Tag: Rajat patidar

  • IPL 2024: ಹೆಚ್ಚುವರಿ 20 ರನ್‌ ಕೊಟ್ಟಿದ್ದೇ ಆರ್‌ಸಿಬಿಗೆ ಮುಳುವಾಯ್ತಾ? – ಗ್ರೀನ್‌ ಬಾಯ್ಸ್‌ ಎಡವಿದ್ದೆಲ್ಲಿ?

    IPL 2024: ಹೆಚ್ಚುವರಿ 20 ರನ್‌ ಕೊಟ್ಟಿದ್ದೇ ಆರ್‌ಸಿಬಿಗೆ ಮುಳುವಾಯ್ತಾ? – ಗ್ರೀನ್‌ ಬಾಯ್ಸ್‌ ಎಡವಿದ್ದೆಲ್ಲಿ?

    – ಸೋಲಿನ ಬಳಿಕ ನಾಯಕ ಫಾಫ್‌ ಡು ಪ್ಲೆಸಿಸ್‌ ಹೇಳಿದ್ದೇನು?

    ಕೋಲ್ಕತ್ತಾ: ಇಲ್ಲಿನ ಈಡನ್‌ ಗಾರ್ಡನ್‌ನಲ್ಲಿ ಕೆಕೆಆರ್‌ ವಿರುದ್ಧ ನಡೆದ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ 1 ರನ್‌ ವಿರೋಚಿತ ಸೋಲಿಗೆ ತುತ್ತಾಯಿತು. ಆದ್ರೆ ಈ ಪಂದ್ಯದಲ್ಲಿ ಆರ್‌ಸಿಬಿ ತಂಡ 20 ರನ್‌ ಹೆಚ್ಚುವರಿಯಾಗಿ ಬಿಟ್ಟುಕೊಟ್ಟಿದ್ದೇ ಸೋಲಿಗೆ ಕಾರಣವಾಯ್ತಾ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ. ಅಲ್ಲದೇ ಇಂದಿನ ಸೋಲಿಗೆ ಕಾರಣಗಳೇನು ಎಂಬುದನ್ನು ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

    ಕೆಕೆಆರ್‌ಗೆ 20 ರನ್‌ ಎಕ್ಸ್‌ಟ್ರಾ ಲಾಭವಾಯ್ತಾ?
    ಹೌದು. ಆರಂಭದಲ್ಲಿ ರನ್‌ ಚಚ್ಚಿಸಿಕೊಂಡರೂ ಬಳಿಕ ಬಿಗಿ ಹಿಡಿತ ಸಾಧಿಸಲು ಮುಂದಾಗಿದ್ದ ಆರ್‌ಸಿಬಿ ಬೌಲರ್‌ಗಳು ಬಳಿಕ ವೈಡ್‌, ನೋಬಾಲ್‌, ಲೆಗ್‌ ಬೈಸ್‌ಗಳ ಮೂಲಕ ರನ್‌ ಬಿಟ್ಟುಕೊಟ್ಟರು. ಬೈಸ್‌, ಲೆಗ್‌ಬೈಸ್‌, ನೋಬಾಲ್‌ ಹಾಗೂ ವೈಡ್‌ ಮೂಲಕ ಕ್ರಮವಾಗಿ 4,7,2,7 ರನ್‌ಗಳನ್ನು ಬಿಟ್ಟುಕೊಟ್ಟರು. ಪರಿಣಾಮ ಕೆಕೆಆರ್‌ 220 ರನ್‌ಗಳ ಗಡಿ ದಾಟಲು ಸಾಧ್ಯವಾಯಿತು. ಇದನ್ನೂ ಓದಿ: ಇಂಪ್ಯಾಕ್ಟ್‌ ಪ್ಲೇಯರ್‌ ನಿಯಮಕ್ಕೆ ರೋಹಿತ್‌ ವಿರೋಧ; ಬಿಸಿಸಿಐ ಹೇಳಿದ್ದೇನು? – ಏನಿದು ಇಂಪ್ಯಾಕ್ಟ್‌ ಪ್ಲೇಯರ್‌ ರೂಲ್ಸ್‌?

    2 ಓವರ್‌ನಲ್ಲಿ 38 ರನ್‌ ಕೊಟ್ಟ ಯಶ್‌ ದಯಾಳ್‌:
    200 ರನ್‌ಗಳ ಒಳಗೆ ಕೆಕೆಆರ್‌ ತಂಡವನ್ನು ಕಟ್ಟಿಹಾಕುವ ಪ್ರಯತ್ನದಲ್ಲಿದ್ದ ಆರ್‌ಸಿಬಿಗೆ ಯಶ್‌ ದಯಾಳ್‌ ದುಬಾರಿಯಾದರು. 16 ಓವರ್‌ ಮುಕ್ತಾಯಕ್ಕೆ ಕೆಕೆಆರ್‌‌ 5 ವಿಕೆಟ್‌ಗೆ 155 ರನ್‌ ಗಳಿಸಿತ್ತು. ಆದ್ರೆ 17ನೇ ಓವರ್‌ನಲ್ಲೇ ಯಶ್‌ ದಯಾಳ್‌, 2 ವೈಡ್‌, ನೋಬಾಲ್‌, ಬೈಸ್‌ ಮಾತ್ರವಲ್ಲದೇ ಸಿಕ್ಸರ್-ಬೌಂಡರಿ ಚಚ್ಚಿಸಿಕೊಂಡು 22 ರನ್‌ ಬಿಟ್ಟುಕೊಟ್ಟರು. ಅಲ್ಲದೇ 19ನೇ ಓವರ್‌ನಲ್ಲಿ ಮೊಹಮ್ಮದ್‌ ಸಿರಾಜ್‌ ಸಿಕ್ಸರ್‌-ಬೌಂಡರಿ, ವೈಡ್‌ ಮೂಲಕ 20 ರನ್‌ ಬಿಟ್ಟುಕೊಟ್ಟರು. ಬಳಿಕ ಕೊನೇ ಓವರ್‌ನಲ್ಲೇ ಯಶ್‌ ದಯಾಳ್‌ ಮತ್ತೆ 16 ರನ್‌ ಚಚ್ಚಿಸಿಕೊಂಡರು. ಇದು ಆರ್‌ಸಿಬಿ ತಂಡಕ್ಕೆ ದುಬಾರಿಯಾಯಿತು. ಇದನ್ನೂ ಓದಿ: ಟಿ20 ವಿಶ್ವಕಪ್‌: ಐರ್ಲೆಂಡ್‌, ಸ್ಕಾಟ್ಲೆಂಡ್‌ ತಂಡಗಳಿಗೆ ಕರ್ನಾಟಕದ ‘ನಂದಿನಿ’ ಪ್ರಯೋಜಕತ್ವ

    2023ರ ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದಲ್ಲಿದ್ದ ಯಶ್‌ ದಯಾಳ್‌ ಇದೇ ರೀತಿ ತಂಡದ ಸೋಲಿಗೆ ಕಾರಣವಾಗಿದ್ದರು. ಕೊನೇ ಓವರ್‌ನಲ್ಲಿ 29 ರನ್‌ ಬೇಕಿದ್ದಾಗ ರಿಂಕು ಸಿಂಗ್‌ ಅವರಿಂದ ಸತತ 5 ಸಿಕ್ಸರ್‌ ಚಚ್ಚಿಸಿಕೊಂಡಿದ್ದರು. ಇದನ್ನೂ ಓದಿ: ಕೊನೇ ಓವರ್‌ನಲ್ಲಿ 6,6,6; ಹೋರಾಡಿ ಸೋತ ಆರ್‌ಸಿಬಿ – ಕೆಕೆಆರ್‌ಗೆ 1 ರನ್‌ ರೋಚಕ ಜಯ

    ಅಬ್ಬರಿಸದ ಡಿಕೆ, ಕೈಕೊಟ್ಟ ಗ್ರೀನ್:‌
    ಹಿಂದಿನ ಪಂದ್ಯದಲ್ಲಿ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ 35 ಎಸೆತಗಳಲ್ಲಿ ಸ್ಫೋಟಕ 85 ರನ್‌ ಚಚ್ಚಿದ್ದ ದಿನೇಶ್‌ ಕಾರ್ತಿಕ್‌ ಕೆಕೆಆರ್‌ ಪರ ಅಬ್ಬರಿಸುವಲ್ಲಿ ವಿಫಲರಾದರು. 18 ಎಸೆತಗಳಲ್ಲಿ 25 ರನ್‌ ಗಳಿಸಿ ಔಟಾದರು. ಅಲ್ಲದೇ ದುಬಾರಿ ಬೆಲೆಗೆ ಆರ್‌ಸಿಬಿ ತಂಡಕ್ಕೆ ಬಿಕರಿಯಾದ ಕ್ಯಾಮರೂನ್‌ ಗ್ರೀನ್‌ ಕೇವಲ 6 ರನ್‌ ಗಳಿಸಿ ಪೆವಿಲಿಯನ್‌ಗೆ ಮರಳಿದರು. ಇದು ತಂಡದ ಸೋಲಿಗೆ ಕಾರಣವಾಯಿತು.

    ಪಂದ್ಯದ ಸೋಲಿನ ಬಳಿಕ ಪೋಸ್ಟ್‌ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ನಾಯಕ ಫಾಫ್ ಡು ಪ್ಲೆಸಿಸ್, ನಾವು ಗೆಲುವಿನ ಹಾದಿಗೆ ಮರಳಲು ಹತಾಶರಾಗಿದ್ದೇವೆ. ನಮಗೆ ನಂಬಲಸಾಧ್ಯವಾದ ಅಭಿಮಾನಿ ಬಳಗವಿದೆ. ಪ್ರತಿ ಪಂದ್ಯದಲ್ಲೂ ಗೆದ್ದರೂ ಸೋತರೂ ‌ʻಆರ್‌ಸಿಬಿ, ಆರ್‌ಸಿಬಿ ಘೋಷಣೆ ಮೊಳಗುತ್ತಲೇ ಇರುತ್ತದೆ. ಆದರೀಗ ನಮ್ಮ ಅಭಿಮಾನಿಗಳು ಹೆಮ್ಮೆಪಡುವಂತೆ ಮಾಡುದರಲ್ಲೂ ನಾವು ವಿಫಲರಾಗಿದ್ದೇವೆ ಎಂದು ಬೇಸರ ಹೊರಹಾಕಿದ್ದಾರೆ.

    ಟಾಸ್ ಸೋತು ಮೊದಲು ಫೀಲ್ಡಿಂಗ್‌ಗೆ ಇಳಿದ ಆರ್‌ಸಿಬಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಕೋಲ್ಕತ್ತಾ ನೈಟ್‌ರೈಡರ್ಸ್‌ಗೆ ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 222 ರನ್ ಬಾರಿಸಿತ್ತು. 223 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 221 ರನ್‌ ಗಳಿಸಿ ವಿರೋಚಿತ ಸೋಲನುಭವಿಸಿತು.

    ಕೊನೇ ಓವರ್‌ ಥ್ರಿಲ್ಲರ್‌:
    223 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ ಗೆಲುವಿಗೆ ಕೊನೇ ಓವರ್‌ನಲ್ಲಿ 21 ರನ್‌ ಅಗತ್ಯವಿತ್ತು. ಮಿಚೆಲ್‌ ಸ್ಟಾರ್ಕ್‌ ಬೌಲಿಂಗ್‌ನಲ್ಲಿದ್ದರು. ಈ ವೇಳೆ ಕ್ರೀಸ್‌ನಲ್ಲಿದ್ದ ಕರ್ಣ್‌ ಶರ್ಮಾ (Karn Sharma) ಮೊದಲ ಎಸೆತದಲ್ಲೇ ಸಿಕ್ಸರ್‌ ಬಾರಿಸಿದ್ರು. 2ನೇ ಎಸೆತದಲ್ಲಿ ರನ್‌ ಗಳಿಸುವಲ್ಲಿ ವಿಫಲರಾದರೂ 3-4ನೇ ಎಸೆತಗಳನ್ನು ಸತತವಾಗಿ ಸಿಕ್ಸರ್‌ಗೆ ಅಟ್ಟಿದರು. ಈ ವೇಳೆ ಪಂದ್ಯ ರೋಚಕ ಹಂತಕ್ಕೆ ತಿರುಗಿತ್ತು. ಡಗೌಟ್‌ನಲ್ಲಿದ್ದ ಆಟಗಾರರು ಮಾತ್ರವಲ್ಲದೇ ಅಭಿಮಾನಿಗಳಲ್ಲೂ ಹೃದಯ ಬಡಿತ ಹೆಚ್ಚಾಗಿತ್ತು. ಮೈ ರೋಮಾಂಚನಗೊಳಿಸುವಂತಿತ್ತು. ಆದ್ರೆ ಕೊನೇ 2 ಎಸೆತಗಳಲ್ಲಿ ಮೂರು ರನ್‌ಗಳ ಬೇಕಿದ್ದಾಗಲೇ ಕರ್ಣ್‌ ಶರ್ಮಾ 1 ರನ್‌ ಕದಿಯಲು ಯತ್ನಿಸಿ ಸ್ಟಾರ್ಕ್‌ಗೆ (Mitchell Starc) ಕ್ಯಾಚ್‌ ನೀಡಿ ಔಟಾದರು. ಕೊನೇ ಎಸೆತದಲ್ಲಿ ಸ್ಟ್ರೈಕ್‌ ಮಾಡಿದ ಲಾಕಿ ಫರ್ಗೂಸನ್‌ 2 ರನ್‌ ಕದಿಯಲು ಯತ್ನಿಸಿ ರನೌಟ್‌ಗೆ ತುತ್ತಾದರು. ಇದರಿಂದ ಆರ್‌ಸಿಬಿ 1 ರನ್‌ನಿಂದ ವಿರೋಚಿತ ಸೋಲಿಗೆ ತುತ್ತಾಯಿತು.

  • ಕೊನೇ ಓವರ್‌ನಲ್ಲಿ 6,6,6; ಹೋರಾಡಿ ಸೋತ ಆರ್‌ಸಿಬಿ – ಕೆಕೆಆರ್‌ಗೆ 1 ರನ್‌ ರೋಚಕ ಜಯ

    ಕೊನೇ ಓವರ್‌ನಲ್ಲಿ 6,6,6; ಹೋರಾಡಿ ಸೋತ ಆರ್‌ಸಿಬಿ – ಕೆಕೆಆರ್‌ಗೆ 1 ರನ್‌ ರೋಚಕ ಜಯ

    – ಬೆಂಗಳೂರಿಗೆ ಸತತ 6ನೇ ಸೋಲು

    ಕೋಲ್ಕತ್ತಾ: ಕೊನೇ ಓವರ್‌ನಲ್ಲಿ ಮೂರು ಸಿಕ್ಸರ್‌ ಸಿಡಿಸಿದ ಹೊರತಾಗಿಯೂ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡ ಕೆಕೆಆರ್‌ (KKR) ವಿರುದ್ಧ 1 ರನ್‌ಗಳ ವಿರೋಚಿತ ಸೋಲಿಗೆ ತುತ್ತಾಯಿತು.

    ಕೊನೇ ಓವರ್‌ ಥ್ರಿಲ್ಲರ್‌:
    223 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ ಗೆಲುವಿಗೆ ಕೊನೇ ಓವರ್‌ನಲ್ಲಿ 21 ರನ್‌ ಅಗತ್ಯವಿತ್ತು. ಮಿಚೆಲ್‌ ಸ್ಟಾರ್ಕ್‌ ಬೌಲಿಂಗ್‌ನಲ್ಲಿದ್ದರು. ಈ ವೇಳೆ ಕ್ರೀಸ್‌ನಲ್ಲಿದ್ದ ಕರ್ಣ್‌ ಶರ್ಮಾ (Karn Sharma) ಮೊದಲ ಎಸೆತದಲ್ಲೇ ಸಿಕ್ಸರ್‌ ಬಾರಿಸಿದ್ರು. 2ನೇ ಎಸೆತದಲ್ಲಿ ರನ್‌ ಗಳಿಸುವಲ್ಲಿ ವಿಫಲರಾದರೂ 3-4ನೇ ಎಸೆತಗಳನ್ನು ಸತತವಾಗಿ ಸಿಕ್ಸರ್‌ಗೆ ಅಟ್ಟಿದರು. ಈ ವೇಳೆ ಪಂದ್ಯ ರೋಚಕ ಹಂತಕ್ಕೆ ತಿರುಗಿತ್ತು. ಡಗೌಟ್‌ನಲ್ಲಿದ್ದ ಆಟಗಾರರು ಮಾತ್ರವಲ್ಲದೇ ಅಭಿಮಾನಿಗಳಲ್ಲೂ ಹೃದಯ ಬಡಿತ ಹೆಚ್ಚಾಗಿತ್ತು. ಮೈ ರೋಮಾಂಚನಗೊಳಿಸುವಂತಿತ್ತು. ಆದ್ರೆ ಕೊನೇ 2 ಎಸೆತಗಳಲ್ಲಿ ಮೂರು ರನ್‌ಗಳ ಬೇಕಿದ್ದಾಗಲೇ ಕರ್ಣ್‌ ಶರ್ಮಾ 1 ರನ್‌ ಕದಿಯಲು ಯತ್ನಿಸಿ ಸ್ಟಾರ್ಕ್‌ಗೆ  (Mitchell Starc) ಕ್ಯಾಚ್‌ ನೀಡಿ ಔಟಾದರು. ಕೊನೇ ಎಸೆತದಲ್ಲಿ ಸ್ಟ್ರೈಕ್‌ ಮಾಡಿದ ಲಾಕಿ ಫರ್ಗೂಸನ್‌ 2 ರನ್‌ ಕದಿಯಲು ಯತ್ನಿಸಿ ರನೌಟ್‌ಗೆ ತುತ್ತಾದರು. ಇದರಿಂದ ಆರ್‌ಸಿಬಿ 1 ರನ್‌ನಿಂದ ವಿರೋಚಿತ ಸೋಲಿಗೆ ತುತ್ತಾಯಿತು.

    ಟಾಸ್ ಸೋತು ಮೊದಲು ಫೀಲ್ಡಿಂಗ್‌ಗೆ ಇಳಿದ ಆರ್‌ಸಿಬಿ ಬ್ಯಾಟಿಂಗ್ ಮಾಡುವ ಅವಕಾಶವನ್ನು ಕೋಲ್ಕತ್ತಾ ನೈಟ್‌ರೈಡರ್ಸ್‌ಗೆ ಬಿಟ್ಟುಕೊಟ್ಟಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಬರೋಬ್ಬರಿ 222 ರನ್ ಬಾರಿಸಿತ್ತು. 223 ರನ್‌ಗಳ ಬೃಹತ್ ಮೊತ್ತದ ಗುರಿ ಬೆನ್ನತ್ತಿದ ಆರ್‌ಸಿಬಿ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 221 ರನ್‌ ಗಳಿಸಿ ವಿರೋಚಿತ ಸೋಲನುಭವಿಸಿತು.

    ಚೇಸಿಂಗ್ ವೇಳೆ ಸ್ಫೋಟಕ ಆರಂಭ ಪಡೆಯಲು ಮುಂದಾಗಿದ್ದ ಆರ್‌ಸಿಬಿ 2.1 ಓವರ್‌ಗಳಿದ್ದಾಗ 27 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿತು. 7 ಎಸೆತಗಳಲ್ಲಿ 18 ರನ್ ಗಳಿಸಿದ್ದ ವಿರಾಟ್ ಕೊಹ್ಲಿ ಔಟಾಗುತ್ತಿದ್ದಂತೆ, ನಾಯಕ ಫಾಫ್ ಡು ಪ್ಲೆಸಿಸ್ (Faf du Plessis) ಸಹ ಸುಲಭ ಕ್ಯಾಚ್‌ಗೆ ತುತ್ತಾದರು. ಇದು ಆರ್‌ಸಿಬಿಗೆ ಭಾರೀ ಆಘಾತವುಂಟುಮಾಡಿತ್ತು.

    ವಿಲ್-ಪಾಟಿದಾರ್ ಶತಕದ ಜೊತೆಯಾಟ:
    3.1 ಓವರ್‌ಗಳಲ್ಲಿ 35 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿದ್ದ ಆರ್‌ಸಿಬಿಗೆ ವಿಲ್ ಜಾಕ್ಸ್ (Will Jacks) ಹಾಗೂ ರಜತ್‌ ಪಾಟೀದಾರ್ (Rajat Patidar) ಬಲ ತುಂಬಿದರು. 3ನೇ ವಿಕೆಟ್‌ಗೆ ಈ ಜೋಡಿ 48 ಎಸೆತಗಳಲ್ಲಿ ಭರ್ಜರಿ 102 ರನ್‌ಗಳ ಜೊತೆಯಾಟ ನೀಡಿತ್ತು. ಇದರಿಂದ ತಂಡದಲ್ಲಿ ಗೆಲುವಿನ ಆಸೆ ಚಿಗುರಿತ್ತು. ಆದ್ರೆ ಮಧ್ಯಮ ಕ್ರಮಾಂಕದ ಬ್ಯಾಟರ್ಸ್‌ಗಳು ಕೈಕೊಟ್ಟ ಪರಿಣಾಮ ಆರ್‌ಸಿಬಿ ಸೋಲಿಗೆ ತುತ್ತಾಯಿತು.

    ಆರ್‌ಸಿಬಿ ಪರ ವಿಲ್ ಜಾಕ್ಸ್ 55 ರನ್ (32 ರನ್, 5 ಸಿಕ್ಸರ್, 4 ಬೌಂಡರಿ), ರಜತ್ ಪಾಟೀದಾರ್ 52 ರನ್ (23 ಎಸೆತ, 5 ಸಿಕ್ಸರ್, 3 ಬೌಂಡರಿ), ವಿರಾಟ್ ಕೊಹ್ಲಿ 18 ರನ್, ಫಾಫ್ ಡು ಪ್ಲೆಸಿಸ್ 7 ರನ್, ಕ್ಯಾಮರೂನ್ ಗ್ರೀನ್ 6 ರನ್, ಮಹಿಪಾಲ್ ಲೋಮ್ರೋರ್ 4 ರನ್, ಸುಯೇಶ್‌ ಪ್ರಭುದೇಸಾಯಿ 24 ರನ್‌, ದಿನೇಶ್‌ ಕಾರ್ತಿಕ್‌ 25 ರನ್‌, ಕರ್ಣ್‌ ಶರ್ಮಾ ಸ್ಫೋಟಕ 20 ರನ್‌ (7 ಎಸೆ, 3 ಸಿಕ್ಸರ್‌), ಲಾಕಿ ಫರ್ಗೂಸನ್‌ 1 ರನ್‌ ಗಳಿಸಿದರು.

    ಕೆಕೆಆರ್‌ ಪರ ಆಲ್‌ರೌಂಡರ್‌ ಪ್ರದರ್ಶನ ನೀಡಿದ ಆಂಡ್ರೆ ರಸೆಲ್‌ 3 ಓವರ್‌ಗಳಲ್ಲಿ 3 ವಿಕೆಟ್‌ ಕಿತ್ತರೆ, ಹರ್ಷಿತ್‌ ರಾಣಾ ಮತ್ತು ಸುನೀಲ್‌ ನರೇನ್‌ ತಲಾ 2 ವಿಕೆಟ್‌ ಹಾಗೂ ಮಿಚೆಲ್‌ ಸ್ಟಾರ್ಕ್‌ ಮತ್ತು ವರುಣ್‌ ಚಕ್ರವರ್ತಿ ತಲಾ ಒಂದೊಂದು ವಿಕೆಟ್‌ ಕಿತ್ತರು.

    ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡ ಆರಂಭದಿಂದ ಅಬ್ಬರಿಸಲು ಶುರು ಮಾಡಿತು. ಆರಂಭಿಕರಾದ ಸುನೀಲ್ ನರೇನ್ ಮತ್ತು ಪಿಲ್ ಸಾಲ್ಟ್ ಜೋಡಿ ಮೊದಲ ವಿಕೆಟ್‌ಗೆ 26 ಎಸೆತಗಳಲ್ಲಿ ಸ್ಫೋಟೊ 56 ರನ್‌ಗಳ ಜೊತೆಯಾಟ ನೀಡಿತ್ತು. ಬಳಿಕ ಪ್ರಮುಖ ವಿಕೆಟ್‌ಗಳನ್ನು ಕಳೆದುಕೊಂಡ ಕೆಕೆಆರ್ ತಂಡ ಮತ್ತೊಂದೆಡೆ ರನ್ ಕಲೆಹಾಕುತ್ತಾ ಸಾಗಿತು.

    ಈ ವೇಳೆ ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ (Shreyas Iyer) ಮತ್ತು ರಿಂಕು ಸಿಂಗ್ ಜೋಡಿ 40 ರನ್, ರಸ್ಸೆಲ್ ಮತ್ತು ಅಯ್ಯರ್ 42 ರನ್ ಹಾಗೂ ರಸ್ಸೆಲ್ ಮತ್ತು ರಮಣದೀಪ್ ಸಿಂಗ್ ಜೋಡಿ ನೀಡಿದ 43 ರನ್‌ಗಳ ಜೊತೆಯಾಟದಿಂದ ಕೆಕೆಆರ್ ತಂಡ 222 ರನ್‌ಗಳ ಬೃಹತ್ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು.

    ಶ್ರೇಯಸ್ ಅಯ್ಯರ್ 50 ರನ್ (36 ಎಸೆತ, 1 ಸಿಕ್ಸರ್, 7 ಬೌಂಡರಿ), ಪಿಲ್ ಸಾಲ್ಟ್ (Phil Salt) ಸ್ಫೋಟಕ 48 ರನ್ (14 ಎಸೆತ, 3 ಸಿಕ್ಸರ್, 7 ಬೌಂಡರಿ), ಸುನೀಲ್ ನರೇನ್ 10 ರನ್, ರಘುವಂಶಿ 3 ರನ್, ವೆಂಕಟೇಶ್ ಅಯ್ಯರ್ 16 ರನ್, ರಿಂಕು ಸಿಂಗ್ 24 ರನ್, ಆಂಡ್ರೆ ರಸ್ಸೆಲ್ 27 ರನ್, ರಮಣದೀಪ್ ಸಿಂಗ್ 24 ರನ್ ಬಾರಿಸಿದ್ರೆ ವೈಡ್, ನೋಬಾಲ್ ಬೈಸ್‌ನಿಂದಲೇ ಹೆಚ್ಚುವರಿ 20 ರನ್ ತಂಡಕ್ಕೆ ಸೇರ್ಪಡೆಯಾಯಿತು.

    ಆರ್‌ಸಿಬಿ ಪರ ಯಶ್ ದಯಾಳ್ 4 ಓವರ್‌ಗಳಲ್ಲಿ 56 ರನ್ ಬಿಟ್ಟುಕೊಟ್ಟು ಮತ್ತು ಕ್ಯಾಮರೂನ್ ಗ್ರೀನ್ 4 ಓವರ್‌ಗಳಲ್ಲಿ 35 ರನ್ ಬಿಟ್ಟುಕೊಟ್ಟು ತಲಾ 2 ವಿಕೆಟ್ ಕಿತ್ತರೆ, ಮೊಹಮ್ಮದ್ ಸಿರಾಜ್ ಹಾಗೂ ಕರ್ಣ್ ಶರ್ಮಾ ತಲಾ ಒಂದೊಂದು ವಿಕೆಟ್ ಪಡೆದರು.

  • IPL 2023: ಆರ್‌ಸಿಬಿ ಗಾಯಾಳುಗಳ ಬದಲಿಗೆ ಕಣಕ್ಕಿಳಿಯಲಿದ್ದಾರೆ ಪಾರ್ನೆಲ್, ವೈಶಾಕ್ ವಿಜಯ್

    IPL 2023: ಆರ್‌ಸಿಬಿ ಗಾಯಾಳುಗಳ ಬದಲಿಗೆ ಕಣಕ್ಕಿಳಿಯಲಿದ್ದಾರೆ ಪಾರ್ನೆಲ್, ವೈಶಾಕ್ ವಿಜಯ್

    ನವದೆಹಲಿ: ಆರ್‌ಸಿಬಿ ತಂಡದ ರೀಸ್ ಟೋಪ್ಲಿ ಹಾಗೂ ರಜತ್ ಪಾಟಿದಾರ್ (Rajat Patidar) ಬದಲಿಗೆ ವೇಯ್ನ್ ಪಾರ್ನೆಲ್ (Wayne Parnell) ಮತ್ತು ವೈಶಾಕ್ ವಿಜಯ್ ಕುಮಾರ್ (Vyshak Vijay Kumar) ಆಡಲಿದ್ದಾರೆ.

    ಪಾರ್ನೆಲ್ ಇದುವರೆಗೆ 56 ಟಿ20 ಗಳಲ್ಲಿ ದಕ್ಷಿಣ ಆಫ್ರಿಕಾವನ್ನು (South Africa) ಪ್ರತಿನಿಧಿಸಿದ್ದರು. 6 ಟೆಸ್ಟ್‌ಗಳು 73 ಏಕದಿನ (ODI) ಪಂದ್ಯವಾಡಿರುವ ಪಾರ್ನೆಲ್ ಟಿ20ಯಲ್ಲಿ 59 ವಿಕೆಟ್ ಪಡೆದಿದ್ದಾರೆ. ಇದನ್ನೂ ಓದಿ: ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸೋದೇಕೆ ಗೊತ್ತಾ – ಚಿಯರ್‌ ಗರ್ಲ್ಸ್‌ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ

    ಟೋಪ್ಲಿ ಏ.2ರಂದು ನಡೆದ ಆರಂಭಿಕ ಐಪಿಎಲ್‌ (IPL) ಪಂದ್ಯದ ಫಿಲ್ಡಿಂಗ್ ವೇಳೆ ಭುಜ (Shoulder) ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ವೈಶಾಕ್ ವಿಜಯ್‍ಕುಮಾರ್ ಹಿಮ್ಮಡಿ ಗಾಯಕ್ಕೊಳಗಾಗಿ ಆರಂಭಿಕ ಪಂದ್ಯದಿಂದಲೂ ಹೊರಗುಳಿದಿದ್ದರು.

    ಭುಜದ ಗಾಯದ ನಡುವೆಯೂ ಟೋಪ್ಲಿ ಕೆಕೆಆರ್ ವಿರುದ್ಧ ಆಡಲು ಕೋಲ್ಕತ್ತಾ (Kolkata) ಪ್ರಯಾಣಿಸಿದ್ದರು. ಆಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಆಲ್‍ರೌಂಡರ್ ಡೇವಿಡ್ ವಿಲ್ಲಿಯವರನ್ನು ಕಣಕ್ಕಿಳಿಸಿ ಯುಕೆಗೆ ಮರಳಿದ್ದಾರೆ.

    ಪಾಟಿದಾರ್ 2021-22ರ ಸಾಲಿನ ರಣಜಿ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು. ಆರು ಪಂದ್ಯಗಳಲ್ಲಿ ಎರಡು ಶತಕಗಳು ಮತ್ತು ಐದು ಅರ್ಧ ಶತಕಗಳಿಸಿದ್ದರು. ಕಳೆದ ಬೇಸಿಗೆಯಲ್ಲಿ ಟೀಂ ಇಂಡಿಯಾದ ಏಕದಿನ ತಂಡದಲ್ಲಿ ಸ್ಥಾನ ಗಳಿಸಿದ್ದರು.

    ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ಆರ್‌ಸಿಬಿ ಎರಡನೇ ಮ್ಯಾಚ್‍ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 81 ರನ್‍ಗಳ ಸೋಲು ಕಂಡಿತ್ತು. ಇದನ್ನೂ ಓದಿ: IPL 2023: ಶಾರ್ದೂಲ್‌ ಬೆಂಕಿ ಬ್ಯಾಟಿಂಗ್‌, ವರುಣ್ ಮಿಂಚಿನ ಬೌಲಿಂಗ್‌ – RCBಗೆ ಹೀನಾಯ ಸೋಲು

  • ಆರ್‌ಸಿಬಿಗಾಗಿ ಮದುವೆಯನ್ನೇ ಮುಂದೂಡಿದ್ದ ರಜತ್ ಪಾಟಿದಾರ್

    ಆರ್‌ಸಿಬಿಗಾಗಿ ಮದುವೆಯನ್ನೇ ಮುಂದೂಡಿದ್ದ ರಜತ್ ಪಾಟಿದಾರ್

    ಮುಂಬೈ: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿದ ಆರ್‌ಸಿಬಿ ತಂಡದ ರಜತ್ ಪಾಟಿದಾರ್ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

    IPL 2022 RCB (3)

    ಹೌದು ಆರ್‌ಸಿಬಿ ತಂಡದಲ್ಲಿ ಪಾಟಿದಾರ್ ಎಂಬ ಆಟಗಾರ ಇದ್ದಾರೆ ಎಂಬುದೇ ಗೊತ್ತಿರಲಿಲ್ಲ. ಆದರೆ, ಲಕ್ನೋ ವಿರುದ್ಧದ ಪಂದ್ಯದಲ್ಲಿ ಅವರ ಸ್ಫೋಟಕ ಬ್ಯಾಟಿಂಗ್ ಲಕ್ಷಾಂತರ ಕ್ರೀಡಾಭಿಮಾನಿಗಳ ಮನದಲ್ಲಿ ಉಳಿಯುವಂತೆ ಮಾಡಿದೆ. ಇದನ್ನೂ ಓದಿ: ಸೋಲಿನ ಬಳಿಕ ನಾಯಕ ರಾಹುಲ್‌ನನ್ನು ದಿಟ್ಟಿಸಿದ ಗಂಭೀರ್ – ನೆಟ್ಟಿಗರಿಂದ ಟ್ರೋಲ್

    ಪಾಟಿದಾರ್ ಅವರ ಅದ್ಭುತ ಬ್ಯಾಟಿಂಗ್‌ನಿಂದ ಆರ್‌ಸಿಬಿ ರಾಜಾಸ್ಥಾನ್ ರಾಯಲ್ಸ್ ವಿರುದ್ಧ 2ನೇ ಕ್ವಾಲಿಫೈಯರ್‌ಗೆ ಲಗ್ಗೆಯಿಟ್ಟಿದೆ. ಲುವ್ನಿತ್ ಸಿಸೋಡಿಯಾ ಅವರು ಗಾಯಗೊಂಡಿದ್ದರಿಂದಾಗಿ ಅವರ ಬದಲಾಗಿ ಆರ್‌ಸಿಬಿ ತಂಡಕ್ಕೆ ಸೇರ್ಪಡೆಯಾದ ರಜತ್ ಆರ್‌ಸಿಬಿಗಾಗಿ ಆಡಲು ತನ್ನ ಮದುವೆಯನ್ನೇ ಮುಂದೂಡಿದ್ದಾರೆ ಎಂಬುದು ತಿಳಿದುಬಂದಿದೆ. ಇದನ್ನೂ ಓದಿ: ನಾವು ಸೋಲಲು ಇದೇ ಕಾರಣ – ಬೇಸರ ವ್ಯಕ್ತಪಡಿಸಿದ ಕೆ.ಎಲ್ ರಾಹುಲ್

    IPL 2022 RCB (3)

    ಇದೇ ತಿಂಗಳ ಮೇ 9ರಂದು ಪಾಟಿದಾರ್ ಮದುವೆ ನಿಗದಿಯಾಗಿತ್ತು. ಸಣ್ಣ ಸಮಾರಂಭದಲ್ಲಿ ಮದುವೆ ಮಾಡಿಕೊಳ್ಳುವುದಕ್ಕಾಗಿ ಇಂಧೋರ್‌ನಲ್ಲಿ ಹೋಟೆಲ್ ಸಹ ಕಾಯ್ದಿರಿಸಲಾಗಿತ್ತು. ಈಗ ಆರ್‌ಸಿಬಿಗಾಗಿ ಆಡಲು ಮುಂದಾಗಿರುವ ರಜತ್ ಮುಂದಿನ ಜೂನ್ ತಿಂಗಳಲ್ಲಿ ರಜತ್ ಮದುವೆಯಾಗಲಿದ್ದಾರೆ ಎಂದು ರಜತ್ ತಂದೆ ಮನೋಹತ್ ಪಾಟಿದಾರ್ ಹೇಳಿದ್ದಾರೆ.

  • ಆರ್‌ಸಿಬಿ ತಂಡದಿಂದ ಹೊರ ನಡೆದ ಕನ್ನಡಿಗ ಲುವ್ನಿತ್ ಸಿಸೋಡಿಯಾ

    ಆರ್‌ಸಿಬಿ ತಂಡದಿಂದ ಹೊರ ನಡೆದ ಕನ್ನಡಿಗ ಲುವ್ನಿತ್ ಸಿಸೋಡಿಯಾ

    ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಆಟಗಾರ ಕನ್ನಡಿಗ ಲುವ್ನಿತ್ ಸಿಸೋಡಿಯಾ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಬಂದಿದ್ದಾರೆ.

    ಲುವ್ನಿತ್ ಸಿಸೋಡಿಯಾ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದರು. ಈ ಹಿನ್ನೆಲೆಯಲ್ಲಿ ತಂಡದಿಂದ ಹೊರನಡೆದಿದ್ದಾರೆ. ಅವರ ಬದಲಿಗೆ ರಜತ್ ಪಟಿದಾರ್ ತಂಡಕ್ಕೆ ಮರಳಿದ್ದಾರೆ. ಪಟಿದಾರ್ ದೇಶೀಯ ಕ್ರಿಕೆಟ್‍ನಲ್ಲಿ ಮಧ್ಯಪ್ರದೇಶವನ್ನು ಪ್ರತಿನಿಧಿಸುತ್ತಿದ್ದರು.

    ಇದುವರೆಗೆ 31 ಟಿ20 ಪಂದ್ಯಗಳನ್ನು ಆಡಿರುವ ಪಟಿದಾರ್ 7 ಅರ್ಧಶತಕ ಗಳಿಸಿ ಒಟ್ಟು 861 ರನ್ ಗಳಿಸಿದ್ದಾರೆ. ಈ ಹಿಂದೆ ಆರ್‌ಸಿಬಿಯನ್ನು ಪ್ರತಿನಿಧಿಸಿದ್ದರು. ಕಳೆದ ವರ್ಷ ಆರ್‌ಸಿಬಿ ಪರ ರಜತ್ ಪಾಟಿದಾರ್ ಐಪಿಎಲ್‍ಗೆ ಪಾದಾರ್ಪಣೆ ಮಾಡಿದ್ದರು. ಆರ್‌ಸಿಬಿ ಪರ 4 ಇನ್ನಿಂಗ್ಸ್ ಆಡಿ 71ರನ್ ಗಳಿಸಿ ಭರವಸೆ ಮೂಡಿಸಿದ್ದರು. ಅವರ ಗರಿಷ್ಠ ಸ್ಕೋರ್ 31 ಆಗಿತ್ತು. ಇದನ್ನೂ ಓದಿ: ಪಂಜಾಬ್ ರಾಜರ ಮುಂದೆ ನಡೆಯಲಿಲ್ಲ ಸೂಪರ್ ಕಿಂಗ್ಸ್ ಆಟ – ಚೆನ್ನೈಗೆ ಹ್ಯಾಟ್ರಿಕ್‌ ಸೋಲು

    ಈ ಬಾರಿಯ ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಉತ್ತಮ ಪ್ರದರ್ಶನ ನೀಡಿದೆ. ಈವರೆಗೆ ಆರ್‌ಸಿಬಿ ಆಡಿದ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಗೆಲುವು ಕಂಡಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಅಮೊಘ ಬ್ಯಾಟಿಂಗ್ ಪ್ರದರ್ಶನ ತೋರಿ 210 ರನ್ ಕಲೆಹಾಕಿದರೂ ಬೌಲಿಂಗ್ ವೈಫಲ್ಯದಿಂದಾಗಿ ಗೆಲುವು ಸಾಧಿಸಲಿಲ್ಲ. ಎರಡನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ನೈಟ್ ರೈಡರ್ಸ್ ವಿರುದ್ಧದ ರೋಚಕ ಕದನದಲ್ಲಿ 3 ವಿಕೆಟ್ ಗಳಿಂದ ಗೆದ್ದುಬೀಗಿದೆ. ನಾಳೆ(ಏ.5)ರಂದು ಆರ್‌ಸಿಬಿ , ರಾಜಸ್ಥಾನ ರಾಯಲ್ಸ್ ತಂಡದ ಸವಾಲು ಎದುರಿಸಲಿದೆ. ಇದನ್ನೂ ಓದಿ: ಡೆಲ್ಲಿಗೆ ಟಕ್ಕರ್ ನೀಡಿದ ಟೈಟಾನ್ಸ್ – ಗುಜರಾತ್‍ಗೆ ಭರ್ಜರಿ ಜಯ