರು ಹೇಳಿದ್ದಾರೆ. ಹನುಮಂತ (Hanumantha) ಮೇಲೆ ಎರಗಿದ್ದ ರಜತ್ ಅವರು ನಂತರ ಗೋಲ್ಡ್ ಸುರೇಶ್ ಮೇಲೆಯೂ ದೂರುಗಳನ್ನ ಹೇಳಿದ್ದಾರೆ. ಹನುಮಂತು ಪ್ರೊಫೆಷನಲ್ ಕಿಲಾಡಿ, ಎಲ್ಲ ಗೊತ್ತು, ಆದರೆ ಗೊತ್ತಿಲ್ಲ ಎನ್ನುವಂತೆ ಇರುತ್ತಾರೆ ಎಂದಿದ್ದರು. ಇದಾದ ಮೇಲೆ ರಜತ್ ಅವರ ಫೋಟೋ ತೆಗೆದುಕೊಂಡು ಗೋಲ್ಡ್ ಸುರೇಶ್ 2ನೇ ಸ್ಥಾನಕ್ಕೆ ಇಡುತ್ತಾರೆ. ಇದಕ್ಕೆ ಸುದೀಪ್ ಯಾಕೆ ಎಂದು ಗೋಲ್ಡ್ ಸುರೇಶ್‌ರನ್ನ ಪ್ರಶ್ನಿಸುತ್ತಾರೆ.

    ಆಗ ಮನೆಗೆ ಬಂದು 3 ವಾರ ಕಳೆದರೂ ರಜತ್ ಅಷ್ಟೇನು ಕೊಡುಗೆ ಕೊಟ್ಟಿಲ್ಲ ಎಂದು ಸುರೇಶ್ ಹೇಳಿದ್ದಾರೆ. ಇದಾದ ಮೇಲೆ ರಜತ್, ಫಸ್ಟ್ ಜಗಳ ಆಗಿದ್ದಕ್ಕೆ ಗಾಬರಿ ಬಿದ್ದು ಹೋಗಿ ಡೋರ್ ಬಡೆದವರು ಟಾಸ್ಕ್ ಬಿಟ್ಟು ಮತ್ತೆ ಏನೂ ಕೂಡ ಅವರ ಕೊಡುಗೆ ಕಾಣಿಸಿಲ್ಲ. ಅವರು ಹೆಂಗೇ ಕೊಡುತ್ತಾರೋ ನಾವು ಹಂಗೆ ಕೊಡುತ್ತೇವೆ. ನಾವು ಒಳ್ಳೆಯ ಮನುಷ್ಯರಲ್ಲ, ನಾವು ಕೆಟ್ಟೋರೇ ಎಂದು ಗೋಲ್ಡ್ ಸುರೇಶ್ ವಿರುದ್ಧ ಗುಡುಗಿದ್ದಾರೆ. ಈ ಮೂಲಕ ಸುರೇಶ್‌ಗೆ ರಜತ್‌ (Rajath) ಟಾಂಗ್ ಕೊಟ್ಟಿದ್ದಾರೆ.

  • ಗದ್ದುಗೆಗಾಗಿ ಗುದ್ದಾಟ- ಬುರುಡೆ ಒಡೆಯುವ ವಿಚಾರವೆತ್ತಿದ ರಜತ್‌ ಮೇಲೆ ಉಗ್ರಂ ಮಂಜು ಗರಂ

    ಗದ್ದುಗೆಗಾಗಿ ಗುದ್ದಾಟ- ಬುರುಡೆ ಒಡೆಯುವ ವಿಚಾರವೆತ್ತಿದ ರಜತ್‌ ಮೇಲೆ ಉಗ್ರಂ ಮಂಜು ಗರಂ

    ಬಿಗ್ ಬಾಸ್ (Bigg Boss Kannada 11) ಸಾಮ್ರಾಜ್ಯದಲ್ಲಿ ಕ್ಯಾಪ್ಟನ್ ಉಗ್ರಂ ಮಂಜು (Ugramm manju)  ಮಹಾರಾಜರಾಗಿ ಆಳುತ್ತಿದ್ದಾರೆ. ರಾಜನ ದರ್ಬಾರ್ ನಡುವೆ ಮೋಕ್ಷಿತಾರನ್ನು ಯುವರಾಣಿಯನ್ನಾಗಿ ಬಿಗ್ ಬಾಸ್ ಘೋಷಿಸಿ ಟ್ವಿಸ್ಟ್ ಕೊಟ್ಟಿದ್ದಾರೆ. ಈ ಬೆನ್ನಲ್ಲೇ, ಅಲ್ಲಿನ ಪ್ರಜೆಗಳು ಎರಡು ಬಣಗಳಾಗಿ ವಿಂಗಡಿಸಿದ್ದಾರೆ. ಹೀಗಿರುವಾಗ ಟಾಸ್ಕ್ ವೇಳೆ, ಉಗ್ರಂ ಮಂಜು, ರಜತ್ ನಡುವೆ ಕಿರಿಕ್ ನಡೆದಿದ್ದು, ಬುರುಡೆ ಒಡೆಯುವ ವಿಚಾರ ಬಂದಿದೆ. ಮತ್ತೆ ಮನೆಯಲ್ಲಿ ರಂಪಾಟ ಶುರುವಾಗಿದೆ. ಇದನ್ನೂ ಓದಿ:‘ಪುಷ್ಪ 2’ನಲ್ಲಿ ಸೊಂಟ ಬಳುಕಿಸಿದ ಶ್ರೀಲೀಲಾಗೆ ಸಂಭಾವನೆಯನ್ನೇ ಕೊಟ್ಟಿಲ್ವಾ?- ನಟಿ ಹೇಳೋದೇನು?

    ದೊಡ್ಮನೆಯಲ್ಲಿ ಯುವರಾಣಿ ಮೋಕ್ಷಿತಾ (Mokshitha Pai) ಅವರ ಬಣವಾದರೆ, ಇನ್ನೊಂದು ಕಡೆ ರಾಜ ಮಂಜಣ್ಣ ಬಣವಾಗಿದೆ. ಅಂತೆಯೇ ನಿನ್ನೆಯ ಎಪಿಸೋಡ್‌ನಲ್ಲಿ ರಾಜ ಮತ್ತು ಯುವರಾಣಿಯ ನಡುವೆ ಗದ್ದುಗೆಗೆ ಗುದ್ದಾಟ ನಡೆದಿದೆ. ಇಂದು ಬಿಗ್ ಬಾಸ್ ಎರಡು ಬಣಗಳಿಗೆ ಟಾಸ್ಕ್ ನೀಡಿದ್ದಾರೆ. ಅದುವೇ ಮಣ್ಣಿನಿಂದ ಅಸ್ತ್ರ ಮಾಡೋದು. ಈ ವೇಳೆ, ಮನೆ ರಣರಂಗವಾಗಿದೆ.

    ಈ ವೇಳೆ, ಮಣ್ಣಿನ ಉಂಡೆಗಳನ್ನು ಎತ್ತಿಕೊಳ್ಳುವಾಗ ಪ್ರಜೆಗಳ ನಡುವೆ ನೂಕಾಟ, ತಳ್ಳಾಟ ನಡೆದಿದೆ. ಮಂಜು (Ugramm Manju) ಮತ್ತು ಮೋಕ್ಷಿತಾ ಬಣದ ರಜತ್ ನಡುವೆ ವಾಕ್ಸಮರ ಶುರುವಾಗಿದೆ. ಮಂಜು ಬಣದ ಪ್ರಜೆಗಳು, ಮೋಕ್ಷಿತಾ ಬಣದ ಸದಸ್ಯರನ್ನು ತಳ್ಳಿ ಮಣ್ಣನ್ನು ಎತ್ತಿಕೊಂಡು ಹೋಗಿದ್ದಾರೆ. ಇದಕ್ಕೆ ಕೋಪಿಸಿಕೊಂಡ ರಜತ್, ನಾನು ತಳ್ಳೋದಿದ್ರೆ ಸರಿಯಾಗಿ ತಳ್ಳುತ್ತೇನೆ. ಬುರುಡೆ ಹೊಡೆದು ಹೋಗುವ ಹಾಗೆ ತಳ್ಳುತ್ತೇನೆ ಎಂದು ರಜತ್ ವಾರ್ನಿಂಗ್ ಕೊಟ್ಟಿದ್ದಾರೆ.

    ಬಳಿಕ ಮಂಜು ಅಲ್ಲಿಗೆ ಎಂಟ್ರಿಯಾಗಿ ಬುರುಡೆ ಒಡಿತಿಯಾ ನೀನು? ಏನು ರೌಡಿಸಂ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರೌಡಿ ಅಂತಾ ಯಾಕೆ ಹೇಳ್ತೀಯಾ ಎಂದು ರಜತ್ ಕಿರುಚಾಡಿದ್ದಾರೆ. ಅದಕ್ಕೆ ಮತ್ತೆ ಕೌಂಟರ್ ಕೊಟ್ಟ ಮಂಜು, ಬೆದರಿಕೆ ಇಡೋದಲ್ಲ. 54 ದಿನ ಇಲ್ಲಿ ಭಯ ಪಟ್ಟುಕೊಂಡು ಇದ್ದಿಲ್ಲ. ನಿನ್ನಾಟ ನೀನು ತೋರಿಸು, ನನ್ನಾಟ ನಾನು ತೋರಿಸುತ್ತೇನೆ ಎಂದು ಅವಾಜ್ ಹಾಕಿದ್ದಾರೆ. ಅದಕ್ಕೆ ತಿರುಗೇಟು ನೀಡುವ ರಜತ್, ಆವಾಗಿಂದು ಒಂದು ಲೆಕ್ಕ, ಇವಾಗಿಂದ ಇನ್ನೊಂದು ಲೆಕ್ಕ ಅಂತ ಮಂಜು ಮುಂದೆ ತೊಡೆ ತಟ್ಟಿದ್ದಾರೆ.

  • ಸುದೀಪ್ ಸರ್ ಸರಿ ಅಂದ್ರೆ ಅರ್ಧ ಮೀಸೆ ಬೋಳಿಸುತ್ತೇನೆ- ಚೈತ್ರಾ ವಿರುದ್ಧ ರೊಚ್ಚಿಗೆದ್ದ ರಜತ್

    ಸುದೀಪ್ ಸರ್ ಸರಿ ಅಂದ್ರೆ ಅರ್ಧ ಮೀಸೆ ಬೋಳಿಸುತ್ತೇನೆ- ಚೈತ್ರಾ ವಿರುದ್ಧ ರೊಚ್ಚಿಗೆದ್ದ ರಜತ್

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದು ಮುನ್ನುಗ್ಗುತ್ತಿದೆ. ನಾಮಿನೇಷನ್ ಪ್ರಕ್ರಿಯೆ ವೇಳೆ, ಕ್ಷುಲ್ಲಕ ಕಾರಣ ನೀಡಿ ನಾಮಿನೇಟ್ ಮಾಡಿದ್ದಕ್ಕೆ ಚೈತ್ರಾ ವಿರುದ್ಧ ರಜತ್ (Rajath Kishen) ಗರಂ ಆಗಿದ್ದಾರೆ. ನೀವು ಕೊಟ್ಟಿರುವ ಕಾರಣ ಸುದೀಪ್  (Sudeep) ಸರ್ ಸರಿ ಅಂದರೆ ಅರ್ಧ ಮೀಸೆ ಬೋಳಿಸುತ್ತೇನೆ ಎಂದು ಚೈತ್ರಾ ವಿರುದ್ಧ ರಜತ್ ಗುಡುಗಿದ್ದಾರೆ. ಇದನ್ನೂ ಓದಿ:‘ಪುಷ್ಪ 3’ ಬಗ್ಗೆ ರಶ್ಮಿಕಾ ಮಂದಣ್ಣ ಹಿಂಟ್- 5 ವರ್ಷಗಳ ಜರ್ನಿ ನೆನೆದು ನಟಿ ಎಮೋಷನಲ್

    ಚೈತ್ರಾ (Chaithra Kundapura) ಅವರು ರಜತ್‌ರನ್ನು ನಾಮಿನೇಟ್ ಮಾಡುವಾಗ ನನ್ನನ್ನು ಬಾಸ್ ಅಂತ ವ್ಯಂಗ್ಯದಿಂದ ಕರೆಯುತ್ತಾರೆ. ವ್ಯಂಗ್ಯ ಮತ್ತು ಅವಮಾನ ಯಾವುದು ಅಂತ ತಿಳಿಯದೇ ಇರೋವಷ್ಟು ಮುಗ್ಧೆ ನಾನಲ್ಲ ಎಂದರು. ಮತ್ತೆ ಶಿಶಿರ್ ಮತ್ತು ಐಶ್ವರ್ಯಾಗೆ ಹುಡುಗಿರ ಕೈ ಹಿಡಿದುಕೊಂಡು ಓಡಾಡಿದ್ರೆ ಇಲ್ಲಿ ಬಿಗ್ ಬಾಸ್ ಆಟ ಗೆಲ್ಲೋಕೆ ಆಗಲ್ಲ ಎಂದು ರಜತ್ ತಿವಿದಿದ್ದರು. ಇದನ್ನು ಕೂಡ ಚೈತ್ರಾ ನಾಮಿನೇಷನ್‌ಗೆ ಕಾರಣ ನೀಡಿದರು. ಇದು ರಜತ್ ಕೋಪಕ್ಕೆ ಕಾರಣವಾಗಿದೆ.

    ಮೊನ್ನೆಯಷ್ಟೇ ವೀಕೆಂಡ್ ಪಂಚಾಯಿತಿಯಲ್ಲಿ ಸರಿಯಾದ ಕಾರಣ ಕೊಟ್ಟು ನಾಮಿನೇಟ್ ಮಾಡಿ ಅಂತ ಸುದೀಪ್ ಸರ್ ಹೇಳಿದ್ದಾರೆ. ಮತ್ತೆ ಹಾಗೇ ಮಾಡುತ್ತಾರೆ ಎಂದು ರಜತ್ ಕ್ಯಾತೆ ತೆಗೆದಿದ್ದಾರೆ. ನೀವು ಕೊಟ್ಟಿದ್ದ ಕಾರಣ ಸುದೀಪ್ ಸರ್ ಸರಿ ಅಂತ ಹೇಳಲಿ. ಅಲ್ಲೇ ನಾನು ಈ ಮನೆ ಬಿಟ್ಟು ಹೋಗುತ್ತೇನೆ. ನಾಮಿನೇಷನ್‌ಗೆ ನೀವು ಕೊಟ್ಟಿದ್ದ ಕಾರಣ ಸರಿ ಅಂದರೆ ಸುದೀಪ್ ಸರ್, ನಾನು ಈ ಮನೆ ಬಿಟ್ಟು ಹೋಗುತ್ತೇನೆ ಎಂದು ಚೈತ್ರಾಗೆ ರಜತ್ ಸವಾಲು ಹಾಕಿದ್ದಾರೆ. ಯಾರಾದರೂ ತೂಕದ ವ್ಯಕ್ತಿ ಹತ್ತಿರ ಮಾತನಾಡಬಹುದು. ಇವರ ಹತ್ತಿರ ಮಾತನಾಡೋಕೆ ಆಗಲ್ಲ ಎಂದು ಚೈತ್ರಾ ಮಾತಿಗೆ ಮಾತು ಕೊಟ್ಟಿದ್ದಾರೆ.

  • ದೊಡ್ಮನೆಯಲ್ಲಿ ಯಾರು ಸ್ಟ್ರಾಂಗ್, ಯಾರು ವೀಕ್?- ಮಂಜು, ರಜತ್ ನಡುವೆ ಬಿಗ್ ಫೈಟ್

    ದೊಡ್ಮನೆಯಲ್ಲಿ ಯಾರು ಸ್ಟ್ರಾಂಗ್, ಯಾರು ವೀಕ್?- ಮಂಜು, ರಜತ್ ನಡುವೆ ಬಿಗ್ ಫೈಟ್

    ದೊಡ್ಮನೆ ಆಟ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಶೋಭಾ ಶೆಟ್ಟಿ, ರಜತ್ ಎಂಟ್ರಿ ಕೊಟ್ಟಿದ್ದಾರೆ. ಇದೀಗ ದೊಡ್ಮನೆಯಲ್ಲಿ ರಜತ್ (Rajath Kishen) ರಾಂಗ್ ಆಗಿದ್ದಾರೆ. ಉಗ್ರಂ ಮಂಜು ಅವರು ರಜತ್ ಮೇಲೆ ಸಿಡಿದೆದ್ದಿದ್ದಾರೆ.‌ ಬಿಗ್‌ ಬಾಸ್‌ಯಲ್ಲಿ ಯಾರು ಸ್ಟ್ರಾಂಗ್‌, ಯಾರು ವೀಕ್?‌ ಎಂಬ ವಿಚಾರಕ್ಕೆ ಮಂಜು (Ugramm Manju) ಮತ್ತು ರಜತ್‌ ನಡುವೆ ಕಿತ್ತಾಟ ನಡೆದಿದೆ. ಇದನ್ನೂ ಓದಿ:ಸಲ್ಮಾನ್ ಖಾನ್ ಜೊತೆ ಈದ್, ಹೋಳಿ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ರಶ್ಮಿಕಾ

    ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಆದ ಮೇಲೆ ‘ಬಿಗ್ ಬಾಸ್’ ಮನೆಯ ಅಸಲಿ ಆಟ ಶುರುವಾಗಿದೆ. ಈ ವಾರ ಬಿಗ್ ಬಾಸ್ ಮನೆಯ ಸದಸ್ಯರಿಗೆ ಫಿಸಿಕಲ್ ಟಾಸ್ಕ್ ಕೊಟ್ಟಿದ್ದು, ಗೆಲ್ಲೋ ಕಿಚ್ಚು ಹೆಚ್ಚಾಗಿದೆ. ಕೊಳವೆ ಮೂಲಕ ಬರುವ ಚೆಂಡನ್ನು ತೆಗೆದುಕೊಂಡು ಹೋಗುವ ಟಾಸ್ಕ್‌ನಲ್ಲಿ ಗೋಲ್ಡ್ ಸುರೇಶ್ ಹಾಗೂ ರಜತ್ ಅವರ ಮಧ್ಯೆ ಜಗಳ ನಡೆದಿತ್ತು. ರಜತ್ ಮೇಲೆ ಕೂಗಾಡಿದ ಸುರೇಶ್ (Gold Suresh) ಅವರು ಬಿಗ್ ಬಾಸ್ ಮನೆ ಬಿಟ್ಟು ಹೋಗಲು ನಿರ್ಧಾರ ಮಾಡಿದ್ದರು.

    ಸುರೇಶ್ ಅವರ ಬಳಿಕ ರಜತ್ ಮತ್ತು ಮಂಜು ನಡುವೆ ವಾಕ್ಸಮರ ನಡೆದಿದೆ. ಟಾಸ್ಕ್‌ ಮಧ್ಯೆ ರಜತ್ ಅವರು ನಾನು, ತ್ರಿವಿಕ್ರಮ್ (Trivikram) ಒಂದೇ ಟೀಮ್‌ನಲ್ಲಿ ಇದ್ದರೆ ಎದುರಾಳಿ ತಂಡ ಸ್ವಲ್ಪ ವೀಕ್ ಆಗುತ್ತೆ ಎಂದಿದ್ದಾರೆ. ರಜತ್ ಅವರ ಈ ಮಾತು ಮಂಜು ಅವರನ್ನು ಕೆರಳುವಂತೆ ಮಾಡಿದೆ. ಯಾವ ನನ್ಮಗ ಇಲ್ಲ ಅಂತಾನೆ. ಫಿಸಿಕಲ್ ಕೊಟ್ಟರೆ ನಾವು ಸ್ಟ್ರಾಂಗ್. ನಾವು ಮಾತನಾಡಿದ್ರೆ, ಉರಿ ಕಿತ್ತುಕೊಂಡು ಬಿಟ್ಟಿತು ಎಂದು ಮಂಜುಗೆ ರಜತ್ ತಿರುಗೇಟು ನೀಡಿದ್ದಾರೆ.

    ನೀವು, ತ್ರಿವಿಕ್ರಮ್ ಇಬ್ಬರು ಒಂದೇ ಟೀಮ್‌ನಲ್ಲಿ ಇದ್ದರೆ ನಾವೆಲ್ಲಾ ವೀಕ್ ಅಂತಾನ ಎಂದು ರಜತ್‌ಗೆ ಮಂಜು ಪ್ರಶ್ನಿಸಿದ್ದಾರೆ. ಹಾಗಾದ್ರೆ ಇಬ್ಬರು ಒಂದೇ ಟೀಮ್‌ಗೆ ಹೋಗಿ ಗುರು. ಜೋರಾಗಿ ಮಾತಾಡಬೇಡ, ನನಗೂ ಬರುತ್ತದೆ ಎಂದು ನೇರವಾಗಿ ಯುದ್ಧಕ್ಕೆ ನಿಂತಿದ್ದಾರೆ ರಜತ್. ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್, ಮಂಜು ಮಧ್ಯೆ ನಡೆಯುತ್ತಿದ್ದ ಫೈಟ್‌ನಲ್ಲಿ ರಜತ್ ಅವರು ಎಂಟ್ರಿಯಾಗಿದ್ದಾರೆ. ಒಟ್ನಲ್ಲಿ ವಾರಾಂತ್ಯದ ನಾಮಿನೇಷನ್‌ನಲ್ಲಿ ಯಾರು ವೀಕ್, ಯಾರು ಸ್ಟ್ರಾಂಗ್? ಎಂಬುದಕ್ಕೆ ಉತ್ತರ ಸಿಗಲಿದೆ.