Tag: rajanna

  • ಸೆಪ್ಟೆಂಬರ್ ಕ್ರಾಂತಿ ಸಪ್ಪೆಯಾದ್ರೂ ಕಾಂಗ್ರೆಸ್‌ನಲ್ಲಿ ಈಗ ಗೆರಿಲ್ಲಾ ವಾರ್‌

    ಸೆಪ್ಟೆಂಬರ್ ಕ್ರಾಂತಿ ಸಪ್ಪೆಯಾದ್ರೂ ಕಾಂಗ್ರೆಸ್‌ನಲ್ಲಿ ಈಗ ಗೆರಿಲ್ಲಾ ವಾರ್‌

    ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸೆಪ್ಟೆಂಬರ್ ಕ್ರಾಂತಿ ಸಪ್ಪೆಯಾಗಿದ್ದರೂ ಗೆರಿಲ್ಲಾ ವಾರ್ ಬಿಸಿ ಜೋರಾಗಿದೆ. ರಾಜಣ್ಣ ಆಂಡ್ ಸನ್ ಡಿಕೆಶಿ ವಿರುದ್ಧ ತಿರುಗಿಬಿದ್ದಿದ್ದು, ಸಿಎಂ ಗೇಮ್ ಅಸಲಿ ಆಟ ಚಾಲೂ ಆಗಿದೆ. ಕಾಂಗ್ರೆಸ್‌ನಲ್ಲಿ ಮತ್ತೊಂದು ಸುತ್ತಿನ ಪವರ್ ಗೇಮ್ ವಾರ್ ಶುರುವಾಗಿದೆ. ಅದರ ಭಾಗವಾಗಿಯೇ ಡಿಕೆಶಿ ವಿರುದ್ಧ ರಾಜಣ್ಣ (Rajanna), ರಾಜಣ್ಣ ಪುತ್ರ ರಾಜೇಂದ್ರ (Rajendra) ವಾಕ್ಸಮರಕ್ಕೆ ಇಳಿದಿದ್ದಾರೆ.

    ತಂದೆ, ಮಗನ ವಾಕ್ಸಮರಕ್ಕೆ ಡಿಕೆ‌ ಶಿವಕುಮಾರ್ (DK Shivakumar) ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದರೂ ಡಿಕೆಶಿ ಆಪ್ತ ಮಾಗಡಿ ಬಾಲಕೃಷ್ಣ (Magadi Balakrishna) ಗಂಭೀರವಾದ ಪ್ರತಿಕ್ರಿಯೆ ನೀಡಿ ತಿರುಗೇಟು ನೀಡುತ್ತಿದ್ದಾರೆ. ನಾವು ಸಿದ್ದರಾಮಯ್ಯ ಶಿಷ್ಯರೇ, ಬ್ರೈನ್ ಮ್ಯಾಪಿಂಗ್‌ಗೆ ನಾನು ರೆಡಿ – ರಾಜಣ್ಣ ವಿರುದ್ಧ ಮತ್ತೆ ಕಿಡಿಕಾರಿದ ಮಾಗಡಿ ಬಾಲಕೃಷ್ಣ  ಇದನ್ನೂ ಓದಿ:  ಏರುತ್ತಿದೆ ಚಿನ್ನದ ಬೆಲೆ – 2026ರ ಹೊತ್ತಿಗೆ 10 ಗ್ರಾಂಗೆ 1.25 ಲಕ್ಷಕ್ಕೆ ಏರಿಕೆ ಸಾಧ್ಯತೆ

    ಸಿಎಂ ಸ್ಥಾನಕ್ಕಾಗಿ ಬಿಜೆಪಿ ಕದ ತಟ್ಟುತ್ತಾರೆ ಎನ್ನುವ ಮೂಲಕ ಡಿಕೆಶಿ ವಿರುದ್ದ ರಾಜಣ್ಣ ನಿರ್ಣಾಯಕ ಯುದ್ಧ ಸಾರಲು ತಂತ್ರ ಹೆಣೆದಿದ್ದಾರೆ ಎನ್ನಲಾಗಿದೆ. ಡಿಕೆಶಿ ಸಿಎಂ ಆಗಲು ಬಿಜೆಪಿಗೆ ಹೋಗುತ್ತಾರೆ ಎನ್ನುವುದೇ ಎನ್ನುವುದೇ ಸದ್ಯಕ್ಕೆ ರಾಜಣ್ಣ ಪಾಲಿನ ಸೆಪ್ಟೆಂಬರ್ ಅಸ್ತ್ರ ಎನ್ನಲಾಗುತ್ತಿದೆ.  ಇದನ್ನೂ ಓದಿ: ನಾವು ಸಿದ್ದರಾಮಯ್ಯ ಶಿಷ್ಯರೇ, ಬ್ರೈನ್ ಮ್ಯಾಪಿಂಗ್‌ಗೆ ನಾನು ರೆಡಿ ರಾಜಣ್ಣ ವಿರುದ್ಧ ಮತ್ತೆ ಕಿಡಿಕಾರಿದ ಮಾಗಡಿ ಬಾಲಕೃಷ್ಣ

    ಡಿಕೆಶಿ ಆರ್‌ಎಸ್‌ಎಸ್‌ ಎಸ್ ಗೀತೆ ಹಾಡಿದ್ದು, ಸಾಫ್ಟ್ ಹಿಂದುತ್ವದ ಇಮೇಜ್ ಬಿಲ್ಡ್ ಆಗಿರುವುದು ಎಲ್ಲವೂ ಸದ್ಯಕ್ಕೆ ರಾಜಣ್ಣ ಪಾಲಿನ ರಾಜಕೀಯ ಅಸ್ತ್ರ. ಸೆಪ್ಟೆಂಬರ್ ಕ್ರಾಂತಿ ಅಂದ್ರೆ ಸಿಎಂ ಸ್ಥಾನಕ್ಕಾಗಿ ಡಿಕೆಶಿ ಬಿಜೆಪಿ ಬಾಗಿಲು ತಟ್ಟುತ್ತಾರೆ ಎಂಬ ಅಭಿಯಾನ ಜೋರಾಗಿಸುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

    ಸಿಎಂ, ಡಿಸಿಎಂ ಇಬ್ಬರದ್ದೂ ಕಾದು ನೋಡಿ ಬಡಿಯುವ ತಂತ್ರ ಆಗಿದ್ದು, ಇಬ್ಬರಿಂದಲೂ ರಹಸ್ಯ ಪ್ಲ್ಯಾನ್ ಜೋರಾಗಿದೆ. ಹಾಗಾಗಿ ಸೆಪ್ಟೆಂಬರ್ ಕ್ರಾಂತಿ ಮಾತುಗಳಲ್ಲಷ್ಟೇ , ರಾಜಕೀಯ ಕ್ರಾಂತಿ ಸಂಕ್ರಾಂತಿ ಬಳಿಕವಷ್ಟೇ ಎಂಬ ಮಾತುಗಳಿದ್ದು ಕೇಳಿಬಂದಿದೆ. ಅಲ್ಲಿ ತನಕ ಪವರ್ ಶೇರ್ ಗೆರಿಲ್ಲಾ ವಾರ್ ಯಾವ ಹಂತ ತಲುಪಲಿದೆ ಎನ್ನುವುದೇ ಸದ್ಯದ ಕುತೂಹಲ.

  • ರಾಜಣ್ಣಗೆ ಪರಮೇಶ್ವರ್‌ ನ್ಯಾಯ ಕೊಡಿಸೋ ಕೆಲ್ಸ ಮಾಡ್ತಾರೆ: ಡಿಕೆಶಿ

    ರಾಜಣ್ಣಗೆ ಪರಮೇಶ್ವರ್‌ ನ್ಯಾಯ ಕೊಡಿಸೋ ಕೆಲ್ಸ ಮಾಡ್ತಾರೆ: ಡಿಕೆಶಿ

    ಬೆಂಗಳೂರು: ಗೃಹ ಸಚಿವ ಪರಮೇಶ್ವರ್‌ (Parameshwar) ಅವರು ರಾಜಣ್ಣ (Rajanna) ಅವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಹೇಳಿದ್ದಾರೆ.

    ರಾಜಣ್ಣ ನೀಡಿದ ಮನವಿಗೆ ಸಂಬಂಧಿಸಿದಂತೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಗೃಹ ಸಚಿವರು ನಮ್ಮ ಪಕ್ಷದ ಹಿರಿಯ ಸಚಿವರು, ಪಕ್ಷದ ಅಧ್ಯಕ್ಷರು ಸಹ ಆಗಿದ್ದಾರೆ. ಅವರು ಸದನದಲ್ಲಿ ತನಿಖೆ ಮಾಡುತ್ತೇವೆ ಎಂದಿದ್ದರು. ಸಿಎಂ ಸಿದ್ದರಾಮಯ್ಯನವರು (CM Siddaramaiah) ಸಹ ತನಿಖೆ ನಡೆಸುವುದಾಗಿ ಹೇಳಿದ್ದರು ಎಂದರು. ಇದನ್ನೂ ಓದಿ: ಹನಿಟ್ರ್ಯಾಪ್‌ ಕೇಸ್‌ – ಪರಮೇಶ್ವರ್‌ಗೆ ದೂರು ನೀಡದೇ ಮನವಿ ಕೊಟ್ಟ ರಾಜಣ್ಣ

    ಯಾರಿಗೆಲ್ಲ ಅನ್ಯಾಯ ಆಗಿದೆಯೋ ಅವರಿಗೆ ನ್ಯಾಯ ಕೊಡಿಸೋ‌ ಕೆಲಸ ಪರಮೇಶ್ವರ್ ಮಾಡುತ್ತಾರೆ ಎಂದು ತಿಳಿಸಿದರು.

    ಹನಿಟ್ರ್ಯಾಪ್ ಪ್ರಕರಣ ಪಕ್ಷಕ್ಕೆ ಮುಜುಗರ ತಂದಿದೆಯಾ ಎಂಬ ಪ್ರಶ್ನೆಗೆ, ಇದನ್ನು ನನಗೆ ಕೇಳಬೇಡಿ. ನೀವು ಯಾರನ್ನು ಕೇಳಬೇಕೋ ಎಂದುಕೊಂಡಿದ್ದೀರೋ ಅವರನ್ನು ಕೇಳಿ ಎನ್ನುವ ಮೂಲಕ ಡಿಕೆಶಿ ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು.

  • ಹನಿಟ್ರ್ಯಾಪ್‌ ಕೇಸ್‌ – ಪರಮೇಶ್ವರ್‌ಗೆ ದೂರು ನೀಡದೇ ಮನವಿ ಕೊಟ್ಟ ರಾಜಣ್ಣ

    ಹನಿಟ್ರ್ಯಾಪ್‌ ಕೇಸ್‌ – ಪರಮೇಶ್ವರ್‌ಗೆ ದೂರು ನೀಡದೇ ಮನವಿ ಕೊಟ್ಟ ರಾಜಣ್ಣ

    ಬೆಂಗಳೂರು: ಹನಿಟ್ರ್ಯಾಪ್‌ (HoneyTrap) ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ರಾಜಣ್ಣ (Rajanna)  ಅವರು ಇಂದು ಗೃಹ ಸಚಿವ ಪರಮೇಶ್ವರ್ (Parameshwar) ಅವರಿಗೆ ಮನವಿ ನೀಡಿದ್ದಾರೆ.

    ಇಂದು ಸಂಜೆ ಸದಾಶಿವನಗರದಲ್ಲಿರುವ  ಪರಮೇಶ್ವರ್‌ ಅವರ ನಿವಾಸಕ್ಕೆ ತೆರಳಿ ಈ ವಿಚಾರದ ಬಗ್ಗೆ  ಚರ್ಚೆ ನಡೆಸಿದರು.  ಪ್ರಕರಣದ ಕುರಿತು ಉನ್ನತಮಟ್ಟದ ತನಿಖೆ ನಡೆಸುವಂತೆ ರಾಜಣ್ಣ ಮನವಿ ಸಲ್ಲಿಸಿದರು.

    ಮನವಿ ಸ್ವೀಕರಿಸಿದ  ಬಳಿಕ ಪರಮೇಶ್ವರ್‌ ಮಾತನಾಡಿ, ರಾಜಣ್ಣ ಅವರು ಇಂದು ಮನವಿ ನೀಡಿದ್ದಾರೆ. ಮುಖ್ಯಮಂತ್ರಿಗಳ ಜೊತೆ ಚರ್ಚೆ ನಡೆಸಿ ಮುಂದೆ ಯಾವ ರೀತಿ ತನಿಖೆ ನಡೆಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಹೇಳಿದರು.

    ಈ ವಿಚಾರದಲ್ಲಿ ದೂರನ್ನು ಸ್ವೀಕರಿಸಲು ನನಗೆ ಸಾಧ್ಯವಿಲ್ಲ. ಪೊಲೀಸ್‌ ಠಾಣೆಯಲ್ಲೇ ದೂರು ನೀಡಬೇಕಾಗುತ್ತದೆ.  ಈ ಮನವಿಯ ಆಧಾರದ ಮೇಲೆ ಕಾನೂನು ತಜ್ಞರ ಜೊತೆ ಚರ್ಚಿಸಿ, ಅವರ ಸಲಹೆ ಆಧರಿಸಿ ತೀರ್ಮಾನ ಮಾಡುತ್ತೇವೆ ಎಂದರು.

    ನೀಡಿರೋ ಪ್ರತಿಯಲ್ಲಿ ಏನೇಲ್ಲ ಅಂಶಗಳಿದೆ ಅನ್ನೋದನ್ನ ಚರ್ಚೆ ಮಾಡಲು ಆಗುವುದಿಲ್ಲ. ವಿಧಾನಸಭೆಯಲ್ಲಿ ಪ್ರಸ್ರಾಪಿಸಿದಂತೆ ಮನವಿ ಕೊಟ್ಟಿದ್ದಾರೆ. ಮನವಿಯನ್ನ ನಾನು ಸ್ವೀಕಾರ ಮಾಡಿದ್ದೇನೆ.  ಮನವಿ ಆಧಾರದ ಮೇಲೆ ಏನ್ ಮಾಡಬೇಕು, ಯಾರಿಗೆ ಅದನ್ನು ಕಳುಹಿಸಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

    ವಿಷಯ ಈಗ ಸದನದ ಸ್ವತ್ತಾಗಿದೆ. ಈ ಕಾರಣಕ್ಕಾಗಿ ದೂರು ಸಲ್ಲಿಕೆಯಾಗುವವರೆಗೂ ನಾವು ಕಾಯುತ್ತಿದ್ದೆವು ಎಂದು ಹೇಳಿದರು.

    ರಾಜಣ್ಣ ಮಾತನಾಡಿ, ಈ ರೀತಿಯ ಕೆಟ್ಟ ಚಾಳಿ ಸಾರ್ವಜನಿಕ ಜೀವನದಲ್ಲಿ ಮುಂದುವರಿಯಬಾರದು ಎಂಬ ಉದ್ದೇಶದಿಂದ ಈ ಕ್ರಮ ಕೈಗೊಂಡಿದ್ದೇನೆ. ಮಾಧ್ಯಮಗಳಲ್ಲಿ ತುಮಕೂರಿನ ಪ್ರಭಾವಿ ಸಚಿವರು ಎಂದು ಸುದ್ದಿಯಾಗುತ್ತಿತ್ತು. ತುಮಕೂರಿನ ಸಚಿವರು ಅಂದರೆ ನಾವಿಬ್ಬರೇ ಇರುವುದು. ಈ ಕಾರಣಕ್ಕೆ ಸದನದಲ್ಲಿ ನಾನು ಪ್ರಸ್ತಾಪ ಮಾಡಿದ್ದೆ. ದೂರು ನೀಡಿದರೆ ತನಿಖೆ ನಡೆಸುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದರು. ಹೀಗಾಗಿ ಇಂದು ಮನವಿ ಸಲ್ಲಿಸಿದ್ದೇನೆ ಎಂದರು.

  • ಹನಿಟ್ರ್ಯಾಪ್‌ ಕೇಸ್‌- ಮಂಗಳವಾರ ರಾಜಣ್ಣ ದೂರು, ಎಸ್‌ಐಟಿ ರಚನೆ ಸಾಧ್ಯತೆ

    ಹನಿಟ್ರ್ಯಾಪ್‌ ಕೇಸ್‌- ಮಂಗಳವಾರ ರಾಜಣ್ಣ ದೂರು, ಎಸ್‌ಐಟಿ ರಚನೆ ಸಾಧ್ಯತೆ

    ಬೆಂಗಳೂರು: ಹನಿಟ್ರ್ಯಾಪ್‌ (Honey Trap) ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳವಾರ ಸಹಕಾರ ಸಚಿವ ರಾಜಣ್ಣ (Rajanna) ದೂರು ನೀಡುವ ಸಾಧ್ಯತೆಯಿದೆ.

    ಕಳೆದ ಮೂರು ದಿನಗಳಿಂದ ಪ್ರಕರಣ ದಾಖಲಿಸಲು ಮನಸ್ಸು ಮಾಡದೇ ಇದ್ದ ರಾಜಣ್ಣಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ (CM Siddaramaiah) ಅಭಯ ಹಸ್ತ ನೀಡಿದ್ದು, ಮಂಗಳವಾರ ಪ್ರಕರಣ ದಾಖಲು ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಪತ್ನಿಗೆ 9 ಕೋಟಿ ಜೀವನಾಂಶ, ತಿಂಗಳಿಗೆ 4 ಲಕ್ಷ – ಭಾರೀ ಸಂಚಲನ ಸೃಷ್ಟಿಸಿದ ಟೆಕ್ಕಿ ಪೋಸ್ಟ್

     

    ಪ್ರಕರಣ ದಾಖಲಾದ ಬಳಿಕ ಅಧಿಕೃತ ತನಿಖೆ ಪ್ರಾರಂಭ ಆಗಲಿದೆ. ಮಾಹಿತಿಯ ಪ್ರಕಾರ ವಿಶೇಷ ತನಿಖಾ ತಂಡ (SIT)ಮೂಲಕವೇ ತನಿಖೆ ಮಾಡಿಸುವ ಸಾಧ್ಯತೆ ಇದೆ.

    ಕಳೆದ ಮೂರು ತಿಂಗಳಿಂದ ತುಮಕೂರು (Tumakuru) ಮತ್ತು ಬೆಂಗಳೂರಿನ (Bengaluru) ವಿವಿಧ ಭಾಗದಲ್ಲಿ ಈ ಪ್ರಯತ್ನ ನಡೆದಿದೆ ಎನ್ನಲಾಗಿದ್ದು, ತನಿಖೆ ದೃಷ್ಟಿಯಿಂದ ಎಸ್‌ಐಟಿ ರಚನೆಗೆ ಸರ್ಕಾರ ಮುಂದಾಗಿದೆ.

     

  • ಹನಿಟ್ರ್ಯಾಪ್ ಪ್ರಕರಣ ಜಡ್ಜ್‌ ಅಥವಾ ಸಿಬಿಐ ತನಿಖೆಗೆ ಕೊಡಬೇಕು: ವಿಜಯೇಂದ್ರ ಆಗ್ರಹ

    ಹನಿಟ್ರ್ಯಾಪ್ ಪ್ರಕರಣ ಜಡ್ಜ್‌ ಅಥವಾ ಸಿಬಿಐ ತನಿಖೆಗೆ ಕೊಡಬೇಕು: ವಿಜಯೇಂದ್ರ ಆಗ್ರಹ

    – ಮುಸ್ಲಿಮರಿಗೆ ಮೀಸಲಾತಿ ವಿರುದ್ಧ ಬಿಜೆಪಿ- ಜೆಡಿಎಸ್ ಜನಾಂದೋಲನ

    ಬೆಂಗಳೂರು: ಹನಿಟ್ರ್ಯಾಪ್(Honeytrap) ಕುರಿತಂತೆ ಹೈಕೋರ್ಟಿನ ಈಗಿನ ನ್ಯಾಯಮೂರ್ತಿಗಳು ಅಥವಾ ಸಿಬಿಐ (CBI) ತನಿಖೆ ನಡೆಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಅವರು ಆಗ್ರಹಿಸಿದ್ದಾರೆ.

    ಮಾಧ್ಯಮ ಪ್ರತಿನಿಧಿಗಳ ಜೊತೆ ಇಂದು ಮಾತನಾಡಿದ ಅವರು, ಸಚಿವರಾದ ರಾಜಣ್ಣ (Rajanna) ಅವರು ರಾಜ್ಯ ಹಾಗೂ ದೇಶದ 48ಕ್ಕೂ ಹೆಚ್ಚು ಪ್ರಮುಖರು ಹನಿಟ್ರ್ಯಾಪ್‍ಗೆ ಒಳಗಾದ ಕುರಿತು ತಿಳಿಸಿ ತನಿಖೆ ಆಗಬೇಕೆಂದು ಹೇಳಿಕೆ ಕೊಟ್ಟಿದ್ದಾರೆ. ಇದು ಬಹಳ ಗಂಭೀರ ವಿಚಾರ ಎಂದು ತಿಳಿಸಿದ ಗೃಹ ಸಚಿವರು, ಇದರ ಬಗ್ಗೆ ತನಿಖೆ ಮಾಡಿಸುವುದಾಗಿ ಹೇಳಿದ್ದರು. ಸದನ ಮುಗಿದ ಬಳಿಕ ಹೊರಕ್ಕೆ ಬಂದ ಗೃಹ ಸಚಿವರು, ತಮಗೆ ಅಧಿಕೃತವಾಗಿ ಯಾವುದೇ ಅಧಿಕಾರಿಗಳು ಮಾಹಿತಿ ನೀಡಿಲ್ಲ ಎಂದಿದ್ದಾರೆ ಎಂದು ವಿವರಿಸಿದರು.

     

    ಅಧಿಕಾರಿಗಳು ಮಾಹಿತಿ ಕೊಟ್ಟ ಮೇಲೆ ಅದರ ಕುರಿತು ಆಲೋಚಿಸುವುದಾಗಿ ತಿಳಿಸಿ ದ್ವಂದ್ವ ನೀತಿ ಪ್ರದರ್ಶನ ಮಾಡಿದ್ದಾರೆ. ನಾವು ಸದನದಲ್ಲಿ ಮುಖ್ಯಮಂತ್ರಿಗಳಿಂದ ಉತ್ತರ ಪಡೆಯುವ ಪ್ರಯತ್ನ ಮಾಡಿದ್ದೇವೆ. ಅವರು ಯಾವುದೇ ರೀತಿ ಸರಿಯಾದ ಉತ್ತರ ಕೊಟ್ಟಿಲ್ಲ ಎಂದು ಟೀಕಿಸಿದರು. ಇದೊಂದು ಗಂಭೀರ ಪ್ರಕರಣ. ಇದು ಸದನದ 224 ಶಾಸಕರ, ರಾಜ್ಯದ ಗೌರವದ ಪ್ರಶ್ನೆ. ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಪ್ರತಿಭಟಿಸುವುದಾಗಿ ತಿಳಿಸಿದರು.  ಇದನ್ನೂಓದಿ: ಹನಿಟ್ರ್ಯಾಪ್‌ ಆಗಿದ್ರೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಿ: ಡಿಕೆಶಿ

    ರಾಜ್ಯದಲ್ಲಿ ಅಲ್ಪಸಂಖ್ಯಾತರಿಗೆ ಸರಕಾರಿ ಕಾಮಗಾರಿಗಳಲ್ಲಿ 4% ಮೀಸಲಾತಿ ನೀಡಿದ ಬಗ್ಗೆ ಮುಖ್ಯಮಂತ್ರಿಗಳು ಹೇಳಿಕೆ ಕೊಟ್ಟಿದ್ದಾರೆ. ಇದರ ವಿರುದ್ಧ ನಾವು ರಾಜ್ಯಾದ್ಯಂತ ಜನಾಂದೋಲನಕ್ಕೆ ಕರೆ ಕೊಡಲಿದ್ದೇವೆ ಎಂದು ಪ್ರಕಟಿಸಿದರು.

     
    ಬಿಜೆಪಿ- ಜೆಡಿಎಸ್ ಪಕ್ಷಗಳು ಮುಸಲ್ಮಾನರ ವಿರೋಧಿ ಅಲ್ಲ. ಆದರೆ ಹಿಂದೂಗಳಿಗೆ ಅಪಮಾನ ಮಾಡುವ ರೀತಿಯಲ್ಲಿ ಹಣಕಾಸಿನ ಸಚಿವರಾದ ಮುಖ್ಯಮಂತ್ರಿಗಳು ನಡೆದುಕೊಳ್ಳುತ್ತಿದ್ದಾರೆ. ಇದನ್ನು ನಾವು ಧಿಕ್ಕರಿಸುತ್ತಿದ್ದೇವೆ ಎಂದು ತಿಳಿಸಿದರು.

    ವಿದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋಗುವ ಮುಸಲ್ಮಾನರಿಗೆ ಕೊಡುವ ಮೊತ್ತವನ್ನು 20 ಲಕ್ಷದಿಂದ 30 ಲಕ್ಷ ರೂ.ಗೆ ಏರಿಸಿದ್ದಾರೆ. ಹಿಂದೂಗಳಲ್ಲಿ ಬಡವರಿಲ್ಲವೇ? ಅವರು ಹೊರದೇಶಕ್ಕೆ ವಿದ್ಯಾಭ್ಯಾಸಕ್ಕೆ ಹೋದರೆ ಅವರಿಗೆ ಹಣಕಾಸಿನ ಅವಶ್ಯಕತೆ ಇಲ್ಲವೇ? ಎಂದು ಕೇಳಿದರು. ಮುಸಲ್ಮಾನ ಹೆಣ್ಮಕ್ಕಳ ಆತ್ಮರಕ್ಷಣೆಗಾಗಿ ಬಜೆಟ್‍ನಲ್ಲಿ ಹಣ ಇಟ್ಟಿದ್ದಾರೆ. ರಾಜ್ಯದಲ್ಲಿ ಲವ್ ಜಿಹಾದ್‍ಗೆ ಬಲಿ ಆಗುತ್ತಿರುವುದು ಹಿಂದೂ ಹೆಣ್ಮಕ್ಕಳೇ ಹೊರತು ಮುಸ್ಲಿಂ ಹೆಣ್ಮಕ್ಕಳಲ್ಲ ಎಂದು ಗಮನ ಸೆಳೆದರು.

    ಮುಸಲ್ಮಾನರ ಓಲೈಕೆ ಮೂಲಕ ಧರ್ಮಗಳ ನಡುವೆ ಬೆಂಕಿ ಹಚ್ಚಲು ಮುಖ್ಯಮಂತ್ರಿಗಳು ಹೊರಟಿದ್ದು, ಇದನ್ನು ನಾವು ವಿರೋಧಿಸುತ್ತೇವೆ. ಈ ಎಲ್ಲ ವಿಚಾರಗಳನ್ನು ಮುಂದಿಟ್ಟು ಬಿಜೆಪಿ- ಜೆಡಿಎಸ್ ರಾಜ್ಯವ್ಯಾಪಿ ಹೋರಾಟ ಮಾಡಲಿದೆ. ಓಲೈಕೆ ರಾಜಕಾರಣಕ್ಕೆ ಇತಿಶ್ರೀ ಹಾಕಬೇಕು ಎಂದು ಒತ್ತಾಯಿಸಿದರು.

  • ಹನಿಟ್ರ್ಯಾಪ್‌ ಗದ್ದಲ| ಯತ್ನಾಳ್‌ಗೆ ಚೀಟಿ ಕೊಟ್ಟವರು ಸಿಎಂ ಆಪ್ತರಾ? – ಸಿಬಿಐ ತನಿಖೆಯಾಗಲಿ ಎಂದ ಸುರೇಶ್‌ ಗೌಡ

    ಹನಿಟ್ರ್ಯಾಪ್‌ ಗದ್ದಲ| ಯತ್ನಾಳ್‌ಗೆ ಚೀಟಿ ಕೊಟ್ಟವರು ಸಿಎಂ ಆಪ್ತರಾ? – ಸಿಬಿಐ ತನಿಖೆಯಾಗಲಿ ಎಂದ ಸುರೇಶ್‌ ಗೌಡ

    ಬೆಂಗಳೂರು: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರಿಗೆ ಚೀಟಿ ಕೊಟ್ಟವರು ಯಾರು? ಇದರ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಸುರೇಶ್‌ ಗೌಡ ಆಗ್ರಹಿಸಿದ್ದಾರೆ.

    ವಿಧಾಸನಸಭೆಯಲ್ಲಿ ಮಾತನಾಡಿದ ಅವರು, ಯತ್ನಾಳ್‌ ಮಾತನಾಡುತ್ತಿದ್ದಾಗ ಅವರಿಗೆ ಒಂದು ಚೀಟಿ ಬಂತು. ಚೀಟಿ ಬಂದ ಮೇಲೆ ಯತ್ನಾಳ್ ಹನಿಟ್ರ್ಯಾಪ್ ವಿಚಾರದ ಬಗ್ಗೆ ಮಾತಾಡಿದರು ಎಂದರು.

    ಯತ್ನಾಳ್‌ ಹನಿಟ್ರ್ಯಾಪ್ ಮಾತನಾಡುವುದಕ್ಕೂ ಮುನ್ನ ಒಂದು ಚೀಟಿ ಆಡಳಿತ ಪಕ್ಷದಿಂದ ಬಂತು. ಈ ಚೀಟಿ ಕೊಟ್ಟವರು ಯಾರು? ಇದರ ತನಿಖೆ ಆಗಬೇಕು? ಚೀಟಿ ಕೊಟ್ಟವರು ಸಿಎಂಗೆ ಆಪ್ತರಾ? ಇದರ ತನಿಖೆ ಆಗಬೇಕು, ಸಿಬಿಐ ತನಿಖೆ ಆಗಬೇಕು ಎಂದು ಆಗ್ರಹಿಸಿದರು.

    ಶುಕ್ರವಾರ ಸದನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ನೇರವಾಗಿಯೇ ಸಹಕಾರಿ ಸಚಿವ ರಾಜಣ್ಣ ಮೇಲೆ ಹನಿಟ್ರ್ಯಾಪ್‌ ಯತ್ನ ನಡೆದಿದೆ ಎಂದು ಪ್ರಸ್ತಾಪ ಮಾಡಿದರು. ಮಾರ್ಶಲ್‌ ಒಬ್ಬರು ಚೀಟಿ ನೀಡಿದ ಬಳಿಕ ಹನಿಟ್ರ್ಯಾಪ್‌ ವಿಚಾರವನ್ನು ಪ್ರಸ್ತಾಪಿಸಿದ್ದರು.  ಯತ್ನಾಳ್ ಪ್ರಸ್ತಾಪ ಬೆನ್ನಲ್ಲೇ ತಮ್ಮ ಮೇಲೆ ಹನಿಟ್ರ್ಯಾಪ್‌ ಪ್ರಯತ್ನ ನಡೆದಿರುವುದು ಸತ್ಯ ಎಂಬುದನ್ನು ರಾಜಣ್ಣ ಒಪ್ಪಿಕೊಂಡರು.

  • ಎರಡನೇ ಬಾರಿ ಹೋಗಿ ರಾಜಣ್ಣ ಕೈಗೆ ಸಿಕ್ಕಿ ಬಿದ್ದ ಹನಿಟ್ರ್ಯಾಪ್‌ ಅಸಾಮಿಗಳು!

    ಎರಡನೇ ಬಾರಿ ಹೋಗಿ ರಾಜಣ್ಣ ಕೈಗೆ ಸಿಕ್ಕಿ ಬಿದ್ದ ಹನಿಟ್ರ್ಯಾಪ್‌ ಅಸಾಮಿಗಳು!

    ಬೆಂಗಳೂರು: ಸಹಕಾರಿ ಸಚಿವ ರಾಜಣ್ಣ (Rajanna) ಅವರ ಮನೆ ಬಳಿ ಎರಡನೇ ಬಾರಿ ಹೋದಾಗ ಹನಿಟ್ರ್ಯಾಪ್‌ (Honey Trap) ಅಸಾಮಿಗಳು ಸಿಕ್ಕಿ ಬಿದ್ದಿದ್ದಾರೆ.

    ಹೌದು. ಜಯಮಹಲ್‌ನಲ್ಲಿರುವ ಸಹಕಾರ ಸಚಿವ ರಾಜಣ್ಣ ಅವರ ಸರ್ಕಾರಿ ನಿವಾಸಕ್ಕೆ ಮೊದಲ ಬಾರಿಗೆ ಹನಿಟ್ರ್ಯಾಪ್‌ ಗ್ಯಾಂಗ್‌ ಹೋಗಿದೆ. ಈ ವೇಳೆ ರಾಜಣ್ಣ ಗಂಭೀರವಾಗಿ ಪರಿಗಣಿಸಲಿಲ್ಲ. ಆದರೆ ಎರಡನೇ ಬಾರಿ ಹೋದಾಗ ಅಸಲಿಯತ್ತು ತಿಳಿದು ರಾಜಣ್ಣ ಅವರನ್ನು ಲಾಕ್‌ ಮಾಡಿದ್ದಾರೆ.

    ಈ ಸಂದರ್ಭದಲ್ಲಿ ರಾಜಣ್ಣ ಇಬ್ಬರ ಬಳಿ ನಿಮ್ಮನ್ನು ಕಳುಹಿಸಿದ್ದು ಯಾರು ಎಂದು ಪ್ರಶ್ನಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಬಂದ ವ್ಯಕ್ತಿಗಳು ಹನಿಟ್ರ್ಯಾಪ್‌ ಮಾಡಲು ಹೇಳಿದವರ ಹೆಸರನ್ನು ತಿಳಿಸಿದ್ದಾರೆ. ವಿಚಾರಣೆ ವೇಳೆ ಆ ವ್ಯಕ್ತಿಗಳು ತಮಗೆ ನಿರ್ದೇಶನ ಕೊಟ್ಟ ವ್ಯಕ್ತಿಗಳ ಬಗ್ಗೆ ವಿವರ ನೀಡಿದ್ದಾರೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ತಿಳಿದು ಬಂದಿದೆ. ಇದನ್ನೂ ಓದಿ: ನಾನೇನು ಶ್ರೀರಾಮಚಂದ್ರ ಅಲ್ಲ – ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಕೆ.ಎನ್‌ ರಾಜಣ್ಣ ಆಗ್ರಹ

    6 ತಿಂಗಳಿನಿಂದ ಹನಿಟ್ರ್ಯಾಪ್‌ಗೆ ಪ್ಲ್ಯಾನ್‌ ಮಾಡಲಾಗಿತ್ತು. ಒಂದೂವರೆ ತಿಂಗಳ ಹಿಂದೆ ಈ ಪ್ಲ್ಯಾನ್‌ ಕಾರ್ಯಗತಗೊಳಿಸಲು ತಂಡ ಮುಂದಾಗಿತ್ತು. ರಾಜಣ್ಣ ನಿವಾಸದಲ್ಲಿರುವ ಸಿಸಿಟಿವಿಯಲ್ಲಿ ಹನಿಟ್ರ್ಯಾಪ್‌ಗೆ ಬಂದವರು ಸೆರೆಯಾಗಿದ್ದಾರೆ. ಈ ದೃಶ್ಯ ತನಿಖೆಯಲ್ಲಿ ಮುಖ್ಯಪಾತ್ರವಹಿಸಲಿದೆ.

    ಬಗ್ಗೆ ಪಬ್ಲಿಕ್‌ ಟಿವಿ ಜೊತೆ ಮಾತನಾಡಿದ ರಾಜಣ್ಣ ಪುತ್ರ, ಕಾಂಗ್ರೆಸ್‌ ಪರಿಷತ್‌ ಸದಸ್ಯ ರಾಜೇಂದ್ರ, ಎರಡು ತಿಂಗಳಿಂದ ನಮ್ಮ ತಂದೆಗೆ ಹನಿಟ್ರ್ಯಾಪ್ ಮಾಡಲು ಯತ್ನಿಸಿದ್ದಾರೆ. ಅಲ್ಲದೇ 6 ತಿಂಗಳಿನಿಂದ ನನ್ನ ಮೇಲೆ ಹನಿಟ್ರ್ಯಾಪ್ ಯತ್ನ ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.

    ಸದನದಲ್ಲಿ ಈಗಾಗಲೇ ನನ್ನ ತಂದೆಯವರು ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಇಬ್ಬರನ್ನು ಹನಿಟ್ರ್ಯಾಪ್‌ ಬಲೆಗೆ ಬೀಳಿಸಲು ಯತ್ನ ನಡೆದಿದೆ. ಇದು ರಾಜಕೀಯನಾ ಅಥವಾ ವೈಯಕ್ತಿಕನಾ ಎಂಬುದರ ಬಗ್ಗೆ ತನಿಖೆ ಆಗಬೇಕು. ಗೃಹ ಸಚಿವರು ನಮ್ಮ ಜಿಲ್ಲೆಯವರು. ಪರಮೇಶ್ವರ್‌ ಅವರ ಜೊತೆ ಮಾತನಾಡಿ ಈ ಬಗ್ಗೆ ದೂರು ನೀಡುತ್ತೇವೆ ಸರ್ಕಾರದಿಂದ ತನಿಖೆ ನಡೆಸುತ್ತೇವೆ ಎಂದು ತಿಳಿಸಿದರು.

     

    ರಿವೀಲ್‌ ಆಗಿದ್ದು ಹೇಗೆ?
    ಕಳೆದ 4 ದಿನಗಳಿಂದ ತಮಕೂರು ಮೂಲದ ರಾಜ್ಯದ ಪ್ರಭಾವಿ ಸಚಿವರ ಮೇಲೆ ಹನಿಟ್ರ್ಯಾಪ್‌ಗೆ ಯತ್ನ ನಡೆದಿದೆ ಎಂಬ ವಿಚಾರ ಜೋರಾಗಿ ಚರ್ಚೆ ಆಗುತ್ತಿತ್ತು. ಆದರೆ ಯಾರು ಎನ್ನುವ ಬಗ್ಗೆ ಯಾರು ಅಧಿಕೃತವಾಗಿ ತಿಳಿಸಿರಲಿಲ್ಲ.

    ಶುಕ್ರವಾರ ಸದನದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ನೇರವಾಗಿಯೇ ಸಹಕಾರಿ ಸಚಿವ ರಾಜಣ್ಣ ಮೇಲೆ ಹನಿಟ್ರ್ಯಾಪ್‌ ಯತ್ನ ನಡೆದಿದೆ ಎಂದು ಪ್ರಸ್ತಾಪ ಮಾಡಿದರು. ಇದನ್ನೂ ಓದಿ: ಸಚಿವರ ಮೇಲೆ 2 ಸಲ ಹನಿಟ್ರ್ಯಾಪ್ ಯತ್ನ – ಸತೀಶ್ ಜಾರಕಿಹೊಳಿ ಬಾಂಬ್

    ಯತ್ನಾಳ್ ಪ್ರಸ್ತಾಪ ಬೆನ್ನಲ್ಲೇ ತಮ್ಮ ಮೇಲೆ ಹನಿಟ್ರ್ಯಾಪ್‌ ಪ್ರಯತ್ನ ನಡೆದಿರುವುದು ಸತ್ಯ ಎಂಬುದನ್ನು ರಾಜಣ್ಣ ಒಪ್ಪಿಕೊಂಡರು. ಕರ್ನಾಟಕ ಸಿಡಿ, ಪೆನ್‌ಡ್ರೈವ್ ಗೆ ಫ್ಯಾಕ್ಟರಿ ಆಗಿದೆ. 48 ಮಂದಿಯ ಮೇಲೆ ಸಿಡಿ, ಪೆನ್‌ಡ್ರೈವ್ ಆಪರೇಷನ್ ಮಾಡಲಾಗಿದೆ. ಎಲ್ಲಾ ಪಕ್ಷದವರು ಇದರಲ್ಲಿ ಸಿಲುಕಿದ್ದಾರೆ. ಕೇಂದ್ರದ ಮುಖಂಡರೂ ಇದ್ದಾರೆ. ಇದರ ಹಿಂದಿರುವ ಪ್ರೊಡ್ಯೂಸರ್ ಯಾರು? ಡೈರೆಕ್ಟರ್ ಯಾರು ಎನ್ನುವುದು ಗೊತ್ತಾಗಬೇಕು. ಹೀಗಾಗಿ ಈ ಬಗ್ಗೆ ಉನ್ನತಮಟ್ಟದ ತನಿಖೆ ಆಗಬೇಕು. ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ಆಗಬೇಕು ಎಂದು ಸಚಿವ ರಾಜಣ್ಣ ಆಗ್ರಹಿಸಿದ್ದರು.

    ರಾಜಣ್ಣ ಮಾತಿಗೆ ಪಕ್ಷಬೇಧ ಮರೆತು ಎಲ್ಲಾ ಪಕ್ಷಗಳಿಂದ ಬೆಂಬಲ ಸಿಕ್ಕಿತು. ತಕ್ಷಣವೇ ಗೃಹ ಸಚಿವರು ಕೂಡ ಉನ್ನತಮಟ್ಟದ ತನಿಖೆಗೆ ಆದೇಶ ನೀಡುವ ಘೋಷಣೆ ಮಾಡಿದರು.

  • ಶಾಸಕರಿಗೆ ಡಿನ್ನರ್‌ – ಡಿಕೆಶಿ ಜೊತೆ ಮೂವರು ಸಚಿವರು ಮುನಿಸು?

    ಶಾಸಕರಿಗೆ ಡಿನ್ನರ್‌ – ಡಿಕೆಶಿ ಜೊತೆ ಮೂವರು ಸಚಿವರು ಮುನಿಸು?

    ಬೆಂಗಳೂರು: ಡಿಕೆ ಶಿವಕುಮಾರ್‌ (DK Shivakumar) ಜೊತೆ ಮೂವರು ಸಚಿವರು ಮುನಿಸು ಮುಂದುರಿಸಿದ್ದಾರಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಡಿಕೆಶಿ ಆಯೋಜಿಸಿದ್ದ ಭೋಜನ ಕೂಟದಿಂದ ಈ ಪ್ರಶ್ನೆ ಈಗ ಸೃಷ್ಟಿಯಾಗಿದೆ.

    ಡಿಸಿಎಂ ಡಿ.ಕೆ.ಶಿವಕುಮಾರ್ ಕೆಪಿಸಿಸಿ (KPCC) ಅಧ್ಯಕ್ಷರಾಗಿ 5 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ಹೋಟೆಲಿನಲ್ಲಿ ಗುರುವಾರ ರಾತ್ರಿ ಭೋಜನ ಕೂಟ (Dinner) ಆಯೋಜಿಸಿದ್ದರು.

    ಈ ಡಿನ್ನರ್‌ಗೆ ಸಿದ್ದರಾಮಯ್ಯ (Siddaramaiah) ಸೇರಿದಂತೆ ಹಲವು ಸಚಿವರು ಭಾಗಿಯಾಗಿದ್ದರು. ಆದರೆ ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿ ಪವರ್‌ಫುಲ್‌ ಮಂತ್ರಿಗಳಾಗಿರುವ ಮೂವರು ಈ ಸಭೆಗೆ ಗೈರಾಗಿದ್ದರು. ಇದನ್ನೂ ಓದಿ: ಗ್ಯಾರಂಟಿಗಳಿಗೆ SCSP – TSP ಹಣ ಬಳಕೆ – ದಲಿತರ ಎಷ್ಟು ಕೋಟಿ ಹಣ ಬಳಕೆ? ಇಲ್ಲಿದೆ ಲೆಕ್ಕ..

     

    ಡಿಕೆಶಿ ಜೊತೆ ದೊಡ್ಡ ಮಟ್ಟದ ಬಂಡಾಯದ ಬಾವುಟ ಹಾರಿಸಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಡಿನ್ನರ್‌ನಲ್ಲಿ ಭಾಗಿಯಾಗಿದ್ದರು. ಸತೀಶ್ ಜಾರಕಿಹೋಳಿ ಜೊತೆ ಡಿಕೆಶಿ ವಿರುದ್ದ ಬಂಡಾಯ ಸಾರಿದ್ದ ಗೃಹ ಸಚಿವ ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಮಹದೇವಪ್ಪ, ಸಹಕಾರಿ ಸಚಿವ ಕೆಎನ್‌ ರಾಜಣ್ಣ ಆಗಮಿಸರಲಿಲ್ಲ.  ಇದನ್ನೂ ಓದಿ: ನಡು ರಸ್ತೆಯಲ್ಲೇ ಹೊತ್ತಿ ಉರಿದ ಮಹೀಂದ್ರಾ ಥಾರ್

    ಈ ಮೂಲಕ ಭೋಜನ ಕೂಟದಲ್ಲೂ ಡಿಕೆಶಿಯಿಂದ ಮೂವರು ಸಚಿವರು ಅಂತರ ಕಾಯ್ದುಕೊಂಡಿದ್ದಾರೆ. ಕಳೆದ ವಾರ ಡಿಕೆ ಶಿವಕುಮಾರ್‌ ಅವರು ಕೆಎನ್‌ ರಾಜಣ್ಣ ಅವರ ಭೇಟಿಗಾಗಿ ಕಚೇರಿಗೆ ಬಂದಿದ್ದರು. ಆದರೆ ಡಿಕೆಶಿ ಬರುತ್ತಿರುವ ವಿಷಯ ತಿಳಿದಿದ್ದರೂ ರಾಜಣ್ಣ ಅವರು ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಕಚೇರಿಯಿಂದ ಬೇಗನೇ ಹೊರ ನಡೆದಿದ್ದರು.

     

  • ಸಿದ್ದರಾಮಯ್ಯನವರನ್ನು ಪದಚ್ಯುತಿ ಮಾಡ್ತೀವಿ, ಇಳಿಸ್ತೀವಿ ಅಂದ್ರೆ ನಡೆಯಲ್ಲ: ರಾಜಣ್ಣ ಗುಡುಗು

    ಸಿದ್ದರಾಮಯ್ಯನವರನ್ನು ಪದಚ್ಯುತಿ ಮಾಡ್ತೀವಿ, ಇಳಿಸ್ತೀವಿ ಅಂದ್ರೆ ನಡೆಯಲ್ಲ: ರಾಜಣ್ಣ ಗುಡುಗು

    ಬೆಂಗಳೂರು: ಸಿದ್ದರಾಮಯ್ಯನವರನ್ನು ಪದಚ್ಯುತಿ ಮಾಡುತ್ತೇವೆ, ಇಳಿಸುತ್ತೇವೆ ಎಂದರೆ ಅದು ನಡೆಯುವುದಿಲ್ಲ ಎಂದು ಸಹಕಾರ ಸಚಿವ ರಾಜಣ್ಣ ಗುಡುಗಿದ್ದಾರೆ.

    ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬೇಜಾರಾಗಲು ಯಾರಾದರು ಅವರ ಆಸ್ತಿ ಬರೆಸಿಕೊಂಡಿದ್ದಾರೆಯೇ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪ್ರಶ್ನಿಸಿದ ಬೆನ್ನಲ್ಲೇ ಇಂದು ಪಬ್ಲಿಕ್‌ ಟಿವಿ ಅವರನ್ನು ಸಂದರ್ಶಿಸಿದೆ.

    ಈ ಸಂದರ್ಶನದಲ್ಲಿ ರಾಜಣ್ಣ ಹಲವು ವಿಚಾರಗಳನ್ನು ಪ್ರಸ್ತಾಪಿಸಿ ದಲಿತ ನಾಯಕರ ಸಭೆ ರದ್ದಾಗಿಲ್ಲ ಅದು ಮುಂದೂಡಿಕೆಯಾಗಿದೆ ಅಷ್ಟೇ. ಮುಂದೆ ನಾವು ಸಭೆಯನ್ನು ಮಾಡುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಹೊರ ರಾಜ್ಯದ ದೇವಸ್ಥಾನಕ್ಕೆ ತೆರಳಲು ಅನುಮತಿ ನೀಡಿ – ಪವಿತ್ರಾ ಗೌಡ ಅರ್ಜಿ

     

    ಸುರ್ಜೆವಾಲ ಅವರ ಸೂಚನೆ ಮೇರೆಗೆ ಪರಮೇಶ್ವರ್‌ ಸಭೆಯನ್ನು ಮುಂದೂಡಿದ್ದಾರೆ. ಈ ಹಿಂದೆ ಸಿಎಂ ಜೊತೆ ಊಟಕ್ಕೆ ಸೇರಿದ್ದರಿಂದ ಮಾಧ್ಯಮಗಳಲ್ಲಿ ಬೇರೆ ಬೇರೆ ವಿಶ್ಲೇಷಣೆ ಬಂತು. ಅದಕ್ಕೆ ನೀವು ಪ್ರತ್ಯೇಕ ಸಭೆ ಸೇರುವುದು ಬೇಡ ಎಂದಿದ್ದಾರೆ ಎಂದು ಹೇಳಿದರು.

    ಕಾಂಗ್ರೆಸ್ ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಸಿಎಂ, ಡಿಕೆಶಿ ಒಬ್ಬರೇ ಡಿಸಿಎಂ ಆಗಿರುತ್ತಾರೆ ಎಂದರು. ಪಾರ್ಲಿಮೆಂಟ್ ಚುನಾವಣೆವರೆಗೆ ಅವರೇ ಕೆಪಿಸಿಸಿ ಅಧ್ಯಕ್ಷರು ಆಗಿ ಮುಂದುವರಿಯುತ್ತಾರೆ ಅಂದಿದ್ದರು. ಅದಕ್ಕೆ ನಾನು ಹೈ ಕಮಾಂಡ್ ನಾಯಕರ ಹೇಳಿಕೆ‌ಯನ್ನ ಹೇಳುತ್ತಿದ್ದೇನೆ. ಪಾರ್ಲಿಮೆಂಟ್ ಚುನಾವಣೆವರೆಗೆ ಅಧ್ಯಕ್ಷರು ಅಂತ ಹೇಳಿದ್ದು ನನಗೆ ನೆನಪಿದೆ ಎಂದರು.

    ಸಿಎಂ ಬದಲಾವಣೆ, ಪವರ್ ಶೇರಿಂಗ್ ವಿಚಾರ ಎಲ್ಲಾ ಕಾಂಗ್ರೆಸ್ ಹೈ ಕಮಾಂಡ್‌ಗೆ ಬಿಟ್ಟಿದ್ದು. 5 ವರ್ಷದ ಅವಧಿಗೆ ನಾನೇ ಸಿಎಂ ಎಂದು ಸಿದ್ದರಾಮಯ್ಯ ಅವರೇ ಹೇಳಿದ್ದರಲ್ಲ ಎಂದು ತಿಳಿಸಿದರು.

     

  • ಲೋಕಸಭೆ ಗೆಲುವಿಗೆ 3 ಡಿಸಿಎಂ ಹುದ್ದೆ ಸೃಷ್ಟಿ ಅಗತ್ಯ – ಮತ್ತೆ ಸಂಚಲನ ಮೂಡಿಸಿದ ರಾಜಣ್ಣ ಮಾತು

    ಲೋಕಸಭೆ ಗೆಲುವಿಗೆ 3 ಡಿಸಿಎಂ ಹುದ್ದೆ ಸೃಷ್ಟಿ ಅಗತ್ಯ – ಮತ್ತೆ ಸಂಚಲನ ಮೂಡಿಸಿದ ರಾಜಣ್ಣ ಮಾತು

    ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಬಣ ಸಂಘರ್ಷ ತೀವ್ರಗೊಂಡಿದೆ. ಮೂರು ಡಿಸಿಎಂ ಹುದ್ದೆ (DCM Post) ಸೃಷ್ಟಿಸಬೇಕು ಎಂಬ ಸಿಎಂ ಬಣದ ಪ್ರತಿಪಾದನೆ ಪಕ್ಷದೊಳಗೆ ಕಿಚ್ಚು ಹಚ್ಚಿದೆ. ಆದರೆ ಇದ್ಯಾವುದಕ್ಕೂ ಸಿದ್ದರಾಮಯ್ಯ (Siddaramaiah) ಬಣದ ಸಚಿವರು ಸೊಪ್ಪು ಹಾಕುತ್ತಿಲ್ಲ. ಬದಲಾಗಿ ಈ ವಿವಾದವನ್ನು ಇನ್ನಷ್ಟು ತೀವ್ರಗೊಳಿಸಲು ಯತ್ನಿಸುತ್ತಿದ್ದಾರೆ.

    ಸಹಕಾರ ಸಚಿವ ಕೆಎನ್ ರಾಜಣ್ಣ (KN Rajanna) ಮತ್ತೊಮ್ಮೆ ಮೂರು ಡಿಸಿಎಂ ಹುದ್ದೆ ಸೃಷ್ಟಿಸಬೇಕು ಎಂದು ಪ್ರತಿಪಾದಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ (Lok Sabaha Election) ಹೆಚ್ಚು ಸ್ಥಾನ ಗೆಲ್ಲಬೇಕು ಅಂದ್ರೆ ಮೂರು ಡಿಸಿಎಂ ಹುದ್ದೆ ಸೃಷ್ಟಿ ಅತ್ಯಗತ್ಯ. ಒಂದೊಮ್ಮೆ ಕಡಿಮೆ ಸೀಟ್ ಗೆದ್ದರೆ ರಾಜ್ಯದಲ್ಲಿ ಸರ್ಕಾರವೇ ವಿಸರ್ಜನೆ ಆಗಬಹುದು ಎಂಬ ಸ್ಫೋಟಕ ಹೇಳಿಕೆ ನೀಡಿದ್ದಾರೆ.  ಇದನ್ನೂ ಓದಿ: ಸಂವಿಧಾನ ಪೀಠಿಕೆಯಲ್ಲಿ ಸಮಾಜವಾದಿ, ಜಾತ್ಯಾತೀತ ಪದಗಳೇ ಮಾಯ – ಕೇಂದ್ರ ಹಂಚಿದ ಪ್ರತಿಗಳು ಸೃಷ್ಟಿಸಿವೆ ಸಂಚಲನ

    ನನ್ನ ಹೇಳಿಕೆ ಹಿಂದೆ ಸಿಎಂ ಸಿದ್ದರಾಮಯ್ಯ ಪಾತ್ರವಿಲ್ಲ. ಮೂರು ಡಿಸಿಎಂ ಸೃಷ್ಟಿಸಿದ್ರೆ ಡಿಕೆ ಶಿವಕುಮಾರ್ (DK Shivakumar) ಪ್ರಾಮುಖ್ಯತೆಯೂ ಕಡಿಮೆ ಆಗುವುದಿಲ್ಲ. ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಸದುದ್ದೇಶದಿಂದ ಈ ಸೂತ್ರ ಮುಂದಿಟ್ಟಿದ್ದೇನೆ ಅಷ್ಟೇ ಎಂದು ಕೆಎನ್ ರಾಜಣ್ಣ ಸ್ಪಷ್ಟಪಡಿಸಿದ್ದಾರೆ. ಕೆಎನ್ ರಾಜಣ್ಣ ಅವರ ಮಾತುಗಳು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿವೆ.

    ಮೂರು ಡಿಸಿಎಂ ಹುದ್ದೆ ಸೃಷ್ಟಿಸಬೇಕು ಎಂಬ ಕೆಎನ್ ರಾಜಣ್ಣ ಬೇಡಿಕೆ ಬಗ್ಗೆ ಕಾಂಗ್ರೆಸ್ ನಾಯಕರು ಎಚ್ಚರಿಕೆಯ ಪ್ರತಿಕ್ರಿಯೆ ನೀಡತೊಡಗಿದ್ದಾರೆ. ಈ ವಿಚಾರ ಹೈಕಮಾಂಡ್‌ಗೆ ಬಿಟ್ಟಿದ್ದು ಎಂದು ಸಚಿವರಾದ ಕೆಹೆಚ್ ಮುನಿಯಪ್ಪ, ಸಂತೋಷ್ ಲಾಡ್ ಜಾರಿಕೊಂಡಿದ್ದಾರೆ.

     

    ರಾಜಣ್ಣ ಹೇಳಿಕೆಯನ್ನು ಬಿಜೆಪಿ (BJP) ಅಸ್ತ್ರ ಮಾಡಿಕೊಳ್ಳಲು ನೋಡಿದೆ. ರಾಜಣ್ಣ ಮೂಲಕ ಈ ಅಸ್ತ್ರವನ್ನು ಅತೀಂದ್ರ ಶಕ್ತಿಗಳು ಪ್ರಯೋಗಿಸಿವೆ. ಇದರ ಹಿಂದಿನ ಉದ್ದೇಶ ಡಿ.ಕೆ. ಶಿವಕುಮಾರ್ ಹಾವಳಿ ಕಡಿಮೆ ಮಾಡುವುದಾಗಿದೆ. ಮೂರು ಡಿಸಿಎಂ ಅಗತ್ಯವಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ಆದರೂ ಈ ಮನವಿಗೆ ಹೈಕಮಾಂಡ್ ಸ್ಪಂದಿಸಿದ್ರೆ ಏನು ಗತಿ ಎಂಬ ಭಯ ಹಾಲಿ ಡಿಸಿಎಂಗೆ ಇದೆ. ಇದನ್ನು ತಪ್ಪಿಸಲು ತಮ್ಮ ಸಹೋದರನನ್ನು ದೆಹಲಿಗೆ ಕಳಿಸಿದ್ದಾರೆ ಎಂದು ಬಿಜೆಪಿ ಟ್ವೀಟಿಸಿದೆ.

    ಡಿಕೆ ಶಿವಕುಮಾರ್‌ಗೆ ಅವಮಾನ ಮಾಡಲೆಂದೇ ಸಿದ್ದರಾಮಯ್ಯ ಬೆಂಬಲಿಗರು ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ ಎಂದು ಮಾಜಿ ಮಂತ್ರಿ ಕೆಎಸ್ ಈಶ್ವರಪ್ಪ ಆರೋಪ ಮಾಡಿದ್ದಾರೆ. ಈ ಬಗ್ಗೆ ಟೀಕೆ ಮಾಡಿದ್ದ ಸಿಟಿ ರವಿ ವಿರುದ್ಧ ಸಚಿವ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ. ಸೋತುಸುಣ್ಣವಾಗಿರೋ ಸಿಟಿ ರವಿ ಸುಮ್ಮನಿದ್ದರೆ ಒಳ್ಳೆಯದು ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]