Tag: rajanikanth

  • ಅಭಿನಯಕ್ಕೆ ತಲೈವಾ ರಜನಿಕಾಂತ್ ಗುಡ್‌ಬೈ?

    ಅಭಿನಯಕ್ಕೆ ತಲೈವಾ ರಜನಿಕಾಂತ್ ಗುಡ್‌ಬೈ?

    ಜನಿಕಾಂತ್ (Rajanikanth) ಅಂದರೆ ಕ್ರೇಜ್ ಕಾ ಬಾಪ್. ಅವರ ಚಿತ್ರಗಳು ಮಾಸ್. ಟ್ರೆಂಡ್‌ಗೆ ತಕ್ಕಂತೆ ಸಿನಿಮಾ (Cinema) ಮಾಡಿ ಸೈ ಅನ್ನಿಸಿಕೊಂಡು ಅದನ್ನ ಗೆಲ್ಲಿಸುವ ತಾಕತ್ತು ಹೊಂದಿರೋ ವಿಶ್ವ ಮೆಚ್ಚಿದ ಸೂಪರ್ ಸ್ಟಾರ್. ಇದೀಗ ರಜನಿಕಾಂತ್ ಸಿನಿಮಾ ಇಂಡಸ್ಟ್ರಿಗೆ ಗುಡ್ ಬೈ ಹೇಳಲಿದ್ದಾರೆ ಎಂಬ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ.

    ಸದ್ಯಕ್ಕೆ ಇವರ ಕೈಯಲ್ಲಿ ನೂರಾರು ಕೋಟಿಯ ನಾಲ್ಕು ಪ್ರಾಜೆಕ್ಟ್‌ಗಳಿವೆ. `ಜೈಲರ್ 2′ ಸಿನಿಮಾವನ್ನೂ ಪೂರ್ಣಗೊಳಿಸಿದ್ದಾರೆ. ಕಮಲ್ ಹಾಸನ್ ಜೊತೆಗಿನ ಕಾಂಬೋ ಚಿತ್ರ ಘೋಷಣೆಯಾಗಿದೆ. ಡೈರೆಕ್ಟರ್ ನೆಲ್ಸನ್ ಜೊತೆ ಇನ್ನೊಂದು ಚಿತ್ರವೂ ಫಿಕ್ಸ್ ಆಗಿದೆ. ಇಷ್ಟೇ ಅಲ್ಲ ನಿರ್ಮಾಪಕ ಸಿ ಸುಂದರ್ ಜೊತೆಯೂ ರಜನಿಕಾಂತ್ ಡೇಟ್ ಇದೆ. ಹೀಗೆ ಸದ್ಯಕ್ಕೆ ರಜನಿಕಾಂತ್ ಇನ್ನೂ 2027ರವರೆಗೆ ಶೂಟಿಂಗ್ ಮಾಡಿದರೂ ಮುಗಿಯದಷ್ಟು ಪ್ರಾಜೆಕ್ಟ್‌ಗಳನ್ನ ಇಟ್ಟುಕೊಂಡಿದ್ದಾರೆ. ಆದರೆ ಈ ಹೊತ್ತಲ್ಲೇ ರಜನಿಕಾಂತ್ ನಿವೃತ್ತಿ ತೆಗೆದುಕೊಳ್ಳಲು ನಿರ್ಧರಿಸಿರುವುದರ ಮಾತು ಕೇಳಿಬರುತ್ತಿದೆ. ಇದನ್ನೂ ಓದಿ: ಕುಂದಾಪುರದ ಬೆಡಗಿ ಭೂಮಿ ಶೆಟ್ಟಿ ಈಗ ʻಮಹಾಕಾಳಿʼ!

    ಸೂಪರ್‌ಸ್ಟಾರ್ ಕುರಿತು ನಿವೃತ್ತಿ ಮಾತು ಕೇಳಿಬರ್ತಿರೋದು ಇದೇ ಮೊದಲಲ್ಲ. ರಜನಿಕಾಂತ್ ರಾಜಕೀಯ ಪ್ರವೇಶ ಮಾಡ್ತಾರೆ ಎಂಬ ವಿಚಾರ ಬಂದಾಗ ಚಿತ್ರರಂಗಕ್ಕೆ ಗುಡ್‌ಬೈ ಹೇಳುವ ನಿರ್ಧಾರ ಮಾಡಿದ್ದರು. ಆದರೆ ಅನಾರೋಗ್ಯ ಕಾರಣಕ್ಕೆ ರಾಜಕೀಯ ಪ್ರವೇಶಿಸದಿರಲು ನಿರ್ಧರಿಸಿ ಮತ್ತೆ ನಟನೆಯನ್ನು ಕಂಟಿನ್ಯೂ ಮಾಡಿದ್ರು. ಹಾಗಂತ ಈ ಬಾರಿ ವಿದಾಯಕ್ಕೆ ತೀರ್ಮಾನಿಸೋಕೆ ಕಾರಣ ರಾಜಕೀಯ ಪ್ರವೇಶವಂತೂ ಅಲ್ಲ. ಅದಕ್ಕೊಂದು ವಿಶೇಷ ಕಾರಣವಿದೆ.

    ರಜನಿಕಾಂತ್ ತಮ್ಮ ಮನೆಗೆ ಕಥೆ ಪಟ್ಟಿ ಹಿಡ್ಕೊಂಡು ಬರುವ ನಿರ್ದೇಶಕ ಹಾಗೂ ಚೆಕ್‌ಬುಕ್ ಹಿಡ್ಕೊಂಡು ಬರುವ ನಿರ್ಮಾಪಕರನ್ನ ವಾಪಸ್ ಕಳುಹಿಸುತ್ತಿದ್ದಾರಂತೆ. ಇದೇ ವಿಚಾರಕ್ಕೆ ರಜನಿಕಾಂತ್ ವಿದಾಯ ಹೇಳುವ ಸುದ್ದಿ ಗುಲ್ಲಾಗಿದೆ. ಆದರೆ ರಜನಿಕಾಂತ್ ಸಿನಿಮಾ ನಿರಾಕರಿಸುತ್ತಿರುದಕ್ಕೆ ಕಾರಣ ಮಾತ್ರ ಬೇರೆಯೇ ಇದೆ. ರಜನಿಕಾಂತ್ ವಯಸ್ಸು ಏರುತ್ತಿದೆ. 70 ವರ್ಷ ವಯಸ್ಸು ದಾಟಿದ ಬಳಿಕ ಸಹಜವಾಗೇ ದೇಹ ಕ್ವೀಣಿಸುತ್ತದೆ, ಸುಸ್ತೂ ಜಾಸ್ತಿ ಆಗುತ್ತದೆ. ಹಾಗಂತ ಇದುವೇ ವಿದಾಯಕ್ಕೆ ರೀಸನ್ ಅಲ್ವೇ ಅಲ್ಲ.

    ರಜನಿಕಾಂತ್ ಮನಸ್ಸು ಆಧ್ಯಾತ್ಮದತ್ತ ಹೆಚ್ಚಾಗಿ ವಾಲುತ್ತಿದೆ. ಸರಳವಾಗಿ ಬದುಕೋದನ್ನ ಜೀವನದಲ್ಲಿ ರೂಢಿಸಿಕೊಂಡು ಬಂದವರು ರಜನಿ. ಹೀಗಾಗಿ ವರ್ಷಕ್ಕೊಮ್ಮೆಯಾದ್ರೂ ಆಧ್ಯಾತ್ಮಿಕ ಪ್ರವಾಸ ಮಾಡ್ತಾರೆ. ಮನಸ್ಸಾದಾಗೆಲ್ಲ ಕಾರು ಹತ್ತಿ, ಹುಟ್ಟೂರು ಬೆಂಗಳೂರಿಗೆ ಬಂದು ಯಾರಿಗೂ ಗೊತ್ತಾಗದಂತೆ ಇದ್ದುಬಿಡ್ತಾರೆ. ಇಂಥಹ ರಜನಿಕಾಂತ್ ಎಲ್ಲಾ ಮೋಹಗಳನ್ನೂ ತ್ಯಜಿಸಿ ಜೀವಿಸುತ್ತಿರುವ ವ್ಯಕ್ತಿ. ವಯಸ್ಸು ಮಾಗಿದಂತೆ ಮನಸ್ಸೂ ಮಾಗುತ್ತಿದೆ. ಹೀಗಾಗಿ ಕೈಯಲ್ಲಿದ್ದ ಪ್ರಾಜೆಕ್ಟ್‌ಗಳನ್ನ ಮುಗಿಸಿಕೊಟ್ಟು, ಬಳಿಕ ನೋಡಿದ್ರಾಯ್ತು ಎಂದು ಯಾವುದೇ ಪ್ರಾಜೆಕ್ಟ್‌ಗಳನ್ನ ರಜನಿ ಒಪ್ಪಿಕೊಳ್ತಿಲ್ಲ. ಹೀಗಾಗಿ ರಜನಿಕಾಂತ್ ಚಿತ್ರರಂಗಕ್ಕೆ ವಿದಾಯದ ಸುದ್ದಿ ಚರ್ಚೆಯಾಗುತ್ತಿದೆ.

  • ತೆರೆಮೇಲೆ ಮತ್ತೆ ಒಂದಾದ ರಜನಿಕಾಂತ್-ಕಮಲ್ ಹಾಸನ್

    ತೆರೆಮೇಲೆ ಮತ್ತೆ ಒಂದಾದ ರಜನಿಕಾಂತ್-ಕಮಲ್ ಹಾಸನ್

    ಕಾಲಿವುಡ್‌ನ ಆಪ್ತ ಮಿತ್ರ ಸ್ಟಾರ್ ನಟರು ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಕಮಲ್ ಹಾಸನ್. ಇಬ್ಬರೂ ನಿರ್ದೇಶಕ ಕೆ.ಬಾಲಚಂದರ್ ಶಿಷ್ಯಂದಿರು. 21 ಚಿತ್ರಗಳಲ್ಲಿ ಒಟ್ಟಾಗಿ ನಟಿಸಿದ್ದ ಜೋಡಿ ಇದು. ಅವುಗಳಲ್ಲಿ 7 ಚಿತ್ರಗಳನ್ನ ಕೆ. ಬಾಲಚಂದರ್ ನಿರ್ದೇಶಿಸಿದ್ದರು. 70ರ ದಶಕದಲ್ಲಿ ರಜನಿಕಾಂತ್-ಕಮಲ್ ಹಾಸನ್ ಕಾಂಬಿನೇಷನ್ ಚಿತ್ರಗಳು ಮಾಡಿದ್ದ ದಾಖಲೆ ಲೆಕ್ಕಕ್ಕಿಲ್ಲ. ಆದರೆ ಇಬ್ಬರೂ ಜಂಟಿಯಾಗಿ ತೆರೆ ಹಂಚಿಕೊಳ್ಳದೆ 40 ವರ್ಷ ಉರುಳಿದೆ. ವಿಶೇಷ ಅಂದ್ರೆ ಇದೀಗ ಫ್ಯಾನ್ಸ್‌ಗೆ ಮತ್ತೆ ಒಟ್ಟಾಗಿ ನಟಿಸುವ ಶುಭ ಸುದ್ದಿ ಕೊಟ್ಟಿದ್ದಾರೆ. ಇದು ಕಟ್ಟುಕಥೆಯಲ್ಲ, ನಿಜ ಸಂಗತಿ.

    ದಕ್ಷಿಣ ಭಾರತದ ಈ ಇಬ್ಬರು ಸೂಪರ್‌ಸ್ಟಾರ್‌ಗಳು ಮತ್ತೆ ಒಟ್ಟಿಗೆ ನಟಿಸುವುದು ಕೇವಲ ಗಾಳಿ ಸುದ್ದಿ ಎಂದು ಭಾವಿಸಿರುವಾಗಲೇ ಅಧಿಕೃತ ಸುದ್ದಿಯೊಂದು ತೇಲಿಬಂದಿದೆ. 40 ವರ್ಷಗಳ ಬಳಿಕ ದಿಗ್ಗಜರನ್ನ ಒಂದೇ ಸ್ಕ್ರೀನ್‌ನಲ್ಲಿ ತೋರಿಸುವ ಧೈರ್ಯ, ತಾಕತ್ತು ಬೇಕು. ಈ ಚಿತ್ರವನ್ನ ಕೈಗೆತ್ತಿಕೊಂಡಿರೋದು ಸ್ಟಾರ್ ಡೈರೆಕ್ಟರ್ ಲೋಕೇಶ್ ಕನಕರಾಜ್. ಕೂಲಿ ಸಕ್ಸಸ್ ಬೆನ್ನಲ್ಲೇ ರಜನಿಕಾಂತ್ ಜೊತೆ ಮತ್ತೆ ಸಿನಿಮಾ ಮಾಡುತ್ತಿದ್ದಾರೆ ಲೋಕೇಶ್, ಜೊತೆಗೆ ವಿಕ್ರಂ ಬಳಿಕ ಕಮಲ್ ಹಾಸನ್ ಜೊತೆ ಸಿನಿಮಾ ಮಾಡುವ ಡೇಟ್ಸ್ನ್ನೂ ಲೋಕೇಶ್ ಪಡೆದುಕೊಂಡಿದ್ದರು. ಇಬ್ಬರನ್ನೂ ಕೊಲ್ಯಾಬರೇಟ್ ಮಾಡುತ್ತಿದ್ದಾರೆ ಲೋಕೇಶ್. ಈ ಚಿತ್ರ ಲೋಕೇಶ್ ಸಿನಿಮಾ ಸ್ಪೆಷಲ್‌ ಆಫ್ ಮೇಕಿಂಗ್, ಲೋಕೇಶ್ ಸಿನಿಮ್ಯಾಟಿಕ್ ಯುನಿವರ್ಸಲ್ ಸ್ಪೆಷಲ್‌ನಲ್ಲಿ ಬರುವ ಸಾಧ್ಯತೆ ಇದೆ.

    ಇಬ್ಬರು ಸ್ಟಾರ್ ನಟರ ಚಿತ್ರ ಎಂದಾಗ ಬಿಗ್ ಬಂಡವಾಳದ ಚಿತ್ರವಾಗಿ ಬರಬೇಕಿರುವುದು ಸಾಮಾನ್ಯ. ಮೂಲಗಳ ಪ್ರಕಾರ ಇದೇ ಸನ್ ಪಿಕ್ರ್ಸ್‌ ಚಿತ್ರವನ್ನ ನಿರ್ಮಾಣ ಮಾಡಲು ಮುಂದಾಗಿದೆ ಎನ್ನಲಾಗುತ್ತಿದೆ. ಘೋಷಣೆಯೊಂದೇ ಬಾಕಿ ಇದೆ. ಸದ್ಯಕ್ಕೆ ಕೂಲಿ ಬಾಕ್ಸಾಫೀಸ್‌ನಲ್ಲಿ ಸೌಂಡ್ ಮಾಡ್ತಿರೋದ್ರಿಂದ ಅಬ್ಬರ ನಡುವೆ ಘೋಷಣೆ ಬೇಡ ಎಂದು ಸುಮ್ಮನಿದೆ ಟೀಮ್ ಎನ್ನಲಾಗುತ್ತಿದೆ. ಒಟ್ಟಿನಲ್ಲಿ ಎಷ್ಟೋ ಸಿನಿ ಪ್ರಿಯರ ಕನಸು ಮತ್ತೆ ನನಸಾಗುತ್ತಿದೆ. ರಜನಿಕಾಂತ್-ಕಮಲ್ ಒಟ್ಟಿಗೆ ಕಾಣಿಸ್ಕೊಳ್ಳೋ ಚಿತ್ರ ತಯಾರಾಗುತ್ತಿದೆ.

  • ಸೂಪರ್‌ಸ್ಟಾರ್ ರಜನಿಕಾಂತ್ ಕೂಲಿಗೆ ಭಾರಿ ಡಿಮ್ಯಾಂಡ್

    ಸೂಪರ್‌ಸ್ಟಾರ್ ರಜನಿಕಾಂತ್ ಕೂಲಿಗೆ ಭಾರಿ ಡಿಮ್ಯಾಂಡ್

    ರಜನಿಕಾಂತ್ (Rajanikanth) ನಟನೆಯ ಕೂಲಿ (Coolie) ಸಿನಿಮಾಗೆ ದೇಶದಾದ್ಯಂತವಷ್ಟೇ ಅಲ್ಲದೇ ವಿದೇಶದಲ್ಲೂ ಭಾರಿ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಟ್ರೈಲರ್‌ ಹಾಗೂ ಹಾಡುಗಳ ಮೂಲಕವೇ ಹೈಪ್ ಕ್ರಿಯೇಟ್ ಮಾಡಿರೋ ಕೂಲಿ ಸಿನಿಮಾ ನಾರ್ತ್ ಅಮೆರಿಕಾದ (America) ಪ್ರೀಮಿಯರ್‌ಗೆ ಭರ್ಜರಿ ಹವಾ ಸೃಷ್ಟಿಸಿದೆ. ನಾರ್ತ್ ಅಮೆರಿಕಾದಲ್ಲಿ ಪ್ರೀಮಿಯರ್‌ಗೆ ಬುಕ್ಕಿಂಗ್ ಓಪನ್ ಆಗಿ ಕೆಲವೇ ಗಂಟೆಯಲ್ಲೇ 35 ಸಾವಿರ ಟಿಕೆಟ್ ಸೋಲ್ಡ್ಔಟ್ ಆಗಿದೆ. ಈ ಮೂಲಕ ಹೊಸ ದಾಖಲೆಯತ್ತ ಸಾಗಿದೆ ಕೂಲಿ.

    ಲೊಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿಬಂದ ವಿಜಯ್ ದಳಪತಿ ನಟನೆಯ ಲಿಯೋ ಸಿನಿಮಾ ಇದೇ ನಾರ್ತ್ ಅಮೆರಿಕಾದ ಪ್ರೀಮಿಯರ್‌ಗೆ 30 ಸಾವಿರ ಟಿಕೆಟ್ ಸೋಲ್ಡ್ಔಟ್ ಆಗಿತ್ತು. ಇದೀಗ ಕೂಲಿ ಸಿನಿಮಾ, ವಿಜಯ್ ದಳಪತಿ ಸಿನಿಮಾಕ್ಕಿಂತಲೂ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಆಗಷ್ಟ್ 13ರಂದು ನಡೆಯಲಿರುವ ಪ್ರೀಮಿಯರ್‌ಗೆ ಭರ್ಜರಿ ಡಿಮ್ಯಾಂಡ್ ಕ್ರಿಯೇಟ್ ಆಗ್ತಿದೆ.

    ಸೂಪರ್‌ಸ್ಟಾರ್ ರಜನಿಕಾಂತ್, ರಿಯಲ್‌ಸ್ಟಾರ್ ಉಪೇಂದ್ರ, ಅಮಿರ್ ಖಾನ್, ಸತ್ಯರಾಜ್, ಶೃತಿ ಹಾಸನ್, ರಚಿತಾ ರಾಮ್ ಸೇರಿದಂತೆ ಅತಿದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ. ಪೂಜಾ ಹೆಗ್ಡೆ ಈ ಸಿನಿಮಾದ ಸ್ಪೆಷಲ್ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಸಿನಿಮಾಗೆ ಅನಿರುದ್ಧ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಲೊಕೇಶ್ ಕನಗರಾಜ್ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷಗಳಿವೆ. ಆಗಷ್ಟ್ 14ರಂದು ತೆರೆಗೆ ಬರಲಿರುವ ಸಿನಿಮಾವನ್ನ ನೋಡಲು ಕಾದು ಕುಳಿತಿದ್ದಾರೆ ತಲೈವ ಫ್ಯಾನ್ಸ್.

  • ಕೂಲಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ `ಎ’ ಸರ್ಟಿಫಿಕೇಟ್

    ಕೂಲಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ `ಎ’ ಸರ್ಟಿಫಿಕೇಟ್

    ಜನಿಕಾಂತ್ (Rajanikanth) ನಟನೆಯ ಕೂಲಿ (Coolie) ಸಿನಿಮಾ ಆಗಸ್ಟ್ 14ಕ್ಕೆ ದೇಶದಾದ್ಯಂತ ತೆರೆಕಾಣಲು ರೆಡಿಯಾಗಿದೆ. ಈ ಸಿನಿಮಾ ಈಗಾಗ್ಲೇ ಟೀಸರ್ ಹಾಗೂ ಹಾಡುಗಳ ಮೂಲಕ ತಲೈವ ಫ್ಯಾನ್ಸ್ಗೆ ಕ್ಯೂರಿಯಾಸಿಟಿ ಬಿಲ್ಡ್ ಮಾಡಿದೆ. ಸಿನಿಮಾ ನೋಡಿ ರಣಕೇಕೆ ಹಾಕಿ ಸಂಭ್ರಮಿಸೋಕೆ ರಜನಿ ಫ್ಯಾನ್ಸ್ ತುದಿಗಾಲಲ್ಲಿ ನಿಂತು ಕಾಯ್ತಿದ್ದಾರೆ.

    ಲೊಕೇಶ್ ಕನಗರಾಜ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ `ಎ’ ಸರ್ಟಿಫಿಕೇಟ್ ಸಿಕ್ಕಿದೆ. ರಜನಿಕಾಂತ್ ನಟನೆಯ ಕೂಲಿ ಸಿನಿಮಾವಷ್ಟೇ ಅಲ್ಲ ಈ ಹಿಂದೆ 1982ರಲ್ಲಿ ತೆರೆಕಂಡ `ಪುದುಕವಿದೈ’ ಚಿತ್ರಕ್ಕೆ ಹಾಗೂ `ರಂಗ’ ಸಿನಿಮಾಗಳಿಗೆ `ಎ’ ಸರ್ಟಿಫಿಕೇಟ್ ದೊರೆತಿತ್ತು. ನಂತರ 1985ರಲ್ಲಿ `ನಾನ್ ಸಿಗಪ್ಪು ಮನಿದನ್’ ಚಿತ್ರಕ್ಕೂ ಕೂಡಾ `ಎ’ ಸರ್ಟಿಫಿಕೇಟ್ ಸಿಕ್ಕಿತ್ತು. ಅದಾದ ಬಳಿಕ ಕೂಲಿ ಸಿನಿಮಾಗೆ `ಎ’ ಸರ್ಟಿಫಿಕೇಟ್ ಸಿಕ್ಕಿರೋದು. ಇದನ್ನೂ ಓದಿ: ದೊಡ್ಡಗಾಜನೂರಿನಲ್ಲಿ ಈಡಿಗ ಸಂಪ್ರದಾಯದಂತೆ ನೆರವೇರಿದ ಡಾ.ರಾಜ್ ಸಹೋದರಿ ಅಂತ್ಯಕ್ರಿಯೆ

    ಲೊಕೇಶ್ ಕನಗರಾಜ್ ನಿರ್ದೇಶನದ ಈ ಸಿನಿಮಾದಲ್ಲಿ ವೈಯಲೆನ್ಸ್ ಹಾಗೂ ಡ್ರಗ್ಸ್ ಮಾಫಿಯಾ, ರಕ್ತಪಾತದ ಸೀನ್‌ಗಳಿರುವ ಕಾರಣದಿಂದಾಗಿ ಚಿತ್ರಕ್ಕೆ `ಎ’ ಸರ್ಟಿಫಿಕೇಟ್ ನೀಡಿದೆಯಂತೆ ಸೆನ್ಸಾರ್ ಮಂಡಳಿ. ನಟ ಉಪೇಂದ್ರ, ನಾಗಾರ್ಜುನ, ಸತ್ಯರಾಜ್, ಶೃತಿ ಹಾಸನ್ ಸೇರಿದಂತೆ ಅತಿದೊಡ್ಡ ತಾರಾಗಣ ಈ ಸಿನಿಮಾದಲ್ಲಿದೆ.

  • ಮೈಸೂರು | ಕಿಕ್ಕಿರಿದು ಸೇರಿದ್ದ ಅಭಿಮಾನಿಗಳತ್ತ ಕೈ ಬೀಸಿದ ತಲೈವಾ!

    ಮೈಸೂರು | ಕಿಕ್ಕಿರಿದು ಸೇರಿದ್ದ ಅಭಿಮಾನಿಗಳತ್ತ ಕೈ ಬೀಸಿದ ತಲೈವಾ!

    ಮೈಸೂರು: ಜೈಲರ್‌ 2 (Jailer 2) ಚಿತ್ರದ ಶೂಟಿಂಗ್‌ಗಾಗಿ ಮೈಸೂರಿಗೆ (Mysuru) ಆಗಮಿಸಿರುವ ನಟ ರಜನಿಕಾಂತ್ (Rajanikanth) ಕಾರಿನ ಮೇಲೆ ನಿಂತು ಅಭಿಮಾನಿಗಳತ್ತ ಕೈ ಬೀಸಿದ್ದಾರೆ.

    ಜೈಲರ್ 2 ಶೂಟಿಂಗ್ ಮೈಸೂರಿನಲ್ಲಿ ಭರದಿಂದ ಸಾಗಿದೆ. ಹುಣಸೂರು ಸಮೀಪವಿರುವ ಬಿಳಿಕೆರೆ ಬಳಿ ಶೂಟಿಂಗ್ ನಡೆದಿದ್ದು, ನೆಚ್ಚಿನ ನಟನನ್ನ ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರು. ಈ ವೇಳೆ ಕಾರಿನ ಮೇಲೆ ನಿಂತು ಅಭಿಮಾನಿಗಳತ್ತ ರಜನಿಕಾಂತ್ ಕೈಬೀಸಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಕೈ ಎತ್ತಿ ಮುಗಿದಿದ್ದಾರೆ. ಇದನ್ನೂ ಓದಿ: Mysuru | ಅಣ್ಣಾವ್ರ `ಕಾಮನಬಿಲ್ಲು’ ಶೂಟ್ ಆದ ಜಾಗದಲ್ಲೇ ರಜನಿ ಸಿನಿಮಾ

    ರಜನಿಕಾಂತ್ (Rajinikanth), ಮೋಹನ್ ಲಾಲ್, ಶಿವರಾಜ್ ಕುಮಾರ್ ಮತ್ತು ಜಾಕಿ ಶ್ರಾಫ್ ಹೀಗೆ ಬಹುತಾರೆಯರನ್ನೊಳಗೊಂಡ ಜೈಲರ್‌ 2 ಸಿನಿಮಾದ (Jailer 2 Cinema) ಶೂಟಿಂಗ್ ಮೈಸೂರಿನಲ್ಲಿ ನಡೆಯುತ್ತಿದೆ. ನಟ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾ ಒಂದು ಮಹತ್ವದ ಸ್ಥಳದಲ್ಲಿ ನಡೆಯುತ್ತಿರುವುದು ವಿಶೇಷ.

    43 ವರ್ಷಗಳ ಹಿಂದೆ ವರನಟ ಡಾ. ರಾಜ್‌ಕುಮಾರ್‌ ಅವರ ʻಕಾಮನಬಿಲ್ಲುʼ ಚಿತ್ರದ ಹಾಡೊಂದಕ್ಕೆ ಇದೇ ಸ್ಥಳದಲ್ಲಿ ಚಿತ್ರೀಕರಣ ನಡೆದಿತ್ತು. ಇದೀಗ ರಜನಿ ಕಾಂತ್‌ ಅವರ ಬಹುನಿರೀಕ್ಷಿತ ಚಿತ್ರದ ಶೂಟಿಂಗ್‌ ನಡೆಯುತ್ತಿದೆ. ಇದನ್ನೂ ಓದಿ: ಕೊನೆಗೂ ಪವನ್ ಕಲ್ಯಾಣ್ ಸಿನಿಮಾ ರಿಲೀಸ್ ಡೇಟ್ ಫಿಕ್ಸ್

  • `ಕಣ್ಣಪ್ಪ’ ನೋಡಿ ವಿಷ್ಣು ಮಂಚು ಮೆಚ್ಚಿದ ರಜನಿಕಾಂತ್

    `ಕಣ್ಣಪ್ಪ’ ನೋಡಿ ವಿಷ್ಣು ಮಂಚು ಮೆಚ್ಚಿದ ರಜನಿಕಾಂತ್

    ಳೆದ 30 ವರ್ಷಗಳ ಹಿಂದಿನ ಸ್ಮರಣೀಯ ಕ್ಷಣಗಳು ಮತ್ತು ಚಿತ್ರರಂಗದ ಸಂಭ್ರಮದ ನಡುವೆ, ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರಾದ ಸೂಪರ್‌ಸ್ಟಾರ್ ರಜನಿಕಾಂತ್ (Rajanikanth) ಹಾಗೂ ನಟ ಮೋಹನ್ ಬಾಬು (Mohan Babu) ಚೆನ್ನೈನಲ್ಲಿ ಮತ್ತೆ ಒಂದಾದರು. ಇದಕ್ಕೆ ಕಾರಣಕ್ಕೆ `ಪೆದರಾಯುಡು’ ಸಿನಿಮಾವು ಜೂನ್ 15, 1995ರಂದು ತೆರೆಕಂಡಿತ್ತು. ಇದೀಗ 30 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಬ್ಬರೂ ಸ್ಟಾರ್ ನಟರು, ವಿಷ್ಣು ಮಂಚು ನಟನೆಯ `ಕಣ್ಣಪ್ಪ’ (Kannappa) ಸಿನಿಮಾ ವೀಕ್ಷಿಸಿ ಹಳೇ ನೆನಪಿಗೆ ಹೊರಳಿದರು.

    ರವಿ ರಾಜ ಪಿನಿಸೆಟ್ಟಿ ನಿರ್ದೇಶನದಲ್ಲಿ ಮೂಡಿಬಂದ `ಪೆದರಾಯುಡು’ ಸಿನಿಮಾ, ಅಂದಿನ ಕಾಲದಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಗಟ್ಟಿ ಕಥಾ ಶೈಲಿ ನೆನಪಿನಲ್ಲಿ ಉಳಿಯುವ ಅಭಿನಯಗಳು ಮತ್ತು ಅದ್ವಿತೀಯ ಮಾಸ್ ಆಕರ್ಷಣೆಯಿಂದ ತೆಲುಗು ಚಿತ್ರರಂಗದಲ್ಲಿ ಈ ಚಿತ್ರ ಶಾಶ್ವತವಾಗಿ ಉಳಿದಿದೆ. ಈ ಚಿತ್ರ 30 ವರ್ಷ ಪೂರೈಸಿದ ಬೆನ್ನಲ್ಲೇ ರಜನಿಕಾಂತ್ ಮತ್ತು ಮೋಹನ್ ಬಾಬು (Mohan Babu) ಒಂದೆಡೆ ಸೇರಿ ಕಣ್ಣಪ್ಪ ಚಿತ್ರ ವೀಕ್ಷಿಸಿದರು. ಇದನ್ನೂ ಓದಿ: ರಚಿತಾ ರಾಮ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ : ನಿರ್ದೇಶಕ ನಾಗಶೇಖರ್ ಒತ್ತಾಯ

    ಅಂದಹಾಗೆ ಜೂನ್ 27ರಂದು ಜಾಗತಿಕ ಮಟ್ಟದಲ್ಲಿ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಕಣ್ಣಪ್ಪ ಸಿನಿಮಾ ಬಿಡುಗಡೆಗೊಳ್ಳಲಿದೆ. ಈ ಚಿತ್ರದಲ್ಲಿ ಶಿವನ ಭಕ್ತರಾದ ಕಣ್ಣಪ್ಪನ ಕಥೆಯನ್ನು ವಿಶಿಷ್ಟವಾಗಿ ಆವರಿಸಿಕೊಂಡಿದ್ದಾರೆ. ಚಿತ್ರ ವೀಕ್ಷಿಸಿದ ಬಳಿಕ ರಜನಿಕಾಂತ್ ಕೊಂಚ ಭಾವುಕರಾಗಿದ್ದಾರೆ. ಇದನ್ನೂ ಓದಿ: ಪುರಿ ಜಗನ್ನಾಥ್ ನಿರ್ದೇಶನದ ಚಿತ್ರಕ್ಕೆ ಸಂಯುಕ್ತ ಮೆನನ್ ಎಂಟ್ರಿ

    `ಇದು ಅಸಾಧಾರಣ ಚಿತ್ರ. ಭಾವನೆ, ದೃಶ್ಯ ವೈಭವ ಮತ್ತು ಆಧ್ಯಾತ್ಮ- all extraordinary’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇತ್ತ ರಜನಿಕಾಂತ್ ಬಗ್ಗೆಯೂ ಮಾತನಾಡಿದ ಮೋಹನ್ ಬಾಬು, `ಇವತ್ತು 22 ವರ್ಷಗಳಿಂದ ನಿರೀಕ್ಷಿಸುತ್ತಿದ್ದ ರಜನಿಕಾಂತ್ ಅವರ ಆಲಿಂಗನ ದೊರೆತಿದೆ. ಈಗ ನಾನು ಹೆದರುವುದಿಲ್ಲ. ನಾನು ಅಜೇಯ. ಕಣ್ಣಪ್ಪ ಬರುತ್ತಾನೆ!’ ಎಂದು ಸಂಭ್ರಮದಿಂದ ಹೇಳಿದ್ದಾರೆ. ಇದನ್ನೂ ಓದಿ: ಕನ್ನಡಿಗರಿಗೆ ಅಪಮಾನ ಪ್ರಕರಣ – ಹೇಳಿಕೆ ಕೊಡಲು ಪೊಲೀಸರನ್ನು ಸತಾಯಿಸುತ್ತಿರುವ ಸೋನು ನಿಗಮ್

    ಅಂದಹಾಗೆ ಕಣ್ಣಪ್ಪ ಚಿತ್ರವನ್ನು ಮುಖೇಶ್ ಕುಮಾರ್ ಸಿಂಗ್ ನಿರ್ದೇಶನ ಮಾಡಿದ್ದಾರೆ. ಪುತ್ರನ ಚಿತ್ರಕ್ಕೆ ಮೋಹನ್ ಬಾಬು ಬಂಡವಾಳ ಹೂಡಿ ನಿರ್ಮಾಪಕರಾಗಿದ್ದಾರೆ. ಬಹು ತಾರಾಗಣದ ಈ ಸಿನಿಮಾ ತೆಲುಗು, ಕನ್ನಡ, ತಮಿಳು, ಮಲಯಾಳಂ, ಹಿಂದಿ ಭಾಷೆಗಳಲ್ಲಿ ಜೂನ್ ಕೊನೆಯ ವಾರದಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

  • ‘ಕೂಲಿ’ ಮಾಡಿದ ತಲೈವಾಗೆ 150 ಕೋಟಿ, ನಿರ್ದೇಶಕನಿಗೆ 20 ಕೋಟಿ!

    ‘ಕೂಲಿ’ ಮಾಡಿದ ತಲೈವಾಗೆ 150 ಕೋಟಿ, ನಿರ್ದೇಶಕನಿಗೆ 20 ಕೋಟಿ!

    ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಅವರು ‘ಕೂಲಿ’ (Coolie) ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಸಿನಿಮಾಗಿಂತ ಹೆಚ್ಚು ಅವರ ಸಂಭಾವನೆ ವಿಚಾರವಾಗಿ ಸುದ್ದಿಯಾಗ್ತಿದ್ದಾರೆ. ಈ ಚಿತ್ರಕ್ಕೆ ತಲೈವಾ 150 ಕೋಟಿ ರೂ. ಹಾಗೂ ನಿರ್ದೇಶಕ ಲೋಕೇಶ್ 50 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾದ ಸುದ್ದಿಯೊಂದು ಈಗ ಚರ್ಚೆಗೆ ಗ್ರಾಸವಾಗಿದೆ.

    ತಲೈವಾಗೆ ವಯಸ್ಸು 74 ವರ್ಷವಾದ್ರೂ ಅವರಿಗಿರುವ ಚಾರ್ಮ್ ಮತ್ತು ಸಿನಿಮಾ ಮೇಲಿನ ಕ್ರೇಜ್ ಫ್ಯಾನ್ಸ್‌ಗೆ ಕಮ್ಮಿಯಾಗಿಲ್ಲ. ಹೀಗಾಗಿಯೇ ಕೂಲಿ ಸಿನಿಮಾದಲ್ಲಿ ನಟಿಸಲು 150 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಅದಷ್ಟೇ ಅಲ್ಲ, ಈ ಚಿತ್ರದ ನಿರ್ದೇಶಕ ಲೋಕೇಶ್ ಕನಕರಾಜ್ (Lokesh Kanagaraj) ಕೂಡ 50 ಕೋಟಿ ರೂ. ಸಂಭಾವನೆ ಪಡೆದಿದ್ದಾರಂತೆ. ಇದನ್ನೂ ಓದಿ: ವಿದೇಶಕ್ಕೆ ಶೂಟಿಂಗ್‌ ತೆರಳಲು ಅನುಮತಿ ಕೋರಿ ದರ್ಶನ್‌ ಅರ್ಜಿ

    ಈ ಸಿನಿಮಾ ರಿಲೀಸ್‌ಗೂ ಮೊದಲೇ ಡಿಜಿಟಲ್ ರೈಟ್ಸ್, ಸ್ಯಾಟಲೈಟ್, ಮ್ಯೂಸಿಕ್ ರೈಟ್ಸ್‌ನಿಂದ 240 ಕೋಟಿ ರೂ. ಅಧಿಕ ಗಳಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ:ಹಿರಿಯ ನಟ ಅನಂತ್ ನಾಗ್‌ಗೆ ಪದ್ಮಭೂಷಣ ಪ್ರಶಸ್ತಿ ಪ್ರದಾನ

    ಈ ಸಿನಿಮಾದಲ್ಲಿ ತಲೈವಾ ಜೊತೆ ನಾಗಾರ್ಜುನ ಅಕ್ಕಿನೇನಿ, ರಿಯಲ್ ಸ್ಟಾರ್ ಉಪೇಂದ್ರ, ಶ್ರುತಿ ಹಾಸನ್, ರೆಬಾ, ಪೂಜಾ ಹೆಗ್ಡೆ, ಆಮೀರ್ ಖಾನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ಈ ಚಿತ್ರವನ್ನು ಸನ್ ಪಿಕ್ಚರ್ಸ್ ನಿರ್ಮಾಣ ಮಾಡಿದೆ. ಈ ಚಿತ್ರ ಆ.14ಕ್ಕೆ ರಿಲೀಸ್‌ಗೆ ಸಿದ್ಧವಾಗಿದೆ.

  • ರಜನಿಕಾಂತ್‌ ನಟನೆಯ ‘ಜೈಲರ್ 2’ನಲ್ಲಿಯೂ ನಟಿಸಲಿದ್ದಾರೆ ಶಿವಣ್ಣ

    ರಜನಿಕಾಂತ್‌ ನಟನೆಯ ‘ಜೈಲರ್ 2’ನಲ್ಲಿಯೂ ನಟಿಸಲಿದ್ದಾರೆ ಶಿವಣ್ಣ

    ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ‘ಜೈಲರ್‌ 2’ನಲ್ಲಿ (Jailer 2) ನಟಿಸುತ್ತಾರಾ ಎಂಬ ಸುದ್ದಿಗೆ ಗುಡ್‌ ನ್ಯೂಸ್‌ ಸಿಕ್ಕಿದೆ. ಸುದ್ದಿಗೋಷ್ಠಿವೊಂದರಲ್ಲಿ ‘ಜೈಲರ್ 2’ನಲ್ಲಿ ನಟಿಸೋದಾಗಿ ಶಿವಣ್ಣ (Shivanna) ಅಧಿಕೃತವಾಗಿ ತಿಳಿಸಿದ್ದಾರೆ. ಇದನ್ನೂ ಓದಿ:ಶ್ರೀದೇವಿ ಬಯೋಪಿಕ್‌ನಲ್ಲಿ ನಟಿಸಲು ಸಿದ್ಧ ಎಂದ ಪೂಜಾ ಹೆಗ್ಡೆ

    ಹೈದರಾಬಾದ್‌ನಲ್ಲಿ ನಡೆದ ಸುದ್ದಿಗೋಷ್ಠಿಯೊಂದರಲ್ಲಿ ‘ಜೈಲರ್ 2’ನಲ್ಲಿ ನಟಿಸುತ್ತೀರಾ ಎಂದು ಶಿವಣ್ಣಗೆ ವರದಿಗಾರರೊಬ್ಬರು ಕೇಳಿದ್ದಾರೆ. ಅದಕ್ಕೆ ನಟ ಮಾತನಾಡಿ, ನಾನು ‘ಜೈಲರ್ 2’ ಸಿನಿಮಾದ ಭಾಗವಾಗಲಿದ್ದೇನೆ. ಈ ಕುರಿತು ನಿರ್ದೇಶಕ ನೆಲ್ಸನ್ ನನ್ನ ಬಳಿ ಮಾತನಾಡಿದ್ದಾರೆ. ಈಗಾಗಲೇ ಇದರ ಶೂಟಿಂಗ್ ಶುರುವಾಗಿದೆ. ಆದರೆ ನನ್ನ ಭಾಗದ ಶೂಟಿಂಗ್ ಶುರು ಆಗಿಲ್ಲ. ‘ಜೈಲರ್‌’ನಲ್ಲಿ ನಾನು ನಟಿಸಿದ ಪಾತ್ರಕ್ಕೆ ಅಷ್ಟೊಂದು ಮಹತ್ವ ಸಿಗುತ್ತೆ ಎಂದು ನಾನು ಅಂದುಕೊಂಡಿರಲಿಲ್ಲ. ಇದನ್ನೂ ಓದಿ:RCB ಅಂದ್ರೆ ಜೀವ, ನಮ್ಮ ಪ್ರಾಣ: ಶಿವಣ್ಣ ಗುಣಗಾನ

    ನಾನು ಈ ಸಿನಿಮಾ ಮಾಡಲು ರಜನಿಕಾಂತ್ (Rajinikanth) ಅವರೇ ಕಾರಣ. ಅವರು ನನ್ನ ಕುಟುಂಬವಿದ್ದಂತೆ. ಚಿಕ್ಕ ವಯಸ್ಸಿನಿಂದ ಅವರನ್ನು ನೋಡುತ್ತಾ ಬೆಳೆದಿದ್ದೇವೆ. ಜೈಲರ್‌ನಲ್ಲಿ ನಟಿಸಲು ಕೇಳಿದಾಗ ಕಥೆಯನ್ನು ಕೇಳದೇ ಸಿನಿಮಾ ಒಪ್ಪಿಕೊಂಡೆ. ರಜನಿಕಾಂತ್ ಸಿನಿಮಾದಲ್ಲಿ ಒಂದು ಕ್ಷಣ ಕಾಣಿಸಿಕೊಳ್ಳುವ ಪಾತ್ರವಾದರೂ ನಟಿಸಲು ಸಿದ್ಧನಿದ್ದೆ ಎಂದಿದ್ದಾರೆ. ಜೈಲರ್‌ನಲ್ಲಿ ನನ್ನನ್ನು ಅತ್ಯುತ್ತಮವಾಗಿ ತೋರಿಸಿದ ಛಾಯಾಗ್ರಾಹಕರಿಗೆ ಮತ್ತು ಸಂಗೀತ ನಿರ್ದೇಶಕ ಅನಿರುದ್ಧ್‌ಗೆ ನನ್ನ ಧನ್ಯವಾದಗಳು ಎಂದಿದ್ದಾರೆ.

    ಈ ವೇಳೆ, ‘ಜೈಲರ್ 2’ನಲ್ಲಿ ಬಾಲಯ್ಯ ಅವರು ನಟಿಸುವ ಬಗ್ಗೆ ಶಿವಣ್ಣಗೆ ಕೇಳಲಾಗಿದೆ. ನನಗೆ ಇದರ ಬಗ್ಗೆ ತಿಳಿದಿಲ್ಲ. ಒಂದು ವೇಳೆ ಬಾಲಯ್ಯ ನಟಿಸೋದಾದ್ರೆ, ಅವರೊಂದಿಗೆ ತೆರೆಹಂಚಿಕೊಳ್ಳಲು ಖುಷಿಯಿದೆ ಎಂದಿದ್ದಾರೆ. ಸದ್ಯ ನಟನ ‘ಜೈಲರ್ 2’ ಅಪ್‌ಡೇಟ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

  • ವಿಶ್ವ ಚೆಸ್ ಚಾಂಪಿಯನ್ ಗುಕೇಶ್‌ಗೆ ಸರ್ಪ್ರೈಸ್ ಗಿಫ್ಟ್ ನೀಡಿದ ತಲೈವಾ, ಶಿವಕಾರ್ತಿಕೇಯನ್

    ವಿಶ್ವ ಚೆಸ್ ಚಾಂಪಿಯನ್ ಗುಕೇಶ್‌ಗೆ ಸರ್ಪ್ರೈಸ್ ಗಿಫ್ಟ್ ನೀಡಿದ ತಲೈವಾ, ಶಿವಕಾರ್ತಿಕೇಯನ್

    ವಿಶ್ವ ಚೆಸ್ ಚಾಂಪಿಯನ್ ಡಿ.ಗುಕೇಶ್ (D Gukesh) ಇಂದು (ಡಿ.26) ರಜನಿಕಾಂತ್ (Rajinikanth) ಮತ್ತು ‘ಅಮರನ್’ ನಟ ಶಿವಕಾರ್ತಿಕೇಯನ್ (Sivakarthikeyan) ಅವರನ್ನು ಭೇಟಿಯಾಗಿದ್ದಾರೆ. ಭಾರತಕ್ಕೆ ಹೆಮ್ಮೆ ತಂದಿರುವ ಗುಕೇಶ್ ಸಾಧನೆಯನ್ನು ಕೊಂಡಾಡಿ ತಲೈವಾ ಮತ್ತು ಶಿವಕಾರ್ತಿಕೇಯನ್ ಶುಭಹಾರೈಸಿದ್ದಾರೆ.

    ಗುಕೇಶ್ ತಮ್ಮ ಪೋಷಕರೊಂದಿಗೆ ರಜನಿಕಾಂತ್ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ, ತಲೈವಾ ಗುಕೇಶ್‌ಗೆ ಶಾಲು ಹೊದಿಸಿ ಸನ್ಮಾನ ಮಾಡಿದ್ದಾರೆ. ಪುಸ್ತಕವೊಂದನ್ನು ಗಿಫ್ಟ್ ಆಗಿ ನೀಡಿದ್ದಾರೆ ತಲೈವಾ. ಈ ಕುರಿತು ಸೋಶಿಯಲ್‌ ಮೀಡಿಯಾದಲ್ಲಿ ‘ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಾರೈಕೆಗಳಿಗೆ ಧನ್ಯವಾದಗಳು. ನಮ್ಮನ್ನು ಮನೆಗೆ ಆಹ್ವಾನಿಸಿ, ನಮ್ಮೊಂದಿಗೆ ಅಮೂಲ್ಯವಾದ ಸಮಯ ಕಳೆದು, ಜ್ಞಾನ ಹಂಚಿಕೊಂಡಿದ್ದಕ್ಕೆ ಧನ್ಯವಾದ ಸರ್’ ಎಂದು ಗುಕೇಶ್ ಬರೆದುಕೊಂಡಿದ್ದಾರೆ.

    ಬಳಿಕ ‘ಅಮರನ್’ ನಟ ಶಿವಕಾರ್ತಿಕೇಯನ್ ಅವರ ನಿವಾಸಕ್ಕೆ ಗುಕೇಶ್ ಫ್ಯಾಮಿಲಿ ಭೇಟಿ ಮಾಡಿದ್ದಾರೆ. ವಿಶ್ವ ಚೆಸ್ ಚಾಂಪಿಯನ್ (Chess Champion) ಆಗಿ ಗೆದ್ದ ಖುಷಿಯನ್ನು ನಟನೊಂದಿಗೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಬಳಿಕ ಗುಕೇಶ್‌ಗೆ ದುಬಾರಿ ವಾಚ್‌ವೊಂದನ್ನು ಶಿವಕಾರ್ತಿಕೇಯನ್ ಉಡುಗೊರೆಯಾಗಿ ನೀಡಿದ್ದಾರೆ.

  • ತಲೈವಾಗೆ ‘ಯುಐ’ ವಾರ್ನರ್ ತೋರಿಸಿದ್ರಾ ರಿಯಲ್ ಸ್ಟಾರ್?- ಉಪ್ಪಿ ರಿಯಾಕ್ಷನ್

    ತಲೈವಾಗೆ ‘ಯುಐ’ ವಾರ್ನರ್ ತೋರಿಸಿದ್ರಾ ರಿಯಲ್ ಸ್ಟಾರ್?- ಉಪ್ಪಿ ರಿಯಾಕ್ಷನ್

    ಸ್ಟಾರ್ ನಟ ಉಪೇಂದ್ರ ಅವರು UI ಸಿನಿಮಾದ ಕೆಲಸದ ನಡುವೆಯೇ ರಜನಿಕಾಂತ್ (Rajanikanth) ನಟನೆಯ ಕೂಲಿ ಸಿನಿಮಾದಲ್ಲಿಯೂ ನಟಿಸುತ್ತಾ ಇದ್ದಾರೆ. ಇದರ ನಡುವೆ ‘ಯುಐ’ ಚಿತ್ರದ ವಾರ್ನರ್ (ಟ್ರೈಲರ್) ತಲೈವಾಗೆ ಉಪೇಂದ್ರ ತೋರಿಸಿದ್ದಾರಾ? ಎಂಬುದರ ಬಗ್ಗೆ ನಟ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ:UI ಚಿತ್ರ ‘ಸೂಪರ್’ ಸಿನಿಮಾದ ಮುಂದುವರೆದ ಭಾಗನಾ?- ಉಪೇಂದ್ರ ಹೇಳೋದೇನು?

    ಇಂದು (ಡಿ.2) ನಡೆದ UI ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಉಪೇಂದ್ರ ಮಾತನಾಡಿ, ‘ಕೂಲಿ’ (Coolie) ಸಿನಿಮಾದಲ್ಲಿ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾಗ ಯುಐ ವಾರ್ನರ್ ಸಿದ್ಧವಾಗಿರಲಿಲ್ಲ. ಮುಂದಿನ ಶೆಡ್ಯೂಲ್‌ಗಾಗಿ ಸೆಟ್ ಹೋದಾಗ ರಜನಿಕಾಂತ್‌ಗೆ ‘ಯುಐ’ ವಾರ್ನರ್, ಗ್ಲಿಂಪ್ಸ್ ತೋರಿಸುತ್ತೇನೆ ಎಂದು ಉಪೇಂದ್ರ ಮಾತನಾಡಿದ್ದಾರೆ. ಇನ್ನೂ ಕೂಲಿ ಸಿನಿಮಾದಲ್ಲಿ ಉಪೇಂದ್ರಗೆ ಉತ್ತಮ ಪಾತ್ರ ಸಿಕ್ಕಿದೆ. ಪವರ್‌ಫುಲ್ ಪಾತ್ರದಲ್ಲಿ ನಟ ಕಾಣಿಸಿಕೊಂಡಿದ್ದಾರೆ.

    ಅಂದಹಾಗೆ, AI ಯುಗದಲ್ಲಿ UI ಮ್ಯಾಜಿಕ್, ಟ್ರೈಲರ್‌ನಲ್ಲಿ ಮಸ್ತ್ ಆಗಿ ಮೂಡಿ ಬಂದಿದೆ. ಪ್ರೇಕ್ಷಕರ ಬುದ್ದಿವಂತಿಕೆಗೆ UI ವಾರ್ನರ್ (ಟ್ರೈಲರ್) ಸವಾಲು ಹಾಕುವಂತಿದೆ. ಹಸಿವಿಗಾಗಿ ಜನರ ಹೊಡೆದಾಟ, ರಕ್ತಪಾತ ಇದು UI ಟ್ರೈಲರ್‌ನಲ್ಲಿ ರೋಚಕವಾಗಿ ತೋರಿಸಲಾಗಿದೆ. ಜಾತಿ, ಅಧಿಕಾರ ಭಾರತಕ್ಕೆ ಮಾರಕವಾಗುತ್ತ? ಎಂಬ ಜಿದ್ದಾ ಜಿದ್ದಿಯ ನಡುವೆ ಧಿಕ್ಕಾರಕ್ಕಿಂತ ಅಧಿಕಾರಕ್ಕೆ ಬೆಲೆ ಜಾಸ್ತಿ ಎಂದು ಖಡಕ್ ಆಗಿ ಉಪೇಂದ್ರ ಡೈಲಾಗ್ ಹೊಡೆದಿದ್ದಾರೆ. ಗನ್ ಹಿಡಿದು ಜನಗಳ ಕಡೆ ಶೂಟ್ ಮಾಡುತ್ತ ಖಡಕ್ ಲುಕ್‌ನಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ. ಈ ಮೂಲಕ UI ಸಿನಿಮಾ ಕಥೆಯ ಬಗ್ಗೆ ಫ್ಯಾನ್ಸ್‌ಗೆ ಕೌತುಕ ಮೂಡುವಂತೆ ಮಾಡಿದ್ದಾರೆ.

    ಇನ್ನೂ 2040 ಭವಿಷ್ಯದ ಅಸಲಿ ಕಥೆ ಹೇಳಲು ‘ಯುಐ’ ಸಿನಿಮಾ ಮೂಲಕ ಉಪೇಂದ್ರ ಸಜ್ಜಾಗಿದ್ದಾರೆ. ಡಿ.20ಕ್ಕೆ ರಿಲೀಸ್ ಆಗಲಿರುವ ಈ ಸಿನಿಮಾದಲ್ಲಿ ಉಪೇಂದ್ರಗೆ ಕೊಡಗಿನ ಕುವರಿ ರೀಷ್ಮಾ ನಾಣಯ್ಯ ಜೋಡಿಯಾಗಿದ್ದಾರೆ. ಲಹರಿ ಫಿಲಂಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಮೂಲಕ ಮಹೋಹರ್ ನಾಯ್ಡು ಹಾಗೂ ಕೆ.ಪಿ ಶ್ರೀಕಾಂತ್ ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದಾರೆ.