Tag: Raja kaluve

  • ದರ್ಶನ್‌ ಮನೆ ತೂಗುದೀಪ ನಿವಾಸಕ್ಕೂ ಸಂಚಕಾರ

    ದರ್ಶನ್‌ ಮನೆ ತೂಗುದೀಪ ನಿವಾಸಕ್ಕೂ ಸಂಚಕಾರ

    ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ (Renuka Swamy Murder Case) ಪ್ರಕರಣದಲ್ಲಿ ಸಿಲುಕಿರುವ ದರ್ಶನ್‌ಗೆ (Darshan) ಮತ್ತೊಂದು ಕಂಟಕ ಎದುರಾಗಿದೆ. ಆರ್‌ಆರ್‌ ನಗರದ ಐಡಿಯಲ್ ಹೋಮ್ಸ್‌ನಲ್ಲಿರುವ ದರ್ಶನ್‌ ಮನೆ ತೂಗುದೀಪ ನಿವಾಸಕ್ಕೂ ಸಂಚಕಾರ ಬರುವ ಸಾಧ್ಯತೆಯಿದೆ.

    ಯಾಕೆ ಸಂಕಷ್ಟ?
    2016ರಲ್ಲಿ ರಾಜ ಕಾಲುವೆ ಒತ್ತುವರಿ (Raja Kaluve Encroachment) ತೆರವಿಗೆ ಸರ್ಕಾರ ಸೂಚಿಸಿತ್ತು. ಒತ್ತುವರಿ ಮಾಡಿಕೊಂಡ ಕಟ್ಟಡಗಳ ಪಟ್ಟಿ ಮಾಡಿ ಬಿಬಿಎಂಪಿ ಬಿಡುಗಡೆ ಮಾಡಿತ್ತು. ರಾಜಕಾಲುವೆಯ ಬಫರ್ ಝೋನ್ ಮೇಲೆ ದರ್ಶನ್ ನಿವಾಸ ನಿರ್ಮಾಣವಾಗಿದ್ದ ವಿಚಾರ ಬೆಳಕಿಗೆ ಬಂದಿತ್ತು.

    ಒತ್ತುವರಿ ತೆರವು ಕಾರ್ಯಾಚರಣೆ ಮಾಡುವಾಗ ದರ್ಶನ್‌ ಹೈಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಆರ್.ಆರ್ ನಗರದಲ್ಲಿ ಒಟ್ಟು 70 ಕಡೆ ಒತ್ತುವರಿ ಆಗಿರುವುದು ಪತ್ತೆಯಾಗಿತ್ತು. ಹಳೆಯ 37 ಕಡೆ, ಹೊಸದಾಗಿ 33 ಕಡೆ ಒತ್ತುವರಿಯಾಗಿರುವುದು ಬಿಬಿಎಂಪಿ ತನಿಖೆ ವೇಳೆ ಬೆಳಕಿಗೆ ಬಂದಿತ್ತು. ಇದನ್ನೂ ಓದಿ: 30 ನಿಮಿಷದ ಹಲ್ಲೆ ವಿಡಿಯೋ ಆಧಾರಿಸಿಯೇ ದರ್ಶನ್‌ ಅರೆಸ್ಟ್‌

     

    ಈಗ ಬಿಬಿಎಂಪಿ ತಡೆ ನೀಡಲಾಗಿರುವ ಪ್ರಕರಣಗಳನ್ನ ತೆರವು ಮಾಡಿಸಲು ಮುಂದಾಗಿದೆ. ಒಂದು ವೇಳೆ ಕೋರ್ಟ್‌ ತಡೆಯನ್ನು ತೆರವುಗೊಳಿಸಿದರೆ ದರ್ಶನ್‌ ಮನೆಗೆ ಸಂಕಷ್ಟ ಎದುರುಗಾವ ಸಾಧ್ಯತೆಯಿದೆ.

  • ಬೆಂಗಳೂರು ಮಳೆಗೆ ಎರಡನೇ ಬಲಿ – ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಯುವಕ

    ಬೆಂಗಳೂರು ಮಳೆಗೆ ಎರಡನೇ ಬಲಿ – ರಾಜಕಾಲುವೆಯಲ್ಲಿ ಕೊಚ್ಚಿ ಹೋದ ಯುವಕ

    ಬೆಂಗಳೂರು: ಭಾನುವಾರ ನಗರದಲ್ಲಿ (Bengaluru) ಸುರಿದ ಮಹಾಮಳೆಗೆ (Rain) ಯುವಕನೋರ್ವ ರಾಜಕಾಲುವೆಯಲ್ಲಿ (Raja Kaluve) ಕೊಚ್ಚಿ ಹೋದ ಘಟನೆ ಕೆಪಿ ಅಗ್ರಹಾರದ (KP Agrahara) ಬಳಿ ನಡೆದಿದೆ.

    ಕೊಚ್ಚಿ ಹೋಗಿದ್ದ ಯುವಕನನ್ನು ಲೋಕೇಶ್ (27) ಎಂದು ಗುರುತಿಸಲಾಗಿದೆ. ಯುವಕನ ಮೃತದೇಹ ಬ್ಯಾಟರಾಯನಪುರದ (Byatarayanapura) ರಾಜಕಾಲುವೆ ಬಳಿ ಪತ್ತೆಯಾಗಿದೆ. ಸ್ಥಳದಲ್ಲಿ ಪೊಲೀಸರು ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಸಾಗಿಸಲಾಗಿದೆ. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಟೆಕ್ಕಿ ಸಾವು – ದುರ್ಘಟನೆ ಬಳಿಕ ಎಚ್ಚೆತ್ತ BBMP

    ಈ ಸಂಬಂಧ ಕೆಪಿ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅವೈಜ್ಞಾನಿಕ ರಾಜಕಾಲುವೆ ಕಾಮಗಾರಿಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ನಗರದ ಕೆಆರ್ ಸರ್ಕಲ್‍ನ ಅಂಡರ್ ಪಾಸ್‍ನಲ್ಲಿ ನಿಂತಿದ್ದ ಮಳೆ ನೀರಿನಲ್ಲಿ ಕಾರು ಮುಳುಗಿ ಟೆಕ್ಕಿ ಭಾನುರೇಖಾ ಎಂಬುವವರು ಸಾವನ್ನಪ್ಪಿದ್ದರು. ಈಗ ಯುವಕನ ಸಾವು ಮಳೆಯಿಂದ ಆದ ಎರಡನೇ ದುರ್ಘಟನೆ ಆಗಿದೆ. ಇದನ್ನೂ ಓದಿ: ಮಳೆ ಆರ್ಭಟಕ್ಕೆ ಮನೆಗೆ ನೀರು ನುಗ್ಗಿ ಜಗ್ಗೇಶ್ ಕಾರು ಮುಳುಗಡೆ

  • ರಾಜಕಾಲುವೆ ನಿರ್ವಹಣೆಯಲ್ಲಿ ಭ್ರಷ್ಟಾಚಾರ- ಸ್ಥಳೀಯರ ಆರೋಪ

    ರಾಜಕಾಲುವೆ ನಿರ್ವಹಣೆಯಲ್ಲಿ ಭ್ರಷ್ಟಾಚಾರ- ಸ್ಥಳೀಯರ ಆರೋಪ

    ಬೆಂಗಳೂರು: ಮಳೆಗಾಲ ಬರುತ್ತಿದ್ದಂತೆ ಪಾಲಿಕೆ ದುಡ್ಡು ಮಾಡಲು ರೆಡಿಯಾಗಿದೆ. ಅದರಲ್ಲೂ ರಾಜಕಾಲುವೆಗಳ ರಿಪೇರಿ, ನಿರ್ವಹಣೆ ಹೆಸರಲ್ಲಿ ಹಣ ಪೀಕುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

    ಶಾಂತಿನಗರ ರಾಜಕಾಲುವೆ ತಡೆಗೋಡೆ ಪ್ರತಿ ವರ್ಷ ನಿರ್ವಹಣೆ ಹೆಸರಲ್ಲಿ ಒಡೆದು ಮತ್ತೆ ಕಟ್ಟುತ್ತಾರೆ. ಹಾಗಂತ ನೀರು ರಸ್ತೆಗೆ ಬರುವುದು, ಸಮಸ್ಯೆ ಆಗುವುದು ತಪ್ಪಿಲ್ಲ. ಬದಲಾಗಿ ರಸ್ತೆ ಮಧ್ಯೆ ಮಳೆ ಬಂದಾಗ ಕೆರೆ ಚಿತ್ರಣ ಇರುತ್ತದೆ. ಇಷ್ಟಾದ್ರೂ ಪಾಲಿಕೆ ಸೂಕ್ಷ್ಮ, ಅತಿ ಸೂಕ್ಷ್ಮ ಪ್ರದೇಶ ಎಂಬ ಲೆಕ್ಕಚಾರದ ಪಟ್ಟಿ ಬಿಡುಗಡೆ ಮಾಡಿ ಪ್ರತಿ ವರ್ಷ ರಾಜಕಾಲುವೆ ಗೋಡೆ ಒಡೆದು ಕಟ್ಟುವ ಪ್ರಕ್ರಿಯೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

    ಈ ಕುರಿತು ಮಾತನಾಡಿದ ಸ್ಥಳೀಯ ನಿವಾಸಿ ಛಾಯಾ, ವಾಹನಗಳು ಮಳೆ ಬಂದಾಗ ಕೆಡುತ್ತದೆ, ಜನರ ತೆರಿಗೆ ಹಣ ಪ್ರತಿ ವರ್ಷ ಹಾಳು ಮಾಡದೇ ಒಂದು ಸೂಕ್ತ ಪ್ರಾಜೆಕ್ಟ್ ಯೋಜನೆ ತಯಾರಿ ಮಾಡಿದರೆ ಯಾವುದೇ ಅನಾಹುತಗಳು ಆಗುತ್ತಿರಲಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಪ್ರಸಕ್ತ ಮಳೆಗಾಲದ ತಯಾರಿ ಅಂತ ಶಾಂತಿನಗರದಲ್ಲಿ ಈಗ ಗೋಡೆ ಒಡೆದು ಕಟ್ಟುವ ಕಾರ್ಯ ಮುಂದುವರಿದಿದೆ.

  • ರಾಜಕಾಲುವೆ ತಡೆಗೋಡೆ ಕುಸಿತ ಪ್ರಕರಣ- ವಾಹನ ಸಂಚಾರಕ್ಕೆ ನಿರ್ಬಂಧ

    ರಾಜಕಾಲುವೆ ತಡೆಗೋಡೆ ಕುಸಿತ ಪ್ರಕರಣ- ವಾಹನ ಸಂಚಾರಕ್ಕೆ ನಿರ್ಬಂಧ

    ಬೆಂಗಳೂರು: ಭಾರೀ ಮಳೆಯಿಂದಾಗಿ ಕೆಂಗೇರಿ ರಾಜಕಾಲುವೆ ತಡೆಗೋಡೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಜಾಗದಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

    ಗುರುವಾರ ಸಂಜೆ ನಗರದಲ್ಲಿ ಭಾರೀ ಮಳೆಯಾಗಿತ್ತು. ಪರಿಣಾಮ ಮೈಸೂರು ರಸ್ತೆಯಲ್ಲಿ ವೃಷಭಾವತಿ ನದಿಯ ತಡೆಗೋಡೆ ಕುಸಿದು ಬಿದ್ದಿತ್ತು. ಇದರಿಂದ ರಾಜಕಾಲುವೆ ನೀರು ರಸ್ತೆ ತುಂಬೆಲ್ಲ ಹರಿದು ವಾಹನ ಸಂಚಾರ ಕೂಡ ಸ್ಥಗಿತ ಗೊಂಡಿತ್ತು. ಈ ಹಿನ್ನೆಲೆಯಲ್ಲಿ ತಡೆಗೋಡೆ ಕುಸಿದ ಜಾಗದಲ್ಲಿ ವಾಹನ ಸಂಚಾರ ನಿಷೇಧಿಸಿದ್ದಾರೆ. ಪೊಲೀಸರು ಸುಮಾರು ಅರ್ಧ ಕಿಲೋಮೀಟರ್ ನಷ್ಟು ರಸ್ತೆಯನ್ನು ಒನ್ ವೇ ಮಾಡಿದ್ದಾರೆ. ಇತ್ತ ಸಿಬ್ಬಂದಿ ರಸ್ತೆ ಮತ್ತು ತಡೆಗೋಡೆ ದುರಸ್ತಿ ಕೆಲಸಕ್ಕೆ ಮುಂದಾಗಿದ್ದಾರೆ.

    ನಗರದಾದ್ಯಂತ ನಿನ್ನೆ ಸಂಜೆ ಧಾರಾಕಾರ ಮಳೆಯಾಗಿದ್ದು, ಕೆಂಗೇರಿಯಲ್ಲಿ 65.5 ಮಿಲಿ ಮೀಟರ್ ಮಳೆ ಬಿದ್ದಿತ್ತು. ಭಾರೀ ಮಳೆಗೆ ಸಿಲಿಕಾನ್ ಸಿಟಿ ಮಂದಿ ತತ್ತರಿಸಿ ಹೋಗಿದ್ದರು. ಕೆಂಗೇರಿ ರಸ್ತೆಯಲ್ಲಿ 5 ಅಡಿಯಷ್ಟು ನೀರು ನಿಂತಿತ್ತು. ಬಸ್ ಅರ್ಧ ಮುಳುಗುವಷ್ಟು ನೀರು ತುಂಬಿಕೊಂಡಿದ್ದು, ಕಾರುಗಳು ಮಳೆ ನೀರಿನಲ್ಲಿ ತೇಲಾಡುತ್ತಿದ್ದವು. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದರು.

  • ರಾಜಕಾಲುವೆಯಲ್ಲಿ ಮಣ್ಣು ಕುಸಿದು ಇಬ್ಬರ ದುರ್ಮರಣ

    ರಾಜಕಾಲುವೆಯಲ್ಲಿ ಮಣ್ಣು ಕುಸಿದು ಇಬ್ಬರ ದುರ್ಮರಣ

    – ನಾಲ್ವರು ಕಾರ್ಮಿಕರಿಗೆ ಗಾಯ

    ಬೆಂಗಳೂರು: ರಾಜಕಾಲುವೆಯಲ್ಲಿ ಕೆಲಸ ಮಾಡುವ ವೇಳೆ ಮಣ್ಣು ಕುಸಿದು ಇಬ್ಬರ ಮೃತಪಟ್ಟ ಘಟನೆ ಬೆಂಗಳೂರಿನ ಪುಲಕೇಶಿನಗರ ಮುಖ್ಯರಸ್ತೆಯ ಬಿಜಿ ಗಾರ್ಡನ್ ಬಳಿ ನಡೆದಿದೆ.

    ಸುದರ್ಶನ್ ಹಾಗೂ ಶಫೀಕ್ ಮೃತ ದುರ್ದೈವಿಗಳು. ಸುದರ್ಶನ್ ಹಾಗೂ ಶಫೀಕ್ ಇಬ್ಬರು ಜಾರ್ಖಂಡ್ ಮೂಲದ ಕಾರ್ಮಿಕರು. ಸುದರ್ಶನ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಆಸ್ಪತ್ರೆ ಸಾಗಿಸುವಾಗ ಮಾರ್ಗ ಮಧ್ಯೆ ಶಫೀಕ್ ಮೃತಪಟ್ಟಿದ್ದಾನೆ.

    ಶನಿವಾರ ಸಂಜೆ 5:30ರ ಸುಮಾರಿಗೆ ಈ ಘಟನೆ ನಡೆದಿದೆ. ಒಟ್ಟು ಎಂಟು ಜನ ಕಾರ್ಮಿಕರು ಒಳಚರಂಡಿ ಕಾಮಗಾರಿ ಕೆಲಸ ಮಾಡುತ್ತಿದ್ದರು. ಈ ಘಟನೆಯಲ್ಲಿ ನಾಲ್ವರು ಕೂಲಿ ಕಾರ್ಮಿಕರು ಗಾಯಗೊಂಡಿದ್ದಾರೆ.

    ಸುದರ್ಶನ್ ಹಾಗೂ ಶಫೀಕ್ ಮೃತದೇಹವನ್ನು ಬೋರಿಂಗ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

  • ರಾಜಕಾಲುವೆಯಲ್ಲಿ ಕೊಚ್ಚಿಹೋದ ಕಾರ್ಮಿಕ ಶಾಂತಕುಮಾರ್ 5 ದಿನವಾದ್ರೂ ಸುಳಿವಿಲ್ಲ- ಬಂದೇ ಬರ್ತಾರೆ ಅಂತಿದೆ ಕುಟುಂಬ

    ರಾಜಕಾಲುವೆಯಲ್ಲಿ ಕೊಚ್ಚಿಹೋದ ಕಾರ್ಮಿಕ ಶಾಂತಕುಮಾರ್ 5 ದಿನವಾದ್ರೂ ಸುಳಿವಿಲ್ಲ- ಬಂದೇ ಬರ್ತಾರೆ ಅಂತಿದೆ ಕುಟುಂಬ

    ಬೆಂಗಳೂರು: ಶನಿವಾರ ಸುರಿದ ಯಮರೂಪಿ ಮಳೆಗೆ ಕುರಬರಹಳ್ಳಿಯ ರಾಜಕಾಲುವೆಯಲ್ಲಿ ಕೊಚ್ಚಿಹೊದ ಶಾಂತಕುಮಾರ್ ಮೃತದೇಹ 5 ದಿನ ಕಳೆದ್ರು ಇನ್ನೂ ಪತ್ತೆಯಾಗಿಲ್ಲ. ಇತ್ತ ಅವರ ಕುಟುಂಬದವರ ದುಃಖ ಮುಗಿಲು ಮುಟ್ಟಿದ್ದು, ಶಾಂತಕುಮಾರ್ ಮರಳಿ ಬಂದೇ ಬರ್ತಾರೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ.

    ಶಾಂತಕುಮಾರ್ ಮನೆಯಲ್ಲಿ ನೀರವ ಮೌನ ಆವರಿಸಿದೆ. ಮನೆಯ ಆಧಾರ ಸ್ತಂಭವಾಗಿದ್ದ ಶಾಂತಕುಮಾರ್ ಬರುತ್ತಾರೆ ಎಂಬ ನಿರೀಕ್ಷೆಯಲ್ಲೇ ಎಲ್ಲರು ಇದ್ದಾರೆ. ಅದರಲ್ಲೂ ಇನ್ನೂ ಪ್ರಪಂಚದ ಅರಿವೇ ಇಲ್ಲದ ಮುದ್ದು ಕಂದಮ್ಮ 9 ತಿಂಗಳ ಮಗು ಹಾಗೂ ಮೂರು ವರ್ಷದ ಮೌನೇಶ್ ಗೌಡ ಅಪ್ಪನ ದಾರಿ ಕಾಯ್ತಿದ್ದಾರೆ.

    ಶಾಂತಕುಮಾರ್ ಕಣ್ಮರೆಯಾಗಿ 5 ದಿನಗಳು ಕಳೆದ್ರೂ, ಇನ್ನು ಅವರು ಪತ್ತೆಯಾಗಿಲ್ಲ. ಅಪ್ಪನನ್ನ ನೋಡದ ಮಕ್ಕಳು, ಪತಿ ಬಂದೇ ಬರುತ್ತಾರೆಂದು ಕಣ್ಣೀರಲ್ಲೇ ಕೈತೊಳೆಯುತ್ತಿರುವ ಪತ್ನಿ ಸರಸ್ವತಿ, ಮತ್ತೊಂದೆಡೆ ಮಗ ಮತ್ತೆ ಬರುತ್ತಾನೆಂಬ ಭರವಸೆಯಲ್ಲಿರುವ ಪೋಷಕರು ಶಾಂತಕುಮಾರ್ ಇಂದಲ್ಲ ನಾಳೆ ಬರುತ್ತಾನೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ.