Tag: rajath kishen

  • ಕ್ಯಾಪ್ಟೆನ್ಸಿಗಾಗಿ ಮೋಸದಾಟ ಆಡಿದ ಭವ್ಯಾಗೆ ಸುದೀಪ್‌ ವಾರ್ನಿಂಗ್‌

    ಕ್ಯಾಪ್ಟೆನ್ಸಿಗಾಗಿ ಮೋಸದಾಟ ಆಡಿದ ಭವ್ಯಾಗೆ ಸುದೀಪ್‌ ವಾರ್ನಿಂಗ್‌

    ಬಿಗ್‌ ಬಾಸ್‌ ಮನೆಯ ಆಟ (Bigg Boss Kannada 11) ಇನ್ನೇನು ಕೆಲವೇ ದಿನಗಳಲ್ಲಿ ಅಂತ್ಯವಾಗಲಿದೆ. 90 ದಿನಗಳನ್ನು ಪೂರೈಸಿ ಮುನ್ನಗ್ಗುತ್ತಿರುವ ಆಟ ಮತ್ತಷ್ಟು ರೋಚಕವಾಗಿದೆ. 3ನೇ ಬಾರಿ ಭವ್ಯಾ (Bhavya Gowda) ಕ್ಯಾಪ್ಟನ್ ಆಗಿದ್ದಾರೆ. ಆದರೆ ಈ ಬಾರಿ ಅವರು ಮೋಸದಿಂದ ಕ್ಯಾಪ್ಟನ್ ಆಗಿದ್ದಾರೆ.ಈ ಮೋಸದಾಟವನ್ನು ಸುದೀಪ್ ಹೊರಗೆಳೆದರು. ಆದರೆ ಭವ್ಯಾ ಸಿಕ್ಕಿಬಿದ್ದರೂ ಸುಳ್ಳು ಹೇಳುವುದು ಬಿಟ್ಟಿರಲಿಲ್ಲ. ಆಗ ಸುದೀಪ್ ತಮ್ಮದೇ ಶೈಲಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.

    ಟಾಸ್ಕ್‌ವೊಂದರಲ್ಲಿ 9ನೇ ಸಂಖ್ಯೆಯ ಬುಟ್ಟಿಯಲ್ಲಿರುವ ಚೆಂಡುಗಳನ್ನು ಬುಟ್ಟಿಗೆ ಹಾಕುವ ಟಾಸ್ಕ್ ಅನ್ನು ಕ್ಯಾಪ್ಟೆನ್ಸಿ ಟಾಸ್ಕ್ ಆಗಿ ನೀಡಲಾಗಿತ್ತು. ರಜತ್, ಮೋಕ್ಷಿತಾ, ಭವ್ಯಾ, ತ್ರಿವಿಕ್ರಮ್, ಧನರಾಜ್ ಅವರುಗಳು ಆಟದ ರೇಸ್‌ನಲ್ಲಿದ್ದರು. ಉಗ್ರಂ ಮಂಜು, ಚೈತ್ರಾ ಅವರುಗಳು ಉಸ್ತುವಾರಿ ಆಗಿದ್ದರು. ಈ ವೇಳೆ ಭವ್ಯಾ, ಬೇರೆ ಸಂಖ್ಯೆಯ ಡಬ್ಬಿಯಿಂದ ಬಿದ್ದ ಚೆಂಡನ್ನು ಎತ್ತಿಕೊಂಡು ಬುಟ್ಟಿಗೆ ಹಾಕಿ ಟಾಸ್ಕ್ ಗೆದ್ದರು ಮಾತ್ರವಲ್ಲದೆ ಮನೆಯ ಕ್ಯಾಪ್ಟನ್ ಸಹ ಆದರು. ಭವ್ಯಾ ರೂಲ್ಸ್‌ ಬ್ರೇಕ್‌ ಮಾಡಿದನ್ನು ರಜತ್ ನೋಡಿದರೂ ಸಹ ಹೇಳಿರಲಿಲ್ಲ. ಈಗ ಎಲ್ಲರೆದುರು ಸುದೀಪ್ (Sudeep) ವಿಡಿಯೋ ತೋರಿಸಿ ಕ್ಲಾಸ್‌ ತೆಗೆದುಕೊಂಡಿದ್ದಾರೆ.

    ಸಾಕ್ಷಿ ಸಮೇತ ತೋರಿಸಿದರೂ ಸಹ ಸುದೀಪ್‌ ಮುಂದೆ ಭವ್ಯಾ ಅದೇ ಸುಳ್ಳುಗಳನ್ನು ಮುಂದುವರೆಸಿದರು. ಆ ಚೆಂಡು ಎಲ್ಲಿಂದ ಬಿದ್ದಿದ್ದು ಎಂಬುದನ್ನು ನಾನು ನೋಡಿರಲಿಲ್ಲ ಎಂದರು. ಆ ನಂತರ ಇನ್ನೊಂದು ವಿಡಿಯೋ ಅನ್ನು ಸುದೀಪ್ ಹಾಕಿದರು. ಅದರಲ್ಲಿ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ಉಸ್ತುವಾರಿಗಳಾದ ಚೈತ್ರಾ ಹಾಗೂ ಮಂಜು ಕೇಳಿದ ಪ್ರಶ್ನೆಗಳಿಗೆ ಭವ್ಯಾ ಬೇಕೆಂದೇ ಸುಳ್ಳು ಹೇಳಿದರು. ಮೋಸ ಮಾಡಿ ಕ್ಯಾಪ್ಟನ್ ಆಗಿದ್ದಲ್ಲದೆ, ಸುದೀಪ್ ಎದುರು ಆ ಸುಳ್ಳನ್ನೇ ಸತ್ಯ ಮಾಡುವ ಪ್ರಯತ್ನ ಮಾಡಿದರು.

    ಸುಮ್ಮನೆ ಇರು ಎಂದು ನೀವು ಹೇಳಿದ್ದು, ಬೇರೆ ಕಾರಣಕ್ಕೆ ಅಲ್ಲ ಬದಲಿಗೆ ನಾನು ಮೋಸ ಮಾಡುತ್ತಿದ್ದೀನಿ, ನೀನು ನೋಡಿದರೂ ನೋಡದಂತೆ ಇರು ಎಂದು ಸುಮ್ಮನೆ ಇರು, ಸುಮ್ಮನೆ ಇರು ಎಂದು ಮೆಲುದನಿಯಲ್ಲಿ ರಜತ್‌ಗೆ ಹೇಳಿದ್ದು ಎಂದು ಸ್ಪಷ್ಟವಾಗಿ ಸುದೀಪ್‌ ಹೇಳಿದರು. ಇಷ್ಟ ಆದರೂ ತಪ್ಪನ್ನು ಒಪ್ಪಿಕೊಳ್ಳದ ಭವ್ಯಾಗೆ ಸರಿಯಾಗಿ ಸುದೀಪ್‌ ಕ್ಲಾಸ್‌ ತೆಗೆದುಕೊಂಡರು. ಜೊತೆಗೆ ಭವ್ಯಾ ಪರ ನಿಂತಿದ್ದಕ್ಕೆ ರಜತ್‌ಗೂ ಸುದೀಪ್‌ ತರಾಟೆಗೆ ತೆಗೆದುಕೊಂಡರು.

  • BBK 11: ಒಂದು ಬಾಗಿಲು ಇದೆ ಹೊರಗಡೆ ಹೋಗೋಕೆ- ಅವಾಚ್ಯ ಪದ ಬಳಸಿದ ರಜತ್‌ಗೆ ಕಿಚ್ಚನ ಕ್ಲಾಸ್

    BBK 11: ಒಂದು ಬಾಗಿಲು ಇದೆ ಹೊರಗಡೆ ಹೋಗೋಕೆ- ಅವಾಚ್ಯ ಪದ ಬಳಸಿದ ರಜತ್‌ಗೆ ಕಿಚ್ಚನ ಕ್ಲಾಸ್

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ (Bigg Boss Kannada 11) ಆಟ ಶುರುವಾಗಿ 55 ದಿನಗಳನ್ನು ಪೂರೈಸಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳು ಆಗಮಿಸಿದ್ಮೇಲೆ ಆಟ ಮತ್ತಷ್ಟು ರೋಚಕವಾಗಿದೆ. ಗೋಲ್ಡ್ ಸುರೇಶ್‌ಗೆ (Gold Suresh) ಅವಾಚ್ಯ ಪದ ಬಳಸಿದ್ದ ರಜತ್ ಕಿಶನ್‌ಗೆ ಸುದೀಪ್ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಸುದೀಪ್ ಅವರು ರಜತ್‌ಗೆ ಕನ್ನಡದಲ್ಲಿ ತುಂಬಾ ಪದಗಳಿವೆ. ನಿಮ್ಮೆಲ್ಲರಿಗೂ ತೂಕಗಳಿವೆ ಎಂದ ಸುದೀಪ್ (Sudeep) ಮಾತಿಗೆ ಸುರೇಶ್ ಅವರು ಎದೆಗೆ ಕೊಟ್ರೋ ಅದನ್ನು ನನಗೆ ತಡೆದುಕೊಳ್ಳಲು ಆಗಲಿಲ್ಲ. ಆ ಪದಗಳೆಲ್ಲವೂ ಮಾತಿನ ಭರದಲ್ಲಿ ಬಂತು ಎಂದು ರಜತ್ ಸಮಜಾಯಿಸಿ ಕೊಡುತ್ತಾರೆ.

    ನನಗೆ ಕೋಪ ಬಂದಾಗ ಇಂತಹದ್ದೇ ಬಾಯಲ್ಲಿ ಬರೋದು ಅಂತೀರಾ. ಇದೀಗ ಆ ಮಾತುಗಳನ್ನೆಲ್ಲ ನನ್ನ ಮುಂದೆ ವಾಪಸ್ ರಿಪೀಟ್ ಮಾಡಿ. ಯಾಕೆ ಅದನ್ನ ಈಗ ಹೇಳಲು ಆಗುತ್ತಿಲ್ಲ ಎಂದು ಸುದೀಪ್ ಖಡಕ್ ಆಗಿ ಪ್ರಶ್ನೆ ಮಾಡಿದರು. ಇದನ್ನೂ ಓದಿ:‘ಪುಷ್ಪ 2’ ಸಾಂಗ್ ರಿಲೀಸ್‌ಗೂ ಮುನ್ನ ವಾರಣಾಸಿಗೆ ಶ್ರೀಲೀಲಾ ಭೇಟಿ

    ಆಗ ರಜತ್ ಅವರು ಇನ್ನೊಂದು ಸಲ ಆ ತಪ್ಪನ್ನು ರಿಪೀಟ್ ಮಾಡಲ್ಲ ಎಂದಿದ್ದಾರೆ. ಆಗ ಸುದೀಪ್ ಅವರು ನಗುತ್ತಾ, ಮುಂದೆ ತಪ್ಪು ಆದರೆ ಮನೆಯಲ್ಲಿ ಒಂದು ಬಾಗಿಲು ಇದೆ ಹೊರಗಡೆ ಹೋಗೋಕೆ ಎಂದು ಹೇಳಿದ್ದಾರೆ. ಈ ಮೂಲಕ ಕಡೆಯದಾಗಿ ರಜತ್‌ಗೆ ಸುದೀಪ್ ವಾರ್ನಿಂಗ್ ಕೊಟ್ಟಿದ್ದಾರೆ.

    ನ.20ರ ಎಪಿಸೋಡ್‌ನಲ್ಲಿ ಟಾಸ್ಕ್ ಆಡುವಾಗ ಬೀಪ್ ಪದಗಳನ್ನೇ ಸುರೇಶ್‌ಗೆ ಬಳಕೆ ಮಾಡಿದರು. ರಜತ್ ಆಡಿದ ಮಾತಿಗೆ ಸುರೇಶ್ ಬಿಗ್ ಬಾಸ್ ಆಟವನ್ನು ಕ್ವೀಟ್ ಮಾಡುತ್ತೇನೆ. ಇಲ್ಲಿಂದ ನನ್ನನ್ನು ಕಳುಹಿಸಿ ಎಂದು ಪಟ್ಟು ಹಿಡಿದಿದ್ದರು. ಹಾಗಾಗಿ ಇಂದು ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ರಜತ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

  • BBK 11: ಮತ್ತೆ ವರಸೆ ಬದಲಿಸಿದ ರಜತ್‌- ಸುಸ್ತಾದ ಮನೆ ಮಂದಿ

    BBK 11: ಮತ್ತೆ ವರಸೆ ಬದಲಿಸಿದ ರಜತ್‌- ಸುಸ್ತಾದ ಮನೆ ಮಂದಿ

    ದೊಡ್ಮನೆಯಲ್ಲಿ (Bigg Boss Kannada 11) ಇಂದು (ನ.23) ಕಿಚ್ಚನ ವಾರಾಂತ್ಯದ ಪಂಚಾಯಿತಿ ನಡೆಯಲಿದೆ. ತಪ್ಪು ಮಾಡಿದ ಯಾವೆಲ್ಲ ಸ್ಪರ್ಧಿಗಳಿಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳಲಿದ್ದಾರೆ ಅನ್ನೋದನ್ನು ತಿಳಿದುಕೊಳ್ಳಲು ವೀಕ್ಷಕರು ಎದುರು ನೋಡುತ್ತಿದ್ದಾರೆ. ಇದರ ನಡುವೆ ನಿನ್ನೆ ರಜತ್ ಕಳಪೆ ಪಟ್ಟ ಪಡೆದು ಜೈಲು ಸೇರಿದ್ದಾರೆ. ಆದರೂ ಮನೆಮಂದಿಗೆ ರಜತ್ (Rajath) ಕ್ವಾಟ್ಲೆ ಕೊಡೋದನ್ನು ಅವರು ಬಿಟ್ಟಿಲ್ಲ. ಇದನ್ನೂ ಓದಿ: ರಾಮ್ ಪೋತಿನೇನಿ ಹೊಸ ಚಿತ್ರಕ್ಕೆ ಭಾಗ್ಯಶ್ರೀ ಬೋರ್ಸೆ ನಾಯಕಿ

    ಇಂದು (ನ.23) ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ದೊಡ್ಮನೆಯ ಸ್ಪರ್ಧಿಗಳಿಗೆ ರಜತ್ ಚೆನ್ನಾಗಿ ಆಟ ಆಡಿಸಿದ್ದಾರೆ. ಕಳಪೆ ಮತ್ತು ಉತ್ತಮ ವಿಚಾರದಲ್ಲಿ ಬಹುತೇಕ ಸ್ಪರ್ಧಿಗಳು ರಜತ್ ಅವರ ಹೆಸರನ್ನು ತೆಗೆದುಕೊಂಡರು. ರಜತ್ ಬೇಸರದಲ್ಲಿ ಜೈಲಿಗೆ ಹೋಗಿದ್ದಾರೆ. ರಜತ್ ಜೈಲು ವಾಸದಲ್ಲಿದ್ರೂ ಮನೆ ಮಂದಿಗೆ ತಲೆ ನೋವಾಗಿದೆ.

    ಜೈಲು ಸೇರಿದ ರಜತ್‌ಗೆ ಶಿಕ್ಷೆಯ ಮುಂದುವರಿದ ಭಾಗವಾಗಿ ಅಡುಗೆಗೆ ಬೇಕಾಗಿದ್ದ ತರಕಾರಿಗಳನ್ನು ಕಟ್ ಮಾಡಿಕೊಡಬೇಕಿತ್ತು. ಭವ್ಯಾ ಗೌಡ (Bhavya Gowda) ಅವರು ಅಡುಗೆಗೆ ಬೇಕಾದ ತರಕಾರಿಗಳನ್ನು ಕಟ್ ಮಾಡುವಂತೆ ರಜತ್‌ಗೆ ನೀಡುತ್ತಾರೆ. ನಾನು ಕಟ್ ಮಾಡುತ್ತೇನೆ, ಆದರೆ ಎರಡು ಗಂಟೆ ಕಾಯಬೇಕು. ಅದು ಕೂಡ ನನಗೆ ಹೆಂಗೆ ಬೇಕೋ ಹಾಗೆ ಕಟ್ ಮಾಡ್ತೇನೆ ಎಂದು ರಜತ್ ತಿರುಗೇಟು ನೀಡಿದ್ದಾರೆ.

    ನನಗೆ ಕಳಪೆ ಕೊಡುತ್ತೀರಾ? ಎಲ್ಲರೂ ಕಾಯಿರಿ. ನನಗೆ ಅನಿಸಿದಾಗ ಕಟ್ ಮಾಡಿಕೊಡ್ತೀನಿ. ಏನ್ ಮಾಡ್ತೀರಿ ಇವಾಗ ಏನೂ ಮಾಡೋಕೆ ಆಗಲ್ಲ. ನನಗೂ ಹೊಟ್ಟೆ ಉರಿತಾ ಇಲ್ವಾ ಎಂದು ತಮಾಷೆ ಮಾಡಿದ್ದಾರೆ. ಒಟ್ನಲ್ಲಿ ರಜತ್‌ಗೆ ಚೆಲ್ಲಾಟ ಆಗಿದ್ರೆ, ಮನೆ ಮಂದಿಗೆ ಸಂಕಟ ಆಗ್ತಿರೋದಂತೂ ಗ್ಯಾರಂಟಿ.