Tag: rajanikanth

  • ಹಳೆಯ ಸಂಪ್ರದಾಯಕ್ಕೆ ಯಾರೂ ಹಸ್ತಕ್ಷೇಪ ಮಾಡ್ಬಾರ್ದು: ರಜನಿಕಾಂತ್ ಮನವಿ

    ಹಳೆಯ ಸಂಪ್ರದಾಯಕ್ಕೆ ಯಾರೂ ಹಸ್ತಕ್ಷೇಪ ಮಾಡ್ಬಾರ್ದು: ರಜನಿಕಾಂತ್ ಮನವಿ

    ಚೆನ್ನೈ: ಮಹಿಳೆಯರಿಗೆ ಶಬರಿಮಲೆ ದೇಗುಲ ಪ್ರವೇಶಕ್ಕೆ ಇರುವ ವಯಸ್ಸಿನ ಮಿತಿಯ ಹಳೆಯ ಸಂಪ್ರದಾಯದಲ್ಲಿ ಯಾರೋಬ್ಬರೂ ಹಸ್ತಕ್ಷೇಪ ಮಾಡಬಾರದೆಂದು ಸೂಪರ್ ಸ್ಟಾರ್ ರಜನಿಕಾಂತ್ ಅಭಿಪ್ರಾಯಪಟ್ಟಿದ್ದಾರೆ.

    ಶಬರಿಮಲೆ ದೇಗುಲಕ್ಕೆ ಮಹಿಳೆಯರ ಪ್ರವೇಶಕ್ಕೆ ಸುಪ್ರೀಂ ಕೋರ್ಟ್ ಅವಕಾಶ ಕಲ್ಪಿಸಿಕೊಟ್ಟಿದ್ದರ ಬಗ್ಗೆ ಇದೇ ಮೊದಲ ಬಾರಿಗೆ ನಟ ರಜನಿಕಾಂತ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ಅನಾದಿಕಾಲದಿಂದಲೂ ನಮ್ಮ ಸಮಾಜದಲ್ಲಿ ಆಚರಣೆಗಳನ್ನು ನಾವು ಕಟ್ಟುನಿಟ್ಟಾಗಿ ನಡೆಸಿಕೊಂಡು ಬಂದಿದ್ದೇವೆ. ಹೀಗಾಗಿ ಅವುಗಳನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ತಿಳಿಸಿದರು.

    ನಮ್ಮ ದೇಶದಲ್ಲಿರುವ ಪ್ರತಿಯೊಂದು ದೇವಾಲಗಳು ಸಹ, ತನ್ನದೇ ಆದ ರೂಢಿ-ಸಂಪ್ರದಾಯಗಳನ್ನು ಬೆಳೆಸಿಕೊಂಡು ಬಂದಿರುತ್ತವೆ. ವಿಶೇಷವಾಗಿ ಸ್ವಾಮಿ ಶಬರಿಮಲೆ ಅಯ್ಯಪ್ಪ ದೇಗುಲ ವಿಚಾರದಲ್ಲಿಯೂ ಸಹ ಅನೇಕ ಸಂಪ್ರದಾಯಗಳು ರೂಢಿಯಲ್ಲಿವೆ. ಹೀಗಾಗಿ ಶಬರಿಮಲ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ವಯಸ್ಸಿನ ವಿಚಾರಕ್ಕೆ ವಿಧಿಸಿರುವ ಹಳೆಯ ಸಂಪ್ರದಾಯದಲ್ಲಿ ಯಾರೋಬ್ಬರು ಸಹ ಹಸ್ತಕ್ಷೇಪ ಮಾಡಬಾರದೆಂಬುದು ನನ್ನ ಮನವಿ ಎಂದು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

    ಶಬರಿಮಲೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ತಲೆ ಬಾಗುತ್ತೇನೆ. ಕಾನೂನಿನ ಮುಂದೆ ಯಾರೂ ದೊಡ್ಡವರಲ್ಲ. ನಾನು ಸುಪ್ರೀಂ ಕೋರ್ಟ್ ಆದೇಶವನ್ನು ಗೌರವಿಸುತ್ತೇನೆ. ಆದರೆ ಇದು ಧರ್ಮ ಹಾಗೂ ಅದಕ್ಕೆ ಸಂಬಂಧಪಟ್ಟ ಆಚರಣೆಗಳ ವಿಷಯಕ್ಕೆ ಬಂದಾಗ ಎಲ್ಲರೂ ಎಚ್ಚರ ವಹಹಿಸಬೇಕಾಗುತ್ತದೆ ಎಂದು ಸ್ಪಷ್ಟನೆ ನೀಡಿದ್ರು.

    ಸುಪ್ರೀಂ ಕೋರ್ಟ್ ತೀರ್ಪು ಬೆನ್ನಲ್ಲೇ ಮಹಿಳೆಯರು ಕಳೆದ ಬುಧವಾರ ಶಬರಿಮಲೆಯ ಪ್ರವೇಶಕ್ಕೆ ಮುಂದಾಗಿದ್ದರು. ಆದರೆ ಮಹಿಳೆಯರಿಗೆ ಮಾತ್ರ ಯಾವುದೇ ಕಾರಣಕ್ಕೂ ಮಣಿಕಂಠನ ದರ್ಶನಕ್ಕೆ ಅವಕಾಶ ನೀಡುವುದಿಲ್ಲವೆಂದು ಪ್ರಭಾವಿ ನಾಯರ್ ಸಮಾಜ, ಹಿಂದೂಪರ ಸಂಘಟನೆಗಳು, ಬಿಜೆಪಿ ಹಾಗೂ ಕಾಂಗ್ರೆಸ್ ನಡೆಸಿದ ಪ್ರತಿಭಟನೆ ಹಿಂಸಾರೂಪವನ್ನೂ ಪಡೆದುಕೊಂಡಿತ್ತು. ಶಬರಿಗಿರಿ ತಲುಪುವ ಮುಖ್ಯ ದ್ವಾರವಾದ ನಿಳಕ್ಕಲ್‍ನಲ್ಲಿ ಬುಧವಾರ ಬೆಳಗ್ಗೆಯಿಂದಲೂ ಪ್ರಕ್ಷುಬ್ಧ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಯ್ಯಪ್ಪನ ದೇಗುಲದ ದ್ವಾರ ತೆರೆಯುತ್ತಿದ್ದಂತೆ ಉದ್ರಿಕ್ತರು ಪ್ರತಿಭಟನೆಯನ್ನು ಹಿಂಸಾರೂಪಕ್ಕೆ ಬದಲಾಯಿಸಿದ್ದರು. ಪರಿಣಾಮ ಅಯ್ಯಪ್ಪನ ದರ್ಶನಕ್ಕೆ ಆಗಮಿಸುತ್ತಿದ್ದ ಮಹಿಳೆಯರು ಹಾಗೂ ಹೆಣ್ಣು ಮಕ್ಕಳನ್ನು ಮಾರ್ಗಮಧ್ಯದಲ್ಲೇ ಹಿಂದೆಸರಿದಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕಾಳಾ ಸಿನ್ಮಾದಲ್ಲಿ ನಟಿಸಿದ ನಾಯಿಗೆ 2 ಕೋಟಿ ಕೊಡ್ತೀನಿ ಅಂದ್ರು ಕೊಡಲ್ಲ ಅಂದ ತರಬೇತುದಾರ

    ಕಾಳಾ ಸಿನ್ಮಾದಲ್ಲಿ ನಟಿಸಿದ ನಾಯಿಗೆ 2 ಕೋಟಿ ಕೊಡ್ತೀನಿ ಅಂದ್ರು ಕೊಡಲ್ಲ ಅಂದ ತರಬೇತುದಾರ

    ಚೆನ್ನೈ: ಜೂನ್ 7 ರಂದು ತೆರೆಕಾಣಲಿರುವ ರಜಿನಿಕಾಂತ್ ಅವರ ಚಿತ್ರ ಕಾಳಾದಲ್ಲಿ ನಟಿಸಿರುವ ಮಣಿ ಎಂಬ ನಾಯಿಯ ಬೆಲೆ ಬರೋಬ್ಬರಿ 2 ಕೋಟಿ ರೂ. ಅಂತಾ ಹೇಳಲಾಗುತ್ತಿದೆ.

    ಕಾಳಾ ಚಿತ್ರಕ್ಕೆಂದೆ ಶ್ವಾನ ತರಬೇತುದಾರ ಸೈಮನ್ 30 ಕ್ಕೂ ಹೆಚ್ಚು ನಾಯಿಗಳನ್ನು ಪರೀಕ್ಷೆ ಮಾಡಿದ್ದರು. ಮಣಿ ನಾಯಿ ಅವರಿಗೆ ಬೀದಿಯಲ್ಲಿ ಸಿಕ್ಕಿದೆ. ಚಿತ್ರದ ಪೋಸ್ಟರ್ ಗಳು ಬಿಡುಗಡೆಗೊಂಡ ಮೇಲೆ ಮಣಿಯ ಬೆಲೆ 2 ಕೋಟಿ ರೂ. ಆಗಿದೆ ಅಂತೆ.

    ಅಭಿಮಾನಿಗಳು ಸೈಮನ್ ಮನೆಗೆ ಬಂದು ನಾಯಿಯನ್ನು ಕೇಳುತ್ತಿದ್ದಾರೆ. ಮಣಿ ನಮ್ಮ ಕುಟುಂಬದ ಸದಸ್ಯನಿದ್ದಂತೆ. ಹಣ ನನಗೆ ಮುಖ್ಯವಲ್ಲ. ಬೆಳಗ್ಗೆ ಎದ್ದ ತಕ್ಷಣ ಅದರ ಮುಖ ನೋಡುತ್ತೇನೆ ಹೇಗೆ ಕೊಡಲಿ. ಬೀದಿಯಲ್ಲಿ ಸಿಕ್ಕ ಮಣಿಗೆ ತರಬೇತಿ ಕೊಡಲು ತುಂಬಾ ಕಷ್ಟವಾಗಿತ್ತು. ಆರಂಭದಲ್ಲಿ ಕಚ್ಚಲು ಬಂದಿತ್ತು. ಈಗ ಸ್ನೇಹಿತನಾಗಿದ್ದಾನೆ ಎಂದು ಹೇಳಿದರು.

    ಸೆಟ್ ನಲ್ಲಿ ಮಣಿ ರಜಿನಿಕಾಂತ್ ಅವರ ಜೊತೆ ಹೊಂದಿಕೊಂಡಿದ್ದರಿಂದ ನನ್ನ ಕೆಲಸವನ್ನು ಕಡಿಮೆ ಮಾಡಿತು. ಪೂರ್ತಿ ಸಿನಿಮಾದಲ್ಲಿ ಮಣಿ ರಜಿನಿಕಾಂತ್ ಅವರ ಜೊತೆ ನಟಿಸಿದ್ದಾನೆ. ರಜಿನಿಕಾಂತ್ ಹೇಳಿದ ತಕ್ಷಣ ಜೀಪ್ ಒಳಕ್ಕೆ ನೆಗೆದು ಕೂತುಕೊಳ್ಳುವುದು ಎಲ್ಲವನ್ನೂ ಚಿತ್ರದಲ್ಲಿ ನೋಡಬಹುದು ಎಂದು ಹೇಳಿದರು. ಕಾಲಾ ಚಿತ್ರದ ನಂತರ ಮಣಿ ಇನ್ನೂ ಮೂರು ಚಿತ್ರದಲ್ಲಿ ನಟಿಸಿದ್ದಾನೆ.

  • ಅಭಿಮಾನಿಗಳೆದುರು ತಲೈವಾ ರಾಜಕೀಯ ಪ್ರವೇಶ ಘೋಷಣೆ- ಬಾಬಾ ಮುದ್ರೆ ಪ್ರದರ್ಶಿಸಿ ಭಗವದ್ಗೀತೆ ಪಠಣ

    ಅಭಿಮಾನಿಗಳೆದುರು ತಲೈವಾ ರಾಜಕೀಯ ಪ್ರವೇಶ ಘೋಷಣೆ- ಬಾಬಾ ಮುದ್ರೆ ಪ್ರದರ್ಶಿಸಿ ಭಗವದ್ಗೀತೆ ಪಠಣ

    ಚೆನ್ನೈ: ತಮಿಳುನಾಡಿನಲ್ಲಿ ರಜಿನಿ ಯುಗಾರಂಭವಾಗಿದೆ. ರಾಜಕೀಯ ಪ್ರವೇಶದ ಬಗ್ಗೆ ತಲೈವಾ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

    ಚೆನ್ನೈನ ರಾಘವೇಂದ್ರ ಹಾಲ್‍ನಲ್ಲಿ ನಡೆದ ಅಭಿಮಾನಿಗಳ ಜೊತೆಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ರಜನಿಕಾಂತ್, ಸ್ವಂತ ಪಕ್ಷ ಸ್ಥಾಪಿಸುತ್ತಿರುವುದಾಗಿ ಘೋಷಿಸಿದ್ರು. ಬಾಬಾನ ಮುದ್ರೆ ಪ್ರದರ್ಶಿಸಿ, ಭಗವದ್ಗೀತೆಯ ಶ್ಲೋಕ ಪಠಿಸಿದ್ರು. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಬೇಕಾಗಿರುವ ಕಾರಣ, ತಮಿಳರಿಗಾಗಿ ನನ್ನ ಹೋರಾಟ ಮುಂದುವರೆಸುವುದಾಗಿ ಹೇಳಿದ್ರು.

    ಪಕ್ಷದ ಹೆಸರನ್ನ ಲೋಕಸಭಾ ಚುನಾವಣೆ ಹೊತ್ತಲ್ಲಿ ಬಹಿರಂಗಗೊಳಿಸುತ್ತೇನೆ. ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳಲ್ಲೂ ತಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುವುದಾಗಿ ತಿಳಿಸಿರುವ ರಜನಿ, ನಿಮ್ಮೆಲ್ಲರ ಸಹಕಾರ ನನಗೆ ಅಗತ್ಯವಾಗಿ ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. ನಮ್ಮ ಜನರೇ ನಮ್ಮ ಶಕ್ತಿ. ಸರ್ಕಾರ ರಚನೆ ಅಷ್ಟು ಸುಲಭವಲ್ಲ. ಕಳೆದ ಒಂದು ವರ್ಷದಿಂದ ತಮಿಳುನಾಡು ಜನ ರೋಸಿ ಹೋಗಿದ್ದಾರೆ. ನಿಮ್ಮೆಲ್ಲರ ಆಶಿರ್ವಾದ ಇದ್ದರೆ ಉತ್ತಮ ಆಡಳಿತ ನಡೆಸುತ್ತೇನೆ ಅಂದ್ರು.

    ತಲೈವಾ ರಾಜಕೀಯ ಪ್ರವೇಶ ಘೋಷಿಸುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಈ ಸಂಭ್ರಮಾಚರಣೆ ವೇಳೆ ರಜಿನಿ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಕುಸಿದು ಬಿದ್ದ ಘಟನೆಯೂ ನಡೆದಿದೆ.

    https://www.youtube.com/watch?v=0PzGj6rn8yc

    https://www.youtube.com/watch?v=8PQP7EkcPPk

  • ರಜನಿಕಾಂತ್ ಬಿಜೆಪಿಗೆ ಬಂದ್ರೆ ಅವರನ್ನು ನಾವು ಸ್ವಾಗತಿಸುತ್ತೇವೆ: ಅಮಿತ್ ಷಾ

    ರಜನಿಕಾಂತ್ ಬಿಜೆಪಿಗೆ ಬಂದ್ರೆ ಅವರನ್ನು ನಾವು ಸ್ವಾಗತಿಸುತ್ತೇವೆ: ಅಮಿತ್ ಷಾ

    ನವದೆಹಲಿ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಸೇರುವ ಬಗ್ಗೆ ಈಗಾಗಲೇ ಹಲವಾರು ಊಹಾಪೋಹಗಳು ಹರಿದಾಡುತ್ತಿದ್ದು, ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ `ಉತ್ತಮ ವ್ಯಕ್ತಿಗಳು ಬಿಜೆಪಿಗೆ ಸೇರಲು ಮನಸ್ಸು ಮಾಡಿದರೆ ಅವರಿಗೆ ಪಕ್ಷದ ಬಾಗಿಲು ತೆರೆದಿರುತ್ತದೆ ಅಂತಾ ಹೇಳಿದ್ದಾರೆ.

    ಒಂದು ವೇಳೆ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಬಿಜೆಪಿ ಪಕ್ಷ ಸೇರಲು ಇಚ್ಛಿಸಿದ್ದಲ್ಲಿ ಅವರನ್ನು ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಳ್ಳುತ್ತೇವೆ ಎಂದು ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

    ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಬಳಿಕ ಅಮಿತ್ ಷಾ, ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಪ್ರಧಾನಿಯವರನ್ನು ಭೇಟಿ ಮಾಡುತ್ತಾರೆ ಅನ್ನೋ ಮಾತನ್ನ ಅಲ್ಲಗೆಳೆದು, ಪ್ರಧಾನಿಯವರನ್ನು ಹಲವಾರು ಮಂದಿ ಭೇಟಿಯಾಗ್ತಾರೆ ಅಂತಾ ಹೇಳಿದ್ದಾರೆ.

    ಕಳೆದ ವಾರವಷ್ಟೇ ರಜನಿಕಾಂತ್, `ರಾಜಕೀಯದತ್ತ ಮುಖಮಾಡುವುದು ದೇವರ ಇಚ್ಚೆ ಅಂತಾ ಹೇಳಿಕೆ ನೀಡಿದ್ದರು. ಆ ಬಳಿಕ 9 ವರ್ಷಗಳ ನಂತ್ರ ತನ್ನ ಅಭಿಮಾನಿಗಳ ಜೊತೆ ಸಂವಾದ ನಡೆಸಿ, ನಾನು ತಮಿಳಿಗ ನಾನು ಎಲ್ಲೂ ಹೋಗಲ್ಲ. ನನ್ನನ್ನ ತಮಿಳಿಗನಾಗಿ ಮಾಡಿದ ನಿಮಗೆಲ್ಲರಿಗೂ ಧನ್ಯವಾದ ಅಂತಾ ಹೇಳಿದ್ದರು. ಈ ಮೂಲಕ ರಜನಿ ತಮಿಳಿನಾಡಿನಲ್ಲಿದ್ದೇ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಅನ್ನೋ ಸುದ್ದಿ ಹರಿದಾಡಿತ್ತು.

    ಇಂತಹ ಊಹಾಪೋಹಗಳಿಂದಾಗಿ ತಮಿಳಿನಾಡಿನಲ್ಲಿ ಕನ್ನಡಿಗ ರಜನಿಕಾಂತ್ ರಾಜಕೀಯದಿಂದ ದೂರ ಉಳಿಯಬೇಕೆಂದು ತಮಿಳು ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಕೆಲ ಬಿಜೆಪಿ ನಾಯಕರು ರಜನಿಕಾಂತ್ ಅವರನ್ನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಳಿಸಲು ಮುಂದಾಗಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿತ್ತು.

    ರಜನೀಕಾಂತ್ ಒಬ್ಬ ಪ್ರಖ್ಯಾತ ನಟ. ಹಾಗೆಯೇ ರಾಜಕೀಯದಲ್ಲಿ ಪ್ರಧಾನಿಯವರು ಉತ್ತಮ ಮುಖಂಡ. ಹೀಗಾಗಿ ರಜನಿಕಾಂತ್  ಪ್ರಧಾನಿಯವರನ್ನು ಭೇಟಿಯಾಗಲು ಇಚ್ಛಿಸಿದ್ದಲ್ಲಿ, ಯಾವುದೇ ಸಮಸ್ಯೆಗಳಿಲ್ಲದೇ ಭೆಟಿಯಾಗಬಹುದು ಅಂತಾ ಸಚಿವ ವೆಂಕಯ್ಯ ನಾಯ್ಡು ಕಳೆದ ಭಾನುವಾರ ಬೆಂಗಳೂರಿನಲ್ಲಿ ಕೇಳಿಕೆ ನೀಡಿದ್ದರು.

  • ರಜನೀಕಾಂತ್ ರಾಜಕೀಯ ಎಂಟ್ರಿ ಪಕ್ಕಾ: ಮತ್ತೆ ಈ ಪ್ರಶ್ನೆ ಈಗ ಉದ್ಭವವಾಗಿದ್ದು ಏಕೆ?

    ರಜನೀಕಾಂತ್ ರಾಜಕೀಯ ಎಂಟ್ರಿ ಪಕ್ಕಾ: ಮತ್ತೆ ಈ ಪ್ರಶ್ನೆ ಈಗ ಉದ್ಭವವಾಗಿದ್ದು ಏಕೆ?

    ಚೆನ್ನೈ: ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬರುತ್ತಾರಾ? ಜಯಲಲಿತಾ ನಿಧನವಾದ ಬಳಿಕ ಎದ್ದ ಈ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಆದರೆ ಸೂಪರ್ ಸ್ಟಾರ್ ಅವರ ಆಪ್ತರ ಮತ್ತು ಜ್ಯೋತಿಷಿಗಳ ಪ್ರಕಾರ ರಜನೀಕಾಂತ್ ರಾಜಕೀಯಕ್ಕೆ ಬರುವುದು ಪಕ್ಕಾ ಅಂತೆ.

    ರಾಜಕೀಯಕ್ಕೆ ಸೇರುವ ಬಗ್ಗೆ ಅಡ್ಡಗೋಡೆಯ ಮೇಲೆ ದೀಪ ಇಟ್ಟಂತೆ ಅಭಿಮಾನಿಗಳ ಹೊತೆ ಮಾತನಾಡಿದ ರಜನೀಕಾಂತ್ ಅವರ ಸ್ಪಷ್ಟೀಕರಣದ ಹೊರತಾಗಿಯೂ, ಸೂಪರ್ ಸ್ಟಾರ್ ಶೀಘ್ರದಲ್ಲೇ ರಾಜಕೀಯಕ್ಕೆ ಧುಮುಕುವುದು ಖಚಿತ ಎಂದು ಕೇರಳದ ಖ್ಯಾತ ಜ್ಯೋತಿಷಿ ಶೆಲ್ವಿಯವರು ಭವಿಷ್ಯ ನುಡಿದಿದ್ದಾರೆ.

    ಸದ್ಯದಲ್ಲಿ ರಜನೀಕಾಂತ್ ಶನಿ ದಶಾದ ಮೂಲಕ ಹಾದು ಹೋಗುತ್ತಿದೆ. ಹಾಗಾಗಿ ರಾಜಕೀಯ ಪ್ರವೇಶದ ಬಗ್ಗೆ ಅಧಿಕೃತ ಹೇಳಿಕೆ ನೀಡಿಲ್ಲ, ಆದ್ರೆ ಮುಂಬರುವ ವರ್ಷಗಳಲ್ಲಿ ರಾಜಕಾರಣ ಪ್ರವೇಶಕ್ಕಾಗಿ ರಜನಿಯವರು ಚೆನ್ನಾಗಿ ಪ್ರಯತ್ನ ನಡೆಸಿದ್ದಾರೆ. ರಜನಿಕಾಂತ್ ಜಾತಕದಲ್ಲಿ ಶನಿದೆಸೆ ನಡೆಯುತ್ತಿದ್ರೂ ರಾಜಕಳೆ ಇದೆ ಎಂದು ಶೆಲ್ವಿ ಭವಿಷ್ಯ ಹೇಳಿದ್ದಾರೆ.

    ಇತ್ತ ತಮಿಳುನಾಡು ರಾಜಕಾರಣಕ್ಕೆ ಸೂಪರ್‍ಸ್ಟಾರ್ ರಜನೀಕಾಂತ್ ಬಂದೇ ಬರ್ತಾರೆ ಅಂತಾ ಮೂಲಗಳು ತಿಳಿಸಿವೆ. ಯಾಕಂದ್ರೆ ತಮಿಳುನಾಡು ರಾಜಕೀಯದಲ್ಲಿ ಬಿಕ್ಕಟ್ಟು ಏರ್ಪಟ್ಟ ಸಮಯದಲ್ಲೇ ರಜನಿ ಅಭಿಮಾನಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ. ರಾಜಕಾರಣಕ್ಕೆ ಬರುವ ಮುನ್ನ ಅಭಿಮಾನಿಗಳ ಆಶೋತ್ತರವನ್ನ ಹತ್ತಿರದಿಂದ ಅರಿಯಲು ಈ ಸಂವಾದ ಮಾಡ್ತಿದ್ದಾರೆ ಅಂತಾ ಹೇಳ್ತಿದ್ದಾರೆ ರಾಜಕೀಯ ಪಂಡಿತರು.

    ರಜನಿ ಆಪ್ತ ಗೆಳೆಯ ರಾಜ್‍ಬಹದ್ದೂರ್ ಕೂಡ ರಜನಿ ರಾಜಕೀಯಕ್ಕೆ ಬರ್ತಾರೆ ಅಂತಾ ಹೇಳಿದ್ದಾರೆ. ಆದ್ರೆ ಇದುವರೆಗೂ ರಜನಿ ಈ ಬಗ್ಗೆ ಸ್ಪಷ್ಟ ಹೇಳಿಕೆ ನೀಡಿಲ್ಲ.

    ಇತ್ತೀಚೆಗಷ್ಟೇ ರಾಜಕೀಯ ಎಂಟ್ರಿ ಕೊಡೋ ಬಗ್ಗೆ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದ ರಜನಿ, ಭವಿಷ್ಯದಲ್ಲಿ ದೇವರು ಬಯಸಿದ್ರೆ ರಾಜಕೀಯಕ್ಕೆ ಕಾಲಿಡುವ ಇಂಗಿತವನ್ನು ಪರೋಕ್ಷವಾಗಿ ವ್ಯಕ್ತಪಡಿಸಿದ್ದರು. ಸದ್ಯಕ್ಕೆ ದೇವರು ನಟನಾಗಲು ಸೂಚಿಸಿದ್ದಾರೆ. ಮುಂದೇನಾಗುತ್ತದೆ ಎನ್ನುವುದು ಗೊತ್ತಿಲ್ಲ ಎಂದ ಅವರು ರಾಜಕೀಯ ಪಕ್ಷಗಳಿಗೆ ಸೇರ್ಪಡೆ ವದಂತಿಗಳನ್ನ ಅಲ್ಲಗೆಳೆದು, ಪಕ್ಷಗಳು ತಮ್ಮ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲದೇ ನಾನು ಯಾವುದೇ ರಾಜಕೀಯ ಪಕ್ಷಕ್ಕೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.

    1996ರಲ್ಲಿ ತಮಿಳುನಾಡಿನಲ್ಲಿ ಜಯಲಲಿತಾ ವಿರುದ್ಧ ಪ್ರಚಾರ ನಡೆಸಿದ್ದನ್ನು ರಾಜಕೀಯ ಅಪಘಾತಕ್ಕೆ ಹೋಲಿಸಿದ ಅವರು, 21 ವರ್ಷಗಳ ಹಿಂದೆ ನಾನು ಮೈತ್ರಿಕೂಟಕ್ಕೆ ಬೆಂಬಲ ಸೂಚಿಸಿದ್ದು ನನ್ನ ದೊಡ್ಡ ತಪ್ಪು ನಿರ್ಧಾರ. ಈ ಘಟನೆಯಿಂದ ರಾಜಕೀಯ ಪಕ್ಷಗಳನ್ನು ನನ್ನ ಹೆಸರನ್ನು ದುರ್ಬಳಕೆ ಮಾಡಿಕೊಂಡವು. ಆದರೆ ಈಗ ರಾಜಕೀಯಕ್ಕೆ ಸೇರುವುದಿಲ್ಲ ಎಂದು ಸ್ಪಷ್ಟನೆ ನೀಡುತ್ತೇನೆ ಎಂದು ಅಭಿಮಾನಿಗಳಿಗೆ ತಿಳಿಸಿದ್ದರು.

    ರಾಜಕೀಯಕ್ಕೆ ಸೇರುವ ಉದ್ದೇಶದಿಂದಲೇ ಬರೋಬ್ಬರಿ 9 ವರ್ಷಗಳ ಬಳಿಕ ರಜನಿಕಾಂತ್ ಅಭಿಮಾನಿಗಳ ಜೊತೆ ಸಂವಾದ ನಡೆಸಿದ್ದಾರೆ ಎನ್ನುವ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಹೀಗಾಗಿ ರಜನೀಕಾಂತ್ ರಾಜಕೀಯಕ್ಕೆ ಬರುತ್ತಾರಾ ಇಲ್ಲವೋ ಎನ್ನುವ ಪ್ರಶ್ನೆಗೆ ಮುಂದಿನ ಕೆಲ ದಿನಗಳಲ್ಲಿ ಸ್ಪಷ್ಟ ಉತ್ತರ ಸಿಗುವ ಸಾಧ್ಯತೆ ಇದೆ.