Tag: rajanikanth

  • 12 ಎಕರೆ ಜಾಗದಲ್ಲಿ ಬಡವರಿಗಾಗಿ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾದ ರಜನಿಕಾಂತ್

    12 ಎಕರೆ ಜಾಗದಲ್ಲಿ ಬಡವರಿಗಾಗಿ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾದ ರಜನಿಕಾಂತ್

    ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಒಂದು ಮಹತ್ವದ ಕಾರ್ಯ ಮಾಡಲು ಮುಂದಾಗಿದ್ದಾರೆ. ಇದರ ಮೊದಲ ಹೆಜ್ಜೆ ಎಂಬಂತೆ ಚೆನ್ನೈ ಬಳಿಯ ಪ್ರಮುಖ ಜಿಲ್ಲೆಯೊಂದರಲ್ಲಿ ಬಹುದೊಡ್ಡ ಜಾಗ ಖರೀದಿಸಿದ್ದಾರೆ. ತಲೈವಾ ನಡೆಗೆ ಅಭಿಮಾನಿಗಳು ಭೇಷ್ ಎಂದಿದ್ದಾರೆ.

    ಹೆಸರು ಹಣ ಎಷ್ಟೇ ಇದ್ರೂ ಸರಳತೆಗೆ ಹೆಸರುವಾಸಿ ರಜನಿಕಾಂತ್. ಆಗಲೂ ಈಗಲೂ ಸೂಪರ್ ಸ್ಟಾರ್. ಕಂಡಕ್ಟರ್ ಆಗಿದ್ದವರು ಈಗ ಕೋಟ್ಯಾಧೀಶ. ಇದೇ ರಜನಿ ತಮಿಳಿಗರ ಆಸ್ತಿ. ಸದಾ ರಜನಿಕಾಂತ್‌ಗೆ ಏನಾದ್ರೊಂದು ಮಹತ್ವದ ಕಾಯಕ ಮಾಡೋ ಹಂಬಲ. ತಮಿಳುನಾಡಿನ ಚೆಂಗಲ್‌ಪೇಟ್ ಜಿಲ್ಲೆಯ ತಿರುಪರೂರ್ ರಿಜಿಸ್ಟರ್ ಕಚೇರಿಗೆ ಆಗಮಿಸಿದ್ದಾರೆ. ಯಾಕಂದ್ರೆ ಅದೇ ವ್ಯಾಪ್ತಿಗೆ ಬರೋ ಜಾಗದಲ್ಲಿ ಭರ್ತಿ 12 ಎಕರೆ ಭೂಮಿ ಖರೀದಿಸಿದ್ದಾರೆ ತಲೈವಾ. ಇದನ್ನೂ ಓದಿ:ಹೊಸ ಕಾರು ಖರೀದಿಸಿ ಕಂಡ ಕನಸನ್ನು ಈಡೇರಿಸಿಕೊಂಡ ತುಕಾಲಿ

    ಸಿನಿಮಾ ತಾರೆಗಳು ಜಾಗ ಖರೀದಿಸೋದು ಫಾರ್ಮ್ ಹೌಸ್ ನಿರ್ಮಿಸಿಕೊಳ್ಳೋದು ಸಾಮಾನ್ಯ. ಆದರೆ ರಜನಿ ಯಾವ ಉದ್ದೇಶಕ್ಕಾಗಿ ಭೂಮಿ ಖರೀದಿಸಿದ್ದಾರೆ ಅಂತ ಕೇಳಿದ್ರೆ ಆಶ್ಚರ್ಯ ಪಡ್ತೀರಿ. 12 ಎಕರೆ ಜಾಗದಲ್ಲಿ ತಲೈವಾ ಆಸ್ಪತ್ರೆ ನಿರ್ಮಿಸಲಿದ್ದಾರಂತೆ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಅಲ್ಲಿಯವರು ಚೆನ್ನೈಗೆ ಬರಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಆ ಜಾಗದಲ್ಲಿ ತಲೈವಾ ಆಸ್ಪತ್ರೆ ನಿರ್ಮಿಸಲು ಯೋಜನೆ ರೂಪಿಸಿದ್ದಾರೆ.

    ಇದೇನು ಮೊದಲ ಬಾರಿ ಏನೇಲ್ಲ. ಸಿನಿಮಾ ಜೊತೆಗೆ ಸಮಾಜಮುಖಿ ಕಾರ್ಯ ಮಾಡುವ ಮೂಲಕ ಆಗಾಗ ರಜನಿಕಾಂತ್ ಅಭಿಮಾನಿಗಳ ಮನಗೆಲ್ಲುತ್ತಾರೆ.

  • ತಲೈವಾ ಜೊತೆ ಸಿನಿಮಾ ಮಾಡ್ತಿದ್ದಾರೆ ಬಾಲಿವುಡ್ ಖ್ಯಾತ ನಿರ್ಮಾಪಕ

    ತಲೈವಾ ಜೊತೆ ಸಿನಿಮಾ ಮಾಡ್ತಿದ್ದಾರೆ ಬಾಲಿವುಡ್ ಖ್ಯಾತ ನಿರ್ಮಾಪಕ

    ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ಅವರು ಕಳೆದ ವರ್ಷ ಅಂತ್ಯದಲ್ಲಿ ‘ಜೈಲರ್’ (Jailer) ಮೂಲಕ ಸಕ್ಸಸ್ ಕಂಡಿದ್ದರು. ಆದರೆ ಈ ವರ್ಷ ಶುರುವಿನಲ್ಲೇ ‘ಲಾಲ್ ಸಲಾಮ್’ ಸಿನಿಮಾ ಮಕಾಡೆ ಮಲಗಿತ್ತು. ಈ ಚಿತ್ರದ ಸೋಲಿನ ಬೆನ್ನಲ್ಲೇ ಬಾಲಿವುಡ್ ಖ್ಯಾತ ನಿರ್ಮಾಪಕನ ಜೊತೆ ಸಿನಿಮಾ ಮಾಡಲು ತಲೈವಾ ಮುಂದಾಗಿದ್ದಾರೆ.

    ಮಗಳು ಐಶ್ವರ್ಯ ನಿರ್ದೇಶನದ ‘ಲಾಲ್ ಸಲಾಮ್’ (Lal Salam) ಚಿತ್ರದಲ್ಲಿ ರಜನಿಕಾಂತ್ ಅವರು ಬಹುಮುಖ್ಯ ಪಾತ್ರದಲ್ಲಿ ನಟಿಸಿದ್ದರು. ಆದರೆ ಈ ಸಿನಿಮಾ ಎಲ್ಲರ ನಿರೀಕ್ಷೆಯಂತೆ ಗಳಿಕೆ ಮಾಡಲಿಲ್ಲ. ಈಗ ಬಾಲಿವುಡ್‌ನ ಫೇಮಸ್ ನಿರ್ಮಾಪಕ ಸಾಜಿದ್ ನಾಡಿಯಾವಾಲ (Sajid Nadiadwala) ಜೊತೆ ತಲೈವಾ ಸಿನಿಮಾ ಮಾಡ್ತಿದ್ದಾರೆ. ಇದರ ಬಗ್ಗೆ ಅಧಿಕೃತವಾಗಿ ನಿರ್ಮಾಪಕ ಸಾಜಿದ್ ಅವರೇ ಮಾಹಿತಿ ನೀಡಿದ್ದಾರೆ.

    ರಜನಿಕಾಂತ್ ಜೊತೆ ಕೆಲಸ ಮಾಡುವುದು ಅತ್ಯಂತ ಗೌರವಯುತ ಘಳಿಗೆ. ನಾವು ಒಟ್ಟಿಗೆ ಪ್ರಯಾಣ ಆರಂಭಿಸಲು ತಯಾರಿ ನಡೆಸುತ್ತಿದ್ದೇವೆ ಎಂದು ನಿರ್ಮಾಪಕ ಸಾಜಿದ್ ಸೋಷಿಯಲ್ ಮೀಡಿಯಾದಲ್ಲಿ ತಲೈವಾ ಜೊತೆಗಿನ ಫೋಟೋ ಶೇರ್ ಮಾಡಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಅಂಬಾನಿ ಪುತ್ರನ ಪ್ರೀ ವೆಡ್ಡಿಂಗ್‌ನಲ್ಲಿ ಬಾಲಿವುಡ್ ಸ್ಟಾರ್ಸ್

    ತಲೈವಾ ಹೊಸ ಚಿತ್ರ ಯಾವ ಭಾಷೆಯಲ್ಲಿ ಮೂಡಿ ಬರಲಿದೆ? ನಿರ್ದೇಶಕ, ತಂತ್ರಜ್ಞರು ಯಾರು? ಸಿನಿಮಾದಲ್ಲಿ ಯಾರೆಲ್ಲ ಇರಲಿದ್ದಾರೆ? ಎನ್ನುವ ಕುರಿತು ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಸದ್ಯ ಈ ಸುದ್ದಿ ಕೇಳಿ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಸಿನಿಮಾ ರಂಗದ ಇಬ್ಬರು ದಿಗ್ಗಜರು ಒಂದಾಗುತ್ತಿರುವುದುರಿಂದ ಹೆಚ್ಚಿನ ನಿರೀಕ್ಷೆ ಮೂಡಿದೆ.

    ‘ಜೈ ಭೀಮ್‌’ ನಿರ್ದೇಶಕನ ಜೊತೆ ಮತ್ತು ಲೋಕೇಶ್‌ ಕನಕರಾಜ್‌ ಜೊತೆ ಹೊಸ ಸಿನಿಮಾ ರಜನಿಕಾಂತ್‌ ಮಾಡ್ತಿದ್ದಾರೆ. ಇದರ ಜೊತೆ ಜೈಲರ್‌ ಪಾರ್ಟ್‌ 2ಗೆ ಕಥೆ ರೆಡಿಯಾಗುತ್ತಿದೆ. ಒಪ್ಪಿಕೊಂಡ ಮೊದಲ 2 ಸಿನಿಮಾಗಳು ಮುಗಿದ ಮೇಲೆ ತಲೈವಾ ಜೈಲರ್‌ 2ಗೆ ಸಾಥ್‌ ನೀಡಲಿದ್ದಾರೆ.

  • ಬರಲಿದೆ ‘ಜೈಲರ್ ಪಾರ್ಟ್ 2’- ತಲೈವಾ ಫ್ಯಾನ್ಸ್‌ಗೆ ಗುಡ್‌ ನ್ಯೂಸ್

    ಬರಲಿದೆ ‘ಜೈಲರ್ ಪಾರ್ಟ್ 2’- ತಲೈವಾ ಫ್ಯಾನ್ಸ್‌ಗೆ ಗುಡ್‌ ನ್ಯೂಸ್

    ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ‘ಜೈಲರ್’ (Jailer) ಸಿನಿಮಾ ಬ್ಲ್ಯಾಕ್ ಬಸ್ಟರ್ ಹಿಟ್ ಆಗಿತ್ತು. ಈಗ ‘ಜೈಲರ್’ ಪಾರ್ಟ್ 2 ಮಾಡುವ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಮತ್ತೆ ತಲೈವಾ ಮತ್ತು ನೆಲ್ಸನ್ ದಿಲೀಪ್ ಕುಮಾರ್ ಜೊತೆಯಾಗಿ ಬರುತ್ತಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಇದನ್ನೂ ಓದಿ:ಒಂದು ರಾತ್ರಿಗೆ 25 ಲಕ್ಷ ಎಂದಿದ್ದ ರಾಜಕಾರಣಿ ರಾಜು ವಿರುದ್ಧ ತ್ರಿಶಾ ಕಾನೂನು ಸಮರ

    ರಜನಿಕಾಂತ್ (Rajanikanth) ನಟನೆಯ ‘ಜೈಲರ್’ ಕಳೆದ ವರ್ಷ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಚಿತ್ರದಲ್ಲಿನ ರಜನಿಕಾಂತ್ ಖದರ್ ನೋಡಿ ಅಭಿಮಾನಿಗಳು ಇಷ್ಟಪಟ್ಟಿದ್ದರು. ಅಷ್ಟರ ಮಟ್ಟಿಗೆ ಜೈಲರ್ ಸಿನಿಮಾ ಕಮಾಲ್ ಮಾಡಿತ್ತು. ಈಗ ಮತ್ತೆ ಜೈಲರ್ ಪಾರ್ಟ್ 2 ಸುದ್ದಿ ಚಾಲ್ತಿಗೆ ಬಂದಿದೆ.

    ‘ಜೈಲರ್’ ಸಿನಿಮಾ ರಜನಿಕಾಂತ್ ಮತ್ತು ಡೈರೆಕ್ಟರ್ ನೆಲ್ಸನ್ ಇಬ್ಬರಿಗೂ ಮರುಜೀವ ಕೊಟ್ಟ ಸಿನಿಮಾ. ಹಾಗಾಗಿ ಪಾರ್ಟ್ 2ಗೆ (Jailer 2) ಕಥೆ ಬರೆಯಲು ಶುರು ಮಾಡಿದ್ದಾರಂತೆ ನೆಲ್ಸನ್. ತಲೈವಾ ಸದ್ಯ ‘ಜೈ ಭೀಮ್’ ಡೈರೆಕ್ಟರ್ ಮತ್ತು ಲೋಕೇಶ್ ಕನಗರಾಜ್ ಅವರ ನಿರ್ದೇಶನದಲ್ಲಿ ಸಿನಿಮಾ ಮಾಡಲಿದ್ದಾರೆ. ಇದನ್ನೂ ಓದಿ:‘ನಮ್ ಗಣಿ ಬಿ.ಕಾಂ ಪಾಸ್’ ಪಾರ್ಟ್ 2ಗೆ ಅಭಿಷೇಕ್ ಶೆಟ್ಟಿ ಸಿದ್ಧತೆ

    ಇದಾದ ಬಳಿಕ ‘ಜೈಲರ್ 2’ ತಂಡವನ್ನು ತಲೈವಾ ಸೇರಿಕೊಳ್ಳಲಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ವರ್ಕ್ ಶುರು ಮಾಡಿದ್ದಾರೆ ‘ಜೈಲರ್’ ಡೈರೆಕ್ಟರ್. ತಲೈವಾ ಗ್ರೀನ್ ಸಿಗ್ನಲ್ ಕೊಟ್ಟ ಮೇಲೆ ಶೂಟಿಂಗ್ ಶುರುವಾಗಲಿದೆ. ಪಾರ್ಟ್ 2 ಮೊದಲ ಭಾಗದಂತೆ ಬಿಗ್ ಬ್ರೇಕ್ ಕೊಡುತ್ತಾ ತಲೈವಾಗೆ ಮತ್ತೆ ಸಕ್ಸಸ್ ರುಚಿ ಸಿಗುತ್ತಾ? ಕಾಯಬೇಕಿದೆ.

    ಈ ಸುದ್ದಿ ಕೇಳಿ ಕಾಲಿವುಡ್ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ತಲೈವಾ ಜೊತೆ ಶಿವಣ್ಣ ಕೂಡ ಪಾರ್ಟ್ 2ನಲ್ಲಿ ಇದ್ದರೆ ಚೆನ್ನಾಗಿರುತ್ತೆ ಅಂತ ಮತ್ತೊಂದು ಗುಡ್ ನ್ಯೂಸ್‌ಗಾಗಿ ಕನ್ನಡಿಗರು ಎದುರು ನೋಡ್ತಿದ್ದಾರೆ. ಮೊದಲ ಭಾಗದಲ್ಲಿ ತಲೈವಾ-ಶಿವಣ್ಣ ಕಾಂಬೋ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಅದಕ್ಕೆ ಈ ಜೋಡಿ ಒಟ್ಟಿಗೆ ಬರಲಿ ಅಂತ ಫ್ಯಾನ್ಸ್ ಆಶಿಸುತ್ತಿದ್ದಾರೆ.

  • ‘ಲಾಲ್ ಸಲಾಂ’ ಸೋಲಿನ ಎಫೆಕ್ಟ್- ಲೋಕೇಶ್ ಕನಕರಾಜ್‌ಗೆ ತಲೈವಾ ವಾರ್ನಿಂಗ್

    ‘ಲಾಲ್ ಸಲಾಂ’ ಸೋಲಿನ ಎಫೆಕ್ಟ್- ಲೋಕೇಶ್ ಕನಕರಾಜ್‌ಗೆ ತಲೈವಾ ವಾರ್ನಿಂಗ್

    ಜನಿಕಾಂತ್ (Rajanikanth) ಗರಂ ಆಗಿದ್ದಾರೆ. ಅದು ಬೇರಾರ ವಿರುದ್ಧವೂ ಅಲ್ಲ. ದಿ ಗ್ರೇಟ್ ಡೈರೆಕ್ಟರ್ ಲೋಕೇಶ್ ಕನಕರಾಜ್ (Lokesh Kanagaraj) ವಿರುದ್ಧ. ‘ವಿಕ್ರಮ್’ನಂತ (Vikram) ಸೂಪರ್ ಹಿಟ್ ಕೊಟ್ಟ ಲೋಕೇಶ್ ಅವರು ಈಗ ತಲೈವಾ ಜೊತೆ ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಮುಂದಿನ ತಿಂಗಳೇ ಶೂಟಿಂಗ್ ಆರಂಭ. ಈ ಹೊತ್ತಲ್ಲಿ ತಲೈವ, ಕತೆ ಬದಲಾವಣೆ ಮಾಡಿ ಎಂದಿದ್ದಾರೆ. ಸಿನಿಮಾ ಬಗ್ಗೆ ಇಲ್ಲಿದೆ ಮಾಹಿತಿ.

    ರಜನಿಕಾಂತ್ ಅಷ್ಟು ಬೇಗ ಎಲ್ಲವನ್ನೂ ಒಪ್ಪಲ್ಲ. ಈಗಾಗಲೇ ಕೆಲವು ಸಿನಿಮಾಗಳನ್ನು ಯಾರದ್ದೋ ಮುಲಾಜಿಗೆ ಬಿದ್ದು ನಟಿಸಿದ್ದಾರೆ. ಅದರಿಂದ ಸೋಲಿನ ನೋವು ಕೂಡ ತಿಂದಿದ್ದಾರೆ. ಫೆ.9ರಂದು ರಿಲೀಸ್ ಆಗಿರೋ ‘ಲಾಲ್ ಸಲಾಂ’ (Lal Salam) ಮಕಾಡೆ ಮಲಗಿದೆ. ಅಫ್‌ಕೋರ್ಸ್ ಇದರಲ್ಲಿ ಅವರು ಅತಿಥಿ ನಟ. ಹೀಗಿರುವಾಗ ಲೋಕೇಶ್ ಜೊತೆ ಮಾಡುತ್ತಿರುವ ಚಿತ್ರಕ್ಕೆ ಕೊನೇ ಗಳಿಗೆಯಲ್ಲಿ ಕತೆ ಬದಲಿಸಿ ಎಂದು ವಾರ್ನಿಂಗ್ ಕೊಟ್ಟಿದ್ದಾರೆ ತಲೈವಾ. ಅದಕ್ಕಾಗಿ ಹೊಸ ತಂಡ ಕಟ್ಟಿ ಇದ್ದ ಕತೆಯಲ್ಲೇ ಮುಖ್ಯ ಬದಲಾವಣೆ ಮಾಡುತ್ತಿದ್ದಾರೆ ಡೈರೆಕ್ಟರ್ ಲೋಕೇಶ್. ಕಾರಣ ಮೊದಲಿದ್ದ ಕತೆಯಲ್ಲಿ ಸಿಕ್ಕಾಪಟ್ಟೆ ಹಿಂಸಾತ್ಮಕ ದೃಶ್ಯ ಮತ್ತು ರಕ್ತಪಾತ ಇತ್ತು. ಅದನ್ನು ಕಮ್ಮಿ ಮಾಡಿ ಎಂದು ನಿರ್ದೇಶಕರಿಗೆ ತಲೈವಾ ಕಿವಿಹಿಂಡಿದ್ದಾರೆ.

    ಲೋಕೇಶ್ ಸಿನಿಮಾಗಳಲ್ಲಿ ಹಿಂಸೆ, ಡ್ರಗ್ಸು ಇತ್ಯಾದಿ ಅಂಶ ಹೆಚ್ಚಾಗಿರುತ್ತವೆ. ಅದಕ್ಕಾಗಿ ಮೊದಲೇ ರಜನಿ ಕಂಡೀಷನ್ ಹಾಕಿದ್ದರು. ಲೋಕೇಶ್ ಕೂಡ ಇದರಲ್ಲಿ ಡ್ರಗ್ಸ್ ಎಳೆ ಇರುವುದಿಲ್ಲ ಎಂದಿದ್ದರು. ಅದಕ್ಕೆ ರಜನಿಕಾಂತ್ ಮುಂಚೆಯೇ ಎಚ್ಚರಿಕೆ ನೀಡಿದ್ದಾರೆ. ತಲೈವಾ ಮಾತಿಗೆ ಲೋಕೇಶ್ ಓಕೆ ಎಂದಿದ್ದಾರೆ. ಇನ್ನೇನು ಏಪ್ರಿಲ್ ತಿಂಗಳಲ್ಲಿ ಸಿನಿಮಾ ಶುರು. ‘ಲಿಯೋ’ದಲ್ಲಿ ಯಾಕೋ ಲೋಕೇಶ್ ಎಡವಿದ್ದರು.

    ಇದೀಗ ತಲೈವಾ ಸಲಹೆಯನ್ನು ಲೋಕೇಶ್ ಯಾವ ರೀತಿ ತೆಗೆದುಕೊಂಡು ಸಿನಿಮಾ ಸರಿದೂಗಿಸಿಕೊಂಡು ಹೋಗ್ತಾರೆ. ‘ತಲೈವರ್ 171’ ಚಿತ್ರದ ಮೂಲಕ ರಜನಿಕಾಂತ್ ಮತ್ತು ಲೋಕೇಶ್ ಇಬ್ಬರಿಗೂ ಸಕ್ಸಸ್ ಸಿಗುತ್ತಾ ಕಾದುನೋಡಬೇಕಿದೆ.

  • ‘ಲಾಲ್ ಸಲಾಂ’ ಸೋಲಿನ ಬೆನ್ನಲ್ಲೇ ಹೊಸ ಸಿನಿಮಾ ಘೋಷಿಸಿದ ತಲೈವ

    ‘ಲಾಲ್ ಸಲಾಂ’ ಸೋಲಿನ ಬೆನ್ನಲ್ಲೇ ಹೊಸ ಸಿನಿಮಾ ಘೋಷಿಸಿದ ತಲೈವ

    ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ನಟನೆಯ ‘ಲಾಲ್ ಸಲಾಂ’ (Lal Salaam) ಸಿನಿಮಾ ಫೆ.9ರಂದು ರಿಲೀಸ್ ಆಗಿದೆ. ಸಿನಿಮಾದಲ್ಲಿ ತಲೈವ ಸಖತ್ ಸ್ಟೈಲೀಶ್‌ ಆಗಿ ಕಂಡಿದ್ದಾರೆ. ಖಡಕ್ ಡೈಲಾಗ್ ಹೊಡೆದಿದ್ದಾರೆ. ರಜನಿ ಅಭಿಮಾನಿಗಳಿಗೆ ಏನೆಲ್ಲ ಬೇಕೊ ಎಲ್ಲವನ್ನೂ ಕೊಟ್ಟಿದ್ದಾರೆ. ಆದರೆ, ಅಂದುಕೊಂಡಷ್ಟು ಚಿತ್ರಕ್ಕೆ ಸಿನಿಮಾಗೆ ಉತ್ತಮ ರೆಸ್ಪಾನ್ಸ್ ಸಿಗಲಿಲ್ಲ. ಮೊದಲ ದಿನ ಗಳಿಕೆ ನಾಲ್ಕುವರೆ ಕೋಟಿ ಎಂದು ಅಂದಾಜಿಸಲಾಗಿದೆ. ‘ಲಾಲ್ ಸಲಾಂ’ ಸೋಲಿನ ಬೆನ್ನಲ್ಲೇ ಹೊಸ ಸಿನಿಮಾ ತಲೈವ ಘೋಷಿಸಿದ್ದಾರೆ.

    ತಲೈವ ಮುಂದಿನ ಸಿನಿಮಾಗೆ ‘ವೆಟ್ಟೈಯನ್’ ಲಾಲ್ ಸಲಾಂ ನಿರ್ಮಾಣ ಮಾಡಿರುವ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯೇ ಬಂಡವಾಳ ಹೂಡುತ್ತಿದೆ. ಈ ಸಿನಿಮಾಗೆ ಶೇಕಡ 80ರಷ್ಟು ಶೂಟಿಂಗ್ ಮುಕ್ತಾಯ ಆಗಿದೆ. ಇನ್ನುಳಿದ ಕೆಲಸಗಳು ಭರದಿಂದ ಸಾಗುತ್ತಿವೆ ಎಂದು ರಜನಿಕಾಂತ್ ಮಾಹಿತಿ ನೀಡಿದ್ದಾರೆ.

    ‌’ವೆಟ್ಟೈಯನ್’ ತಲೈವ ಅವರು ನಟಿಸುತ್ತಿರುವ 170ನೇ ಸಿನಿಮಾ. ಟೈಟಲ್ ಟೀಸರ್ ನೋಡಿದ ಎಲ್ಲರೂ ಈಗಾಗಲೇ ಮೆಚ್ಚುಗೆ ಸೂಚಿಸಿದ್ದಾರೆ. ಈ ಸಿನಿಮಾಗೆ ‘ಜೈ ಭೀಮ್’ ಖ್ಯಾತಿಯ ಟಿ.ಜೆ. ಜ್ಞಾನವೇಲ್ ಅವರು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇದನ್ನೂ ಓದಿ:ನಮ್ಮ ನಡುವೆ ತಂದಿಟ್ಟರೆ ಶೂಟ್ ಮಾಡ್ತೀನಿ: ಬೆಂಕಿ ತನಿಷಾ ಮಾತು

    ‘ಜೈಲರ್’ ಸಿನಿಮಾ ಮೂಲಕ ರಜನಿಕಾಂತ್ ಸಕ್ಸಸ್ ಕಂಡಿದ್ದರು. ಆದರೆ ಇದೀಗ ಪುತ್ರಿ ಐಶ್ವರ್ಯ ರಜನಿಕಾಂತ್ ನಿರ್ದೇಶನದ ‘ಲಾಲ್ ಸಲಾಂ’ ಚಿತ್ರದಿಂದ ಸೋಲು ಕಂಡಿದ್ದಾರೆ. ಮುಂದಿನ ಸಿನಿಮಾದಿಂದ ಗೆಲುವಿನ ಟ್ರ್ಯಾಕ್‌ಗೆ ತಲೈವ ಕಮ್‌ಬ್ಯಾಕ್ ಆಗ್ತಾರಾ ಕಾಯಬೇಕಿದೆ.

  • ತಲೈವ ಪಾತ್ರಕ್ಕೆ ಧ್ವನಿ ಕೊಟ್ಟ ಸಾಯಿಕುಮಾರ್

    ತಲೈವ ಪಾತ್ರಕ್ಕೆ ಧ್ವನಿ ಕೊಟ್ಟ ಸಾಯಿಕುಮಾರ್

    ಶ್ವರ್ಯ ರಜನಿಕಾಂತ್ ನಿರ್ದೇಶನದ ‘ಲಾಲ್ ಸಲಾಮ್’ (Lal Salaam) ಸಿನಿಮಾ ಇದೇ ಫೆ.9ರಂದು ರಿಲೀಸ್ ಆಗಲಿದೆ. ಮಗಳ ಸಿನಿಮಾದಲ್ಲಿ ತಲೈವ ಪವರ್‌ಫುಲ್ ಪಾತ್ರದಲ್ಲಿ ನಟಿಸಿದ್ದಾರೆ. ಇದೀಗ ರಿಲೀಸ್‌ಗೆ ಸಜ್ಜಾಗಿರೋ ವೇಳೆ ಚಿತ್ರದ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಸಿಕ್ಕಿದೆ. ಕನ್ನಡದ ನಟ ಸಾಯಿಕುಮಾರ್ (Saikumar) ಅವರು ರಜನಿಕಾಂತ್ (Rajanikanth) ಪಾತ್ರಕ್ಕೆ ಧ್ವನಿ ನೀಡಿದ್ದಾರೆ.

    ‘ಲಾಲ್ ಸಲಾಮ್’ ಅಪ್ಪಟ ತಮಿಳು ಸಿನಿಮಾ. ತಮಿಳಿನ ಜೊತೆಗೆ ತೆಲುಗಿನಲ್ಲೂ ಸಿನಿಮಾ ಸಿದ್ಧವಾಗಿದೆ. ಈ ಚಿತ್ರದ ತೆಲುಗು ಟ್ರೈಲರ್ ಇತ್ತೀಚೆಗೆ ರಿಲೀಸ್ ಆಗಿದೆ. ತೆಲುಗು ವರ್ಷನ್‌ನಲ್ಲಿ ರಜನಿಕಾಂತ್ (Rajanikanth) ಪಾತ್ರಕ್ಕೆ ಸಾಯಿಕುಮಾರ್ ಧ್ವನಿ ನೀಡಿದ್ದಾರೆ. ಅವರ ಖಡಕ್ ವಾಯ್ಸ್ ಪಾತ್ರದ ತೂಕವನ್ನು ಹೆಚ್ಚಿಸಿದೆ. ಇದನ್ನೂ ಓದಿ:‘ಮಂಡ್ಯ ಹೈದ’ನ ಜೊತೆ ಪ್ರತಿಭಾನ್ವಿತ ನಿರ್ದೇಶಕ ವಿ. ಶ್ರೀಕಾಂತ್ ಆಗಮನ

    ಇಷ್ಟು ವರ್ಷಗಳ ಕಾಲ ರಜನಿಕಾಂತ್ (Rajanikanth) ಸಿನಿಮಾಗಳು ತೆಲುಗಿಗೆ ಡಬ್ ಆದಾಗ ಅವರ ಪಾತ್ರಕ್ಕೆ ಗಾಯಕ ಮನೋ ಅವರು ಧ್ವನಿ ನೀಡುತ್ತಿದ್ದರು. ಅವರ ವಾಯ್ಸ್‌ಗೆ ಅಲ್ಲಿನ ಫ್ಯಾನ್ಸ್ ಅಡ್ಜಸ್ಟ್ ಆಗಿದ್ದರು. ಈಗ ಆ ಜಾಗಕ್ಕೆ ಸಾಯಿಕುಮಾರ್ ಅವರನ್ನು ತಂದಿದ್ದು ಕೆಲವರಿಗೆ ಬೇಸರ ಇದೆ. ಆದರೆ ಇನ್ನೂ ಕೆಲವರಿಗೆ ಸಾಯಿ ಕುಮಾರ್ ಅವರ ಖಡಕ್ ವಾಯ್ಸ್‌ನಲ್ಲಿ ಡೈಲಾಗ್ ಕೇಳಿ ಖುಷಿ ಆಗಿದೆ. ಸಿನಿಮಾ ನೋಡಲು ಅಭಿಮಾನಿಗಳು ಎದುರು ನೋಡ್ತಿದ್ದಾರೆ.

    ‘ಲಾಲ್ ಸಲಾಮ್‌’ ಸಿನಿಮಾ ಹಿಂದೂ ಹಾಗೂ ಮುಸ್ಲಿಂ ಧರ್ಮಗಳ ನಡುವೆ ನಡೆಯುವ ಘರ್ಷಣೆ ಮತ್ತು ಸಾಮರಸ್ಯದ ಕಥೆಯನ್ನು ಹೇಳಲಿದೆ. ಈ ಬಗ್ಗೆ ಟ್ರೈಲರ್‌ನಲ್ಲಿ ಸುಳಿವು ನೀಡಲಾಗಿದೆ. ಎಲ್ಲ ದೇವರೂ ಒಂದೇ ಎನ್ನುವ ಡೈಲಾಗ್ ಹೈಲೈಟ್ ಆಗಿದೆ. ಈ ಸಿನಿಮಾದಲ್ಲಿ ಆ್ಯಕ್ಷನ್ ಕೂಡ ಇದೆ. ತಲೈವ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ.

    ‘ಲಾಲ್ ಸಲಾಮ್‌’ ಚಿತ್ರದಲ್ಲಿ ತಲೈವಾ ಅತಿಥಿಯಾಗಿ ಖಡಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಷ್ಣು ವಿಶಾಲ್, ವಿಕ್ರಾಂತ್, ಧನ್ಯಾ ಬಾಲಕೃಷ್ಣನ್ ಸೇರಿದಂತೆ ಹಲವರು ನಟಿಸಿದ್ದಾರೆ. ಈ ಚಿತ್ರಕ್ಕೆ ಎ.ಆರ್.ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

  • 40 ನಿಮಿಷದ ಪಾತ್ರ, 1 ನಿಮಿಷಕ್ಕೆ 1 ಕೋಟಿ ಸಂಭಾವನೆ ಪಡೆದ ತಲೈವ

    40 ನಿಮಿಷದ ಪಾತ್ರ, 1 ನಿಮಿಷಕ್ಕೆ 1 ಕೋಟಿ ಸಂಭಾವನೆ ಪಡೆದ ತಲೈವ

    ಸೂಪರ್ ಸ್ಟಾರ್ ರಜನಿಕಾಂತ್ ಸಂಭಾವನೆ ಸಮಾಚಾರ ಕೇಳಿ ಬಣ್ಣದ ಲೋಕದ ನಿರ್ಮಾಪಕರು ಶಾಕ್ ಆಗಿದ್ದಾರೆ. ಇಷ್ಟೊಂದು ದುಡ್ಡು ಏನು ಮಾಡ್ತಾರೆ ಶಿವ ಶಿವ ಅಂತ ಜನ ಬೆರಗಾಗಿದ್ದಾರೆ. ಲಾಲ್ ಸಲಾಮ್ (Lal Salam)  ಸಿನಿಮಾಗೆ ತಲೈವ ಚಾರ್ಜ್ ಮಾಡಿರುವ ಸಂಭಾವನೆ ಕೇಳಿದ್ರೆ ಶಾಕ್ ಆಗ್ತೀರಾ. ಇದನ್ನೂ ಓದಿ:ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ನಿರ್ದೇಶಕ ಅಭಿಷೇಕ್ ಶೆಟ್ಟಿ

    ‘ಲಾಲ್ ಸಲಾಮ್’ ಸಿನಿಮಾ ರಿಲೀಸ್‌ಗೆ ದಿನಗಳು ಮಾತ್ರ ಬಾಕಿ ಇದೇ ಈ ಹೊತ್ತಿನಲ್ಲಿ ರಜನಿಕಾಂತ್ ಸಿನಿಮಾಗೆ ಪಡೆದ ಸಂಭಾವನೇ ಸಮಾಚಾರ ಸಖತ್ ಸೌಂಡ್ ಮಾಡ್ತಿದೆ. ಇಷ್ಟೊಂದು ದುಡ್ಡು ರಜನಿಕಾಂತ್ (Rajanikanth) ಏನ್ ಮಾಡ್ತಾರೆ ಅಂತ ಜನ ತಲೆಕೆಡಿಸಿಕೊಳ್ತಿದ್ದಾರೆ. ತಲೈವ ತಾಕತ್ತು ಅಂದ್ರೆ ಇದು ಗುರು ಅಂತ ಫ್ಯಾನ್ಸ್ ಮೆಚ್ಚಿಕೊಳ್ತಿದ್ದಾರೆ. ಕೋಟಿ ಕೋಟಿ ಕೊಟ್ಟ ನಿರ್ಮಾಪಕರು ಒಳ್ಳೆ ಓಪನಿಂಗ್ ಆಗಲಿ. ಹಾಕಿದ ಕಾಸು ಸೇಫ್ ಆಗಿ ವಾಪಸ್ ಬರಲಿ ಅಂತ ಕಾಯ್ತಿದ್ದಾರೆ.

    ಇಷ್ಟಕ್ಕೂ ರಜನಿಕಾಂತ್ ‘ಲಾಲ್ ಸಲಾಮ್’ ಸಿನಿಮಾದಲ್ಲಿ ಕಾಣಿಸೊದು 40 ನಿಮಿಷ ಮಾತ್ರವಂತೆ. ಈ 40 ನಿಮಿಷದ ಪಾತ್ರಕ್ಕೆ ತಲೈವ ಪಡೆದಿರುವ ಸಂಭಾವನೇ 40 ಕೋಟಿ ಅಂತ ಸುದ್ದಿಯಾಗಿದೆ. ಮಗಳ ನಿರ್ದೇಶನದ ಚಿತ್ರಕ್ಕೆ ಅಪ್ಪ ಜೊತೆಯಾಗಿದ್ದಾರೆ. ಟ್ರೈಲರ್‌ನಲ್ಲಿ ತಲೈವ ಪಂಚ್ ಡೈಲಾಗ್‌ಗೆ ಆಡಿಯನ್ಸ್ ಫಿದಾ ಆಗಿದ್ದಾರೆ. ಸಿನಿಮಾ ಗ್ಯಾರಂಟಿ ಹಿಟ್ ಅಂತ ಪಂಡಿತರು ಭವಿಷ್ಯ ನುಡಿದಿದ್ದಾರೆ. ಜನ ನೋಡಿ ಏನು ಹೇಳ್ತಾರೆ ಅನ್ನೊದಷ್ಟೇ ಈಗ ಬಾಕಿ ಉಳಿದಿದೆ.

    ಲಾಲ್ ಸಲಾಮ್ ಸಿನಿಮಾ ಇದೇ ಫೆ.9ರಂದು ರಿಲೀಸ್ ಆಗುತ್ತಿದೆ. ರಜನಿಕಾಂತ್ ಅತಿಥಿ ಪಾತ್ರದಲ್ಲಿ ಮಗಳ ಸಿನಿಮಾಗೆ ಸಾಥ್ ನೀಡಿದ್ದಾರೆ.

  • ರಾಮಮಂದಿರ ಉದ್ಘಾಟನೆಗೆ ರಜನಿಕಾಂತ್‌ಗೆ ಆಹ್ವಾನ

    ರಾಮಮಂದಿರ ಉದ್ಘಾಟನೆಗೆ ರಜನಿಕಾಂತ್‌ಗೆ ಆಹ್ವಾನ

    ಯೋಧ್ಯಯ ರಾಮಮಂದಿರ (Ayodhya Ram Mandir) ಲೋಕಾರ್ಪಣೆ ಕಾರ್ಯಕ್ರಮಕ್ಕೆ ದಕ್ಷಿಣ ಭಾರತದ ಕೆಲವೇ ಕೆಲವರು ನಟ ನಟಿಯರನ್ನು ಆಹ್ವಾನಿಸಿದ್ದು, ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್‌ಗೆ (Rajanikanth) ಆಹ್ವಾನ ನೀಡಲಾಗಿದೆ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮೋಹನ್ ಲಾಲ್, ಚಿರಂಜೀವಿ, ಕನ್ನಡದ ನಟ ಯಶ್ (Yash), ರಿಷಬ್ ಶೆಟ್ಟಿ (Rishab Shetty), ಸೇರಿದಂತೆ ಕೆಲವೇ ಕೆಲವು ನಟರಿಗೆ ಇಂಥದ್ದೊಂದು ಆಹ್ವಾನ ಸಿಕ್ಕಿದೆ.

    ರಾಮಮಂದಿರದ ಉದ್ಘಾಟನೆ ಸಂಭ್ರಮಕ್ಕೆ ಸಾಕ್ಷಿಯಾಗಲು ವಿಶೇಷವಾಗಿ ರಜನಿಕಾಂತ್ ಅವರಿಗೂ ಆಹ್ವಾನ ಸಿಕ್ಕಿದೆ. ಸದ್ಯ ಈ ಸುದ್ದಿ ಕೇಳಿ ತಲೈವಾ ಅಭಿಮಾನಿಗಳು ಖುಷಿಯಾಗಿದ್ದಾರೆ.

    ಜನವರಿ 22ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗುತ್ತಿದ್ದು, ಗ್ರಾಮ ಗ್ರಾಮಗಳಲ್ಲಿ ಕಾರ್ಯಕ್ರಮ ಪೂಜೆ ಪುನಸ್ಕಾರ ಆಯೋಜನೆಗೊಂಡಿದೆ. ಇದಕ್ಕಾಗಿ ಈಗಾಗಲೇ ಭರ್ಜರಿಯಾಗಿ ತಯಾರಿ ನಡೆಯುತ್ತಿದೆ. ಇದನ್ನೂ ಓದಿ:ಬೋಲ್ಡ್ ಆದ ‘ಟೋಬಿ’ ಸುಂದರಿ- ಕನ್ನಡದ ಆಲಿಯಾ ಭಟ್ ಎಂದ ಫ್ಯಾನ್ಸ್

    ಇತ್ತೀಚೆಗೆ ಇದರ ಭಾಗವಾಗಿ ಬೆಂಗಳೂರಿನ ಬನಶಂಕರಿ ಒಂದನೇ ಹಂತದಲ್ಲಿ ಅಯೋಧ್ಯೆಯ ರಾಮ ಮಂದಿರಕ್ಕೆ ಘಂಟಾದಾನ ಸಮರ್ಪಣೆ ಮಾಡಿದ್ದರು. 2.5 ಟನ್ ತೂಕದ ಘಂಟೆಗಳು, 30 ಸಣ್ಣ ಗಂಟೆಗಳು, 38 ಕೆಜಿ ತೂಕದ ಬೆಳ್ಳಿಯ ಸಾಮಾನುಗಳನ್ನು ಸಮರ್ಪಣೆ ಮಾಡಲಾಗಿತ್ತು. ಈ ಘಂಟಾದಾನ ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳು ಭಾಗಿಯಾಗಿದ್ದರು.

  • Thalaivar 170: ಶೂಟಿಂಗ್ ವೇಳೆ ಅವಘಡ- ರಿತಿಕಾ ಸಿಂಗ್ ಕೈಗೆ ಪೆಟ್ಟು

    Thalaivar 170: ಶೂಟಿಂಗ್ ವೇಳೆ ಅವಘಡ- ರಿತಿಕಾ ಸಿಂಗ್ ಕೈಗೆ ಪೆಟ್ಟು

    ‘ಜೈಲರ್’ (Jailer) ಸಿನಿಮಾ ಸಕ್ಸಸ್ ನಂತರ ರಜನಿಕಾಂತ್ (Rajanikanth) ತಮ್ಮ 170ನೇ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಈ ಚಿತ್ರತಂಡ ಕಡೆಯಿಂದ ಬೇಸರದ ಸುದ್ದಿಯೊಂದು ಸಿಕ್ಕಿದೆ. ‘ತಲೈವರ್ 170’ ಚಿತ್ರದ ನಟಿ ರಿತಿಕಾ ಸಿಂಗ್‌ಗೆ (Ritika Singh) ಚಿತ್ರೀಕರಣದ ವೇಳೆ ಕೈಗೆ ಪೆಟ್ಟಾಗಿದೆ.

    ತಲೈವರ್ 170 ಚಿತ್ರದಲ್ಲಿ ಮೂವರು ನಾಯಕಿಯರಿದ್ದು, ಅದರಲ್ಲಿ ರಿತಿಕಾ ಸಿಂಗ್‌ಗೆ ಶೂಟಿಂಗ್ ವೇಳೆ ಕೈಗೆ ಗಾಯವಾಗಿದೆ. ಈ ಬಗ್ಗೆ ಸ್ವತಃ ನಟಿ ರಿತಿಕಾ ಸಾಮಾಜಿಕ ಜಾಲತಾಣದಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಶ್ರೀಲೀಲಾ ಜೊತೆ ಆ್ಯಕ್ಟ್ ಮಾಡೋದೇ ದೊಡ್ಡ ಚಾಲೆಂಜ್ ಎಂದ ನಿತಿನ್

    ತಲೈವರ್ 170 ಚಿತ್ರದ ಸೆಟ್ ನಡೆದಿರುವ ಘಟನೆನಾ? ಎಂಬುದರ ಬಗ್ಗೆ ನಟಿ ರಿವೀಲ್ ಮಾಡಿಲ್ಲ. ಆದರೆ ಈ ಸಿನಿಮಾದ ಸೆಟ್‌ನಲ್ಲೇ ನಡೆದ ಘಟನೆ ಎನ್ನಲಾಗುತ್ತಿದೆ. ಮೊದಲು ತಮ್ಮ ಕೈಮೇಲೆ ಆಗಿರುವ ಗಾಯದ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. ನಾನು ತೋಳದೊಂದಿಗೆ ಜಗಳ ಮಾಡಿಕೊಂಡಂತೆ ಕಾಣುತ್ತಿದೆ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ಮೂಲಗಳ ಪ್ರಕಾರ, ತಲೈವರ್ 170 ಸಿನಿಮಾ ಚಿತ್ರೀಕರಣ ವೇಳೆ ನಟಿಗೆ ಕೈಗೆ ಸಣ್ಣ ಪುಟ್ಟ ಏಟಾಗಿದೆ. ಸೂಕ್ತ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಿತಿಕಾ ಸಿಂಗ್ ಇದೀಗ ವಿಶ್ರಾಂತಿ ಪಡೆಯುತ್ತಿದ್ದಾರೆ.

  • Thalaivar 171: ರಜನಿಕಾಂತ್‌ಗೆ ರಾಘವ್ ಲಾರೆನ್ಸ್ ವಿಲನ್

    Thalaivar 171: ರಜನಿಕಾಂತ್‌ಗೆ ರಾಘವ್ ಲಾರೆನ್ಸ್ ವಿಲನ್

    ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ (Rajanikanth) ನಟನೆಯ ‘ಜೈಲರ್’ (Jailer) ಸಿನಿಮಾದ ಭರ್ಜರಿ ಸಕ್ಸಸ್ ನಂತರ ಸಿನಿಮಾ ಆಯ್ಕೆಯಲ್ಲಿ ಅವರು ಮತ್ತಷ್ಟು ಚ್ಯುಸಿಯಾಗಿದ್ದಾರೆ. ಹೀಗಿರುವಾಗ ತಮ್ಮ 171ನೇ ಚಿತ್ರಕ್ಕೆ ಲೋಕೇಶ್ ಕನಗರಾಜ್ ಜೊತೆ ಕೈಜೋಡಿಸಿದ್ದಾರೆ. ತಲೈವಾ ಮುಂದೆ ಅಬ್ಬರಿಸಲು ನಟ ರಾಘವ್ ಲಾರೆನ್ಸ್ ಸಜ್ಜಾಗಿದ್ದಾರೆ. ಇದನ್ನೂ ಓದಿ:Bigg Boss: ಕನ್ನಡದ ನಟಿ ಶೋಭಾ ಶೆಟ್ಟಿ ಆಟಕ್ಕೆ ದಂಗಾದ ದೊಡ್ಮನೆ ಸ್ಪರ್ಧಿಗಳು

    ರಜನಿಕಾಂತ್ ಅವರ 171ನೇ ಚಿತ್ರದಲ್ಲಿ ವಿಲನ್‌ಗೂ ಕೂಡ ತೂಕವಾಗಿರುವಂತಹ ಪಾತ್ರವಿದ್ದು, ತಲೈವಾ ಮುಂದೆ ಅಬ್ಬರಿಸೋಕೆ ರಾಘವ್ ಸೂಕ್ತ ಎಂದೇನಿಸಿ ನಿರ್ದೇಶಕರು ಆಯ್ಕೆ ಮಾಡಿದ್ದಾರೆ.

    ತಲೈವಾ ನಟಿಸಿದ್ದ ಚಂದ್ರಮುಖಿ ಸಿನಿಮಾದ ಮುಂದಿನ ಭಾಗ ಚಂದ್ರಮುಖಿ 2 ಸಿನಿಮಾದಲ್ಲಿ ರಾಘವ್ ಲಾರೆನ್ಸ್ (Raghava Lawrence) ನಾಯಕನಾಗಿ ನಟಿಸಿದ್ದರು. ಮೊದಲ ಚಂದ್ರಮುಖಿ ಸಿನಿಮಾದಲ್ಲಿ ರಜನೀಕಾಂತ್ ನಿರ್ವಹಿಸಿದ್ದ ಪಾತ್ರವನ್ನೇ ರಾಘವ್ ನಿರ್ವಹಿಸಿದ್ದರು.

    ರಜನಿಕಾಂತ್ 171ನೇ ಸಿನಿಮಾ, ಲೋಕೇಶ್ ಕನಗರಾಜ್ ಅವರ 6ನೇ ಸಿನಿಮಾ ಆಗಲಿದೆ. ರಜನೀಕಾಂತ್‌ಗೆ ನಿರ್ದೇಶಿಸಲಿರುವ ಮೊದಲ ಸಿನಿಮಾ ಇದಾಗಿದ್ದು, ರಾಘವ್ ಲಾರೆನ್ಸ್-ತಲೈವಾ ಮೊದಲ ಬಾರಿಗೆ ಜೊತೆಯಾಗಿ ನಟಿಸಲಿದ್ದಾರೆ. ಸಿನಿಮಾದ ಚಿತ್ರೀಕರಣ ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ಪ್ರಾರಂಭ ಆಗಲಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]