Tag: rains

  • ರಾಜ್ಯದ ಹವಾಮಾನ ವರದಿ 16-05-2025

    ರಾಜ್ಯದ ಹವಾಮಾನ ವರದಿ 16-05-2025

    ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಳೆಯ ವಾತಾವರಣ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಮಂಗಳೂರು, ಬೆಳಗಾವಿ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ಬಳ್ಳಾರಿ, ಗದಗ, ರಾಯಚೂರು, ಯಾದಗಿರಿ, ವಿಜಯಪುರ, ಬೀದರ್, ಕಲಬುರಗಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಕೊಪ್ಪಳ, ಹುಬ್ಬಳ್ಳಿಯಲ್ಲಿ ಬಿಸಿಲಿನ ವಾತಾವರಣ ಇರಲಿದೆ.

    ಇನ್ನುಳಿದಂತೆ ಚಿಕ್ಕಮಗಳೂರು, ಶಿವಮೊಗ್ಗ, ಕೋಲಾರ, ಮೈಸೂರು, ಮಂಡ್ಯ, ತುಮಕೂರು, ಚಾಮರಾಜನಗರ ಸೇರಿ ಹಲವು ಜಿಲ್ಲೆಗಳಲ್ಲಿ ಬಿಸಿಲು ಮಳೆ ಆಟ ಮುಂದುವರಿಯಲಿದೆ. ಬೆಳಗ್ಗೆ ಮತ್ತು ಸಂಜೆ ಮಳೆಯಾಗಲಿದ್ದು, ಮಧ್ಯಾಹ್ನ ಬಿಸಿಲು ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಇನ್ನೂ ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 31-22
    ಮಂಗಳೂರು: 30-24
    ಶಿವಮೊಗ್ಗ: 29-23
    ಬೆಳಗಾವಿ: 29-22
    ಮೈಸೂರು: 32-22

    ಮಂಡ್ಯ: 32-23
    ಮಡಿಕೇರಿ: 28-20
    ರಾಮನಗರ: 31-23
    ಹಾಸನ: 28-20
    ಚಾಮರಾಜನಗರ: 32-22
    ಚಿಕ್ಕಬಳ್ಳಾಪುರ: 30-22

    ಕೋಲಾರ: 31-22
    ತುಮಕೂರು: 31-22
    ಉಡುಪಿ: 30-25
    ಕಾರವಾರ: 32-28
    ಚಿಕ್ಕಮಗಳೂರು: 26-19
    ದಾವಣಗೆರೆ: 31-23

    weather

    ಹುಬ್ಬಳ್ಳಿ: 31-24
    ಚಿತ್ರದುರ್ಗ: 31-23
    ಹಾವೇರಿ: 31-24
    ಬಳ್ಳಾರಿ: 34-24
    ಗದಗ: 31-23
    ಕೊಪ್ಪಳ: 33-24

    ರಾಯಚೂರು: 36-25
    ಯಾದಗಿರಿ: 35-24
    ವಿಜಯಪುರ: 34-24
    ಬೀದರ್: 36-25
    ಕಲಬುರಗಿ: 36-26
    ಬಾಗಲಕೋಟೆ: 32-24

  • Video | ಶಿರಾಡಿಘಾಟ್‌ನಲ್ಲಿ ಗುಡ್ಡ ಕುಸಿತ – ಕೆಲವೇ ನಿಮಿಷಗಳ ಹಿಂದೆ ತೆರವಾಗಿದ್ದ ರಸ್ತೆ ಮತ್ತೆ ಬಂದ್

    Video | ಶಿರಾಡಿಘಾಟ್‌ನಲ್ಲಿ ಗುಡ್ಡ ಕುಸಿತ – ಕೆಲವೇ ನಿಮಿಷಗಳ ಹಿಂದೆ ತೆರವಾಗಿದ್ದ ರಸ್ತೆ ಮತ್ತೆ ಬಂದ್

    ಹಾಸನ: ನೋಡ ನೋಡುತ್ತಲೇ ಶಿರಾಡಿಘಾಟ್‌ನಲ್ಲಿ (Shiradi Ghat) ಮತ್ತೆ ಗುಡ್ಡ ಕುಸಿತ ಸಂಭವಿಸಿದೆ. ಪರಿಣಾಮ ಕೆಲವೇ ನಿಮಿಷಗಳ ಹಿಂದೆಯಷ್ಟೇ ತೆರವಾಗಿದ್ದ ರಸ್ತೆ ಮತ್ತೆ ಬಂದ್‌ ಆಗಿದೆ. ಶಿರಾಡಿಘಾಟ್‌ನ ದೊಡ್ಡತಪ್ಲು ಬಳಿ ಗುರುವಾರ (ಆ.1) ಮತ್ತೆ ಭೂಕುಸಿತ ಸಂಭವಿಸಿದೆ. ದೊಡ್ಡ ಸದ್ದಿನೊಂದಿಗೆ ಗುಡ್ಡ ಕುಸಿಯುವ (Shiradi Ghat Landslide) ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಕಳೆದ ಮೂರು ದಿನಗಳ ಪದೇ ಪದೇ ಶಿರಾಡಿಘಾಟ್‌ನಲ್ಲಿ ಗುಡ್ಡ ಕುಸಿತವಾಗಿದ್ದು, ಆತಂಕ ಹೆಚ್ಚಿಸಿದೆ. ಇದಕ್ಕೆ ಸಂಬಂಧಿಸಿದ ವೀಡಿಯೋ ಇಲ್ಲಿದೆ.

  • ರಾಜ್ಯದ ಹವಾಮಾನ ವರದಿ: 29-06-2024

    ರಾಜ್ಯದ ಹವಾಮಾನ ವರದಿ: 29-06-2024

    ರಾಜ್ಯದಲ್ಲಿ ಇಂದು ಕೂಡ ಮಳೆರಾಯನ ಆರ್ಭಟ ಮುಂದುವರಿಯಲಿದೆ. ಮುಂದಿನ ಏಳು ದಿನಗಳ ಕಾಲ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

    ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಶನಿವಾರ ಕರಾವಳಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ರಾಜಧಾನಿ ಬೆಂಗಳೂರಲ್ಲಿ ಎಂದಿನಂತೆ ಮೋಡ ಕವಿದ ವಾತಾವರಣ ಇರಲಿದ್ದು, ತುಂತುರು ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.

    ನಗರಗಳ ಹವಾಮಾನ ವರದಿ:
    ಬೆಂಗಳೂರು: 29-21
    ಮಂಗಳೂರು: 28-24
    ಶಿವಮೊಗ್ಗ: 28-22
    ಬೆಳಗಾವಿ: 26-21
    ಮೈಸೂರು: 29-22

    ಮಂಡ್ಯ: 31-22
    ಮಡಿಕೇರಿ: 23-18
    ರಾಮನಗರ: 31-22
    ಹಾಸನ: 26-20
    ಚಾಮರಾಜನಗರ: 30-22
    ಚಿಕ್ಕಬಳ್ಳಾಪುರ: 31-22

    ಕೋಲಾರ: 32-22
    ತುಮಕೂರು: 29-22
    ಉಡುಪಿ: 28-24
    ಕಾರವಾರ: 28-26
    ಚಿಕ್ಕಮಗಳೂರು: 25-19
    ದಾವಣಗೆರೆ: 29-23

    ಹುಬ್ಬಳ್ಳಿ: 28-22
    ಚಿತ್ರದುರ್ಗ: 29-22
    ಹಾವೇರಿ: 28-23
    ಬಳ್ಳಾರಿ: 33-24
    ಗದಗ: 29-22
    ಕೊಪ್ಪಳ: 30-23

    weather

    ರಾಯಚೂರು: 33-25
    ಯಾದಗಿರಿ: 33-25
    ವಿಜಯಪುರ: 31-23
    ಬೀದರ್: 30-23
    ಕಲಬುರಗಿ: 31-24
    ಬಾಗಲಕೋಟೆ: 31-24

  • ಮಳೆ ಅವಾಂತರಕ್ಕೆ ಹಿಮಾಚಲದಲ್ಲಿ 71 ಬಲಿ – 7.5 ಸಾವಿರ ಕೋಟಿ ನಷ್ಟ

    ಮಳೆ ಅವಾಂತರಕ್ಕೆ ಹಿಮಾಚಲದಲ್ಲಿ 71 ಬಲಿ – 7.5 ಸಾವಿರ ಕೋಟಿ ನಷ್ಟ

    ಶಿಮ್ಲಾ: ಕಳೆದ 3 ದಿನಗಳಿಂದ ಹಿಮಾಚಲ ಪ್ರದೇಶದಲ್ಲಿ (Himachal Pradesh) ನಡೆಯುತ್ತಿರುವ ಮಳೆಯ (Rain) ಅವಾಂತರಕ್ಕೆ 71 ಜನರು ಬಲಿಯಾಗಿದ್ದಾರೆ. ರಾಜ್ಯಾದ್ಯಂತ ಮಳೆಯಿಂದಾದ ದುರ್ಘಟನೆಯಿಂದಾಗಿ ಸುಮಾರು 7,500 ಕೋಟಿ ರೂ. ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜುಲೈಗಿಂತ ಆಗಸ್ಟ್ 13, 14 ಹಾಗೂ 15ರ ಅವಧಿಯಲ್ಲಿ ಮಳೆಯ ಅವಾಂತರದಿಂದಾಗಿ ಹೆಚ್ಚಿನ ಹಾನಿ ಸಂಭವಿಸಿದೆ. ಸಾವಿನ ಸಂಖ್ಯೆ 71 ತಲುಪಿದ್ದು, ಸುಮಾರು 7,500 ಕೋಟಿ ರೂ. ನಷ್ಟವಾಗಿದೆ. ಜನರು ರಕ್ಷಣಾ ಹಾಗೂ ಪರಿಹಾರ ಕಾರ್ಯಗಳಲ್ಲಿ ತೊಡಗಿರುವುದರಿಂದ ಈ ಅಂದಾಜು ಹೆಚ್ಚುವ ಸಾಧ್ಯತೆಯಿದೆ ಎಂದು ವಿಪತ್ತು ನಿರ್ವಹಣಾ ಪ್ರಧಾನ ಕಾರ್ಯದರ್ಶಿ ಓಂಕಾರ್ ಚಂದ್ ಶರ್ಮಾ ತಿಳಿಸಿದ್ದಾರೆ.

    ಜಿಲ್ಲಾಧಿಕಾರಿಗಳು, ಪೊಲೀಸರು, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF), ರಾಜ್ಯ ವಿಪತ್ತು ನಿರ್ವಹಣಾ ನಿಧಿ (SDRF) ಹಾಗೂ ಸ್ಥಳೀಯ ಜನರು ಸೇರಿದಂತೆ ಸ್ಥಳಾಂತರ ಕಾರ್ಯವನ್ನು ಬೃಹತ್ ಪ್ರಮಾಣದಲ್ಲಿ ನಡೆಸಲಾಗುತ್ತಿದೆ. ಸುಮಾರು 2,500 ಜನರನ್ನು ಸುರಕ್ಷಿತ ಸ್ಥಳಗಳಿಗೆ ಕಳುಹಿಸಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: KRSನಿಂದ ತಮಿಳುನಾಡಿಗೆ ಗುರುವಾರವೂ ಭಾರೀ ಪ್ರಮಾಣದ ನೀರು – ಇಂದು ರೈತಸಂಘ ಪ್ರತಿಭಟನೆ

    ರಾಜ್ಯ ವಿಪತ್ತು ನಿರ್ವಹಣೆಯ ಅಂಕಿ ಅಂಶದ ಪ್ರಕಾರ 1,762 ಮನೆಗಳು ಸಂಪೂರ್ಣ ಹಾನಿಯಾಗಿವೆ. 8,952 ಮನೆಗಳು ಭಾಗಶಃ ಹಾನಿಯಾಗಿವೆ. ಈ ವರ್ಷದ ಮುಂಗಾರು ಋತುವಿನಲ್ಲಿ 113 ಭೂಕುಸಿತಗಳು ಸಂಭವಿಸಿವೆ ಎಂದು ಮಾಹಿತಿ ನೀಡಿದೆ.

    ಹಿಮಾಚಲದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಕಂಗ್ರಾ ಜಿಲ್ಲೆಯಲ್ಲಿ ವೈಮಾನಿಕ ಹಾಗೂ ನೆಲದ ಸಮೀಕ್ಷೆಗಳನ್ನು ನಡೆಸಿದ್ದಾರೆ. ಮಳೆಯ ಅವಾಂತರದಿಂದ ರಾಜ್ಯದಲ್ಲಾಗಿರುವ ಅವ್ಯವಸ್ಥೆಯನ್ನು ಸರಿಪಡಿಸಲು ವರ್ಷವೇ ಬೇಕಾಗಬಹುದು ಎಂದಿದ್ದಾರೆ. ಇದನ್ನೂ ಓದಿ: ಅಂಡರ್‌ಪಾಸ್‌ನಲ್ಲಿ ಸಿಲುಕಿದ ಟ್ಯಾಂಕರ್‌ನಿಂದ ಗ್ಯಾಸ್ ಲೀಕ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಉತ್ತರಾಖಂಡದಲ್ಲಿ ಮೇಘಸ್ಫೋಟ – ಸಂಕಷ್ಟದಲ್ಲಿ ರಾಜ್ಯದ 83 ಅಮರನಾಥ ಯಾತ್ರಿಕರು

    ಉತ್ತರಾಖಂಡದಲ್ಲಿ ಮೇಘಸ್ಫೋಟ – ಸಂಕಷ್ಟದಲ್ಲಿ ರಾಜ್ಯದ 83 ಅಮರನಾಥ ಯಾತ್ರಿಕರು

    ಬೆಂಗಳೂರು/ ನವದೆಹಲಿ: ಉತ್ತರಾಖಂಡ್‍ನಲ್ಲಿ (Uttarakhand Rain) ಭಾರೀ ಮಳೆಯಾಗುತ್ತಿದ್ದು ಹವಾಮಾನ ವೈಪರಿತ್ಯದಿಂದಾಗಿ ಅಮರನಾಥ ಯಾತ್ರಿಕರು (Amarnath Yatra Pilgrims) ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಲ್ಲಿ ಗದಗ್‍ನ 23 ಮಂದಿ ಸೇರಿದಂತೆ 83 ಕನ್ನಡಿಗರು ಪರದಾಡುತ್ತಿದ್ದಾರೆ.

    ಗದಗ್‍ನ 23 ಯಾತ್ರಿಕರು ಅಮರನಾಥನ ದರ್ಶನ ಪಡೆದು ವಾಪಸ್ ಬರುವಾಗ ಮಾರ್ಗ ಮಧ್ಯೆ ಗುಡ್ಡ ಕುಸಿದಿದೆ. ಅಮರನಾಥ ಮಂದಿರದಿಂದ 6 ಕಿ.ಮೀ. ದೂರದ ಪಂಚತಾರ್ನಿ ಟೆಂಟ್‍ನಲ್ಲಿ ಸಿಲುಕಿದ್ದಾರೆ.

    ಈ ಬಗ್ಗೆ ಸಿಎಂ ಸಿದ್ದರಾಮಯ್ಯ (CM Siddaramaiah) ಪ್ರತಿಕ್ರಿಯಿಸಿದ್ದು, ಉತ್ತರಾಖಂಡ್ ಪ್ರಾದೇಶಿಕ ಆಯುಕ್ತರು, ಡಿಸಿಗಳು, ಪೊಲೀಸರ ಜೊತೆ ಮಾತನಾಡಿದ್ದೇನೆ. ಕರ್ನಾಟಕದ ಯಾತ್ರಿಕರು ಸುರಕ್ಷಿತವಾಗಿದ್ದಾರೆ. ನೆರವಿಗೆ ಐಎಎಸ್ ಅಧಿಕಾರಿ ರಶ್ಮಿ ನಿಯೋಜಿಸಿದ್ದೇನೆ ಎಂದು ಹೇಳಿದ್ದಾರೆ.

    ಸರ್ಕಾರ ಈಗಾಗಲೇ 1070 ಸಹಾಯವಾಣಿ ಆರಂಭಿಸಿದೆ. ವಿಪತ್ತು ನಿರ್ವಹಣಾ ಇಲಾಖೆ ಕಮಿಷನರ್ ಸತೀಶ್ ಕೂಡ ಅಲ್ಲಿನ ಕನ್ನಡಿಗರಿಗೆ ಕರೆ ಧೈರ್ಯ ತುಂಬಿದ್ದಾರೆ. ಉಳಿದವರು ಯಾವ್ಯಾವ ಜಿಲ್ಲೆಯವರು ಎಂಬುದನ್ನು ಪತ್ತೆ ಮಾಡಲಾಗುತ್ತಿದೆ.  ಇದನ್ನೂ ಓದಿ: ಕೊಲೆಗಡುಕರಿಗೆ ಶಿಕ್ಷೆ; ಸರ್ಕಾರ ಲಿಖಿತ ಭರವಸೆ ಕೊಡೋವರೆಗೆ ಅನ್ನಾಹಾರ ತ್ಯಾಗ – ಜೈನಮುನಿ ಗುಣಧರ ನಂದಿ ಮಹಾರಾಜ

    ಸದ್ಯಕ್ಕೆ ಎಲ್ಲರೂ ಮಿಲಿಟರಿ ಕ್ಯಾಂಪ್‍ನಲ್ಲಿ ಸೇಫ್ ಆಗಿದ್ದಾರೆ. ಪ್ರತಿಕೂಲ ಹವಾಮಾನ ಹಿನ್ನೆಲೆಯಲ್ಲಿ ಬಾಲ್ತಾಲ್, ಪಹಲ್ಗಾಮ್ ಅವಳಿ ಮಾರ್ಗಗಳಲ್ಲಿ ಅಮರನಾಥ ಯಾತ್ರೆ ರದ್ದು ಮಾಡಲಾಗಿದೆ.

     

    ಉತ್ತರಾಖಂಡ್‍ನ ಪಿಥೋರ್‍ಗಡ್‍ನಲ್ಲಿ ಮೇಘಸ್ಫೋಟ ಸಂಭವಿಸಿ ಸಿಲುಕಿದ್ದ 300ಕ್ಕೂ ಹೆಚ್ಚು ಯಾತ್ರಿಕರನ್ನು ರಕ್ಷಿಸಲಾಗಿದೆ. ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‌ಎಫ್ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆತಂಡ ಭಾಗಿಯಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕಿಸ್ತಾನದಲ್ಲಿ ಭೀಕರ ಪ್ರವಾಹ – 1,300ಕ್ಕೂ ಹೆಚ್ಚು ಮಂದಿ ಬಲಿ

    ಪಾಕಿಸ್ತಾನದಲ್ಲಿ ಭೀಕರ ಪ್ರವಾಹ – 1,300ಕ್ಕೂ ಹೆಚ್ಚು ಮಂದಿ ಬಲಿ

    ಇಸ್ಲಾಮಾಬಾದ್: ಪಾಕಿಸ್ತಾನದ ಭೀಕರ ಪ್ರವಾಹದ ಪರಿಣಾಮವಾಗಿ ದೇಶದಲ್ಲಿ ಸುಮಾರು 1,300 ಜನರು ಸಾವನ್ನಪ್ಪಿದ್ದಾರೆ. ಕಳೆದ 24 ಗಂಟೆಯಲ್ಲಿ 29 ಜನರು ಸಾವನ್ನಪ್ಪಿದ್ದು, ಇನ್ನೂ ಕೂಡಾ ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

     

    ದೇಶದ ದೊಡ್ಡ ಭಾಗಗಳೇ ಪ್ರವಾಹದಿಂದ ಮುಳುಗಡೆಯಾಗಿದೆ. ಮುಖ್ಯವಾಗಿ ಸಿಂಧ್‌ನಲ್ಲಿನ ಭೀಕರ ಪ್ರವಾಹಕ್ಕೆ ಕನಿಷ್ಠ 180 ಜನರು ಸಾವನ್ನಪ್ಪಿದ್ದಾರೆ. ಬಳಿಕ ಖೈಬರ್ ಪಖ್ತುಂಕ್ವಾದಲ್ಲಿ 138 ಹಾಗೂ ಬಲೂಚಿಸ್ತಾನದಲ್ಲಿ 125 ಜನರು ಸಾವನ್ನಪ್ಪಿದ್ದಾರೆ. ಸುಮಾರು 5 ಲಕ್ಷಕ್ಕೂ ಹೆಚ್ಚು ಜನರು ಮನೆಗಳನ್ನು ಕಳೆದುಕೊಂಡು ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸರ್ಕಾರದಿಂದ ಬಿಡುಗಡೆ ಆಗದ ಹಣ – ಇಂದಿರಾ ಕ್ಯಾಂಟೀನ್‍ಗೆ ಬೀಗ

    ಪ್ರವಾಹದಿಂದಾಗಿ ಸುಮಾರು 14,68,010 ಮನೆಗಳಿಗೆ ಹಾನಿಯಾಗಿದೆ. 7,36,450 ಜಾನುವಾರುಗಳು ಸಾವನ್ನಪ್ಪಿವೆ. ಹಾನಿಯ ಆರಂಭಿಕ ಅಂದಾಜನ್ನು 10 ಶತಕೋಟಿ ಡಾಲರ್(ಸುಮಾರು 79 ಸಾವಿರ ಕೋಟಿ ರೂ.) ಎನ್ನಲಾಗಿದೆ. ಇನ್ನೂ ಕೂಡಾ ಅಂತಾರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಮೀಕ್ಷೆಗಳು ನಡೆಯುತ್ತಿವೆ. ಇದನ್ನೂ ಓದಿ: ದಾಳಿ ನಡೆಸಲು ಪಾಕ್ ಸೇನೆ ಹಣ ನೀಡಿದ್ದಾಗಿ ಸತ್ಯ ಬಾಯ್ಬಿಟ್ಟಿದ್ದ ಉಗ್ರ ಹೃದಯಾಘಾತದಿಂದ ಸಾವು

    ಶನಿವಾರ ಬೆಳಗ್ಗೆ ಪ್ರವಾಹ ಪೀಡಿತ ದೇಶಕ್ಕೆ ಫ್ರಾನ್ಸ್‌ನಿಂದ ಮೊದಲ ಮಾನವೀಯ ನೆರವು ಬಂದಿದೆ. ಬಳಿಕ ಹಲವು ದೇಶಗಳು ಮಾನವೀಯ ನೆರವು ನೀಡಲು ಮುಂದಾಗಿವೆ.

    Live Tv
    [brid partner=56869869 player=32851 video=960834 autoplay=true]

  • ಪ್ರವಾಹದಿಂದ ನಲುಗಿದ ಪಾಕಿಸ್ತಾನ – ಭಾರೀ ಮೊತ್ತದ ಸಹಾಯಕ್ಕೆ ಮುಂದಾದ ಐಎಂಎಫ್

    ಪ್ರವಾಹದಿಂದ ನಲುಗಿದ ಪಾಕಿಸ್ತಾನ – ಭಾರೀ ಮೊತ್ತದ ಸಹಾಯಕ್ಕೆ ಮುಂದಾದ ಐಎಂಎಫ್

    ಇಸ್ಲಾಮಾಬಾದ್: ನೆರೆಯ ಪಾಕಿಸ್ತಾನದಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ಇಡೀ ದೇಶ ನಲುಗಿ ಹೋಗಿದೆ. ಸಾವಿನ ಸಂಖ್ಯೆಯೂ ವ್ಯಾಪಕವಾಗಿ ಏರಿಕೆ ಕಾಣುತ್ತಿರುವುದರಿಂದ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಪಾಕಿಸ್ತಾನ ಸರ್ಕಾರಕ್ಕೆ 1.17 ಶತಕೋಟಿ ಡಾಲರ್ ನಿಧಿ ಬಿಡುಗಡೆಗೆ ಒಪ್ಪಿಕೊಂಡಿದೆ.

    ಈ ಹಣ ಮೂಲತಃ 2019ರಿಂದ ತಡೆಹಿಡಿಯಲಾದ ಬೇಲ್‌ಔಟ್ ಸಾಲದ ಭಾಗವಾಗಿದೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸರ್ಕಾರದ ಸಮಯ ಇಂಧನ ಸಬ್ಸಿಡಿಗಳನ್ನು ಕಡಿತಗೊಳಿಸುವಂತೆ ಕೇಳಿಕೊಂಡಿದ್ದ ಐಎಂಎಫ್‌ನ ಬೇಡಿಕೆಯನ್ನು ಪೂರೈಸದ್ದಕ್ಕೆ ಈ ಪಾವತಿಯನ್ನು ತಡೆಹಿಡಿಯಲಾಗಿತ್ತು.

    ಇದೀಗ ಐಎಂಎಫ್ ತಡೆಹಿಡಿಯಲಾದ ಪಾವತಿಯನ್ನು ಸರ್ಕಾರಕ್ಕೆ ನೀಡಲು ಒಪ್ಪಿಕೊಂಡಿದೆ. ಅದರೊಂದಿಗೆ ಹೆಚ್ಚುವರಿ 1 ಶತಕೋಟಿ ಡಾಲರ್ ಅನ್ನು ನೀಡಲು ಐಎಂಎಫ್ ಮುಂದಾಗಿದೆ ಎಂದು ಪಾಕಿಸ್ತಾನದ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ತಿಳಿಸಿದ್ದಾರೆ. ಇದನ್ನೂ ಓದಿ: ಗೌತಮ್ ಅದಾನಿ ಈಗ ವಿಶ್ವದ 3ನೇ ಶ್ರೀಮಂತ – ಏಷ್ಯಾಗೆ ಇದು ಫಸ್ಟ್ ಟೈಂ

    ಭಾರೀ ಪ್ರವಾಹದಿಂದಾಗಿ ಪಾಕಿಸ್ತಾನದಲ್ಲಿ ಸುಮಾರು 1,100 ಜನರು ಸಾವನ್ನಪ್ಪಿದ್ದಾರೆ. ಲಕ್ಷಾಂತರ ಜನರನ್ನು ಸ್ಥಳಾಂತರಗೊಳಿಸಲಾಗಿದೆ. ಈ ಹಿನ್ನೆಲೆ ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ಪ್ರಧಾನಿ ಶೆಹಬಾಜ್ ಷರೀಫ್ ಅಂತಾರಾಷ್ಟ್ರೀಯ ನೆರವಿಗೆ ಬೇಡಿಕೆಯಿಟ್ಟಿದ್ದರು. ಇದನ್ನೂ ಓದಿ: ಚಿರಯುವಕರಂತೆ ವಾಲಿಬಾಲ್ ಆಡಿದ ಭಗವಂತ್ ಮಾನ್ – ವೀಡಿಯೋ ವೈರಲ್

    Live Tv
    [brid partner=56869869 player=32851 video=960834 autoplay=true]

  • ಭಾರೀ ಮಳೆ – ಗೋಡೆ ಕುಸಿದು 11 ಮಂದಿ ಸಾವು

    ಭಾರೀ ಮಳೆ – ಗೋಡೆ ಕುಸಿದು 11 ಮಂದಿ ಸಾವು

    ಮುಂಬೈ: ಧಾರಾಕಾರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕಾಂಪೌಂಡ್ ಗೋಡೆ ಕುಸಿದ ಪರಿಣಾಮ ಕನಿಷ್ಠ 11 ಮಂದಿ ಸಾವನ್ನಪ್ಪಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಘಟನೆ ಮುಂಬೈನಲ್ಲಿ ನಡೆದಿದೆ.

    ಮಹಾರಾಷ್ಟ್ರದ ಚೆಂಬೂರಿನ ಭಾರತ್ ನಗರ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದಿಂದಾಗಿ ಕಾಂಪೌಂಡ್ ಗೋಡೆ ಕುಸಿದಿದೆ. ಗೋಡೆ ಪಕ್ಕದಲ್ಲಿದ್ದ ಗುಡಿಸಲುಗಳ ಮೇಲೆ ಬಿದಿದ್ದು, ಈ ವೇಳೆ ಅಲ್ಲಿದ್ದ ಸುಮಾರು 11 ಮಂದಿ ಸಾವನ್ನಪ್ಪಿದ್ದಾರೆ. ಹಲವರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ತಿಳಿದುಬಂದಿದೆ.

    ಘಟನಾ ಸ್ಥಳಕ್ಕೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಎನ್‌ಡಿಆರ್‌ಎಫ್‌)ದ 2 ತಂಡ ದೌಡಾಯಿಸಿದ್ದು,ಅಗ್ನಿ ಶಾಮಕ ದಳದೊಂದಿಗೆ ಸೇರಿ ಜಂಟಿ ಕಾರ್ಯಾಚರಣೆ ನಡೆಸುತ್ತಿವೆ. ಭಾರೀ ಮಳೆಯಿಂದಾಗಿ ಮುಂಬೈ ನದಗರದ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಹಲವೆಡೆ ಭೂಕುಸಿತ ಸಮಭವಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಹಲವು ವಾಹನಗಳು ತೇಲಿ ಹೋಗಿವೆ, ಸಂಚಾರ ವ್ಯವಸ್ಥೆಗೆ ಅಡಚಣೆ ಉಂಟಾಗಿದ್ದು, ರೈಲು ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.