Tag: Rajath

  • ರೀಲ್ಸ್ ತಂದ ಸಂಕಷ್ಟ: ವಿಚಾರಣೆಗೆ ಜೊತೆಯಾಗಿ ಹಾಜರಾದ ವಿನಯ್, ರಜತ್

    ರೀಲ್ಸ್ ತಂದ ಸಂಕಷ್ಟ: ವಿಚಾರಣೆಗೆ ಜೊತೆಯಾಗಿ ಹಾಜರಾದ ವಿನಯ್, ರಜತ್

    ಲಾಂಗ್ ಹಿಡಿದು ರೀಲ್ಸ್ ಮಾಡಿದಕ್ಕೆ’ಬಿಗ್ ಬಾಸ್’ (Bigg Boss) ಖ್ಯಾತಿಯ ರಜತ್ (Rajath) ಮತ್ತು ವಿನಯ್ ಗೌಡ (Vinay Gowda) ಕಾನೂನು ಸಂಕಷ್ಟ ಎದುರಿಸುತ್ತಿದ್ದಾರೆ. ಇದೀಗ ಬಸವೇಶ್ವರ ನಗರದ ಪೊಲೀಸ್ ಠಾಣೆಗೆ ಜೊತೆಯಾಗಿ ವಿನಯ್ ಮತ್ತು ರಜತ್ ವಿಚಾರಣೆಗೆ ಹಾಜರಾಗಿದ್ದಾರೆ.

    ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದಕ್ಕೆ ಶಸ್ತ್ರಾಸ್ತ್ರ ಕಾಯ್ದೆಯಡಿ ನಿನ್ನೆ (ಮಾ.24) ವಿನಯ್ ಮತ್ತು ರಜತ್‌ರನ್ನು ವಿಚಾರಣೆಯ ವೇಳೆಯೇ ಬಂಧಿಸಲಾಗಿತ್ತು. ಆ ನಂತರ ಇಬ್ಬರನ್ನೂ ಮಧ್ಯರಾತ್ರಿಯೇ ಬಿಡುಗಡೆ ಮಾಡಲಾಯಿತು. ಈ ಹಿನ್ನೆಲೆ ಪೊಲೀಸರ ಸೂಚನೆಯಂತೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ. ಇದನ್ನೂ ಓದಿ:ಗುಡ್‌ ನ್ಯೂಸ್‌ ಕೊಟ್ಟ ‘ದಿ ವಿಲನ್‌’ ನಟಿ- ಆ್ಯಮಿ ಜಾಕ್ಸನ್‌ಗೆ ಗಂಡು ಮಗು

    ಅಂದಹಾಗೆ, ಮಚ್ಚು ಹಿಡಿದರುವ ರೀಲ್‌ನಲ್ಲಿ ‘ಕರಿಯ’ ಚಿತ್ರದ ದರ್ಶನ್ ಸ್ಟೈಲ್‌ನಲ್ಲಿ ರಜತ್ ಕಾಣಿಸಿಕೊಂಡಿದ್ರೆ, ಪುಷ್ಪರಾಜ್ ಲುಕ್‌ನಲ್ಲಿ ವಿನಯ್ ಕಾಣಿಸಿಕೊಂಡು ಒಟ್ಟಾಗಿ ರೀಲ್ಸ್ ಮಾಡಿದ್ದರು. ಈ ರೀಲ್ಸ್ ಇದೀಗ ಅವರಿಗೆ ಸಂಕಷ್ಟ ತಂದಿದೆ. ಲಾಂಗ್‌ ಹಿಡಿದಿಕ್ಕೆ ಇಬ್ಬರ ಮೇಲೆಯೂ ಎಫ್‌ಐಆರ್ ದಾಖಲಾಗಿದೆ. ಸದ್ಯ ಈ ಸಂಬಂಧ ರಜತ್ ಮತ್ತು ವಿನಯ್ ಬಸವೇಶ್ವರ ನಗರದ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.

  • ರೀಲ್ಸ್ ತಂದ ಆಪತ್ತು- ರಜತ್, ವಿನಯ್‌  ಅರೆಸ್ಟ್‌

    ರೀಲ್ಸ್ ತಂದ ಆಪತ್ತು- ರಜತ್, ವಿನಯ್‌ ಅರೆಸ್ಟ್‌

    ಲಾಂಗ್ ಹಿಡಿದು ರೀಲ್ಸ್ ಮಾಡಿದ್ದ ‘ಬಿಗ್ ಬಾಸ್’ ಖ್ಯಾತಿಯ ವಿನಯ್ ಗೌಡ (Vinay Gowda) ಹಾಗೂ ರಜತ್‌ರನ್ನು (Rajath) ಬಸವೇಶ್ವರ ನಗರದ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ:ಫಿಲ್ಮ್ ಶೂಟಿಂಗ್‌ಗೆ ಮಚ್ಚು ಬಳಸಿದ್ದು: ಲಾಂಗ್ ಹಿಡಿದ ರೀಲ್ಸ್‌ಗೆ ‌’ಬಿಗ್‌ ಬಾಸ್’ ವಿನಯ್ ಸ್ಪಷ್ಟನೆ

    ಮಾರಕಾಸ್ತ್ರ ಹಿಡಿದು ರೀಲ್ಸ್ ಮಾಡಿದ್ದ ವಿನಯ್ ಹಾಗೂ ರಜತ್ ಮೇಲೆ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಜತ್ ಮತ್ತು ವಿನಯ್ ಬಸವೇಶ್ವರ ನಗರ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಿದ್ದರು.  ವಿಚಾರಣೆಯ ನಂತರ ಪೊಲೀಸರು ಇಬ್ಬರನ್ನು  ಬಂಧಿಸಿದ್ದಾರೆ.

    ರಜತ್ ಕಿಶನ್ ಜೊತೆ ನಟ ವಿನಯ್ ಗೌಡ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್‌ನಲ್ಲಿ ವಿನಯ್ ಗೌಡ ಲಾಂಗ್ ಹಿಡಿದು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ದರ್ಶನ್ ಅವರ ‘‌ಕರಿಯ’ ಸಿನಿಮಾದ ಸ್ಟೈಲ್‌ನಲ್ಲಿ ಸ್ಲೋ ಮೋಷನ್‌ನಲ್ಲಿ ನಡೆಯುತ್ತಿರುತ್ತಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

    ಬಸವೇಶ್ವರ ನಗರದಲ್ಲಿ ಸಾರ್ವಜನಿಕವಾಗಿ ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವ ರೀಲ್ಸ್ ಮಾಡಿದ್ದು ಈಗ ಸಮಸ್ಯೆಗೆ ಕಾರಣವಾಗಿದೆ. ಅಲ್ಲದೇ ಈ ರೀಲ್ಸ್ ಅನ್ನು ಬುಜ್ಜಿ ಅನ್ನೋ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

  • ಫಿಲ್ಮ್ ಶೂಟಿಂಗ್‌ಗೆ ಮಚ್ಚು ಬಳಸಿದ್ದು: ಲಾಂಗ್ ಹಿಡಿದ ರೀಲ್ಸ್‌ಗೆ ‌’ಬಿಗ್‌ ಬಾಸ್’ ವಿನಯ್ ಸ್ಪಷ್ಟನೆ

    ಫಿಲ್ಮ್ ಶೂಟಿಂಗ್‌ಗೆ ಮಚ್ಚು ಬಳಸಿದ್ದು: ಲಾಂಗ್ ಹಿಡಿದ ರೀಲ್ಸ್‌ಗೆ ‌’ಬಿಗ್‌ ಬಾಸ್’ ವಿನಯ್ ಸ್ಪಷ್ಟನೆ

    ‘ಬಿಗ್ ಬಾಸ್’ ಖ್ಯಾತಿಯ ಸ್ಪರ್ಧಿ ವಿನಯ್ ಗೌಡ (Vinay Gowda) ಲಾಂಗ್ ಹಿಡಿದು ರೀಲ್ಸ್ ಮಾಡಿದಕ್ಕೆ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಈ ಹಿನ್ನೆಲೆ ವಿನಯ್ ಪ್ರತಿಕ್ರಿಯಿಸಿ, ಫಿಲ್ಮ್‌ ಶೂಟಿಂಗ್‌ಗೆ ಮಚ್ಚು ಬಳಸಿದ್ದು ಎಂದು ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ:ನೇಹಾ ಗೌಡ ಮಗಳ ಅದ್ಧೂರಿ ನಾಮಕರಣ- ಪುತ್ರಿಗೆ ಮುದ್ದಾದ ಹೆಸರಿಟ್ಟ ನಟಿ

    ಲಾಂಗ್ ಹಿಡಿದು ರೀಲ್ಸ್ ಮಾಡಿದಕ್ಕೆ ಆರ್ಮ್ಸ್ ಆಕ್ಟ್ ಅಡಿ ವಿನಯ್ ಗೌಡ ವಿರುದ್ದ ಕೇಸ್ ದಾಖಲಾಗಿದೆ. ಈ ಹಿನ್ನೆಲೆ ವಿಚಾರಣೆಗೆ ಕರೆಯಲಾಗಿತ್ತು. ಆದರೆ ಬಸವೇಶ್ವರ ನಗರದಲ್ಲಿ ಆಗಿರೋ ಕೇಸ್‌ಗೆ ಆರ್‌ಆರ್ ನಗರದ ಪೊಲೀಸ್ ಠಾಣೆಯಲ್ಲಿ ಉತ್ತರ ನೀಡಿದ್ದಾರೆ. ಫಿಲ್ಮ್ ಶೂಟಿಂಗ್‌ಗಾಗಿ ಮಚ್ಚು ಬಳಸಿದ್ದು, ಪೊಲೀಸರಿಗೆ ವಿನಯ್ ಕ್ಲ್ಯಾರಿಟಿ ನೀಡಿದ್ದಾರೆ. ಆದರೆ ಕೇಸ್ ದಾಖಲಾಗಿರೋ ಬಸವೇಶ್ವರ ಪೊಲೀಸ್ ಠಾಣೆಗೆ ಹಾಜರಾಗುವಂತೆ ವಿನಯ್‌ಗೆ ಸೂಚಿಸಲಾಗಿದೆ.

    ನಾನು ‘ಪುಷ್ಪ’ ಚಿತ್ರದಲ್ಲಿ ಪಾತ್ರ, ರಜತ್ ‘ಕರಿಯ’ ಸಿನಿಮಾದಲ್ಲಿನ ದರ್ಶನ್ ಪಾತ್ರದ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದು, ಇದರ ಟಿವಿ ಶೂಟಿಂಗ್ ಮಾಡುತ್ತಿರೋದಾಗಿ ಪತ್ರದಲ್ಲಿ ವಿನಯ್ ತಿಳಿಸಿದ್ದಾರೆ. ಇನ್ನೂ ವಿನಯ್ ಶೇರ್ ಮಾಡಿರುವ ರೀಲ್‌ನಲ್ಲಿ ಓರಿಜಿನಲ್ ಮಚ್ಚು ಬಳಸಿದ್ದಾರೆ ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿ ರಜತ್ (Rajath) ಮತ್ತು ವಿನಯ್‌ಗೆ ಮಾಡಿರುವ ರೀಲ್ಸ್‌ನಿಂದ ಸಂಕಷ್ಟ ಎದುರಾಗಿದೆ.

    ಅಂದಹಾಗೆ, ರಜತ್ ಕಿಶನ್ ಜೊತೆ ನಟ ವಿನಯ್ ಗೌಡ ಒಂದು ಮಸ್ತ್ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್‌ನಲ್ಲಿ ವಿನಯ್ ಗೌಡ ಲಾಂಗು ಹಿಡಿದು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ದರ್ಶನ್ ಅವರ ‘ಕರಿಯ’ ಸಿನಿಮಾದ ಸ್ಟೈಲಿನಲ್ಲಿ ಸ್ಲೋ ಮೋಷನ್‌ನಲ್ಲಿ ನಡೆಯುತ್ತಿರುತ್ತಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ.

    ಬಸವೇಶ್ವರ ನಗರದಲ್ಲಿ ಸಾರ್ವಜನಿಕವಾಗಿ ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವ ರೀಲ್ಸ್ ಮಾಡಿದ್ದು ಈಗ ಸಮಸ್ಯೆಗೆ ಕಾರಣವಾಗಿದೆ. ಅಲ್ಲದೇ, ಈ ರೀಲ್ಸ್ ಅನ್ನು ಬುಜ್ಜಿ ಅನ್ನೋ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

  • ರೀಲ್ಸ್ ತಂದ ಸಂಕಷ್ಟ: ರಜತ್ ಬದಲು ವಿಚಾರಣೆಗೆ ಹಾಜರಾದ ಪತ್ನಿ ಅಕ್ಷಿತಾ

    ರೀಲ್ಸ್ ತಂದ ಸಂಕಷ್ಟ: ರಜತ್ ಬದಲು ವಿಚಾರಣೆಗೆ ಹಾಜರಾದ ಪತ್ನಿ ಅಕ್ಷಿತಾ

    ‘ಬಿಗ್ ಬಾಸ್’ ಖ್ಯಾತಿಯ ರಜತ್ (Rajath) ಲಾಂಗ್ ಹಿಡಿದು ರೀಲ್ಸ್ ಮಾಡಿದಕ್ಕೆ ಶಸ್ತ್ರಾಸ್ತ್ರ ಕಾಯ್ದೆಯಡಿ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆ ಪತಿ ರಜತ್ ಬದಲು ಪತ್ನಿ ಅಕ್ಷಿತಾ (Akshita) ವಿಚಾರಣೆಗೆ ಹಾಜರಾಗಿದ್ದಾರೆ. ಇದನ್ನೂ ಓದಿ:ನಾನಿ ಜೊತೆ ಶ್ರೀನಿಧಿ ಶೆಟ್ಟಿ ರೊಮ್ಯಾನ್ಸ್- ‘ಹಿಟ್ 3’ ಸಾಂಗ್ ಔಟ್

    ಲಾಂಗ್ ಹಿಡಿದು ರೀಲ್ಸ್ ಮಾಡಿದಕ್ಕೆ ರಜತ್ ಮೇಲೆ ಎಫ್‌ಐಆರ್ ದಾಖಲಾಗಿದ್ದು, ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೊಟೀಸ್ ನೀಡಿದ್ದರು. ಆದರೆ ರಜತ್ ಕೊಪ್ಪಳದಲ್ಲಿ ಶೂಟಿಂಗ್‌ನಲ್ಲಿರುವ ನಿಮಿತ್ತ ಪತ್ನಿ ಅಕ್ಷಿತಾ ವಿಚಾರಣೆ ಎದುರಿಸಿದ್ದಾರೆ. ರಜತ್‌ ಚಿತ್ರೀಕರಣದಲ್ಲಿ ಭಾಗಿಯಾಗಿರೋ ಹಿನ್ನೆಲೆ ಫೋನ್‌ ಸ್ವಿಚ್‌ ಆಫ್‌ ಆಗಿದೆ. ನಾಳೆ ಬೆಂಗಳೂರಿಗೆ ರಜತ್‌ ಆಗಮಿಸುತ್ತಿದ್ದು, ಅವರು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ಪತ್ನಿ ತಿಳಿಸಿದ್ದಾರೆ. ವಿಚಾರಣೆ ಎದುರಿಸಿ ಅಕ್ಷಿತಾ ತೆರಳಿದ್ದಾರೆ.

    ಅಂದಹಾಗೆ, ರಜತ್ ಕಿಶನ್ ಜೊತೆ ನಟ ವಿನಯ್ ಗೌಡ ಒಂದು ಮಸ್ತ್ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್‌ನಲ್ಲಿ ವಿನಯ್ ಗೌಡ ಲಾಂಗು ಹಿಡಿದು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ದರ್ಶನ್ ಅವರ ‘ಕರಿಯ’ ಸಿನಿಮಾದ ಸ್ಟೈಲ್‌ನಲ್ಲಿ ಸ್ಲೋ ಮೋಷನ್‌ನಲ್ಲಿ ನಡೆಯುತ್ತಿರುತ್ತಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಇದರ ಬೆನ್ನಲ್ಲೇ ಇಬ್ಬರ ಸ್ಪರ್ಧಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

    ಬಸವೇಶ್ವರ ನಗರದಲ್ಲಿ ಸಾರ್ವಜನಿಕವಾಗಿ ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವ ರೀಲ್ಸ್ ಮಾಡಿದ್ದು ಈಗ ಸಮಸ್ಯೆಗೆ ಕಾರಣವಾಗಿದೆ. ಅಲ್ಲದೇ, ಈ ರೀಲ್ಸ್ ಅನ್ನು ಬುಜ್ಜಿ ಅನ್ನೋ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

  • ರಜತ್ ಪತ್ನಿ ಅಕ್ಷಿತಾಗೆ ಹುಟ್ಟುಹಬ್ಬದ ಸಂಭ್ರಮ: ‘ಬಿಗ್ ಬಾಸ್’ ಸ್ಪರ್ಧಿಗಳು ಭಾಗಿ

    ರಜತ್ ಪತ್ನಿ ಅಕ್ಷಿತಾಗೆ ಹುಟ್ಟುಹಬ್ಬದ ಸಂಭ್ರಮ: ‘ಬಿಗ್ ಬಾಸ್’ ಸ್ಪರ್ಧಿಗಳು ಭಾಗಿ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11)  ಸ್ಪರ್ಧಿ ರಜತ್ ಕಿಶನ್ (Rajath Kishen) ಅವರ ಪತ್ನಿ ಅಕ್ಷಿತಾ (Akshitha)  ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಈ ಸಂಭ್ರಮದಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಭಾಗಿಯಾಗಿ‌ ಅಕ್ಷಿತಾಗೆ ಶುಭಕೋರಿದ್ದಾರೆ.

    ಬಿಗ್ ಬಾಸ್, ರಾಜ ರಾಣಿ ಶೋಗಳ ಮೂಲಕ ಗಮನ ಸೆಳೆದಿರುವ ರಜತ್ ಕಿಶನ್ ಅವರು ತಮ್ಮ ಪತ್ನಿ ಅಕ್ಷಿತಾಗೆ ಸರ್ಪ್ರೈಸ್ ಕೊಟ್ಟಿದ್ದಾರೆ. ಸದಾ ತಮ್ಮ ಪತ್ನಿಗೆ ಸಿಐಡಿ ಎಂದು ಕರೆಯುವ ರಜತ್, ಅದೇ ಥೀಮ್‌ನಲ್ಲೇ ಬರ್ತ್‌ಡೇ ಆಯೋಜಿಸಿ ಸಖತ್ ಆಗಿ ಸರ್ಪ್ರೈಸ್ ಕೊಟ್ಟಿದ್ದಾರೆ.

    ರಜತ್ ಪತ್ನಿಯ ಹುಟ್ಟುಹಬ್ಬಕ್ಕೆ ಭವ್ಯಾ ಗೌಡ, ಶಿಶಿರ್, ಮೋಕ್ಷಿತಾ ಪೈ, ಉಗ್ರಂ ಮಂಜು, ಅನುಷಾ ರೈ, ಧನರಾಜ್ ಆಚಾರ್, ವಿನಯ್ ಗೌಡ ದಂಪತಿ ಸೇರಿದಂತೆ ಅನೇಕರು ಭಾಗಿಯಾಗಿ ಶುಭಕೋರಿದ್ದಾರೆ. ಇದನ್ನೂ ಓದಿ:ಶರಣ್ಯ ಶೆಟ್ಟಿ ಹೆಸರಿನಲ್ಲಿ ಹಣ ವಂಚನೆ- ಎಚ್ಚರಿಕೆ ನೀಡಿದ ನಟಿ

     

    View this post on Instagram

     

    A post shared by mokshitha22🌸 (@mokshithaapai)

    ‘ಬಿಗ್ ಬಾಸ್ ಕನ್ನಡ 11’ರಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರೂ ಇತರೆ ಸ್ಪರ್ಧಿಗಳಿಗೆ ಸಖತ್ ಆಗಿ ಠಕ್ಕರ್ ಕೊಟ್ಟಿದ್ದರು. ಫಿನಾಲೆಯಲ್ಲಿ 2ನೇ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. ಇದೀಗ ಅವರು ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋನಲ್ಲಿ ಸ್ಪರ್ಧಿಯಾಗಿದ್ದಾರೆ ರಜತ್. ಈ ಶೋ ಮೂಲಕ ಮತ್ತೆ ಚೈತ್ರಾ ಕ್ವಾಟ್ಲೆ ಕೊಡುತ್ತಾ ನೋಡುಗರಿಗೆ ಮನರಂಜನೆ ನೀಡುತ್ತಿದ್ದಾರೆ.

  • ಬಿಗ್ ಬಾಸ್ ಮುಗಿದ್ಮೇಲೆಯೂ ರಜತ್, ಚೈತ್ರಾ ಜಗಳಕ್ಕೆ ಕೊನೆಯಿಲ್ಲ- ಮತ್ತೆ ಕದನಕ್ಕಿಳಿದ KD ಜೋಡಿ

    ಬಿಗ್ ಬಾಸ್ ಮುಗಿದ್ಮೇಲೆಯೂ ರಜತ್, ಚೈತ್ರಾ ಜಗಳಕ್ಕೆ ಕೊನೆಯಿಲ್ಲ- ಮತ್ತೆ ಕದನಕ್ಕಿಳಿದ KD ಜೋಡಿ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಶೋ ಮುಗಿದ್ಮೇಲೆ ಬಾಸ್ ಚೈತ್ರಾ (Chaithra Kundapura) ಮತ್ತು ಶಿಷ್ಯ ರಜತ್ (Rajath Kishan) ಜಗಳ ಮುಂದುವರೆದಿದೆ. ದೊಡ್ಮನೆಯ ಕೆಡಿ ಜೋಡಿ ಎಂದೇ ಬಿರುದು ಪಡೆದಿದ್ದ ಫೈರ್‌ ಬ್ರ್ಯಾಂಡ್‌ ಚೈತ್ರಾ ಹಾಗೂ ರಜತ್ ಹೊಸ ಶೋನಲ್ಲಿ ಮತ್ತೆ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಮನರಂಜನೆ ಕೊಡೋಕೆ ರೆಡಿಯಾಗಿದ್ದಾರೆ.

    ಬಿಗ್ ಬಾಸ್‌ನಲ್ಲಿ ರಜತ್ ಮತ್ತು ಚೈತ್ರಾ ಅವರ ಜಗಳ ಹೇಗಿತ್ತು ಎಂದು ಫ್ಯಾನ್ಸ್ ನೋಡಿದ್ದಾರೆ. ಅವರಿಗೆ ಅದು ಜಗಳ ಆಗಿದ್ರೆ, ನೋಡುಗರಿಗೆ ಅದು ಮನರಂಜನೆ ಆಗಿತ್ತು. ಹಾಗೇ ಇಬ್ಬರೂ ಮಾತಿಗೆ ಮಾತು ಏಟಿ ಏದುರೇಟು ಕೊಟ್ಟು ಆಟ ಆಡುತ್ತಿದ್ದರು. ಈಗ ಅದೇ ಮನರಂಜನೆ ಕೊಡಲು ಇಬ್ಬರೂ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋನಲ್ಲಿ ಕಾಣಿಸಿಕೊಳ್ತಿದ್ದಾರೆ.

    ದೊಡ್ಮನೆ ಆಟ ಮುಗಿದ ಮೇಲೆ ಹೊಸ ಶೋಗೆ ಚೈತ್ರಾ ಕುಂದಾಪುರ ಎಂಟ್ರಿ ಕೊಟ್ಟಿದ್ದಾರೆ. ಹೊಸ ಪ್ರೋಮೋ ರಿಲೀಸ್ ಆಗಿದ್ದು, ರಜತ್ ಮತ್ತು ಚೈತ್ರಾ ಜುಗಲ್‌ಬಂದಿ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ಇದನ್ನೂ ಓದಿ:ದರ್ಶನ್ ಹುಟ್ಟುಹಬ್ಬಕ್ಕೆ ಕೌಂಟ್‌ಡೌನ್- ಫ್ಯಾನ್ಸ್‌ಗೆ ಕಾದಿದ್ಯಾ ಸರ್ಪ್ರೈಸ್?

    ಅನುಪಮಾ ಗೌಡ ನಿರೂಪಣೆಯ ಈ ಶೋನಲ್ಲಿ ರಜತ್, ಚೈತ್ರಾ, ಹನುಮಂತ, ಧನರಾಜ್ ಆಚಾರ್, ಶೋಭಾ ಶೆಟ್ಟಿ, ಐಶ್ವರ್ಯಾ ಸಿಂಧೋಗಿ, ಭವ್ಯಾ ಭಾಗಿಯಾಗಿದ್ದಾರೆ. ಇದು ಫ್ಯಾನ್ಸ್ಗೆ ಖುಷಿ ಕೊಟ್ಟಿದೆ.

  • BBK 11: ನಾನು ಯಾವತ್ತಿದ್ದರೂ ಡಿಬಾಸ್‌ ಫ್ಯಾನ್:‌ ‘ಬಿಗ್‌ ಬಾಸ್‌’ ರಜತ್‌

    BBK 11: ನಾನು ಯಾವತ್ತಿದ್ದರೂ ಡಿಬಾಸ್‌ ಫ್ಯಾನ್:‌ ‘ಬಿಗ್‌ ಬಾಸ್‌’ ರಜತ್‌

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) 2ನೇ ರನ್ನರ್ ಅಪ್ ರಜತ್ (Rajath) ಅವರು ಬಿಗ್ ಬಾಸ್ ಜರ್ನಿ ಬಗ್ಗೆ ಮಾತನಾಡಿದ್ದಾರೆ. ನಾನು ಬಿಗ್ ಬಾಸ್‌ನಲ್ಲಿದ್ರೂ ಎಂದಿಗೂ ಡಿಬಾಸ್ (Darshan) ಅಭಿಮಾನಿ, ಅದನ್ನು ಹೇಳಿಕೊಳ್ಳೋಕೆ ಭಯವಿಲ್ಲ ಎಂದು ಮಾತನಾಡಿದ್ದಾರೆ.

    ಸುದೀಪ್ ಸರ್ ಹೇಳಿದ ಹಾಗೆ ಇತಿಹಾಸದಲ್ಲೇ ಫಸ್ಟ್ ಟೈಮ್ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದು ಟಾಪ್ 3 ಆಗೋದು ದೊಡ್ಡ ವಿಚಾರ. ನಾನು ಕೂಡ ಗೆಲ್ತೀನಿ ಅಂತಲೇ ಬಂದೆ ಆದರೆ ಕರ್ನಾಟಕದಲ್ಲಿ ಗಾಂಧೀಜಿ ಬಂದು ನಿಂತರೂ ಹನುಮಂತನ ಮುಂದೆ ಗೆಲ್ಲೋಕೆ ಆಗಲ್ಲ. ಹಾಗಾಗಿ ಮತ್ತೆ ಏನು ಅಂತ ಹೊಡೆದಾಡೋಣ, ಹಾಗಾಗಿ ಗೆದ್ದಿಲ್ಲ ಅನ್ನೋ ಬೇಸರವಿಲ್ಲ ಎಂದಿದ್ದಾರೆ.

    ಬಿಗ್ ಬಾಸ್ ಮನೆ ಮತ್ತು ಅವರ ವಾಯ್ಸ್ ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಆ ಮನೆ ತುಂಬಾ ಕಲಿಸಿಕೊಡ್ತು, ಸ್ವಾಭಿಮಾನ ಕಲಿಸಿಕೊಟ್ಟಿದೆ. ಈ ಹಿಂದೆ 3 ಸೀಸನ್‌ಗಳಿಂದ ಕಾಲ್ ಬಂದಿತ್ತು. ಆದರೆ ಆಗಿರಲಿಲ್ಲ. ನನ್ನ ವ್ಯಕ್ತಿತ್ವ ಹೇಗೆ ಇತ್ತೋ ನಾನು ಆ ಪ್ರಕಾರ ನಡೆದುಕೊಂಡಿದ್ದೇನೆ. ಅದು ಜನಕ್ಕೆ ಇಷ್ಟ ಆಗಿದೆ. ಅದರ ಬಗ್ಗೆ ಖುಷಿಯಿದೆ. ನಾನು ಗೆಲ್ತೀನಿ ಅಂತ ನಂಬಿಕೆಯಲ್ಲಿದ್ದೆ, ಬಾಟಮ್ 2 ಅಥವಾ 3ಗೆ ನಾನು ಬಂದಿರಲಿಲ್ಲ. ಹಾಗಾಗಿ ಗೆಲ್ಲುವ ವಿಶ್ವಾಸ ಇತ್ತು.

    ವಿನಯ್ ಗೌಡ ಹೋಲಿಕೆ ಮಾಡಿ ಟ್ರೋಲ್ ಮಾಡಿದ್ದರ ಬಗ್ಗೆ ರಜತ್ ಮಾತನಾಡಿ, ವಿನಯ್ ನನ್ನ ಆತ್ಮೀಯ ಗೆಳೆಯ ಅವರೊಂದಿಗೆ ಒಂದು ಶೋ ಮಾಡಿದ್ದೇನೆ. ನಾವಿಬ್ಬರೂ ಸೇರಿ ಮಾಡದೇ ಇರೋ ಕೆಲಸಗಳಿಲ್ಲ. ನಾವಿಬ್ಬರೂ ಅಣ್ಣ ತಮ್ಮ ಇದ್ದ ಹಾಗೆ. ಹಾಗಾಗಿ ಅವರನ್ನು ಹೋಲಿಸಿ ಮಾತನಾಡಿದ್ರೆ ಬೇಸರವಿಲ್ಲ.

    ನಾನು ಯಾವತ್ ಇದ್ರೂ ಡಿಬಾಸ್ ಫ್ಯಾನ್, ಅದನ್ನು ಹೇಳಿಕೊಳ್ಳೋಕೆ ನನಗೆ ಭಯ ಇಲ್ಲ. ನನಗೆ ದರ್ಶನ್ ಅವರನ್ನು 3-4 ಬಾರಿ ಭೇಟಿಯಾಗಿದ್ದೇನೆ. ಅವರೊಂದಿಗೆ ಉತ್ತಮ ಒಡನಾಟವಿದೆ ಎಂದಿದ್ದಾರೆ. ಇದನ್ನೂ ಓದಿ:ನಾನು ‘ಬಿಗ್ ಬಾಸ್’ ಗೆದ್ದಿದ್ದು ನಮ್ಮ ಹುಡುಗಿಗೆ ಖುಷಿಯಿದೆ: ಹನುಮಂತ

    ಇನ್ನೂ ಸುದೀಪ್ ಸರ್ ಅವರ ಸಿನಿಮಾದಲ್ಲಿ ನಟಿಸಲು ಅವಕಾಶ ಕೊಡುತ್ತಾರೆ ಎಂದಿದ್ದಾರೆ. ನನಗೂ ನೆಗೆಟಿವ್ ರೋಲ್ ನಟಿಸಬೇಕು ಎಂದು ಆಸೆಯಿದೆ ನೋಡೋಣ ಎಂದಿದ್ದಾರೆ.

    ಈ ವೇಳೆ, ಮಾಜಿ ಗರ್ಲ್‌ಫ್ರೆಂಡ್‌ ಜೊತೆಗಿನ ಟ್ರೋಲ್ ಬಗ್ಗೆ ರಜತ್ ಮಾತನಾಡಿ, ಜನ ಯಾವತ್ತೂ ನಮ್ಮ ವೈಯಕ್ತಿಕ ಜೀವನದ ಸ್ಟೋರಿ ಇಟ್ಕೋಂಡು ನಮ್ಮನ್ನು ಜಡ್ಜ್ ಮಾಡಲ್ಲ. ಟ್ರೋಲ್ ಮಾಡುವವರು ಮಾಡುತ್ತಲೇ ಇರುತ್ತಾರೆ. ಆದರೆ ನಾನು ನನ್ನ ಪಾಡಿಗೆ ಬೆಳೆಯುತ್ತಲೇ ಇರುತ್ತೇನೆ ಎಂದು ರಜತ್ ತಿರುಗೇಟು ನೀಡಿದ್ದಾರೆ.

  • BBK 11: ವೈಲ್ಡ್‌ ಆಟಕ್ಕೆ ಬಿತ್ತು ಬ್ರೇಕ್-‌ ದೊಡ್ಮನೆಯಿಂದ ರಜತ್‌ ಔಟ್‌

    BBK 11: ವೈಲ್ಡ್‌ ಆಟಕ್ಕೆ ಬಿತ್ತು ಬ್ರೇಕ್-‌ ದೊಡ್ಮನೆಯಿಂದ ರಜತ್‌ ಔಟ್‌

    ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದ ರಜತ್ ಅವರು ಮನೆಯಲ್ಲಿ ವೈಲ್ಡ್ ಆಗಿ ಆಟ ಆಡಿದ್ದರು. ಈಗ ಫಿನಾಲೆಯಲ್ಲಿ ರಜತ್ ಮುಗ್ಗರಿಸಿದ್ದಾರೆ. ಟಾಪ್ 3 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ರಜತ್ ಅವರ ಆಟಕ್ಕೆ ಬ್ರೇಕ್ ಬಿದ್ದಿದೆ. ಇದನ್ನೂ ಓದಿ:BBK 11: ಕೈಹಿಡಿಯದ ಅದೃಷ್ಟ- ದೊಡ್ಮನೆಯಿಂದ ಮೋಕ್ಷಿತಾ ಔಟ್

    ಸುದೀಪ್ ಈಗಾಗಲೇ ಹೇಳಿರುವಂತೆ ರಜತ್ ಪಕ್ಕಾ ಬಿಗ್ ಬಾಸ್ ಆಟಗಾರ. ಈ ಆಟವನ್ನು ಹೇಗೆ ಆಡಬೇಕು ಎಂಬುದು ಅವರಿಗೆ ಗೊತ್ತು. ಎಲ್ಲವನ್ನೂ ಚೆನ್ನಾಗಿ ಅಭ್ಯಾಸ ಮಾಡಿಕೊಂಡೇ ಬಿಗ್ ಬಾಸ್ ಮನೆಗೆ ಅವರು ಕಾಲಿಟ್ಟಿದ್ದರು. ದೊಡ್ಮನೆಯಲ್ಲಿ ಯಾರೊಂದಿಗೂ ಸಹ ಅವರು ಅಟ್ಯಾಚ್‌ಮೆಂಟ್ ಬೆಳೆಸಿಕೊಂಡಿಲ್ಲ. ರಜತ್ ಮೊದಲಿನಿಂದಲೂ ಹೇಳುತ್ತಿರುವುದು ಒಂದೇ ಮಾತು, ನಾನು ನನಗಾಗಿ ಆಡುತ್ತೇನೆ, ನಾನು ಗೆಲ್ಲಲು ಮಾತ್ರ ಆಡುತ್ತೇನೆ, ಬೇರೆಯರನ್ನು ಗೆಲ್ಲಿಸಲು ಅಲ್ಲ ಎಂದು. ಅದಕ್ಕೆ ತಕ್ಕಂತೆ ಅವರು ಆಡುತ್ತಾ ಬಂದಿದ್ದರು.

    ಬಿಗ್ ಬಾಸ್ ಮನೆಯಲ್ಲಿ ಒಳ್ಳೆಯ ಎಂಟರ್ಟೈನ್‌ಮೆಂಟ್ ಅನ್ನು ಸಹ ರಜತ್ ನೀಡುತ್ತಾ ಬಂದಿದ್ದರು. ಆಗಾಗ್ಗೆ ಸಹ ಸ್ಪರ್ಧಿಗಳ ಕಾಲೆಳೆಯುತ್ತಿರುತ್ತಾರೆ. ಸಣ್ಣ-ಪುಟ್ಟ ಡೈಲಾಗ್‌ಗಳನ್ನು ಹೊಡೆದುಕೊಂಡು ತಮಾಷೆ ಮಾಡುತ್ತಿರುತ್ತಾರೆ. ಒಟ್ಟಾರೆಯಾಗಿ ಸಾಧಾರಣ ಮಟ್ಟದ ಎಂಟರ್ಟೈನ್‌ಮೆಂಟ್ ಸಹ ಕೊಡುತ್ತಾರೆ. ಇದು ಅವರ ಗೆಲುವಿಗೆ ಕಾರಣ ಆಗಬಹುದು ಎಂದು ಫ್ಯಾನ್ಸ್ ಅಂದಾಜಿಸಿದ್ದರು. ಆದರೀಗ ಎಲ್ಲವೂ ಉಲ್ಟಾ ಆಗಿದೆ. ಬಿಗ್ ಮನೆಯಿಂದ ಅವರು ಔಟ್ ಆಗಿದ್ದಾರೆ.

  • BBK 11: ರಜತ್‌ಗೆ ಟಾರ್ಗೆಟ್‌- ಮೋಕ್ಷಿತಾ ಜೊತೆ ಭವ್ಯಾ ಮ್ಯಾಚ್‌ ಫಿಕ್ಸಿಂಗ್‌

    BBK 11: ರಜತ್‌ಗೆ ಟಾರ್ಗೆಟ್‌- ಮೋಕ್ಷಿತಾ ಜೊತೆ ಭವ್ಯಾ ಮ್ಯಾಚ್‌ ಫಿಕ್ಸಿಂಗ್‌

    ಬಿಗ್ ಬಾಸ್ ಮನೆಯ ಆಟ (Bigg Boss Kannada 11)  ಇನ್ನೇನು 2 ವಾರಗಳಲ್ಲಿ ಮುಗಿಯಲಿದೆ. ಜ.26ರಂದು ಗ್ರ್ಯಾಂಡ್‌ ಫಿನಾಲೆ ನಡೆಯಲಿದೆ. ಇನ್ನೂ ಚೈತ್ರಾ ಕುಂದಾಪುರ ಎಲಿಮಿನೇಷನ್ ಬಳಿಕ ಮನೆಯಲ್ಲಿ 8 ಸ್ಪರ್ಧಿಗಳಿದ್ದಾರೆ. ತಮ್ಮ ಉಳಿವಿಕೆಗಾಗಿ ಗುದ್ದಾಟ ಶುರುವಾಗಿದೆ. ಇನ್ನೂ ಈ ವಾರ ಮೀಡ್ ವೀಕ್ ಎಲಿಮಿನೇಷನ್ ಇರೋದ್ರಿಂದ ಇದರಿಂದ ಪಾರಾಗಲು ರಜತ್‌ಗೆ ಮೋಕ್ಷಿತಾ ಹಾಗೂ ಭವ್ಯಾ ಸ್ಕೆಚ್ ಹಾಕಿದ್ದಾರೆ.

    ಇಂದಿನ ಪ್ರೋಮೋದಲ್ಲಿ ವಾರದ ಮಧ್ಯೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆಯಲಿದೆ. ಒಬ್ಬರು ಮನೆಯಿಂದ ಹೋಗೋದು ಖಚಿತ ಎಂದು ಘೋಷಿಸಿದ್ದಾರೆ. ಈ ವಾರದ ಟಾಸ್ಕ್ ಗೆಲ್ಲುವ ಒಬ್ಬ ಸದಸ್ಯ ಮಿಡ್ ವೀಕ್ ಎಲಿಮಿನೇಷನ್‌ನಿಂದ ಪಾರಾಗುತ್ತಾರೆ ಎಂದು ತಿಳಿಸಿದ್ದಾರೆ. ಆ ನಂತರ ಟಾಸ್ಕ್ ವೇಳೆ, ರಜತ್‌ರನ್ನ ಮನೆಯಿಂದ ಹೊರ ಕಳುಹಿಸಲು ಮೋಕ್ಷಿತಾ ಮತ್ತು ಭವ್ಯಾ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:BBK 11: ಕೊರಗಜ್ಜನ ಪವಾಡದಿಂದ ಸೇಫ್‌ ಆದ ಧನರಾಜ್‌- ಫೈರ್‌ ಬ್ರ್ಯಾಂಡ್ ಚೈತ್ರಾ ಔಟ್

    ಹೆಚ್ಚು ಮರದ ತುಂಡುಗಳನ್ನು ನೆಟ್‌ನಲ್ಲಿ ಹೊಂದಿರುವ ಸದಸ್ಯ ಟಾಸ್ಕ್‌ನಿಂದ ಔಟ್ ಆಗಲಿದ್ದಾರೆ ಎಂಬುದು ಆಟದ ನಿಯಮವಾಗಿತ್ತು. ಅದರಂತೆ ರಜತ್ ಫೋಟೋವಿದ್ದ ಬುಟ್ಟಿಗೆ ಮರದ ತುಂಡುಗಳನ್ನು ಭವ್ಯಾ ಹಾಗೂ ಮೋಕ್ಷಿತಾ ಹಾಕಲು ಪ್ರಯತ್ನಿಸಿದ್ದಾರೆ. ಇನ್ನೂ ತನ್ನನ್ನು ಔಟ್ ಮಾಡಲು ಭವ್ಯಾ ಮತ್ತು ಮೋಕ್ಷಿತಾ ಮ್ಯಾಚ್ ಫಿಕ್ಸಿಂಗ್ ಬಗ್ಗೆ ರಜತ್ ಅರಿವಿಗೆ ಬಂದಿದ್ದು, ಅವರು ರಾಂಗ್ ಆಗಿದ್ದಾರೆ. ನಿಮ್ಮಿಬ್ಬರಿಂದ ನಾನು ಇದನ್ನು ನಿರೀಕ್ಷೆ ಮಾಡಿರಲಿಲ್ಲ ಎಂದಿದ್ದಾರೆ.

    ಟಿಕೆಟ್ ಟು ಫಿನಾಲೆ ಹೋಗಬಾರದು ಅಂತ ಭವ್ಯಾ ಹೆಸರನ್ನು ನೀವು ತೆಗೆದುಕೊಳ್ಳೀರಿ, ಈಗ ನಾಮಿನೇಷನ್‌ನಿಂದ ಉಳಿಯಬೇಕು ಅಂತ ಭವ್ಯಾ ಜೊತೆ ಸೇರಿಕೊಳ್ತೀರಾ ಅಂತ ಮೋಕ್ಷಿತಾಗೆ ತ್ರಿವಿಕ್ರಮ್ ಟಾಂಗ್ ಕೊಟ್ಟಿದ್ದಾರೆ. ನಾವು ನಿಯತ್ತಾಗಿ ಆಟ ಆಡಿದ್ದೇವೆ ಎಂದ ಮೋಕ್ಷಿತಾಗೆ ಸಮರ್ಥನೆ ಬೇಡ ಅಂತ ರಜತ್ ತಿರುಗೇಟು ನೀಡಿದ್ದಾರೆ. ಇನ್ನೂ ಭವ್ಯಾಗೆ ಅನೇಕ ಬಾರಿ ರಜತ್ ಕಿವಿಮಾತು ಹೇಳಿದ್ದು ಇದೆ. ಆದರೆ, ಈಗ ಆಟದಲ್ಲಿ ಭವ್ಯಾ ಈ ರೀತಿ ಮೋಸ ಮಾಡಿದ್ದಕ್ಕೆ ರಜತ್ ಸಿಟ್ಟಾಗಿದ್ದಾರೆ. ಅವರಿಗೆ ಬೇಸರವೂ ಉಂಟಾಗಿದೆ.

    ಭವ್ಯಾ, ಮೋಕ್ಷಿತಾ, ರಜತ್‌, ಧನರಾಜ್‌, ಉಗ್ರಂ ಮಂಜು, ತ್ರಿವಿಕ್ರಮ್‌, ಗೌತಮಿ ಈ ಸ್ಪರ್ಧಿಗಳಲ್ಲಿ ಫಿನಾಲೆಗೆ ಹೋಗಲು ಫೈಟ್‌ ನಡೆಯುತ್ತಿದೆ. ಇದೆಲ್ಲದರ ನಡುವೆ ಮಿಡ್ ವೀಕ್ ಎಲಿಮಿನೇಷನ್‌ನಿಂದ ಯಾರ ಆಟಕ್ಕೆ ಬ್ರೇಕ್ ಬೀಳಲಿದೆ ಎಂಬುದನ್ನು ಕಾದುನೋಡಬೇಕಿದೆ.

  • BBK 11: ಐಶ್ವರ್ಯಾ ಸಖತ್ ಆಗಿದ್ದಾಳೆ ಎಂದ ರಜತ್‌ಗೆ ಪತ್ನಿ ಕ್ಲಾಸ್

    BBK 11: ಐಶ್ವರ್ಯಾ ಸಖತ್ ಆಗಿದ್ದಾಳೆ ಎಂದ ರಜತ್‌ಗೆ ಪತ್ನಿ ಕ್ಲಾಸ್

    ನ್ನಡದ ‘ಬಿಗ್ ಬಾಸ್ ಸೀಸನ್ 11’ರ (Bigg Boss Kannada 11) ಆಟ ಇನ್ನೇನು ಕೆಲವೇ ದಿನಗಳಲ್ಲಿ ಮುಗಿಯಲಿದೆ. 93 ದಿನಗಳನ್ನು ಪೂರೈಸಿರುವ ಬಿಗ್ ಬಾಸ್ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಎಂಟ್ರಿ ಕೊಟ್ಟಿದ್ದಾರೆ. ರಜತ್ (Rajath) ಅವರ ಫ್ಯಾಮಿಲಿ ಮನೆಗೆ ಎಂಟ್ರಿ ಕೊಟ್ಟಿದೆ. ತರಲೆ ಮಾಡೋ ಪತಿ ರಜತ್‌ಗೆ ಪತ್ನಿ ಸಖತ್‌ ಆಗಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. ಈ ಕುರಿತ ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದೆ. ಇದನ್ನೂ ಓದಿ:ರಶ್ಮಿಕಾ ಸಿನಿಮಾ ಕೆರಿಯರ್‌ಗೆ 8 ವರ್ಷ- ಫ್ಯಾನ್ಸ್‌ಗೆ ಥ್ಯಾಂಕ್ಯೂ ಎಂದ ನಟಿ

    ಮೊದಲು ಬಿಗ್ ಬಾಸ್‌ಗೆ ರಜತ್ ಪತ್ನಿ ಅಕ್ಷಿತಾ ಬಂದಿದ್ದರು. ಆಗ ರಜತ್ ಹೆಂಡತಿಗೆ ನನ್ನ ಮಗಳು ಎಲ್ಲಿ ಅಂತ ಕೇಳಿದರು. ಆಗ ಅಕ್ಷಿತಾ ಬಂದಿಲ್ಲ ಅಂತ ಸುಳ್ಳು ಹೇಳಿದ್ದರು. ಆಗ ರಜತ್ ಬಿಗ್ ಬಾಸ್ ಇವರನ್ನು ಆಚೆ ಕಳುಹಿಸಿ ಡೋರ್ ಓಪನ್ ಮಾಡಿ ಅಂತ ಹೇಳಿದ್ದಾರೆ. ಬಳಿಕ ಮನೆ ಮಂದಿಯ ಎದುರು ಏನು ಎಲ್ಲರ ತೊಡೆ ಮೇಲೆ ಹೋಗಿ ಕುಳಿತುಕೊಳ್ಳುತ್ತೀದ್ದೀರಾ? ಏನ್ ಕಥೆ ಎಂದು ರಜತ್ ಪತ್ನಿ ಪ್ರಶ್ನೆ ಮಾಡಿದ್ದಾರೆ. ಅದಷ್ಟೇ ಅಲ್ಲ, ಐಶ್ವರ್ಯಾ ನೋಡಿ ಏನ್ ಅಂದ್ರಿ ಅವತ್ತು ಎಂದು ಕೇಳಿದ್ದಾರೆ. ಅದಕ್ಕೆ ರಜತ್, ಐಶ್ವರ್ಯಾ (Aishwarya Shindogi) ಸಖತ್ ಆಗಿದ್ದಾಳೆ, ಅದಕ್ಕೆ ಹಾಗೆ ಅಂದೆ ಅದರಲ್ಲಿ ಏನಿದೆ ಎಂದು ಪ್ರತಿಯುತ್ತರ ನೀಡಿದ್ದಾರೆ. ಅದಕ್ಕೆ ಪತ್ನಿ (Akshita Rajath) ನಗುತ್ತಲೇ ರಜತ್‌ಗೆ ಪೆಟ್ಟು ಕೊಡಲು ಮುಂದಾಗಿದ್ದಾರೆ.

    ಇದಾದ ಕೆಲವು ನಿಮಿಷಕ್ಕೆ ಬಿಗ್ ಬಾಸ್ ಮನೆಗೆ ರಜತ್ ಅವರ ಇಬ್ಬರು ಮಕ್ಕಳು ಎಂಟ್ರಿ ಕೊಟ್ಟಿದ್ದಾರೆ. ಇಬ್ಬರು ಮಕ್ಕಳನ್ನು ನೋಡುತ್ತಿದ್ದಂತೆ ರಜತ್ ಕಣ್ಣಲ್ಲಿ ನೀರು ಬಂದಿದೆ. ಅಪ್ಪ ಮಾತಾಡಿ ಅಪ್ಪ ಅಂತ ಮಗಳು ರಜತ್‌ರನ್ನು ಅಪ್ಪಿಕೊಂಡಿದ್ದಾರೆ. ಇದನ್ನೂ ನೋಡಿದ ಮನೆ ಮಂದಿ ಭಾವುಕರಾಗಿದ್ದಾರೆ.

    ಇನ್ನೂ 50 ದಿನಗಳನ್ನು ಪೂರೈಸಿದ್ದ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು ರಜತ್ ಕಿಶನ್. ಸಹ ಸ್ಪರ್ಧಿಗಳಿಗೆ ಠಕ್ಕರ್ ಕೊಡುತ್ತಾ ಉತ್ತಮವಾಗಿ ರಜತ್ ಆಟ ಆಡುತ್ತಿದ್ದಾರೆ.