Tag: raj nidimoru

  • ರೂಮರ್ ಬಾಯ್‍ಫ್ರೆಂಡ್ ಜೊತೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಮಂತಾ!

    ರೂಮರ್ ಬಾಯ್‍ಫ್ರೆಂಡ್ ಜೊತೆ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಸಮಂತಾ!

    ವಿಚ್ಛೇದನ ಪಡೆದು ಒಂಟಿಯಾಗಿದ್ದ ಸಮಂತಾ (Samantha) ಹೆಸರು ಇತ್ತೀಚೆಗೆ ನಿರ್ದೇಶಕ ರಾಜ್ ನಿಡಿಮೋರು (Raj Nidimoru) ಜೊತೆ ಥಳುಕು ಹಾಕಿಕೊಂಡಿತ್ತು. ದುಬೈನಲ್ಲಿ ಇಬ್ಬರೂ ಕೈ ಹಿಡಿದು ಓಡಾಡುವ ಫೋಟೋ ವೈರಲ್ ಆದ್ಮೇಲಂತೂ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿತ್ತು. ಇದೀಗ ಮುಂಬೈನ ಬಾಂದ್ರಾದಲ್ಲಿ ಒಟ್ಟಿಗೆ ಕಾಣಿಸ್ಕೊಂಡು ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಇದೀಗ ಪ್ರೀತಿ ವದಂತಿಗೆ (Dating Rumours) ಇನ್ನಷ್ಟು ರೆಕ್ಕೆ ಪುಕ್ಕ ಬಂದಂತಾಗಿದೆ.

    ನಿರ್ದೇಶಕ ರಾಜ್ ನಿಡಿಮೋರು ಜೊತೆ ಸಮಂತಾ ಕೊಂಚ ಹೆಚ್ಚೇ ಅನ್ಯೋನ್ಯವಾಗಿರೋದು ಹಲವು ಬಾರಿ ಸುದ್ದಿಯಾಗಿತ್ತು. ಇಬ್ಬರೂ ಒಟ್ಟಿಗೆ ಫ್ಯಾಮಿಲಿ ಮ್ಯಾನ್ ಹಾಗೂ ಸಿಟಾಡೆಲ್ ವೆಬ್‍ಸಿರೀಸ್‍ಗಳನ್ನ ಮಾಡುವಾಗ ಹೆಚ್ಚಿನ ಒಡನಾಟ ಸಾಮಾನ್ಯ. ಆದರೂ ಅದಕ್ಕೂ ಮೀರಿ ಇಬ್ಬರ ನಡುವಿನ ಸ್ನೇಹ, ಪ್ರೀತಿಗೆ ತಿರುಗಿದೆ ಎನ್ನಲಾಗಿತ್ತು. ಇದೀಗ ಆ ವದಂತಿಗೆ ಬಲವಾದ ಸಾಕ್ಷ್ಯ ಸಿಕ್ಕಂತಾಗಿದೆ. ಇನ್ಮೇಲೆ ಯಾಕೆ ಮುಚ್ಚುಮರೆ ಎಂಬಂತೆ ಒಟ್ಟಿಗೆ ಕಾಣಿಸ್ಕೊಂಡಿದೆ ಈ ಜೋಡಿ. ಇದನ್ನೂ ಓದಿ: ವದಂತಿಗೆ ಫುಲ್‌ಸ್ಟಾಪ್ – ಪ್ರೆಗ್ನೆನ್ಸಿ ಘೋಷಿಸಿದ ಕತ್ರಿನಾ ಕೈಫ್

    ರೆಗ್ಯುಲರ್ ಆಗಿ ಮುಂಬೈನಲ್ಲಿ ಸಮಂತಾ ಜಿಮ್ ಮುಗಿಸಿ ವಾಪಸ್ ಬರುವಾಗ ಪಾಪರಾಜಿಗಳ ಕ್ಯಾಮೆರಾದಲ್ಲಿ ಸೆರೆಯಾಗುತ್ತಾರೆ. ಈ ಬಾರಿ ವಿಶೇಷ ಅಂದ್ರೆ ಸಮಂತಾ ಜೊತೆ ರಾಜ್ ಕೂಡ ಕಾಣಿಸ್ಕೊಂಡಿದ್ದಾರೆ. ಮೊದಲು ರಾಜ್ ಹೊರಬಂದು ಕಾರಿನೊಳಗೆ ಕುಳಿತ್ರು. ಬಳಿಕ ಒಂದೇ ನಿಮಿಷದಲ್ಲಿ ಸಮಂತಾ ಹೊರಬಂದು ಅದೇ ಕಾರಿನಲ್ಲಿ ಕುಳಿತು ಜೊತೆಯಾಗಿ ತೆರಳಿದ್ದಾರೆ. ಪ್ರಸ್ತುತ ಈ ಬೆಳವಣಿಗೆ ಇಬ್ಬರ ನಡುವೆ ಪ್ರೀತಿ ಚಿಗುರಿರೋ ಸುದ್ದಿಗೆ ಸೀಲ್ ಹೊಡೆದಂತಾಗಿದೆ. ಈ ಬಗ್ಗೆ ಸಮಂತಾ ಯಾವ ರೀತಿ ಪ್ರತಿಕ್ರಿಯೆ ಕೊಡ್ತಾರೋ ಕಾದು ನೋಡ್ಬೇಕು. ಇದನ್ನೂ ಓದಿ: ರಿಷಬ್ ಬಗ್ಗೆ ನನಗೆ ಹೆಮ್ಮೆ ಇದೆ – ಪತ್ನಿ ಪ್ರಗತಿ ಶೆಟ್ಟಿ ಭಾವುಕ ನುಡಿ

  • ಮತ್ತೆ ಪ್ರೀತಿಯಲ್ಲಿ ಬಿದ್ರಾ ನಟಿ?- ನಿರ್ಮಾಪಕನ ತೋಳಲ್ಲಿ ತಲೆಯಿಟ್ಟು ಮಲಗಿದ ಸಮಂತಾ

    ಮತ್ತೆ ಪ್ರೀತಿಯಲ್ಲಿ ಬಿದ್ರಾ ನಟಿ?- ನಿರ್ಮಾಪಕನ ತೋಳಲ್ಲಿ ತಲೆಯಿಟ್ಟು ಮಲಗಿದ ಸಮಂತಾ

    ಸೌತ್ ನಟಿ ಸಮಂತಾ (Samantha) ಎರಡನೇ ಮದುವೆಗೆ ಸಿದ್ಧವಾದ್ರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ನಿರ್ಮಾಪಕ ರಾಜ್ ನಿಡಿಮೋರು (Raj Nidimoru) ಜೊತೆಗಿನ ಸಮಂತಾ ಡೇಟಿಂಗ್ ಸುದ್ದಿಗೆ ಪುಷ್ಠಿ ನೀಡುವಂತಹ ಮತ್ತೊಂದು ಫೋಟೋ ಭಾರೀ ಸದ್ದು ಮಾಡ್ತಿದೆ. ನಿರ್ಮಾಪಕನ ತೋಳಲ್ಲಿ ನಟಿ ತಲೆಯಿಟ್ಟು ಮಲಗಿದ್ದಾರೆ. ಇದನ್ನೂ ಓದಿ:ರಾಜಕಾರಣಿಗಳ ಜೊತೆ ಡೇಟಿಂಗ್‌ಗೆ ಬಾ – ಟಾರ್ಚರ್ ಕೊಟ್ಟವನ ಚಳಿ ಬಿಡಿಸಿದ ನಮ್ರತಾ

    ಸಮಂತಾ ನಟನೆಯೊಂದಿಗೆ ನಿರ್ಮಾಪಕಿಯಾಗಿ ಹೊಸ ಹೆಜ್ಜೆ ಇಟ್ಟಿದ್ದಾರೆ. ‘ಶುಭಂ’ (Subham) ಮೂಲಕ ನಟಿ ಗೆಲುವು ಸಾಧಿಸಿದ್ದಾರೆ. ನಟಿಯ ಪ್ರತಿ ಕೆಲಸದಲ್ಲೂ ನಿರ್ಮಾಪಕ ರಾಜ್ ಜೊತೆಯಾಗಿರೋದನ್ನು ನೋಡಿ ಅಭಿಮಾನಿಗಳು ಗುಡ್ ನ್ಯೂಸ್‌ಗಾಗಿ ಕಾಯ್ತಿದ್ದಾರೆ. ಹೀಗಿರುವಾಗ ನಟಿ ಸೋಷಿಯಲ್ ಮೀಡಿಯಾದಲ್ಲಿ ರಾಜ್ ಜೊತೆಗಿನ ಹೊಸ ಫೋಟೋವನ್ನು ಹಂಚಿಕೊಂಡಿದ್ದಾರೆ. ನಿರ್ಮಾಪಕನ ತೋಳಲ್ಲಿ ಸಮಂತಾ ತಲೆಯಿಟ್ಟು ಮಲಗಿದ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ ನೋಡಿರೋ ಫ್ಯಾನ್ಸ್ ಮತ್ತೆ ಇಬ್ಬರ ಡೇಟಿಂಗ್ ಬಗ್ಗೆ ಗುಸು ಗುಸು ಶುರು ಮಾಡಿದ್ದಾರೆ. ಇದನ್ನೂ ಓದಿ:‘ಸಿತಾರೆ ಜಮೀನ್ ಪರ್’ ಬಾಯ್‌ಕಾಟ್‌ಗೆ ಆಗ್ರಹ- ಆಮೀರ್ ಖಾನ್ ವಿರುದ್ಧ ತಿರುಗಿಬಿದ್ದ ನೆಟ್ಟಿಗರು

     

    View this post on Instagram

     

    A post shared by Samantha (@samantharuthprabhuoffl)

    ಇತ್ತೀಚೆಗೆ ‘ಶುಭಂ’ ಚಿತ್ರತಂಡದ ಜೊತೆಗಿನ ಪೋಸ್ಟ್‌ನಲ್ಲಿ ರಾಜ್ ಜೊತೆಗಿನ ಫೋಟೋ ಕೂಡ ನಟಿ ಹಂಚಿಕೊಂಡಿದ್ದರು. ಅದಕ್ಕೆ, ಹೊಸ ಆರಂಭ ಎಂದು ಕ್ಯಾಪ್ಷನ್ ನೀಡಿದ್ದರು. ಈ ಬೆನ್ನಲ್ಲೇ ಹೊಸ ಫೋಟೋ ಸದ್ದು ಮಾಡ್ತಿದೆ.

    ನಾಗಚೈತನ್ಯ ಜೊತೆ 2017ರಲ್ಲಿ ಪ್ರೀತಿಸಿ ಸಮಂತಾ ಮದುವೆಯಾಗಿದ್ದರು. ಕೆಲ ಮನಸ್ತಾಪಗಳಿಂದ ನಟಿ 2021ರಲ್ಲಿ ಡಿವೋರ್ಸ್ ಪಡೆದರು. ಬಳಿಕ ನಟಿ ಶೋಭಿತಾ ಜೊತೆ ಮಾಜಿ ಪತಿ ಹಸೆಮಣೆ ಏರಿದರು. ಅವರಂತೆಯೇ ಸಮಂತಾ ಕೂಡ ಮತ್ತೆ ಮದುವೆಯಾಗಲಿ, ಹೊಸ ಜೀವನ ಶುರು ಮಾಡಲಿ ಎಂದು ಫ್ಯಾನ್ಸ್ ಎದುರು ನೋಡ್ತಿದ್ದಾರೆ.

  • ನಿರ್ಮಾಪಕನೊಂದಿಗೆ ಸಮಂತಾ ಲವ್‌ನಲ್ಲಿ ಬಿದ್ದಿರೋದು ನಿಜನಾ? – ಫ್ಯಾನ್ಸ್‌ಗೆ ಸಿಕ್ತು ಸಾಕ್ಷಿ

    ನಿರ್ಮಾಪಕನೊಂದಿಗೆ ಸಮಂತಾ ಲವ್‌ನಲ್ಲಿ ಬಿದ್ದಿರೋದು ನಿಜನಾ? – ಫ್ಯಾನ್ಸ್‌ಗೆ ಸಿಕ್ತು ಸಾಕ್ಷಿ

    ಸೌತ್ ಬೆಡಗಿ ಸಮಂತಾ (Samantha) ಮತ್ತೆ ಮತ್ತೆ ವೈಯಕ್ತಿಕ ವಿಚಾರಕ್ಕೆ ಸುದ್ದಿಯಾಗ್ತಿದ್ದಾರೆ. ನಿರ್ಮಾಪಕ ರಾಜ್ ನಿಧಿಮೋರು ಜೊತೆ ನಟಿ ಡೇಟಿಂಗ್ ಮಾಡ್ತಿದ್ದಾರೆ ಎಂಬುದಕ್ಕೆ ಫ್ಯಾನ್ಸ್‌ಗೆ ಸಾಕ್ಷಿ ಸಿಕ್ಕಿದೆ. ಸಮಂತಾ ಹಂಚಿಕೊಂಡಿರುವ ಪೋಸ್ಟ್‌ವೊಂದರಲ್ಲಿ ಈ ಬಗ್ಗೆ ಸುಳಿವೊಂದು ನೀಡಿದ್ದಾರೆ. ಇದನ್ನೂ ಓದಿ:ಭಾರತದ ವಿರುದ್ಧವೇ ಪೋಸ್ಟ್ – ಮಲಯಾಳಂ ನಟಿ ವಿರುದ್ಧ ಆಕ್ರೋಶ

    ನಿರ್ಮಾಪಕನ ಜೊತೆಗಿನ ಸಮಂತಾ ಡೇಟಿಂಗ್ ವಿಚಾರ ಹಲವು ಸಮಯದಿಂದ ಚರ್ಚೆಗೆ ಗ್ರಾಸವಾಗಿದೆ. ಆದರೆ ಈ ಬಗ್ಗೆ ಅವರು ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ. ಈಗ ‘ಶುಭಂ’ (Subham) ಚಿತ್ರದ ಪ್ರಚಾರದಲ್ಲಿ ನಟಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ಪ್ರಚಾರದ ಫೋಟೋಗಳ ಜೊತೆ ನಿರ್ಮಾಪಕರ ಜೊತೆಗಿನ ಫೋಟೋಗಳನ್ನೂ ಹಂಚಿಕೊಂಡಿರೋದು ಡೇಟಿಂಗ್ ವಿಚಾರಕ್ಕೆ ಪುಷ್ಠಿ ಸಿಕ್ಕಿದೆ. ಇದರಿಂದ ಅಭಿಮಾನಿಗಳಿಗೂ ಉತ್ತರ ಸಿಕ್ಕಾಂಗಿದೆ. ಇದನ್ನೂ ಓದಿ:ಉಗ್ರರ ಬಗ್ಗೆ ಕರುಣೆ ಹೊಂದಿದ್ದರೆ ನೀವು ಕೂಡ ಭಯೋತ್ಪಾದಕರೇ: ಧ್ರುವ ಸರ್ಜಾ ಹೇಳಿದ್ಯಾರಿಗೆ?

     

    View this post on Instagram

     

    A post shared by Samantha (@samantharuthprabhuoffl)

    ನಿರ್ಮಾಪಕ ರಾಜ್ ನಿಧಿಮೋರು (Raj Nidimoru) ಮತ್ತು ಸಮಂತಾ ಅವರ ಸೆಲ್ಫಿ ಎಲ್ಲರ ಗಮನ ಸೆಳೆದಿದೆ. ಸಮಂತಾ ಅವರು ಮುದ್ದಿನ ಶ್ವಾನದ ಜೊತೆಗೂ ರಾಜ್ ಕಾಣಿಸಿಕೊಂಡಿದ್ದಾರೆ. ಇದನ್ನು ಗಮನಿಸಿದರೆ ಇಬ್ಬರ ನಡುವೆ ಹೆಚ್ಚಿನ ಆಪ್ತತೆ ಬೆಳೆದಿರುವುದು ಖಚಿತ ಆಗಿದೆ. ಸಮಂತಾ ಕೆಲಸಗಳಿಗೂ ಅವರು ಬೆಂಬಲವಾಗಿ ನಿಂತಿದ್ದಾರೆ. ಹೀಗಾಗಿ ಇಬ್ಬರೂ ಪ್ರೀತಿಸುತ್ತಿರುವ ವಿಚಾರ ನಿಜನಾ? ಎಂದು ಫ್ಯಾನ್ಸ್ ಕಾಮೆಂಟ್ ಮಾಡ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಜೋಡಿ ಗುಡ್ ನ್ಯೂಸ್ ಕೊಡ್ತಾರಾ ಎಂಬುದನ್ನು ಕಾದುನೋಡಬೇಕಿದೆ.

    ಅಂದಹಾಗೆ, ಸಮಂತಾ ನಿರ್ಮಾಣದ ‘ಶುಭಂ’ (Subham) ಚಿತ್ರದ ಮೇ 9ರಂದು ರಿಲೀಸ್ ಆಗಲಿದೆ. ಇದರಲ್ಲಿ ಅವರು ಮಂತ್ರವಾದಿಯ ಪಾತ್ರದಲ್ಲಿ ನಟಿಸಿದ್ದಾರೆ. ಅತಿಥಿ ಪಾತ್ರದಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.