Tag: Raipur

  • ನವ ಜೋಡಿಗೆ ಮದುವೆ ದಿನ ವೇದಿಕೆ ಮೇಲಿ ಕಾದಿತ್ತು ಬಿಗ್‍ಶಾಕ್- Video Viral

    ನವ ಜೋಡಿಗೆ ಮದುವೆ ದಿನ ವೇದಿಕೆ ಮೇಲಿ ಕಾದಿತ್ತು ಬಿಗ್‍ಶಾಕ್- Video Viral

    ರಾಯ್ಪುರ್: ಮದುವೆ ಕುರಿತಾಗಿ ವಿಭಿನ್ನವಾಗಿ ಕನಸುಕಂಡಿರುವ ಜೋಡಿಯೊಂದು ಮದುವೆ ದಿನವೇ ಅವಾಂತರ ಮಾಡಿಕೊಂಡಿದೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

    ಛತ್ತೀಸ್​ಘಡ್ ಜೋಡಿಯೊಂದು ಮದುವೆಯ ಸಂಭ್ರಮ ನೋಡುಗರಿಗೆ ಮತ್ತು ತಮಗೆ ರೋಮಾನಂಚನಕಾರಿ ಆಗಿರಬೇಕು ಎಂದು ಆಸೆಪಟ್ಟಿದ್ದರು. ಅದ್ದೂರಿಯಾಗಿ ವೇದಿಕೆ ಒಂದನ್ನು ಮಾಡಿದ್ದರು. ಈ ವೇಳೆ ಮದುವೆ ಕಾರ್ಯಕ್ರಮ ವೇದಿಕೆ ಮೇಲೆ ಮದುಮಕ್ಕಳು ಎಂಜಾಯ್ ಮಾಡುವಂತಹ ವ್ಯವಸ್ಥೆ ನಿರ್ಮಾಣ ಮಾಡಲಾಗಿತ್ತು. ಇದನ್ನೂ ಓದಿ: ಆಮ್ಲೆಟ್ ಸೀದು ಹೋಗಿದೆ ಎಂದಿದ್ದಕೆ ಬಿಸಿ ಬಾಣಲೆಯಿಂದ ಹೊಡೆದ ಹೋಟೆಲ್ ಮಾಲೀಕ

    ವೃತ್ತಾಕಾರದಲ್ಲಿ ಚಿಕ್ಕದಾದ ಮಂಟಪ ತಯಾರು ಮಾಡಿ, ಅವುಗಳಿಗೆ ದಾರ ಹಾಗೂ ವೈರ್‍ಗಳನ್ನು ಪೋಣಿಸಿ ಝಗಮಗಿಸುವ ತೂಗು ಮಂಟಪ ನಿರ್ಮಾಣಗೊಂಡಿತ್ತು. ಅಂತೆಯೇ ಪಟಾಕಿ ಸಿಡಿಯುತ್ತಿರುವ ಈ ಮಂಟಪದಿಂದ ನವವಧು,ವರರರು ಜೋಡಿ ಹಕ್ಕಿಗಳಂತೆ ದಾರದ ಸಹಾಯದಿಂದ ಮೇಲೆ ಹೋಗುತ್ತಾರೆ . ಈ ವೇಳೆ ಆಕ್ಸ್ಮಿಕವಾಗಿ ಅದು ತುಂಡಾಗಿದೆ. ಈ ಪರಿಣಾಮ ಇಬ್ಬರು ನೆಲಕ್ಕೆ ಬೀಳುತ್ತಾರೆ. ವಧು, ವರರಿಗೆ ಸಣ್ಣ ಪುಣ್ಣ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಇದನ್ನೂ ಓದಿ: ವಿಶ್ವದಲ್ಲಿ ಓಮ್ರಿಕಾನ್ ರಣಕೇಕೆ – ಬ್ರಿಟನ್‍ನಲ್ಲಿ ಓಮಿಕ್ರಾನ್‍ಗೆ ಮೊದಲ ಬಲಿ

  • ಭಯೋತ್ಪಾದಕರಿಗೆ ಹಣ ವರ್ಗವಣೆ – ಮಂಗ್ಳೂರಿನ ದಂಪತಿಗೆ 10 ವರ್ಷ ಕಠಿಣ ಶಿಕ್ಷೆ

    ಭಯೋತ್ಪಾದಕರಿಗೆ ಹಣ ವರ್ಗವಣೆ – ಮಂಗ್ಳೂರಿನ ದಂಪತಿಗೆ 10 ವರ್ಷ ಕಠಿಣ ಶಿಕ್ಷೆ

    ರಾಯಪುರ: ಭಯೋತ್ಪಾದಕ ಚಟುವಟಿಕೆಗೆ ಹಣ ವರ್ಗವಣೆ ಮಾಡಿದ ಆರೋಪದ ಮೇಲೆ ಮಂಗಳೂರು ಮೂಲದ ದಂಪತಿಗೆ ಛತ್ತೀಸ್‌ಗಢ ರಾಯಪುರದ ನ್ಯಾಯಾಲಯ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಯನ್ನು ವಿಧಿಸಿದೆ.

    POLICE JEEP

    ಮಂಗಳೂರು ಮೂಲದ ಜುಬೇರ್ ಹುಸೇನ್(42), ಆತನ ಪತ್ನಿ ಆಯೇಷಾ ಬಾನೋ(39) ಮತ್ತು ಧೀರಜ್ ಸಾವೋ(21), ಪಪ್ಪು ಮಂಡಲ್ ಮೇಲಿನ ಆರೋಪ ಸಾಬೀತಾಗಿದೆ.

    ಉಗ್ರನಿಗ್ರಹ ಕಾಯ್ದೆಯಾಗಿರುವ ಆಕ್ರಮ ಚಟುವಟಿಕೆ(ತಡೆ) ಕಾಯ್ದೆಯ ವಿವಿಧ ಸೆಕ್ಷನ್‍ಗಳಡಿ ಭಯೋತ್ಪಾದಕ ಚಟುವಟಿಕೆಗೆ ಹಣ ವರ್ಗವಣೆ ಮಾಡಿದ ಆರೋಪದ ಮೇಲೆ ಈ ನಾಲ್ವರಿಗೆ ನ್ಯಾಯಧೀಶ ಅಜಯ್ ಸಿಂಗ್ ರಜಪೂತ್ 10 ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ. ಇದನ್ನೂ ಓದಿ: ಕುಮಾರಸ್ವಾಮಿಗೆ ಬಲಿ ಕೊಡೋದಕ್ಕೆ ಅಲ್ಪಸಂಖ್ಯಾತರೇ ಸಿಗೋದಾ: ಜಮೀರ್‌ ಪ್ರಶ್ನೆ

    ಏನಿದು ಪ್ರಕರಣ?
    ಭಯೋತ್ಪಾದಕ ಸಂಘಟನೆಗಳ ಜೊತೆ ಸಂಬಂಧ ಹೊಂದಿದ ಆರೋಪದ ಮೇಲೆ 2013ರಲ್ಲಿ ಧೀರಜ್ ಸಾವೋನನ್ನು ಬಂಧಿಸಲಾಗಿತ್ತು. ಬೀದಿ ಬದಿಯಲ್ಲಿ ಹೋಟೆಲ್ ಮಾಡುತ್ತಿದ್ದ ಈತ ಇಂಡಿಯನ್ ಮುಜಾಹಿದೀನ್, ಸಿಮಿ ಸಂಘಟನೆ ಜೊತೆ ಸಂಬಂಧ ಹೊಂದಿದವರಿಗೆ ಪಾಕಿಸ್ತಾನದ ಖಾಲಿದ್ ಎಂಬವನಿಂದ ಹಣ ಪಡೆದು ಉಗ್ರರ ಖಾತೆಗೆ ರವಾನಿಸುತ್ತಿದ್ದನು. ಜುಬೇರ್ ಹುಸೇನ್ ಮತ್ತು ಆಯೇಷಾ ಬಾನೋ ಬ್ಯಾಂಕ್ ಖಾತೆಗೂ ಸಹ ಈತ ಹಣವನ್ನು ಜಮೆ ಮಾಡುತ್ತಿದ್ದನು.

    ಯಾರಿದು ಆಯೇಷಾ?
    ಈಕೆ ನಿಷೇಧಿತ ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್ ಉಗ್ರರ ಜೊತೆ ನಂಟನ್ನು ಹೊಂದಿದ್ದಳು. ಅದು ಅಲ್ಲದೇ ಈಕೆ ಬಿಹಾರದ ಸುಮಾರು 50 ಬ್ಯಾಂಕ್ ಖಾತೆಯ ನೆಟ್ ಬ್ಯಾಂಕಿಂಗ್ ಅನ್ನು ಹೊಂದಿದ್ದಳು. ಈ ಮೂಲಕ ಉಗ್ರರಿಗೆ ಹಣವನ್ನು ಜಮೆ ಮಾಡುತ್ತಿದ್ದಳು. ಯಾರಿಗೂ ಸಂದೇಹ ಬರದಂತೆ ಆದಾಯ ತೆರಿಗೆ ಇಲಾಖೆಯ ಕಣ್ಣನ್ನು ತಪ್ಪಿಸಲು 49 ಸಾವಿರಕ್ಕಿಂತ ಕಡಿಮೆ ಹಣವನ್ನು ವರ್ಗವಣೆ ಮಾಡುತ್ತಿದ್ದಳು. ಭಯೋತ್ಪಾದನೆ ಪ್ರಕರಣದಲ್ಲಿ ನಾಲ್ಪರು ಬಂಧಕ್ಕೊಳಗಾದ ಬಳಿಕ 2013ರಲ್ಲಿ ಈಕೆಯನ್ನು ಬಿಹಾರದ ಪೊಲೀಸರು ಮಂಗಳೂರಿನಲ್ಲಿ ಬಂಧಿಸಿದ್ದರು.

  • ಆಸ್ಪತ್ರೆಯಲ್ಲಿ ಬೆಂಕಿ ಅವಘಢ, ಐವರ ಸಾವು – 4 ಲಕ್ಷ ಪರಿಹಾರ ಘೋಷಿಸಿದ ಸಿಎಂ

    ಆಸ್ಪತ್ರೆಯಲ್ಲಿ ಬೆಂಕಿ ಅವಘಢ, ಐವರ ಸಾವು – 4 ಲಕ್ಷ ಪರಿಹಾರ ಘೋಷಿಸಿದ ಸಿಎಂ

    – ಐವರು ಕೋವಿಡ್ ರೋಗಿಗಳ ಮರಣ

    ರಾಯಪುರ: ಆಸ್ಪತ್ರೆಯೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಐವರು ಕೋವಿಡ್ ರೋಗಿಗಳು ಮೃತಟ್ಟಿರುವ ಘಟನೆ ಶನಿವಾರ ಛತ್ತೀಸ್‍ಗಢದ ರಾಯಪುರದಲ್ಲಿ ನಡೆದಿದೆ. ಸದ್ಯ ಘಟನೆ ವೇಳೆ ಮೃತಪಟ್ಟ ಕುಟುಂಬಸ್ಥರಿಗೆ ಛತ್ತೀಸ್‍ಗಢದ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ 4 ಲಕ್ಷ ರೂ. ಹಣವನ್ನು ಪರಿಹಾರ ಘೋಷಿಸಿದ್ದಾರೆ.

    ರಾಜಧಾನಿ ರಾಯಪುರದ ಆಸ್ಪತ್ರೆಯಲ್ಲಿ ನಿನ್ನೆ ಸಂಜೆ 5 ಗಂಟೆಗೆ ಮೊದಲನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಆಸ್ಪತ್ರೆಯಲ್ಲಿ 34 ಮಂದಿ ರೋಗಿಗಳು ದಾಖಲಾಗಿದ್ದರು ಹಾಗೂ 9 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

    ಘಟನೆ ವೇಳೆ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ಆದರೆ ಬೆಂಕಿ ಅವಘಡದಿಂದ 5 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಬೆಂಕಿ ನಂದಿಸಲು ಸುಮಾರು 2 ಗಂಟೆಗಳ ಸಮಯ ಬೇಕಾಯಿತು. ಇದೀಗ ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತರ್ಕೆಶ್ವರ್ ಪಟೇಲ್ ತಿಳಿಸಿದ್ದಾರೆ.

    ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ರಾಯ್ಪುರದ ಆಸ್ಪತ್ರೆಯ ಐಸಿಯುವಿನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಬಹಳ ದುಃಖಕರವಾಗ ಸಂಗತಿ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ದುಃಖಿತ ಕುಟುಂಬಗಳಿಗೆ ಎಲ್ಲಾ ರೀತಿಯ ನೆರೆವು ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು.

  • ಮತ್ತೆ ಬಂತು ಲಾಕ್‍ಡೌನ್- ಛತ್ತೀಸ್​ಗಢದ ರಾಯ್ಪುರ ಏಪ್ರಿಲ್ 9 ರಿಂದ 19ರವರೆಗೆ ಸ್ತಬ್ಧ

    ಮತ್ತೆ ಬಂತು ಲಾಕ್‍ಡೌನ್- ಛತ್ತೀಸ್​ಗಢದ ರಾಯ್ಪುರ ಏಪ್ರಿಲ್ 9 ರಿಂದ 19ರವರೆಗೆ ಸ್ತಬ್ಧ

    ರಾಯ್ಪುರ: ಮಾಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರಗಳು ಕಠಿಣ ನಿಯಮಗಳನ್ನು ಜಾರಿತೆ ತರುತ್ತಿವೆ. ಇದೀಗ ಮಹಾರಾಷ್ಟ್ರ ಬಳಿಕ ಛತ್ತೀಸ್​ಗಢ ಲಾಕ್‍ಡೌನ್ ಅಸ್ತ್ರ ಬಳಕೆಗೆ ಮುಂದಾಗಿದೆ. ರಾಯ್ಪುರ ನಗರ ಏಪ್ರಿಲ್ 9 ರಿಂದ 19ರವರೆಗೆ ಲಾಕ್‍ಡೌನ್ ಆಗಲಿದೆ.

    ಮಂಗಳವಾರ ರಾಜ್ಯದಲ್ಲಿ 9,921 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 53 ಜನರು ಸಾವನ್ನಪ್ಪಿದ್ದಾರೆ. ಇದುವರೆಗೂ ಛತ್ತೀಸ್​ಗಢನಲ್ಲಿ 3,86,269 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 4,416 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸದ್ಯ ರಾಜ್ಯದಲ್ಲಿ 52,445 ಜನರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

    ಛತ್ತೀಸ್​ಗಢ ರಾಜ್ಯದ ದುರ್ಗನಲ್ಲಿ ಸಂಪೂರ್ಣ ಲಾಕ್‍ಡೌನ್ ಘೋಷಣೆ ಮಾಡಲಾಗಿದೆ. ದುರ್ಗ ಜಿಲ್ಲೆಯಲ್ಲಿ ಲಾಕ್‍ಡೌನ್ ಜಾರಿಯಾಗಿದ್ದು, ಏಪ್ರಿಲ್ 14ರವರೆಗೆ ಇರಲಿದೆ. ಜನತೆ ಕಡ್ಡಾಯವಾಗಿ ಕೊರೊನಾ ನಿಯಮಗಳು ಪಾಲಿಸಬೇಕು. ಏಪ್ರಿಲ್ 14ರ ಬಳಿಕವೂ ಪರಿಸ್ಥಿತಿ ನಿಯಂತ್ರಣ ಬರದಿದ್ದರೆ ಲಾಕ್‍ಡೌನ್ ಮುಂದುವರಿಯುವ ಸಾಧ್ಯತೆಗಳಿವೆ ಎಂದು ದುರ್ಗದ ಜಿಲ್ಲಾಧಿಕಾರಿಗಳು ಜನತೆ ಎಚ್ಚರಿಕೆ ನೀಡಿದ್ದಾರೆ.

    ಈ ನಡುವೆ ಮಧ್ಯಪ್ರದೇಶ ಸರ್ಕಾರ ಛತ್ತೀಸ್​ಗಢದಿಂದ ಬರುವ ಜನರ ಮೇಲೆ ನಿರ್ಬಂಧ ಹೇರಿದ್ದು, ಗಡಿ ಭಾಗಗಳಲ್ಲಿ ಸಿಬ್ಬಂದಿಯನ್ನ ನೇಮಿಸಿದೆ. ಈ ನಿರ್ಬಂಧ ಏಪ್ರಿಲ್ 15ರವರೆಗೆ ಇರಲಿದೆ. ಇದಕ್ಕೂ ಮುನ್ನ ಮಹಾರಾಷ್ಟ್ರದಿಂದ ಆಗಮಿಸುವ ಜನರ ಮೇಲೆ ಮಧ್ಯ ಪ್ರದೇಶ ಸರ್ಕಾರ ನಿರ್ಬಂಧ ವಿಧಿಸಿದೆ. ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ಎಲ್ಲ ಮಾರ್ಗಗಳನ್ನು ಮಧ್ಯ ಪ್ರದೇಶ ಸರ್ಕಾರ ಬಂದ್ ಮಾಡಿಕೊಂಡಿದೆ.

  • ಕಬ್ಬಡ್ಡಿ ಆಡುತ್ತಲೇ ಪ್ರಾಣ ಬಿಟ್ಟ ಯುವಕ

    ಕಬ್ಬಡ್ಡಿ ಆಡುತ್ತಲೇ ಪ್ರಾಣ ಬಿಟ್ಟ ಯುವಕ

    ರಾಯ್ಪುರ: ಕಬ್ಬಡ್ಡಿ ಆಟವನ್ನು ಆಡುತ್ತಲೇ ಯುವಕನೋರ್ವ ಪ್ರಾಣ ಕಳೆದುಕೊಂಡಿರುವ ಘಟನೆ ಛತ್ತೀಸ್‍ಗಢ ಧಾಮ್‍ತಾರಿ ಜಿಲ್ಲೆಯ ಗೋಜಿಯಲ್ಲಿ ನಡೆದಿದೆ.

    ಮೃತ ಯುವಕನನ್ನು ನರೇಂದ್ರ ಸಾಹು (20) ಎಂದು ಗುರುತಿಸಲಾಗಿದೆ. ಈತ ಕೋಕಾಡಿ ಗ್ರಾಮದವನಾಗಿದ್ದು, ಕಬ್ಬಡ್ಡಿ ಆಟವಾಡುತ್ತಲೇ ಸಾವನ್ನಪ್ಪಿದ್ದಾನೆ. ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ಜನವರಿ 20ರ ರಾತ್ರಿ ಕಬ್ಬಡ್ಡಿ ಪಂದ್ಯವೊಂದು ನಡೆಯುತ್ತಿತ್ತು. ಈ ವೇಳೆ ರೈಡರ್ ಆಗಿ ಎದುರಾಳಿ ಕೋರ್ಟ್‍ಗೆ ನರೇಂದ್ರ ಸಾಹು ಆಟವಾಡುತ್ತಿದ್ದನು. ಇದೇ ವೇಳೆ ಅವನನ್ನು ಟ್ಯಾಕಲ್ ಮಾಡಲಾಗಿತ್ತು. ಆಗ ನರೇಂದ್ರ ಮುಗ್ಗರಿಸಿ ಬಿದ್ದಿದ್ದಾನೆ. ಈ ವೇಳೆ ಎದುರಾಳಿ ತಂಡದ ಆಟಗಾರರು ಆತನ ಮೇಲೆರಗಿದ್ದು, ನರೇಂದ್ರ ಪ್ರಜ್ಞೆಯನ್ನು ಕಳೆದುಕೊಂಡಿದ್ದಾನೆ.

    ಪ್ರಜ್ಞಾಹೀನನಾಗಿ ಬಿದ್ದಿದ್ದ ನರೇಂದ್ರನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವಕ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಮೃತ ಯುವಕನ ಮರಣೋತ್ತರ ಪರೀಕ್ಷೆಯಿಂದ ಸಾವಿಗೆ ನಿಖರವಾದ ಕಾರಣ ತಿಳಿದು ಬರಬೇಕಿದೆ.

  • ಎಫ್‍ಬಿ ದೋಸ್ತಿ, ವಾಟ್ಸಪ್ ಚಾಟಿಂಗ್- 40ರ ಮಹಿಳೆ ಮೇಲೆ 30ರ ವ್ಯಕ್ತಿಯಿಂದ ರೇಪ್

    ಎಫ್‍ಬಿ ದೋಸ್ತಿ, ವಾಟ್ಸಪ್ ಚಾಟಿಂಗ್- 40ರ ಮಹಿಳೆ ಮೇಲೆ 30ರ ವ್ಯಕ್ತಿಯಿಂದ ರೇಪ್

    – ಮೊಬೈಲ್ ಕರೆಯಿಂದಾಗಿ ಬಯಲಾಯ್ತು ಗೆಳೆಯನ ನೀಚತನ
    – ಮದ್ವೆಯಾಗೋದಾಗಿ ಹೇಳಿ 2.5 ಲಕ್ಷ ರೂ. ಲಪಟಾಯಿಸಿದ

    ರಾಯ್ಪುರ: ಮದುವೆ ಆಗೋದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದ ಪ್ರಿಯಕರನನ್ನ ಪೊಲೀಸರು ಬಂಧಿಸಿದ್ದಾರೆ.

    ಬನಾರಸ ಮೂಲದ 30 ವರ್ಷದ ಸತ್ಯೇಂದ್ರ ಗಿರಿ ಬಂಧಿತ ಮೋಸಗಾರ. 2019ರಲ್ಲಿ 40 ವರ್ಷದ ದಿವ್ಯಾಂಗ ಮಹಿಳೆಗೆ ಸತ್ಯೇಂದ್ರನ ಪರಿಚಯವಾಗಿತ್ತು. ಎಫ್‍ಬಿ ಪರಿಚಯವಾದ ಇಬ್ಬರು ತಮ್ಮ ತಮ್ಮ ಮೊಬೈಲ್ ನಂಬರ್ ಬದಲಿಸಿಕೊಂಡಿದ್ದರು. ಮಹಿಳೆ ಸರ್ಕಾರಿ ಉದ್ಯೋಗಿ ಎಂದು ತಿಳಿಯುತ್ತೆಲೇ ತನ್ನ ನಯವಾದ ಮಾತುಗಳಿಂದ ಮಹಿಳೆಯನ್ನ ಪ್ರೇಮದ ಬಲೆಯಲ್ಲಿ ಬೀಳಿಸಿಕೊಂಡಿದ್ದನು. ಮಹಿಳೆ ತಾನು ಅಂಗವಿಕಲೆ ಅಂತ ಹೇಳಿದ್ರೂ ಮದುವೆಯಾಗೋದಾಗಿ ಸತ್ಯೇಂದ್ರ ನಂಬಿಸಿದ್ದನು.

    ಸೆಪ್ಟೆಂಬರ್ 2019ರಂದು ರಾಯ್ಪುರಕ್ಕೆ ಬಂದ ಸತ್ಯೇಂದ್ರ ಉಳಿದುಕೊಳ್ಳಲು ಸ್ಥಳವಿಲ್ಲ ಎಂದು ಹೇಳಿ ಮಹಿಳೆಯ ಮನೆಯಲ್ಲಿ ಠಿಕಾಣಿ ಹೂಡಿದ್ದನು. ಮಹಿಳೆಯ ಅಂಗವೈಕಲ್ಯವನ್ನ ದುರುಪಯೋಗಿಸಿಕೊಂಡ ಸತ್ಯೇಂದ್ರ ಅತ್ಯಾಚಾರ ಎಸಗಿದ್ದಾನೆ. ಮಹಿಳೆ ದೂರು ದಾಖಲಿಸಲು ಮುಂದಾಗ್ತಿದ್ದಂತೆ ಮದುವೆ ಆಗೋದಾಗಿ ಮಾತು ನೀಡಿದ್ದನು. ಅಂದಿನಿಂದ ಇಬ್ರು ಮದುವೆ ಆಗದೇ ಜೊತೆಯಾಗಿರಲು ಆರಂಭಿಸಿದ್ದರು.

    ಒಂದು ಮಗುವಿನ ತಂದೆ: ಕೆಲಸಕ್ಕಾಗಿ ಅಂತ ಸುಳ್ಳು ನೆಪಗಳನ್ನ ಹೇಳಿ ಸತ್ಯೇಂದ್ರ ಮಹಿಳೆಯಿಂದ ಸುಮಾರು ಎರಡೂವರೆ ಲಕ್ಷಕ್ಕೂ ಅಧಿಕ ಹಣ ಪಡೆದುಕೊಂಡಿದ್ದನು. ಕೆಲ ದಿನಗಳ ಹಿಂದೆ ಸತ್ಯೇಂದ್ರ ಸ್ನಾನಕ್ಕೆ ತೆರಳಿದ್ದಾಗ ಆತನ ಮೊಬೈಲ್ ಗೆ ಕರೆ ಬಂದಿದೆ. ಕರೆ ಸ್ವೀಕರಿಸಿದಾಗ ಮಾತನಾಡಿದ ಮಹಿಳೆ ತನ್ನ ಹೆಸರು ಸಾಲೇಹಾ, ತಾನು ಸತ್ಯೇಂದ್ರ ಪತ್ನಿ, ತಮಗೆ ಒಂದು ವರ್ಷದ ಮಗಳಿದ್ದಾಳೆ ಎಂದು ಹೇಳಿದ್ದಾಳೆ.

    ಪ್ರಿಯಕರ ಸತ್ಯೇಂದ್ರ ಮದುವೆ ವಿಷಯ ತಿಳಿಯುತ್ತಿದ್ದಂತೆ ಮಹಿಳೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

     

  • ಮನೆಯಲ್ಲಿ ಒಂದೇ ಕುಟುಂಬದ ಐವರ ಶವ ಪತ್ತೆ – ಆತ್ಮಹತ್ಯೆಯೋ? ಕೊಲೆಯೋ?

    ಮನೆಯಲ್ಲಿ ಒಂದೇ ಕುಟುಂಬದ ಐವರ ಶವ ಪತ್ತೆ – ಆತ್ಮಹತ್ಯೆಯೋ? ಕೊಲೆಯೋ?

    – ಓರ್ವ ಪುರುಷ, ಇಬ್ಬರು ಮಹಿಳೆಯರು, ಎರಡು ಕಂದಮ್ಮಗಳು

    – ಗ್ರಾಮದಲ್ಲಿ ಆತಂಕ

    ರಾಯ್ಪುರ: ಛತ್ತೀಸಗಢ ರಾಜ್ಯದ ರಾಜಧಾನಿ ರಾಯ್ಪುರ ಅನತಿ ದೂರದಲ್ಲಿರುವ ಕೇಂದ್ರಿ ಗ್ರಾಮದಲ್ಲಿ ಒಂದೇ ಕುಟುಂಬ ಐವರ ಶವಗಳು ಪತ್ತೆಯಾಗಿದ್ದು, ಕೊಲೆಯೊ? ಆತ್ಮಹತ್ಯೆಯೋ ಎಂದು ತಿಳಿದು ಬಂದಿಲ್ಲ.

    ಕಮಲೇಶ್ ಸಾಹು ಕುಟುಂಬಸ್ಥರ ಶವ ಮನೆಯಲ್ಲಿ ಸಿಕ್ಕಿದ್ದು, ಗ್ರಾಮದ ಜನ ಆತಂಕಕ್ಕೆ ಒಳಗಾಗಿದ್ದಾರೆ. ಮೇಲ್ನೋಟಕ್ಕೆ ಆತ್ಮಹತ್ಯೆ ರೀತಿಯಲ್ಲಿ ಪ್ರಕರಣ ಬಿಂಬಿತವಾಗಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದ್ದು, ಗ್ರಾಮಸ್ಥರು ಮತ್ತು ಸಂಬಂಧಿಕರಿಂದ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ವೀಡಿಯೋ ಮಾಡಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ– ಚಲಿಸುತ್ತಿರುವ ರೈಲಿನ ಮುಂದೆ ಹಾರಿದ್ರು

    ಕಮಲೇಶ್ ಸಾಹು ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ರೆ, ಇನ್ನುಳಿದ ನಾಲ್ಕು ಶವಗಳು ಹಾಸಿಗೆ ಮೇಲಿದ್ದವು ಎಂದು ವರದಿಯಾಗಿದೆ. ಕಮಲೇಶ್ ಕುಟುಂಬ ಸಾವಿನಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಗ್ರಾಮಸ್ಥರು ಒಂದು ರೀತಿ ಭಯಭೀತರಾಗಿದ್ದಾರೆ. ಇದನ್ನೂ ಓದಿ: ಮೂವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ತಂದೆ

    ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ಗೃಹ ಮಂತ್ರಿ ತಾಮ್ರಧ್ವಜ್ ಸಾಹೂ ಪ್ರಕರಣದ ತನಿಖೆಗೆ ಆದೇಶಿಸಿದ್ದಾರೆ. ಗ್ರಾಮಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಶವಗಳನ್ನ ಆಸ್ಪತ್ರೆಗೆ ರವಾನಿಸಿದ್ದಾರೆ. ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಹಿನ್ನೆಲೆ ಗ್ರಾಮದಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅತ್ತೆ, ಮಾವ, ಪತ್ನಿ, ಪ್ರಿಯಕರನೇ ಕಾರಣ – ಸೆಲ್ಫಿ ವೀಡಿಯೋ ಮಾಡಿ ವಿವಾಹಿತ ಆತ್ಮಹತ್ಯೆ

    ಐವರ ಸಾವು ಹೇಗಾಯ್ತು ಎಂಬುವುದು ಇಲ್ಲಿಯವರೆಗೂ ಸ್ಪಷ್ಟವಾಗಿಲ್ಲ. ಮೇಲ್ನೋಟಕ್ಕೆ ಸಾಮೂಹಿಕ ಆತ್ಮಹತ್ಯೆ ಎಂದು ಶಂಕೆ ವ್ಯಕ್ತವಾಗಿದ್ದು, ಮನೆಯಲ್ಲಿ ಯಾವುದೇ ಡೆತ್ ನೋಟ್ ಲಭ್ಯವಾಗಿಲ್ಲ. ಈ ಸಂದರ್ಭದಲ್ಲಿ ಏನನ್ನೂ ಊಹಿಸಲು ಸಾಧ್ಯವಾಗುತ್ತಿಲ್ಲ. ಪ್ರಕರಣವನ್ನು ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುತ್ತಿದ್ದು, ಮೃತ ಕುಟುಂಬದ ಹಿನ್ನೆಲೆ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುತ್ತಿದೆ. ಮರಣೋತ್ತರ ಶವ ಪರೀಕ್ಷೆಯಲ್ಲಿ ಸಾವು ಹೇಗಾಯ್ತು ಎಂಬುದರ ಬಗ್ಗೆ ತಿಳಿಯಲಿದೆ ಎಂದು ಎಎಸ್‍ಪಿ ತಾಲೇಶ್ವರ ಹೇಳಿದ್ದಾರೆ. ಇದನ್ನೂ ಓದಿ: ನನ್ನದೇನೂ ತಪ್ಪಿರ್ಲಿಲ್ಲ, ಆದ್ರೂ ಬ್ರೇಕಪ್ ಮಾಡ್ಕೊಂಡ್ಳು- ಡೆತ್‍ನೋಟ್ ಬರೆದು ಆತ್ಮಹತ್ಯೆ

  • ಪ್ರೇಮಿಗಳಿಗೆ ವಿಷ ನೀಡಿ ಕೊಲೆಗೈದು ಬಳಿಕ ಸುಟ್ಟು ಹಾಕಿದ ಕುಟುಂಬಸ್ಥರು!

    ಪ್ರೇಮಿಗಳಿಗೆ ವಿಷ ನೀಡಿ ಕೊಲೆಗೈದು ಬಳಿಕ ಸುಟ್ಟು ಹಾಕಿದ ಕುಟುಂಬಸ್ಥರು!

    – ಕಳೆದ ತಿಂಗ್ಳು ಪರಾರಿಯಾಗಿದ್ರು
    – ಪೋಷಕರು ಜೊತೆ ಪೊಲೀಸರು ಕಳಿಸಿದ್ದೆ ತಪ್ಪಾಯ್ತು

    ರಾಯ್ಪುರ: ಪ್ರೇಮಿಗಳಿಬ್ಬರನ್ನು ಕುಟುಂಬಸ್ಥರೇ ವಿಷ ಕೊಟ್ಟು ಕೊಲೆ ಮಾಡಿರುವ ಘಟನೆ ಚತ್ತೀಸ್‍ಗಢದ ದುರ್ಗ್ ಜಿಲ್ಲೆಯಲ್ಲಿ ನಡೆದಿದೆ. ಇದು ಮರ್ಯಾದಾ ಹತ್ಯೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಮೃತ ಪ್ರೇಮಿಗಳನ್ನು ಶ್ರೀಹರಿ (21) ಮತ್ತು ಈತನ ಸಂಬಂಧಿಯಾದ ಐಶ್ವರ್ಯಾ (20) ಎಂದು ಗುರುತಿಸಲಾಗಿದೆ. ಇವರಿಬ್ಬರು ಕೃಷ್ಣನಗರದವರಾಗಿದ್ದು, ಈ ಘಟನೆ ಶನಿವಾರ ನಡೆದಿದೆ. ಈಗಾಗಲೇ ಆರೋಪಿಗಳಾದ ಶ್ರೀಹರಿಯ ಚಿಕ್ಕಪ್ಪ ರಾಮು ಮತ್ತು ಐಶ್ವರ್ಯಾಳ ಸಹೋದರ ಚರಣ್ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ಯಾದವ್ ತಿಳಿಸಿದ್ದಾರೆ.

    ಏನಿದು ಪ್ರಕರಣ?
    ಕಳೆದ ತಿಂಗಳು ಶ್ರೀಹರಿ ಮತ್ತು ಐಶ್ವರ್ಯಾ ಇಬ್ಬರು ತಮ್ಮ ಮನೆಗಳಿಂದ ಓಡಿಹೋಗಿದ್ದರು. ಇತ್ತ ಇವರ ಕುಟುಂಬವು ಪೊಲೀಸ್ ಠಾಣೆಗೆ ಹೋಗಿ ನಾಪತ್ತೆ ದೂರನ್ನು ದಾಖಲಿಸಿದೆ. ನಂತರ ದುರ್ಗ್ ಪೊಲೀಸರು ಚೆನ್ನೈನಲ್ಲಿ ಶ್ರೀಹರಿ ಮತ್ತು ಐಶ್ವರ್ಯಾ ಇಬ್ಬರನ್ನು ಪತ್ತೆಹಚ್ಚಿದ್ದರು. ಕೂಡಲೇ ಪೊಲೀಸರ ತಂಡವನ್ನು ಅಲ್ಲಿಗೆ ಕಳುಹಿಸಲಾಗಿತ್ತು. ಅಕ್ಟೋಬರ್ 7 ರಂದು ಇಬ್ಬರನ್ನು ವಾಪಾಸ್ ಕೃಷ್ಣನಗರಕ್ಕೆ ಕರೆದುಕೊಂಡು ಬಂದಿದ್ದಾರೆ. ನಂತರ ಇಬ್ಬರನ್ನು ಅವರ ಕುಟುಂಬದವರ ಜೊತೆ ಕಳುಹಿಸಿದ್ದಾರೆ.

    ಶನಿವಾರ ರಾತ್ರಿ ಪೊಲೀಸರು ಅವರ ಮನೆಗಳಲ್ಲಿ ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿದ್ದಾರೆ. ನಂತರ ವಿಚಾರಣೆಗಾಗಿ ಮನೆಯ ಒಳಗೆ ಹೋಗಿದ್ದಾರೆ. ಈ ವೇಳೆ ಆರೋಪಿಗಳಿಬ್ಬರು ಶ್ರೀಹರಿ ಮತ್ತು ಐಶ್ವರ್ಯಾ ಇಬ್ಬರು ವಿಷ ಕುಡಿದು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ. ಇದರಿಂದ ಅನುಮಾನಗೊಂಡ ಪೊಲೀಸರು ಕೂಡಲೇ ಇಬ್ಬರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ಮಾಡಿದ್ದಾರೆ.

    ವಿಚಾರಣೆ ವೇಳೆ ತಾವೇ ಕೊಲೆ ಮಾಡಿರುವ ಬಗ್ಗೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಅಲ್ಲದೇ ಆರೋಪಿಗಳು ಸುಪೇಲಾದಿಂದ 10 ಕಿ.ಮೀ ದೂರದಲ್ಲಿರುವ ಜೆವ್ರಾ ಸಿರ್ಸಾ ಗ್ರಾಮದ ಸಮೀಪ ಶಿವನಾಥ್ ನದಿಯ ದಡದಲ್ಲಿ ಮೃತದೇಹಗಳನ್ನು ಸುಟ್ಟುಹಾಕಿದ್ದಾರೆ ಎಂದು ಯಾದವ್ ತಿಳಿಸಿದ್ದಾರೆ.

    ಶ್ರೀಹರಿ ಮತ್ತು ಐಶ್ವರ್ಯಾ ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗಲು ಬಯಸಿದ್ದರು. ಆದರೆ ಎರಡು ಕುಟುಂಬದವರು ಇದಕ್ಕೆ ವಿರುದ್ಧ ವ್ಯಕ್ತಪಡಿಸಿದ್ದಾರೆ. ಭಾಗಶಃ ಸುಟ್ಟ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

  • ಕೊರೊನಾಗೆ ಔಷಧಿ ಅಂತ ತನ್ನ ಕುಟುಂಬದವರಿಗೆ ವಿಷ ನೀಡಿದ

    ಕೊರೊನಾಗೆ ಔಷಧಿ ಅಂತ ತನ್ನ ಕುಟುಂಬದವರಿಗೆ ವಿಷ ನೀಡಿದ

    – ಪತ್ನಿ ಮೂವರು ಮಕ್ಕಳಿಗೆ ನೀಡಿ, ತಾನೂ ಕುಡಿದ

    ರಾಯ್ಪುರ: ವ್ಯಕ್ತಿಯೊಬ್ಬ ತೀವ್ರ ಆರ್ಥಿಕ ಸಮಸ್ಯೆಯಿಂದಾಗಿ ಕೊರೊನಾಗಾಗಿ ಔಷಧಿ ಎಂದು ಸುಳ್ಳು ಹೇಳಿ ತನ್ನದೇ ಕುಟುಂಬದ ಐವರಿಗೆ ವಿಷ ನೀಡಿ ಕೊಲೆ ಮಾಡಲು ಯತ್ನಿಸಿರುವ ಘಟನೆ ಛತ್ತೀಸ್‍ಗಢದಲ್ಲಿ ನಡೆದಿದೆ.

    ಖರೋರಾ ಗ್ರಾಮದ ನಿವಾಸಿ ನಾರಾಯಣ್ ದೇವಾಂಗನ್ ಎಂಬಾತ ತನ್ನ ಕುಟುಂಬಸ್ಥರಿಗೆ ವಿಷ ನೀಡಿ ಕೊಲೆ ಮಾಡಲು ಯತ್ನಿಸಿದ್ದಾನೆ. ಇದೀಗ ಐವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ವಿಷ ಸೇವಿಸಿದವರನ್ನು ಪತ್ನಿ ದಾಮಿನಿ (30), ಇಬ್ಬರು ಹೆಣ್ಣು ಮಕ್ಕಳಾದ ಪ್ರಿಯಾ (11) ಮತ್ತು ಗಾಯತ್ರಿ (10) ಹಾಗೂ ಮಗ ಕುಲೇಶ್ವರ (7) ಎಂದು ಗುರುತಿಸಲಾಗಿದೆ. ಇವರಿಗೆಲ್ಲಾ ಕೋವಿಡ್ -19 ಸೋಂಕನ್ನು ಎದುರಿಸಲು ಪರಿಣಾಮಕಾರಿ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸುಳ್ಳು ಹೇಳಿ ವಿಷ ಕುಡಿಸಿದ್ದಾನೆ. ನಾರಾಯಣ್ ದಿವಾಂಗನ್ ತನ್ನ ಕುಟುಂಬದ ಎಲ್ಲರಿಗೂ ವಿಷ ನೀಡಿದ ನಂತರ ತಾನೂ ಅದೇ ವಿಷವನ್ನು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕೊರೊನಾ ಹಿನ್ನೆಲೆ ಕಳೆದ ಐದು ತಿಂಗಳುಗಳಿಂದ ಕೆಲಸ ಇಲ್ಲದೆ ಕುಟುಂಬ ನಿರ್ವಹಣೆಗೆ ಹಣವೂ ಇಲ್ಲದೆ ಪರದಾಡುತ್ತಿದ್ದನು. ಕೆಲವು ತಿಂಗಳ ಹಿಂದೆ ತನ್ನ ಕೃಷಿ ಭೂಮಿಯನ್ನು ಸಹ ಮಾರಾಟ ಮಾಡಿದ್ದನು. ಆದರೆ ವಿಪರೀತ ಸಾಲ ಮಾಡಿಕೊಂಡಿದ್ದನು. ಇದಲ್ಲದೇ ಆತ ಕುಡಿತದ ದಾಸನಾಗಿದ್ದನು ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.

    ದೇವಾಂಗನ್ ಕೊರೊನಾ ಸೋಂಕು ನಿವಾರಣೆಗೆ ಔಷಧಿ ತಂದಿದ್ದೇನೆ ಎಂದು ಪಾನೀಯದೊಳಗೆ ಮಿಕ್ಸ್ ಮಾಡಿ ಕೊಟ್ಟಿದ್ದಾನೆ. ಸದ್ಯಕ್ಕೆ ಆಸ್ಪತ್ರೆಯಲ್ಲಿ ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದು, ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ಬೆಳ್ಳಂಬೆಳಗ್ಗೆ ಟ್ರಕ್, ಬಸ್ ನಡುವೆ ಭೀಕರ ಅಪಘಾತ – ಏಳು ಮಂದಿ ದುರ್ಮರಣ

    ಬೆಳ್ಳಂಬೆಳಗ್ಗೆ ಟ್ರಕ್, ಬಸ್ ನಡುವೆ ಭೀಕರ ಅಪಘಾತ – ಏಳು ಮಂದಿ ದುರ್ಮರಣ

    – ಡಿಕ್ಕಿಯ ರಭಸಕ್ಕೆ ಬಸ್ ನಜ್ಜುಗುಜ್ಜು

    ರಾಯ್ಪುರ: ಟ್ರಕ್ ಮತ್ತು ಬಸ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಏಳು ಮಂದಿ ಸಾವನ್ನಪ್ಪಿರುವ ಘಟನೆ ಛತ್ತೀಸ್‍ಗಢದಲ್ಲಿ ನಡೆದಿದೆ.

    ಇಂದು ಬೆಳಗ್ಗೆ ಈ ಅಪಘಾತ ಸಂಭವಿಸಿದ್ದು, ಬಸ್ ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದಿವೆ. ಪರಿಣಾಮ ಏಳು ಕಾರ್ಮಿಕರು ಸಾವನ್ನಪ್ಪಿದ್ದು, ಅನೇಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.

    ಬಸ್ ಒಡಿಶಾದ ಗಂಜಾಂನಿಂದ ಗುಜರಾತ್‍ನ ಸೂರತ್‍ಗೆ ಕಾರ್ಮಿಕರನ್ನು ಕರೆದುಕೊಂಡು ಹೋಗಿತ್ತು. ಆದರೆ ಇಂದು ಮುಂಜಾನೆ ರಾಯ್ಪುರ ಸಮೀಪದ ಚೇರಿ ಖೇಡಿ ಎಂಬಲ್ಲಿ ಬಸ್ ಟ್ರಕ್‍ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಏಳು ಮಂದಿ ಸಾವನ್ನಪ್ಪಿದ್ದು, ಅನೇಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಎಸ್‍ಎಸ್‍ಪಿ ಅಜಯ್ ಯಾದವ್ ತಿಳಿಸಿದ್ದಾರೆ.

    ಮಾಹಿತಿ ತಿಳಿದು ಅಪಘಾತ ಸ್ಥಳಕ್ಕೆ ಸ್ಥಳೀಯ ಪೊಲೀಸರು ಹೋಗಿದ್ದು, ಗಾಯಾಳುಗಳನ್ನು ರಕ್ಷಣೆ ಮಾಡಿದ್ದಾರೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.