ಮುಂಬೈ: ರಾಜಮೌಳಿ ನಿರ್ದೇಶನದ ಬಾಹುಬಲಿ ಬಾಕ್ಸ್ ಆಫೀಸ್ ಕಲೆಕ್ಷನ್ ದಾಖಲೆ ಮುಂದುವರಿದಿದ್ದು, ರಿಲೀಸ್ ಆದ ಮೂರನೇ ದಿನದಲ್ಲಿ 500 ಕೋಟಿ ರೂ. ಅಧಿಕ ಕಲೆಕ್ಷನ್ ಮಾಡಿದೆ.
2015ರಲ್ಲಿ ಬಿಡುಗಡೆಯಾದ ಬಾಹುಬಲಿ ಭಾಗ ಒಂದು ಬಾಕ್ಸ್ ಆಫೀಸ್ ನಲ್ಲಿ ಒಟ್ಟು 650 ಕೋಟಿ ರೂ. ಕಲೆಕ್ಷನ್ ಮಾಡಿದ್ದರೆ, ಭಾಗ ಎರಡು ಮೂರೇ ದಿನದಲ್ಲಿ 540 ಕೋಟಿ ಕಲೆಕ್ಷನ್ ಮಾಡಿದೆ ಎಂದು ಸಿನಿ ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಲ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
.
ವಿಶ್ವದೆಲ್ಲೆಡೆ 9 ಸಾವಿರಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಾಣುತ್ತಿರುವ ಬಾಹುಬಲಿ ಮೊದಲ ದಿನ ಭಾರತದಲ್ಲಿ 121 ಕೋಟಿ ರೂ. ಕಲೆಕ್ಷನ್ ಮಾಡಿದರೆ, ಒಟ್ಟು 217 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಎರಡನೇ ದಿನ ಭಾರತದಲ್ಲಿ 285 ಕೋಟಿ ರೂ. ಕಲೆಕ್ಷನ್ ಮಾಡಿದರೆ, ಒಟ್ಟು 382 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ರಮೇಶ್ ಬಲ ತಿಳಿಸಿದ್ದಾರೆ.
ಅಂದಾಜು 250 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಬಾಹುಬಲಿ ಈಗಾಗಲೇ ಸ್ಯಾಟಲೈಟ್ ಮತ್ತು ವಿತರಣೆ ಹಕ್ಕು ಮೂಲಕ 500 ಕೋಟಿ ರೂ. ಹಣವನ್ನು ಪಡೆದುಕೊಂಡಿದೆ.

ಮೂರು ದಿನಗಳಲ್ಲಿ 500 ಕೋಟಿ ರೂ. ಗಳಿಸಿದ ಬಾಹುಬಲಿ ಸೋಮವಾರವೂ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅಷ್ಟೇ ಅಲ್ಲದೇ ಮೇ 1 ಕಾರ್ಮಿಕರ ದಿನಾಚರಣೆಯಾಗಿರುವುದರಿಂದ ಉದ್ಯೋಗಿಗಳಿಗೆ ರಜೆ ಸಿಕ್ಕಿದ್ದು ಮತ್ತಷ್ಟು ಕಲೆಕ್ಷನ್ ಆಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ
ವಿದೇಶದಲ್ಲಿ ಹಿಟ್ ಆಗಿದ್ದು ಹೇಗೆ?
ಅಮೆರಿಕದಲ್ಲಿ ಉದ್ಯೋಗ ಮಾಡುತ್ತಿರುವ ಕೆಲ ಭಾರತೀಯರು ಸಂಪೂರ್ಣ ಸ್ಕ್ರೀನ್ ಗಳನ್ನು ಬುಕ್ ಮಾಡಿದ್ದು, ಕುಟುಂಬ ಸಮೇತರವಾಗಿ ಬಾಹುಬಲಿಯನ್ನು ವೀಕ್ಷಿಸುತ್ತಿದ್ದಾರೆ. ಹೀಗಾಗಿ ಅಮೆರಿಕದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ವಾರಾಂತ್ಯದಲ್ಲಿ ಅಮೆರಿಕ ಕೆನಡಾದಲ್ಲಿ 65 ಕೋಟಿ ರೂ., ಯುಎಇ 24 ಕೋಟಿ ರೂ., ಆಸ್ಟ್ರೇಲಿಯಾ 6.8 ಕೋಟಿ ರೂ., ಇಂಗ್ಲೆಂಡ್ 3.2 ಕೋಟಿ ರೂ., ನ್ಯೂಜಿಲೆಂಡ್ 1.5 ಕೋಟಿ ರೂ. ಕಲೆಕ್ಷನ್ ಮಾಡಿದೆ. ಬಹರೈನ್ 1.38 ಕೋಟಿ ರೂ., ಕತಾರ್ 1.42 ಕೋಟಿ ರೂ., ಒಮನ್ 97 ಲಕ್ಷ ರೂ. ಕಲೆಕ್ಷನ್ ಮಾಡಿದೆ.
ಹಿಂದಿ ಕಲೆಕ್ಷನ್ ಎಷ್ಟು?
ಏ. 28 – 41 ಕೋಟಿ ರೂ.
ಏ. 29 – 42 ಕೋಟಿ ರೂ.
ಏ. 30 – 46 ಕೋಟಿ ರೂ.
ಒಟ್ಟು 129 ಕೋಟಿ ರೂ.
ಎಸ್‍ಎಸ್ ರಾಜಮೌಳಿ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ರಮ್ಯಕೃಷ್ಣ, ಅನುಷ್ಕ ಶೆಟ್ಟಿ, ಸತ್ಯರಾಜ್, ನಾಸೀರ್, ತಮನ್ನಾ ಅಭಿನಯಿಸಿದ್ದಾರೆ. ತೆಲುಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಯಲ್ಲಿ ಏಪ್ರಿಲ್ 28ರಂದು ಬಿಡುಗಡೆಯಾಗಿದೆ.

ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ಒಂದೇ ದಿನ 10 ದಾಖಲೆಗಳನ್ನು ಬರೆದ ಬಾಹುಬಲಿ-2: ಇಲ್ಲಿದೆ ಪೂರ್ಣ ಪಟ್ಟಿ

ಇದನ್ನೂ ಓದಿ: ಮೊದಲ ದಿನವೇ ನೂರು ಕೋಟಿ ಬಾಚಿದ ಬಾಹುಬಲಿ: ಕರ್ನಾಟಕದಲ್ಲಿ ಎಷ್ಟು ಕಲೆಕ್ಷನ್? ಉಳಿದ ಕಡೆ ಎಷ್ಟು?

ಇದನ್ನೂ ಓದಿ: ಬೆಂಗ್ಳೂರಿನಲ್ಲಿ 1200 ರೂ, ಆಂಧ್ರದಲ್ಲಿ ಬಾಹುಬಲಿ-2 ಚಿತ್ರದ 1 ಟಿಕೆಟ್ ಬೆಲೆ ಕೇಳಿದ್ರೆ ಶಾಕ್ ಆಗ್ತೀರ

ಇದನ್ನೂ ಓದಿ: ಟಿಕೆಟ್ ಬುಕ್ಕಿಂಗ್‍ನಲ್ಲೂ ಹೊಸ ದಾಖಲೆ: 24 ಗಂಟೆಯಲ್ಲಿ ಎಷ್ಟು ಬಾಹುಬಲಿ ಟಿಕೆಟ್ ಮಾರಾಟವಾಗಿದೆ ಗೊತ್ತಾ?
ಇದನ್ನೂ ಓದಿ: ಕಟ್ಟಪ್ಪ ಬಾಹುಬಲಿಯನ್ನ ಕೊಂದಿದ್ದು ಏಕೆ? – ಮಿಲಿಯನ್ ಡಾಲರ್ ಪ್ರಶ್ನೆಗೆ ಇಲ್ಲಿದೆ ಉತ್ತರ