– ಪತಿ ಹತ್ಯೆ ಬಳಿಕ ತಾಳಿ, ಕಾಲುಂಗುರ ತೆಗೆದು ಹೋಟೆಲ್‌ನಲ್ಲೇ ಬಿಟ್ಟು ಹೋಗಿದ್ದ ಸೋನಲ್
ಶಿಲ್ಲಾಂಗ್: ಹನಿಮೂನ್ ಕೊಲೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ 790 ಪುಟಗಳ ಚಾರ್ಜ್‌ಶೀಟನ್ನು ಪೊಲೀಸರು ಸಲ್ಲಿಸಿದ್ದಾರೆ. ಇದರಲ್ಲಿ ಬೆಚ್ಚಿಬೀಳಿಸುವಂತಹ ಹಲವಾರು ಅಂಶಗಳಿವೆ. ಹತ್ಯೆ ಆರೋಪಿ ಮಹಿಳೆ ಸೋನಮ್ ಎದುರಲ್ಲೇ ಆಕೆಯ ಗಂಡನ ಕೊಲೆ ನಡೆದಿದೆ ಎಂಬುದನ್ನು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.
ಉದ್ಯಮಿ ರಾಜಾ ರಘುವಂಶಿ (29) ಹತ್ಯೆ ಹಿಂದಿನ ಪಿತೂರಿ ಹೇಗಿತ್ತು? ಕೊಲೆ ಹೇಗೆ ಮಾಡಲಾಯ್ತು ಎಂಬುದನ್ನು ಚಾರ್ಜ್‌ಶೀಟ್‌ನಲ್ಲಿ ವಿವರವಾಗಿ ಉಲ್ಲೇಖಿಸಲಾಗಿದೆ. ಸೋನಮ್ ಮತ್ತು ರಾಜ್ ಸೇರಿದಂತೆ ಈ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಜೂ.8 ಮತ್ತು 9 ರಂದು ಮೇಘಾಲಯ ಪೊಲೀಸರು ಬಂಧಿಸಿದ್ದಾರೆ.
ರಾಜಾ ರಘುವಂಶಿ ಜೊತೆ ಸೋನಮ್‌ಗೆ ವಿವಾಹವಾಗಿತ್ತು. ದಂಪತಿ ಹನಿಮೂನ್‌ಗೆ ತೆರಳಿದ್ದರು. ಆದರೆ, ಸೋನಮ್‌ಗೆ ರಾಜ್ ಎಂಬಾತನ ಜೊತೆ ಅಕ್ರಮ ಸಂಬಂಧ ಇತ್ತು. ಲವ್ವರ್ ಜೊತೆ ಸೇರಿಕೊಂಡು ಪತಿಯನ್ನು ಮುಗಿಸಲು ಸೋನಮ್ ಸಂಚು ರೂಪಿಸಿದ್ದಳು. ಕೊಲೆಗಾಗಿ ಲವ್ವರ್ ಜೊತೆ ಇನ್ನೂ ಮೂವರ ಸಹಾಯವನ್ನು ಪಡೆದಿದ್ದಳು. ಈಕೆಯ ಎದುರೇ ಆಕಾಶ್ ಸಿಂಗ್ ರಜಪೂತ್, ವಿಶಾಲ್ ಸಿಂಗ್ ಚೌಹಾನ್ ಮತ್ತು ಆನಂದ್ ಕುರ್ಮಿ ಆರೋಪಿಗಳು ರಾಜಾ ರಘುವಂಶಿಯನ್ನು ಹತ್ಯೆ ಮಾಡಿದ್ದಾರೆಂಬುದು ತನಿಖೆಯಿಂದ ಗೊತ್ತಾಗಿದೆ.
ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದ ಆರೋಪಿಗಳೂ ಅಂದರ್
ಸಾಕ್ಷ್ಯಗಳನ್ನು ನಾಶಪಡಿಸಿದ್ದ ಆರೋಪದ ಮೇಲೆ ಪೊಲೀಸರು ಇನ್ನೂ ಮೂವರು ಆರೋಪಿಗಳಾದ ಲೋಕೇಂದ್ರ ತೋಮರ್, ಬಲ್ಲಾ ಅಹಿರ್ವರ್ ಮತ್ತು ಶಿಲೋಮ್ ಜೇಮ್ಸ್ ಅವರನ್ನು ಬಂಧಿಸಿದ್ದಾರೆ. ಹೆಚ್ಚುವರಿ ವಿಧಿವಿಜ್ಞಾನದ ವರದಿಗಳನ್ನು ಸ್ವೀಕರಿಸಿದ ನಂತರ ಪೂರಕ ಚಾರ್ಜ್‌ಶೀಟ್ ಸಲ್ಲಿಸಲಾಗುವುದು.
ಬಂಧಿತ ಆರೋಪಿಗಳ ವಿರುದ್ಧ 790 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ. ಆರೋಪಿಗಳಿಂದ ವಶಪಡಿಸಿಕೊಳ್ಳಲಾದ ಗಣನೀಯ ಪ್ರಮಾಣದ ವಸ್ತು ಸಾಕ್ಷ್ಯಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ ಎಂದು ಪೂರ್ವ ಖಾಸಿ ಹಿಲ್ಸ್ ಪೊಲೀಸ್ ವರಿಷ್ಠಾಧಿಕಾರಿ ವಿವೇಕ್ ಸೈಯೆಮ್ ತಿಳಿಸಿದ್ದಾರೆ.
ಕೊಲೆ ಹೇಗಾಯ್ತು?
ಹಂತಕರಲ್ಲಿ ಒಬ್ಬನಾದ ವಿಶಾಲ್ ಸಿಂಗ್ ಚೌಹಾಣ್ ಮಾರಕಾಸ್ತ್ರದಿಂದ ರಾಜಾ ಮೇಲೆ ಹಲ್ಲೆ ನಡೆಸುತ್ತಾನೆ. ಈ ವೇಳೆ ಸೋನಮ್ ಸ್ಥಳದಲ್ಲೇ ಇರುತ್ತಾಳೆ. ಪತಿ ರಕ್ತಸ್ರಾವದಿಂದ ಕಿರುಚಾಡಿದಾಗ ಸ್ಥಳದಿಂದ ಓಡಿ ಹೋಗುತ್ತಾಳೆ. ನಂತರ ತನ್ನ ಪತಿ ಸತ್ತಾಗಲೇ ಆಕೆ ವಾಪಸ್ ಬರುತ್ತಾಳೆ. ನಂತರ ಆತನ ಮೃತದೇಹವನ್ನು ಕಮರಿಗೆ ಬಿಸಾಡುತ್ತಾರೆ. ಕೊಲೆಗೆ ಬಳಸಿದ ಮಾರಕಾಸ್ತ್ರ, ರಕ್ತಸಿಕ್ತ ಬಟ್ಟೆ, ದಂಪತಿ ಸಿಸಿಟಿವಿ ತುಣುಕು ಮತ್ತು ಅನೇಕ ಜನರ ಸಾಕ್ಷ್ಯಗಳ ರೂಪದಲ್ಲಿ ಅವರಿಗೆ ಪುರಾವೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಳಿ, ಕಾಲುಂಗುರ ತೆಗೆದು ಹೋಟೆಲ್‌ನಲ್ಲೇ ಬಿಟ್ಟು ಹೋಗಿದ್ಲು!
ಪತಿ ಹತ್ಯೆ ಬಳಿಕ ಸೋನಮ್ ತನ್ನ ತಾಳಿ ಮತ್ತು ಕಾಲುಂಗುರವನ್ನು ಬ್ಯಾಗ್‌ವೊಂದರಲ್ಲಿಟ್ಟು ಹೋಟೆಲ್‌ನಲ್ಲೇ ಬಿಟ್ಟು ಹೋಗಿದ್ದಳು. ಪರಿಶೀಲನೆ ವೇಳೆ ಪೊಲೀಸರು ಬ್ಯಾಗ್ ಸಿಕ್ಕಿತ್ತು. ಇದು ಪೊಲೀಸರಲ್ಲಿ ಸಾಕಷ್ಟು ಅನುಮಾನ ಹುಟ್ಟಿಸಿತು.
– ಪ್ರಕರಣಕ್ಕೆ ಸ್ಫೋಟಕ ತಿರುವು ನೀಡಿದ್ದ ಟೂರಿಸ್ಟ್ ಗೈಡ್ ಹೇಳಿಕೆ
– ಪತಿ ಕೊಲ್ಲಲು ಕಾಂಟ್ರ್ಯಾಕ್ಟ್ ಕಿಲ್ಲರ್ಸ್ ನೇಮಿಸಿಕೊಂಡಿದ್ದ ಸೋನಮ್
ಶಿಲ್ಲಾಂಗ್: ಇಡೀ ದೇಶಾದ್ಯಂತ ವ್ಯಾಪಕ ಸದ್ದು ಮಾಡಿದ್ದ ಹನಿಮೂನ್ ಮರ್ಡರ್ ಕೇಸ್ (Honeymoon Murder Case) ಕೊನೆಗೂ ತಾರ್ಕಿಕ ಅಂತ್ಯಕ್ಕೆ ಬಂದಂತಿದೆ. ಇಂದೋರ್ ಉದ್ಯಮಿ ರಾಜಾ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮಾರು 790 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಸಿರುವ ಮೇಘಾಲಯ ಪೊಲೀಸರ ವಿಶೇಷ ತನಿಖಾ ತಂಡ (Meghalaya SIT) ರಾಜಾ ಪತ್ನಿ ಸೋನಂ ರಘುವಂಶಿಯೇ ಪ್ರಮುಖ ಆರೋಪಿ ಎಂದು ತಿಳಿಸಿದೆ. ಅಲ್ಲದೇ ಆಕೆಯ ಪ್ರಿಯಕರ ರಾಜ್ ಕುಶ್ವಾಹ ಸೇರಿ ಇತರ ಮೂವರ ವಿರುದ್ಧವೂ ಕೊಲೆ ಆರೋಪ ಹೊರಿಸಿದೆ.
ಈಗಾಗಲೇ ಬಂಧಿಸಿರುವ ಸೋನಮ್ ರಘುವಂಶಿ (Sonam Raghuvanshi), ರಾಜ್ ಕುಶ್ವಾಹ, ಆಕಾಶ್ ರಜಪೂತ್, ಆನಂದ್ ಕುರ್ಮಿ ಮತ್ತು ವಿಶಾಲ್ ಸಿಂಗ್ ಚೌಹಾಣ್ ಆರೋಪಿಗಳನ್ನ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಕಳೆದ ಮೇ 23ರಂದು ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದ ವೇಳೆ ಸೋನಮ್ ತನ್ನ ಗಂಡನನ್ನ ಕೊಲ್ಲಲು ಸಹಾಯ ಮಾಡಿದ್ದಾಗಿ ಆರೋಪ ಹೊರಿಸಲಾಗಿದೆ. ಇದನ್ನೂ ಓದಿ: Honeymoon Murder | ಕೊನೆಗೂ ತಮ್ಮಿಬ್ಬರ ಸಂಬಂಧ ಒಪ್ಪಿಕೊಂಡ ಸೋನಂ ರಘುವಂಶಿ – ರಾಜ್
ಎಲ್ಲ ಆರೋಪಿಗಳ ವಿರುದ್ಧ ಕೊಲೆಗಾಗಿ 103 (I), ಸಾಕ್ಷಿ ಕಣ್ಮರೆಗಾಗಿ 238 (a) ಹಾಗೂ ಕ್ರಿಮಿನಲ್ ಪಿತೂರಿಗಾಗಿ 61 (2) ಬಿಎನ್‌ಎಸ್ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹೆಚ್ಚುವರಿ ಎಫ್‌ಐಎಲ್ ವರದಿಗಳು ಬಂದ ನಂತರ ಇತರ ಮೂವರು ಆರೋಪಿಗಳ ವಿರುದ್ಧ ಪೂರಕ ಆರೋಪ ಪಟ್ಟಿ ಸಲ್ಲಿಸಲಾಗುವುದು ಎಂದು ಪೂರ್ವ ಖಾಸಿ ಹಿಲ್ಸ್ ಎಸ್ಪಿ ವಿವೇಕ್ ಸೈಮ್ ತಿಳಿಸಿದ್ದಾರೆ. ಆಲ್ಲದೇ ಸಾಕ್ಷ್ಯ ನಾಶ ಮತ್ತು ಮರೆಮಾಚುವ ಆರೋಪದ ಮೇಲೆ ಬಂಧಿಸಲ್ಪಟ್ಟ ಜೇಮ್ಸ್, ತೋಮರ್ ಮತ್ತು ಅಹಿರ್ಬರ್ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ಮೇಲೂ ನಿಗಾ ಇಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: Honeymoon Murder | ರಾಜ್‌ನ ಆಭರಣ, 5 ಲಕ್ಷ ನಗದು, ಪಿಸ್ತೂಲ್ ಇದ್ದ ಹಂತಕಿಯ ಬ್ಯಾಗ್ ಮುಚ್ಚಿಟ್ಟಿದ್ದ ಫ್ಲ್ಯಾಟ್ ಓನರ್ ಅರೆಸ್ಟ್
ಏನಿದು ಪ್ರಕರಣ?
ಇಂದೋರ್ ಮೂಲದ ರಾಜಾ ರಘುವಂಶಿ (Raja Raghuvanshi) ಮತ್ತು ಸೋನಮ್ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನ ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ಮಧುಚಂದ್ರ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. 11 ದಿನಗಳ ಹುಡುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿಯ ಮೃತದೇಹ ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.
ಸ್ಫೋಟಕ ತಿರುವು ಸಿಕ್ಕಿದ್ದೆಲ್ಲಿ?
ಮೇಘಾಲಯದ ಸೊಹ್ರಾ ಪ್ರದೇಶದಲ್ಲಿ ಈ ಮೊದಲು ಕೂಡ ಟೂರಿಸ್ಟ್‌ಗಳು ನಾಪತ್ತೆಯಾಗಿದ್ದರು. ಇದರಿಂದಾಗಿ ರಾಜಾ ರಘುವಂಶಿ ದಂಪತಿ ನಾಪತ್ತೆ ಪ್ರಕರಣ ಮೇಘಾಲಯದಲ್ಲಿ ಭಾರೀ ಸುದ್ದಿಯಾಗಿತ್ತು. ರಾಜಾ ರಘುವಂಶಿ ಮೃತದೇಹ ಪತ್ತೆ ಬಳಿಕ ಪ್ರಕರಣದ ಹಿಂದಿನ ಪಿತೂರಿ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಇದೇ ವೇಳೆ ಸ್ಥಳೀಯ ಟೂರಿಸ್ಟ್ ಗೈಡ್ ಒಬ್ಬರು ಸ್ಫೋಟಕ ಮಾಹಿತಿ ನೀಡಿದ್ದರು. ಇದನ್ನೂ ಓದಿ: Honeymoon Murder | ಬೇರೊಂದು ಮಹಿಳೆ ಹತ್ಯೆಗೈದು ಸೋನಮ್ ಶವವೆಂದು ನಂಬಿಸೋಕೆ ಮುಂದಾಗಿದ್ದ ಹಂತಕರು
ಮೇ 23 ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ನೊಂಗ್ರಿಯಾತ್‌ನಿಂದ ಮಾವ್ಲಾಖಿಯಾತ್‌ಗೆ 3,000 ಮೆಟ್ಟಿಲುಗಳನ್ನು ಹತ್ತುತ್ತಿದ್ದಾಗ ಮೂವರು ಪುರುಷ ಪ್ರವಾಸಿಗರು ದಂಪತಿ ಜೊತೆಗೆ ಇದ್ದುದ್ದನ್ನು ನೋಡಿದೆ. ಮೇ.22ರಂದು ದಂಪತಿಯನ್ನ ನೊಂಗ್ರಿಯಾಟ್‌ಗೆ ಕರೆದೊಯ್ಯಲು ನಾನು ಮುಂದಾದೆ. ಆದರೆ, ಅವರು ನನ್ನ ಗೈಡ್ ಸೇವೆಯನ್ನ ಒಳ್ಳೆಯ ಮಾತುಗಳಿಂದಲೇ ಬೇಡವೆಂದರು. ಇದೇ ವೇಳೆ ಭಾ ವಾನ್ಸಾಯಿ ಎಂಬ ಇನ್ನೊಬ್ಬ ಗೈಡ್‌ನನ್ನು ನೇಮಕ ಮಾಡಿಕೊಂಡ ದಂಪತಿ, ಶಿವಾರಾ ಹೋಂಸ್ಟೇಯಲ್ಲಿ ರಾತ್ರಿ ಕಳೆದು, ಮರುದಿನ ಅವರಿಬ್ಬರೇ ಹೊರಬಂದರು. ನಾನು ಅವರನ್ನು ಮತ್ತೆ ನೋಡಿದಾಗ ನಾಲ್ವರು ಪುರುಷರಿದ್ದರು, ಆದ್ರೆ ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಹಾಗಾಗಿ ನನಗೆ ಅದನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಆಗಲಿಲ್ಲ. ಪುರುಷರು ಮೌಲಖಿಯಾತ್ ತಲುಪಿದಾಗ, ದಂಪತಿಗಳ ಸ್ಕೂಟರ್ ಅಲ್ಲಿ ಇರಲಿಲ್ಲ ಎಂದು ಗೈಡ್ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಮಾಹಿತಿ ಪೊಲೀಸ್ ತನಿಖೆಯ ದಿಕ್ಕನ್ನೇ ಬದಲಿಸಿತ್ತು.
ಸುಳ್ಳಿನ ನಾಟಕವಾಡಿದ್ದ ಸೋನಂ
ಜೂ.9ರ ತಡರಾತ್ರಿ 1:42ರ ವೇಳೆ ಘಾಜಿಪುರ ಜಿಲ್ಲೆಯ ನಂದಗಂಜ್‌ನ ಡಾಬಾದಲ್ಲಿ ಭಯಭೀತ ಸ್ಥಿತಿಯಲ್ಲಿ ಮಹಿಳೆಯೊಬ್ಬರು ಪತ್ತೆಯಾಗಿದ್ದಾರೆ ಎಂಬ ಮಾಹಿತಿ ಬಂದಿತ್ತು. ಬಳಿಕ ಪೊಲೀಸರು ಸ್ಥಳಕ್ಕೆ ತಲುಪಿದಾಗ ಆಕೆ ತನ್ನನ್ನ ಸೋನಮ್ ರಘುವಂಶಿ ಎಂದು ಗುರುತಿಸಿಕೊಂಡಳು. ತನ್ನ ಪತಿಯೊಂದಿಗೆ ಮೇಘಾಲಯಕ್ಕೆ ಹೋಗಿರುವುದಾಗಿ ಹೇಳಿಕೊಂಡಿದ್ದಳು, ಡಾಬಾ ಮಾಲೀಕನ ಮುಂದೆಯೂ ಸುಳ್ಳಿನ ನಾಟಕವಾಡಿದ್ದಳು. ಅಲ್ಲಿ ಕೆಲ ಅಪರಿಚಿತ ವ್ಯಕ್ತಿಗಳು ತನ್ನ ಪತಿಯನ್ನು ಕೊಂದರು. ಬಳಿಕ ನನ್ನನ್ನ ಕಿಡ್ನ್ಯಾಪ್ ಮಾಡಿ ಇಲ್ಲಿ ಬಿಟ್ಟುಹೋದ್ರು ಎಂದು ಕಥೆ ಕಟ್ಟಿದ್ದಳು ಸೋನಮ್.
ಪ್ರೀ ಪ್ಲ್ಯಾನ್ಡ್ ಮರ್ಡರ್
ಕಿಡ್ನ್ಯಾಪ್ ಮಾಡಿದ್ಮೇಲೆ ನನ್ನ ಚಿನ್ನಾಭರಣ ದೋಚಿದ್ರು, ಪ್ರಜ್ಞೆ ಬರುತ್ತಿದ್ದಂತೆ ಘಾಜಿಪುರದ ಡಾಬಾ ಬಳಿ ಕತ್ತಲೆ ಕೋಣೆಯಲ್ಲಿ ಬಿಟ್ಟು ಹೋದ್ರು ಅಂತೆಲ್ಲ ಕಥೆ ಕಟ್ಟಿದ್ದಳು. ಆದ್ರೆ ಪೊಲೀಸರು ಇದ್ಯಾವುದನ್ನೂ ನಂಬಲಿಲ್ಲ. ಕೊಲೆಗಾರರು ಪತ್ತೆಯಾದ ಕೆಲವೇ ಸಮಯದಲ್ಲಿ ಸೋನಮ್ ಕೂಡ ಕಾಣಿಸಿಕೊಂಡಿದ್ದರಿಂದ ಅನುಮಾನ ಹೆಚ್ಚಾಗಿಯೇ ಇತ್ತು. ಆಕೆಯನ್ನು ಬಂಧಿಸಿದ ಬಳಿಕ ಇದು ಪೂರ್ವಯೋಜನೆಯಾಗಿತ್ತು ಎಂಬುದನ್ನು ಪೂರ್ವ ಖಾಸಿ ಹಿಲ್ಸ್ ಎಸ್ಪಿ ವಿವೇಕ್ ಸಿಮ್ ಬಹಿರಂಗಪಡಿಸಿದ್ದರು. ಪೊಲೀಸರು ಆಕೆಯನ್ನ ತೀವ್ರ ವಿಚಾರನೆಗೆ ಒಳಪಡಿಸಿದ ಬಳಿಕ ಸೋನಮ್ ಖುದ್ದು ತಪ್ಪೊಪ್ಪಿಕೊಂಡಿದ್ದಳು. ಇದನ್ನೂ ಓದಿ: ಯುವತಿಯನ್ನು ಪ್ರೀತಿಸಿ, ಮದುವೆಯಾಗಿ ಕಿರುಕುಳ ಆರೋಪ – ಮಾಜಿ ಕಾರ್ಪೊರೇಟರ್ ದಂಪತಿ, ಪುತ್ರನ ವಿರುದ್ಧ FIR
ಶಿಲ್ಲಾಂಗ್: ಮೇಘಾಲಯ (Meghalaya) ಮಧುಚಂದ್ರ ಪ್ರವಾಸ ಸಮಯದಲ್ಲಿ ನಡೆದ ರಾಜಾ ರಘುವಂಶಿ ಕೊಲೆ ಪ್ರಕರಣದ ಮತ್ತೊಂದು ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. 20 ಲಕ್ಷ ರೂ. ನೀಡಿ ಪತಿಯ ಕೊಲೆಗೇ ಸುಪಾರಿ ಕಿಲ್ಲರ್‌ಗಳನ್ನು ನೇಮಿಸಿಕೊಂಡಿದ್ದ ಸೋನಂ (Sonam Raghuvanshi) ಯಾರ‍್ಯಾರ ಜೊತೆಗೆ ದೂರವಾಣಿ ಸಂಪರ್ಕದಲ್ಲಿದ್ದಳು ಅನ್ನೋದು ತನಿಖೆ ವೇಳೆ ಬಯಲಾಗಿದೆ.
ಜೂನ್ 8ರಂದು ರಾತ್ರಿ 11:20ಕ್ಕೆ ಸೋನಂ ಗಾಜಿಪುರದಲ್ಲಿ ಇದ್ದ ಸಮಯಕ್ಕೆ ಈ ಸಂಖ್ಯೆ ಸ್ವಿಚ್‌ಆಫ್ ಆಗಿತ್ತು. ಹೀಗಾಗಿ ಸುಳ್ಳು ದಾಖಲೆ ನೀಡಿ ನಕಲಿ ಸಿಮ್ ಕಾರ್ಡ್ ಬಳಸಿದ್ದಾರೆ ಅನ್ನೋ ಅನುಮಾನವೂ ಹುಟ್ಟಿಕೊಂಡಿದೆ. ಹೀಗಾಗಿ ಪೊಲೀಸರು ಮೊಬೈಲ್ ಸಂಖ್ಯೆ ಕುರಿತು ಮತ್ತಷ್ಟು ವಿವರಗಳನ್ನು ಕಲೆಹಾಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಬುರ್ಖಾ ಧರಿಸಿ ಇಂದೋರ್ ಸೇರಿದ್ದಳು ಹನಿಮೂನ್ ಹಂತಕಿ – ಮದುವೆಗೆ 11 ದಿನ ಮುನ್ನವೇ ಕೊಲೆಗೆ ಪ್ಲ್ಯಾನ್!
ತನಿಖಾ ಪ್ರಗತಿ ಹೇಗಿದೆ?
ರಾಜಾ ರಘುವಂಶಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ನಿನ್ನೆ ಸ್ಥಳ ಮಹಜರು ನಡೆಸಿದ ಪೊಲೀಸರು ಘಟನೆಯನ್ನು ಮರುಸೃಷ್ಟಿಸಿ ಹಲವು ಸಾಕ್ಷ್ಯಗಳನ್ನು ಕಲೆಹಾಕಿದ್ದಾರೆ. ಇದೇ ವೇಳೆ ಮತ್ತೊಂದು ತನಿಖಾ ತಂಡ ರಾಜಾ ರಘುವಂಶಿ ಸಹೋದರ ಮನೆಯಲ್ಲಿ ವಿಚಾರಣೆ ನಡೆಸಿತ್ತು. ಶಿಲ್ಲಾಂಗ್ ಎಸ್‌ಐಟಿ ತಂಡವು ಇಂದು ಸೋನಂ ಮನೆಯಲ್ಲಿ ಪರಿಶೀಲನೆ ನಡೆಸುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಹನಿಮೂನ್ ಹಂತಕರು…
ಮೇಘಾಲಯ ಹನಿಮೂನ್ ಮರ್ಡರ್ ಮಿಸ್ಟರಿ ಈಗ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಮಧ್ಯಪ್ರದೇಶದ ರಾಜಾ ರಘುವಂಶಿ ಮತ್ತು ಸೋನಮ್ ರಘುವಂಶಿ ಕಳೆದ ಮೇ 11ರಂದು ಮದುವೆಯಾಗಿದ್ದರು. ಮೇ 20ರಂದು ಇಬ್ಬರೂ ಮೇಘಾಲಯಕ್ಕೆ ಹನಿಮೂನ್ ಪ್ರವಾಸ ಕೈಗೊಂಡಿದ್ದರು. ಆದರೆ ಮೇ 23ರಂದು ಈ ಜೋಡಿ ನೊಂಗ್ರಿಯಾಟ್ ಹಳ್ಳಿಯಲ್ಲಿರುವ ಹೋಂಸ್ಟೇಯಿಂದ ಹೊರಗೆ ಹೋದ ಗಂಟೆಗಳ ನಂತರ ನಾಪತ್ತೆಯಾಗಿತ್ತು. ಜೂನ್ 2ರಂದು ಈ ಗ್ರಾಮದಿಂದ 20 ಕಿ.ಮೀ ದೂರದಲ್ಲಿರುವ ಪೂರ್ವ ಖಾಸಿ ಹಿಲ್ಸ್ ಜಿಲ್ಲೆಯ ವೈಸಾವ್ಡಾಂಗ್ ಜಲಪಾತದ ಬಳಿ, ರಾಜಾ ರಘುವಂಶಿ ಅವರ ಶವ ಪತ್ತೆಯಾಯಾಗಿತ್ತು. ಮೊದಲು ಮೇಘಾಲಯ ಪೊಲೀಸರು ದುಷ್ಕರ್ಮಿಗಳು ರಾಜಾ ರಘುವಂಶಿ ಅವರನ್ನು ಕೊಲೆ ಮಾಡಿ, ಸೋನಮ್ ರಘುವಂಶಿ ಅವರನ್ನು ಅಪಹರಿಸಿದ್ದಾರೆ ಎಂದು ಶಂಕಿಸಿದ್ದರು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನವಾಗತೊಡಗಿದಾಗ, ಸೋನಮ್ ಮತ್ತು ಆಕೆಯ ಪ್ರೇಮಿ ತಮ್ಮ ಸಹಚರರೊಂದಿಗೆ ಸೇರಿ ರಾಜಾ ರಘುವಂಶಿ ಅವರನ್ನು ಕೊಲೆ ಮಾಡಿರುವ ಸಂಗತಿ ಬಯಲಾಯಿತು. ಬಳಿಕ ಅವರು ರೂಪಿಸಿದ್ದ ಒಂದೊಂದೇ ರಹಸ್ಯಗಳು ಬಯಲಾದವು.
– ಪತಿಯನ್ನು ಕೊಲ್ಲಲು 4 ಬಾರಿ ಪ್ಲ್ಯಾನ್ ಮಾಡಿದ್ದ ಹಂತಕಿ ಸೋನಮ್
ಶಿಲ್ಲಾಂಗ್: ಮೇಘಾಲಯಕ್ಕೆ (Meghalaya) ಹನಿಮೂನ್‌ಗೆ ತೆರಳಿದ್ದಾಗ ಪತಿಯನ್ನು ಹತ್ಯೆಗೈದು ಪೊಲೀಸರ ಅತಿಥಿ ಆಗಿರುವ ಸೋನಮ್‌ನ ಸಂಚುಗಳು ಬಗೆದಷ್ಟು ಬಯಲಾಗುತ್ತಿವೆ. ಹಂತಕರು ಬೇರೊಂದು ಮಹಿಳೆಯನ್ನು ಕೊಂದು ಸೋನಮ್ ಶವವೆಂದು ನಂಬಿಸಲು ಮುಂದಾಗಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಜೂ.11ರ<ದು ಮೇಘಾಲಯ ಪೊಲೀಸರು ಸೋನಮ್ ಹಾಗೂ ಇನ್ನುಳಿದ ಆರೋಪಿಗಳನ್ನು ಶಿಲ್ಲಾಂಗ್ ಕೋರ್ಟ್‌ಗೆ ಹಾಜರುಪಡಿಸಿದ್ದರು. ಈ ವೇಳೆ ಕೋರ್ಟ್ ಐದು ಆರೋಪಿಗಳನ್ನು 8 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿತ್ತು.
ಪೊಲೀಸರ ತನಿಖೆ ವೇಳೆ, ಸೊಹ್ರಾದಲ್ಲಿನ ಜಲಪಾತವನ್ನು ನೋಡಲು ಶಿಖರವನ್ನು ಹತ್ತಿಕೊಂಡು ಹೋಗುವಾಗ ನಿರ್ಜನ ಪ್ರದೇಶದಲ್ಲಿ ಹಂತಕರು ರಾಜಾ ರಘುವಂಶಿಯ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದರು. ಅಲ್ಲದೇ, ಆತನ ಮೃತದೇಹವನ್ನು ಕಮರಿಗೆ ಎಸೆದಿದ್ದರು. ಅದಾದ ನಂತರ ಇನ್ನೊಬ್ಬ ಮಹಿಳೆಯನ್ನು ಕೊಂದು ಶವವನ್ನು ಸುಟ್ಟು, ಆಕೆಯನ್ನೇ ಸೋನಮ್ ಎಂದು ನಂಬಿಸಬೇಕೆಂದು ಕೊಂಡಿದ್ದರು. ಸತ್ಯ ಬಯಲಾಗುವವರೆಗೂ ಸೋನಮ್‌ನ್ನು ಎಲ್ಲಿಯಾದರೂ ಅಡಗಿಸಿಡುವ ಯೋಜನೆ ಹಾಕಿಕೊಂಡಿದ್ದರು ಎಂದು ತಿಳಿದುಬಂದಿದೆ.
ಏನಿದು ಪ್ರಕರಣ?
ಇಂದೋರ್ ಮೂಲದ ರಾಜಾ ರಘುವಂಶಿ ಮತ್ತು ಸೋನಮ್ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. 11 ದಿನಗಳ ಹುಡುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.ಇದನ್ನೂ ಓದಿ: ಜೂ.27ಕ್ಕೆ `ತಿಮ್ಮನ ಮೊಟ್ಟೆಗಳು’ ರಿಲೀಸ್
ಶಿಲ್ಲಾಂಗ್: ಮೇಘಾಲಯದಲ್ಲಿ (Meghalaya) ರಾಜಾ ರಘುವಂಶಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಂತಕಿ ಪತ್ನಿ ಸೋನಂ (Sonam) ಹಾಗೂ ಐವರನ್ನು ಬಂಧಿಸಿದ ಪೊಲೀಸರು ಮಂಗಳವಾರ ತಡರಾತ್ರಿ ಆರೋಪಿಗಳನ್ನು ಮೇಘಾಲಯಕ್ಕೆ ಕರೆತಂದಿದ್ದಾರೆ.
ಮಂಗಳವಾರ ರಾತ್ರಿಯೇ ಆರೋಪಿಗಳ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಲಾಗಿದೆ. ಇಂದು ಮೇಘಾಲಯ ಪೊಲೀಸರು ಸೋನಮ್ ಮತ್ತು ರಾಜ್ ಕುಶ್ವಾಹ ಜೊತೆಗೆ ಇತರ ಆರೋಪಿಗಳಾದ ವಿಶಾಲ್ ಚೌಹಾಣ್, ಆಕಾಶ್ ರಜಪೂತ್ ಮತ್ತು ಆನಂದ್ ಕುರ್ಮಿಯನ್ನು ಪೊಲೀಸರು ಶಿಲ್ಲಾಂಗ್ ನ್ಯಾಯಾಲಯದಲ್ಲಿ ಹಾಜರುಪಡಿಸಲಿದ್ದಾರೆ. ಇದನ್ನೂ ಓದಿ: Kolar | ಮಾವಿನ ಹಣ್ಣಿಗೆ ಬೆಲೆ ಕುಸಿತ – ಇಂದು ಶ್ರೀನಿವಾಸಪುರ ತಾಲೂಕು ಬಂದ್
ಆರೋಪಿಗಳನ್ನು ವಶಕ್ಕೆ ಪಡೆದ ಬಳಿಕ ಪೊಲೀಸರು ಸೋನಂ ಅನ್ನು ಅಪರಾಧ ಸ್ಥಳಕ್ಕೆ ಕರೆದೊಯ್ಯಲಿದ್ದಾರೆ. ಅಲ್ಲಿ ಅಪರಾಧ ದೃಶ್ಯವನ್ನು ಮರುಸೃಷ್ಟಿಸಲಾಗುವುದು ಎಂದು ಹೇಳಲಾಗುತ್ತಿದೆ. ಈ ನಡುವೆ ರಾಜಾ ರಘುವಂಶಿ ಕೊಲೆ ನಡೆಯುವಾಗ ಸೋನಂ ಸ್ಥಳದಲ್ಲಿ ಇದ್ದಳು, ಹತ್ಯೆಯನ್ನು ಕಣ್ಣಾರೆ ಕಂಡಿದ್ದಾಳೆ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ. ಇದನ್ನೂ ಓದಿ: ತಾಂತ್ರಿಕ ದೋಷ – ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾತ್ರೆ ಮುಂದೂಡಿಕೆ
ಕೊಲೆ ಬಳಿಕ ವಾರಣಾಸಿಯ ಡಾಬಾವೊಂದರ ಬಳಿ ಸೋನಮ್‌ನ್ನು ಪೊಲೀಸರು ಬಂಧಿಸಿದ್ದರು. ವೈದ್ಯಕೀಯ ಪರೀಕ್ಷೆ ನಂತರ ಉತ್ತರ ಪ್ರದೇಶ ಪೊಲೀಸರು ಆಕೆಯನ್ನು ಮೇಘಾಲಯ ಪೊಲೀಸರಿಗೆ ಹಸ್ತಾಂತರಿಸಿದ್ದರು. ಮಂಗಳವಾರ ಬೆಳಗ್ಗೆ ಮೇಘಾಲಯ ಪೊಲೀಸರು ಆಕೆಯನ್ನು ಬಿಹಾರದ ಪಾಟ್ನಾದ ಫುಲ್ವರಿ ಷರೀಫ್ ಠಾಣೆಗೆ ಕರೆತಂದಿದ್ದು, ತಡರಾತ್ರಿ ಮೇಘಾಲಯಕ್ಕೆ ಕರೆತಂದಿದ್ದಾರೆ. ಇದನ್ನೂ ಓದಿ: ಹನಿಮೂನ್ ಮರ್ಡರ್ | ಪತಿ ಹತ್ಯೆಗೆ 20 ಲಕ್ಷ ನೀಡುವುದಾಗಿ ಆಫರ್ ನೀಡಿದ್ದ ಹಂತಕಿ
ಬಾ ನಲ್ಲೆ ಮಧುಚಂದ್ರಕೆ ಸಿನಿಮಾ ರೀತಿಯಲ್ಲಿ ಹನಿಮೂನ್‌ಗೆ ಕರೆದೊಯ್ದು ಪತಿಯನ್ನು ಹತ್ಯೆಗೈದ ಆರೋಪಿ ಪತ್ನಿ ಸೋನಂ ರಘುವಂಶಿಯ ಕರಾಳ ಮುಖಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ. ಸೋನಮ್ ತನ್ನ ಪತಿ ರಾಜಾ ರಘುವಂಶಿಯನ್ನು ಕೊಲೆ ಮಾಡಲು 4 ಲಕ್ಷ ರೂ.ಗೆ ನೀಡಿದ್ದ ಸುಪಾರಿಯನ್ನು 20 ಲಕ್ಷ ರೂ.ಗೆ ಏರಿಸಿದ್ದಳು ಎನ್ನುವುದು ಬೆಳಕಿಗೆ ಬಂದಿದೆ. ವಿವಾಹವಾದ ಕೆಲವೇ ದಿನಗಳಲ್ಲಿ ಹಂತಕಿ ತನ್ನ ಪ್ರಿಯಕರ ರಾಜ್ ಕುಶ್ವಾಹ ಜೊತೆ ಸೇರಿಕೊಂಡು ಕೊಲೆಗೆ ಪ್ಲ್ಯಾನ್ ಮಾಡಿದ್ದಳು. ಜೊತೆಗೆ ಒನ್-ವೇ ಟಿಕೆಟ್ ಮಾತ್ರ ಬುಕ್ ಮಾಡಲಾಗಿತ್ತು. ಯೋಜನೆಯಂತೆ ಸೊಹ್ರಾಕ್ಕೆ ತೆರಳಿದ ಬಳಿಕ ಪತಿ ರಾಜ ರಘುವಂಶಿ ಹತ್ಯೆಗೆ ಸೋನಮ್ ಬಾಡಿಗೆ ಹಂತಕರನ್ನು ನೇಮಿಸಿದ್ದಳು. ಜೊತೆಗೆ ಕೊಲೆ ಬಳಿಕ 4 ಲಕ್ಷ ರೂ. ಕೊಡುವುದಾಗಿ ಸುಪಾರಿ ನೀಡಿದ್ದಳು. ಇದನ್ನೂ ಓದಿ: ನಂದಿಬೆಟ್ಟಕ್ಕೆ ಮೂರು ದಿನಗಳ ಕಾಲ ಪ್ರವಾಸಿಗರಿಗೆ ನಿರ್ಬಂಧ
ಮೇ 23ರಂದು ಸೋನಮ್ ಮತ್ತು ರಾಜಾ ರಘುವಂಶಿ ಸೊಹ್ರಾದಲ್ಲಿನ ಜಲಪಾತವನ್ನು ನೋಡಲು ಶಿಖರವನ್ನು ಹತ್ತಿಕೊಂಡು ಹೋಗುತ್ತಿದ್ದರು. ಈ ವೇಳೆ ಹಂತಕರು ಅವರನ್ನು ಹಿಂಬಾಲಿಸುತ್ತಿದ್ದರು. ಇದನ್ನರಿತ ಸೋನಮ್ ನಿರ್ಜನ ಪ್ರದೇಶ ಕಾಣಿಸಿದಂತೆ ಆಯಾಸವಾದಂತೆ ನಟಿಸಿದ್ದಳು. ಆಗ ಹಂತಕರನ್ನು ಕೊಲೆ ಮಾಡುವಂತೆ ಕೇಳಿಕೊಂಡಿದ್ದಾಳೆ. ಆದರೆ ಹಂತಕರು ತಾವು ಆಯಾಸಗೊಂಡಿರುವುದಾಗಿ ತಿಳಿಸಿದ್ದಾರೆ. ಇದರಿಂದ ಸೋನಮ್ ಸುಪಾರಿ ಹಣವನ್ನು 4 ಲಕ್ಷ ರೂ.ದಿಂದ 20 ಲಕ್ಷ ರೂ.ಗೆ ಹೆಚ್ಚಿಸಿದ್ದಳು. ಜೊತೆಗೆ ಕೊಲೆಯಾದ ಬಳಿಕ ತನ್ನ ಪತಿ ಹಣವನ್ನು ಕಂದಕಕ್ಕೆ ಎಸೆಯಲು ಹಂತಕರಿಗೆ ಸಹಾಯ ಮಾಡಿದ್ದಳು ಎಂದು ವರದಿಯಾಗಿದೆ. ಇದನ್ನೂ ಓದಿ: Bengaluru | ಮಚ್ಚಿನಿಂದ ಕೊಚ್ಚಿ ರೌಡಿಶೀಟರ್ ಭೀಕರ ಹತ್ಯೆ
ನವದೆಹಲಿ: ನನ್ನ ಅಣ್ಣ ಬೇಡ ಎನಿಸಿದ್ದರೆ ಲವ್ವರ್ ಜೊತೆಯೇ ಓಡಿ ಹೋಗಬಹುದಿತ್ತು. ಕೊಲೆ ಯಾಕೆ ಮಾಡಿದಳು ಎಂದು ಪತ್ನಿಯಿಂದ ಹತ್ಯೆಯಾದ ರಾಜಾ ರಘುವಂಶಿ ಸಹೋದರಿ ಶ್ರಾಸ್ತಿ ಅಳಲು ತೋಡಿಕೊಂಡಿದ್ದಾರೆ.
ಸೋನಮ್ ಎಂಬಾಕೆ ತನ್ನ ಪತಿಯನ್ನು ಹನಿಮೂನ್‌ಗೆ ಕರೆದುಕೊಂಡು ಹೋಗಿ ಹತ್ಯೆ ಮಾಡಿದ ಪ್ರಕರಣ ಇಡೀ ದೇಶಾದ್ಯಂತ ಸದ್ದು ಮಾಡುತ್ತಿದೆ. ಕೊಲೆಯಾದ ಉದ್ಯಮಿ ರಾಜಾ ರಘುವಂಶಿ ನೆನೆದು ಸಹೋದರಿ ಕಣ್ಣೀರಿಟ್ಟಿದ್ದಾರೆ. ಕೊಲೆಗಾರ್ತಿ ಅತ್ತಿಗೆ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: `ನಾ ವಿಧವೆಯಾಗ್ತೀನಿ, ನಿನ್ನನ್ನೇ ಮದ್ವೆಯಾಗ್ತೀನಿ’ ಅಂದಿದ್ಳಂತೆ ಸೋನಂ ರಘುವಂಶಿ..!
ನನ್ನ ಸಹೋದರ, ಸೋನಮ್ ಜೊತೆ ಏಳು ಜನ್ಮಗಳ ಕಾಲ ಇರುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದ. ಆದರೆ, ಅವಳು ಅವನ ಜೊತೆ ಏಳು ದಿನಗಳು ಕೂಡ ಇರಲು ಸಾಧ್ಯವಾಗಲಿಲ್ಲ. ಅವನು ನಿಮಗೆ ಏನು ಮಾಡಿದ್ದ? ಯಾಕೆ ಕೊಂದಿರಿ ಎಂದು ರಾಜಾ ಸಹೋದರಿ ಪ್ರಶ್ನಿಸಿದ್ದಾಳೆ.
ರಾಜಾ ಮತ್ತು ಸೋನಮ್ ಮೇ 11 ರಂದು ವಿವಾಹವಾದರು. ಮೇ 20 ರಂದು ಮೇಘಾಲಯಕ್ಕೆ ಹನಿಮೂನ್‌ಗೆ ಹೋದರು. ಮೂರು ದಿನಗಳ ನಂತರ ಇಬ್ಬರೂ ನಾಪತ್ತೆಯಾಗಿದ್ದರು. ಜೂನ್ 2 ರಂದು ರಾಜಾ ಶವ ಪತ್ತೆಯಾಗಿತ್ತು. ಮಚ್ಚಿನಿಂದ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
– ಪ್ರಿಯತಮೆಯ ‘ವಿಧವಾ ಪ್ಲ್ಯಾನ್’ಗೆ ಒಪ್ಪಿಗೆ ನೀಡಿದ್ದ ಪ್ರಿಯಕರ ರಾಜ್
ಶಿಲ್ಲಾಂಗ್: ಇಂದೋರ್ ಮೂಲದ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಆರೋಪಿ ಪತ್ನಿ ಸೋನಂ ರಘುವಂಶಿಯ (Sonam Raghuvanshi) ಕರಾಳ ಮುಖಗಳು ಒಂದೊಂದಾಗಿ ಬಹಿರಂಗವಾಗುತ್ತಿದೆ. ʻಬಾ ನಲ್ಲ ಮಧುಚಂದ್ರಕೆʼ ಅಂತ ಕರೆದೊಯ್ದು ಗಂಡನಿಗೆ ಚಟ್ಟಿದ ಸೋನಂ ಪ್ರಿಯಕರನಿಗಾಗಿ ವಿಧವೆ ಆಗೋದಕ್ಕೂ ರೆಡಿ ಇದ್ದಳಂತೆ ಅನ್ನೋದು ಪೊಲೀಸರ (Meghalaya Police) ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: Indore Couple | ಹನಿಮೂನ್ ಮರ್ಡರ್: ‘ರಾಜಾ’ಗೆ ‘ರಾಜ್’ ಮುಹೂರ್ತ!
ವಿಧವೆಯಾಗಿ ನಿನ್ನನ್ನೇ ಮದ್ವೆಯಾಗ್ತೀನಿ
ಹೌದು. ಅಸಲಿಗೆ ರಾಜ ರಘುಂವಶಿಯನ್ನ (Raja Raghuvanshi) ಕೊಂದು ಇಡೀ ಪ್ರಕರಣವನ್ನ ದರೋಡೆಯಂತೆ ಬಿಂಬಿಸುವುದು ಪ್ಲ್ಯಾನ್ ಆಗಿತ್ತು. ಸೋಮಂ ಕೂಡ ಈ ಬಗ್ಗೆ ಪ್ರಿಯಕರ ರಾಜ್ ಕುಶ್ವಾಹಗೆ (Raj Kushwaha) ತಿಳಿಸಿದ್ದಳು. ರಾಜನನ್ನು ಕೊಂದು ಅದನ್ನ ದರೋಡೆಯಂತೆ ಬಿಂಬಿಸೋಣ. ನಾನು ವಿಧವೆಯಾದ್ಮೇಲೆ ನನ್ನ ತಂದೆ ನನ್ನನ್ನ ನಿನಗೇ ಕೊಟ್ಟು ಮದುವೆ ಮಾಡ್ತಾರೆ ಅಂತಲೂ ಹೇಳಿದ್ದಳಂತೆ ವಂಚಕಿ. ಇದಕ್ಕೆ ರಾಜ್ ಸಹ ಒಪ್ಪಿಕೊಂಡಿದ್ದನಂತೆ. ಇದನ್ನೂ ಓದಿ: ಹೆಂಡತಿ ಮಾತು ಕೇಳಿ ನನ್ನ ಮಗ ಹನಿಮೂನ್‌ಗೆ 10 ಲಕ್ಷ ಮೌಲ್ಯದ ಆಭರಣ ಹಾಕ್ಕೊಂಡು ಹೋಗಿದ್ದ: ಸೊಸೆಯ ಪ್ಲ್ಯಾನ್ ಬಗ್ಗೆ ಬಿಚ್ಚಿಟ್ಟ ಅತ್ತೆ
ಸೋನಂ ಮಾಸ್ಟರ್ ಪ್ಲ್ಯಾನ್ ಏನಿತ್ತು?
ಹೃದ್ರೋಗಿಯಾಗಿದ್ದ ಸೋನಂ ತಂದೆ ದೇವಿ ಸಿಂಗ್, ತನ್ನ ಕಾರ್ಖಾನೆಯಲ್ಲೇ ಕೆಲಸ ಮಾಡ್ತಿದ್ದ ರಾಜ್‌ಗೆ ಕೊಟ್ಟು ಮದ್ವೆ ಮಾಡಲು ಒಪ್ಪಿಕೊಳ್ಳಲ್ಲ ಅನ್ನೋದು ಸೋನಂಗೆ ಗೊತ್ತಿತ್ತು. ಹಾಗಾಗಿಯೇ ಮಾಸ್ಟರ್ ಪ್ಲ್ಯಾನ್ ಮಾಡಿದ್ದಳು. ಮೊದಲು ರಾಜನನ್ನ ಮದುವೆ ಆಗಿಬಿಡೋಣ, ಅವನನ್ನು ಕೊಂದಮೇಲೆ ವಿಧವೆ ಅನ್ನೋ ಮಮಕಾರದಲ್ಲಾದ್ರೂ ರಾಜ್‌ಗೆ ತನ್ನನ್ನು ಕೊಟ್ಟು ಮದುವೆ ಮಾಡುತ್ತಾರೆ ಎಂಬುದು ಅವಳ ಪ್ಲ್ಯಾನ್ ಆಗಿತ್ತು ಅನ್ನೋದು ಪೊಲೀಸರ ವಿಚಾರಣೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: Honeymoon Murder | ಕಾಂಟ್ರ್ಯಾಕ್ಟ್ ಕಿಲ್ಲರ್ಸ್.. ಫೋನ್‌ಕಾಲ್‌ನಲ್ಲೇ ಪಿನ್ ಟು ಪಿನ್ ಅಪ್ಡೇಟ್ – ಕೊಲೆ ರಹಸ್ಯ ಬಯಲಾಗಿದ್ದೇ ರೋಚಕ
ರಾಜ್ ತಾಯಿ ಹೇಳೋದೇನು?
ಸೋನಂ ಪ್ರಿಯಕರ ರಾಜ್ ಕುಶ್ವಾಹನ ತಾಯಿ ಮಾತನಾಡಿ, ನನ್ನ ಮಗ ನಿರಪರಾಧಿ, ಮುಗ್ಧ ಅಂತ ಕಣ್ಣೀರಿಟ್ಟಿದ್ದಾರೆ. ಅವನಿಗಿನ್ನೂ 20 ವರ್ಷ, ನನ್ನ ಮಗ ಆ ರೀತಿ ಮಾಡುವುದಿಲ್ಲ. ಒಂದೇ ಕಾರ್ಖಾನೆಯಲ್ಲಿ ಇಬ್ಬರೂ ಕೆಲಸ ಮಾಡ್ತಿದ್ದರಿಂದ ಮಾತನಾಡುತ್ತಿದ್ದರು ಅಷ್ಟೇ. ನಮ್ಮ ಮಗ ಮುಗ್ಧ ಅನ್ನೋದನ್ನ ಸಾಬೀತುಪಡಿಸುಂತೆ ಸರ್ಕಾರಕ್ಕೆ ಮನವಿ ಮಾಡ್ತೇನೆ ಎಂದು ಬೇಡಿಕೊಂಡಿದ್ದಾರೆ. ಇದನ್ನೂ ಓದಿ: ಕಾಲ್ತುಳಿತ ಸಂಭವಿಸಿದಾಗ ನಮ್ಮನ್ನ ರಕ್ಷಿಸಿಕೊಳ್ಳೋದು ಹೇಗೆ? – ಈ ಸಣ್ಣ ತಂತ್ರವೂ ಅಮೂಲ್ಯವಾದ ಜೀವ ಉಳಿಸುತ್ತೆ
#WATCH | Indore, Madhya Pradesh | Four people have been arrested in the Raja Raghuvanshi murder case, including Raj Singh Kushwaha.
Raj Kushwaha’s mother says, “My son cannot do anything like this. He is just 20 years old… He is my everything… My son worked in Sonam’s… pic.twitter.com/twqpT2JC28
ಹನಿಮೂನ್‌ನಲ್ಲೇ ಹತ್ಯೆ – ಏನಿದು ದ್ವೇಷ?
ಇಂದೋರ್ ಮೂಲದ ರಾಜಾ ರಘುವಂಶಿ ಮತ್ತು ಸೋನಮ್ ಕಳೆದ ಮೇ 11ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನವದಂಪತಿ ಮೇ 20ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ತೆರಳಿದ್ದರು. ಶಿಲ್ಲಾಂಗ್‌ನ ಬಾಲಾಜಿ ಅತಿಥಿಗೃಹದಲ್ಲಿ ಉಳಿದುಕೊಂಡಿದ್ದ ಅವರು ಮೇ 22ರ ಬೆಳಗ್ಗೆ ದ್ವಿಚಕ್ರ ವಾಹನವೊಂದನ್ನು ಬಾಡಿಗೆ ಪಡೆದು ಅತಿಥಿ ಗೃಹದಿಂದ ಜನಪ್ರಿಯ ಪ್ರವಾಸಿ ತಾಣ ಸೊಹ್ರಾಕ್ಕೆ ತೆರಳಿದ್ದರು. ಈ ವೇಳೆ ಅವರು 2 ಲಗೇಜ್ ಬ್ಯಾಗ್ ತಮ್ಮೊಂದಿಗೆ ತೆಗೆದುಕೊಂಡಿದ್ದರು. ಮೇ 25ರೊಳಗೆ ಹಿಂತಿರುಗುವುದಾಗಿ ಅತಿಥಿ ಗೃಹದ ವ್ಯವಸ್ಥಾಪಕರಿಗೆ ತಿಳಿಸಿದ್ದರು. ಮೇ 23ರಂದು ಮೌಲಾಖಿಯಾತ್ ಗ್ರಾಮ ತಲುಪಿದ ದಂಪತಿ, ನೊಂಗ್ರಿಯಾಟ್‌ನ ಶಿಪಾರಾ ಹೋಂಸ್ಟೇಯಲ್ಲಿ ವಾಸ್ತವ್ಯ ಹೂಡಿದ್ದರು. ಆ ಬಳಿಕ ದಂಪತಿ ನಿಗೂಢವಾಗಿ ನಾಪತ್ತೆಯಾಗಿದ್ದರು. ಇದಾದ 1 ದಿನದ ಬಳಿಕ ಅವರು ಬಾಡಿಗೆಗೆ ಪಡೆದಿದ್ದ ಸ್ಕೂಟಿ ಸೊಹ್ರಾರಿಮ್ ಬಳಿ ಪತ್ತೆಯಾಗಿತ್ತು. 11 ದಿನಗಳ ಹುಟುಕಾಟದ ಬಳಿಕ ಶಿಲ್ಲಾಂಗ್ ಪೊಲೀಸರು ಆಳವಾದ ಕಂದಕವೊಂದರಲ್ಲಿ ರಾಜಾ ರಘುವಂಶಿ ಅವರ ಮೃತದೇಹವನ್ನು ಪತ್ತೆ ಹಚ್ಚಿದ್ದರು. ಅವರನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎಂದು ದೃಢಪಡಿಸಿದ್ದರು.
ಪತ್ನಿಗೆ ಚಟ್ಟಕಟ್ಟಿದ್ದೇಕೆ?
ಸೋನಮ್‌ಗೆ ರಾಜ್ ಕುಶ್ವಾಹ ಎಂಬ ಯುವಕನೊಂದಿಗೆ ಅಕ್ರಮ ಸಂಬಂಧವಿತ್ತು. ಇದೇ ಕಾರಣಕ್ಕೆ ಆಕೆ ಪತಿಯ ಕೊಲೆಗೆ ಸಂಚು ರೂಪಿಸಿದ್ದಳು. ಮೇಘಾಲಯದಲ್ಲಿ ಹನಿಮೂನ್‌ಗೆ ತೆರಳಿದ ವೇಳೆ ಸೊಹ್ರಾ ಪ್ರದೇಶದಲ್ಲಿ ಪತಿಯನ್ನ ಕೊಲೆ ಮಾಡಲು ಆಕೆ ಮಧ್ಯಪ್ರದೇಶ ಮೂಲದ ಬಾಡಿಗೆ ಕೊಲೆಗಾರರನ್ನು ನೇಮಿಸಿದ್ದಳು. ಇದನ್ನೂ ಓದಿ: ಸೋಷಿಯಲ್ ಮೀಡಿಯಾದಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಂಡು ಮಾಡೆಲ್ ಆತ್ಮಹತ್ಯೆ
ಫೋನ್‌ಕಾಲ್‌ನಲ್ಲೇ ಪಿನ್-ಟು-ಪಿನ್ ಅಪ್ಡೇಟ್
ರಾಜಾ ರಘುವಂಶಿಯನ್ನ ಕೊಲೆ ಮಾಡಲು ರಾಜ್ ಖುದ್ದು ಶಿಲ್ಲಾಂಗ್‌ಗೆ ಹೋಗಿರಲಿಲ್ಲ. ಆರೋಪಿಗಳು, ಸೋನಮ್ ಮತ್ತು ರಾಜ್ ಪರಸ್ಪರ ಫೋನ್‌ನಲ್ಲೇ ಸಂಪರ್ಕದಲ್ಲಿದ್ದರು. ಸೋನಮ್ ಬಳಿ ಎಲ್ಲೆಲ್ಲಿಗೆ ಹೋಗ್ತಿದ್ದಾರೆ ಅನ್ನೋ ಅಪ್ಡೇಟ್ ಪಡೆದುಕೊಂಡು ನೇಮಿಸಿದ್ದ ಕಾಂಟ್ರ‍್ಯಾಕ್ಟ್ ಕಿಲ್ಲರ್‌ಗಳಿಗೆ ಫೋನ್ ಮೂಲಕವೇ ಮುಂದೇನು ಮಾಡಬೇಕು ಅನ್ನೋದ್ರ ಬಗ್ಗೆ ಸೂಚನೆ ಕೊಡ್ತಿದ್ದ. ಸೋನಮ್ ಶಿಲ್ಲಾಂಗ್‌ನಲ್ಲಿ ಕಿಲ್ಲರ್‌ಗಳನ್ನ ಭೇಟಿಯಾದ ಬಳಿಕ ಗೈಡ್‌ಗಳ ನೆಪದಲ್ಲಿ ಚಿರಾಪುಂಜಿ ತಲುಪಿದ್ರು. ಈ ವೇಳೆ ಸೋನಮ್ ನಿರ್ಜನ ಪ್ರದೇಶಕ್ಕೆ ಕರೆದೊಯ್ದಾಗ ಅಲ್ಲಿಯೇ ಹಂತಕರು ರಘುವಂಶಿಯನ್ನ ಹತ್ಯೆಗೈದಿದ್ದಾರೆ.