Tag: rajamouli

  • ‘ಕಲ್ಕಿ’ ಸಿನಿಮಾದಲ್ಲಿ ರಾಜಮೌಳಿ ವಿಜ್ಞಾನಿ: ಏನಿದು ಹೊಸ ವಿಷ್ಯ?

    ‘ಕಲ್ಕಿ’ ಸಿನಿಮಾದಲ್ಲಿ ರಾಜಮೌಳಿ ವಿಜ್ಞಾನಿ: ಏನಿದು ಹೊಸ ವಿಷ್ಯ?

    ಪ್ರಭಾಸ್ ಮುಖ್ಯ ಭೂಮಿಕೆಯ ಕಲ್ಕಿ ಸಿನಿಮಾದಲ್ಲಿ ರಾಜಮೌಳಿಯೂ (Rajamouli) ಪಾತ್ರ ಮಾಡಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಸಿನಿಮಾದಲ್ಲಿ ಅವರು ಮಹತ್ವದ ಪಾತ್ರವೊಂದನ್ನು ನಿರ್ವಹಿಸಿದ್ದು, ಅದು ವಿಜ್ಞಾನಿ (Scientist) ಪಾತ್ರವಾಗಿದೆಯಂತೆ. ಅಧಿಕೃತವಾಗಿ ಚಿತ್ರತಂಡ ಯಾವುದೇ ಮಾಹಿತಿ ಹಂಚಿಕೊಳ್ಳದೇ ಇದ್ದರೂ, ಇಂಥದ್ದೊಂದು ಸುದ್ದಿಯಂತೂ ಸಖತ್ ಜೋರಾಗಿಯೇ ಕೇಳಿ ಬರುತ್ತಿದೆ.

    ಪ್ರತಿ ಹಂತದಲ್ಲೂ ನಾನಾ ರೀತಿಯ ಸುದ್ದಿಗಳನ್ನು ಮಾಡುತ್ತಲೇ ಬರುತ್ತಿದೆ ಚಿತ್ರತಂಡ. ಮೊನ್ನೆಯಷ್ಟೇ ನಟ ಅಮಿತಾಭ್ ಬಚ್ಚನ್  (Amitabh Bachchan) ಅವರ ಹುಟ್ಟು ಹಬ್ಬದ (Birthday) ದಿನದಂದು ಕಲ್ಕಿ ಸಿನಿಮಾ ಟೀಮ್ ಅಮಿತಾಭ್ ಬಚ್ಚನ್ ಪಾತ್ರದ ಫಸ್ಟ್ ಲುಕ್(First Look)  ರಿಲೀಸ್ ಮಾಡಿತ್ತು. ವಿಚಿತ್ರ ವೇಷದಲ್ಲಿ ಅಮಿತಾಭ್ ಕಾಣಿಸಿಕೊಂಡಿದ್ದು ಪಾತ್ರದ ಬಗ್ಗೆ ಕುತೂಹಲ ಮೂಡಿಸಿತ್ತು.

    ಈ ನಡುವೆ ಕಲ್ಕಿ (Kalki) ಸಿನಿಮಾದ ಫೋಟೋವೊಂದು ಲೀಕ್ ಆಗಿತ್ತು. ಸಿನಿಮಾದ ಪ್ರಮುಖ ಗೆಟಪ್ ಒಳಗೊಂಡಿದ್ದ ಆ ಫೋಟೋವನ್ನು ಯಾರು ಲೀಕ್ ಮಾಡಿದ್ದಾರೆ ಎಂದು ನಿರ್ಮಾಣ ಸಂಸ್ಥೆ ತಲೆಕೆಡಿಸಿಕೊಂಡಿತ್ತು. ಸಿನಿಮಾ ರಿಲೀಸ್ ಗೂ ಮುನ್ನ ಹೀಗೆ ಪಾತ್ರಗಳ ಬಗ್ಗೆ ರಿವಿಲ್ ಮಾಡುತ್ತಿರುವುದು ಕೋಪ ತರಿಸಿತ್ತು. ಇದೀಗ ನಿರ್ಮಾಪಕರು ಈ ಕುರಿತು ಪೊಲೀಸ್ ಠಾಣೆಯ ಮೆಟ್ಟಿಲು ಏರಿದ್ದಾರೆ.

    ಕಲ್ಕಿ ಸಿನಿಮಾದ ವಿಎಫ್ಎಕ್ಷ್  ಮಾಡುತ್ತಿರುವ ಸಂಸ್ಥೆಯೇ ಫೋಟೋವನ್ನು ಲೀಕ್ ಮಾಡಿದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಸಂಸ್ಥೆಯ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಿರ್ಮಾಪಕರು ಪೊಲೀಸ್ ಮೊರೆ ಹೋಗಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.

     

    ಭಾರೀ ಬಜೆಟ್ ನಲ್ಲಿ ರೆಡಿ ಆಗಿರುವ ಕಲ್ಕಿ ಚಿತ್ರಕ್ಕೆ ಈ ಹಿಂದೆ ಪ್ರಾಜೆಕ್ಟ್ ಕೆ (Project K) ಹೆಸರಿನಿಂದ ಕರೆಯಲಾಗುತ್ತಿತ್ತು. ಸಿನಿಮಾದ ಗ್ಲಿಂಪ್ಸ್  (Glimpse) ರಿಲೀಸ್ ದಿನ ಅಸಲಿ ಹೆಸರನ್ನು ಅನೌನ್ಸ್ ಮಾಡಲಾಯಿತು. ಈ ಗ್ಲಿಂಪ್ಸ್ ನಲ್ಲಿ ಸಾಕಷ್ಟು ಸಂಗತಿಗಳನ್ನು ನಿರ್ದೇಶಕರು ಹೇಳಿದ್ದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಭಾರತೀಯ ಸಿನಿಮಾ ಬಯೋಪಿಕ್ : ರಾಜಮೌಳಿ ಘೋಷಿಸಿದ ಚಿತ್ರ

    ಭಾರತೀಯ ಸಿನಿಮಾ ಬಯೋಪಿಕ್ : ರಾಜಮೌಳಿ ಘೋಷಿಸಿದ ಚಿತ್ರ

    ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ (Rajamouli) ಹೊಸ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ಈ ಸಿನಿಮಾ ಭಾರತೀಯ ಸಿನಿಮಾ ರಂಗದ ಬಯೋಪಿಕ್ ಆಗಿರಲಿದೆಯಂತೆ. ಹಾಗಾಗಿ ಚಿತ್ರಕ್ಕೆ ‘ಮೇಡ್ ಇನ್ ಇಂಡಿಯಾ’ (Made in India) ಎಂದು ಹೆಸರಿಟ್ಟಿದ್ದಾರೆ. ಇಂದು ಸಿನಿಮಾದ ಟೈಟಲ್ ಅನ್ನು ರಾಜಮೌಳಿ ಸೋಷಿಯಲ್ ಮೀಡಿಯಾ ಮೂಲಕ ಬಿಡುಗಡೆ ಮಾಡಿದ್ದಾರೆ.

    ಈ ಸಿನಿಮಾವನ್ನು ರಾಜಮೌಳಿ ಅವರ ಪುತ್ರ ಎಸ್.ಎಸ್.ಕಾರ್ತಿಕೇಯ (Karthikeya)ಮತ್ತು ವರುಣ್ ಗುಪ್ತಾ ನಿರ್ಮಾಣ ಮಾಡುತ್ತಿದ್ದು, ನಿತಿನ್ ಕಕ್ಕರ್ ನಿರ್ದೇಶನ ಮಾಡುತ್ತಿದ್ದಾರೆ. ರಾಜಮೌಳಿ ಅವರ ಸಹಕಾರದೊಂದಿಗೆ ಈ ಸಿನಿಮಾ ತಯಾರಾಗಲಿದೆ. ಭಾರತೀಯ ಸಿನಿಮಾ ರಂಗ ಬೆಳೆದು ಬಂದ ರೀತಿಯನ್ನು ಈ ಚಿತ್ರದಲ್ಲಿ ತೋರಿಸಲು ಹೊರಟಿದ್ದಾರೆ ನಿರ್ದೇಶಕರು.

    ಈ ನಡುವೆ ರಾಜಮೌಳಿ ಅವರು ತಮ್ಮ ಕನಸಿನ ಯೋಜನೆ ಬಗ್ಗೆ ಬಾಯ್ಬಿಟ್ಟಿದ್ದಾರೆ. RRR ನಂತರ ಮಹಾಭಾರತ (Mahabharatha) ಕುರಿತಾಗಿ ಸಿನಿಮಾ ಮಾಡುವ ಬಗ್ಗೆ ರಾಜಮೌಳಿ ರಿಯಾಕ್ಟ್ ಮಾಡಿದ್ದಾರೆ. ಭಾರತೀಯ ಸಿನಿಮಾರಂಗದಲ್ಲಿ ತಮ್ಮದೇ ಭಿನ್ನ ಶೈಲಿಯಲ್ಲಿ ಗುರುತಿಸಿಕೊಂಡವರು ರಾಜಮೌಳಿ. ಒಂದು ಸಿನಿಮಾ ಮಾಡ್ತಿದ್ದಾರೆ ಅಂದರೆ ಸಾಕಷ್ಟು ವರ್ಷಗಳ ತಯಾರಿಯೊಂದಿಗೆ ರಾಜಮೌಳಿ ಅಖಾಡಕ್ಕೆ ಇಳಿಯುತ್ತಾರೆ. ಹಾಗಾಗಿ ಸಕ್ಸಸ್‌ಫುಲ್ ನಿರ್ದೇಶಕನಾಗಿ ರಾಜಮೌಳಿ ಗುರುತಿಸಿಕೊಂಡಿದ್ದಾರೆ.

    ಖ್ಯಾತ ನಿರ್ದೇಶಕ ರಾಜಮೌಳಿಗೆ ಕಾರ್ಯಕ್ರಮವೊಂದರಲ್ಲಿ ಮಹಾಭಾರತವನ್ನ ತೆರೆಯ ಮೇಲೆ ತರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಿಮ್ಮ ಕನಸಿನ ಪ್ರಾಜೆಕ್ಟ್ ಮಹಾಭಾರತ ಕುರಿತಾಗಿ ಈ ಹಿಂದೆ ಮಾತನಾಡಿದ್ದೀರಿ, ಒಂದು ವೇಳೆ ನೀವು ಚಿತ್ರವನ್ನು ಮಾಡುವುದಾದರೆ ಎಷ್ಟು ಭಾಗಗಳಲ್ಲಿ ಚಿತ್ರವನ್ನು ತೆರೆಗೆ ತರುತ್ತಿರಾ? ಎಂಬ ಪ್ರಶ್ನೆಯನ್ನು ಕೇಳಲಾಗಿತ್ತು.

     

    ಇದಕ್ಕೆ ಉತ್ತರಿಸಿದ ರಾಜಮೌಳಿ, ಈ ಚಿತ್ರವನ್ನು ಮಾಡುವ ಮೊದಲು ದೇಶದ ಎಲ್ಲ ಆವೃತ್ತಿಗಳಲ್ಲಿ ಸಿಗುವ ಮಹಾಭಾರತವನ್ನು ಓದಿ ಅರ್ಥೈಸಿಕೊಳ್ಳಲು ಕನಿಷ್ಠ ಒಂದು ವರ್ಷ ಸಮಯಾವಕಾಶ ಬೇಕು. ಅದನ್ನು ಫಿಲ್ಮ್ ರೀತಿ ಮಾಡಬೇಕಾದರೆ ಕನಿಷ್ಠ 10 ಭಾಗಗಳನ್ನಾಗಿ ಮಾಡಬೇಕು. ಆದರೆ ನಿಖರವಾಗಿ ಎಷ್ಟು ಆಗುತ್ತದೆ ಅಂತ ಗೊತ್ತಿಲ್ಲ ಎಂದಿದ್ದಾರೆ. ಇನ್ನು, ಈ ವಿಷಯವನ್ನು ಕೇಳಿದ್ದೆ ತಡ ಅಭಿಮಾನಿಗಳು, ರಾಜ್‌ಮೌಳಿ ನಿರ್ದೇಶನದಲ್ಲಿ ಹೇಗೆ ಮಹಾಭಾರತ ಮೂಡಿ ಬರಬಹುದೆಂದು ಎಂದು ಎದುರು ನೋಡ್ತಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ಆರ್‌ಆರ್‌ಆರ್’ ಪಾರ್ಟ್ 2 ಬರುತ್ತಾ? ಸೀಕ್ರೆಟ್ ಬಿಚ್ಚಿಟ್ಟ ರಾಜಮೌಳಿ ತಂದೆ

    ‘ಆರ್‌ಆರ್‌ಆರ್’ ಪಾರ್ಟ್ 2 ಬರುತ್ತಾ? ಸೀಕ್ರೆಟ್ ಬಿಚ್ಚಿಟ್ಟ ರಾಜಮೌಳಿ ತಂದೆ

    ಕ್ಷಿಣ ಭಾರತದ ಸ್ಟಾರ್ ನಿರ್ದೇಶಕ ರಾಜಮೌಳಿ ಡೈರೆಕ್ಷನ್‌ನಲ್ಲಿ ‘ಆರ್‌ಆರ್‌ಆರ್’ (RRR) ಸಿನಿಮಾ ಗೆದ್ದು ಬೀಗಿರೋದು ಗೊತ್ತೆ ಇದೆ. ಚಿತ್ರದ ನಾಟು ನಾಟು (Naatu Naatu) ಹಾಡಿಗೆ ಆಸ್ಕರ್ ಗೌರವ ಕೂಡ ದಕ್ಕಿದೆ. ಇಷ್ಟೆಲ್ಲಾ ಸಾಧನೆ ಮಾಡಿರೋ ಟೀಮ್ ಕಡೆಯಿಂದ ಆರ್‌ಆರ್‌ಆರ್ ಪಾರ್ಟ್ 2 (Part 2) ಬಗ್ಗೆ ಫ್ಯಾನ್ಸ್ ನಿರೀಕ್ಷೆ ಮಾಡ್ತಿದ್ದಾರೆ. ಅಷ್ಟಕ್ಕೂ ‘ಆರ್‌ಆರ್‌ಆರ್’ ಸೀಕ್ವೆಲ್ ಬರುತ್ತಾ ಎಂಬುದನ್ನ ರಾಜಮೌಳಿ (Rajamouli) ತಂದೆ ಮಾಹಿತಿ ಬಿಚ್ಚಿಟ್ಟಿದ್ದಾರೆ.

    rrr rajamouli

    ರಾಮ್ ಚರಣ್- ಜ್ಯೂ.ಎನ್‌ಟಿಆರ್ (Jr.Ntr) ಜೋಡಿ ಸಿನಿಮಾದಲ್ಲಿ ಕಮಾಲ್ ಮಾಡಿದ್ರು. ಆಲಿಯಾ ಭಟ್ (Alia Bhatt) ಕೂಡ ಸಾಥ್ ನೀಡಿದ್ದರು. ರಾಜಮೌಳಿ ನಿರ್ದೇಶನಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಈ ಟ್ರಯೋ ಜೋಡಿಯನ್ನ ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾಯ್ತಿದ್ದಾರೆ. ಈ ಬಗ್ಗೆ ವಿಜಯೇಂದ್ರ ಪ್ರಸಾದ್ ಮೌನ ಮುರಿದಿದ್ದಾರೆ. ಇದನ್ನೂ ಓದಿ:ಜಿಮ್‌ ವರ್ಕೌಟ್‌ನೇ ಪಾರ್ಟಿ ಎಂದ ನಟಿ- ಸಮಂತಾ ಬಾಲಿ ಡೈರೀಸ್

    ‘ಆರ್‌ಆರ್‌ಆರ್’ ಸೀಕ್ವೆಲ್‌ನ ರಾಜಮೌಳಿ (Rajamouli) ನಿರ್ದೇಶನ ಮಾಡುತ್ತಾರೆ ಎಂಬುದನ್ನು ಈಗಲೇ ಹೇಳಲು ಸಾಧ್ಯವಿಲ್ಲ. ಈ ಪ್ರಶ್ನೆಗೆ ಹೌದು, ಇಲ್ಲ ಎಂಬ ಎರಡೂ ಉತ್ತರ ನೀಡಬಹುದು. ಈ ಚಿತ್ರದ ಸೀಕ್ವೆಲ್ ಬಗ್ಗೆ ಅವರ ಬಳಿ ಮಾತನಾಡಿದ್ದೇನೆ. ಸಿನಿಮಾದ ಕಥೆ ಆಫ್ರಿಕಾದಲ್ಲಿ ಸಾಗುತ್ತದೆ ಎಂದು ವಿಜಯೇಂದ್ರ ಪ್ರಸಾದ್(Vijendra Prasad) ತಿಳಿಸಿದ್ದಾರೆ.

    ಸದ್ಯ ಮಹೇಶ್ ಬಾಬು (Mahesh Babu) ಅವರು ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾ ಮುಗಿದ ಮೇಲೆ ಅವರ ಜೊತೆ ರಾಜಮೌಳಿ ಸಿನಿಮಾ ಮಾಡುತ್ತಿದ್ದಾರೆ. ಆ ಸಿನಿಮಾ ಮುಗಿಯುವವರೆಗೂ ಅವರು ಸೀಕ್ವೆಲ್ ಬಗ್ಗೆ ಆಲೋಚಿಸುವುದಿಲ್ಲ. ಒಂದೊಮ್ಮೆ ಅವರಿಗೆ ಕಥೆ ಇಷ್ಟವಾದರೆ ಜೂನಿಯರ್ ಎನ್‌ಟಿಆರ್ ಹಾಗೂ ರಾಮ್ ಚರಣ್ (Ramcharan) ಕಾಲ್‌ಶೀಟ್ ಸಿಗಬೇಕು ಎಂದು ಅವರು ಹೇಳಿದ್ದಾರೆ. ಒಟ್ನಲ್ಲಿ ಆರ್‌ಆರ್‌ಆರ್ ಪಾರ್ಟ್ ಮಾಡಿದ್ದರು ಮಾಡಬಹುದು ಸದ್ಯಕ್ಕೆ ಈ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ರಾಜಮೌಳಿ ತಂದೆ ತಿಳಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜಮೌಳಿ ಡೈರೆಕ್ಷನ್, ರಾಮ್ ಚರಣ್ ಜೊತೆ ಆಕ್ಟಿಂಗ್- ಪ್ರಭಾಸ್ ಕೊಟ್ರು ಗುಡ್ ನ್ಯೂಸ್

    ರಾಜಮೌಳಿ ಡೈರೆಕ್ಷನ್, ರಾಮ್ ಚರಣ್ ಜೊತೆ ಆಕ್ಟಿಂಗ್- ಪ್ರಭಾಸ್ ಕೊಟ್ರು ಗುಡ್ ನ್ಯೂಸ್

    ಪ್ರಭಾಸ್- ರಾಮ್‌ಚರಣ್ (Ramcharan) ಇಬ್ರೂ ಸೂಪರ್‌ಸ್ಟಾರ್‌ಗಳು.. ಇಡೀ ದೇಶಾದ್ಯಂತ ಫ್ಯಾನ್ಸ್ ಕ್ರೇಜ್ ಹೆಚ್ಚಿರೋ ನಾಯಕರು. ಇಮ್ಯಾಜಿನ್ ಮಾಡ್ಕೊಳ್ಳಿ..ಒಂದ್ವೇಳೆ ಇಬ್ರೂ ಒಟ್ಟಿಗೆ ಅಭಿನಯಿಸಿಬಿಟ್ಟರೆ ಅಲ್ಲಿ ಸುನಾಮಿ ಸುಂಟರಾಗಾಳಿಯಂಥಹ ಕಂಡು ಕೇಳರಿಯದ ನಿರೀಕ್ಷೆ ಫಿಕ್ಸು. ಹಾಗಂತ ಇದು ಬರೀ ಇಮ್ಯಾಜಿನೇಶನ್ ಅಲ್ಲ ವಾಸ್ತವ. ಭವಿಷ್ಯದಲ್ಲಿ ಹೀಗೂ ಆಗುತ್ತೆ ಅನ್ನೋ ಪ್ರಾಮಿಸ್ ಮಾಡಿದ್ದಾರೆ ಪ್ರಭಾಸ್..? ಯಾಕೆ ಎಲ್ಲಿ ಹೇಳಿದ್ರು.?

    ಇಂಥದ್ದೊಂದು ಮಹಾ ಸುದ್ದಿ ಅಭಿಮಾನಿಗಳ ಕಿವಿಗೆ ಬಿದ್ದರೆ ಸಾಕು ಅಭಿಮಾನಿಗಳ ಕೌತುಕ ಅಳೆಯಲು ಸಾಧ್ಯವಾಗೋದಿಲ್ಲ. ಇದು ಅಂತೆಕಂತೆ ವಿಚಾರವಂತೂ ಅಲ್ಲವೇ ಅಲ್ಲ. ಖುದ್ದು ಸಿನಿಮಾ ಮಾಡುವವರೇ ಹೇಳಿಬಿಟ್ಟರೆ…! ಮುಂದಾಗೋದೇನು..? ಹೌದು.. ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ಇನ್ನೋರ್ವ ಸೂಪರ್ ಸ್ಟಾರ್ ರಾಮ್‌ಚರಣ್ (Ram Charan) ಜೊತೆ ತೆರೆ ಹಂಚಿಕೊಳ್ಳುವ ಸುದ್ದಿಯನ್ನ ಬಿಚ್ಚಿಟ್ಟಿದ್ದಾರೆ.

    ಇಲ್ಲಿಯವರೆಗೆ ನಾವು ಅನೇಕ ಬಿಗ್‌ಸ್ಟಾರ್‌ಗಳ ಅದ್ಭುತ ಕಾಂಬಿನೇಶನ್ ನೋಡಿದ್ದೇವೆ, ಆದರೆ ಪ್ರಭಾಸ್ (Prabhas) ಜೊತೆ ರಾಮ್‌ಚರಣ್ (Ramcharan) ಅಭಿನಯಿಸಿದ್ದನ್ನ ನೋಡಿಲ್ಲ. ಈ ಘಳಿಗೆಯೂ ಕೂಡಿಬಂದಿದೆ. ಮುಂದೊಮ್ಮೆ ಪ್ರಭಾಸ್ ಹಾಗೂ ರಾಮ್‌ಚರಣ್ ತೆರೆಯಲ್ಲಿನ ಜುಗಲ್‌ಬಂದಿ ಪಕ್ಕಾ ಎಂಬುದನ್ನ ಖುದ್ದು ಪ್ರಭಾಸ್ ಬಾಯಿಂದ ಕೇಳಿ ಟಾಲಿವುಡ್ (Tollywood) ಫ್ಯಾನ್ಸ್ ಈಗಾಗ್ಲೇ ಹಬ್ಬ ಶುರುಮಾಡ್ಕೊಂಡಿದ್ದಾರೆ.

    ರಾಜಮೌಳಿಯ ಬಾಹುಬಲಿ…ಹಾಗೂ ಆರ್‌ಆರ್‌ಆರ್ ಸಿನಿಮಾ ಬಳಿಕ ಪ್ರಭಾಸ್ ಹಾಗೂ ರಾಮ್‌ಚರಣ್ ದೇಶದ ಸೂಪರ್‌ಸ್ಟಾರ್‌ಗಳ ಪಟ್ಟಿಯಲ್ಲಿ ಸೇರಿದವರು. ಬಾಹುಬಲಿ ಬಳಿಕ ಸತತ ಪ್ಲಾಪ್ ಕೊಟ್ಟರೂ ಪ್ರಭಾಸ್ ಈಗಲೂ ಸೂಪರ್ ಸ್ಟಾರ್ ಅಂದ್ರೆ ಅಭಿಮಾನದ ಪರಾಕಾಷ್ಟೆ ಹೇಗಿರಬೇಡ ಇವರ ಮೇಲೆ..ಇನ್ನು ರಾಮ್‌ಚರಣ್ ಆರ್‌ಆರ್‌ಆರ್ ಮೂಲಕ ವಿಶ್ವದಾದ್ಯಂತ ಗುರುತಿಸಿಕೊಂಡಿದ್ದಾರೆ. ಇಂತಹ ದಿಗ್ಗಜರು ಸೇರಿ ಚಿತ್ರ ಮಾಡಿದರೆ ಅದರಷ್ಟು ನಿರೀಕ್ಷೆ. ಇದನ್ನೂ ಓದಿ:ಸುದೀಪ್-ಕುಮಾರ್ ಕಾಲ್‌ಶೀಟ್ ಕದನದ ನಡುವೆ ಚಂದ್ರಚೂಡ್‌ಗೆ ಸೂರಪ್ಪ ಬಾಬು ಕ್ಲಾಸ್

    ಕಲ್ಕಿ (Kalki) ಸಿನಿಮಾದ ಟೈಟಲ್ ಲಾಂಚ್ ವೇಳೆ ಕೇಳಲಾದ ಪ್ರಶ್ನೆಗೆ ಪ್ರಭಾಸ್ ಉತ್ತರಿಸಿ. ಪಕ್ಕಾ ಒಟ್ಟಿಗೆ ಸಿನಿಮಾ ಮಾಡ್ತೀವಿ ಎಂದಿದ್ದಾರೆ. ಪ್ರಭಾಸ್ ಗ್ರೀನ್ ಸಿಗ್ನಲ್ ಕೊಟ್ಟಾದ್ಮೇಲೆ ನಿರ್ದೇಶಕರಿಗೆ ಕಥೆ ಬರೆಯಲು ಹಿಂಟ್ ಕೊಟ್ಟಂತಾಗಿದೆ. ಆದರೆ ಪ್ರಭಾಸ್ ಫ್ಯಾನ್ಸ್ ಮಾತ್ರಾ ರಾಜಮೌಳಿ ಕಡೆ ಬೆರಳು ತೋರಿಸುತ್ತಿದ್ದಾರೆ. ಇಬ್ಬರನ್ನೂ ಸೇರಿಸಿ ಸರಿಯಾದ ಪಾತ್ರ ಹೆಣೆಯುವ ಸಾಮರ್ಥ್ಯ ರಾಜಮೌಳಿಗೆ ಮಾತ್ರವೇ ಇದೆ ಎಂದು ಹೇಳುತ್ತಿದ್ದಾರೆ. ಈಗಾಗ್ಲೇ ಇಬ್ಬರ ಜುಗಲ್‌ಬಂದಿ ಇಮ್ಯಾಜಿನೇಶನ್ ಟೀಸರ್‌ಗಳ ಅಬ್ಬರ ಸೋಶಿಯಲ್ ಮೀಡಿಯಾದಲ್ಲಿ ಅಬ್ಬರಿಸುತ್ತಿದೆ. ಒಟ್ನಲ್ಲಿ ಪ್ರಭಾಸ್ ಅಂತೂ ಒಂದು ಸುಳಿವು ಕೊಟ್ಟಿದ್ದಾರೆ. ಸದ್ಯಕ್ಕೆ ಈ ಪ್ರಾಜೆಕ್ಟ್ ಯಾವಾಗ್ ಶುರುವಾಗುತ್ತೆ ಅನ್ನೋದೇ ಪ್ರಶ್ನೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಮಿಳುನಾಡು ಸೌಂದರ್ಯವನ್ನು ಹಾಡಿ ಹೊಗಳಿದ ರಾಜಮೌಳಿ

    ತಮಿಳುನಾಡು ಸೌಂದರ್ಯವನ್ನು ಹಾಡಿ ಹೊಗಳಿದ ರಾಜಮೌಳಿ

    ಕೆಲವು ತಿಂಗಳು ವಿದೇಶ ಪ್ರವಾಸದಲ್ಲಿದ್ದ ಖ್ಯಾತ ನಿರ್ದೇಶಕ ರಾಜಮೌಳಿ (Rajamouli), ಅಲ್ಲಿಂದ ವಾಪಸ್ಸಾದ ಮೇಲೆ ಸ್ವದೇಶಿ ಪ್ರವಾಸ (Tour) ಮಾಡಿದ್ದಾರೆ. ಅದರಲ್ಲೂ ಹಲವು ದಿನಗಳ ಕಾಲ ತಮಿಳು ನಾಡು (Tamil Nadu) ಸುತ್ತಿ ಬಂದಿದ್ದಾರೆ. ಆ ವೇಳೆಯ ಅನುಭವವನ್ನು ಅವರು ಸಣ್ಣದೊಂದು ವಿಡಿಯೋ (Video) ಮೂಲಕ ಜಗತ್ತಿಗೆ ಪರಿಚಯಿಸಿದ್ದಾರೆ.

    ಜೂನ್ ವೇಳೆಯಲ್ಲಿ ಅವರು ಕುಟುಂಬ ಸಮೇತ ತಮಿಳು ನಾಡು ಸುತ್ತಿದ್ದಾರೆ. ಈ ಟೂರ್ ಪಕ್ಕಾ ಪ್ಲ್ಯಾನ್ ಮಾಡಿದ್ದು ಅವರ ಮಗಳಂತೆ. ಹಾಗಾಗಿ ಇಂಥದ್ದೊಂದು ಪ್ರವಾಸವನ್ನು ಮಾಡಿಸಿದ್ದಕ್ಕಾಗಿ ಮಗಳಿಗೆ ಧನ್ಯವಾದಗಳನ್ನು ಹೇಳಿದ್ದಾರೆ ರಾಜಮೌಳಿ. ಅಚ್ಚರಿಯ ಸಂಗತಿ ಅಂದರೆ, ಅವರು ತಮಿಳು ನಾಡು ಪ್ರವಾಸಿ ತಾಣಗಳನ್ನು ನೋಡಿದ್ದು ಬೇರೆ ರೀತಿ ಎನ್ನುವುದು ವಿಶೇಷ. ಇದನ್ನೂ ಓದಿ:ತಮನ್ನಾ ಭಾರತೀಯ ಚಿತ್ರರಂಗದ ಶಕೀರಾ: ಸೆಕ್ಸಿ ಸ್ಟೆಪ್ ಹಾಕಿದ್ದಕ್ಕೆ ಬಿರುದು

    ತಮಿಳು ನಾಡಿನ ಪ್ರಸಿದ್ಧ ಪ್ರವಾಸಿ ಮತ್ತು ಧಾರ್ಮಿಕ ಸ್ಥಳಗಳಿಗೆ ರಾಜಮೌಳಿ ಅಂಡ್ ಟೀಮ್ ಭೇಟಿ ಮಾಡಿದೆ. ರಾಮೇಶ್ವರಂ, ಶ್ರೀರಂಗಂ, ಮಧುರೈ, ದಾರಾಸುರಂ, ಕೋಯಿಲ್, ಕನಾಡುಕಥನ್, ದಾರಾಸುರಂ, ತೂತುಕುಡಿ ಸೇರಿದಂತೆ ಹಲವು ಪ್ರವಾಸಿ ಸ್ಥಳಗಳಿಗೆ ರಾಜಮೌಳಿ ಭೇಟಿ ನೀಡಿದ್ದಾರೆ.

    ಚೋಳರು, ಪಾಂಡ್ಯರು ಹಾಗೂ ಇತರ ರಾಜರುಗಳ ವಾಸ್ತುಶಿಲ್ಪಗೆ ರಾಜಮೌಳಿ ಫಿದಾ ಆಗಿದ್ದಾರೆ. ಬರೀ ಸೌಂದರ್ಯದ  ಕುರಿತು ಮಾತ್ರ ಅವರು ಹೇಳಿಕೊಂಡಿಲ್ಲ, ಅಲ್ಲಿನ ಆಹಾರ ಪದ್ಧತಿ ಮತ್ತು ರುಚಿಯ ಬಗ್ಗೆಯೂ ವಿಡಿಯೋದಲ್ಲಿ ಮಾತನಾಡಿದ್ದಾರೆ. ಕುಂಭಕೋಣಂ ಹಾಗೂ ಮುರುಗನ್ ಮೆಸ್ ಹೀಗೆ ಎಲ್ಲದರ ಬಗ್ಗೆಯೂ ಮಾತನಾಡಿದ್ದಾರೆ. ಅಲ್ಲಿನ ಊಟದಿಂದಾಗಿ ಒಂದೇ ವಾರದಲ್ಲಿ ಎರಡ್ಮೂರು ಕೇಜಿ ತೂಕ ಹೆಚ್ಚಿಸಿಕೊಂಡಿರಬಹುದು ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • RRR ಪಾರ್ಟ್ 2 ಫಿಕ್ಸ್ : ರಾಜಮೌಳಿ ನಿರ್ದೇಶನ ಅನುಮಾನ

    RRR ಪಾರ್ಟ್ 2 ಫಿಕ್ಸ್ : ರಾಜಮೌಳಿ ನಿರ್ದೇಶನ ಅನುಮಾನ

    ವಿಶ್ವವೇ ಬೆರಗಿನಿಂದ ನೋಡಿರುವ ರಾಜಮೌಳಿ ನಿರ್ದೇಶನದ ‘ಆರ್.ಆರ್.ಆರ್’ ಸಿನಿಮಾದ ಮುಂದುವರೆದ ಭಾಗ ಬರಲಿದೆ ಎಂದು ಸ್ವತಃ ರಾಜಮೌಳಿ ಅವರ ತಂದೆಯೇ (Vijayendra Prasad) ಮಾಹಿತಿಯನ್ನು ನೀಡಿದ್ದಾರೆ. ಆರ್.ಆರ್.ಆರ್ ಪಾರ್ಟ್ 2 (RRR Part 2) ಸಿನಿಮಾದ ಕಥೆಯು ಸಿದ್ದವಾಗಿದ್ದು, ಯಾರು ಈ ಸಿನಿಮಾವನ್ನು ನಿರ್ದೇಶನ ಮಾಡಲಿದ್ದಾರೆ ಎನ್ನುವುದು ನಿಕ್ಕಿಯಾಗಿಲ್ಲ ಎಂದೂ ಅವರು ಮಾತನಾಡಿದ್ದಾರೆ.

    ರಾಮ್ ಚರಣ್ (Ram Charan), ಜ್ಯೂನಿಯರ್ ಎನ್.ಟಿ.ಆರ್ (Jr NTR) ಮತ್ತು ರಾಜಮೌಳಿ ಕಾಂಬಿನೇಷನ್ ಕಾರಣದಿಂದಾಗಿ ಆರ್.ಆರ್.ಆರ್ ಸಿನಿಮಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿತ್ತು. ಕೀರವಾಣಿ ಸಂಗೀತ ಈ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ತಂದುಕೊಟ್ಟಿತ್ತು. ಅಲ್ಲದೇ, ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನೂ ಈ ಸಿನಿಮಾ ಪಡೆದುಕೊಂಡಿದೆ. ಹೀಗಾಗಿ ಆರ್.ಆರ್.ಆರ್ ಸಿನಿಮಾದ ಮುಂದುವರೆದ ಭಾಗ ಬರುತ್ತದೆ ಎಂದಾಗ ಸಹಜವಾಗಿಯೇ ಕುತೂಹಲ ಮೂಡಿದೆ. ಇದನ್ನೂ ಓದಿ:ಬಿಕಿನಿ ಧರಿಸಿ ಹಾಟ್ ಆಗಿ ಕಾಣಿಸಿಕೊಂಡ ‘ಬಿಗ್ ಬಾಸ್’ ಜಯಶ್ರೀ

    ಈ ಕುರಿತು ಮಾತನಾಡಿರುವ ವಿಜಯೇಂದ್ರ ಪ್ರಸಾದ್, ‘ಕಥೆ ಸಿದ್ದವಾಗಿದೆ. ಆದರೆ, ಈ ಸಿನಿಮಾವನ್ನು ರಾಜಮೌಳಿ ಮಾಡುತ್ತಾರಾ ಅಥವಾ ಹಾಲಿವುಡ್ ನ ನಿರ್ದೇಶಕರು ಮಾಡಲಿದ್ದಾರಾ ಎನ್ನುವುದು ಫೈನಲ್ ಆಗಿಲ್ಲ. ದೊಡ್ಡ ಮಟ್ಟದಲ್ಲೇ ಈ ಸಿನಿಮಾವನ್ನು ನಿರ್ಮಾಣ ಮಾಡುವಂತಹ ತಯಾರಿ ನಡೆದಿದೆ’ ಎಂದಿದ್ದಾರೆ ರಾಜಮೌಳಿ ತಂದೆ.

    ಈಗಾಗಲೇ ರಾಜಮೌಳಿ (Rajamouli) ಹೊಸ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಮಹೇಶ್ ಬಾಬು ಅವರಿಗಾಗಿ ರಾಜಮೌಳಿ ಸಿನಿಮಾ ಮಾಡಬೇಕಿದೆ. ಹೀಗಾಗಿ ಸದ್ಯ ಆರ್.ಆರ್.ಆರ್ ಪಾರ್ಟ್ 2 ಬರುವುದು ಅನುಮಾನ. ಒಂದು ವೇಳೆ ಹಾಲಿವುಡ್ ನಿರ್ದೇಶಕರಿಗೆ ಅವಕಾಶ ಸಿಕ್ಕರೆ ಅತೀ ಶೀಘ್ರದಲ್ಲೇ ಈ ಸಿನಿಮಾದ ಬಗ್ಗೆ ಮತ್ತಷ್ಟು ಅಪ್ ಡೇಟ್ ಸಿಗಬಹುದು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಹೊಸ ಸಿನಿಮಾ ಮುನ್ನ ಫ್ಯಾಮಿಲಿ ಜೊತೆ ರಾಜಮೌಳಿ ಟ್ರಿಪ್

    ಹೊಸ ಸಿನಿಮಾ ಮುನ್ನ ಫ್ಯಾಮಿಲಿ ಜೊತೆ ರಾಜಮೌಳಿ ಟ್ರಿಪ್

    ‘ಆರ್‌ಆರ್‌ಆರ್’ (RRR Film) ಸಿನಿಮಾದ ಸಕ್ಸಸ್ ನಂತರ ರಾಜಮೌಳಿ (Rajamouli), ಮಹೇಶ್ ಬಾಬು ಜೊತೆ ಹೊಸ ಸಿನಿಮಾ ಮಾಡುವ ಬಗ್ಗೆ ಪ್ಲ್ಯಾನ್ ನಡೆಯುತ್ತಿದೆ. ಹೀಗಿರುವಾಗ ಸಿನಿಮಾ ಆರಂಭಕ್ಕೂ ಮುನ್ನವೇ ರಾಜಮೌಳಿ ಅವರು ತಮ್ಮ ಕುಟುಂಬದ ಜೊತೆ ಪ್ರವಾಸಕ್ಕೆ ಹೋಗಿದ್ದಾರೆ. ಈ ಕುರಿತ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

    ಜ್ಯೂ.ಎನ್‌ಟಿಆರ್, ರಾಮ್ ಚರಣ್ (Ram Charan) ನಟನೆಯ ‘ಆರ್‌ಆರ್‌ಆರ್’ (RRR) ಸಿನಿಮಾ ಬಾಕ್ಸಾಫೀಸ್ ಗಲ್ಲಾಪೆಟ್ಟಿಗೆಯಲ್ಲಿ ಶೇಕ್ ಮಾಡಿತ್ತು. ಕೋಟಿ ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಹಿಸ್ಟರಿ ಕ್ರಿಯೇಟ್ ಮಾಡಿತ್ತು. ಆಸ್ಕರ್ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳು ಚಿತ್ರಕ್ಕೆ ಲಭಿಸಿತು. ಇದೀಗ ತಮ್ಮ ಮುಂದಿನ ಚಿತ್ರಕ್ಕೆ ಯೋಜನೆಯನ್ನ ರಾಜಮೌಳಿ ರೂಪಿಸುತ್ತಿದ್ದಾರೆ. ಸಿನಿಮಾ ಕೆಲಸ ಶುರುವಾಗುವ ಮುನ್ನ ತಮಿಳುನಾಡಿನ ತೂತುಕುಡಿಗೆ ಜಕ್ಕಣ್ಣ ಫ್ಯಾಮಿಲಿ ಬೀಡು ಬಿಟ್ಟಿದ್ದಾರೆ.

    ಪ್ರತಿಬಾರಿ ಒಂದು ಸಿನಿಮಾ ಮುಗಿದ ಬಳಿಕ ಫ್ಯಾಮಿಲಿ ಜೊತೆ ರಜೆಯ ಮಜಾ ಸವಿದು ಮತ್ತೆ ಹೊಸ ಸಿನಿಮಾ ಬಗ್ಗೆ ರಾಜಮೌಳಿ ಕೈ ಹಾಕುತ್ತಾರೆ. ಈ ವಿಚಾರವನ್ನು ಸಾಕಷ್ಟು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದಾರೆ. ಸದ್ಯ ಜಕ್ಕಣ್ಣನ ಫ್ಯಾಮಿಲಿ ರೆಸಾರ್ಟ್‌ವೊಂದರಲ್ಲಿ ಬೀಡುಬಿಟ್ಟಿದೆ. ಅಲ್ಲಿ ಗಿಡಗಳನ್ನು ನೆಟ್ಟಿರುವ ಫೋಟೊ, ತೂಗುಯ್ಯಾಲೆಯಲ್ಲಿ ಫ್ಯಾಮಿಲಿ ಜೊತೆ ಜಕ್ಕಣ್ಣ ಇರುವ ಮತ್ತೊಂದು ಫೋಟೂ ವೈರಲ್ ಆಗ್ತಿದೆ. ಇದನ್ನೂ ಓದಿ:ಕಿಚ್ಚನ ಮುಂದಿನ ಚಿತ್ರಕ್ಕೆ ಹೊಸ ನಿರ್ದೇಶಕ: ಅವರನ್ನ ಬಿಟ್ಟು ಇವರಾರು?

    ಮತ್ತೊಂದು ಕಡೆ ಪ್ರಿನ್ಸ್ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಜಕ್ಕಣ್ಣ ಮಾಡಲಿರುವ ಸಿನಿಮಾ ಪ್ರೀ ಪ್ರೊಡಕ್ಷನ್ ಕೆಲಸ ನಡೀತಿದೆ. ಇತ್ತೀಚೆಗೆ ರಾಜಮೌಳಿ ತಂದೆ ಬರಹಗಾರ ವಿಜಯೇಂದ್ರ ಪ್ರಸಾದ್ ಮಾತನಾಡಿ ಜುಲೈ ಅಂತ್ಯದ ವೇಳೆಗೆ ಸ್ಕ್ರಿಪ್ಟ್ ರಾಜಮೌಳಿ ಕೈಗೆ ಕೊಡುತ್ತೇನೆ ಎಂದಿದ್ದಾರೆ. ಸದ್ಯ ಜಕ್ಕಣ್ಣ ವಕೇಷನ್‌ಗೆ ಹೋಗಿರುವುದು ನೋಡಿದರೆ ಶೀಘ್ರದಲ್ಲೇ ಸಿನಿಮಾ ಕೆಲಸ ಆರಂಭಿಸುವ ಸುಳಿವು ಸಿಕ್ತಿದೆ.

    ‘ಗುಂಟೂರು ಖಾರಂ’ ಸಿನಿಮಾ ಕೆಲಸದ ಬಳಿಕ ಮಹೇಶ್ ಬಾಬು- ರಾಜಮೌಳಿ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಸದ್ಯ ಪೂಜಾ ಹೆಗ್ಡೆ ಸಿನಿಮಾದಿಂದ ಹೊರನಡೆದ ಮೇಲೆ ಬೇರೇ ನಟಿಯ ಎಂಟ್ರಿಯಾಗಿದೆ. ಶ್ರೀಲೀಲಾ ಲೀಡ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಾಜಮೌಳಿ ‘ಮಹಾಭಾರತ’ ಮಾಡ್ತಾರೆ- ವಿಜಯೇಂದ್ರ ಪ್ರಸಾದ್ ಗುಡ್ ನ್ಯೂಸ್

    ರಾಜಮೌಳಿ ‘ಮಹಾಭಾರತ’ ಮಾಡ್ತಾರೆ- ವಿಜಯೇಂದ್ರ ಪ್ರಸಾದ್ ಗುಡ್ ನ್ಯೂಸ್

    ಪ್ರಭಾಸ್, ಕೃತಿ ಸನೋನ್ ನಟನೆಯ ‘ಆದಿಪುರುಷ್’ (Adipurush) ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿದೆ. ಚಿತ್ರದ ಬಗ್ಗೆ ಅಭಿಮಾನಿಗಳಿಂದ ಆಕ್ರೋಶ್ ವ್ಯಕ್ತವಾಗಿದೆ. ಆದಿಪುರುಷ್ ಬ್ಯಾನ್ ಮಾಡಿ ಅಂತಾ ಆಗ್ರಹ ಕೂಡ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೇ ಬಾಹುಬಲಿ, ಆರ್‌ಆರ್‌ಆರ್ ಖ್ಯಾತಿಯ ರಾಜಮೌಳಿ ಮಹಾಭಾರತವನ್ನ ಸಿನಿಮಾ ಮಾಡುವುದಾಗಿ ಖ್ಯಾತ ಬರಹಗಾರ ವಿಜಯೇಂದ್ರ ಪ್ರಸಾದ್ ಸಿಹಿಸುದ್ದಿ ನೀಡಿದ್ದಾರೆ. ಇದನ್ನೂ ಓದಿ:ತಮಿಳಿನ ಕ್ಯಾಪ್ಟನ್ ಮಿಲ್ಲರ್ ಶೂಟಿಂಗ್ ಮುಗಿಸಿದ ಶಿವಣ್ಣ

    ಬಾಹುಬಲಿಯಿಂದಾನೇ (Bahubali) ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಗಿದೆ. ಹಾಗೇ ದಕ್ಷಿಣ ಭಾರತದ ಸೂಪರ್‌ಸ್ಟಾರ್‌ಗಳಿಗೂ ಪ್ಯಾನ್ ಇಂಡಿಯಾ ಇಮೇಜ್ ಸಿಕ್ಕಿದೆ. ಸಿನಿಮಾದಿಂದ ಸಿನಿಮಾಗೆ ರಾಜಮೌಳಿ (Rajamouli) ರೇಂಜ್ ಬದಲಾಗುತ್ತಲೇ ಇದೆ. ಈ ಮಧ್ಯೆ ರಾಜಮೌಳಿ ಮಹಾಭಾರತ ಸಿನಿಮಾ ಮಾಡುವ ಬಗ್ಗೆನೂ ಚರ್ಚೆ ಆರಂಭ ಆಗಿದೆ. ಇತ್ತೀಚೆಗಷ್ಟೇ ತೆರೆಕಂಡಿರೋ ಪೌರಾಣಿಕ ಸಿನಿಮಾ ಆದಿಪುರುಷ್ ಫ್ಲಾಪ್ ಆಗಿದೆ. ಇದೇ ಬೆನ್ನಲ್ಲೇ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಮಹಾಭಾರತದ ಬಗ್ಗೆ ಕೆಲವು ಆಸಕ್ತಿಕರ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ವಿಜಯೇಂದ್ರ ಪ್ರಸಾದ್ (Vijendra Prasad) ‘ಮಹಾಭಾರತ’ದ ಬಗ್ಗೆ ಹೇಳಿದ್ದೇನು?

    ರಾಜಮೌಳಿಗೆ ಸಿನಿಮಾಗಳಲ್ಲಿ ಸಾಹಸ ದೃಶ್ಯಗಳನ್ನು ಹೆಚ್ಚು ಇಷ್ಟ. ಹಾಗಾಗಿ ಕಥೆಯಲ್ಲಿ ಹೆಚ್ಚೆಚ್ಚು ಸಾಹಸ ದೃಶ್ಯಗಳನ್ನೇ ಸೃಷ್ಟಿ ಮಾಡುತ್ತೇನೆಂದು ವಿಜಯೇಂದ್ರ ಪ್ರಸಾದ್ ಹೇಳಿದ್ದಾರೆ. ಹಾಗೇ ರಾಜಮೌಳಿ ಬಯಸಿದಂತೆ ಮಹಾಭಾರತ (Mahabharatha) ಸ್ಕ್ರಿಪ್ಟ್ ರೆಡಿ ಮಾಡಿದ್ದೇನೆ ಎಂದು ಹೇಳಿದ್ದಾರೆ. ಇದೇ ವೇಳೆ ಬಾಹುಬಲಿ ಸ್ಕ್ರಿಪ್ಟ್ ಮಾಡುವಾಗ ರಾಜಮೌಳಿ ತಂದೆ ಬಳಿ ಹೇಳಿಕೊಂಡ ಮಾತನ್ನು ನೆನಪಿಸಿಕೊಂಡಿದ್ದಾರೆ. ಬಾಹುಬಲಿ ಸ್ಕ್ರಿಪ್ಟ್ ಬರೆಯುತ್ತಿದ್ದಾಗ, ಒಂದು ರಾಜಮೌಳಿ ಬಂದು ನನ್ನ ಬಳಿ ಕೇಳಿದ್ದರು. ಅಪ್ಪ ನಾವ್ಯಾಕೆ ಈ ಸಿನಿಮಾ ಮಾಡುತ್ತಿದ್ದೇವೆ ಅಂತ ಗೊತ್ತಾ? ಅಂತ ಕೇಳಿದ್ದರು. ಆಗ ನಾನು ಯಾಕೆ ಎಂದು ಕೇಳಿದೆ. ಈ ಸಿನಿಮಾದಲ್ಲಿ ರಾಜರು, ಅರಮನೆಗಳು, ರಾಣಿಯರು, ಎದುರಾಳಿಗಳು ಹಾಗೆಯೇ ಅದ್ದೂರಿತನ ಎಲ್ಲವೂ ಇದೆ. ಈ ಸಿನಿಮಾ ಮೂಲಕ ಮುಂದಿನ ದಿನಗಳಲ್ಲಿ ನಾನು ಮಹಾಭಾರತವನ್ನು ಮಾಡಲು ಎಷ್ಟು ರೆಡಿಯಿದ್ದೇನೆ ಎಂದು ಪರೀಕ್ಷೆ ಮಾಡಿಕೊಳ್ಳಲು ಮಾಡುತ್ತಿದ್ದೇನೆ ಎಂದು ರಾಜಮೌಳಿ ಹೇಳಿದ್ದನ್ನು ನೆನಪಿಸಿಕೊಂಡಿದ್ದಾರೆ.

    ‘ಬಾಹುಬಲಿ’ ಸಿನಿಮಾ ಮಾಡುವಾಗ ಈ ಸಿನಿಮಾ ಗೆದ್ದರೆ, ಮಹಾಭಾರತ ಸಿನಿಮಾ ಮಾಡುತ್ತೇನೆ ರಾಜಮೌಳಿ ಎಂದಿದ್ದರು ಎಂದು ವಿಜಯೇಂದ್ರ ಪ್ರಸಾದ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ. ದೇವರ ದಯೆಯಿಂದ ಆ ಸಿನಿಮಾ ಸಿನಿಮಾ ಆಗುತ್ತೆ. ರಾಜಮೌಳಿ ಸಿನಿಮಾ ಮಾಡುತ್ತಾರೆ ಎಂದು ರಾಜಮೌಳಿ ತಂದೆ ಅಪ್‌ಡೇಟ್ ನೀಡಿದ್ದಾರೆ.

    ಬಾಹುಬಲಿ, ಬಾಹುಬಲಿ 2, ಆರ್‌ಆರ್‌ಆರ್ ಸಿನಿಮಾಗಳನ್ನ ಕೊಟ್ಟಿರೋ ರಾಜಮೌಳಿ ಅವರ ಮಹಾಭಾರತ ಮಾಡುವ ಬಗ್ಗೆ ಸಿಹಿಸುದ್ದಿ ನೀಡಿರೋದು ಫ್ಯಾನ್ಸ್ಗೆ ಖುಷಿ ಕೊಟ್ಟಿದೆ. ಒಂದು ಸಿನಿಮಾಗೆ 3-4 ವರ್ಷ ಸಮಯ ಮೀಸಲಿಡುವ ರಾಜಮೌಳಿ ಅವರ ಸಿನಿಮಾ ಮೇಲಿನ ಪ್ರೀತಿ ಅಭಿಮಾನಿಗಳಿಗೆ ತಿಳಿದಿದೆ ಹಾಗಾಗಿ ‘ಮಹಾಭಾರತ’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ.

  • ಬಾಹುಬಲಿ ಚಿತ್ರಕ್ಕಾಗಿ ನಿರ್ದೇಶಕ ರಾಜಮೌಳಿ ತಂದಿದ್ದರಂತೆ ₹400 ಕೋಟಿ ಸಾಲ ಬಡ್ಡಿಗೆ

    ಬಾಹುಬಲಿ ಚಿತ್ರಕ್ಕಾಗಿ ನಿರ್ದೇಶಕ ರಾಜಮೌಳಿ ತಂದಿದ್ದರಂತೆ ₹400 ಕೋಟಿ ಸಾಲ ಬಡ್ಡಿಗೆ

    ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ‘ಬಾಹುಬಲಿ’ (Baahubali) ಚಿತ್ರಗಳು ಇತಿಹಾಸ ಬರೆದಿವೆ. ಬಾಕ್ಸ್ ಆಫೀಸಿನಲ್ಲಿ ಕೋಟಿ ಕೋಟಿ ಬಾಚಿವೆ. ಬಾಹುಬಲಿ 1 ಮತ್ತು ಬಾಹುಬಲಿ 2 ಮಾಡಿದ ದಾಖಲೆ ಅಷ್ಟಿಷ್ಟಲ್ಲ. ಒಂದು ವೇಳೆ ಈ ಸಿನಿಮಾ ಸೋತಿದ್ದರೆ ನಿರ್ದೇಶಕ ರಾಜಮೌಳಿ ಯಾವ ಸ್ಥಿತಿಯಲ್ಲಿ ಇರುತ್ತಿದ್ದರು ಎನ್ನುವ ಅಂದಾಜನ್ನು ನಟ ರಾಣಾ ದುಗ್ಗುಬಾಟಿ ಬಿಚ್ಚಿಟ್ಟಿದ್ದಾರೆ. ಬಹುಶಃ ಆ ನೋವಿನಿಂದ ಈಗಲೂ ರಾಜಮೌಳಿ (Rajamouli) ಬರುವುದಕ್ಕೆ ಅಸಾಧ್ಯವಾಗಿರುತ್ತಿತ್ತು ಎಂದು ಅವರು ಹೇಳಿದ್ದಾರೆ.

    ಮಾಧ್ಯಮವೊಂದರ ಸಂವಾದಲ್ಲಿ ಮಾತನಾಡಿರುವ ದಗ್ಗುಬಾಟಿ (Rana Daggubati), ‘ಬಾಹುಬಲಿ ಚಿತ್ರ ಮಾಡಲು ರಾಜಮೌಳಿ ಹೆಚ್ಚಿನ ಮೊತ್ತದ ಬಡ್ಡಿಯೊಂದಿಗೆ ನಾಲ್ಕು ನೂರು ಕೋಟಿ ರೂಪಾಯಿ ಸಾಲ ತಂದಿದ್ದರು ಎಂಬ ಅಂಶವನ್ನು ಬಿಚ್ಚಿಟ್ಟಿದ್ದಾರೆ. ಶೇಕಡಾ 24ರ ಬಡ್ಡಿಯಲ್ಲಿ ಆ ಹಣವನ್ನು ಸಾಲವಾಗಿ ತಂದಿದ್ದರು ಎಂದು ಹೇಳುವ ಮೂಲಕ ಬೆಚ್ಚಿ ಬೀಳಿಸಿದ್ದಾರೆ. ಬಾಹುಬಲಿ ಸಿನಿಮಾ ಮಾಡುವಾಗಿನ ಆರ್ಥಿಕ ತೊಂದರೆಯನ್ನು ರಾಜಮೌಳಿ ಹೇಳಿದ್ದರು. ಆದರೆ, ಎಷ್ಟು ಎನ್ನುವುದನ್ನು ಬಹಿರಂಗ ಪಡಿಸಿರಲಿಲ್ಲ. ಇದನ್ನೂ ಓದಿ:ವರುಣ್‌ ತೇಜ್-‌ ನಟಿ ಲಾವಣ್ಯ ಎಂಗೇಜ್‌ಮೇಟ್ ಡೇಟ್ ಫಿಕ್ಸ್

    ‘ಸಿನಿಮಾದವರು ಹಣ ತರಬೇಕು ಎಂದರೆ ಎರಡೇ ಹಾದಿಗಳಿವೆ. ಒಂದು ಆಸ್ತಿಯನ್ನು ಅಡ ಇಡುವುದು ಅಥವಾ ಮಾರುವುದು. ಮತ್ತೊಂದು ಬಡ್ಡಿ ತೆತ್ತು ಸಾಲ ತರುವುದು. ಈ ಎರಡೂ ಅಪಾಯದ ಮಾರ್ಗಗಳು. ಆದರೆ ವಿಧಿಯಿಲ್ಲ. ಸಿನಿಮಾ ಗೆದ್ದರೆ ಬಚಾವ್ ಆಗುತ್ತೇವೆ. ಸೋತರೆ ಅಷ್ಟೇ’ ಎಂದು ರಾಣಾ ದಗ್ಗುಬಾಟಿ ಹೇಳಿದ್ದಾರೆ.

    ಬಾಹುಬಲಿ ಸಿನಿಮಾ ಹಿಟ್ ಆಯಿತು. ಹಾಗಾಗಿ ಎಲ್ಲರೂ ಬಚಾವ್ ಆದೆವು ಎಂದು ಹೇಳಿರುವ ರಾಣಾ, ಸೋತಿದ್ದರೆ ಅದನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಈಗಲೂ ಆ ಸನ್ನಿವೇಶಗಳು ನನ್ನ ಎದುರಿಗೆ ಬಂದರೆ, ಭಯವಾಗುತ್ತದೆ ಎಂದಿದ್ದಾರೆ ರಾಣಾ. ಈ ಮೂಲಕ ಬಾಹುಬಲಿ ಚಿತ್ರಕ್ಕೆ ರಾಜಮೌಳಿಯು ತಂದಿದ್ದ ಸಾಲದ ಮೊತ್ತವನ್ನು ಅವರು ಬಹಿರಂಗ ಪಡಿಸಿದ್ದಾರೆ

  • ‘ಮೇಮ್ ಫೇಮಸ್’ ಮೆಚ್ಚಿದ ರಾಜಮೌಳಿ : ಲಹರಿ ಫಿಲ್ಮ್ಸ್ ನಿರ್ಮಾಣದ ತೆಲುಗಿನ 2ನೇ ಚಿತ್ರವೂ ಹಿಟ್

    ‘ಮೇಮ್ ಫೇಮಸ್’ ಮೆಚ್ಚಿದ ರಾಜಮೌಳಿ : ಲಹರಿ ಫಿಲ್ಮ್ಸ್ ನಿರ್ಮಾಣದ ತೆಲುಗಿನ 2ನೇ ಚಿತ್ರವೂ ಹಿಟ್

    ನ್ನಡದ ಹೆಸರಾಂತ ಲಹರಿ ಸಂಸ್ಥೆಯ ಲಹರಿ ಫಿಲ್ಮ್ಸ್ (Lahari Films)  ಹಾಗೂ ಚಾಯ್ ಬಿಸ್ಕೆಟ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಾಣ ಮಾಡಿದ್ದ ತೆಲುಗಿನ (Telugu) ‘ಮೇಮ್ ಫೇಮಸ್’ (Meme Famous) ಸಿನಿಮಾ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಬಾಹುಬಲಿ ಖ್ಯಾತಿಯ ರಾಜಮೌಳಿ (Rajamouli), ಖ್ಯಾತನಟ ಮಹೇಶ್ ಬಾಬು, ರಾಜಮೌಳಿ ಪುತ್ರ ಎಸ್.ಎಸ್ ಕಾರ್ತೀಕೇಯ ಕೂಡ ಸಿನಿಮಾ ಮೆಚ್ಚಿ ಮಾತನಾಡಿದ್ದಾರೆ.

    ‘ತುಂಬಾ ದಿನಗಳ ನಂತರ ಥಿಯೇಟರ್‍ ಹೋಗಿ ಸಿನಿಮಾವೊಂದನ್ನು ಎಂಜಾಯ್ ಮಾಡಿದೆ. ಪ್ರತಿಭಾವಂತ ಟೀಮ್ ಸೇರಿಕೊಂಡು ಮಾಡಿರುವ ಸಿನಿಮಾ ಮೇಮ್ ಫೇಮಸ್. ಸಹಜ ಅಭಿನಯ, ಹೊಸದಾದ ನಿರೂಪಣೆ. ಸಖತ್ ಮನರಂಜನೆಯನ್ನು ಈ ಸಿನಿಮಾ ನೀಡಿದೆ. ಈ ಸಿನಿಮಾದ ನಟ ಹಾಗೂ ನಿರ್ದೇಶಕರಿಗೆ ಉತ್ತಮ ಭವಿಷ್ಯವಿದೆ. ಅದರಲ್ಲೂ ಅಂಜಿ ಮಾಮಾ ತುಂಬಾ ಕಾಡುತ್ತಾನೆ’ ಎಂದು ರಾಜಮೌಳಿ ಟ್ವೀಟ್ ಮಾಡಿದೆ.

    ಸ್ಟಾರ್ ನಟ ಮಹೇಶ್ ಬಾಬು (Mahesh Babu) ಕೂಡ ಸಿನಿಮಾ ಬಗ್ಗೆ ಮೆಚ್ಚಿ ಟ್ವೀಟ್ ಮಾಡಿದ್ದು, ‘ಈಗ ತಾನೆ ಮೇಮ್ ಫೇಮಸ್ ಸಿನಿಮಾ ನೋಡಿದೆ. ಪ್ರತಿಭಾವಂತ ಪಡೆಯೇ ಸಿನಿಮಾದಲ್ಲಿದೆ. ಬರಹಗಾರರು, ನಿರ್ದೇಶಕ, ನಟ ಎಲ್ಲರೂ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಹಿನ್ನೆಲೆ ಸಂಗೀತ, ದೃಶ್ಯ ಎಲ್ಲವೂ ಸಿನಿಮಾಗೆ ಮತ್ತಷ್ಟು ಶಕ್ತಿ ತುಂಬಿವೆ. ಪ್ರತಿಭಾವಂತರೇ ಈ ಸಿನಿಮಾಗಾಗಿ ಒಂದಾಗಿದ್ದಾರೆ’ ಎಂದು ಬರೆದಿದ್ದಾರೆ. ಇದನ್ನೂ ಓದಿ:ಸರಕಾರದ ಮುಂದೆ ಹಳೆ ಬೇಡಿಕೆ ಇಟ್ಟ ರಿಷಬ್ ಶೆಟ್ಟಿ

    ಯೂಟ್ಯೂಬ್ ಮೂಲಕ ಮನೆಮಾತಾಗಿದ್ದ ಸುಮತ್ ಪ್ರಭಾಸ್ ನಟನೆಯ ಸಿನಿಮಾ ಇದಾಗಿದ್ದು, ಕನ್ನಡದ ಹೆಸರಾಂತ ಸಂಗೀತ ಸಂಸ್ಥೆ ಲಹರಿ ಸಂಸ್ಥೆಯ ಚಂದ್ರು ಮನೋಹರನ್ (Chandru Manoharan) ಹಾಗೂ ಚಾಯ್ ಬಿಸ್ಕೆಟ್ ಫಿಲ್ಮ್ಸ್ ಜೊತೆಯಾಗಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಲಹರಿ ಫಿಲ್ಮಸ್ ನಿಂದ ಮೂಡಿ ಬರುತ್ತಿರುವ ತೆಲುಗಿನ ಎರಡನೇ ಸಿನಿಮಾವಾಗಿದೆ. ಈ ಹಿಂದೆ ‘ರೈಟರ್ ಪದ್ಮಭೂಷಣ್’ ಸಿನಿಮಾವನ್ನು ಲಹರಿ ಸಂಸ್ಥೆ ತೆಲುಗಿನಲ್ಲಿ ನಿರ್ಮಾಣವಾಗಿತ್ತು. ಹತ್ತು ದಿನದಲ್ಲಿ ಈ ಸಿನಿಮಾ 10.1 ಕೋಟಿ ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಅಚ್ಚರಿ ಮೂಡಿಸಿತ್ತು.

    ಮೂರು ದಿನಗಳ ಹಿಂದೆ ರಿಲೀಸ್ ಆಗಿರುವ ‘ಮೇಮ್ ಫೇಮಸ್’ ಸಿನಿಮಾ ಕೂಡ ತೆಲುಗು ಚಿತ್ರೋದ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೂರೇ ದಿನಕ್ಕೆ 3.1 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಹಾಗಾಗಿ ತೆಲುಗು ಚಿತ್ರೋದ್ಯಮ ಅನೇಕರು ಸಿನಿಮಾ ಮೆಚ್ಚಿ ಮಾತನಾಡುತ್ತಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಚಿತ್ರತಂಡದ ಬಗ್ಗೆ ಅಭಿಮಾನದ ನುಡಿಗಳನ್ನು ಬರೆಯುತ್ತಿದ್ದಾರೆ.