Tag: rajamouli

  • ಆರ್.ಆರ್.ಆರ್ ಸಿನಿಮಾ ಬಗ್ಗೆ ಕಟು ಟೀಕೆ ಮಾಡಿದ ಬಾಲಿವುಡ್ ನಟ ನಾಸೀರುದ್ದೀನ್ ಶಾ ಪತ್ನಿ

    ಆರ್.ಆರ್.ಆರ್ ಸಿನಿಮಾ ಬಗ್ಗೆ ಕಟು ಟೀಕೆ ಮಾಡಿದ ಬಾಲಿವುಡ್ ನಟ ನಾಸೀರುದ್ದೀನ್ ಶಾ ಪತ್ನಿ

    ಬಾಲಿವುಡ್ ಸಿನಿಮಾ ರಂಗದ ಹಿರಿಯ ಕಲಾವಿದೆ ಹಾಗೂ ನಟ ನಾಸೀರುದ್ದೀನ್ ಶಾ (Naseeruddin Shah) ಪತ್ನಿ ರತ್ನಾ ಪಠಾಕ್ ಶಾ (Ratna Pathak Shah) ‘ಆರ್.ಆರ್.ಆರ್’ (RRR) ಸಿನಿಮಾ ಬಗ್ಗೆ ಕಟು ಟೀಕೆ ಮಾಡಿದ್ದಾರೆ. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿ ಆಗಿದ್ದ ಅವರು ‘ಆರ್.ಆರ್.ಆರ್ ರೀತಿಯ ಸಿನಿಮಾಗಳು ನಮ್ಮನ್ನು ಮತ್ತಷ್ಟು ಹಿಂದಕ್ಕೆ ಕರೆದುಕೊಂಡು ಹೋಗುತ್ತವೆ. ನಾವೆಲ್ಲರೂ ಮುಂದೆ ನೋಡುತ್ತಿರುವಾಗ, ನಮ್ಮನ್ನು ಈ ಚಿತ್ರ ಹಿಂದಕ್ಕೆ ಕರೆದುಕೊಂಡು ಹೋಗುತ್ತಿದೆ’ ಎಂದು ಹೇಳಿದ್ದಾರೆ. ಸಿನಿಮಾ ಗೆದ್ದಿದ್ದರೂ, ಅದು ಅಹಂಕಾರವನ್ನು ತೋರಿಸುತ್ತದೆ’ ಎಂದಿದ್ದಾರೆ.
    RRR NEW SONG ONE

    ಆರ್.ಆರ್.ಆರ್ ಸಿನಿಮಾದ ಕಥೆಯ ಕುರಿತು ಈ ರೀತಿಯ ಹೇಳಿಕೆಯನ್ನು ನೀಡಿರುವ ಅವರು, ಚಿತ್ರಕರ್ಮಿಗಳು ಈ ಸಿನಿಮಾವನ್ನು ವಿಮರ್ಶೆ ದೃಷ್ಟಿಯಿಂದ ನೋಡಲೇ ಇಲ್ಲವೆಂದು ವಿಷಾದವನ್ನೂ ಅವರು ವ್ಯಕ್ತ ಪಡಿಸಿದ್ದಾರೆ. ಈ ರೀತಿಯ ಸಿನಿಮಾಗಳನ್ನು ವಿಮರ್ಶೆ ಮಾಡದೇ ಇದ್ದರೆ, ಅಹಂಕಾರ ಹೊತ್ತುಕೊಂಡಿರುವ ಅವರು ತಾವು ಮಾಡಿದ್ದೇ ಶ್ರೇಷ್ಠವೆಂದು ಭಾವಿಸುತ್ತಾರೆ ಎಂದು ನಿರ್ದೇಶಕ ರಾಜಮೌಳಿಯನ್ನು (Rajamouli) ಕುಟುಕಿದ್ದಾರೆ. ವಿಮರ್ಶೆಗಳು ಏನೇ ಬಂದರೂ, ಅದನ್ನು ಮುಕ್ತವಾಗಿ ತಗೆದುಕೊಳ್ಳಬೇಕು ಎಂದು ಸಲಹೆಯನ್ನೂ ನೀಡಿದ್ದಾರೆ.

    ಸಿನಿಮಾ ಬಗ್ಗೆ ಏನೇ ಟೀಕೆ ಟಿಪ್ಪಣಿಗಳು ಬಂದರೂ, ಈ ವರ್ಷ ತೆರೆಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿರುವ ‘ಆರ್.ಆರ್.ಆರ್’ ಸಿನಿಮಾಗೆ ಫಿಲಡೆಲ್ಫಿಯಾ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಆನ್ಯುವಲ್ ಅವಾರ್ಡ್’ನಲ್ಲಿ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಮೊನ್ನೆಯಷ್ಟೇ ಈ ಸಿನಿಮಾ ನಾಮನಿರ್ದೇಶನಕ್ಕೆ ಆಯ್ಕೆಯಾಗಿದ್ದನ್ನು ಚಿತ್ರತಂಡ ಹಂಚಿಕೊಂಡಿತ್ತು. ಇದೀಗ ಮೂರು ಪ್ರಶಸ್ತಿಗಳನ್ನು ಅದು ಪಡೆದುಕೊಂಡಿದೆ. ಈ ವಿಷಯವನ್ನು ಸ್ವತಃ ಚಿತ್ರತಂಡವೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ.

    ಫಿಲಡೆಲ್ಫಿಯಾ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಆನ್ಯುವಲ್ ಅವಾರ್ಡ್ ಸಂಸ್ಥೆಯು ಆರ್.ಆರ್.ಆರ್ ಸಿನಿಮಾಗೆ ಅತ್ಯುತಮ್ಮ ವಿದೇಶಿ ಸಿನಿಮಾ, ಅತ್ಯುತ್ತಮ ಸಂಗೀತ ಸಂಯೋಜನೆ ಮತ್ತು ಅತ್ಯುತ್ತಮ ಛಾಯಾಗ್ರಹಣ ವಿಭಾಗದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿಗಳನ್ನು ನೀಡಿರುವ ಸಂಸ್ಥೆಗೆ ರಾಜಮೌಳಿ ಅಂಡ್ ಟೀಮ್ ಧನ್ಯವಾದಗಳನ್ನು ಅರ್ಪಿಸಿದೆ. ಇದನ್ನೂ ಓದಿ: ನಟಿ ಉರ್ಫಿ ಜಾವೇದ್ ಗೆ ‘ಲಾರಿಂಜೈಟಿಸ್’ ಖಾಯಿಲೆ: ಆಸ್ಪತ್ರೆಗೆ ದಾಖಲು

    ಆರ್.ಆರ್.ಆರ್ ಸಿನಿಮಾ ಐದು ವಿಭಾಗಗಳಲ್ಲಿ ನಾಮಿನೇಷನ್ ಪಟ್ಟಿಯಲ್ಲಿತ್ತು. ಅದರಲ್ಲಿ ಮೂರು ಪ್ರಶಸ್ತಿಗಳನ್ನು ಅದು ಬಾಚಿದೆ. ಅಲ್ಲದೇ ಈ ಬಾರಿಯ ಆಸ್ಕರ್ ಪ್ರಶಸ್ತಿಗೂ ಆರ್.ಆರ್.ಆರ್ ಸಿನಿಮಾ ಸ್ಪರ್ಧೆಯಲ್ಲಿದೆ. ಇನ್ನೂ ಅನೇಕ ಪ್ರಶಸ್ತಿಗಳಲ್ಲಿ ಚಿತ್ರ ಸ್ಪರ್ಧೆ ಮಾಡುತ್ತಿದೆ. ಅದರಲ್ಲೂ ಆಸ್ಕರ್ ಮೇಲೆ ಕಣ್ಣಿಟ್ಟು ಚಿತ್ರತಂಡ ಕೂತಿರುವುದರಿಂದ ಆ ಪ್ರಶಸ್ತಿ ಸಿಗುತ್ತಾ ಎನ್ನುವ ಕುತೂಹಲ ಕೂಡ ಮೂಡಿದೆ.

    Live Tv
    [brid partner=56869869 player=32851 video=960834 autoplay=true]

  • ಪ್ರತಿಷ್ಠಿತ ಮೂರು ಪ್ರಶಸ್ತಿ ಬಾಚಿಕೊಂಡ ‘ಆರ್.ಆರ್.ಆರ್’ ಸಿನಿಮಾ

    ಪ್ರತಿಷ್ಠಿತ ಮೂರು ಪ್ರಶಸ್ತಿ ಬಾಚಿಕೊಂಡ ‘ಆರ್.ಆರ್.ಆರ್’ ಸಿನಿಮಾ

    ರಾಜ ಮೌಳಿ (Rajamouli ) ನಿರ್ದೇಶನದ, ಈ ವರ್ಷ ತೆರೆಕಂಡು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿರುವ ‘ಆರ್.ಆರ್.ಆರ್’ (RRR) ಸಿನಿಮಾಗೆ ಫಿಲಡೆಲ್ಫಿಯಾ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಆನ್ಯುವಲ್ ಅವಾರ್ಡ್’ನಲ್ಲಿ ಮೂರು ಪ್ರಶಸ್ತಿಗಳನ್ನು ಬಾಚಿಕೊಂಡಿದೆ. ಮೊನ್ನೆಯಷ್ಟೇ ಈ ಸಿನಿಮಾ ನಾಮನಿರ್ದೇಶನಕ್ಕೆ ಆಯ್ಕೆಯಾಗಿದ್ದನ್ನು ಚಿತ್ರತಂಡ ಹಂಚಿಕೊಂಡಿತ್ತು. ಇದೀಗ ಮೂರು ಪ್ರಶಸ್ತಿಗಳನ್ನು ಅದು ಪಡೆದುಕೊಂಡಿದೆ. ಈ ವಿಷಯವನ್ನು ಸ್ವತಃ ಚಿತ್ರತಂಡವೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದೆ.

    ಫಿಲಡೆಲ್ಫಿಯಾ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಆನ್ಯುವಲ್ ಅವಾರ್ಡ್ ಸಂಸ್ಥೆಯು ಆರ್.ಆರ್.ಆರ್ ಸಿನಿಮಾಗೆ ಅತ್ಯುತ್ತಮ ವಿದೇಶಿ ಸಿನಿಮಾ, ಅತ್ಯುತ್ತಮ ಸಂಗೀತ ಸಂಯೋಜನೆ ಮತ್ತು ಅತ್ಯುತ್ತಮ ಛಾಯಾಗ್ರಹಣ ವಿಭಾಗದಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗಿದೆ. ಈ ಪ್ರಶಸ್ತಿಗಳನ್ನು ನೀಡಿರುವ ಸಂಸ್ಥೆಗೆ ರಾಜಮೌಳಿ ಅಂಡ್ ಟೀಮ್ ಧನ್ಯವಾದಗಳನ್ನು ಅರ್ಪಿಸಿದೆ. ಇದನ್ನೂ ಓದಿ: ಭಾರತದಲ್ಲಿ 150 ಕೋಟಿಗೂ ಅಧಿಕ ಗಳಿಕೆ ಮಾಡಿದ ‘ಅವತಾರ್ 2’ ಸಿನಿಮಾ

    ಆರ್.ಆರ್.ಆರ್ ಸಿನಿಮಾ ಐದು ವಿಭಾಗಗಳಲ್ಲಿ ನಾಮಿನೇಷನ್ ಪಟ್ಟಿಯಲ್ಲಿತ್ತು. ಅದರಲ್ಲಿ ಮೂರು ಪ್ರಶಸ್ತಿಗಳನ್ನು ಅದು ಬಾಚಿದೆ. ಅಲ್ಲದೇ ಈ ಬಾರಿಯ ಆಸ್ಕರ್ ಪ್ರಶಸ್ತಿಗೂ ಆರ್.ಆರ್.ಆರ್ ಸಿನಿಮಾ ಸ್ಪರ್ಧೆಯಲ್ಲಿದೆ. ಇನ್ನೂ ಅನೇಕ ಪ್ರಶಸ್ತಿಗಳಲ್ಲಿ ಚಿತ್ರ ಸ್ಪರ್ಧೆ ಮಾಡುತ್ತಿದೆ. ಅದರಲ್ಲೂ ಆಸ್ಕರ್ ಮೇಲೆ ಕಣ್ಣಿಟ್ಟು ಚಿತ್ರತಂಡ ಕೂತಿರುವುದರಿಂದ ಆ ಪ್ರಶಸ್ತಿ ಸಿಗುತ್ತಾ ಎನ್ನುವ ಕುತೂಹಲ ಕೂಡ ಮೂಡಿದೆ.

    ಆರ್.ಆರ್.ಆರ್ ಸಿನಿಮಾ ಭಾರತೀಯ ಚಿತ್ರರಂಗವನ್ನೇ ಬೆರಗಿನಿಂದ ನೋಡುವಂತೆ ಮಾಡಿತ್ತು. ಸಾವಿರಾರು ಕೋಟಿ ರೂಪಾಯಿಗಳನ್ನು ಬಾಚಿತ್ತು. 2022ರಲ್ಲಿ ತೆರೆಗೆ ಕಂಡ ಸಿನಿಮಾಗಳ ಪೈಕಿ ಬ್ಲಾಕ್ ಬಸ್ಟರ್ ಹಿಟ್ ಚಿತ್ರ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಈ ಹೊತ್ತಿನಲ್ಲಿ ಪ್ರಶಸ್ತಿಗಳು ಬರುತ್ತಿರುವುದು ಸಹಜವಾಗಿಯೇ ಚಿತ್ರತಂಡಕ್ಕೆ ಮತ್ತು ಅಭಿಮಾನಿಗಳಿಗೆ ಸಂಭ್ರಮ ಹೆಚ್ಚಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಕನ್ನಡ ಚಿತ್ರೋದ್ಯಮ ಬಿಟ್ಟು ಉಳಿದೆಲ್ಲ ಸಿನಿಮಾ ರಂಗ ಹೊಗಳಿದ ರಾಜಮೌಳಿ: ಕನ್ನಡಿಗರು ಗರಂ

    ಕನ್ನಡ ಚಿತ್ರೋದ್ಯಮ ಬಿಟ್ಟು ಉಳಿದೆಲ್ಲ ಸಿನಿಮಾ ರಂಗ ಹೊಗಳಿದ ರಾಜಮೌಳಿ: ಕನ್ನಡಿಗರು ಗರಂ

    ತೆಲುಗು ಸಿನಿಮಾ ರಂಗದ ಖ್ಯಾತ ನಿರ್ದೇಶಕ ರಾಜಮೌಳಿ ವಿರುದ್ಧ ಕನ್ನಡಿಗರು ಅಸಮಾಧಾನ ಹೊರ ಹಾಕಿದ್ದಾರೆ. ರಾಜಮೌಳಿ ಒಬ್ಬ ಅವಕಾಶವಾದಿ ಎಂದು ಜರಿದಿದ್ದಾರೆ. ಅವರ ಸಿನಿಮಾಗಳು ರಿಲೀಸ್ ಆಗುವ ಹೊತ್ತಿನಲ್ಲಿ ಮಾತ್ರ, ಕನ್ನಡ ಹಾಗೂ ಕರ್ನಾಟಕ ನೆನಪಾಗುತ್ತದೆ. ಉಳಿದಂತೆ ಅವರು ಕನ್ನಡವನ್ನು ಮರೆಯುತ್ತಾರೆ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಇನ್ಮುಂದೆ ನೀವು ಕನ್ನಡಿಗರು ಅನಬೇಡಿ ಎಂದು ತಾಕೀತು ಕೂಡ ಮಾಡಿದ್ದಾರೆ.

    ಅಷ್ಟಕ್ಕೂ ಕನ್ನಡಿಗರು ಗರಂ ಆಗಿರುವುದಕ್ಕೆ ಕಾರಣವೂ ಇದೆ. ಖಾಸಗಿ ವಾಹಿನಿಯಿಂದ ಖ್ಯಾತ ನಾಮರ ರೌಂಡ್ ಟೇಬಲ್ ಸಂದರ್ಶನವೊಂದನ್ನು ಏರ್ಪಡಿಸಿತ್ತು. ಇದರಲ್ಲಿ ಪೃಥ್ವಿರಾಜ್ ಸುಕುಮಾರನ್, ಕಮಲ್ ಹಾಸನ್, ರಾಜಮೌಳಿ, ಗೌತಮ್ ಮೆನನ್, ಲೋಕೇಶ್ ಕನಗರಾಜ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ರಾಜಮೌಳಿ ಕೇವಲ ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾ ರಂಗದ ಬಗ್ಗೆ ಮಾತನಾಡಿದ್ದಾರೆ. ಕನ್ನಡ ಚಿತ್ರೋದ್ಯಮವನ್ನು ಮರೆತು ಬಿಟ್ಟಿದ್ದಾರೆ. ಇದೇ ಕನ್ನಡಿಗರನ್ನು ಕೆರಳಿಸಿದೆ. ಇದನ್ನೂ ಓದಿ: ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಕಸ ಎಂದ ನಿರ್ದೇಶಕನಿಗೆ ವಿವೇಕ್ ಅಗ್ನಿಹೋತ್ರಿ ಸೌಮ್ಯ ಉತ್ತರ

    ಮಲಯಾಳಂನಲ್ಲಿ ಅತ್ಯುತ್ತಮ ಬರಹಗಾರರು ಮತ್ತು ನಟರಿದ್ದಾರೆ. ತಮಿಳು ಸಿನಿಮಾ ರಂಗವು ತಾಂತ್ರಿಕವಾಗಿ ಭಾರೀ ಶ್ರೀಮಂತ ಉದ್ಯಮ, ತೆಲುಗಿನಲ್ಲಿ ಸಾಕಷ್ಟು ಜನಪ್ರಿಯ ಸಿನಿಮಾಗಳು ಬಂದಿವೆ. ನಾವೆಲ್ಲರೂ ಪ್ರೇಕ್ಷಕರಿಗೆ ಏನು ಬೇಕೋ ಅದನ್ನು ಕೊಡುತ್ತಾ ಬಂದಿದ್ದೇವೆ. ಮಲಯಾಳಂ ಸಿನಿಮಾ ರಂಗದ ಬರಹಗಾರರ ಬಗ್ಗೆ ನನಗೆ ಬಹಳಷ್ಟು ಪ್ರೀತಿ ಇದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದಾರೆ. ಆದರೆ, ಕನ್ನಡ ಚಿತ್ರೋದ್ಯಮದ ಬಗ್ಗೆ ಒಂದು ಮಾತೂ ಕೂಡ ಅವರು ಆಡಲಿಲ್ಲ.

    ಹಾಗಂತ ಅವರು ಕನ್ನಡ ಚಿತ್ರೋದ್ಯಮವನ್ನು ಪೂರ್ತಿ ಕಡೆಗಣಿಸಲಿಲ್ಲ. ಅವರ ಮಾತು ಕೇವಲ ಕಾಂತಾರ ಸಿನಿಮಾದ ಬಗ್ಗೆ ಮಾತ್ರವಿತ್ತು. ಕನ್ನಡದಲ್ಲಿ ಸಾಕಷ್ಟು ಪ್ರಯೋಗಾತ್ಮಕ ಮತ್ತು ಒಳ್ಳೊಳ್ಳೆ ಸಿನಿಮಾಗಳು ಬಂದಿದೆ. ಆದರೆ, ಕೇವಲ ಕಾಂತಾರದ ಬಗ್ಗೆ ಮಾತಾಡಿ, ಅಷ್ಟಕ್ಕೆ ಸುಮ್ಮನಾಗಿದ್ದು ನೆಟ್ಟಿಗರಿಗೆ ಕೋಪ ತರಿಸಿದೆ. ಮೂಲತಃ ಕನ್ನಡಿಗರೇ ಆಗಿರುವ ರಾಜಮೌಳಿ, ಕನ್ನಡ ಚಿತ್ರೋದ್ಯಮದ ಬಗ್ಗೆ ಹೆಚ್ಚೆಚ್ಚು ಮಾತನಾಡಬೇಕಿತ್ತು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆರ್.ಆರ್.ಆರ್ ಸಿನಿಮಾ

    ಗೋಲ್ಡನ್ ಗ್ಲೋಬ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಆರ್.ಆರ್.ಆರ್ ಸಿನಿಮಾ

    ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಾಗಿ ಎರಡು ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದೆ. ಇಂಗ್ಲಿಷ್ ಹೊರತಾದ ಸಿನಿಮಾಗಳಿಗೆ ನೀಡುವ ವಿಭಾಗದಲ್ಲಿ ಈ ಸಿನಿಮಾ ಅತ್ಯುತ್ತಮ ಸಿನಿಮಾ ಹಾಗೂ ಅತ್ಯುತ್ತಮ ಗೀತೆ ವಿಭಾಗದಲ್ಲಿ ಸಿನಿಮಾ ನಾಮಿನೇಟ್ ಆಗಿದೆ. ಇಂಗ್ಲಿಷ್ ಹೊರತಾದ ವಿಭಾಗದಲ್ಲಿ ಅತ್ಯುತ್ತಮ ಸಿನಿಮಾ ಹಾಗೂ ಹಾಡಿನ ವಿಭಾಗದಲ್ಲಿ ಈ ಸಿನಿಮಾದ ನಾಟು ನಾಟು ಚಿತ್ರ ಪ್ರಬಲ ಸ್ಪರ್ಧೆಯನ್ನು ನೀಡಲಿದೆ. ಹೀಗಾಗಿ ಸಹಜವಾಗಿಯೇ ರಾಜಮೌಳಿ ಫ್ಯಾನ್ಸ್ ಸಂಭ್ರಮಿಸಿದ್ದಾರೆ.

    RRR NEW SONG ONE

    ತೆಲುಗಿನ ಸಿನಿಮಾವೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡುವ ಮೂಲಕ ಸಾವಿರಾರು ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿತ್ತು. ಅಲ್ಲದೇ, ಆಸ್ಕರ್ ಪ್ರಶಸ್ತಿಗಾಗಿ ಅದು ಭಾರತದಿಂದ ನಾಮನಿರ್ದೇಶನಗೊಂಡಿರಲಿಲ್ಲ ಎಂದು ಅಭಿಮಾನಿಗಳು ನಿರಾಸೆಯಾಗಿದ್ದರು. ಆಸ್ಕರ್ ಪ್ರಶಸ್ತಿಗಾಗಿ ಚಿತ್ರತಂಡ ನೇರವಾಗಿ ಸ್ಪರ್ಧಿಸುವ ಮೂಲಕ ಇನ್ನೂ ರೇಸ್ ನಲ್ಲಿ ಇದೆ. ಅದಕ್ಕೂ ಮುನ್ನ ಗೋಲ್ಡನ್ ಗ್ಲೋಬ್ ಪ್ರಶಸ್ತಿಗಾಗಿ ನಾಮಿನೇಟ್ ಆಗಿದೆ. ಇದನ್ನೂ ಓದಿ: ಮೊದಲ ಬಾರಿಗೆ ಮಗಳ ಮುಖ ಪರಿಚಯಿಸಿದ `ಯುವರತ್ನ’ ನಟಿ

    ಈ ವಿಷಯವನ್ನು ಸ್ವತಃ ರಾಜಮೌಳಿ ಅವರೇ ಟ್ವಿಟ್ ಮಾಡುವ ಮೂಲಕ ಅಭಿಮಾನಿಗಳ ಖುಷಿಯನ್ನು ಇಮ್ಮಡಿಗೊಳಿಸಿದ್ದಾರೆ. ತಮ್ಮ ತಂಡಕ್ಕೂ ಶುಭಾಶಯ ಕೋರಿದ್ದಾರೆ. ಹಾಗಂತ ಸ್ಪರ್ಧೆಯು ಸಾಧಾರಣವಾಗಿಲ್ಲ, ದಕ್ಷಿಣ ಕೊರಿಯಾ, ಅರ್ಜೆಂಟೀನಾ, ಜರ್ಮನಿ, ಬೆಲ್ಜಿಯಂ ಸಿನಿಮಾಗಳ ಜೊತೆ ಅದು ಪೈಪೋಟಿ ಮಾಡಬೇಕಿದೆ. ಇವೆಲ್ಲವೂ ಹೆಸರಾಂತ ಸಿನಿಮಾಗಳೇ ಆಗಿವೆ ಎನ್ನುವುದು ವಿಶೇಷ. 11 ಜನವರಿ 2023ರಂದು ಈ ಪ್ರಶಸ್ತಿಯನ್ನು ಲಾಸ್ ಎಂಜಲೀಸ್ ನಲ್ಲಿ ಪ್ರದಾನ ಮಾಡಲಾಗುತ್ತದೆ.

    ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್.ಟಿ.ಆರ್ ಕಾಂಬಿನೇಷನ್ ನ ಆರ್.ಆರ್.ಆರ್ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿತ್ತು. ಅಷ್ಟೂ ಕಡೆ ಉತ್ತಮ ಪ್ರದರ್ಶನವನ್ನೇ ಕಂಡಿತ್ತು. ಅಲ್ಲುರಿ ಸೀತಾರಾಮ ರಾಜು ಪಾತ್ರದಲ್ಲಿ ರಾಮ್ ಚರಣ್ ಮಿಂಚಿದ್ದರೆ, ಕೊಮರಮ್ ಭೀಮ ಪಾತ್ರಕ್ಕೆ ಜ್ಯೂನಿಯರ್ ಜೀವ ತುಂಬಿದ್ದರು. ಸ್ವಾತಂತ್ರ್ಯ ಹೋರಾಟಗಾರರಿಬ್ಬರ ಕಥೆಯನ್ನು ಒಳಗೊಂಡಿದ್ದ ಸಿನಿಮಾ ಇದಾಗಿತ್ತು.

    Live Tv
    [brid partner=56869869 player=32851 video=960834 autoplay=true]

  • ಜ್ಯೂ.ಎನ್‌ಟಿಆರ್ ಭೇಟಿ ಮಾಡಿ ಕಣ್ಣೀರಿಟ್ಟ ಜಪಾನ್ ಫ್ಯಾನ್ಸ್

    ಜ್ಯೂ.ಎನ್‌ಟಿಆರ್ ಭೇಟಿ ಮಾಡಿ ಕಣ್ಣೀರಿಟ್ಟ ಜಪಾನ್ ಫ್ಯಾನ್ಸ್

    ಭಾರತದಲ್ಲಿ(India) ಭರ್ಜರಿ ಸಕ್ಸಸ್ ಕಂಡ ತ್ರಿಬಲ್ ಆರ್ ಸಿನಿಮಾ ಇದೀಗ ಜಪಾನ್‌ನಲ್ಲಿ ರಿಲೀಸ್ ಆಗಿದೆ. ಅಲ್ಲೂ ಕೂಡ ರಾಮ್ ಚರಣ್ ಮತ್ತು `ಆರ್‌ಆರ್‌ಆರ್'(RRR Film) ಸಿನಿಮಾ ಸೂಪರ್ ಸಕ್ಸಸ್ ಕಂಡಿದೆ. ಈ ಚಿತ್ರದ ಪ್ರಚಾರಕ್ಕೆ ಇಡೀ ತಂಡ ಜಪಾನ್‌ಗೆ ಹಾರಿದ್ದಾರೆ. ಈ ವೇಳೆ ಜ್ಯೂ.ಎನ್‌ಟಿಆರ್‌ನ ನೋಡಿ ಫ್ಯಾನ್ಸ್ ಭಾವುಕರಾಗಿದ್ದಾರೆ.

    ರಾಜಮೌಳಿ ನಿರ್ದೇಶನದ `ಆರ್‌ಆರ್‌ಆರ್'(RRR Film)ಭಾರತದ ಮೂಲೆ ಮೂಲೆ ಕೋಟಿ ಕೋಟಿ ಕಲೆಕ್ಷನ್ ಮಾಡಿ, ಸಿನಿಮಾ ಗೆದ್ದಿತ್ತು. ಈ ಮೂಲಕ ರಾಮ್ ಚರಣ್ ಮತ್ತು ಜ್ಯೂ.ಎನ್‌ಟಿಆರ್‌ಗೆ(Jr.Ntr) ನಟನೆಗೆ ಫ್ಯಾನ್ಸ್ ಸೆಲ್ಯೂಟ್ ಹೊಡೆದಿದ್ದರು. ಇದೀ `ಆರ್‌ಆರ್‌ಆರ್’ ಸಿನಿಮಾ ಜಪಾನ್ ಅಂಗಳಕ್ಕೂ ಲಗ್ಗೆ ಇಟ್ಟಿದೆ. ಜಪಾನ್ ಅಂಗಳದಲ್ಲೂ ಭರ್ಜರಿ ಪ್ರದರ್ಶನ ಕಾಣುತ್ತಿದೆ.

    ಈ ಚಿತ್ರದ ಪ್ರಚಾರ ಕಾರ್ಯದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದಾರೆ. ಸಿನಿಮಾಗಾಗಿ ಇಡೀ ತಂಡ ಜಪಾನ್‌ನಲ್ಲಿ ಬೀಡು ಬಿಟ್ಟಿದ್ದಾರೆ. ಇದೀಗ ಜ್ಯೂ.ಎನ್‌ಟಿಆರ್ ಭೇಟಿ ಮಾಡಿ ಅಭಿಮಾನಿಗಳು ಕಣ್ಣೀರಿಟ್ಟಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

     

    View this post on Instagram

     

    A post shared by Viral Bhayani (@viralbhayani)


    ಜಪಾನ್‌ನಲ್ಲೂ ರಾಜಮೌಳಿ ಸಿನಿಮಾಗೆ ಒಳ್ಳೆಯ ಮೈಲೇಜ್ ಸಿಕ್ಕಿದೆ. ಚಿತ್ರದ ಸ್ಟಾರ್‌ಗಳನ್ನ ಬರಮಾಡಿಕೊಂಡಿರು ಜಪಾನಿ ಪ್ರಜೆಗಳು ಸಿಕ್ಕಾಪಟಟೆ ಖುಷಿಯಾಗಿದ್ದಾರೆ. ಜ್ಯೂ.ಎನ್‌ಟಿಆರ್‌ನ ಭೇಟಿಯಾದ ಕೆಲವರು ಭಾವುಕರಾಗಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ‘ಬ್ರಹ್ಮಾಸ್ತ್ರ’ ಸಿನಿಮಾ ಪ್ರಚಾರ ಮಾಡಿ, ಗೆಲ್ಲಿಸೋಕೆ 10 ಕೋಟಿ ಹಣ ಪಡೆದ್ರಾ ನಿರ್ದೇಶಕ ರಾಜಮೌಳಿ?

    ‘ಬ್ರಹ್ಮಾಸ್ತ್ರ’ ಸಿನಿಮಾ ಪ್ರಚಾರ ಮಾಡಿ, ಗೆಲ್ಲಿಸೋಕೆ 10 ಕೋಟಿ ಹಣ ಪಡೆದ್ರಾ ನಿರ್ದೇಶಕ ರಾಜಮೌಳಿ?

    ಕ್ಷಿಣದ ಖ್ಯಾತ ನಿರ್ದೇಶಕ, ಹಿಟ್ ಚಿತ್ರಗಳನ್ನು ಚಿತ್ರೋದ್ಯಮಕ್ಕೆ ನೀಡಿರುವ ರಾಜಮೌಳಿ ಕುರಿತು ಗುರುತರ ಆಪಾದನೆಯೊಂದು ಕೇಳಿ ಬರುತ್ತಿದೆ. ಇತ್ತೀಚೆಗಷ್ಟೇ ಬಿಡುಗಡೆ ಆಗಿರುವ ಹಿಂದಿಯ ಬ್ರಹ್ಮಾಸ್ತ್ರ (Brahmastra) ಸಿನಿಮಾವನ್ನು ಪ್ರಚಾರ ಮಾಡಲು ಮತ್ತು ಗೆಲ್ಲಿಸಲು ಬರೋಬ್ಬರಿ ಹತ್ತು ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗಾಗಿಯೇ ಅವರು ಬ್ರಹ್ಮಾಸ್ತ್ರ ಸಿನಿಮಾದ ಪ್ರಚಾರ ರಾಯಭಾರಿಯಂತೆ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿದೆ.

    ಅಂದುಕೊಂಡಂತೆ ಆಗಿದ್ದರೆ, ಹೈದರಾಬಾದ್ ನಲ್ಲಿ ಬ್ರಹ್ಮಾಸ್ತ್ರ ಸಿನಿಮಾದ ದೊಡ್ಡ ಇವೆಂಟ್ ನಡೆಯಬೇಕಿತ್ತು. ಅದರ ನೇತೃತ್ವವನ್ನು ರಾಜಮೌಳಿ (Rajamouli) ಮತ್ತು ಜ್ಯೂನಿಯರ್ ಎನ್.ಟಿ.ಆರ್ ವಹಿಸಿದ್ದರು. ಆದರೆ, ಭದ್ರತೆಯ ಕಾರಣದಿಂದಾಗಿ ಇವೆಂಟ್ ನಡೆಯಲಿಲ್ಲ. ಲಕ್ಷಾಂತರ ಜನರು ಇವೆಂಟ್ ಗೆ ಸೇರುವುದರಿಂದ ಭದ್ರತೆ ಕೊಡುವುದು ಕಷ್ಟ ಎಂದು ಸರಕಾರ ತಿಳಿಸಿದ್ದರಿಂದ ಅನಿವಾರ್ಯವಾಗಿ ಕಾರ್ಯಕ್ರಮವನ್ನು ರದ್ದು ಮಾಡಿತ್ತು ಚಿತ್ರತಂಡ. ಇದನ್ನೂ ಓದಿ:ಯಶ್ ಮುಂದಿನ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿನಾ?

    ಆದರೂ, ಬ್ರಹ್ಮಾಸ್ತ್ರ ಸಿನಿಮಾ ತಮ್ಮದೇ ಎನ್ನುವಂತೆ ಪ್ರಚಾರ ಮಾಡಿದರು ರಾಜಮೌಳಿ. ಸಿನಿಮಾ ಟೀಮ್ ಜೊತೆ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾದರು. ದಕ್ಷಿಣದ ಥಿಯೇಟರ್ ಗಳು ಸಿಗುವಂತೆ ನೋಡಿಕೊಂಡರು. ಕರ್ನಾಟಕವೂ ಸೇರಿದಂತೆ ಹಲವು ಕಡೆ ಹಿಂದಿಗಿಂತ ಬೇರೆ ಭಾಷೆಯ, ಅದರಲ್ಲೂ ತೆಲುಗು ಡಬ್ ಸಿನಿಮಾ ಹೆಚ್ಚು ಬಿಡುಗಡೆ ಆಗುವಂತೆ ನೋಡಿಕೊಂಡರು. ಇದಕ್ಕೆಲ್ಲ ರಾಜಮೌಳಿ ಹತ್ತು ಕೋಟಿ ಸಂಭಾವನೆ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಬಾಯ್ಕಾಟ್ ನಡುವೆಯೂ ಗೆದ್ದು ಬೀಗಿದ ‘ಬ್ರಹ್ಮಾಸ್ತ್ರ’: ಬಾಲಿವುಡ್ ಗೆ ಜೀವ ತಂದ ರಣಬೀರ್ ಕಪೂರ್

    ಬಾಯ್ಕಾಟ್ ನಡುವೆಯೂ ಗೆದ್ದು ಬೀಗಿದ ‘ಬ್ರಹ್ಮಾಸ್ತ್ರ’: ಬಾಲಿವುಡ್ ಗೆ ಜೀವ ತಂದ ರಣಬೀರ್ ಕಪೂರ್

    ಣಬೀರ್ ಕಪೂರ್ ಮೇಲಿನ ಕೋಪದಿಂದಾಗಿ ಹಿಂದೂಪರ ಸಂಘಟನೆಗಳು ಸೋಷಿಯಲ್ ಮೀಡಿಯಾದಲ್ಲಿ ‘ಬಾಯ್ಕಾಟ್ ಬ್ರಹ್ಮಾಸ್ತ್ರ’ (Boycott) ಹೋರಾಟ ಶುರು ಮಾಡಿದ್ದರು. ರಣಬೀರ್ ಕಪೂರ್ ಗೋಮಾಂಸ ತಿನ್ನುತ್ತೇನೆ ಎಂದು ಹೇಳುವ ಮೂಲಕ ಅಸಂಖ್ಯಾತ ಹಿಂದೂಗಳ ಭಾವನೆಯನ್ನು ಕೆರಳಿಸಿದ್ದಾರೆ. ಹಾಗಾಗಿ ಬ್ರಹ್ಮಾಸ್ತ್ರ (Brahmastra) ಸಿನಿಮಾ ನೋಡಬೇಡಿ ಎಂದು ಫೇಸ್ ಬುಕ್ ನಲ್ಲಿ ಟ್ರೆಂಡಿಂಗ್ ಮಾಡಿದ್ದರು. ಅಲ್ಲದೇ, ರಣಬೀರ್ ಕಪೂರ್ ಅವರನ್ನು ದೇವಸ್ಥಾನದ ಒಳಗೂ ಬಿಟ್ಟುಕೊಳ್ಳಲಿಲ್ಲ. ಬ್ರಹ್ಮಾಸ್ತ್ರ ನೋಡದಿರುವಂತೆ ಏನೇ ತಡೆದರೂ, ಕೊನೆಗೂ ಸಿನಿಮಾ ಗೆದ್ದಿದೆ.

    ಬ್ರಹ್ಮಾಸ್ತ್ರದ ಮೊದಲ ದಿನದ ಕಲೆಕ್ಷನ್ ಬರೋಬ್ಬರಿ 75 ಕೋಟಿ ಎಂದು ಹೇಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಏನೇ ನೆಗೆಟಿವ್ ಪ್ರಚಾರ ಮಾಡಿದರೂ, ಸಿನಿಮಾ ಚೆನ್ನಾಗಿದ್ದ ಕಾರಣಕ್ಕಾಗಿ ಜನರು ಮುಗಿಬಿದ್ದು ನೋಡುತ್ತಿದ್ದಾರೆ ಎಂದು ರಣಬೀರ್ ಕಪೂರ್ (Ranbir Kapoor) ಮತ್ತು ಆಲಿಯಾ ಭಟ್ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಶನಿವಾರ ಮತ್ತು ಭಾನುವಾರ ಹಣದ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ ಎಂದು ಅಂದಾಜು ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಬಾಲಿವುಡ್ (Bollywood) ಸಿನಿಮಾವೊಂದು ಈ ಪ್ರಮಾಣದಲ್ಲಿ ದುಡ್ಡು ಮಾಡದೇ ಇರುವ ಕಾರಣಕ್ಕಾಗಿ ಬ್ರಹ್ಮಾಸ್ತ್ರ ಒಂದು ರೀತಿಯಲ್ಲಿ ಬಾಲಿವುಡ್ ಗೆ ಟಾನಿಕ್ ಅಂತಾಗಿದೆ. ಇದನ್ನೂ ಓದಿ:ಬಿಕಿನಿಯಲ್ಲಿ `ಲೈಗರ್’ ಬ್ಯೂಟಿ ಅನನ್ಯಾ ಪಾಂಡೆ ಮಿಂಚಿಂಗ್

    ಆಲಿಯಾ ಭಟ್ (Alia Bhatt) ಮತ್ತು ರಣಬೀರ್ ಕಪೂರ್ ಕಾಂಬಿನೇಷನ್‍ನ ಈ ಸಿನಿಮಾ ಹಲವು ಭಾಷೆಗಳಲ್ಲಿ ಬಿಡುಗಡೆ ಆಗಿದೆ. ದಕ್ಷಿಣದಲ್ಲಿ ಸ್ವತಃ ರಾಜಮೌಳಿ (Rajamouli) ಮತ್ತು ಜ್ಯೂನಿಯರ್ ಎನ್‍.ಟಿ.ಆರ್ ಮುಂದೆ ನಿಂತುಕೊಂಡು ಸಿನಿಮಾ ರಿಲೀಸ್ ಮಾಡಿಸಿದ್ದಾರೆ. ಈ ಚಿತ್ರಕ್ಕಾಗಿ ದೊಡ್ಡ ಪ್ರಮಾಣದ ಇವೆಂಟ್ ಕೂಡ ಹೈದರಾಬಾದ್‍ನಲ್ಲಿ ನಡೆಯೋದಿತ್ತು. ಪೊಲೀಸರು ಭದ್ರತೆ ನೀಡಲು ನಿರಾಕರಿಸಿದ ಕಾರಣದಿಂದಾಗಿ ಇವೆಂಟ್ ನಡೆಯಲಿಲ್ಲ. ಆದರೂ, ಸಿನಿಮಾ ಚೆನ್ನಾಗಿಯೇ ಓಪನಿಂಗ್ ಪಡೆದುಕೊಂಡಿದೆ. ಎರಡೇ ದಿನದಲ್ಲಿ ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರಲಿದೆ ಎಂದು ಅಂದಾಜಿಸಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]

  • ರಾಜಮೌಳಿ ಶಿಷ್ಯನಿಂದ ಬಂಕಿಮ ಚಂದ್ರ ಚಟರ್ಜಿ ಅವರ ‘ಆನಂದಮಠ’ ಕೃತಿ ಆಧರಿಸಿದ ಸಿನಿಮಾ

    ರಾಜಮೌಳಿ ಶಿಷ್ಯನಿಂದ ಬಂಕಿಮ ಚಂದ್ರ ಚಟರ್ಜಿ ಅವರ ‘ಆನಂದಮಠ’ ಕೃತಿ ಆಧರಿಸಿದ ಸಿನಿಮಾ

    ‘ಬಾಹುಬಲಿ’ ಚಿತ್ರಗಳ ನಂತರ ಪ್ಯಾನ್ ಇಂಡಿಯಾ ನಿರ್ದೇಶಕ ಎಂದೇ ಖ್ಯಾತರಾಗಿರುವ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಈಗ’ ಮತ್ತು ‘ಬಾಹುಬಲಿ’ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಅಶ್ವಿನ್ ಗಂಗರಾಜು ಇದೀಗ ‘1770’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 75ನೇ ಸ್ವಾತಂತ್ರ್ಯೋತ್ಸದ ಹಿನ್ನೆಲೆಯಲ್ಲಿ ಈ ಚಿತ್ರವನ್ನು ಅಧಿಕೃತವಾಗೊಗಿ ಘೋಷಿಸಲಾಗಿದೆ. ಬಂಕಿಮ ಚಂದ್ರ ಚಟರ್ಜಿ ಅವರ ‘ಆನಂದಮಠ’ ಕಾದಂಬರಿಯನ್ನು ಆಧರಿಸಿದ ಈ ಬಹುಭಾಷಾ ಚಿತ್ರವನ್ನು ಎಸ್ಎಸ್1 ಎಂಟರ್ಟೈನ್ಮೆಂಟ್ ಮತ್ತು ಪಿಕೆ ಎಂಟರ್ಟೈನ್ಮೆಂಟ್ ಸಂಸ್ಥೆಗಳಡಿ ಶೈಲೇಂದ್ರ ಕುಮಾರ್, ಸುಜಯ್ ಕುಟ್ಟಿ, ಕೃಷ್ಣಕುಮಾರ್ ಬಿ ಮತ್ತು ಸೂರಜ್ ಶರ್ಮ ನಿರ್ಮಿಸುತ್ತಿದ್ದಾರೆ. ಇನ್ನು, ಖ್ಯಾತ ಲೇಖಕ ಮತ್ತು ಚಿತ್ರನಿರ್ದೇಶಕ ರಾಮ್ ಕಮಲ್ ಮುಖರ್ಜಿ ಈ ಚಿತ್ರದ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದಾರೆ. ವಂದೇ ಮಾತರಂಗೆ 150 ವರ್ಷವಾದ ಹಿನ್ನೆಲೆಯಲ್ಲಿ ಇತ್ತೀಚೆಗೆ ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ.

    ಈ ಹಿಂದೆ ‘ಆಕಾಶವಾಣಿ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ಅಶ್ವಿನ್ ಗಂಗರಾಜು ಅವರಿಗೆ ಇದು ನಿರ್ದೇಶಕರಾಗಿ ಎರಡನೆಯ ಚಿತ್ರ. ಈ ಕುರಿತು ಮಾತನಾಡುವ ಅವರು, ‘ಇಂಥದ್ದೊಂದು ಅದ್ಭುತ ದೃಶ್ಯಕಾವ್ಯವನ್ನು ತೆರೆಗೆ ತರುವುದು ದೊಡ್ಡ ಸವಾಲು. ಆದರೆ, ರಾಜಮೌಳಿ  ಅವರ ತಂದೆ ವಿ. ವಿಜಯೇಂದ್ರ ಪ್ರಸಾದ್ ಅವರು ಕಥೆ, ಚಿತ್ರಕಥೆ ರಚಿಸುತ್ತಿರುವುದರಿಂದ, ಚಿತ್ರ ಅದ್ಭುತವಾಗಿ ಮೂಡಿಬರುತ್ತದೆ ಎಂಬ ವಿಶ್ವಾಸವಿದೆ. ಒಬ್ಬ ನಿರ್ದೇಶಕನಾಗಿ ಬೇರೆ ಕಾಲಘಟ್ಟದ, ಎಮೋಷನ್ಗಳು ಹೆಚ್ಚಿರುವಂತಹ ಮತ್ತು ಆಕ್ಷನ್ ದೃಶ್ಯಗಳಿಗೆ ಹೆಚ್ಚು ಮಹತ್ವ ಇರುವಂತಹ ಚಿತ್ರಗಳನ್ನು ನಿರ್ದೇಶಿಸಬೇಕು ಎನ್ನುವುದು ನನ್ನ ವೈಯಕ್ತಿಕ ಆಸೆ. ಅದಕ್ಕೆ ಅನುಗುಣವಾಗಿ, ಈ ಕಥೆಯಲ್ಲಿ ಎಲ್ಲವೂ ಇದೆ. ಈ ಚಿತ್ರವನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರಬೇಕು ಎನ್ನುವುದು ನಿರ್ಮಾಪಕರ ಕನಸಾಗಿದ್ದು, ಆ ಕನಸನ್ನು ನನಸು ಮಾಡುವ ಜವಾಬ್ದಾರಿ ನನ್ನ ಮೇಲಿದೆ. ಅದನ್ನು ಪರಿಪೂರ್ಣವಾಗಿ ನಿಭಾಯಿಸುತ್ತೇನೆ ಎಂಬ ನಂಬಿಕೆ ನನಗಿದೆ’ ಎನ್ನುತ್ತಾರೆ ಆಶ್ವಿನ್. ಈಗಾಗಲೇ ಅವರು ತಮ್ಮ ತಂಡದೊಂದಿಗೆ ಈ ಚಿತ್ರದ ಕುರಿತು ಸಾಕಷ್ಟು ರೀಸರ್ಚ್ ಮಾಡಿ, ಚಿತ್ರೀಕರಣಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ:ಬಾಯ್ಕಾಟ್ ಟ್ರೆಂಡ್ ಬೆಳೆಯದಂತೆ ಹತ್ತಿಕ್ಕಬೇಕು : ನಟ ಅರ್ಜುನ್ ಕಪೂರ್

    ಬಂಕಿಮ್ ಚಂದ್ರ ಅವರ ‘ಆನಂದಮಠ’ ಕಾದಂಬರಿಯಲ್ಲಿ ಮೊದಲ ಬಾರಿಗೆ ವಂದೇ ಮಾತರಂ ಕವನವು ಪ್ರಕಟವಾಗಿತ್ತು. ಈ ಕವನವು ಬ್ರಿಟಿಷ್ ಸಾಮ್ರಾಜ್ಯವನ್ನು ಅಕ್ಷರಶಃ ಅಲ್ಲಾಡಿಸಿತ್ತು. ವಂದೇ ಮಾತರಂ ಎನ್ನುವುದು ಮಹರ್ಷಿ ಬಂಕಿಮ ಚಂದ್ರರು ದೇಶವನ್ನು ಒಗ್ಗೂಡಿಸಲು ಉಚ್ಛರಿಸಿದ ಒಂದು ಮಂತ್ರ ಎನ್ನುತ್ತಾರೆ ಚಿತ್ರಕ್ಕೆ ಕಥೆ ಮತ್ತು ಚಿತ್ರಕಥೆ ಬರೆದಿರುವ ವಿಜಯೇಂದ್ರ ಪ್ರಸಾದ್. ‘ಈ ದೇಶವು ಬ್ರಿಟಿಷರಿಂದ ಅನುಭವಿಸುತ್ತಿದ್ದ ದಾಸ್ಯ ಮತ್ತು ಅನ್ಯಾಯದ ವಿರುದ್ಧ ಭಾರತೀಯರನ್ನು ಒಗ್ಗೂಡಿಸಲು ಬಳಿಸದ ಒಂದು ಮಂತ್ರವಾಗಿತ್ತು. ಈ ಚಿತ್ರದಲ್ಲಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ ಅದೆಷ್ಟೋ ಅಜ್ನಾತ ವೀರ ಯೋಧರ ಕಥೆಯನ್ನು ಹೇಳುವುದಕ್ಕೆ ಹೊರಟಿದ್ದೇವೆ’ ಎನ್ನುತ್ತಾರೆ.

    ದೊಡ್ಡ ಬಜೆಟ್ನ ಮತ್ತು ಗಾತ್ರದ ಚಿತ್ರಗಳನ್ನು ಮಾಡುವುದಕ್ಕೆ ಇದು ಒಳ್ಳೆಯ ಸಮಯ ಎನ್ನುತ್ತಾರೆ ಎಸ್ಎಸ್1 ಎಂಟರ್ಟೈನ್ಮೆಂಟ್ನ ಶೈಲೇಂದ್ರ ಕುಮಾರ್. ‘ಮೂಲತಃ ಜಾನ್ಸಿಯವರಾದ ನಾವು ವಂದೇ ಮಾತರಂ ಹಾಡುತ್ತಾ, ಕೇಳುತ್ತಾ ಬೆಳೆದವರು ನಾವು. ಆದರೆ, ವಿಜಯೇಂದ್ರ ಪ್ರಸಾದ್ ಅವರು ಹೇಳಿದ ಕಥೆಯನ್ನು ಕೇಳಿ ನಿಜಕ್ಕೂ ದಂಗಾದೆವು. ಇಂಥದ್ದೊಂದು ಅಪರೂಪದ ಕಥೆಯನ್ನು ತೆರೆಯ ಮೇಲೆ ತರುವುದಕ್ಕೆ ಕೈ ಜೋಡಿಸಿರುವ ಸುಜಯ್ ಕುಟ್ಟಿ ಮತ್ತು ಕೃಷ್ಣಕುಮಾರ್ ಅವರಿಗೆ ನಾವು ಆಭಾರಿ. ಇದೊಂದು ಬರೀ ಚಿತ್ರವಲ್ಲ, ಬೆಳ್ಳಿಪರದೆಯ ಮೇಲೆ ಜನರನ್ನು ದೊಡ್ಡ ಮಟ್ಟದಲ್ಲಿ ಮನರಂಜಿಸಬೇಕು ಎಂಬ ದೊಡ್ಡ ಕನಸು’ ಎನ್ನುತ್ತಾರೆ ಶೈಲೇಂದ್ರ ಕುಮಾರ್.

    ಸುಜಯ್ ಕುಟ್ಟಿ ಈ ಹಿಂದೆ ಜೀ ಸ್ಟುಡಿಯೋಸ್ ಸಂಸ್ಥೆಯಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದವರು. ‘ಮಣಿಕರ್ಣಿಕಾ – ದಿ ಕ್ವೀನ್ ಆಫ್ ಜಾನ್ಸಿ’ ಮುಂತಾದ ಚಿತ್ರದ ನಿರ್ಮಾಣದಲ್ಲಿ ಗುರುತಿಸಿಕೊಂಡಿದ್ದವರು. ತಮ್ಮ ಹಾಗೂ ವಿಜಯೇಂದ್ರ ಪ್ರಸಾದ್ ಅವರ ಸ್ನೇಹ ಚಿತ್ರಗಳನ್ನು ಮೀರಿದ್ದು ಎನ್ನುವ ಅವರು, ‘ವಿಜಯೇಂದ್ರ ಪ್ರಸಾದ್ ಅವರು ನಮಗೆಲ್ಲರಿಗೂ ಸ್ಫೂರ್ತಿ. ನಾವು ‘1770’ ಚಿತ್ರವನ್ನು ನಿರ್ಮಿಸಿದರೆ, ಅದನ್ನು ವಿಜಯೇಂದ್ರ ಪ್ರಸಾದ್ ಅವರೇ ಬರೆಯಬೇಕು ಎಂದು ಮೊದಲೇ ಹೇಳಿದ್ದೆ. ಇಲ್ಲವಾದರೆ ಈ ಚಿತ್ರ ಮಾಡುವುದಿಲ್ಲ ಎಂದಿದ್ದೆ. ಅದಕ್ಕೆ ಸರಿಯಾಗಿ, ಅವರು ಒಪ್ಪಿ ನಮ್ಮ ಚಿತ್ರದ ಕಥೆ-ಚಿತ್ರಕಥೆಯನ್ನು ಪ್ರೀತಿಯಿಂದ ಬರೆದುಕೊಟ್ಟಿದ್ದಾರೆ’ ಎನ್ನುತ್ತಾರೆ ಸುಜಯ್ ಕುಟ್ಟಿ. ‘1770’ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದೆ. ದಸರಾ ಹೊತ್ತಿಗೆ ಚಿತ್ರದ ಕಲಾವಿದರು ಮತ್ತು ತಂತ್ರಜ್ಱರು ಆಯ್ಕೆಯಾಗಲಿದ್ದು, ದೀಪಾವಳಿ ವೇಳೆಗೆ ಅಧಿಕೃತ ಘೋಷಣೆಯಾಗಲಿದೆ.

    Live Tv
    [brid partner=56869869 player=32851 video=960834 autoplay=true]

  • ತೆಲುಗಿನಲ್ಲಿ ಶೂಟಿಂಗ್ ಬಂದ್: ಸಿನಿಮಾ ರಂಗದ ಬಿಕ್ಕಟ್ಟಿಗೆ ನಿರ್ದೇಶಕ ರಾಜಮೌಳಿ ಕಾರಣ?

    ತೆಲುಗಿನಲ್ಲಿ ಶೂಟಿಂಗ್ ಬಂದ್: ಸಿನಿಮಾ ರಂಗದ ಬಿಕ್ಕಟ್ಟಿಗೆ ನಿರ್ದೇಶಕ ರಾಜಮೌಳಿ ಕಾರಣ?

    ಗಸ್ಟ್ 1 ರಿಂದ ತೆಲುಗು ಸಿನಿಮಾ ರಂಗ ಶೂಟಿಂಗ್ ನಿಲ್ಲಿಸಿದೆ. ಚಿತ್ರರಂಗಕ್ಕೆ ಸಂಬಂಧಿಸಿದ ಅನೇಕ ಚಟುವಟಿಕೆಗಳನ್ನು ಅದು ಸ್ಥಗಿತಗೊಳಿಸಿದೆ. ಸಿನಿಮಾಗಳ ಬಜೆಟ್, ಹೆಚ್ಚಿದ ಚಿತ್ರೀಕರಣದ  ವೆಚ್ಚ ಮತ್ತು ಸ್ಟಾರ್ ನಟರ ಸಂಭಾವನೆ ಏರಿಕೆಯಾದ ಹಿನ್ನೆಲೆಯಲ್ಲಿ ನಿರ್ಮಾಪಕರಿಗೆ ಹೊರೆ ಆಗುತ್ತಿದ್ದು, ಈ ಕುರಿತು ಸಕಾರಾತ್ಮಕವಾಗಿ ಚರ್ಚೆ ಆಗುವತನಕ ಚಿತ್ರೀಕರಣ ನಿಲ್ಲಿಸುವುದಾಗಿ ಅಲ್ಲಿನ ನಿರ್ಮಾಪಕರು ಹೇಳಿಕೊಂಡಿದ್ದರು. ಅದರಂತೆ ಆಗಸ್ಟ್ 1 ರಿಂದಲೇ ನಿಲ್ಲಿಸಿದ್ದಾರೆ.

    ಈ ನಡೆಯ ಕುರಿತಂತೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, ತಮ್ಮದೇ ಆದ ರೀತಿಯಲ್ಲಿ ವಿಶ್ಲೇಷಣೆ ಮಾಡಿದ್ದು ತೆಲುಗು ಸಿನಿಮಾ ರಂಗದ ಈ ಬಿಕ್ಕಟ್ಟಿಗೆ ನಿರ್ದೇಶಕ ರಾಜಮೌಳಿ ಕಾರಣ ಎಂದಿದ್ದಾರೆ. ರಾಜಮೌಳಿ ಅವರು ಸಿನಿಮಾದಿಂದ ಸಿನಿಮಾಗೆ ಬಜೆಟ್, ಸಂಭಾವನೆ, ಅತ್ಯಧಿಕ ಖರ್ಚು ಅನ್ನು ಏರಿಸುತ್ತಲೇ ಹೋಗಿದ್ದಾರೆ. ಅದೇ ಹಾದಿಯನ್ನೇ ಕೆಲವರು ತುಳಿಯುತ್ತಿದ್ದಾರೆ. ಹೀಗಾಗಿ ಇಂಥದ್ದೊಂದು ಬಿಕ್ಕಟ್ಟು ಸೃಷ್ಟಿಯಾಗಿದೆ ಎನ್ನುತ್ತಾರೆ ರಾಮ್ ಗೋಪಾಲ್ ವರ್ಮಾ. ಇದನ್ನೂ ಓದಿ:ಶ್ರದ್ಧಾ ಹೆಸರಿನ ಮುಂದಿರುವ ಈ ರಮಾ ಯಾರು?

    ಈ ಬಿಕ್ಕಟ್ಟಿನ ಕುರಿತು ಕನ್ನಡದ ಯುವ ಸಿನಿಮಾ ನಿರ್ದೇಶಕ ವೀರು ಮಲ್ಲಣ್ಣ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದು ಹೀಗೆ, ಅತಿ ಹೆಚ್ಚು ಕಲೆಕ್ಷನ್ ಮಾಡಿದ ದಾಖಲೆಗಳ ಚಿತ್ರಗಳನ್ನು ನೀಡಿ, ಭಾರತೀಯ ಚಿತ್ರರಂಗವನ್ನೇ ಆಳುವಷ್ಟು ಬಲಿಷ್ಠವಾಗಿದೆ ಎನ್ನಲಾದ ತೆಲುಗು ಚಿತ್ರರಂಗ ಎರಡು ದಿನಗಳಿಂದ ಶೂಟಿಂಗ್ ನಿಲ್ಲಿಸಿ ಬಂದ್ ಆಗಿದೆ. ದೊಡ್ಡ ಲಾಭ ಮಾಡಿದ ನಾಲ್ಕೈದು ಸಿನಿಮಾಗಳು ಕಣ್ಣಿಗೆ ಕಾಣಿಸಬಹುದು, ಸಾಲು ಸಾಲಾಗಿ ಸೋತ ಸಿನಿಮಾಗಳ ನಷ್ಟ ಆ ಚಿತ್ರರಂಗಕ್ಕೆ ನುಂಗಲಾರದ ತುತ್ತಾಗಿದೆ. ದೊಡ್ಡ ನಟರ ಸಿನಿಮಾಗಳೇ ಅತಿ ದೊಡ್ಡ ನಷ್ಟಕ್ಕೂ ಕಾರಣವಾಗಿದೆ. ಥಿಯೇಟರಿನಲ್ಲಿ ಟಿಕೇಟ್ ದರ ಎಷ್ಟೇ ಏರಿಸಿದರೂ ಲಾಭ ಕಂಡುಕೊಳ್ಳಲಾಗದಷ್ಟು ಸಿನಿಮಾ ಬಡ್ಜೆಟ್ಟುಗಳು ಕೈ ಮೀರುತ್ತಿರುವುದೇ ಕಾರಣ ಅನ್ನುವುದು ಹಿರಿಯ ಅನುಭವಿ ನಿರ್ಮಾಪಕರು ಮತ್ತು ಹಿರಿಯ ನಟರ ಸ್ಪಷ್ಟನೆ.

    ಓಟಿಟಿಯನ್ನು ದೂಷಿಸುವುದು ಪಲಾಯನ ವಾದವಷ್ಟೇ. ದುಬಾರಿ ಟಿಕೇಟುಗಳು, ಕಂಟೆಂಟ್ ಕೊರತೆ, ಸ್ಟಾರ್ ನಟರು ಹಾಗೂ ದೊಡ್ಡ ಸಿನಿಮಾಗಳ ನಿರ್ಮಾಪಕ ಹಾಗೂ ನಿರ್ದೇಶಕರ greed, ಬೇಜವಾಬ್ದಾರಿತನ ಹಾಗೂ ಪ್ರತಿಷ್ಠೆಯ ಪೈಪೋಟಿಯಿಂದಾಗಿ ಮಾರುಕಟ್ಟೆ ಇರುವುದಕ್ಕಿಂತ ಹೆಚ್ಚು ಖರ್ಚಿನಲ್ಲಿ ಸಿನಿಮಾ ಮಾಡುತ್ತಿರುವುದರ ಕುರಿತು ಮಾತನಾಡುತ್ತಿದ್ದಾರೆ. ಹಿರಿಯ ನಟ NTR, ಅಕ್ಕಿನೇನಿ ನಾಗೇಶ್ವರ ರಾವ್, ಶೋಬನ್ ಬಾಬು, ಕೃಷ್ಣಂ ರಾಜು, ಚಿರಂಜೀವಿ, ಬಾಲಕೃಷ್ಣರ ಕಾಲದಲ್ಲಿ ನಟರು ಪ್ರತಿ ದಿನ 8-10 ಗಂಟೆಗಳ ಕಾಲ ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುತ್ತಿದ್ದರು. ಅವರ ಸಂಭಾವನೆಯೂ ಸಿನಿಮಾದಿಂದ ಸಿನಿಮಾಗೆ ಏರುತ್ತಿರಲಿಲ್ಲ. ಆದರೆ ಸಿನಿಮಾದಿಂದ ಸಿನಿಮಾಗೆ ಏರುತ್ತಿರುವ ಇಂದಿನ ನಟರ ಸಂಭಾವನೆಯ ಜೊತೆಗೆ ‘ಅವರ ಇತರೆ ಖರ್ಚುಗಳನ್ನೂ’ ನಿರ್ಮಾಪಕನೇ ಭರಿಸಬೇಕಾಗಿರುವ ಕಾರಣದಿಂದ ಸಿನಿಮಾದ ಬಡ್ಜೆಟ್ ಹೆಚ್ಚಾಗುತ್ತಿದೆ. ಇಂದಿನ ನಟರು 4-5 ಗಂಟೆ ಚಿತ್ರೀಕರಣದಲ್ಲಿ ಭಾಗಿಯಾಗುತ್ತಾರೆ. ಚಿತ್ರೀಕರಣಕ್ಕೆ ಹೆಚ್ಚೆಚ್ಚು ದಿನಗಳನ್ನು ತೆಗೆದುಕೊಳ್ಳಲಾಗುತ್ತಿದೆ, ಹಾಗಾಗಿ ಅನವಶ್ಯಕ ಖರ್ಚುಗಳೂ ಹೆಚ್ಚಾಗಿದೆ. ಇಂದಿನ ನಿರ್ಮಾಪಕರೂ ಮಾರುಕಟ್ಟೆಯಲ್ಲಿ ಓಡುವ ನಟರಿಗೆ ಅಗತ್ಯಕ್ಕಿಂತ ಹೆಚ್ಚೇ ಸಂಭಾವನೆ ಮತ್ತು ಸೌಕರ್ಯಗಳನ್ನು ಕೊಡುವ ಸಂಪ್ರದಾಯ ಪಾಲಿಸಿಕೊಂಡಿದ್ದಾರೆ.

    ಶಿಸ್ತಿಲ್ಲದೆ ಖರ್ಚು ಮಾಡಿ ಸಿನಿಮಾ ಬಡ್ಜೆಟ್ ಜಾಸ್ತಿ ಮಾಡಿ, ಅಬ್ಬರದ ಪ್ರಚಾರ ಮಾಡಿ, ಟಿಕೇಟ್ ದರ ಏರಿಸಿದರೆ “ಆ ಸ್ಟಾರ್ ನಟರ ವೀರಾಭಿಮಾನಿಗಳಷ್ಟೇ ಥಿಯೇಟರಿಗೆ ಬರುತ್ತಾರೆ. ಉಳಿದ ಪ್ರೇಕ್ಷಕರು ಸಿನಿಮಾದಿಂದ ವಿಮುಖರಾಗ್ತಾರೆ..” ಎನ್ನುವ ಹಿರಿಯ ನಿರ್ಮಾಪಕರು, ಈ ವರ್ಷದಲ್ಲಿಯೇ ಬಿಡುಗಡೆಯಾದ, ಕಡಿಮೆ ಬಡ್ಜೆಟ್ ನಲ್ಲಿ ಮಾಡಿದ, ಯಾವುದೇ ಅಬ್ಬರದ ಪ್ರಚಾರವಿಲ್ಲದೇ ಗೆದ್ದ ಉತ್ತಮ ಚಿತ್ರಗಳನ್ನು ಹೆಸರಿಸುತ್ತಾರೆ..‌ ಆ ಸಿನಿಮಾಗಳು ಗೆಲ್ಲಲು ಕಾರಣ ಟಿಕೇಟ್ ದರ ಕಡಿಮೆ ಇದ್ದು, ಕಂಟೆಂಟ್ ಕೂಡ ಪ್ರೇಕ್ಷಕರಿಗೆ ಇಷ್ಟವಾಗಿರುವ ಕಾರಣಕ್ಕೆ. ಪ್ರಾದೇಶಿಕತೆಗೆ ಒತ್ತು ಕೊಟ್ಟು ಸಿನಿಮಾ ಮಾಡಿದರೂ ಇಂದು ಎಲ್ಲ ಜನರಿಗೆ ಸಿನಿಮಾ ತಲುಪುತ್ತದೆ.  ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಹೆಸರಿನಲ್ಲಿ ನೂರಾರು ಕೋಟಿಗಳನ್ನು ಸುರಿಯುವುದು ತಪ್ಪು ಅಂತಲೇ ಅಲ್ಲಿನ ಕೆಲ ಹಿರಿಯ ನಿರ್ಮಾಪಕರ ಅಭಿಪ್ರಾಯವಾಗಿದೆ.

    Live Tv
    [brid partner=56869869 player=32851 video=960834 autoplay=true]

  • ಆಸ್ಕರ್ ರೇಸ್ ನಲ್ಲಿ ‘ಆರ್.ಆರ್.ಆರ್’ ಹೆಸರು, ‘ಕೆಜಿಎಫ್ 2’ ಯಾಕಿಲ್ಲ ಎಂದ ಅಭಿಮಾನಿಗಳು

    ಆಸ್ಕರ್ ರೇಸ್ ನಲ್ಲಿ ‘ಆರ್.ಆರ್.ಆರ್’ ಹೆಸರು, ‘ಕೆಜಿಎಫ್ 2’ ಯಾಕಿಲ್ಲ ಎಂದ ಅಭಿಮಾನಿಗಳು

    ಸ್ಕರ್ ಪ್ರಶಸ್ತಿಗಳ ಕುರಿತು ಇದೀಗ ಮತ್ತೊಂದು ಸುತ್ತಿನ ಚರ್ಚೆ ಶುರುವಾಗಿದೆ. ಈ ಬಾರಿ ಆಸ್ಕರ್ ಪ್ರಶಸ್ತಿ ರೇಸ್ ನಲ್ಲಿ ಆರ್.ಆರ್.ಆರ್ ಹೆಸರು ಕೇಳಿ ಬರುತ್ತಿದ್ದು, ಈ ಬಾರಿ ಈ ಸಿನಿಮಾ ಭಾರೀ ಪೈಪೋಟಿ ಮಾಡಲಿದೆ ಎಂದು ಅಂದಾಜಿಸಲಾಗುತ್ತಿದೆ. ಈ ಸಿನಿಮಾಗಿಂತಲೂ ಹೆಚ್ಚು ಸದ್ದು ಮಾಡಿದ್ದ ಕನ್ನಡದ ಕೆಜಿಎಫ್ 2 ಸಿನಿಮಾ ಹೆಸರು ಯಾಕೆ ರೇಸ್ ನಲ್ಲಿ ಕೇಳಿ ಬರುತ್ತಿಲ್ಲ ಎಂಬ ಪ್ರಶ್ನೆ ಕನ್ನಡ ಅಭಿಮಾನಿಗಳದ್ದು.

    ದಕ್ಷಿಣದ ಸಿನಿಮಾಗಳು ಒಂದೇ ಎಂದು ನಂಬಿಸುತ್ತಾ ಬರುತ್ತಿದ್ದರೂ, ಕನ್ನಡ ಮೂಲದ ಸಿನಿಮಾಗಳಿಗೆ ಅದಕ್ಕೆ ಸಿಗಬೇಕಾದ ಮನ್ನಣೆ ದೊರೆಯದೇ ಇರುವುದಕ್ಕೂ ಕೆಲವರು ಆಕ್ಷೇಪ ವ್ಯಕ್ತ ಪಡಿಸುತ್ತಿದ್ದಾರೆ. ಆರ್.ಆರ್.ಆರ್ ಸಿನಿಮಾಗಿಂತಲೂ ಕೆಜಿಎ‍ಫ್ 2 ಸಿನಿಮಾ ಹೆಚ್ಚು ಕಡೆ ರಿಲೀಸ್ ಆಗಿದೆ. ಬಾಕ್ಸ್ ಆಫೀಸಿನಲ್ಲು ಸದ್ದು ಮಾಡಿದೆ, ಇನ್ನೂ ಹಲವು ಕಡೆ ಪ್ರದರ್ಶನ ಕಾಣುತ್ತಿದೆ. ಕನ್ನಡದ ಸಿನಿಮಾವೊಂದು ಈ ಮಟ್ಟಕ್ಕೆ ಹೆಸರು ಮಾಡಿದ್ದರೂ ಆಸ್ಕರ್ ರೇಸ್ ನಲ್ಲಿ ಈ ಸಿನಿಮಾ ಇದೆ ಎಂದು ಎಲ್ಲೂ ಬಿಂಬಿತವಾಗಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ:ಅವಳಿ ಮಕ್ಕಳಿಗೆ ತಾಯಿಯಾಗಲಿದ್ದಾರಾ ಆಲಿಯಾ: ರಣ್‌ಬೀರ್‌ ಕೊಟ್ರು ಬ್ರೇಕಿಂಗ್‌ ನ್ಯೂಸ್

    ಕೆಜಿಎಫ್ 2 ಸಿನಿಮಾ ಬಾಲಿವುಡ್ ಮಂದಿಯನ್ನು ನಿದ್ದೆಗೆಡಿಸಿದೆ. ಬಾಕ್ಸ್ ಆಫೀಸಿನಲ್ಲಿ ಅತೀ ಹೆಚ್ಚು ಹಣಗಳಿಸಿದ್ದು ಹಿಂದಿಯಲ್ಲಿ. ಹಾಗಾಗಿ ಬಾಲಿವುಡ್ ನವರು ಆರ್.ಆರ್.ಆರ್ ಗೆ ಮಣೆ ಹಾಕಿ, ಕೆಜಿಎಫ್ 2 ಸಿನಿಮಾವನ್ನು ಹಿಂದಿಕ್ಕಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನುವ ಆರೋಪ ಕೂಡ ಇದೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಂತೂ ಭಾರೀ ಚರ್ಚೆ ಆಗುತ್ತಿದೆ. ಕನ್ನಡದ ಸಿನಿಮಾಗೆ ಮನ್ನಣೆ ಸಿಗಲೇಬೇಕು ಎಂದು ಹಲವರು ಒತ್ತಾಯಿಸುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]