Tag: raja rajendra film

  • ಬೇಬಿ ಶವರ್ ಸಂಭ್ರಮದಲ್ಲಿ ‘ರಾಜ ರಾಜೇಂದ್ರ’ ನಾಯಕಿ ಇಶಿತಾ

    ಬೇಬಿ ಶವರ್ ಸಂಭ್ರಮದಲ್ಲಿ ‘ರಾಜ ರಾಜೇಂದ್ರ’ ನಾಯಕಿ ಇಶಿತಾ

    ನ್ನಡದ ರಾಜ ರಾಜೇಂದ್ರ (Raja Rajendra) ಸಿನಿಮಾದಲ್ಲಿ ಶರಣ್‌ಗೆ (Sharan) ನಾಯಕಿಯಾಗಿದ್ದ ಇಶಿತಾ ದತ್ತಾ (Ishita Dutta) ಅವರು ತುಂಬು ಗರ್ಭಿಣಿ, ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಸದ್ಯ ಬೇಬಿ ಶವರ್ (Baby Shower) ಕಾರ್ಯಕ್ರಮದ ಸಂತಸ ಫೋಟೋಗಳನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ಕಿರುತೆರೆಯ ಸಾಕಷ್ಟು ಹಿಂದಿ ಸೀರಿಯಲ್‌ಗಳಲ್ಲಿ ನಾಯಕಿಯಾಗಿ ಇಶಿತಾ ಮಿಂಚಿದ್ದಾರೆ. 2015ರಲ್ಲಿ ತೆರೆಕಂಡ ರಾಜ ರಾಜೇಂದ್ರ ಸಿನಿಮಾದಲ್ಲಿ ಶರಣ್‌ಗೆ ನಾಯಕಿಯಾಗಿ ಇಶಿತಾ ದತ್ತಾ ನಟಿಸಿದ್ದರು. ಬಾಲಿವುಡ್‌ನ (Bollywood) ದೃಶ್ಯಂ, ದೃಶ್ಯಂ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

     

    View this post on Instagram

     

    A post shared by Ishita Dutta Sheth (@ishidutta)

    2017ರಲ್ಲಿ ನಟ ವತ್ಸಲ್ ಶೇಠ್ ಅವರನ್ನ ಪ್ರೀತಿಸಿ, ಇಶಿತಾ ಮದುವೆಯಾಗಿದ್ದಾರೆ. ಇದೀಗ ಮಗುವಿನ ಬರುವಿಕೆಯ ಸಂತಸದಲ್ಲಿದ್ದಾರೆ. ಬೇಬಿ ಆನ್ ಬೋರ್ಡ್ ಅಂತಾ ಅಡಿಬರಹ ನೀಡಿ, ಬೇಬಿ ಬಂಪ್ ಫೋಟೋ ಹಂಚಿಕೊಳ್ಳುವ ಮೂಲಕ ತಾಯಿಯಾಗುತ್ತಿರುವ ಶುಭ ಸುದ್ದಿಯನ್ನು ಇತ್ತೀಚಿಗೆ ನಟಿ ತಿಳಿಸಿದ್ದರು. ಇದನ್ನೂ ಓದಿ:ಲವ್ಲಿ ಸ್ಟಾರ್ ಪ್ರೇಮ್- ಜ್ಯೋತಿ ದಾಂಪತ್ಯಕ್ಕೆ 25ರ ಸಂಭ್ರಮ

     

    View this post on Instagram

     

    A post shared by Ishita Dutta Sheth (@ishidutta)

    ಇದೀಗ ನಟಿ ಇಶಿತಾ ಅವರ ಬೇಬಿ ಶವರ್ ಕಾರ್ಯಕ್ರಮ ಅದ್ದೂರಿಯಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ನಡೆದಿದೆ. ಪಿಂಕ್ ಬಣ್ಣದ ಸಿಲ್ಕ್ ಸೀರೆಯುಟ್ಟು ನಟಿ ಮಿಂಚಿದ್ದಾರೆ. ಪತಿ ವತ್ಸಲ್ ಜೊತೆ ಕ್ಯಾಮೆರಾಗೆ ಪೊಸ್ ಕೋಟಿದ್ದಾರೆ. ಮಗುವಿನ ಆಗಮನಕ್ಕೆ ಕಾಯ್ತಿರೋ ನವಜೋಡಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ.

  • ಮೊದಲ ಮಗುವಿನ ನಿರೀಕ್ಷೆಯಲ್ಲಿ ಕನ್ನಡದ `ರಾಜ ರಾಜೇಂದ್ರ’ ನಟಿ ಇಶಿತಾ

    ಮೊದಲ ಮಗುವಿನ ನಿರೀಕ್ಷೆಯಲ್ಲಿ ಕನ್ನಡದ `ರಾಜ ರಾಜೇಂದ್ರ’ ನಟಿ ಇಶಿತಾ

    ನ್ನಡದ `ರಾಜ ರಾಜೇಂದ್ರ’ (Raja Rajendra) ಸಿನಿಮಾದಲ್ಲಿ ಶರಣ್‌ಗೆ ನಾಯಕಿಯಾಗಿದ್ದ ಇಶಿತಾ ದತ್ತಾ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಇದೀಗ ನಟಿ ಇಶಿತಾ (Ishita Dutta), ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಗುಡ್ ನ್ಯೂಸ್ ಬಗ್ಗೆ ಇಶಿತಾ- ವತ್ಸಲ್ ಶೇಠ್ (Vatsal Sheth) ದಂಪತಿ ಸೋಷಿಯಲ್ ಮೀಡಿಯಾದಲ್ಲಿ ಅನೌನ್ಸ್ ಮಾಡಿದ್ದಾರೆ.

     

    View this post on Instagram

     

    A post shared by Ishita Dutta Sheth (@ishidutta)

    ಕಿರುತೆರೆಯ ಸಾಕಷ್ಟು ಹಿಂದಿ ಸೀರಿಯಲ್‌ಗಳಲ್ಲಿ ನಾಯಕಿಯಾಗಿ ಇಶಿತಾ ಮಿಂಚಿದ್ದಾರೆ. 2015ರಲ್ಲಿ ತೆರೆಕಂಡ ರಾಜ ರಾಜೇಂದ್ರ ಸಿನಿಮಾದಲ್ಲಿ ಶರಣ್‌ಗೆ (Sharan) ನಾಯಕಿಯಾಗಿ ಇಶಿತಾ ದತ್ತಾ ನಟಿಸಿದ್ದರು. ಬಾಲಿವುಡ್‌ನ (Bollywood) ದೃಶ್ಯಂ, ದೃಶ್ಯಂ 2 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದನ್ನೂ ಓದಿ: ಹಿಂದಿ ಚಿತ್ರರಂಗದಲ್ಲಿ ಸೌತ್‌ನಷ್ಟು ಶಿಸ್ತಿಲ್ಲ: ಕಾಜಲ್ ಅಗರ್‌ವಾಲ್

     

    View this post on Instagram

     

    A post shared by Ishita Dutta Sheth (@ishidutta)

    2017ರಲ್ಲಿ ನಟ ವತ್ಸಲ್ ಶೇಠ್ ಅವರನ್ನ ಪ್ರೀತಿಸಿ, ಇಶಿತಾ ಮದುವೆಯಾಗಿದ್ದಾರೆ. ಇದೀಗ ಮಗುವಿನ ಬರುವಿಕೆಯ ಸಂತಸದಲ್ಲಿದ್ದಾರೆ. ಬೇಬಿ ಆನ್ ಬೋರ್ಡ್ ಅಂತಾ ಅಡಿಬರಹ ನೀಡಿ, ಬೇಬಿ ಬಂಪ್ ಫೋಟೋವನ್ನ ನಟಿ ಹಂಚಿಕೊಂಡಿದ್ದಾರೆ. ಸಿಹಿಸುದ್ದಿ ನೀಡಿರುವ ಈ ಜೋಡಿಗೆ ಫ್ಯಾನ್ಸ್ ಶುಭಹಾರೈಸುತ್ತಿದ್ದಾರೆ.