Tag: rajarajeshwari nagara

  • ರಾಜರಾಜೇಶ್ವರಿ ನಗರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧಿಸ್ತಾರಾ? – ಮೈಸೂರಲ್ಲಿ ಹೆಚ್‍ಡಿಕೆ ಸುಳಿವು

    ರಾಜರಾಜೇಶ್ವರಿ ನಗರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧಿಸ್ತಾರಾ? – ಮೈಸೂರಲ್ಲಿ ಹೆಚ್‍ಡಿಕೆ ಸುಳಿವು

    ಮೈಸೂರು: ಬೆಂಗಳೂರಿನ ರಾಜರಾಜೇಶ್ವರಿ ನಗರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ ಬಗ್ಗೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಸುಳಿವು ನೀಡಿದ್ದಾರೆ.

    ಇಷ್ಟು ದಿನ ತಮ್ಮ ಕುಟುಂಬದಿಂದ ತಾವು ಮತ್ತು ರೇವಣ್ಣ ಇಬ್ಬರೇ ಚುನಾವಣೆಗೆ ಸ್ಪರ್ಧಿಸುತ್ತೇವೆ ಅಂತಾ ಕಡ್ಡಿತುಂಡಾಗುವ ರೀತಿ ಮಾತಾಡುತ್ತಿದ್ದ ಎಚ್.ಡಿ. ಕುಮಾರಸ್ವಾಮಿ ಇವತ್ತು ಮೈಸೂರಿನಲ್ಲಿ ಮಾತ್ರ ಈ ಪ್ರಶ್ನೆಗೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಮಾತನಾಡಿ ಪ್ರಜ್ವಾಲ್ ರೇವಣ್ಣ ಸ್ಪರ್ಧೆ ಮಾಡಿದರೂ ಅಚ್ಚರಿ ಇಲ್ಲ ಅನ್ನೋ ಭಾವನೆ ಮೂಡಿಸಿದ್ದಾರೆ.

    ಪ್ರಜ್ವಲ್ ರೇವಣ್ಣ ಟಿಕೆಟ್ ಬೇಕು ಅಂತ ಅಪೇಕ್ಷೆ ಪಡುವಲ್ಲಿ ತಪ್ಪೇನಿಲ್ಲ. ರಾಜರಾಜೇಶ್ವರಿ ನಗರದಲ್ಲಿ ಇನ್ನೂ ಅಭ್ಯರ್ಥಿ ಫೈನಲ್ ಆಗಿಲ್ಲ. ಹಾಗಾಗಿ ಅವರು ಟಿಕೆಟ್ ಕೇಳುತ್ತಿದ್ದಾರೆ. ಆ ಬಗ್ಗೆ ಪಕ್ಷದ ಒಳಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

    ಪಕ್ಷದಲ್ಲಿ ಯಾರು ಬೇಕಾದರೂ ಟಿಕೆಟ್ ಕೇಳಬಹುದು. ಅವರಿಗೆ ಗೆಲ್ಲುವ ಸಾಮರ್ಥ್ಯವಿದ್ದರೆ ಪಕ್ಷ ನಿರ್ಧಾರ ತೆಗೆದುಕೊಳ್ಳುತ್ತದೆ. ಪ್ರಜ್ವಲ್ ಟಿಕೆಟ್ ವಿಚಾರದಲ್ಲಿ ಕಾಲ ನಿರ್ಧಾರ ಮಾಡಲಿದೆ ಎಂದು ಹೇಳುವ ಮೂಲಕ ಪ್ರಜ್ವಲ್ ಸ್ಪರ್ಧೆ ಬಗ್ಗೆ ಕುಮಾರಸ್ವಾಮಿ ಸುಳಿವು ಬಿಟ್ಟುಕೊಟ್ಟರು.

  • ಚೀಟಿ ವ್ಯವಹಾರದಲ್ಲಿ ಲಕ್ಷ-ಲಕ್ಷ ಮೋಸ- ತಲೆಮರೆಸಿಕೊಂಡಿದ್ದ ವಂಚಕಿಗೆ ಬಿತ್ತು ಗೂಸಾ

    ಚೀಟಿ ವ್ಯವಹಾರದಲ್ಲಿ ಲಕ್ಷ-ಲಕ್ಷ ಮೋಸ- ತಲೆಮರೆಸಿಕೊಂಡಿದ್ದ ವಂಚಕಿಗೆ ಬಿತ್ತು ಗೂಸಾ

    ಬೆಂಗಳೂರು: ಚೀಟಿ ವ್ಯವಹಾರದಲ್ಲಿ ಲಕ್ಷ-ಲಕ್ಷ ಹಣ ಪಡೆದು ಮೋಸ ಮಾಡಿ 15 ದಿನದಿಂದ ತಲೆಮರೆಸಿಕೊಂಡಿದ್ದ ವಂಚಕಿಯನ್ನು ಹಿಡಿದು ಚೆನ್ನಾಗಿ ಥಳಿಸಿದ ಘಟನೆ ರಾಜರಾಜೇಶ್ವರಿ ನಗರದಲ್ಲಿ ನಡೆದಿದೆ.

    ರಾಜರಾಜೇಶ್ವರಿ ನಗರದ ರತ್ನಮ್ಮ ಎಂಬಾಕೆ ಸುಮಾರು 50 ಕ್ಕೂ ಹೆಚ್ಚು ಮಂದಿ ಬಳಿ ಚೀಟಿ ಕಟ್ಟಿಸಿಕೊಂಡು ಹಣ ನೀಡದೇ ವಂಚಿಸಿದ್ದಳು. ಪ್ರತಿನಿತ್ಯ ಚೀಟಿ ಕಟ್ಟಿರುವ ಮಂದಿ ಹಣ ನೀಡುವಂತೆ ಒತ್ತಾಯಿಸಿ ರಾತ್ರಿ ಮನೆ ಬಳಿ ಜಮಾಯಿಸಿ ರತ್ನಮ್ಮಳಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

    ಕಳೆದ ಹದಿನೈದು ದಿನಗಳಿಂದ ತಲೆ ಮರೆಸಿಕೊಂಡಿದ್ದ ರತ್ನಮ್ಮ, ಶನಿವಾರ ದೀಢಿರ್ ಮನೆಗೆ ಬಂದು ಸೇರಿಕೊಂಡಿದ್ದಳು. ಈ ವಿಚಾರ ತಿಳಿದ ವಂಚನೆಗೊಳಗಾದವರು ರಾತ್ರಿ ಮನೆ ಬಳಿ ಬಂದು ರತ್ನಮ್ಮಳನ್ನ ಹೊರಗೆ ಕರೆದು ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

    ಮನೆ ಬಳಿ ಗಲಾಟೆ ಹೆಚ್ಚಾಗುತ್ತಿದ್ದಂತೆ ವಿಚಾರ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸದ್ಯ ಮೋಸ ಹೋದವರೆಲ್ಲರು ಸೇರಿಕೊಂಡು ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಸೂಕ್ತ ಕ್ರಮ ಜರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಹದನೈದು ವರ್ಷದಿಂದ ಚೀಟಿ ವ್ಯವಹಾರ ಮಾಡ್ತಿದ್ದ ರತ್ನಮ್ಮ, ಕೆಲ ದಿನಗಳಿಂದ ಚೀಟಿ ಹಣ ವಾಪಸ್ ನೀಡದೇ ಮೋಸ ಮಾಡ್ತಿದ್ಲು. ಹಣ ಕೇಳಿದ್ರೆ ಹೆಸರು ಬರೆದಿಟ್ಟು ನೇಣು ಹಾಕಿಕೊಳ್ಳುವುದಾಗಿ ಬೆದರಿಸುತ್ತಿದ್ದಳು ಅಂತಾ ವಂಚನೆಗೊಳಗಾದವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

    https://www.youtube.com/watch?v=TIhVzpxkS84&feature=youtu.be