Tag: Raipur

  • ಕಾಮಗಾರಿ ವೇಳೆ ಪತ್ತೆಯಾದ್ವು 900 ವರ್ಷ ಹಳೆಯ ಚಿನ್ನದ ನಾಣ್ಯಗಳು!

    ಕಾಮಗಾರಿ ವೇಳೆ ಪತ್ತೆಯಾದ್ವು 900 ವರ್ಷ ಹಳೆಯ ಚಿನ್ನದ ನಾಣ್ಯಗಳು!

    ರಾಯ್ಪುರ: ರಸ್ತೆ ಕಾಮಗಾರಿ ವೇಳೆ ಸುಮಾರು 12 ನೇ ಶತಮಾನದ ಚಿನ್ನದ ನಾಣ್ಯಗಳು ಛತ್ತೀಸ್‍ಗಡ ರಾಜ್ಯದ ಕೊಂಡಗಾನ್ ಜಿಲ್ಲೆಯಲ್ಲಿ ದೊರೆತಿದೆ.

    ಕೊಂಡಗಾನ್ ಜಿಲ್ಲೆಯ ಕೊರ್ಕೋಟಿ ಮತ್ತು ಬೆದ್ಮಾ ಗ್ರಾಮಗಳ ನಡುವೆ ರಸ್ತೆ ಕಾಮಗಾರಿ ಪ್ರಯುಕ್ತ ನೆಲ ಅಗೆಯುವ ವೇಳೆ ಮಡಿಕೆಯೊಂದು ಸಿಕ್ಕಿದೆ. ಈ ಮಡಿಕೆಯನ್ನು ತೆರೆದು ನೋಡಿದಾಗ ಮಡಿಕೆಯಲ್ಲಿ ಚಿನ್ನದ ನಾಣ್ಯಗಳು ಪತ್ತೆಯಾಗಿದ್ದವು. ಕೂಡಲೇ ಕಾರ್ಮಿಕರು ಕೊರ್ಕೋಟಿ ಗ್ರಾಮದ ಸರ್ ಪಂಚ್‍ಗೆ ವಿಷಯ ತಿಳಿಸಿದ್ದಾರೆ.

    ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಸರ್ ಪಂಚ್ ನೆಹರುಲಾಲ್ ಬರ್ಗೆಲ್ ರವರು ಮಡಿಕೆಯನ್ನು ವಶಕ್ಕೆ ಪಡೆದು ಜಿಲ್ಲಾಧಿಕಾರಿಗೆ ವಿಷಯ ಮುಟ್ಟಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿದ ಕೊಂಡಗಾನ್ ಜಿಲ್ಲಾಧಿಕಾರಿಯಾದ ನೀಲಕಂಠ ಟೇಕಂ, ಕೊಂಡಾಗೋನ್ ಜಿಲ್ಲೆಯಲ್ಲಿ ರಸ್ತೆ ಕಾಮಗಾರಿ ಮಾಡುತ್ತಿದ್ದ ವೇಳೆ 12 ನೇ ಶತಮಾನದ ಚಿನ್ನದ ನಾಣ್ಯಗಳು ದೊರೆತಿದೆ. ಕೊರ್ಕೋಟಿ ಹಾಗೂ ಬೇದ್ಮಾ ಹಳ್ಳಿಗಳ ನಡುವೆ ರಸ್ತೆ ನಿರ್ಮಾಣ ಕೆಲಸ ನಡೆಯುತ್ತಿತ್ತು. ಈ ವೇಳೆ ಮಹಿಳಾ ಕಾರ್ಮಿಕರಿಗೆ ಒಂದು ಮಡಿಕೆ ಸಿಕ್ಕಿದ್ದು ಅದರಲ್ಲಿ 57 ಚಿನ್ನದ ನಾಣ್ಯಗಳು ಸೇರಿದಂತೆ ಬೆಳ್ಳಿ ನಾಣ್ಯಗಳು, ಚಿನ್ನದ ಕಿವಿಯೋಲೆಯೂ ಸಿಕ್ಕಿದೆ ಎಂದು ತಿಳಿಸಿದ್ದಾರೆ.

    ಈ ನಾಣ್ಯಗಳನ್ನು 12 ಅಥವಾ 13ನೇ ಶತಮನಕ್ಕೆ ಸೇರಿವೆ ಎಂಬುದು ಪ್ರಾಥಮಿಕ ವರದಿಯಲ್ಲಿ ತಿಳಿದುಬಂದಿದೆ. ನಾಣ್ಯಗಳ ಮೇಲೆ ಯಾದವ ರಾಜವಂಶ ವಿದರ್ಭವನ್ನು ಆಳುತ್ತಿದ್ದಾಗ ಜಾರಿಯಲ್ಲಿದ್ದ ಲಿಪಿಯು ಕಂಡುಬಂದಿದ್ದು, ಇದು ಯಾದವ ರಾಜವಂಶದ ಕಾಲದ್ದು ಎಂದು ನೀಲಕಂಠರವರು ಹೇಳಿದ್ದಾರೆ.

  • ಕತ್ತಲೆಯಲ್ಲೇ ಬಂದು ಮಲಗಿದ್ದ ಇಬ್ಬರು ಮಕ್ಕಳು ಸೇರಿ ದಂಪತಿಯನ್ನು ಹೊಡೆದು ಕೊಂದ್ರು!

    ಕತ್ತಲೆಯಲ್ಲೇ ಬಂದು ಮಲಗಿದ್ದ ಇಬ್ಬರು ಮಕ್ಕಳು ಸೇರಿ ದಂಪತಿಯನ್ನು ಹೊಡೆದು ಕೊಂದ್ರು!

    ರಾಯ್ಪುರ್: ಮಲಗಿದ್ದ ಸಂದರ್ಭದಲ್ಲಿ ಒಂದೇ ಕುಟುಂಬದ ನಾಲ್ವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದ ಅಮಾನವೀಯ ಘಟನೆಯೊಂದು ನಡೆದಿದ್ದು, ಇದೀಗ ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿದೆ.

    ಈ ಘಟನೆ ಮಧ್ಯಪ್ರದೇಶದ ಮಹಸಮುಂದ್ ಗ್ರಾಮದಲ್ಲಿ ನಡೆದಿರುವ ಬಗ್ಗೆ ಗುರುವಾರ ಬೆಳಕಿಗೆ ಬಂದಿದೆ. 30 ವರ್ಷದ ಯೋಗಮಯ ಸಾಹು, ಪತಿ 32 ವರ್ಷದ ಚೇತನ್ ಹಾಗೂ ಇವರ 8 ಮತ್ತು ವರ್ಷದ ಇಬ್ಬರು ಮಕ್ಕಳನ್ನು ದುಷ್ಕರ್ಮಿಗಳು ಕೊಲೆಗೈದಿದ್ದಾರೆ.

    ಯೋಗಮಯ ಅವರು ಸಹಾಯಕ ದಾದಿಯಾಗಿ ಕೆಲಸ ಮಾಡುತ್ತಿದ್ದರು. ಇವರ ಪತಿ ಚೇತನ್, ರಾಯ್ಪುರದಲ್ಲಿ ಮೆಡಿಕಲ್ ಸೇಲ್ಸ್ ಎಕ್ಸಿಕ್ಯುಟಿವ್ ಆಗಿ ವ್ಯವಹಾರ ನಡೆಸುತ್ತಿದ್ದರು. ಇವರು ಸರ್ಕಾರಿ ಆರೋಗ್ಯ ಸಂಸ್ಥೆಯ ಕಂಪೌಂಡ್ ನಲ್ಲಿರೋ ಮನೆಯೊಂದರಲ್ಲಿ ವಾಸವಾಗಿದ್ದರು. ಘಟನೆಯ ಬಳಿಕ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ರಕ್ತಸಿಕ್ತವಾಗಿ ಬಿದ್ದಿದ್ದ ಕುಟುಂಬವನ್ನು ಕಂಡು, ಹಳೆಯ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿರಬಹುದೆಂದು ಶಂಕಿಸಿದ್ದಾರೆ.

    ಇವರು ನೆಲೆಸಿದ್ದ ಮನೆಯಲ್ಲಿ ಅಳವಡಿಸಲಾಗಿದ್ದ ಎರಡು ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅದರಲ್ಲಿ ಕೆಲ ವಾರಗಳ ಹಿಂದೆಯೇ ಈ ಕುಟುಂಬದ ಕೊಲೆಗೆ ದುಷ್ಕರ್ಮಿಗಳು ಸ್ಕೆಚ್ ಹಾಕಿರುವುದು ಪೊಲೀಸರ ಗಮನಕ್ಕೆ ಬಂದಿದೆ. ವ್ಯಕ್ತಿಯೊಬ್ಬ ತನ್ನ ಹೊಸ ಕಾರಿನೊಂದಿಗೆ ಬಂದು ಇವರ ಮನೆ ಮುಂದೆ ಪಾರ್ಕ್ ಮಾಡಿದ್ದಾನೆ. ನಂತರ ಕಾರಿನಿಂದ ಇಳಿದು ಅನುಮಾನಸ್ಪದವಾಗಿ ಸುತ್ತಾಡಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಆದ್ರೆ ಬುಧವಾರ ಮತ್ತು ಗುರುವಾರ ಆ ಪ್ರದೇಶದಲ್ಲಿ ಕರೆಂಟ್ ಇಲ್ಲದಿದ್ದುದರಿಂದ ಘಟನೆ ನಡೆದ ದಿನದ ದೃಶ್ಯಾವಳಿಗಳು ಲಭ್ಯವಾಗಿಲ್ಲ ಅಂತ ತಿಳಿಸಿದ್ದಾರೆ.

    ಗುರುವಾರ ಸುರಿದ ಭಾರೀ ಗಾಳಿ, ಮಳೆಯಿಂದಾಗಿ ಮೃತ ಕುಟುಂಬ ನೆಲೆಸಿದ್ದ ಪ್ರದೇಶದಲ್ಲಿ ಕರೆಂಟ್ ಇರಲಿಲ್ಲ. ವಿಪರೀತ ಸೆಕೆ ಇದ್ದುದರಿಂದ ಆ ಪ್ರದೇಶದ ನಿವಾಸಿಗಳು ಮನೆ ಬಾಗಿಲು ತೆರೆದಿಟ್ಟು ಮಲಗುತ್ತಿದ್ದರು. ಸಾಹು ಕುಟುಂಬದವರು ಕೂಡ ಮನೆ ಮುಂದಿನ ಬಾಗಿಲು ತೆರೆದಿಟ್ಟು ಮನೆಯ ವರಾಂಡದಲ್ಲಿ ಮಲಗಿದ್ದರು. ಈ ಸಮಯವನ್ನೇ ಉಪಯೋಗಿಸಿಕೊಂಡ ದುಷ್ಕರ್ಮಿಗಳು ಕತ್ತಲೆಯಲ್ಲೇ ಬಂದು ಮಲಗಿದ್ದ ಕುಟುಂಬವನ್ನು ಹೊಡೆದು ಬರ್ಬರವಾಗಿ ಹತ್ಯೆಗೈದಿದ್ದಾರೆ.

    ದುಷ್ಕರ್ಮಿಗಳು ಕುಟುಂಬದ ಮೇಲೆ ಅಟ್ಟಹಾಸ ಮೆರೆಯುವ ಸಂದರ್ಭದಲ್ಲಿ ಸಾಹು ಜೋರಾಗಿ ಕಿರುಚಿಕೊಂಡಿದ್ದಾರೆ. ಇದು ನೆರೆಮನೆಯವರಿಗೂ ಕೇಳಿದೆ. ಆದ್ರೆ ಅವರು ಪಕ್ಕದಲ್ಲೇ ಹೆಲ್ತ್ ಸೆಂಟರ್ ಇರುವುದರಿಂದ ಯಾರೋ ಪ್ರಸವ ನೋವಿನಿಂದ ಚೀರಾಡುತ್ತಿದ್ದಾರೆ ಅಂತ ತಿಳಿದು ಸುಮ್ಮನಾಗಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾರೆ.

    ಅಪರಿಚಿತ ವ್ಯಕ್ತಿಗಳೇ ಈ ಕೃತ್ಯ ಎಸಗಿರುವುದಾಗಿ ಪೊಲೀಸರು ಶಂಕಿಸಿದ್ದಾರೆ. ಕೊಲೆಗಾರರು ವಾರ್ಡ್ ರೋಬ್ ಹಾಗೂ ಮನೆಯಲ್ಲಿದ್ದ ಕೆಲವೊಂದು ಬಾಕ್ಸ್ ಗಳನ್ನು ತೆರೆದಿದ್ದಾರೆ. ಆದ್ರೆ ಅವರಿಗೆ ಕದಿಯಲು ಯಾವುದೇ ವಸ್ತುಗಳು ಸಿಕ್ಕಿರಲಿಲ್ಲ ಅಂತ ರಾಯ್ಪುರ ಪೊಲೀಸರು ಮಾಹಿತಿ ನೀಡಿದ್ದಾರೆ.

  • ರಸ್ತೆಯಲ್ಲಿ ಐಇಡಿ ಸ್ಫೋಟಿಸಿದ ನಕ್ಸಲರು – ಜೀಪಿನಲ್ಲಿದ್ದ 6 ಯೋಧರು ಹುತಾತ್ಮ

    ರಸ್ತೆಯಲ್ಲಿ ಐಇಡಿ ಸ್ಫೋಟಿಸಿದ ನಕ್ಸಲರು – ಜೀಪಿನಲ್ಲಿದ್ದ 6 ಯೋಧರು ಹುತಾತ್ಮ

    ರಾಯಪುರ: ನಕ್ಸಲರು ನಡೆಸಿದ ಸುಧಾರಿತ ಸ್ಫೋಟಕ ಬಾಂಬ್(ಐಇಡಿ) ದಾಳಿಯಲ್ಲಿ ವಾಹನದಲ್ಲಿ ತೆರಳುತ್ತಿದ್ದ 6 ಮಂದಿ ರಕ್ಷಣಾ ಪಡೆಯ ಯೋಧರು ಹುತಾತ್ಮರಾಗಿರುವ ಘಟನೆ ಛತ್ತೀಸ್‍ಗಢದ ದಾಂತೇವಾಡಾ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಕಿರಾಂಡುಲ್ ಮತ್ತು ಚಾಲ್ನಾರ್ ಪ್ರದೇಶದ ಮಾರ್ಗದಲ್ಲಿ ರಸ್ತೆ ನಡುವೆ ಐಇಡಿ ಬಾಂಬ್ ಇಟ್ಟು ಸ್ಫೋಟ ನಡೆಸಲಾಗಿದೆ. ಘಟನೆಯಲ್ಲಿ ಯೋಧರೊಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಅವರು ರಾಯಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ನಕ್ಸಲ್ ನಿಗ್ರಹ ಕಾರ್ಯಾಚರಣೆ ನಡೆಸಿದ ಪ್ರದೇಶದಲ್ಲಿ ದಾಳಿ ನಡೆದಿದ್ದು. ಭಾರೀ ಪ್ರಮಾಣದ ಶಬ್ಧ ಕೇಳಿ ಬಂದ ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾಗಿ ಐಜಿಪಿ ವಿವೇಕಾನಂದ ಸಿನ್ಹಾ ತಿಳಿಸಿದ್ದಾರೆ.

    ರಕ್ಷಣಾ ಪಡೆ ನಕ್ಸಲರ ವಿರುದ್ಧ ಕಳೆದ ಹಲವು ದಿನಗಳಿಂದ ನಡೆಸುತ್ತಿದ್ದ ಸರ್ಚ್ ಆಪರೇಷನ್ ವಿರುದ್ಧವಾಗಿ ಈ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ನಕ್ಸಲರು ಸುಧಾರಿತ ಭಾರೀ ಪ್ರಮಾಣದ ಸ್ಫೋಟಕಗಳನ್ನು ಬಳಕೆ ಮಾಡಿದ್ದಾರೆ. ಘಟನೆ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತದೆ ಎಂದು ನಕ್ಸಲ್ ನಿಗ್ರಹ ಪಡೆಯ ಡಿಜಿಪಿ ಸುರೇಂದ್ರ ರಾಜ್ ತಿಳಿಸಿದ್ದಾರೆ.

    ಘಟನೆ ಬಗ್ಗೆ ಮಾಹಿತಿ ಪಡೆದ ಕೇಂದ್ರ ಮೀಸಲು ಪಡೆ (ಸಿಆರ್ ಪಿಎಫ್) ಸ್ಥಳಕ್ಕೆ ಧವಿಸಿ ರಕ್ಷಣಾ ಕಾರ್ಯ ನಡೆಸಿದೆ. ನಕ್ಸಲರು ಪೊಲೀಸ್ ಜೀಪ್ ಅನ್ನು ಗುರಿಯಾಗಿಸಿ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಛತ್ತೀಸ್‍ಗಢ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಬಾಂಬ್ ದಾಳಿ ನಡೆದ ದಾಂತೇವಾಡಾದಲ್ಲಿ ಎರಡು ದಿನಗಳಲ್ಲಿ ಸಾರ್ವಜನಿಕ ಸಭೆ ನಿಗಧಿಯಾಗಿದ್ದು, ಘಟನೆ ಬಳಿಕ ಹೆಚ್ಚಿನ ರಕ್ಷಣೆಯನ್ನು ಏರ್ಪಡಿಸಲಾಗಿದೆ.

  • ಅರೆನಗ್ನವಾಗಿ ಹೋಟೆಲ್ ರೂಮ್‍ನಲ್ಲಿ ಯುವತಿಯ ಶವ ಪತ್ತೆ

    ಅರೆನಗ್ನವಾಗಿ ಹೋಟೆಲ್ ರೂಮ್‍ನಲ್ಲಿ ಯುವತಿಯ ಶವ ಪತ್ತೆ

    ರಾಯ್‍ಪುರ: ಸ್ನೇಹಿತನೊಂದಿಗೆ ಛತ್ತೀಸ್‍ಗಢದ ರಾಯಪುರದ ಹೋಟೆಲ್ ನಲ್ಲಿ ಕೊಠಡಿ ಬಾಡಿಗೆ ಪಡೆದ ಯುವತಿಯೊಬ್ಬಳ ಮೃತದೇಹ ಮೂರು ದಿನಗಳ ಬಳಿಕ ಕೊಠಡಿಯಲ್ಲಿ ಅರೆನಗ್ನ ಸ್ಥಿತಿಯಲ್ಲಿ ಪತ್ತೆಯಾಗಿದೆ.

    ಅಂಬಿಕಾಪುರದ ನಿವಾಸಿಯಾಗಿರುವ ಅಪೂರ್ವ ತಿವಾರಿ ಮೃತ ಯುವತಿಯಾಗಿದ್ದು, ತನ್ನ ಸ್ನೇಹಿತ ವಿಪಿನ್ ದೂವೆ ಎಂಬಾತನೊಂದಿಗೆ ಮೇ 11 ರಂದು ರಾತ್ರಿ ರಾಯಪುರದ ರೈಲ್ವೇ ನಿಲ್ದಾಣದ ಹೋಟೆಲ್ ನಲ್ಲಿ ಕೊಠಡಿ ಪಡೆದಿದ್ದಳು. ಈ ವೇಳೆ ನಾವಿಬ್ಬರು ಖಾಸಗಿ ಸಂಸ್ಥೆಯೊಂದರಲ್ಲಿ ಪರೀಕ್ಷೆ ಬರೆಯಲು ಆಗಮಿಸಿದ್ದಾಗಿ ತಿಳಿಸಿದ್ದರು. ಆದರೆ ಬಳಿಕ ಮರುದಿನದಿಂದ ಆ ಕೊಠಡಿ ಲಾಕ್ ಆಗಿತ್ತು.

    ಸತತ ಮೂರು ದಿನಗಳ ಬಳಿಕ ಕೊಠಡಿ ಬಾಗಿಲು ತೆರೆಯದ ಕಾರಣ ಅನುಮಾನಗೊಂಡ ಹೋಟೆಲ್ ಸಿಬ್ಬಂದಿ ಕೊಠಡಿಯ ಬಾಗಿಲನ್ನು ತೆರೆದಿದ್ದಾರೆ. ಈ ವೇಳೆ ಯುವತಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ ಸಿಬ್ಬಂದಿ ಘಟನೆ ಬಗ್ಗೆ ತಿಳಿಸಿದ್ದಾರೆ.

    ಹೋಟೆಲ್ ಸಿಬ್ಬಂದಿ ಮಾಹಿತಿ ಪಡೆದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕೊಠಡಿಯಲ್ಲಿ ದೊರೆತ ಕೆಲ ದಾಖಲೆಗಳ ಆಧಾರದ ಮೇಲೆ ಇಬ್ಬರ ಮಾಹಿತಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಯುವತಿಯೊಂದಿಗೆ ಆಗಮಿಸಿದ್ದ ಸ್ನೇಹಿತ ವಿಪಿನ್ ದೂಬೆ ನಾಪತ್ತೆಯಾಗಿದ್ದು, ಆತನೇ ಕೊಲೆ ಮಾಡಿರುವ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಘಟನೆಯ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.

  • 12 ಹುಡ್ಗಿಯರು ರಿಜೆಕ್ಟ್ ಮಾಡಿದಕ್ಕೆ ಪಕ್ಕದ್ಮನೆ ಆಂಟಿಯನ್ನು ಕೊಂದೇಬಿಟ್ಟ!

    12 ಹುಡ್ಗಿಯರು ರಿಜೆಕ್ಟ್ ಮಾಡಿದಕ್ಕೆ ಪಕ್ಕದ್ಮನೆ ಆಂಟಿಯನ್ನು ಕೊಂದೇಬಿಟ್ಟ!

    ರಾಯ್‍ಪುರ್: 12 ಯುವತಿಯರು ಮದುವೆಯನ್ನು ರಿಜೆಕ್ಟ್ ಮಾಡಿದಕ್ಕೆ ಯುವಕನೊಬ್ಬ ಪಕ್ಕದ್ಮನೆ ಆಂಟಿಯನ್ನು ಕೊಂದ ಘಟನೆ ಛತ್ತೀಸ್‍ಗಢದ ರಾಯ್‍ಪುರ್ ನಲ್ಲಿ ನಡೆದಿದೆ.

    ಪಿಂಟು ಕೊಲೆ ಮಾಡಿದ ಆರೋಪಿ. ಪಿಂಟು ಮೂಲತಃ ಮೂರೇಠಿ ಗ್ರಾಮದವನಾಗಿದ್ದು, ಪಕ್ಕದ್ಮನೆ ಮಹಿಳೆ ವಾಮಾಚಾರ ಮಾಡಿಸಿದ್ದರಿಂದ ತನಗೆ ಮದುವೆಯಾಗಿಲ್ಲ ಎಂದು ಭಾವಿಸಿ ಆಕೆಯನ್ನು ಕೊಂದಿದ್ದಾನೆ.

    ಪಿಂಟು ಕುಟುಂಬದವರು ಇದೂವರೆಗೆ 12 ಮಂದಿ ಯುವತಿಯರ ಪೋಷಕರ ಜೊತೆ ಮದುವೆ ಮಾತುಕತೆ ನಡೆಸಿದ್ದಾರೆ. ಅದರಲ್ಲಿ ಕೆಲವು ಸಂಬಂಧಗಳಲ್ಲಿ ಆತನ ನಿಶ್ಚಿತಾರ್ಥ ಕೂಡ ಆಗಿತ್ತು. ನಂತರ ಅದು ಕೂಡ ಮುರಿದುಬೀಳುತ್ತಿತ್ತು. ಸಂಬಂಧ ಮುರಿದು ಬೀಳುವನ್ನು ನೋಡಿ ಪಿಂಟು ಹಾಗೂ ಆತನ ಕುಟುಂಬದ ಭಾರೀ ಚಿಂತೆಗೆ ಈಡಾಗಿತ್ತು.

    ಯಾಕೆ ಸಂಬಂಧ ಮುರಿದು ಬೀಳುತ್ತಿದೆ ಎಂದು ಪಿಂಟು ಆಲೋಚಿಸುತ್ತಿದ್ದಾಗ ಆತನಿಗೆ ಪಕ್ಕದ ಮನೆಯಲ್ಲಿ ವಾಸವಿರುವ ಮಹಿಳೆ ಅಮೆರಿಕ ಪಟೇಲ್ ಮೇಲೆ ಅನುಮಾನಗೊಂಡಿದ್ದಾನೆ. ಆಕೆ ವಾಮಾಚಾರ ಮಾಡಿಸಿದ್ದಕ್ಕೆ ನನಗೆ ಮದುವೆಯಾಗುತ್ತಿಲ್ಲ ಎಂದು ಭಾವಿಸಿ ಆಕೆಯ ವಿರುದ್ಧ ದ್ವೇಷ ಸಾಧಿಸಲು ಮುಂದಾಗಿದ್ದಾನೆ.

    ಏಪ್ರಿಲ್ 1 ರಂದು ಅಮೇರಿಕಾ ಪಟೇಲ್ ತನ್ನ ಮನೆಯಲ್ಲಿ ಒಬ್ಬಳೇ ಇದ್ದು, ಆಕೆಯ ತಾಯಿ ತರಕಾರಿ ತರಲು ಮಾರ್ಕೆಟ್‍ಗೆ ಹೋಗಿದ್ದರು. ಈ ವೇಳೆ ಏಕಾಏಕಿ ಪಿಂಟು ಅಮೆರಿಕ ಮನೆಗೆ ನುಗ್ಗಿ ಆಕೆಯ ಮೇಲೆ ಲಾಠಿ ಹಾಗೂ ಕೋಲಿನಿಂದ ಹಲ್ಲೆ ನಡೆಸಿದ್ದಾನೆ. ನಂತರ ದುಪ್ಪಟ್ಟಾದಿಂದ ಆಕೆ ಕುತ್ತಿಗೆಯನ್ನು ಬಿಗಿದ್ದು ಕೊಲೆ ಮಾಡಿದ್ದಾನೆ. ಕೊಲೆ ಮಾಡಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾಗ ಗ್ರಾಮಸ್ಥರು ಆತನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ಆರೋಪಿ ಪಿಂಟು ಎರಡನೇ ವರ್ಷದ ಬಿಎ ಓದುತ್ತಿದ್ದು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.

  • ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸಕ್ಕೆ 8 ಸಿಆರ್‌ಪಿಎಫ್‌ ಯೋಧರು ಹುತಾತ್ಮ

    ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸಕ್ಕೆ 8 ಸಿಆರ್‌ಪಿಎಫ್‌ ಯೋಧರು ಹುತಾತ್ಮ

    ರಾಯಪುರ: ಮಾವೋವಾದಿಗಳು ಮಂಗಳವಾರ ಸಿಆರ್‌ಪಿಎಫ್‌ ಯೋಧರ ಮೇಲೆ ನಡೆಸಿದ ದಾಳಿಯಲ್ಲಿ ಎಂಟು ಯೋಧರು ಮೃತಪಟ್ಟು, ಆರು ಯೋಧರು ಗಾಯಗೊಂಡಿರುವ ಘಟನೆ ಛತ್ತೀಸ್‍ಗಢದ ಸುಕ್ಮಾ ಪ್ರದೇಶದಲ್ಲಿ ನಡೆದಿದೆ.

    ಕಳೆದ ಕೆಲ ತಿಂಗಳಿಂದ ಸಿಆರ್‌ಪಿಎಫ್‌ ಯೋಧರು ನಡೆಯುತ್ತಿರುವ ನಕ್ಸಲ್ ವಿರುದ್ಧ ಕಾರ್ಯಾಚರಣೆಯನ್ನು ಗುರಿಯಾಗಿಸಿಕೊಂಡು ಸುಧಾರಿತ ತಂತ್ರಜ್ಞಾನದ ಸ್ಫೋಟಕ ಬಳಿಸಿ ದಾಳಿ ನಡೆಸಲಾಗಿದೆ. ದಾಳಿಯಲ್ಲಿ 8 ರಿಂದ 10 ಯೋಧರು ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಇದೆ. ಘಟನೆ ನಡೆದ ತಕ್ಷಣ ಹೆಚ್ಚಿನ ಪೊಲೀಸ್ ದಳವನ್ನು ಸ್ಥಳಕ್ಕೆ ರವಾನಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿರುವುದಾಗಿ ನಕ್ಸಲ್ ನಿಗ್ರಹ ದಳದ ಮಹಾನಿರ್ದೇಶಕ ಡಿಎಂ ಅವಸ್ಥಿ ತಿಳಿಸಿದ್ದಾರೆ.

    ನಕ್ಸಲರು ಅಧಿಕ ಪ್ರಮಾಣದ ಸ್ಫೋಟಕವನ್ನು ಬಳಕೆ ಮಾಡಿದ್ದು, ಘಟನೆಯಲ್ಲಿ ಗಾಯಗೊಂಡಿರುವ ಆರು ಯೋಧರ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ.

    ದಾಳಿ ಕುರಿತು ಪ್ಯಾರಾಮಿಲಿಟರಿ ಅಧಿಕಾರಿಗೊಬ್ಬರು ಮಾಹಿತಿ ನೀಡಿ, ರಾಯ್‍ಪುರದಿಂದ 500 ಕಿಮೀ ದೂರದ ಸಿಆರ್‌ಪಿಎಫ್‌ ನ 212 ಬೆಟಲಿಯನ್ ಮುಖ್ಯ ವಾಹನದ ಮೇಲೆ ದಾಳಿ ನಡೆಸಲಾಗಿದೆ. ಸುಕ್ಮಾ ಪ್ರದೇಶದ ಕಿಸ್ತಾರಮ್ ಅರಣ್ಯ ವಲಯದ ನಕ್ಸಲ್ ಪ್ರಾಬಲ್ಯದ ಪ್ರದೇಶದಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ವೇಳೆ ಕಾಮಗಾರಿ ಸುರಕ್ಷತೆ ದೃಷ್ಟಿಯಿಂದ ಯೋಧರನ್ನು ನೇಮಕ ಮಾಡಲಾಗಿತ್ತು. ಈ ವೇಳೆ ನಕ್ಸಲ್ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ.

    ಕಳೆದ 11 ದಿನಗಳ ಹಿಂದೆ ಯೋಧರು ನಕ್ಸಲರು ವಿರುದ್ಧ ಕಾರ್ಯಾಚರಣೆ ನಡೆಸಿ 11 ಮಂದಿಯನ್ನು ಹತ್ಯೆ ಮಾಡಿದ್ದರು. ಇದಾದ ಬಳಿಕ ಯೋಧರ ಮೇಲೆ ದಾಳಿ ನಡೆಸಲಾಗಿದೆ.

    ಕಳೆದ ಆರು ತಿಂಗಳಿನಿಂದ ಛತ್ತೀಸ್‍ಗಢದಲ್ಲಿ ಸುಮಾರು 25 ಕ್ಕೂ ಹೆಚ್ಚು ಸಿಆರ್ ಪಿಎಫ್ ಯೋಧರು ಮೃತಪಟ್ಟಿದ್ದಾರೆ. ಅದರೂ ಯೋಧರು ನಕ್ಸಲರ್ ವಿರುದ್ಧ ನಡೆಸಿದ ಕಾರ್ಯಾಚರಣೆಯಲ್ಲಿ ಯಶ್ವಸಿಯಾಗಿದ್ದು, ಸುಮಾರು 300 ಕ್ಕೂ ಹೆಚ್ಚು ನಕ್ಸಲರನ್ನು ಎನ್‍ಕೌಂಟರ್ ಮಾಡಲಾಗಿದೆ ಎಂದು ಗೃಹ ಸಚಿವರು ವಿಧಾನಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

    ಮಾವೋವಾದಿಗಳ ಹಿಡಿತದಲ್ಲಿರುವ ಛತ್ತೀಸ್‍ಗಢದ ಅಬುಜ್ಮಾದ್ ಅರಣ್ಯ ಪ್ರದೇಶದಲ್ಲಿ ಸಿಆರ್ ಪಿಎಫ್ ಪಡೆ ಮೂರು ಶಾಶ್ವತ ಕ್ಯಾಂಪ್ ಗಳನ್ನು ಈ ತಿಂಗಳ ಹಿಂದೆ ತೆರೆದಿದು, ಪ್ರತಿ ಕ್ಯಾಂಪ್ ನಲ್ಲಿ ಕನಿಷ್ಟ ನೂರು ಮಂದಿ ಸಿಬ್ಬಂದಿಗಳಿರುತ್ತಾರೆ ಎಂದು ಅಧಿಕಾರಿಗಳು ಈ ಹಿಂದೆ ಮಾಹಿತಿ ನೀಡಿದ್ದರು.

  • ತನ್ನ ನಾಲಿಗೆಯನ್ನು ಕತ್ತರಿಸಿ ಶಿವನಿಗೆ ಅರ್ಪಿಸಿದ ಭಕ್ತೆ!

    ತನ್ನ ನಾಲಿಗೆಯನ್ನು ಕತ್ತರಿಸಿ ಶಿವನಿಗೆ ಅರ್ಪಿಸಿದ ಭಕ್ತೆ!

    ರಾಯ್‍ಪುರ್: ಮಹಿಳೆಯೊಬ್ಬರು ತಮ್ಮ ನಾಲಿಗೆಯನ್ನೇ ಕತ್ತರಿಸಿ ಶಿವನಿಗೆ ಅರ್ಪಿಸಿರುವ ಆಘಾತಕಾರಿ ಘಟನೆ ಛತ್ತೀಸ್‍ಗಢದ ಕೊರ್ಬಾ ಜಿಲ್ಲೆಯಲ್ಲಿ ಬುಧವಾರ ನಡೆದಿದೆ.

    ಫರ್ತು ರಾಮ್ ಗೊಂಡ್ ಎಂಬುವರ ಪತ್ನಿ 28 ವರ್ಷದ ಸೀಮಾಭಾಯಿ ತನ್ನ ನಾಲಿಗೆಯನ್ನೇ ಕತ್ತರಿಸಿ ಶಿವನಿಗೆ ಅರ್ಪಿಸಿದ್ದಾರೆ. ಕೊರ್ಬಾ ಜಿಲ್ಲೆಯ ನುನೆರಾ ಗ್ರಾಮದಲ್ಲಿರುವ ಶಿವ ದೇವಾಲಯದಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ನಡೆದಿದೆ.

     

    ಸೀಮಾಭಾಯಿ ಶಿವರಾತ್ರಿ ಪ್ರಯುಕ್ತ ಬೆಳಿಗ್ಗೆ ಹತ್ತಿರದ ಶಿವ ದೇವಸ್ಥಾನಕ್ಕೆ ಹೋಗಿದ್ದಾರೆ. ನಂತರ ಪ್ರಾರ್ಥನೆ ಮುಗಿದ ಬಳಿಕ ಏಕಾಏಕಿ ಶಿವಲಿಂಗದ ಮುಂದೆ ಚಾಕುವಿನಿಂದ ತಮ್ಮ ನಾಲಿಗೆ ಕತ್ತರಿಸಿಕೊಂಡಿದ್ದಾರೆ. ಅಲ್ಲಿದ್ದ ಗ್ರಾಮಸ್ಥರು ತಕ್ಷಣವೇ ದೇವಸ್ಥಾನದಲ್ಲಿ ರಕ್ತಸ್ರಾವದಿಂದ ಬಿದ್ದಿದ್ದ ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.

    ಇದೀಗ ಮಹಿಳೆಯ ಆರೋಗ್ಯ ಸ್ಥಿತಿ ಸುಧಾರಿಸಿದ್ದು, ಕೊರ್ಬಾ ಜಿಲ್ಲೆಯ ಕೇಂದ್ರ ಕಚೇರಿಯಿಂದ 60 ಕಿ.ಮೀ. ದೂರದಲ್ಲಿದೆ. ಆದರೆ ಈ ಘಟನೆಯ ಹಿಂದಿನ ನಿಖರ ಕಾರಣ ತಿಳಿದುಬಂದಿಲ್ಲ ಎಂದು ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  • 11 ತಿಂಗ್ಳಲ್ಲಿ 5 ಕೊಲೆ, ಮಹಿಳಾ ಅಧಿಕಾರಿ ಹೆಣದ ಮೇಲೂ ರೇಪ್ ಮಾಡಿದ್ದ ಸೈಕೋ ಕಿಲ್ಲರ್!

    11 ತಿಂಗ್ಳಲ್ಲಿ 5 ಕೊಲೆ, ಮಹಿಳಾ ಅಧಿಕಾರಿ ಹೆಣದ ಮೇಲೂ ರೇಪ್ ಮಾಡಿದ್ದ ಸೈಕೋ ಕಿಲ್ಲರ್!

    ರಾಯ್‍ಪುರ್: ಕಳೆದ ಕೆಲ ದಿನಗಳ ಹಿಂದೆ ಛತ್ತೀಸ್‍ಗಢ್ ನ ರಾಯ್‍ಪುರ್ ಪೊಲೀಸರಿಂದ ಬಂಧನವಾಗಿದ್ದ ಜಿತೇಂದ್ರ ದೃವ(30) ಎಂಬ ಸೈಕೋ ಕಿಲ್ಲರ್ ಮಹಿಳಾ ಅಧಿಕಾರಿಯನ್ನು ಕೊಲೆ ಮಾಡಿ ಆಕೆಯ ಮೇಲು ರೇಪ್ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.

    2015 ಏಪ್ರಿಲ್ 27 ರಂದು ಭೋಪಾಲ್ ನ ಗ್ರಾಮೀಣ ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ಪಿಂಗಳ ರಾಜ್ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದ. ಆದರೆ ಈಕೆಯ ಕೊಲೆ ಪ್ರಕರಣದಲ್ಲಿ ರಾಜಕೀಯ ಒತ್ತಡಕ್ಕೆ ಮಣಿದ ಪೊಲೀಸರು ಪಿಂಗಳ ರಾಜ್ ಅವರ ಪ್ರಿಯಕರ ರಾಕೇಶ್ ಚಂದ್ರಶೇಖರ್ ಎಂಬಾತನನ್ನು ಬಂಧಿಸಿದ್ದರು. ಏಳು ತಿಂಗಳು ಜೈಲು ಶಿಕ್ಷೆ ಅನುಭವಿಸಿದ್ದ ಚಂದ್ರಶೇಖರ್ ಜಾಮೀನು ಪಡೆದು ಹೊರಬಂದಿದ್ದ.

    ಏನಿದು ಘಟನೆ: ಜಿತೇಂದ್ರ ದೃವ ಮೂಲತಃ ಭೋಪಾಲ್ ನಿವಾಸಿಯಾಗಿದ್ದು, ಆತನ ಸಂಬಂಧಿಗಳ ಜೊತೆ ಛತ್ತೀಸ್‍ಗಢ್ ದಲ್ಲಿ ಪ್ರತ್ಯೇಕವಾಗಿ ನೆಲೆಸಿದ್ದ. ಈತನಿಗೆ ಈಗಾಗಲೇ ಮದುವೆಯಾಗಿದ್ದು, ಒಂದು ತಿಂಗಳ ಹೆಣ್ಣು ಮಗುವಿನ ತಂದೆಯಾಗಿದ್ದಾನೆ.

    ಪಿಂಗಳ ರಾಜ್ ಕೊಲೆ ಪ್ರಕರಣದಲ್ಲಿ ಚಂದ್ರಶೇಖರ್ ಜಿತೇಂದ್ರನನ್ನು ವಿಚಾರಣೆ ನಡೆಸಲು ಪೊಲೀಸ್ ಅಧಿಕಾರಿಗೆ ಮನವಿ ಸಲ್ಲಿಸಿದ್ದರು. ನಂತರದಲ್ಲಿ ಪಿಂಗಳ ರಾಜ್ ಕೊಲೆ ಬಗ್ಗೆ ವಿಚಾರಣೆ ನಡೆಸಲಾಗಿತ್ತು. ಈ ವೇಳೆ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

    11 ತಿಂಗಳಲ್ಲಿ 5 ಕೊಲೆ: ಪಿಂಗಳ ರಾಜ್ ರನ್ನು ಕೊಲೆ ಮಾಡಿ ತಪ್ಪಿಸಿಕೊಂಡ ನಂತರ ಮತ್ತೆ ಐವರನ್ನು ಕೊಲೆ ಮಾಡಿದ್ದು, 2016 ರಲ್ಲಿ ಆಗಸ್ಟ್ ನಲ್ಲಿ 50 ವರ್ಷದ ರುಕ್ಮಿಣಿ ಎಂಬವರ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದ. ಇದನ್ನು ಕಂಡ ರುಕ್ಮಿಣಿ ಅವರ ಪುತ್ರಿ 20 ವರ್ಷದ ಪಾರ್ವತಿ ಯನ್ನು ಕೊಲೆ ಮಾಡಿ ಆಕೆಯ ದೇಹದ ಮೇಲೆ ಅತ್ಯಾಚಾರ ನಡೆಸಿದ್ದ.

    ನಂತರದಲ್ಲಿ ಜುಲೈ 12 ರಂದು ಮಹೇಂದ್ರ ಸಿಂಗ್, ಉಷಾ ದಂಪತಿ ಹಾಗೂ ಅವರ ಮಕ್ಕಳಾದ ಮಹೇಶ್ (11), ತ್ರಿಲೋಕ್(13) ಮೇಲೆ ಕೊಲೆ ಯತ್ನ ನಡೆಸಿದ್ದ. ಈ ಘಟನೆಯಲ್ಲಿ ತ್ರಿಲೋಕ್ ಒಂದು ಕಣ್ಣು ಕಳೆದುಕೊಂಡು ಅಚ್ಚರಿ ರೀತಿಯಲ್ಲಿ ಬದುಕಿ ಉಳಿದಿದ್ದ.

    ಸಿಕ್ಕಿಬಿದ್ದಿದ್ದು ಹೇಗೆ: ಸರಣಿ ಹತ್ಯೆ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಭೋಪಾಲ್ ಪ್ರದೇಶದ 3 ಲಕ್ಷ ಮೊಬೈಲ್ ಸಂಖ್ಯೆಗಳನ್ನು ಪರಿಶೀಲನೆ ನಡೆಸಿದ್ದರು. ಅಲ್ಲದೇ 20 ರಿಂದ 30 ವರ್ಷದ ವ್ಯಕ್ತಿಗಳ ಚಟುವಟಿಕೆಗಳನ್ನು ಗಮನಿಸಿದ್ದರು. ಈ ವೇಳೆ ಆರೋಪಿ ಇಬ್ಬರು ಕುಟುಂಬಗಳಿಗೂ ತಿಳಿದ ವ್ಯಕ್ತಿಯಾಗಿದ್ದರಿಂದ ಈತನ ಮೇಲೆ ಅನುಮಾನ ವ್ಯಕ್ತವಾಗಿ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಜಿತೇಂದ್ರ ದೃವ ಕೃತ್ಯಗಳು ಬೆಳಕಿಗೆ ಬಂದಿತ್ತು.

  • ಸಾರ್ವಜನಿಕ ಶೌಚಾಲಯದಲ್ಲಿ ಮದುವೆಯಾದ ಯುವಕ-ಯುವತಿ

    ಸಾರ್ವಜನಿಕ ಶೌಚಾಲಯದಲ್ಲಿ ಮದುವೆಯಾದ ಯುವಕ-ಯುವತಿ

    ರಾಯ್ಪುರ: ಯುವ ಜೋಡಿಯೊಂದು ಸಾರ್ವಜನಿಕ ಶೌಚಾಲಯದಲ್ಲಿ ಮದುವೆ ಆಗಿರುವ ಘಟನೆ ಛತ್ತೀಸ್‍ಘಢ ರಾಜ್ಯದ ಬಿಸಲಾಪುರದಲ್ಲಿ ನಡೆದಿದೆ. ಸಾರ್ವಜನಿಕ ಶೌಚಾಲಯದಲ್ಲಿ ಮದುವೆ ಆಗುವ ಮೂಲಕ ಪ್ರತಿಯೊಬ್ಬರು ತಮ್ಮ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಬೇಕು ಎಂಬ ಸಂದೇಶವನ್ನು ನವಜೋಡಿ ನೀಡಿದೆ.

    ಶಬಾ ನವಾಜ್ ಮತ್ತು ಸರಫರಾಜ್ ಸಾರ್ವಜನಿಕ ಶೌಚಾಲಯದಲ್ಲಿ ಮದುವೆಯಾದ ಜೋಡಿ. 2017 ಮಾರ್ಚ್ ನಲ್ಲಿ ಶಬಾ ಮತ್ತು ಸರಫರಾಜ್ ಮದುವೆ ನಿರ್ಣಯವಾಗಿತ್ತು. ಆದ್ರೆ ಶಬಾ ಪತಿ ಮನೆಯಲ್ಲಿ ಶೌಚಾಲಯ ಕಟ್ಟಿಸಿದ್ರೆ ಮಾತ್ರ ಮದುವೆ ಆಗುತ್ತೇನೆ ಎಂದು ಷರತ್ತು ವಿಧಿಸಿದ್ದರು.

    ಸರಫರಾಜ್ 2017 ಮೇ ನಲ್ಲಿ ಸರ್ಕಾರಕ್ಕೆ ಶೌಚಾಲಯ ನಿರ್ಮಾಣಕ್ಕಾಗಿ ಪಂಚಾಯತ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದ ಬಳಿಕ ಸರ್ಕಾರದ ಸಹಾಯ ಧನದಿಂದ ಸರಫರಾಜ್ ಜೂನ್‍ನಲ್ಲಿಯೇ ಶೌಚಾಲಯ ನಿರ್ಮಿಸಿದ್ದರು.

    ಸರಫರಾಜ್ ಬಾವಿ ಪತ್ನಿಗಾಗಿ ಶೌಚಾಲಯ ನಿರ್ಮಿಸಿದ ವಿಷಯ ಶಬಾ ಪೋಷಕರಿಗೆ ತಿಳಿದಿದೆ. ಎರಡು ಕುಟುಂಬಸ್ಥರ ಒಪ್ಪಿಗೆ ಮೇರೆಗೆ ಇಬ್ಬರೂ ಜನವರಿ 21 ರಂದು ಮದುವೆ ಆಗಿದ್ದಾರೆ. ಜನವರಿ 24ರಂದು ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ಶಬಾ ಮತ್ತು ಸರಫರಾಜ್ ಇಬ್ರೂ ಮತೊಮ್ಮೆ ನಗರದ ಸಾರ್ವಜನಿಕ ಶೌಚಾಲಯದಲ್ಲಿ ಮದುವೆ ಆಗಿದ್ದಾರೆ. ಪ್ರತಿ ಮನೆಯಲ್ಲಿ ಶೌಚಾಲಯವಿದ್ದರೆ ಯಾವುದೇ ರೋಗಗಳು ಬರುವುದಿಲ್ಲ. ಶೌಚಾಲಯ ನಿರ್ಮಾಣ ಮಾಡುವುದರಿಂದ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯದ ಪ್ರಕರಣಗಳು ಕಡಿಮೆ ಆಗಲಿವೆ ಎಂದು ನವದಂಪತಿ ಹೇಳಿದ್ದಾರೆ.

  • ವಿಧವೆ ಮೇಲೆ ಪ್ರಿಯಕರನಿಂದಲೇ ಅತ್ಯಾಚಾರ- ಕಿರುಚಾಟ ಕೇಳಿ ಬಂದ ಮೂವರಿಂದಲೂ ಗ್ಯಾಂಗ್‍ರೇಪ್

    ವಿಧವೆ ಮೇಲೆ ಪ್ರಿಯಕರನಿಂದಲೇ ಅತ್ಯಾಚಾರ- ಕಿರುಚಾಟ ಕೇಳಿ ಬಂದ ಮೂವರಿಂದಲೂ ಗ್ಯಾಂಗ್‍ರೇಪ್

    ರಾಯ್ಪುರ: 24 ವರ್ಷದ ವಿಧವೆಯ ಮೇಲೆ ಪ್ರಿಯಕರನೇ ಅತ್ಯಾಚಾರ ಮಾಡಿದ್ದು, ಕಿರುಚಾಟ ಕೇಳಿ ಬಂದ ಮೂವರು ಕೂಡ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‍ಗಢದ ರಾಯ್‍ಪುರ್ ಜಿಲ್ಲೆಯಲ್ಲಿ ನಡೆದಿದೆ.

    ನಾಲ್ವರು ಆರೋಪಿಗಳಾದ ಸುರೇಶ್ ಸಾಹು (24), ಹರೀಶ್ ಚಂದ್ರಕರ್ (25), ತ್ರಿನಾಥ್ ಮಹಾನಂದ್ (24) ಮತ್ತು ವಿನಯ್ ಯಾದವ್ (24) ನನ್ನು ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 23 ರಂದು ಕಾಪಾ ಪ್ರದೇಶದ ರೈಲ್ವೆ ಯಾರ್ಡ್ ಸಮೀಪ ವಿಧವೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

    ಪ್ರಾಥಮಿಕ ತನಿಖೆಯ ಪ್ರಕಾರ, ಸಂತ್ರಸ್ತ ಮಹಿಳೆ ಹೋಟೆಲ್‍ವೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಆರೋಪಿ ಸುರೇಶ್ ಸಾಹು ಜೊತೆ ಸಂಬಂಧವಿತ್ತು. ಆತ ಸಂತ್ರಸ್ತೆಯನ್ನು ಕಾಪಾ ಪ್ರದೇಶದ ನಿರ್ಜನ ಸ್ಥಳಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತೆಯ ಕಿರುಚಾಟ ಕೇಳಿ ಸ್ಥಳಕ್ಕೆ ಮೂವರು ವ್ಯಕ್ತಿಗಳು ಬಂದಿದ್ದಾರೆ. ಅವರು ಸಾಹುವನ್ನು ಬೆದರಿಸಿದ್ದು, ಆತ ಅಲ್ಲಿಂದ ಓಡಿಹೋಗಿದ್ದಾನೆ. ಬಳಿಕ ಮೂವರು ಸೇರಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ನಂತರ ಈ ವಿಚಾರವನ್ನು ಬಹಿರಂಗಪಡಿಸಿದರೆ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಂತ್ರಸ್ತೆಗೆ ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ.

    ಸಂತ್ರಸ್ತೆ ಸಮೀಪದ ಪಂಡ್ರಿ ಪೊಲೀಸ್ ಠಾಣೆಗೆ ಬಂದು ಭಾನುವಾರ ದೂರು ನೀಡಿದ್ದಾರೆ. ಮಂಗಳವಾರ ಆರೋಪಿಗಳನ್ನು ಬಂಧಿಸಿದ್ದು, ಐಪಿಸಿ ಸೆಕ್ಷನ್ 376ರ ಅಡಿ ಪ್ರಕರಣವನ್ನು ದಾಖಲಿಸಲಾಗಿದೆ. ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ.