Tag: rajanath singh

  • ಮೋದಿ-ರಾಜನಾಥ್ ಸಿಂಗ್ ಮಹತ್ವದ ಚರ್ಚೆ; ಉಗ್ರರ ವಿರುದ್ಧ ಮುಂದಿನ ಕ್ರಮಕ್ಕೆ ಮಾಸ್ಟರ್ ಪ್ಲ್ಯಾನ್

    ಮೋದಿ-ರಾಜನಾಥ್ ಸಿಂಗ್ ಮಹತ್ವದ ಚರ್ಚೆ; ಉಗ್ರರ ವಿರುದ್ಧ ಮುಂದಿನ ಕ್ರಮಕ್ಕೆ ಮಾಸ್ಟರ್ ಪ್ಲ್ಯಾನ್

    ನವದೆಹಲಿ: ಉಗ್ರರ ದಾಳಿ (Pahalgam Terror Attack) ಬಳಿಕ ಜಮ್ಮು ಮತ್ತು ಕಾಶ್ಮೀರ ಪೊಲೀಸರು, ಸಿಆರ್‌ಪಿಎಫ್, ಸೇನೆ ಮತ್ತು ಇತರ ಭದ್ರತಾ ಸಿಬ್ಬಂದಿ ಭಯೋತ್ಪಾದಕರ ಮನೆಗಳನ್ನು ಹುಡುಕಿ ಧ್ವಂಸ ಮಾಡುತ್ತಲೇ ಇದೆ. ಈವರೆಗೂ 10ಕ್ಕೂ ಹೆಚ್ಚು ನರರಕ್ಕಸರ ಮನೆಗಳನ್ನು ಛಿದ್ರಛಿದ್ರ ಮಾಡಿದೆ. ವಿವಿಧ ಕಡೆಗಳಲ್ಲಿ ತನಿಖೆಯನ್ನ ಚರುಕುಗೊಳಿಸಿವೆ. ಎನ್‌ಐಎ ಕೂಡ ವಿಚಾರಣೆ ಪ್ರಾರಂಭಿಸಿದೆ. ಈ ಮಧ್ಯೆ ರಕ್ಷಣಾ ಸಚಿವರು ಸೇನಾ ಮುಖ್ಯಸ್ಥರ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

    ಭಾರತ-ಪಾಕಿಸ್ತಾನದ ನಡುವೆ ಯುದ್ಧ ಕಾರ್ಮೋಡ ಕವಿದಿರುವ ಸಂದರ್ಭದಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಮಹತ್ವದ ಸಭೆ ನಡೆಸಿದ್ದಾರೆ. ಭಾರತೀಯ ಸಶಸ್ತ್ರ ಪಡೆಗಳ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರು ಅನಿಲ್ ಚೌಹಾಣ್ ಜೊತೆ ರಾಜನಾಥ್ ಸಿಂಗ್, ತಮ್ಮ ದೆಹಲಿ ನಿವಾಸದಲ್ಲಿ ಅನೇಕ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಮೂರು ಸೇನೆಗಳ ಸಾಮರ್ಥ್ಯದ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚರ್ಚೆ ನಡೆಸಿದ್ದಾರೆ. ಪಾಕಿಸ್ತಾನದ ವಿರುದ್ಧ ಸೇನೆ ಯಾವ ರೀತಿ ಸಿದ್ಧವಾಗಿದೆ ಎಂಬ ಸಂಪೂರ್ಣ ಮಾಹಿತಿಯನ್ನ ಪಡೆದಿದ್ದಾರೆ. ಇದನ್ನೂ ಓದಿ: 26 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸಹಿ; ಭಾರತ-ಫ್ರಾನ್ಸ್ ಮಧ್ಯೆ 63,000 ಕೋಟಿ ಮೆಗಾ ಡೀಲ್‌

    ಪ್ರಧಾನಿಗೆ ಮಾಹಿತಿ ನೀಡಿದ ರಕ್ಷಣಾ ಸಚಿವ:
    ಸಿಡಿಎಸ್ ಅನಿಲ್ ಚೌಹಾಣ್ ಜೊತೆ ಮಹತ್ವದ ಚರ್ಚೆ ನಡೆಸಿದ ರಾಜನಾಥ್ ಸಿಂಗ್, ಬಳಿಕ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿಯಾದರು. ನವದೆಹಲಿಯ 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ನಿವಾಸಕ್ಕೆ ಬಂದ ರಾಜನಾಥ್ ಸಿಂಗ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥರ ಜೊತೆ ನಡೆದ ಚರ್ಚೆಗಳ ಬಗ್ಗೆ ಪ್ರಧಾನಿಗೆ ಮಾಹಿತಿ ನೀಡಿದರು. ಸುಮಾರು 40 ನಿಮಿಷಗಳ ಕಾಲ ಚರ್ಚೆ ನಡೆಸಿ ಉಗ್ರರ ದಾಳಿ, ಮುಂದಿನ ಕ್ರಮದ ಕುರಿತು ಮಾಹಿತಿ ನೀಡಿದ್ದಾರೆ. ಇಷ್ಟೆಲ್ಲಾ ವಿಚಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಳೆಎಳೆಯಾಗಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ಪ್ರತೀಕಾರದ ಬಗ್ಗೆ ಸಕಾರಾತ್ಮಕವಾಗಿಯೇ ಸ್ಪಂದಿಸಿದ್ದಾರೆ ಎನ್ನಲಾಗಿದೆ. ಸೇನೆಗೆ ಕೇಂದ್ರ ಸರ್ಕಾರದಿಂದ ಯಾವ ಸಹಾಯ ಬೇಕು ಕೇಳಿ ನಾವು ಮಾಡಲು ಸಿದ್ಧರಿದ್ದೇವೆ ಎಂಬ ಧೈರ್ಯ ನೀಡಿದ್ದಾರಂತೆ. ಪಾಕ್ ಸೇನಾ ಮುಖ್ಯಸ್ಥ ಪಾಕಿಸ್ತಾನವನ್ನು ತೊರೆದಿರುವ ಬಗ್ಗೆಯೂ ಚರ್ಚೆ ನಡೆದಿದ್ದು, ಇದರ ನಡುವೆ ಕುತಂತ್ರಿ ಚೀನಾ ಬೆಂಬಲ ಘೋಷಿಸಿದ ಬಗ್ಗೆ ಚರ್ಚೆ ಆಗಿದೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಫ್ಲೋರಿಡಾದಲ್ಲಿ 2 ದೋಣಿಗಳ ನಡುವೆ ಮುಖಾಮುಖಿ ಡಿಕ್ಕಿ – ಓರ್ವ ಸಾವು, 12 ಮಂದಿಗೆ ಗಾಯ

    ಪಹಲ್ಗಾಮ್‌ನಲ್ಲಿ ಸ್ಯಾಟಲೈಟ್ ಫೋನ್ ಸಕ್ರಿಯ:
    ಪಹಲ್ಗಾಮ್ ಬಳಿ ದಾಳಿ ನಡೆದ ದಿನ ಅದೇ ಪ್ರದೇಶದಲ್ಲಿ ಮತ್ತು ಅದೇ ಸಮಯದಲ್ಲಿ ಹುವಾವೇ ಸ್ಯಾಟಲೈಟ್ ಫೋನೊಂದು ಸಕ್ರಿಯವಾಗಿದ್ದ ವಿಚಾರ ರಾಷ್ಟ್ರೀಯ ತನಿಖೆ ದಳದ ಪ್ರಾಥಮಿಕ ತನಿಖೆಯಿಂದ ಬೆಳಕಿಗೆ ಬಂದಿದೆ. ಭಾರತದಲ್ಲಿ ಚೀನಾ ನಿರ್ಮಿತ ಹುವಾವೇ ಕಂಪನಿ ಸಾಧನ ಬಳಕೆಗೆ ನಿರ್ಬಂಧ ಇದೆ. ಹೀಗಿದ್ದರೂ ದಾಳಿ ನಡೆದ ಪ್ರದೇಶದಲ್ಲಿ ಏಕೈಕ ಹುವಾವೇ ಸ್ಯಾಟಲೈಟ್ ಫೋನ್ ಸಕ್ರಿಯವಾಗಿತ್ತು ಎಂಬ ವಿಚಾರ ಎನ್‌ಐಎ ತನಿಖೆಯಲ್ಲಿ ಬಯಲಾಗಿದೆ. ಇದನ್ನೂ ಓದಿ: ಪ್ಯಾಂಟ್ ಬಿಚ್ಚಿಸಿದ್ರು, ಮತ್ತೊಂದು ಬಿಚ್ಚಿಸಿದ್ರು ಅನ್ನೋದು ನನ್ಗೆ ಗೊತ್ತಿಲ್ಲ: ಆರ್‌.ಬಿ ತಿಮ್ಮಾಪೂರ

    ಉಗ್ರರ ಕೃತಕ್ಕೆ ಜಮ್ಮು-ಕಾಶ್ಮೀರ ಸಿಎಂ ಖಂಡನೆ:
    ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯನ್ನು ಜಮ್ಮು-ಕಾಶ್ಮೀರ ಸಿಎಂ ಖಂಡಿಸಿದ್ದಾರೆ. 21 ವರ್ಷಗಳ ಬಳಿಕ ಭೀಕರ ದಾಳಿ ನಡೆದಿದೆ. ಉಗ್ರರ ಈ ಹೇಯ ಕೃತ್ಯವನ್ನು ತೀವ್ರವಾಗಿ ಖಂಡಿಸುತ್ತೇವೆ. ಅಮಾಯಕ ಪ್ರವಾಸಿಗರ ಹತ್ಯೆ ಮಾಡಿದ್ದಾರೆ. ಇದು ನಿಜಕ್ಕೂ ನೋವು ತರಿಸಿದೆ. ನಮ್ಮ ಸರ್ಕಾರ ಈ ಕೃತ್ಯವನ್ನು ಸಹಿಸಲ್ಲ ಎಂದು ವಿಶೇಷ ಅಧಿವೇಶನದಲ್ಲಿ ಗುಡುಗಿದ್ದಾರೆ. ಇದನ್ನೂ ಓದಿ: ಪೊಲೀಸರು ಇವರ ಗುಲಾಮರು ಅಂದುಕೊಂಡಿದ್ದಾರಾ? – ಸಿಎಂ ನಡೆಗೆ ಛಲವಾದಿ ನಾರಾಯಣಸ್ವಾಮಿ ಕಿಡಿ

  • ಲಡಾಖ್‌ನಲ್ಲಿ ಕಮರಿಗೆ ಉರುಳಿದ ಸೇನಾ ವಾಹನ – 9 ಮಂದಿ ಯೋಧರು ಹುತಾತ್ಮ

    ಲಡಾಖ್‌ನಲ್ಲಿ ಕಮರಿಗೆ ಉರುಳಿದ ಸೇನಾ ವಾಹನ – 9 ಮಂದಿ ಯೋಧರು ಹುತಾತ್ಮ

    ಲೇಹ್: ದಕ್ಷಿಣ ಲಡಾಖ್‌ನ (Ladakh) ನ್ಯೋಮಾದಲ್ಲಿ ಭಾರತೀಯ ಸೇನಾ ವಾಹನ ಆಳವಾದ ಕಂದಕಕ್ಕೆ ಉರುಳಿದ ಪರಿಣಾಮ 9 ಮಂದಿ ಸೈನಿಕರು (Soldiers) ಹುತಾತ್ಮರಾಗಿದ್ದು, ಮತ್ತೊಬ್ಬ ಅಧಿಕಾರಿ ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

    ಮೃತರಲ್ಲಿ 8 ಮಂದಿ ಯೋಧರು ಮತ್ತು ಒಬ್ಬರು ಕಮಿಷನ್ಡ್ ಆಫೀಸರ್ (ಜೆಸಿಒ) ಆಗಿದ್ದರು. ಸೇನಾ ಟ್ರಕ್ (Army Vehicle) ಗ್ಯಾರಿಸನ್‌ನಿಂದ ಲೇಹ್ ಬಳಿಯ ಕ್ಯಾರಿಗೆ ಚಲಿಸುತ್ತಿದ್ದ ಸಂದರ್ಭ ಕ್ಯಾರಿ ಪಟ್ಟಣದಿಂದ 7 ಕಿ.ಮೀ. ಮುಂದೆ ಕಮರಿಗೆ ಬಿದ್ದಿದೆ. ಇದನ್ನೂ ಓದಿ: ಕೆಟಿಎಮ್ 390 ಬೈಕ್‌ನಲ್ಲಿ ರಾಹುಲ್ ಗಾಂಧಿ ಲಡಾಖ್ ಪ್ರವಾಸ – ಪ್ಯಾಂಗಾಂಗ್ ಸರೋವರ ಭೇಟಿ

    ಶನಿವಾರ ಸಂಜೆ 6:30ರ ಸುಮಾರಿಗೆ ಘಟನೆ ನಡೆದಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ಸಾಮಾಜಿಕ ಜಾಲತಾಣದಲ್ಲಿ ಮೃತ ಯೋಧರಿಗೆ ಸಂತಾಪ ಸೂಚಿಸಿದ್ದಾರೆ. ಲಡಾಖ್‌ನ ಲೇಹ್ ಬಳಿ ಅಪಘಾತದಿಂದಾಗಿ ಭಾರತೀಯ ಸೇನಾ ಸಿಬ್ಬಂದಿಯನ್ನು ಕಳೆದುಕೊಂಡಿರುವುದು ಬಹಳ ದುಃಖವನ್ನುಂಟುಮಾಡಿದೆ. ನಮ್ಮ ದೇಶಕ್ಕೆ ಅವರ ಆದರ್ಶ ಸೇವೆಯನ್ನು ಎಂದಿಗೂ ಮರೆಯುವುದಿಲ್ಲ. ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ, ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ರಾಜನಾಥ್ ಸಿಂಗ್ ಟ್ವೀಟ್ (Tweet) ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ದ್ವಾರಕಾ ಎಕ್ಸ್‌ಪ್ರೆಸ್‌ವೇ ಯೋಜನೆಯಲ್ಲಿ ಅಕ್ರಮ ನಡೆದಿಲ್ಲ: ನಿತಿನ್ ಗಡ್ಕರಿ ಸ್ಪಷ್ಟನೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತ ಬದಲಾಗಿದ್ದು, ಈಗ ನಾವು ಒಳಗೆ ಬಂದೂ ಕೊಲ್ಲಬಹುದು- ಪಾಕ್‍ಗೆ ರಾಜನಾಥ್ ಸಿಂಗ್ ಎಚ್ಚರಿಕೆ

    ಭಾರತ ಬದಲಾಗಿದ್ದು, ಈಗ ನಾವು ಒಳಗೆ ಬಂದೂ ಕೊಲ್ಲಬಹುದು- ಪಾಕ್‍ಗೆ ರಾಜನಾಥ್ ಸಿಂಗ್ ಎಚ್ಚರಿಕೆ

    ರಾಯ್ಪುರ: ಭಾರತ ಈಗ ಬದಲಾಗಿದೆ. ಹೀಗಾಗಿ ಹೊರಗೆ ಮಾತ್ರವಲ್ಲ ಇದೀಗ ಒಳಗೆ ಬಂದೂ ಕೊಲ್ಲಬಹುದು ಎಂದು ಪಾಕಿಸ್ತಾನಕ್ಕೆ (Pakistan) ರಕ್ಷಣಾ ಸಚಿವ ರಾಜನಾಥ್ ಸಿಂಗ್  (Rajnath Singh) ಎಚ್ಚರಿಕೆ ನೀಡಿದ್ದಾರೆ.

    ಛತ್ತೀಸ್‍ಗಢದ (Chhattisgarh) ಮಾವೋವಾದಿಗಳ ಪೀಡಿತ ಕಂಕೇರ್ ಜಿಲ್ಲೆಯಲ್ಲಿ ಶನಿವಾರ ನಡೆದ ರ್ಯಾಲಿಯಲ್ಲಿ ಮಾತನಾಡಿದ ಅವರು, ಛತ್ತೀಸ್‍ಗಢದ ಕಾಂಗ್ರೆಸ್ ಸರ್ಕಾರವು ಸಂಪೂರ್ಣವಾಗಿ ಸಹಕರಿಸಿದ್ದರೆ ಎಡಪಂಥೀಯ ಉಗ್ರವಾದವನ್ನು (LWE) ದೇಶದಿಂದ ನಿರ್ನಾಮ ಮಾಡಬಹುದಿತ್ತು. ರಾಜ್ಯದಲ್ಲಿ ಬಲವಂತದ ಮತಾಂತರಗಳು ಹೆಚ್ಚುತ್ತಿವೆ ಎಂದು ಆರೋಪಿಸಿದರು.

    ಇದೇ ವೇಳೆ ರಾಜನಾಥ್ ಸಿಂಗ್ ಅವರು 2016ರ ಉರಿ (Uri Attack) ಹಾಗೂ 2019ರ ಪುಲ್ವಾಮಾದಲ್ಲಿ (Pulwama Attack) ನಡೆದ ಭಯೋತ್ಪಾದಕ ದಾಳಿಯ ನಂತರ ಭಾರತದ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದರು. ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಾಯಕತ್ವದಲ್ಲಿ ಭಾರತವು ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ಹೇಳಿದರು. ಇದನ್ನೂ ಓದಿ: ಭೀಮ್ ಆರ್ಮಿ ಮುಖ್ಯಸ್ಥನ ಮೇಲೆ ದಾಳಿ ಮಾಡಿದ್ದ ನಾಲ್ವರ ಬಂಧನ

    ಪಾಕಿಸ್ತಾನದ ಕೆಲವು ಭಯೋತ್ಪಾದಕರು ಭಾರತದೊಳಗೆ ನುಗ್ಗಿ ನಮ್ಮ ಯೋಧರ ಮೇಲೆ ದಾಳಿ ಮಾಡಿದ್ದರು. ಪರಿಣಾಮ ಹಲವು ಮಂದಿ ಯೋಧರು ಹುತಾತ್ಮರಾಗಿದ್ದರು. ಆಗ ನಾನು ಗೃಹ ಸಚಿವನಾಗಿದ್ದೆ. ಕೂಡಲೇ ಪ್ರಧಾನಿ ದೆಹಲಿಯಲ್ಲಿ ಸಭೆ ನಡೆಸಿ 10 ನಿಮಿಷಗಳಲ್ಲಿ ನಿರ್ಧಾರ ಕೈಗೊಂಡರು. ನಮ್ಮ ಸೇನೆಯ ಯೋಧರು ಪಾಕಿಸ್ತಾನದ ನೆಲದಲ್ಲಿ ಭಯೋತ್ಪಾದಕರನ್ನು ಸದೆಬಡಿಯುವಲ್ಲಿ ಯಶಸ್ವಿಯಾದರು ಎಂದರು.

    ಯಾವುದೇ ಕಾರಣಕ್ಕೂ ನಮ್ಮನ್ನು ಪ್ರಚೋದನೆ ಮಾಡಲು ಪ್ರಯತ್ನಿಸಬೇಡಿ ಎಂದು ನಮ್ಮ ನೆರೆಹೊರೆಯವರಿಗೆ ಹೇಳಲು ಬಯಸುತ್ತೇನೆ. ಯಾಕಂದರೆ ಭಾರತ ಬದಲಾಗಿದೆ. ಇದೀಗ ನಾವು ಹೊರಗಿನಿಂದ ಮಾತ್ರವಲ್ಲ ಗಡಿ ದಾಟಿ ಒಳಗಡೆ ಬಂದು ಕೂಡ ಕೊಲ್ಲುವ ಸಾಮರ್ಥ್ಯವನ್ನು ಹೊಂದಿದ್ದೇವೆ. ಯಾರಾದರೂ ದೇಶಕ್ಕೆ ಹಾನಿ ಮಾಡಲು ಪ್ರಯತ್ನಿಸಿದರೆ ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ಪಾಕ್‍ಗೆ ಸಿಂಗ್ ಖಡಕ್ ಎಚ್ಚರಿಕೆ ನೀಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ವಿರಾಟ್‍ನನ್ನು ಬೀಳ್ಕೊಟ್ಟ ಪ್ರಧಾನಿ, ರಾಷ್ಟ್ರಪತಿ

    ವಿರಾಟ್‍ನನ್ನು ಬೀಳ್ಕೊಟ್ಟ ಪ್ರಧಾನಿ, ರಾಷ್ಟ್ರಪತಿ

    ನವದೆಹಲಿ: ರಾಷ್ಟ್ರಪತಿ ಅವರ ಅಂಗರಕ್ಷಕ ತಂಡದಲ್ಲಿದ್ದ ವಿರಾಟ್‍ಗೆ ಇದೇ ಕೊನೆಯ ಗಣರಾಜ್ಯೋತ್ಸವವಾಗಿದ್ದು, ನಿವೃತ್ತಿ ಹೊಂದಿದೆ. ಈ ಕುದುರೆಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಬೀಳ್ಕೊಟ್ಟಿದ್ದಾರೆ.

    73ನೇ ಗಣರಾಜ್ಯೋತ್ಸವ ಪರೇಡ್ ಮುಕ್ತಾಯವಾದ ಬಳಿಕ ರಾಷ್ಟ್ರಪತಿ ರಾಮ್‍ನಾಥ್ ಕೋವಿಂದ್ ಅವರ ಅಂಗರಕ್ಷಕರು ಅವರನ್ನು ಮತ್ತೆ ರಾಷ್ಟ್ರಪತಿ ಭವನಕ್ಕೆ ಕರೆದೊಯ್ದರು. ಆದರೆ, ಎಲ್ಲರ ಗಮನ ಸೆಳೆದಿದ್ದು ಅಂಗರಕ್ಷಕ ತಂಡದಲ್ಲಿದ್ದ ವಿರಾಟ್ ಎಂಬ ವಿಶೇಷ ಕುದುರೆ.

    ಗಣರಾಜ್ಯೋತ್ಸವ ಪರೇಡ್‍ಗಳಲ್ಲಿ ಈ ಕುದುರೆ 13 ಬಾರಿ ಭಾಗವಹಿಸಿದೆ. ಜನವರಿ 15 ರಂದು ಸೇನಾ ದಿನದ ಹಿಂದಿನ ದಿನದಂದು ವಿರಾಟ್‍ಗೆ ಸೇನಾ ಮುಖ್ಯಸ್ಥರಿಂದ ಶ್ಲಾಘನೆ ದೊರೆತಿತ್ತು. ವಿರಾಟ್ ಅಸಾಧಾರಣ ಸೇವೆ ಮತ್ತು ಸಾಮಥ್ರ್ಯಗಳಿಗಾಗಿ ಪ್ರಶಂಸೆಯನ್ನು ಪಡೆದ ಮೊದಲ ಕುದುರೆಯಾಗಿದೆ.

    ಹ್ಯಾನೋವೇರಿಯನ್ ತಳಿಯ ಈ ಕುದುರೆಯನ್ನು 2003ರಲ್ಲಿ ಅಂಗರಕ್ಷಕ ತಂಡಕ್ಕೆ ಸೇರಿಸಲಾಯಿತು. ಇದನ್ನು ರಾಷ್ಟ್ರಪತಿಗಳ ಅಂಗರಕ್ಷಕನ ಚಾರ್ಜರ್ ಎಂದೂ ಕರೆಯುತ್ತಾರೆ. ಗಣರಾಜ್ಯೋತ್ಸವದ ಪರೇಡ್ ಮತ್ತು ಕಳೆದ ವರ್ಷದ ಬೀಟಿಂಗ್ ದಿ ರಿಟ್ರೀಟ್ ಸಮಾರಂಭದಲ್ಲಿ ಈ ಕುದುರೆಗೆ ವಯಸ್ಸಾಗಿದ್ದರೂ, ಉತ್ತಮವಾಗಿ ಕಾರ್ಯನಿರ್ವಹಿಸಿತ್ತು. ಇದನ್ನೂ ಓದಿ: ಗಣರಾಜ್ಯೋತ್ಸವ ಸಂಭ್ರಮ: ಮೋದಿ ಟೋಪಿ, ಶಾಲು ವಿಶೇಷತೆ ಏನು?

    ಪ್ರತಿವರ್ಷ ಗಣರಾಜ್ಯೋತ್ಸವದಂದು, ಕುದುರೆ ಸವಾರರು ಉತ್ತಮವಾದ ಕೆಂಪು ಕೋಟುಗಳು, ಚಿನ್ನದ ಬಣ್ಣದ ಕವಚಗಳು ಮತ್ತು ಹೊಳಪಿನ ಪೇಟಗಳನ್ನು ಧರಿಸುತ್ತಾರೆ. ನಂತರ ರಾಷ್ಟ್ರಪತಿಗಳನ್ನು ವೇದಿಕೆಗೆ ಕರೆದೊಯ್ಯುತ್ತಾರೆ. ಆ ನಂತರದಲ್ಲಿ ರಾಷ್ಟ್ರಗೀತೆ ಪ್ರಾರಂಭವಾಗುತ್ತದೆ. ಇದನ್ನೂ ಓದಿ:  ರಾಜಪಥದಲ್ಲಿ ಭಾರತದ ವೈಭವ ಅನಾವರಣ

  • ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೊತೆ ರಾಜನಾಥ್ ಮಾತುಕತೆ

    ಅಮೆರಿಕದ ರಕ್ಷಣಾ ಕಾರ್ಯದರ್ಶಿ ಜೊತೆ ರಾಜನಾಥ್ ಮಾತುಕತೆ

    ನವದೆಹಲಿ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಇಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಜೊತೆ ದೂರವಾಣಿ ಮೂಲಕ ಮಾತನಾಡಿದ್ದು, ಈ ಕುರಿತು ಟ್ವಿಟರ್ ನಲ್ಲಿ  ಹಂಚಿಕೊಂಡಿದ್ದಾರೆ.

    ರಾಜನಾಥ್ ಸಿಂಗ್ ಅವರು ಟ್ವಿಟರ್ ನಲ್ಲಿ, ಲಾಯ್ಡ್ ಆಸ್ಟಿನ್ ಅವರೊಂದಿಗೆ ಇಂದು ದೂರವಾಣಿ ಸಂಭಾಷಣೆ ನಡೆಸಿದ್ದೇನೆ. ಅಫ್ಘಾನಿಸ್ತಾನದ ಪರಿಸ್ಥಿತಿ ಸೇರಿದಂತೆ ದ್ವಿಪಕ್ಷೀಯ ರಕ್ಷಣಾ ಸಹಕಾರ ಮತ್ತು ಪ್ರಾದೇಶಿಕ ವಿಷಯಗಳ ಕುರಿತು ನಾವು ಚರ್ಚಿಸಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:  ಪ್ರಚಾರದ ಹುಚ್ಚಿಗೆ ಬಿದ್ದು ಯಡವಟ್ಟು ಮಾಡಿಕೊಂಡ್ವಿ -ಪೊಲೀಸರ ಮುಂದೆ ಕಣ್ಣೀರಿಟ್ಟ ಯುವಕರು

    ಈ ಮೂಲಕ ನಾವು ಉಪಯುಕ್ತವಾಗಿ ಸಂಭಾಷಣೆ ನಡೆಸಲು ಒಪ್ಪಿಕೊಂಡಿದ್ದು, ಭಾರತ ಮತ್ತು ಯುಎಸ್ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ರೇವ್ ಪಾರ್ಟಿ ಜಾಗದಲ್ಲಿ ಗೋಶಾಲೆ ನಿರ್ಮಾಣ – ಮಾಲೀಕರಿಗಾಗಿ ಪೊಲೀಸರ ಹುಡುಕಾಟ

  • ಕದಂಬ ನೌಕಾನೆಲೆಯ ವೈಮಾನಿಕ ಸಮಿಕ್ಷೆ ನಡೆಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

    ಕದಂಬ ನೌಕಾನೆಲೆಯ ವೈಮಾನಿಕ ಸಮಿಕ್ಷೆ ನಡೆಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

    ಕಾರವಾರ: ಉತ್ತರಕನ್ನಡ ಜಿಲ್ಲೆಯ ಕಾರವಾರದ ಕದಂಬ ನೌಕಾನೆಲೆಗೆ ಇಂದು ಕೇಂದ್ರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಭೇಟಿ ನೀಡಿದರು. ನೌಕಾಪಡೆಯ ಮುಖ್ಯಸ್ಥ, ಅಡ್ಮಿರಲ್ ಕರಂಬೀರ್ ಸಿಂಗ್‍ರೊಂದಿಗೆ ಗೋವಾದಿಂದ ಹೆಲಿಕಾಪ್ಟರ್ ಮೂಲಕ ಐಎನ್‍ಎಸ್ ಕದಂಬ ನೌಕಾನೆಲೆಯ ಹೆಲಿಪ್ಯಾಡ್‍ಗೆ ಆಗಮಿಸುವ ವೇಳೆ ಕದಂಬ ನೌಕಾನೆಲೆಯ ಎರಡನೇಯ ಹಂತದ ವಿಸ್ತರಣಾ ಕಾಮಗಾರಿಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಿದರು.

    ನೌಕಾನೆಲೆಗೆ ಆಗಮಿಸಿದ ರಕ್ಷಣಾ ಸಚಿವರನ್ನ ವೆಸ್ಟರ್ನ್ ನೇವಲ್ ಕಮಾಂಡ್, ಫ್ಲ್ಯಾಗ್ ಆಫೀಸರ್ ಕಮಾಂಡಿಂಗ್ ಇನ್ ಚೀಫ್, ವೈಸ್ ಅಡ್ಮಿರಲ್ ಆರ್.ಹರಿ ಕುಮಾರ್ ಮತ್ತು ಕರ್ನಾಟಕ ನೌಕಾ ಪ್ರದೇಶದ ಧ್ವಜ ಅಧಿಕಾರಿ, ರಿಯರ್ ಅಡ್ಮಿರಲ್ ಮಹೇಶ್ ಸಿಂಗ್ ಸ್ವಾಗತಿಸಿದರು. ಬಳಿಕ ನೌಕಾಪ್ರದೇಶದ ಸರ್ವೇಕ್ಷಣೆ ನಡೆಸಿದ ಸಚಿವ ರಾಜನಾಥ ಸಿಂಗ್ ರಿಗೆ ಅಧಿಕಾರಿಗಳು ಎರಡನೇಯ ಹಂತದ ಕಾಮಗಾರಿ ಕುರಿತು ಮಾಹಿತಿ ನೀಡಿದರು. ಇದೇ ವೇಳೆ ಹಡಗುಗಳ ರಿಪೇರಿ ಕಾರ್ಯ ಕೈಗೊಳ್ಳುವ ಲಿಫ್ಟಿಂಗ್ ಯಂತ್ರಗಳ ಸಾಮರ್ಥ್ಯವನ್ನು ಪ್ರದರ್ಶಿಸಲಾಯಿತು. ಇದನ್ನೂ ಓದಿ: ಕೋವಿಡ್ ವಾರ್ಡ್‍ನಲ್ಲಿ ಆಮ್ಲಜನಕ ಸೋರಿಕೆ ತಡೆಗೆ ನೌಕಾದಳದ ತಾಂತ್ರಿಕ ತಂಡ ನಿಯೋಜನೆ

    ಜೊತೆಗೆ ನೌಕಾ ಜಟ್ಟಿಯಲ್ಲಿನ ಅಭಿವೃದ್ಧಿ ಕಾರ್ಯಗಳನ್ನ ಪರಿಶೀಲಿಸಿದರು. ಬಳಿಕ ನೌಕಾನೆಲೆ ಸಿಬ್ಬಂದಿಗಾಗಿ ನೂತನವಾಗಿ ನಿರ್ಮಿಸಲಾದ ವಸತಿಗೃಹಕ್ಕೆ ಸಚಿವ ರಾಜನಾಥ್ ಸಿಂಗ್ ಭೇಟಿ ನೀಡಿದ್ದು ಅಲ್ಲಿನ ಮೂಲಭೂತ ಸೌಕರ್ಯಗಳು, ಇಂಧನ ದಕ್ಷತೆ, ತ್ಯಾಜ್ಯ ನಿರ್ವಹಣೆ ಹಾಗೂ ಪರಿಸರ ಸ್ನೇಹಿ ವ್ಯವಸ್ಥೆಗಳನ್ನು ವೀಕ್ಷಿಸಿದರು. ಈ ವೇಳೆ ನೌಕಾನೆಲೆಯ ಎರಡನೇಯ ಹಂತದ ಕಾಮಗಾರಿಯ ಕಾಂಟ್ರ್ಯಾಕ್ಟರ್, ಎಂಜಿನಿಯರ್, ಅಧಿಕಾರಿಗಳು ಹಾಗೂ ನೌಕಾನೆಲೆ ಸಿಬ್ಬಂದಿಯೊಂದಿಗೂ ರಾಜನಾಥ್ ಸಿಂಗ್ ಮಾತುಕತೆ ನಡೆಸಿದರು. ಇದನ್ನೂ ಓದಿ: ಕದಂಬ ನೌಕಾನೆಲೆಗೆ ಸಂಸದೀಯ ಸಮಿತಿ ಸದಸ್ಯರ ಭೇಟಿ

  • ಒಂದು ಇಂಚು ಜಾಗವನ್ನು ಯಾರಿಗೂ ಬಿಟ್ಟುಕೊಡಲ್ಲ – ರಾಜನಾಥ್ ಸಿಂಗ್

    ಒಂದು ಇಂಚು ಜಾಗವನ್ನು ಯಾರಿಗೂ ಬಿಟ್ಟುಕೊಡಲ್ಲ – ರಾಜನಾಥ್ ಸಿಂಗ್

    – ಗಲ್ವಾನ್ ಕಣಿವೆಯಲ್ಲಿ ಎರಡು ದೇಶಗಳ ಸೈನ್ಯ ಹಿಂದಕ್ಕೆ
    – ನಿರಂತರವಾಗಿ ನಡೆಯುತ್ತಿದೆ ಮಾತುಕತೆ

    ನವದೆಹಲಿ: ಗಲ್ವಾನ್ ಘರ್ಷಣೆಯಿಂದಾಗಿ ಸೃಷ್ಟಿಯಾಗಿದ್ದ ಬಿಕ್ಕಟ್ಟು ಈಗ ತಿಳಿಯಾಗುತ್ತಿದ್ದು ಭಾರತ ಮತ್ತು ಚೀನಾ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಆರಂಭವಾಗಿದೆ.

    ರಾಜ್ಯಸಭೆಯಲ್ಲಿ ಮಾತನಾಡಿದ ಗೃಹ ಸಚಿವ ರಾಜನಾಥ್ ಸಿಂಗ್, ಭಾರತ-ಚೀನಾ ಸಂಪೂರ್ಣವಾಗಿ ಹಿಂದೆ ಸರಿಯಲು ಒಪ್ಪಿಕೊಂಡಿದ್ದು, ಪೂರ್ವ ಲಡಾಕ್‍ನ ವಾಸ್ತವ ನಿಯಂತ್ರಣ ರೇಖೆಯ ಪಾಂಗ್ಯಾಂಗ್ ತ್ಸೋ ಸರೋವರದ ಬಳಿ ಪರಿಸ್ಥಿತಿ ಸುಧಾರಿಸಿದೆ. ಅಲ್ಲದೆ 48 ಗಂಟೆಗಳಲ್ಲಿ ಕಮಾಂಡರ್ ಮಟ್ಟದಲ್ಲಿ ಸಭೆ ನಡೆಯುಲಿದೆ ಎಂದು ಮಾಹಿತಿ ನೀಡಿದರು.

    ಸೇನೆಯನ್ನು ಫಿಂಗರ್ 8 ಪ್ರದೇಶಕ್ಕೆ ಹಿಂದಿರುಗಿಸಲು ಚೀನಾ ಒಪ್ಪಿಕೊಂಡಿದ್ದು, ನಮ್ಮ ಸೈನಿಕರನ್ನು ಸಹ ಫಿಂಗರ್ 3ರ ಧನ್ ಸಿಂಗ್ ಥಾಪಾ ಶಾಶ್ವತ ನೆಲೆಗೆ ಕಳುಹಿಸಲಾಗುತ್ತಿದೆ. ಚೀನಾ ತನ್ನ ಸೈನ್ಯವನ್ನು ಪಾಂಗ್ಯಾಂಗ್ ತ್ಸೋ ಸರೋವರದ ಉತ್ತರ ದಂಡೆಯ ಫಿಂಗರ್ 8ಕ್ಕೆ ಕಳುಹಿಸುತ್ತಿದೆ. ಭಾರತದ ಸೈನಿಕರನ್ನು ಸಹ ಫಿಂಗರ್ 3ರ ಶಾಶ್ವತ ನೆಲೆಗೆ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು.

    ಸರೋವರದ ಉತ್ತರ ಹಾಗೂ ದಕ್ಷಿಣ ದಂಡೆಯ ಬೇರ್ಪಡಿಸುವಿಕೆ ಒಪ್ಪಂದದ ಬಗ್ಗೆ ಚೀನಾದೊಂದಿಗಿನ ನಮ್ಮ ಮಾತುಕತೆ ನಿರಂತರವಾಗಿ ನಡೆಯುತ್ತಿದೆ. ಒಪ್ಪಂದದ ಬಳಿಕ ಈ ಪ್ರದೇಶದಲ್ಲಿ ಭಾರತ-ಚೀನಾ ಸೈನಿಕರನ್ನು ಹಿಂಪಡೆಯಲಾಗುವುದು. ಭಾರತದ ಒಂದು ಇಂಚು ಜಾಗವನ್ನು ಯಾರಿಗೂ ಬಿಟ್ಟು ಕೊಡುವುದಿಲ್ಲ. ಭದ್ರತೆಯ ವಿಚಾರ ಬಂದಾಗ ಯಾರೊಂದಿಗೂ ಭಾರತ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಇದೇ ವೇಳೆ ಭರವಸೆ ನೀಡಿದರು.

    ಎಲ್‍ಒಸಿ ಬಳಿ ಶಾಂತಿಯುತ ಪರಿಸ್ಥಿತಿಯನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ. ಭಾರತ ಯಾವಾಗಲೂ ದ್ವಿಪಕ್ಷೀಯ ಸಂಬಂಧಗಳನ್ನು ಕಾಪಾಡಿಕೊಳ್ಳಲು ಒತ್ತು ನೀಡಿದೆ. ಮೊದಲನೇಯದಾಗಿ ಎರಡೂ ಕಡೆಯವರು ಎಲ್‍ಎಸಿ ನಿಯಮಗಳಿಗೆ ಬದ್ಧವಾಗಿರಬೇಕು ಹಾಗೂ ಗೌರವಿಸಬೇಕು, ಎರಡನೇಯದಾಗಿ ಯಾವುದೇ ಕಡೆಯಿಂದಲೂ ಸ್ಥಿತಿಗತಿ ಬದಲಿಸಲು ಯತ್ನಿಸಬಾರದು. ಮೂರನೇಯದಾಗಿ ಎಲ್ಲ ಹೊಂದಾಣಿಕೆಗಳನ್ನು ಎರಡೂ ಪಕ್ಷಗಳು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು ಎಂದು ರಾಜನಾಥ್ ಸಿಂಗ್ ಹೇಳಿದರು.

    ಲಡಾಖ್ ಗಡಿಯಲ್ಲಿ ಜೂನ್ 15 ರಂದು ನಡೆದ ಘರ್ಷಣೆಯಲ್ಲಿ ಭಾರತದ 20 ಮಂದಿ ಯೋಧರು ಹುತಾತ್ಮರಾಗಿದ್ದರು. ಈ ಘಟನೆಯ ಬಳಿಕ ಭಾರತ ಚೀನಾ ನಡುವೆ ಯುದ್ಧದ ಸನ್ನಿವೇಶ ಸೃಷ್ಟಿಯಾಗಿತ್ತು.

    ಈ ವೇಳೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದ ಹೇಳಿಕೆಯಲ್ಲಿ ಭಾರತದ ಸೇನೆ ಚೀನಾ ಕಡೆಯಲ್ಲೂ ಅಪಾರ ಪ್ರಮಾಣದ ಸಾವು ನೋವು ಸಂಭವಿಸಿದೆ ಎಂದು ತಿಳಿಸಿತ್ತು. ಚೀನಾದ 43 ಯೋಧರು ಮೃತಪಟ್ಟಿದ್ದಾರೆ ಎಂದು ವರದಿಯಾಗಿತ್ತು.

  • ಗಡಿ ಕಾಯೋ ಯೋಧರಿಗೆ 300 ಮಾಸ್ಕ್ ಹೊಲಿದು ಕೊಟ್ಟ ಉಡುಪಿಯ ಇಶಿತಾ

    ಗಡಿ ಕಾಯೋ ಯೋಧರಿಗೆ 300 ಮಾಸ್ಕ್ ಹೊಲಿದು ಕೊಟ್ಟ ಉಡುಪಿಯ ಇಶಿತಾ

    – ಬಾಲಕಿಯ ಶ್ರಮಕ್ಕೆ ರಕ್ಷಣಾ ಸಚಿವರಿಂದ ಶ್ಲಾಘನೆ
    – ಇಶಿತಾಗೆ ಗುಡ್‍ಲಕ್ ಅಂದ್ರು ರಾಜನಾಥ್ ಸಿಂಗ್

    ಉಡುಪಿ: ದೇಶ ಸೇವೆ ಮಾಡಬೇಕು ಅಂತ ಮನಸ್ಸಿದ್ರೆ ಗಡಿಗೇ ಹೋಗಬೇಕಾಗಿಲ್ಲ. ಮನೆಯಲ್ಲೇ ಕೂತು ದೇಶ ಸೇವೆ ಮಾಡಬಹುದು. ಕೊರೊನಾ ಸಂಕಷ್ಟದ ಕಾಲದಲ್ಲಿ ರಜೆಯಿಲ್ಲದೆ ದುಡಿಯುತ್ತಿರುವ ಭಾರತೀಯ ಸೇನೆಗೆ ಉಡುಪಿಯ ಪೋರಿಯೊಬ್ಬಳು ಧೈರ್ಯ ತುಂಬಿದ್ದಾಳೆ.

    ಹೌದು. ಉಡುಪಿಯ ಅಂಬಲಪಾಡಿ ನಿವಾಸಿ ಇಶಿತಾ ಆಚಾರ್, ಮಣಿಪಾಲದ ಮಾದವ ಕೃಪಾ ಆಂಗ್ಲ ಮಾದ್ಯಮ ಶಾಲೆಯಲ್ಲಿ 8 ತರಗತಿ ಓದುತ್ತಿದ್ದಾಳೆ. ಭಾರತ್ ಸ್ಕೌಟ್ಸ್ ಮತ್ತು ಗೈಡ್ ನಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾಳೆ.

    ಯೋಧರು ಅಂದ್ರೆ ಇಶಿತಾಗೆ ಪ್ರೀತಿ ಕಾಳಜಿ ಗೌರವ. ದೇಶವೇ ಕೊರೊನಾದಿಂದ ತತ್ತರಿಸಿ ಲಾಕ್‍ಡೌನ್ ಆಗಿತ್ತು. ಶಾಲೆಗಳಿನ್ನೂ ಆರಂಭವಾಗಿಲ್ಲ. ಈ ನಡುವೆ ಸ್ಕೌಟ್ಸ್ ಶಿಕ್ಷಕರು, SSLC ವಿದ್ಯಾರ್ಥಿಗಳಿಗಾಗಿ ಮಾಸ್ಕ್ ತಯಾರಿಸುವಂತೆ ಹೇಳಿದ್ದರು. ಮನೆಯಲ್ಲೇ ಮಾಡರ್ನ್ ಹೊಲಿಗೆ ಯಂತ್ರ ಇರೋದ್ರಿಂದ ಹೊಲಿಗೆ ಗೊತ್ತಿದ್ದ ಇಶಿತಾಗೆ ಮಾಸ್ಕ್ ತಯಾರಿ ಕಷ್ಟ ಆಗಿಲ್ಲ. ಮಾಸ್ಕ್ ತಯಾರು ಮಾಡಿ ಮೊದಲು 10ನೇ ತರಗತಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ನೀಡಿದ್ದಳು.

    ಇದರಿಂದ ಸ್ಫೂರ್ತಿಗೊಂಡು ಮತ್ತಷ್ಟು ಮಾಸ್ಕ್ ತಯಾರಿಸಿದ್ದಳು. ಹೊಲಿದ ಮಾಸ್ಕನ್ನು ಆರ್ಹರಿಗೆ ನೀಡಬೇಕು ಅಂತ ಯೋಚನೆ ಬಂದಾಗ ಆಕೆಗೆ ಮೊದಲು ನೆನಪಾಗಿದ್ದೇ ಯೋಧರು. ದೇಶ ಕಾಯಲು ಸಾಧ್ಯ ಆಗದೆ ಇದ್ದರೂ ವೀರ ಯೋಧರಿಗೆ ಅಳಿಲ ಸೇವೆ ಮಾಡಬೇಕು ಅಂತ ಅವರಿಗೆ ಮಾಸ್ಕ್ ನೀಡಲು ತೀರ್ಮಾನಿಸಿದಳು.

    ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಇಶಿತಾ ಆಚಾರ್ ಮಾತನಾಡಿ, ಯೋಧರಿಗೆ ಮಾಸ್ಕ್ ನೀಡಿದ್ದು ಬಹಳ ಖುಷಿಯಾಗಿತ್ತು. ಆದರೆ ರಕ್ಷಣಾ ಸಚಿವರಿಂದ ಪತ್ರ ಬಂದಿದ್ದು, ಮತ್ತಷ್ಟು ಸಂತಸವಾಗಿದೆ. ಅಭಿನಂದನೆ ಜೊತೆ ಗುಡ್‍ಲಕ್ ಹೇಳಿದ್ದಾರೆ. ಇದರಿಂದ ಇನ್ನಷ್ಟು ಕೆಲಸ ಮಾಡಬೇಕೆಂಬ ಹುಮ್ಮಸ್ಸು ಮೂಡಿದೆ ಎಂದರು.

    ಯೋಧರಿಗೆ ಮಾಸ್ಕ್ ನೀಡುವುದೇನೋ ಸರಿ ಆದರೆ ಕಳುಹಿಸಿ ಕೊಡುವುದು ಹೇಗೆ? ಅವರಿಗೆ ತಲುಪಿದೆ ಅಂತ ಗೋತ್ತಾಗುವುದು ಆದ್ರೂ ಹೇಗೆ? ಒಳ್ಳೆಯ ನಿರ್ಧಾರದಿಂದ ಹಿಂದೆ ಸರಿಯಬಾರದು ಅಂತ ಇಂಟರ್ನೆಟ್ ಮೂಲಕ ಸರ್ಚ್ ಮಾಡಿ, ಅದರಲ್ಲಿ ಇದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವಿಳಾಸಕ್ಕೆ ಇಶಿತಾ ಹೊಲಿದ 300 ಮಾಸ್ಕ್ ಗಳನ್ನು ಕಳುಹಿಸಿ ಕೊಡಲಾಯ್ತು. ಮಾಸ್ಕ್ ಸಿಕ್ಕ ಕೂಡಲೇ ಆಕಡೆಯಿಂದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪತ್ರವೂ ಬಂದಿದೆ. ಇದು ಇಶಿತಾ ಮನೆಯವರಿಗೂ ಬಹಳ ಸಂತಸ ತಂದಿದೆ.

    ತಾಯಿ ನಂದಿತಾ ಮಾತನಾಡಿ, ಎಸ್ ಎಸ್ ಎಲ್ ಸಿ ಮಕ್ಕಳಿಗೂ ಮಾಸ್ಕ್ ಹೊಲಿಸಿ ಕೊಟ್ಟಿದ್ದೇವೆ. ಉಳಿದ ಮಾಸ್ಕ್ ಏನು ಮಾಡೋದು ಅಂತ ಯೋಚಿಸಿದಾಗ ಈ ಯೊಚನೆ ಬಂತು. ರಕ್ಷಣಾ ಸಚಿವರ ಪ್ರತಿಕ್ರಿಯೆ ಬರುತ್ತದೆ ಎಂಬ ನಿರೀಕ್ಷೆ ಇರಲಿಲ್ಲ ಎಂದರು.

    ಒಟ್ಟಿನಲ್ಲಿ ಪುಟ್ಟ ಬಾಲಕಿಯ ದೇಶ ಪ್ರೇಮ ಹಾಗೂ ಸೈನಿಕರ ಆರೋಗ್ಯ ಕುರಿತು ಕಾಳಜಿ ಮೆಚ್ಚಲೇಬೇಕು. ಮಾಸ್ಕ್ ನೀಡುವ ಮೂಲಕ ದೇಶದ ಯೋಧರ ಅಳಿಲ ಸೇವೆ ಮಾಡಿದ್ದಾಳೆ. ಮುಂದೆ ದೊಡ್ಡ ಮಟ್ಟದ ದೇಶ ಸೇವೆ ಮಾಡುವ ಆಲೋಚನೆ ಈಕೆಗಿದೆ.

  • ಆರ್ಮಿ ಆತ್ಮ ನಿರ್ಭರ ಭಾರತ್ – ಕೇಂದ್ರ ರಕ್ಷಣಾ ಇಲಾಖೆಯಿಂದ ಮಹತ್ವದ ಘೋಷಣೆ

    ಆರ್ಮಿ ಆತ್ಮ ನಿರ್ಭರ ಭಾರತ್ – ಕೇಂದ್ರ ರಕ್ಷಣಾ ಇಲಾಖೆಯಿಂದ ಮಹತ್ವದ ಘೋಷಣೆ

    ನವದೆಹಲಿ: ರಕ್ಷಣಾ ಇಲಾಖೆಗೆ ಅವಶ್ಯವಿರುವ 101 ವಿವಿಧ ಉಪಕರಣಗಳನ್ನು ಭಾರತದಲ್ಲೇ ಉತ್ಪಾದಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇಲಾಖೆಯಲ್ಲಿ ಸ್ವಾವಲಂಬಿ ಸಾಧಿಸುವ ನಿಟ್ಟಿನಲ್ಲಿ ಆತ್ಮ ನಿರ್ಭರ್ ಭಾರತ್ ಯೋಜನೆಯಡಿ ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

    ಇಂದು ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಇಲಾಖೆಯ 101 ಉಪಕರಣಗಳನ್ನು ಉತ್ಪಾದಿಸಲು ದೇಶಿಯ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲಾಗುವುದು. ಈ ನಿಟ್ಟಿನಲ್ಲಿ ಹಲವು ಹಂತದ ಮಾತುಕತೆ ಮುಗಿದಿದ್ದು, ಸುಮಾರು 1 ಲಕ್ಷ 40 ಸಾವಿರ ಕೋಟಿಯ ಉತ್ಪಾದನೆ ಇದಾಗಿದೆ ಎಂದು ಹೇಳಿದ್ದಾರೆ.

    ಮದ್ದು, ಗುಂಡು, ಫಿರಂಗಿ, ಆರ್ಟಿಲರಿ ಗನ್, ರೆಡಾರ್, ಲಘು ಯುದ್ದ ವಿಮಾನ, ಹೆಲಿಕಾಪ್ಟರ್, ಸೋನಾರ್ ಸಿಸ್ಟಮ್, ಶಸ್ತ್ರಸಜ್ಜಿತ ವಾಹನ ಸೇರಿದಂತೆ 101 ವಿವಿಧ ಉಪಕರಣಗಳನ್ನು ದೇಶದಲ್ಲೇ ತಯಾರಿಸಲು ನಿರ್ಧರಿಸಿದೆ. ಇದರಿಂದ ಆತ್ಮನಿರ್ಭರ ಭಾರತಕ್ಕೆ ಉತ್ತೇಜನ ಸಿಗಲಿದೆ ಎಂದು ರಾಜನಾಥ್ ಸಿಂಗ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

    2020 ರಿಂದ 2024ರ ನಡುವೆ ಈ ಮಹತ್ವದ ಕಾರ್ಯ ನಡೆಯಲಿದೆ. ಸಂಪೂರ್ಣವಾಗಿ ರಕ್ಷಣಾ ಸಾಮಗ್ರಿ ದೇಶದಲ್ಲೇ ಉತ್ಪಾದನೆ ಆಗಲಿದೆ. ಇದಕ್ಕಾಗಿ ಪ್ರತ್ಯೇಕ ಬಜೆಟ್ ಮುಖ್ಯಸ್ಥರ ನೇಮಕ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕತೆ, ಮೂಲಸೌಕರ್ಯ, ವ್ಯವಸ್ಥೆ, ಜನಸಂಖ್ಯೆ ಮತ್ತು ಬೇಡಿಕೆ ಎಂಬ 5 ಆಧಾರ ಸ್ತಂಭಗಳ ಮೇಲೆ ಸ್ವಾವಲಂಬಿ ಭಾರತಕ್ಕಾಗಿ ಸ್ಪಷ್ಟ ಕರೆ ನೀಡಿದ್ದಾರೆ. ಹೀಗಾಗಿ ಸ್ವಾವಲಂಬಿ ಭಾರತಕ್ಕಾಗಿ `ಆರ್ಮಿ ಆತ್ಮ ನಿರ್ಭರ ಭಾರತ್’ ಹೆಸರಿನ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ರಕ್ಷಣಾ ಇಲಾಖೆ ಘೋಷಿಸಿದೆ ಎಂದು ರಾಜನಾಥ್ ಸಿಂಗ್ ಮಾಹಿತಿ ನೀಡಿದ್ದಾರೆ.

    ಸಶಸ್ತ್ರ ಪಡೆಗಳ ಅವಶ್ಯಕತೆಗಳನ್ನು ಪೂರೈಸಲು ಡಿಆರ್‌ಡಿಒ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ನಕಾರಾತ್ಮಕ ಪಟ್ಟಿಯಲ್ಲಿರುವ ವಸ್ತುಗಳನ್ನು ತಯಾರಿಸಲು ಇಂಡಸ್ಟ್ರಿಗಳಿಗೆ ಉತ್ತಮ ಅವಕಾಶವನ್ನು ನೀಡುತ್ತದೆ. ಸೇನಾ ಪಡೆಗಳು, ಸಾರ್ವಜನಿಕ ಮತ್ತು ಖಾಸಗಿಯ ಎಲ್ಲ ಷೇರುದಾರರ ಜತೆ ಹಲವು ಸುತ್ತಿನ ಸಮಾಲೋಚನೆ ನಡೆಸಿದ ಬಳಿಕ ರಕ್ಷಣಾ ಇಲಾಖೆ ಸಾಮಗ್ರಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಮುಂದಿನ ದಿನಗಳಲ್ಲಿ 6 ರಿಂದ 7 ವರ್ಷ ದೇಶೀಯ ಉದ್ಯಮದ ಮೇಲೆ ಸುಮಾರು 4 ಲಕ್ಷ ಕೋಟಿ ರೂ.ಗಳ ಒಪ್ಪಂದಗಳನ್ನು ಮಾಡಲಾಗುವುದು ಎಂದು ಅಂದಾಜಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

  • ಸೈನಿಕರ ಪ್ರಾಣ ತ್ಯಾಗದಿಂದಾಗಿ ಅತೀವ ನೋವು, ದೇಶ ಅವರ ತ್ಯಾಗವನ್ನು ಎಂದೂ ಮರೆಯಲ್ಲ- ರಾಜನಾಥ್ ಸಿಂಗ್

    ಸೈನಿಕರ ಪ್ರಾಣ ತ್ಯಾಗದಿಂದಾಗಿ ಅತೀವ ನೋವು, ದೇಶ ಅವರ ತ್ಯಾಗವನ್ನು ಎಂದೂ ಮರೆಯಲ್ಲ- ರಾಜನಾಥ್ ಸಿಂಗ್

    ನವದೆಹಲಿ: ಪೂರ್ವ ಲಡಾಖ್‍ನಲ್ಲಿ ನಡೆದ ಚೀನಾ ಹಾಗೂ ಭಾರತದ ನಡುವಿನ ಸಂಘರ್ಷದಲ್ಲಿ 20 ಸೈನಿಕರು ಹುತಾತ್ಮರಾಗಿರುವುದು ಅತೀವ ನೋವುಂಟು ಮಾಡಿದೆ. ದೇಶ ಅವರ ತ್ಯಾಗವನ್ನು ಎಂದೂ ಮರೆಯುವುದಿಲ್ಲ ಎಂದು ರಕ್ಷಾಣ ಸಚಿವ ರಾಜನಾಥ್ ಸಿಂಗ್ ಕಂಬನಿ ಮಿಡಿದಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಅವರು, ಪೂರ್ವ ಲಡಾಖ್‍ನ ಗಲ್ವಾನ್ ಪ್ರದೇಶದಲ್ಲಿ ಸೈನಿಕರು ಹುತಾತ್ಮರಾಗಿರುವುದು ಅತೀವ ನೋವುಂಟು ಮಾಡಿದೆ. ನಮ್ಮ ಸೈನಿಕರು ಕರ್ತವ್ಯ ನಿರ್ವಹಿಸುವುದರಲ್ಲಿ ಮಾದರಿಯಾಗಿದ್ದಾರೆ. ದೇಶದ ಘನತೆ, ಗೌರವವನ್ನು ಎತ್ತಿ ಹಿಡಿಯುವ ವಿಚಾರದಲ್ಲಿ ಸಾಹಸ ಮೆರೆದಿದ್ದಾರೆ. ಪ್ರಾಣಕ್ಕಿಂತ ದೇಶ ಮುಖ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಶ್ಲಾಘಿಸಿದ್ದಾರೆ.

    ಮತ್ತೊಂದು ಟ್ವೀಟ್‍ನಲ್ಲಿ ಇಂತಹ ಕಠಿಣ ಸಂದರ್ಭದಲ್ಲಿ ಹುತಾತ್ಮ ಯೋಧರ ಕುಟುಂಬ ಜೊತೆ ದೇಶ ಇರುತ್ತದೆ. ಅವರ ತ್ಯಾಗವನ್ನು ದೇಶ ಎಂದೂ ಮರೆಯುವುದಿಲ್ಲ. ಹುತಾತ್ಮ ಯೋಧರ ಕಟುಂಬದ ಕಷ್ಟಕ್ಕೆ ನನ್ನ ಹೃದಯ ಮಿಡಿಯುತ್ತಿದೆ. ಇಂತಹ ಸಂದರ್ಭದಲ್ಲಿ ಇಡೀ ದೇಶವೇ ಹೆಗಲಿಗೆ ಹೆಗಲು ಕೊಟ್ಟು ಅವರ ಜೊತೆ ನಿಲ್ಲುತ್ತದೆ. ಅವರ ತ್ಯಾಗ ಬಲಿದಾನದ ಕುರಿತು ನಮಗೆ ಹೆಮ್ಮೆಯಿದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.

    ಜೂನ್ 15 ಹಾಗೂ 16ರಂದು ನಡೆದ ದಾಳಿಯಲ್ಲಿ 17 ಭಾರತೀಯ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲದೆ ಒಟ್ಟು 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ. ಅಲ್ಲದೆ ಚೀನಾದ 43 ಸೈನಿಕರು ಸಹ ಹುತಾತ್ಮರಾಗಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಕಂಬನಿ ಮಿಡಿದಿದ್ದಾರೆ.