Tag: Rajath Kishan

  • ಕೊಲೆ ಬೆದರಿಕೆ ಸಂದೇಶ – ಡಿಜಿಐಜಿಪಿಗೆ ರಜತ್ ದೂರು

    ಕೊಲೆ ಬೆದರಿಕೆ ಸಂದೇಶ – ಡಿಜಿಐಜಿಪಿಗೆ ರಜತ್ ದೂರು

    ಬಿಗ್ ಬಾಸ್ ಸ್ಪರ್ಧಿ ರಜತ್ ಕಿಶನ್ (Rajath Kishan) ಅನ್ನು ಕೊಲೆ ಮಾಡುವುದಾಗಿ ಪತ್ನಿ ಅಕ್ಷಿತಾಗೆ ಕೊಲೆ ಬೆದರಿಕೆ ಸಂದೇಶ ಬಂದ ಹಿನ್ನೆಲೆ ರಜತ್ ಡಿಜಿಐಜಿಪಿಗೆ (DGIGP) ದೂರು ನೀಡಿದ್ದಾರೆ.

    ಧರ್ಮಸ್ಥಳದಲ್ಲಿ (Dharmasthala) ಯೂಟ್ಯೂಬರ್ಸ್ ಮೇಲೆ ಹಲ್ಲೆ ನಡೆದ ವೇಳೆ ರಜತ್ ಕಿಶನ್ ಸ್ಥಳದಲ್ಲಿದ್ದರು. ಈ ಹಿನ್ನೆಲೆ ರಜತ್ ಪತ್ನಿ ಅಕ್ಷಿತಾಗೆ ಕೆಲವು ಕಿಡಿಗೇಡಿಗಳು ಕೊಲೆ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಜತ್, ನನ್ನ ಪತ್ನಿ ಅಕ್ಷಿತಾಗೆ, ಕೊಲೆ ಮಾಡ್ತೀವಿ ಅಂಥ ಬೆದರಿಕೆ ಸಂದೇಶ ಬಂದಿತ್ತು. ಇದು ಬಹಳ ಕೆಟ್ಟದ್ದು. ನಾವು ಯಾವುದೇ ಜಾತಿ, ಧರ್ಮ ಜಾಗ ದೇವಸ್ಥಾನ ಬಗ್ಗೆ ಮಾತಾಡಿಲ್ಲ. ನಾವು ಹೋಗಿದ್ದು ಸೌಜನ್ಯ ಪರ ನ್ಯಾಯಕ್ಕಾಗಿ. ಕತ್ತರಿಸ್ತೀನಿ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬಕ್ಕೆ ತಾವರೆ ಹೂ ಕೀಳಲು ಹೋಗಿ ಸಾವು

    ಹಾಡಹಗಲೇ ನಮ್ಮ ಕಣ್ಣಮುಂದೆನೇ ಎಲ್ಲ ನಡೆದಿದ್ದು. ಹಲ್ಲೆ ಮಾಡಿದವರ ಮೇಲೆ ದೂರು ಕೊಟ್ಟಿದ್ದೇನೆ. ನನ್ನ ಪತ್ನಿಗೆ ಬೆದರಿಕೆ ಸಂದೇಶ ಹಾಕಿದವರ ವಿರುದ್ಧವೂ ದೂರು ಕೊಟ್ಟಿದ್ದೇವೆ. ನಾವು ಕೊಟ್ಟ ದೂರು ಸೈಬರ್ ಠಾಣೆಗೆ ವರ್ಗಾವಣೆ ಆಗಿದೆ. ಕರಾವಳಿ, ಮಂಡ್ಯ ಅಂತೆಲ್ಲ ಹೇಳುತ್ತಿದ್ದಾರೆ. ನಾವು ಮಂಡ್ಯದವರನ್ನ ಕರ್ಕೊಂಡು ಬರುತ್ತೇವೆ ಎಂದು ಹೇಳಿಲ್ಲ. ಬೆದರಿಕೆಗಳಿಗೆ ನಾವು ಹೆದರಲ್ಲ ಎಂದರು. ಇದನ್ನೂ ಓದಿ: ಸರ್ವಜ್ಞ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಬಂದಿದೆ, ಅಲ್ಲೂ ಪರಿಶೀಲನೆ ಮಾಡಲಿ: ಪಿ.ಸಿ ಮೋಹನ್

    ಬಳಿಕ ಮಾತನಾಡಿದ ರಜತ್ ಪತ್ನಿ ಅಕ್ಷಿತಾ, ಸೋಷಿಯಲ್ ಮೀಡಿಯಾ ಸ್ಟೇಟಸ್‌ನಲ್ಲಿ ಮೆಸೇಜ್ ಹಾಕಿದ್ದಾರೆ. ನಿನ್ನ ಗಂಡನನ್ನ ವಾಪಸ್ ಕರೆಸಿಕೋ. ಕರಾವಳಿ ಬೇರೆ ಥರ, ಮಂಡ್ಯ ಅಲ್ಲ ಅಂತೆಲ್ಲ ಹಾಕಿದ್ದಾರೆ. ನಾವು ಹುಟ್ಟಿ ಬೆಳೆದಿದ್ದು ಮಂಡ್ಯ. ನಾವು ದೂರು ಕೊಟ್ಟಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಉದ್ವಿಗ್ನತೆ – 150ಕ್ಕೂ ಹೆಚ್ಚು ಜನರ ವಿರುದ್ಧ ಪ್ರತ್ಯೇಕ FIR ದಾಖಲು

  • ಯೂಟ್ಯೂಬರ್ಸ್ ಮೇಲೆ 50-60 ಜನ ಅಟ್ಯಾಕ್ ಮಾಡಿದ್ರು, ನನ್ನ ಬಳಿ ಸಾಕ್ಷಿ ಇದೆ: ರಜತ್

    ಯೂಟ್ಯೂಬರ್ಸ್ ಮೇಲೆ 50-60 ಜನ ಅಟ್ಯಾಕ್ ಮಾಡಿದ್ರು, ನನ್ನ ಬಳಿ ಸಾಕ್ಷಿ ಇದೆ: ರಜತ್

    ಮಂಗಳೂರು: ಧರ್ಮಸ್ಥಳದಲ್ಲಿ ಯೂಟ್ಯೂಬರ್ಸ್ ಮೇಲೆ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಖ್ಯಾತಿಯ ರಜತ್ ಕಿಶನ್ ಪ್ರತಿಕ್ರಿಯೆ ನೀಡಿದ್ದಾರೆ.

    ನಾನು ಧರ್ಮಸ್ಥಳಕ್ಕೆ ಹೋಗಿದ್ದು, ಸೌಜನ್ಯ ಕೇಸ್‌ನಲ್ಲಿ ನ್ಯಾಯ ಕೇಳೋಕೆ ಮಾತ್ರ. ನಾನು ಯಾವತ್ತೂ ಧರ್ಮಸ್ಥಳದ ಬಗ್ಗೆ ತಪ್ಪಾಗಿ ಮಾತನಾಡಿಲ್ಲ. ನಾನು ಸೌಜನ್ಯ ಕುಟುಂಬಸ್ಥರನ್ನು ಭೇಟಿ ಮಾಡೋಕೆ ಹೋಗಿದ್ದೆ. ಈ ವೇಳೆ ಯೂಟ್ಯೂಬರ್ಸ್ಗೆ ಮಾತನಾಡುತ್ತಿದ್ದಾಗಲೇ ಗುಂಪು ಬಂತು. ಕಾರು ಮತ್ತು ಬೈಕ್‌ನಲ್ಲಿ ಬಂದವರಿಂದ ಹಲ್ಲೆ ನಡೆಯಿತು ಎಂದು ತಿಳಿಸಿದ್ದಾರೆ.

    ಏಕಾಏಕಿ ಯೂಟ್ಯೂಬರ್ಸ್ ಮೇಲೆ ಗುಂಪು ಎರಗಿತು. ಸುಮಾರು 50-60 ಜನ ಬಂದು ಅಟ್ಯಾಕ್ ಮಾಡಿದ್ದರು. ಅಲ್ಲಿ ನನ್ನ ಮೇಲೆ ಯಾರು ಬೆರಳೆತ್ತಿ ತೋರಿಸಿಲ್ಲ, ಏನೂ ಮಾಡಿಲ್ಲ. ಆದರೆ, ಯೂಟ್ಯೂಬರ್ಸ್ ಬಗ್ಗೆ ಮಾತ್ರ ಅವರು ಕೋಪ ತೋರಿಸಿದ್ದರು. ಸೌಜನ್ಯ ಕೇಸ್‌ನಲ್ಲಿ ನ್ಯಾಯ ಕೊಡಿಸಿ ಅಂತಾ ಕೇಳೋಕೆ ಹೋಗಿದ್ದೆ. ಸೌಜನ್ಯ ಬಗ್ಗೆ ಕೇಳಿದ್ದರೆ ಅವರೆಲ್ಲಾ ಧರ್ಮ ಅಂತಾ ಮಾತಾಡಿದ್ದರು ಎಂದು ಹೇಳಿದ್ದಾರೆ.

    ಯೂಟ್ಯೂಬರ್ಸ್‌ಗೆ ಹೊಡೆದು ಕ್ಯಾಮೆರಾ ಕಿತ್ತು ಬಿಸಾಡಿದರು. ಯೂಟ್ಯೂಬರ್ಸ್‌ಗೆ ಹಲ್ಲೆ ಮಾಡಿದ್ದರ ಬಗ್ಗೆ ನನ್ನ ಬಳಿ ಸಾಕ್ಷಿ ಇದೆ ಎಂದು ರಜತ್ ತಿಳಿಸಿದ್ದಾರೆ.

  • ಮಚ್ಚು ಹಿಡಿದು ರೀಲ್ಸ್ ಕೇಸ್ – ಬಸವೇಶ್ವರ ನಗರ ಪೊಲೀಸರಿಂದ ರಜತ್‌ಗೆ ಮತ್ತೆ ನೋಟಿಸ್

    ಮಚ್ಚು ಹಿಡಿದು ರೀಲ್ಸ್ ಕೇಸ್ – ಬಸವೇಶ್ವರ ನಗರ ಪೊಲೀಸರಿಂದ ರಜತ್‌ಗೆ ಮತ್ತೆ ನೋಟಿಸ್

    ಬೆಂಗಳೂರು: ಮಚ್ಚು ಹಿಡಿದು ರೀಲ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್‌ಗೆ (Rajath Kishan) ಮತ್ತೆ ಸಂಕಷ್ಟ ಎದುರಾಗಿದೆ.

    ಕಳೆದ ಒಂದು ತಿಂಗಳ ಹಿಂದೆ ಬಿಗ್‌ಬಾಸ್ (Bigg Boss) ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡ (Vinay Gowda) ಖಾಸಗಿ ಕಾರ್ಯಕ್ರಮ ಮುಗಿದ ಬಳಿಕ ಮಚ್ಚು ಹಿಡಿದು ರೀಲ್ಸ್ ಮಾಡಿದ್ದರು. ಈ ವಿಡಿಯೋ ವೈರಲ್ ಆದ ಬಳಿಕ ಬಸವೇಶ್ವರ ನಗರ (Basaveshwar Nagar) ಪೊಲೀಸರು, ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಕೇಸ್ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದರು.ಇದನ್ನೂ ಓದಿ: ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿದ್ದಾಗ ಗಗನಸಖಿ ಮೇಲೆ ಲೈಂಗಿಕ ದೌರ್ಜನ್ಯ!

    ವಿಚಾರಣೆ ವೇಳೆ ರೀಲ್ಸ್‌ಗೆ ಬಳಸಿದ್ದ ಮಚ್ಚು ಫೈಬರ್ ಎಂದು ಹೇಳಿದ್ದರು. ಆದರೆ ಪೊಲೀಸರ ತನಿಖೆಯಲ್ಲಿ ಅದು ರಿಯಲ್ ಮಚ್ಚು ಎನ್ನುವುದು ಗೊತ್ತಾಗಿತ್ತು. ಇಲ್ಲಿಯವರೆಗೂ ರೀಲ್ಸ್‌ಗೆ ಬಳಸಿದ ಅಸಲಿ ಮಚ್ಚನ್ನು ಪೊಲೀಸರಿಗೆ ಕೊಟ್ಟಿರಲಿಲ್ಲ. ಹಾಗಾಗಿ ಆ ಮಚ್ಚಿನ ಬಗ್ಗೆ ಮಾಹಿತಿ ನೀಡುವಂತೆ ರಜತ್‌ಗೆ ನೋಟಿಸ್ ನೀಡಿದ್ದು, ಇಂದು 11 ಗಂಟೆಗೆ ವಿಚಾರಣೆ ಬರಲು ಸೂಚಿಸಲಾಗಿದೆ.

    ಇನ್ನೂ ಮಚ್ಚು ಹಿಡಿದು ರೀಲ್ಸ್ ಮಾಡಿದ್ದ ಕೇಸ್‌ನಲ್ಲಿ ಮಾ.24 ರಂದು ಅರೆಸ್ಟ್ ಆಗಿದ್ದ ರಜತ್ ಮತ್ತು ವಿನಯ್ ಗೌಡ ಮಾ.28 ರಂದು ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.ಇದನ್ನೂ ಓದಿ: ಮಂಡ್ಯ| ಹಣಕಾಸು ವಿಚಾರಕ್ಕೆ ಹಲ್ಲೆಗೊಳಗಾಗಿದ್ದ ಯುವಕ 13 ದಿನಗಳ ಬಳಿಕ ಸಾವು

     

  • ಸ್ನೇಹಿತರ ಸಂಬಂಧ ಗಂಡ-ಹೆಂಡತಿ ಜಗಳ ಇದ್ದಂತೆ, ನಮ್ಮಿಬ್ಬರ ಮಧ್ಯೆ ಬ್ರೇಕಪ್ ಏನಿಲ್ಲ: ವಿನಯ್‌ ಗೌಡ

    ಸ್ನೇಹಿತರ ಸಂಬಂಧ ಗಂಡ-ಹೆಂಡತಿ ಜಗಳ ಇದ್ದಂತೆ, ನಮ್ಮಿಬ್ಬರ ಮಧ್ಯೆ ಬ್ರೇಕಪ್ ಏನಿಲ್ಲ: ವಿನಯ್‌ ಗೌಡ

    – ರಜತ್‌ ಜೊತೆಗಿನ ಸ್ನೇಹದಲ್ಲಿ ಬಿರುಕು ವದಂತಿಗೆ ವಿನಯ್‌ ಸ್ಪಷನೆ

    ಬೆಂಗಳೂರು: ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದ ಪ್ರಕರಣ ಈಗ ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳಾದ ವಿನಯ್‌ ಗೌಡ – ರಜತ್‌ ಕಿಶನ್‌ (Rajath Kishan) ಸ್ನೇಹದಲ್ಲಿ ಬಿರುಕು ಮೂಡಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ರಜತ್‌ ಕಿಶನ್‌ ಕೂಡ ನನ್ನ ಫ್ರೆಂಡ್‌ಶಿಪ್‌ ಬೇಡ ಅಂದ್ರೆ ನೇರವಾಗಿ ಹೇಳಿಬಿಡಲಿ ಎಂದೇ ಹೇಳಿದ್ದರು. ಇದೀಗ ಇಬ್ಬರ ಸ್ನೇಹದ ಬಿರುಕಿನ ಬಗ್ಗೆ ವಿನಯ್‌ ಗೌಡ (Vinay Gowda) ಪ್ರತಿಕ್ರಿಯೆ ನೀಡಿದ್ದಾರೆ.

    ರಜತ್ ಜೊತೆ ನನ್ನ ಫ್ರೆಂಡ್ ಶಿಪ್ ಕಟ್ ಆಗಿಲ್ಲ. ಸಣ್ಣ ಸಣ್ಣ ವಿಷಯಕ್ಕೆ ಫ್ರೆಂಡ್ ಶಿಪ್ ಕಟ್ ಮಾಡ್ಕೊಳ್ಳೋವನು ನಾನಲ್ಲ. ಅವನು ನನ್ನನ್ನ ಎಲ್ಲೂ ಬಿಟ್ಟುಕೊಟ್ಟಿಲ್ಲ. ನಾನೂ ಬಿಟ್ಟು ಕೊಡಲ್ಲ, ಸ್ನೇಹಿತರ ಸಂಬಂಧ ಗಂಡ ಹೆಂಡತಿ ಜಗಳ ಇದ್ದಂತೆ, ಎರಡ್ಮೂರು ದಿನ ಇರುಸು-ಮುರುಸು ಇರುತ್ತೆ, ಹಾಗೇ ಬಿಟ್ರೆ ಅದಾಗೇ ಸರಿ ಹೋಗುತ್ತೆ ಅಂತ ಹೇಳಿದ್ದಾರೆ. ಇದನ್ನೂ ಓದಿ: ಮಚ್ಚು ಹಿಡಿದು ರೀಲ್ಸ್ ಪ್ರಕರಣ; ವಿನಯ್‌ ಗೌಡ – ರಜತ್‌ ನಡುವೆ ಬಿರುಕು?

    Rajath Kishan 2

    ನಮ್ಮಿಬ್ಬರ ಮಧ್ಯೆ ಬ್ರೇಕಪ್ ಏನಿಲ್ಲ, ಅವನಿಗಿಂತ ನಾನು ವಯಸ್ಸಿನಲ್ಲಿ ದೊಡ್ಡವನು. ಅವನು ಬ್ಲೇಮ್ ಮಾಡ್ದ ಅಂತ ನಾನ್ ಮಾಡಲ್ಲ. ಅವನು ಕರೆದ ಅಂತ ನಾನ್ ಒಪ್ಕೊಂಡೆ ಅದು ತಪ್ಪಾಯ್ತು ಅಂದೆ ಅಷ್ಟೇ. ನಾನು ಕೂಡ ಅವನು ಬಲವಂತವಾಗಿ ಕರೆದ ಅಂತ ಹೇಳಿಲ್ಲ. ಜೈಲಿಂದ ಬಂದ ಬಳಿಕ ನಾವ್ ಒಟ್ಟಿಗೆ ಕಾಣಿಸ್ಕೊಂಡಿಲ್ಲ ನಿಜ, ಅನಿವಾರ್ಯತೆಯಿಂದ ಹೋಗಿಲ್ಲ. ರಜತ್ ಬಂದ್ರೆ ನಾನ್ ಬರಲ್ಲ ಅಂತ ಸುದ್ದಿಯಾಗೋದು ಬೇಡ. ನಾನು ಪ್ರೊಗ್ರಾಮ್‌ನಲ್ಲಿ ಜಡ್ಜ್ ಆಗಿರೋದ್ರಿಂದ ಅನಿವಾರ್ಯತೆ ಇದ್ದಾಗ ಮಾತ್ರಾ ಹೋಗ್ತಿದ್ದೆ. ಮುಂದಿನ ವಾರ ಸಹ ನನಗೆ ಹೋಗೋಕಾಗಲ್ಲ. ಹಾಗೆಂದ ಮಾತ್ರಕ್ಕೆ ನನ್ನ ರಜತ್ ಫ್ರೆಂಡ್ ಶಿಪ್ ಕಟ್ ಆಗಿಲ್ಲ. ಕಂಟಿನ್ಯೂ ಆಗುತ್ತೆ. 18 ಸೆಕೆಂಡ್ ರೀಲ್ಸ್ ಗೋಸ್ಕರ 18 ವರ್ಷದ್ ಫ್ರೆಂಡ್ ಶಿಪ್ ಕಟ್ ಮಾಡ್ಕೊಳ್ಳಲ್ಲ ಅಂತ ವಿನಯ್‌ ಗೌಡ ಹೇಳಿದ್ದಾರೆ. ಇದನ್ನೂ ಓದಿ: ಸಂಬಂಧಗಳು ಇಂದು ಗಟ್ಟಿಯಾಗಿ ಉಳಿದಿದೆ ಅಂದ್ರೆ ಅಪ್ಪಾಜಿ ಸಿನಿಮಾಗಳೇ ಕಾರಣ: ಶಿವಣ್ಣ

    Rajath Kishan

    ರಜತ್‌ ಕಿಶನ್‌ ಹೇಳಿದ್ದೇನು?
    ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದ್ದ ರಜತ್‌ ಕಿಶನ್‌, ಕಳೆದ 11 ವರ್ಷಗಳಿಂದ ನಾನು ವಿನಯ್, ಸ್ನೇಹಿತರು. ಬಿಗ್ ಬಾಸ್‌ಗೆ ಹೋಗೋಕು ಮುಂಚೆ ಪರಿಚಯ ಇತ್ತು. ಆದರೆ ರೀಲ್ಸ್ ಮಾಡಿ ಜೈಲಿಗೆ ಹೋಗಿ ಬಂದ ನಂತರ ಅವ‌ನೇ ಮಾಧ್ಯಮಗಳಿಗೆ ಮಾತಾಡೋದು ಬೇಡ ಅಂದ. ನಂತರ ಅವನೇ ಮೊದಲು ವಿಡಿಯೋ ಮಾಡಿ ಕ್ಷಮೆ ಕೇಳಿದ್ದಾನೆ. ಆಮೇಲೆ ನನ್ನಿಂದಲೇ ಇದೆಲ್ಲಾ ಆಯ್ತು ಅನ್ನೋ ತರ ನಡ್ಕೋತಿದ್ದಾನೆ. ಕಳೆದ ಒಂದು ವಾರದಿಂದ ಅವನ ಅಕೌಂಟ್‌ನಲ್ಲಿ ಕೆಲವರು ರಜತ್ ಫ್ರೆಂಡ್‌ಶಿಪ್‌ ಕಟ್ ಮಾಡು ಅಂತಾ ವಿನಯ್‌ಗೆ ಕಾಮೆಂಟ್ ಮಾಡ್ತಿದ್ದಾರೆ. ಆ ಕಾಮೆಂಟ್‌ಗಳಿಗೆ ವಿನಯ್ ಕೂಡ ಲೈಕ್ಸ್ ಕೊಡ್ತಿದ್ದಾನೆ. ಇದು ಸರಿಯಿಲ್ಲ, ನನ್ನ ಫ್ರೆಂಡ್‌ಶಿಪ್‌ ಬೇಡ ಅಂದ್ರೆ ನೇರವಾಗಿ ಹೇಳಿಬಿಡಲಿ. ಅದು ಬಿಟ್ಟು ಈ ರೀತಿ ಮಾಡೋದು ಸರಿಯಿಲ್ಲ ಅಂತ ವಿನಯ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಸುಶ್ಮಿತಾ ಸೇನ್ ಮಾಜಿ ಅತ್ತಿಗೆಗೆ ಆರ್ಥಿಕ ಸಂಕಷ್ಟ- ಆನ್‌ಲೈನ್‌ನಲ್ಲಿ ನಟಿ ಸೀರೆ ಮಾರಾಟ

  • ಮಚ್ಚು ಹಿಡಿದು ರೀಲ್ಸ್ ಪ್ರಕರಣ; ವಿನಯ್‌ ಗೌಡ – ರಜತ್‌ ನಡುವೆ ಬಿರುಕು?

    ಮಚ್ಚು ಹಿಡಿದು ರೀಲ್ಸ್ ಪ್ರಕರಣ; ವಿನಯ್‌ ಗೌಡ – ರಜತ್‌ ನಡುವೆ ಬಿರುಕು?

    – ವಿನಯ್‌ಗೆ ನನ್ನ ಫ್ರೆಂಡ್‌ಶಿಪ್‌ ಬೇಡ ಅಂದ್ರೆ ನೇರವಾಗಿ ಹೇಳಿಬಿಡಲಿ ಎಂದ ರಜತ್‌

    ಬೆಂಗಳೂರು: ಮಚ್ಚು ಹಿಡಿದು ರೀಲ್ಸ್‌ ಮಾಡಿದ್ದ ಪ್ರಕರಣ ಈಗ ಬಿಗ್‌ ಬಾಸ್‌ ಮಾಜಿ ಸ್ಪರ್ಧಿಗಳಾದ ವಿನಯ್‌ ಗೌಡ – ರಜತ್‌ ಕಿಶನ್‌ (Rajath Kishan) ಸ್ನೇಹದಲ್ಲಿ ಬಿರುಕು ಮೂಡಿಸಿದೆ ಎಂದು ಹೇಳಲಾಗುತ್ತಿದೆ.

    ಹೌದು. ಬಿಗ್ ಬಾಸ್ (Bigg Boss Kannada) ಮಾಜಿ ಸ್ಪರ್ಧಿಗಳಾದ ರಜತ್ ಮತ್ತು ವಿನಯ್ ಗೌಡ (Vinay Gowda) ಮಚ್ಚು ಹಿಡಿದು ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ರು. ಪೋಸ್ಟ್ ಗಮನಿಸಿದ್ದ ಬಸವೇಶ್ವರ ನಗರ ಠಾಣೆ ಪೊಲೀಸರು ಇಬ್ಬರ ವಿರುದ್ಧ ಎಫ್‌ಐಆರ್‌ ದಾಖಲಿಸಿ ಬಂಧನ ಕೂಡ ಮಾಡಿದ್ರು. ನಂತರ ಪರಪ್ಪನ ಅಗ್ರಹಾರ ಜೈಲಿಗೂ ಕಳುಹಿಸಲಾಗಿತ್ತು. ಆ ನಂತರ ವಿನಯ್ ವಿಡಿಯೋ ಮಾಡಿ ರೀಲ್ಸ್ ಮಾಡಿದ್ದು ತಪ್ಪು, ಇನ್ಮುಂದೆ ಜೀವನದಲ್ಲಿ ಯಾವತ್ತೂ ರೀಲ್ಸ್ ಮಾಡಲ್ಲ ಅಂತಾ ಹೇಳಿಕೆ ಕೂಡ ಕೊಟ್ಟಿದ್ರು. ಆದ್ರೆ ಇಲ್ಲಿವರೆಗೂ ರಜತ್ ಮಾತ್ರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಇದನ್ನೂ ಓದಿ: ಒಬಿಸಿ ಮೀಸಲಾತಿ ಪ್ರಮಾಣವನ್ನು 32% ರಿಂದ 51%ಕ್ಕೆ ಏರಿಸಿ – ಆಯೋಗದ ಶಿಫಾರಸು ಏನು? ಯಾವ ಜಾತಿಗೆ ಎಷ್ಟು ಮೀಸಲಾತಿ ಏರಿಕೆ? 

    ಇದೇ ಮೊದಲ ಬಾರಿಗೆ ʻಪಬ್ಲಿಕ್ ಟಿವಿʼಯೊಂದಿಗೆ ರಜತ್ ರೀಲ್ಸ್ ಮಾಡಿದ್ದು ಹೇಗೆ ಏನೆಲ್ಲಾ ಆಯ್ತು ಅನ್ನೋ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಅಕ್ಷಯ್ ಸ್ಟುಡಿಯೋದಲ್ಲಿ ಖಾಸಗಿ ಕಾರ್ಯಕ್ರಮ ಇತ್ತು. ಕಾರ್ಯಕ್ರಮ ಮುಗಿಸಿ ಹೊರಗೆ ಬಂದ ವೇಳೆ ನಾನೇ ರೀಲ್ಸ್ ಮಾಡೋಣ ಅಂತ ವಿನಯ್‌ಗೆ ಹೇಳಿದ್ದೆ. ಅಲ್ಲೇ ಸೆಟ್‌ನಲ್ಲಿದ್ದ ಫೈಬರ್ ಮಚ್ಚು ತಗೊಂಡು ರೀಲ್ಸ್ ಮಾಡಿ ಇಬ್ಬರು ಇನ್‌ಸ್ಟಾ ಅಕೌಂಟ್‌ನಲ್ಲಿ ಪೋಸ್ಟ್ ಮಾಡಿದ್ವಿ. ನಾವು ಫೈಬರ್ ಮಚ್ಚು ಬಳಸಿ ರೀಲ್ಸ್ ಮಾಡಿದ್ದು, ಆಸಲಿ ಮಚ್ಚು‌ ಬಳಸಿಲ್ಲ. ಮಚ್ಚು ಹಿಡಿದು ರೀಲ್ಸ್ ಮಾಡೋದು ತಪ್ಪು ಅಂತ ಗೊತ್ತಿರಲಿಲ್ಲ, ಯಾರು ಕೂಡ ಮುಂದೆ ಈ ರೀತಿ ಮಾಡಬೇಡಿ ಅಂತ ಮನವಿ ಕೂಡ ಮಾಡಿದ್ದಾರೆ. ಇದನ್ನೂ ಓದಿ: ದೇಶದ ಇತಿಹಾಸದಲ್ಲಿ ಮೊದಲು; ರಾಜ್ಯಪಾಲರು-ರಾಷ್ಟ್ರಪತಿಗಳ ಸಮ್ಮತಿಯಿಲ್ಲದೆ 10 ಕಾಯ್ದೆಗಳನ್ನ ಜಾರಿಗೊಳಿಸಿದ ತ.ನಾಡು ಸರ್ಕಾರ

    ವಿನಯ್ ಬಗ್ಗೆ ಅಸಮಾಧಾನ:
    ಮುಂದುವರಿದು ಮಾತನಾಡಿದ ರಜತ್, ಕಳೆದ 11 ವರ್ಷಗಳಿಂದ ನಾನು ವಿನಯ್, ಸ್ನೇಹಿತರು. ಬಿಗ್ ಬಾಸ್‌ಗೆ ಹೋಗೋಕು ಮುಂಚೆ ಪರಿಚಯ ಇತ್ತು. ಆದರೆ ರೀಲ್ಸ್ ಮಾಡಿ ಜೈಲಿಗೆ ಹೋಗಿ ಬಂದ ನಂತರ ಅವ‌ನೇ ಮಾಧ್ಯಮಗಳಿಗೆ ಮಾತಾಡೋದು ಬೇಡ ಅಂದ. ನಂತರ ಅವನೇ ಮೊದಲು ವಿಡಿಯೋ ಮಾಡಿ ಕ್ಷಮೆ ಕೇಳಿದ್ದಾನೆ. ಆಮೇಲೆ ನನ್ನಿಂದಲೇ ಇದೆಲ್ಲಾ ಆಯ್ತು ಅನ್ನೋ ತರ ನಡ್ಕೋತಿದ್ದಾನೆ. ಕಳೆದ ಒಂದು ವಾರದಿಂದ ಅವನ ಅಕೌಂಟ್‌ನಲ್ಲಿ ಕೆಲವರು ರಜತ್ ಫ್ರೆಂಡ್‌ಶಿಪ್‌ ಕಟ್ ಮಾಡು ಅಂತಾ ವಿನಯ್‌ಗೆ ಕಾಮೆಂಟ್ ಮಾಡ್ತಿದ್ದಾರೆ. ಆ ಕಾಮೆಂಟ್‌ಗಳಿಗೆ ವಿನಯ್ ಕೂಡ ಲೈಕ್ಸ್ ಕೊಡ್ತಿದ್ದಾನೆ. ಇದು ಸರಿಯಿಲ್ಲ, ನನ್ನ ಫ್ರೆಂಡ್‌ಶಿಪ್‌ ಬೇಡ ಅಂದ್ರೆ ನೇರವಾಗಿ ಹೇಳಿಬಿಡಲಿ. ಅದು ಬಿಟ್ಟು ಈ ರೀತಿ ಮಾಡೋದು ಸರಿಯಿಲ್ಲ ಅಂತ ವಿನಯ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಇದನ್ನೂ ಓದಿ: ಗೆಳತಿಯನ್ನು ಸೂಟ್‌ಕೇಸ್‌ನಲ್ಲಿ ಬಚ್ಚಿಟ್ಟು ಹಾಸ್ಟೆಲ್‌ಗೆ ತಂದು ಸಿಕ್ಕಿಬಿದ್ದ ಯುವಕ! 

  • ಬಿಗ್‌ ಬಾಸ್‌ ಮಾಜಿ ಸ್ವರ್ಧಿಗಳಾದ ರಜತ್, ವಿನಯ್ ಗೌಡ ವಿರುದ್ಧ ಎಫ್‌ಐಆರ್

    ಬಿಗ್‌ ಬಾಸ್‌ ಮಾಜಿ ಸ್ವರ್ಧಿಗಳಾದ ರಜತ್, ವಿನಯ್ ಗೌಡ ವಿರುದ್ಧ ಎಫ್‌ಐಆರ್

    ಬೆಂಗಳೂರು: ಬಿಗ್ ಬಾಸ್ ಸೀಸನ್ 11ರ ಸ್ವರ್ಧಿಗಳಾದ ವಿನಯ್ ಗೌಡ ಮತ್ತು ರಜತ್ ವಿರುದ್ಧ ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

     

    View this post on Instagram

     

    A post shared by Rajath kishan G (@bujjjjii)

    ಹೌದು. ರಜತ್ ಕಿಶನ್ ಜೊತೆ ನಟ ವಿನಯ್ ಗೌಡ ಒಂದು ಮಸ್ತ್ ರೀಲ್ಸ್ ಮಾಡಿದ್ದಾರೆ. ಈ ರೀಲ್ಸ್‌ನಲ್ಲಿ ವಿನಯ್ ಗೌಡ ಲಾಂಗು ಹಿಡಿದು, ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಂಡು ದರ್ಶನ್ ಅವರ ‘ಕರಿಯ’ ಸಿನಿಮಾದ ಸ್ಟೈಲ್‌ನಲ್ಲಿ ಸ್ಲೋ ಮೋಷನ್‌ನಲ್ಲಿ ನಡೆಯುತ್ತಿರುತ್ತಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಇದರ ಬೆನ್ನಲ್ಲೇ ಇಬ್ಬರ ಸ್ಪರ್ಧಿಗಳ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಇದನ್ನೂ ಓದಿ: ಹೆಂಡ, ಸಿಗರೇಟು ನೀಡಿದ್ರೆ ಇಷ್ಟಾರ್ಥ ಸಿದ್ಧಿ – ಕಾರವಾರದಲ್ಲೊಂದು ವಿಶಿಷ್ಟ ದೈವ ಜಾತ್ರೆ!

    ಬಸವೇಶ್ವರ ನಗರದಲ್ಲಿ ಸಾರ್ವಜನಿಕವಾಗಿ ಲಾಂಗ್ ಹಿಡಿದು ಭಯದ ವಾತಾವರಣ ಸೃಷ್ಟಿಸುವ ರೀಲ್ಸ್ ಮಾಡಿದ್ದು ಈಗ ಸಮಸ್ಯೆಗೆ ಕಾರಣವಾಗಿದೆ. ಅಲ್ಲದೇ ಈ ರೀಲ್ಸ್‌ ಅನ್ನು ʻಬುಜ್ಜಿʼ ಅನ್ನೋ ಇನ್‌ಸ್ಟಾ ಖಾತೆಯಲ್ಲಿ ಶೇರ್‌ ಮಾಡಿದ್ದಾರೆ. ಇದನ್ನೂ ಓದಿ: IPL 2025: ಗಾಯಕ್ವಾಡ್‌, ರಚಿನ್‌ ಫಿಫ್ಟಿ ಆಟ – ಮುಂಬೈ ವಿರುದ್ಧ ಚೆನ್ನೈಗೆ 4 ವಿಕೆಟ್‌ಗಳ ಜಯ

    ಈ ವಿಡಿಯೋ ಗಮನಿಸಿದ ಬಸವೇಶ್ವರ ನಗರ ಪೊಲೀಸರು, ಇಬ್ಬರ ವಿರುದ್ಧ ಆರ್ಮ್ಸ್ ಆಕ್ಟ್ ಆಡಿ ಕೇಸ್ ದಾಖಲಿಸಿದ್ದಾರೆ. ಸಾರ್ವಜನಿಕವಾಗಿ ಮಾರಕಾಸ್ತ್ರಗಳನ್ನು ಹಿಡಿದು ರಿಲ್ಸ್ ಮಾಡುವುದು, ಭಯದ ವಾತಾವರಣ ಸೃಷ್ಟಿಸೋದು ಕಾನೂನು ಪ್ರಕಾರ ಅಪರಾಧವಾಗಿದೆ. ಈ ನಿಟ್ಟಿನಲ್ಲಿ ಈ ಇಬ್ಬರ ಸ್ವರ್ಧಿಗಳ ಮೇಲೆ ಎಫ್‌ಐಆರ್ ದಾಖಲಿಸಿದ್ದಾರೆ.

  • BBK 11| ಹನುಮಂತು ಮುಂದೆ ಗಾಂಧೀಜಿ ನಿಂತಿದ್ರೂ ಹನುಮಂತುನೇ ಗೆಲ್ತಿದ್ರು: ರಜತ್ ಕಿಶನ್

    BBK 11| ಹನುಮಂತು ಮುಂದೆ ಗಾಂಧೀಜಿ ನಿಂತಿದ್ರೂ ಹನುಮಂತುನೇ ಗೆಲ್ತಿದ್ರು: ರಜತ್ ಕಿಶನ್

    ಬೆಂಗಳೂರು: ಹನುಮಂತು (Hanumantha) ಮುಂದೆ ಗಾಂಧೀಜಿ ನಿಂತಿದ್ದರು ಹನುಮಂತುನೇ ಗೆಲ್ಲುತ್ತಿದ್ದರು ಎಂದು ಬಿಗ್ ಬಾಸ್ ಸೀಸನ್ 11ರ (Bigg Boss 11) ಸೆಕೆಂಡ್ ರನ್ನರ್ ಅಪ್ ರಜತ್ ಕಿಶನ್ (Rajath Kishan) ಸಂತಸ ವ್ಯಕ್ತಪಡಿಸಿದರು.

    ಬಿಗ್ ಬಾಸ್ 11ರ ಗ್ರ್ಯಾಂಡ್ ಫಿನಾಲೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಗ್ ಬಾಸ್ ಜರ್ನಿ ಚೆನ್ನಾಗಿತ್ತು. ಶಾರ್ಟ್ ಟೈಂನಲ್ಲಿ ಇಷ್ಟೊಂದು ಪ್ರೀತಿ ವಿಶ್ವಾಸ ಸಿಕ್ಕಿರೋದು ಖುಷಿ ಇದೆ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: ದೇವರಾಣೆ ಗೆಲ್ತೀನಿ ಅಂತ ಬಂದಿರಲಿಲ್ಲ, ಹೋಗಿ ಮಜಾ ಮಾಡಿ ಬರೋಣ ಅಂತ ಬಂದಿದ್ದೆ: ಹನುಮಂತ

    ಇನ್ನು ಮಾಜಿ ಪ್ರೇಯಸಿ ಜೊತೆ ಪೋಟೋ ವೈರಲ್ ಮಾಡಿ ಟ್ರೋಲ್ ಪೇಜ್‌ಗಳು ಬೆದರಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಹೊರಗಡೆ ಬಂದಿದ್ದೀನಲ್ಲ, ನೋಡಿಕೊಳ್ಳುತ್ತೇನೆ ಬಿಡಿ ಎಂದರು. ಇದನ್ನೂ ಓದಿ: BBK 11: ಬಿಗ್‌ ಬಾಸ್‌ ಟ್ರೋಫಿ ಗೆದ್ದು ಸುದೀಪ್‌ ಕಾಲಿಗೆ ಬಿದ್ದ ಹನುಮಂತ

    ಬಿಗ್ ಬಾಸ್ ಸೀಸನ್ 11ರಲ್ಲಿ ಹನುಮಂತ ವಿನ್ನರ್ ಆಗಿ ಹೊರಹೊಮ್ಮಿದ್ರೆ, ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾರೆ. ಇನ್ನು ಬಿಗ್ ಬಾಸ್ 11ರ ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದ ರಜತ್ ಅವರು ಮನೆಯಲ್ಲಿ ವೈಲ್ಡ್ ಆಗಿ ಆಟ ಆಡಿ ಸೆಕೆಂಡ್ ರನ್ನರ್ ಅಪ್ ಪಟ್ಟ ಸ್ವೀಕರಿಸಿದ್ದಾರೆ.‌ ಇದನ್ನೂ ಓದಿ: BBK 11: ಹನುಮಂತ ಟ್ರೋಫಿ ಗೆದ್ದಿರೋದು ಖುಷಿಯಿದೆ- ತ್ರಿವಿಕ್ರಮ್‌ ರಿಯಾಕ್ಷನ್‌