Tag: Rajasthan Election Results

  • 51,000 ಮತಗಳ ಅಂತರದ ಜಯ – ಗೆಲುವನ್ನು ಮೋದಿಗೆ ಅರ್ಪಿಸಿದ ವಸುಂಧರಾ ರಾಜೆ

    51,000 ಮತಗಳ ಅಂತರದ ಜಯ – ಗೆಲುವನ್ನು ಮೋದಿಗೆ ಅರ್ಪಿಸಿದ ವಸುಂಧರಾ ರಾಜೆ

    ಜೈಪುರ: ರಾಜಸ್ಥಾನದ ಝಲ್ರಾಪಟನ್ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಸಿಎಂ ವಸುಂಧರಾ ರಾಜೆ (Vasundhara Raje Scindia) ಅವರು, 53,193 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

    ಕಾಂಗ್ರೆಸ್‌ ಅಭ್ಯರ್ಥಿ ರಾಮ್ ಲಾಲ್ ಚೌಹಾಣ್ ವಿರುದ್ಧ ವಸುಂಧರಾ 51,000ಕ್ಕೂ ಹೆಚ್ಚು ಮತಗಳ (Votes) ಅಂತರದಿಂದ ಗೆಲುವು ಸಾಧಿಸಿದ್ದಾರೆ. 25ನೇ ಸುತ್ತಿನ ನಂತರ ಒಟ್ಟು 1,38,831 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆ ಬಾಕಿಯಿದೆ. ಇದನ್ನೂ ಓದಿ: UPಗೆ ಯೋಗಿ ಆದಿತ್ಯನಾಥ್‌, ರಾಜಸ್ಥಾನಕ್ಕೆ ಬಾಲಕನಾಥ್‌ – ಸಿಎಂ ರೇಸ್‌ನಲ್ಲಿ ಮತ್ತೊಬ್ಬರು ಯೋಗಿ

    ತಮ್ಮ ಈ ಗೆಲುವಿನಿಂದ ಝಲ್ರಾಪಟನ್ ಕ್ಷೇತ್ರವೂ ಬಿಜೆಪಿಯ ಭದ್ರಕೋಟೆ ಎಂಬುದನ್ನು ಸಾಬೀತು ಮಾಡಿದ್ದಾರೆ. 2003ರಿಂದ ಝಲ್ರಾಪಟನ್ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ವಸುಂಧರಾ ಅವರು ಸತತ ಗೆಲುವಿನ ಓಟ ಮುಂದುವರಿಸಿದ್ದಾರೆ. ಈ ಬಾರಿ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ ಎಂಬ ಮಾತುಗಳು ಬೆಂಬಲಿಗರಿಂದ ಕೇಳಿಬರುತ್ತಿದೆ.

    ಈ ಕುರಿತು ಮಾತನಾಡಿರುವ ವಸುಂಧರಾ ರಾಜೇ ಸಿಂಧಿಯಾ ಅವರು, ಇದು ಪ್ರಧಾನಿ ಮೋದಿ ಅವರ ಸಬ್ಕಾ ಸಾಥ್‌, ಸಬ್ಕಾ ವಿಶ್ವಾಸ್‌, ಸಬ್ಕಾ ಪ್ರಯಾಸ್‌ʼ ಮಂತ್ರ ತಂದ ಗೆಲುವು. ಇದು ಮೋದಿ ಗ್ಯಾರಂಟಿಯ (Modi Guarantee) ಗೆಲುವು, ಅಮಿತ್‌ ಶಾ (Amit Shah) ಕಾರ್ಯತಂತ್ರದ ಗೆಲುವು, ನಡ್ಡಾ ಜೀ ಅವರ ಸಮರ್ಥ ನಾಯಕತ್ವಕ್ಕೆ ಸಿಕ್ಕ ಗೆಲುವು, ಮುಖ್ಯವಾಗಿ ನಮ್ಮ ಪಕ್ಷದ ಕಾರ್ಯಕರ್ತರ ಗೆಲುವು ಎಂದು ಹೇಳಿದ್ದಾರೆ.

    ರಾಜಸ್ಥಾನವು ಒಟ್ಟು 199 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿದ್ದು, ಬಹುಮತಕ್ಕೆ 100 ಸ್ಥಾನಗಳ ಅಗತ್ಯವಿದೆ. ಭಾನುವಾರ ಮಧ್ಯಾಹ್ನ 3 ಗಂಟೆ ನಂತರ ಫಲಿತಾಂಶದಲ್ಲಿ ಬಿಜೆಪಿ 115 ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್‌ 69, ಇತರೆ 15 ಸ್ಥಾನಗಳಲ್ಲಿವೆ. ಇದನ್ನೂ ಓದಿ: ಕೆಸಿಆರ್‌, ಕೆಟಿಆರ್‌ಗೆ ತೆಲಂಗಾಣ ಜನರೇ ಉತ್ತರ ಕೊಟ್ಟಿದ್ದಾರೆ: ‘ಕೈ’ ಮುನ್ನಡೆಗೆ ಡಿಕೆಶಿ ಪ್ರತಿಕ್ರಿಯೆ

  • UPಗೆ ಯೋಗಿ ಆದಿತ್ಯನಾಥ್‌, ರಾಜಸ್ಥಾನಕ್ಕೆ ಬಾಲಕನಾಥ್‌ – ಸಿಎಂ ರೇಸ್‌ನಲ್ಲಿ ಮತ್ತೊಬ್ಬರು ಯೋಗಿ

    UPಗೆ ಯೋಗಿ ಆದಿತ್ಯನಾಥ್‌, ರಾಜಸ್ಥಾನಕ್ಕೆ ಬಾಲಕನಾಥ್‌ – ಸಿಎಂ ರೇಸ್‌ನಲ್ಲಿ ಮತ್ತೊಬ್ಬರು ಯೋಗಿ

    ಜೈಪುರ: ದೇಶದಲ್ಲಿ ಲೋಕಸಭಾ ಚುನಾವಣೆಯ ದಿಕ್ಸೂಚಿ ಎಂದೇ ಹೇಳಲಾಗುತ್ತಿರುವ 4 ರಾಜ್ಯಗಳ ಚುನಾವಣಾ ಫಲಿತಾಂಶ ಸದ್ಯದಲ್ಲೇ ಹೊರಬೀಳಲಿದೆ. ಸೋಮವಾರ (ಡಿ.4) ಮಿಜೋರಂನ ಫಲಿತಾಂಶವೂ ಹೊರಬೀಳಲಿದೆ.

    ರಾಜಸ್ಥಾನದಲ್ಲಿ ಸ್ಪರ್ಧಿಸಿರುವ ತಿಜಾರ ಕ್ಷೇತ್ರದ ಬಿಜೆಪಿ (BJP) ಅಭ್ಯರ್ಥಿ ಮಹಂತ್ ಬಾಲಕ್ ನಾಥ್ ಯೋಗಿ (Mahant Balak Nath Yogi) ಅವರು ಗೆಲುವು ಸಾಧಿಸುವ ಮುನ್ಸೂಚನೆ ನೀಡಿದ್ದಾರೆ. 12ನೇ ಸುತ್ತಿನ ನಂತರವೂ 4,807 ಮತಗಳ ಮುನ್ನಡೆ ಸಾಧಿಸಿದ್ದಾರೆ. 12ನೇ ಸುತ್ತಿನ ನಂತರ ಒಟ್ಟು 64,579 ಮತಗಳನ್ನು ಗಳಿಸಿದ್ದಾರೆ. ಈ ಬಾರಿ ರಾಜಸ್ಥಾನ (Rajasthan) ಅಧಿಕಾರ ಸ್ಥಾಪಿಸುವುದು ಬಹುತೇಕ ಖಚಿತವಾಗಿದ್ದು, ಅಧಿಕೃತ ಘೋಷಣೆ ಬಾಕಿಯಿದೆ. ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರ ರಚಿಸಿದ್ರೆ ಬಾಲಕನಾಥ್‌ ಯೋಗಿ ಅವರು ಮುಖ್ಯಮಂತ್ರಿ ಆಗುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

    ಉತ್ತರ ಪ್ರದೇಶದಲ್ಲಿ ಬುಲ್ಡೋಜರ್‌ ಬಾಬಾ ಎಂದೇ ಖ್ಯಾತಿಯಾಗಿರುವ ಸಿಎಂ ಆಗಿರುವ ಯೋಗಿ ಆದಿತ್ಯನಾಥ್ (Yogi Adityanath) ಅವರ ಆಡಳಿತ ಪ್ರಸಿದ್ಧಿಯಾಗಿದೆ. ಈಗ ಯೋಗಿ ಆದಿತ್ಯನಾಥ್ ನಂತರ, ರಾಜಸ್ಥಾನದಲ್ಲಿ ಮತ್ತೊಬ್ಬ ಯೋಗಿಯ ಉದಯವಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಅಲ್ವಾರ್‌ನಿಂದ ಬಿಜೆಪಿ ಸಂಸದರಾಗಿ ಆಯ್ಕೆಯಾಗಿದ್ದ ಯೋಗಿ ಬಾಲಕ್‌ನಾಥ್ ಅವರನ್ನು ಪುನಃ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆಗೆ ಇಳಿಸಲಾಗಿತ್ತು. ಕಾಂಗ್ರೆಸ್‌ನ ಇಮ್ರಾನ್ ಖಾನ್ ಎದುರು ಸ್ಪರ್ಧಿಸಿದ್ದರು. ಇದನ್ನೂ ಓದಿ: ದೇಶಕ್ಕೆ ಒಂದೇ ಗ್ಯಾರಂಟಿ ಅದು ಮೋದಿ ಗ್ಯಾರಂಟಿ – #ModiKiGuarantee ಫುಲ್‌ ಟ್ರೆಂಡ್‌

    199 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ರಾಜಸ್ಥಾನದಲ್ಲಿ ಮಧ್ಯಾಹ್ನ 2 ಗಂಟೆ ನಂತರದ ಫಲಿತಾಂಶ ಹೊರಬಿದ್ದಿದ್ದು, ಬಿಜೆಪಿ 113 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್‌ 72 ಹಾಗೂ ಇತರೇ 14 ಸ್ಥಾನಗಳಲ್ಲಿವೆ.

    ಬಾಲಕನಾಥ್‌ ಯೋಗಿ ಚುನಾವಣಾ ಫಲಿತಾಂಶಕ್ಕೆ ಮುನ್ನಾದಿನವೇ, ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪ್ರಧಾನ ಕಾರ್ಯದರ್ಶಿ ಬಿ.ಎಲ್‌ ಸಂತೋಷ್‌ ಅವರನ್ನು ಭೇಟಿಯಾಗಿದ್ದರು. ಆದ್ರೆ ಇದೊಂದು ಸಹಜ ಭೇಟಿ ಎಂದು ಹೇಳಿದ್ದರು. ಫಲಿತಾಂಶದ ದಿನವಾದ ಭಾನುವಾರ (ಡಿ.3) ಸಿಎಂ ರೇಸ್‌ನಲ್ಲಿ ತಮ್ಮ ಹೆಸರು ಕೇಳಿಬರುತ್ತಿದ್ದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ಇದನ್ನೂ ಓದಿ: ತೆಲಂಗಾಣ ಜನರ ಹೃದಯದಲ್ಲಿ ಗಾಂಧಿ ಕುಟುಂಬಕ್ಕೆ ವಿಶೇಷ ಸ್ಥಾನವಿದೆ – ಈ ಬಾರಿ ಸರ್ಕಾರ ನಮ್ಮದೇ ಎಂದ ಕಾಂಗ್ರೆಸ್ ಸಂಸದ

    ನನ್ನ ಹೆಸರು ಕೇಳಿಬಂದಿರುವುದು ಸಂತೋಷವಾಗಿದೆ. ಆದ್ರೆ ಸಿಎಂ ಯಾರಾಗಬೇಕು ಅನ್ನೋದರ ಬಗ್ಗೆ ಪಕ್ಷ ನಿರ್ಧಾರ ಮಾಡುತ್ತೆ. ನಮ್ಮ ಪ್ರಧಾನಿ ಅವರು ಬಿಜೆಪಿಯ ಐಕಾನ್‌, ಅವರ ನಾಯಕತ್ವದಲ್ಲಿ ನಾವು ಕೆಲಸ ಮಾಡುವುದನ್ನು ಮುಂದುವರಿಸುತ್ತೇವೆ, ಅದರಲ್ಲೇ ನನಗೆ ತೃಪ್ತಿ ಇದೆ. ಏನೇ ಇದ್ದರೂ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂಬುದಷ್ಟೇ ನನ್ನ ಗುರಿ ಅದನ್ನೇ ಮಾಡುತ್ತೇನೆ ಎಂದು ಹೇಳಿದ್ದಾರೆ.

    ಬಾಲಕನಾಥ್‌ ಯೋಗಿ ತಮ್ಮ 6ನೇ ವಯಸ್ಸಿಗೇ ಕುಟುಂಬದವರ ಒಪ್ಪಿಗೆಯ ಮೇರೆಗೆ ಸನ್ಯಾಸತ್ವ ಸ್ವೀಕರಿಸಿದರು ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ ದಿಗ್ವಿಜಯದ ಬೆಳ್ಳಿಗೆರೆ, ರಾಜಸ್ಥಾನದಲ್ಲಿ ಗೆಲುವಿನ ರಾಜಗೆರೆ, ಲೋಕ ಸಮರಕ್ಕೆ ಮುನ್ನುಡಿ: ವಿಜಯೇಂದ್ರ