Tag: Rajaji Nagar

  • ಪ್ರಜಾಪ್ರಭುತ್ವ ಬಲವರ್ಧನೆಗೆ ಮಾಹಿತಿ ಹಕ್ಕು ಕಾಯ್ದೆ ಪರಿಣಾಮಕಾರಿ ಅಸ್ತ್ರ: ರಾಜ್ಯ ಮಾಹಿತಿ ಆಯುಕ್ತ ಡಾ. ಹರೀಶ್ ಕುಮಾರ್

    ಪ್ರಜಾಪ್ರಭುತ್ವ ಬಲವರ್ಧನೆಗೆ ಮಾಹಿತಿ ಹಕ್ಕು ಕಾಯ್ದೆ ಪರಿಣಾಮಕಾರಿ ಅಸ್ತ್ರ: ರಾಜ್ಯ ಮಾಹಿತಿ ಆಯುಕ್ತ ಡಾ. ಹರೀಶ್ ಕುಮಾರ್

    ಬೆಂಗಳೂರು: ಭಾರತದಲ್ಲಿ ಪ್ರಜಾಪ್ರಭುತ್ವದ ಬಲವರ್ಧನೆಗೆ ಮಾಹಿತಿ ಹಕ್ಕು ಪರಿಣಾಮಕಾರಿಯಾದ ಅಸ್ತ್ರವಾಗಿದ್ದು ಇದು ಜನತಾ ಭಾಗವಹಿಸುವಿಕೆಯನ್ನು ಉತ್ತೇಜಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸಿದೆ ಎಂದು ರಾಜ್ಯ ಮಾಹಿತಿ ಆಯುಕ್ತ ಡಾ.ಹರೀಶ್ ಕುಮಾರ್ (Dr.Harish Kumar) ಹೇಳಿದರು.

    ರಾಜಾಜಿನಗರದ ಎಸ್.ನಿಜಲಿಂಗಪ್ಪ ಕಾಲೇಜಿನಲ್ಲಿ (S Nijalingappa College) ಏರ್ಪಡಿಸಿದ್ದ `ಮಾಹಿತಿ ಹಕ್ಕು ಕಾಯ್ದೆಯ ಮಹತ್ವ’ ವಿಷಯದ ಕುರಿತ ವಿಚಾರಗೋಷ್ಠಿಯಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಅವರು ಮಾತನಾಡಿದರು. ಭಾರತದ ಪ್ರಜಾತಂತ್ರ ಸುಲಭವಾಗಿ ದಕ್ಕಿದ್ದಲ್ಲ ಅದರ ಹಿಂದೆ ಸುದೀರ್ಘ ಹೋರಾಟದ ಕಥಾನಕವೇ ಅಡಗಿದೆ ಎಂದರು. ಇದನ್ನೂ ಓದಿ: ಅಸ್ಸಾಂನಲ್ಲಿ ಇನ್ಮುಂದೆ ಅಸ್ಸಾಮಿ ಭಾಷೆಯಲ್ಲೇ ಸರ್ಕಾರಿ ಆದೇಶ, ಸುತ್ತೋಲೆ: ಸಿಎಂ ಹಿಮಂತ ಬಿಸ್ವ ಶರ್ಮಾ

    ನಾವು ಪ್ರಜಾತಂತ್ರ ರೂಪಿಕೆಯ ಜೊತೆಯಲ್ಲಿಯೇ ಸಾಮಾಜಿಕ ಪ್ರಜಾಪ್ರಭುತ್ವವನ್ನು ಅಳವಡಿಸಿಕೊಳ್ಳುವ ಮುಖಾಂತರ ಅತ್ಯಂತ ಕಟ್ಟ ಕಡೆಯ ಪ್ರಜೆಗೂ ಪ್ರಭುತ್ವವನ್ನು ಸಮಾನವಾಗಿ ಪ್ರಶ್ನಿಸುವ ಅವಕಾಶವನ್ನು ನೀಡಿದ್ದೇವೆ. ಜನತೆ ಮಾಹಿತಿ ಹಕ್ಕು ಕಾಯ್ದೆಯನ್ನು ಪರಿಣಾಮಕಾರಿಯಾಗಿ ಬಳಸಿ ಆಡಳಿತದ ಆಗು ಹೋಗುಗಳಲ್ಲಿ ಭಾಗವಹಿಸಿ ಪ್ರಜಾತಂತ್ರವನ್ನು ಗಟ್ಟಿಗೊಳಿಸಬೇಕು. ಇದರಲ್ಲಿ ವಿದ್ಯಾರ್ಥಿಗಳ ಹಾಗೂ ಯುವಜನರ ಪಾತ್ರ ಹೆಚ್ಚಿದೆ ಎಂದು ತಿಳಿಸಿದರು.

  • ಬೆಂಗಳೂರಿನ ಎಲ್ಲೆಡೆ ರಾಮನವಮಿಯ ಸಂಭ್ರಮ – ಬಾಲರಾಮನ ವೇಷ ತೊಟ್ಟು ಬಂದ ಪುಟಾಣಿಗಳು

    ಬೆಂಗಳೂರಿನ ಎಲ್ಲೆಡೆ ರಾಮನವಮಿಯ ಸಂಭ್ರಮ – ಬಾಲರಾಮನ ವೇಷ ತೊಟ್ಟು ಬಂದ ಪುಟಾಣಿಗಳು

    – ರಾಜಾಜಿನಗರದ ರಾಮಮಂದಿರದಲ್ಲಿ ವಿಶೇಷ ಪೂಜೆ

    ಬೆಂಗಳೂರು: ರಾಜಧಾನಿಯಲ್ಲಿ ಇಂದು ಎಲ್ಲೆಡೆ ರಾಮನವಮಿ(Ram Navami) ಸಂಭ್ರಮ ಮನೆಮಾಡಿದ್ದು, ದೇವಾಲಯಗಳಲ್ಲಿ ರಾಮನಾಮ ಸ್ಮರಣೆ ಮೊಳಗಿದೆ. ರಾಮನವಮಿ ಪ್ರಯುಕ್ತ ರಾಜಾಜಿನಗರದ(RajajiNagara) ರಾಮಮಂದಿರದಲ್ಲಿ ವಿಶೇಷ ಪೂಜೆ-ಪುನಸ್ಕಾರ ನೆರವೇರಿತು.

    ರಾಮನವಮಿ ಪ್ರಯುಕ್ತ ದೇವರಿಗೆ ವಿಶೇಷ ಅಲಂಕಾರ, ಪೂಜೆ ಮಾಡಲಾಗಿದೆ. ಇದೀಗ ಭಕ್ತಗಣ ರಾಮನ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ. ಅಲ್ಲದೇ 63 ಅಡಿ ಎತ್ತರದ ರಾಮಾಂಜನೇಯ ಮೂರ್ತಿ ಕಣ್ತುಂಬಿಕೊಳ್ಳುತ್ತಿದ್ದಾರೆ. ಬೆಳಗ್ಗೆಯಿಂದಲೇ ದೇಗುಲದತ್ತ ಭಕ್ತ ಸಾಗರ ಹರಿದುಬರುತ್ತಿದೆ. ಇದನ್ನೂ ಓದಿ: ಹಸೆಮಣೆ ಏರಬೇಕಿದ್ದ ಮಹಿಳೆ ರೋಲರ್‌ ಕೋಸ್ಟರ್‌ ಆಡುವಾಗ ಕೆಳಗೆ ಬಿದ್ದು ಸಾವು

    ರಥೋತ್ಸವ ಮೆರವಣಿಗೆಗೆ ಬ್ರಹ್ಮರಥವು ಸಜ್ಜಾಗಿ ನಿಂತಿದ್ದು, ದೇವಾಲಯದಲ್ಲಿ ಮಂಡಲ ಹಾಕಿ ವಿಶೇಷ ಪೂಜೆ-ಪುನಸ್ಕಾರ ನೆರವೇರಿಸಲಾಯಿತು. ಇದನ್ನೂ ಓದಿ: ಕಟೀಲ್‌ಗೆ ಮತ್ತೆ ರಾಜಕೀಯ ಸ್ಥಾನಮಾನ ಸಿಗಲಿ: ಮಧೂರು ದೇವಸ್ಥಾನದಲ್ಲಿ ಡಿಕೆಶಿ ಪ್ರಾರ್ಥನೆ

    ಇತ್ತ ಪುಟಾಣಿಗಳು ಬಾಲರಾಮನ ವೇಷ ತೊಟ್ಟು ಬಂದಿದ್ದು, ರಥೋತ್ಸವದಲ್ಲಿ ಎಲ್ಲರ ಗಮನ ಸೆಳೆಯಿತು. ಇನ್ನೂ ಶ್ರೀರಾಮನ ಭವ್ಯ ರಥವು ರಾಜಾಜಿನಗರದ ರಾಜಬೀದಿಯಲ್ಲಿ ಸಾಗಿತು.

  • ವಾಹನ ತಪಾಸಣೆ ಮಾಡ್ತಿದ್ದ ಪೊಲೀಸರಿಗೆ ಕಾರು ಗುದ್ದಿಸಿ ಪರಾರಿ – ಆರೋಪಿ ಅರೆಸ್ಟ್

    ವಾಹನ ತಪಾಸಣೆ ಮಾಡ್ತಿದ್ದ ಪೊಲೀಸರಿಗೆ ಕಾರು ಗುದ್ದಿಸಿ ಪರಾರಿ – ಆರೋಪಿ ಅರೆಸ್ಟ್

    ಬೆಂಗಳೂರು: ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರಿಗೆ ಕಾರು ಗುದ್ದಿಸಿ ಪರಾರಿಯಾಗಿದ್ದ ಆರೋಪಿಯನ್ನು ಮಾಗಡಿ ರೋಡ್ (Magadi Road) ಪೊಲೀಸರು ಬಂಧಿಸಿದ್ದಾರೆ.

    ಆರೋಪಿಯನ್ನು ಮಹಾದೇವ್ ಸ್ವಾಮಿ ಅಲಿಯಾಸ್ ರಾಮಚಾರಿ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಬಾಲ್ಯದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೆ: ‘ಮಾಣಿಕ್ಯ’ ನಟಿ ವರಲಕ್ಷ್ಮೀ ಕಣ್ಣೀರು

    ಮಾ.3ರ ರಾತ್ರಿ ರಾಜಾಜಿನಗರ (Rajaji Nagar) ವೆಸ್ಟ್ ಆಫ್ ಕಾರ್ಡ್ ರೋಡ್‌ನಲ್ಲಿ ಮಾಗಡಿ ರೋಡ್ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದರು. ಇದೇ ಸಮಯದಲ್ಲಿ ಟಾಟಾ ಅಲ್ಟ್ರೋಜ್ ಕಾರಿನಲ್ಲಿ ಆರೋಪಿ ಬರುತ್ತಿದ್ದ. ಈ ವೇಳೆ ಪೊಲೀಸ್ ಸಿಬ್ಬಂದಿ ತಪಾಸಣೆಗಾಗಿ ವಾಹನವನ್ನು ಬದಿಗೆ ಹಾಕುವಂತೆ ಸನ್ನೆ ಮಾಡಿದ್ದರು. ಆಗ ಕಾರು ನಿಲ್ಲಿಸದೇ, ಪೊಲೀಸ್ ಸಿಬ್ಬಂದಿ ಹಾಗೂ ಪೊಲೀಸರ ಗ್ಲಾಮರ್ ಬೈಕ್‌ಗೆ ಗುದ್ದಿ, ಕಾರು ಚಾಲಕ ಪರಾರಿಯಾಗಿದ್ದ. ಪರಿಣಾಮ ಪೊಲೀಸ್ ಸಿಬ್ಬಂದಿ ಹೆಚ್.ಸಿ ಧರೆಪ್ಪ ಹಾಗೂ ಪಿಸಿ ಕಾರ್ತಿಕ್ ಗಾಯಗೊಂಡಿದ್ದರು.

    ಘಟನೆ ಸಂಬಂಧ ಪೊಲೀಸ್ ಸಿಬ್ಬಂದಿ ಮಾಗಡಿ ರೋಡ್ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಜೊತೆಗೆ ಟಾಟಾ ಅಲ್ಟ್ರೋಜ್ ಕಾರನ್ನು ಜಪ್ತಿ ಮಾಡಿದ್ದಾರೆ.ಇದನ್ನೂ ಓದಿ: ನಗದು ಪತ್ತೆ ಕೇಸ್‌ – ತನಿಖಾ ವರದಿ ಬಿಡುಗಡೆ ಮಾಡಿದ ಸುಪ್ರೀಂ; ಆರೋಪ ನಿರಾಕರಿಸಿದ ನ್ಯಾ. ವರ್ಮಾ

     

  • 1,500ರ ಬದಲು 1,000 ಜನರಿಗೆ ಒಂದು ಮತಗಟ್ಟೆ –  ಮಾರ್ಗಸೂಚಿಯಲ್ಲಿ ಏನಿದೆ?

    1,500ರ ಬದಲು 1,000 ಜನರಿಗೆ ಒಂದು ಮತಗಟ್ಟೆ – ಮಾರ್ಗಸೂಚಿಯಲ್ಲಿ ಏನಿದೆ?

    ನವದೆಹಲಿ: ಕೊರೊನಾ ಸಮಯದಲ್ಲಿ ನಡೆಯಲಿರುವ ಎಲ್ಲ ಚುನಾವಣೆಗಳಲ್ಲಿ ಕೋವಿಡ್ 19 ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಚುನಾವಣಾ ಆಯೋಗ ಸೂಚಿಸಿದೆ.

    ಈ ಸಂಬಂಧವಾಗಿ ಕೇಂದ್ರ ಚುನಾವಣಾ ಆಯೋಗ ರಾಜಕೀಯ ಪಕ್ಷಗಳು ಮತ್ತು ಸರ್ಕಾರಿ ಅಧಿಕಾರಿಗಳು ಯಾವೆಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

    ಮಾರ್ಗಸೂಚಿಯಲ್ಲಿ ಏನಿದೆ?
    – 1500ರ ಬದಲು 1000 ಜನರಿಗೆ ಒಂದು ಮತಗಟ್ಟೆ
    – ಮಾಸ್ಕ್ ಹಾಕದೇ ಮತ ಹಾಕಲು ಬಂದವರಿಗೆ ಮಾಸ್ಕ್ ನೀಡಬೇಕು
    – ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಕೋವಿಡ್ 19 ಜಾಗೃತಿ ಭಿತ್ತಿಪತ್ರ ಅಂಟಿಸಬೇಕು
    –  ಚುನಾವಣಾ ಸಿಬ್ಬಂದಿಯೂ ಮತಗಟ್ಟೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು
    – ಪೋಲಿಂಗ್ ಏಜೆಂಟ್ ಹಾಗೂ ಕೌಂಟಿಂಗ್ ಏಜೆಂಟ್ ಉಷ್ಣಾಂಶ ಜಾಸ್ತಿಯಾದರೆ ಇವರನ್ನು ಬದಲಾಯಿಸಲು ಚುನಾವಣಾಧಿಕಾರಿಗೆ ಅಧಿಕಾರ
    – ಮತದಾರ ಮಾಸ್ಕ್ ಜಾರಿಸಿ ತನ್ನ ಗುರುತು ತೋರಿಸಬೇಕು. ಇದನ್ನೂ ಓದಿ: ಉಪಚುನಾವಣೆ ಕದನ- ಆರ್.ಆರ್ ನಗರದಲ್ಲಿ ಮುನಿರತ್ನಗೆ ಟಿಕೆಟ್ ಖಚಿತ

    – ಒಬ್ಬ ಚುನಾವಣಾಧಿಕಾರಿಯ ಮುಂದೆ ಓರ್ವ ಮತದಾರನಿಗೆ ಮಾತ್ರ ಅವಕಾಶ.
    – ಎಲ್ಲ ಚುನಾವಣಾ ಅಧಿಕಾರಿಗಳಿಗೆ ಮಾಸ್ಕ್, ಸ್ಯಾನಿಟೈಸರ್, ಫೇಸ್ ಶೀಲ್ಡ್, ಗ್ಲೌಸ್ ನೀಡಬೇಕು. ಅಗತ್ಯವಿದ್ದರೆ ಪಿಪಿಇ ಕಿಟ್ ನೀಡಬೇಕು.
    – ಮನೆ ಮನೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೇವಲ 5 ಜನರಿಗೆ ಮಾತ್ರ ಅವಕಾಶ.
    – ಸಾರ್ವಜನಿಕ ಬಹಿರಂಗ ಭಾಷಣ ಪ್ರಚಾರಕ್ಕೆ ಸೀಮಿತ ಜನರಿಗೆ ಅವಕಾಶ.
    – ಸಾರ್ವಜನಿಕ ಪ್ರಚಾರ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಕಾಪಾಡಲೇಬೇಕು.

    –  ಸಾರ್ವಜನಿಕ ಸಭೆ ಆಯೋಜಿಸುವ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವಾಲಯ ಜಾರಿಗೊಳಿಸಿರುವ ಕೋವಿಡ್ ನಿಯಮಾವಳಿಗಳ ಪಾಲನೆ ಕಡ್ಡಾಯ.
    – ಚುನಾವಣಾ ಉದ್ದೇಶಕ್ಕೆ ಬಳಸುವ ಕಟ್ಟಡ/ಕೊಠಡಿ/ಹಾಲ್‍ನ ಪ್ರವೇಶದಲ್ಲಿ ಪ್ರತಿ ವ್ಯಕ್ತಿಗೂ ಥರ್ಮಲ್ ಸ್ಕ್ಯಾನಿಂಗ್ ನಡೆಸಬೇಕು. ಅಲ್ಲಿ ಸ್ಯಾನಿಟೈಸರ್, ಸೋಪ್ ಮತ್ತು ನೀರು ಲಭ್ಯವಾಗುವಂತೆ ಇರಬೇಕು.
    – ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅಭ್ಯರ್ಥಿಗಳು ಹಾಗೂ ಅವರ ಬೆಂಬಲಿಗರು ಕನಿಷ್ಟ ವಾಹನಗಳ ಬಳಕೆ ಮಾಡತಕ್ಕದ್ದು.
    – ಮತದಾನ ಕೇಂದ್ರದಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡುವುದು ಕಡ್ಡಾಯ.

    – ಮತಗಟ್ಟೆಗೆ ಬರುವಾಗ ಮತದಾರ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು.
    – ಚುನಾವಣೆಗೆ ನಿಲ್ಲುವ ಅಭ್ಯರ್ಥಿ ಆನ್‍ಲೈನ್ ಮೂಲಕವೇ ನಾಮಪತ್ರ ಹಾಗೂ ಭದ್ರತಾ ಠೇವಣಿಯನ್ನು ಸಲ್ಲಿಸಬೇಕು.
    – ರಾಜ್ಯ ಸರ್ಕಾರಗಳು ಮತಗಟ್ಟೆಗಳಿಗೆ ನೋಡಲ್ ಆರೋಗ್ಯ ಅಧಿಕಾರಿಗಳನ್ನು ನೇಮಕ ಮಾಡುವಂತೆ ಎಲ್ಲಾ ಜಲ್ಲಾಧಿಕಾರಿಗಳಿಗೆ ಸೂಚನೆ ನೀಡಬೇಕು.
    -ಕ್ಯಾರಂಟೈನ್‍ಗೆ ಗುರಿಯಾದ ಕೋವಿಡ್-19 ರೋಗಿಗಳು ಕೂಡ ಮತದಾನ ಮಾಡಬಹುದಾಗಿದ್ದು, ಮತದಾನ ಅವಧಿಯ ಕೊನೆಯ ಒಂದು ಗಂಟೆ ಬಾಕಿ ಇದ್ದಾಗ ಮತಗಟ್ಟೆಗೆ ಬಂದು ಮತ ಚಲಾಯಿಸಬಹುದಾಗಿದೆ.
    -ಆರೋಗ್ಯ ಅಧಿಕಾರಿಗಳ ಮೇಲುಸ್ತುವಾರಿಯಲ್ಲಿ ಕ್ವಾರಂಟೈನ್‍ಗೆ ಒಳಪಟ್ಟ ಸೋಂಕಿತ ಮತದಾರರು ಮತ ಚಲಾಯಿಸಬಹುದಾಗಿದೆ.
    – ಕಂಟೈನ್‍ಮೆಂಟ್ ಝೋನ್ ಹಾಗೂ ಸೀಲ್‍ಡೌನ್ ಪ್ರದೇಶಗಳ ಮತದಾರರಿಗೆ ಪ್ರತ್ಯೇಕ ನಿಯಮಾವಳಿಗಳ ಜಾರಿ.

  • ಪತ್ನಿಯ ಶೀಲ ಶಂಕಿಸಿ ಬರ್ಬರ ಕೊಲೆ – ತಂದೆಯ ಜೊತೆ ತಾಯಿ ಹೆಣ ಮೂಟೆಕಟ್ಟಿದ ಪುತ್ರ

    ಪತ್ನಿಯ ಶೀಲ ಶಂಕಿಸಿ ಬರ್ಬರ ಕೊಲೆ – ತಂದೆಯ ಜೊತೆ ತಾಯಿ ಹೆಣ ಮೂಟೆಕಟ್ಟಿದ ಪುತ್ರ

    ಬೆಂಗಳೂರು: ಪತ್ನಿಯ ಶೀಲ ಶಂಕಿಸಿದ ಪತಿರಾಯ ಚಾಕುವಿನಿಂದ ಬರ್ಬರವಾಗಿ ಪತ್ನಿಯನ್ನ ಇರಿದು ಕೊಲೆಗೈದಂತಹ ಘಟನೆ ಬುಧವಾರ ತಡರಾತ್ರಿ ಬೆಂಗಳೂರಿನ ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಉತ್ತರ ಪ್ರದೇಶ ಮೂಲದ ಪ್ರೀತಿ ಕೊಲೆಯಾದಾ ಮಹಿಳೆ. ಇಪ್ಪತ್ತು ವರ್ಷದ ಹಿಂದೆ ಪ್ರೀತಿ, ಇರೇನ್ ಎಂಬಾತನನ್ನ ಮದ್ವೆಯಾಗಿದ್ದರು. ಎಂಟು ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ದಂಪತಿ ಮಧ್ಯೆ ಆಗಾಗ್ಗೆ ಗಲಾಟೆ ನಡೀತಿತ್ತು. ಪತ್ನಿಗೆ ಅನೈತಿಕ ಸಂಬಂಧ ಇರೋದಾಗಿ ಅನುಮಾನಿಸಿ ಪದೇ ಪದೇ ಇಬ್ಬರ ಮಧ್ಯೆ ಜಗಳ ನಡೆಯುತ್ತಿತ್ತು. ಬುಧವಾರ ಮದ್ಯಾಹ್ನ ಸುಮಾರು 2 ಗಂಟೆಗೆ ಪತ್ನಿ ಜೊತೆ ಇರೇನ್ ಗಲಾಟೆಗಿಳಿದಿದ್ದ, ಮಾತಿಗೆ ಮಾತು ಬೆಳೆದು ಇರೇನ್ ಚಾಕುವಿನಿಂದ ಪ್ರೀತಿಯ ಕತ್ತಿನ ಭಾಗಕ್ಕೆ ಎರಡು ಬಾರಿ ಇರಿದಿದ್ದಾನೆ.

    ಗಂಭೀರವಾಗಿ ಗಾಯಗೊಂಡ ಪ್ರೀತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಪ್ರೀತಿಯ 18 ವರ್ಷದ ಮಗ ಕಾಲೇಜು ಮುಗಿಸಿ ಮನೆಗೆ ಬರ್ತಿದ್ದಂತೆ ಕೊಲೆ ನಡೆದಿರೋದು ಗೊತ್ತಾಗಿದೆ. ಈ ವೇಳೆ ತಂದೆ ಇರೇನ್ ಜೊತೆ ಸೇರಿ ಮಗರಾಯ ತಾಯಿಯ ಹೆಣವನ್ನ ಬಾಡಿಗೆ ಮನೆಯಿಂದ ಮೂಟೆಕಟ್ಟಿ ಹೊತ್ತೊಯ್ಯಲು ಮುಂದಾಗಿದ್ದರು. ಇದನ್ನ ಗಮನಿಸಿದ ಅಕ್ಕಪಕ್ಕದ ಮನೆಯವರು ರಾಜಾಜಿನಗರ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣ ಕಾರ್ಯನಿರತರಾದ ಪೊಲೀಸರು ಇದೀಗ ಆರೋಪಿ ಇರೇನ್ ಹಾಗೂ ಆತನ ಮಗನನ್ನ ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv