Tag: Rajastan

  • ಉದ್ಯೋಗ ಕೊಡಿಸುವ ನೆಪದಲ್ಲಿ 20 ಮಹಿಳೆಯರ ಮೇಲೆ ಗ್ಯಾಂಗ್‌ರೇಪ್ – ಇಬ್ಬರ ವಿರುದ್ಧ ದೂರು ದಾಖಲು

    ಉದ್ಯೋಗ ಕೊಡಿಸುವ ನೆಪದಲ್ಲಿ 20 ಮಹಿಳೆಯರ ಮೇಲೆ ಗ್ಯಾಂಗ್‌ರೇಪ್ – ಇಬ್ಬರ ವಿರುದ್ಧ ದೂರು ದಾಖಲು

    ಜೈಪುರ್: ಉದ್ಯೋಗ ಕೊಡಿಸುವ ನೆಪದಲ್ಲಿ ಸುಮಾರು 20 ಮಹಿಳೆಯರನ್ನು ವಂಚಿಸಿ ಸಾಮೂಹಿಕ ಅತ್ಯಾಚಾರವೆಸಗಿದ ಇಬ್ಬರು ಆರೋಪಿಗಳ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

    ರಾಜಸ್ಥಾನದ (Rajastan) ಸಿರೋಹಿ ಮುನ್ಸಿಪಲ್ ಕೌನ್ಸಿಲ್‌ನ ಅಧ್ಯಕ್ಷ ಮಹೇಂದ್ರ ಮೇವಾಡ ಮತ್ತು ಮಾಜಿ ಪುರಸಭೆಯ ಆಯುಕ್ತ ಮಹೇಂದ್ರ ಚೌಧರಿ ವಿರುದ್ಧ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಆರೋಪಿಗಳು ಸುಮಾರು 20 ಕ್ಕೂ ಹೆಚ್ಚು ಮಹಿಳೆಯರಿಗೆ ಅಂಗನವಾಡಿ (Aganvadi) ಕೇಂದ್ರಗಳಲ್ಲಿ ಉದ್ಯೋಗ ಕೊಡಿಸುವುದಾಗಿ ವಂಚನೆ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನೂ ಓದಿ: ಮೈತ್ರಿ ಧರ್ಮ ಪಾಲಿಸಿ: ಬಿಜೆಪಿ ನಾಯಕರಿಗೆ ಅಮಿತ್‌ ಶಾ ಸೂಚನೆ

    ದೂರುದಾರರ ಪ್ರಕಾರ, ಸಂತ್ರಸ್ತೆ ಇತರ ಮಹಿಳೆಯರೊಂದಿಗೆ ಅಂಗನವಾಡಿಯಲ್ಲಿ ಕೆಲಸಕ್ಕಾಗಿ ಕೆಲವು ತಿಂಗಳ ಹಿಂದೆ ಸಿರೋಹಿಗೆ ಪ್ರಯಾಣಿಸಿದ್ದರು. ಸಂತ್ರಸ್ತೆಗೆ, ಆರೋಪಿಗಳು ವಸತಿ ಮತ್ತು ಊಟದ ಸೌಕರ್ಯವನ್ನು ಒದಗಿಸಿದ್ದಾರೆ. ಆದರೆ ಆರೋಪಿಗಳು ನೀಡಿದ ಊಟದಲ್ಲಿ ನಿದ್ರೆ ಮಾತ್ರೆ ಹಾಕಿಕೊಟ್ಟಿದ್ದು, ಅದನ್ನು ಸೇವಿಸಿದ ನಂತರ ಮಹಿಳೆ ಪ್ರಜ್ಞೆ ತಪ್ಪಿದ್ದಾರೆ. ಬಳಿಕ ಆರೋಪಿಗಳು ಆಕೆಯ ಮೇಲೆ ಆತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: ಬಿಜೆಪಿ ಏಕಾಂಗಿಯಾಗಿ 370 ಸ್ಥಾನಗಳ ಗಡಿ ಮುಟ್ಟಲಿದೆ: ಪ್ರಧಾನಿ ಮೋದಿ

    ಸಂಸ್ರಸ್ತೆಗೆ ಪ್ರಜ್ಞೆ ಬಂದ ನಂತರ ಆರೋಪಿಗಳನ್ನು ಪ್ರಶ್ನೆ ಮಾಡಿದ್ದಕ್ಕೆ ಅವರು ಮೋಸ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳು ಮಹಿಳೆಯರ ಮೇಲೆ ಆತ್ಯಾಚಾರವೆಸಗಿ ಅದನ್ನು ವೀಡಿಯೋ ಮಾಡಿಕೊಂಡಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದಾಗಿ ಬೆದರಿಕೆ ಹಾಕಿ ಸಂತ್ರಸ್ತೆಯರಿಂದ ತಲಾ 5 ಲಕ್ಷ ರೂ. ನೀಡುವಂತೆ ಹೇಳಿ ಬೆದರಿಕೆ ಹಾಕಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ನಾಳೆ ಅರವಿಂದ್‌ ಕೇಜ್ರಿವಾಲ್‌ ಭೇಟಿ

    ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಸುಳ್ಳು ದೂರುಗಳನ್ನು ಮಹಿಳೆಯರು ದಾಖಲಿಸಿದ್ದರು ಎಂದು ಪೊಲೀಸ್ ವರಿಷ್ಠಾಧಿಕಾರಿ ಪರಾಸ್ ಚೌಧರಿ ಹೇಳಿದ್ದರು. ಇದೀಗ ಎಂಟು ಮಹಿಳೆಯರ ಅರ್ಜಿಯ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳುವಂತೆ ರಾಜಸ್ಥಾನ ಹೈಕೋರ್ಟ್ ಆದೇಶಿಸಿದೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ:  ನನಗೆ ನಾನೇ ಹೈಕಮಾಂಡ್: ಕೆ.ಎನ್ ರಾಜಣ್ಣ

  • ಹೆಚ್ಚು ಮಕ್ಕಳಿಗೆ ಜನ್ಮ ನೀಡಿ, ಮೋದಿ ಮನೆ ನಿರ್ಮಿಸಿ ಕೊಡ್ತಾರೆ: ರಾಜಸ್ಥಾನ ಸಚಿವ ವಿವಾದಾತ್ಮಕ ಹೇಳಿಕೆ

    ಹೆಚ್ಚು ಮಕ್ಕಳಿಗೆ ಜನ್ಮ ನೀಡಿ, ಮೋದಿ ಮನೆ ನಿರ್ಮಿಸಿ ಕೊಡ್ತಾರೆ: ರಾಜಸ್ಥಾನ ಸಚಿವ ವಿವಾದಾತ್ಮಕ ಹೇಳಿಕೆ

    ಜೈಪುರ: ರಾಜಸ್ಥಾನದ ಬಿಜೆಪಿ (BJP) ನಾಯಕ ಹಾಗೂ ಬುಡಕಟ್ಟು ಪ್ರದೇಶಾಭಿವೃದ್ಧಿ ಸಚಿವ ಬಾಬುಲಾಲ್‌ ಖಾರಾಡಿ (Babulal Kharadi) ಹೇಳಿಕೆಯೊಂದನ್ನು ನೀಡಿ ಇದೀಗ ವಿವಾದಕ್ಕೀಡಾಗಿದ್ದಾರೆ.

    ಉದಯಪುರದ ನಯ್‌ ಗ್ರಾಮದಲ್ಲಿ ‘ವಿಕಸಿತ ಭಾರತ ಸಂಕಲ್ಪ ಯಾತ್ರೆ’ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಯಾರೂ ಹಸಿವಿನಿಂದ ಮಲಗಬಾರದು ಹಾಗೂ ಉಳಿದುಕೊಳ್ಳಲು ಸೂರು ಇಲ್ಲದೆ ಇರಬಾರದು ಎಂಬುದು ಪ್ರಧಾನಿಯವರ ಕನಸಾಗಿದೆ ಎಂದರು. ಇದನ್ನೂ ಓದಿ: ಮಂಡ್ಯದಿಂದ ಹೆಚ್‌ಡಿಕೆ ಸ್ಪರ್ಧೆ – ಕಾರ್ಯಕರ್ತರು, ನಾಯಕರ ಜೊತೆ ಚರ್ಚೆ ಮಾಡಿ ನಿರ್ಧಾರ: ನಿಖಿಲ್ ಕುಮಾರಸ್ವಾಮಿ

    ಬಳಿಕ ನೀವು ಹೆಚ್ಚೆಚ್ಚು ಮಕ್ಕಳನ್ನು ಮಾಡಿಕೊಳ್ಳಿ. ಪ್ರಧಾನಿ ನರೇಂದ್ರ ಮೋದಿಯವರು (Narendra Modi) ನಿಮಗೆ ಮನೆ ಕಟ್ಟಿಸಿಕೊಡ್ತಾರೆ. ಆಹಾರ ಧಾನ್ಯಗಳನ್ನು ಪೂರೈಸುವ ವ್ಯವಸ್ಥೆ ಕೂಡ ಮಾಡುತ್ತಾರೆ. ಮಕ್ಕಳ ಭವಿಷ್ಯದ ಬಗ್ಗೆ ಚಿಂತೆಬಿಡಿ. ಅಲ್ಲದೆ ಅಧಿಕ ಸಬ್ಸಿಡಿ ದರದಲ್ಲಿ ಗ್ಯಾಸ್ ಸಿಲಿಂಡರ್ (Gas Cylinder) ಪೂರೈಸುತ್ತಾರೆ ಎಂದು ಹೇಳಿದ್ದಾರೆ.

    ಕೇಂದ್ರ ಸರ್ಕಾರವು ಎಲ್‌ಪಿಜಿ (LPG) ಸಿಲಿಂಡರ್‌ಗಳ ಬೆಲೆಯನ್ನು 200 ರೂಪಾಯಿಗಳಷ್ಟು ಕಡಿಮೆ ಮಾಡಿದೆ ಮತ್ತು ರಾಜಸ್ಥಾನದ ಬಿಜೆಪಿ ನೇತೃತ್ವದ ಸರ್ಕಾರವು ಉಜ್ವಲ ಯೋಜನೆಯಡಿ 450 ರೂ. ಗಳಿಗೆ ಸಿಲಿಂಡರ್‌ಗಳನ್ನು ಲಭ್ಯವಾಗುವಂತೆ ಮಾಡಲು ಯೋಜಿಸುತ್ತಿದೆ ಎಂದು ಪ್ರಸ್ತಾಪಿಸಿದರು. ಕೇಸರಿ ಪಕ್ಷವು ಹಲವಾರು ಜನಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಹೇಳಿದ ಅವರು, ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಗೆ ಮತ ನೀಡುವಂತೆ ಮನವಿ ಮಾಡಿಕೊಂಡರು.

    ಈ ಕಾರ್ಯಕ್ರಮದಲ್ಲಿ ರಾಜಸ್ಥಾನ ಸಿಎಂ ಭಜನ್‌ ಲಾಲ್‌ ಶರ್ಮಾ ಸೇರಿದಂತೆ ಅನೇಕ ಹಿರಿಯ ನಾಯಕರು ಪಾಲ್ಗೊಂಡಿದ್ದರು. ಖಾರಾಡಿ ಅವರು ಹೀಗೆ ಹೇಳಿಕೆ ನೀಡುತ್ತಿದ್ದಂತೆಯೇ ಸಭೆಯಲ್ಲಿದ್ದ ಅನೇಕರು ಮುಸಿ ಮುಸಿ ನಕ್ಕರು. ಜೊತೆಗೆ ಪಕ್ಷದ ನಾಯಕರು ಒಬ್ಬರಿಗೊಬ್ಬರು ಮುಖ ನೋಡಿಕೊಂಡು ಮುಜುಗರದಿಂದ ತಲೆ ತಗ್ಗಿಸಿದರು.

     

  • ಗೆಹ್ಲೋಟ್‍ಗೆ ರಾವಣ ಎಂದಿದ್ದ ಕೇಂದ್ರ ಸಚಿವರ ವಿರುದ್ಧ FIR

    ಗೆಹ್ಲೋಟ್‍ಗೆ ರಾವಣ ಎಂದಿದ್ದ ಕೇಂದ್ರ ಸಚಿವರ ವಿರುದ್ಧ FIR

    ಜೈಪುರ: ರಾಜಸ್ಥಾನ (Rajastan) ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಅವರನ್ನು ರಾವಣನಿಗೆ ಹೋಲಿಸಿ ಟೀಕೆ ಮಾಡಿದ್ದ ಕೇಂದ್ರ ಸಚಿವ ಗಜೇಂದ್ರ ಶೇಖಾವತ್ (Gajendra Shekhawat) ಅವರ ವಿರುದ್ಧ ಕಾಂಗ್ರೆಸ್ (Congress) ಮುಖಂಡ ಸುರೇಂದ್ರ ಸಿಂಗ್ ಜಾದಾವತ್ ಚಿತ್ತೋರ್‌ಗಢದಲ್ಲಿ ಎಫ್‍ಐಆರ್ ದಾಖಲಿಸಿದ್ದಾರೆ.

    ಇತ್ತೀಚೆಗೆ ಚಿತ್ತೋರಗಢದಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ್ದ ಕೇಂದ್ರ ಸಚಿವ, ರಾವಣನಿಗೆ 10 ತಲೆಗಳಿದ್ದವು. ಅದೇ ರೀತಿ ಈ ರಾಜಸ್ಥಾನದ ಸರ್ಕಾರ ಹಾಗೂ ರಾಜಕೀಯದಲ್ಲಿ ಗೆಹ್ಲೋಟ್‌ ರಾವಣನಿದ್ದ ಹಾಗೇ. ಈ ಸರ್ಕಾರ ಭ್ರಷ್ಟಾಚಾರದ ಹರಿಕಾರವಾಗಿದ್ದು, ಓಲೈಕೆಯಲ್ಲಿ ತೊಡಗಿದೆ. ಜೊತೆಗೆ ರೈತರನ್ನು ಹಾಗೂ ಮಹಿಳೆಯರನ್ನು ದಬ್ಬಾಳಿಕೆ ಮಾಡುತ್ತದೆ. ಈ ಸರ್ಕಾರವು ಮಾಫಿಯಾ ರಾಜ್‍ನನ್ನು ಪೋಷಿಸುತ್ತಿದೆ. ಈ ರಾಜಕೀಯ ರಾವಣನನ್ನು ಮುಗಿಸುವ ಮೂಲಕ ರಾಜಸ್ಥಾನದಲ್ಲಿ ರಾಮರಾಜ್ಯವನ್ನು ಸ್ಥಾಪಿಸಬೇಕಾಗಿದೆ ಎಂದು ಹೇಳಿದ್ದರು.

    ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿದ ಮಾಡಿದ ಹಿನ್ನೆಲೆಯಲ್ಲಿ ಚಿತ್ತೋರ್‌ಗಢದ ಸದರ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಅಷ್ಟೇ ಅಲ್ಲದೇ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ರಾವಣ ಹೇಳಿಕೆಗೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮಧು ಬಂಗಾರಪ್ಪ ಗೆದ್ದರೆ, ಸೊರಬಕ್ಕೆ ಬಂದು ಕುಣಿದು ಕುಪ್ಪಳಿಸುತ್ತೇನೆ: ಶಿವಣ್ಣ

    ಅಶೋಕ್ ಗೆಹ್ಲೋಟ್ ಈ ಬಗ್ಗೆ ಮಾತನಾಡಿ, ಗಜೇಂದ್ರ ಶೇಖಾವತ್ ಅವರು ಗೆಹ್ಲೋಟ್ ರಾವಣ ರೂಪಿ, ಅವರನ್ನು ಮುಗಿಸಬೇಕಾಗಿದೆ ಎಂದು ಹೇಳಿದ್ದರು. ನಾನು ಇದನ್ನು ಸಹ ಸ್ವಾಗತಿಸುತ್ತೇನೆ. ನೀವು ಭಗವಾನ್ ರಾಮನ ಅನುಯಾಯಿ ಮತ್ತು ನಾನು ರಾವಣ ಎಂದು ನಾವು ಒಪ್ಪಿಕೊಳ್ಳುತ್ತೇವೆ ಎಂದು ಹೇಳಿದ್ದರು. ಇದನ್ನೂ ಓದಿ:  ಪ್ರವೀಣ್ ಬಲಿದಾನ ಎಂದಿಗೂ ವ್ಯರ್ಥ ಆಗಲ್ಲ – ನೆಟ್ಟಾರು ಮನೆಗೆ ಜೆ.ಪಿ.ನಡ್ಡಾ ಭೇಟಿ

  • ರಾಜಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಸೇರಿ ಐವರ ಬಂಧನ

    ರಾಜಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದ ಪುನೀತ್ ಕೆರೆಹಳ್ಳಿ ಸೇರಿ ಐವರ ಬಂಧನ

    ರಾಮನಗರ: ಗೋ ಸಾಗಾಟದ ವೇಳೆ ವ್ಯಕ್ತಿ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿ ಪುನೀತ್ ಕೆರೆಹಳ್ಳಿ (Puneeth Kerehalli) ಸೇರಿ ಐವರನ್ನು ಸಾತನೂರು ಠಾಣೆಯ ಪೊಲೀಸರು ಬಂಧಿಸಿದ್ದಾರೆ.

    ಮಾರ್ಚ್ 31 ರಂದು ಕನಕಪುರ (Kanakapura) ತಾಲೂಕಿನ ಸಾತನೂರು ಬಳಿ ಅಕ್ರಮ ಗೋ ಸಾಗಣಿಕೆ ನಡೆಯುತ್ತಿತ್ತು. ಈ ವೇಳೆ ಪುನೀತ್ ಕೆರೆಹಳ್ಳಿ ಸೇರಿದಂತೆ ಐವರು ಕ್ಯಾಂಟರ್ ತಡೆದು ಜಾನುವಾರು ರಕ್ಷಣೆ ಮಾಡಿದ್ದರು. ಈ ವೇಳೆ ಕ್ಯಾಂಟರ್‌ನಲ್ಲಿದ್ದ ವ್ಯಕ್ತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು. ಮೃತನನ್ನು ಮಂಡ್ಯ ಮೂಲದ ಇದ್ರಿಷ್ ಪಾಷಾ ಎಂದು ಗುರುತಿಸಲಾಗಿತ್ತು. ಈ ಸಂಬಂಧ ಸಾತನೂರು ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿತ್ತು.

    ಪುನೀತ್ ಕೆರೆಹಳ್ಳಿ ವಿರುದ್ಧ ಐಪಿಸಿ ಸೆಕ್ಷನ್ 341, 504, 506, 324, 302, 34 ರ ಅಡಿ ಕೇಸ್ ದಾಖಲಾಗಿತ್ತು. ಆದರೆ ಪುನೀತ್ ಕೆರೆಹಳ್ಳಿ ಹಾಗೂ ಆತನ ತಂಡ ಕಳೆದ ಐದು ದಿನದಿಂದ ತಲೆ ಮರೆಸಿಕೊಂಡಿದ್ದರು. ಆದರೆ ಪ್ರಕರಣದ ತನಿಖೆ ಆರಂಭಿಸಿದ್ದ ಸಾತನೂರು ಪೊಲೀಸರು ಪುನೀತ್ ಕೆರೆಹಳ್ಳಿ ಮತ್ತು ಆತನ ತಂಡವನ್ನು ರಾಜಸ್ಥಾನದಲ್ಲಿ (Rajastan) ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ಮುಸ್ಲಿಮರನ್ನ ಟಾರ್ಗೆಟ್‌ ಮಾಡಿ ಹಿಂಸಾಚಾರ – ಇಸ್ಲಾಮಿಕ್‌ ರಾಷ್ಟ್ರಗಳ ಆರೋಪಕ್ಕೆ ಭಾರತ ಕಿಡಿ

  • ಭಾರತ್‌ ಜೋಡೋ ಯಾತ್ರೆಯಲ್ಲಿ RBI ಮಾಜಿ ಗವರ್ನರ್‌ ಭಾಗಿ

    ಭಾರತ್‌ ಜೋಡೋ ಯಾತ್ರೆಯಲ್ಲಿ RBI ಮಾಜಿ ಗವರ್ನರ್‌ ಭಾಗಿ

    ಜೈಪುರ: ಭಾರತೀಯ ರಿಸರ್ವ್ ಬ್ಯಾಂಕ್ (RBI) ಮಾಜಿ ಗವರ್ನರ್ ರಘುರಾಮ್ ರಾಜನ್ (Raghuram Rajan) ಅವರು ಇಂದು ಬೆಳಗ್ಗೆ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ಅವರೊಂದಿಗೆ ಭಾರತ್ ಜೋಡೋ ಯಾತ್ರೆಯಲ್ಲಿ (Bharat Jodo Yatra) ಪಾಲ್ಗೊಂಡಿದ್ದರು.

    ರಾಜಸ್ಥಾನದ (Rajastan) ಸವಾಯಿ ಮಾಧೋಪುರದಿಂದ ಕಾಂಗ್ರೆಸ್‌ನ ಪಾದಯಾತ್ರೆ ಪುನಾರಂಭವಾದ ಪಾದಯಾತ್ರೆಯಲ್ಲಿ ರಾಜನ್ ಮತ್ತು ರಾಹುಲ್‌ ಗಾಂಧಿ ಚರ್ಚೆ ನಡೆಸುತ್ತಿರುವ ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

    ಇಂದಿಗೆ ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆ ಪ್ರಾರಂಭವಾಗಿ 10ನೇ ದಿನವಾಗಿದ್ದು, ಇಂದು ಬಮನ್ವಾಸ್ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಭಡೋತಿ ಗ್ರಾಮದಿಂದ ಯಾತ್ರೆ ಪುನಾರಂಭವಾಯಿತು. ಇಂದು ಯಾತ್ರೆ 25 ಕಿ.ಮೀ ದೂರ ಕ್ರಮಿಸಲಿದೆ. ಇದನ್ನೂ ಓದಿ: ಮಹಾ-ಕರ್ನಾಟಕ ಗಡಿ ವಿವಾದ; ಇಂದು ಮುಖಾಮುಖಿಯಾಗ್ತಾರೆ ಎರಡೂ ರಾಜ್ಯಗಳ ಸಿಎಂ

    ಸೆ. 7ರಂದು ತಮಿಳುನಾಡಿನ ಕನ್ಯಾಕುಮಾರಿಯಿಂದ ಆರಂಭವಾದ ಭಾರತ್ ಜೋಡೋ ಯಾತ್ರೆಯು ಇದುವರೆಗೆ ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮತ್ತು ಮಧ್ಯಪ್ರದೇಶದಲ್ಲಿ ಸಂಚರಿಸಿದ್ದು, ಇದೀಗ ರಾಜಸ್ಥಾನದಲ್ಲಿ ಮುಂದುವರಿಸಿದೆ. ಮುಂದಿನ ವರ್ಷ ಗಣರಾಜ್ಯೋತ್ಸವದಂದು ಭಾರತ್ ಜೋಡೋ ಯಾತ್ರೆ ಕಾಶ್ಮೀರದಲ್ಲಿ ಮುಕ್ತಾಯಗೊಳ್ಳಲಿದೆ. ಈಗಾಗಲೇ ಭಾರತ್‌ ಜೋಡೋ ಯಾತ್ರೆಯಲ್ಲಿ ಮೇಧಾ ಪಾಟ್ಕರ್, ಸ್ವಯಂಘೋಷಿತ ದೇವಮಾನವ ನಾಮದೇವ್ ದಾಸ್ ತ್ಯಾಗಿ, ನಟಿ ಸ್ವರಾ ಭಾಸ್ಕರ್ ಮತ್ತು ಬಾಕ್ಸರ್ ವಿಜೇಂದರ್ ಸಿಂಗ್ ಭಾಗವಹಿಸಿದ್ದರು. ಇದನ್ನೂ ಓದಿ: ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಕುಸಿದ ಮಸ್ಕ್‌ – ನಂ.1 ಯಾರು ಗೊತ್ತಾ?

    Live Tv
    [brid partner=56869869 player=32851 video=960834 autoplay=true]

  • ಒಂದು ವರ್ಷವಿದ್ದಾಗ ಮದುವೆ – 21 ವರ್ಷದ ಬಳಿಕ ಯುವತಿಯ ಮದುವೆ ರದ್ದು

    ಒಂದು ವರ್ಷವಿದ್ದಾಗ ಮದುವೆ – 21 ವರ್ಷದ ಬಳಿಕ ಯುವತಿಯ ಮದುವೆ ರದ್ದು

    ಜೈಪುರ: 1 ವರ್ಷದ ಮಗುವಾಗಿದ್ದಾಗ ನಡೆದ ಮದುವೆ ರದ್ದಾಗಿದ್ದು 21 ವರ್ಷದ ಯುವತಿಗೆ ಹುಟ್ಟುಹಬ್ಬದ ದಿನವೇ ನ್ಯಾಯಾಲಯದಿಂದ(Court) ನ್ಯಾಯ ಸಿಕ್ಕಿದೆ.

    ಜೋಧಪುರದ(Jodhpur) ಹಳ್ಳಿಯೊಂದರ ನಿವಾಸಿ ರೇಖಾಗೆ 1 ವರ್ಷವಾಗಿದ್ದಾಗ ಆಕೆಯ ಕುಟುಂಬಸ್ಥರು ಮದುವೆ ಮಾಡಿಸಿದ್ದರು. ಇತ್ತೀಚೆಗೆ ಆಕೆಯ ಅತ್ತೆಯ ಕುಟುಂಬವು ಗೌನಾ(ಹುಡುಗನ ಮನೆಗೆ ಬರುವ ಸಂಪ್ರದಾಯ) ಆಚರಣೆಗೆ ಬರುವಂತೆ ಒತ್ತಡವನ್ನು ಹೇರಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲೇರಿದ್ದ ರೇಖಾಳಿಗೆ ಈಗ ನ್ಯಾಯ ದೊರೆತಿದೆ.

    ಏನಿದು ಪ್ರಕರಣ?: ರೇಖಾಳ ಅಜ್ಜ 2002ರಲ್ಲಿ ನಿಧನ ಹೊಂದಿದ್ದರು. ಆಗಿನ್ನು ರೇಖಾಳಿಗೆ ಕೇವಲ ಒಂದು ವರ್ಷ ವಯಸ್ಸಾಗಿತ್ತು. ಅದೇ ಸಂದರ್ಭದಲ್ಲಿ ರೇಖಾಳನ್ನು ಅದೇ ಗ್ರಾಮದ ಹುಡುಗನ ಜೊತೆ ಮದುವೆ ಮಾಡಿಸಿದ್ದರು. ಇದಾದ ನಂತರ ಆಕೆಯನ್ನು ಅತ್ತೆಮನೆಗೆ ಕಳಿಸಿರಲಿಲ್ಲ. ಬದಲಾಗಿ ಯಾವುದೇ ತೊಂದರೆಯಿಲ್ಲದೇ ತನ್ನ ಮನೆಯಲ್ಲೇ ಆಟವಾಡಿಕೊಂಡು ಚೆನ್ನಾಗಿ ಓದಿಕೊಂಡಿದ್ದಳು. ಅಷ್ಟೇ ಅಲ್ಲದೇ ಆಕೆಯ ಅತ್ತೆ ಮನೆಯಿಂದ ಯಾವುದೇ ತೊಂದರೆಯೂ ಆಗಿರಲಿಲ್ಲ.

    ಆಕೆಗೆ 18 ವರ್ಷ ತುಂಬಿದಾಗ ಆಕೆಯ ಅತ್ತೆಯ ಮನೆಯವರು ಧಾರ್ಮಿಕ ವಿಧಿ ವಿಧಾನದಂತೆ ಮನೆ ತುಂಬಿಸಿಕೊಳ್ಳಬೇಕು ಒಂದು ಒತ್ತಾಯಿಸಿದ್ದಾರೆ. ಇದರಿಂದಾಗಿ ರೇಖಾಗೆ ತಾನು ಚೆನ್ನಾಗಿ ಓದಿ ಏನಾದರೂ ಸಾಧನೆ ಮಾಡಬೇಕು ಎಂಬ ಕನಸಿಗೆ ಧಕ್ಕೆ ಉಂಟಾಯಿತು. ಇದರಿಂದಾಗಿ ಆಕೆ ಹುಡುಗನ ಮನೆಗೆ ಹೋಗಲು ನಿರಾಕರಿಸಿದ್ದಳು. ಅಷ್ಟೇ ಅಲ್ಲದೇ ತನಗೆ ಒಂದು ವರ್ಷ ಇದ್ದಾಗ ಮದುವೆ ಆಗಿತ್ತು. ಇದರಿಂದಾಗಿ ಈ ಮದುವೆಯನ್ನು ನಾನು ಒಪ್ಪುವುದಿಲ್ಲ ಎಂದು ಪಟ್ಟು ಹಿಡಿದಿದ್ದಳು.

    STOP CHILD MARRIAGE

    ಮದುವೆ ವಿರೋಧಿಸಿದ್ದಕ್ಕೆ ಹುಡುಗನ ಮನೆಯವರು ಜಾತಿ ಪಂಚಾಯಿತಿಯನ್ನು ಕರೆದರು. ಅಷ್ಟೇ ಅಲ್ಲದೇ ಮದುವೆಯನ್ನು ನಿರಾಕರಿಸಿದ್ದಕ್ಕೆ 10 ಲಕ್ಷ ರೂ. ದಂಡವನ್ನು ಹಾಕಿ ಆಕೆಯ ಕುಟುಂಬಕ್ಕೆ ಬೆದರಿಕೆಯನ್ನು ಒಡ್ಡಲಾಗಿತ್ತು. ಇದನ್ನೂ ಓದಿ: ಕ್ಯಾಮೆರಾವನ್ನು ಲೆಕ್ಕಿಸದೇ ಕಿತ್ತಾಡಿದ ಮಹಿಳಾ ಆಯೋಗದ ಅಧ್ಯಕ್ಷೆ – ಪೊಲೀಸ್ ಅಧಿಕಾರಿ

    ಈ ಘಟನೆಯ ಬಳಿಕ ರೇಖಾ ಸಹಾಯಕ್ಕಾಗಿ ಮ್ಯಾನೇಜಿಂಗ್ ಟ್ರಸ್ಟಿಯನ್ನು ಸಂಪರ್ಕಿಸಿದ್ದಾಳೆ. ಆಗ ಟ್ರಸ್ಟ್‌ನವರು ಬಾಲ್ಯವಿವಾಹವನ್ನು(Child Marriage) ರದ್ದುಗೊಳಿಸುವಂತೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಅಲ್ಲಿ ಕೌಟುಂಬಿಕ ನ್ಯಾಯಾಲಯದ ಜಡ್ಜ್ ಪ್ರದೀಪ್ ಕುಮಾರ್ ಮೋದಿ ಅವರು ಮದುವೆಯನ್ನು ರದ್ದುಗೊಳಿಸಿ ತೀರ್ಪು ಪ್ರಕಟಿಸಿದರು. ಇದನ್ನೂ ಓದಿ: ನನಗೆ ಜ್ವರ ಇತ್ತು: ತೆಪ್ಪದಲ್ಲಿ ಪ್ರವಾಹ ವೀಕ್ಷಣೆಗೆ ಮಹೇಶ್‌ ಸ್ಪಷ್ಟನೆ

    Live Tv
    [brid partner=56869869 player=32851 video=960834 autoplay=true]

  • ಮನೆಗೆ ಹೋಗುತ್ತಿದ್ದ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

    ಮನೆಗೆ ಹೋಗುತ್ತಿದ್ದ ಬಿಜೆಪಿ ಮುಖಂಡನನ್ನು ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು

    ಜೈಪುರ: ಬಿಜೆಪಿ ಮುಖಂಡನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ರಾಜಸ್ಥಾನದ ಭರತ್‍ಪುರದಲ್ಲಿ ನಡೆದಿದೆ.

    ಕಿರ್ಪಾಲ್ ಸಿಂಗ್ ಮೃತ ವ್ಯಕ್ತಿ. 2 ಬೈಕ್ ಹಾಗೂ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಸರ್ಕ್ಯೂಟ್ ಹೌಸ್‍ನಿಂದ ಮನೆಗೆ ಹೋಗುತ್ತಿದ್ದ ಕಿರ್ಪಾಲ್ ಸಿಂಗ್ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.

    bjP

    ಭರತ್‍ಪುರದ ಬಿಜೆಪಿ ಸಂಸದ ರಂಜಿತಾ ಕೋಲಿ ಅವರ ಆಪ್ತ ಸಹಾಯಕ ಕಿರ್ಪಾಲ್ ಸಿಂಗ್ ಸಿಂಗ್ ಅವರ ದೇಹದ ಒಳಗೆ ದಾಳಿಯಲ್ಲಿ ಏಳು ಗುಂಡುಗಳು ಒಳಗೊಂಡಿದ್ದು. ಘಟನೆ ಸಂಬಂಧ ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕಿರ್ಪಾಲ್ ಸಿಂಗ್ ಮೃತಪಟ್ಟಿದ್ದಾರೆ.

    ಘಟನೆಗೆ ಸಂಬಂಧಿಸಿ ತನಿಖೆ ನಡೆಸಲಾಗಿತ್ತಿದೆ. ಆರೋಪಿಗಳಿಗೆ ಶೋಧ ನಡೆಯುತ್ತಿದ್ದು, ಈವರೆಗೂ ಯಾರನ್ನು ಬಂಧಿಸಿಲ್ಲ. ಜೊತೆಗೆ ಮರಣೋತ್ತರ ಪರಿಕ್ಷೆಯೂ ನಡೆಯುತ್ತಿದೆ ಎಂದು ಮಥುರಾ ಗೇಟ್ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ರಾಮನಾಥ್ ಸಿಂಗ್ ತಿಳಿಸಿದ್ದಾರೆ. ಗುಂಪು ವೈಷಮ್ಯದಿಂದ ಈ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇದನ್ನೂ ಓದಿ: ಮಾನ್ಯತಾ ಟೆಕ್ ಪಾರ್ಕ್ ಜಲಾವೃತ – 400ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದ ನೀರು

    POLICE JEEP

    ಈ ಬಗ್ಗೆ ಸಂಸದ ರಂಜಿತಾ ಕೋಲಿ ಟ್ವೀಟ್ ಮಾಡಿ, ಡಿಆರ್‍ಯುಸಿಸಿ (ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ) ಸದಸ್ಯ ಮತ್ತು ಕಿಸಾನ್ ಮೋರ್ಚಾದ ಮಾಜಿ ವಕ್ತಾರ ಕೃಪಾಲ್ ಸಿಂಗ್  ಅವರ ನಿಧನದಿಂದಾಗಿ, ಇಂದಿನ ನನ್ನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅತ್ಯಾಚಾರದಂತಹ ಘಟನೆ ನಡೆಯುತ್ತಲೇ ಇರುತ್ತೆ: ಜಾರ್ಖಂಡ್ ಸಿಎಂ ಹೇಳಿಕೆಗೆ ತೀವ್ರ ವಿರೋಧ

    Live Tv
    [brid partner=56869869 player=32851 video=960834 autoplay=true]

  • ಟ್ರ್ಯಾಕ್ಟರ್ ಕಳ್ಳನೆಂದು ತಿಳಿದು ಬಡ ತರಕಾರಿ ವ್ಯಾಪಾರಿಯನ್ನು ಕೊಂದ್ರು

    ಟ್ರ್ಯಾಕ್ಟರ್ ಕಳ್ಳನೆಂದು ತಿಳಿದು ಬಡ ತರಕಾರಿ ವ್ಯಾಪಾರಿಯನ್ನು ಕೊಂದ್ರು

    ಜೈಪುರ: ತರಕಾರಿ ವ್ಯಾಪಾರಿಯೋರ್ವನನ್ನು ಕಳ್ಳನೆಂದು ತಿಳಿದ ಗುಂಪೊಂದು ಆತನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

    ಗೋವಿಂದಗಢ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ವಾರ್ ಜಿಲ್ಲೆಯ ರಾಂಬಾಸ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಚಿರಂಜಿ ಸೈನಿ(45) ತರಕಾರಿ ಮಾರಾಟ ಮಾಡುತ್ತಿದ್ದ ವ್ಯಾಪಾರಿಯಾಗಿದ್ದನು. ಅವನನ್ನು ಅಲ್ಲಿನ ಗುಂಪೊಂದು ಕಳ್ಳ ಎಂದು ಭಾವಿಸಿದೆ.

    CRIME 2

    ಚಿರಂಜಿ ಹೋಗುತ್ತಿದ್ದಾಗ ಹತ್ತಕ್ಕೂ ಹೆಚ್ಚು ಜನರು ಆತನ ಮೇಲೆ ಹಲ್ಲೆ ನಡೆಸಿ, ಆತನನ್ನು ಥಳಿಸಿದ್ದಾರೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿದ್ದ ಚಿರಂಜಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

    ಘಟನೆಯೇನು?: ರಾಂಬಾಸ್ ಗ್ರಾಮದಲ್ಲಿ ಟ್ರ್ಯಾಕ್ಟರ್‌ನ್ನು ಕೆಲ ಕಳ್ಳರು ಕದ್ದೊಯ್ದಿದ್ದರು. ಈ ಹಿನ್ನೆಲೆಯಲ್ಲಿ ಸದರ್ ಪೊಲೀಸ್ ಠಾಣೆಯ ಸಿಬ್ಬಂದಿ ಹಾಗೂ ಟ್ರ್ಯಾಕ್ಟರ್ ಮಾಲೀಕರು ಆ ಕಳ್ಳರನ್ನು ಬೆನ್ನಟ್ಟಿದ್ದಾರೆ. ಆದರೆ ಆ ಕಳ್ಳರು ಟ್ರ್ಯಾಕ್ಟರ್ ಬಿಟ್ಟು ಪರಾರಿಯಾಗಿದ್ದಾರೆ.

    crime

    ಅದೇ ಸಮಯಕ್ಕೆ ಅಲ್ಲಿಗೆ ಬಂದಿದ್ದ ತರಕಾರಿ ವ್ಯಾಪಾರಿ ಚಿರಂಜಿಯನ್ನು ಕಳ್ಳನೆಂದು ಟ್ರ್ಯಾಕ್ಟರ್ ಮಾಲೀಕ ತಪ್ಪಾಗಿ ಭಾವಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಮಾಲೀಕ ಹಾಗೂ ಅವರ ಕಡೆಯವರು ಆ ತರಕಾರಿ ವ್ಯಾಪಾರಿಯನ್ನು ಮನ ಬಂದಂತೆ ಥಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅವರು ಸ್ವತಂತ್ರ್ಯ ಭಾರತದ ಜಿನ್ಹಾ: ಬಿಜೆಪಿ ಕಿಡಿ

    POLICE JEEP

    ಇದೇ ಸಂದರ್ಭಕ್ಕೆ ಅಲ್ಲಿಗೆ ಪೊಲೀಸರು ಬಂದಿದ್ದು, ಆತ ಕಳ್ಳನಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ ಗಂಭೀರ ಗಾಯಗೊಂಡ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೈಪುರ ಆಸ್ಪತ್ರೆಗೆ ಕಳುಹಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದರು. ಇದನ್ನೂ ಓದಿ: 17ರ ವಿದ್ಯಾರ್ಥಿನಿ ಮೇಲೆ 6 ಮಂದಿಯಿಂದ ಅತ್ಯಾಚಾರ

    ಘಟನೆ ಸಂಬಂಧಿಸಿ ಮೃತನ ಪುತ್ರ ಯೋಗೇಶ್ ಸೈನಿ ಗೋವಿಂದಗಢ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನ್ನ ತಂದೆಯ ಸಾವಿಗೆ ಟ್ರ್ಯಾಕ್ಟರ್ ಮಾಲೀಕನೇ ಕಾರಣ ಎಂದು ಆರೋಪಿಸಿದ್ದಾನೆ.

    Live Tv
    [brid partner=56869869 player=32851 video=960834 autoplay=true]

  • ದೇವಸ್ಥಾನದಲ್ಲಿ ಕಾಲ್ತುಳಿತ- ಮೂವರು ಸಾವು

    ದೇವಸ್ಥಾನದಲ್ಲಿ ಕಾಲ್ತುಳಿತ- ಮೂವರು ಸಾವು

    ಜೈಪುರ: ರಾಜಸ್ಥಾನದ ಸಿಕಾನಲ್ಲಿರುವ ಖಾತು ಶ್ಯಾಮ್ ದೇವಸ್ಥಾನದಲ್ಲಿ ಕಾಲ್ತುಳಿತಕ್ಕೆ ಮೂವರು ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾದ ಘಟನೆ ನಡೆದಿದೆ.

    ಇಂದು ಮುಂಜಾನೆ ಮಾಸಿಕ ಜಾತ್ರೆ ನಿಮಿತ್ತ ಅನೇಕ ಜನರು ಸೇರಿದ್ದರು. ಈ ಸಂದರ್ಭದಲ್ಲಿ ದೇವಾಲಯದ ಪ್ರವೇಶ ದ್ವಾರದಲ್ಲಿ ನೂಕು ನುಗ್ಗಲು ಉಂಟಾಗಿ ಈ ಘಟನೆ ನಡೆದಿದೆ. ಘಟನೆಯಲ್ಲಿ ಮೂವರು ಮಹಿಳೆಯರು ಮೃತಪಟ್ಟಿದ್ದು, ಭಕ್ತರ ನಡುವೆ ನೂಕುನುಗ್ಗಲಾಗಿ ಹಲವರಿಗೆ ಗಂಭೀರ ಗಾಯಗಳಾಗಿವೆ.

    ಗಾಯಗೊಂಡವರ ಇಬ್ಬರನ್ನು ಚಿಕಿತ್ಸೆಗಾಗಿ ಜೈಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದ ಮಾಹಿತಿ ಪಡೆಯಲು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ – FIR ದಾಖಲಿಸಿ ಅಧಿಕೃತವಾಗಿ ತನಿಖೆ ಆರಂಭಿಸಿದ ಎನ್ಐಎ

    POLICE JEEP

    ಖಾತು ಶ್ಯಾಮ್‍ನನ್ನು ಕಲಿಯುಗದ ದೇವರು ಎಂದು ಪರಿಗಣಿಸಲಾಗುತ್ತದೆ. ವಿಷ್ಣುವಿನ 10ನೇ ಅವತಾರ ಎಂಬ ನಂಬಿಕೆಯಿಂದ ಪೂಜೆ ನಡೆಯುತ್ತಿದೆ. ಇದು ಯಾತ್ರಾರ್ಥಿಗಳ ಪ್ರಮುಖ ಸ್ಥಳದಲ್ಲೊಂದಾಗಿದೆ. ಇದನ್ನೂ ಓದಿ: ಹೈಬ್ರಿಡ್ ಉಗ್ರನನ್ನು ಬಂಧಿಸಿದ ಭದ್ರತಾ ಪಡೆ

    Live Tv
    [brid partner=56869869 player=32851 video=960834 autoplay=true]

  • ಬಕ್ರೀದ್ ಹಬ್ಬಕ್ಕೆ ತರಲಾಗಿದ್ದ 18 ಒಂಟೆಗಳ ರಕ್ಷಣೆ

    ಬಕ್ರೀದ್ ಹಬ್ಬಕ್ಕೆ ತರಲಾಗಿದ್ದ 18 ಒಂಟೆಗಳ ರಕ್ಷಣೆ

    ಆನೇಕಲ್: ಬಕ್ರೀದ್ ಹಬ್ಬಕ್ಕೆಂದು ರಾಜಸ್ಥಾನದಿಂದ ಅಕ್ರಮವಾಗಿ ತರಲಾಗಿದ್ದ 18 ಒಂಟೆಗಳನ್ನು ರಕ್ಷಿಸಿದ ಘಟನೆ ರಾಜ್ಯ ಗಡಿಭಾಗ ಹೊಸೂರಿನಲ್ಲಿ ನಡೆದಿದೆ.

    ಕೆಲ ದುಷ್ಕರ್ಮಿಗಳು ಬಕ್ರೀದ್ ಹಬ್ಬಕ್ಕೆಂದು 18 ಒಂಟೆಗಳನ್ನು ರಾಜ್ಯಕ್ಕೆ ಅಕ್ರಮವಾಗಿ ಸಾಗಿಸುವ ಪ್ರಯತ್ನದಲ್ಲಿದ್ದರು. ಆದರೆ ಕರ್ನಾಟಕದಲ್ಲಿ ಒಂಟೆಗಳ ಬಲಿ ನಿಷೇಧವಿದ್ದರಿಂದ ಗಡಿ ಭಾಗದಲ್ಲಿ ಪೊಲೀಸರು 24*7ಗಳ ಕಾಲ ಬಿಗಿ ಭದ್ರತೆ ಕೈಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ತರಲು ಸಾಧ್ಯವಾಗದೇ ಆ 18 ಒಂಟೆಗಳನ್ನು ತಮಿಳುನಾಡಿನ ಹೊಸೂರಿನಲ್ಲಿ ಅಕ್ರಮವಾಗಿ ಇರಿಸಲಾಗಿತ್ತು. ಅವೆಲ್ಲವನ್ನು ನಂತರ ದಿನಗಳಲ್ಲಿ ಅಕ್ರಮವಾಗಿ ಬೆಂಗಳೂರು ಸೇರಿದಂತೆ ಹಲವು ಕಡೆ ಸಾಗಿಸಲು ಹೊಂಚು ಹಾಕಲಾಗಿತ್ತು. ಇದನ್ನೂ ಓದಿ: ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿ – ರಸ್ತೆಯ ಮೇಲೆ ಹರಿಯುತ್ತಿದೆ ನೀರು

    ಅಕ್ರಮವಾಗಿ ಒಂಟೆಗಳ ಸಾಗಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಹೊಸೂರು ನಗರಪಾಲಿಕೆ ಅಧಿಕಾರಿಗಳ ಮತ್ತು ಪೊಲೀಸರು ದಾಳಿ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ 18 ಒಂಟೆಗಳನ್ನು ರಕ್ಷಿಸಿ ಕೋರಮಂಗಲ ಬಳಿಯ ಗೋಶಾಲೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧಿಸಿ ಹೊಸೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹೂಡಿಕೆ ಉತ್ತೇಜನಕ್ಕೆ ಭಾರತೀಯ ಹೂಡಿಕೆದಾರರಿಗೆ ವೀಸಾ ನೀಡಿದ ಶ್ರೀಲಂಕಾ

    Live Tv