Tag: Rajasthan Government

  • ಅತ್ಯಾಚಾರ ಆರೋಪಿಗಳಿಗೆ ಸರ್ಕಾರಿ ಉದ್ಯೋಗ ಕಟ್: ಅಶೋಕ್ ಗೆಹ್ಲೋಟ್

    ಅತ್ಯಾಚಾರ ಆರೋಪಿಗಳಿಗೆ ಸರ್ಕಾರಿ ಉದ್ಯೋಗ ಕಟ್: ಅಶೋಕ್ ಗೆಹ್ಲೋಟ್

    ಜೈಪುರ: ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯ ಪ್ರಕರಣಗಳಿಂದ ಪ್ರತಿಪಕ್ಷಗಳ ಟೀಕೆಗೆ ಗುರಿಯಾಗಿದ್ದ ರಾಜಸ್ಥಾನ ಸರ್ಕಾರ (Rajasthan Government) ಮಹತ್ವದ ಘೋಷಣೆ ಮಾಡಿದೆ. ರಾಜ್ಯದಲ್ಲಿ ಅತ್ಯಾಚಾರ ಆರೋಪಿಗಳು ಹಾಗೂ ಅಪರಾಧ ಕೃತ್ಯ ಹಿನ್ನೆಲೆ ಉಳ್ಳವರಿಗೆ ಸರ್ಕಾರಿ ಉದ್ಯೋಗ (Government Jobs) ನೀಡುವುದಿಲ್ಲ ಎಂದು ಘೋಷಣೆ ಮಾಡಿದೆ.

    ಮಹಿಳೆಯರ ವಿರುದ್ಧ ನಡೆಯುತ್ತಿರುವ ಅಪರಾಧ ಕೃತ್ಯಗಳನ್ನ ತಡೆಯಲು ಶಿಸ್ತು ಕ್ರಮದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಬಾಲಕಿಯರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಕ್ಕೆ ಯತ್ನ ಇತರ ಅಪರಾಧ ಕೃತ್ಯಗಳಲ್ಲಿ ಭಾಗಿಯಾದವರಿಗೆ ಸರ್ಕಾರಿ ಉದ್ಯೋಗ ನಿಷೇಧಿಸಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಅನರ್ಹತೆ ಆದೇಶ ವಾಪಸ್ ಬಳಿಕ ಮೊದಲ ಬಾರಿಗೆ ವಯನಾಡ್‌ಗೆ ಭೇಟಿ ನೀಡಲಿರುವ ರಾಗಾ

    ಅಪರಾಧ ಹಿನ್ನೆಲೆ ಉಳ್ಳವರನ್ನು ಪತ್ತೆ ಮಾಡಲು ಪೊಲೀಸ್ ಠಾಣೆಗಳಲ್ಲಿ ದಾಖಲೆಗಳನ್ನ ಪರಿಶೀಲಿಸಲಾಗುತ್ತಿದೆ. ರಾಜ್ಯದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣಗಳ ಕುರಿತು ಬಿಜೆಪಿ ಆಡಳಿತ ಕಾಂಗ್ರೆಸ್ ಪಕ್ಷದ ಮೇಲೆ ಟೀಕಾ ಪ್ರಹಾರ ನಡೆಸುತ್ತಿರುವ ನಡುವೆ ಸರ್ಕಾರ ಈ ಘೋಷಣೆ ಮಾಡಿದೆ.

    ಇದೇ ಆಗಸ್ಟ್ 2ರಂದು ಬಿಲ್ವಾರ ಜಿಲ್ಲೆಯ ಕಲ್ಲಿದ್ದಲು ಕುಲುಮೆಯಲ್ಲಿ 4 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿತ್ತು. ಅತ್ಯಾಚಾರ ಎಸಗಿದ ಬಳಿಕ ಬಾಲಕಿಯನ್ನ ಕೊಲೆ ಮಾಡಲಾಗಿತ್ತು. ಈ ಪ್ರಕರಣ ಸಂಬಂಧ ಓರ್ವ ಮಹಿಳೆ ಸೇರಿ 7 ಜನರನ್ನ ಬಂಧಿಸಲಾಗಿದೆ. ಈ ಪ್ರಕರಣದ ಬಳಿಕ ಎಚ್ಚೆತ್ತುಕೊಂಡ ಸರ್ಕಾರ ಅಪರಾಧ ಕೃತ್ಯ ಹಿನ್ನೆಲೆ ಉಳ್ಳವರಿಗೆ ಸರ್ಕಾರಿ ಉದ್ಯೋಗ ನೀಡದಂತೆ ಸೂಚಿಸಿದೆ.

    ಬಿಲ್ವಾರಾ ಮತ್ತು ಜೋಧ್‌ಪುರದಂತಹ ಘಟನೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅಪರಾಧ ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿರುವುದಾಗಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ. ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಿ ಕೇರಳ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • 200 ಶಾಸಕರಿಗೆ iPhone ಗಿಫ್ಟ್ ಕೊಟ್ಟ ರಾಜಸ್ಥಾನ ಸರ್ಕಾರ – ವಾಪಸ್ ಕೊಟ್ಟ ಬಿಜೆಪಿ

    200 ಶಾಸಕರಿಗೆ iPhone ಗಿಫ್ಟ್ ಕೊಟ್ಟ ರಾಜಸ್ಥಾನ ಸರ್ಕಾರ – ವಾಪಸ್ ಕೊಟ್ಟ ಬಿಜೆಪಿ

    ಜೈಪುರ: 2022-23ರ ರಾಜ್ಯ ಬಜೆಟ್ ಮಂಡಿಸಿದ ಬಳಿಕ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರವು ರಾಜಸ್ಥಾನದ ಎಲ್ಲ 200 ಶಾಸಕರಿಗೆ ಉಡುಗೊರೆಯಾಗಿ ನೀಡಿದ ಐಫೋನ್-13 ಮೊಬೈಲ್‍ನನ್ನು ಹಿಂದಿರುಗಿಸುವುದಾಗಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕರು ತಿಳಿಸಿದ್ದಾರೆ.

    ಅತ್ಯಾಧುನಿಕ ಫೋನ್‍ಗಳು ರಾಜ್ಯದ ಬೊಕ್ಕಸಕ್ಕೆ ಆರ್ಥಿಕ ಹೊರೆಯಾಗುವುದರಿಂದ ಉಡುಗೊರೆಯನ್ನು ಹಿಂದಿರುಗಿಸಲು ವಿರೋಧ ಪಕ್ಷದ ಶಾಸಕರು ನಿರ್ಧರಿಸಿದ್ದಾರೆ. ಒಂದು ಐಫೋನ್-13 ಬೆಲೆ 70,000 ರೂ. ಆಗಿದೆ. ಇದನ್ನೂ ಓದಿ: ಅಪಪ್ರಚಾರ ಮಾಡಿದವರು ಕೊನೆಗೆ ಲಸಿಕೆ ಹಾಕಿಸಿಕೊಂಡರು: ಅಖಿಲೇಶ್‍ಗೆ ಮೋದಿ ಟಾಂಗ್

    ರಾಜಸ್ಥಾನದ ಬಿಜೆಪಿ ಮುಖ್ಯಸ್ಥ ಸತೀಶ್ ಪೂನಿಯಾ ತಮ್ಮ ಪಕ್ಷದ ಶಾಸಕರು ತಮ್ಮ ಐಫೋನ್‍ಗಳನ್ನು ಹಿಂದಿರುಗಿಸಲಿದ್ದಾರೆ ಎಂದು ಖಚಿತಪಡಿಸಿದ್ದಾರೆ. ಈ ಕುರಿತಂತೆ ಸತೀಶ್ ಪೂನಿಯಾ ಅವರು, ಗುಲಾಬ್ ಕಟಾರಿಯಾ ಮತ್ತು ರಾಜೇಂದ್ರ ಮತ್ತು ಇತರ ಶಾಸಕರೊಂದಿಗೆ ಚರ್ಚಿಸಿದ ಬಳಿಕ ರಾಜ್ಯ ಸರ್ಕಾರದ ಮೇಲಿನ ಆರ್ಥಿಕ ಹೊರೆಯನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ಬಿಜೆಪಿ  ಶಾಸಕರು ಕಾಂಗ್ರೆಸ್ ಸರ್ಕಾರ ನೀಡಿದ ಫೋನ್ ಅನ್ನು ಹಿಂದಿರುಗಿಸಲು ನಿರ್ಧರಿದ್ದಾರೆ ಎಂದು ಪೂನಿಯಾ ಟ್ವೀಟ್ ಮಾಡಿದ್ದಾರೆ.

    2021ರಲ್ಲಿ ಕಾಂಗ್ರೆಸ್ ಸರ್ಕಾರವು ಬಜೆಟ್ ಮಂಡಿಸಿದ ನಂತರ ಎಲ್ಲಾ 200 ಶಾಸಕರಿಗೆ ಐ-ಪ್ಯಾಡ್‍ಗಳನ್ನು ಉಡುಗೊರೆಯಾಗಿ ನೀಡಿತ್ತು. ರಾಜಸ್ಥಾನ ಬಜೆಟ್ 2022-23ರ ಫೆಬ್ರವರಿ 23 ರಂದು ಮಂಡಿಸಲಾದ ಬಜೆಟ್ ವೇಳೆ ಎಲ್ಲ ಶಾಸಕರಿಗೆ ನಿರ್ಗಮನದ ಸಮಯದಲ್ಲಿ ಫೋನ್- 13 ನೊಂದಿಗೆ ಬ್ರೀಫ್‌ಕೇಸ್‌ ನೀಡಲಾಯಿತು. ಇದನ್ನೂ ಓದಿ: ಸತ್ಯವನ್ನು ಒಪ್ಪಿಕೊಂಡಿರುವುದು ಅಮಿತ್ ಶಾ ದೊಡ್ಡತನ- ಮಾಯಾವತಿ ಮೆಚ್ಚುಗೆ