Tag: Raj Kumar

  • ಡಾ.ರಾಜ್ ಶತಮಾನೋತ್ಸವಕ್ಕೆ ಅವರ ಬಗ್ಗೆ ಸಿನಿಮಾ ಬರಲಿ: ಪಿ. ಶೇಷಾದ್ರಿ

    ಡಾ.ರಾಜ್ ಶತಮಾನೋತ್ಸವಕ್ಕೆ ಅವರ ಬಗ್ಗೆ ಸಿನಿಮಾ ಬರಲಿ: ಪಿ. ಶೇಷಾದ್ರಿ

    ನ್ನಡ ನಾಡು ಕಂಡ ಶ್ರೇಷ್ಠ ನಟ ಡಾ.ರಾಜ್ ಕುಮಾರ್ (Raj Kumar) ಅವರ ಜನ್ಮ ದಿನವನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಬೆಂಗಳೂರಿನಲ್ಲಿ ಹಮ್ಮಿಕೊಂಡಿತ್ತು. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಪಿ.ಶೇಷಾದ್ರಿ, ರಾಜ್ ಪುತ್ರ ರಾಘವೇಂದ್ರ ರಾಜ್ ಕುಮಾರ್, ಹಿರಿಯ ನಟ ಶ್ರೀನಿವಾಸ್ ಮೂರ್ತಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

    ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಿ. ಶೇಷಾದ್ರಿ (P. Sheshadri), ‘ಕೇವಲ ನಾಲ್ಕೇ ವರ್ಷ ಕಳೆದರೆ ಡಾ.ರಾಜ್ ಕುಮಾರ್ ಅವರ ಜನ್ಮ ಶತಮಾನೋತ್ಸವ ಈ ಸಮಯದಲ್ಲಿ ಅವರ ಬಗ್ಗೆ (biopic) ಸಿನಿಮಾವೊಂದನ್ನು ಹೊರತರಬೇಕು. ಅದನ್ನು ರಾಜಕುಮಾರ್ ಕುಟುಂಬ ಅಥವಾ ಬೇರೆ ಯಾರಾದರೂ ಮಾಡಲಿ ಎಂದು  ಆಶಯವನ್ನು ವ್ಯಕ್ತ ಪಡಿಸಿದರು. ಜೊತೆಗೆ ಕುವೆಂಪು ಅವರು ಈಗ ಏನಾದರೂ ಇದ್ದಿದ್ದರೆ ನಾಡಗೀತೆಯಲ್ಲಿ ಅಣ್ಣಾವ್ರ ಹೆಸರನ್ನೂ ಸೇರಿಸುತ್ತಿದ್ದರು ಎಂದರು.

     

    ತಂದೆಯ ಜೊತೆಗಿನ ಒಡನಾಟವನ್ನು ರಾಘವೇಂದ್ರ ರಾಜ್ ಕುಮಾರ್ ನೆನಪಿಸಿಕೊಂಡರು. ಸೋಲು ಮತ್ತು ಗೆಲುವನ್ನು ಹೇಗೆ ಸ್ವೀಕರಿಸಬೇಕು ಎಂದು ಅಪ್ಪಾಜಿ ಹೇಳಿದ್ದರು ಎಂದರು. ಅವರ ಸರಳ ಜೀವನ ಎಲ್ಲರಿಗೂ ಮಾದರಿ ಎನ್ನುವುದನ್ನು ವಿವರಿಸಿದರು. ಹಿರಿಯ ನಟ ಶ್ರೀನಿವಾಸ್ ಮೂರ್ತಿ ಕೂಡ ಡಾ.ರಾಜ್ ಕುಮಾರ್ ಜೊತೆಗಿನ ಒಡನಾಟವನ್ನು ನೆನಪಿಸಿಕೊಂಡರು.

  • ರಾಜ್ ಕುಮಾರ್ ಗುಣಗಾನ ಮಾಡಿದ ಕಸಾಪ ಅಧ್ಯಕ್ಷ ಮಹೇಶ ಜೋಶಿ

    ರಾಜ್ ಕುಮಾರ್ ಗುಣಗಾನ ಮಾಡಿದ ಕಸಾಪ ಅಧ್ಯಕ್ಷ ಮಹೇಶ ಜೋಶಿ

    ಡಾ.ರಾಜ್ ಕುಮಾರ್ (Raj Kumar) ಅವರು ಕನ್ನಡ ಸಂಸ್ಕೃತಿಯ ಪ್ರತೀಕದಂತಿದ್ದರು. ಕನ್ನಡಕ್ಕೊಬ್ಬನೇ ರಾಜ್ ಕುಮಾರ್  ಎನ್ನಿಸಿದ ಅವರು ತಮ್ಮ ಅಭಿನಯ ಮತ್ತು ಬದುಕಿನ ರೀತಿಯಿಂದ ಮಾದರಿ ಎನ್ನಿಸಿ ಕೊಂಡಿದ್ದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ವಿಶ್ಲೇಷಿಸಿದರು. ಅವರು ಇಂದು  ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಏರ್ಪಾಟಾಗಿದ್ದ ಡಾ.ರಾಜ್ ಕುಮಾರ್ ಅವರ 95ನೆಯ ಹುಟ್ಟು ಹಬ್ಬದ ಆಚರಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಮಂತ್ರಾಲಯ ಮಹತ್ಮೆ’ಯಲ್ಲಿನ ರಾಘವೇಂದ್ರ ಸ್ವಾಮಿಗಳ ಪಾತ್ರವನ್ನು ರಾಯರೇ ಮಾಡಿಸಿದ್ದರು ಎನ್ನುವ ರಾಜ್ ಕುಮಾರ್ ಅವರ ನಂಬಿಕೆಯನ್ನು ಪ್ರಸ್ತಾಪಿಸಿದ ನಾಡೋಜ ಡಾ.ಮಹೇಶ ಜೋಶಿಯವರು ವಿಜ್ಞಾನ ಕೊನೆಗೊಳ್ಳುವಲ್ಲಿ ಅಧ್ಯಾತ್ಮ ಆರಂಭವಾಗುತ್ತದೆ ಎಂದರು. ಸಂತ ಶ್ರೇಷ್ಟರಾದ ಕನಕದಾಸ, ಪುರಂದರ ದಾಸ, ಸರ್ವಜ್ಞ,  ತುಕಾರಂ, ಕಬೀರ ಮೊದಲಾದವರ ಪಾತ್ರಗಳಿಗೆ ಜೀವ ತುಂಬಿದ ಹಾಗೆ ಇಮ್ಮಡಿ ಪುಲಕೇಶಿ, ಮಯೂರ, ಶ್ರೀಕೃಷ್ಣದೇವರಾಯ ಮೊದಲಾದ ಕನ್ನಡ ನಾಡಿನ ವೀರರನ್ನು ಬೆಳ್ಳಿತೆರೆಯ ಮೂಲಕ ಜೀವಂತವಾಗಿಸಿದರು, ರಾಮ, ಕೃಷ್ಣ, ನಾರದ ಮೊದಲಾದ ಪುರಾಣ ಪಾತ್ರಗಳನ್ನೂ ಅಭಿನಯಿಸಿದರು, ಬಾಂಡ್ ನಿಂದ ಭಕ್ತನವರೆಗೆ, ಚಮ್ಮಾರನಿಂದ ಚಕ್ರವರ್ತಿಯವರೆಗೆ ಎಲ್ಲಾ ಮಾದರಿಯ ಪಾತ್ರಗಳನ್ನು ಮಾಡಿ ರಾಜ್ ಕುಮಾರ್ ಕನ್ನಡ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದು ನಾಡೋಜ ಡಾ.ಮಹೇಶ ಜೋಶಿ (Mahesh Joshi)  ವಿವರಿಸಿದರು.

    ಐವತ್ತಕ್ಕೂ ಹೆಚ್ಚು ಸಂದರ್ಭಗಳಲ್ಲಿ ರಾಜ್ ಕುಮಾರ್ ಅವರ  ಒಡನಾಟ ತಮಗೆ ದೊರಕಿದ್ದನ್ನ ಸ್ಮರಿಸಿ ಕೊಂಡ ಅವರು ದಾದಾ ಸಾಹೇಬ್ ಫಾಲ್ಕೆ ಪುರಸ್ಕಾರ  ಸ್ವೀಕಾರ ಸಂದರ್ಭದಲ್ಲಿ ನಾಲ್ಕು ದಿನ ದೊರಕಿದ ನಿಕಟ ಒಡನಾಟದ ಅನುಭವವನ್ನು ನೆನಪು ಮಾಡಿ ಕೊಂಡು ರಾಜ್ ಕುಮಾರ್ ಅವರಿಗೆ ಅಧ್ಯಾತ್ಮದಲ್ಲಿ ಆಸಕ್ತಿ ಇತ್ತು. ಹಠ ಯೋಗವನ್ನೂ ಅವರು ಸಾಧಿಸಿದ್ದರು. ಅವರ ಯೋಗ ಗುರುಗಳಾದ ನಾಯ್ಕರ್ ಅವರ ಗುರುಗಳ ಮೇಲೆ ಶಿಶುನಾಳ ಶರೀಫರ ಪ್ರಭಾವವಿತ್ತು ಎಂದು ನಾಡೋಜ ಡಾ.ಮಹೇಶ ಜೋಶಿಯವರು ನೆನಪು ಮಾಡಿಕೊಂಡರು.

    ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಕಟಣಾ ವಿಭಾಗದ ಸಂಚಾಲಕರಾದ ಎನ್.ಎಸ್.ಶ್ರೀಧರ ಮೂರ್ತಿಯವರು ಮಾತನಾಡಿ ಸರಳತೆಯನ್ನು ಮೌಲ್ಯವಾಗಿ ಮಾಡಿದ ರಾಜ್ ಕುಮಾರ್ ಚಲನಚಿತ್ರಕ್ಕೆ ಸೀಮಿತವಾಗದೆ ನಮ್ಮ ಕಾಲದ ಸಾಂಸ್ಕೃತಿಕ ರೂಪಕವಾಗಿ ಬೆಳೆದಿದ್ದು ದೊಡ್ಡ ಕೌತಕವೇ ಸರಿ, ಎಲ್ಲಾ ತಲೆಮಾರಿನವರೂ ತಮ್ಮ ಪಾಲಿನ ಆದರ್ಶವನ್ನು ರಾಜ್ ಕುಮಾರ್ ಎನ್ನುವ ಕನ್ನಡಿಯಲ್ಲಿ ಕಂಡರು. ಅವರ ಶೈಲಿಯಲ್ಲಿ ‘ಅಮ್ಮ’ ಎಂದು ಕರೆಸಿ ಕೊಳ್ಳಲು ಎಷ್ಟೋ ಮಹಿಳೆಯರು ಇಂದಿಗೂ ಹಂಬಲಿಸುತ್ತಾರೆ. ಅಣ್ಣ-ತಮ್ಮಂದಿರು ಹೇಗಿರ ಬೇಕು? ಗಂಡ-ಹೆಂಡತಿ ಒಡನಾಟ ಹೇಗಿರ ಬೇಕು? ತಂದೆ-ಮಕ್ಕಳ ಸಂಬಂಧದ ಸ್ವರೂಪ ಯಾವುದೂ ಎಲ್ಲಾ ಪ್ರಶ್ನೆಗಳಿಗೂ  ಅವರ ಚಿತ್ರದಲ್ಲಿ ಉತ್ತರವಿದೆ. ‘ಕನ್ನಡದ ಜನ ನನ್ನನ್ನು ರಾಜನನ್ನಾಗಿ ನೋಡಿದ್ದಾರೆ, ಮಂತ್ರಿ ಸ್ಥಾನ ಏಕೆ ಬೇಕು’ ಎಂದು ರಾಜಕೀಯದಿಂದ ದೂರವಿದ್ದ ರಾಜ್ ಕುಮಾರ್ ತಮ್ಮ ಚಿತ್ರಗಳಲ್ಲಿ ಇಂದಿಗೂ ರಾಜಕಾರಣಿ ಪಾತ್ರವಿರಲಿ ಜಮೀನ್ದಾರ, ಊರ ಗೌಡರ ಪಾತ್ರಗಳನ್ನು ಮಾಡಲಿಲ್ಲ ಮೇಯರ್ ಮುತ್ತಣ್ಣ ಚಿತ್ರದಲ್ಲಿ ಅವರು ಮೇಯರ್ ಆದರೂ ಅದಕ್ಕೆ ಸಂಬಂಧಿಸಿದ ಸನ್ನಿವೇಶಗಳಿಲ್ಲ ಎಂದು ವಿಶ್ಲೇಷಿಸಿದರು. ತಾವೊಮ್ಮೆ ಅವರನ್ನು ‘ನೀವು ನಿರ್ವಹಿಸಲು ಬಯಸಿ ಸಿಕ್ಕದೆ ಹೋದ ಪಾತ್ರ ಯಾವುದು?’ ಎಂದಾಗ ‘ಬಸ್ ಕಂಡೆಕ್ಟರ್’ಎಂದು ಹೇಳಿದ್ದನ್ನು ನೆನಪು ಮಾಡಿಕೊಂಡ ಶ್ರೀಧರ ಮೂರ್ತಿ ರಾಜ್ ಕುಮಾರ್ ಎಲ್ಲಾ ವೃತ್ತಿಗಳಿಗೂ ಘನತೆ ತಂದು ಕೊಟ್ಟ ಮಹಾನ್ ಕಲಾವಿದರು ಎಂದು ಹೇಳಿ ಅವರ ಜೊತೆಗಿನ ಒಡನಾಟದ ಅನೇಕ ಘಟನೆಗಳನ್ನು ನೆನಪು ಮಾಡಿಕೊಂಡರು.

    ಕನ್ನಡ ಹೋರಾಟ ಗಾರ ರಾ.ನಂ.ಚಂದ್ರಶೇಖರ್ ಮಾತನಾಡಿ ಗೋಕಾಕ್ ಚಳುವಳಿ ಸಂದರ್ಭದಲ್ಲಿ ಕನ್ನಡಿಗರಿಗೆ ದೊಡ್ಡ ಭರವಸೆಯಾಗಿ ಬಂದವರು ಡಾ.ರಾಜ್ ಕುಮಾರ್, ಅವರು ಯಾವತ್ತೇ ಹೋರಾಟಕ್ಕೆ ಇಳಿದರೂ ಸರ್ಕಾರ ನಡುಗುತ್ತಿತ್ತು ಎಂದು ಹೇಳಿ ಎಂ.ವಿ.ಸೀಯವರ ಅಂತಿಮ ದರ್ಶನ ಪಡೆಯಲು ನಾರು ಮಡಿ ಉಟ್ಟು ಬಂದಿದ್ದ ರಾಜ್ ಕುಮಾರ್ ನಮ್ಮ ನಡುವಿನ ಸಂತ.. ಲೌಕಿಕದಲ್ಲಿ ಇದ್ದೂ ಅವರು ಅಲೌಕಿಕದ ನಡೆಯನ್ನು ಸಾಧಿಸಿದ್ದರು ಎಂದರು. ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗ ಶೆಟ್ಟಿ,ಡಾ.ಪದ್ಮಿನಿ ನಾಗರಾಜು, ಕೋಶಾಧ್ಯಕ್ಷರಾದ ಪಟೇಲ್ ಪಾಂಡು, ಹಿರಿಯ ಪತ್ರಕರ್ತ ಪ್ರಶಾಂತ್ ಹೆಬ್ಬಾರ್ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿಗಳು ಭಾಗವಹಿಸಿದ್ದರು.

  • ನಾಳೆ ಡಾ.ರಾಜ್ ಕುಮಾರ್ ಹುಟ್ಟು ಹಬ್ಬ: ನಾಡಿನಾದ್ಯಂತ ವಿವಿಧ ಕಾರ್ಯಕ್ರಮಗಳು

    ನಾಳೆ ಡಾ.ರಾಜ್ ಕುಮಾರ್ ಹುಟ್ಟು ಹಬ್ಬ: ನಾಡಿನಾದ್ಯಂತ ವಿವಿಧ ಕಾರ್ಯಕ್ರಮಗಳು

    ನಾಳೆ (ಏ.24) ಡಾ.ರಾಜ್ ಕುಮಾರ್ (Raj Kumar) ಅವರ ಹುಟ್ಟು ಹಬ್ಬ. ಈ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿಸಲು ನಾನಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದಾರೆ ಅವರ ಅಭಿಮಾನಿಗಳು. ಚುನಾವಣೆ ನಡುವೆಯೂ  ಕರ್ನಾಟಕ ಸರಕಾರ ಮತ್ತು ಡಾ.ರಾಜ್ ಕುಮಾರ್ ಸ್ಮಾರಕ ಟ್ರಸ್ಟ್ ಪ್ರತಿ ವರ್ಷದಂತೆ ಈ ವರ್ಷವೂ ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

    ಪ್ರತಿ ವರ್ಷದಂತೆ ಈ ಸಲವೂ ಡಾ.ರಾಜ್ ಪುಣ್ಯಭೂಮಿ ಸ್ಥಳದಲ್ಲಿ ಅಭಿಮಾನಿಗಳು ರಕ್ತದಾನ ಶಿಬಿರ, ಕಣ್ಣುದಾನ ಶಿಬಿರ, ಅನ್ನ ಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಳ್ಳುತ್ತಿದ್ದಾರೆ. ಬೆಳಗ್ಗೆಯಿಂದಲೇ ಈ ಎಲ್ಲ ಕೆಲಸಗಳು ಬೆಂಗಳೂರಿನ ಕಂಠೀರವ ಸ್ಟುಡಿಯೋದ ಆವರಣದಲ್ಲೇ ಶುರುವಾಗಲಿವೆ.

    ಇವುಗಳ ಜೊತೆಗೆ ರಾಜ್ಯಾದ್ಯಂತ ಡಾ.ರಾಜ್ ಅಭಿಮಾನಿಗಳು ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ಅನ್ನ ಸಂತರ್ಪನೆ, ರಕ್ತದಾನ ಶಿಬಿರಗಳನ್ನು ಏರ್ಪಡಿಸಿದ್ದಾರೆ. ಡಾ.ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಹೆಸರಿನಲ್ಲಿ ಸಂಗೀತ ಸಂಜೆ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯಲಿವೆ.

     

    ಬೆಳಗ್ಗೆ ಡಾ.ರಾಜ್ ಕುಟುಂಬಸ್ಥರು ಕಂಠೀರವ ಸ್ಟುಡಿಯೋದಲ್ಲಿರುವ ಸ್ಮಾರಕಕ್ಕೆ ಆಗಮಿಸಿ, ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ರಾಘವೇಂದ್ರ ರಾಜ್ ಕುಮಾರ್ ಮತ್ತು ಡಾ.ರಾಜ್ ಕುಮಾರ್ ಹೆಣ್ಣು ಮಕ್ಕಳು, ಮೊಮ್ಮಕ್ಕಳು ಸೇರಿದಂತೆ ಕುಟುಂಸ್ಥರು ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.

  • ಅಶೋಕ್ ಕಡಬ ಸಾರಥ್ಯದಲ್ಲಿ ಅಣ್ಣಾವ್ರ ಮೊಮ್ಮಗನ ಆಗಮನ: ಆ.25ಕ್ಕೆ ಫಸ್ಟ್ ಲುಕ್ ಟೀಸರ್

    ಅಶೋಕ್ ಕಡಬ ಸಾರಥ್ಯದಲ್ಲಿ ಅಣ್ಣಾವ್ರ ಮೊಮ್ಮಗನ ಆಗಮನ: ಆ.25ಕ್ಕೆ ಫಸ್ಟ್ ಲುಕ್ ಟೀಸರ್

    ಮ್ಮದೇ ವಿಶಿಷ್ಟ ಹಾದಿಯಲ್ಲಿ ಮುನ್ನಡೆಯುತ್ತಾ ಬಂದು, ಭಿನ್ನ ಅಭಿರುಚಿಯ ನಿರ್ದೇಶಕರಾಗಿ ನೆಲೆ ಕಂಡುಕೊಂಡಿರುವವರು ಅಶೋಕ್ ಕಡಬ(Ashok Kadaba). ಇದುವರೆಗೂ ಸಾಕಷ್ಟು ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿರುವ ಅವರು ‘ಸತ್ಯಂ’ ಎಂಬ ಪಕ್ಕಾ ಕಮರ್ಶಿಯಲ್ ಧಾಟಿಯ ಸಿನಿಮಾವೊಂದನ್ನು ನಿರ್ದೇಶಿಸಿದ್ದಾರೆ. ಅದು ಬಿಡುಗಡೆಯ ಹೊಸ್ತಿಲಿನಲ್ಲಿರುವಾಗಲೇ `ನಿಂಬಿಯಾ ಬನಾದ ಮ್ಯಾಗ’ (Nimbiya Banada, Myaga) ಎಂಬ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾ ಮೂಲಕ ವರನಟ ಡಾ.ರಾಜ್ ಕುಮಾರ್ (Raj Kumar) ಅವರ ಹಿರಿ ಮೊಮ್ಮಗ ಶಣ್ಮುಖ ಗೋವಿಂದರಾಜ್ (Shanmukh Govindaraj) ನಾಯನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.

    ಶೀರ್ಷಿಕೆಯಲ್ಲಿಯೇ ಹೊಸತೇನನ್ನೋ ಬಚ್ಚಿಟ್ಟುಕೊಂಡಿರುವ ಚಿತ್ರ ನಿಂಬಿಯಾ ಬನಾದ ಮ್ಯಾಗ. ಇದರ ಫಸ್ಟ್ ಲುಕ್ (First Look) ಟೀಸರ್ ಇದೇ ತಿಂಗಳ 25ರಂದು, ವರಮಹಾಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಗೊಳ್ಳಲಿದೆ. ಈಗಾಗಲೇ ಈ ಸಿನಿಮಾದ ಪೋಸ್ಟರ್ ಒಂದು ಲಾಂಚ್ ಆಗಿತ್ತು. ಅದಕ್ಕೂ ಒಂದಷ್ಟು ಉತ್ತಮ ಪ್ರತಿಕ್ರಿಯೆಗಳು ಬಂದಿದ್ದವು. ಈ ಫಸ್ಟ್ ಲುಕ್ ಮೂಲಕ ಒಟ್ಟಾರೆ ಸಿನಿಮಾ ಒಂದಷ್ಟು ಸಾರ ಜಾಹೀರಾಗುವ ಸಾಧ್ಯತೆಗಳಿವೆ. ಹಾಗೆ ನೋಡಿದರೆ, ಡಾ. ರಾಜ್ ಕುಮಾರ್ ಕುಟುಂಬಸ್ಥರಿಗೆ ನಟನೆಯ ಕಲೆ ರಕ್ತಗತವಾಗಿಯೇ ಬಂದು ಬಿಟ್ಟಂತಿದೆ. ಈ ಮಾತಿಗೆ ತಕ್ಕುದಾಗಿ ಕಳೆದ ಒಂದಷ್ಟು ದಶಕಗಳಲ್ಲಿ ರಾಜ್ ಫ್ಯಾಮಿಲಿಯಿಂದ ಬಹಳಷ್ಟು ಕಲಾವಿದರು ಬಂದಿದ್ದರೆ. ಆ ಸಾಲಿಗೆ ಹೊಸಾ ಸೇರ್ಪಡೆ ಶಣ್ಮುಖ ಗೋವಿಂದರಾಜ್. ರಾಜ್ ಕುಮಾರ್ ಅವರ ಹಿರಿ ಮಗಳಾದ ಲಕ್ಷ್ಮಿಯವರ ಪುತ್ರ ಶಣ್ಮುಖ. ರಾಜ್ ಕುಟುಂಬಸ್ಥರು ಕಥೆಯನ್ನು ಅಳೆದೂ ತೂಗಿ ಒಪ್ಪಿಕೊಳ್ಳುವಲ್ಲಿಯೂ ನಿಷ್ಣಾತರು. ವಿಶೇಷವೆಂದರೆ, ಅಶೋಕ್ ಕಡಬ ಹೇಳಿದ ಕಥೆಯನ್ನು ಎಲ್ಲರೂ ಬಹುವಾಗಿ ಮೆಚ್ಚಿಕೊಂಡೇ ಒಪ್ಪಿಗೆ ಸೂಚಿಸಿದರಂತೆ.

    ಶಣ್ಮುಖ ಕೂಡಾ ಈ ಕಥೆ ಮತ್ತು ಪಾತ್ರಕ್ಕನುಗುಣವಾಗಿ ಒಂದಷ್ಟು ತಯಾರಿ ನಡೆಸಿಕೊಂಡೇ ಅಖಾಡಕ್ಕಿಳಿದಿದ್ದಾರೆ. ಈಗಾಗಲೇ ಈ ಸಿನಿಮಾ ಶೇಕಡಾ ನಲವತ್ತರಷ್ಟು ಚಿತ್ರೀಕರಣ ಮುಕ್ತಾಯವಾಗಿದೆ. ತಾಯಿ ಮಗನ ಸುತ್ತಸುತ್ತುವ ಭಾವನಾತ್ಮಕ ಕಥಾ ಹಂದರ ಹೊಂದಿರುವ ಈ ಕಥೆ ಮಲೆನಾಡಿನಲ್ಲಿಯೇ ಜರುಗುತ್ತದೆ. ಇದನ್ನೂ ಓದಿ:ತಮಿಳಿನ ‘ಜಂಟಲ್‌ಮ್ಯಾನ್ 2’ನಲ್ಲಿ ಸುಧಾರಾಣಿ

    ಈಗಾಗಲೇ ಎರಡು ಹಂತಗಳಲ್ಲಿ ಬೆಂಗಳೂರು, ಉಡುಪಿ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಬಾಕಿ ಉಳಿದಿರುವುದು ಮಲೆನಾಡಿನ ಭಾಗದ ಪ್ರಧಾನ ಭಾಗದ ಚಿತ್ರೀಕರಣವಷ್ಟೇ. ಸದ್ಯ ಅಶೋಕ್ ಕಡಬ ನಿರ್ದೇಶನ ಮಾಡಿರುವ ಬಿಗ್ ಬಜೆಟ್ ಚಿತ್ರವಾದ ಸತ್ಯಂ ಬಿಡುಗಡೆಯ ಸನಿಹದಲ್ಲಿದೆ. ಅದು ಸೆಪ್ಟೆಂಬರ್ ನಲ್ಲಿ ಬಿಡುಗಡೆಗೊಳ್ಳಲಿದೆ. ಅದರ ಕೆಲಸ ಕಾರ್ಯ ಮುಗಿದಾದ ಮೇಲೆ ಮೂರನೇ ಹಂತದ ಚಿತ್ರೀಕರಣ ಶುರು ಮಾಡುವ ನಿರ್ಧಾರ ನಿರ್ದೇಶಕರದ್ದು. ಅಂದಹಾಗೆ ಆ ಭಾಗದ ಚಿತ್ರೀಕರಣ ಶೃಂಗೇರಿ, ಹೊರನಾಡು ಸುತ್ತಮುತ್ತ ನಡೆಯಲಿದೆ.

     

    ಎಮ್.ಜಿ.ಪಿ.ಎಕ್ಸ್ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ವಿ. ಮಾದೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಿರಿಯ ನಟ ರಾಮಕೃಷ್ಣ, ಉಮೇಶ್, ಶಶಿಧರ ಕೋಟೆ ಮೊದಲಾದ ಘಟಾನುಘಟಿ ಕಲಾವಿದರ ತಾರಾಗಣದಲ್ಲಿದ್ದಾರೆ. ಹಿರಿಯ ನಿರ್ದೇಶಕ ಎಸ್. ನಾರಾಯಣ್ ಪುತ್ರ ಪಂಕಜ್ ಕೂಡಾ ಇಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ನಟಿ ಭವ್ಯಾ ಬಹು ಕಾಲದ ನಂತರ ಈ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಅವರ ಪಾತ್ರವೂ ಕೂಡಾ ಕಾಡುವಂತಿದೆ. ಇನ್ನುಳಿದಂತೆ ಸ್ಟಾರ್ ನಟರೋರ್ವರು ಈ ಸಿನಿಮಾದ ಮುಖ್ಯ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಆ ಬಗೆಗಿನ ವಿವರ ಸದ್ಯದಲ್ಲಿಯೇ ಜಾಹೀರಾಗಲಿದೆ. ಎ2 ಮ್ಯೂಸಿಕ್ ಮೂಲಕ ಟೀಸರ್ ಲಾಂಚ್ ಆಗಲಿದೆ. ಅದಾದ ಬಳಿಕ ನಿಂಬಿಯಾ ಬನಾದ ಮ್ಯಾಗಿನ ಮತ್ತೊಂದಷ್ಟು ಇಂಟರೆಸ್ಟಿಂಗ್ ವಿಚಾರಗಳು ಪ್ರೇಕ್ಷಕರನ್ನು ತಲುಪಲಿವೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಂದಿನಿ ಜಾಹೀರಾತಿಗೆ ಯಾವುದೇ ಸಂಭಾವನೆ ಪಡೆಯಲ್ಲ: ನಟ ಶಿವರಾಜ್ ಕುಮಾರ್

    ನಂದಿನಿ ಜಾಹೀರಾತಿಗೆ ಯಾವುದೇ ಸಂಭಾವನೆ ಪಡೆಯಲ್ಲ: ನಟ ಶಿವರಾಜ್ ಕುಮಾರ್

    ರೈತರ ಜೀವನಾಡಿ ಆಗಿರುವ ಕೆ.ಎಮ್.ಎಫ್ ನಂದಿನಿ ಉತ್ಪನ್ನಗಳಿಗೆ (Nandini Product) ನೂತನ ರಾಯಭಾರಿಯಾಗಿ ನಟ ಶಿವರಾಜ್ ಕುಮಾರ್ (Shivaraj Kumar) ಆಯ್ಕೆಯಾಗಿದ್ದಾರೆ. ಈ ಕುರಿತು ಮಾತನಾಡಿದ ಶಿವರಾಜ್ ಕುಮಾರ್, ‘ನಂದಿನಿ ಜಾಹೀರಾತಿಗಾಗಿ ನಾನು ಯಾವುದೇ ಸಂಭಾವನೆ ಪಡೆಯುವುದಿಲ್ಲ. ಇದು ನಮ್ಮ ಕರ್ತವ್ಯ. ದೊಡ್ಡ ತ್ಯಾಗ ಏನಲ್ಲ’ ಎಂದಿದ್ದಾರೆ.

    ಮಾಧ್ಯಮಗಳಿಗೆ ಮೊದಲ ಪ್ರತಿಕ್ರಿಯೆ ನೀಡಿರುವ ಶಿವರಾಜ್ ಕುಮಾರ್, ‘ಸರ್ಕಾರಕ್ಕೆ ಧನ್ಯವಾದಗಳನ್ನು ಹೇಳಬೇಕು. ಖುಷಿಯಾಗುತ್ತೆ. ಸರ್ಕಾರ ನಮ್ಮ‌ಕುಟುಂಬಕ್ಕೆ ಗೌರವ ನೀಡಿ ನೀಡಿದ್ದಕ್ಕೆ. ಇದು ರೈತರಿಗೆ ಸಂಬಂಧಿಸಿದ ವಿಚಾರ. ನಂದಿನಿ ಎಂಬ ಭರವಸೆಗೆ ಭಾರತಾದ್ಯಂತ ಬೇಡಿಕೆಯಿದೆ. ಈ ಬೇಡಿಕೆಗೆ ಜೆನ್ಯೂನ್ ಆಗಿ ನಮ್ಮ ಸಹಕಾರ ಇರುತ್ತೆ. ಬರೀ ಬಂದು ಫೋಟೋ ಕೊಡೋದು ಚಿತ್ರಿಕರಣ ಮಾಡೋದಲ್ಲ. ಸಮಯ ಇದ್ದಾಗ ಪ್ರಚಾರವೂ ಮಾಡುವೆ.’ ಎಂದಿದ್ದಾರೆ.

    ಅಲ್ಲದೇ,  ನಂದಿನಿ ಉತ್ಪನ್ನವನ್ನೇ ನಮ್ಮ ಮನೆಯಲ್ಲಿ ಬಳಕೆ ಮಾಡ್ತೇವೆ. ನಮ್ಮ ಮನೆಯ ಹತ್ತಿರದಲ್ಲೇ ನಂದಿನಿ ಪಾರ್ಲರ್ ಇದೆ. KMF ಹಾಲಿನ ಪ್ರಚಾರಕ್ಕೆ ಆ್ಯಡ್ ಶೂಟಿಂಗ್ ಸದ್ಯ ಪ್ಲ್ಯಾನ್ ನಡೆಯುತ್ತಿದೆ ಎಂದು ಶಿವರಾಜ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ:ರಿಸೆಪ್ಷನ್ ಸಂಭ್ರಮದಲ್ಲಿ ‘ಕಾಮಿಡಿ ಕಿಲಾಡಿಗಳು’ ಸಂಜು ಬಸಯ್ಯ- ಪಲ್ಲವಿ ಜೋಡಿ

    ಕೆಎಂಎಫ್ ಗೂ ಡಾ.ರಾಜ್ ಕುಟುಂಬಕ್ಕೂ ಹತ್ತಿರದ ನಂಟಿದೆ. 1996ರಲ್ಲಿ ಡಾ.ರಾಜ್ ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಿ (Ambassador) ಒಪ್ಪಿಕೊಂಡರು. ಉಚಿತವಾಗಿಯೇ ಅದನ್ನು ಮಾಡಿಕೊಂಡು ಬಂದರು. ಡಾ.ರಾಜ್ ಕುಮಾರ್ (Raj Kumar) ಕಾಣಿಸಿಕೊಂಡ ಏಕೈಕ ಜಾಹೀರಾತು ಅದಾಗಿತ್ತು. ಡಾ.ರಾಜ್ ಕುಮಾರ್ ಮರಣಾನಂತರ ಆ ಜವಾಬ್ದಾರಿಯನ್ನು ಪುನೀತ್ ರಾಜ್ ಕುಮಾರ್ (Puneeth) ಮುಂದುವರೆಸಿಕೊಂಡು ಹೋಗುತ್ತಿದ್ದರು.

     

    ಪುನೀತ್ ನಿಧನಾನಂತರ ಮತ್ತೆ ಡಾ.ರಾಜ್ ಕುಟುಂಬಕ್ಕೆ ಆ ಸೇವೆ ಹುಡುಕಿಕೊಂಡು ಹೋಗಿದೆ. ಶಿವರಾಜ್ ಕುಮಾರ್ ಕೂಡ ನಂದಿನಿ ಉತ್ಪನ್ನಗಳ ರಾಯಭಾರಿಯಾಗಿ ತಂದೆ ಮತ್ತು ಸಹೋದರನ ಕೆಲಸವನ್ನು ಮುಂದುರೆಸಿಕೊಂಡು ಹೋಗಲಿದ್ದಾರೆ. 1996ರಿಂದ ಡಾ.ರಾಜ್ ಕುಮಾರ್ ರಾಯಭಾರಿಯಾಗಿದ್ದರೆ, 2009ರಲ್ಲಿ ಪುನೀತ್ ನೇಮಕವಾಗಿದ್ದರು. 2023ರಿಂದ ಆ ಜವಾಬ್ದಾರಿಯನ್ನು ಶಿವಣ್ಣ ವಹಿಸಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಂದಿನಿ ಉತ್ಪನ್ನಗಳಿಗೆ ಶಿವಣ್ಣ ರಾಯಭಾರಿ: ತಂದೆ-ತಮ್ಮನ ಹಾದಿಯಲ್ಲಿ ಸೆಂಚುರಿಸ್ಟಾರ್

    ನಂದಿನಿ ಉತ್ಪನ್ನಗಳಿಗೆ ಶಿವಣ್ಣ ರಾಯಭಾರಿ: ತಂದೆ-ತಮ್ಮನ ಹಾದಿಯಲ್ಲಿ ಸೆಂಚುರಿಸ್ಟಾರ್

    ರ್ನಾಟಕದ ಹೆಮ್ಮೆಯ ಪ್ರತೀಕ ನಂದಿನಿ ಹಾಲು ಉತ್ಪನ್ನಗಳಿಗೆ (Nandini Product) ರಾಯಭಾರಿಯಾಗಿ ಸ್ಯಾಂಡಲ್ ವುಡ್ ನ ಹೆಸರಾಂತ ನಟ ಶಿವರಾಜ್ ಕುಮಾರ್ ಆಯ್ಕೆಯಾಗಿದ್ದಾರೆ. ಇಂದು ಶಿವರಾಜ್ ಕುಮಾರ್ ಜೊತೆ ಕೆಎಂಎಫ್ ಅಧಿಕಾರಿಗಳು ಮಾತುಕತೆ ನಡೆಸಿ, ಶಿವರಾಜ್ ಕುಮಾರ್ (Shivaraj Kumar) ಅವರನ್ನು ಒಪ್ಪಿಸಿದ್ದಾರೆ. ಈ ಸಂದರ್ಭದಲ್ಲಿ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಸೇರಿದಂತೆ ಹಲವರು ಹಾಜರಿದ್ದರು.


    ಕೆಎಂಎಫ್ (KMF) ಗೂ ಡಾ.ರಾಜ್ ಕುಟುಂಬಕ್ಕೂ ಹತ್ತಿರದ ನಂಟಿದೆ. 1996ರಲ್ಲಿ ಡಾ.ರಾಜ್ ಕುಮಾರ್ ಅವರು ನಂದಿನಿ ಉತ್ಪನ್ನಗಳಿಗೆ ರಾಯಭಾರಿಯಾಗಿ (Ambassador) ಒಪ್ಪಿಕೊಂಡರು. ಉಚಿತವಾಗಿಯೇ ಅದನ್ನು ಮಾಡಿಕೊಂಡು ಬಂದರು. ಡಾ.ರಾಜ್ ಕುಮಾರ್ ಕಾಣಿಸಿಕೊಂಡ ಏಕೈಕ ಜಾಹೀರಾತು ಅದಾಗಿತ್ತು. ಡಾ.ರಾಜ್ ಕುಮಾರ್ ಮರಣಾನಂತರ ಆ ಜವಾಬ್ದಾರಿಯನ್ನು ಪುನೀತ್ ರಾಜ್ ಕುಮಾರ್ (Puneeth) ಮುಂದುವರೆಸಿಕೊಂಡು ಹೋಗುತ್ತಿದ್ದರು.


    ಪುನೀತ್ ನಿಧನಾನಂತರ ಮತ್ತೆ ಡಾ.ರಾಜ್ (Raj Kumar) ಕುಟುಂಬಕ್ಕೆ ಆ ಸೇವೆ ಹುಡುಕಿಕೊಂಡು ಹೋಗಿದೆ. ಶಿವರಾಜ್ ಕುಮಾರ್ ಕೂಡ ನಂದಿನಿ ಉತ್ಪನ್ನಗಳ ರಾಯಭಾರಿಯಾಗಿ ತಂದೆ ಮತ್ತು ಸಹೋದರನ ಕೆಲಸವನ್ನು ಮುಂದುರೆಸಿಕೊಂಡು ಹೋಗಲಿದ್ದಾರೆ. 1996ರಿಂದ ಡಾ.ರಾಜ್ ಕುಮಾರ್ ರಾಯಭಾರಿಯಾಗಿದ್ದರೆ, 2009ರಲ್ಲಿ ಪುನೀತ್ ನೇಮಕವಾಗಿದ್ದರು. 2023ರಿಂದ ಆ ಜವಾಬ್ದಾರಿಯನ್ನು ಶಿವಣ್ಣ ವಹಿಸಿಕೊಂಡಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಾಡಪ್ರಭು ಕೆಂಪೇಗೌಡರ ಸಿನಿಮಾಗೆ ಸಿದ್ಧತೆ: ಡಾ.ರಾಜ್ ಆಸೆಯನ್ನ ಮೊಮ್ಮಗ ಯುವ ಈಡೇರಿಸ್ತಾನಾ?

    ನಾಡಪ್ರಭು ಕೆಂಪೇಗೌಡರ ಸಿನಿಮಾಗೆ ಸಿದ್ಧತೆ: ಡಾ.ರಾಜ್ ಆಸೆಯನ್ನ ಮೊಮ್ಮಗ ಯುವ ಈಡೇರಿಸ್ತಾನಾ?

    ಸ್ಯಾಂಡಲ್ ವುಡ್ ನಲ್ಲಿ ಅಚ್ಚರಿಯ ಘಟನೆಗಳು ನಡೆಯುತ್ತಿವೆ. ಅದರಲ್ಲೂ ಸದ್ದಿಲ್ಲದೇ ನಡೆಯುವ ಕೆಲಸಗಳೇ ಸಖತ್ ಸದ್ದು ಮಾಡುತ್ತವೆ. ಈಗ ಸದ್ದು ಮಾಡುವಂತಹ ಸುದ್ದಿಯೊಂದು ಗಾಂಧಿನಗರದಲ್ಲಿ ಹರಿದಾಡುತ್ತಿದ್ದು, ಅದು ನಿಜವಾದರೆ ತೆರೆಗೆ ಬರಲಿದ್ದಾನೆ ಬೆಂಗಳೂರು ನಿರ್ಮಾತೃ ಕೆಂಪೇಗೌಡ.

    ಹೌದು, ನಾಡಪ್ರಭು ಕೆಂಪೇಗೌಡ (Kempegowda) ಅವರ ಜೀವನದ ಕುರಿತಾಗಿ ಸಿನಿಮಾವೊಂದು ತಯಾರಾಗಲಿದ್ದು, ಅದರ ನೇತೃತ್ವವನ್ನು ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ಟಿ.ಎಸ್ ನಾಗಾಭರಣ (TS Nagabharana) ವಹಿಸಿದ್ದಾರೆ. ಈಗಾಗಲೇ ನಾಗಾಭರಣ ಕಥೆಯನ್ನೂ ಸಿದ್ಧಪಡಿಸಿದ್ದು, ನಾಯಕನಿಗಾಗಿ ಅವರು ಕಾಯುತ್ತಿದ್ದಾರಂತೆ.

    ಅಂದುಕೊಂಡಂತೆ ಆಗಿದ್ದರೆ ನಾಡಪ್ರಭು ಕೆಂಪೇಗೌಡರ ಬಗ್ಗೆ ಬಹಳ ವರ್ಷಗಳ ಹಿಂದೆಯೇ ಸಿನಿಮಾ ಬರಬೇಕಿತ್ತು. ಕೆಂಪೇಗೌಡರ ಪಾತ್ರವನ್ನು ಮಾಡುವಂತೆ ವರನಟ ಡಾ.ರಾಜ್ ಕುಮಾರ್ ಅವರನ್ನು ಕೇಳಲಾಗಿತ್ತು. ಆ ಪಾತ್ರವನ್ನು ಮಾಡುವ ಆಸೆ ಡಾ.ರಾಜ್ ಕುಮಾರ್ ಅವರಿಗೆ ಇದ್ದರೂ, ಕೆಂಪೇಗೌಡರಿಗೆ ಅಪಚಾರವಾಗದಂತಹ ಸ್ಕ್ರಿಪ್ಟ್‌ಗಾಗಿ ಡಾ.ರಾಜ್ ಕಾದರು. ಆದರೆ, ಕೊನೆಗೂ ಅವರಿಗೆ ಅದು ಸಿಗಲಿಲ್ಲ.

    ಇದೀಗ ಕೆಂಪೇಗೌಡರ ಕುರಿತಾದ ಸಿನಿಮಾ ಮಾಡುವ ಅವಕಾಶ ಮತ್ತೆ ದೊಡ್ಮನೆ ಕುಟುಂಬಕ್ಕೆ ಬಂದಿದೆ ಎಂದು ಹೇಳಲಾಗುತ್ತಿದೆ. ಕೆಂಪೇಗೌಡ ಅವರ ಪಾತ್ರವನ್ನು ಯುವರಾಜ್ ಕುಮಾರ್ (Yuvraj Kumar) ಮಾಡಬೇಕು ಎನ್ನುವುದು ನಿರ್ದೇಶಕರ ಆಸೆ. ಯುವರಾಜ್ ಕುಮಾರ್ ಅವರನ್ನೇ ಮನಸ್ಸಲ್ಲಿಟ್ಟುಕೊಂಡು ಚಿತ್ರಕಥೆ ಬರೆದಿದ್ದಾರೆ ಎಂದು ಹೇಳಲಾಗುತ್ತಿದೆ. ಮುಂದೆ ಏನಾಯಿತು ಎನ್ನುವ ವಿವರ ಲಭ್ಯವಿಲ್ಲ.

    ಸದ್ಯ ಯುವ ರಾಜ್ ಕುಮಾರ್ ‘ಯುವ’ ಸಿನಿಮಾದ ಶೂಟಿಂಗ್‌ನಲ್ಲಿದ್ದಾರೆ. ಮಂಗಳೂರಿನ ಸುತ್ತಮುತ್ತ ಚಿತ್ರೀಕರಣ ನಡೆಯುತ್ತಿದೆ. ಈ ಸಿನಿಮಾದ ನಂತರ ಅವರು ಮತ್ತೊಂದು ಕಥೆಯನ್ನು ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ನಡುವೆ ಕೆಂಪೇಗೌಡ ಸಿನಿಮಾ ಒಪ್ಪುತ್ತಾರಾ, ತಾತನ ಆಸೆಯನ್ನು ಯುವ ಈಡೇರಿಸುತ್ತಾರಾ ಎನ್ನುವುದು ಕುತೂಹಲದ ಪ್ರಶ್ನೆ.

  • ಡಾ.ರಾಜ್ ಪ್ರಶಸ್ತಿ ಇನ್ನೂ ಕೊಟ್ಟಿಲ್ಲ, ಯಾರನ್ನು ಕೇಳೋದು? : ಹಿರಿಯ ನಟ ಬೇಸರ

    ಡಾ.ರಾಜ್ ಪ್ರಶಸ್ತಿ ಇನ್ನೂ ಕೊಟ್ಟಿಲ್ಲ, ಯಾರನ್ನು ಕೇಳೋದು? : ಹಿರಿಯ ನಟ ಬೇಸರ

    ನ್ನಡ ಸಿನಿಮಾ ರಂಗದ ಹಿರಿಯ ನಟ ಶ್ರೀನಿವಾಸ್ ಮೂರ್ತಿ (Srinivas Murthy) ಅವರಿಗೆ  ಕರ್ನಾಟಕ ಸರಕಾರವು 2018ರಲ್ಲಿ ಡಾ. ರಾಜ್ ಕುಮಾರ್ (Raj Kumar) ಪ್ರಶಸ್ತಿ ಘೋಷಣೆ ಆಗಿತ್ತು. ಪ್ರಶಸ್ತಿ (Award) ಘೋಷಣೆಯಾಗಿ ಐದು ವರ್ಷ ಕಳೆದರೂ, ಇವರಿಗೆ ಪ್ರಶಸ್ತಿ ಪ್ರದಾನವಾಗಿಲ್ಲ. ಈ ಕುರಿತು ಮಾತನಾಡಿರುವ ಶ್ರೀನಿವಾಸ್ ಮೂರ್ತಿ, ‘ಪ್ರಶಸ್ತಿಯನ್ನು ಇದುವರೆಗೂ ಕೊಟ್ಟಿಲ್ಲ. 2017ರ ಕಾರ್ಯಕ್ರಮ ಮಾಡಿದ್ದೇ ಕೊನೆ. ಆ ನಂತರದ ವರ್ಷಗಳ ಪ್ರಶಸ್ತಿಗಳ ಘೋಷಣೆ ಮಾಡಿದ್ದರೂ, ಇನ್ನೂ ಸಮಾರಂಭ ಮಾಡಿ ಪ್ರಶಸ್ತಿ ಕೊಟ್ಟಿಲ್ಲ. ಡಾ. ರಾಜ್ ಜೀವಮಾನದ ಸಾಧನೆ ಪ್ರಶಸ್ತಿ ಸಿಕ್ಕಿದೆ ಎಂದು ಖುಷಿಪಡಬೇಕು. ಆದರೆ, ಇದುವರೆಗೂ ಪ್ರಶಸ್ತಿ ಸಿಕ್ಕಿಲ್ಲ. ಯಾರನ್ನು ಕೇಳುವುದು?’ ಎಂದು ಪ್ರಶ್ನೆ ಮಾಡಿದ್ದಾರೆ.

    ಶ್ರೀನಿವಾಸಮೂರ್ತಿ ಅವರು ಬಣ್ಣ ಹಚ್ಚಿ 50 ವರ್ಷಗಳಾಗಿವೆ. ಇಂದು ಅವರು 75ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಹಲವಾರು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಹುಟ್ಟು ಹಬ್ಬದ ಸಂದರ್ಭದಲ್ಲಿ ಇಂದು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ‘ಸದಾರಮೆ ಕಳ್ಳ ಎಂಬ ನಾಟಕ ಆಡುತ್ತಿದ್ದಾರೆ. ಬರೀ ಇವತ್ತಷ್ಟೇ ಅಲ್ಲ, ನಾಳೆ ಸಂಜೆ ಅದೇ ಸ್ಥಳದಲ್ಲಿ ‘ತರಕಾರಿ ಚೆನ್ನಿ ಎಂಬ ಇನ್ನೊಂದು ನಾಟಕದಲ್ಲಿ ಅವರು ಬಣ್ಣ ಹಚ್ಚುತ್ತಿದ್ದಾರೆ.

    ‘ಹೇಮಾವತಿ ಚಿತ್ರದಲ್ಲಿ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ಕೊಡುವುದಕ್ಕೂ ಮುನ್ನ ಯೋಗಾನರಸಿಂಹ ಅವರ ನಾಟಕದ (Drama) ಕಂಪೆನಿಯಲ್ಲಿ ಪಾತ್ರ ಮಾಡುತ್ತಿದ್ದರು. ನಂತರ ಅವರದ್ದೇ ಆದ ಜಿಕೆಎಸ್ ಕಲಾನಿಕೇತನ ಟ್ರಸ್ಟ್ ಎಂಬ ಸಂಸ್ಥೆ ಸ್ಥಾಪನೆ ಮಾಡಿ ‘ಬೇಡರ ಕಣ್ಣಪ್ಪ’, ‘ಸದಾರಮೆ, ‘ತರಕಾರಿ ಚೆನ್ನಿ’, ‘ಮುದುಕನ ಮದುವೆ’ ಮುಂತಾದ ನಾಟಕಗಳನ್ನು ಮಾಡಿಕೊಂಡು ಬಂದಿದ್ದಾರೆ. ಇದನ್ನೂ ಓದಿ:ಮದುವೆಯಾಗಿ 14 ಕಳೆದರೂ ಮಕ್ಕಳಾಗದ್ದಕ್ಕೆ ಮಹತ್ವದ ನಿರ್ಧಾರ ಕೈಗೊಂಡ ‘ಲಾಲಿಹಾಡು’ ನಟಿ

    ಶ್ರೀನಿವಾಸಮೂರ್ತಿ ಇದುವರೆಗೂ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. 32 ಚಿತ್ರಗಳಲ್ಲಿ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ‘ಕವಿರತ್ನ ಕಾಳಿದಾಸ’ ಚಿತ್ರದ ಭೋಜರಾಜನ ಪಾತ್ರ ಮಾತ್ರ ಜನರ ಮನಸ್ಸಿನಲ್ಲಿ ಹಸಿರಾಗಿ ಉಳಿದುಬಿಟ್ಟಿದೆ. ಮೂರ್ತಿಗಳಿಗೆ ಕನ್ನಡ ಚಿತ್ರರಂಗದಲ್ಲಿ ಸೂಕ್ತ ಸ್ಥಾನಮಾನ ಸಿಗಲಿಲ್ಲ, ಅವರನ್ನು ಚಿತ್ರರಂಗ ಇನ್ನಷ್ಟು ಚೆನ್ನಾಗಿ ಬಳಸಿಕೊಳ್ಳಬಹುದಾಗಿತ್ತು ಎಂಬ ಅಭಿಪ್ರಾಯವಿದೆಯಾದರೂ, ತಮಗೆ ಎಷ್ಟು ಸಿಕ್ಕಿದೆಯೋ ಅದೆಲ್ಲ ಕೀರ್ತಿಯನ್ನು ಹಿರಿಯ ನಿರ್ದೇಶಕ ಸಿದ್ಧಲಿಂಗಯ್ಯ ಮತ್ತು ಡಾ. ರಾಜಕುಮಾರ್ ಸಹೋದರ ವರದಪ್ಪ ಅವರಿಗೆ ಸಲ್ಲಿಸುತ್ತಾರೆ.

  • ದೊರೈ-ಭಗವಾನ್ ಜೋಡಿ ಬೆಸೆದದ್ದು ಹೇಗೆ?: ಎಂಟಾಣೆ ಕಥೆ ಹೇಳಿದ ಭಗವಾನ್

    ದೊರೈ-ಭಗವಾನ್ ಜೋಡಿ ಬೆಸೆದದ್ದು ಹೇಗೆ?: ಎಂಟಾಣೆ ಕಥೆ ಹೇಳಿದ ಭಗವಾನ್

    ನ್ನಡ ಸಿನಿಮಾ ರಂಗದ ಹೆಸರಾಂತ ಜೋಡಿಗಳಲ್ಲಿ ಪ್ರಮುಖವಾಗಿ ಕೇಳಿ ಬರುವ ಹೆಸರು ದೊರೈ ಭಗವಾನ್ (Bhagavan) ಅವರದ್ದು. ಕನ್ನಡ ಸಿನಿಮಾ ರಂಗದಲ್ಲಿ ಅತೀ ಹೆಚ್ಚು ಕಾದಂಬರಿ ಆಧಾರಿತ ಸಿನಿಮಾಗಳನ್ನು ಕೊಟ್ಟ ಹೆಗ್ಗಳಿಕೆ ಈ ಜೋಡಿಯದ್ದು. ಕನ್ನಡದಲ್ಲಿ ಬಂದ ಮೊದಲ ಬಾಂಡ್ (Bond) ಸಿನಿಮಾಗೆ ಇವರೇ ನಿರ್ದೇಶಕರು. ಈ ಜೋಡಿಯು ಒಂದಾಗಿದ್ದು ಕೇವಲ ಎಂಟಾಣೆ ಮೂಲಕ ಎನ್ನುವುದು ಅಚ್ಚರಿಯ ಸಂಗತಿ. ಆ ಮಾಹಿತಿಯನ್ನು ಸ್ವತಃ ಭಗವಾನ್ ಅವರೇ ಹಂಚಿಕೊಂಡಿದ್ದರು.

    ಅದು ಮದ್ರಾಸಿನ ದಿನಗಳು. ಆಗ ಕನ್ನಡ ಚಿತ್ರರಂಗವೂ ಮುದ್ರಾಸಿನಲ್ಲೇ ನೆಲೆಯೂರಿತ್ತು. ಬಹುತೇಕ ಕನ್ನಡ ಚಿತ್ರಗಳು ಅಲ್ಲಿಯೇ ತಯಾರಾಗುತ್ತಿದ್ದವು. ಹಾಗಾಗಿ  ದೊರೈ ಮತ್ತು ಭಗವಾನ್ ಮೈಸೂರಿನವರಾದರೂ ಮದ್ರಾಸಿನಲ್ಲೇ ಬೀಡು ಬಿಟ್ಟಿದ್ದರು. ಮೊದ ಮೊದಲು ಭಗವಾನ್ ಸಹಾಯಕ ನಿರ್ದೇಶಕರಾಗಿ ಕೆಲಸಕ್ಕೆ ಸೇರಿಕೊಂಡಿದ್ದರೆ, ಭಗವಾನ್ ಕ್ಯಾಮೆರಾಮನ್ ಆಗಿದ್ದರು. ಇಬ್ಬರ ಆಸಕ್ತಿಗಳೇ ಅವರನ್ನು ಒಂದಾಗುವಂತೆ ಮಾಡಿದ್ದವು. ಇದನ್ನೂ ಓದಿ: ಖ್ಯಾತ ತಮಿಳು ಹಾಸ್ಯ ನಟ ಮಯಿಲ್‌ಸಾಮಿ ಹಠಾತ್ ನಿಧನ

    ಆಗ ಉದಯಕುಮಾರ್ ನಟನೆಯ ‘ವೀರಪುತ್ರ’ ಸಿನಿಮಾದ ಶೂಟಿಂಗ್ ಸ್ಥಗಿಗೊಂಡಿತ್ತು. ಈ ಸಿನಿಮಾದಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದ ಭಗವಾನ್ ಬಳಿ ಊಟಕ್ಕೂ ಹಣವಿರಲಿಲ್ಲ. ಕನ್ನಡದ ಬಹುತೇಕರು ಬರುತ್ತಿದ್ದ ಮದ್ರಾಸಿನ ಹೋಟೆಲ್ ಮುಂದೆ ನಿಂತು, ಅಲ್ಲಿಗೆ ಬರುವ ಕನ್ನಡಿಗರ ಬಳಿ ಸಾಲ ಕೇಳಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು ಭಗವಾನ್. ಇಂತಹ ಸಂದರ್ಭದಲ್ಲೇ ಭಗವಾನ್ ಅವರಿಗೆ ದೊರೈ ಸಿಕ್ಕಿದ್ದು.

    ಎಂದಿನಂತೆ ಹೋಟೆಲ್ ಮುಂದೆ ನಿಂತಿದ್ದ ಭಗವಾನ್, ಯಾರಾದರೂ ಬಂದು ತಮ್ಮ ಹಸಿವು ನೀಗಿಸಬಹುದು ಎಂದುಕೊಂಡು ಕಾಯುತ್ತಿದ್ದರು. ಆಗ ಬಂದವರೇ ದೊರೈ. ಅವರ ಬಳಿ ಒಂದು ರೂಪಾಯಿಯನ್ನು ಕೇಳಿದ್ದರು ಭಗವಾನ್. ತುಂಬಾ ಹಸಿದಿದ್ದ ಭಗವಾನ್ ಕಂಡು ‘ನನ್ನ ಬಳಿ ಒಂದು ರೂಪಾಯಿ ಇಲ್ಲ, ಎಂಟಾಣೆಯಿದೆ ತಗೆದುಕೊ’ ಎಂದು ಎಂಟಾಣೆ ಕೊಟ್ಟು ಹೊರಟು ಬಿಟ್ಟರು ದೊರೈ.

    ಮರುದಿನ ಭಗವಾನ್ ತಂಗಿದ್ದ ರೂಮ್ ಗೆ ಬಂದ ನಿರ್ದೇಶಕ ಜಿ.ವಿ. ಅಯ್ಯರ್ ‘ಊಟಕ್ಕೂ ಗತಿ ಇಲ್ಲದೇ ಇದ್ದೀಯಂತೆ? ಬಾ ನನ್ನ ಜೊತೆ’ ಎಂದು ಅವರ ಮನೆಗೆ ಕರೆದುಕೊಂಡು ಹೋಗಿದ್ದರು. ಅಯ್ಯರ್. ಮುದ್ರಾಸಿನಲ್ಲಿ ಮೊದಲು ಬಾರಿಗೆ ನೆಲೆ ಕಲ್ಪಿಸಿದ್ದು ಅಯ್ಯರ್. ಆದರೆ, ಅಯ್ಯರ್ ಗೆ ಈ ವಿಷಯ ತಿಳಿಸಿದ್ದು ದೊರೈ. ಅಲ್ಲದೇ ಅಯ್ಯರ್ ಕಡೆ ಐವತ್ತು ಪೈಸೆ ಸಾಲ ಪಡೆದುಕೊಂಡು ಊಟಕ್ಕೆ ಬಂದಿದ್ದ ದೊರೈ, ತಾನು ಊಟ ಮಾಡದೇ ಆ ಹಣವನ್ನು ಭಗವಾನ್ ಗೆ ನೀಡಿದ್ದರು. ಅಲ್ಲಿಂದ ಅವರಿಬ್ಬರ ಸ್ನೇಹ ಇನ್ನಷ್ಟು ಗಟ್ಟಿಯಾಯಿತು.

    ಜಗಜ್ಯೋತಿ ಬಸವೇಶ್ವರ ಸಿನಿಮಾದಲ್ಲಿ ದೊರೈ ಕ್ಯಾಮೆರಾಮನ್ ಆಗಿ ಕೆಲಸ ಮಾಡಿದರೆ, ಭಗವಾನ್ ಅಸೋಸಿಯೇಟ್ ನಿರ್ದೇಶಕ. ಅಲ್ಲಿಂದ ಶುರುವಾದ ಅವರ ಪಯಣ ಮುಂದೆ ದೊಡ್ಡ ದೊಡ್ಡ ಸಿನಿಮಾಗಳನ್ನು ಒಟ್ಟಿಗೆ ನಿರ್ದೇಶನ ಮಾಡುವಂತೆ ಆಯಿತು. ಮುಂದೆ ಮಂತ್ರಾಲಯ ಮಹಾತ್ಮೆ ಸಿನಿಮಾಗೆ ದೊರೈ ಕ್ಯಾಮೆರಾಮನ್, ಭಗವಾನ್ ನಿರ್ದೇಶಕರಾದರು. ಈ ಸಿನಿಮಾಗೆ ಹಣ ಹೂಡಿದ್ದು ಭಗವಾನ್. ಅದಕ್ಕೆ ಧೈರ್ಯ ತುಂಬಿದ್ದು ಇದೇ ದೊರೈ. ಡಾ.ರಾಜ ಕುಮಾರ್ ನಟನೆಯ ಜೇಡರಬಲೆ ಸಿನಿಮಾಗೆ ಇಬ್ಬರೂ ನಿರ್ಮಾಪಕರು. ಹೀಗೆ ಸಾಗಿತ್ತು ಇವರ ಸ್ನೇಹದ ಪಯಣ.

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಡಾ.ರಾಜ್ ಕುಮಾರ್ ಗೆ ‘ಕರ್ನಾಟಕ ರತ್ನ’ ಕೊಟ್ಟಾಗ ಸಂಭ್ರಮ ಹೇಗಿತ್ತು? : ಫೋಟೋ ಇವೆ

    ಡಾ.ರಾಜ್ ಕುಮಾರ್ ಗೆ ‘ಕರ್ನಾಟಕ ರತ್ನ’ ಕೊಟ್ಟಾಗ ಸಂಭ್ರಮ ಹೇಗಿತ್ತು? : ಫೋಟೋ ಇವೆ

    ರ್ನಾಟಕ ರತ್ನ (Karnataka Ratna) ಪ್ರಶಸ್ತಿಯನ್ನು ಮೊದಲ ಬಾರಿಗೆ ಪ್ರದಾನ ಮಾಡಿದ್ದು 1992ರಲ್ಲಿ. ದೇಶದಲ್ಲಿ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ವಾದರೆ, ಕರ್ನಾಟಕದಲ್ಲೂ ಅಂಥದ್ದೊಂದು ಗೌರವವನ್ನು ಸಲ್ಲಿಸಬೇಕು ಎನ್ನುವ ಕಾರಣಕ್ಕಾಗಿ ಹುಟ್ಟಿಕೊಂಡಿದ್ದು ‘ಕರ್ನಾಟಕ ರತ್ನ’. ಈ ಪ್ರಶಸ್ತಿಯನ್ನು ಶುರು ಮಾಡಿದ್ದು ಆಗಿನ ಮುಖ್ಯಮಂತ್ರಿ ಎಸ್.ಬಂಗಾರಪ್ಪ (S. Bangarappa). ಇಂಥದ್ದೊಂದು ಪ್ರಶಸ್ತಿಯನ್ನು ಶುರು ಮಾಡಿದಾಗ ಮೊದಲ ಬಾರಿಗೆ ಅದನ್ನು ಡಾ.ರಾಜ್ ಕುಮಾರ್ ಅವರಿಗೆ ನೀಡಬೇಕು ಎಂದು ನಿರ್ಧರಿಸಲಾಯಿತು.

    ಸಿನಿಮಾ ರಂಗದ ಸಾಧನೆಗಾಗಿ ಡಾ.ರಾಜ್ ಕುಮಾರ್ (Raj Kumar) ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಬೇಕು ಎಂದು ಸರಕಾರ ನಿರ್ಧರಿಸಿದಾಗ ಡಾ.ರಾಜ್ ಅದನ್ನು ಮೊದಲು ನಿರಾಕರಿಸುತ್ತಾರೆ. ತಮಗಿಂತಲೂ ಅರ್ಹರಾಗಿರುವ ಶ್ರೇಷ್ಠರು ನಾಡಿನಲ್ಲಿ ಇದ್ದಾರೆ. ಅವರಿಗೆ ಆ ಗೌರವವನ್ನು ಕೊಡಿ ಎಂದು ನಯವಾಗಿಯೇ ನಿರಾಕರಿಸುತ್ತಾರೆ. ಆದರೆ, ಸಾಂಸ್ಕೃತಿಕ ವಲಯವು ಡಾ.ರಾಜ್ ಕುಮಾರ್ ಹೇಳುವುದು ಸರಿಯಿದೆ. ಆದರೂ, ಅವರೂ ಕೂಡ ಅರ್ಹ ವ್ಯಕ್ತಿ. ಹಾಗಾಗಿ ಡಾ.ರಾಜ್ ಗೆ ಪ್ರಶಸ್ತಿ ನೀಡಿದರೆ ಯಾವುದೇ ತಪ್ಪಿಲ್ಲ ಎಂದು ಚರ್ಚೆಯಾಗುತ್ತದೆ. ಇದನ್ನೂ ಓದಿ:ದಆಮೀರ್‌ ಖಾನ್‌ ತಾಯಿಗೆ ಹೃದಯಾಘಾತ

    ಡಾ.ರಾಜ್ ಕುಮಾರ್ ಕೊನೆಗೆ ಪ್ರಶಸ್ತಿಯನ್ನು ಸ್ವೀಕರಿಸಲು ಒಪ್ಪಿಕೊಳ್ಳುತ್ತಾರೆ. ಆದರೆ, ಒಂದು ಷರತ್ತನ್ನೂ ಅವರು ವಿಧಿಸುತ್ತಾರೆ. ರಾಷ್ಟ್ರಕವಿ ಕುವೆಂಪು ಅವರಿಗೆ ಈ ಪ್ರಶಸ್ತಿಯನ್ನು ಮೊದಲು ಕೊಡಿ, ಆನಂತರ ನಾನು ಸ್ವೀಕರಿಸುತ್ತೇನೆ ಎನ್ನುತ್ತಾರೆ. ಆಗ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಮತ್ತು ತಂಡವು ಡಾ.ರಾಜ್ ಮತ್ತು ಕುವೆಂಪು ಇಬ್ಬರಿಗೂ ಈ ಪ್ರಶಸ್ತಿಯನ್ನು ಘೋಷಣೆ ಮಾಡುತ್ತದೆ.

    ಇಂದು ಡಾ.ರಾಜ್ ಪುತ್ರ ಪುನೀತ್ ರಾಜ್ ಕುಮಾರ್ ಅವರಿಗೆ ಯಾವ ಜಾಗದಲ್ಲಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲು ಆಯ್ಕೆ ಮಾಡಿಕೊಂಡಿದ್ದಾರೋ, ಅದೇ ಜಾಗದಲ್ಲೇ ಡಾ.ರಾಜ್ ಕುಮಾರ್ ಅವರಿಗೂ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಆಗಿನ ರಾಜ್ಯಪಾಲರಾದ ಖುರ್ಷಿದ್ ಅಲಂ ಖಾನ್ (Khurshid Alam Khan) ಅವರು ಈ ಪ್ರಶಸ್ತಿಯನ್ನು ಡಾ.ರಾಜ್ ಗೆ ಪ್ರದಾನ ಮಾಡುತ್ತಾರೆ. ಮುಖ್ಯಮಂತ್ರಿಯಾಗಿದ ಎಸ್.ಬಂಗಾರಪ್ಪ, ಹಿರಿಯ ನಾಯಕರಾದ ಎಸ್.ಎಂ. ಕೃಷ್ಣ (S.M Krishna) ಸೇರಿದಂತೆ ಹಲವಾರು ಗಣ್ಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ.

    ಇದೇ ವೇದಿಕೆಯ ಮೇಲೆಯೇ ಮುಖ್ಯಮಂತ್ರಿಯಾಗಿದ್ದ ಎಸ್. ಬಂಗಾರಪ್ಪನವರು, ಡಾ.ರಾಜ್ ಕುಮಾರ್ ಅಭಿನಯದ ಅದ್ಭುತ ಗೀತೆ ‘ಯಾರೇ ಕೂಗಾಡಲಿ, ಊರೇ ಹೋರಾಡಲಿ.. ಎಮ್ಮೆ ನಿನಗೆ ಸಾಟಿಯಿಲ್ಲ’ ಎನ್ನುವ ಗೀತೆಯನ್ನು ಹಾಡಿ ರಂಜಿಸುತ್ತಾರೆ. ಈ ಹಾಡು ಅಂದು ನಾನಾ ರೀತಿಯ ಅರ್ಥಗಳನ್ನು ನೀಡಿತ್ತು ಎಂದು ಈಗಲೂ ವಿಶ್ಲೇಷಿಸಲಾಗುತ್ತಿದೆ.

    Live Tv
    [brid partner=56869869 player=32851 video=960834 autoplay=true]