Tag: Raipur

  • ಟ್ರಕ್‌ಗಳ ನಡುವೆ ಅಪಘಾತ – 13 ಮಂದಿ ದುರ್ಮರಣ

    ಟ್ರಕ್‌ಗಳ ನಡುವೆ ಅಪಘಾತ – 13 ಮಂದಿ ದುರ್ಮರಣ

    ರಾಯ್ಪುರ: ಟ್ರಕ್‌ಗಳ ನಡುವೆ ಭೀಕರ ಅಪಘಾತ ಸಂಭವಿಸಿ, 9 ಮಹಿಳೆಯರು, ಮೂರು ಮಕ್ಕಳು ಹಾಗೂ 6 ತಿಂಗಳ ಮಗು ಸೇರಿ 13 ಮಂದಿ ಸಾವನ್ನಪ್ಪಿರುವ ಘಟನೆ ಛತ್ತೀಸ್‌ಗಢದ ರಾಯ್‌ಪುರ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ರಾಯ್‌ಪುರ-ಬಲೋದಬಜಾರ್ ರಸ್ತೆಯ ಸರಗಾಂವ್ ಬಳಿ ಸೋಮವಾರ ಬೆಳಗ್ಗಿನ ಜಾವ ಈ ಅಪಘಾತ ಸಂಭವಿಸಿದೆ. ಇದನ್ನೂ ಓದಿ: ಭಾರತ-ಪಾಕ್ ಮಧ್ಯಸ್ಥಿಕೆಗೆ ಟ್ರಂಪ್ ಏನು ಹೆಡ್‌ಮಾಸ್ಟ್ರಾ? ನಾವೇನು ಸ್ಕೂಲ್ ಮಕ್ಕಳಾ?: ಕೃಷ್ಣ ಬೈರೇಗೌಡ

    ಚಟೌಡ್ ಗ್ರಾಮದ ಕುಟುಂಬವೊಂದು ಬನ್ಸಾರಿಗೆ ಮದುವೆ ಸಮಾರಂಭಕ್ಕೆ ತೆರಳಿತ್ತು. ಸುಮಾರು 50 ಜನರು ಟ್ರಕ್ಕೊಂದರಲ್ಲಿ ಸಮಾರಂಭದಿಂದ ಹಿಂತಿರುಗುತ್ತಿದ್ದರು. ಈ ವೇಳೆ ಸರಗಾಂವ್ ಬಳಿ ಬನ್ಸಾರಿಯಿಂದ ಬರುತ್ತಿದ್ದ ಟ್ರಕ್‌ಗೆ ಇನ್ನೊಂದು ಟ್ರಕ್ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಧಾರಾಕಾರ ಮಳೆಗೆ ತತ್ತರಿಸಿದ ಕೀನ್ಯಾ – ರಸ್ತೆಗಳು ಸಂಪೂರ್ಣ ಜಲಾವೃತ

    ಡಿಕ್ಕಿಯ ರಭಸಕ್ಕೆ ಟ್ರಕ್‌ನಲ್ಲಿದ್ದ 13 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ 9 ಮಹಿಳೆಯರು, ಇಬ್ಬರು ಹೆಣ್ಣುಮಕ್ಕಳು, ಓರ್ವ ಗಂಡುಮಗು ಹಾಗೂ 6 ತಿಂಗಳ ಮಗು ಸೇರಿ 13 ಮಂದಿ ಅಸುನೀಗಿದ್ದಾರೆ. 12 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮೋದಿಗೆ ಯುದ್ಧಕ್ಕಿಂತ ಬಿಹಾರ ಚುನಾವಣೆ ಮುಖ್ಯ: ಪ್ರಿಯಾಂಕ್ ಖರ್ಗೆ ಕಿಡಿ

    ಘಟನಾ ಸ್ಥಳಕ್ಕೆ ರಾಯ್ಪುರ ಜಿಲ್ಲಾಧಿಕಾರಿ ಗೌರವ್ ಸಿಂಗ್ ಭೇಟಿ ನೀಡಿದರು. ರಾಯ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ನಟ ಶಾರುಖ್ ಖಾನ್‌ಗೆ ಜೀವ ಬೆದರಿಕೆ ಪ್ರಕರಣ – ಛತ್ತೀಸ್‌ಗಢದಲ್ಲಿ ಆರೋಪಿ ಅರೆಸ್ಟ್

    ನಟ ಶಾರುಖ್ ಖಾನ್‌ಗೆ ಜೀವ ಬೆದರಿಕೆ ಪ್ರಕರಣ – ಛತ್ತೀಸ್‌ಗಢದಲ್ಲಿ ಆರೋಪಿ ಅರೆಸ್ಟ್

    ರಾಯಪುರ: ಬಾಲಿವುಡ್ ನಟ ಶಾರುಖ್ ಖಾನ್‌ಗೆ (Shah Rukh Khan) ಜೀವ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಛತ್ತೀಸ್‌ಗಢ (Chhattisgarh) ರಾಯಪುರದಲ್ಲಿ (Raipur) ಮುಂಬೈ(Mumbai) ಪೊಲೀಸರು ಬಂಧಿಸಿದ್ದಾರೆ.

    ಬಂಧಿತ ಆರೋಪಿಯನ್ನು ವಕೀಲ ಮೊಹಮ್ಮದ್ ಫೈಜಾನ್ ಖಾನ್ ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಟಾಕ್ಸಿಕ್ ಸಿನಿಮಾ ಸೆಟ್‍ಗೆ ಮರಗಳ ಮಾರಣಹೋಮ – ಎಫ್‍ಐಆರ್ ದಾಖಲು

    ಬಾಲಿವುಡ್ ಸೂಪರ್‌ಸ್ಟಾರ್ ಶಾರುಖ್ ಖಾನ್‌ಗೆ ಅಪರಿಚಿತ ವ್ಯಕ್ತಿಯಿಂದ ಕೊಲೆ ಬೆದರಿಕೆ ಕರೆಯೊಂದು ಬಂದಿತ್ತು. ನ.5 ರಂದು ಮಧ್ಯಾಹ್ನ 1:20ರ ಸುಮಾರಿಗೆ ಮುಂಬೈನ ಬಾಂದ್ರಾ ಪೊಲೀಸರಿಗೆ ಕರೆ ಮಾಡಿ ವ್ಯಕ್ತಿ 50 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ.

    ಛತ್ತೀಸ್‌ಗಢದ ರಾಯಪುರದ ಫೈಜಾನ್ ಖಾನ್ ಎಂಬುವರ ಹೆಸರಿನಲ್ಲಿ ನೋಂದಾಯಿಸಲಾದ ಮೊಬೈಲ್ ಸಂಖ್ಯೆಯಿಂದ ಬೆದರಿಕೆ ಕರೆ ಬಂದಿತ್ತು. ಈ ಸಂಬಂಧ ಫೈಜಾನ್ ಖಾನ್ ಅವರನ್ನು ಪೊಲೀಸರು ವಿಚಾರಣೆಗೆ ಕರೆಯಿಸಿದ್ದರು. ವಿಚಾರಣೆಯಲ್ಲಿ ತಾನು ವಕೀಲನಾಗಿದ್ದು, ನ.2 ರಂದು ಮೊಬೈಲ್ ಕಳ್ಳತನವಾಗಿದೆ. ಈ ಬಗ್ಗೆ ದೂರು ದಾಖಲಾಗಿದೆ. ಶಾರುಖ್ ಖಾನ್‌ಗೆ ಬೆದರಿಕೆ ಹಾಕಲು ಯಾರೋ ಅದನ್ನು ದುರ್ಬಳಕೆ ಮಾಡಿಕೊಂಡಿರಬಹುದು ಎಂದು ಹೇಳಿದ್ದನು.

    ಅದಾದ ಬಳಿಕ ತನಗೆ ಬೆದರಿಕೆ ಬರುತ್ತಿರುವ ಹಿನ್ನೆಲೆ ಸುರಕ್ಷತೆ ಒದಗಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದ. ಜೊತೆಗೆ ಸುರಕ್ಷತೆಯ ನೆಪದಲ್ಲಿ ಎರಡು ಬಾರಿ ವಿಚಾರಣೆಗೆ ಗೈರು ಹಾಜರಾಗಿದ್ದ. ಇದೀಗ ಮುಂಬೈ ಪೊಲೀಸರು ಆತನನ್ನು ಬಂಧಿಸಿದ್ದು, ಭಾರತೀಯ ನ್ಯಾಯ ಸಂಹಿತೆಯ 308(4), 351(3)(4) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    ಕಳೆದ ವರ್ಷ ಅಕ್ಟೋಬರ್‌ನಲ್ಲಿ ಶಾರುಖ್ ಖಾನ್ ಅವರಿಗೆ ಜೀವ ಬೆದರಿಕೆ ಬಂದಿತ್ತು. ಅದಾದ ಬಳಿಕ ಅವರ ಭದ್ರತೆಯನ್ನು Y+ ಮಟ್ಟಕ್ಕೆ ಹೆಚ್ಚಿಸಲಾಯಿತು. ದಿನದ 24 ಗಂಟೆ ಆರು ಶಸ್ತ್ರಸಜ್ಜಿತ ಸಿಬ್ಬಂದಿಗಳ ಜೊತೆಯಲ್ಲಿ ಇರುವುದನ್ನು ಖಚಿತಪಡಿಸುತ್ತದೆ. ಇದಕ್ಕೂ ಮೊದಲು ಶಾರುಖ್ ಖಾನ್ ಇಬ್ಬರು ಶಸ್ತ್ರಸಜ್ಜಿತ ಭದ್ರತಾ ಸಿಬ್ಬಂದಿಗಳನ್ನು ಹೊಂದಿದ್ದರು.ಇದನ್ನೂ ಓದಿ: ಆರ್‌ಡಿಎಕ್ಸ್ ಇಟ್ಟು ಅಯೋಧ್ಯೆಯ ರಾಮಮಂದಿರ ಸ್ಫೋಟಿಸುವ ಬೆದರಿಕೆ

  • ಶಾರುಖ್ ಖಾನ್‌ಗೆ ಬೆದರಿಕೆ: ಕೃತ್ಯದ ಹಿಂದೆ ನಟನ ವಿರುದ್ಧ ದೂರು ನೀಡಿದ್ದ ವಕೀಲನ ಫೋನ್‌!

    ಶಾರುಖ್ ಖಾನ್‌ಗೆ ಬೆದರಿಕೆ: ಕೃತ್ಯದ ಹಿಂದೆ ನಟನ ವಿರುದ್ಧ ದೂರು ನೀಡಿದ್ದ ವಕೀಲನ ಫೋನ್‌!

    ಮುಂಬೈ: ಬಾಲಿವುಡ್ ನಟ ಶಾರುಖ್ ಖಾನ್‌ಗೆ (Shah Rukh Khan) ರಾಯ್‌ಪುರ (Raipur) ಮೂಲದ ವಕೀಲರೊಬ್ಬರ ಫೋನ್‌ನಿಂದ ಕೊಲೆ ಬೆದರಿಕೆ ಬಂದಿದೆ ಎಂದು ಮುಂಬೈ ಪೊಲೀಸರು (Mumbai Police) ತಿಳಿಸಿದ್ದಾರೆ.

    ವಕೀಲ ಫೈಜಾನ್ ಖಾನ್ ಎಂಬವರ ಫೋನ್‌ನಿಂದ ಶಾರುಖ್‌ ಖಾನ್‌ ಅವರಿಗೆ ಬೆದರಿಕೆ ಬಂದಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ವಕೀಲ ಶಾರುಖ್ ಖಾನ್‌ ಅವರಿಗೆ ಬೆದರಿಕೆ ಕರೆ ಬರುವ 3 ದಿನಗಳ ಮೊದಲು ತನ್ನ ಫೋನ್ ಕಳ್ಳತನವಾಗಿದೆ. ಈ ಬಗ್ಗೆ ಎಫ್‌ಐಆರ್ ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ.

    ಮಂಗಳವಾರ ಬಾಂದ್ರಾ ಪೊಲೀಸ್ ಠಾಣೆಯ ಫೋನ್‌ಗೆ ಕರೆ ಮಾಡಿ ಬೆದರಿಕೆ ಹಾಕಲಾಗಿತ್ತು. ಕರೆ ಮಾಡಿದ್ದ ವ್ಯಕ್ತಿ ನಟನಿಂದ 50 ಲಕ್ಷ ರೂ. ಬೇಡಿಕೆಯಿಟ್ಟಿದ್ದ. ಆ ಹಣವನ್ನು ನೀಡದಿದ್ದರೆ ಭಾರೀ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಲಾಗಿತ್ತು.

    ಈ ಬಗ್ಗೆ ಹೆಚ್ಚಿನ ತನಿಖೆಗಾಗಿ ಮುಂಬೈ ಪೊಲೀಸ್ ತಂಡ ರಾಯ್‌ಪುರಕ್ಕೆ ತೆರಳಿತ್ತು. ಇದೀಗ ರಾಯ್‌ಪುರ ಪೊಲೀಸರೊಂದಿಗೆ ವಕೀಲನ ಫೋನ್ ಕಳ್ಳತನದ ಬಗ್ಗೆ ಮಾಹಿತಿ ಪಡೆಯಲಾಗಿದೆ. ಬೆದರಿಕೆ ಹಾಕಿದವರ ಪತ್ತೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

    ಶಾರುಖ್ ಖಾನ್ ಅವರ ಅಂಜಾಂ (1994) ಚಿತ್ರದಲ್ಲಿ ಜಿಂಕೆ ಬೇಟೆಯನ್ನು ಉಲ್ಲೇಖಿಸುವ ಸಂಭಾಷಣೆಯ ಕುರಿತು ವಕೀಲ ಈ ಹಿಂದೆ ಮುಂಬೈ ಪೊಲೀಸರಿಗೆ ದೂರು ನೀಡಿದ್ದರು.

    ನಾನು ರಾಜಸ್ಥಾನದಿಂದ ಬಂದವನು. ಬಿಷ್ಣೋಯ್ ಸಮುದಾಯದವರು ನನ್ನ ಸ್ನೇಹಿತರು. ಜಿಂಕೆಗಳನ್ನು ರಕ್ಷಿಸುವುದು ಅವರ ಧರ್ಮದಲ್ಲಿದೆ. ಹಾಗಾಗಿ ಮುಸ್ಲಿಮರು ಜಿಂಕೆಗಳ ಬಗ್ಗೆ ಈ ರೀತಿ ಹೇಳಿದರೆ ಅದು ಖಂಡನೀಯ. ಆದ್ದರಿಂದ, ನಾನು ಆಕ್ಷೇಪ ಎತ್ತಿದ್ದೇನೆ ಎಂದು ಫೈಜಾನ್ ಖಾನ್ ಹಿಂದೆ ಹೇಳಿದ್ದರು.

    ನನ್ನ ಫೋನ್‌ನಿಂದ ಯಾರೇ ಕರೆ ಮಾಡಿದ್ದರೂ ಅದು ಉದ್ದೇಶಪೂರ್ವಕವಾಗಿ ತೋರುತ್ತದೆ. ಇದು ನನ್ನ ವಿರುದ್ಧದ ಪಿತೂರಿ ಎಂದು ನಾನು ಭಾವಿಸುತ್ತೇನೆ ಎಂದು ವಕೀಲರು ಹೇಳಿದ್ದಾರೆ.

  • Chattisgarh | ಅಬುಜ್ಮಾರ್ ಎನ್‌ಕೌಂಟರ್‌ನಲ್ಲಿ 38 ಮಾವೋವಾದಿಗಳ ಹತ್ಯೆ

    Chattisgarh | ಅಬುಜ್ಮಾರ್ ಎನ್‌ಕೌಂಟರ್‌ನಲ್ಲಿ 38 ಮಾವೋವಾದಿಗಳ ಹತ್ಯೆ

    ರಾಯಪುರ: ಛತ್ತೀಸ್‌ಗಢನ (Chattisgarh) ಅಬುಜ್ಮಾರ್‌ನಲ್ಲಿ (Abujhmarh) ಅ.3ರಂದು ನಡೆದ ಎನ್‌ಕೌಂಟರ್‌ನಲ್ಲಿ 38 ಮಾವೋವಾದಿಗಳು ಹತರಾಗಿದ್ದು, ಬಸ್ತಾರ್‌ನಲ್ಲಿ ನಡೆದ ಅತೀ ದೊಡ್ಡ ಎನ್‌ಕೌಂಟರ್ ಇದಾಗಿದೆ.

    ಶುಕ್ರವಾರ ದಂತೇವಾಡ ಪೊಲೀಸರು (Dantewada Police) 9 ಗಂಟೆಗಳ ಕಾಲ ನಡೆಸಿದ ಗುಂಡಿನ ದಾಳಿಯಲ್ಲಿ ಒಟ್ಟು 38 ಮಾವೋವಾದಿಗಳನ್ನು ಹೊಡೆದುರುಳಿಸಿದ್ದಾರೆ. ಒಟ್ಟು 2.6 ಕೋಟಿ ರೂ.ಗೂ ಅಧಿಕ ಬಹುಮಾನವನ್ನು ಪಡೆದುಕೊಂಡಿದ್ದಾರೆ.

    ಎನ್‌ಕೌಂಟರ್ ನಡೆದ ಒಂದು ದಿನದ ಬಳಿಕ 13 ಮಹಿಳೆಯರು ಸೇರಿದಂತೆ 31 ಮಾವೋವಾದಿಗಳ ಶವವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಅ.13 ರಂದು ಮಾವೋವಾದಿಗಳು ತಮ್ಮ ಹೇಳಿಕೆಯನ್ನು ಬಿಡುಗಡೆಗೊಳಿಸಿದ್ದಾರೆ. ಹೇಳಿಕೆಯ ಪ್ರಕಾರ ಒಟ್ಟು 35 ಮಾವೋವಾದಿಗಳು ಸಾವನ್ನಪ್ಪಿದ್ದು, ಅವರ ಹೆಸರುಗಳನ್ನು ಬಹಿರಂಗಪಡಿಸಿದ್ದಾರೆ. ಬಳಿಕ ತಮ್ಮ ಬಳಿಯಿದ್ದ ಮಾವೋವಾದಿಗಳ ಪಟ್ಟಿಯನ್ನು ಹಾಗೂ ಬಿಡುಗಡೆಗೊಳಿಸಿದ ಪಟ್ಟಿಯನ್ನು ತಾಳೆ ಮಾಡಿದಾಗ 7 ಹೆಚ್ಚುವರಿ ಹೆಸರಿರುವುದು ಗಮನಕ್ಕೆ ಬಂದಿದೆ.

    ದಂತೇವಾಡ ಎಸ್‌ಪಿ ಗೌರವ್ ರೈ ಮಾಹಿತಿ ಪ್ರಕಾರ, ಎನ್‌ಕೌಂಟರ್ ಸ್ಥಳದಿಂದ ಭದ್ರತಾ ಪಡೆಗಳು ಶವಗಳನ್ನು ಸಾಗಿಸದೇ ಇರುವ ಸಂದರ್ಭದಲ್ಲಿ ಕೆಲವು ನಕ್ಸಲರು ತಮ್ಮ ಕಾರ್ಯಕರ್ತರಿಂದ ಆ ಶವಗಳನ್ನು ಸಾಗಿಸುತ್ತಾರೆ ಎಂದು ಸ್ಪಷ್ಟನೆ ನೀಡಿದರು. ಎನ್‌ಕೌಂಟರ್ ವೇಳೆ ಹಲವಾರು ನಕ್ಸಲರು (Naxals) ಗಾಯಗೊಂಡಿದ್ದು, ಕೆಲವರ ಸ್ಥಿತಿ ಗಂಭೀರವಾಗಿದೆ. ಇನ್ನೂ ಕೆಲವರು ಅಲ್ಲಿಂದ ತಪ್ಪಿಸಿಕೊಳ್ಳುವಾಗ ಕೆಲವರನ್ನು ಎಳೆದುಕೊಂಡು ಹೋಗಿರಬಹುದು. ಆದರೆ ಅವರಿಗೆ ವೈದ್ಯಕೀಯ ಆರೈಕೆಯಿಲ್ಲದೆ ಬದುಕುಳಿಯುವುದು ಕಷ್ಟ ಎಂದು ತಿಳಿಸಿದರು.

    ಬಸ್ತಾರ್ ರೇಂಜ್ ಐಜಿ ಪಿ ಸುಂದರರಾಜ್ ಮಾತನಾಡಿ, ಹತ್ಯೆಯಾದವರಲ್ಲಿ ದಂಡಕಾರಣ್ಯ ವಿಶೇಷ ವಲಯ ಸಮಿತಿ ಸದಸ್ಯ, ವಿಭಾಗೀಯ ಸಮಿತಿ ಸದಸ್ಯ, ಪಿಎಲ್‌ಜಿಎ ಕಂಪನಿಯ 18 ಜನ, ಡಿಕೆಎಸ್‌ಜೆಡ್‌ಸಿ 2 ಗಾರ್ಡ್‌ಗಳು, 9 ಜನ ಕಮಿಟಿ ಸದಸ್ಯರು ಹಾಗೂ ಪ್ರದೇಶ ಕಮಿಟಿ ಸದಸ್ಯರು ಇದ್ದರು ಎಂದು ತಿಳಿಸಿದರು.

    ನಾರಾಯಣಪುರ ಮತ್ತು ದಾಂತೇವಾಡದಿಂದ ಜಿಲ್ಲಾ ಮೀಸಲು ಪಡೆ ಮತ್ತು ವಿಶೇಷ ಕಾರ್ಯಪಡೆಯ ಸುಮಾರು 1,500 ಯೋಧರು 72 ಗಂಟೆಗಳ ಕಾಲ ಬೃಹತ್ ಕಾರ್ಯಾಚರಣೆಯನ್ನು ನಡೆಸಿದ್ದು, 303 ಬಂದೂಕುಗಳನ್ನು ವಶಪಡಿಸಿಕೊಂಡಿದ್ದಾರೆ.

  • ಸಹಾಯ ಕೇಳಿ ಬಂದ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ – ಕಾನ್ಸ್‌ಟೇಬಲ್ ಅರೆಸ್ಟ್

    ರಾಯ್‍ಪುರ: ಛತ್ತೀಸ್‍ಗಢದ (Chhattisgarh) ರಾಜಧಾನಿ ರಾಯ್‍ಪುರದಲ್ಲಿ (Raipur) ವಿದ್ಯಾರ್ಥಿನಿಯ (Student) ಮೇಲೆ ಅತ್ಯಾಚಾರ ಎಸಗಿದ ಕಾನ್ಸ್‌ಟೇಬಲ್‌ನನ್ನು  ಪೊಲೀಸರು ಬಂಧಿಸಿದ್ದಾರೆ.

    ಗುರುವಾರ ಮಧ್ಯರಾತ್ರಿ ಆರೋಪಿ ತನ್ನ ಕಾರಿನಲ್ಲಿ ಹಾಗೂ ಆಕೆಯ ಮನೆಯಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಯುವತಿ ಹಾಗೂ ಆರೋಪಿ ಕಳೆದ ಕೆಲವು ತಿಂಗಳಿಂದ ಪರಿಚಿತರಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಸಂತ್ರಸ್ತ ಯುವತಿ ತನ್ನ ಅಧ್ಯಯನಕ್ಕೆ ಸಂಬಂಧಿಸಿದಂತೆ ಸಹಾಯ ಕೇಳಿ ಕಾನ್ಸ್‌ಟೇಬಲ್ ಬಳಿ ಹೋಗಿದ್ದಾಳೆ. ಈ ವೇಳೆ ಆತ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇಬ್ಬರು 2-3 ತಿಂಗಳಿನಿಂದ ಫೋನ್‍ನಲ್ಲಿ ಸಂಪರ್ಕದಲ್ಲಿದ್ದರು. ಇಬ್ಬರು ಒಂದೇ ಪ್ರದೇಶದವರು ಎಂದು ಪೊಲೀಸರು ತಿಳಿಸಿದ್ದಾರೆ.

    22 ವರ್ಷದ ಯುವತಿ ಈ ಸಂಬಂಧ ರಾಯ್‍ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ದೂರಿನ ಅಡಿ ಕಾನ್ಸ್‌ಟೇಬಲ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನಂತರ ಕೋರ್ಟ್ ಆರೊಪಿಯನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

    ಈ ಸಂಬಂಧ ಬಿಎನ್‍ಎಸ್ (ಭಾರತೀಯ ನ್ಯಾಯ ಸಂಹಿತೆ) ಸೆಕ್ಷನ್ 64 ಮತ್ತು 351(2) ಅಡಿಯಲ್ಲಿ ಎಫ್‍ಐಆರ್ ದಾಖಲಿಸಲಾಗಿದೆ. ಸಂತ್ರಸ್ತೆಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಛತ್ತೀಸ್‍ಗಢದಲ್ಲಿ ಮಾವೋವಾದಿಗಳ ಅಟ್ಟಹಾಸ – ಕೊಡಲಿಯಿಂದ ಕೊಚ್ಚಿ ಸಶಸ್ತ್ರ ಪಡೆ ಕಮಾಂಡರ್ ಹತ್ಯೆ

    ಛತ್ತೀಸ್‍ಗಢದಲ್ಲಿ ಮಾವೋವಾದಿಗಳ ಅಟ್ಟಹಾಸ – ಕೊಡಲಿಯಿಂದ ಕೊಚ್ಚಿ ಸಶಸ್ತ್ರ ಪಡೆ ಕಮಾಂಡರ್ ಹತ್ಯೆ

    ರಾಯ್‍ಪುರ್: ಸಶಸ್ತ್ರ ಪಡೆ (ಸಿಎಎಫ್) ಕಮಾಂಡರ್ (CAF commander) ಒಬ್ಬರನ್ನು ನಕ್ಸಲ್ ನಿಗ್ರಹ ಪಡೆಯ ಶಿಬಿರದ ಸಮೀಪವೇ ಮಾವೋವಾದಿಗಳು ( Maoists) ಹತ್ಯೆಗೈದ ಘಟನೆ ಛತ್ತೀಸ್‍ಗಢದ (Chhattisgarh) ಬಿಜಾಪುರ ಜಿಲ್ಲೆಯಲ್ಲಿ ನಡೆದಿದೆ.

    ಕಮಾಂಡರ್ ತೇಜು ರಾಮ್ ಭುರ್ಯ ಹತ್ಯೆಗೀಡಾದ ಕಮಾಂಡರ್ ಆಗಿದ್ದಾರೆ. ಅವರು ಶಿಬಿರದಿಂದ ಸಿಬ್ಬಂದಿ ಜೊತೆ ಸಮೀಪದ ಮಾರುಕಟ್ಟೆಗೆ ತರಕಾರಿ ತರಲು ತೆರಳುತ್ತಿದ್ದರು. ಈ ವೇಳೆ ಮಾವೋವಾದಿಗಳ ತಂಡ ಏಕಾಏಕಿ ದಾಳಿ ನಡೆಸಿದೆ. ಈ ವೇಳೆ ತೇಜು ರಾಮ್ ಅವರಿಗೆ ಕೊಡಲಿಯಿಂದ ನಕ್ಸಲರು ಹಲ್ಲೆ ನಡೆಸಿದ್ದು, ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಹೆಚ್ಚುವರಿ ಸೇನೆ ಅಲ್ಲಿಗೆ ತೆರಳಿದ್ದು ಅಷ್ಟರಲ್ಲೇ ಮಾವೋವಾದಿಗಳ ತಂಡ ಅಲ್ಲಿಂದ ಪರಾರಿಯಾಗಿದೆ. ಇದನ್ನೂ ಓದಿ: ಖಾಸಗಿ ಬಸ್, ಇನ್ನೋವಾ ಮುಖಾಮುಖಿ ಡಿಕ್ಕಿ – ಅತ್ತೆ, ಸೊಸೆ ಸ್ಥಳದಲ್ಲೇ ಸಾವು

    ಭುರ್ಯ ಅವರು ಅನುಭವಿ ಅಧಿಕಾರಿಯಾಗಿದ್ದು, ಛತ್ತೀಸ್‍ಗಢದ ವಿವಿಧ ಭಾಗಗಳಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

    ದಾಳಿ ನಡೆಸಿದ ನಕ್ಸಲರ ಪತ್ತೆಗಾಗಿ ಸಿಎಎಫ್ ಮತ್ತು ಡಿಸ್ಟ್ರಿಕ್ಟ್ ರಿಸರ್ವ್ ಗಾರ್ಡ್ ತಂಡಗಳು ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಇದನ್ನೂ ಓದಿ: ಸಂಧಾನಕ್ಕೆ ಹೋಗಿದ್ದ ಗರ್ಭಿಣಿ ಮೇಲೆ ಗ್ಯಾಂಗ್‌ ರೇಪ್‌; ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ದುರುಳರು!

  • ಪಾರ್ಕ್ ಮಾಡಿದ್ದ ಕಾರಿನಿಂದ 2.65 ಕೋಟಿ ರೂ. ನಗದು ವಶ

    ಪಾರ್ಕ್ ಮಾಡಿದ್ದ ಕಾರಿನಿಂದ 2.65 ಕೋಟಿ ರೂ. ನಗದು ವಶ

    ರಾಯಪುರ: ಪಾರ್ಕ್ ಮಾಡಿರುವ ಕಾರಿನಲ್ಲಿದ್ದ (Car) 2.64 ಕೋಟಿ ರೂಪಾಯಿಗಳನ್ನು ವಶಕ್ಕೆ ಪಡೆದಿರುವ ಘಟನೆ ಛತ್ತೀಸ್‌ಗಢದ (Chhatisgarh) ದುರ್ಗ್  (Durg)  ಜಿಲ್ಲೆಯಲ್ಲಿ ನಡೆದಿದೆ.

    ಸೆಕ್ಟರ್-1 ಪ್ರದೇಶದ ಬ್ಯಾಂಕ್ ಬಳಿ ಅನುಮಾಸ್ಪದವಾಗಿ ಮೂರು ಕಾರುಗಳು ಪಾರ್ಕ್ ಮಾಡಲಾಗಿತ್ತು. ವಾಹನಗಳ ನಿಲುಗಡೆ ಬಗ್ಗೆ ಮಾಹಿತಿ ಪಡೆದ ಭಿಲಾಯಿ ಭಟ್ಟಿ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತು ಅಪರಧ ನಿಗ್ರಹ ಮತ್ತು ಸೈಬರ್ ಘಟದ ಜಂಟಿ ತಂಡ ತಲುಪಿದೆ. ಇದನ್ನೂ ಓದಿ: ಭಾರತ್‌ ಜೋಡೊ ನ್ಯಾಯ ಯಾತ್ರೆ ವೇಳೆ ರಾಹುಲ್‌ ಗಾಂಧಿ ಕಾರಿನ ಗಾಜು ಪುಡಿಪುಡಿ

    ಎರಡು ವಾಹನಗಳಿಲ್ಲಿದ್ದ ಮೂವರನ್ನು ಪೊಲೀಸರು ವಿಚಾರಣೆ ಮಾಡಿದ್ದಾರೆ. ತಪಾಸಣೆ ವೇಳೆ ಕಾರಿನಲ್ಲಿ 2.64 ಕೋಟಿ ರೂಪಾಯಿಗಳ ನಗದು ಪತ್ತೆಯಾಗಿದೆ. ಮೂವರು ವ್ಯಕ್ತಿಗಳನ್ನು ಪೊಲೀಸರು ಪ್ರಶ್ನೆ ಮಾಡಿದ್ದು, ತೃಪ್ತಿದಾಯಕ ಉತ್ತರವನ್ನು ನೀಡಲು ವಿಫಲವಾದ ಕಾರಣ ನಗದನ್ನು ವಶ ಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಹಿಂದೂಗಳಿಗೆ ದೊಡ್ಡ ಗೆಲುವು – ಜ್ಞಾನವಾಪಿ ಮಸೀದಿಯಲ್ಲಿ ಮೂರ್ತಿಗಳಿಗೆ ಪೂಜೆ ಮಾಡಲು ಅನುಮತಿ

    ನಗದನ್ನು ವಶ ಪಡಿಸಿಕೊಂಡಿರುವ ಬಗ್ಗೆ ಆದಾಯ ತೆರಿಗೆ ಇಲಾಖೆಗೆ ಈ ಕುರಿತು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಕಂಡಕ್ಟರ್ ಮೇಲೆ ಯುವತಿಯಿಂದ ಹಲ್ಲೆ

     

  • ಬ್ಯಾಂಕ್ ಮ್ಯಾನೇಜರ್‌ಗೆ ಬೆದರಿಸಿ 5.6 ಕೋಟಿ ರೂ. ಲೂಟಿ

    ಬ್ಯಾಂಕ್ ಮ್ಯಾನೇಜರ್‌ಗೆ ಬೆದರಿಸಿ 5.6 ಕೋಟಿ ರೂ. ಲೂಟಿ

    ರಾಯ್‍ಪುರ: ಬ್ಯಾಂಕ್ (Bank) ಮ್ಯಾನೇಜರ್‌ನನ್ನು ಒತ್ತೆಯಾಳಾಗಿ ಇರಿಸಿಕೊಂಡು ಲಾಕರ್‌ನಲ್ಲಿದ್ದ 5.6 ಕೋಟಿ ರೂ. ನಗದು ಹಾಗೂ ಚಿನ್ನಾಭರಣಗಳನ್ನು ದರೋಡೆಕೋರರು ದೋಚಿದ ಘಟನೆ ಛತ್ತೀಸ್‍ಗಢದ (Chhattisgarh) ರಾಯ್‍ಘರ್‌ನಲ್ಲಿ ನಡೆದಿದೆ. ಖಾಸಗಿ ಬ್ಯಾಂಕ್ ಒಂದಕ್ಕೆ ನುಗ್ಗಿದ ಏಳು ಜನ ಮುಸುಕುಧಾರಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ದರೋಡೆಕೋರರನ್ನು ತಡೆಯಲು ಯತ್ನಿಸಿದ ಬ್ಯಾಂಕ್ ಮ್ಯಾನೇಜರ್ ಕಾಲಿಗೆ ಚಾಕುವಿನಿಂದ ಇರಿಯಲಾಗಿದೆ. ಬಳಿಕ ಅವರನ್ನು ಕೊಠಡಿಯೊಂದರಲ್ಲಿ ಒತ್ತೆಯಾಳಾಗಿ ಇರಿಸಿಕೊಂಡು ದರೋಡೆ ಮಾಡಲಾಗಿದೆ. ದರೋಡೆಕೋರರು ಹಣವನ್ನು ಬ್ಯಾಗ್‍ಗಳಲ್ಲಿ ತುಂಬಿಕೊಂಡು ಬಳಿಕ ಬೈಕ್‍ನಲ್ಲಿ ಪರಾರಿಯಾಗಿದ್ದಾರೆ. ಅಲ್ಲದೇ ಬ್ಯಾಂಕ್‍ನಿಂದ 15 ಕಿಮೀ ದೂರದಲ್ಲಿ ಬೈಕ್ ನಿಲ್ಲಿಸಿ ಬೇರೆ ವಾಹನಗಳಲ್ಲಿ ದರೋಡೆಕೋರರು ತಪ್ಪಿಸಿಕೊಂಡಿದ್ದಾರೆ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದಾರೆ. ಇದನ್ನೂ ಓದಿ: ಕಾವೇರಿ ನೀರು ಹಂಚಿಕೆ ಸಂಕಷ್ಟ – ದಿಲ್ಲಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ಭೇಟಿಯಾದ ಡಿಕೆಶಿ

    ದರೋಡೆಕೋರರು ಲಾಕರ್‌ನಿಂದ ಕದ್ದ ಹಣ ಸುಮಾರು 4 ಕೋಟಿ ರೂ. ಎಂದು ಹೇಳಲಾಗಿದೆ. ಜೊತೆಗೆ 1.6 ಕೋಟಿಗೂ ಅಧಿಕ ಮೌಲ್ಯದ ಚಿನ್ನಾಭರಣವನ್ನು ಕದ್ದಿದ್ದಾರೆ. ಬ್ಯಾಂಕ್ ಆಗಷ್ಟೇ ತೆರೆಯಲಾಗಿತ್ತು, ಈ ವೇಳೆ ಗ್ರಾಹಕರೂ ಇರಲಿಲ್ಲ ಎಂದು ಪೊಲೀಸರು (Police) ತಿಳಿಸಿದ್ದಾರೆ.

    ಆರೋಪಿಗಳು ಬ್ಯಾಂಕ್‍ಗೆ ನುಗ್ಗಿದ ಕೂಡಲೇ ಸಿಸಿಟಿವಿ ಕ್ಯಾಮೆರಾಗಳನ್ನು ಹಾನಿಗೊಳಿಸಿದ್ದರಿಂದ ಗ್ಯಾಂಗ್‍ನ ಕೃತ್ಯ ಸೆರೆಯಾಗಿಲ್ಲ. ಇತ್ತೀಚಿನ ದಿನಗಳಲ್ಲಿ ನಡೆದ ದೇಶದ ಅತಿದೊಡ್ಡ ಬ್ಯಾಂಕ್ ದರೋಡೆಗಳಲ್ಲಿ ಇದು ಒಂದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೊನೆ ಕ್ಷಣದಲ್ಲೂ ಪಾರಾಗೋಕೆ ಹಾಲಶ್ರೀ ಯತ್ನ- ಮೈಸೂರಿನ ರಾಜಕಾರಣಿ ಬಳಿ ರಾಜಿ ಪಂಚಾಯ್ತಿಗೆ ಮೊರೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಸಹೋದರಿಯರ ಮೇಲೆ 10 ಜನರಿಂದ ಸಾಮೂಹಿಕ ಅತ್ಯಾಚಾರ- ಆರೋಪಿಗಳು ಅರೆಸ್ಟ್

    ಸಹೋದರಿಯರ ಮೇಲೆ 10 ಜನರಿಂದ ಸಾಮೂಹಿಕ ಅತ್ಯಾಚಾರ- ಆರೋಪಿಗಳು ಅರೆಸ್ಟ್

    ರಾಯ್‍ಪುರ: ಅಪ್ರಾಪ್ತೆ ಸೇರಿದಂತೆ ಇಬ್ಬರು ಸಹೋದರಿಯರ ಮೇಲೆ ಹತ್ತು ಜನ ಸಾಮೂಹಿಕ ಅತ್ಯಾಚಾರವೆಸಗಿದ ಪ್ರಕರಣ ಛತ್ತೀಸ್‍ಗಡದ (Chhattisgarh) ರಾಯ್‍ಪುರದಲ್ಲಿ (Raipur) ನಡೆದಿದೆ.

    19 ಮತ್ತು 16 ವರ್ಷ ವಯಸ್ಸಿನ ಸಹೋದರಿಯರು ಸ್ನೇಹಿತನೊಂದಿಗೆ ರಕ್ಷಾಬಂಧನ ಹಬ್ಬ ಆಚರಿಸಿ ವಾಪಸ್ ಆಗುತ್ತಿದ್ದರು. ಈ ವೇಳೆ ಮಂದಿರ ಹಸೌದ್ ಪ್ರದೇಶದ ಹಳ್ಳಿಯೊಂದರ ಬಳಿ ಆರೋಪಿಗಳು ಅವರನ್ನು ಅಡ್ಡಗಟ್ಟಿದ್ದಾರೆ. ಬಳಿಕ ಆರೋಪಿಗಳು ಸಹೋದರಿಯರನ್ನು ಮುಖ್ಯ ರಸ್ತೆಯಿಂದ ದೂರವಿರುವ ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಅತ್ಯಾಚಾರವೆಸಗಿದ್ದಾರೆ. ಅಲ್ಲದೇ ನಗದು ಮತ್ತು ಮೊಬೈಲ್ ಫೋನ್‍ಗಳನ್ನು ದೋಚಿದ್ದಾರೆ. ಈ ವೇಳೆ ಸಹೋದರಿಯರ ಸ್ನೇಹಿತನ ಮೇಲೆ ಹಲ್ಲೆ ಸಹ ನಡೆಸಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಪತ್ನಿಯನ್ನು ಥಳಿಸಿ ಬೆತ್ತಲೆ ಮೆರವಣಿಗೆ ಮಾಡಿದ ಪತಿ!

    ಇದಾದ ಬಳಿಕ ಇಬ್ಬರು ಸಹೋದರಿಯರು ಹಾಗೂ ಅವರ ಸ್ನೇಹಿತ ಸ್ಥಳೀಯ ಪೊಲೀಸ್ (Police) ಗಸ್ತು ಶಿಬಿರಕ್ಕೆ ತೆರಳಿದ್ದಾರೆ. ಅಲ್ಲಿಂದ ಅವರನ್ನು ಪೊಲೀಸ್ ಠಾಣೆಗೆ ಕರೆತರಲಾಯಿತು. ಬಳಿಕ ಅವರು ನೀಡಿದ ದೂರಿನ ಅನ್ವಯ ಪ್ರಕರಣವನ್ನು ದಾಖಲಿಸಲಾಗಿದೆ. ಈ ಸಂಬಂಧ 10 ಜನ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಗಳಲ್ಲಿ ಓರ್ವ ಸ್ಥಳೀಯ ಬಿಜೆಪಿ ನಾಯಕನ ಪುತ್ರ ಎನ್ನಲಾಗಿದೆ.

    ಆರೋಪಿಗಳ ವಿರುದ್ಧ ಸೆಕ್ಷನ್ 376ಡಿ (ಸಾಮೂಹಿಕ ಅತ್ಯಾಚಾರ), ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಂಧಿತರಲ್ಲಿ ಈಗಾಗಲೇ ಅಪರಾಧ ಕೃತ್ಯದಲ್ಲಿ ತೊಡಗಿದ್ದವರು ಇದ್ದಾರೆ. ಅವರಲ್ಲಿ ಕೆಲವರು ಬಂಧನಕ್ಕೊಳಗಾಗಿ ಜಾಮೀನಿನ ಮೇಲೆ ಹೊರಗೆ ಬಂದವರಾಗಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಗುರಿಪಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಇನ್ನೊಬ್ಬನ ಮೇಲೆ ದ್ವೇಷ ತೀರಿಸಿಕೊಳ್ಳಲು ಆತ್ಮೀಯ ಸ್ನೇಹಿತನನ್ನೇ ಕೊಂದ ಕಿರಾತಕ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಛತ್ತೀಸ್‌ಗಢದ ಮಾವಿನ ಮೇಳದಲ್ಲಿ ವಿಶ್ವದ ದುಬಾರಿ ಮಾವಿನ ಪ್ರದರ್ಶನ- ಕೆ.ಜಿಗೆ 2.70 ಲಕ್ಷ ರೂ.

    ಛತ್ತೀಸ್‌ಗಢದ ಮಾವಿನ ಮೇಳದಲ್ಲಿ ವಿಶ್ವದ ದುಬಾರಿ ಮಾವಿನ ಪ್ರದರ್ಶನ- ಕೆ.ಜಿಗೆ 2.70 ಲಕ್ಷ ರೂ.

    – ಮಿಯಾಝಾಕಿಯ ವಿಶೇಷತೆಯೇನು?

    ರಾಯ್ಪುರ: ವಿಶ್ವದಲ್ಲೇ ಅತ್ಯಂತ ದುಬಾರಿಯಾಗಿರುವ ಮಾವು ಎಂದರೆ ಅದು ಜಪಾನಿನ (Japan) ಮಿಯಾಝಾಕಿ (Miyazaki) ಮಾವಿನ ಹಣ್ಣು. ವಿದೇಶಿ ಮಾರುಕಟ್ಟೆಯಲ್ಲಿ ಸುಮಾರು 1.82 ಲಕ್ಷ ಮೌಲ್ಯವನ್ನು ಹೊಂದಿರುವ ಈ ದುಬಾರಿ ಮಾವನ್ನು ಛತ್ತೀಸ್‌ಗಢದ (Chattisgarh) ರಾಯ್ಪುರದಲ್ಲಿ (Raipur) ನಡೆದ ಮಾವಿನ ಮೇಳದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿದೆ.

    ಜಪಾನ್ ಮೂಲದ ಮಿಯಾಝಾಕಿ ಮಾವು ವಿಶ್ವದಲ್ಲೇ ಅತ್ಯಂತ ದುಬಾರಿ ಮಾವು ಎಂಬ ಖ್ಯಾತಿಯನ್ನು ಹೊಂದಿದೆ. ಜೂನ್ 17ರಿಂದ 19ರ ವರೆಗೆ ಛತ್ತೀಸ್‌ಗಢದ ರಾಯ್ಪುರದಲ್ಲಿ ಮಾವಿನ ಮೇಳವನ್ನು (Mango Festival) ಆಯೋಜಿಸಲಾಗಿತ್ತು. ಈ ಮಾವಿನ ಮೇಳದಲ್ಲಿ ದುಬಾರಿ ಮಾವು ಮಿಯಾಝಾಕಿಯನ್ನು ಪ್ರದರ್ಶನಕ್ಕೆ ಇರಿಸಲಾಗಿತ್ತು. ಈ ಮಾವು ಕೆ.ಜಿಗೆ ಸುಮಾರು 2.70 ಲಕ್ಷ ರೂ. ಮೌಲ್ಯವನ್ನು ಹೊಂದಿದೆ ಎಂದು ಕಾರ್ಯಕ್ರಮದ ಸಂಘಟಕರು ತಿಳಿಸಿದ್ದಾರೆ. ಇದನ್ನೂ ಓದಿ: RAW ಸಂಸ್ಥೆಯ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ರವಿ ಸಿನ್ಹಾ ನೇಮಕ

    ಕೋಲ್ ಇಂಡಿಯಾದ (Coal India) ನಿವೃತ್ತ ಮ್ಯಾನೇಜರ್ ಆರ್‌ಪಿ ಗುಪ್ತ ಈ ದುಬಾರಿ ಮಾವನ್ನು ಮಾವಿನ ಮೇಳದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದು, ಈ ಮಾವನ್ನು ಅತ್ಯಂತ ಕಾಳಜಿಯಿಂದ ಬೆಳೆಸಬೇಕಾಗುತ್ತದೆ. ಈ ಮಾವನ್ನು ಕಾರ್ಪೊರೇಟ್‌ನ ಕೊಡುಗೆಯಾಗಿ ವ್ಯಾಪಾರ ಮಾಡಲಾಗುತ್ತಿದ್ದು, ಈ ಮಾವಿನ ಬೆಲೆ ಸಾಮಾನ್ಯ ಮಾವಿನ ಹಣ್ಣುಗಳಿಂತ ಹೆಚ್ಚಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಏರ್‌ಬಸ್‌ ಜೊತೆ ಬರೋಬ್ಬರಿ 500 ವಿಮಾನ ಖರೀದಿಗೆ ಡೀಲ್‌ – ವಿಶ್ವದಾಖಲೆ ಬರೆದ ಇಂಡಿಗೋ

    ಸೂರ್ಯನ ಬೆಳಕು ಬಿದ್ದ ಮಾವಿನ ಭಾಗವು ಒಂದು ರೀತಿಯ ರುಚಿಯನ್ನು ನೀಡಿದರೆ ಮತ್ತೊಂದು ಭಾಗ ವಿಭಿನ್ನ ರುಚಿಯನ್ನು ನೀಡುತ್ತದೆ. ಇದು ಈ ಮಾವಿನ ವಿಶೇಷತೆಯಾಗಿದ್ದು, ಪ್ರದರ್ಶನದಲ್ಲಿ ಇರಿಸಲಾದ ಮಾವು 639 ಗ್ರಾಂ. ತೂಕವನ್ನು ಹೊಂದಿದೆ ಎಂದು ಆರ್‌ಪಿ ಗುಪ್ತ ತಿಳಿಸಿದ್ದಾರೆ. ಇದನ್ನೂ ಓದಿ: ಒಡಿಶಾ ರೈಲು ಅಪಘಾತದ ಬಳಿಕ ಎಚ್ಚೆತ್ತ ರೈಲ್ವೆ ಇಲಾಖೆ- ಟ್ರ್ಯಾಕ್‌ಗಳ ಡೀಪ್ ಸ್ಕ್ರೀನಿಂಗ್‌ಗೆ ನಿರ್ಧಾರ