Tag: rajamouli

  • ಕನ್ನಡದ  ‘ಕಬ್ಜ’ ಸಿನಿಮಾಗೆ ಸಾಥ್ ನೀಡಲಿದ್ದಾರೆ ರಾಜಮೌಳಿ

    ಕನ್ನಡದ ‘ಕಬ್ಜ’ ಸಿನಿಮಾಗೆ ಸಾಥ್ ನೀಡಲಿದ್ದಾರೆ ರಾಜಮೌಳಿ

    ಆರ್.ಚಂದ್ರು (R. Chandru) ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಕಬ್ಜ’ (Kabzaa) ಸಿನಿಮಾದ ಲಿರಿಕಲ್ ಸಾಂಗ್ ಅನ್ನು ಫೆ.4ರಂದು ಹೈದರಾಬಾದ್ ನಲ್ಲಿ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ. ಒಂಬತ್ತಕ್ಕೂ ಹೆಚ್ಚು ಭಾಷೆಗಳಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದ್ದು, ದೇಶದ ನಾನಾ ಕಡೆ ಸಿನಿಮಾದ ಕಾರ್ಯಕ್ರಮವನ್ನು ಮಾಡಲು ನಿರ್ದೇಶಕರು ಹೊರಟಿದ್ದಾರೆ. ಅದರ ಮೊದಲ ಭಾಗವಾಗಿ ಹೈದರಾಬಾದ್ ನಲ್ಲಿ ಲಿರಿಕಲ್ ಸಾಂಗ್ ಬಿಡುಗಡೆ ಆಗುತ್ತಿದೆ. ಈ ಕಾರ್ಯಕ್ರಮಕ್ಕೆ ತೆಲುಗು ಸಿನಿಮಾ ರಂಗದ ದಿಗ್ಗಜರೇ ಬರುವ ಸಾಧ್ಯತೆ ಇದೆ.

    ಬಲ್ಲ ಮೂಲಗಳ ಪ್ರಕಾರ ಭಾರತೀಯ ಸಿನಿಮಾ ರಂಗದ ಹೆಸರಾಂತ ನಿರ್ದೇಶಕ, ತೆಲುಗಿನ ರಾಜಮೌಳಿ (Rajamouli), ನಟ ಚಿರಂಜೀವಿ ಸೇರಿದಂತೆ ತೆಲುಗಿನ ಹೆಸರಾಂತ ಕಲಾವಿದರು ಮತ್ತು ತಂತ್ರಜ್ಞರು ಈ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ ಎನ್ನಲಾಗುತ್ತಿದೆ. ತೆಲುಗು ಚಿತ್ರೋದ್ಯಮದಲ್ಲಿ ಉಪೇಂದ್ರ ಮತ್ತು ಸುದೀಪ್ ಅವರಿಗೆ ಅಪಾರ ಅಭಿಮಾನಿ ಬಳಗ ಇರುವುದರಿಂದ ಮೊದಲ ಇವೆಂಟ್ ಅನ್ನು ಅಲ್ಲಿ ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: ಚಂದ್ರಮುಖಿ – 2 ಡ್ಯಾನ್ಸ್ ಪ್ರಾಕ್ಟಿಸ್ ಶುರು ಮಾಡಿದ ಕಂಗನಾ ರಣಾವತ್

    ಹೈದರಾಬಾದ್ ನಲ್ಲಿ ನಡೆಯುವ ಕಾರ್ಯಕ್ರಮದ ಕುರಿತು ಮಾತನಾಡಲು ನಿರ್ದೇಶಕ ಆರ್.ಚಂದ್ರು ಪತ್ರಿಕಾಗೋಷ್ಠಿಯನ್ನು ಕರೆದಿದ್ದರು. ಅಲ್ಲಿ ಹಲವು ವಿಚಾರಗಳನ್ನು ಹಂಚಿಕೊಂಡರು. ಈ ಸಿನಿಮಾ ಕೇವಲ ಭಾರತದಲ್ಲಿ ಮಾತ್ರವಲ್ಲ, ಜಗತ್ತಿನಾದ್ಯಂತ ಬೇರೆ ಬೇರೆ ದೇಶಗಳಲ್ಲೂ ಬಿಡುಗಡೆ ಆಗುತ್ತಿದೆ. ಅಲ್ಲದೇ, ಒಳ್ಳೆಯ ಹಣಕ್ಕೆ ರೈಟ್ಸ್ ಕೂಡ ಸೇಲ್ ಆಗಿದೆಯಂತೆ. ಟೀಸರ್ ಸೂಪರ್ ಹಿಟ್ ಆದ ಕಾರಣದಿಂದಾಗಿಯೇ ಕಬ್ಜ ಸಿನಿಮಾಗೆ ಬೇಡಿಕೆಯಂತೂ ಹೆಚ್ಚಾಗಿದೆ. ಕನ್ನಡದ ಮತ್ತೊಂದು ಸಿನಿಮಾ ಜಗತ್ತಿನಾದ್ಯಂತ ಸುದ್ದಿ ಆಗಿದ್ದು ಸಹಜವಾಗಿಯೇ ಸಂಭ್ರಮ ತಂದಿದೆ.

    ಸುದೀಪ್ (Sudeep), ಉಪೇಂದ್ರ(Upendra) ಮತ್ತು ಆರ್.ಚಂದ್ರು ಕಾಂಬಿನೇಷನ್ ನ ಮೊದಲ ಸಿನಿಮಾವಿದು. ಈಗಾಗಲೇ ಸಾಕಷ್ಟು ಹವಾ ಕ್ರಿಯೇಟ್ ಮಾಡಿದೆ.  ಈ ಸಿನಿಮಾವನ್ನು ಕೆಜಿಎಫ್ 2 ಚಿತ್ರಕ್ಕೆ ಹೋಲಿಸಲಾಗುತ್ತಿದೆ. ಕನ್ನಡದ ಮತ್ತೊಂದು ಸಿನಿಮಾ ಭಾರತೀಯ ಚಿತ್ರರಂಗವನ್ನು ಕಾಯುವಂತೆ ಮಾಡಿದ್ದು ಚಿತ್ರರಂಗದ ಹೆಗ್ಗಳಿಕೆ ಕೂಡ. ಹೆಸರಾಂತ ಕಲಾವಿದರೇ ಈ ಸಿನಿಮಾದಲ್ಲಿದ್ದು ಪುನೀತ್ ರಾಜ್ ಕುಮಾರ್ ಹುಟ್ಟು ಹಬ್ಬದಂದು ಸಿನಿಮಾವನ್ನು ರಿಲೀಸ್ ಮಾಡುತ್ತಿದ್ದಾರೆ ನಿರ್ದೇಶಕರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ದಸರಾ’ ಟೀಸರ್ ಬಿಡುಗಡೆ ಮಾಡಿದ ನಿರ್ದೇಶಕ ಎಸ್. ಎಸ್ ರಾಜಮೌಳಿ

    ‘ದಸರಾ’ ಟೀಸರ್ ಬಿಡುಗಡೆ ಮಾಡಿದ ನಿರ್ದೇಶಕ ಎಸ್. ಎಸ್ ರಾಜಮೌಳಿ

    ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ದಸರಾ’ ಮಾಸ್ ಟೀಸರ್ ಬಿಡುಗಡೆಯಾಗಿದೆ. ಭಾರತೀಯ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಎಸ್. ಎಸ್ ರಾಜಮೌಳಿ ತೆಲುಗು ಟೀಸರ್ ಬಿಡುಗಡೆ ಮಾಡಿದ್ದು, ಶಾಹಿದ್ ಕಪೂರ್, ರಕ್ಷಿತ್ ಶೆಟ್ಟಿ, ದುಲ್ಕರ್ ಸಲ್ಮಾನ್, ಧನುಷ್,  ಹಿಂದಿ, ಕನ್ನಡ, ಮಲಯಾಳಂ, ತಮಿಳು ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ದುಷ್ಟರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುವ ದಸರಾ ಹಬ್ಬವನ್ನು ಭಾರತದಾದ್ಯಂತ ಹೆಚ್ಚು ಸಂತೋಷ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಆಚರಣೆಗಳಲ್ಲಿ ರಾವಣನ ಪ್ರತಿಕೃತಿಗಳನ್ನು ಸುಡಲಾಗುತ್ತದೆ. ಅದರಂತೆ ‘ದಸರಾ’ ಚಿತ್ರವೂ ಕೆಟ್ಟದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ ಎಂಬುದಕ್ಕೆ ಟೀಸರ್ ತುಣುಕು ಸಾಕ್ಷಿಯಾಗಿದೆ.

    ಚಿತ್ರಕ್ಕಾಗಿ ನ್ಯಾಚುರಲ್ ಸ್ಟಾರ್ ನಾನಿ ಮೇಕೋವರ್, ರಗಡ್ ಲುಕ್ ಟೀಸರ್ ನಲ್ಲಿ ಗಮನ ಸೆಳೆಯುತ್ತಿದೆ. ಗೋದಾವರಿಖಾನಿ ಸುತ್ತಮುತ್ತಲಿನ ವೀರ್ಲಪಲ್ಲಿ ಗ್ರಾಮ ಹಾಗೂ ಸಿಂಗರೇಣಿ ಕಲ್ಲಿದ್ದಲಿನ ಪ್ರಪಂಚವನ್ನು ಟೀಸರ್ ಝಲಕ್ ನಲ್ಲಿ ಅನಾವರಣ ಮಾಡಲಾಗಿದ್ದು ಪ್ರೇಕ್ಷಕರಲ್ಲಿ ಟೀಸರ್ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿಯನ್ನು ಹುಟ್ಟು ಹಾಕಿದೆ. ಬಿಡುಗಡೆಯಾದ ಎಲ್ಲಾ ಭಾಷೆಗಳಲ್ಲೂ ಟೀಸರ್ ಗೆ ಅದ್ಭುತ ರೆಸ್ಪಾನ್ಸ್ ಸಿಗುತ್ತಿದೆ. ಟೀಸರ್ ಬಿಡುಗಡೆ ವೇಳೆ ಮಾತನಾಡಿದ ನಟ ನ್ಯಾಚುರಲ್ ಸ್ಟಾರ್ ನಾನಿ ಕಳೆದ ವರ್ಷ ತೆಲುಗಿನಲ್ಲಿ ಆರ್ ಆರ್  ಆರ್ ಕನ್ನಡದಲ್ಲಿ ಕೆಜಿಎಫ್ 2 , ಕಾಂತಾರ ಸಿನಿಮಾಗಳ ಸೂಪರ್ ಹಿಟ್ ಆಗಿವೆ ಈ ವರ್ಷ ದಸರಾ ಆ ಸಿನಿಮಾಗಳ ಲಿಸ್ಟ್ ಗೆ ಸೇರಲಿದೆ ಎಂದು  ಗರ್ವದಿಂದ ಹೇಳುತ್ತೇನೆ ಎಂದು ಭರವಸೆಯ ಮಾತುಗಳನ್ನಾಡಿದ್ರು.

    ಶ್ರೀಕಾಂತ್ ಒಡೆಲಾ ನಿರ್ದೇಶನದಲ್ಲಿ ಮೂಡಿ ಬರ್ತಿರುವ ಮೆಗಾ ಪ್ರಾಜೆಕ್ಟ್ ಚಿತ್ರ ಇದಾಗಿದ್ದು, ಚಿತ್ರದಲ್ಲಿ ನಾಯಕಿಯಾಗಿ ಕೀರ್ತಿ ಸುರೇಶ್ ನಾನಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ. ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಿದ ಚಿತ್ರತಂಡ ಟೀಸರ್ ಮೂಲಕ ಮಾರ್ಚ್ 30ರಂದು ಬಿಡುಗಡೆಯಾಗುತ್ತಿರುವ ಚಿತ್ರಕ್ಕೆ ಆಮಂತ್ರಣ ನೀಡಿದೆ. ಇದನ್ನೂ ಓದಿ: `ಸಾಕ್ಷಾತ್ಕಾರ’ ನಟಿ ಜಮುನಾ ಬಯೋಪಿಕ್‌ನಲ್ಲಿ ತಮನ್ನಾ ಭಾಟಿಯಾ

    ದೀಕ್ಷಿತ್ ಶೆಟ್ಟಿ, ಸಮುದ್ರಕನಿ, ಸಾಯಿಕುಮಾರ್, ಜರೀನಾ ವಹಾಬ್ ಸೇರಿದಂತೆ ಸ್ಟಾರ್ ಕಲಾವಿದರ ತಾರಾಬಳಗ ಈ ಚಿತ್ರದಲ್ಲಿದೆ. ಶ್ರೀಲಕ್ಷ್ಮೀ ವೆಂಕಟೇಶ್ವರ ಸಿನಿಮಾಸ್ ಬ್ಯಾನರ್ ನಡಿ ಸುಧಾಕರ್ ಚೆರುಕುರಿ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಸಂತೋಷ್ ನಾರಾಯಣನ್ ಮ್ಯೂಸಿಕ್, ಸತ್ಯನ್ ಸೂರ್ಯನ್ ಕ್ಯಾಮೆರಾ ವರ್ಕ್, ನವೀನ್ ನೂಲಿ ಸಂಕಲನ, ಅನ್ಬರಿವ್ ಸಾಹಸ ನಿರ್ದೇಶನ, ವಿಜಯ್ ಚಗಂಟಿ ಕಾರ್ಯಕಾರಿ ನಿರ್ಮಾಣ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ರಾಜಮೌಳಿ ಹತ್ಯೆಗೆ ಸ್ಕೆಚ್ ಹಾಕಿದ ಡೈರೆಕ್ಟರ್ಸ್ : ಬಾಯ್ಬಿಟ್ಟ ವರ್ಮಾ

    ರಾಜಮೌಳಿ ಹತ್ಯೆಗೆ ಸ್ಕೆಚ್ ಹಾಕಿದ ಡೈರೆಕ್ಟರ್ಸ್ : ಬಾಯ್ಬಿಟ್ಟ ವರ್ಮಾ

    ರಾಜಮೌಳಿ (Rajamouli) ಅವರೇ ದಯವಿಟ್ಟು ನಿಮ್ಮ ಭದ್ರತೆಯನ್ನು ಹೆಚ್ಚಿಸಿಕೊಳ್ಳಿ. ಅನೇಕರು ನಿಮ್ಮ ಮೇಲೆ ಅಸೂಯೆ ಪಡುತ್ತಿದ್ದಾರೆ. ನಿಮ್ಮನ್ನು ಕೊಲ್ಲಲೆಂದೇ ನಿರ್ದೇಶಕರು ಒಂದು ಗುಂಪನ್ನಾಗಿ ಮಾಡಿಕೊಂಡಿದ್ದಾರೆ. ಆ ಗುಂಪಿನಲ್ಲಿ ನಾನೂ ಇದ್ದೇನೆ. ಇದೀಗ ನಾನು ನಾಲ್ಕು ಪೆಗ್‍ ತಗೆದುಕೊಂಡಿದ್ದೇನೆ ಹಾಗಾಗಿ ಸತ್ಯ ನುಡಿಯುತ್ತಿದ್ದೇನೆ ಎಂದು ಹೇಳುವ ಮೂಲಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (Ram Gopal Verma) ಒಂದು ಕ್ಷಣ ರಾಜಮೌಳಿ ಅಭಿಮಾನಿಗಳನ್ನು ದಂಗಾಗಿಸಿದ್ದರು.

    ಈ ವಿಷಯವನ್ನು ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದು, ಮೊದ ಮೊದಲು ಎಲ್ಲರೂ ಇದನ್ನು ಗಂಭೀರವಾಗಿಯೇ ತಗೆದುಕೊಂಡಿದ್ದರು. ಆನಂತರ ಸರಣಿಯವಾಗಿ ವರ್ಮಾ ಸೋಷಿಯಲ್ ಮೀಡಿಯಾದಲ್ಲಿ ಹಲವು ವಿಷಯಗಳನ್ನು ಬರೆದುಕೊಂಡಿದ್ದಾರೆ. ಹಾಗಾಗಿ ಇದು ತಮಾಷೆ ಮತ್ತು ರಾಜಮೌಳಿಯನ್ನು ಕಾಲು ಎಳೆಯುವ ತಂತ್ರ ಎಂದು ನಿಟ್ಟುಸಿರಿಟ್ಟಿದ್ದಾರೆ ಅಭಿಮಾನಿಗಳು. ಇದನ್ನೂ ಓದಿ: ಕೊಡವ ಶೈಲಿಯಲ್ಲಿ ಮಿಂಚಿದ ನಟಿ ಶುಭ್ರ ಅಯ್ಯಪ್ಪ- ವಿಶಾಲ್ ಜೋಡಿ

    ಸರಣಿಯ ಟ್ವೀಟ್ ನಲ್ಲಿ ರಾಜಮೌಳಿಯನ್ನು ಹೊಗಳಿರುವ ವರ್ಮಾ, ಅವರನ್ನು ದಾದಾ ಸಾಹೇಬ್ ಫಾಲ್ಕೆಗೆ ಹೋಲಿಸಿದ್ದಾರೆ. ಭಾರತೀಯ ಸಿನಿಮಾ ರಂಗದ ದಿಗ್ಗಜ ನಿರ್ದೇಶಕರನ್ನೂ ದಾಟಿಕೊಂಡು ಮುಂದೆ ಹೋಗಿದ್ದೀರಿ ಎಂದಿದ್ದಾರೆ. ಈ ಸ್ಥಾನದಲ್ಲಿ ನೀವು ಇರುತ್ತೀರಿ ಎಂದು ನಾನು ಅಂದುಕೊಂಡಿರಲಿಲ್ಲ ಎಂದು ಅಚ್ಚರಿಯನ್ನೂ ವ್ಯಕ್ತ ಪಡಿಸಿದ್ದಾರೆ. ಅಲ್ಲದೇ, ನಿಮ್ಮ ಕಿರುಬೆರಳನ್ನು ಒಂದು ಸಲ ಚೀಪಬೇಕು ಎಂದು ಯತ್ವಾತದ್ವಾ ಹೊಗಳಿದ್ದಾರೆ ರಾಮ್ ಗೋಪಾಲ್ ವರ್ಮಾ.

    ಇತ್ತೀಚೆಗಷ್ಟೇ ರಾಜಮೌಳಿ ಹಾಲಿವುಡ್ ನಿರ್ದೇಶಕರನ್ನು ಭೇಟಿ ಮಾಡಿದ್ದರು. ಅವರು ಆರ್.ಆರ್.ಆರ್ (RRR) ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಅಲ್ಲದೇ, ಈ ಸಿನಿಮಾದ ಹಾಡಿಗಾಗಿ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಕೂಡ ಬಂದಿತ್ತು. ಇದೀಗ ಆಸ್ಕರ್ ಪ್ರಶಸ್ತಿಯ ರೇಸ್‍ ನಲ್ಲೂ ಕೂಡ ಆರ್.ಆರ್.ಆರ್ ಸಿನಿಮಾವಿದೆ. ಈ ಹಿನ್ನೆಲೆಯಲ್ಲಿ ವರ್ಮಾ ಮೆಚ್ಚುಗೆಯ ಮಾತುಗಳ ಮೂಲಕ ಅಭಿನಂದಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • `ಆರ್‌ಆರ್‌ಆರ್’ ಚಿತ್ರಕ್ಕೆ ಬಾಲಿವುಡ್ ಸಿನಿಮಾ ಎಂದ ನಟಿಗೆ ನೆಟ್ಟಿಗರಿಂದ ಖಡಕ್ ಉತ್ತರ

    `ಆರ್‌ಆರ್‌ಆರ್’ ಚಿತ್ರಕ್ಕೆ ಬಾಲಿವುಡ್ ಸಿನಿಮಾ ಎಂದ ನಟಿಗೆ ನೆಟ್ಟಿಗರಿಂದ ಖಡಕ್ ಉತ್ತರ

    ರಾಜಮೌಳಿ (Rajamouli) ನಿರ್ದೇಶನದ `ಆರ್‌ಆರ್‌ಆರ್’ (RRR) ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಈ ಸಿನಿಮಾ ತೆಲುಗು ಪ್ರಿಯರಿಗೆ ಮಾತ್ರವಲ್ಲ ಹಾಲಿವುಡ್ ಮಂದಿಯ ಗಮನ ಸೆಳೆದಿದೆ. ಈಗ ಸಿನಿಮಾವನ್ನ ಹೊಗಳುವ ಭರದಲ್ಲಿ ಹಾಲಿವುಡ್ ನಟಿ ಜೇನ್ ಫೋಂಡಾ (Janefonda) ಎಡವಟ್ಟು ಮಾಡಿದ್ದಾರೆ. ನಟಿಗೆ ನೆಟ್ಟಿಗರಿಂದ ಕ್ಲಾಸ್ ಆಗಿದೆ.

    ಇತ್ತೀಚಿಗೆ ಹಾಲಿವುಡ್ ನಟಿ ಜೇನ್ ಫೋಂಡಾ `ಆರ್‌ಆರ್‌ಆರ್’ (RRR) ಸಿನಿಮಾ ವೀಕ್ಷಿಸಿದ್ದಾರೆ. ಚಿತ್ರದ ಬಗ್ಗೆ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಮೆಚ್ಚುಗೆಯ ಮಾತುಗಳನ್ನ ಆಡಿದ್ದಾರೆ. ಹೊಗಳುವ ಭರದಲ್ಲಿ ರಾಜಮೌಳಿ ಚಿತ್ರವನ್ನು ಬಾಲಿವುಡ್ ಸಿನಿಮಾ ಎಂದು ಕರೆದಿದ್ದಾರೆ.

    ಬಾಲಿವುಡ್ (Bollywood) ಚಿತ್ರ ಎಂದರೆ ಹಿಂದಿ ಭಾಷೆಯ ಸಿನಿಮಾಗಳು ಎಂದರ್ಥ. ಇದು ಟಾಲಿವುಡ್ (tollywood) ಚಿತ್ರ. `RRR’ ತೆಲುಗು ಭಾಷೆಯ ಸಿನಿಮಾ ಎಂದು ನೆಟ್ಟಿಗನೊಬ್ಬ ಖಡಕ್ ಆಗಿ ಉತ್ತರಿಸಿದ್ದಾರೆ. ಇದು ಬಾಲಿವುಡ್ ಚಿತ್ರ ಅಲ್ಲ ಎಂದು ಅವರಿಗೆ ಹೇಳಿ ಕಾಮೆಂಟ್ ಬಾಕ್ಸ್‌ನಲ್ಲಿ ರಿಪ್ಲೈ ಹಾಕಿದ್ದಾರೆ.

     

    View this post on Instagram

     

    A post shared by Jane Fonda (@janefonda)

    ನಾನು ʻಟು ಲೆಸ್ಲಿʼ ಸಿನಿಮಾವನ್ನು ನೋಡಲು ಅನೇಕರಿಗೆ ಸಲಹೆ ನೀಡಿದ್ದೆ. ಆದರೆ ನಾನು RRR ಚಿತ್ರವನ್ನು ನೋಡಿದೆ. ಈ ಸಿನಿಮಾದ ಪ್ರಕಾರವೇ ಹೊಸದಾಗಿದೆ ನನಗೆ ಆಶ್ಚರ್ಯ ಉಂಟು ಮಾಡಿದೆ. ಇದು ಬೆಸ್ಟ್ ಫಾರಿನ್ ಸಿನಿಮಾ ವಿಭಾಗದಲ್ಲಿ ನಾಮಿನೇಟ್ ಆಗಿರುವ ಕಾರಣ ಇದನ್ನು ನಾನು ನೋಡಿದ್ದು, ಇದು ಇಂಡಿಯಾನ ಜೋನ್ಸ್ ಹಾಗೂ ಇಂಪೀರಿಯಲಿಸಮ್ ಇರುವ ಬಾಲಿವುಡ್ ಸಿನಿಮಾ ಎಂದು ನಟಿ ಜೇನ್ ಅಡಿಬರಹ ನೀಡಿದ್ದಾರೆ. ಇದನ್ನೂ ಓದಿ: ಆಲಿಯಾ ಭಟ್ ಮತ್ತೆ ಪ್ರಗ್ನೆಂಟ್? 2ನೇ ಮಗುವಿನ ನಿರೀಕ್ಷೆಯಲ್ಲಿ ರಣ್‌ಬೀರ್ ದಂಪತಿ!

     

    View this post on Instagram

     

    A post shared by Jane Fonda (@janefonda)

    ಬಾಲಿವುಡ್ ಸಿನಿಮಾ ಎಂದ ನಟಿಯ ತಪ್ಪನ್ನ ನೆಟ್ಟಿಗರು ತಿದ್ದಿದ್ದಾರೆ. ಇದನ್ನ ಇಂಡಿಯನ್ ಸಿನಿಮಾ ಎಂದರೆ ತಪ್ಪಾಗಲ್ಲ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಎರಡು ಬಾರಿ ‘ಆರ್.ಆರ್.ಆರ್’ ಸಿನಿಮಾ ನೋಡಿದ ಅವತಾರ್ ಚಿತ್ರ ನಿರ್ದೇಶಕ

    ಎರಡು ಬಾರಿ ‘ಆರ್.ಆರ್.ಆರ್’ ಸಿನಿಮಾ ನೋಡಿದ ಅವತಾರ್ ಚಿತ್ರ ನಿರ್ದೇಶಕ

    ಗತ್ತಿನ ಅತ್ಯುತ್ತಮ ಸಿನಿಮಾ ನಿರ್ದೇಶಕರ ಸಾಲಿನಲ್ಲಿ ಮೊದಲು ಕಾಣಿಸಿಕೊಳ್ಳುವುದು ‘ಅವತಾರ್’ (Avatar) ಖ್ಯಾತಿಯ ಜೇಮ್ಸ್ ಕ್ಯಾಮರೂನ್ (James Cameron). ಇವರನ್ನು ಜಗತ್ತಿನ ಸಿನಿಮಾ ರಂಗ ವಿಶ್ವವಿದ್ಯಾಲಯ ಎಂದೇ ಕರೆಯುತ್ತದೆ. ಇವರು ಮಾಡಿದ ಸಿನಿಮಾಗಳಿಗೆ ಜನರು ಯಾವತ್ತಿಗೂ ಮನ್ನಣೆ ಕೊಡುತ್ತಲೇ ಬಂದಿದ್ದಾರೆ. ಅತೀ ಹೆಚ್ಚು ಬಜೆಟ್ ನಲ್ಲಿ ಇವರ ಚಿತ್ರಗಳು ನಿರ್ಮಾಣವಾಗುತ್ತದೆ. ಲಾಭವನ್ನೂ ಹಾಗೆಯೇ ತಂದುಕೊಡುತ್ತವೆ. ಇಂತಹ ಮಹಾನ್ ನಿರ್ದೇಶಕರು, ರಾಜಮೌಳಿ (Rajamouli) ನಿರ್ದೇಶನದ ಆರ್.ಆರ್.ಆರ್ (RRR) ಸಿನಿಮಾವನ್ನು ಎರಡು ಬಾರಿ ನೋಡಿದ್ದಾರಂತೆ.

    ಈ ವಿಷಯವನ್ನು ಸ್ವತಃ ರಾಜಮೌಳಿ ಅವರೇ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಕೂಡ ಶೇರ್ ಮಾಡಿದ್ದಾರೆ. ‘ಆರ್.ಆರ್.ಆರ್ ಸಿನಿಮಾವನ್ನು ತಾವು ಎರಡು ಬಾರಿ ನೋಡಿದ್ದಲ್ಲೇ, ತಮ್ಮ ಪತ್ನಿಗೂ ನೋಡುವಂತೆ ಸಲಹೆ ನೀಡಿದ್ದು, ನನಗೆ ಸಿಕ್ಕ ಮಹಾನ್ ಗೌರವ. ಹತ್ತು ನಿಮಷಗಳ ಕಾಲ ಸಿನಿಮಾ ಬಗ್ಗೆ ವಿಶ್ಲೇಷಿಸಿದ್ದನ್ನು ನಾನು ಮರೆಯುವುದಕ್ಕೆ ಸಾಧ್ಯವೇ ಇಲ್ಲ’ ರಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಚಿವ ಸುಧಾಕರ್‌ರನ್ನ ಹಾಡಿ ಹೊಗಳಿದ ರಮ್ಯಾ: ಕೈಗೆ ನಟಿ ಬೈ ಹೇಳಿ ಬಿಜೆಪಿ ಸೇರ್ಪಡೆ?

    ಜಗತ್ತಿನ ಅತ್ಯುತ್ತಮ ನಿರ್ದೇಶಕರಲ್ಲಿ ರಾಜಮೌಳಿ ಕೂಡ ಒಬ್ಬರು ಎಂದು ಜೇಮ್ಸ್ ಕ್ಯಾಮರೂನ್ ಗುಣಗಾನ ಮಾಡಿದ್ದಾರಂತೆ. ಈ ಮಾತು ರಾಜಮೌಳಿ ಅವರಲ್ಲಿ ಮತ್ತಷ್ಟ ಸಂಭ್ರಮ ತಂದಿದೆ. ‘ನಿಮ್ಮೊಂದಿಗೆ ನಾನೂ ಇದ್ದೇನೆ ಎನ್ನುವುದೇ ಖುಷಿ. ಇಬ್ಬರಿಗೂ ಧನ್ಯವಾದಗಳು ಎಂದು ರಾಜಮೌಳಿ ಅವರು ಫೋಟೋ ಜೊತೆ ಬರೆದುಕೊಂಡಿದ್ದಾರೆ. ಆ ಕ್ಷಣವನ್ನು ಇನ್ನೂ ನನ್ನಿಂದ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಭಾವನೆಯನ್ನು ಇವರು ಹಂಚಿಕೊಂಡಿದ್ದಾರೆ. ಇಂಥದ್ದೊಂದು ಅವಕಾಶ ಸಿಕ್ಕಿದ್ದು ಕ್ರಿಟಿಕ್ಸ್ ಅವಾರ್ಡ್ ಕಾರ್ಯಕ್ರಮದಲ್ಲಿ ಎನ್ನುವ ಮಾಹಿತಿಯನ್ನೂ ರಾಜಮೌಳಿ ಹಂಚಿಕೊಂಡಿದ್ದಾರೆ.

    ಗೋಲ್ಡನ್ ಗ್ಲೋಬ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಜಮೌಳಿ ಅವರು ಮತ್ತೋರ್ವ ಹೆಸರಾಂತ ನಿರ್ದೇಶಕ ಸ್ಟೀಲ್ ಬರ್ಗ್ (Steelberg) ಅವರನ್ನು ಭೇಟಿ ಮಾಡಿದ್ದರು. ದೇವರನ್ನೇ ನಾನು ನೋಡಿದೆ ಎಂದು ಅವರು ಬರೆದುಕೊಂಡಿದ್ದರು. ಒಂದೇ ವಾರದಲ್ಲಿ ಇಬ್ಬರು ಖ್ಯಾತ ನಿರ್ದೇಶಕರನ್ನು ಭೇಟಿ ಮಾಡುವ ಮೂಲಕ ರಾಜಮೌಳಿ ಡಬಲ್ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ʻಗೋಲ್ಡನ್ ಗೋಬ್ಸ್ʼ ಬಳಿಕ ಎರಡೆರಡು ಪ್ರಶಸ್ತಿ ಬಾಚಿಕೊಂಡ `ಆರ್‌ಆರ್‌ಆರ್’ ಸಿನಿಮಾ

    ʻಗೋಲ್ಡನ್ ಗೋಬ್ಸ್ʼ ಬಳಿಕ ಎರಡೆರಡು ಪ್ರಶಸ್ತಿ ಬಾಚಿಕೊಂಡ `ಆರ್‌ಆರ್‌ಆರ್’ ಸಿನಿಮಾ

    ರಾಜಮೌಳಿ (Rajamouli) ನಿರ್ದೇಶದ `ಆರ್‌ಆರ್‌ಆರ್’ (RRR Film)  ಸಿನಿಮಾ ಜಗತ್ತಿನದ್ಯಾಂತ ಸದ್ದು ಮಾಡ್ತಿದೆ. ಗೋಲ್ಡನ್ ಗ್ಲೋಬ್ (Golden globes) ಪ್ರಶಸ್ತಿ ಬಾಚಿಕೊಂಡಿರುವ ಬೆನ್ನಲ್ಲೇ ಮತ್ತೊಂದು ಪ್ರಶಸ್ತಿಯನ್ನ `ಆರ್‌ಆರ್‌ಆರ್’ ಚಿತ್ರ ತನ್ನ ಮುಡಿಗೇರಿಸಿಕೊಂಡಿದೆ. ಈ ಮೂಲಕ ಅಭಿಮಾನಿಗಳಿಗೆ ಚಿತ್ರತಂಡ ಮತ್ತೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

    ಏಲ್ಲೆಡೆ ರಾಜಮೌಳಿ ಸಿನಿಮಾ ಸೌಂಡ್ ಮಾಡ್ತಿದೆ. ಮೊನ್ನೆ ಮೊನ್ನೆಯಷ್ಟೇ ಗೋಲ್ಡನ್ ಗೋಬ್ಸ್ನಲ್ಲಿ ನಾಟು ನಾಟು (Naatu Naatu Song)  ಹಾಡಿಗೆ ಪ್ರಶಸ್ತಿ ಬಾಚಿಕೊಂಡಿತ್ತು. ಈ ಬೆನ್ನಲ್ಲೇ ಮತ್ತೊಂದು ಹೆಗ್ಗಳಿಕೆಗೆ ಚಿತ್ರ ಪಾತ್ರವಾಗಿದೆ. ಕ್ರಿಟಿಕ್ಸ್ ಚಾಯ್ಸ್ನಲ್ಲಿ ಮತ್ತೆರಡು ಪ್ರಶಸ್ತಿಯನ್ನ ತನ್ನದಾಗಿಸಿಕೊಂಡಿದೆ.

    `ಕ್ರಿಟಿಕ್ಸ್ ಚಾಯ್ಸ್’ನಲ್ಲಿ ಅತ್ಯುತ್ತಮ ವಿದೇಶಿ ಭಾಷೆಯ ಸಿನಿಮಾ ಅವಾರ್ಡ್ ಹಾಗೂ ನಾಟು ನಾಟು.. ಹಾಡು ಅತ್ಯುತ್ತಮ ಒರಿಜನಲ್ ಸಾಂಗ್ ಪ್ರಶಸ್ತಿ ಪಡೆದಿದ್ದಕ್ಕೆ ಆರ್‌ಆರ್‌ಆರ್ ತಂಡಕ್ಕೆ ಧನ್ಯವಾದಗಳು ಎಂದು ಕ್ರಿಟಿಕ್ಸ್ ಚಾಯ್ಸ್ ಅವಾರ್ಡ್ ಟ್ವಿಟರ್ ಖಾತೆ ಮೂಲಕ ಟ್ವೀಟ್ ಮಾಡಲಾಗಿದೆ. ಇದನ್ನೂ ಓದಿ: ಕನ್ನಡಕ್ಕೆ ಮೊದಲ ಆದ್ಯತೆ ಕೊಟ್ರು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ರಶ್ಮಿಕಾ ಮಂದಣ್ಣ

    ರಾಜಮೌಳಿ ಆಸ್ಕರ್ (Oscar) ಮೇಲೆಯೂ ಕಣ್ಣಿಟ್ಟಿದ್ದಾರೆ. ಭಾರತದ ಯಾವ ಚಿತ್ರಕ್ಕೂ ಆಸ್ಕರ್ ಪ್ರಶಸ್ತಿ ಸಿಕ್ಕಿಲ್ಲ. `ಆರ್‌ಆರ್‌ಆರ್’ ಸಿನಿಮಾ ಆಸ್ಕರ್ ಅವಾರ್ಡ್ಸ್ ಪಡೆಯುವ ರೇಸ್‌ನಲ್ಲಿದೆ. ಈ ಚಿತ್ರ ಆಸ್ಕರ್ ಗೆದ್ದರೆ ಹೊಸ ದಾಖಲೆ ನಿರ್ಮಾಣ ಆಗಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೇವರನ್ನು ಭೇಟಿಯಾದರಂತೆ ನಿರ್ದೇಶಕ ರಾಜಮೌಳಿ

    ದೇವರನ್ನು ಭೇಟಿಯಾದರಂತೆ ನಿರ್ದೇಶಕ ರಾಜಮೌಳಿ

    ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪಡೆದು ಬೀಗುತ್ತಿರುವ ನಿರ್ದೇಶಕ ರಾಜಮೌಳಿ, ಅದೇ ಖುಷಿಯಲ್ಲೇ ಒಂದು ಪೋಸ್ಟ್ ಮಾಡಿದ್ದಾರೆ. ಕೊನೆಗೂ ನಾನು ದೇವರನ್ನು ಭೇಟಿ ಮಾಡಿದೆ ಎಂದು ಅವರು ಬರೆದುಕೊಂಡಿದ್ದಾರೆ. ಆ ದೇವರು ಯಾರು ಎನ್ನುವುದಕ್ಕಾಗಿ ಫೋಟೋವನ್ನೂ ಅವರು ಹಂಚಿಕೊಂಡಿದ್ದಾರೆ. ದೇವರ ಜೊತೆ ಕೆಲ ಹೊತ್ತು ಕಳೆದು ಸಂಭ್ರಮಿಸಿದ್ದಾರೆ.

    ಅಂದಹಾಗೆ ರಾಜಮೌಳಿ ದೇವರು ಅಂತ ಕರೆದದ್ದು ಹಾಲಿವುಡ್ ಖ್ಯಾತ ನಿರ್ದೇಶಕ ಸ್ಟೀವನ್ ಸ್ಟೀಲ್ ಬರ್ಗ್ ಅವರನ್ನು. ಹಾಲಿವುಡ್ ನಲ್ಲಿ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ ಸ್ಟೀವನ್, ರಾಜಮೌಳಿ ಅವರ ಅತ್ಯಂತ ಹೆಮ್ಮೆ ನಿರ್ದೇಶಕರಂತೆ. ಅನೇಕ ಬಾರಿ ಇವರ ಕುರಿತು ರಾಜಮೌಳಿ ಹೇಳಿಕೊಂಡಿದ್ದಾರೆ. ಅವಕಾಶ ಸಿಕ್ಕರೆ ಅವರ ಜೊತೆ ಕೆಲಸ ಮಾಡುವುದಾಗಿಯೂ ಈ ಹಿಂದೆ ಹೇಳಿಕೊಂಡಿದ್ದರು. ತಮ್ಮ ಆರಾಧ್ಯ ನಿರ್ದೇಶಕನನ್ನು ಪ್ರಶಸ್ತಿ ಪ್ರದಾನ ಸಮಾರಂಭದ ನಂತರ ರಾಜಮೌಳಿ ಭೇಟಿ ಮಾಡಿದ್ದಾರೆ. ಇದನ್ನೂ ಓದಿ:‘ಮಠ’ ಚಿತ್ರ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಬಂಧನ

    ಇದೇ ಸಮಾರಂಭದಲ್ಲಿ ಸ್ಟೀವನ್ ಸ್ಟೀಲ್ ಬರ್ಗ್ ಕೂಡ ಎರಡು ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಇವರ ನಿರ್ದೇಶನದ ಫ್ಯಾಬೆಲ್ಮ್ಯಾನ್ಸ್ ಸಿನಿಮಾ ಎರಡು ಪ್ರಶಸ್ತಿಗಳನ್ನು ಪಡೆದಿದೆ. ಈ ಸಿನಿಮಾಗೆ ಅತ್ಯುತ್ತಮ ಸಿನಿಮಾ ಮತ್ತು ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗಳು ಸಂದಿವೆ. ಸ್ಟೀವನ್ ಜೊತೆ ಫೋಟೋ ಕೂಡ ತಗೆಸಿಕೊಂಡಿರುವ ರಾಜಮೌಳಿ, ಆ ಫೋಟೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಂಡಿದ್ದಾರೆ.

    ರಾಜಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಆರ್.ಆರ್.ಆರ್ ಸಿನಿಮಾಗೆ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಇವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರುವ ನಾಟು ನಾಟು ಹಾಡು, ಈ ಬಾರಿ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪಡೆದಿದೆ. ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಿನಿಮಾ ಟೀಮ್ ತಮ್ಮ ಕುಟುಂಬದೊಂದಿಗೆ ಹಾಜರಿತ್ತು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ವಿಜೇತರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ

    ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ವಿಜೇತರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ

    ರಾಜಮೌಳಿ (Rajamouli) ನಿರ್ದೇಶನ `ಆರ್‌ಆರ್‌ಆರ್’ (RRR) ಸಿನಿಮಾದ ನಾಟು ನಾಟು ಹಾಡಿನ ಸಂಗೀತಕ್ಕೆ ಹಾಲಿವುಡ್‌ನ `ಗೋಲ್ಡನ್ ಗ್ಲೋಬ್ಸ್’ ಎಂಬ ಪ್ರಶಸ್ತಿಗೆ ಬಾಚಿಕೊಂಡಿದ್ದಾರೆ. ಸಂಗೀತ ನಿರ್ದೇಶಕ ಎಂ.ಎಂ ಕ್ಷೀರವಾಣಿಗೆ ಗೋಲ್ಡನ್ ಗೋಬ್ಸ್ ಪ್ರಶಸ್ತಿ (Golden Globe Awards) ತಮ್ಮದಾಗಿಸಿಕೊಂಡಿದ್ದಾರೆ. ಈ ಚಿತ್ರದ ಹೊರತಾಗಿ ಪ್ರಶಸ್ತಿ ಗೆದ್ದವರ ಬಗ್ಗೆ ಇಲ್ಲಿದೆ ಡೀಟೈಲ್ಸ್. ಇದನ್ನೂ ಓದಿ: ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ

    ಚಿತ್ರರಂಗದಲ್ಲಿ ಸದ್ಯ ಸದ್ದು ಮಾಡ್ತಿರುವ ಸಿನಿಮಾ ಅಂದ್ರೆ `ಆರ್‌ಆರ್‌ಆರ್’ (RRR Film) ಸಿನಿಮಾ. ಈ ಚಿತ್ರದ ನಾಟು ನಾಟು (Naatu Naatu Song) ಸಾಂಗ್‌ಗೆ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಬಾಚಿಕೊಂಡಿದೆ. ಗೋಲ್ಡನ್ ಗ್ಲೋಬ್‌ನಲ್ಲಿ ಗೆದ್ದ ಸಿನಿಮಾಗಳು ಆಸ್ಕರ್‌ನಲ್ಲಿಯೂ ಗೆಲ್ಲವುದು ಖಚಿತ ಎಂದು ಹೇಳಲಾಗುತ್ತಿದೆ. ಇನ್ನೂ ಗೋಲ್ಡನ್ ಗೋಬ್ಸ್‌ನಲ್ಲಿ ಬೇರೇ ಯಾವೆಲ್ಲಾ ಸಿನಿಮಾಗಳಿಗೆ ಪ್ರಶಸ್ತಿ ಎಂಬ ಸಂಪೂರ್ಣ ವಿವರ ಇಲ್ಲಿದೆ.

    ಗೋಲ್ಡನ್ ಗ್ಲೋಬ್ಸ್ ವಿಜೇತರ ಪಟ್ಟಿ 2023

    ಅತ್ಯುತ್ತಮ ಡ್ರಾಮಾ ಸಿನಿಮಾ- ದಿ ಫ್ಯಾಬಲ್‌ಮ್ಯಾನ್ಸ್

    ಸಂಗೀತ ಹಾಗೂ ಕಾಮಿಡಿ ಜಾನರ್‌ನ ಅತ್ಯುತ್ತಮ ಸಿನಿಮಾ- ದಿ ಬನ್‌ಶೀಸ್ ಆಫ್ ಇನೆಶೆರಿನ್

    ಅತ್ಯುತ್ತಮ ಟಿವಿ ಸೀರೀಸ್- ಹೌಸ್ ಆಫ್ ಡ್ರ‍್ಯಾಗನ್ಸ್

    ಸಂಗೀತ ಹಾಗೂ ಕಾಮಿಡಿ ಜಾನರ್‌ನ ಟಿವಿ ಸೀರೀಸ್- ಅಬಾಟ್ ಎಲಿಮೆಂಟ್ರಿ

    ಅತ್ಯುತ್ತಮ ಟಿವಿ ಸಿನಿಮಾ- ದಿ ವೈಟ್ ಲೋಟಸ್: ಸಿಸಿಲಿ

    ಟಿವಿ ಸೀರೀಸ್‌ನ ಅತ್ಯುತ್ತಮ ನಟ- ಕೆವಿನ್ ಕೋಸ್ಟರ್ (ಯೆಲ್ಲೊಸ್ಟೋನ್)

    ಟಿವಿ ಸಿನಿಮಾದ ಅತ್ಯುತ್ತಮ ನಟ- ಇವಾನ್ ಪೆಟರ್ಸ್ (ಮಾನ್‌ಸ್ಟರ್; ದಿ ಜೆಫ್ರಿ ಡಾಮೆರ್ ಸ್ಟೋರಿ)

    ಟಿವಿ ಸಿನಿಮಾದ ಅತ್ಯುತ್ತಮ ನಟಿ- ಅಮಾಂಡಾ ಸೇಫ್ರೆಡ್ (ದಿಡ್ರಾಪೌಟ್)

    ಟಿವಿ ಸಿನಿಮಾ ಅತ್ಯುತ್ತಮ ಪೋಷಕ ನಟಿ- ಜೆನಿಫರ್ ಕೂಲಿಡ್ಜ್ (ದಿ ವೈಟ್ ಲೋಟಸ್)

    ಟಿವಿ ಸಿನಿಮಾದ ಅತ್ಯುತ್ತಮ ಪೋಷಕ ನಟ- ಪೌಲ್ ವಾಲ್ಟರ್ (ಬ್ಲಾಕ್ ಬರ್ಡ್)

    ಅತ್ಯುತ್ತಮ ಚಿತ್ರಕಥೆ- ದಿ ಬ್ಯಾನ್‌ಶೀಸ್ ಆಫ್ ಇನೆಶೆರೀನ್

    ಅತ್ಯುತ್ತಮ ನಿರ್ದೆಶಕ- ಸ್ಟಿವನ್ ಸ್ಪೀಲ್‌ಬರ್ಗ್, (ದಿ ಫೇಬಲ್‌ಮ್ಯಾನ್ಸ್)

    ಅತ್ಯುತ್ತಮ ಇಂಗ್ಲೀಷೇತರ ಸಿನಿಮಾ- ಅರ್ಜೆಂಟೀನಾ 1985 (ಆರ್‌ಆರ್‌ಆರ್ ಸಿನಿಮಾ ಈ ವಿಭಾಗದಲ್ಲಿ ಸೋತಿದೆ)

    ಅತ್ಯುತ್ತಮ ನಟಿ- ಕೇಟ್ ಬ್ಲಾಂಚೆಟ್ (ಕಾರ್)

    ಅತ್ಯುತ್ತಮ ನಟ- ಆಸ್ಟಿನ್ ಬಟ್ಲರ್ (ಎಲ್ವಿಸ್)

    ಟಿವಿ ಸೀರೀಸ್ ಅತ್ಯುತ್ತಮ ಪೋಷಕ ನಟಿ- ಜೂಲಿಯಾ ಗಾರ್ನರ್ (ಓಜಾರ್ಕ್)

    ಅತ್ಯುತ್ತಮ ಪೋಷಕ ನಟ- ಕೆ ಹ್ಯು ಕಾನ್ (ಎವರಿತಿಂಗ್ ಎವರಿವೇರ್ ಆಲ್ ಅಟ್ ಒನ್ಸ್)

    ಅತ್ಯುತ್ತಮ ಪೋಷಕ ನಟಿ- ಆಂಗೆಲಾ ಬೆಸೆಟ್ (ವಕಾಂಡಾ ಫಾರೆವರ್)

    ಅತ್ಯುತ್ತಮ ನಟ ಟಿವಿ ಸೀರೀಸ್- ಟೈಲರ್ ಜೇಮ್ಸ್ ವಿಲಿಯಮ್ಸ್ (ಅಬಾಟ್ ಎಲಿಮೆಂಟ್ರಿ)

    ಅತ್ಯುತ್ತಮ ಸಂಗೀತ- ಜಸ್ಟಿನ್ ಹರ್‌ವಿಟ್ಜ್ (ಬ್ಯಾಬಿಲಾನ್)

    ಅತ್ಯುತ್ತಮ ಹಾಡು- ನಾಟು-ನಾಟು (ಆರ್‌ಆರ್‌ಆರ್‌)

    ಅತ್ಯುತ್ತಮ ಅನಿಮೇಟೆಡ್ ಸಿನಿಮಾ- ಪಿನಾಕಿಯೋ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪಡೆದ ಆರ್.ಆರ್.ಆರ್ ತಂಡಕ್ಕೆ ಮೋದಿ ಅಭಿನಂದನೆ

    ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿ ಪಡೆದ ಆರ್.ಆರ್.ಆರ್ ತಂಡಕ್ಕೆ ಮೋದಿ ಅಭಿನಂದನೆ

    ಹಾಲಿವುಡ್ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ಸ್ ‍ಪ್ರಶಸ್ತಿ ಪಡೆದಿರುವ ಆರ್.ಆರ್.ಆರ್ ಸಿನಿಮಾ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದ್ದಾರೆ. ಸಿನಿಮಾದ ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಪ್ರಶಸ್ತಿ ಪಡೆಯುತ್ತಿರುವ ವಿಡಿಯೋವನ್ನು ಶೇರ್ ಮಾಡಿರುವ ಮೋದಿ, ‘ಈ ಪ್ರತಿಷ್ಠಿತ ಗೌರವವು ಪ್ರತಿಯೊಬ್ಬ ಭಾರತೀಯನು ಹೆಮ್ಮೆ ಪಡುವಂತೆ ಮಾಡಿದೆ. ರಾಜಮೌಳಿ, ಕೀರವಾಣಿ, ರಾಮ್ ಚರಣ್, ಜ್ಯೂನಿಯರ್ ಎನ್.ಟಿ.ಆರ್ ಹಾಗೂ ಇಡೀ ತಂಡಕ್ಕೆ ಅಭಿನಂದನೆಗಳು’ ಎಂದು ಟ್ವಿಟ್ ಮಾಡಿದ್ದಾರೆ.

    ಸದ್ಯ ಆಸ್ಕರ್ ಅಂಗಳದಲ್ಲಿ ಪ್ರಶಸ್ತಿಯ ಕನಸು ಕಾಣುತ್ತಿರುವ ಆರ್.ಆರ್.ಆರ್ ಸಿನಿಮಾ ತಂಡಕ್ಕೆ ಅನಿರೀಕ್ಷಿತ ಪ್ರಶಸ್ತಿಯೊಂದು ಸಂದಿದ್ದು, ಈ ಸಿನಿಮಾದ ‘ನಾಟು ನಾಟು’ ಹಾಡಿಗೆ ಬಂದಿದೆ. ಮೊನ್ನೆಯಷ್ಟೇ ನ್ಯಾಷನಲ್ ಬೋರ್ಡ್ ಆಫ್ ರಿವ್ಯೂ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದ ಸಿನಿಮಾ, ಈ ಸಲ ಬಂಗಾರದ ಪದಕವನ್ನೇ ಬೇಟೆಯಾಡಿದೆ. ಇದನ್ನೂ ಓದಿ:‘ಪಠಾಣ್’ ದೇಶಭಕ್ತಿ ಸಾರುವ ಸಿನಿಮಾ : ನಟ ಶಾರುಖ್ ಖಾನ್

    ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯ ಬೆಸ್ಟ್ ಒರಿಜನಲ್ ಸಾಂಗ್ ಕೆಟಗರಿಯಲ್ಲಿ ‘ನಾಟು ನಾಟು’ ಹಾಡಿಗೆ ಈ ಪ್ರಶಸ್ತಿ ಬಂದಿದ್ದು, ಯುನೈಟೆಡ್ ಸ್ಟೇಟ್ಸ್ ನ ಬೆವೆರ್ಲಿ ಹಿಲ್ಸ್ ನಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಈ ಗೌರವವನ್ನು ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಈ ಪ್ರಶಸ್ತಿಯನ್ನು ಪಡೆದರು. ಸಮಾರಂಭದಲ್ಲಿ ರಾಜಮೌಳಿ, ಜ್ಯೂನಿಯರ್ ಎನ್.ಟಿ.ಆರ್ ಹಾಗೂ ರಾಮ್ ಚರಣ್ ಕುಟುಂಬ ಕೂಡ ಭಾಗಿಯಾಗಿತ್ತು.

    RRR Lyrical Video Natu Natu 3

    ಈ ಪ್ರಶಸ್ತಿಗಾಗಿ ಘಟಾನುಘಟಿ ಹಾಡುಗಳೇ ಸ್ಪರ್ಧಾ ಕಣದಲ್ಲಿದ್ದವು. ಕೆರೊಲಿನ್, ಸಿಯೋ ಪಾ, ಹೋಲ್ಡ್ ಮೈ ಹ್ಯಾಂಡ್, ಲಿಫ್ಟ್ ಮಿ ಅಪ್ ರೀತಿಯ ಹಾಡುಗಳು ಈ ಪ್ರಶಸ್ತಿಗಾಗಿ ನಾಮಿನೇಟ್ ಆಗಿದ್ದವು. ಈ ಎಲ್ಲ ಹಾಡುಗಳ ಜನಪ್ರಿಯತೆಯನ್ನು ಹಿಂದಿಕ್ಕೆ ನಾಟು ನಾಟು ಹಾಡು ಪ್ರಶಸ್ತಿ ಪಡೆದಿದೆ. ಈ ಪ್ರಶಸ್ತಿ ಪಡೆದ ದಕ್ಷಿಣದ ಭಾರತದ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ

    ಆರ್.ಆರ್.ಆರ್ ಸಿನಿಮಾದ ನಾಟು ನಾಟು ಹಾಡಿಗೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ

    ದ್ಯ ಆಸ್ಕರ್ ಅಂಗಳದಲ್ಲಿ ಪ್ರಶಸ್ತಿಯ ಕನಸು ಕಾಣುತ್ತಿರುವ ಆರ್.ಆರ್.ಆರ್ ಸಿನಿಮಾ ತಂಡಕ್ಕೆ ಅನಿರೀಕ್ಷಿತ ಪ್ರಶಸ್ತಿಯೊಂದು ಸಂದಿದೆ. ಹಾಲಿವುಡ್ ನ ಪ್ರತಿಷ್ಠಿತ ಪ್ರಶಸ್ತಿ ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯು ಆರ್.ಆರ್.ಆರ್ ಸಿನಿಮಾದ ‘ನಾಟು ನಾಟು’ ಹಾಡಿಗೆ ಬಂದಿದೆ. ಮೊನ್ನೆಯಷ್ಟೇ ನ್ಯಾಷನಲ್ ಬೋರ್ಡ್ ಆಫ್ ರಿವ್ಯೂ ಪ್ರಶಸ್ತಿಯನ್ನೂ ಬಾಚಿಕೊಂಡಿದ್ದ ಸಿನಿಮಾ, ಈ ಸಲ ಬಂಗಾರದ ಪದಕವನ್ನೇ ಬೇಟೆಯಾಡಿದೆ.

    ಗೋಲ್ಡನ್ ಗ್ಲೋಬ್ಸ್ ಪ್ರಶಸ್ತಿಯ ಬೆಸ್ಟ್ ಒರಿಜನಲ್ ಸಾಂಗ್ ಕೆಟಗರಿಯಲ್ಲಿ ‘ನಾಟು ನಾಟು’ ಹಾಡಿಗೆ ಈ ಪ್ರಶಸ್ತಿ ಬಂದಿದ್ದು, ಯುನೈಟೆಡ್ ಸ್ಟೇಟ್ಸ್ ನ ಬೆವೆರ್ಲಿ ಹಿಲ್ಸ್ ನಲ್ಲಿ ನಡೆಯುತ್ತಿರುವ ಸಮಾರಂಭದಲ್ಲಿ ಈ ಗೌರವವನ್ನು ಸಂಗೀತ ನಿರ್ದೇಶಕ ಎಂ.ಎಂ. ಕೀರವಾಣಿ ಈ ಪ್ರಶಸ್ತಿಯನ್ನು ಪಡೆದರು. ಸಮಾರಂಭದಲ್ಲಿ ರಾಜಮೌಳಿ, ಜ್ಯೂನಿಯರ್ ಎನ್.ಟಿ.ಆರ್ ಹಾಗೂ ರಾಮ್ ಚರಣ್ ಕುಟುಂಬ ಕೂಡ ಭಾಗಿಯಾಗಿತ್ತು. ಇದನ್ನೂ ಓದಿ: `ಜೈಲರ್’ ರಜನಿಕಾಂತ್‌ಗೆ ಮೋಹನ್ ಲಾಲ್ ಸಾಥ್

    ಈ ಪ್ರಶಸ್ತಿಗಾಗಿ ಘಟಾನುಘಟಿ ಹಾಡುಗಳೇ ಸ್ಪರ್ಧಾ ಕಣದಲ್ಲಿದ್ದವು. ಕೆರೊಲಿನ್, ಸಿಯೋ ಪಾ, ಹೋಲ್ಡ್ ಮೈ ಹ್ಯಾಂಡ್, ಲಿಫ್ಟ್ ಮಿ ಅಪ್ ರೀತಿಯ ಹಾಡುಗಳು ಈ ಪ್ರಶಸ್ತಿಗಾಗಿ ನಾಮಿನೇಟ್ ಆಗಿದ್ದವು. ಈ ಎಲ್ಲ ಹಾಡುಗಳ ಜನಪ್ರಿಯತೆಯನ್ನು ಹಿಂದಿಕ್ಕೆ ನಾಟು ನಾಟು ಹಾಡು ಪ್ರಶಸ್ತಿ ಪಡೆದಿದೆ. ಈ ಪ್ರಶಸ್ತಿ ಪಡೆದ ದಕ್ಷಿಣದ ಭಾರತದ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k