Tag: rajamarthanda film

  • ಅಣ್ಣನ ಸಮಾಧಿ ಮೇಲೆ ಮಗಳನ್ನು ಆಟವಾಡಿಸಿದ ಧ್ರುವ ಸರ್ಜಾ

    ಅಣ್ಣನ ಸಮಾಧಿ ಮೇಲೆ ಮಗಳನ್ನು ಆಟವಾಡಿಸಿದ ಧ್ರುವ ಸರ್ಜಾ

    ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ಅವರು ಅಣ್ಣ ಚಿರು ಸರ್ಜಾ (Chiru Sarja) ಸಮಾಧಿ ಪಕ್ಕ ಮಲಗಿರುವ ವಿಡಿಯೋವೊಂದು ಇತ್ತೀಚಿಗೆ ವೈರಲ್ ಆಗಿತ್ತು. ಈ ಬೆನ್ನಲ್ಲೇ ಮತ್ತೊಂದು ವಿಶೇಷ ವಿಡಿಯೋವೊಂದನ್ನ ಸ್ವತಃ ಧ್ರುವ ಸರ್ಜಾ ಶೇರ್ ಮಾಡಿದ್ದಾರೆ. ಅಣ್ಣನ ಸಮಾಧಿ ಮೇಲೆ ಮಗಳನ್ನು (Daughter) ಆಟವಾಡಿಸುತ್ತಿರುವ ವಿಡಿಯೋವನ್ನ ಸೋಶಿಯಲ್‌ ಮೀಡಿಯಾದಲ್ಲಿ ಶೇರ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಕಿಚ್ಚನ 50ನೇ ಚಿತ್ರಕ್ಕೆ ‘ಕಾಂತಾರ’ ಹೀರೋ ಆ್ಯಕ್ಷನ್ ಕಟ್

    ಚಿರು ಸರ್ಜಾ ಅಗಲಿ 3 ವರ್ಷಗಳು ಕಳೆದಿದೆ. ಅಣ್ಣ ಅಗಲಿಕೆಯ ನೋವು ಇನ್ನೂ ಧ್ರುವಗೆ ಮಾಸಿಲ್ಲ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ಅಣ್ಣನ ಸಮಾಧಿ ಮೇಲೆ ಮುದ್ದು ಮಗಳನ್ನ ಧ್ರುವ ಆಟ ಆಡಿಸುತ್ತಾ ಇರುವ ವಿಡಿಯೋ ಮನ ಕಲಕುವಂತಿದೆ. ವಿಡಿಯೋ ನೋಡಿ ಖುಷಿ ಪಡಬೇಕಾ? ವಿಧಿಯಾಟಕ್ಕೆ ಹಿಡಿ ಶಾಪ ಹಾಕಬೇಕಾ ಅಂತಿದ್ದಾರೆ ಅಭಿಮಾನಿಗಳು.

    ಧ್ರುವ ಪತ್ನಿ ಪ್ರೇರಣಾ (Prerana) ಸೀಮಂತ ಶಾಸ್ತ್ರ (Baby Shower) ಇತ್ತೀಚಿಗೆ ಅದ್ದೂರಿಯಾಗಿ ನಡೆಯಿತು. ಆಗ ಮಗಳಿಗೆ ಪ್ರೇರಣಾ ಚಿರು ಫೋಟೋವನ್ನ ತೋರಿಸಿ ಮಾತನಾಡುತ್ತಿದ್ದರು. ಅಂದಿನ ಆ ದೃಶ್ಯ ಕೂಡ ಸಖತ್ ವೈರಲ್ ಆಗಿತ್ತು.

    ಅಕ್ಟೋಬರ್ 6ರಂದು ಧ್ರುವ ಸರ್ಜಾ ಹುಟ್ಟುಹಬ್ಬದಂದು ಚಿರು ಸರ್ಜಾ ನಟನೆಯ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ (Rajamartanda Film) ರಿಲೀಸ್ ಆಗುತ್ತಿದೆ. ಚಿರು- ಮೇಘನಾ ಪುತ್ರ ರಾಯನ್ (Rayan) ಕೂಡ ನಟಿಸಿದ್ದಾರೆ. ಚಿರು ಪಾತ್ರಕ್ಕೆ ಇಡೀ ಸಿನಿಮಾ ಧ್ರುವ ಸರ್ಜಾ ಡಬ್ಬಿಂಗ್ ಮಾಡಿದ್ದಾರೆ. ಚಿತ್ರದ ಮೇಲಿನ ನಿರೀಕ್ಷೆ ಬೆಟ್ಟದಷ್ಟಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆ್ಯಕ್ಷನ್ ಪ್ರಿನ್ಸ್ ಬರ್ತ್‌ಡೇಯಂದು ರಿಲೀಸ್ ಆಗಲಿದೆ ಚಿರು ಸರ್ಜಾ ನಟನೆಯ ಕೊನೆಯ ಸಿನಿಮಾ

    ಆ್ಯಕ್ಷನ್ ಪ್ರಿನ್ಸ್ ಬರ್ತ್‌ಡೇಯಂದು ರಿಲೀಸ್ ಆಗಲಿದೆ ಚಿರು ಸರ್ಜಾ ನಟನೆಯ ಕೊನೆಯ ಸಿನಿಮಾ

    ನ್ನಡ ಚಿತ್ರರಂಗದ ಯುವ ಸಾಮ್ರಾಟ್ ಚಿರು ಸರ್ಜಾ (Chiranjeevi Sarja) ಅವರು ನಿಧನರಾಗಿ 3 ವರ್ಷವಾಗಿದೆ. ಅವರ ಅಗಲಿಕೆಯ ನೋವು ಸರ್ಜಾ ಕುಟುಂಬ ಮತ್ತು ಫ್ಯಾನ್ಸ್‌ಗೆ ಇನ್ನೂ ಕಾಡ್ತಿದೆ. ಹೀಗಿರುವಾಗ ಚಿರು ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಹೀರೋ ಧ್ರುವ ಸರ್ಜಾ (Dhruva Sarja) ಹುಟ್ಟುಹಬ್ಬದಂದು (Birthday) ಚಿರು ಸರ್ಜಾ ನಟಿಸಿದ ಕೊನೆಯ ಸಿನಿಮಾ ರಾಜಮಾರ್ತಾಂಡ ಸಿನಿಮಾ ಬೆಳ್ಳಿತೆರೆಗೆ ಅಪ್ಪಳಿಸುತ್ತಿದೆ.

    ಅಕ್ಟೋಬರ್ 6ರಂದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹುಟ್ಟುಹಬ್ಬವಿದೆ. ತಮ್ಮನ ಹುಟ್ಟುಹಬ್ಬಂದು ಅಣ್ಣನ ಕೊನೆಯ ಸಿನಿಮಾ ಬಿಡುಗಡೆಗೆ ಸಿದ್ಧತೆಗಳು ನಡೆಯುತ್ತಿವೆ. ಚಿರಂಜೀವಿ ಸರ್ಜಾ ಕೊನೆಯ ಸಿನಿಮಾ ‘ರಾಜಮಾರ್ತಾಂಡ’ ಅಕ್ಟೋಬರ್ 6ರಂದು ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕ ಹಾಗೂ ನಿರ್ದೇಶಕರು ನಿರ್ಧಾರ ಮಾಡಿದ್ದಾರೆ. ಇದನ್ನೂ ಓದಿ:ಇಂಟರ್‌ನೆಟ್ ಬೆಂಕಿ ಹಚ್ಚಿದ ಸಂಯುಕ್ತಾ ಹೆಗ್ಡೆ ಬಿಕಿನಿ ಫೋಟೋಸ್

    ಚಿರಂಜೀವಿ ಸರ್ಜಾ ಅಗಲುವ ಮುನ್ನ ‘ರಾಜಮಾರ್ತಾಂಡ’ ಸಿನಿಮಾದಲ್ಲಿ ನಟಿಸುತ್ತಿದ್ದರು. ಈ ಸಿನಿಮಾ ಶೂಟಿಂಗ್ ಮುಕ್ತಾಯವಾಗಿದ್ದರೂ, ಇನ್ನೂ ಪೋಸ್ಟ್ ಪ್ರೊಡಕ್ಷನ್ ಕೆಲಸ ಬಾಕಿಯಿತ್ತು. ಅಲ್ಲದೆ ಡಬ್ಬಿಂಗ್ ಕೂಡ ಆಗಿರಲಿಲ್ಲ. ಚಿರು ಅಗಲಿದ ಬಳಿಕ ಉಳಿಸಿ ಹೋದ ಕೆಲಸಗಳನ್ನು ತಾನು ಪೂರ್ಣಗೊಳಿಸುವುದಾಗಿ ಧ್ರುವ ಹೇಳಿದ್ದರು. ಅದರಂತೆಯೇ ಚಿರು ದೃಶ್ಯಗಳಿಗೆ ಧ್ರುವ ಸರ್ಜಾ ಡಬ್ಬಿಂಗ್ ಮಾಡಿಕೊಟ್ಟಿದ್ದರು. ಇದನ್ನೂ ಓದಿ:ಇಂಟರ್‌ನೆಟ್ ಬೆಂಕಿ ಹಚ್ಚಿದ ಸಂಯುಕ್ತಾ ಹೆಗ್ಡೆ ಬಿಕಿನಿ ಫೋಟೋಸ್

    ‘ರಾಜಮಾರ್ತಾಂಡ’ (Rajamartanda) ಒಂದು ಮಾಸ್ ಸಿನಿಮಾ. ಚಿರಂಜೀವಿ ಸರ್ಜಾ ಈ ಸಿನಿಮಾ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಧ್ರುವ ಸರ್ಜಾ ಧ್ವನಿಯಲ್ಲಿ ಚಿರು ನಟನೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ಈಗ ಅಭಿಮಾನಿಗಳ ಪಾಲಿಗೆ ಒಲಿದು ಬಂದಿದೆ. ಚಿರುಗೆ ನಾಯಕಿಯರಾಗಿ ದೀಪ್ತಿ ಸಾತಿ, ಮೇಘಶ್ರೀ ನಟಿಸಿದ್ದಾರೆ.

    ಈ ಸಿನಿಮಾದ ಮೂಲಕ ಚಿರು ಸರ್ಜಾ- ಮೇಘನಾ ರಾಜ್ (Meghana Raj) ಪುತ್ರ ರಾಯನ್ (Rayan) ಕೂಡ ಪರಿಚಯ ಆಗುತ್ತಿದ್ದಾರೆ. ಈ ಬಗ್ಗೆ ನಟಿ ಮೇಘನಾ ಅವರೇ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಚಿರು ಸಿನಿಮಾ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ

    ಚಿರು ಸಿನಿಮಾ ಬಗ್ಗೆ ಮೌನ ಮುರಿದ ಧ್ರುವ ಸರ್ಜಾ

    ನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ ಚಿರು ಸರ್ಜಾ 2020ರಲ್ಲಿ ಅಗಲಿದ್ದರು. ಅವರು ನಟಿಸಿರುವ ಕೊನೆಯ ಸಿನಿಮಾ `ರಾಜಮಾರ್ತಾಂಡ’ (Rajamarthanda) ಮುಂದಿನ ವರ್ಷ ತೆರೆಗೆ ಅಪ್ಪಳಿಸಲಿದೆ. ಚಿರು ಕೊನೆ ಚಿತ್ರಕ್ಕೆ ಡಬ್ಬಿಂಗ್ ಮಾಡುವ ಮೂಲಕ ಧ್ರುವ ಸರ್ಜಾ (Druva sarja) ಸಾಥ್ ನೀಡಿದ್ದಾರೆ. ಚಿರು ನಟಿಸಿರುವ ಸಿನಿಮಾ ಮೇಲೆ ಧ್ರುವಾಗಿರುವ ಪ್ರೀತಿ, ಕಮೀಟ್‌ಮೆಂಟ್ ಬಗ್ಗೆ ಪ್ರಥಮ್ ಮಾತನಾಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಚಿರು ಸಿನಿಮಾ ಬಗ್ಗೆ ಧ್ರುವಾ ಸರ್ಜಾ  ಮೌನ ಮುರಿದಿದ್ದಾರೆ.

    ಚಿರು ಕಡೆಯ ಸಿನಿಮಾ `ರಾಜಮಾರ್ತಾಂಡ’ ನೋಡಲು ಅಭಿಮಾನಿಗಳು ಕಾತರದಿಂದ ಕಾಯ್ತಿದ್ದಾರೆ. ಹೀಗಿರುವಾಗ ಚಿರು ನಿಧನದ ಮುನ್ನ ಈ ಚಿತ್ರ ಕಂಪ್ಲೀಟ್ ಆಗಿತ್ತು. ಚಿರು ಪಾತ್ರದ ಡಬ್ಬಿಂಗ್ ಒಂದೇ ಬಾಕಿಯಿತ್ತು. ಅದರ ಜವಾಬ್ದಾರಿಯನ್ನ ಧ್ರುವ ಸರ್ಜಾ ಹೊತ್ತಿದ್ದಾರೆ. ಅಣ್ಣನ ಸಿನಿಮಾವೆಂದು ಪ್ರೀತಿಯಿಂದ ಡಬ್ಬಿಂಗ್ ಮಾಡಿ ಕೊಡ್ತಿದ್ದಾರೆ. ಈ ಬಗ್ಗೆ ಪ್ರಥಮ್ ಕೂಡ ಬಾಯ್ಬಿಟ್ಟಿದ್ದಾರೆ. ಇದನ್ನೂ ಓದಿ: ನನ್ನ- ಮಹೇಶ್ ಬಾಬು ನಡುವಿನ ಜಗಳಕ್ಕೆ ಕಾರಣ ಯಾರು ಎಂದು ಬಿಚ್ಚಿಟ್ಟ ನಮ್ರತಾ ಶಿರೋಡ್ಕರ್

    ನಿನ್ನೆ ಚಿರಂಜೀವಿ ಸರ್ಜಾ ಅಣ್ಣವ್ರ `ರಾಜಮಾರ್ತಾಂಡ’ ಸಿನಿಮಾ ಡಬ್ಬಿಂಗ್ ಟೈಂ ಇದು. ಮಧ್ಯಾಹ್ನ ಊಟಕ್ಕೆ ಬನ್ನಿ ಸಿಗೋಣ ಅಂತ ಹೇಳಿದವರು ಡಬ್ಬಿಂಗ್ ಥಿಯೇಟರ್‌ನಿಂದ ಹೊರ ಬಂದಾಗ ರಾತ್ರಿ 7ಗಂಟೆ ಆಗಿತ್ತು. ಡಬ್ಬಿಂಗ್ ಮುಗೀತಾ ಎಂದು ಕೇಳಿದಕ್ಕೆ ನಮ್ ಹೀರೋ ಧ್ರುವ ಸರ್ಜಾ ಹೇಳಿದಿಷ್ಟು. ಇಲ್ಲ ಇನ್ನೊಂದೆರಡು ದಿನ ಇದೆ ಮಾಡಿ ಮುಗಿಸುತ್ತೀನಿ. ಅಣ್ಣ ಇಲ್ಲ ಅಂದಾಗ ಹೇಗೇಗೋ ಮಾಡೋಕಾಗಲ್ಲ.ಕೆಲಸ ಒಪ್ಪಿಕೊಂಡ ಮೇಲೆ ಚೆನ್ನಾಗಿ ಮಾಡ್ಬೇಕು ಬ್ರೋ, ಲೇಟಾದ್ರೂ ನೀಟಾಗಿ ಮಾಡೋಣ ಅಂದಿದ್ದರು ಪ್ರತಿ ದೃಶ್ಯಕ್ಕೂ ಜೀವ ತುಂಬಿದ್ದಕ್ಕೆ ಸಾಕ್ಷಿಯಾಗಿತ್ತು. ಮೂವರು ಹಿರಿಯರನ್ನು ಧ್ರುವ ಅವ್ರಿಗೆ ಪರಿಚಯ ಮಾಡೋಣ ಅಂತ ಕರೆದುಕೊಂಡು ಹೋಗಿದ್ದೆ. ಅದ್ರಲ್ಲಿ ಒಬ್ಬರು ಹಿರಿಯರು ಹೇಳಿದ್ದಿಷ್ಟು. ಪ್ರಥಮ್, ಧ್ರುವ ಸರ್ಜಾ ಅವ್ರು ಒಬ್ಬ ಗೆದ್ದರೆ ಕನಿಷ್ಟ ಸಾವಿರ ಜನ ನೆಮ್ಮದಿಯಾಗಿ ಊಟ ಮಾಡುತ್ತಾರೆ ಅಂತ. ಹೀಗಾಗಿ ನಮ್ಮ ಮೀಟಿಂಗ್ ಇನ್ನೊಂದು ದಿನಕ್ಕೆ ಪೋಸ್ಟ್ ಪೋನ್ ಆಯ್ತು. ಈ ಸ್ಪೆಷಲ್ ಅರ್ಪಣೆ ಚಿರು ಅಣ್ಣನಿಗೆ ಧ್ರುವ ಅವರಿಂದ’ ಎಂದು ಒಳ್ಳೆ ಹುಡುಗ ಪ್ರಥಮ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

    ಪ್ರಥಮ್ ಪೋಸ್ಟ್ ನೋಡಿದ ಬಳಿಕ ಅಭಿಮಾನಿಗಳು, ಅಣ್ಣ ಚಿರು ಮೇಲೆ ಧ್ರುವಾಗಿರುವ ಪ್ರೀತಿ ಕಂಡು ಫಿದಾ ಆಗಿದ್ದಾರೆ. ಸದ್ಯ ಈ ಪೋಸ್ಟ್ ಸಖತ್ ಸದ್ದು ಮಾಡ್ತಿದೆ.

    Live Tv
    [brid partner=56869869 player=32851 video=960834 autoplay=true]

  • ಚಿರಂಜೀವಿ ಸರ್ಜಾ ಕೊನೆಯ ಚಿತ್ರ `ರಾಜಮಾರ್ತಾಂಡ’ ರಿಲೀಸ್‌ ಡೇಟ್‌ ರಿವೀಲ್

    ಚಿರಂಜೀವಿ ಸರ್ಜಾ ಕೊನೆಯ ಚಿತ್ರ `ರಾಜಮಾರ್ತಾಂಡ’ ರಿಲೀಸ್‌ ಡೇಟ್‌ ರಿವೀಲ್

    ಸ್ಯಾಂಡಲ್‌ವುಡ್ ನಟ ಚಿರಂಜೀವಿ ಸರ್ಜಾ ಕಡೆಯದಾಗಿ ನಟಿಸಿರುವ ಸಿನಿಮಾ `ರಾಜಮಾರ್ತಾಂಡ’ ತೆರೆಗೆ ಬರಲು ಸಜ್ಜಾಗಿದೆ. ಚಿರು ನೆನಪಿನಲ್ಲಿರುವ ಭಿಮಾನಿಗಳಿಗೆ ಚಿತ್ರತಂಡ ಗುಡ್ ನ್ಯೂಸ್ ಕೊಟ್ಟಿದೆ. ಈ ವರ್ಷದ ಅಂತ್ಯದೊಳಗೆ ಚಿರು ಸಿನಿಮಾ ಬೆಳ್ಳಿಪರದೆಯಲ್ಲಿ ಮಿಂಚಲು ಸಜ್ಜಾಗಿದೆ.

    ಚಂದನವನದ ಪ್ರತಿಭಾವಂತ ನಟ ಚಿರು ಸರ್ಜಾ ಅಗಲಿ ಎರಡು ವರ್ಷಗಳು ಕಳೆದಿದೆ. ಇದೀಗ ಚಿರು ಅವರನ್ನ ರಾಯನ್ ಸರ್ಜಾ ಮೂಲಕ ನೋಡಿ ಖುಷಿಪಡ್ತಿದ್ದಾರೆ. ಚಿರು ಅಗಲಿಕೆಗೂ ಮುನ್ನ ಕೊನೆದಾಗಿ ನಟಿಸಿದ ಶಿವಕುಮಾರ್ ನಿರ್ಮಾಣದ `ರಾಜಮಾರ್ತಾಂಡ’ ಹಾಗಾಗಿ ಈ ಚಿತ್ರದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಯಿದೆ. ಇದೇ ಸೆಪ್ಟೆಂಬರ್ 2ಕ್ಕೆ ಅದ್ದೂರಿಯಾಗಿ ತೆರೆಯ ಮೇಲೆ ಅಬ್ಬರಿಸಲು `ರಾಜಮಾರ್ತಾಂಡ’ ಸಜ್ಜಾಗಿದೆ. ರಿಲೀಸ್ ಕುರಿತು ನಟ ಧ್ರುವಾ ಸರ್ಜಾ ಟ್ವೀಟ್ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಗ್ರೀನ್ ಇಂಡಿಯಾ ಅಭಿಯಾನಕ್ಕೆ ಸಲ್ಮಾನ್ ಖಾನ್‌ ಸಾಥ್: ಗಿಡ ನೆಡುವಂತೆ ಫ್ಯಾನ್ಸ್‌ಗೆ ಸಲ್ಲು ಮನವಿ

    ಕೆ.ರಾಮ್ ನಾರಾಯಣ್ ನಿರ್ದೇಶನದ `ರಾಜಮಾರ್ತಾಂಡ’ ಚಿತ್ರದ ಮೊದಲ ಟೀಸರ್ ಅನ್ನು ಚಿರು ಮಗ ರಾಯನ್ ರಿಲೀಸ್ ಮಾಡಿದ್ದರು. ಚಿತ್ರದಲ್ಲಿ ಚಿರಂಜೀವಿಗೆ ನಾಯಕಿಯರಾಗಿ ದೀಪ್ತಿ ಸಾತಿ, ಋಷಿಕಾ ರಾಜ್ ಕಾಣಿಸಿಕೊಂಡಿದ್ದಾರೆ. ಚಿರು ಪಾತ್ರಕ್ಕೆ ಧ್ರುವಾ ಸರ್ಜಾ ಧ್ವನಿ ನೀಡಿದ್ದಾರೆ. ಈ ಚಿತ್ರದ ಮತ್ತೊಂದು ವಿಶೇಷ ಅಂದ್ರೆ ಚಿರು ಮಗ ರಾಯನ್ ಕೂಡ ನಟಿಸಿದ್ದಾರೆ.

    ಈಗಾಗಲೇ ಚಿತ್ರದ ಲುಕ್, ಟೀಸರ್ ಮೂಲಕ ಮೋಡಿ ಮಾಡುತ್ತಿರುವ `ರಾಜಮಾರ್ತಾಂಡ’ ಇದೇ ಸೆಪ್ಟೆಂಬರ್ ೨ಕ್ಕೆ ಬೆಳ್ಳಿತೆರೆಯಲ್ಲಿ ಅಬ್ಬರಿಸಲು ರೆಡಿಯಾಗಿದೆ. ಇನ್ನು ಚಿರು ಕೊನೆಯ ಸಿನಿಮಾವಾಗಿರುವ ಕಾರಣ ಚಿತ್ರದ ಮೇಲೆ ಅಭಿಮಾನಿಗಳಿಗೆ ದೊಡ್ಡ ಮಟ್ಟದಲ್ಲಿ ನಿರೀಕ್ಷೆಯಿದೆ.

    Live Tv