Tag: Raj Kapoor

  • ಪಿಎಂ ಮೋದಿರನ್ನು ಭೇಟಿಯಾದ ಕರೀನಾ ಕಪೂರ್ ಕುಟುಂಬ

    ಪಿಎಂ ಮೋದಿರನ್ನು ಭೇಟಿಯಾದ ಕರೀನಾ ಕಪೂರ್ ಕುಟುಂಬ

    ಬಾಲಿವುಡ್ ಬ್ಯೂಟಿ ಕರೀನಾ ಕಪೂರ್ (Kareena Kapoor) ಕುಟುಂಬ ಪಿಎಂ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿದ್ದಾರೆ. ಈ ಕುರಿತು ಸ್ಪೆಷಲ್ ಪೋಸ್ಟ್‌ವೊಂದನ್ನು ನಟಿ ಹಂಚಿಕೊಂಡಿದ್ದಾರೆ. ರಾಜ್ ಕಪೂರ್ 100ನೇ ವರ್ಷದ ಹುಟ್ಟುಹಬ್ಬದ ಹಿನ್ನೆಲೆ ಮೋದಿಗೆ ಕಪೂರ್‌ ಕುಟುಂಬ ಆಹ್ವಾನ ನೀಡಿದೆ. ಇದನ್ನೂ ಓದಿ:ಯಾರನ್ನೂ ದ್ವೇಷಿಸಲಿಲ್ಲ – ಎಸ್.ಎಂ ಕೃಷ್ಣ ಅಗಲಿಕೆಯ‌ ಕುರಿತು ನೋವು ಹಂಚಿಕೊಂಡ ನಟಿ ರಮ್ಯಾ

    ಇದೇ ಡಿ.14ರಂದು ನಟ, ನಿರ್ಮಾಪಕ ರಾಜ್ ಕಪೂರ್ ಅವರ ಹುಟ್ಟಿದ ದಿನವಾಗಿದ್ದು, 2024ಕ್ಕೆ 100ನೇ ವರ್ಷದ ಬರ್ತ್ಡೇ ಸಂಭ್ರಮ. ರಾಜ್ ಕಪೂರ್ 100ನೇ ವರ್ಷದ ಜನ್ಮ ದಿನದ ಗೌರವಾರ್ಥವಾಗಿ ಅವರ 10 ಸಿನಿಮಾಗಳ ಪ್ರದರ್ಶನ ಮತ್ತು ವಿಶೇಷ ಕಾರ್ಯಕ್ರಮವನ್ನು ಕೂಡ ಕಪೂರ್ ಕುಟುಂಬ ಆಯೋಜಿಸಿದೆ. ಈ ಹಿನ್ನೆಲೆ ದೆಹಲಿಯಲ್ಲಿ ಪಿಎಂ ಕಚೇರಿಯಲ್ಲಿ ಕಪೂರ್ ಫ್ಯಾಮಿಲಿ ಮೋದಿರನ್ನು ಭೇಟಿ ಮಾಡಿ ಆಹ್ವಾನ ನೀಡಿದೆ.

    ಕರೀನಾ ಕಪೂರ್ ದಂಪತಿ, ನೀತು ಕಪೂರ್, ಆಲಿಯಾ- ರಣ್‌ಬೀರ್ ಕಪೂರ್ ಜೋಡಿ, ಕರೀಷ್ಮಾ ಕಪೂರ್ ಕುಟುಂಬಸ್ಥರು ಮೋದಿರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಈ ಕುರಿತಾದ ವಿಶೇಷ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕರೀನಾ ಮಕ್ಕಳಾದ ಟಿಮ್ ಮತ್ತು ಜೆಹ್ ಹೆಸರನ್ನು ಬರೆದು ಪಿಎಂ ಆಟೋಗ್ರಾಫ್ ನೀಡಿರೋದು ಎಲ್ಲರ ಗಮನ ಸೆಳೆದಿದೆ. ಜೊತೆಗೆ ಕರೀನಾ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಮೋದಿರವರ ಸರಳತೆ ಮತ್ತು ಬೆಂಬಲವನ್ನು ಕೊಂಡಾಡಿದ್ದಾರೆ.

    ಅಂದಹಾಗೆ, ರಾಜ್ ಕಪೂರ್ 100ನೇ ವರ್ಷದ ಬರ್ತ್ ಆ್ಯನಿವರ್ಸರಿ ಪ್ರಯುಕ್ತ ಡಿ.13ರಿಂದ 15ರವರೆಗೆ 40 ನಗರಗಳಲ್ಲಿ 10 ಸಿನಿಮಾಗಳು 135 ಚಿತ್ರಮಂದಿರಗಳಲ್ಲಿ ಪ್ರಸಾರವಾಗಲಿದೆ ಎಂದು ನಟಿ ತಿಳಿಸಿದ್ದಾರೆ.

  • ರಣ್‍ಧೀರ್ ಕಪೂರ್‍ ಗೆ ಕೊರೊನಾ ಪಾಸಿಟಿವ್-ಐಸಿಯುನಲ್ಲಿ ಚಿಕಿತ್ಸೆ

    ರಣ್‍ಧೀರ್ ಕಪೂರ್‍ ಗೆ ಕೊರೊನಾ ಪಾಸಿಟಿವ್-ಐಸಿಯುನಲ್ಲಿ ಚಿಕಿತ್ಸೆ

    ಮುಂಬೈ: ಬಾಲಿವುಡ್‍ನ ಖ್ಯಾತ ನಟ ರಣ್‍ಧೀರ್ ಕಪೂರ್‍ ಗೆ ಕೊರೊನಾ ಪಾಸಿಟಿವ್ ಆಗಿದ್ದು, ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವರದಿಯಾಗಿದೆ.

    74 ವರ್ಷ ಪ್ರಾಯದ ರಣ್‍ಧೀರ್ ಕಪೂರ್ ಕೊರೊನಾ ದೃಢವಾಗುತ್ತಿದ್ದಂತೆ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು ಪರೀಕ್ಷಿಸಿದ ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಐಸಿಯುನಲ್ಲಿ ನಿಗಾ ವಹಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿಮಾಡಿದೆ.

    ಈ ಕುರಿತು ಪ್ರತಿಕ್ರಿಯಿಸಿರುವ ಕೋಕಿಲಾಬೆನ್ ಆಸ್ಪತ್ರೆಯ ವೈದ್ಯರು, ಕಪೂರ್ ಅವರ ಆರೋಗ್ಯ ಇದೀಗ ಸ್ಥಿರವಾಗಿದೆ. ಆದರೂ ಕೂಡ ಅವರನ್ನು ಐಸಿಯುನಲ್ಲಿ ಇರಿಸಲಾಗಿದ್ದು ಮುಂದಿನ ಕೆಲದಿನಗಳವರೆಗೆ ಅವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು ಎಂದಿದ್ದಾರೆ.

    ಕಳೆದ ವರ್ಷ ರಣ್‍ಧೀರ್ ಕಪೂರ್ ಅವರ ಕಿರಿಯ ಸಹೋದರ ರಿಷಿ ಕಪೂರ್ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿ ಮೃತಪಟ್ಟಿದ್ದರು. ಇವರೊಂದಿಗೆ ಇನ್ನೋರ್ವ ಸಹೋದರ ರಾಜೀವ್ ಕಪೂರ್ ಕೂಡ ಸಾವನ್ನಪ್ಪಿದ್ದಾರೆ.

    ರಣ್‍ಧೀರ್ ಕಪೂರ್ ಅವರು ಕಲ್ ಅಜ್ ಕಲ್‍ರೆ ಕಲ್, ಜೀತ್, ಜವಾನಿ ದಿವಾನಿ, ಲಾಫಾಂಗೆ ರಾಂಪುರ್ ಕಾ ಲಕ್ಷ್ಮಣ್ ಹಾಥ್ ಕಿ ಸಫೈ ಸೇರಿದಂತೆ ಹಲವು ಉತ್ತಮ ಚಿತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಕಪೂರ್ ಅವರು ನಟಿ ಬಬಿತಾ ಅವರನ್ನು ಮದುವೆಯಾಗಿದ್ದರು. ಇವರಿಗೆ ಇಬ್ಬರು ಪುತ್ರಿಯರಿದ್ದು ಕರೀಷ್ಮಾ ಕಪೂರ್ ಮತ್ತು ಕರೀನಾ ಕಪೂರ್ ಇವರಿಬ್ಬರೂ ಕೂಡ ಹಿಂದಿ ಚಿತ್ರರಂಗದ ಖ್ಯಾತ ನಟಿಮನಿಯಾರಾಗಿ ಗುರುತಿಸಿಕೊಂಡಿದ್ದಾರೆ.

  • ವಿಡಿಯೋ: ಮುಂಬೈನ ಪ್ರಸಿದ್ಧ ಆರ್.ಕೆ.ಸ್ಟುಡಿಯೋದಲ್ಲಿ ಭಾರೀ ಬೆಂಕಿ ಅವಘಡ

    ವಿಡಿಯೋ: ಮುಂಬೈನ ಪ್ರಸಿದ್ಧ ಆರ್.ಕೆ.ಸ್ಟುಡಿಯೋದಲ್ಲಿ ಭಾರೀ ಬೆಂಕಿ ಅವಘಡ

    ಮುಂಬೈ: ನಗರದ ಚೇಂಬುರನಲ್ಲಿರುವ ಪ್ರಸಿದ್ಧ ಆರ್.ಕೆ.ಸ್ಟುಡಿಯೋದಲ್ಲಿ ಇಂದು ಮಧ್ಯಾಹ್ನದ ವೇಳೆಯಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಸ್ಟುಡಿಯೋದಲ್ಲಿ ಖಾಸಗಿ ಚಾನೆಲ್‍ಗಳ ರಿಯಾಲಿಟಿ ಶೋಗಳು ಇಲ್ಲಿಯೇ ನಡೆಯುತ್ತವೆ.

    ಸ್ಥಳದಲ್ಲಿ 6 ಅಗ್ನಿಶಾಮಕ ವಾಹನಗಳು ಮತ್ತು 5 ನೀರಿನ ಟ್ಯಾಂಕರಗಳು ಬೆಂಕಿ ನಂದಿಸುವಲ್ಲಿ ನಿರತವಾಗಿವೆ. ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಆರ್.ಕೆ ಫಿಲ್ಮ್ ನಿರ್ಮಾಣ ಕಂಪನಿ ಈ ಸ್ಟುಡಿಯೋವನ್ನು ನಿರ್ವಹಣೆ ಮಾಡುತ್ತಿತ್ತು. ಸ್ಟುಡಿಯೋಗೆ ಬಾಲಿವುಡ್ ಹಿರಿಯ ನಟ ರಾಜ್ ಕಪೂರ್ ಅವರ ಹೆಸರನ್ನು ಇಡಲಾಗಿದೆ.

    ಮಧ್ಯಾಹ್ನ ಸುಮಾರು 2 ಗಂಟೆಗೆ ನಮ್ಮ ಇಲಾಖೆಗೆ ಕರೆ ಬಂತು. ಕೂಡಲೇ ನಮ್ಮ ಸಿಬ್ಬಂದಿ ತಲುಪಿ ಬೆಂಕಿ ನಿಂದಿಸುವಲ್ಲಿ ನಿರತರಾಗಿದ್ದಾರೆ ಎಂದು ಮುಂಬೈನ ಅಗ್ನಿಶಾಮಕ ದಳದ ಮುಖ್ಯಸ್ಥ ಪಿ.ಎಸ್ ರಹಂಗ್‍ದಾಲೆ ತಿಳಿಸಿದ್ದಾರೆ.

    ಕಟ್ಟಡದ ನೆಲ ಮಹಡಿಯಲ್ಲಿರುವ 100*80 ಚದರ ಅಡಿ ಪ್ರದೇಶದಲ್ಲಿ ಎಲೆಕ್ಟ್ರಿಕ್ ವೈರಿಂಗ್, ಎಲೆಕ್ಟ್ರಿಕಲ್ ಇನ್ಸ್ಟಾಲೇಷನ್, ಅಲಂಕಾರ ಉಪಕರಣಗಳಿಗೆ ಮಾತ್ರ ತಗುಲಿದೆ ಎಂದು ಹೇಳಲಾಗುತ್ತಿದೆ. ಆದರೆ ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ತಿಳಿದು ಬಂದಿಲ್ಲ.