Tag: Rajashekar Patil

  • ಸೋಲಿನ ಭೀತಿಯಲ್ಲಿ ಸಿಎಂ ಬೀದರ್‌ಗೆ ಬರುತ್ತಿದ್ದಾರೆ: ರಾಜಶೇಖರ್ ಪಾಟೀಲ್

    ಸೋಲಿನ ಭೀತಿಯಲ್ಲಿ ಸಿಎಂ ಬೀದರ್‌ಗೆ ಬರುತ್ತಿದ್ದಾರೆ: ರಾಜಶೇಖರ್ ಪಾಟೀಲ್

    ಬೀದರ್: ಸೋಲಿನ ಭೀತಿಯಲ್ಲಿ ಸಿಎಂ ಬೀದರ್‌ಗೆಗೆ ಬರುತ್ತಿದ್ದಾರೆ ಎಂದು ಪರಿಷತ್ ಚುನಾವಣೆಯ ಪ್ರಚಾರಕ್ಕೆ ಇಂದು ಬೀದರ್‌ಗೆ ಸಿಎಂ ಬಸವರಾಜ ಬೊಮ್ಮಾಯಿ ಆಗಮಿಸುತ್ತಿರುವ ಹಿನ್ನಲೆ ಹುಮ್ನಾಬಾದ್ ಶಾಸಕ ರಾಜಶೇಖರ್ ಪಾಟೀಲ್ ಹೇಳಿಕೆ ನೀಡಿದ್ದಾರೆ.

    ಕೇಂದ್ರ ಸಚಿವ ಭಗವಂತ್ ಖೂಬಾ ಹಾಗೂ ಉಸ್ತುವಾರಿ ಸೂಚಿವ ಪ್ರಭು ಚವ್ಹಾಣ್ ಮದ್ಯ ವೈಮನಸು ಇದೆ ಎಂಬುದು ಬೀದರ್ ಜನತೆಗೆ ಗೋತ್ತಿರುವ ವಿಷಯವಾಗಿದೆ. 25 ವಿಧಾನ ಪರಿಷತ್ ಸ್ಥಾನಗಳ ಪೈಕಿ ಸಿಎಂ ಬೀದರ್‍ಗೆ ಮೊದಲು ಬರುತ್ತಿದ್ದು, ಫಲಿತಾಂಶ ಸರ್ಕಾರ ಪರವಾಗಿಲ್ಲಾ ಎಂದು ಇಗಾಗಲೇ ಸರ್ಕಾರಕ್ಕೆ ಇಂಟೆಲಿಜೆನ್ಸಿ ರಿಪೋರ್ಟ್‍ಹೋಗಿದೆ. ಹೀಗಾಗಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಥಮವಾಗಿ ಗಡಿ ಜಿಲ್ಲೆ ಬೀದರ್‍ಗೆ ಬಂದು ಕಾರ್ಯಕರ್ತರ ಜೊತೆ ಸಭೆ ಮಾಡುತ್ತಿದ್ದಾರೆ ಶಾಸಕರು ಟಾಂಗ್ ನೀಡಿದ್ದಾರೆ. ಇದನ್ನೂ ಓದಿ:  ಕೊರೊನಾ ವೈರಸ್ ಹರಡುವುದನ್ನು ತಡೆಯಲು ಬಂತು ಚೂಯಿಂಗಮ್!

    ಪ್ರಭು ಚವ್ಹಾಣ ಲಿಂಗೈಕ್ಯ ನಮ್ಮ ತಂದೆಯವರ ಬಗ್ಗೆ ವೈಯಕ್ತಿಕವಾಗಿ ಮಾತನಾಡಿದ್ದು, ನನ್ನಗೆ ಬೇಸರ ಮೂಡಿಸಿದ್ದು ಚವ್ಹಾಣ್ ಗೂ ನನ್ನಗೂ ಯಾವುದೇ ವೈಯಕ್ತಿಕ ಜಗಳವಿಲ್ಲಾ ಎಂದು ಹುಮ್ನಾಬಾದ್ ನಲ್ಲಿ ಶಾಸಕ,ಕಾಂಗ್ರೆಸ್ ಅಭ್ಯರ್ಥಿ ಭೀಮ್ ರಾವ್ ಬಿ ಪಾಟೀಲ್ ಸಹೋದರ ರಾಜಶೇಖರ್ ಪಾಟೀಲ್ ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಕೊರೊನಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತದೆ – ಸಂಶೋಧನಾ ವರದಿ