Tag: rajarajeshwarinagar

  • ಸಿಲಿಕಾನ್ ಸಿಟಿಯಲ್ಲಿ ವರುಣನ ಅರ್ಭಟ: ಕೆರೆಗಳಂತಾದ ರಸ್ತೆಗಳು

    ಸಿಲಿಕಾನ್ ಸಿಟಿಯಲ್ಲಿ ವರುಣನ ಅರ್ಭಟ: ಕೆರೆಗಳಂತಾದ ರಸ್ತೆಗಳು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ವರುಣನ ಅರ್ಭಟ ಮುಂದುವರೆದಿದ್ದು ತಡರಾತ್ರಿವರೆಗೂ ಸುರಿದ ಮಳೆಗೆ ರಸ್ತೆಗಳೆಲ್ಲಾ ಕೆರೆಗಳಂತಾಗಿದೆ. ಶಾಂತಿನಗರ, ಡಬ್ಬಲ್ ರೋಡ್, ಮೆಜೆಸ್ಟಿಕ್, ರಾಜಾಜಿನಗರ, ಯಶವಂತಪುರ, ಪೀಣ್ಯ ಸೇರಿದಂತೆ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗಿದೆ. ವರುಣನ ಅಬ್ಬರಕ್ಕೆ ನಗರದ ಬಹುತೇಕ ರಸ್ತೆಗಳು ಕೆರೆಗಳಾಂತಾಗಿದೆ. ಕೋರಮಂಗಲದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು ವಾಹನ ಸವಾರರು ಪರದಾಡುವಂತಾಯಿತು.

    ನಗರದಲ್ಲಿ ಮತ್ತೊಮೆ ಮಳೆ ತನ್ನ ಆರ್ಭಟ ತೋರಿಸಿದೆ. ಮೊನ್ನೆಯಷ್ಟೆ ನಾಲ್ವರನ್ನು ಬಲಿ ಪಡೆದ ಮಳೆ ಶನಿವಾರ ತಡರಾತ್ರಿ ಹಾಗೂ ಭಾನುವಾರ ಬೆಳಗಿನ ಜಾವದವರೆಗೂ ಎಡಬಿಡದೆ ಸುರಿದಿದೆ. ಇನ್ನೂ ನಾಯಂಡಹಳ್ಳಿ ಬಳಿ ವಿಪರೀತ ಮಳೆ ಬಂದ ಕಾರಣ ಮನೆಗಳಿಗೆ ನೀರು ನುಗ್ಗಿದ್ದರಿಂದ ರಾತ್ರಿಯಿಡೀ ಜಾಗರಣೆ ನಡೆಸುವಂತಾಗಿತ್ತು. ತಗ್ಗು ಪ್ರದೇಶವಾದ ಕಾರಣ ನೀರು ಮನೆಗೆ ನುಗ್ಗಿದ್ದು ಮನೆಯಲ್ಲಿದ್ದ ವಸ್ತುಗಳೆಲ್ಲವೂ ನಾಶವಾಗಿದೆ. ಇನ್ನು ಈ ಸಂಬಂಧದ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಬೆಂಗಳೂರಲ್ಲಿ ಮುಂದುವರೆದ ವರುಣನ ಆರ್ಭಟ ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ಮುಳುಗಿದೆ. ನೆಲಮಂಗಲ ರಸ್ತೆ, ಮೈಸೂರು ರೋಡ್ ಸಂಪೂರ್ಣ ಜಲಾವೃತಗೊಂಡಿದ್ದು ಮೈಸೂರು ರೋಡ್ ಫ್ಲೆಓವರ್ ಬಳಿ ಸಾರಿಗೆ ಬಸ್ ಹಾಗೂ ಲಾರಿ ಮುಳುಗಿತ್ತು. ಮೈಸೂರು ರಸ್ತೆಯ ಕೆಂಗೇರಿ ಬಸ್ ನಿಲ್ದಾಣದ ಬಳಿ ಹೆದ್ದಾರಿ ಕೆರೆಗಳಂತೆ ಆಗಿದೆ. ಎರಡು ಬಸ್‍ಗಳು ಅರ್ಧಭಾಗ ಮುಳುಗಿತ್ತು. ರಾಜರಾಜೇಶ್ವರಿ ನಗರದ ಆರ್ಚ್ ವರೆಗೂ ಟ್ರಾಫಿಕ್ ಜಾಮ್ ಹಾಗೂ ವಾಹನಗಳು ನಿಂತಲ್ಲೇ ನಿಂತಿತ್ತು. ಎರಡೂ ಬದಿಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.

    ಮೈಸೂರು ರಸ್ತೆ ಸಂಪೂರ್ಣ ಜಲಾವೃತ ಆಗಿದ್ದು ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ರಸ್ತೆಗೆ ರಾಜಕಾಲುವೆ ನೀರು ನುಗಿತ್ತು. ಮೈಸೂರ್ ರೋಡ್, ಆರ್ ಆರ್ ನಗರ, ಆರ್‍ಟಿಓ ರೋಡ್‍ಗಳಲ್ಲಿ ಬಿಎಂಟಿಸಿ ಬಸ್‍ಗಳು ನೀರಿನಲ್ಲಿ ಮುಳುಗಿತ್ತು. ಮೈಸೂರು ರೋಡ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು ಹಾಗೂ ಕೋರಮಂಗಲ ಮುಖ್ಯರಸ್ತೆಯಲ್ಲಿ ಸಂಪೂರ್ಣ ಜಲಾವೃತ ಆಗಿತ್ತು.

  • ಬೆಂಗಳೂರಲ್ಲಿ ಸೈಕೋ ಕಾಟ- ಮಧ್ಯರಾತ್ರಿ ಕಿಟಕಿ ಇಣುಕಿ ನೋಡ್ತಾನೆ ಕಿರಾತಕ

    ಬೆಂಗಳೂರಲ್ಲಿ ಸೈಕೋ ಕಾಟ- ಮಧ್ಯರಾತ್ರಿ ಕಿಟಕಿ ಇಣುಕಿ ನೋಡ್ತಾನೆ ಕಿರಾತಕ

    ಬೆಂಗಳೂರು: ನಗರದಲ್ಲಿ ಸೈಕೋ ವ್ಯಕ್ತಿಯೊಬ್ಬ ಪ್ರತ್ಯಕ್ಷನಾಗಿದ್ದಾನೆ. ರಾಜರಾಜೇಶ್ವರಿನಗರದ ಬಿಇಎಂಎಲ್ 5ನೇ ಹಂತದಲ್ಲಿ ಪ್ರತ್ಯಕ್ಷನಾಗಿರೋ ಈ ವ್ಯಕ್ತಿ ಎಲ್ಲರ ಮನೆಯ ಬೆಡ್ ರೂಂ ಮತ್ತು ಬಾತ್ ರೂಂ ಇಣುಕುತ್ತಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಮಧ್ಯರಾತ್ರಿ 11 ಗಂಟೆಯಿಂದ ಬೆಳಗಿನ ಜಾವ 2 ಗಂಟೆಯ ವೇಳೆಯಲ್ಲಿ ಪ್ರತ್ಯಕ್ಷನಾಗುವ ಈತ ಕೇವಲ ಬೆಡ್ ರೂಂ ಮತ್ತು ಬಾತ್ ರೂಂ ಮಾತ್ರ ಇಣುಕಿ ನೋಡುತ್ತಾನೆ. ಹಿಡಿಯಲು ಹೋದಾಗ ಕ್ಷಣ ಮಾತ್ರದಲ್ಲಿ ಪರಾರಿಯಾಗುತ್ತಾನೆ. ಯಾವುದೇ ಆಧಾರವಿಲ್ಲದಿದ್ದರೂ, ಬಿಲ್ಡಿಂಗ್ ಏರಿ ಪರಾರಿಯಾಗುತ್ತಾನೆ. ಕಳೆದ ಕೆಲ ತಿಂಗಳಿಂದ ಅಲ್ಲಲ್ಲಿ ಪ್ರತ್ಯಕ್ಷವಾಗುತ್ತಿರುವ ಈ ಕಿರಾತಕನ ಉಪಟಳದಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ.

    ಇಲ್ಲಿನ ಸ್ಥಳೀಯರು ಕೆಲವು ಮನೆಗಳಲ್ಲಿರುವ ಸಿಸಿಟಿವಿ ಪರಿಶೀಲಿಸಿ ಅದರಲ್ಲಿ ಸೆರೆಯಾಗಿರುವ ಈತನ ಮುಖಚಹರೆಯನ್ನು ತೆಗೆದು ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಮಾಡಿ ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದು, ರಾಜರಾಜೇಶ್ವರಿನಗರ ಠಾಣೆ ಪೊಲೀಸರಿಗೂ ದೂರು ನೀಡಿದ್ದಾರೆ.

    ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ರಾಜರಾಜೇಶ್ವರಿನಗರ ಠಾಣೆ ಪೊಲೀಸರು ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.

    https://www.youtube.com/watch?v=Cfw8D7nAjsk