Tag: rajanna

  • ವಿನ್ನರ್‌ ಘೋಷಣೆಗೆ ಕೌಂಟ್‌ಡೌನ್‌, ಯಾರ ಕೈ ಸೇರಲಿದೆ ಬಿಗ್ ಬಾಸ್ ಟ್ರೋಫಿ?

    ವಿನ್ನರ್‌ ಘೋಷಣೆಗೆ ಕೌಂಟ್‌ಡೌನ್‌, ಯಾರ ಕೈ ಸೇರಲಿದೆ ಬಿಗ್ ಬಾಸ್ ಟ್ರೋಫಿ?

    ಬಿಗ್ ಬಾಸ್ ಸೀಸನ್ 9 (Bigg Boss Kannada 9) ಮುಗಿಯಲು ಕ್ಷಣಗಣನೆ ಶುರುವಾಗಿದೆ. ಬಿಗ್ ಬಾಸ್ ವಿನ್ನರ್ ಕಿರೀಟ ಯಾರ ಕೈ ಸೇರಲಿದೆ ಎಂಬುದನ್ನ ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ.

    ದೊಡ್ಮನೆಯ ಆಟಕ್ಕೆ ಬ್ರೇಕ್ ಬೀಳಲು ಕೆಲವೇ ಗಂಟೆಗಳು ಬಾಕಿಯಿದೆ. ಸದ್ಯ ಬಿಗ್ ಬಾಸ್ ಮನೆಯಿಂದ ದಿವ್ಯಾ ಉರುಡುಗ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ. ಈ ಬಾರಿಯೂ ಕೂಡ ದಿವ್ಯಾ ಉರುಡುಗಗೆ (Divya Uruduga) ಅದೃಷ್ಟ ಕೈಕೊಟ್ಟಿದೆ. ಇದನ್ನೂ ಓದಿ:BREAKING: ಕೊನೆಗೂ ಗುಡ್ ನ್ಯೂಸ್ ಕೊಟ್ರು ನರೇಶ್, ಪವಿತ್ರಾ: ಮದುವೆ ಡೇಟ್ ಫಿಕ್ಸ್

    ಸದ್ಯ ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ, ರಾಜಣ್ಣ, ದೀಪಿಕಾ ದಾಸ್ ನಡುವೆ ಭರ್ಜರಿ ಪೈಪೋಟಿ ನಡೆಯುತ್ತಿದೆ. ಅದರಲ್ಲೂ ರೂಪೇಶ್ ಶೆಟ್ಟಿ ಮತ್ತು ರಾಕೇಶ್ ನಡುವೆ ಸಖತ್ ಫೈಟ್ ಇದೆ.

    ಬಿಗ್ ಬಾಸ್ ಸೀಸನ್ ೯ರ ವಿನ್ನರ್ ಯಾರು ಎಂದು ಡಿ.31ರಂದು ಅನೌನ್ಸ್ ಆಗಲಿದೆ. ಯಾರಿಗೆ ಒಲಿಯಲಿದೆ ವಿಜಯಲಕ್ಷಿö್ಮ ಎಂಬುದನ್ನ ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • ಭ್ರಷ್ಟಾಚಾರಿಗಳ ಪರ ಸಿಎಂ ನಿಂತಿದ್ದಾರೆ: ಎಎಪಿ ಆರೋಪ

    ಭ್ರಷ್ಟಾಚಾರಿಗಳ ಪರ ಸಿಎಂ ನಿಂತಿದ್ದಾರೆ: ಎಎಪಿ ಆರೋಪ

    ಬೆಂಗಳೂರು: ರಾಜ್ಯದ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ರವರ ಆಪ್ತ ಸಹಾಯಕನನ್ನು ಕೋಟ್ಯಾಂತರ ರೂಪಾಯಿಗಳ ಆರ್ಥಿಕ ಅಪರಾಧದಲ್ಲಿ ಬಂಧಿಸಿ ನಂತರ ಮುಖ್ಯಮಂತ್ರಿಗಳ ಒತ್ತಡದಿಂದ ಆರೋಪಿಯನ್ನು ಗೃಹ ಇಲಾಖೆಯ ಬಿಡುಗಡೆ ಮಾಡಿದೆ ಎಂದು ಆಮ್ ಆದ್ಮಿ ಪಕ್ಷ ಸಿಸಿಬಿ ಕಚೇರಿ ಎದುರು ಪ್ರತಿಭಟನೆ ಮಾಡಿದೆ.

    ಮುಖ್ಯಮಂತ್ರಿಗಳು ಹಾಗೂ ಪ್ರಭಾವಿ ಮಂತ್ರಿಗಳು ತಮ್ಮ ಸ್ವೇಚ್ಛಾಚಾರಕ್ಕೆ ಗೃಹ ಇಲಾಖೆಯನ್ನು ದುರ್ಬಳಕೆ ಮಾಡುತ್ತಿರುವುದನ್ನು ಖಂಡಿಸಿ ಸಿಸಿಬಿ ಎದುರು ನಡೆಸಿದ ಪ್ರತಿಭಟನೆಯಲ್ಲಿ ಆಮ್ ಆದ್ಮಿ ಪಾರ್ಟಿಯ ಮುಖಂಡರು ಮತ್ತು ಕಾರ್ಯಕರ್ತರನ್ನು ಬಂಧಿಸಲಾಯಿತು.

    ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ಸದಂ ಅವರು ಮಾತನಾಡಿ, ರಾಜ್ಯದಲ್ಲಿ ಜನಸಾಮಾನ್ಯರಿಗೊಂದು ನ್ಯಾಯ ಅಧಿಕಾರಸ್ಥರಿಗೆ ಒಂದು ನ್ಯಾಯ. ಭ್ರಷ್ಟರನ್ನು ಬಂಧಿಸಬೇಕಾದ ಪೊಲೀಸ್ ಇಲಾಖೆಯನ್ನು ರಾಜ್ಯ ಸರ್ಕಾರ ದುರ್ಬಳಕೆ ಮಾಡಿಕೊಂಡು ಸಾಂವಿಧಾನಿಕವಾಗಿ ಪ್ರತಿಭಟನೆ ಮಾಡುವ ಆಮ್ ಆದ್ಮಿ ಪಾರ್ಟಿಯ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಇದು ಖಂಡನೀಯ ಎಂದು ಕಿಡಿಕಾರಿದರು.

    ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದ ಪಕ್ಷದ ಹಿಂದುಳಿದ ವರ್ಗಗಳ ಅಧ್ಯಕ್ಷ ರಾಜಶೇಖರ್ ದೊಡ್ಡಣ್ಣ ಅವರು ಮಾತನಾಡಿ, ಆರೋಪಿ ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣ ಮರು ಬಂಧನ ಆಗಲೇಬೇಕು, ಇದರ ಜೊತೆಗೆ ಮುಖ್ಯಮಂತ್ರಿಗಳ ಮಗ ವಿಜಯೇಂದ್ರರವರ ವಿಚಾರಣೆಯು ಸಹ ಮಾಡಬೇಕು. ನಾವು ಶಾಂತಿಯುತವಾದ ಪ್ರತಿಭಟನೆಯ ಮೂಲಕ ಅಗ್ರಹಿಸಿದರೆ ರಾಜ್ಯ ಸರ್ಕಾರ ಸರ್ವಾಧಿಕಾರಿ ನೀತಿಯನ್ನು ಅನುಸರಿಸಿ ನಾಚಿಕೆ ಬಿಟ್ಟು ಪ್ರತಿಭಟನಾಕಾರರನ್ನು ಬಂಧಿಸಿದೆ ಎಂದು ಆರೋಪಿಸಿದರು. ಇದನ್ನೂ ಓದಿ : ಸಚಿವ ರಾಮುಲು ಪಿಎ ರಾಜಣ್ಣ ಅರೆಸ್ಟ್

    ಆದಾಯ ತೆರಿಗೆ ಇಲಾಖೆ ಜಾರಿ ನಿರ್ದೇಶನಾಲಯಗಳ ಮೂಲಕವೂ ಸಹ ಪ್ರಭಾವಿಗಳ ಅಕ್ರಮಗಳು ಹೊರಬರಬೇಕಿದೆ. ಈ ರೀತಿಯ ಬೃಹತ್ ಹಗರಣವನ್ನು ಮುಚ್ಚಿಹಾಕಲು ಪ್ರಭಾವಿಗಳು ಯತ್ನಿಸುತ್ತಿದ್ದಾರೆ. ಈ ಹಗರಣವದ ನಿಷ್ಪಕ್ಷಪಾತವಾದ ತನಿಖೆಯಾಗಬೇಕು ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರ ಘಟಕದ ಅಧ್ಯಕ್ಷ ಬಿ.ಟಿ ನಾಗಣ್ಣ ಆಗ್ರಹಿಸಿದರು.

    ಬೆಂಗಳೂರು ನಗರದ ಮೈಸೂರು ರಸ್ತೆಯಲ್ಲಿ ಇರುವ ಸಿಸಿಬಿ (ಕೇಂದ್ರ ಅಪರಾಧ ದಳ) ಕಚೇರಿಯ ಎದುರು ನಡೆದ ಈ ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಮುಖ್ಯ ವಕ್ತಾರ ಶರತ್ ಖಾದ್ರಿ , ಉಷಾ ಮೋಹನ್, ಪ್ರಕಾಶ್ ನಾಗರಾಜ್, ಶಿಲ್ಪ ಬಿ, ಗೋಪಿನಾಥ್ ಮೊದಲಾದ ಮುಖಂಡರ ಜೊತೆಗೆ ನೂರಾರು ಮಂದಿ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು. ಪ್ರತಿಭಟನಾಕಾರರನ್ನು ಈ ಸಂದರ್ಭದಲ್ಲಿ ಬಂಧಿಸಲಾಯಿತು.

  • ಸಿಎಂ ಪುತ್ರನ ಹೆಸರಲ್ಲಿ ರಾಮುಲು PA ಡೀಲ್..? – 3 ಆಡಿಯೋದಲ್ಲಿ 5 ಕೋಟಿಗೆ ಡಿಮ್ಯಾಂಡ್

    ಸಿಎಂ ಪುತ್ರನ ಹೆಸರಲ್ಲಿ ರಾಮುಲು PA ಡೀಲ್..? – 3 ಆಡಿಯೋದಲ್ಲಿ 5 ಕೋಟಿಗೆ ಡಿಮ್ಯಾಂಡ್

    – ಕೋಟಿ ಡೀಲ್‍ಗೆ ನೂರು ರೂಪಾಯಿ ಕೋಡ್‍ವರ್ಡ್
    – ಪ್ರಭಾವಿಗಳ ಒತ್ತಡಕ್ಕೆ ಮಣಿದ್ರಾ ಸಿಸಿಬಿ ಪೊಲೀಸರು..?
    – ನಂಗೆ ಗೊತ್ತಿಲ್ಲದೆ ಅರೆಸ್ಟ್ ಮಾಡಿದ್ದು ಸರೀನಾ ಅಂದ್ರು ರಾಮುಲು..?

    ಬೆಂಗಳೂರು: ಸಿಎಂ ಪುತ್ರ ವಿಜಯೇಂದ್ರ ಹಾಗೂ ಮೂವರು ಸಚಿವರ ಹೆಸರೇಳಿಕೊಂಡು ಗುತ್ತಿಗೆ, ವರ್ಗಾವಣೆ, ಕೆಲಸದ ಆಮಿಷವೊಡ್ಡಿ ಕೋಟಿ ಕೋಟಿ ದೋಖಾ ಮಾಡಿದರೂ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಆಪ್ತ ಸಹಾಯಕ ಬಚಾವ್ ಆಗಿದ್ದಾರೆ.

    ನೀರಾವರಿ ಇಲಾಖೆ ಸಬ್ ಕಾಂಟ್ರಾಕ್ಟ್ ನೀಡೋ ವಿಚಾರದಲ್ಲಿ ಮೂವರು ಗುತ್ತಿಗೆದಾರರೊಂದಿಗೆ ಸಚಿವ ಶ್ರೀರಾಮುಲು ಪಿಎ ರಾಜಣ್ಣ ಮಾತನಾಡಿದ್ದಾರೆ ಎನ್ನಲಾಗಿದ್ದು, ಅದರಲ್ಲಿ ಸಿಎಂ ಪುತ್ರ ವಿಜಯೇಂದ್ರ ಹೆಸರನ್ನು ಪ್ರಸ್ತಾಪಿಸಿದ್ದಾರೆ ಅಂತ ಗೊತ್ತಾಗಿದೆ. 3 ಆಡಿಯೋದಲ್ಲಿ ಸುಮಾರು 5 ಕೋಟಿವರೆಗೆ ಪ್ರಸ್ತಾಪಿಸಿದ್ದಾರೆ. ಡೀಲ್ ಓಕೆಯಾದ್ರೆ ವಿಜಯೇಂದ್ರ ಹತ್ತಿರ ಮಾತನಾಡಿ ಸಹಿ ಹಾಕಿಸಿಕೊಡೋದಾಗಿಯೂ ರಾಮುಲು ಪಿಎ ಆಶ್ವಾಸನೆ ಕೊಟ್ಟಿದ್ದಾರೆ ಅಂತ ಹೇಳಲಾಗಿದೆ.

    ಸಿಎಂ ಪುತ್ರ ವಿಜಯೇಂದ್ರ ದೂರು ಕೊಟ್ಟಿದ್ಯಾಕೆ…?:
    * ಆಡಿಯೋ 1 – ಗುತ್ತಿಗೆದಾರನ ಬಳಿ 1 ಕೋಟಿ ಹಣಕ್ಕೆ ಬೇಡಿಕೆ!
    (1 ಕೋಟಿಗೆ 100 ರೂ. ಅಂತ ಕೋಡ್ ವರ್ಡ್)
    * ಆಡಿಯೋ 2 – ಗುತ್ತಿಗೆದಾರನ ಬಳಿ 3 ಕೋಟಿ ಹಣಕ್ಕೆ ಡಿಮ್ಯಾಂಡ್!
    (3 ಕೋಟಿಗೆ 300 ರೂ. ಅಂತ ಕೋಡ್ ವರ್ಡ್)
    * ಆಡಿಯೋ 3 – 75 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆ!
    (75 ಲಕ್ಷಕ್ಕೆ 75 ರೂಪಾಯಿ ಅಂತ ಕೋಡ್ ವರ್ಡ್…..)

    ಪೊಲೀಸ್ ಫ್ರೆಶರ್: ಸಚಿವ ಶ್ರೀರಾಮುಲು ಆಪ್ತ ಸಹಾಯಕ ರಾಜಣ್ಣ ಕೇಸಲ್ಲಿ ಸಿಸಿಬಿ ಪೊಲೀಸರು ಒತ್ತಡಕ್ಕೆ ಒಳಗಾದ್ರಾ ಅನ್ನೋ ಸಂಶಯ ವ್ಯಕ್ತವಾಗಿದೆ. ಸಿಎಂ ಪುತ್ರ ವಿಜಯೇಂದ್ರ ದೂರು ಕೊಟ್ಟರೂ, ಕೇವಲ ವಿಚಾರಣೆಯನ್ನಷ್ಟೇ ನಡೆಸಿ, ಬಂಧನ ಮಾಡದೆ ರಾಮುಲು ಆಪ್ತನನ್ನು ಬಿಟ್ಟು ಕಳುಹಿಸಿದ್ದಾರೆ. ಬೆಳಗ್ಗೆಯಿಂದ ಪೊಲೀಸರ ಮೇಲೆ ರಾಮುಲು ಒತ್ತಡ ಹೇರಿದ್ದರಿಂದ ಯಾವುದೇ ಎಫ್‍ಐಆರ್ ಹಾಕದೆ ಧ್ವನಿ ಮಾದರಿ ಸಂಗ್ರಹ, ವಾಟ್ಸಪ್ ಚಾಟ್, ಡೀಲ್ ಆಡಿಯೋವನ್ನು ಪಡೆದು ಮತ್ತೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟು ಕಳುಹಿಸಿದ್ದಾರೆ. ಸಾಮಾನ್ಯರ ಮೇಲೆ ದೂರು ಬಂದಿದ್ದರೆ, ಸಿಸಿಬಿ ಪೊಲೀಸರು ಹೀಗೆಯೇ ವರ್ತಿಸುತ್ತಿದ್ದಾರಾ..? ಪ್ರಭಾವಿಗಳ ಕೇಸ್ ಅಂತ ಪೊಲೀಸರು ಬೇಕಾಬಿಟ್ಟಿಯಾಗಿ ವರ್ತಿಸಿದ್ರಾ ಅನ್ನೋ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ವಿಜಯೇಂದ್ರನೇ ಡಿ ಪ್ಯಾಕ್ಟರ್ ಸಿಎಂ, ಯಡಿಯೂರಪ್ಪ ಡಿ ಜೀರೋ ಸಿಎಂ: ಸಿದ್ದರಾಮಯ್ಯ

    ಸಿಸಿಬಿ ಪೊಲೀಸರು ಎಡವಿದ್ದೆಲ್ಲಿ….?
    ಸೈಬರ್ ಠಾಣೆಯಲ್ಲಿ ಎಫ್‍ಐಆರ್ ದಾಖಲು ವೇಳೆ ಎಡವಟ್ಟು ಮಾಡಿದ್ದಾರೆ. ರಾಮುಲು ಆಪ್ತನ ವಿರುದ್ಧ ಸಿಸಿಬಿ ಹಾಕಿರೋದು 2 ಸೆಕ್ಷನ್ ಅಷ್ಟೇ. ಐಟಿ ಆಕ್ಟ್ ಸೆಕ್ಷನ್ 66 ಮತ್ತು ಐಪಿಸಿ ಸೆಕ್ಷನ್ 420 ಅಡಿ ಎಫ್‍ಐಆರ್ ದಾಖಲಿಸಲಾಗಿದೆ. ಐಟಿ ಆಕ್ಟ್ 66- ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಬಿಡುಗಡೆ ಮಾಡಲಾಗಿದೆ. ಐಪಿಸಿ 420- ವಂಚನೆ ಆರೋಪ(ವಿಜಯೇಂದ್ರ ತನಗೆ ಆಗಿರೋ ವಂಚನೆ ಉಲ್ಲೇಖಿಸಿಲ್ಲ). ಎಫ್‍ಐಆರ್ ಪ್ರಾಥಮಿಕ ಸಾರಂಶದಲ್ಲಿ ಹೆಸರಷ್ಟೇ ಬಳಕೆ ಮಾಡಲಾಗಿದೆ.

    ಇತ್ತ ತಮ್ಮ ಆಪ್ತ ಸಹಾಯಕ ರಾಜಣ್ಣ ಕೋಟಿ ಕೋಟಿ ಡೀಲ್ ಮಾಡಿ ವಂಚನೆ ಎಸಗಿದ್ದಾನೆ ಅನ್ನೋ ಆರೋಪಕ್ಕಿಂತ ವಿಜಯೇಂದ್ರ ತಮಗೆ ನೆಪಮಾತ್ರಕ್ಕೂ ಮಾಹಿತಿ ಕೊಟ್ಟಿಲ್ಲ ಅಂತ ಸಚಿವ ಶ್ರೀರಾಮುಲು ಆಪ್ತರ ಬಳಿ ಬೇಸರ ವ್ಯಕ್ತಪಡಿಸಿದ್ದಾರೆ. ಆಪ್ತ ರಾಜಣ್ಣನನ್ನು ಸಿಸಿಬಿಯವರು ಎತ್ತಾಕಿಕೊಂಡು ಹೋದ್ರು ಎಂಬ ಸುದ್ದಿ ಕೇಳಿ, ಆಪ್ತರ ಬಳಿ ವಿಜಯೇಂದ್ರ ಬಗ್ಗೆ ರಾಮುಲು ಕೂಗಾಡಿದ್ರಂತೆ. ನನಗೆ ಹೇಳಿದ್ರೆ ಆಗ್ತಿರಲಿಲ್ವಾ..? ನಾನು ಸರಿ ಮಾಡ್ತಿರಲಿಲ್ವಾ..? ನನಗೆ ಕೆಟ್ಟ ಹೆಸರು ತರಬೇಕು ಅಂತಾನೆ ಹೀಗೆ ಮಾಡಿದಂತಿದೆ. ನಾನು ವಿಜಯೇಂದ್ರರನ್ನು ಭೇಟಿ ಮಾಡಲ್ಲ, ಅದೇನಾಗುತ್ತೋ ಆಗ್ಲಿ ಅಂತಾ ಗರಂ ಆಗಿದ್ರು ಎನ್ನಲಾಗಿದೆ.

    ಇಡೀ ರಾತ್ರಿ ಸಚಿವ ರಾಮುಲು ನಿದ್ದೆ ಕೂಡ ಮಾಡಿರಲಿಲ್ಲ ಅಂತಾ ತಿಳಿದುಬಂದಿದೆ. ಬೆಳಗ್ಗೆ ರಾಮುಲು ಆಡಿದ ಮಾತುಗಳಲ್ಲೂ ಇದೇ ಧ್ವನಿಸ್ತಾ ಇತ್ತು. ತಪ್ಪು ಯಾರು ಮಾಡಿದ್ರು ತಪ್ಪು.. ತನಿಖೆ ನಡೀತಿದೆ ಅಂದ್ರು. ಹಿರಿಯ ಮಂತ್ರಿಯಾಗಿ ತಮಗೆ ಈ ವಿಚಾರದಲ್ಲಿ ಅವಮಾನವಾಗಿದೆ ಎಂಬುದನ್ನು ಪರೋಕ್ಷವಾಗಿ ಹೇಳಿದ್ರು. ಇದಾದ ಕೂಡಲೇ ಸಿಎಂ ಭೇಟಿ ಮಾಡಿ ರಾಜಣ್ಣನ ಬಿಡುಗಡೆಗೆ ಒತ್ತಡ ಹೇರಿದ್ರು. ಕೆಲವೇ ಕ್ಷಣಗಳಲ್ಲಿ ಆರೋಪಿ ರಾಜಣ್ಣನನ್ನು ಸಿಸಿಬಿ ಬಿಟ್ಟು ಕಳಿಸಿದ್ದು ಕಾಕತಾಳಿಯ.

    ಟ್ವೀಟ್ ಸಮರ: ಸಿಎಂ ಪುತ್ರ ವಿಜಯೇಂದ್ರ ಹಾಗೂ ರಾಮುಲು ಆಪ್ತ ಸಹಾಯಕ ರಾಜಣ್ಣ ಮಧ್ಯೆ ಟ್ವೀಟ್ ಸಮರ ನಡೆದಿದೆ. ರಾಮುಲು ಪಿಎ ವಿರುದ್ಧ ದೂರು ನೀಡಿದ್ದನ್ನು ವಿಜಯೇಂದ್ರ ಸಮರ್ಥಿಸಿಕೊಂಡಿದ್ದಾರೆ. ಹಾಗೆಯೇ ರಾಮುಲು ಆಪ್ತ ಸಹಾಯಕ, ಆರೋಪಿ ರಾಜಣ್ಣ ನಾನು ತಪ್ಪೇ ಮಾಡಿಲ್ಲ. ಆಡಿಯೋದಲ್ಲಿರುವ ಧ್ವನಿ ನನ್ನದಲ್ಲ ಎಂದಿದ್ದಾರೆ. ವಿಜಯೇಂದ್ರ ಕರೆದು ಮಾತನಾಡಬಹುದಿತ್ತು ಅಂತಲೂ ಬೇಸರಿಸಿಕೊಂಡಿದ್ದಾರೆ. ಅಂದ ಹಾಗೇ ಬಳ್ಳಾರಿ ಮೂಲದ ರಾಜಣ್ಣ ಕಳೆದ 20 ವರ್ಷದಿಂದ ರಾಮುಲು-ಜನಾರ್ದನರೆಡ್ಡಿ ಬಲಗೈ ಬಂಟರಾಗಿದ್ದರು.

    ಸಚಿವ ರಾಮುಲು ಪಿಎ ರಾಜಣ್ಣ ವಿರುದ್ಧದ ಡೀಲ್ ಆರೋಪ, ಬಂಧನ ಬಿಡುಗಡೆ ಪ್ರಹಸನ.. ಸಹಜವಾಗಿಯೇ ವಿಪಕ್ಷಗಳಿಗೆ ಅಸ್ತ್ರವಾಗಿ ಪರಿಣಮಿಸಿದೆ. ಸಿದ್ದರಾಮಯ್ಯ ಅವರಂತೂ ಸಿಎಂ ಕುಟುಂಬದ ವಿರುದ್ಧ, ಸಚಿವ ರಾಮುಲು ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮಾತ್ರ, ರಾಮುಲು ಪಿಎ, ವಿಜಯೇಂದ್ರ ಬಗ್ಗೆ ಮಾತನಾಡೋದು ನನ್ನ ಲೆವೆಲ್ ಅಲ್ಲ ಎನ್ನುತ್ತಾ ಜಾರಿಕೊಂಡಿದ್ದಾರೆ. ಇನ್ನೂ ಸಿಎಂ ಯಡಿಯೂರಪ್ಪ ವಿರುದ್ಧ ಕಿಡಿಕಾಡಿರೋ ಮಾಜಿ ಸಚಿವ ರೇವಣ್ಣ, ಡಿನೋಟಿಫಿಕೇಶನ್ ಮುಖ್ಯಮಂತ್ರಿ ಯಡಿಯೂರಪ್ಪಗೆ ದೇವರೇ ಶಿಕ್ಷೆ ಕೊಡೋ ಕಾಲ ಬರುತ್ತೆ ಅಂತಾ ಶಪಿಸಿದ್ದಾರೆ.

  • ಆಪ್ತ ಅರೆಸ್ಟ್ – ವಿಜಯೇಂದ್ರ ವಿರುದ್ಧ ಶೀರಾಮುಲು ಕೆಂಡಾಮಂಡಲ

    ಆಪ್ತ ಅರೆಸ್ಟ್ – ವಿಜಯೇಂದ್ರ ವಿರುದ್ಧ ಶೀರಾಮುಲು ಕೆಂಡಾಮಂಡಲ

    ಬೆಂಗಳೂರು: ವಿಜಯೇಂದ್ರ ಮೇಲೆ ಸಚಿವ ಶ್ರೀರಾಮುಲು ಕೆಂಡಾಮಂಡಲವಾಗಿದ್ದಾರೆ ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ರಾಜಣ್ಣ ತಪ್ಪು ಮಾಡುತ್ತಿದ್ದಾನೆ ಎಂದರೆ ನನ್ನ ಬಳಿ ಹೇಳಬಹುದಿತ್ತು. ನಾನು ಅವನ ಮೇಲೆ ಕ್ರಮ ಕೈಗೊಳ್ಳುತ್ತಿದ್ದೆ. ಅದು ಬಿಟ್ಟು ವಿಜಯೇಂದ್ರ ಏಕಾಏಕಿ ದೂರು ಕೊಟ್ಟಿರುವುದು ಸರಿಯಲ್ಲ. ಇದರಿಂದ ನನ್ನ ಇಮೇಜ್ ಹಾಳು ಮಾಡುವ ಕೆಲಸ ಮಾಡಲಾಗಿದೆ ಎಂದು ಸಚಿವ ಶ್ರೀರಾಮುಲು ಅಸಮಾಧಾನ ಹೊರಹಾಕಿದ್ದಾರೆ.

    ಸಿಎಂ ಅವರ ಈ ನಡೆಯಿಂದ ನನ್ನ ಹೆಸರು ಹಾಳಾಗಿದೆ. ನನ್ನ ಹೆಸರು ಹಾಳು ಮಾಡೊದಕ್ಕೆ ಕಾಯ್ತಾ ಇದ್ದರು. ಈಗಾಗಲೇ ಸಾಕಷ್ಟು ಹೆಸರು ಹಾಳು ಮಾಡಿದ್ದಾರೆ. ರಾಜಣ್ಣ ತಪ್ಪು ಮಾಡುತ್ತಿದ್ದಾನೆ ಅಂದ್ರೆ ನನ್ನ ಬಳಿ ಹೇಳಬಹುದಿತ್ತು. ನಾನು ಅವನ ಮೇಲೆ ಕ್ರಮ ಕೈಗೊಳ್ತಿದ್ದೆ. ಅದು ಬಿಟ್ಟು ವಿಜಯೇಂದ್ರ ಏಕಾಏಕಿ ದೂರು ಕೊಟ್ಟಿರುವ ಬಗ್ಗೆ ರಾಮುಲು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ:ಸಚಿವ ರಾಮುಲು ಪಿಎ ರಾಜಣ್ಣ ಅರೆಸ್ಟ್

    ಈ ಆರೋಪದಿಂದಾಗಿ ನನ್ನ ಇಮೇಜ್ ಹಾಳು ಮಾಡುವ ಕೆಲಸ ಮಾಡಲಾಗಿದೆ. ಇದರಲ್ಲಿ ನನ್ನ ತೇಜೋವಧೆಗೆ ಇಳಿದಿದ್ದಾರೆ ಅನಿಸುತ್ತಿದೆ. ನನ್ನ ಆಪ್ತ ನನ್ನ ಆಪ್ತ ಅಂತಾ ಬಹಿರಂಗವಾಗಿ ನನ್ನ ಹೆಸರು ಡ್ಯಾಮೇಜ್ ಆಗುತ್ತಿದೆ. ನಾನು ವಿಜಯೇಂದ್ರ ಮತ್ತು ಸಿಎಂ ಜೊತೆ ನಾನು ಈ ಕುರಿತು ಮಾತನಾಡುತ್ತೇನೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಈ ಕುರಿತು ಇನ್ನೇನು ಮಾತನಾಡುವುದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಶ್ರೀರಾಮುಲು ಆಪ್ತ ಬಂಧನ – ವಿಜಯೇಂದ್ರ ಮೊದಲ ಪ್ರತಿಕ್ರಿಯೆ

  • ಸಚಿವ ರಾಮುಲು ಪಿಎ ರಾಜಣ್ಣ ಅರೆಸ್ಟ್

    ಸಚಿವ ರಾಮುಲು ಪಿಎ ರಾಜಣ್ಣ ಅರೆಸ್ಟ್

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೆಸರೇಳಿಕೊಂಡು ಹಣ ವಸೂಲಿ ಆರೋಪದಲ್ಲಿ ಸಚಿವ ಶ್ರೀರಾಮುಲು ಪಿಎ ಅರೆಸ್ಟ್ ಆಗಿದ್ದಾರೆ.

    ಸ್ವತಃ ವಿಜಯೇಂದ್ರ ದೂರು ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಶ್ರೀರಾಮುಲು ಮನೆಯಲ್ಲೇ ಆರೋಪಿ ರಾಜಣ್ಣನನ್ನ ವಶಕ್ಕೆ ಪಡೆದಿದ್ದಾರೆ. ಕೆಲಸ ಕೊಡಿಸ್ತೀನಿ, ವರ್ಗಾವಣೆ ಮಾಡಿಸ್ತೀನಿ ಅಂತ ಕೋಟ್ಯಂತರ ರೂಪಾಯಿ ಹಣ ವಸೂಲಿ ಮಾಡಿರೋ ಆರೋಪ ಕೇಳಿ ಬಂದಿದೆ.

    ರಾಜಣ್ಣ 8 ವರ್ಷದಿಂದ ರಾಮುಲು ಬಳಿ ಕೆಲಸ ಮಾಡ್ತಿದ್ದಾರೆ. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು 20ಕ್ಕೂ ಹೆಚ್ಚು ಆಡಿಯೋ ವಶಕ್ಕೆ ಪಡೆದಿದ್ದಾರೆ. ಪ್ರತಿಯೊಂದು ಆಡಿಯೋದಲ್ಲಿ ಸಿಎಂ ಹೆಸರು ಉಲ್ಲೇಖ ಮಾಡಿರೋದು ಪತ್ತೆಯಾಗಿದೆ. ನಿನ್ನೆಯಿಂದ ಆರೋಪಿಯನ್ನು ಟ್ರೇಸ್ ಮಾಡ್ತಿದ್ದ ಪೊಲೀಸರು ಇಂದು ಬಂಧಿಸಿದ್ದಾರೆ.

    ಇತ್ತ ರಾಮುಲು ಬೆಂಬಲಿಗರು ಕಿಡ್ನಾಪ್ ಅಂತ ಹೈಡ್ರಾಮಾ ಕ್ರಿಯೇಟ್ ಮಾಡಿದ್ದಾರೆ. ಇದನ್ನೂ ಓದಿ: ಮಗುವಿನ ಗಂಟಲಲ್ಲಿ ಸಿಲುಕಿದ್ದ ಡಬ್ಬಿ ಹೊರತೆಗೆದ ವೈದ್ಯರು

  • ಜೆಡಿಎಸ್ ತೊರೆಯುವ ಸುಳಿವು ನೀಡಿದ ಗುಬ್ಬಿ ಶಾಸಕ ಶ್ರೀನಿವಾಸ್

    ಜೆಡಿಎಸ್ ತೊರೆಯುವ ಸುಳಿವು ನೀಡಿದ ಗುಬ್ಬಿ ಶಾಸಕ ಶ್ರೀನಿವಾಸ್

    – ತೆನೆ ‘ಹೊರೆ’ ಇಳಿಸಿ ‘ಕೈ’ ಹಿಡಿತಾರಾ?

    ತುಮಕೂರು: ಗುಬ್ಬಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ತೆನೆ ಹೊರೆಯನ್ನ ಇಳಿಸುವ ಸುಳಿವು ನೀಡಿದ್ದಾರೆ. ಒಂದು ಜೆಡಿಎಸ್ ಮುಖಂಡರು ಬಿಜೆಪಿ ಜೊತೆಗೆ ಹೋದ್ರೆ ನೂರಕ್ಕೆ ನೂರರಷ್ಟು ಜನತಾದಳದಲ್ಲಿರಲ್ಲ ಎಂದು ಹೇಳಿದ್ದಾರೆ.

    ನಾನು ಅಧಿಕಾರದ ಹಿಂದೆ ಹೋಗಿದ್ರೆ ತುಮಕೂರು ಜಿಲ್ಲೆಯ ಉಸ್ತುವಾರಿ ಆಗಿರುತ್ತಿದ್ದೆ. ನಾನು ವಾಮ ಮಾರ್ಗದಲ್ಲಿ ರಾಜಕಾರಣ ಮಾಡುವ ವ್ಯಕ್ತಿಯಲ್ಲ. ಜೆಡಿಎಸ್ ನಲ್ಲಿಯ ಕೆಲವರು ಬಿಜೆಪಿ ಜೊತೆ ಹೋಗುವ ಬಗ್ಗೆ ಮಾತನಾಡಿದ್ರೆ, ಇನ್ನು ಕೆಲವರು ಬೇಡ ಅಂತಿದ್ದಾರೆ. ಕುಮಾರಸ್ವಾಮಿ ಬಿಜೆಪಿ ಹೋಗುವ ನಿರ್ಧಾರವನ್ನು ನಮ್ಮದೇ ಪಕ್ಷದ ಕೆಲ ಶಾಸಕರು ವಿರೋಧ ಮಾಡುತ್ತಾರೆ. ಒಂದು ವೇಳೆ ನಾನು ಪಕ್ಷ ತೊರೆದ್ರೆ ಕುಮಾರಸ್ವಾಮಿ ಅವರು ತಲೆ ಕೆಡಿಸಿಕೊಳ್ಳಲ್ಲ. ಬಿಜೆಪಿ ಜೊತೆಗಿನ ಸ್ನೇಹದ ಬಗ್ಗೆ ಕೆಲ ಶಾಸಕರು ನನ್ನೊಂದಿಗೆ ಚರ್ಚೆ ನಡೆಸಿದ್ದಾರೆ ಎಂದು ತಿಳಿಸಿದರು.

    ಇದೇ ವೇಳೆ ಕಾಂಗ್ರೆಸ್ ಮುಖಂಡ ರಾಜಣ್ಣ ಭೇಟಿಗೆ ಪ್ರತಿಕ್ರಿಯಿಸಿದ ಶಾಸಕರು, ಅವರು ಹಿರಿಯ ಮುಖಂಡರು. ರಾಜಣ್ಣ ಜೊತೆಗೆ ತುಂಬಾ ದಿನಗಳಿಂದ ಒಡನಾಟವಿದ್ದು, ಹಾಗಾಗಿ ಅವರ ಮನೆಗೆ ಬಂದಿದ್ದೇನೆ. ಕಾಂಗ್ರೆಸ್ ನಾಯಕರು ಯಾರು ನನ್ನನ್ನು ಸಂಪರ್ಕಿಸಿಲ್ಲ. ಸದ್ಯಕ್ಕೆ ನಾನು ಜೆಡಿಎಸ್ ಶಾಸಕನಾಗಿದ್ದು, ಪಕ್ಷ ಬಿಟ್ಟು ಹೋಗಲ್ಲ ಎಂದು ಸ್ಪಷ್ಟಪಡಿಸಿದರು.

    ನನಗೆ ರಾಜಕೀಯ ಬೇಸರವಾಗಿದ್ದು, ಪ್ರಸ್ತುತ ರಾಜಕೀಯ ವಿದ್ಯಾಮಾನಗಳ ಬಗ್ಗೆ ಅಸಮಾಧಾನ ಇದೆ. ಪ್ರಸ್ತುತ ರಾಜಕೀಯ ವ್ಯವಸ್ಥೆ ಅಸಹ್ಯಪಡುವಂತಿದ್ದು, ಹೀಗಾಗಿ ಎಲ್ಲೂ ಹೋಗದೇ ತೋಟದಲ್ಲಿದ್ದೇನೆ. ಬಿಜೆಪಿ ಜೊತೆಗಿನ ಸಖ್ಯ ಬಗ್ಗೆ ನೀವು ಕುಮಾರಸ್ವಾಮಿ ಅವರನ್ನ ಕೇಳಬೇಕು. ನಾನು ಜೆಡಿಎಸ್ ಶಾಸಕ, ಇಲ್ಲಿಯೇ ಇದ್ದೇನೆ. ಕುಮಾರಸ್ವಾಮಿ ಬಿಜೆಪಿ ಜೊತೆ ಹೋದ್ರೆ ಅದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಅಸಮಾಧಾನ ಹೊರ ಹಾಕಿದರು.

    ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿರುವುದು ಇಡೀ ದೇಶಕ್ಕೆ ಗೊತ್ತಿದೆ. ಸಿದ್ದರಾಮಯ್ಯನವರಿಗೆ ಈಗ ಜ್ಞಾನೋದಯವಾದಂತಿದೆ. ಸಿದ್ದರಾಮಯ್ಯರನ್ನ ಸೋಲಿಸಬೇಕೆಂದು ಬೆಂಬಲ ನೀಡಿದ್ದು ನಿಜ. ಅಕ್ಷರಶಃ ಸತ್ಯ, ಅದೊಂದೇ ಕ್ಷೇತ್ರವಲ್ಲ ಸುಮಾರು ಕ್ಷೇತ್ರಗಳಲ್ಲಿ ಬಿಜೆಪಿ ನಾವು ಒಡಂಬಡಿಕೆ ಮಾಡಿಕೊಂಡು ಚುನಾವಣೆಗೆ ಹೋಗಿದ್ದೀವಿ. ಇದು ಎಲ್ಲರಿಗೂ ಗೊತ್ತಿರುವ ವಿಚಾರ ಇದರಲ್ಲಿ ಹೊಸದೇನಿದೆ ಎಂದು ಎಸ್.ಆರ್.ಶ್ರೀನಿವಾಸ್ ಪ್ರಶ್ನೆ ಮಾಡಿದ್ದಾರೆ.

  • ಯಾರು ಇದ್ರೆಷ್ಟು ಹೋದರೆಷ್ಟು ನಾನಂತು ಸಿದ್ದರಾಮಯ್ಯ ಪರ: ರಾಜಣ್ಣ

    ಯಾರು ಇದ್ರೆಷ್ಟು ಹೋದರೆಷ್ಟು ನಾನಂತು ಸಿದ್ದರಾಮಯ್ಯ ಪರ: ರಾಜಣ್ಣ

    ತುಮಕೂರು: ನಾನು ಮಾಜಿ ಸಿಎಂ ಸಿದ್ದರಾಮಯ್ಯರ ಪರವಾಗಿರುತ್ತೇನೆ. ಅವರು ಪವರ್ ಫುಲ್ ಆಗಿದ್ದು, ಯಾರು ಇದ್ದರೆಷ್ಟು ಹೋದರೆಷ್ಟು ನಾನಂತು ಸಿದ್ದರಾಮಯ್ಯರ ಪರವಾಗಿರುತ್ತೆನೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಮಾಜಿ ಸಿಎಂ ಪರ ಬ್ಯಾಂಟಿಂಗ್ ಮಾಡಿದ್ದಾರೆ.

    ಶಿರಾದಲ್ಲಿ ಪರಿಶಿಷ್ಟ ಪಂಗಡಗಳ 7.5% ಮೀಸಲಾತಿ ಒತ್ತಾಯಿಸಿ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ರಾಜಣ್ಣ, 24 ರಂದು ಬೆಂಗಳೂರಿನಲ್ಲಿ ನಡೆಯುವ ಸಮಾವೇಶವನ್ನು ನಾವು ಪ್ರತಿಭಟನೆ ಎಂದು ಪರಿಗಣಿಸುವುದಿಲ್ಲ. ಅದೊಂದು ಜನಾಂದೋಲನವಾಗಿದೆ. ಜನರ ಬೇಡಿಕೆಯನ್ನು ಈಡೇರಿಸಲು ಅಂದಿನ ದಿನ ಸಮಾವೇಶ ನಡೆಸುತ್ತೇವೆ ಎಂದರು.

    ನಾನು ಸಿದ್ದರಾಮಯ್ಯರ ಪರ, ಅವರು ಪವರ್ ಫುಲ್ ಆಗಿದ್ದಾರೆ. ಯಾರು ಇದ್ದರೆಷ್ಟು ಹೋದರೆಷ್ಟು ನಾನಂತು ಸಿದ್ದರಾಮಯ್ಯರ ಪರವಾಗಿರುತ್ತೇನೆ ಎಂದು ಸಿದ್ದರಾಮಯ್ಯ ಪರ ಕೆ.ಎನ್.ರಾಜಣ್ಣ ಬ್ಯಾಂಟಿಂಗ್ ಮಾಡಿದ್ದಾರೆ. ಕುಮಾರಸ್ವಾಮಿ ಇರಬಹುದು ಇನ್ನೊಬ್ಬರು ಬರಬಹುದು, ಹೋಗಬಹುದು. ಆದರೆ ಸರ್ಕಾರ ಇದ್ದೆ ಇರುತ್ತದೆ. ಅದೊಂದು ನಿರಂತರವಾದ ವ್ಯವಸ್ಥೆಯಾಗಿದೆ. ಯಾರು ಅಧಿಕಾರದಲ್ಲಿರುತ್ತಾರೋ ಅವರು ನ್ಯಾಯಯುತವಾದ ಬೇಡಿಕೆಗೆ ಸ್ಪಂದಿಸುತ್ತಾರೆ ಎಂದು ರಾಜಣ್ಣ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ ರಾಜಣ್ಣ ಹಲವು ಬಾರಿ ಸರ್ಕಾರ ಬೀಳಲಿದೆ ಎಂದು ಗಡುವು ಕೊಟ್ಟಿದ್ದರು. ಆದರೆ ಡಿಸಿಎಂ ಜಿ.ಪರಮೇಶ್ವರ್ ಹಾಗೂ ರಾಜಣ್ಣರ ನಡುವಿನ ಮುಸುಕಿನ ಗುದ್ದಾಟದ ಬಳಿಕ ಕೆ.ಎನ್.ರಾಜಣ್ಣ ಸಾಪ್ಟ್ ಆಗಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಯಾರಿಂದಲೂ ಬೀಳಿಸುವುದಕ್ಕೆ ಆಗಲ್ಲ, ಉಳಿಸುವುದಕ್ಕೂ ಆಗಲ್ಲ. ಇರುವುದಾದರೆ ಇರುತ್ತದೆ, ಬೀಳೋದಾದರೆ ಬೀಳತ್ತೆ ಎಂದು ರಾಜಣ್ಣ ಹೇಳಿದ್ದಾರೆ.

     

  • ಗೌಡರ ಸೋಲು- ಪರಮೇಶ್ವರ್ ಜಿಲ್ಲೆಯಲ್ಲಿ `ಕೈ’ಗೆ ಜೆಡಿಎಸ್ ಟಕ್ಕರ್

    ಗೌಡರ ಸೋಲು- ಪರಮೇಶ್ವರ್ ಜಿಲ್ಲೆಯಲ್ಲಿ `ಕೈ’ಗೆ ಜೆಡಿಎಸ್ ಟಕ್ಕರ್

    ತುಮಕೂರು: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡರ ಸೋಲಿನ ಬಳಿಕ ತುಮಕೂರು ಜಿಲ್ಲೆಯ ಮೈತ್ರಿ ಮುಖಂಡರ ಕಲಹ ಅತಿರೇಕಕ್ಕೆ ತಲುಪುತ್ತಿದೆ.

    ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್ ರಾಜಣ್ಣ ಹಾಗೂ ತುಮಕೂರು ಗ್ರಾಮಾಂತರ ಜೆಡಿಎಸ್ ಶಾಸಕ ಗೌರಿಶಂಕರ್ ರ ನಡುವಿನ ಕಿತ್ತಾಟ ಜೋರಾಗಿದೆ. ಗ್ರಾಮಾಂತರದಲ್ಲಿ ಬಿಜೆಪಿ ಲೀಡ್ ಬರಲು ರಾಜಣ್ಣರ ಕುತಂತ್ರವೇ ಕಾರಣ ಎಂದು ಶಾಸಕ ಗೌರಿಶಂಕರ್ ಆರೋಪಿಸಿದರು. ಅಲ್ಲದೆ ರಾಜಣ್ಣರೇ ಈಗಾಗಲೇ ನೀವು ಸೇರಿದ್ದು, ಮತ್ತೇ ಮತ್ತೇ ನಿಮ್ಮನ್ನ ಮಧುಗಿರಿ ಕ್ಷೇತ್ರದಿಂದ ಸೋಲಿಸುವ ತಾಕತ್ತು ನಮಗಿದೆ ಎಂದು ಗೌರಿಶಂಕರ್ ಸವಾಲು ಹಾಕಿದರು.

    ಈ ಹಿನ್ನೆಲೆಯಲ್ಲಿ ಗೌರಿಶಂಕರ್ ಮಧುಗಿರಿ ದಂಡಿನ ಮಾರಮ್ಮಗೆ ಪೂಜೆ ಸಲ್ಲಿಸುವ ನೆಪದಲ್ಲಿ ಮಧುಗಿರಿಗೆ ಎಂಟ್ರಿ ಕೊಟ್ಟಿದ್ದಾರೆ. ರಾಜಣ್ಣರನ್ನ ಮುಂದಿನ ಚುನಾವಣೆಯಲ್ಲಿ ಮತ್ತೆ ಸೋಲಿಸಲು ಈಗಿನಿಂದಲೇ ರಣತಂತ್ರ ರೂಪಿಸುತ್ತಿದ್ದಾರೆ.

    ನೂರಾರು ಜನ ಬೆಂಬಲಿಗರು, ಸಾವಿರಾರು ಜನ ಕಾರ್ಯಕರ್ತರೊಂದಿಗೆ ಮಧುಗಿರಿಗೆ ಭೇಟಿ ಕೊಟ್ಟು ಶಾಸಕ ಗೌರಿ ಶಂಕರ್ ಶಕ್ತಿಪ್ರದರ್ಶನ ಮಾಡಿದ್ದಾರೆ. ಗೌರಿಶಂಕರ್ ಅವರ ಈ ನಡೆ ಮತ್ತಷ್ಟು ರಾಜಕೀಯ ಬೆಳವಣಿಗೆಗೆ ಕಾರಣವಾಗಲಿದೆ.

  • ಜಿಲ್ಲಾ ನಾಯಕರಿಗೆ ಕೋಟಿ-ಕೋಟಿ, ರಾಜ್ಯ ನಾಯಕರಿಗೆ ಇನ್ನೆಷ್ಟೋ: ಸಿ.ಟಿ ರವಿ

    ಜಿಲ್ಲಾ ನಾಯಕರಿಗೆ ಕೋಟಿ-ಕೋಟಿ, ರಾಜ್ಯ ನಾಯಕರಿಗೆ ಇನ್ನೆಷ್ಟೋ: ಸಿ.ಟಿ ರವಿ

    ಚಿಕ್ಕಮಗಳೂರು: ಜಿಲ್ಲಾ ನಾಯಕರಿಗೆ ಕೋಟಿ-ಕೋಟಿ ಕೊಟ್ಟು ಸೆಟ್ಲ್ ಮಾಡಿದ್ದಾರಂದರೆ, ರಾಜ್ಯ ಮಟ್ಟದ ನಾಯಕರಿಗೆ ಇನ್ನು ಹೆಚ್ಚಾಗಿ ಕೊಟ್ಟಿರಬಹುದು. ಈ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಶಾಸಕ ಸಿ.ಟಿ ರವಿ ಆಗ್ರಹಿಸಿದ್ದಾರೆ.

    ನಾಮಪತ್ರ ಹಿಂಪಡೆಯಲು ರಾಜಣ್ಣ ಹಾಗೂ ಮುದ್ದುಹನುಮೇಗೌಡ ಮೂರುವರೆ ಕೋಟಿ ಹಣ ಪಡೆದಿದ್ದಾರೆಂಬ ಆಡಿಯೋ ವೈರಲ್‍ಗೆ ಪ್ರತಿಕ್ರಿಯೆ ನೀಡಿದ ಅವರು, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸ್ಪರ್ಧಿಸಿರುವ ಕ್ಷೇತ್ರದಲ್ಲಿ ಈ ಪ್ರಮಾಣದಲ್ಲಿ ಹಣದ ಅವ್ಯವಹಾರ ನಡೆಯುತ್ತದೆ ಅಂದರೆ, ಪಾರದರ್ಶಕ ಚುನಾವಣೆ ಎಲ್ಲಿ ನಡೆದಿದೆ ಎಂದು ಮೈತ್ರಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಯಾರು ಯಾರು ಯಾವಯಾವ ಹೇಳಿಕೆಗಳನ್ನು ಕೊಡೋದಕ್ಕೆ ಎಷ್ಟೆಷ್ಟು ಹಣ ಪಡೆದಿದ್ದಾರೆ ಅನ್ನೋದು ಹೊರಬರಬೇಕಿದೆ. ದೇವೇಗೌಡರು ಜಾತಿ, ಹಣ ಹಾಗೂ ಅಧಿಕಾರದ ಬಲದ ಮೇಲೆ ಎಲ್ಲವನ್ನೂ ಮ್ಯಾನೇಜ್ ಮಾಡಬಹುದು ಎಂದು ಹೊರಟಿದ್ದಾರೆಂಬುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ಹೇಳಿದರು.

    ಹಾಸನ, ತುಮಕೂರು, ಮಂಡ್ಯ ಸೇರಿ ಬೇರೆ ಕಡೆಯೂ ದೊಡ್ಡ ಪ್ರಮಾಣದ ಹಣದ ವ್ಯವಹಾರ ನಡೆದಿದೆ ಅನ್ನಿಸುತ್ತದೆ. ರಾಜ್ಯ ಸಮ್ಮಿಶ್ರ ಸರ್ಕಾರ ವಿಶ್ವಾಸ ಹಾಗೂ ಅಜೆಂಡಾ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಹಣ ಮತ್ತು ಅಧಿಕಾರದ ದುರ್ಬಳಕೆಗೆ ಕಾರ್ಯನಿರ್ವಹಿಸುತ್ತಿದೆ ಅನ್ನೋದು ಕಾಂಗ್ರೆಸ್‍ನ ಸೋಶಿಯಲ್ ಮಿಡಿಯಾ ಇನ್‍ಚಾರ್ಜ್ ಮಾತನಾಡಿರುವ ಮಾತಿನಿಂದ ವ್ಯಕ್ತವಾಗ್ತಿದೆ ಎಂದರು.

    ಈ ಆಡಿಯೋ ಸಂಬಂಧ ಸಮಗ್ರ ತನಿಖೆಯಾಗಿ ಹಣ ಎಲ್ಲಿಂದ ಬಂತು, ಯಾರ್ಯಾರು ತೆಗೆದುಕೊಂಡರು, ಕೊಟ್ಟೋರು ಯಾರು ಅನ್ನೋದು ಸಮಗ್ರ ತನಿಕೆಯಾಗಬೇಕು. ಕಾಂಗ್ರೆಸ್‍ನೊಳಗೆ ವಿಚಾರಿಸುತ್ತೇನೆ. ನೋಡುತ್ತೇನೆ, ನೋಟಿಸ್ ಕೊಡುತ್ತೇನೆ ಅನ್ನೋದಕ್ಕೆ ಇದು ಕಾಂಗ್ರೆಸ್‍ನೊಳಗಿನದ್ದಲ್ಲ. ಪ್ರಜಾಪ್ರಭುತ್ವವನ್ನ ಕಗ್ಗೊಲೆ ಮಾಡುವಂತ ಕೃತ್ಯ ಇದಾಗಿದೆ. ಹೀಗಾಗಿ ಈ ಬಗ್ಗೆ ರಾಜ್ಯದ ಜನಕ್ಕೆ ಉತ್ತರಿಸಬೇಕಾಗಿದೆ. ಹಣ ಕೊಡೋದು ತೆಗೆದುಕೊಳ್ಳೋದು ಎರಡೂ ಲಂಚದ ವ್ಯಾಪ್ತಿಯಲ್ಲಿ ಬರುತ್ತದೆ. ಆ ಇಬ್ಬರ ಮೇಲೂ ಲಂಚ ನಿಗ್ರಹ ಕಾಯ್ದೆ ಮೂಲಕ ಕ್ರಮ ಕೈಗೊಳ್ಳಬೇಕು ಎಂದು ಶಾಸಕರು ಇದೇ ವೇಳೆ ಆಗ್ರಹಿಸಿದರು.

  • ಎಚ್‍ಡಿಡಿಗಾಗಿ ನಾಮಪತ್ರ ವಾಪಸ್ ಪಡೆದ ಮುದ್ದಹನುಮೇಗೌಡ, ಕೆ.ಎನ್.ರಾಜಣ್ಣ

    ಎಚ್‍ಡಿಡಿಗಾಗಿ ನಾಮಪತ್ರ ವಾಪಸ್ ಪಡೆದ ಮುದ್ದಹನುಮೇಗೌಡ, ಕೆ.ಎನ್.ರಾಜಣ್ಣ

    ಬೆಂಗಳೂರು: ಒಲ್ಲದ ಮನಸ್ಸಿನಿಂದ ಕೊನೆಗೂ ಕಾಂಗ್ರೆಸ್ಸಿನ ಬಂಡಾಯ ಅಭ್ಯರ್ಥಿಗಳಾದ ಮುದ್ದಹನುಮೇಗೌಡ ಮತ್ತು ಕೆ.ಎನ್.ರಾಜಣ್ಣ ನಾಮಪತ್ರವನ್ನು ವಾಪಸ್ ಪಡೆದುಕೊಂಡಿದ್ದಾರೆ.

    ತಮ್ಮ ನಾಮಪತ್ರವನ್ನು ರಾಜಣ್ಣ ಅವರೇ ವಾಪಸ್ ಪಡೆದುಕೊಂಡರೆ ಮುದ್ದಹನುಮೇಗೌಡ ಪರವಾಗಿ ಏಜೆಂಟ್ ರಾಯಸಂದ್ರ ರವಿಕುಮಾರ್ ಆಗಮಿಸಿ ನಾಮಪತ್ರವನ್ನು ವಾಪಸ್ ಪಡೆದುಕೊಂಡರು.

    ಇಬ್ಬರು ನಾಮಪತ್ರವನ್ನು ಹಿಂಪಡೆದ ಪರಿಣಾಮ ತುಮಕೂರಿನಲ್ಲಿ ಬಂಡಾಯ ಶಮನವಾಗಿದ್ದು, ಮಾಜಿ ಪ್ರಧಾನಿ ದೇವೇಗೌಡರ ಹಾದಿ ಸುಗಮಕ್ಕೆ ರಾಜ್ಯ ನಾಯಕರು ನಡೆಸಿದ ತಂತ್ರ ಯಶಸ್ವಿಯಾಗಿದೆ.

    ನಾಮಪತ್ರ ವಾಪಸ್ ಪಡೆದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎನ್ ರಾಜಣ್ಣ, ನಾನು ನಾಮಪತ್ರ ಹಿಂಪಡೆದಿದ್ದೇನೆ. ನನಗೆ ಯಾವುದೇ ಬೇಡಿಕೆಗಳಿಲ್ಲ. ಪಕ್ಷದ ಹೈಕಮಾಂಡ್ ಸೂಚನೆ ಮೇರೆಗೆ ಕೆಲಸ ಮಾಡುತ್ತೇನೆ. ಮುದ್ದಹನುಮೇಗೌಡರಿಗೆ ನನ್ನ ಬೆಂಬಲವಿದೆ. ಹೀಗಾಗಿ ಪಕ್ಷದ ಹೈಕಮಾಂಡ್ ನಿರ್ದೇಶನದಂತೆ ಕೆಲಸ ಮಾಡುತ್ತೇವೆ. ಹೈಕಮಾಂಡ್ ಆದೇಶದಂತೆ ಇಡೀ ಜಿಲ್ಲೆಯಲ್ಲಿ ದೇವೇಗೌಡರ ಪರವಾಗಿ ಕೆಲಸ ಮಾಡುತ್ತೇವೆ. ತುಮಕೂರು ಜಿಲ್ಲೆಯನ್ನು ‘ದೇವೇಗೌಡರಮಯ’ ಜಿಲ್ಲೆಯನ್ನಾಗಿ ಮಾಡುತ್ತೇವೆ ಎಂದು ವ್ಯಂಗ್ಯವಾಗಿ ಹೇಳುವ ಮೂಲಕ ತಮ್ಮ ಅಸಮಾಧನವನ್ನು ಬಹಿರಂಗಪಡಿಸಿದರು.

    ಜಿಲ್ಲಾ ಕಾಂಗ್ರೆಸ್ ನಲ್ಲಿ ಎರಡು ಬಣ ಇದೆ. ಒಂದು ಬಣ ಜಿ.ಪರಮೇಶ್ವರ್ ಅವರನ್ನು ಮುಖ್ಯಮಂತ್ರಿ ಮಾಡಲು ಹೊರಟಿದೆ. ಇನ್ನೊಂದು ಬಣ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಿ ರಾಹುಲ್ ಗಾಂಧಿಯನ್ನು ಪ್ರಧಾನಿ ಮಾಡಲು ಹೊರಟಿದೆ. ನಾನು ಸಿದ್ದರಾಮಯ್ಯರನ್ನ ಮುಖ್ಯಮಂತ್ರಿ ಮತ್ತು ರಾಹುಲ್ ಗಾಂಧಿ ಪ್ರಧಾನಿ ಮಾಡುವ ಬಣವಾಗಿದ್ದೇನೆ ಎಂದು ತಿಳಿಸಿದರು.

    ಸಿದ್ದರಾಮಯ್ಯರ ಅವರು ಬಡವರ ಪರ ಕೆಲಸ ಮಾಡುತ್ತಾರೆ. ಜಿ.ಪರಮೇಶ್ವರ್ ಬಡವರ ಪರ ಕೆಲಸ ಮಾಡಲ್ಲ. ರಾಜ್ಯದಲ್ಲಿ ಯಾರು ರೈತರ ಪರ ಕೆಲಸ ಮಾಡುತ್ತಾರೋ ಅವರೇ ನಮ್ಮ ನಾಯಕರು. ಡಿಸಿಎಂ ಆಗಿ ಆರು ತಿಂಗಳಾದರೂ ಬಡವರ ಪರ ಏನ್ ಮಾಡಿದ್ದಾರೆ ಎಂದು ರಾಜಣ್ಣ ಪ್ರಶ್ನೆ ಮಾಡುವ ಮೂಲಕ ಡಿಸಿಎಂ ಪರಂ ವಿರುದ್ಧ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದರು.

    ಹೈಕಮಾಂಡ್ ನಿರ್ದೇಶನದಂತೆ ನಾಮಪತ್ರ ವಾಪಸ್ ಪಡೆಯಲಾಗಿದೆ. ಪಕ್ಷದ ಉಳಿವಿಗಾಗಿ, ಪಕ್ಷವನ್ನ ನಂಬಿ ನಾಮಪತ್ರ ವಾಪಸ್ಸು ಹಿಂಪಡೆದಿದ್ದಾರೆ. ಮುದ್ದಹನುಮೇಗೌಡರನ್ನ ಚುನಾವಣೆಯಲ್ಲಿ ಮುಂಚೂಣಿಯಲ್ಲಿಟ್ಟುಕೊಂಡು ಸ್ಥಾನಮಾನ ನೀಡಬೇಕು. ಹಾಗಾದರೆ ಮಾತ್ರ ಕಾರ್ಯಕರ್ತರು ಮತ್ತು ನಾಯಕರು ಶ್ರಮಿಸುತ್ತಾರೆ. ಇಲ್ಲವಾದರೆ ಫಲಿತಾಂಶದ ಮೇಲೆ ಪರಿಣಾಮ ಬೀಳಲಿದೆ ಎಂದು ಮುದ್ದಹನುಮೇಗೌಡ ಬೆಂಬಲಿಗ ರಾಯಸಂಧ್ರ ರವಿ ಎಚ್ಚರಿಕೆ ಕೊಟ್ಟಿದ್ದಾರೆ.