Tag: rajanath singh

  • ಯುದ್ಧ ವಿಮಾನ ತೇಜಸ್‍ನಲ್ಲಿ ರಾಜನಾಥ್ ಸಿಂಗ್ ಹಾರಾಟ

    ಯುದ್ಧ ವಿಮಾನ ತೇಜಸ್‍ನಲ್ಲಿ ರಾಜನಾಥ್ ಸಿಂಗ್ ಹಾರಾಟ

    ಬೆಂಗಳೂರು: ದೇಶೀಯ ನಿರ್ಮಿತ ಹಗುರ ಯುದ್ಧ ವಿಮಾನ ತೇಜಸ್‍ನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇದೇ ಮೊದಲ ಬಾರಿಗೆ ಹಾರಾಟ ನಡಸಿದ್ದಾರೆ.

    ಎಚ್‍ಎಎಲ್ ವಿಮಾನ ನಿಲ್ದಾಣಕ್ಕೆ ಬಂದ ರಾಜನಾಥ್ ಸಿಂಗ್ ಅವರು ಯುದ್ಧ ವಿಮಾನದ ಪೈಲಟ್ ಧಿರಿಸಿನಲ್ಲಿ ತೇಜಸ್‍ನ ಕೋ-ಪೈಲಟ್ ಸ್ಥಾನದಲ್ಲಿ ಕುಳಿತರು. ಹಾರಾಟಕ್ಕೂ ಮುನ್ನ ಸಂತಸದಿಂದ ಜನರತ್ತ ಕೈ ಬೀಸಿದರು. ಹಲವು ಪರೀಕ್ಷೆಗಳಲ್ಲಿ ಯಶಸ್ವಿಯಾಗಿರುವ ಶಸ್ತ್ರ ಸಜ್ಜಿತ ತೇಜಸ್ ವಾಯುಪಡೆ ಕಾರ್ಯಾಚರಣೆಗಳಲ್ಲಿ ಸೇರ್ಪಡೆಯಾಗಲು ಸಜ್ಜಾಗಿದೆ. ಇತ್ತೀಚಿಗಷ್ಟೆ ಈ ವಿಮಾನವು ‘ಅರೆಸ್ಟ್ ಲ್ಯಾಂಡಿಂಗ್’ ಪರೀಕ್ಷೆಯಲ್ಲಿ ಯಶಸ್ವಿಯಾಗಿದೆ.

    ಯುದ್ಧ ವಿಮಾನ ತೇಜಸ್ ನಲ್ಲಿ ಹಾರಾಟ ನಡೆಸಿದ ಮೊದಲ ರಕ್ಷಣಾ ಸಚಿವ ಎಂಬ ಹೆಗ್ಗಳಿಕೆಗೆ ರಾಜನಾಥ್ ಸಿಂಗ್ ಪಾತ್ರರಾದರು. ಎರಡು ಆಸನಗಳ ಸಾಮರ್ಥ್ಯ ಹೊಂದಿರುವ ತೇಜಸ್ ನಲ್ಲಿ ರಾಜನಾಥ್ ಸಿಂಗ್ ಅವರಿಗೆ ಏರ್ ವೈಸ್ ಮಾರ್ಷಲ್, ಪ್ರೊಜೆಕ್ಟ್ ಡೈರೆಕ್ಟರ್ ಎನ್.ತಿವಾರಿ ಸಾಥ್ ನೀಡಿದರು.

    2018 ಜೂನ್ ನಲ್ಲಿ 18 ತೇಜಸ್ ಯುದ್ಧವಿಮಾನಗಳು ಭಾರತೀಯ ವಾಯುಸೇನೆಗೆ ಸೇರ್ಪಡೆಗೊಂಡಿವೆ. 2013ರಲ್ಲಿ ತೇಜಸ್ ಯುದ್ಧ ವಿಮಾನಗಳಿಗೆ ಪರೀಕ್ಷಾರ್ಥವಾಗಿ ಹಾರಾಟ ನಡೆಸಲು ಅನುಮತಿ ನೀಡಲಾಗಿತ್ತು. ಭಾರತೀಯ ವಾಯುಸೇನೆ ಸದ್ಯ ಎರಡು ಸ್ಕಾಡ್ರನ್ ಗಳ 18 ಯುದ್ಧ ವಿಮಾನಗಳನ್ನು ಹೊಂದಿದ್ದು, ಹೆಚ್ಚು ಸ್ಕಾಡ್ರನ್ ವುಳ್ಳ ಮಾರ್ಕ್-1 ವರ್ಷನ್ ನ 83 ಯುದ್ಧ ವಿಮಾನಗಳನ್ನ ಹೊಂದುವ ಮೂಲಕ ಐಎಎಫ್ ತನ್ನ ಬಲವನ್ನು ಹೆಚ್ಚಿಸಿಕೊಳ್ಳಲಿದೆ. 83 ತೇಜಸ್ ಯುದ್ಧ ವಿಮಾನಗಳ ತಯಾರಿಕೆಗೆ 50 ಸಾವಿರ ಕೋಟಿ ರೂ. ವೆಚ್ಚವಾಗಲಿದೆ.

    2019ರ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ತೇಜಸ್ ನಲ್ಲಿ ಹಾರಾಟ ನಡೆಸಿದ್ದರು.

  • ದೆಹಲಿಯಲ್ಲಿ ಗುಜರಾತ್ ಸೀನ್ ರಿಪೀಟ್ – ಮೋದಿ 1, ಅಮಿತ್ ಶಾ ನಂಬರ್ 2

    ದೆಹಲಿಯಲ್ಲಿ ಗುಜರಾತ್ ಸೀನ್ ರಿಪೀಟ್ – ಮೋದಿ 1, ಅಮಿತ್ ಶಾ ನಂಬರ್ 2

    ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸಚೊವ ಸಂಪುಟದಲ್ಲಿ ಖಾತೆ ಹಂಚಿಕೆ ಮಾಡಲಾಗಿದ್ದು, ಈ ಹಿಂದೆ ಗುಜರಾತ್ ನಲ್ಲಿ ನಡೆದಿದ್ದ ಸೀನ್ ದೆಹಲಿಯಲ್ಲೂ ರಿಪೀಟ್ ಆಗಿದೆ.

    ಹೌದು. ದೆಹಲಿಯಲ್ಲಿ ಗುಜರಾತ್ ಮಾಡೆಲ್ ರಿಪೀಟ್ ಆಗಿದ್ದು, ನಂಬರ್ 1 ಸ್ಥಾನದಲ್ಲಿ ಮೋದಿಯವರು ಇದ್ದರೆ, ನಂಬರ್ 2 ಸ್ಥಾನದಲ್ಲಿ ಅಮಿತ್ ಶಾ ಇದ್ದಾರೆ. ಈ ಮೂಲಕ 2002ರ ಗುಜರಾತ್ ಸೀನ್ 2019ಕ್ಕೆ ದೆಹಲಿಯಲ್ಲಿ ರಿಪೀಟ್ ಆಗಿದ್ದು ರಾಜನಾಥ್ ಸಿಂಗ್ ಅವರು 3ನೇ ಸ್ಥಾನ ಪಡೆದಿದ್ದಾರೆ. ಇದನ್ನೂ ಓದಿ: ಕರ್ನಾಟಕಕ್ಕೆ ಬಂಪರ್: ಡಿವಿಎಸ್, ಜೋಶಿ, ಅಂಗಡಿಗೆ ಖಾತೆ ಹಂಚಿಕೆ

    ರಾಜನಾಥ್ ಸಿಂಗ್ ಹಿಂದಿಕ್ಕಿ ಅಮಿತ್ ಶಾ ಅವರು ಗೃಹಖಾತೆ ಪಡೆದಿದ್ದಾರೆ. ಈ ಹಿಂದೆ ಮೋದಿಯವರು ಗುಜರಾತ್ ನಲ್ಲಿ ಸಿಎಂ ಆಗಿದ್ದಾಗ ಅಮಿತ್ ಶಾ ಗೃಹಸಚಿವರಾಗಿದ್ದರು. ಕರ್ನಾಟಕದಿಂದ ಮಂತ್ರಿಯಾದ ನಿರ್ಮಲಾ ಸೀತಾರಾಮನ್ ಅವರಿಗೆ ಬಂಪರ್ ಆಫರ್ ಸಿಕ್ಕಿದ್ದು, ಅರುಣ್ ಜೇಟ್ಲಿ ನಿರ್ವಹಿಸುತ್ತಿದ್ದ ಹಣಕಾಸು ಖಾತೆ ದೊರಕಿದೆ. ಸೀತಾರಾಮನ್ ಅವರು ನಿರ್ವಹಿಸುತ್ತಿದ್ದ ರಕ್ಷಣಾ ಖಾತೆ ಈ ಬಾರಿ ರಾಜನಾಥ್ ಸಿಂಗ್ ಪಾಲಾಗಿದೆ. ಇದನ್ನೂ ಓದಿ: ಅಮಿತ್ ಶಾಗೆ ಗೃಹ, ಸೀತಾರಾಮನ್‍ಗೆ ಹಣಕಾಸು – ಮೋದಿ ಸಂಪುಟದಲ್ಲಿ ಯಾರಿಗೆ ಯಾವ ಖಾತೆ?

  • ನಮ್ಮ ಹತ್ರನೂ ಸೆಕೆಂಡ್ ಆಪ್ಶನ್ ಇದೆ- `ಕೈ’ಕಮಾಂಡ್‍ಗೆ ಎಚ್‍ಡಿಡಿ ಎಚ್ಚರಿಕೆ

    ನಮ್ಮ ಹತ್ರನೂ ಸೆಕೆಂಡ್ ಆಪ್ಶನ್ ಇದೆ- `ಕೈ’ಕಮಾಂಡ್‍ಗೆ ಎಚ್‍ಡಿಡಿ ಎಚ್ಚರಿಕೆ

    ಬೆಂಗಳೂರು: ಸಚಿವ ಸ್ಥಾನಕ್ಕೆ ಎನ್ ಮಹೇಶ್ ಅವರು ರಾಜೀನಾಮೆ ನೀಡುತ್ತಿದ್ದಂತೆಯೇ ರಾಜ್ಯ ರಾಜಕಾರಣದಲ್ಲಿ ಭಾರೀ ಬೆಳವಣಿಗೆಗಳು ನಡೆಯುತ್ತಿದ್ದು, ಮಾಜಿ ಪ್ರಧಾನಿ ದೇವೇಗೌಡ ಅವರು, ನಿಮ್ಮವರು ಆಟ ಆಡಲು ಶುರು ಮಾಡಿದ್ರೆ ನಮ್ಗೆ ಗೇಮ್ ಬದಲಾಯಿಸೋದಕ್ಕೆ ಬರುತ್ತೆ ಅಂತ ಹೇಳಿರುವುದು ಇದೀಗ ಕೈ ನಾಯಕರನ್ನೇ ನಡುಗಿಸಿದೆ ಎನ್ನಲಾಗಿದೆ.

    ಲೋಕಸಭೆ ಚುನಾವಣೆಗೂ ಮುನ್ನ ಸಂಪುಟ ವಿಸ್ತರಣೆ ಮಾಡಿದ್ರೆ ಸರ್ಕಾರ ಬಿದ್ದು ಆಗುತ್ತದೆ. ಹಾಗಾಗಿ ನಾವು ಹೇಳಿದಂತೆ ಕೇಳಿ, ನಿಮ್ಮ ರಾಜ್ಯ ನಾಯಕರ ಮಾತು ಕೇಳಬೇಡಿ ಅಂತ ದೇವೇಗೌಡರು ಕಾಂಗ್ರೆಸ್ ಹೈಕಮಾಂಡ್‍ಗೆ ಖಡಕ್ ಆಗಿ ಹೇಳಿದ್ದಾರೆ ಎನ್ನಲಾಗಿದೆ.

    ನಿಮ್ಮ ಸಹವಾಸದಿಂದ ನಮ್ಮ ಶಕ್ತಿ ಹೆಚ್ಚಲ್ಲ, ಆದ್ರೆ ನಿಮಗೆ ನಾವು ಅನಿವಾರ್ಯ ಎನ್ನುವುದು ನೆನಪಿರಲಿ. ನಂಬರ್ ನಿಮ್ಮದು ಜಾಸ್ತಿ ಇರಬಹುದು. ಆದ್ರೆ ನಮ್ ನಂಬರ್ ಇಲ್ಲದೇ ನೀವು ಇಲ್ಲ. ಲೋಕಸಭೆ ಚುನಾವಣೆ ತನಕ ನಿಮ್ಮ ಶಾಸಕರು, ನಿಮ್ಮ ನಾಯಕರು ಬಾಯಿಮುಚ್ಚಿಕೊಂಡು ಇರಲಿ. ನಮಗೆ ಈಗಲೂ ಮೋದಿ ಅವರ ಜತೆ ಸಂಬಂಧ ಚೆನ್ನಾಗಿದೆ. ಆದರೆ ನಮಗೆ ಸಿದ್ಧಾಂತ ಮುಖ್ಯವಾಗಿದೆ ಅಂತ ಕಾಂಗ್ರೆಸ್ ಹೈಕಮಾಂಡ್ ಮುಂದೆ ಚದುರಾಂಗದಾಟದ ದಾಳವನ್ನ ಉರುಳಿಸಿ ಗೌಡರು ಖಡಕ್ ವಾರ್ನಿಂಗ್ ನೀಡಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ಸಿಕ್ಕಿದೆ.

    ಕಳೆದ ಕೆಲ ದಿನಗಳಿಂದ ಸಂಪುಟ ವಿಸ್ತರಣೆ ಆಗಬೇಕೆಂದು ಕೆಲ ಕಾಂಗ್ರೆಸ್ ಶಾಸಕರು ರಾಜ್ಯದ ನಾಯಕರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಈ ನಡುವೆ ದೊಡ್ಡ ಗೌಡರ ಒಂದೇ ಒಂದು ಸೆಕೆಂಡ್ ಆಪ್ಶನ್ ಮಾತಿಗೆ ಕೈ ಹೈಕಮಾಂಡ್ ತಳಮಳವಾಗಿದ್ದು, ದೇವೇಗೌಡರ ಚದುರಾಂಗದಾಟಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ಶರಣಾದ್ರಾ ಎನ್ನುವ ಪ್ರಶ್ನೆ ಈಗ ಎದ್ದಿದೆ.

    ಕೆಲದಿನಗಳ ಹಿಂದೆ ದೇವೇಗೌಡರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಭೇಟಿ ಮಾಡಿದ್ದಾರೆ. ಅಭಿವೃದ್ಧಿ ನೆಪದಲ್ಲಿ ಎಚ್‍ಡಿಡಿ ಹಾಗೂ ರೇವಣ್ಣ ಭೇಟಿ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡುವ ಮೂಲಕ ಕಾಂಗ್ರೆಸ್‍ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ ಎನ್ನುವ ವಿಶ್ಲೇಷಣೆ ಕೇಳಿಬಂದಿದೆ.

    ಈ ಹಿಂದೆ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯನವರು ಚಿಕಿತ್ಸೆಗೆ ಎಂದು ಧರ್ಮಸ್ಥಳದ ಶಾಂತಿವನಕ್ಕೆ ತೆರಳಿದ ಸಮಯದಲ್ಲಿ ಕೆಲ ಆಡಿಯೋ ಬಹಿರಂಗವಾಗಿತ್ತು. ಇದಾದ ಬಳಿಕ ದೇವೇಗೌಡರು ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್ ನಲ್ಲಿ ದೂರು ನೀಡಿದ್ದಾರೆ ಎನ್ನಲಾಗಿತ್ತು. ಹೀಗಾಗಿ ಗೌಡರ ವಾರ್ನಿಂಗ್‍ನಿಂದಾಗಿ ಹೈಕಮಾಂಡ್ ನೀಡಿದ ಸೂಚನೆಯಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೈಲೆಂಟ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv