ಬೆಂಗಳೂರು: ರಾಜಭವನಕ್ಕೆ ಬಾಂಬ್ ಬೆದರಿಕೆ ಕರೆ (Bomb Threat Call to Rajbhavan) ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಇದೀಗ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯನ್ನು ಭಾಸ್ಕರ್ ಎಂದು ಗುರುತಿಸಿದ್ದು, ಈತ ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕು ವಡ್ಡಹಳ್ಳಿಯ ನಿವಾಸಿ. ಇತ್ತೀಚೆಗೆ ಬೆಂಗಳೂರಿನ ಶಾಲೆಗಳಿಗೆ ಬಾಂಬ್ ಇಟ್ಟಿರುವುದಾಗಿ ಮೇಲ್ ಬಂದ ಸುದ್ದಿಯನ್ನು ಭಾಸ್ಕರ್ ತಿಳಿದುಕೊಂಡಿದ್ದ. ಈ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದ ಬಗ್ಗೆಯೂ ತಿಳಿದುಕೊಂಡಿದ್ದ. ಇದನ್ನೂ ಓದಿ: ನಿರುದ್ಯೋಗ ಯುವಕ-ಯುವತಿಯರಿಗೆ ಗುಡ್‌ನ್ಯೂಸ್ – ಡಿ.21ರಿಂದ `ಯುವ ನಿಧಿ’ಗೆ ನೋಂದಣಿ
ಸೋಮವಾರ ಊರಿನಿಂದ ಬೆಂಗಳೂರಿಗೆ ಬಂದಿದ್ದ ಈತ ಬೆಂಗಳೂರು ಪೊಲೀಸರನ್ನು ಮತ್ತೆ ಆಟವಾಡಿಸಬೇಕು ಎಂದು ನಿರ್ಧರಿಸಿದ್ದ. ಇದಕ್ಕಾಗಿ ಗೂಗಲ್ ನಲ್ಲಿ ಸರ್ಚ್ ಮಾಡಿ ಎನ್ಐಎ ನಂಬರ್ ಪಡೆದುಕೊಂಡಿದ್ದ. ನಂತರ ರಾಜಭವನಕ್ಕೆ ಬಾಂಬ್ ಇಟ್ಟಿರುವುದಾಗಿ ಕರೆ ಮಾಡಿದ್ದ. ಕರೆ ಕಟ್ ಮಾಡಿ ಬಳಿಕ ಸ್ಥಳದಿಂದ ಎಸ್ಕೇಪ್ ಆಗಿದ್ದ.
ಇತ್ತ ಬೆದರಿಕೆ ಕರೆಯಿಂದ ಗಾಬರಿಯಾದ ಎನ್ಐಎ (NIA) ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು. ಅಂತೆಯೇ ಪೊಲೀಸರು ಬಾಂಬ್ ಬೆದರಿಕೆ ಕರೆ ನಂತರ ಕರೆ ಬಂದ ನೆಟ್ವರ್ಕ್ ಟ್ರ್ಯಾಕ್ ಮಾಡುತ್ತಿದ್ದರು. ಆದರೆ ಆರೋಪಿ ಬೆಂಗಳೂರಿನಿಂದ ನೇರವಾಗಿ ಆಂಧ್ರದ ಚಿತ್ತೂರಿನ ದೇವಸ್ಥಾನವೊಂದಕ್ಕೆ ತೆರಳಿದ್ದ. ಅಂತೆಯೇ ಚಿತ್ತೂರಿನಿಂದ ತನ್ನೂರಿಗೆ ವಾಪಸ್ ಆಗುವಾಗ ಭಾಸ್ಕರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ವಿಧಾನಸೌಧ ಠಾಣೆ ಪೊಲೀಸರು ಭಾಸ್ಕರ್ ನ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
ಬೆಂಗಳೂರು: ಏರೋ ಇಂಡಿಯಾ (Aero India 2023) ಶೋ ಉದ್ಘಾಟಿಸಲಿರುವ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ (Bengaluru) ಆಗಮಿಸಿದ್ದಾರೆ.
ಇಂದು ರಾತ್ರಿ ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋದಿ (Narendra Modi) ಅವರನ್ನು ರಾಜ್ಯಪಾಲ ಗೆಹ್ಲೋಟ್, ಸಿಎಂ ಬೊಮ್ಮಾಯಿ ಸೇರಿ ಹಲವರು ಸ್ವಾಗತಿಸಿದರು. ಸದ್ಯ ಪ್ರಧಾನಮಂತ್ರಿಗಳು ರಾಜಭವನದಲ್ಲಿ (Raj Bhavan) ತಂಗಿದ್ದು, ರಾಜಭವನದಲ್ಲಿ ನಾಡಿನ ವಿವಿಧ ಕ್ಷೇತ್ರಗಳ ಪ್ರಮುಖರೊಂದಿಗೆ ಪ್ರಧಾನಿ ಮೋದಿ ಡಿನ್ನರ್ ಸಭೆ ನಡೆಸಿದ್ದಾರೆ.
ಮೋದಿ ಜೊತೆ ಡಿನ್ನರ್ ಸಂವಾದದಲ್ಲಿ ಸಿನಿಮಾ, ಉದ್ಯಮ ಹಾಗೂ ಕ್ರೀಡಾ ವಲಯದ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ನಟ ಯಶ್, ನಟ, ನಿರ್ದೇಶಕ ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಗಂದೂರು, ಅಶ್ವಿನಿ ಪುನೀತ್ ರಾಜ್‌ಕುಮಾರ್, ಶ್ರದ್ಧಾ ಜೈನ್, ನಿರ್ದೇಶಕ ಪ್ರಶಾಂತ್ ನೀಲ್, ಕ್ರಿಕೆಟ್ ಕ್ಷೇತ್ರದ ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಅನಿಲ್ ಕುಂಬ್ಳೆ ದಂಪತಿ, ಮಯಾಂಕ್ ಅಗರ್‌ವಾಲ್, ಮನೀಶ್ ಪಾಂಡೆ, ಉದ್ಯಮ ವಲಯದಿಂದ ನಿತಿನ್ ಕಾಮತ್, ತರುಣ್ ಮೆಹ್ತಾ ಭಾಗವಹಿಸಿದ್ದರು.
ಮೋದಿ ಜತೆಗಿನ ಸಂವಾದಕ್ಕೆ ಪ್ರತಿಯೊಂದು ತಂಡಕ್ಕೂ 10 ನಿಮಿಷಗಳ ಕಾಲಾವಕಾಶ, ಮಾಡಿಕೊಡಲಾಗಿತ್ತು. ಕ್ರಿಕೆಟರ್ಸ್ ಗೆ 10 ನಿಮಿಷ, ನಟರ ಟೀಂಗೆ 10 ನಿಮಿಷ , ಉದ್ಯಮಿಗಳಿಗೆ 10 ನಿಮಿಷದಂತೆ ಕಾಲಾವಕಾಶ ನೀಡಲಾಗಿತ್ತು.
ಸೋಮವಾರ ಚಾಲನೆ:
ವಿಶ್ವದ ಚಿತ್ತ ಸೆಳೆದಿರುವ ಏರೋ ಇಂಡಿಯಾ ಶೋ 2023ಕ್ಕೆ ಸೋಮವಾರ ವಿದ್ಯುಕ್ತ ಚಾಲನೆ ಸಿಗುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಬೆಳಗ್ಗೆ 9 ಗಂಟೆಗೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಐದು ದಿನಗಳ ಕಾಲ ನಡೆಯೋ ಏರ್ ಶೋಗೆ ಚಾಲನೆ ನೀಡಲಿದ್ದಾರೆ.
ಬೆಳಗ್ಗೆ 11:30 ರವರೆಗೂ ಗಗನದಲ್ಲಿ ಲೋಹದ ಹಕ್ಕಿಗಳ ಚಮತ್ಕಾರ ವೀಕ್ಷಣೆ ಮಾಡಲಿದ್ದಾರೆ. ಬೆಳಗ್ಗೆ 11.45 ಕ್ಕೆ ಯಲಹಂಕ ವಾಯುನೆಲೆಯಿಂದಲೇ ತ್ರಿಪುರಾ ಚುನಾವಣಾ ಪ್ರಚಾರಕ್ಕಾಗಿ ಅಗರ್ತಲಾಗೆ ಪ್ರಧಾನಿ ಮೋದಿ ಪಯಣ ಬೆಳೆಸಲಿದ್ದಾರೆ. ಇದನ್ನೂ ಓದಿ: ದೇಶದ ಅತಿದೊಡ್ಡ ಮುಂಬೈ- ದೆಹಲಿ ಎಕ್ಸ್‌ಪ್ರೆಸ್‌ವೇಗೆ ಮೋದಿ ಚಾಲನೆ
ಏರೋ ಇಂಡಿಯಾ ಶೋ ಹಿನ್ನೆಲೆಯಲ್ಲಿ ಫೆ.17ರವರೆಗೂ ಕೆಐಎಎಲ್‍ನಲ್ಲಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಹೆಬ್ಬಾಳ ಫ್ಲೈಓವರ್ ಬಂದ್ ಮಾಡಿರುವ ಕಾರಣ ವಿಮಾನ ನಿಲ್ದಾಣ ರಸ್ತೆಯಲ್ಲಿ ವಾಹನ ದಟ್ಟಣ ಏರ್ಪಡುತ್ತಿದೆ. ನಾಳೆಯಿಂದ ಏರ್ ಶೋ ನೋಡಲು ಸಾವಿರಾರು ಜನ ಬರುವ ಹಿನ್ನೆಲೆಯಲ್ಲಿ ವಾಹನದಟ್ಟಣೆ ಇನ್ನಷ್ಟು ಹೆಚ್ಚಲಿದೆ.
ಈ ಸಲದ ಏರ್ ಶೋ 14ನೇ ಆವೃತ್ತಿಯಾಗಿದೆ. ಬಾನಂಗಳದಲ್ಲಿ ಯುದ್ಧ ವಿಮಾನಗಳು, ಸೇನಾಪಡೆಯ ಹೆಲಿಕಾಪ್ಟರ್‌ಗಳ ರೋಚಕ ಹಾರಾಟವನ್ನು ವೀಕ್ಷಕರು ಆಸ್ವಾದಿಸಲು ಅವಕಾಶ ಮಾಡಿಕೊಡಲಾಗಿದೆ. ಒಟ್ಟು ದೇಶೀಯ ಹಾಗೂ ವಿದೇಶಿ 731 ಪ್ರದರ್ಶಕರು ಭಾಗವಹಿಸಲಿದ್ದಾರೆ. ಏರೋಸ್ಪೇಸ್, ಭಾರತೀಯ ವಾಯುಪಡೆ ಮತ್ತು ರಕ್ಷಣಾ ವಲಯದ ಟ್ರೇಡ್ ಎಕ್ಸ್‌ಪೋ ಕೂಡ ನಡೆಯಲಿದೆ. ಏರೋಸ್ಪೇಸ್ ವಲಯದ ಹೂಡಿಕೆದಾರರು, ಪರಿಣತರು ಕೂಡ ಪಾಲ್ಗೊಳ್ಳಲಿದ್ದಾರೆ. ಯಲಹಂಕದ ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಸುಮಾರು 35,000 ಚದರ ಮೀಟರ್ ಪ್ರದೇಶದಲ್ಲಿ ಪ್ರದರ್ಶನ ನಡೆಯಲಿದೆ.
ಮೋದಿಯವರು ಒಂದೇ ವಾರದಲ್ಲಿ ಎರಡನೇ ಬಾರಿಗೆ ಭೇಟಿ ಕೊಡುತ್ತಿದ್ದಾರೆ. ಫೆ.6 ರಂದು ಬೆಂಗಳೂರು ಗ್ರಾಮಾಂತರ ಮತ್ತು ತುಮಕೂರು ಜಿಲ್ಲೆಗೆ ಭೇಟಿ ನೀಡಿದ್ದರು. ಕರ್ನಾಟಕ ಎಲೆಕ್ಷನ್ ಸಮೀಪ ಸಿಲಿಕಾನ್ ಸಿಟಿ ಮತದಾರರ ಮೇಲೆ ಮೋದಿ ಮೂಲಕ ಪ್ರಭಾವ ಬೀರಲು ಬಿಜೆಪಿ ಕಸರತ್ತು ನಡೆಸಿದೆ. ನಗರದ ಮೂಲಸೌಕರ್ಯ ಕಾಮಗಾರಿಗಳ ವಿಳಂಬದಿಂದ ಹಲವು ಕಡೆ ಆಡಳಿತ ವಿರೋಧಿ ಅಲೆ ಸವಾಲು ಉದ್ಭವಿಸಿದೆ. ಬೆಂಗಳೂರಿನಲ್ಲಿ ಮೋದಿ ಅಲೆ ಸೃಷ್ಟಿಸಿ ಜನಾಕ್ರೋಶ ತಣಿಸಲು ಬಿಜೆಪಿ ತಂತ್ರ ಹೆಣೆದಿದೆ. ಮುಂದೆಯೂ ನಗರದಲ್ಲಿ ಮೋದಿ ರೋಡ್ ಶೋ, ರ್‍ಯಾಲಿ ಆಯೋಜಿಸಿ ಆ ಮೂಲಕ ನಗರದ ಮತ ವರ್ಗ ಸೆಳೆಯಲು ಪ್ಲಾನ್ ಮಾಡಲಾಗಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ರಾಷ್ಟ್ರೀಯ ಆಯುರ್ವೇದ ದಿನಾಚರಣೆ (National Ayurveda Day) ನಿಮಿತ್ತ ಪ್ರತಿ ದಿನ ಪ್ರತಿ ಮನೆಯಲ್ಲೂ ಆಯುರ್ವೇದ (ಹರ್ ದಿನ ಹರ್ ಗರ್ ಆಯುರ್ವೇದ) ಕಾರ್ಯಕ್ರಮದ ಅಂಗವಾಗಿ ರಾಜಭವನ (Rajabhavana) ದಲ್ಲಿ ಆಯೋಜಿಸಲಾಗಿದ್ದ ಆಯುರ್ವೇದ ವೈದ್ಯಕೀಯ ಶಿಬಿರಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Thawar Chand Gehlot) ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಆಯುರ್ವೇದವನ್ನು ಅತ್ಯುತ್ತಮ ಮತ್ತು ಪುರಾತನವಾದ ವೈದ್ಯಕೀಯ ವ್ಯವಸ್ಥೆ ಎಂದು ಪರಿಗಣಿಸಲಾಗಿದೆ. ಇದು ಇಂದಿಗೂ ಪ್ರಸ್ತುತವಾಗಿದೆ. ಆಯುರ್ವೇದದ ಬಗ್ಗೆ ಅರಿವು ಮೂಡಿಸಲು ಮತ್ತು ಅದರ ಪ್ರಯೋಜನಗಳನ್ನು ತಳಮಟ್ಟದವರೆಗೆ ಕೊಂಡೊಯ್ಯಲು, ಭಾರತ ಸರ್ಕಾರದ ಆಯುಷ್ ಸಚಿವಾಲಯವು 2016 ರಿಂದ ಧನ್ವಂತರಿ ಜಯಂತಿ (ಧಂತೇರಸ್) ಸಂದರ್ಭದಲ್ಲಿ ಪ್ರತಿ ವರ್ಷ ಆಯುರ್ವೇದ ದಿನವನ್ನು ಆಚರಿಸುತ್ತಿದೆ ಎಂದರು.
ಆಯುಷ್ ಸಚಿವಾಲಯವು ಆಯುರ್ವೇದ ದಿನವನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಲು ಈ ವರ್ಷದ ಥೀಮ್ ‘ಹರ್ ದಿನ್ ಹರ್ ಘರ್ ಆಯುರ್ವೇದ’ (ಪ್ರತಿ ದಿನ ಪ್ರತಿ ಮನೆಯಲ್ಲೂ ಆಯುರ್ವೇದ) ಆಗಿದೆ. ಆಯುರ್ವೇದ ದಿನದ ನಿಮಿತ್ತ ಆಯೋಜಿಸಲಾಗುತ್ತಿರುವ ಕಾರ್ಯಕ್ರಮಗಳ ಸರಣಿಯಲ್ಲಿ ಆಯುರ್ವೇದ ವೈದ್ಯಕೀಯ ಶಿಬಿರವನ್ನು ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಯುರ್ವೇದ ಆಸ್ಪತ್ರೆ, ಬೆಂಗಳೂರು ರವರು ರಾಜಭವನದಲ್ಲಿ ಆಯೋಜಿಸಿರುವುದು ಸಂತಸ ತಂದಿದೆ ಎಂದರು.
ಶಿಬಿರದಲ್ಲಿ ರಾಜಭವನದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆಯುರ್ವೇದ ಮಹತ್ವದ ಮಾಹಿತಿ ನೀಡಿದ ಅಧಿಕಾರಿಗಳು ಆರೋಗ್ಯ ತಪಾಸಣೆ ನಡೆಸಿ, ಆಯುರ್ವೇದ ಔಷಧಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಸರ್ಕಾರಿ ಆರ್ಯುವೇದ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ.ಅಹಲ್ಯ.ಎಸ್, ಉಪ ಪ್ರಾಂಶುಪಾಲರಾದ ಡಾ.ಸುರೇಖ, ಆರ್ ಎಂ ಓ ಡಾ.ವೆಂಕಟರಾಮಯ್ಯ, ಹಿರಿಯ ವೈದ್ಯಾಧಿಕಾರಿ ಡಾ.ವೀಣಾ ಕೃಷ್ಣಮೂರ್ತಿ, ವೈದ್ಯಾಧಿಕಾರಿ ಡಾ.ಶಿವಪ್ರಸಾದ್, ಫಾರ್ಮಸಿ ಅಧಿಕಾರಿ ಯೋಗೇಶ್ ಪಿ ಎಂ, ಭಾರತಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಅನುಮತಿ ಪಡೆಯದೇ ರಜೆ ಹಾಕಿ ಕರ್ತವ್ಯ ಲೋಪವೆಸಗಿದ ಹಿನ್ನಲೆಯಲ್ಲಿ ರಾಜಭವನದ ಮೂವರು ಪೊಲೀಸ್ ಸಿಬ್ಬಂದಿಯನ್ನು 6 ತಿಂಗಳು ಅಮಾನತು ಮಾಡಲಾಗಿದೆ.
ಕೆಎಸ್‍ಐಎಸ್‍ಎಫ್ ಪೇದೆಗಳಾದ ಹುಚ್ಚೇಗೌಡ, ತಿಮ್ಮಯ್ಯ, ಪ್ರವೀಣ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ರಾಜಭವನದಿಂದ ಯಾವುದೇ ಅನುಮತಿ ಪಡೆಯದೆ ಈ ಪೇದೆಗಳು ತಮ್ಮ ವರ್ಗಾವಣೆ ಸಂಬಂಧ ಐಎಸ್‍ಡಿ ಮೇಲಾಧಿಕಾರಿ ಭೇಟಿಗೆ ತೆರಳಿದ್ದರು. ಹೀಗಾಗಿ 1ನೇ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯ ಕಮಾಂಡೆಂಟ್ ಮತ್ತು ಶಿಸ್ತು ಪ್ರಾಧಿಕಾರಿ ಎ. ನಾಗರಾಜ್ ಈ ಮೂವರನ್ನು ಅನಾನತು ಮಾಡಿ ಆದೇಶ ನೀಡಿದ್ದಾರೆ.
ಹಲವು ದಿನಗಳಿಂದ ರಾಜಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೇದೆಗಳು ವರ್ಗಾವಣೆಗಾಗಿ ಹೋಗಿದ್ದರು ಎನ್ನುವ ಕಾರಣ ನೀಡಿ ಅವರನ್ನ ಅಮಾನತು ಮಾಡಲಾಗಿದೆ. 6 ತಿಂಗಳ ಕಾಲ ಅಮಾನತು ಮಾಡಿ, ಈ ಬಗ್ಗೆ ತನಿಖೆಗೆ ಕಮಾಂಡೆಂಟ್ ನಾಗರಾಜ್ ಆದೇಶಿಸಿದ್ದಾರೆ.
ಬೆಂಗಳೂರು: ಶಾಸಕರ ರಾಜೀನಾಮೆಯಿಂದ ಬಹುಮತ ಕಳೆದುಕೊಂಡಿರುವ ಸರ್ಕಾರಕ್ಕೆ ರಾಜ್ಯಪಾಲ ವಿ.ಆರ್.ವಾಲಾ ಚಾಟಿ ಬೀಸಿದ್ದಾರೆ.
ಸಮ್ಮಿಶ್ರ ಸರ್ಕಾರ ಯಾವುದೇ ಆಡಳಿತಾತ್ಮಕ ನಿರ್ಧಾರ ಕೈಗೊಳ್ಳಬಾರದು. ಸರ್ಕಾರ ಅಲ್ಪ ಮತಕ್ಕೆ ಕುಸಿದ ಪರಿಣಾಮ ಕ್ಯಾಬಿನೆಟ್ ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬಾರದು ಎಂದು ಸೂಚನೆ ನೀಡಿದ್ದಾರೆ.
ಸರ್ಕಾರ ಪತನದ ಮುನ್ಸೂಚನೆ ತಿಳಿಯುತ್ತಿದ್ದಂತೆ ರಾತ್ರೋ ರಾತ್ರಿ ಕಡತಗಳಿಗೆ ಸಹಿ ಮತ್ತು ಅಧಿಕಾರಿಗಳಿಗೆ ಭಡ್ತಿ ನೀಡಲಾಗುತ್ತಿದೆ ಎಂದು ಬಿಜೆಪಿ ಆರೋಪಿಸಿತ್ತು. ಈ ವಿಚಾರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯಪಾಲರು ಈ ಆದೇಶವನ್ನು ಹೊರಡಿಸಿದ್ದಾರೆ.
ಸಚಿವರೆಲ್ಲಾ ರಾಜೀನಾಮೆ ನೀಡಿದ್ದರೂ ಸೋಮವಾರ ರೇವಣ್ಣ ಅವರು ತಮ್ಮ ಲೋಕೋಪಯೋಗಿ ಇಲಾಖೆಯಲ್ಲಿ ಇನ್ನು ಸಕ್ರೀಯವಾಗಿದ್ದು, ಅಧಿಕಾರಿಗಳ ವರ್ಗಾವಣೆ ಮತ್ತು ಬಡ್ತಿ ಸಂಬಂಧ ತರಾತುರಿಯಲ್ಲಿ ಇಲಾಖಾ ಪದೋನ್ನತಿ ಸಮಿತಿ (ಡಿಸಿಪಿ) ಸಭೆಯನ್ನೂ ನಡೆಸಿದ್ದರು.
ಸರ್ಕಾರ ಪತನದಂಚಿಗೆ ತಲುಪಿರುವ ಸಮಯದಲ್ಲಿ ದಿಢೀರ್ ಎಂದು ಅಧಿಕಾರಿಗಳಿಗೆ ಬಡ್ತಿ ನೀಡಿರುವ ಹಿಂದೆ ಸಚಿವರ ಸ್ವಹಿತಾಸಕ್ತಿ ಅಡಗಿದೆ ಎಂಬ ಆರೋಪ ಕೇಳಿ ಬಂದಿದೆ. ಆತುರದಲ್ಲಿ ಬಡ್ತಿ ನೀಡುವ ವಿಷಯ ಕುರಿತು ಸಭೆ ನಡೆಸಲು ಅಧಿಕಾರಿಗಳ ಮಟ್ಟದಲ್ಲಿ ವಿರೋಧ ವ್ಯಕ್ತವಾಗಿತ್ತು. ವಿಕಾಸಸೌಧದಲ್ಲಿ ನೆಪಮಾತ್ರಕ್ಕೆ ಸಭೆ ನಡೆಸಿದ ಅಧಿಕಾರಿಗಳು ರಹಸ್ಯ ಸ್ಥಳಕ್ಕೆ ತೆರಳಿ ಜ್ಯೇಷ್ಠತಾ ಪಟ್ಟಿ ಸಿದ್ಧಪಡಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿತ್ತು.
ರೇವಣ್ಣ ಸಚಿವರಾಗುತ್ತಿದ್ದಂತೆ ಹಲವು ವಿಭಾಗೀಯ ಕಚೇರಿಗಳನ್ನು ಹಾಸನಕ್ಕೆ ಸ್ಥಳಾಂತರಿಸಿಕೊಂಡಿದ್ದರು. ರೇವಣ್ಣ ಅವರ ಈ ನಡೆಗೆ ಸಚಿವ ಸಂಪುಟದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಈ ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಕೈ ಬಿಟ್ಟ ಪ್ರಕರಣಗಳನ್ನು ಸಹ ಇತ್ಯರ್ಥಪಡಿಸಲು ಸಚಿವರು ಅಧಿಕಾರಿಗಳ ಮೂಲಕ ಮುಂದಾಗಿದ್ದಾರೆ. ಇದರಲ್ಲಿಯೂ ಸಚಿವರ ಸ್ವಹಿತಾಸಕ್ತಿಯೇ ಅಡಗಿದೆ ಎಂಬ ಆರೋಪಗಳು ಬಲವಾಗಿ ಕೇಳಿ ಬಂದಿದೆ.
ಬಡ್ತಿ ಪಡೆದ ಅಧಿಕಾರಿಗಳ ವಿವರ ಹೀಗಿದೆ
ಎಇ ಹುದ್ದೆಯಿಂದ ಎಇಇ ಹುದ್ದೆ-100
ಜೆಇ ಹುದ್ದೆಯಿಂದ ಎಇಇ(2)-200
ಎಇಇ ಹುದ್ದೆಯಿಂದ ಇಇ – 400
ಇಇ ಹುದ್ದೆಯಿಂದ ಎಸ್‍ಇ-126
ಬೆಂಗಳೂರು: ರಾಜಭವನದಲ್ಲಿರೋ ಒಂದು ಸ್ಥಳ ಬಿಜೆಪಿಯ ಅದೃಷ್ಟದ ಸ್ಥಳವಾಗಿದೆಯಂತೆ. 2006ರಲ್ಲಿ ಹೆಚ್‍ಡಿಕೆ, ಬಿಎಸ್‍ವೈ ದೋಸ್ತಿಗೆ ಇದೇ ಸ್ಥಳದಿಂದಾಗಿ ಗ್ರೀನ್ ಸಿಗ್ನಲ್ ಸಿಕ್ಕಿತ್ತಂತೆ. ಹೀಗೆ ಬಿಜೆಪಿ, ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚನೆಗೆ ಅದೃಷ್ಟ ಖುಲಾಯಿಸಿದ್ದ ಸ್ಥಳವೇ ಇದೀಗ ಬಿಜೆಪಿಯ ಲಕ್ಕಿ ಸ್ಥಳವಾಗಿದೆ ಅಂತ ಬಿಜೆಪಿ ನಾಯಕರು ಹೇಳುತ್ತಿದ್ದಾರೆ.
ಯಾವುದು ಆ ಸ್ಥಳ?:
ರಾಜಭವನದ ಬ್ಯಾಂಕ್ವೆಟ್ ಹಾಲ್ ಬಿಜೆಪಿ ಪಾಲಿನ ಲಕ್ಕಿ ಸ್ಥಳ ಅಂತೆ. 2006ರಲ್ಲಿ ಇದೇ ಜಾಗದಲ್ಲಿ ರಾಜ್ಯಪಾಲರು ಜೆಡಿಎಸ್, ಬಿಜೆಪಿ ಶಾಸಕರ ತಲೆ ಎಣಿಕೆ ನಡೆಸಿದ್ದರು. ಅಂದು ಹೆಚ್‍ಡಿಕೆ ಜತೆ ಬಂದಿದ್ದ ಜೆಡಿಎಸ್ ಶಾಸಕರು ಕೂಡ ರಾಜಭವನಕ್ಕೆ ಹೋಗಿದ್ದರು. ಆಗ ರಾಜ್ಯಪಾಲರು ಎರಡು ಕಡೆ ತಲೆ ಎಣಿಕೆ ಮಾಡಿ ಸರ್ಕಾರ ರಚನೆಗೆ ಅನುಮತಿ ನೀಡಿದ್ದರು. ಇದನ್ನೂ ಓದಿ: ಎಚ್‍ಡಿಕೆ ವಿರುದ್ಧ ಬಿಜೆಪಿ ಮುಗಿಬೀಳಲು ಕಾರಣವಾಗಿದ್ದು ಆ ಒಂದು ಫೋನ್ ಕಾಲ್!
ನಿನ್ನೆ (ಶುಕ್ರವಾರ) ರಾಜಭವನದಲ್ಲಿ ದಂಗೆ ವಿರುದ್ಧ ಕೂಡ ಬ್ಯಾಂಕ್ವೆಟ್ ಹಾಲ್‍ನಲ್ಲಿ ದೂರು ಕೊಟ್ಟಿದ್ದಾರೆ. ಈ ವೇಳೆ ರಾಜ್ಯ ಬಿಜೆಪಿ ನಾಯಕರು 2006ರ ತಲೆ ಎಣಿಕೆ ಹಿಸ್ಟರಿ ಮೆಲಕು ಹಾಕಿದ್ದಾರೆ.
ರಾಜಭವನದ ಭೇಟಿ ಬಳಿಕ ಬಿಎಸ್‍ವೈ ನಿವಾಸಕ್ಕೆ ಬಂದ ಕೆಲವು ನಾಯಕರು, ಅದೃಷ್ಟದ ಸ್ಥಳದಿಂದಲೇ ನಾವು ದೂರು ಕೊಟ್ಟಿದ್ದೇವೆ. ಹೀಗಾಗಿ ಅಲ್ಲಿಂದಲೇ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಶುರುವಾಗುತ್ತದೆ ಅಂತ ಬಿಎಸ್‍ವೈಗೆ ಅದೃಷ್ಟ ಸ್ಥಳವಾಗಿರುವ ಬಗ್ಗೆ ಹೇಳಿಕೊಂಡು ಖುಷಿಪಟ್ಟಿದ್ದಾರೆ.
ಒಟ್ಟಿನಲ್ಲಿ ಬ್ಯಾಂಕ್ವೆಟ್ ಹಾಲ್‍ನಿಂದಲೇ ಸಮ್ಮಿಶ್ರ ಸರ್ಕಾರದ ವಿರುದ್ಧ ದೂರಿನ ಸಮರ ಆರಂಭವಾಗಿದೆ. ಹಾಗಾದ್ರೆ ರಾಜಭವನದ ಆ ಸ್ಥಳಕ್ಕೂ, ಸರ್ಕಾರ ರಚನೆಯ ಅದೃಷ್ಟಕ್ಕೂ ಸಂಬಂಧವಿದೆಯಾ, ಬಿಜೆಪಿಯ ನಾಯಕರ ಅದೃಷ್ಟದ ಆಸೆ ನಿಜಕ್ಕೂ ಕೂಡ ಈಡೇರುತ್ತಾ ಎಬುದನ್ನು ಕಾದುನೋಡಬೇಕಾಗಿದೆ.