Tag: rajanikanth

  • 150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    150 ಕೋಟಿ ಮೌಲ್ಯದ ಹೊಸ ಮನೆಯನ್ನು ಪೋಷಕರಿಗೆ ಗಿಫ್ಟ್ ನೀಡಿದ ಧನುಷ್

    ಕಾಲಿವುಡ್ (Kollywood) ನಟ ಧನುಷ್ (Actor Dhanush) ತಮ್ಮ ಪೋಷಕರಿಗೆ ಐಷಾರಾಮಿ ಮನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಸೌತ್ ನಟ ಧನುಷ್ ನಟನೆಯ `ವಾತಿ’ ಸಿನಿಮಾ ಸಕ್ಸಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಫೆ.17ಕ್ಕೆ ತೆರೆಗೆ ಬಂದ ಈ ಚಿತ್ರ ಇದೀಗ 20 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಬೆನ್ನಲ್ಲೇ ಹೊಸ ಮನೆಯ ಗೃಹ ಪ್ರವೇಶ (House Warming) ಸೋಮವಾರ (ಫೆ.20) ಅದ್ದೂರಿಯಾಗಿ ನೆರವೇರಿತು. ಚೆನ್ನೈನ ಪೋಯಿಸ್ ಗಾರ್ಡನ್‌ನಲ್ಲಿ ಹೊಸ ಮನೆ ಕಟ್ಟಿಸಿದ್ದು, ಇದೀಗ ಗೃಹ ಪ್ರವೇಶ ಸಂಭ್ರಮ ನೆರವೇರಿದೆ. ಧನುಷ್ ಹೊಸ ಮನೆ ಬರೋಬ್ಬರಿ 150 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. ಈ ಹೊಸ ಮನೆಯನ್ನು ತನ್ನ ಪೋಷಕರಿಗೆ ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.

    ಧನುಷ್ ಹೊಸ ಮನೆಯ ಗೃಹ ಪ್ರವೇಶದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗೃಹ ಪ್ರವೇಶ ಸಂಭ್ರಮದಲ್ಲಿ ಧನುಷ್ ನೀಲಿ ಬಣ್ಣದ ಕುರ್ತಾ ಮತ್ತು ಬಿಳಿ ಪೈಜಾಮ ಧರಿಸಿದ್ದರು. ಈ ಸಂಭ್ರಮದಲ್ಲಿ ಧನುಷ್ ಮಕ್ಕಳು ಸಹ ಭಾಗಿಯಾಗಿದ್ದಾರೆ. ಧನುಷ್ ಹೊಸ ಮನೆಯ ಸಂಭ್ರಮಕ್ಕೆ ಸ್ನೇಹಿತರು, ಸಿನಿಮಾರಂಗದ ಗಣ್ಯರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. ಇದನ್ನೂ ಓದಿ: ಸಂಬಂಧಿಕರ ಮದುವೆಯಲ್ಲಿ ಮಿಂಚಿದ ನಟಿ ರಾಧಿಕಾ ಪಂಡಿತ್

    ಚೆನ್ನೈನ ಪೋಯಿಸ್ ಗಾರ್ಡನ್‌ನಲ್ಲಿ ಕಾಲಿವುಡ್‌ನ ಅನೇಕ ಸಿನಿಮಾ ಗಣ್ಯರ ಮನೆಗಳಿವೆ. ವಿಶೇಷ ಎಂದರೆ ರಜನಿಕಾಂತ್ (Rajanikanth) ಮನೆ ಇರುವುದು ಸಹ ಇದೇ ಏರಿಯಾದಲ್ಲಿ. ಕಳೆದ ಎರಡು ವರ್ಷಗಳ ಹಿಂದೆ ಧನುಷ್ ಹೊಸ ಮನೆಗೆ ಭೂಮಿ ಪೂಜೆ ಮಾಡಲಾಗಿತ್ತು. ಭೂಮಿ ಪೂಜೆಯಲ್ಲಿ ರಜನಿಕಾಂತ್ ದಂಪತಿ ಮತ್ತು ಮಾಜಿ ಪತ್ನಿ ಐಶ್ವರ್ಯಾ ಸಮ್ಮುಖದಲ್ಲಿ ನೆರವೇರಿತ್ತು. ಆದರೆ ಗೃಹ ಪ್ರವೇಶದ ವೇಳೆಗೆ ಧನುಷ್ (Dhanush) ಮತ್ತು ಐಶ್ವರ್ಯಾ (Aishwarya) ದಂಪತಿ ದೂರ ದೂರ ಆಗಿದ್ದಾರೆ. ಇಬ್ಬರೂ ಡಿವೋರ್ಸ್ ಪಡೆದುಕೊಂಡಿದ್ದಾರೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನಲ್ಲಿ ರಜನಿಕಾಂತ್ ದಂಪತಿ

    ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನಲ್ಲಿ ರಜನಿಕಾಂತ್ ದಂಪತಿ

    ಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ಇದೀಗ ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನಲ್ಲಿದ್ದಾರೆ. ಶನಿವಾರ ಫೆ.18ರಂದು ತಲೈವಾ ಶಿವರಾತ್ರಿ ಹಬ್ಬವನ್ನು ಚಿಕ್ಕಬಳ್ಳಾಪುರದ ಆದಿಯೋಗಿಯಲ್ಲಿ ಆಚರಣೆ ಮಾಡಿದ್ದರು. ಈಗ ಬೆಂಗಳೂರಿಗೆ ಬಂದಿದ್ದಾರೆ.

    ಮೂರು ದಿನಗಳ ಶೂಟಿಂಗ್‌ಗಾಗಿ ನಟ ರಜನಿಕಾಂತ್ (Rajanikanth) ಮಂಗಳೂರಿಗೆ ಬಂದಿಳಿದಿದ್ದರು. ಈ ವೇಳೆ ಶಿವಣ್ಣ ಕೂಡ ಸಾಥ್ ನೀಡಿದ್ದರು. ಮಂಗಳೂರಿನ ಶೂಟಿಂಗ್ ಮುಗಿಸಿಕೊಂಡು ಅವರು ನೇರವಾಗಿ ಬೆಂಗಳೂರಿಗೆ ಬಂದಿದ್ದಾರೆ. ಚಿಕ್ಕಬಳ್ಳಾಪುರ ತಾಲ್ಲೂಕಿನ ಆವಲಗುರ್ಕಿ ಗ್ರಾಮದ ಬಳಿ ಇರುವ ಇಶಾ ಫೌಂಡೇಶನ್‌ಗೆ ಭೇಟಿ ನೀಡಿ ಆದಿಯೋಗಿಯ (Adiyogi) ದರ್ಶನ ಪಡೆದ ಬಳಿಕ ಇದೀಗ ಪತ್ನಿ ಲತಾ ಜೊತೆ ರಜನಿಕಾಂತ್ ಆರ್ಟ್ ಆಫ್ ಲಿವಿಂಗ್‌ನಲ್ಲಿದ್ದಾರೆ. ಇದನ್ನೂ ಓದಿ: ಸದ್ದಿಲ್ಲದೇ ಆದಿಯೋಗಿ ಶಿವನ ದರ್ಶನ ಪಡೆದ ರಜನಿಕಾಂತ್

    ರಜನಿಕಾಂತ್ ಯಾವಾಗಲೂ ಹೀಗೆ ಅನಿರೀಕ್ಷಿತ ಭೇಟಿ ಕೊಡುತ್ತಲೇ ಇರುತ್ತಾರೆ. ಆಧ್ಯಾತ್ಮಿಕ ಜೀವಿಯೂ ಆಗಿರುವ ಅವರು ಅನೇಕ ದೇವಸ್ಥಾನಗಳಿಗೆ ಹೀಗೆ ಭೇಟಿ ನೀಡುತ್ತಲೇ ಇರುತ್ತಾರೆ. ಅದರಲ್ಲೂ ಹಿಮಾಲಯಕ್ಕೆ ಅವರು ಆಗಾಗ್ಗೆ ಹೋಗುತ್ತಾರೆ. ಅದರಲ್ಲೂ ಐಶ್ವರ್ಯಾ- ಧನುಷ್ (Aishwarya- Dhanush) ಡಿವೋರ್ಸ್ ನಂತರ ರಜನಿಕಾಂತ್ ಮಗಳ ಜೀವನ್ ಬಗ್ಗೆ ಚಿಂತೆಯಲ್ಲಿದ್ದಾರೆ. ಹಾಗಾಗಿ ಸಿನಿಮಾ ಜೊತೆಗೆ ಟೆಂಪಲ್ ರನ್ ಅಂತಾ ತಲೈವಾ ಬ್ಯುಸಿಯಾಗಿದ್ದಾರೆ. ಸದ್ಯ ಆರ್ಟ್ ಆಫ್ ಲಿವಿಂಗ್‌ನಲ್ಲಿ (Art Of Living) ಪತ್ನಿ ಜೊತೆ ಕುಳಿತಿರುವ ಫೋಟೋ  ಎಲ್ಲೆಡೆ ವೈರಲ್ ಆಗುತ್ತಿದೆ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮಗಳ ನಿರ್ದೇಶನದ ಚಿತ್ರದಲ್ಲಿ ನಟಿಸಲು ದುಬಾರಿ ಸಂಭಾವನೆ ಪಡೆದ ರಜನಿಕಾಂತ್

    ಮಗಳ ನಿರ್ದೇಶನದ ಚಿತ್ರದಲ್ಲಿ ನಟಿಸಲು ದುಬಾರಿ ಸಂಭಾವನೆ ಪಡೆದ ರಜನಿಕಾಂತ್

    ಮಿಳು ಚಿತ್ರರಂಗದಲ್ಲಿ (Kollywood) ನಿರ್ದೇಶಕಿಯಾಗಿ ಛಾಪು ಮೂಡಿಸುತ್ತಿರುವ ಐಶ್ವರ್ಯಾ ರಜನಿಕಾಂತ್ (Aishwarya Rajanikanth) ಹೊಸ ಸಿನಿಮಾದ ನಿರ್ದೇಶನದತ್ತ ಬ್ಯುಸಿಯಾಗಿದ್ದಾರೆ. ಮಗಳ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ದುಬಾರಿ ಸಂಭಾವನೆಯನ್ನ ರಜನಿಕಾಂತ್ (Rajanikanth) ಪಡೆದಿದ್ದಾರೆ ಎಂಬ ಸುದ್ದಿ ಕಾಲಿವುಡ್‌ ಅಂಗಳದಲ್ಲಿ ಚರ್ಚೆಗೆ ಗ್ರಾಸವಾಗಿದೆ.

    ಚಿತ್ರರಂಗದಲ್ಲಿ ಗಾಯಕಿ, ಡಬ್ಬಿಂಗ್ ಆರ್ಟಿಸ್ಟ್ ಆಗಿ ಐಶ್ವರ್ಯ ಗುರುತಿಕೊಂಡಿದ್ದಾರೆ. ಈಗಾಗಲೇ ತ್ರಿ, ವೈ ರಾಜ ವೈ, ಸಿನಿಮಾಗಳನ್ನ ನಿರ್ದೇಶನ ಮಾಡಿದ್ದಾರೆ. `ಲಾಲ್ ಸಲಾಮ್’ (Lal Salam) ಸಿನಿಮಾಗೆ ಐಶ್ವರ್ಯ (Aishwarya) ಡೈರೆಕ್ಷನ್ (Direction) ಮಾಡ್ತಿದ್ದಾರೆ. ಈಗ ಕಾಲಿವುಡ್ ಅಂಗಳದಲ್ಲಿ ತಲೈವಾ ಬಗ್ಗೆ ಹೊಸ ಸುದ್ದಿಯೊಂದು ಹರಿದಾಡುತ್ತಿದೆ.

    ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ಮಗಳು ಐಶ್ವರ್ಯಾ ನಿರ್ದೇಶನದ ಚಿತ್ರ `ಲಾಲ್ ಸಲಾಮ್’ನಲ್ಲಿ ನಟಿಸಲು 25 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಲು ತಲೈವಾ ದುಬಾರಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗುತ್ತಿದೆ. 7 ದಿನಗಳ ಶೂಟಿಂಗ್‌ನಲ್ಲಿ ತಲೈವಾ ಭಾಗಿಯಾಗುತ್ತಿದ್ದಾರೆ. ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ಜೊತೆ ಜೊತೆಯಲಿ’ ಶಿಲ್ಪಾ ಅಯ್ಯರ್

    ಐಶ್ವರ್ಯಾ ರಜನಿಕಾಂತ್ ನಿರ್ದೇಶಿಸುತ್ತಿರುವ `ಲಾಲ್ ಸಲಾಮ್’ ಸಿನಿಮಾವನ್ನು ಲೈಕಾ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿದೆ. ವಿಷ್ಣು ವಿಶಾಲ್ ಹಾಗೂ ವಿಕ್ರಾಂತ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇವರೊಂದಿಗೆ ರಜನಿಕಾಂತ್ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಸಿನಿಮಾ ಎ.ಆರ್ ರೆಹಮಾನ್ ಸಂಗೀತ ನೀಡುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಜೈಲರ್’ ರಜನಿಕಾಂತ್‌ಗೆ ಮೋಹನ್ ಲಾಲ್ ಸಾಥ್

    `ಜೈಲರ್’ ರಜನಿಕಾಂತ್‌ಗೆ ಮೋಹನ್ ಲಾಲ್ ಸಾಥ್

    ಕಾಲಿವುಡ್‌ನ (Kollywood) ಬಹುನಿರೀಕ್ಷಿತ ಸಿನಿಮಾ `ಜೈಲರ್’ (Jailer) ಸಿನಿಮಾದಲ್ಲಿ ರಜನಿಕಾಂತ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೈಲರ್‌ಗೆ ಶಿವಣ್ಣ (Shivarajkumar) ಸಾಥ್ ಕೊಟ್ಟ ಬೆನ್ನಲ್ಲೇ ಮಾಲಿವುಡ್ ಸೂಪರ್ ಸ್ಟಾರ್ ಮೋಹಲ್ ಲಾಲ್ (Mohanlal) ಸಾಥ್ ನೀಡಿದ್ದಾರೆ.

    ರಜನಿಕಾಂತ್ (Rajanikanth) ನಟನೆಯ 169ನೇ ಚಿತ್ರ `ಜೈಲರ್’ಗೆ ನೆಲ್ಸನ್ ದಿಲೀಪ್ ಕುಮಾರ್ (Nelson Dileep Kumar) ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ದಕ್ಷಿಣ ಭಾರತದ ಅತೀ ದೊಡ್ಡ ಸ್ಟಾರ್‌ಗಳು ಈ ಸಿನಿಮಾದಲ್ಲಿ ಕಾಣಿಸಿಕೊಳ್ತಿದ್ದಾರೆ. ತಲೈವಾ ನಟನೆಯ ಚಿತ್ರದಲ್ಲಿ ಇತ್ತೀಚೆಗೆ ಶಿವಣ್ಣ ಅತಿಥಿ ಪಾತ್ರದಲ್ಲಿ ನಟಿಸಿ ಬಂದಿದ್ದರು. ಈಗ ಮಲಯಾಳಂ (Malyalam Industry) ಚಿತ್ರರಂಗದ ಸ್ಟಾರ್ ನಟ ಮೋಹನ್ ಲಾಲ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:ನಾವಿನ್ನೂ ಮಗುವಿಗೆ ಸಿದ್ಧರಿಲ್ಲ: ಚಂದನ್ ಶೆಟ್ಟಿ ಪ್ರತಿಕ್ರಿಯೆ

    ಮೋಹನ್ ಲಾಲ್ ಅವರು ಈಗಾಗಲೇ ಹೈದರಾಬಾದ್‌ನಲ್ಲಿ ಚಿತ್ರೀಕರಣದಲ್ಲಿ ಭಾಗವಹಿಸಿದ್ದಾರೆ. ಈ ಚಿತ್ರದ ಮೋಹನ್ ಲಾಲ್ ಅವರ ಲುಕ್ ಕೂಡ ರಿವೀಲ್ ಆಗಿದೆ. ನಟನ ಲುಕ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಇನ್ನೂ ಚಿತ್ರೀಕರಣ ಕೂಡ ಭರದಿಂದ ಸಾಗುತ್ತಿದ್ದು, ಏಪ್ರಿಲ್ 14ಕ್ಕೆ ʻಜೈಲರ್ʼ ಸಿನಿಮಾ ತೆರೆಗೆ ಅಪ್ಪಳಿಸಲಿದೆ. ತಲೈವಾ ನಟನೆಯ 169ನೇ ಸಿನಿಮಾ ಆಗಿರುವ ಕಾರಣ, ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪುತ್ರಿ ಐಶ್ವರ್ಯ ಜೊತೆ ತಿರುಪತಿ ದೇವಸ್ಥಾನಕ್ಕೆ ರಜನಿಕಾಂತ್ ಭೇಟಿ

    ಪುತ್ರಿ ಐಶ್ವರ್ಯ ಜೊತೆ ತಿರುಪತಿ ದೇವಸ್ಥಾನಕ್ಕೆ ರಜನಿಕಾಂತ್ ಭೇಟಿ

    ಕಾಲಿವುಡ್ (Kollywood) ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಜೈಲರ್‌ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಶೂಟಿಂಗ್‌ಗೆ ಬ್ರೇಕ್ ಹಾಕಿ, ಪುತ್ರಿ ಐಶ್ವರ್ಯ ಜೊತೆ ತಿರುಪತಿ ದೇವಸ್ಥಾನಕ್ಕೆ ರಜನಿಕಾಂತ್ ಭೇಟಿ ನೀಡಿದ್ದಾರೆ.

    ರಜನಿಕಾಂತ್ ಗುರುವಾರ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಪುತ್ರಿ ಐಶ್ವರ್ಯಾ (Aishwarya) ಜೊತೆ ಬೆಳಗಿನ ಜಾವ ತಿರುಪತಿ (Tirupathi) ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬುಧವಾರ ತಿರುಪತಿಗೆ ಧಾವಿಸಿ, ವಿಶ್ರಾಂತಿ ನಂತರ ಮರುದಿನ ದೇವರ ದರ್ಶನ ಪಡೆದರು. ಇದನ್ನೂ ಓದಿ: ನಟ ವಿರೇನ್ ಕೇಶವ್‌ಗೆ ಚಲನಚಿತ್ರೋತ್ಸವದ ‘ಅತ್ಯುತ್ತಮ ನಟ’ ಪ್ರಶಸ್ತಿ

    ರಜನಿಕಾಂತ್ `ಜೈಲರ್’ನಲ್ಲಿ ಹೊಸ ಅವತಾರ, ಪಾತ್ರದ ಮೂಲಕ ಕಮಾಲ್ ಮಾಡಲು ರೆಡಿಯಾಗಿದ್ದಾರೆ. ಇನ್ನೂ ಕನ್ನಡದ ಸ್ಟಾರ್ ನಟ ಶಿವಣ್ಣ ಕೂಡ ರಜನಿಕಾಂತ್ ಚಿತ್ರದಲ್ಲಿ ನಟಿಸುತ್ತಿರೋದು ವಿಶೇಷ.

    Live Tv
    [brid partner=56869869 player=32851 video=960834 autoplay=true]

  • ಡಿ.12ಕ್ಕೆ ರಜನೀಕಾಂತ್ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಡಿ.12ಕ್ಕೆ ರಜನೀಕಾಂತ್ ಅಭಿಮಾನಿಗಳಿಗೆ ಗುಡ್ ನ್ಯೂಸ್

    ಜನೀಕಾಂತ್ (Rajanikanth) ಅಭಿಮಾನಿಗಳಿಗೆ ನಿಜಕ್ಕೂ ಇದು ಸಿಹಿ ಸುದ್ದಿ. ತಲೈವಾ ನಟನೆಯ `ಬಾಬಾ’ (Baba) ಸಿನಿಮಾ ಮತ್ತೆ ತೆರೆ ಬರಲು ಸಿದ್ಧವಾಗಿದೆ. ಚಿತ್ರವನ್ನು ಅಪ್‌ಗ್ರೇಡ್ ಮಾಡಿ, ತೆರೆಗೆ ತರಲಾಗುತ್ತಿದೆ. ಸದ್ಯ ಈ ಚಿತ್ರದ ಟ್ರೈಲರ್ ಹಂಚಿಕೊಂಡು, ಚಿತ್ರದ ಬಗ್ಗೆ ರಜನೀಕಾಂತ್ ಮೇಜರ್ ಅಪ್‌ಡೇಟ್ ಕೊಟ್ಟಿದ್ದಾರೆ.

    ತಲೈವಾ, ಮನಿಷಾ ಕೊಯಿರಾಲ ನಟನೆಯ `ಬಾಬಾ’ ಡಿಸೆಂಬರ್ 12ಕ್ಕೆ ತೆರೆಗೆ ಅಪ್ಪಳಿಸಲಿದೆ. ರಜನೀಕಾಂತ್ ಹುಟ್ಟುಹಬ್ಬದಂದೇ ಈ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. ಚಿತ್ರದ ಅಪ್‌ಡೇಟ್ ವರ್ಷನ್ ಮೂಲಕ ಮತ್ತೆ ತೆರೆಯ ಮೇಲೆ ಕಮಾಲ್ ಮಾಡಲು ರಜನೀಕಾಂತ್ ಸಜ್ಜಾಗಿದ್ದಾರೆ. ಸದ್ಯ ಸಿನಿಮಾ ಟ್ರೈಲರ್ ಹಂಚಿಕೊಂಡು, ನನ್ನ ಮನಸ್ಸಿಗೆ ಹತ್ತಿರವಾದ ಸಿನಿಮಾ `ಬಾಬಾ’ ಎಂದು ಟ್ವೀಟ್ಟರ್‌ನಲ್ಲಿ ನಟ ಬರೆದುಕೊಂಡಿದ್ದಾರೆ. ಇದನ್ನೂ ಓದಿ: Kantara ಸಂಘರ್ಷಕ್ಕೆ ತೆರೆ: `ವರಾಹರೂಪಂ’ ಹಾಡಿಗಿದ್ದ ಅಡಚಣೆ ನಿವಾರಣೆ

    ಇಪ್ಪತ್ತು ವರ್ಷಗಳ ಹಿಂದೆ ತೆರೆಗೆ ಮೇಲೆ ಕಮಾಲ್ ಮಾಡೋದರಲ್ಲಿ ಬಾಬಾ ಸಿನಿಮಾ ಸೋತಿತ್ತು. ಈಗ `ಕಾಂತಾರ’ (Kantara Film) ಚಿತ್ರದ ಯಶಸ್ಸು ಚಿತ್ರದಲ್ಲಿನ ದೈವ ಶಕ್ತಿ ನೋಡಿ, `ಬಾಬಾ’ ಚಿತ್ರದ ರಿಲೀಸ್‌ಗೆ ತಲೈವಾ ಮನಸ್ಸು ಮಾಡಿದ್ದಾರೆ. `ಬಾಬಾ’ ಚಿತ್ರದ ದೈವ ಶಕ್ತಿಯ ಒಳಗೊಂಡ ಚಿತ್ರವಾಗಿದ್ದು, ಡಿ.12ರಂದು ತಮಿಳುನಾಡು ಸೇರಿದಂತೆ ರಾಜ್ಯದ ಎಲ್ಲೆಡೆ ಸಿನಿಮಾ ರಿಲೀಸ್ ಆಗುತ್ತಿದೆ.

     

    View this post on Instagram

     

    A post shared by Rishab Shetty (@rishabshettyofficial)

    ಸಿನಿಮಾಗೆ ಹೊಸ ರೀತಿಯ ಕಲರ್ ಗ್ರೇಡಿಂಗ್, ಮತ್ತೊಮ್ಮೆ ರಜನೀಕಾಂತ್ ವಾಯ್ಸ್ ಡಬ್ಬಿಂಗ್ ಮಾಡಿ, ಭಿನ್ನವಾಗಿ ಅಭಿಮಾನಿಗಳ ಮನ ತಲುಪಲು ರೆಡಿಯಾಗಿದ್ದಾರೆ. 20 ವರ್ಷಗಳ ಹಿಂದೆ ಸೋತಿದ್ದ ಬಾಬಾ ಸಿನಿಮಾ ಇದೀಗ ಗೆಲ್ಲುತ್ತಾ, ಕಾಂತಾರ ಚಿತ್ರದ ಸ್ಪೂರ್ತಿ ಪಡೆದು ಮುನ್ನುಗ್ಗುತ್ತಿರುವ ತಲೈವಾ ಸಕ್ಸಸ್ ಸಿಗುತ್ತಾ ಎಂದು ಕಾದುನೋಡಬೇಕಿದೆ.

    Live Tv
    [brid partner=56869869 player=32851 video=960834 autoplay=true]

  • `ಜೈಲರ್’ ಚಿತ್ರದ ಸೆಟ್‌ನಲ್ಲಿ ಶಿವಣ್ಣನನ್ನು ಭೇಟಿಯಾದ ಶಿವಕಾರ್ತಿಕೇಯನ್

    `ಜೈಲರ್’ ಚಿತ್ರದ ಸೆಟ್‌ನಲ್ಲಿ ಶಿವಣ್ಣನನ್ನು ಭೇಟಿಯಾದ ಶಿವಕಾರ್ತಿಕೇಯನ್

    ಜನಿಕಾಂತ್ (Rajanikanth) 169ನೇ ಚಿತ್ರ `ಜೈಲರ್’ (Jailer) ಸಿನಿಮಾ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಹ್ಯಾಟ್ರಿಕ್ ಹೀರೋ ಶಿವಣ್ಣ(Shivarajkumar) ಕೂಡ ತಲೈವಾ ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಈಗ ಈ ಚಿತ್ರದ ಸೆಟ್‌ನಲ್ಲಿ ಶಿವನನ್ನು ಶಿವಕಾರ್ತಿಕೇಯನ್ ಭೇಟಿಯಾಗಿದ್ದಾರೆ.

    ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ `ಜೈಲರ್’ (Jailer)ಸಿನಿಮಾದಲ್ಲಿ ರಜನಿಕಾಂತ್ ಜೊತೆ ಕನ್ನಡದ ಸೂಪರ್ ಹೀರೋ ಶಿವಣ್ಣ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಶಿವಣ್ಣನ ಫಸ್ಟ್ ಲುಕ್ ಸಖತ್ ಸದ್ದು ಮಾಡಿತ್ತು. ಈ ಸಿನಿಮಾದ ಶೂಟಿಂಗ್‌ನಲ್ಲಿ ಪಾಲ್ಗೊಂಡಿರುವ ಶಿವನನ್ನು ತಮಿಳಿನ ಹೀರೋ ಶಿವಕಾರ್ತಿಕೇಯನ್ (Sivakarthikeyan) ಮೀಟ್ ಮಾಡಿದ್ದಾರೆ.

     

    View this post on Instagram

     

    A post shared by DrShivaRajkumar (@nimmashivarajkumar)

    `ಜೈಲರ್’ ಚಿತ್ರದಲ್ಲಿ ಶಿವಕಾರ್ತಿಕೇಯನ್ ಕೂಡ ಸ್ಪೆಷಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ತಲೈವಾ ಬಹುನಿರೀಕ್ಷಿತ ಚಿತ್ರದಲ್ಲಿ ಶಿವಕಾರ್ತಿಕೇಯನ್ ಕೂಡ ಇರಲಿದ್ದಾರೆ. ಆದರೆ ಅವರ ಪಾತ್ರದ ಬಗ್ಗೆ ಗುಟ್ಟುನ್ನ ಚಿತ್ರತಂಡ ಬಿಟ್ಟು ಕೊಟ್ಟಿಲ್ಲ. ಶಿವಣ್ಣನನ್ನು ಮೀಟ್ ಆಗಿ ಯೋಗ ಕ್ಷೇಮ ವಿಚಾರಿಸಿದ್ದಾರೆ. ಈ ಫೋಟೋ ಸಖತ್ ವೈರಲ್ ಆಗುತ್ತಿದೆ. ಇದನ್ನೂ ಓದಿ:ಎಂಗೇಜ್ ಆದ ಖುಷಿಯಲ್ಲಿ ಗೆಳೆಯನ ಜೊತೆ ಆಮೀರ್‌ ಖಾನ್‌ ಪುತ್ರಿಯ ಲಿಪ್‌ಲಾಕ್

    ತಲೈವಾ 169ನೇ ಸಿನಿಮಾವಾಗಿರುವ ಕಾರಣ ಚಿತ್ರದ ಬಗ್ಗೆ ಫ್ಯಾನ್ಸ್ ಸಿಕ್ಕಾಪಟ್ಟೆ ನಿರೀಕ್ಷೆಯನ್ನ ಇಟ್ಟುಕೊಂಡಿದ್ದಾರೆ. ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ.

    Live Tv
    [brid partner=56869869 player=32851 video=960834 autoplay=true]

  • ನಕ್ಷತ್ರದ ಕಣ್ಣುಗಳಿರುವ ಅಪ್ಪು ದೇವರ ಮಗು ಎಂದು ಹಾಡಿ ಹೊಗಳಿದ ರಜನಿಕಾಂತ್

    ನಕ್ಷತ್ರದ ಕಣ್ಣುಗಳಿರುವ ಅಪ್ಪು ದೇವರ ಮಗು ಎಂದು ಹಾಡಿ ಹೊಗಳಿದ ರಜನಿಕಾಂತ್

    ಪುನೀತ್ ರಾಜ್‌ಕುಮಾರ್(Puneeth Rajkumar) ಮಾಡಿರುವ ಕಲಾಸೇವೆ ಮತ್ತು ಸಾಮಾಜಿಕ ಸೇವೆಯನ್ನ ಗುರುತಿಸಿ ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾಗಿರುವ ಅಪ್ಪು ರಜನಿಕಾಂತ್‌ ಅವರು ಮಾತನಾಡಿದ್ದಾರೆ. ಅಪ್ಪು ಕರ್ನಾಟಕ ರತ್ನ ಕಾರ್ಯಕ್ರಮಕ್ಕೆ ರಜನಿಕಾಂತ್ ಮತ್ತು ಜ್ಯೂ.ಎನ್‌ಟಿಆರ್ ಕೂಡ ಭಾಗವಹಿಸಿದ್ದು, ಈ ವೇಳೆ ತಲೈವಾ ಅಪ್ಪು ಬಗ್ಗೆ ಹಾಡಿ ಹೊಗಳಿದ್ದಾರೆ.

    ಕನ್ನಡದ ಚಿತ್ರರಂಗದ ಮಹಾನ್ ವ್ಯಕ್ತಿ ಆಗಿರುವ ಅಪ್ಪು ಇಂದು ಕರ್ನಾಟಕ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈ ಸಮಾರಂಭಕ್ಕೆ ರಜನಿಕಾಂತ್ ಕೂಡ ಸಾಕ್ಷಿಯಾಗಿದ್ದಾರೆ. ಪುನೀತ್ ಬಗ್ಗೆ ಕಾಲಿವುಡ್ ನಟ ರಜನಿಕಾಂತ್ ಮಾತನಾಡಿದ್ದಾರೆ. ಮೊದಲಿಗೆ ಕನ್ನಡದ ಹಬ್ಬಕ್ಕೆ ಶುಭಾಶಯಗಳು ತಿಳಿಸಿ, ಪುನೀತ್ ಒಬ್ಬರು ಅಪ್ಪು ದೇವರ ಮಗುವಾಗಿದ್ದರು. ಅವರ ಆತ್ಮ ನಮ್ಮ ನಡುವೆ ಇದೆ ಎಂದಿದ್ದಾರೆ.

    1979ರಂದು ನಾನು ಅಪ್ಪುನ ಮೊದಲು ಚೆನ್ನೈನಲ್ಲಿ ನೋಡಿದ್ದು, ರಾಜ್‌ಕುಮಾರ್ ಜೊತೆ ಪುನೀತ್ ಕೂಡ ಶಬರಿಮಲೆಗೆ ಬರುತ್ತಿದ್ದರು. ನಕ್ಷತ್ರದ ಕಣ್ಣುಗಳಿರುವ ಅಪ್ಪುನ, ಅಣ್ಣಾವ್ರ ಹೆಗೆಲ ಮೇಲೆ ಕೂರಿಸಿಕೊಂಡು 48 ಕಿಲೋ ಮೀ. ನಡೆಯುತ್ತಿದ್ದರು. ಅಂದು ಅಪ್ಪು ಸಿನಿಮಾ ನೋಡುತ್ತೀರಾ ಎಂದು ಅಣ್ಣಾವ್ರು ಹೇಳಿದ್ದರು. ಅಪ್ಪು ಚಿತ್ರ ನೋಡಿ, 100 ದಿನ ಓಡುತ್ತೆ ಎಂದಿದ್ದೇ ಅಂದರಂತೆ ಅಪ್ಪು ಸಿನಿಮಾ 100 ದಿನ ಓಡಿತ್ತು. ನಂತರ ಪುನೀತ್‌ ನಟಿಸಿದ ಅಪ್ಪು ಸಿನಿಮಾಗೆ ನಾನೇ ಅವಾರ್ಡ್ ಕೊಟ್ಟಿದ್ದೆ ಆ ದಿನವನ್ನ ಇಂದಿಗೂ ಮರೆಯಲು ಸಾಧ್ಯವಿಲ್ಲ.

    ಅಪ್ಪು ಸಾವಿನ ಸಮಯಲ್ಲಿ ಅಷ್ಟೊಂದು ಜನ ಯಾಕೆ ಬಂದರು. ಅವರ ವ್ಯಕ್ತಿತ್ವಕ್ಕೆ ಬಂದರು. ಅಪ್ಪು ಮಾಡಿರುವ ಕೆಲಸಕ್ಕೆ ಅಷ್ಟೊಂದು ಜನ ಬಂದರು, ಅವರು ಸಮಾಜಕ್ಕೆ ಆದರ್ಶವಾಗಿದ್ದರು ಎಂದು ಅಪ್ಪುನ ರಜನೀಕಾಂತ್ ಹಾಡಿಹೊಗಳಿದ್ದಾರೆ. ಈ ವೇಳೆ ಪುನೀತ್ ರಾಜ್‌ಕುಮಾರ್ ಮರಣೋತ್ತರ ಪ್ರಶಸ್ತಿಯನ್ನ ಅಶ್ವಿನಿ ಪುನೀತ್‌ಗೆ ಸರ್ಕಾರ ಪರವಾಗಿ ಸಿಎಂ ಬೊಮ್ಮಾಯಿ ಪ್ರದಾನ ಮಾಡಿದ್ದಾರೆ. ಈ ವೇಳೆ ರಜನೀಕಾಂತ್ ಜೊತೆ ಸುಧಾಮೂರ್ತಿ, ಜ್ಯೂ.ಎನ್‌ಟಿಆರ್, ರಾಜ್‌ಕುಮಾರ್ ಕುಟುಂಬ ಕೂಡ ಭಾಗಿಯಾಗಿದ್ದರು.

    Live Tv
    [brid partner=56869869 player=32851 video=960834 autoplay=true]

  • ಸಿನಿಮಾ ಒಂದು ಚಿಕ್ಕ ಕುಟುಂಬ, ಇಲ್ಲಿ ಅಸೂಯೆಗೆ ಜಾಗವಿಲ್ಲ: ಕಮಲ್ ಹಾಸನ್

    ಸಿನಿಮಾ ಒಂದು ಚಿಕ್ಕ ಕುಟುಂಬ, ಇಲ್ಲಿ ಅಸೂಯೆಗೆ ಜಾಗವಿಲ್ಲ: ಕಮಲ್ ಹಾಸನ್

    ಕಾಲಿವುಡ್‌ನ ಬಹುನಿರೀಕ್ಷಿತ ಸಿನಿಮಾ `ಪೊನ್ನಿಯನ್ ಸೆಲ್ವನ್'(Ponniyin Selvan) ಚಿತ್ರ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಈ ಚಿತ್ರದ ಅದ್ದೂರಿ ಇವೆಂಟ್‌ನಲ್ಲಿ ರಜನಿಕಾಂತ್(Rajanikanth) ಮತ್ತು ಕಮಲ್ ಹಾಸನ್ (Kamal Haasan) ಕೂಡ ಭಾಗವಹಿಸಿ, ಚಿತ್ರರಂಗದ ಬಗ್ಗೆ ಮಾತನಾಡಿದ್ದಾರೆ.

    ಮಣಿರತ್ನಂ (Mani Ratnam) ನಿರ್ದೇಶನದ `ಪೊನ್ನಿಯನ್ ಸೆಲ್ವನ್’ ಚಿತ್ರದ ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ ರಜನಿಕಾಂತ್ ಮತ್ತು ಕಮಲ್ ಹಾಸನ್ ಹೈಲೈಟ್ ಆಗಿದ್ದರು. ಈ ವೇಳೆ ರಜನಿಕಾಂತ್ ಜತೆಗಿನ ಸ್ನೇಹ ಮತ್ತು ಸಿನಿಮಾ ಕುಟುಂಬವನ್ನ ಉದ್ದೇಶಿಸಿ ಕಮಲ್ ಹಾಸನ್ ಮಾತನಾಡಿದ್ದಾರೆ. ಇದನ್ನೂ ಓದಿ:`ಪೊನ್ನಿಯನ್ ಸೆಲ್ವನ್’ ಇವೆಂಟ್‌ನಲ್ಲಿ ಬ್ಲ್ಯಾಕ್ ಬ್ಯೂಟಿಯಾಗಿ ಮಿಂಚಿದ ಐಶ್ವರ್ಯಾ ರೈ

    40 ವರ್ಷಗಳಿಂದ ರಜನಿಕಾಂತ್ ಮತ್ತು ಕಮಲ್ ಹಾಸನ್ ಇಬ್ಬರು ಸ್ನೇಹಿತರು. ನಮ್ಮ ನಡುವೆ ಅಸೂಯೆಗೆ ಜಾಗವಿಲ್ಲ. ಸಿನಿಮಾ ಒಂದು ಕುಟುಂಬ, ಇಲ್ಲಿ ಅಸೂಯೆಗೆ ಜಾಗವಿಲ್ಲ ಎಂದು ನಟ ಕಮಲ್ ಮಾತನಾಡಿದ್ದಾರೆ. ಇನ್ನು 30 ವರ್ಷಗಳ ಹಿಂದೆಯೇ `ಪೊನ್ನಿಯನ್ ಸೆಲ್ವನ್’ ಚಿತ್ರವನ್ನು ಕಮಲ್ ಮತ್ತು ರಜನಿಕಾಂತ್ ಒಟ್ಟಿಗೆ ಮಾಡಲು ನಿರ್ಧರಿಸಲಾಗಿತ್ತು ಎಂಬ ವಿಚಾರ ಈ ಇವೆಂಟ್‌ನಲ್ಲಿ ಬಹಿರಂಗಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • `ಜೈಲರ್’ ಲುಕ್‌ನಲ್ಲಿ ರಜನಿಕಾಂತ್ ಮಿಂಚಿಂಗ್: ಹೇಗಿರಲಿದೆ ಶಿವಣ್ಣನ ಲುಕ್?

    `ಜೈಲರ್’ ಲುಕ್‌ನಲ್ಲಿ ರಜನಿಕಾಂತ್ ಮಿಂಚಿಂಗ್: ಹೇಗಿರಲಿದೆ ಶಿವಣ್ಣನ ಲುಕ್?

    ಕಾಲಿವುಡ್‌ನ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ 169ನೇ ಸಿನಿಮಾ ಜೈಲರ್ ಪೋಸ್ಟರ್ ರಿಲೀಸ್ ಆಗಿದೆ. ತಲೈವಾ ಲುಕ್ ನೋಡಿ ಫ್ಯಾನ್ಸ್ ದಂಗಾಗಿದ್ದಾರೆ. ಜತೆಗೆ ನೆಚ್ಚಿನ ನಟ ಶಿವರಾಜ್‌ಕುಮಾರ್ ಪಾತ್ರದ ಲುಕ್ ಹೇಗಿರಬಹುದು ಎಂದು ಫ್ಯಾನ್ಸ್ ಊಹಿಸುತ್ತಿದ್ದಾರೆ.

    ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಬಹುನಿರೀಕ್ಷಿತ `ಜೈಲರ್’ ಚಿತ್ರದ ಮೂಲಕ ತಲೈವಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ಪೋಸ್ಟರ್ ಲುಕ್ ಕೂಡ ರಿವೀಲ್ ಆಗಿದ್ದು, ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ರಜನೀಕಾಂತ್ ಮಿಂಚಿದ್ದಾರೆ. ಸಿಂಪಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು ಕೂಡ ರಜನೀಕಾಂತ್ ಗತ್ತಿಗೆ ಫ್ಯಾನ್ಸ್ ಫುಲ್ ಆಗಿದೆ. ಇದನ್ನೂ ಓದಿ:ಮೆಗಾಸ್ಟಾರ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್: ಗಾಡ್ ಫಾದರ್‌ಗೆ ಸಲ್ಲು ಬಾಯ್ ಸಾಥ್

    ತಲೈವಾ ನಟನೆಯ 169ನೇ ಈ ಸಿನಿಮಾಗೆ ರಜನಿಕಾಂತ್ ಜೊತೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಕಾಣಿಸಿಕೊಳ್ಳುತ್ತಿರುವ ವಿಶೇಷ. ತಲೈವಾ ಜತೆ ಶಿವಣ್ಣ ಕೂಡ ಪ್ರಮುಖ ಪಾತ್ರಕ್ಕೆ ಸಾಥ್ ನೀಡಲಿದ್ದಾರೆ. ಇಂದಿನಿಂದ ಶೂಟಿಂಗ್ ಶುರುವಾಗಿದೆ. ತಲೈವಾ ಜತೆ ಬಾಹುಬಲಿ ಖ್ಯಾತಿ ರಮ್ಯಾ ಕೃಷ್ಣ ಕೂಡ ಸಾಥ್ ನೀಡಿದ್ದಾರೆ.

    ಜೈಲಿನಲ್ಲಿ ಕದೀಮರನ್ನು ಬೆಂಡೆತ್ತಲು ರಜನೀಕಾಂತ್ ಬರುತ್ತಿದ್ದಾರೆ. ತಲೈವಾ ಲುಕ್ ನೋಡಿ ಇದೀಗ ಫಿದಾ ಆಗಿರುವ ಫ್ಯಾನ್ಸ್, ಚಿತ್ರದಲ್ಲಿ ಶಿವಣ್ಣ ಲುಕ್ ಹೇಗಿರಬಹುದು ಎಂದು ಕಾತರದಿಂದ ಕಾಯ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]