Tag: Raj Family

  • ಶಿವಮೊಗ್ಗದಲ್ಲಿ ನಡೆಯಿತು ಡಾ. ರಾಜ್ ಕುಟುಂಬದ ಮತ್ತೊಂದು ಮದುವೆ

    ಶಿವಮೊಗ್ಗದಲ್ಲಿ ನಡೆಯಿತು ಡಾ. ರಾಜ್ ಕುಟುಂಬದ ಮತ್ತೊಂದು ಮದುವೆ

    ಶಿವಮೊಗ್ಗ: ಶಿವರಾಜ್ ಕುಮಾರ್ ಪುತ್ರಿ ನಿರುಪಮಾ ಮದುವೆ ನಂತರ ಡಾ. ರಾಜ್ ಕುಮಾರ್ ಫ್ಯಾಮಿಲಿಯಲ್ಲಿ ಮತ್ತೊಂದು ಮದುವೆಗೆ ಶಿವಮೊಗ್ಗ ಸಾಕ್ಷಿಯಾಗಿದೆ.

    ವರನಟ ಡಾ. ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಹಿರಿಯ ಪುತ್ರಿ ಲಕ್ಷ್ಮಿ ಗೋವಿಂದರಾಜು ಅವರ ಪುತ್ರ ಶಾನ್ ಅವರು ಸಾಗರದಲ್ಲಿ ವಕೀಲರಾಗಿರುವ ಬರೂರು ನಾಗರಾಜ್ ಅವರ ಮಗಳಾಗಿರುವ ಸಿಂಧೂ ಅವರನ್ನು ಕೈ ಹಿಡಿದಿದ್ದಾರೆ.

    ಮುಹೂರ್ತದ ಹಿಂದಿನ ದಿನ ನೂರಾರು ಗಣ್ಯರು ಕಲ್ಯಾಣ ಮಂಟಪಕ್ಕೆ ಬಂದು ಮದುವೆ ಕಾರ್ಯದಲ್ಲಿ ಪಾಲ್ಗೊಂಡು ದಂಪತಿಗೆ ಶುಭ ಹಾರೈಸಿದರು.

    ಮದುವೆ ಆರತಕ್ಷತೆಗೆ ಪುನೀತ್ ರಾಜ್‍ಕುಮಾರ್, ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜ್‍ಕುಮಾರ್ ಸೇರಿದಂತೆ ರಾಜ್ ಕುಟುಂಬದ ಸಾಕಷ್ಟು ಮಂದಿ ಹಾಗೂ ಸಿನಿಮಾ ಲೋಕದ ಹಲವು ಗಣ್ಯರು ಭಾಗಿಯಾದರು.