Tag: Rajasthan. Police

  • ಉರ್ದು, ಪರ್ಷಿಯನ್‌ ಬದಲಿಗೆ ಹಿಂದಿಯಲ್ಲಿ ಮಾತನಾಡಿ: ಪೊಲೀಸರಿಗೆ ರಾಜಸ್ಥಾನ ಸಚಿವ ಸೂಚನೆ

    ಉರ್ದು, ಪರ್ಷಿಯನ್‌ ಬದಲಿಗೆ ಹಿಂದಿಯಲ್ಲಿ ಮಾತನಾಡಿ: ಪೊಲೀಸರಿಗೆ ರಾಜಸ್ಥಾನ ಸಚಿವ ಸೂಚನೆ

    ಜೈಪುರ: ಉರ್ದು, ಪರ್ಷಿಯನ್‌ ಭಾಷೆ (Urdu and Persian) ಮಾತನಾಡಬೇಡಿ. ಬದಲಿಗೆ ಹಿಂದಿ (Hindi), ಇಂಗ್ಲಿಷ್‌ನಲ್ಲಿ ಮಾತನಾಡಿ ಎಂದು ರಾಜಸ್ಥಾನ ಪೊಲೀಸರಿಗೆ ಸಚಿವ ಜವಾಹರ್‌ ಸಿಂಗ್‌ ಬೆಧಮ್‌ (Jawahar Singh Bedham) ನಿರ್ದೇಶನ ನೀಡಿದ್ದಾರೆ.

    ಅಧಿಕೃತ ಪೊಲೀಸ್ ದಾಖಲೆಗಳು, ವರದಿಗಳು, ಸೂಚನಾ ಫಲಕಗಳನ್ನು ಉರ್ದು ಮತ್ತು ಪರ್ಷಿಯನ್‌ ಬದಲಿಗೆ ಹಿಂದಿ ಭಾಷೆಯನ್ನು ಒಳಗೊಂಡಿರಬೇಕು ಎಂದು ಪೊಲೀಸ್ ಮಹಾನಿರ್ದೇಶಕರಿಗೆ ಬರೆದ ಪತ್ರದಲ್ಲಿ ಸಚಿವರು ಸೂಚಿಸಿದ್ದಾರೆ.

    ಮೊಘಲ್ ಯುಗದಿಂದಲೂ ಪೊಲೀಸ್ ವ್ಯವಸ್ಥೆಯಲ್ಲಿ ಉರ್ದು ಮತ್ತು ಪರ್ಷಿಯನ್ ಪದಗಳ ಬಳಕೆಯಾಗುತ್ತಿದೆ. ಪ್ರಸ್ತುತ ಪೀಳಿಗೆಯ ಪೊಲೀಸ್ ಸಿಬ್ಬಂದಿ ಮತ್ತು ಸಾರ್ವಜನಿಕರಿಗೆ ಈ ಭಾಷೆಗಳ ಪರಿಚಯವಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ಈ ಭಾಷಾ ಅಂತರವು ಹೆಚ್ಚಾಗಿ ತಪ್ಪು ವ್ಯಾಖ್ಯಾನಕ್ಕೆ ಕಾರಣವಾಗುತ್ತದೆ. ನ್ಯಾಯ ನೀಡುವಲ್ಲಿ ವಿಳಂಬವಾಗುತ್ತದೆ. ಪೊಲೀಸ್ ಸಿಬ್ಬಂದಿ, ದೂರುದಾರರು ಮತ್ತು ಸಾರ್ವಜನಿಕರಲ್ಲಿ ಉರ್ದು/ಪರ್ಷಿಯನ್ ಭಾಷೆಯ ಜ್ಞಾನದ ಕೊರತೆಯಿಂದಾಗಿ ಈ ಪದಗಳನ್ನು ಹೆಚ್ಚಾಗಿ ತಪ್ಪಾಗಿ ಅರ್ಥೈಸಿಕೊಳ್ಳಲಾಗುತ್ತದೆ. ಇದು ನ್ಯಾಯದಲ್ಲಿ ವಿಳಂಬಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

    ಭಾರತದಲ್ಲಿ ಎಲ್ಲಾ ಭಾಷೆಗಳನ್ನು ಗೌರವಿಸಲಾಗುತ್ತದೆ. ಆದರೆ, ರಾಜಸ್ಥಾನವು ಪ್ರಾಥಮಿಕವಾಗಿ ಹಿಂದಿ ಮಾತನಾಡುವ ರಾಜ್ಯವಾಗಿದೆ. ಆಡಳಿತ ಭಾಷೆಯಲ್ಲಿ ಹಿಂದಿಗೆ ಆದ್ಯತೆ ನೀಡುವುದರಿಂದ ಕಾನೂನು ದಾಖಲೆಗಳು, ಸರ್ಕಾರಿ ಆದೇಶಗಳು ಮತ್ತು ಪೊಲೀಸ್ ದಾಖಲೆಗಳು ಈ ಭಾಷೆಯಲ್ಲಿ ಇರಬೇಕು ಎಂದಿದ್ದಾರೆ.

  • 4 ವರ್ಷದ ಮಗುವಿನ ಮೇಲೆ ಸಬ್‌ ಇನ್ಸ್‌ಪೆಕ್ಟರ್‌ನಿಂದಲೇ ಅತ್ಯಾಚಾರ – ಗ್ರಾಮಸ್ಥರಿಂದ ಥಳಿತ, ಕಠಿಣ ಶಿಕ್ಷೆಗೆ ಆಗ್ರಹ

    4 ವರ್ಷದ ಮಗುವಿನ ಮೇಲೆ ಸಬ್‌ ಇನ್ಸ್‌ಪೆಕ್ಟರ್‌ನಿಂದಲೇ ಅತ್ಯಾಚಾರ – ಗ್ರಾಮಸ್ಥರಿಂದ ಥಳಿತ, ಕಠಿಣ ಶಿಕ್ಷೆಗೆ ಆಗ್ರಹ

    ಜೈಪುರ: 4 ವರ್ಷದ ಮಗುವಿನ ಮೇಲೆ ಸಬ್ ಇನ್ಸ್‌ಪೆಕ್ಟರ್‌ (Sub Inspector) ಒಬ್ಬ ಅತ್ಯಾಚಾರವೆಸಗಿದ ಘಟನೆ ರಾಜಸ್ಥಾನದ (Rajasthan) ದೌಸಾ ಜಿಲ್ಲೆಯಲ್ಲಿ ನಡೆದಿದೆ.

    ಘಟನೆ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು ಠಾಣೆಗೆ ನುಗ್ಗಿ ಪೊಲೀಸ್‌ ಅಧಿಕಾರಿಯನ್ನ ಹಿಗ್ಗಾಮುಗ್ಗ ಥಳಿಸಿ, ಮೇಲಾಧಿಕಾರಿಗಳಿಗೆ ಒಪ್ಪಿಸಿದ್ದಾರೆ. ಸದ್ಯ ಠಾಣೆಯ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿರುವ ಗ್ರಾಮಸ್ಥರು ಆರೋಪಿ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ತಿಹಾರ್‌ ಜೈಲಿನಿಂದ ಬಂದು ಅನಾರೋಗ್ಯ ಪೀಡಿತ ಪತ್ನಿ ಭೇಟಿಯಾದ ಮನೀಶ್ ಸಿಸೋಡಿಯಾ

    ಚುನಾವಣಾ ಕರ್ತವ್ಯದಲ್ಲಿದ್ದ ಸಬ್ ಇನ್ಸ್‌ಪೆಕ್ಟರ್ ಭೂಪೇಂದ್ರ ಸಿಂಗ್ ಶುಕ್ರವಾರ ಮಧ್ಯಾಹ್ನ ಮಗುವನ್ನ ತನ್ನ ಕೋಣೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಆರೋಪಿ ಅತ್ಯಾಚಾರ ಎಸಗಿದ ನಂತರ ಸಮೀಪದಲ್ಲಿ ವಾಸಿಸುವ ಕುಟುಂಬಸ್ಥರು ದೂರು ನೀಡಿದ್ದು, ಎಸ್‌ಐ ಭೂಪೇಂದ್ರ ರಾಹುವಾಸ್ ಪೊಲೀಸ್ ಠಾಣೆಯಲ್ಲಿ (Rahuwas Police Station) ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ – ಐವರು ಸಾವು, 60 ಮಂದಿಗೆ ಗಾಯ

    ಸದ್ಯ ಮಗುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ. ಆರೋಪಿಯನ್ನ ಬಂಧಿಸಿ ತನಿಖೆ ನಡೆಸುತ್ತಿದ್ದು, ಕಠಿಣ ಕ್ರಮ ಕೈಗೊಳ್ಳುವುದಾಗಿ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ ಬಜರಂಗ್‌ ಸಿಂಗ್‌ ತಿಳಿಸಿದ್ದಾರೆ. ಇದನ್ನೂ ಓದಿ: ಅತ್ತೆಗೆ 4 ಸಾವಿರ, ಸೊಸೆಗೆ ಎರಡೂವರೆ ಸಾವಿರ- 6 ಗ್ಯಾರಂಟಿ ಘೋಷಿಸಿದ ತೆಲಂಗಾಣ ಕಾಂಗ್ರೆಸ್

    ಪ್ರತಿಭಟನಾ ಸ್ಥಳಕ್ಕಾಗಮಿಸಿದ ಬಿಜೆಪಿ ಸಂಸದ (BJP MP) ಕಿರೋಡಿ ಲಾಲ್‌ ಮೀನಾ ಮಾತನಾಡಿ, ಪುಟ್ಟ ದಲಿತ ಹೆಣ್ಣುಮಗುವಿನ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದ ನಂತರ ಜನ ರೊಚ್ಚಿಗೆದ್ದಿದ್ದಾರೆ. ಇದು ನಾಗರಿಕ ಸಮಾಜವೇ ತಲೆ ತಗ್ಗಿಸುವಂತಹ ಘಟನೆ. ಸಂತ್ರಸ್ತ ಮಗುವಿನ ಕುಟುಂಬಕ್ಕೆ ನ್ಯಾಯ ಒದಗಿಸುವುದು ನನ್ನ ಮೊದಲ ಆದ್ಯತೆಯಾಗಿದೆ. ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದೇನೆ ಎಂದು ಭರವಸೆ ನೀಡಿದ್ದಾರೆ. ಅಲ್ಲದೇ ಸಂತ್ರಸ್ತ ಮಗುವಿನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ.

  • ವಿದ್ಯಾರ್ಥಿನಿಯರ ಬೆಡ್‌ರೂಮ್‌, ಬಾತ್‌ರೂಮ್‌ನಲ್ಲಿ ಸ್ಪೈಕ್ಯಾಮೆರಾ ಇಟ್ಟು ವೀಡಿಯೋ ಮಾಡ್ತಿದ್ದ ಕಾಮುಕ ಅರೆಸ್ಟ್‌

    ವಿದ್ಯಾರ್ಥಿನಿಯರ ಬೆಡ್‌ರೂಮ್‌, ಬಾತ್‌ರೂಮ್‌ನಲ್ಲಿ ಸ್ಪೈಕ್ಯಾಮೆರಾ ಇಟ್ಟು ವೀಡಿಯೋ ಮಾಡ್ತಿದ್ದ ಕಾಮುಕ ಅರೆಸ್ಟ್‌

    ಜೈಪುರ: ಇತ್ತೀಚಿನ ದಿನಗಳಲ್ಲಿ ಉದ್ಯೋಗಕ್ಕಾಗಿ ವಲಹೆ ಹೋಗುವುದು ಸಹಜ. ಹಾಗಾಗಿ ವಲಸಿಗರು ಬಾಡಿಗೆ ಮನೆ ಪಡೆಯುವ ಮುನ್ನ ಎಚ್ಚರ ವಹಿಸಬೇಕಿದೆ. ವಸತಿ ಸೌಲಭ್ಯಕ್ಕಿಂಲೂ ಹೆಚ್ಚಾಗಿ ನಾವು ಯಾರದ್ದೊ ಕ್ಯಾಮೆರಾ (Camera) ಕಣ್ಣಿಗೆ ಸಿಗದೇ ಸುರಕ್ಷಿತವಾಗಿದ್ದೇವಾ ಎಂಬುದನ್ನ ಗಮನದಲ್ಲಿಟ್ಟುಕೊಳ್ಳಬೇಕಿದೆ.

    ಏಕೆಂದರೆ ರಾಜಸ್ಥಾನದ (Rajasthan) ಉದಯಪುರದಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಈ ನಗರದಲ್ಲಿ ಯುವತಿಯರು ವಾಸವಿದ್ದ ಬಾಡಿಗೆ ಫ್ಲ್ಯಾಟ್‌ನಲ್ಲಿ (Rent Flat) ಸ್ಪೈ ಕ್ಯಾಮೆರಾಗಳು ಪತ್ತೆಯಾಗಿವೆ. ಈ ಕ್ಯಾಮೆರಾಗಳನ್ನು ಸ್ನಾನಗೃಹ, ಮಲಗುವ ಕೋಣೆಗಳು ಮತ್ತು ಇತರ ಸ್ಥಳಗಳಲ್ಲಿ ಅಳವಡಿಸಲಾಗಿತ್ತು ಎಂಬುದು ತಿಳಿದುಬಂದಿದೆ. ಗ್ರಾಹಕರಿಗೆ ಮನೆಗಳನ್ನ ಬಾಡಿಗೆ ನೀಡುವ ಮುನ್ನ ಮಾಲೀಕರೇ ಅಳವಡಿಸಿದ್ದರು ಎಂಬುದು ಗಮನಾರ್ಹ. ಇದನ್ನೂ ಓದಿ: ಸುತ್ತಿಟ್ಟ ಉಡುಪಿ ಸೀರೆಯ ಸೆರಗಿನೊಳಗಿಂದ ಬಿಜೆಪಿ ಪ್ರಣಾಳಿಕೆ ಬಿಡುಗಡೆ ಮಾಡಿದ ನಟಿ ತಾರಾ

    ಹೌದು.. ರಾಜಸ್ಥಾನದ ಉದಯಪುರದ ಪ್ರತಾಪನಗರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್‌ ದಾಖಲಾಗಿದೆ. ಉದಯಪುರ ವಿಭಾಗದ ಅತಿದೊಡ್ಡ ಮೋಹನ್‌ಲಾಲ್ ಸುಖದಿಯಾ ವಿಶ್ವವಿದ್ಯಾಲಯವು ಈ ಪೊಲೀಸ್ ಠಾಣೆ ವೃತ್ತದಲ್ಲಿದೆ ಎಂಬುದು ಸಹ ಗಮನಿಸಬೇಕಾದ ಅಂಶ. ಬೋಹ್ರಾ ಗಣೇಶ್ ಪ್ರದೇಶವು ಈ ವಿಶ್ವವಿದ್ಯಾಲಯದ ಸಮೀಪದಲ್ಲಿದೆ. ಈ ಪ್ರದೇಶದಲ್ಲಿ ನೂರಾರು ಯುವಕ-ಯುವತಿಯರು ಬಾಡಿಗೆಗೆ ಕೊಠಡಿ ಅಥವಾ ಫ್ಲ್ಯಾಟ್‌ಗಳನ್ನು ತೆಗೆದುಕೊಂಡು ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆ ಈ ಪ್ರಕರಣ ಸಂಬಂಧ ರಾಜ್‌ಸಮಂದ್‌ನ ನಾಥದ್ವಾರ ನಿವಾಸಿ ರಾಜೇಂದ್ರ ಸೋನಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಹನುಮ ಭಕ್ತ ಬಜರಂಗದಳದವರು ಸಿಡಿದು ನಿಂತ್ರೆ ಬೇರು ಸಮೇತ ಕಿತ್ತೋಗ್ತೀರಿ: ಬೊಮ್ಮಾಯಿ

    ಸ್ಪೈ ಕ್ಯಾಮೆರಾಗಳು ಪತ್ತೆಯಾಗಿದ್ದು ಹೇಗೆ?
    ಈ ಘಟನೆ ಸಂಬಂಧ ಬೋಹ್ರಾ ಗಣೇಶ್‌ ಜೀ ಮಂದಿರ ರಸ್ತೆಯಲ್ಲಿರುವ ಪಾರ್ಥ್ ಕಾಂಪ್ಲೆಕ್ಸ್‌ನಲ್ಲಿರುವ ಫ್ಲ್ಯಾಟ್‌ ಸಂಖ್ಯೆ 401 ಅನ್ನು ರಾಜೇಂದ್ರ ಅಲಿಯಾಸ್ ರಾಜ್ ಸೋನಿ ಅವರಿಂದ ಬಾಡಿಗೆಗೆ ಪಡೆದಿದ್ದೇವೆ ವಿದ್ಯಾರ್ಥಿನಿಯರು ಪೊಲೀಸರಿಗೆ ದೂರು ನೀಡಿದ್ದರು. ಕೆಲ ದಿನಗಳ ಹಿಂದೆ ಆಕೆ ಮನೆಗೆ ಹೋಗಿದ್ದ ವೇಳೆ ಫ್ಲ್ಯಾಟ್‌ ಮಾಲೀಕರು ರಿಪೇರಿ ನೆಪದಲ್ಲಿ ಫ್ಲಾಟ್ ತೆರೆದಿದ್ದರು. ಫ್ಲಾಟ್‌ನ ಕೀ ಕೂಡ ಅವರ ಬಳಿ ಇತ್ತು. ಆ ವೇಳೆ ಫ್ಲ್ಯಾಟ್‌ನಲ್ಲಿ ಯುವತಿಯರು ಇಲ್ಲದ ಲಾಭ ಪಡೆದು ಬಾತ್ ರೂಂ, ಬೆಡ್ ರೂಂನಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಸ್ಪೈ ಕ್ಯಾಮೆರಾಗಳನ್ನು (ಚಿಕ್ಕ ಗಾತ್ರದ ಕ್ಯಾಮೆರಾ) ಅಳವಡಿಸಿದ್ದರು. ಇನ್ನು, ಪ್ಲ್ಯಾಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದು, ರಿಪೇರಿ ಮಾಡುವಾಗ, ಸ್ಪೈ ಕ್ಯಾಮೆರಾಗಳನ್ನು ಅಳವಡಿಸಲಾಗಿರುವ ಬಗ್ಗೆ ವಿದ್ಯಾರ್ಥಿನಿಯರ ಅರಿವಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

    ಈ ಸಂಬಂಧ ಕೇಸ್‌ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಪೊಲೀಸರು, ಆರೋಪಿಯನ್ನು ಬಂಧಿಸಿದ್ದರು. ಬಳಿಕ ವಿಚಾರಣೆ ನಡೆಸಿದಾಗ ಆರೋಪಿಯೇ ಕಂಪ್ಯೂಟರ್ ಮತ್ತು ಸಿಸಿಟಿವಿ ಕ್ಯಾಮೆರಾ ವ್ಯವಹಾರ ನಡೆಸುತ್ತಿದ್ದದ್ದು ಕಂಡುಬಂದಿದೆ. ಬಳಿಕ ತಾನೇ ಸ್ಪೈ ಕ್ಯಾಮೆರಾಗಳನ್ನ ಬಾತ್‌ ರೂಮ್‌, ಬೆಡ್‌ ರೂಮ್‌ ನಲ್ಲಿ ಅಳವಡಿಸಿ, ವಿದ್ಯಾರ್ಥಿನಿಯರ ಅಶ್ಲೀಲ ದೃಶ್ಯಗಳನ್ನ ನೋಡುತ್ತಿದ್ದ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಆರೋಪಿಯ ಮೊಬೈಲ್‌ ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

  • ಪ್ರವೀಣ್ ಹತ್ಯೆಗೆ ರಾಜಸ್ಥಾನ ಸಿಎಂ ಖಂಡನೆ

    ಪ್ರವೀಣ್ ಹತ್ಯೆಗೆ ರಾಜಸ್ಥಾನ ಸಿಎಂ ಖಂಡನೆ

    ಜೈಪುರ: ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆಯನ್ನು ರಾಜಾಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಖಂಡಿಸಿದ್ದಾರೆ.

    ಕೆಲ ದಿನಗಳ ಹಿಂದೆಯಷ್ಟೇ ರಾಜಾಸ್ಥಾನದ ಉದಯಪುರದಲ್ಲಿ ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾರ ಹೇಳಿಕೆಯನ್ನು ಬೆಂಬಲಿಸಿ ಟೈಲರ್ ಕನ್ಹಯ್ಯ ಎಂಬ ವ್ಯಕ್ತಿ ವಾಟ್ಸಾಪ್ ಸ್ಟೇಟಸ್ ಹಾಕಿದ್ದನ್ನು ಖಂಡಿಸಿ ಮುಸ್ಲಿಂ ಮೂಲಭೂತವಾದಿಗಳು ಟೈಲರ್ ಕನ್ಹಯ್ಯ ಲಾಲ್ ಕತ್ತು ಸೀಳಿ ಹತ್ಯೆ ಮಾಡಲಾಗಿತ್ತು. ಹತ್ಯೆ ವಿರುದ್ಧ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ವಿರೋಧ ಪಕ್ಷಗಳಿಂದಲೂ ಕಾಂಗ್ರೆಸ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿತ್ತು. ಇದನ್ನೂ ಓದಿ: ಪ್ರವೀಣ್ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ಬೊಮ್ಮಾಯಿ

    ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ್ ಹತ್ಯೆ ಖಂಡಿಸಿ, ರಾಜಾಸ್ಥಾನದ ಮುಖ್ಯಮಂತ್ರಿ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಸರ್ಕಾರವಾಗಿದ್ರೆ ಬೀದಿಯಲ್ಲಿ ನಿಂತು ಕಲ್ಲು ಹೊಡೆಯಬಹುದಿತ್ತು: ತೇಜಸ್ವಿ ಸೂರ್ಯ ಆಡಿಯೋ ವೈರಲ್

    ಟ್ವೀಟ್‌ನಲ್ಲಿ ಏನಿದೆ?
    ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಭೀಕರ ಹತ್ಯೆಯನ್ನು ನಾನು ಖಂಡಿಸುತ್ತೇನೆ. 48 ಗಂಟೆಗಳ ನಂತರವೂ ಆರೋಪಿಗಳನ್ನು ಇನ್ನೂ ಕಂಬಿಯ ಹಿಂದೆ ಇರಿಸಿಲ್ಲ. ಆದರೆ ಉದಯಪುರದಲ್ಲಿ ಘಟನೆ ನಡೆದಾಗ ರಾಜಸ್ಥಾನ ಪೊಲೀಸರು ಆರೋಪಿಯನ್ನು 4 ಗಂಟೆಯೊಳಗೆ ಬಂಧಿಸಿದ್ದರು. ಅಲ್ಲದೇ, ದುಃಖದ ಸಮಯದಲ್ಲಿ ಅವರ ಕುಟುಂಬವನ್ನು ಬೆಂಬಲಿಸಲು ನಮ್ಮ ಸರ್ಕಾರವು ಕನ್ಹಯ್ಯಾ ಲಾಲ್ ಜಿ ಅವರ ಇಬ್ಬರು ಪುತ್ರರಿಗೂ 50 ಲಕ್ಷ ರೂಪಾಯಿ ಪರಿಹಾರ ಮತ್ತು ಸರ್ಕಾರಿ ಉದ್ಯೋಗವನ್ನು ನೀಡಿದೆ. ಕರ್ನಾಟಕ ಸರ್ಕಾರವೂ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸಿ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹಣದ ಆಸೆಗಾಗಿ ಕಿವಿ, ಮೂಗು ಕತ್ತರಿಸಿ ಬಾಲಕನ ಹತ್ಯೆ

    ಹಣದ ಆಸೆಗಾಗಿ ಕಿವಿ, ಮೂಗು ಕತ್ತರಿಸಿ ಬಾಲಕನ ಹತ್ಯೆ

    ಜೈಪುರ: ಕಿವಿ, ಮೂಗು ಕತ್ತರಿಸಿದ ಸ್ಥಿತಿಯಲ್ಲಿ ನಾಪತ್ತೆಯಾಗಿದ್ದ ಬಾಲಕನ ಶವ ರಾಜಸ್ಥಾನದ ಅಲ್ವಾರ್ ಗ್ರಾಮದಲ್ಲಿ ಪತ್ತೆಯಾಗಿದೆ.

    11 ವರ್ಷದ ಬಾಲಕ ಶನಿವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಕಾಣೆಯಾದವನು ಇಂದು ಶವವಾಗಿ ಪತ್ತೆಯಾಗಿದ್ದಾನೆ. ಬಾಲಕನ ತಂದೆ ಈ ಪ್ರಕರಣದಲ್ಲಿ ಕೆಲವು ಜನರ ಹೆಸರನ್ನು ಹೇಳಿದ್ದಾರೆ. ಇವರು ಹಣದ ದುರಾಸೆಗಾಗಿ ನಮ್ಮ ಮಗನನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದಾರೆ.

    ಒಂದು ದಿನದ ಹಿಂದೆ ಅಲ್ವಾರ್ ಗ್ರಾಮದಿಂದ ಬಾಲಕ ನಾಪತ್ತೆಯಾಗಿದ್ದನು. ಆದರೆ ಇದೀಗ ವಿಕೃತವಾಗಿ ಕೊಂದಿರುವ ಅವನ ಮೃತ ದೇಹ ಪತ್ತೆಯಾಗಿದೆ. ಕಣ್ಣು, ಮೂಗು ಕತ್ತರಿಸಿ ಬಾಲಕನನ್ನು ಕೊಂದು ಹಾಕಿದ್ದಾರೆ. ಬಾಲಕನ ಶವ ಗದ್ದೆಯಲ್ಲಿ ಪತ್ತೆಯಾಗಿದೆ. ಈ ಘಟನೆ ಅಲ್ವಾರ್‍ನ ಮಲಖೇಡಾ ಪೊಲೀಸ್ ಠಾಣೆ ಪ್ರದೇಶದಲ್ಲಿ ನಡೆದಿದೆ.

     

     

    ನಂದಾ, ಬದ್ರಿ ಸೊಮೆಟೊ, ಬಾಲಸಹೈ, ಜೀತು ಮತ್ತು ಕಲ್ಲು ಇವರು ಹಣದ ದುರಾಸೆಯಿಂದ ನಿನ್ನೆ ಬೆಳಿಗ್ಗೆ ಮಗುವನ್ನು ಅಪಹರಿಸಿದ್ದಾರೆ. ನನ್ನ ಮಗನನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಹಣದ ದುರಾಸೆಯಿಂದ ಅವನು ಕೊಂದಿದ್ದಾರೆ. ಮಗ ಕಾಣದೇ ಇರುವುದನ್ನು ಗಮನಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೆವು. ಆದರೆ ಪೊಲೀಸರು ಹೆಚ್ಚಿನ ಗಮನವನ್ನು ಕೊಟ್ಟಿರಲಿಲ್ಲ ಎಂದು ಬಾಲಕನ ತಂದೆ ರಘುವೀರ್ ಸಿಂಗ್ ಹೇಳಿದ್ದಾರೆ.

    ಹತ್ಯೆಗೀಡಾದ ಮಗುವಿನ ಶವವನ್ನು ನವಲಿ ಗ್ರಾಮದ ಹೊಲದಲ್ಲಿ ಪತ್ತೆ ಮಾಡಲಾಗಿದೆ. ಪ್ರಕರಣದ ತನಿಖೆ ನಡೆಸುತ್ತಿದ್ದೇವೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಎಸ್ಪಿ ತೇಜಸ್ವಿನಿ ಗೌತಮ್ ಹೇಳಿದರು.